Tumkur News: ಲೋಕಸಭಾ ಚುನಾವಣೆ; ಶಿರಾದಲ್ಲಿ ಪಥಸಂಚಲನ - Vistara News

ತುಮಕೂರು

Tumkur News: ಲೋಕಸಭಾ ಚುನಾವಣೆ; ಶಿರಾದಲ್ಲಿ ಪಥಸಂಚಲನ

Tumkur News: ಲೋಕಸಭಾ ಚುನಾವಣೆ-2024 ರ ಅಂಗವಾಗಿ ಶಿರಾ ನಗರ ಹಾಗೂ ತಾಲೂಕಿನ ಕಳ್ಳಂಬೆಳ್ಳ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಪೊಲೀಸ್‌ ಇಲಾಖೆ ವತಿಯಿಂದ ಪಥಸಂಚಲನ ನಡೆಸಲಾಯಿತು.

VISTARANEWS.COM


on

pathasanchalana at shira
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿರಾ: ಲೋಕಸಭಾ ಚುನಾವಣೆ-2024ರ (Lok Sabha Election-2024) ಅಂಗವಾಗಿ ಮತದಾರರಲ್ಲಿ (Voters) ಯಾವುದೇ ಭಯಬೇಡ ನಿಮ್ಮ ಜತೆ ನಾವಿದ್ದೇವೆ, ಮುಕ್ತವಾಗಿ ಪ್ರಜಾಪ್ರಭುತ್ವದ ತಮ್ಮ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸಿ ಎನ್ನುವ ಮುಂಜಾಗ್ರತೆಗಾಗಿ ಶಿರಾ ನಗರ ಹಾಗೂ ತಾಲೂಕಿನ ಕಳ್ಳಂಬೆಳ್ಳ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಪೊಲೀಸ್‌ ಇಲಾಖೆ ವತಿಯಿಂದ ಪಥಸಂಚಲನ (Tumkur News) ನಡೆಸಲಾಯಿತು.

ಶಿರಾ ಉಪ ವಿಭಾಗದ ಡಿವೈಎಸ್‌ಪಿ ಬಿ.ಕೆ. ಶೇಖರ್‌ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಅರೆ ಸೇನಾ ಪಡೆ ಜತೆ ಪೊಲೀಸ್ ಸಿಬ್ಬಂದಿಗಳು ನಗರ ಸೇರಿದಂತೆ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಇದನ್ನೂ ಓದಿ: Job Alert: ಗಮನಿಸಿ; ಜಲಮಂಡಳಿಯ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಲ್ಲಿದೆ ಸಂಪೂರ್ಣ ವಿವರ

ನಗರ ಪೊಲೀಸ್ ಠಾಣೆಯಿಂದ ಪ್ರಾರಂಭವಾದ ಪಥಸಂಚಲನವು ನಗರದ ವಿವಿಧ ಕಡೆ ಸಂಚರಿಸಿ, ಲೋಕಸಭಾ ಚುನಾವಣೆ ಅಂಗವಾಗಿ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸುವ ಕುರಿತು ಜಾಗೃತಿ ಮೂಡಿಸಲಾಯಿತು,

ಶಿರಾ ಗ್ರಾಮಾಂತರ ಪೊಲೀಸ್ ವೃತ್ತ ವ್ಯಾಪ್ತಿಯಲ್ಲೂ ಆಯಾ ಠಾಣಾ ಅಧಿಕಾರಿ, ಸಿಬ್ಬಂದಿಗಳಿಂದ ಪಥಸಂಚಲನ ನಡೆಸಲಾಯಿತು.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಂದಿನಿ ಪ್ರಾಯೋಜಕತ್ವ?

ಶಿರಾ ನಗರ ಠಾಣಾ ಸಿಪಿಐ ಮಂಜೇಶ್‌ ಗೌಡ, ಶಿರಾ ಗ್ರಾಮಾಂತರ ಸಿಪಿಐ ಎಸ್‌.ಕೆ. ಶಶಿಧರ್‌ ಹಾಗೂ ಪಿಎಸ್ಐ ಹಾಗೂ ಸಿಬ್ಬಂದಿಗಳು ಸೇರಿ ನೂರಾರು ಅರೆಸೇನಾ ಪಡೆ ಅವರಿಂದ ಪಥಸಂಚಲನ ನಡೆಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Suicide Attempt : ಕಾಮಗಾರಿ ನಡೆಸಿದ 9 ಕೋಟಿ ರೂಪಾಯಿ ಬಿಲ್​ಬಾಕಿ , ಗುತ್ತಿಗೆದಾರನಿಂದ ಆತ್ಮಹತ್ಯೆ ಯತ್ನ

Suicide Attempt :ಪ್ರಥಮ ದರ್ಜೆ ಗುತ್ತಿಗೆದಾರ ಸುಜಿತ್​ ಸರ್ಕಾರದ ವಿರುದ್ಧ ಆರೋಪ ಮಾಡಿರುವವರು. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಎಂ.ಡಿ ವಿರುದ್ಧ ಗಂಭೀರ ಆರೋಪ ಮಾಡುವ ವಿಡಿಯೊವನ್ನು ಚಿತ್ರೀಕರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಗುತ್ತಿಗೆದಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

VISTARANEWS.COM


on

Suicide attempt
Koo

ತುಮಕೂರು : ರಾಜ್ಯ ಸರ್ಕಾರದ ವಿವಿಧ ಇಲಾಖೆ ಹಾಗೂ ಮಂಡಳಿಗಳ ಕಾಮಗಾರಿ ನಡೆಸಿದ ಗುತ್ತಿಗೆದಾದರಿಗೆ ಸೂಕ್ತ ಸಮಯಕ್ಕೆ ಬಿಲ್​ ನೀಡುತ್ತಿಲ್ಲ ಎಂಬ ಆರೋಪಕ್ಕೆ ಮತ್ತೊಂದು ಬಾರಿ ಪುಷ್ಟಿ ಸಿಕ್ಕಿದೆ. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಮಹಾ ನಿರ್ದೇಶಕರೊಬ್ಬರು ಕಾಮಗಾರಿ ನಡೆಸಿದ 8 ಕೋಟಿ ರೂಪಾಯಿ ಬಿಡುಗಡೆ ಮಾಡದೇ ಕಿರುಕುಳ ನೀಡುತ್ತಿಲ್ಲ ಎಂದು ಆರೋಪಿಸಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ (Suicide Attempt) ಮಾಡಲು ಯತ್ನಿಸಿದ ಘಟನೆ ಪಾವಗಡದಲ್ಲಿ ನಡೆದಿದೆ. ಕೆಲಸ ಮುಗಿದು ವರ್ಷಗಳೇ ಕಳೆದರೂ ಹಣ ಬಿಡುಗಡೆ ಮಾಡದೇ ಅನಗತ್ಯ ರಿಪೋರ್ಟ್​ ಬರೆದು ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರಥಮ ದರ್ಜೆ ಗುತ್ತಿಗೆದಾರ ಸುಜಿತ್​ ಸರ್ಕಾರದ ವಿರುದ್ಧ ಆರೋಪ ಮಾಡಿರುವವರು. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಎಂ.ಡಿ ವಿರುದ್ಧ ಗಂಭೀರ ಆರೋಪ ಮಾಡುವ ವಿಡಿಯೊವನ್ನು ಚಿತ್ರೀಕರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಗುತ್ತಿಗೆದಾರ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿಯ ಎಂ.ಡಿ ಸಣ್ಣಚಿತ್ತಪ್ಪ ವಿರುದ್ಧ ಆರೋಪ ಮಾಡಿರು ಸುಜಿತ್ ಅವರ ಕಿರುಕುಳದಿಂದಾಗಿ ಸಮಸ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.

ಪಾವಗಡ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ‌ನಾಗಿರುವ ಸುಜಿತ್ ಅವರು ತಾಲೂಕಿನಲ್ಲಿ ಹಲವು ಕಾಮಗಾರಿ‌ ಮಾಡಿಸಿದ್ದೇನೆ ಎಂದು ಹೇಳಿದ್ದಾರೆ. ಕಾಮಗಾರಿ‌ ಮುಗಿದರೂ ಹಣ ಬಿಡುಗಡೆ ಮಾಡದೇ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಸ್.ಸಿ.ಪಿ ಅಡಿ ಕಾಮಗಾರಿ ಮಾಡಿದ್ದೇನೆ. ಆದರೆ, ಕಾಮಗಾರಿ ಸರಿಯಿಲ್ಲ ಎಂದು ತನಿಖೆ ಮಾಡುವ ನೆಪದಲ್ಲಿ ಎಂ. ಡಿ ಸಣ್ಣಚಿತ್ತಪ್ಪ ಅವರು ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Murder News : ಹಾಸನದಲ್ಲಿ ನಟೋರಿಯಸ್​ ರೌಡಿ ಚೈಲ್ಡ್​ ರವಿ ಬರ್ಬರ ಕೊಲೆ

ತನಿಖೆ ನೆಪದಲ್ಲಿ ಮುಕ್ತಾಯಗೊಂಡ ಕಾಮಗಾರಿಯ ಬಿಲ್ ನೀಡುತ್ತಿಲ್ಲ. ಸುಮಾರು 9 ಕೋಟಿ ಹಣ ಬಿಡುಗಡೆ ಆಡಬೇಕಾಗಿದೆ. ಕಾಮಗಾರಿ ಮುಗಿದು ವರ್ಷಗಳೇ ಕಳೆದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಸುಜಿತ್ ಆರೋಪಿಸಿದ್ದಾರೆ.

ಮಂಡಳಿಯ ಅಡಿಯಲ್ಲಿ ರಸ್ತೆ ಹಾಗೂ ಚೆಕ್ ಡ್ಯಾಮ್ ಗಳನ್ನು ಮಾಡಿಸಿದ್ದೇನೆ. ಆದರೆ, ರಾಜಕೀಯ ದುರುದ್ದೇಶದಿಂದಾಗಿ ನನ್ನ ಬಿಲ್ ಬಿಡುಗಡೆ ಮಾಡುತ್ತಿಲ್ಲ ಎಂದು ಸುಜಿತ್ ಆರೋಪಿಸಿದ್ದಾರೆ.

ಮೂಲತಃ ಪಾವಗಡದವರೇ ಆಗಿರುವ ಎಂಡಿ ಸಣ್ಣಚಿತ್ತಪ್ಪ ಅವರು ರಾಜಕೀಯ ದುರುದ್ದೇಶದಿಂದ ಹಣ ಬಿಡುಗಡೆ ಮಾಡುತ್ತಿಲ್ಲ. ನಷ್ಟ ತಾಳಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಜಿತ್ ವಿಡಿಯೊ ಮಾಡಿದ್ದಾರೆ. ನನ್ನ ಸಾವಿಗೆ ಕಾರಣ ಎಂ.ಡಿ ಸಣ್ಣ ಚಿತ್ತಪ್ಪ ಅವರೇ ಕಾರಣ ಎಂದು ಹೇಳಿರುವ ವಿಡಿಯೊ ವೈರಲ್ ಆಗಿದೆ. ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿರುವ ನನ್ನ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಸುಜಿತ್ ಆರೋಪಿಸಿದ್ದಾರೆ.

ಆತ್ಮಹತ್ಯೆ ಯತ್ನ ನಡೆಸಿ ಅಸ್ವಸ್ಥಗೊಂಡಿರುವ ಸುಜಿತ್ ಅವರು ಸದ್ಯ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

ಮಳೆ

Karnataka Weather : ರಾಜ್ಯದ ಹಲವೆಡೆ ಮಳೆ ಅಲರ್ಟ್‌; ಬೆಂಗಳೂರಲ್ಲಿ ಹೇಗೆ?

Rain news : ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

VISTARANEWS.COM


on

By

Karnataka Weather Forecast
Koo

ಬೆಂಗಳೂರು: ರಾಜ್ಯಾದ್ಯಂತ ಮುಂದಿನ 48 ಗಂಟೆಗಳಲ್ಲಿ ಒಳನಾಡಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 2-3 ಡಿಗ್ರಿ ಸೆಲ್ಸಿಯಸ್‌ನಿಂದ ಕ್ರಮೇಣ ಕಡಿಮೆಯಾಗುವ ಸಾಧ್ಯತೆಯಿದೆ (Karnataka Weather Forecast) ಇದೆ. ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಹಗುರದಿಂದ ಸಾಧಾರಣ ಮಳೆಯೊಂದಿಗೆ (Heavy Rain) ಗುಡುಗು ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಮತ್ತು 21 ಡಿ.ಸೆ ಇರಲಿದೆ.

ಜೂನ್‌ 7ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇಂದು ಬುಧವಾರ ಕರಾವಳಿಯ ಉತ್ತರ ಕನ್ನಡದಲ್ಲಿ ಭಾರಿ ಮಳೆಗೆ ಗುಡುಗು ಸಾಥ್‌ ನೀಡಲಿದೆ. ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆಯಲ್ಲಿ ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿಯ ವೇಗವು 30-40 ಕಿಮೀ ಮಳೆಯಾಗಲಿದೆ.

ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ದ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: NEET UG Result 2024 : ಮೊದಲ ರ‍್ಯಾಂಕ್‌ ಪಡೆದ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ಮಂದಿ ನೀಟ್‌ ಟಾಪರ್ಸ್‌

ಯಾದಗಿರಿಯಲ್ಲಿ ಸಿಡಿಲು ಬಡಿದು ನಿರ್ಮಾಣ ಹಂತದ ಮನೆ ಗೋಡೆ ಹಾನಿ

ಯಾದಗಿರಿಯಲ್ಲಿ ನಿನ್ನೆ ಮಂಗಳವಾರ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಸಿಡಿಲು ಬಡಿದು ನಿರ್ಮಾಣ ಹಂತದ ಮನೆ ಗೋಡೆಗೆ ಹಾನಿಯಾಗಿದೆ. ಯಾದಗಿರಿಯ ಸುರಪುರ ತಾಲೂಕಿನ ತಳ್ಳಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮರಕ್ಕೆ ಸಿಡಿಲು ಬಡಿದು ಬೆಂಕಿಗಾಹುತಿಯಾಗಿದ್ದು, ಮರದ ಪಕ್ಕದಲ್ಲಿದ್ದ ಗುಡಿಸಲಿನಲ್ಲಿರುವ ಟಿವಿ ಸುಟ್ಟು ಹೋಗಿದೆ. ಗಿರಿನಗರದ ರಮೇಶ್ ಎಂಬುವವರ ಗುಡಿಸಲು ಹಾನಿಯಾಗಿದೆ. ಭಾರೀ ಮಳೆಗೆ ರೈಲ್ವೆ ನಿಲ್ದಾಣ ಸಮೀಪದ ಭವಾನಿ ಮಂದಿರದ ಮುಂಭಾಗದಲ್ಲಿ ಆಲದ ಮರ ಧರೆಗುರುಳಿದೆ.

ಬಿರುಗಾಳಿ ಸಹಿತ ಮಳೆಗೆ ಆಟೋ ಮೇಲೆ ಉರುಳಿ ಬಿದ್ದ ಮರ

ನಿನ್ನೆ ಮಂಗಳವಾರ ರಾತ್ರಿ ಗುಡುಗು, ಮಿಂಚು, ಬಿರುಗಾಳಿಯೊಂದಿಗೆ ಸುರಿದ ಮಳೆಗೆ ನಿಂತಿದ್ದ ಆಟೋ ಮೇಲೆ ಮರ ಉರುಳಿ ಬಿದ್ದ ಘಟನೆ ನಗರದ ತ್ರಿಪುರಾಂತನಲ್ಲಿ ಜರುಗಿದೆ. ತ್ರಿಪುರಾಂತನ ಮಡಿವಾಳ ವೃತ್ತದಲ್ಲಿಯ ಮುಖ್ಯ ರಸ್ತೆ ಬದಿಯಲ್ಲಿ ನಿಲ್ಲಿಸಿದ ಆಟೋ ಮೇಲೆ ಬೃಹತ್ ಗಾತ್ರದ ಬೇವಿನ ಮರ ಉರುಳಿ ಬಿದ್ದು, ಆಟೋ ಜಖಂಗೊಂಡಿದೆ.
ನಗರದ ಹರಳಯ್ಯ ವೃತ್ತದ ಸಮೀಪದ ಕರ್ನಾಟಕ ಬ್ಯಾಂಕ್ ಮುಂಭಾಗದಲ್ಲಿ ಮುಖ್ಯ ರಸ್ತೆ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಈ ಮಾರ್ಗದಲ್ಲಿ ಕೆಲ ಕಾಲ ರಸ್ತೆ ಸಂಚಾರ ಬದಲಾಯಿಸಲಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ನಗರಸಭೆ ಅಧಿಕಾರಿಗಳು ತಕ್ಷಣ ಮರ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ಕಾರವಾರ, ಯಾದಗಿರಿಯಲ್ಲಿ ಅಬ್ಬರಿಸಿದ ವರುಣ; ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆ

Rain News : ಬೆಂಗಳೂರಲ್ಲಿ ವರುಣ ಬ್ರೇಕ್‌ ಕೊಟ್ಟಿದ್ದು, ಕರಾವಳಿಯಲ್ಲಿ ಅಬ್ಬರಿಸುತ್ತಿದ್ದಾನೆ. ಮುಂದಿನ 24 ಗಂಟೆಯಲ್ಲಿ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ (Karnataka Weather Forecast) ಬೀಸಲಿದೆ.

VISTARANEWS.COM


on

By

Karnataka weather Forecast
Koo

ಬೆಂಗಳೂರು: ಮಂಗಳವಾರದಂದು ಕರಾವಳಿಯಲ್ಲಿ ಗುಡುಗು ಸಹಿತ ಭಾರಿ (Karnataka Weather Forecast) ಮಳೆಯಾಗಿತ್ತು. ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಭಾಗಗಳಲ್ಲಿ ಧಾರಾಕಾರ ಮಳೆಯಿಂದಾಗಿ (Rain News) ಜನಜೀವನ ಅಸ್ತವ್ಯಸ್ತವಾಗಿತ್ತು. ಭಾರಿ ಮಳೆಯಿಂದಾಗಿ (Heavy Rain Alert) ಹೆದ್ದಾರಿಯಲ್ಲಿ ನೀರು ನಿಂತಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು.

ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಎಡಬಿಡದೆ ಮಳೆ ಸುರಿದಿದೆ. ಕಳೆದೊಂದು ವಾರದಿಂದ ಘಟ್ಟದ ಮೇಲಿನ ತಾಲೂಕುಗಳಲ್ಲಿ ಮಳೆ ಸುರಿದಿತ್ತು. ಇದೀಗ ಕರಾವಳಿ ತಾಲೂಕುಗಳಲ್ಲಿ ವರುಣಾರ್ಭಟ ಆರಂಭವಾಗಿದೆ. ಲೋಕಸಭೆ ಚುನಾವಣೆಯ ಮತ ಎಣಿಕೆಗೂ ಮಳೆ ಅಡ್ಡಿ ಆಯಿತು. ಮತ ಎಣಿಕೆ ಕೇಂದ್ರಕ್ಕೆ ಅಧಿಕಾರಿ, ಸಿಬ್ಬಂದಿ ಮಳೆಯಲ್ಲಿ ನೆನೆದುಕೊಂಡೆ ಬರುವಂತಾಯಿತು.

karnataka weather Forecast

ಯಾದಗಿರಿಯಲ್ಲಿ ಸಿಡಿಲು ಬಡಿದು ನಿರ್ಮಾಣ ಹಂತದ ಮನೆ ಗೋಡೆ ಹಾನಿ

ಯಾದಗಿರಿಯಲ್ಲಿ ಮಂಗಳವಾರ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ಸಿಡಿಲು ಬಡಿದು ನಿರ್ಮಾಣ ಹಂತದ ಮನೆ ಗೋಡೆಗೆ ಹಾನಿಯಾಗಿದೆ. ಯಾದಗಿರಿಯ ಸುರಪುರ ತಾಲೂಕಿನ ತಳ್ಳಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮರಕ್ಕೆ ಸಿಡಿಲು ಬಡಿದು ಬೆಂಕಿಗಾಹುತಿಯಾಗಿದ್ದು, ಮರದ ಪಕ್ಕದಲ್ಲಿದ್ದ ಗುಡಿಸಲಿನಲ್ಲಿರುವ ಟಿವಿ ಸುಟ್ಟು ಹೋಗಿದೆ. ಗಿರಿನಗರದ ರಮೇಶ್ ಎಂಬುವವರ ಗುಡಿಸಲು ಹಾನಿಯಾಗಿದೆ. ಭಾರೀ ಮಳೆಗೆ ರೈಲ್ವೆ ನಿಲ್ದಾಣ ಸಮೀಪದ ಭವಾನಿ ಮಂದಿರದ ಮುಂಭಾಗದಲ್ಲಿ ಆಲದ ಮರ ಧರೆಗುರುಳಿದೆ.

ಬಿರುಗಾಳಿ ಸಹಿತ ಮಳೆಗೆ ಆಟೋ ಮೇಲೆ ಉರುಳಿ ಬಿದ್ದ ಮರ

ಬಸವಕಲ್ಯಾಣ: ಗುಡುಗು, ಮಿಂಚು, ಬಿರುಗಾಳಿಯೊಂದಿಗೆ ಸುರಿದ ಮಳೆಗೆ ನಿಂತಿದ್ದ ಆಟೋ ಮೇಲೆ ಮರ ಉರುಳಿ ಬಿದ್ದ ಘಟನೆ ನಗರದ ತ್ರಿಪುರಾಂತನಲ್ಲಿ ಜರುಗಿದೆ. ತ್ರಿಪುರಾಂತನ ಮಡಿವಾಳ ವೃತ್ತದಲ್ಲಿಯ ಮುಖ್ಯ ರಸ್ತೆ ಬದಿಯಲ್ಲಿ ನಿಲ್ಲಿಸಿದ ಆಟೋ ಮೇಲೆ ಬೃಹತ್ ಗಾತ್ರದ ಬೇವಿನ ಮರ ಉರುಳಿ ಬಿದ್ದು, ಆಟೋ ಜಖಂಗೊಂಡಿದೆ.
ನಗರದ ಹರಳಯ್ಯ ವೃತ್ತದ ಸಮೀಪದ ಕರ್ನಾಟಕ ಬ್ಯಾಂಕ್ ಮುಂಭಾಗದಲ್ಲಿ ಮುಖ್ಯ ರಸ್ತೆ ಮೇಲೆ ಮರ ಉರುಳಿ ಬಿದ್ದ ಪರಿಣಾಮ ಈ ಮಾರ್ಗದಲ್ಲಿ ಕೆಲ ಕಾಲ ರಸ್ತೆ ಸಂಚಾರ ಬದಲಾಯಿಸಲಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ನಗರಸಭೆ ಅಧಿಕಾರಿಗಳು ತಕ್ಷಣ ಮರ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಇದನ್ನೂ ಓದಿ: Bellary VIMS Hospital : ಲೇಡಿ ಡಾಕ್ಟರ್‌ ಜುಟ್ಟು ಹಿಡಿದು ಎಳೆದಾಡಿ ಹೊಡೆದ; ವಿಮ್ಸ್‌ ಆಸ್ಪತ್ರೆಯಲ್ಲಿ ದಿಢೀರ್‌ ಪ್ರತಿಭಟನೆ

ಜೂನ್‌ 5ಕ್ಕೂ ಹಲವೆಡೆ ಮಳೆ ಅಬ್ಬರ

ಜೂ 5ರಂದು ಉತ್ತರ ಕನ್ನಡ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಜತೆಗೆ ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಚಿಕ್ಕಮಗಳೂರು ಸೇರಿ ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ. ಗಾಳಿಯ ವೇಗವು 30-40 ಕಿಮೀ ಇರಲಿದೆ.

ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುಲಗಿ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ದ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Tumkur Result 2024 : ತುಮಕೂರಿನಲ್ಲಿ ಸೋಮಣ್ಣಗೆ ಗೆಲುವು, ಕಾಂಗ್ರೆಸ್​ಗೆ ಹಿನ್ನಡೆ

Tumkur Result 2024 : 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜಿ.ಎಸ್.ಬಸವರಾಜು ಅವರು ಜೆಡಿಎಸ್​ನ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರನ್ನು 13,339 ಮತಗಳ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.47.86ರಷ್ಟು ಮತಗಳನ್ನು ಪಡೆದಿತ್ತು.

VISTARANEWS.COM


on

Tumkur Result 2024
Koo

ಬೆಂಗಳೂರು: ತುರುಸಿನ ಸ್ಪರ್ಧೆಯನ್ನು ಸೃಷ್ಟಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿ. ಸೋಮಣ್ಣ (7,20,946 ಮತಗಳು) ಅವರು ಗೆಲುವು ಸಾಧಿಸಿದ್ದಾರೆ (Tumkur Result 2024). ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮುದ್ದ ಹನುಮೇಗೌಡ (1,75,594 ಮತಗಳು) ಅವರ ವಿರುದ್ಧ 1,75,594 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  • ವಿ. ಸೋಮಣ್ಣ (ಬಿಜೆಪಿ)- 7,20,946 ಮತಗಳು
  • ಮುದ್ದಹನುಮೇಗೌಡ (ಕಾಂಗ್ರೆಸ್​)- 5,45,352 ಮತಗಳು
  • ಗೆಲುವಿನ ಅಂತರ- 1,75,594 ಮತಗಳು

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜಿ.ಎಸ್.ಬಸವರಾಜು ಅವರು ಜೆಡಿಎಸ್​ನ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರನ್ನು 13,339 ಮತಗಳ ಅಂತರದಿಂದ ಸೋಲಿಸಿದ್ದರು. 2019ರ ಚುನಾವಣೆಯಲ್ಲಿ ಬಿಜೆಪಿ ಶೇ.47.86ರಷ್ಟು ಮತಗಳನ್ನು ಪಡೆದಿತ್ತು.

2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮುದ್ದಹನುಮೇಗೌಡ ಎಸ್.ಪಿ ಅವರು ಬಿಜೆಪಿಯ ಜಿ.ಎಸ್.ಬಸವರಾಜು ಅವರನ್ನು 74,041 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಕಾಂಗ್ರೆಸ್ 39.03% ಮತಗಳನ್ನು ಗಳಿಸಿದೆ.

2009ರ ಸಾರ್ವತ್ರಿಕ ಚುನಾವಣೆಯಲ್ಲಿ ಜಿ.ಎಸ್.ಬಸವರಾಜು ಅವರು ಜೆಡಿಎಸ್​ನ ಮುದ್ದಹನುಮೇಗೌಡ ಅವರನ್ನು 21,445 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶೇ.36.78ರಷ್ಟು ಮತಗಳನ್ನು ಪಡೆದಿತ್ತು.

ದೇವೇಗೌಡರಿಗೆ ಸೋಲು ಕೊಟ್ಟ ಕ್ಷೇತ್ರ

ತುಮಕೂರು ಲೋಕಸಭಾ ಕ್ಷೇತ್ರವು ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿದೆ. ತುಮಕೂರು ನಗರವು ರೇಷ್ಮೆ ಮತ್ತು ಹತ್ತಿ, ಜೊತೆಗೆ ಹಾಲು ಮತ್ತು ಡೈರಿ ಉತ್ಪನ್ನಗಳ ಉತ್ಪಾದನೆಗೆ ಹೆಸರುವಾಸಿ. ತುಮಕೂರು ಲೋಕಸಭಾ ಕ್ಷೇತ್ರವು ಆರಂಭದಲ್ಲಿ ಮೈಸೂರು ರಾಜ್ಯದ ಭಾಗವಾಗಿತ್ತು, ಆದರೆ 1977ರ ನಂತರ ಇದನ್ನು ಕರ್ನಾಟಕಕ್ಕೆ ಸೇರಿಸಲಾಯಿತು. ಒಟ್ಟು 16 ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ 10 ಬಾರಿ ಗೆಲುವು ಸಾಧಿಸಿದ್ದರೆ, ತುಮಕೂರು ಕ್ಷೇತ್ರವನ್ನು ಬಿಜೆಪಿ 4 ಬಾರಿ ವಶಪಡಿಸಿಕೊಂಡಿದೆ.

ತುಮಕೂರು ಲೋಕಸಭಾ ಕ್ಷೇತ್ರವನ್ನು ವಿಶೇಷವಾಗಿ ಕಾಂಗ್ರೆಸ್ ನ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಆದರೆ ಕಳೆದ ಮೂರು ದಶಕಗಳಲ್ಲಿ ಬಿಜೆಪಿ ಈ ಸ್ಥಾನವನ್ನು ನಾಲ್ಕು ಬಾರಿ ಗೆದ್ದಿದೆ. ಅಲ್ಲದೆ, 2019ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಅವರೇ ಸೋತಿದ್ದರು. ಬಿಜೆಪಿಯ ಜಿ. ಎಸ್ ಬಸವರಾಜು ಅವರು ಗೆಲುವು ಕಂಡಿದ್ದರು.

ವಿಧಾನ ಸಭಾ ಕ್ಷೇತ್ರಗಳು ಎಷ್ಟಿವೆ?

ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಅವುಗಳೆಂದರೆ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ಮತ್ತು ಮಧುಗಿರಿ. ಕಾಂಗ್ರೆಸ್ 4, ಬಿಜೆಪಿ 2, ಜೆಡಿಎಸ್ 2 ಸ್ಥಾನಗಳನ್ನು ಹೊಂದಿವೆ.

2011 ರ ಜನಗಣತಿಯ ಪ್ರಕಾರ ತುಮಕೂರು 2678980 ಜನಸಂಖ್ಯೆಯನ್ನು ಹೊಂದಿತ್ತು. ಸರಾಸರಿ ಸಾಕ್ಷರತಾ ಪ್ರಮಾಣವು 75.14% – ಮಹಿಳೆಯರಲ್ಲಿ 67.38% ಮತ್ತು ಪುರುಷರಲ್ಲಿ 82.81% ಆಗಿತ್ತು. ಸುಮಾರು 1207608 ಗ್ರಾಮೀಣ ಮತದಾರರು ಮತದಾರರಲ್ಲಿ ಸುಮಾರು 75% ರಷ್ಟಿದ್ದಾರೆ. ಎಸ್ಸಿ ಮತ್ತು ಎಸ್ಟಿ ಮತದಾರರು ಕ್ರಮವಾಗಿ 18% ಮತ್ತು 7.4% ರಷ್ಟಿದ್ದಾರೆ.

Continue Reading
Advertisement
Karnataka Weather
ಪ್ರಮುಖ ಸುದ್ದಿ20 mins ago

Karnataka Weather: ಇಂದು ಬಾಗಲಕೋಟೆ, ಬೀದರ್, ಕರಾವಳಿ ಜಿಲ್ಲೆಗಳು ಸೇರಿ ವಿವಿಧೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ

Whitening Toothpaste
ಆರೋಗ್ಯ35 mins ago

Whitening Toothpaste: ವೈಟ್ನಿಂಗ್‌ ಪೇಸ್ಟ್‌ಗಳಿಂದ ಹಲ್ಲುಗಳಿಗೆ ಹಾನಿ ಆಗುತ್ತಾ?

Dina Bhavishya
ಪ್ರಮುಖ ಸುದ್ದಿ2 hours ago

Dina Bhavishya: ಈ ರಾಶಿಯವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ!

Odisha
ದೇಶ7 hours ago

Odisha: ಒಡಿಶಾದಲ್ಲಿ ಬಿಜೆಪಿಗೆ ಗೆಲುವು; ಸಿಎಂ ರೇಸ್‌ನಲ್ಲಿದ್ದಾರೆ ಐವರು ನಾಯಕರು, ಯಾರವರು?

Pradeep Eshwar
ಕರ್ನಾಟಕ7 hours ago

ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ ಗೆದ್ದ ಬೆನ್ನಲ್ಲೇ ಪ್ರದೀಪ್‌ ಈಶ್ವರ್‌ ರಾಜೀನಾಮೆ ಪತ್ರ ವೈರಲ್;‌ ಇದು ಸತ್ಯವೇ?

India vs Ireland
ಕ್ರೀಡೆ8 hours ago

India vs Ireland: ರೋಹಿತ್​ ಅರ್ಧಶತಕ; ಐರ್ಲೆಂಡ್​ ವಿರುದ್ಧ ಭಾರತಕ್ಕೆ ಭರ್ಜರಿ​ ಗೆಲುವು

Sunita Williams
ಪ್ರಮುಖ ಸುದ್ದಿ8 hours ago

Sunita Williams: 3ನೇ ಬಾರಿ ಬಾಹ್ಯಾಕಾಶ ಯಾನ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್;‌ Video ಇದೆ

Dr C N Manjunath
ಕರ್ನಾಟಕ9 hours ago

Dr C N Manjunath: ಬೆಂಗಳೂರಿನಲ್ಲೇ ಸುರೇಶ್‌ ವಿರುದ್ಧ ಡಾ. ಮಂಜುನಾಥ್‌ಗೆ 2 ಲಕ್ಷ ಮತಗಳ ಲೀಡ್‌! ಕ್ಷೇತ್ರವಾರು ಪಟ್ಟಿ ಇಲ್ಲಿದೆ

New Cancer Drug
ಆರೋಗ್ಯ9 hours ago

New Cancer Drug: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕ್ರಾಂತಿ; ಹೊಸ ಔಷಧ ಪ್ರಯೋಗ ಶೇ. 100 ಯಶಸ್ವಿ!

World Environment Day celebration in karatagi
ಕೊಪ್ಪಳ9 hours ago

World Environment Day: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ7 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 weeks ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌