Sidhu Moose Wala: ಸಿಧು ಮೂಸೆವಾಲಾ ಪೋಷಕರಿಗೆ ಮುದಿಗಾಲದಲ್ಲಿ ಮಗು; ಸರ್ಕಾರದಿಂದ ನೋಟಿಸ್‌! - Vistara News

ವೈರಲ್ ನ್ಯೂಸ್

Sidhu Moose Wala: ಸಿಧು ಮೂಸೆವಾಲಾ ಪೋಷಕರಿಗೆ ಮುದಿಗಾಲದಲ್ಲಿ ಮಗು; ಸರ್ಕಾರದಿಂದ ನೋಟಿಸ್‌!

Sidhu Moose Wala: ತನ್ನ ಎರಡನೇ ಮಗನ ಜನನವನ್ನು ಘೋಷಿಸಿದ ಬಲ್ಕೌರ್ ಸಿಂಗ್ ಕಳೆದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು.

VISTARANEWS.COM


on

Sidhu Moose Wala parents
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂಡೀಗಢ: ದಿವಂಗತ ಗಾಯಕ ಸಿಧು ಮೂಸೆವಾಲಾ (Sidhu Moose Wala) ಅವರ ಪೋಷಕರಿಗೆ ಕಳೆದ ವಾರ ಐವಿಎಫ್‌ (IVF) ಮೂಲಕ ಎರಡನೇ ಮಗ ಜನಿಸಿದ್ದು, ಮಗು ಜನಿಸಿದ ನಂತರ ಗರ್ಭ ಧರಿಸುವ ಪ್ರಾಯಮಿತಿ (Age limit) ಮೀರಿದೆ ಎಂದು ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಗಾಯಕ ಸಿಧು ಮೂಸೆವಾಲಾ ತಂದೆ ಬಾಲ್ಕೌರ್ ಸಿಂಗ್, ಜಿಲ್ಲಾಡಳಿತವು ಮಗುವಿನ ಬಗ್ಗೆ ದಾಖಲೆಗಳಿಗಾಗಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಸಿಧು ಮೂಸೆವಾಲಾನನ್ನು ಗುಂಡಿಕ್ಕಿ ಸಾಯಿಸಲಾದ ಸುಮಾರು ಎರಡು ವರ್ಷಗಳ ನಂತರ ದಂಪತಿಗಳು ಕಳೆದ ಶನಿವಾರ ಮಗುವನ್ನು ಹೊಂದಿದ್ದರು. 58 ವರ್ಷದ ತಾಯಿ ಚರಣ್ ಸಿಂಗ್ ಅವರು ಇನ್-ವಿಟ್ರೋ ಫರ್ಟಿಲೈಸೇಶನ್ (IVF) ತಂತ್ರದ ಮೂಲಕ ಮಗುವನ್ನು ಹೊಂದಿದ್ದಾರೆ ಎಂದು ಈ ವರ್ಷದ ಆರಂಭದಲ್ಲಿ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

ಮಂಗಳವಾರ ಇನ್‌ಸ್ಟಾಗ್ರಾಮ್ ವೀಡಿಯೊದಲ್ಲಿ, ಬಾಲ್ಕೌರ್ ಸಿಂಗ್ ದಾಖಲೆಗಳನ್ನು ನೀಡುವ ಉಪಕ್ರಮ ಮುಗಿಸಲು ಆಡಳಿತವನ್ನು ವಿನಂತಿಸಿದ್ದಾರೆ. “ಮಗುವಿನ ಬಗ್ಗೆ ದಾಖಲೆಗಳನ್ನು ನೀಡುವಂತೆ ಜಿಲ್ಲಾಡಳಿತ ನನಗೆ ಕಿರುಕುಳ ನೀಡುತ್ತಿದೆ. ನಾನು ಸರ್ಕಾರ ಮತ್ತು ಮುಖ್ಯಮಂತ್ರಿಗೆ ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಮನವಿ ಮಾಡುತ್ತೇನೆ. ಹಾಜರಾಗಲು ಕೇಳಿದರೆ ಸೂಕ್ತ ದಾಖಲೆ ತೋರಿಸುತ್ತೇನೆ. ನಾನು ಎಲ್ಲ ಕಾನೂನುಗಳನ್ನು ಅನುಸರಿಸಿದ್ದೇನೆ” ಎಂದು ಸಿಂಗ್ ಹೇಳಿದರು.

ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಪಂಜಾಬ್ ಸರ್ಕಾರದಿಂದ ಸಿಧು ಮೂಸೆವಾಲಾ ಅವರ ತಾಯಿ ಚರಣ್ ಸಿಂಗ್ ಅವರ ಐವಿಎಫ್ ಚಿಕಿತ್ಸೆಗೆ ಸಂಬಂಧಿಸಿದಂತೆ ವರದಿಯನ್ನು ಕೇಳಿದೆ. ಮತ್ತು ಐವಿಎಫ್‌ಗೆ ವಯಸ್ಸಿನ ಮಿತಿ 21-50 ವರ್ಷಗಳು ಎಂದು ಸೂಚಿಸಿದೆ.

“ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಕಾಯಿದೆ- 2021ರ ಸೆಕ್ಷನ್ 21(g)(i) ಅಡಿಯಲ್ಲಿ, ART ಸೇವೆಗಳನ್ನು ಪಡೆಯುವ ಮಹಿಳೆಗೆ ವಯಸ್ಸಿನ ಮಿತಿಯನ್ನು 21-50 ವರ್ಷಗಳ ನಡುವೆ ನಿಗದಿಪಡಿಸಲಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ತನ್ನ ಎರಡನೇ ಮಗನ ಜನನವನ್ನು ಘೋಷಿಸಿದ ಬಲ್ಕೌರ್ ಸಿಂಗ್ ಕಳೆದ ವಾರ ಇನ್‌ಸ್ಟಾಗ್ರಾಮ್‌ನಲ್ಲಿ ಮಗುವಿನೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದರು. ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಅವರ ಹಿರಿಯ ಮಗ, ರಾಜಕಾರಣಿಯಾಗಿ ಮಾರ್ಪಟ್ಟಿದ್ದ ಗಾಯಕ ಸಿಧು ಮೂಸೆವಾಲಾನನ್ನು ಮೇ 29, 2022ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು.

ಇದನ್ನೂ ಓದಿ: Sidhu Moose Wala Murder | ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿ 10 ದಿನ ಎನ್‌ಐಎ ಕಸ್ಟಡಿಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Mira Road Tragedy: ಸಿಕ್ಸರ್​ ಬಾರಿಸಿ ಮರು ಕ್ಷಣವೇ ಪ್ರಾಣ ಕಳೆದುಕೊಂಡ ಕ್ರಿಕೆಟಿಗ​; ದುರಂತ ವಿಡಿಯೊ ವೈರಲ್​

Mira Road Tragedy: ಸ್ಥಳೀಯ ಟೂರ್ನಿಯಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಈ ಬ್ಯಾಟರ್​ ಚೆಂಡನ್ನು ಸಿಕ್ಸರ್​ಗೆ ಬಡಿದಟ್ಟಿತ ಮರು ಕ್ಷಣವೇ ಪಿಚ್​ನಲ್ಲಿ ಕುಸಿದು ಬಿದ್ದಿದ್ದಾನೆ. ಈ ವೇಳೆ ಸಹ ಆಟಗಾರರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ದುರಂತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

VISTARANEWS.COM


on

Mira Road Tragedy
Koo

ಮುಂಬಯಿ: ಇಲ್ಲಿನ ಮೀರಾರೋಡ್‌ನಲ್ಲಿ(Mira Road Tragedy) ಕ್ರಿಕೆಟ್​ ಆಡುತ್ತಿದ್ದ ವೇಳೆ ಆಟಗಾರನೊಬ್ಬ ಇದ್ದಕ್ಕಿದ್ದಂತೆ ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ದುರಂತ ನಡೆದಿದೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾಗಿದ್ದರೂ ಕೂಡ ಬಿಸಿಗಾಳಿಯಿಂದ ಈ ಆಟಗಾರ ಸಾವನ್ನಪ್ಪಿದ್ದಾನೆ ಎಂದು ಊಹಿಸಲಾಗಿದೆ.

ಸ್ಥಳೀಯ ಟೂರ್ನಿಯಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದ ವೇಳೆ ಈ ಬ್ಯಾಟರ್​ ಚೆಂಡನ್ನು ಸಿಕ್ಸರ್​ಗೆ ಬಡಿದಟ್ಟಿತ ಮರು ಕ್ಷಣವೇ ಪಿಚ್​ನಲ್ಲಿ ಕುಸಿದು ಬಿದ್ದಿದ್ದಾನೆ. ಈ ವೇಳೆ ಸಹ ಆಟಗಾರರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ದುರಂತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ದಾರುಣ ಸಾವು


ಕೆಲವು ತಿಂಗಳುಗಳ ಹಿಂದೆ ಸ್ನೇಹಿತರೊಂದಿಗೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ವೇಳೆ ಚೆಂಡು ತನ್ನ ಖಾಸಗಿ(Ball hit boy’s private part) ಭಾಗಕ್ಕೆ ಬಡಿದು 11 ವರ್ಷದ(11-year-old ) ಬಾಲಕ ಮೃತಪಟ್ಟಿರುವ ದಾರುಣ ಘಟನೆಯೊಂದು ಪುಣೆಯಲ್ಲಿ ನಡೆದಿತ್ತು. ಈ ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಬೌಲಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್‌ಮನ್ ಹೊಡೆದ ಚೆಂಡು ನೇರವಾಗಿ ಶೌರ್ಯನ ಖಾಸಗಿ ಭಾಗಕ್ಕೆ ಬಡಿದಿತ್ತು. ನೋವಿನಿಂದ ನರಳಿದ ಆತ ತಕ್ಷಣ ನೆಲದ ಮೇಲೆ ಕುಸಿದು ಬಿದ್ದಿದ್ದ. ತಕ್ಷಣ ಆತನ ಸ್ನೇಹಿತರು ಆರೈಕೆ ಮಾಡಿದರೂ ಕೂಡ ಯಾವುದೇ ಸ್ಪಂದನೆ ನೀಡದ ಕಾರಣ ಶೌರ್ಯನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆತ ಈ ಮೊದಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಚೆಂಡಿನ ಬಲವಾದ ಹೊಡೆತಕ್ಕೆ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

ಇದಕ್ಕೂ ಮುನ್ನ ಕ್ರಿಕೆಟ್ ಪಂದ್ಯದ ವೇಳೆ ತಲೆಗೆ ಚೆಂಡು ಬಡಿದು 52 ವರ್ಷದ ಕ್ರಿಕೆಟಿಗ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿತ್ತು. ಒಂದೇ ಮೈದಾನದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದ ವೇಳೆ ಮತ್ತೊಂದು ಪಂದ್ಯದ ಕ್ರಿಕೆಟ್ ಚೆಂಡು ತಲೆಗೆ ಬಡಿದು ಕ್ರಿಕೆಟಿಗ ಮೃತಪಟ್ಟಿದ್ದ. ಮುಂಬೈಯಲ್ಲೇ ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿರುವುದು ನಿಜ್ಜಕೂ ಬೇಸರದ ಸಂಗತಿಯಾಗಿದೆ.

ಇದನ್ನೂ ಓದಿ Fire Accident: ಗೇಮಿಂಗ್‌ ಜೋನ್‌ನಲ್ಲಿ ಅಗ್ನಿ ದುರಂತ; ಮಹಿಳೆಯರು, ಮಕ್ಕಳು ಸೇರಿ 24 ಮಂದಿ ದಾರುಣ ಸಾವು

ಹೃದಯಾಘಾತದಿಂದ ಮೈದಾನದಲ್ಲೇ ಮೃತಪಟ್ಟ ಇಂಜಿನಿಯರ್


ಕ್ರಿಕೆಟ್ ಆಡುವಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾಫ್ಟ್ ವೇರ್ ಇಂಜಿನಿಯರ್ ಮೈದಾನದಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ಕಳೆದ ಡಿಸೆಂಬರ್​ನಲ್ಲಿ ನೋಯ್ಡಾದಲ್ಲಿ ಸಂಭವಿಸಿತ್ತು. ವಿಕಾಸ್ ಅವರು ಸ್ಟ್ರೈಕ್​ನಲ್ಲಿದ್ದ ಸಹ ಬ್ಯಾಟರ್​ ಜತೆ ಮಾತುಕತೆ ನಡೆಸಿ ಹಿಂದಿರುಗುವ ವೇಳೆ ಹಠಾತ್​ ಆಗಿ ಪಿಚ್​ನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು.

Continue Reading

ವಿದೇಶ

Rupert Murdoch: ಮಾಧ್ಯಮ ಲೋಕದ ದೊರೆಗೆ ಐದನೇ ಮದುವೆ; 93ನೇ ವಯಸ್ಸಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ರೂಪರ್ಟ್ ಮುರ್ಡೋಕ್

Rupert Murdoch:ಜೂನ್ 1 ರಂದು ರೂಪರ್ಟ್ ಮುರ್ಡೋಕ್ ತಮ್ಮ ಕ್ಯಾಲಿಫೋರ್ನಿಯಾದ ವೈನ್‌ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 62 ವರ್ಷದ ಎಲೆನಾ ಝುಕೋವಾ ಅವರನ್ನು ವಿವಾಹವಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಎಲೆನಾ ನಿವೃತ್ತ ಜೀವಶಾಸ್ತ್ರಜ್ಞೆ ಎಂದು ಹೇಳಲಾಗಿದೆ. ಅಲ್ಲದೆ ರಷ್ಯಾ ಮೂಲದವರಾದ ಅವರು ಅಮೆರಿಕಾಗೆ ವಲಸೆ ಬಂದಿದ್ದಾರೆ.

VISTARANEWS.COM


on

Rupert Murdoch
Koo

ಅಮೆರಿಕ: ಮಾಧ್ಯಮ ಲೋಕದ ಅನಭಿಷಿಕ್ತ ದೊರೆ ರೂಪರ್ಟ್ ಮುರ್ಡೋಕ್(Rupert Murdoch) ತಮ್ಮ 93ನೇ ವಯಸ್ಸಿನಲ್ಲಿ ಐದನೇ ಮದುವೆ ಮಾಡಿಕೊಂಡಿದ್ದಾರೆ. ತಮ್ಮ ಇಳಿವಯಸ್ಸಿನಲ್ಲಿ ರಷ್ಯಾ(Russia) ಮೂಲದ 67 ವರ್ಷದ ಎಲೆನಾ ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದು, ಅಮೆರಿಕಾದ ಕ್ಯಾಲಿಫೋರ್ನಿಯ(California)ದಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಈ ವಿವಾಹ ಸಮಾರಂಭ ನೆರವೇರಿದೆ. ಈ ಸಂದರ್ಭದಲ್ಲಿ ಆತ್ಮೀಯರು ಹಾಗೂ ಹತ್ತಿರದ ಸಂಬಂಧಿಗಳು ಉಪಸ್ಥಿತರಿದ್ದರು.

ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಇಬ್ಬರ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಬಹುತೇಕರು ಇದು ಸುಳ್ಳು ಸುದ್ದಿ ಎಂದೇ ನಂಬಿದ್ದರು. ಆದರೆ ಇದೀಗ ಜೂನ್ 1ರಂದು ಈ ಜೋಡಿ ವಿವಾಹವಾಗಿದ್ದಾರೆ ಎಂದು ತಿಳಿದುಬಂದಿದೆ. ಜೂನ್ 1 ರಂದು ತಮ್ಮ ಕ್ಯಾಲಿಫೋರ್ನಿಯಾದ ವೈನ್‌ಯಾರ್ಡ್ ಮತ್ತು ಎಸ್ಟೇಟ್ ಮೊರಾಗದಲ್ಲಿ 62 ವರ್ಷದ ಎಲೆನಾ ಝುಕೋವಾ ಅವರನ್ನು ವಿವಾಹವಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಎಲೆನಾ ನಿವೃತ್ತ ಜೀವಶಾಸ್ತ್ರಜ್ಞೆ ಎಂದು ಹೇಳಲಾಗಿದೆ. ಅಲ್ಲದೆ ರಷ್ಯಾ ಮೂಲದವರಾದ ಅವರು ಅಮೆರಿಕಾಗೆ ವಲಸೆ ಬಂದಿದ್ದಾರೆ.

ಮುರ್ಡೋಕ್ ಅವರ ಮೂರನೇ ಪತ್ನಿ ವೆಂಡಿ ಡೆಂಗ್ ಮೂಲಕ ನೂತನ ದಂಪತಿಯ ಸಂಬಂಧವು ಪ್ರಾರಂಭವಾಯಿತು. 1991 ರಲ್ಲಿ ಮಾಸ್ಕೋದಿಂದ ಅಮೆರಿಕಗೆ ವಲಸೆ ಬಂದ ನಿವೃತ್ತ ಆಣ್ವಿಕ ಜೀವಶಾಸ್ತ್ರಜ್ಞ ಝುಕೋವಾ ಅವರು ಹಿಂದೆ ಬಿಲಿಯನೇರ್ ಇಂಧನ ಹೂಡಿಕೆದಾರ ಅಲೆಕ್ಸಾಂಡರ್ ಝುಕೋವ್ ಅವರನ್ನು ವಿವಾಹವಾಗಿದ್ದರು. ಆಗಾಗ ಇಬ್ಬರು ಕೆಲವು ಪ್ರಸಿದ್ಧ ಹೋಟೆಲ್‌ಗಳು, ಹಾಲಿಡೆ ಡೆಸ್ಟಿನೇಷನ್‌ಗಳಲ್ಲಿ ಕಂಡುಬಂದಿದ್ದರು.

ಆರು ಮಕ್ಕಳನ್ನು ಹೊಂದಿರುವ ರೂಪರ್ಟ್ ಮುರ್ಡೋಕ್ ಮೊದಲಿಗೆ ಆಸ್ಟ್ರೇಲಿಯನ್ ಫ್ಲೈಟ್ ನಲ್ಲಿ ಪರಿಚಾರಿಕೆಯಾಗಿದ್ದ ಪೆಟ್ರಿಷಿಯಾ ಜೊತೆ ಮದುವೆಯಾಗಿದ್ದು, 1960ರಲ್ಲಿ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. ಆ ಬಳಿಕ ಅನ್ನಾ ಎಂಬ ವರದಿಗಾರ್ತಿಯನ್ನು ರೂಪರ್ಟ್ ಮುರ್ಡೂಕ್ ಮದುವೆ ಮಾಡಿಕೊಂಡಿದ್ದು ಅವರೊಂದಿಗೆ ಸುಧೀರ್ಘ 30 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ 1999 ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. ಮುರ್ಡೂಕ್ ಅವರ ಮೂರನೇ ಮದುವೆ 2013ರಲ್ಲಿ ಮುರಿದು ಬಿದ್ದಿತ್ತು. ಮಾಡೆಲ್ ಜೆರ್ರಿ ಜೊತೆ ನಾಲ್ಕನೇ ಬಾರಿಗೆ ಮದುವೆಯಾಗಿದ್ದ ರೂಪರ್ಟ್ ಮುರ್ಡೋಕ್ ಬಳಿಕ ವಿಚ್ಛೇದನ ಪಡೆದುಕೊಂಡಿದ್ದು, ವಾಲ್ ಸ್ಟ್ರೀಟ್ ಜರ್ನಲ್, ಫಾಕ್ಸ್ ನ್ಯೂಸ್ ನಂತಹ ಬಹುದೊಡ್ಡ ಮಾಧ್ಯಮ ಸಂಸ್ಥೆಗಳ ಒಡೆಯರಾಗಿರುವ ಮುರ್ಡೋಕ್ ಈಗ ಐದನೇ ಮದುವೆ ಮಾಡಿಕೊಂಡಿದ್ದಾರೆ.

ಯಾರು ಈ ರೂಪರ್ಟ್ ಮುರ್ಡೋಕ್?

ರೂಪರ್ಟ್ ಮುರ್ಡೋಕ್ ದಿ ವಿಲ್ ಸ್ಟ್ರೀಟ್ ಜರ್ನಲ್, ದಿ ಸನ್, ದಿ ಟೈಮ್ಸ್, ನ್ಯೂಯಾರ್ಕ್ ಪೋಸ್ಟ್, ಹೆರಾಲ್ಡ್ ಸನ್ ಮತ್ತು ದಿ ಡೈಲಿ ಟೆಲಿಗ್ರಾಫ್ ಇತರೆ ಪ್ರಸಿದ್ಧ ಸುದ್ದಿ ಮಾಧ್ಯಮಗಳ ಒಡೆಯರಾಗಿದ್ದರು. ಇವರು ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 2022ರಲ್ಲಿ 31ನೇ ಸ್ಥಾನ ಪಡೆದಿದ್ದರು. ರೂಬರ್ಟ್ ಮುರ್ಡೋಕ್ ಅವರ ನಿವ್ವಳ ಆಸ್ತಿ ಮೌಲ್ಯವು 21.7 ಬಿಲಿಯನ್ ಡಾಲರ್ ಆಗಿದೆ. ಆಸ್ಟ್ರೇಲಿಯಾದಲ್ಲಿ 1952 ರಲ್ಲಿ ತನ್ನ ತಂದೆಯಿಂದ ವಾರ್ತಾಪತ್ರಿಕೆಯನ್ನು ಪಡೆದ ಮುರ್ಡೋಕ್ ತನ್ನ ಸಾಮ್ರಾಜ್ಯವನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್‌ಗೂ ವಿಸ್ತರಿಸಿದ್ದರು. ಮುರ್ಡೋಕ್ 1996ರಲ್ಲಿ ಫಾಕ್ಸ್ ನ್ಯೂಸ್ ಚಾನೆಲ್ ಅನ್ನು ಸ್ಥಾಪಿಸಿದರು. ಬಳಿಕ ಫಾಕ್ಸ್ ನ್ಯೂಸ್ ಸಂಸ್ಥೆ ದೊಡ್ಡ ಜಾಲವಾಗಿ ಹರಡಿತು. ಫಾಕ್ಸ್ ನ್ಯೂಸ್‌ನ ಪೋಷಕ ಕಂಪನಿ ಮತ್ತು ನ್ಯೂಸ್ ಕಾರ್ಪೊರೇಷನ್‌ನ ಹುದ್ದೆಗಳಿಂದ ಅವರು ನಿವೃತ್ತಿ ಪಡೆದರು. ಬಳಿಕ ಅವರ ಪುತ್ರ ಲಾಚ್ಲಾನ್ ಮುರ್ಡೋಕ್, ಆಧುನಿಕತೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದ ವ್ಯವಹಾರದ ನಿಯಂತ್ರಣವನ್ನು ವಹಿಸಿಕೊಂಡಿದ್ದಾರೆ.

ಇದನ್ನೂ ಓದಿ:Lok Sabha Election 2024: ವಿಜಯೋತ್ಸವಕ್ಕೆ ಬಿಜೆಪಿ ಪ್ಲ್ಯಾನ್‌ ಹೇಗಿದೆ? ಈಗಿನಿಂದಲೇ ಶುರು ಭರ್ಜರಿ ತಯಾರಿ

Continue Reading

ವಿದೇಶ

Shootout: ಬರ್ತ್‌ ಡೇ ಪಾರ್ಟಿಯಲ್ಲಿ ಭಾರೀ ಶೂಟೌಟ್‌-27 ಮಂದಿಗೆ ಗುಂಡೇಟು

Shootout: ಓಹಿಯೋ ರಾಜ್ಯದ ಅಕ್ರಾನ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ಕೆಲ್ಲಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ರಾತ್ರಿ 10 ಗಂಟೆಗೆ ಬರ್ತ್‌ ಡೇ ಪಾರ್ಟಿವೊಂದನ್ನು ಆಯೋಜಿಸಲಾಗಿತ್ತು. ಹೀಗಾಗಿ ಸುಮಾರು 200ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮನೆಯ ಎದುರುಗಡೆ ಇರುವ ರಸ್ತೆಯಲ್ಲಿ ಜನ ಕಿಕ್ಕಿರಿದಿದ್ದ ಹಿನ್ನೆಲೆ ಟ್ರಾಫಿಕ್‌ ಸಮಸ್ಯೆಯೂ ಉಂಟಾಗಿತ್ತು ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಸ್ತೆ ಕ್ಲಿಯರ್‌ ಮಾಡುವಂತೆ ಸೂಚಿಸಿದ್ದರು. ಇದಾದ ಬಳಿಕ ಅವರು ಅಲ್ಲಿಂದ ತೆರಳಿದ್ದರು.

VISTARANEWS.COM


on

Shootout
Koo

ಅಕ್ರಾನ್‌ : ಕೆಲವೊಮ್ಮೆ ಸಣ್ಣ ಪುಟ್ಟ ಗಲಾಟೆ ಜಗಳ, ಕೋಪ, ಎಡವಟ್ಟಿನಿಂದಾಗಿ ಅದೆಂಥಾ ದೊಡ್ಡ ಸಂಭ್ರಮಾಚರಣೆ ಆಗಿದ್ದರೂ ಅದನ್ನು ಒಂದು ಕ್ಷಣದಲ್ಲಿ ಸ್ಮಶಾನವನ್ನಾಗಿಸಿ ಬಿಡುತ್ತದೆ. ಅಂತಹದ್ದೇ ಒಂದು ಘಟನೆ ಅಮೆರಿಕದ ಓಹಿಯೋ ರಾಜ್ಯದಲ್ಲಿ ನಡೆದಿದೆ. ಸಂಭ್ರಮದಿಂದ ನಡೆಯುತ್ತಿದ್ದ ಬರ್ತ್‌ ಡೇ ಪಾರ್ಟಿ(Birthday Party) ದುರಂತ ಅಂತ್ಯ ಕಂಡಿದೆ. ಏಕಾಏಕಿ ಶೂಟೌಟ್‌(Shootout) ನಡೆದಿದ್ದು, ಬರೋಬ್ಬರಿ 27 ಮಂದಿಗೆ ಗುಂಡೇಟು ಬಿದ್ದಿದೆ. ಇನ್ನು ಈ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

ಓಹಿಯೋ ರಾಜ್ಯದ ಅಕ್ರಾನ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿನ ಕೆಲ್ಲಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ರಾತ್ರಿ 10 ಗಂಟೆಗೆ ಬರ್ತ್‌ ಡೇ ಪಾರ್ಟಿವೊಂದನ್ನು ಆಯೋಜಿಸಲಾಗಿತ್ತು. ಹೀಗಾಗಿ ಸುಮಾರು 200ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮನೆಯ ಎದುರುಗಡೆ ಇರುವ ರಸ್ತೆಯಲ್ಲಿ ಜನ ಕಿಕ್ಕಿರಿದಿದ್ದ ಹಿನ್ನೆಲೆ ಟ್ರಾಫಿಕ್‌ ಸಮಸ್ಯೆಯೂ ಉಂಟಾಗಿತ್ತು ಹೀಗಾಗಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಸ್ತೆ ಕ್ಲಿಯರ್‌ ಮಾಡುವಂತೆ ಸೂಚಿಸಿದ್ದರು. ಇದಾದ ಬಳಿಕ ಅವರು ಅಲ್ಲಿಂದ ತೆರಳಿದ್ದರು. ಇದಾದ ಕೆಲವೇ ಹೊತ್ತಲ್ಲಿ ಸ್ಥಳದಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಪೊಲೀಸರಿಗೆ ಬ್ಯಾಕ್‌ ಟು ಬ್ಯಾಕ್‌ ಕರೆಗಳು ಹೋಗಿವೆ. ಸ್ಥಳಕ್ಕೆ ಬಂದು ನೋಡಿದಾಗ 25ಜನ ಗುಂಡೇಟು ತಗುಲಿ ಗಂಭಿರವಾಗಿ ಗಾಯಗೊಂಡು ಸ್ಥಳದಲ್ಲೇ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು.

ಇನ್ನು ಘಟನೆಯಲ್ಲಿ 27ವರ್ಷದ ಒಬ್ಬ ಯುವಕ ಮೃತಪಟ್ಟಿದ್ದು, ನಾಲ್ವರ ಸ್ಥಿತಿ ಬಹಳ ಗಂಭೀರವಾಗಿದೆ. ಇನ್ನು ಎಲ್ಲಾ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ, ರೈಫಲ್‌ನಿಂದ ಕೇಸಿಂಗ್‌ಗಳು ಸೇರಿದಂತೆ ಎರಡು ಬಂದೂಕುಗಳು ಮತ್ತು ಅನೇಕ ರೀತಿಯ ಶೆಲ್ ಕೇಸಿಂಗ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Parvathi Menon: ಸದ್ದಿಲ್ಲದೇ ಮದುವೆಯಾದ್ರಾ ʻಮಿಲನʼ ನಾಯಕಿ ಪಾರ್ವತಿ ಮೆನನ್?

Continue Reading

ವೈರಲ್ ನ್ಯೂಸ್

YouTube channels: ಅತಿ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಟಾಪ್‌ 10 ಯುಟ್ಯೂಬ್‌ ಚಾನೆಲ್‌ಗಳಿವು!

ಲಕ್ಷಾಂತರ ಯುಟ್ಯೂಬ್ ಚಾನೆಲ್ ಗಳಿದ್ದು ಇದರಲ್ಲಿ ಅತೀ ಹೆಚ್ಚು ಚಂದಾದಾರನ್ನು ಹೊಂದಿರುವ ಮೊದಲ ಹತ್ತು ಯು ಟ್ಯೂಬ್ ಚಾನೆಲ್ ಗಳು (YouTube channels) ಯಾವುದು ಗೊತ್ತೇ? ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಹತ್ತು ಯುಟ್ಯೂಬ್‌ ಚಾನೆಲ್‌ಗಳ ವಿವರ ಇಲ್ಲಿದೆ.

VISTARANEWS.COM


on

By

YouTube channels
Koo

ಲಕ್ಷಾಂತರ ಯೂಟ್ಯೂಬ್ ಚಾನೆಲ್‌ಗಳಿದ್ದು (YouTube channels) ಇದರಲ್ಲಿ ಮಿಸ್ಟರ್ ಬೀಸ್ಟ್ (MrBeast) 267 ಮಿಲಿಯನ್ ಚಂದಾದಾರರನ್ನು (subscribers) ಹೊಂದಿದ್ದು, ಅತೀ ಹೆಚ್ಚು ಸಬ್ ಸ್ಕ್ರೈಬ್ ಆಗಿರುವ ಯುಟ್ಯೂಬ್ ಚಾನೆಲ್ ಎಂಬ ಖ್ಯಾತಿಯನ್ನು ಪಡೆದಿದೆ. ಟಿ-ಸಿರೀಸ್‌ಅನ್ನು (T-Series) ಕೆಳಗಿಳಿಸಿ ಮಿಸ್ಟರ್ ಬೀಸ್ಟ್ ಮೊದಲ ಸ್ಥಾನವನ್ನು ಪಡೆದಿದೆ.

ಯು ಟ್ಯೂಬ್‌ನಲ್ಲಿ ಟಿ-ಸಿರೀಸ್ 266 ಮಿಲಿಯನ್ ಚಂದಾದಾರರನ್ನು ಹೊಂದಿದೆ. ಇದರ ಬಳಿಕ ಕೊಕೊಮೆಲನ್ – ನರ್ಸರಿ ರೈಮ್ಸ್ (Cocomelon – Nursery Rhymes) 176 ಮಿಲಿಯನ್, ಎಸ್ ಇಟಿ ಇಂಡಿಯಾ (SET India) 173 ಮಿಲಿಯನ್, ಕಿಡ್ಸ್ ಡಯಾನಾ ಶೋ (Kids Diana Show) 122 ಮಿಲಿಯನ್, ವ್ಲಾಡ್ ಮತ್ತು ನಿಕಿ (Vlad and Niki) 118 ಮಿಲಿಯನ್, ಲೈಕ್ ನಾಸ್ತ್ಯ (Like Nastya) 116 ಮಿಲಿಯನ್, ಪ್ಯೂಡಿಪಿ (Pewdiepie) 111 ಮಿಲಿಯನ್, ಝೀ ಸಂಗೀತ ಕಂಪೆನಿ (Zee Music Company) 107 ಮಿಲಿಯನ್ ಮತ್ತು WWE 102 ಮಿಲಿಯನ್ ಚಂದಾದಾರನ್ನು ಹೊಂದಿದೆ.

ಮಿಸ್ಟರ್ ಬೀಸ್ಟ್ ಭಾನುವಾರ ಟಿ-ಸರಣಿಯನ್ನು ಮೀರಿಸಿ ಅತಿ ಹೆಚ್ಚು ಚಂದಾದಾರರಾಗಿರುವ ಯೂಟ್ಯೂಬರ್ ಆಗಿ ಹೊರಹೊಮ್ಮಿದೆ. 26 ವರ್ಷದ ಮಿಸ್ಟರ್ ಬೀಸ್ಟ್ ಅವರ ನಿಜವಾದ ಹೆಸರು ಜೇಮ್ಸ್ ಸ್ಟೀಫನ್. ತಮ್ಮ ಸಾಧನೆಯನ್ನು ಕೊಂಡಾಡುತ್ತಾ ಮಿಸ್ಟರ್ ಬೀಸ್ಟ್ ಹೀಗೆ ಬರೆದಿದ್ದಾರೆ: ಆರು ವರ್ಷಗಳ ಅನಂತರ ನಾವು ಅಂತಿಮವಾಗಿ ಪ್ಯೂಡಿಪಿಯ (PewDiePie) ಮೇಲೆ ಸೇಡು ತೀರಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಮಿಸ್ಟರ್ ಬೀಸ್ಟ್ ಈ ವಾರದ ಆರಂಭದಲ್ಲೇ 2018ರ ಟಿ-ಸೀರೀಸ್‌ನೊಂದಿಗೆ ಚಂದಾದಾರರನ್ನು ಹೆಚ್ಚಿಸುವ ಪೈಪೋಟಿಗೆ ಇಳಿದಿತ್ತು. ಈ ಸಮಯದಲ್ಲಿ PewDiePie ಗೆ ಸಹಾಯ ಮಾಡುವ ಕುರಿತು ಅವರು ಹೇಳಿದ್ದರು. ಜಾನ್ ಯೂಶೈ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಮಿಸ್ಟರ್ ಬೀಸ್ಟ್ ಜೇಮ್ಸ್ ಸ್ಟೀಫನ್ ಅವರು, ಇದು ಅಮೆರಿಕ ಮತ್ತು ಭಾರತದ ವಿರುದ್ಧ ನಡೆದ ಯುದ್ಧ ಎಂದು ನಾನು ಭಾವಿಸುವುದಿಲ್ಲ. ಪ್ರಾರಂಭದಲ್ಲಿ ಇದು ಮೊದಲು ಸ್ವಲ್ಪ ಜನಾಂಗೀಯತೆ ರೂಪವನ್ನು ಪಡೆಯಿತು. ಅಲ್ಲದೇ ಇದು ಭಾರತ ವಿರುದ್ಧ ಅಮೆರಿಕ ಚರ್ಚೆಯಾಗಿ ಬದಲಾಗಬಹುದೆಂಬ ಭಯವಿತ್ತು ಎಂದರು.

ಇದನ್ನೂ ಓದಿ: YouTube New Feature: ನಿಮ್ಮಿಷ್ಟದ ಹಾಡು ಗುನುಗಿದ್ರೂ ಸಾಕು ಯುಟ್ಯೂಬ್ ಆ ಹಾಡನ್ನು ಹೆಕ್ಕಿ ತೆಗೆಯುತ್ತದೆ!

ಚಾನಲ್‌ಗೆ ಇನ್ನೂ ಹೆಚ್ಚು ಚಂದಾದಾರರಾಗಲು ಬಯಸುತ್ತಿದ್ದಾರೆ. ನನಗೆ ಸಹಾಯ ಮಾಡುವ ಬಹಳಷ್ಟು ಜನರಿದ್ದಾರೆ. ನಾನು ಇದರೊಂದಿಗೆ ಬದುಕುತ್ತೇನೆ ಮತ್ತು ಉಸಿರಾಡುತ್ತೇನೆ. ನಾನು ಇದರ ಸೃಷ್ಟಿಕರ್ತ ಎಂದು ಅವರು ಹೇಳಿದರು.

ಹೆಚ್ಚಿನ ಯೂಟ್ಯೂಬ್ ಚಾನೆಲ್ ಸೃಷ್ಟಿಕರ್ತರೇ ನನ್ನ ಚಾನೆಲ್‌ಗೆ ಹೆಚ್ಚು ಚಂದಾದಾರರಾಗಿರುವುದು ಸಂತೋಷವಾಗಿದೆ ಎಂದು ನಾನು ಭಾವಿಸುತ್ತೇನೆ. T-ಸಿರೀಸ್‌ ಅನ್ನು ನಾಕ್ ಮಾಡುತ್ತಿಲ್ಲ. ಯಾಕೆಂದರೆ ಅವರು ನನಗಿಂತ ಸಾವಿರ ಪಟ್ಟು ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು.

Continue Reading
Advertisement
Hornbill bird sighting in Gangavathi
ಕರ್ನಾಟಕ2 mins ago

Hornbill Bird: ಗಂಗಾವತಿಯಲ್ಲಿ ‘ಹಾರ್ನ್‌ಬಿಲ್’ ಪಕ್ಷಿ ಪ್ರತ್ಯಕ್ಷ

Samsung Big TV Days Sale Exciting offer on big TVs
ದೇಶ5 mins ago

Samsung: ಸ್ಯಾಮ್‌ಸಂಗ್‌ನ ʼಬಿಗ್‌ ಟಿವಿ ಡೇಸ್‌ʼ ಸೇಲ್‌; ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌!

Davangere Lok Sabha Constituency
ದಾವಣಗೆರೆ8 mins ago

Davangere Lok Sabha Constituency: ದಾವಣಗೆರೆಯಲ್ಲಿ ನಾರಿಶಕ್ತಿ ಕದನ, ಯಾರು ಗೆದ್ದರೂ ಇತಿಹಾಸ

Rahul Dravid
ಕ್ರಿಕೆಟ್9 mins ago

Rahul Dravid: ರೋಹಿತ್​, ಕೊಹ್ಲಿ, ಪಂತ್​ ಸೇರಿ ಎಲ್ಲ ಆಟಗಾರರಿಗೆ ಖಡಕ್​ ಎಚ್ಚರಿಕೆ ನೀಡಿದ ಕೋಚ್​ ದ್ರಾವಿಡ್​

Kannada New Movie Mandela nari shrinivas
ಸ್ಯಾಂಡಲ್ ವುಡ್9 mins ago

Kannada New Movie: `ಮಂಡೇಲಾ’ ಚಿತ್ರಕ್ಕೆ ನಾರಿ ಶ್ರೀನಿವಾಸ್ ನಾಯಕ!

Election Result 2024
ಪ್ರಮುಖ ಸುದ್ದಿ15 mins ago

Election Result 2024: ಇಂಡಿ ಒಕ್ಕೂಟ ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ, ಅಂದು ಅಮವಾಸ್ಯೆ ಬೇರೆ; ಹಾಗಾಗಿ…

Fact Check
Fact Check27 mins ago

Fact Check: ಸೋಲುವ ಭೀತಿಯಲ್ಲಿ ಬ್ಯಾಂಕಾಕ್‌ಗೆ ಹಾರಲು ಸಿದ್ಧರಾದ್ರಾ ರಾಹುಲ್‌ ಗಾಂಧಿ? ವೈರಲ್‌ ಆಗಿರುವ ಬೋರ್ಡಿಂಗ್‌ ಪಾಸ್‌ನ ಅಸಲಿಯತ್ತೇನು?

Benefits Of Walk After Meal
ಆರೋಗ್ಯ30 mins ago

Benefits Of Walk After Meal: ಊಟದ ಬಳಿಕ ಲಘುವಾದ ವಾಕಿಂಗ್‌ ಮಾಡಿ, ಆರೋಗ್ಯದಲ್ಲಿನ ಬದಲಾವಣೆ ನೋಡಿ!

Dead Body Found Bodies found floating in Cauvery river
ಕ್ರೈಂ36 mins ago

Dead Body Found : ಕಾವೇರಿ ನದಿಯಲ್ಲಿ ತೇಲಿ ಬಂದ ಶವಗಳು; ನೋಡಲು ಮುಗಿಬಿದ್ದ ಜನರು

Ram Charan Instagram story of daughter Klin Kaara receiving bujji
ಟಾಲಿವುಡ್36 mins ago

Ram Charan: ರಾಮ್‌ಚರಣ್‌ ಮಗಳಿಗೆ ಸಿಕ್ತು ಪ್ರಭಾಸ್‌ರಿಂದ ಪುಟಾಣಿ ಬುಜ್ಜಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 hour ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ2 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌