World Water Day: ನಮ್ಮ ಜೀವ ನದಿಗಳಿಗೆ ಮರುಜೀವ ನೀಡೋಣ; ಶ್ರೀ ಶ್ರೀ ರವಿಶಂಕರ್ ವಿಶೇಷ ಲೇಖನ - Vistara News

ಪರಿಸರ

World Water Day: ನಮ್ಮ ಜೀವ ನದಿಗಳಿಗೆ ಮರುಜೀವ ನೀಡೋಣ; ಶ್ರೀ ಶ್ರೀ ರವಿಶಂಕರ್ ವಿಶೇಷ ಲೇಖನ

ಭಾರತವನ್ನು ಜಲದಿಂದ (World Water Day) ಸಮೃದ್ಧಿಯಾಗಿಸುವುದು ಮೂಲಭೂತ ಹಂತದಲ್ಲಿನ ಕೆಲಸ. ನೀರಿನ ಲಭ್ಯತೆಯು ಈ ಜಗತ್ತಿನ ಶಾಂತಿ ಹಾಗೂ ಸ್ಥಿರತೆಗಾಗಿ ಅತ್ಯವಶ್ಯಕ. ವಿಶ್ವ ನೀರಿನ ದಿನದ ಹಿನ್ನೆಲೆಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಬರೆದಿರುವ ಸ್ಫೂರ್ತಿದಾಯಕ ಲೇಖನ ಇಲ್ಲಿದೆ.

VISTARANEWS.COM


on

World Water Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Ravi Shankar Guruji
-ಗುರುದೇವ್ ಶ್ರೀ ಶ್ರೀ ರವಿಶಂಕರ್

ಈ ವರ್ಷದ ವಿಶ್ವ ನೀರಿನ ದಿನದ (World Water Day) ಘೋಷಣಾ ವಾಕ್ಯ: “ಶಾಂತಿಗಾಗಿ ನೀರು”. ನೀರು ನಮ್ಮ ಜೀವನದೊಡನೆ ಆಳವಾಗಿ ಸಂಬಂಧಪಟ್ಟಿದೆ. ಸಂಸ್ಕೃತದಲ್ಲಿ ನೀರನ್ನು “ಆಪಃ” ಎಂದು ಕರೆಯುತ್ತಾರೆ. ಪ್ರೀತಿಪಾತ್ರರಾದವರು, ಆಪ್ತರು ಎಂಬ ಅರ್ಥವನ್ನೂ ಈ ಪದ ಹೊಂದಿದೆ. ಎಲ್ಲಾ ಪ್ರಾಚೀನ ನಾಗರಿಕತೆಗಳು ನದಿಗಳ ದಡದಲ್ಲಿ – ಭಾರತದ ಗಂಗಾ ಅಥವಾ ಯಮುನ ದಡದಲ್ಲಿ, ಈಜಿಪ್ಟ್‌ನ ನೈಲ್ ನದಿಯ ದಡದಲ್ಲಿ, ಅಮೆರಿಕದ ಅಮೆಜಾನ್ ನದಿಯ ದಡದಲ್ಲಿ ಸಮೃದ್ಧವಾಗಿದ್ದವು. ಭಾರತದ ನಾಗರಿಕತೆಯು ನದಿಗಳೊಡನೆ ಆಳವಾದ ಸಾಂಸ್ಕೃತಿಕ ಬಂಧವನ್ನು ಹೊಂದಿದೆ. ಭಗವಾನ್ ಶ್ರೀ ರಾಮನು ತನ್ನ ಜೀವನವನ್ನು ಸರಯು ನದಿಯ ದಡದಲ್ಲಿ ಕಳೆದ. ಗಂಗೆಯು ಭಗವಾನ್ ಶಿವನ ಜಟೆಯಿಂದ ಹೊರಹೊಮ್ಮಿದ್ದಾಳೆ ಎಂಬಂತೆ ಚಿತ್ರೀಕರಿಸಲಾಗಿದೆ ಮತ್ತು ಅನೇಕ ಸಾವಿರ ವರ್ಷಗಳಿಂದ ಯೋಗಿಗಳು ಗಂಗಾ ನದಿಯ ತೀರದಲ್ಲಿ ಧ್ಯಾನ ಮಾಡುತಲಿದ್ದಾರೆ. ಗಂಗೆಯು ಜ್ಞಾನದ ಸೂಚಕವಾದರೆ, ಯಮುನೆಯು ಭಕ್ತಿಯ ಸೂಚಕ. ಗೋಪಿಯರಿಗೆ ಭಗವಾನ್ ಕೃಷ್ಣನ ಮೇಲಿನ ಭಕ್ತಿ ಮತ್ತು ಪ್ರೇಮವು ಅರಳಿದ್ದು ಯಮುನ ನದಿಯ ದಡದಲ್ಲಿ. ನಮ್ಮ ನದಿಗಳಿಗೆ ಮರುಜೀವ ನೀಡಲು ನಮ್ಮಿಂದ ಏನೆಲ್ಲಾ ಸಾಧ್ಯವೋ, ಅದನ್ನೆಲ್ಲಾ ಮಾಡಬೇಕು. ಇಲ್ಲಿ ಧರ್ಮವು ಬಲು ಮುಖ್ಯ ಪಾತ್ರವನ್ನು ವಹಿಸಬಲ್ಲದು. ಜನರು ಧಾರ್ಮಿಕವಾಗಿ ನಡೆದುಕೊಂಡು, ಪರಿಸರದ ಬಗ್ಗೆ ಕಾಳಜಿಯನ್ನು ವಹಿಸಿಕೊಳ್ಳುವಂತೆ- ನದಿಗಳನ್ನು, ಪರ್ವತಗಳನ್ನು, ಕಾಡುಗಳನ್ನು ಮತ್ತು ಇತರ ಜಲದ ಸಂಪನ್ಮೂಲಗಳನ್ನು ಸಂರಕ್ಷಿಸುವಂತೆ ಧರ್ಮವು ಪ್ರೇರೇಪಣೆಯನ್ನು ನೀಡಬಲ್ಲದು. ಅತೀ ಉತ್ತಮವಾದ ನಿಯಮಗಳನ್ನು ನಾವು ಹೊಂದಬಹುದಾದರೂ, ಆ ನಿಯಮಗಳನ್ನು ಜಾರಿಗೆ ತರಲು, ಮೂಲಭೂತ ಹಂತದ ಜನರಲ್ಲಿ. ಇದರ ಬಗ್ಗೆ ಹೆಚ್ಚಿನ ಅರಿವು ಇರಬೇಕು. ಧಾರ್ಮಿಕ ಸಂಸ್ಥೆಗಳು ಇಲ್ಲಿ ಬಲು ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಲ್ಲವು.

Blue Earth world with dripping water on two hand at wait on abstract black background.

ಜಲ ಸಮೃದ್ಧಿಯ ಗುರಿ

ಭಾರತವನ್ನು ಜಲದಿಂದ ಸಮೃದ್ಧಿಯಾಗಿಸುವುದು ಮೂಲಭೂತ ಹಂತದಲ್ಲಿನ ಕೆಲಸ. ನೀರಿನ ಲಭ್ಯತೆಯು ಈ ಜಗತ್ತಿನ ಶಾಂತಿ ಹಾಗೂ ಸ್ಥಿರತೆಗಾಗಿ ಅತ್ಯವಶ್ಯಕ. ಭಾರತಲ್ಲಿ ನಾವು ಈ ನಿಟ್ಟಿನಲ್ಲೇ ಕೆಲಸ ಮಾಡಿದ್ದೇವೆ. ಮೂಲಭೂತ ಹಂತದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸುಮಾರು 70 ನದಿಗಳ ಪುನಶ್ಚೇತನ ಕಾರ್ಯದಲ್ಲಿ ತೊಡಗಿದೆವು. ಈ ನದಿಗಳು ಬಹುತೇಕ ಮಟ್ಟಿಗೆ ಕಂದಾಯ ಇಲಾಖೆಯ ದಾಖಲೆಗಳಲ್ಲಿ ಮಾತ್ರ ಇದ್ದವು. ಒಣಗಿದ ನದಿಪಾತ್ರಗಳ ಶೋಷಣೆ ಮತ್ತು ಅತಿಕ್ರಮಣವು ಸರ್ವೇಸಾಮಾನ್ಯವಾಗಿತ್ತು. ವಿಪರೀತ ನೀರು ಪ್ರವಾಹದ ರೂಪದಲ್ಲಿ ಕೊಚ್ಚಿಹೋಗುತ್ತಿತ್ತು ಅಥವಾ ಅನೇಕ ತಿಂಗಳ ಬರ ಇರುತ್ತಿತ್ತು. ರೈತರಿಗೆ ಬೆಳೆಗಳನ್ನು ಬೆಳೆಯಲಾಗದೆ ಅಪಾರ ನಷ್ಟವನ್ನು ಅನುಭವಿಸುತ್ತಿದ್ದರು. ದಿನೇದಿನೆ ತಮ್ಮ ಪ್ರಾಣಗಳನ್ನು ತೆಗೆದುಕೊಳ್ಳುತ್ತಿದ್ದ ರೈತರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿತ್ತು. ಬಾಹ್ಯದಲ್ಲಿ ಬದಲಾವಣೆಗಳನ್ನು ಕಾಣುವ ಮೊದಲು, ಆ ಬದಲಾವಣೆಯು ನಮ್ಮ ಆಂತರ್ಯದಿಂದ ಬರಬೇಕು. ಹೃದಯವು ತೆರೆದಿದ್ದಾಗ ಸೇವೆ ಮಾಡದ ಹೊರತು ಬೇರೆ ಯಾವ ಆಯ್ಕೆಯೂ ಇರುವುದಿಲ್ಲ. ಈ ರೀತಿಯಾಗಿ ನಮ್ಮ ಸ್ವಯಂಸೇವಕರ ಜಾಲವು ಅನೇಕ ವರ್ಷಗಳಿಂದ ಬೆಳೆಯುತ್ತಾ ಬಂದಿದೆ. ತಮ್ಮ ಆಂತರ್ಯದಲ್ಲಿ ಅವರು ಅನುಭವಿಸಿದ ಸಂತೋಷದಿಂದ ಸ್ಫೂರ್ತಿ ಪಡೆದ ಅವರೆಲ್ಲರೂ, ಇತರರಲ್ಲೂ ಅದೇ ಸಂತೋಷವನ್ನು ತರಲು ನಿರ್ಧರಿಸಿದರು. ಮೂಲಭೂತ ಹಂತದ ಗ್ರಾಮಸ್ಥರ ಬಳಿಗೆ ತಲುಪಿ, ಅವರಿಗೆಲ್ಲರಿಗೂ ಸ್ಫೂರ್ತಿ ನೀಡಿ, ಅವರಿಗೆ ಧ್ಯಾನ, ಉಸಿರಾಟ, ಯೋಗ ಮತ್ತಿನ್ನಿತರ ಅಭ್ಯಾಸಗಳನ್ನು ಅವರಿಗೆ ಕಲಿಸಿ, ಅವರ ಆಂತರ್ಯದಿಂದ ಅವರು ಸಂತೋಷವಾಗಿ, ಬಲಿಷ್ಠರಾಗಿರುವಂತೆ ಮಾಡಿದರು. ಅವರೊಡನೆ ಕೆಲಸ ಮಾಡಿ ನೂರಾರು ಪುನರ್ಜಲೀಕರಣ ಬಾವಿಗಳನ್ನು ನಿರ್ಮಿಸಿದರು. ಇದರಿಂದ ಬರುವ ಮಳೆನೀರು ಭೂಮಿಯೊಳಗೆ, ಆ ಬಾವಿಗಳ ಮೂಲಕ ಹೊಕ್ಕುವಂತಾಯಿತು. ಕಾಡುಗಳ ಪುನಸ್ಥಾಪನಾ ಕಾರ್ಯವನ್ನು ಆರಂಭಿಸಿದೆವು. ಭೂಮಿಯಿಂದ ತೀವ್ರವಾಗಿ ನೀರನ್ನು ಹೀರಿಕೊಳ್ಳುವಂತಹ ಮರಗಳಾದ ಅಕೇಷಿಯ ಮರಗಳ ಬದಲಿಗೆ ಸ್ಥಳೀಯ ವೃಕ್ಷಗಳಾದ ಮಾವು, ಆಲದ ಮರ, ಹಾಗೂ ಇತರ ವೃಕ್ಷಗಳನ್ನು ನದಿ ಪಾತ್ರಗಳಲ್ಲಿ ನೆಡಲು ಆರಂಭಿಸಿದೆವು.
ಭೂ ಸಮೀಕ್ಷೆ ನಡೆಸಿದ ನಂತರ, ಪುನರ್ಜಲೀಕರಣ ಬಾವಿಗಳನ್ನು ನಿರ್ಮಿಸಿದ ನಂತರ, ಸರಿಯಾದ ಜಾತಿಯ ಮರಗಳನ್ನು ನೆಟ್ಟಿದ್ದರಿಂದ, ಅನೇಕ ಸಾವಿರ ನೀರಿನ ಕೊಳವೆಗಳು ಮರುಜೀವ ಪಡೆದುಕೊಂಡದ್ದು ಪವಾಡಸದೃಶವಾಗಿತ್ತು. ಇಂದು 70ಕ್ಕೂ ಹೆಚ್ಚು ನದಿಗಳು, ಐದು ರಾಜ್ಯಗಳಲ್ಲಿ ವರ್ಷವಿಡೀ ಹರಿಯುತ್ತವೆ. ಹಕ್ಕಿಗಳು ಮತ್ತೆ ಬರಲಾರಂಭಿಸಿವೆ, ಮೋಡಗಳೂ ಸಹ.

Water pouring in woman's hands. World Water Day concept.

ವಿದರ್ಭ ರೈತರಿಂದ ಧನ್ಯವಾದ

ಕಳೆದ ಮೇ ತಿಂಗಳಲ್ಲಿ ವಿದರ್ಭ ಪ್ರದೇಶದ ಸುಮಾರು ಸಾವಿರ ರೈತರು ನಮ್ಮ ಬೆಂಗಳೂರಿನ ಆಶ್ರಮಕ್ಕೆ ವಿಮಾನದಲ್ಲಿ ಬಂದು, ನಮ್ಮ ಸ್ವಯಂಸೇವಕರು ತಂದ ಪರಿವರ್ತನೆಗೆ ಧನ್ಯವಾದಗಳನ್ನು ಅರ್ಪಿಸಿದರು. ವಿದರ್ಭ ಪ್ರದೇಶದಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆಗಳು ನಡೆಯುತ್ತಿತ್ತು. ಹಿಂದಿಗಿಂತಲೂ ಈಗ ಅವರೆಲ್ಲರೂ ನಾಲ್ಕು ಪಟ್ಟು ಹೆಚ್ಚು ಆದಾಯವನ್ನು ಗಳಿಸುತ್ತಿದ್ದಾರೆ. ಎರಡು ವರ್ಷಗಳ ಅವಧಿಯಲ್ಲಿ 19,500 ಗ್ರಾಮಗಳು ಇದರ ಲಾಭವನ್ನು ಪಡೆದುಕೊಂಡಿವೆ.
ಒಬ್ಬರು ಒತ್ತಡದಿಂದ ಮುಕ್ತವಾಗಿ, ಸ್ಪಷ್ಟವಾದಾಗ, ಅವರು ಸೂಕ್ಷ್ಮತೆಯನ್ನುಳ್ಳ ವ್ಯಕ್ತಿಗಳಾಗುತ್ತಾರೆ, ಅಕ್ಕರೆಯನ್ನು, ಆದರವನ್ನು, ಬದ್ಧತೆಯನ್ನು ತೋರುತ್ತಾರೆ. ಜನರ ಮಾನಸಿಕ ಆರೋಗ್ಯ ಬಗ್ಗೆ ಗಮನವನ್ನು ನೀಡಿ, ಅವರಿಗೆ ಸ್ಫೂರ್ತಿ ನೀಡಿ, ಸೇವೆ ಮಾಡಲು ಧಾರ್ಮಿಕ ಸಂಸ್ಥೆಗಳು ಪ್ರೇರೇಪಿಸಿದರೆ, ನಮ್ಮ ನದಿಗಳಿಗೆ ಮತ್ತೆ ಮರುಜೀವ ತರಬಹುದು. ಇದರಿಂದ ಸಹಜವಾಗಿಯೇ ಸಮೃದ್ಧಿ, ಸ್ಥಿರತೆ ಮತ್ತು ಶಾಂತಿಯು ಎಲ್ಲೆಡೆಯೂ ತುಂಬಿ ತುಳುಕುತ್ತಿರುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Climate Plan: ರಾಜ್ಯ ಸರ್ಕಾರದ ಹವಾಮಾನ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಒಪ್ಪಿಗೆ; ಏನಿದು ಯೋಜನೆ?

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 (Climate Plan) ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021 ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

VISTARANEWS.COM


on

By

Climate Plan
Koo

ಬೆಂಗಳೂರು: ಕರ್ನಾಟಕ (karnataka) ಸರ್ಕಾರ (government) 2021ರಲ್ಲಿ ಸಿದ್ಧಪಡಿಸಲಾದ ಹವಾಮಾನ ಕ್ರಿಯಾ ಯೋಜನೆ (Climate Plan) ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿದೆ. ಈ ಬಾರಿ ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲ (worst droughts) ಎದುರಾಗಿದೆ. ಆದರೆ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ನಿರೀಕ್ಷೆ ಇದೆ. ಈ ನಡುವೆ ಇದೀಗ ಹವಾಮಾನ ಕ್ರಿಯಾ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಹವಾಮಾನ ಬದಲಾವಣೆ ಕುರಿತ ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ – ಆವೃತ್ತಿ 2 ಅನ್ನು ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MOEF & CC) ಏಪ್ರಿಲ್ 2021ರಲ್ಲಿ ಕಳುಹಿಸಲಾಗಿತ್ತು. ಮೂರು ವರ್ಷಗಳ ಅನಂತರ ಅದನ್ನು ಕಾರ್ಯಗತಗೊಳಿಸಲು ರಾಜ್ಯಕ್ಕೆ ಅನುಮೋದನೆ ನೀಡಲಾಗಿದೆ.

42 ವಿವಿಧ ಇಲಾಖೆಗಳೊಂದಿಗೆ ಹಲವು ಬಾರಿ ಸಭೆ ನಡೆಸಿದ ಅಭಿವೃದ್ಧಿ ಆಯುಕ್ತರು, ಜೂನ್‌ನಲ್ಲಿ ಮಾದರಿ ನೀತಿ ಸಂಹಿತೆ ಹಿಂಪಡೆದ ಅನಂತರ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದರೊಂದಿಗೆ ಹವಾಮಾನ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಲಿದೆ ಎಂದು ತಿಳಿಸಿದ್ದರು. ಹವಾಮಾನ ಕ್ರಿಯಾ ಯೋಜನೆ ಕಾರ್ಯಕ್ರಮಕ್ಕೆ ನಿರ್ದಿಷ್ಟ ಯೋಜನೆಗಳು, ಕಾರ್ಯಕ್ಷಮತೆ ಸೂಚಕಗಳು ಮತ್ತು ಗುರಿಗಳನ್ನು ಸಿದ್ಧಪಡಿಸಲು ನಾವು ಎಲ್ಲಾ ಇಲಾಖೆಗಳಿಗೆ ತಿಳಿಸಿದ್ದೇವೆ. ಮಾದರಿ ನೀತಿ ಸಂಹಿತೆ ಹಿಂತೆಗೆದುಕೊಂಡ ತಕ್ಷಣ ನಾವು ಸಚಿವ ಸಂಪುಟದ ಮುಂದೆ ಸಲ್ಲಿಕೆ ಮಾಡಲು ಯೋಜಿಸಿದ್ದೇವೆ ಎಂದು ಅಭಿವೃದ್ಧಿ ಆಯುಕ್ತ ಡಾ. ಶಾಲಿನಿ ರಜನೀಶ್ ಹೇಳಿದ್ದಾರೆ.

ಶೀಘ್ರ ಜಾರಿಯಾಗಬೇಕು

ಹವಾಮಾನ ವೈಪರೀತ್ಯದ ಪರಿಣಾಮ ರಾಜ್ಯದ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಕ್ರಿಯಾ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎನ್ನುತ್ತಾರೆ ತಜ್ಞರು. ಪರಿಸರ ಇಲಾಖೆಯ ಅಧಿಕಾರಿಯ ಪ್ರಕಾರ, ಕ್ರಿಯಾ ಯೋಜನೆಯಲ್ಲಿ ಸೂಚಿಸಲಾದ ಕ್ರಮಗಳನ್ನು ಸಂಯೋಜಿಸಲು ಮತ್ತು ತಮ್ಮ ಗುರಿಗಳನ್ನು ಸಲ್ಲಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಕಾರ್ಯನಿರ್ವಹಣೆಯೊಂದಿಗೆ ಬೇಸ್‌ಲೈನ್‌ನಂತೆ ಕಾರ್ಯನಿರ್ವಹಿಸುವ ಪಟ್ಟಿಯನ್ನು ಸಿದ್ಧಪಡಿಸಬೇಕು. ಉದಾಹರಣೆಗೆ, ಅರಣ್ಯ ಇಲಾಖೆಯು ತಾನು ಯೋಜಿಸಿರುವ ಅರಣ್ಯೀಕರಣದ ಪ್ರಮಾಣ ಮತ್ತು ಐದು ವರ್ಷಗಳಲ್ಲಿ ಗುರಿಯನ್ನು ಸಲ್ಲಿಸಬೇಕು ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಏನೆಲ್ಲಾ ಒಳಗೊಂಡಿರುತ್ತದೆ?

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಸಿದ್ಧಪಡಿಸಿದ ಕ್ರಿಯಾ ಯೋಜನೆಯು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಹಲವಾರು ಮಧ್ಯಸ್ಥಿಕೆಗಳು ಮತ್ತು ಮೌಲ್ಯಮಾಪನ ತಂತ್ರಗಳನ್ನು ಸೂಚಿಸುತ್ತದೆ. ಕೃಷಿ, ತೋಟಗಾರಿಕೆ, ಅರಣ್ಯ, ಗ್ರಾಮೀಣಾಭಿವೃದ್ಧಿ ಮತ್ತು 10 ಇತರ ಕ್ಷೇತ್ರಗಳಲ್ಲಿ ಕ್ರಮಗಳನ್ನು ಜಾರಿಗೆ ತರಲು 2025 ಮತ್ತು 2030 ರ ನಡುವೆ ರಾಜ್ಯಕ್ಕೆ 52,827 ಕೋಟಿ ರೂಪಾಯಿ ಅಗತ್ಯವಿದೆ ಎಂದು ಯೋಜನೆ ಸೂಚಿಸುತ್ತದೆ.

ಹಣಕಾಸು ಅಂದಾಜು ಹೆಚ್ಚಳ ಸಾಧ್ಯತೆ

ಅರಣ್ಯೀಕರಣದಿಂದ ನವೀಕರಿಸಬಹುದಾದ ಶಕ್ತಿಯ ಬಳಕೆಯವರೆಗೆ, ಯೋಜನೆಯು ಪ್ರತಿಯೊಂದು ಇಲಾಖೆಗೆ ಕ್ರಮಗಳನ್ನು ಸೂಚಿಸುತ್ತದೆ.

ಹಣಕಾಸಿನ ಅಂದಾಜುಗಳನ್ನು 2021ರಲ್ಲಿ ಸಿದ್ಧಪಡಿಸಲಾಗಿದೆ ಮತ್ತು ಈಗ ಹೆಚ್ಚಾಗಿರಬಹುದು. ಕ್ರಿಯಾ ಯೋಜನೆಯು ಹಣವನ್ನು ಸಂಗ್ರಹಿಸಲು ಹಲವಾರು ಹಣಕಾಸು ವಿಧಾನಗಳನ್ನು ರೂಪಿಸುತ್ತದೆ. ನಾವು ಇಲಾಖೆ-ನಿರ್ದಿಷ್ಟ ಯೋಜನೆಗಳನ್ನು ಹೊಂದಬಹುದು ಎಂದು ಕ್ರಿಯಾ ಯೋಜನೆ ತಯಾರಿಕೆಯ ಭಾಗವಾಗಿದ್ದ ಪ್ರೊ. ಕೃಷ್ಣ ರಾಜ್ ಹೇಳಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.


ಖಾಸಗಿ ಹೂಡಿಕೆಗಳನ್ನು ಆಕರ್ಷಿಸುವುದರಿಂದ ಹಿಡಿದು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಗಳ ಉತ್ತಮ ಬಳಕೆಗೆ, ಯೋಜನೆಯು ವಿವಿಧ ಹಣಕಾಸು ವಿಧಾನಗಳನ್ನು ವಿವರಿಸುತ್ತದೆ.ಬರ ಮತ್ತು ಪ್ರವಾಹಗಳ ಆವರ್ತನ ಹೆಚ್ಚಾಗಿದೆ. ತಾಪಮಾನ ಮತ್ತು ಮಳೆಯ ಮಾದರಿಗಳು ಅನಿರೀಕ್ಷಿತವಾಗಿವೆ. ಇವುಗಳು ಅನೇಕ ಕ್ಷೇತ್ರಗಳ ಮೇಲೆ, ವಿಶೇಷವಾಗಿ ಕೃಷಿಯ ಮೇಲೆ ನೇರ ಪರಿಣಾಮ ಬೀರುತ್ತವೆ. ಕೃಷಿಯ ಮೇಲೆ ಪರಿಣಾಮ ಬೀರಿದರೆ, ಅದು ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಕ್ರಮವನ್ನು ಕಾರ್ಯಗತಗೊಳಿಸುವುದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದ್ದಾರೆ. ಇತ್ತೀಚಿನ ಬರ ಪರಿಸ್ಥಿತಿ ಮತ್ತು ನೀರಿನ ಕೊರತೆಯಿಂದಾಗಿ ಅಧಿಕಾರಿಗಳು ಮತ್ತು ನಾಗರಿಕರಲ್ಲಿ ಜಾಗೃತಿ ಹೆಚ್ಚಾಗಿದೆ ಮತ್ತು ಆದ್ದರಿಂದ ಈ ಕ್ರಮಕ್ಕೆ ಇದು ಸರಿಯಾದ ಸಮಯ ಎಂದು ಪರಿಸರ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Politics: ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಪತನ? ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಮಹತ್ವದ ಸುಳಿವು!

ಏನು ಕ್ರಮ ?

ಕೃಷಿಗೆ ಶುಷ್ಕ- ಋತುವಿಗೆ ಸಂಬಂಧಿಸಿದ ವಿವಿಧ ಬೆಳೆ ಯೋಜನೆ, ನಿಖರವಾದ ನೀರಾವರಿ ತಂತ್ರಜ್ಞಾನ ಅಳವಡಿಕೆ. ಅರಣ್ಯಕ್ಕೆ ಹವಾಮಾನಕ್ಕೆ ಪೂರಕವಾದ ಅರಣ್ಯೀಕರಣ ಕಾರ್ಯಕ್ರಮಗಳು, ಜಾನುವಾರುಗಳ ಸಮಗ್ರ ರೋಗಗಾಲ ಮೇಲೆ ಕಣ್ಗಾವಲು ಮತ್ತು ತಕ್ಷಣ ಪ್ರತಿಕ್ರಿಯೆ ನೀಡಲು ಕ್ರಮ. ಅಂತರ್ಜಲ ಹೆಚ್ಚಳಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು. ಶಕ್ತಿ ಮೂಲಗಳಲ್ಲಿ ನವೀಕರಿಸಬಹುದಾದ ವಸ್ತುಗಳ ಮೇಲೆ ಹೆಚ್ಚಿನ ಗಮನ ಹರಿಸುವುದು ಮೊದಲಾದವುಗಳನ್ನು ಹವಾಮಾನ ಕ್ರಿಯಾ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.

Continue Reading

ಪ್ರವಾಸ

Kanyakumari Tour: ತುಂಬಾ ದುಬಾರಿ ಏನಿಲ್ಲ, ನೀವೂ ಮಾಡಬಹುದು ಕನ್ಯಾಕುಮಾರಿ ಪ್ರವಾಸ

ಪ್ರವಾಸದ ಯೋಜನೆ ಕೆಲವೊಮ್ಮೆ ಜೇಬಿಗೆ ಕತ್ತರಿ ಹಾಕುತ್ತದೆ ಎನ್ನುವ ಭಯವಿರುತ್ತದೆ. ಆದರೆ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಜನೆ ಮಾಡಿದರೆ ಇಲ್ಲಿ ಜೇಬಿಗೆ ಭಾರವಾಗದ ಹಲವು ತಾಣಗಳಿವೆ. ಆದರೆ ಸ್ವಲ್ಪ ಬುದ್ದಿವಂತಿಕೆ ತೋರಬೇಕು ಅಷ್ಟೇ. ಕನ್ಯಾಕುಮಾರಿಯ ಪ್ರಮುಖ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Kanyakumari Tour
Koo

ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಪ್ರವಾಸ (Kanyakumari Tour) ಹೊರಡುವ ಯೋಚನೆಯಲ್ಲಿದ್ದರೆ ಇಲ್ಲಿನ ಕೆಲವೊಂದು ಸಂಗತಿಗಳನ್ನು ಮಿಸ್ ಮಾಡಿಕೊಳ್ಳದಿರಿ. ಅತ್ಯದ್ಭುತ ನೈಸರ್ಗಿಕ ಸೌಂದರ್ಯ ಮತ್ತು ಆಧ್ಯಾತ್ಮಿಕ ಮಹತ್ವ ಎರಡಕ್ಕೂ ಹೆಸರುವಾಸಿಯಾಗಿರುವ ಕನ್ಯಾಕುಮಾರಿಗೆ ಜೀವನದಲ್ಲೊಮ್ಮೆಯಾದರೂ ಭೇಟಿ ನೀಡಲೇಬೇಕು.


ಕನ್ಯಾಕುಮಾರಿ ನಗರವು ಐಷಾರಾಮಿ ಹಾಟ್‌ಸ್ಪಾಟ್ ಎಂಬ ಖ್ಯಾತಿಯನ್ನು ಪಡೆದಿದ್ದರೂ ಇಲ್ಲಿ ನಿಮ್ಮ ಬಜೆಟ್ ಮೀರದ ಹಾಗೆ ಪ್ರವಾಸ ಮಾಡಲು ಹಲವು ಆಯ್ಕೆಗಳನ್ನೂ ನೀಡುತ್ತದೆ. ಕೆಲವು ಯೋಜನೆ ಮತ್ತು ಸ್ಥಳೀಯರ ಸಲಹೆ ಪಡೆದರೆ ಬಜೆಟ್ ಮೀರದ ಹಾಗೆ ಪ್ರವಾಸವನ್ನೂ ಪೂರ್ಣಗೊಳಿಸಬಹುದು. ಜೀವನದಲ್ಲಿ ಅತ್ಯಂತ ಸುಂದರ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದು.

ಸೂರ್ಯೋದಯ – ಸೂರ್ಯಾಸ್ತ

ಕನ್ಯಾಕುಮಾರಿಗೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಇಲ್ಲಿನ ಸೂರ್ಯೋದಯ, ಸೂರ್ಯಾಸ್ತವನ್ನು ವೀಕ್ಷಿಸುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಅರಬ್ಬಿ ಸಮುದ್ರ (Arabian Sea), ಬಂಗಾಳ ಕೊಲ್ಲಿ (Bay of Bengal) ಮತ್ತು ಹಿಂದೂ ಮಹಾಸಾಗರದ (Indian Ocean) ಭೇಟಿಯ ಸ್ಥಳದಲ್ಲಿ ಅತ್ಯಂತ ಸುಂದರವಾದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಕಣ್ತುಂಬಿ ಕೊಳ್ಳಬಹದು. ಇದಕ್ಕಾಗಿ ಯಾವುದೇ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ; ತೀರದ ಪಕ್ಕದಲ್ಲಿ ಕುಳಿತುಕೊಂಡು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಬಹುದು.

ಐಕಾನಿಕ್ ಹೆಗ್ಗುರುತು

ಕನ್ಯಾಕುಮಾರಿಯು ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರದರ್ಶಿಸುವ ಅನೇಕ ಪ್ರಸಿದ್ಧ ತಾಣಗಳನ್ನು ಹೊಂದಿದೆ. ಹೆಚ್ಚಿನ ಸ್ಥಳಗಳು ಕಡಿಮೆ ಪ್ರವೇಶ ಶುಲ್ಕವನ್ನು ಹೊಂದಿವೆ ಅಥವಾ ಉಚಿತ ಪ್ರವೇಶವನ್ನು ನೀಡುತ್ತವೆ.
ಹಿಂದೂ ಸಂತ ಸ್ವಾಮಿ ವಿವೇಕಾನಂದರ ಗೌರವಾರ್ಥವಾಗಿ ನಿರ್ಮಿಸಲಾದ ವಿವೇಕಾನಂದ ರಾಕ್ ಮೆಮೋರಿಯಲ್‌ ಗೆ ಹೋಗಲು ದೋಣಿಯಲ್ಲಿ ತೆರಳಬೇಕು. ಈಲ್ಲಿ ಅದ್ಭುತವಾದ ನೋಟಗಳಲ್ಲದೆ, ಧ್ಯಾನ ಮಂದಿರಕ್ಕೂ ಭೇಟಿ ನೀಡಬಹುದು.

ಪ್ರಾಚೀನ ತಮಿಳು ಕವಿ ತಿರುವಳ್ಳುವರ್ ಅವರನ್ನು ಗೌರವಿಸುವ ತಿರುವಳ್ಳುವರ್ ಪ್ರತಿಮೆ ಕನ್ಯಾಕುಮಾರಿ ಕರಾವಳಿಯ ಹೊರವಲಯದಲ್ಲಿದೆ. ಈ ಬೃಹತ್ ರಚನೆಯು ನಿಮ್ಮ ಬಜೆಟ್ ಅನ್ನು ಮೀರಿಸುವುದಿಲ್ಲ. ಅಲ್ಲದೇ ಅತ್ಯಂತ ಸುಂದರ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ನೀಡುತ್ತದೆ.


ಪ್ರಕೃತಿಯ ನಡುವೆ ಸುಂದರ ಸಮಯ

ಕನ್ಯಾಕುಮಾರಿಯಲ್ಲಿ ಸುಂದರವಾದ ಪ್ರಕೃತಿಕ ತಾಣಗಳಿಗೆ ಕೊರತೆಯಿಲ್ಲ, ಆದ್ದರಿಂದ ಪ್ರಕೃತಿ ಪ್ರಿಯರು ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು. ಈ ಪ್ರದೇಶವು ಸುಂದರವಾದ ಕಡಲತೀರಗಳಿಂದ ಹಿಡಿದು ಸೊಂಪಾದ ಭೂದೃಶ್ಯಗಳವರೆಗೆ ಎಲ್ಲವನ್ನೂ ನೀಡುತ್ತದೆ.

ಕನ್ಯಾಕುಮಾರಿ ಬೀಚ್ ನಲ್ಲಿ ಸೂರ್ಯನ ಸ್ನಾನ ಅಥವಾ ಸಮುದ್ರದಲ್ಲಿ ಈಜಲು ಕೆಲವು ಗಂಟೆಗಳ ಕಾಲ ಕಳೆಯಬಹುದು. ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ನೋಡುತ್ತಾ ಧ್ಯಾನ ಮಗ್ನರಾಗಿ ಕುಳಿತುಕೊಳ್ಳಬಹುದು. ಕನ್ಯಾಕುಮಾರಿಯಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿರುವ ಸುಚಿಂದ್ರಂ ದೇವಸ್ಥಾನದ ಕೊಳ ಪ್ರಶಾಂತ ವಾತಾವರಣದ ಮಧ್ಯ ಇದೆ. ಪುರಾತನ ದೇವಾಲಯಗಳಿಂದ ಆವೃತವಾಗಿದೆ. ಇದು ಸುಮ್ಮನೆ ನಡಿಗೆ, ಧ್ಯಾನಕ್ಕಾಗಿ ಸೂಕ್ತ ಅವಕಾಶವನ್ನು ಕಲ್ಪಿಸುತ್ತದೆ.

ವೈಭವದ ಸಾಂಸ್ಕೃತಿಕ ಪರಂಪರೆ

ಕನ್ಯಾಕುಮಾರಿ ನಗರವು ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಒಳನೋಟವನ್ನು ನೀಡುತ್ತದೆ. ಕನ್ಯಾಕುಮಾರಿ ಅಮ್ಮನ್ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಯಾತ್ರಿಕರನ್ನು ಆಹ್ವಾನಿಸುತ್ತದೆ. ದೇವಾಲಯದ ಎತ್ತರದ ಗೋಪುರ, ಸಂಕೀರ್ಣವಾದ ಕೆತ್ತಿದ ಕಂಬಗಳು ಈ ಪ್ರದೇಶದಲ್ಲಿ ಅನುಸರಿಸುವ ಸಂಪ್ರದಾಯಗಳು, ಆಚರಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.


ಇದನ್ನೂ ಓದಿ: Porbandar Tour: ಪೋರ್ ಬಂದರಿನಲ್ಲಿ ನೋಡಲೇಬೇಕಾದ ಅದ್ಭುತ ಸ್ಥಳಗಳಿವು

ಸ್ಥಳೀಯ ಖಾದ್ಯ ರುಚಿ

ಬಜೆಟ್ ಸ್ನೇಹಿ ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಕಲಾಕೃತಿಗಳನ್ನು ಇಲ್ಲಿ ಖರೀದಿ ಮಾಡಬಹುದು, ಜೊತೆಗೆ ಸ್ಥಳೀಯ ತಿನಿಸುಗಳು, ಸಮುದ್ರಾಹಾರ ತಿಂಡಿಗಳು, ಬಾಳೆಹಣ್ಣು ಚಿಪ್ಸ್, ತೆಂಗಿನಕಾಯಿ ಸಿಹಿತಿಂಡಿಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತದೆ.

Continue Reading

ಕೃಷಿ

Cocoa Price: ಅಡಿಕೆ ಮರದೆತ್ತರಕ್ಕೆ ಕೋಕೋ ಬೆಳೆಯ ಧಾರಣೆ! 800% ಏರಿಕೆ!

Cocoa Price: ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ ದಾಖಲೆಯ ಮಟ್ಟಕ್ಕೆ ಏರುತ್ತಿದೆ. 2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು. ಇದೀಗ ಬೆಲೆ ಬರೋಬರಿ 320 ರೂ. ಅಂದರೆ 800% ಹೆಚ್ಚಳವಾಗಿದೆ. ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

VISTARANEWS.COM


on

Cocoa Price
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಹತ್ತಾರು ವರ್ಷಗಳಿಂದ ಒಂದೇ ಬೆಲೆಯಲ್ಲಿ ಸ್ಥಿರವಾಗಿದ್ದ ಕೋಕೋ ಬೆಲೆ (Cocoa Prices) ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಪರಣಾಮ, ಅಡಿಕೆ ಬೆಳೆಯ ಜತೆ ಉಪ ಬೆಳೆಯಾಗಿ ಬೆಳೆಯುತ್ತಿದ್ದ ಕೋಕೋದಿಂದ ಒಂದಿಷ್ಟು ರೈತರಿಗೆ ಅನಿರೀಕ್ಷಿತವಾಗಿ ದೊಡ್ಡ ಬೋನಸ್ ದೊರೆತಂತಾಗಿದೆ.

2022ರ ವರೆಗೆ ಹಸಿ ಕೋಕೋ (ಕೊಕ್ಕೋ) ಧಾರಣೆ 40 ರೂ. ಆಸುಪಾಸಿನಲ್ಲಿತ್ತು. ಅಲ್ಲಿಂದ ಹಿಂದಕ್ಕೆ 10-12 ವರ್ಷಗಳಲ್ಲಿ ಈ ಕೋಕೋ ಬೆಲೆ 30-40 ರೂ.ಯಲ್ಲೇ ಸ್ಥಿರವಾಗಿ ನಿಂತಿತ್ತು. ಎಲ್ಲ ಉಪ ಬೆಳೆಗಳ ದರ ಏರು ಮುಖ ಕಂಡಿದ್ದರೂ, ಕೋಕೋ ಧಾರಣೆ ಮಾತ್ರ 40 ರೂ. ಆಚೆ ಈಚೆ ಸುತ್ತುತ್ತಿತ್ತು.

ಕೊಕೋ ಧಾರಣೆ ತೀರಾ ಕುಸಿತ ಕಂಡಾಗ, ಕೊಕೋ ಕೃಷಿಯ ಬಗ್ಗೆ ಮಲೆನಾಡು ಕರಾವಳಿ ಭಾಗದ ಕೃಷಿಕರು ಕೋಕೋವನ್ನು ನಿರ್ಲಕ್ಷಿಸಿದ್ದರು. ಮೂರ್ನಾಲ್ಕು ವರ್ಷಗಳ ಹಿಂದೆ ʼಎಂದೂ ಧಾರಣೆ ಏರದ ಇದು ಲಾಭದಾಯಕವಲ್ಲದ ಬೆಳೆ’ ಎಂಬ ಹಣೆ ಪಟ್ಟಿಯೂ ಕೋಕೋ ಬೆಳೆಗೆ ಅಂಟಿಕೊಂಡಿತ್ತು. ಬೆಲೆ ಇಲ್ಲದ ಕೋಕೋ ಗಿಡಗಳು ಅಡಿಕೆ ತೋಟದಲ್ಲಿ ಇರುವುದೇ ಒಂದು ಸಮಸ್ಯೆ ಅನ್ನುವಂತಾಗಿತ್ತು!

ಜತೆಗೆ ಕೋಕೋ ಹಣ್ಣುಗಳನ್ನು ತಿನ್ನಲು ದಾಂಗುಡಿ ಇಡುತ್ತಿದ್ದ ಮಂಗ, ಅಳಿಲು, ಕೆಲವು ಪಕ್ಷಿಗಳು ಬರಿ ಕೋಕೋ ಹಣ್ಣುಗಳನ್ನು ಹಾಳು ಮಾಡುವುದಲ್ಲದೆ, ಅಡಿಕೆ ಬೆಳೆಯನ್ನೂ ನಾಶ ಮಾಡುತ್ತಿದ್ದವು. ಬೆಲೆಯೂ ಇಲ್ಲದ, ತೊಂದರೆಯೂ ಜಾಸ್ತಿ ಇದ್ದ ಕೋಕೋ ಮರಗಳನ್ನು ಮಲೆನಾಡು ಕರಾವಳಿಯ ನೂರಾರು ಅಡಿಕೆ ಬೆಳೆಗಾರರು ಕಡಿದು, ಅಡಿಕೆ ಮರಗಳಿಗೆ ಮಲ್ಚಿಂಗ್ ಮಾಡಿ ಕೈ ತೊಳೆದುಕೊಂಡಿದ್ದು ಇತಿಹಾಸ. ಈಗ ಅದೇ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಕೋಕೋ ಬೆಳೆಯ ಧಾರಣೆ ಅಡಿಕೆ ಮರದ ಎತ್ತರಕ್ಕೆ ಏರುತ್ತಿರುವುದು ಕಂಡು ಅನೇಕ ರೈತರು ಸಂಕಟ ಅನುಭವಿಸುವಂತಾಗಿರುವುದೂ ಸತ್ಯ.

ಕಳೆದ ದಶಕದಲ್ಲಿ ಹಸಿ ಕೋಕೋ 40 ರೂ. ಇದ್ದಿದ್ದು, ಇವತ್ತು ಬರೋಬರಿ 320 ರೂ.ಗೆ ತಲುಪಿದೆ. ಅಂದರೆ 800% ಹೆಚ್ಚಳ! ಇನ್ನೂ ಏರಿಕೆ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ.

ಧಾರಣೆ ಏರಿಕೆಗೆ ಕಾರಣ ಏನು?

ಕೋಕೋವನ್ನು ಐಸ್‌ಕ್ರೀಮ್, ಚಾಕೊಲೇಟ್, ಮಿಠಾಯಿ, ಬೇಕಿಂಗ್ ಮತ್ತು ಸೌಂದರ್ಯವರ್ಧಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಈ ಉದ್ಯಮಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ, ಬರ ಮತ್ತು ನೀರಿನ ಕೊರತೆಯಿಂದ ವಿಶ್ವದಾದ್ಯಂತ ಕೋಕೋ ಬೆಳೆ ಗಣನೀಯವಾಗಿ ಇಳಿಮುಖವಾಗಿರುವುದು ಇವತ್ತಿನ ಕೋಕೋ ಧಾರಣೆ ಏರಿಕೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಜಾಗತಿಕ ಪೂರೈಕೆಯ 70%ರಷ್ಟಿರುವ ಆಫ್ರಿಕಾದ ಕೋಕೋ ಉತ್ಪಾದನೆಯು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ ಜಾಗತಿಕ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗದೆ ಬೆಳೆ ನೆಲ ಕಚ್ಚಿರುವುದು ಭಾರತವೂ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಕೋಕೋ ಧಾರಣೆ ಏರಿಕೆ ಆಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಭಾರತದಲ್ಲೂ ಹವಾಮಾನ ವ್ಯತ್ಯಾಸದಿಂದ ಕೋಕೋ ಬೆಳೆ ಇಳಿಮುಖವಾಗಿದೆ.

ಕ್ವಿಂಟಾಲ್ ಡ್ರೈ ಕೋಕೋಗೆ ಈಗ ಲಕ್ಷ ಬೆಲೆ

ಹಸಿ ಕೋಕೋ ದರ 320 ರೂ. ಗಡಿ ದಾಟುತ್ತಿರುವಾಗಲೇ, ಒಣಗಿದ ಡ್ರೈ ಕೋಕೋ ಧಾರಣೆಯೂ ಅದೇ ಪ್ರಮಾಣದಲ್ಲಿ ಏರುತ್ತಿದ್ದು ಗರಿಷ್ಠ ಒಣ ಕೋಕೋ ದರ ಈಗ ಕೆ.ಜಿ.ಗೆ 960 ರೂ. ಅನ್ನು ತಲುಪಿದೆ. ದರ ಏರಿಕೆ ಹೀಗೆ ಮುಂದುವರಿದರೆ ಮೂರ್ನಾಲ್ಕು ದಿನಗಳಲ್ಲಿ ಅದು ನಾಲ್ಕಂಕೆಯನ್ನು ಮುಟ್ಟಿ, ಕ್ವಿಂಟಾಲ್ ಡ್ರೈ ಕೋಕೋ ಬೆಲೆ ದಾಖಲೆಯ 1,00,000 ರೂ. ತಲುಪುವ ಸಾಧ್ಯತೆ ಇದೆ.

ಕೋಕೋ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಈಗ ದುಸ್ತರ

ಕೋಕೋ ಧಾರಣೆ ಮಿಂಚಿ‌ ವೇಗದಲ್ಲಿ ಏರುತ್ತಿರುವಾಗ ಫಸಲಿಗೆ ಬರುತ್ತಿರುವ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದೂ ಸಣ್ಣ ರೈತರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಂಗ, ಅಳಿಲು, ಕೆಂಜಳಿಲು, ಕಬ್ಬೆಕ್ಕು, ಪಕ್ಷಿಗಳಿಂದ ಬೆಳೆಯನ್ನು ರಕ್ಷಣೆ ಮಾಡಿಕೊಂಡು ಹಣ್ಣಾದಾಗ ಕಟಾವು ಮಾಡಬೇಕು. ಆದರೆ ಕಟಾವು ಮಾಡುವ ಮೊದಲೇ ಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವುದು ರೈತರಿಗೆ ದೊಡ್ಡ ಸವಾಲಾಗಿದೆ. ಇದಲ್ಲದೆ ಕೋಕೋ ಹಣ್ಣುಗಳನ್ನು ತೋಟದಿಂದಲೇ ಕದಿಯುತ್ತಿರುವ ವರದಿಗಳೂ ಹರಿದಾಡುತ್ತಿವೆ.

ಇದನ್ನೂ ಓದಿ: Areca Price: ಅಡಿಕೆ ದರ ಗಗನಮುಖಿ; ಚುನಾವಣೆ ಬಳಿಕ ಮತ್ತಷ್ಟು ಏರಿಕೆ?

ಒಟ್ಟಿನಲ್ಲಿ ಒಂದು ಕಾಲದಲ್ಲಿ ಐಸ್‌ಕ್ರೀಮ್, ಚಾಕಲೇಟ್‌ಗಳಲ್ಲಿ ಬಳಸುತ್ತಿದ್ದ ವೆನಿಲಾ ಬೆಳೆಯ ದರ ಏರಿಕೆಯಿಂದ ಆಗುತ್ತಿದ್ದ ಪರಿಣಾಮಗಳು ಈಗ ಕೋಕೋಗೆ ರಾಜ ಮರ್ಯಾದೆಯ ದರ ಬರುತ್ತಿದೆ. ಜಾಗತಿಕ ಮಟ್ಟದಲ್ಲಿ ಕೋಕೋ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇರುವ ಕಾರಣ ಸಧ್ಯಕ್ಕಂತು ಅದರ ದರ ಇಳಿಯುವ ಸಾಧ್ಯತೆ ಕಡಿಮೆ ಎಂದು ಚರ್ಚೆ ನೆಡೆಯುತ್ತಿದೆ.

Continue Reading

ಲೈಫ್‌ಸ್ಟೈಲ್

Vastu Tips: ಮನೆ ಹೊರಗಿನ ಉದ್ಯಾನದಲ್ಲಿ ವಾಸ್ತು ಪಾಲಿಸಿ; ಮನೆಯೊಳಗಿನ ನೆಮ್ಮದಿ ವೃದ್ಧಿಸಿ

Vastu Tips: ಮನೆಯ ಹೊರಗಿರುವ ಉದ್ಯಾನವೂ ನಮ್ಮ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯ ಉದ್ಯಾನವನವನ್ನು ವಾಸ್ತು ಶಾಸ್ತ್ರದ ಪ್ರಕಾರ ಯೋಜಿಸುವುದು ಮತ್ತು ವಿನ್ಯಾಸಗೊಳಿಸುವುದು ಉತ್ತಮ. ಇದರಿಂದ ಆರೋಗ್ಯ ಮತ್ತು ಸಮೃದ್ಧಿ ಖಂಡಿತ ಸಿಗುವುದು.

VISTARANEWS.COM


on

By

Vastu Tips
Koo

ಮನೆಯ (home) ಒಳಾಂಗಣ (Indoor), ಹೊರಾಂಗಣದ (outdoor) ಪ್ರತಿಯೊಂದು ವಸ್ತುವೂ ನಮ್ಮ ಮನೆ, ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೇ ಮನೆಯಲ್ಲಿ ವಾಸ್ತು (Vastu Tips) ಪಾಲಿಸಬೇಕು ಎನ್ನುತ್ತಾರೆ ಹಿರಿಯರು. ವಾಸ್ತು ಪಾಲನೆ ಮಾಡುವುದರಿಂದ ಧನಾತ್ಮಕ ಪ್ರಭಾವವನ್ನು (Positive influence) ಮನೆಯ ಸುತ್ತಮುತ್ತ ಹೆಚ್ಚಿಸಿಕೊಳ್ಳಬಹುದು.

ಮನೆಯ ಹೊರಗಿರುವ ಉದ್ಯಾನವೂ ನಮ್ಮ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯ ಉದ್ಯಾನವನವನ್ನು ವಾಸ್ತು ಶಾಸ್ತ್ರದ ಪ್ರಕಾರ ಯೋಜಿಸುವುದು ಮತ್ತು ವಿನ್ಯಾಸಗೊಳಿಸುವುದು ಉತ್ತಮ. ಇದರಿಂದ ಆರೋಗ್ಯ ಮತ್ತು ಸಮೃದ್ಧಿ ಖಂಡಿತ ಸಿಗುವುದು.

ಹೊರಾಂಗಣ ಉದ್ಯಾನವು ನಮ್ಮನ್ನು ಪ್ರಕೃತಿಗೆ ಹತ್ತಿರವಾಗಲು ಅನುವು ಮಾಡಿಕೊಡುತ್ತದೆ. ಸಸ್ಯವರ್ಗದ ಸಮೃದ್ಧಿಯಿಂದ ಪ್ರಭಾವಿತವಾಗಿರುವ ಪ್ರಶಾಂತತೆ ಮತ್ತು ಶಾಂತತೆಯನ್ನು ಆನಂದಿಸಲು ಇದು ಸಹಾಯ ಮಾಡುತ್ತದೆ.

ಹೆಚ್ಚಿನವರು ಮನಸ್ಸಿನ ಉಲ್ಲಾಸಕ್ಕಾಗಿ ಉದ್ಯಾನಗಳನ್ನು ಬೆಳೆಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಉದ್ಯಾನವು ನೈಸರ್ಗಿಕ ಸೌಂದರ್ಯ ಮತ್ತು ಅದರ ಶಕ್ತಿಯುತ ಗುಣಗಳನ್ನು ನಮಗೆ ಒದಗಿಸುತ್ತದೆ. ಹೀಗಾಗಿ ಉದ್ಯಾನ ರಚಿಸುವಾಗ ಉದ್ಯಾನ ವಾಸ್ತು ಪಾಲಿಸಿ.

ಇದನ್ನೂ ಓದಿ: Vastu Tips: ಸುಖ, ಶಾಂತಿ, ಸಮೃದ್ಧಿಗಾಗಿ ಹೀಗಿರಲಿ ಮನೆಯ ಕಿಟಕಿ, ಬಾಗಿಲು

ಉದ್ಯಾನದ ಸ್ಥಳ

ವಾಸ್ತು ಶಾಸ್ತ್ರದ ಪ್ರಕಾರ ಉದ್ಯಾನದ ಪ್ರತಿಯೊಂದು ವಿಭಾಗವು ಪಂಚ ಮಹಾಭೂತದ ಐದು ಅಂಶಗಳಲ್ಲಿ ಒಂದನ್ನು ಹೋಲುತ್ತದೆ. ಮನೆಯ ನೈಋತ್ಯ ಭಾಗವು ಭೂಮಿಯನ್ನು, ಈಶಾನ್ಯವು ನೀರನ್ನು, ಆಗ್ನೇಯವು ಬೆಂಕಿಯನ್ನು, ವಾಯುವ್ಯವು ಗಾಳಿಯನ್ನು ಪ್ರತಿನಿಧಿಸುತ್ತದೆ. ಕೇಂದ್ರವು ಜಾಗವನ್ನು ಪ್ರತಿನಿಧಿಸುತ್ತದೆ. ಆಗ್ನೇಯ ಅಥವಾ ನೈಋತ್ಯದಲ್ಲಿರುವ ಉದ್ಯಾನವು ಉದ್ವಿಗ್ನತೆಯನ್ನು ಉಂಟುಮಾಡುತ್ತದೆ.


ಉದ್ಯಾನವು ಮುಂಭಾಗದಲ್ಲಿ ನೆಲೆಗೊಂಡಿದ್ದರೆ ಬೃಹತ್ ಮರವು ಅದರ ಪ್ರವೇಶವನ್ನು ಎಂದಿಗೂ ನಿರ್ಬಂಧಿಸಬಾರದು. ಉದ್ಯಾನದ ಗೋಡೆಯ ಪಕ್ಕದಲ್ಲಿ ಮರವನ್ನು ನೆಡಬಹುದು. ವಾಸ್ತವವಾಗಿ ವಾಸ್ತು ದೃಷ್ಟಿಕೋನದಿಂದ ಪೀಪಲ್, ಮಾವು, ಬೇವು ಅಥವಾ ಬಾಳೆ ಮರವನ್ನು ನೆಡಲು ಆದ್ಯತೆ ನೀಡಲಾಗುತ್ತದೆ. ಈ ಮರಗಳು ತಮ್ಮ ಸುಗಂಧಕ್ಕೆ ಮಾತ್ರವಲ್ಲ, ಅವುಗಳು ನೀಡುವ ಧನಾತ್ಮಕ ಶಕ್ತಿಗಳಿಗೂ ಹೆಸರುವಾಸಿಯಾಗಿದೆ.

ಗಿಡ, ಮರಗಳು

ಉದ್ಯಾನದ ಪೂರ್ವ ಅಥವಾ ಉತ್ತರ ಭಾಗಗಳಲ್ಲಿ ಸಣ್ಣ ಪೊದೆಗಳನ್ನು ನೆಡಬೇಕು, ಈಶಾನ್ಯ ಭಾಗವನ್ನು ಮುಕ್ತವಾಗಿ ಬಿಡಬೇಕು. ಉದ್ಯಾನದ ಪಶ್ಚಿಮ, ದಕ್ಷಿಣ ಮತ್ತು ನೈಋತ್ಯ ವಿಭಾಗಗಳಲ್ಲಿ ಎತ್ತರದ ಮರಗಳನ್ನು ನೆಡಬೇಕು. ಮುಖ್ಯ ಮನೆ ಮತ್ತು ಮರಗಳ ನಡುವೆ ಗಣನೀಯ ಅಂತರವನ್ನು ನಿರ್ವಹಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮರಗಳ ನೆರಳು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರ ನಡುವೆ ಮನೆಯ ಕಟ್ಟಡದ ಮೇಲೆ ಬೀಳಬಾರದು. ದೊಡ್ಡ ಮರಗಳನ್ನು ಮನೆಗೆ ತುಂಬಾ ಹತ್ತಿರದಲ್ಲಿ ನೆಡಬಾರದು. ಯಾಕೆಂದರೆ ಅವುಗಳ ಬೇರುಗಳು ಮನೆಯ ಅಡಿಪಾಯವನ್ನು ಹಾನಿಗೊಳಿಸುತ್ತವೆ. ಕೀಟ, ಹುಳು, ಜೇನುನೊಣ ಅಥವಾ ಸರ್ಪಗಳನ್ನು ಆಕರ್ಷಿಸುವ ಮರಗಳನ್ನು ಉದ್ಯಾನದಲ್ಲಿ ತಪ್ಪಿಸಬೇಕು. ಇವುಗಳು ಮನೆಗೆ ದುರಾದೃಷ್ಠವನ್ನು ತರುತ್ತದೆ.


ಸೂಕ್ತ ಸಸ್ಯಗಳು

ತುಳಸಿ ಸಸ್ಯವು ಧನಾತ್ಮಕ ಪ್ರಭಾವವನ್ನು ಹೊಂದಿದೆ. ಇದನ್ನು ಮನೆಯ ಉತ್ತರ, ಈಶಾನ್ಯ ಮತ್ತು ಪೂರ್ವ ಭಾಗಗಳಲ್ಲಿ ನೆಡಬೇಕು. ಮುಳ್ಳು ಇರುವ ಗಿಡಗಳನ್ನು ತೋಟದಲ್ಲಿ ನೆಡಬಾರದು. ಕಳ್ಳಿಯವನ್ನು ನೆಡಬಾರದು. ಮುಳ್ಳಿನ ಗಿಡಗಳು ನಕಾರಾತ್ಮಕ ಶಕ್ತಿಯನ್ನು ಪ್ರತಿನಿಧಿಸುತ್ತವೆ.

ಕಾಂಪೌಂಡ್ ಗೋಡೆಯ ಎತ್ತರವನ್ನು ಹೆಚ್ಚಿಸುವುದರಿಂದ ಅದರ ಮೇಲೆ ಹೂವಿನ ಕುಂಡಗಳನ್ನು ಇಡಬಾರದು. ಹೂವಿನ ಕುಂಡಗಳನ್ನು ನೆಲದ ಮೇಲೆ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು.

ಹುಲ್ಲುಹಾಸು

ಉದ್ಯಾನದಲ್ಲಿ ಹುಲ್ಲುಹಾಸು ಪೂರ್ವ ಅಥವಾ ಉತ್ತರಕ್ಕೆ ಎದುರಾಗಿರಬೇಕು. ಅಲ್ಲಿ ಉತ್ತರ-ದಕ್ಷಿಣ ಅಕ್ಷದ ಸ್ವಿಂಗ್ ಅನ್ನು ಇರಿಸಬಹುದು. ಇದು ವಾಸ್ತುಶಾಸ್ತ್ರದ ಪ್ರಕಾರ ಅಡೆತಡೆಯಿಲ್ಲದ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ.

ಜಲಪಾತ

ಪೂರ್ವ ಅಥವಾ ಉತ್ತರದಲ್ಲಿ ಮಿನಿ ಜಲಪಾತವನ್ನು ನಿರ್ಮಿಸಬಹುದು. ಉದ್ಯಾನದ ಈಶಾನ್ಯ ಮೂಲೆಯು ಮಿತಿಯಿಂದ ಹೊರಗಿರಬೇಕು.


ಈಜುಕೊಳ

ಉದ್ಯಾನದಲ್ಲಿ ಸಣ್ಣ ಈಜುಕೊಳವಿದ್ದರೆ, ಅದು ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಕಮಲಗಳಿರುವ ಮಿನಿ ಕೊಳವು ಅದೃಷ್ಟವನ್ನು ತರುತ್ತದೆ. ತಪ್ಪು ದಿಕ್ಕಿನಲ್ಲಿ ಜಲಪಾತವು ಮಾನಸಿಕ ಶಾಂತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಬೆಂಚುಗಳು

ದೊಡ್ಡ ಉದ್ಯಾನಗಳಲ್ಲಿ ಬೆಂಚುಗಳು ಉಪಯುಕ್ತವಾಗಿವೆ ಮತ್ತು ಅವುಗಳ ಮೇಲೆ ಕುಳಿತುಕೊಳ್ಳುವ ಜನರು ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಉತ್ತರ ಅಥವಾ ಪೂರ್ವದಲ್ಲಿ ಬೆಂಚುಗಳನ್ನು ಇರಿಸಬಹುದು.

Continue Reading
Advertisement
Patanjali case
ದೇಶ7 mins ago

Patanjali Case: ಪತಂಜಲಿ ಕೇಸ್‌- ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌; IMA ಅಧ್ಯಕ್ಷನಿಗೆ ಛೀಮಾರಿ

T20 World Cup 2024
ಕ್ರೀಡೆ24 mins ago

T20 World Cup 2024: 20 ತಂಡಗಳ ಪೈಕಿ 19 ತಂಡ ಪ್ರಕಟ; ಪಾಕಿಸ್ತಾನ ಮಾತ್ರ ಬಾಕಿ

Job News
ಉದ್ಯೋಗ1 hour ago

Job News: ಅಟೆನ್ಷನ್‌ ಪ್ಲೀಸ್‌; ಸರ್ಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆಗೆ ಇಂದು, ನಾಳೆ ಕೊನೆಯ ದಿನ

kurkure divorce viral news
ವೈರಲ್ ನ್ಯೂಸ್1 hour ago

Viral News: ಕುರ್ಕುರೆ ಪ್ಯಾಕ್‌ ತರದೇ ಹೋದ ಗಂಡನಿಗೆ ಡೈವೋರ್ಸ್!‌

Supriya Sule
ದೇಶ1 hour ago

Supriya Sule: ಇವಿಎಂ ಇದ್ದ ಸ್ಟ್ರಾಂಗ್‌ ರೂಂ ಸಿಸಿಟಿವಿ ಕ್ಯಾಮೆರಾ ಸ್ವಿಚ್‌ ಆಫ್‌; ಸುಪ್ರಿಯಾ ಸುಳೆ ಗಂಭೀರ ಆರೋಪ, EC ರಿಯಾಕ್ಟ್‌

Road Accident
ಕ್ರೈಂ1 hour ago

Road Accident: ಸ್ಕೂಟರ್‌ಗೆ ಟ್ರಕ್‌, ಲಾರಿಗೆ ಬಸ್‌, ಡಿವೈಡರ್‌ಗೆ ಕಾರು ಡಿಕ್ಕಿ; ಅಪಾಯದಿಂದ ಜಸ್ಟ್‌ ಮಿಸ್‌

HD Revanna released from jail Revanna Go straight to HD Deve Gowda house
ಕ್ರೈಂ2 hours ago

HD Revanna Released: ಜೈಲಿಂದ ಬಿಡುಗಡೆಯಾದ ಎಚ್.ಡಿ. ರೇವಣ್ಣ; ನೇರವಾಗಿ ದೇವೇಗೌಡರ ಮನೆಗೆ ದೌಡು

Viral video
ವೈರಲ್ ನ್ಯೂಸ್2 hours ago

Viral video: ರಿಂಕು ಸಿಂಗ್​ ಜೆರ್ಸಿ ತೊಟ್ಟು ಚೆಂಡು ಕದಿಯಲು ಯತ್ನಿಸಿ ಸಿಕ್ಕಿ ಬಿದ್ದ ಭೂಪ!; ಪೊಲೀಸರಿಂದ ಬಿತ್ತು ಹಿಗ್ಗಾಮುಗ್ಗಾ ಗೂಸಾ

Vaishnavi Gowda
ಕಿರುತೆರೆ2 hours ago

Vaishnavi Gowda: ನಟಿ ವೈಷ್ಣವಿ ಗೌಡಗೆ ನೋಟಿಸ್‌ ಕೊಟ್ಟ ಟ್ರಾಫಿಕ್‌ ಪೊಲೀಸರು; ಸೀತಮ್ಮ ಮಾಡಿದ ತಪ್ಪೇನು?

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 hours ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ3 hours ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು4 hours ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ10 hours ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ20 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ21 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ21 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ22 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ22 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

ಟ್ರೆಂಡಿಂಗ್‌