Sonu Srinivas Gowda: ಪೊಲೀಸ್ ವಿಚಾರಣೆ ವೇಳೆ ಸೋನು ಗೌಡ ತಿಳಿಸಿದ್ದಾಳೆ ಹಲವು ಹೊಸ ಸಂಗತಿ! - Vistara News

ಸಿನಿಮಾ

Sonu Srinivas Gowda: ಪೊಲೀಸ್ ವಿಚಾರಣೆ ವೇಳೆ ಸೋನು ಗೌಡ ತಿಳಿಸಿದ್ದಾಳೆ ಹಲವು ಹೊಸ ಸಂಗತಿ!

Sonu Srinivas Gowda: ದತ್ತು ತೆಗೆದುಕೊಳ್ಳಬೇಕಾದರೆ‌ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ಇದ್ಯಾವ ರೂಲ್ಸ್‌ ಪಾಲಿಸಿದೆ ಸೋನು ಗೌಡ ಸೇವಂತಿ ಎನ್ನುವ ಬಡ ಹುಡುಗಿಯನ್ನು ದತ್ತು ತೆಗೆದುಕೊಂಡರು. ಸೋನು ಗೌಡ ವಿಚಾರಣೆ ವೇಳೆ ಪೊಲೀಸರಿಗೆ ಹಲವು ಸಂಗತಿ ತಿಳಿಸಿದ್ದಾಳೆ.

VISTARANEWS.COM


on

Sonu Srinivas Gowda
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಒಟಿಟಿ 1’ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರು ಸೇವಂತಿ ಎನ್ನುವ ಬಡ ಹುಡುಗಿಯನ್ನು ಸಾಕಲು ಪಡೆದಿರೋದು ಕಾನೂನು ಬಾಹೀರ ಆಗಿದೆ. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ದೂರನ್ನು ಆಧರಿಸಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ. ಇದೀಗ ಸೋನು ಗೌಡ ವಿಚಾರಣೆ ವೇಳೆ ನೀಡಿರುವ ಹೇಳಿಕೆ ಹೀಗಿದೆ:

ವಿಚಾರಣೆ ವೇಳೆ ಸೋನು ಗೌಡ ʻʻನಮ್ಮ ಅಪಾರ್ಟ್‌ಮೆಂಟ್‌ ಬಳಿ ಗಾರೆ ಕೆಲಸ ಮಾಡುತ್ತಿದ್ದ ದಂಪತಿಯ ಮಗಳು ಅವಳು. ಮನೆಗೆ ಬಂದು ಆಟ ಆಡುತ್ತಿತ್ತು. ಊರಿಗೆ ಹೋದಾಗ ಹುಷಾರಿಲ್ಲದಾಗ ಕೂಡ ಕರೆ ಮಾಡಿದ್ದಳು. ಹೀಗಾಗಿ ಆ ಮಗುವನ್ನ ನಾನೇ ಸಾಕಿಕೊಳ್ಳುವುದಾಗಿ ಹೇಳಿ ರಾಯಚೂರಿನಿಂದ ಕರೆ ತಂದೆ. ದತ್ತು ತೆಗೆದುಕೊಳ್ಳಲು ಸಿದ್ಧತೆ ಕೂಡ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲಿ ಬಂದ ಹಣವನ್ನ ಆಕೆಯ ಜೀವನ ರೂಪಿಸಲು ಉಪಯೋಗಿಸಬೇಕೆಂದು ಇದ್ದೆ. ಆದರೆ ದತ್ತು ತೆಗೆದುಕೊಳ್ಳುವ ಪ್ರೋಸೆಸ್ ಇಷ್ಟು ದೊಡ್ಡದು ಎಂದು ಗೊತ್ತಿರಲಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.

ರೂಲ್ಸ್ ಏನು ಹೇಳುತ್ತವೆ?

ದತ್ತು ತೆಗೆದುಕೊಳ್ಳಬೇಕಾದರೆ‌ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ದತ್ತು ತೆಗೆದುಕೊಳ್ಳುವ ತಾಯಿ ಮತ್ತು ಮಗುವಿಗೆ 25 ವರ್ಷಗಳ ಅಂತರವಿರಬೇಕು. ಆದರೆ ಇಲ್ಲಿ ಮಗುವಿಗೆ 8 ವರ್ಷ ಮತ್ತು ಆಕೆಗೆ 26 ವರ್ಷ. ಹೀಗಾಗಿ ಅದು ನಿಯಮ ಉಲ್ಲಂಘನೆ ಮಾಡಿದಂತಾಗತ್ತದೆ. ಇನ್ನು ರೀಲ್ಸ್‌ ಮಾಡುವ ಉದ್ದೇಶದಿಂದ ಸೋನು ಮಗುವನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡಿದ್ದಾಳೆಂಬ ಆರೋಪ ಕೂಡ ಇದೆ. ಮಕ್ಕಳ ಕಲ್ಯಾಣ ಸಮಿತಿ ಈ ಎಲ್ಲ ಆಧಾರದ ಮೇಲೆ ಸೋನು ವಿರುದ್ಧ ದೂರು ದಾಖಲಿಸಿದೆ.

ಇದನ್ನೂ ಓದಿ: Sonu Srinivas Gowda: ದತ್ತು ಪ್ರಕರಣದಲ್ಲಿ ಸೋನು ಗೌಡ ಅರೆಸ್ಟ್‌; ರೂಲ್ಸ್ ಏನು ಹೇಳುತ್ತವೆ?

ಸೇವಂತಿ ಪರಿಚಯವಾಗಿದ್ದು ಹೇಗೆ?

ಕೆಲ ತಿಂಗಳುಗಳಿಂದ ಸೋನು ಗೌಡ (Sonu Srinivas Gowda) ಅವರು ಸೇವಂತಿ ಎನ್ನುವ ಹುಡುಗಿಗೆ ಮನೆಯಲ್ಲಿ ಊಟ ಹಾಕಿಸೋದು, ಮೂಗು ಚುಚ್ಚಿಸಿ ಮೂಗುತಿ ಹಾಕೋದು, ಊಟ ಮಾಡಿಸುವ ವಿಡಿಯೊ ಮಾಡಿ, ಅದನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. “ಮನೆಯ ಸುತ್ತ ಇರುವ ನಾಯಿಗಳಿಗೆ ಬಿಸ್ಕಟ್ ಹಾಕುವಾಗ ನನಗೆ ಸೇವಂತಿ ಎನ್ನುವ 7 ವರ್ಷದ ಮಗುವಿನ ಪರಿಚಯ ಆಯ್ತು ಎಂದು ಸೋನು ಹೇಳಿಕೊಂಡಿದ್ದರು. ಮಾತ್ರವಲ್ಲ ಈ ಮುಂಚೆ ಸೇವಂತಿಯನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದರೆ ಅವರ ತಾಯಿ ಒಪ್ಪಿಲ್ಲ. ಬಳಿಕ ಕಾನೂನ ಪ್ರಕಾರ ಸೇವಂತಿಯನ್ನು ಪಡೆದೆ. ಅದಕ್ಕೆ 3 ತಿಂಗಳುಗಳೇ ತೆಗೆದುಕೊಂಡಿದೆ. ಬಡ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದಿದ್ದೀನಿ ಅಂತ ಅಂದ್ರೆ ಮೆಚ್ಚುಗೆ ಸೂಚಿಸಿ, ಇಲ್ಲ ಅಂದ್ರೆ ಸುಮ್ಮನೆ ಇರಿ. ನೆಗೆಟಿವ್ ಕಮೆಂಟ್ ಮಾಡುವರ ವಿರುದ್ಧ ನಾನು ಸೈಬರ್ ಕ್ರೈಂಗೆ ದೂರು ಕೊಡ್ತೀನಿʼʼ ಎಂದು ಸೋನು ಈ ಹಿಂದೆ ವಿಡಿಯೊ ಮೂಲಕ ಹೇಳಿಕೊಂಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Varun Dhawan: ಹೆಣ್ಣು ಮಗುವಿಗೆ ತಂದೆಯಾದ ಬಾಲಿವುಡ್ ನಟ ವರುಣ್ ಧವನ್

Varun Dhawan: ನಟನ ಅಭಿಮಾನಿಗಳು ದಂಪತಿಗೆ ಶುಭ ಹಾರೈಸಿದರು. ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸಿದ್ದಾಳೆ, ಅಭಿನಂದನೆಗಳು ವರುಣ್ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ವರುಣ್ ತಮ್ಮ ದೀರ್ಘಕಾಲದ ಗೆಳತಿ ನತಾಶಾಳೊಂದಿಗೆ 2021ರ ಜನವರಿ 24 ರಂದು ಮದುವೆಯಾಗಿದ್ದರು.

VISTARANEWS.COM


on

Varun Dhawan Natasha Dalal welcome baby girl
Koo

ಬೆಂಗಳೂರು: ಬಾಲಿವುಡ್ ನಟ ವರುಣ್ ಧವನ್ (Varun Dhawan) ದಂಪತಿಗೆ ಹೆಣ್ಣು ಮಗುವಾಗಿದೆ. ಅಭಿಮಾನಿಗಳಿಗೆ ಸಂತೋಷವಾಗಿದೆ. ಅವರ ಪತ್ನಿ, ಫ್ಯಾಷನ್ ಡಿಸೈನರ್ ನತಾಶಾ ದಲಾಲ್ ಮುಂಬೈನ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವರುಣ್ ಧವನ್ ಹಾಗೂ ಡೇವಿಡ್ ಮುಂಬೈನ ಖಾಸಗಿ ಆಸ್ಪತ್ರೆಗೆ ನಡೆದು ಹೊರಟಿದ್ದರು. ಈ ವೇಳೆ ಅಲ್ಲಿದ್ದ ಪಾಪರಾಜಿಗಳು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ‘ವರುಣ್​ಗೆ ಹೆಣ್ಣು ಮಗು ಜನಿಸಿದ್ದು ನಿಜವೇ’ ಎಂದು ಕೇಳಲಾಗಿದೆ. ಇದಕ್ಕೆ ಡೇವಿಡ್ ಅವರು ಹೌದು ಎಂದಿದ್ದಾರೆ. ಇದರ ಜೊತೆಗೆ ವಿಶ್ ಮಾಡಿದ ಎಲ್ಲರಿಗೂ ಅವರು ಧನ್ಯವಾದ ಹೇಳಿದ್ದಾರೆ.

ಸ್ವಲ್ಪ ಸಮಯದ ನಂತರ, ವರುಣ್ ಅವರ ತಾಯಿ ಲಲ್ಲಿ ಧವನ್ ಮತ್ತು ಸೊಸೆ ಜಾನ್ವಿ ಧವನ್ ಆಸ್ಪತ್ರೆಯಿಂದ ಹೊರಹೋಗುತ್ತಿರುವುದು ಕಂಡುಬಂದಿತು. ದಂಪತಿ ತಮ್ಮ ಮಗಳ ಜನನದ ಬಗ್ಗೆ ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿಲ್ಲ.

ನಟನ ಅಭಿಮಾನಿಗಳು ದಂಪತಿಗೆ ಶುಭ ಹಾರೈಸಿದರು. ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಪ್ರವೇಶಿಸಿದ್ದಾಳೆ, ಅಭಿನಂದನೆಗಳು ವರುಣ್ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ವರುಣ್ ತಮ್ಮ ದೀರ್ಘಕಾಲದ ಗೆಳತಿ ನತಾಶಾಳೊಂದಿಗೆ 2021ರ ಜನವರಿ 24 ರಂದು ಮದುವೆಯಾಗಿದ್ದರು. ಸಿನಿಮಾ ವಿಚಾರಕ್ಕೆ ಬಂದರೆ ವರುಣ್ ಅವರು ʻಬೇಬಿ ಜಾನ್‌ʼನಲ್ಲಿ ವರುಣ್ ಕಾಣಿಸಿಕೊಳ್ಳಲಿದ್ದಾರೆ. ಬೇಬಿ ಜಾನ್ ಚಿತ್ರವನ್ನು ಎ ಕಾಳೀಶ್ವರನ್ ನಿರ್ದೇಶಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು ಸಿನಿ1 ಸ್ಟುಡಿಯೋಸ್ ಸಹಯೋಗದಲ್ಲಿ ಅಟ್ಲಿ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ಇದನ್ನೂ ಓದಿ: Dolly Dhananjay: ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ; ಜೂನ್ 14ರಂದು ಸಿನಿಮಾ ತೆರೆಗೆ!

ವರುಣ್ ಧವನ್ ಶೀಘ್ರದಲ್ಲೇ ಅವರ ಮುಂಬರುವ ಚಿತ್ರ ‘ವಿಡಿ 18’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು ಅಮೆಜಾನ್ ಪ್ರೈಮ್ ವೀಡಿಯೊದ ವೆಬ್ ಸರಣಿ ‘ಸಿಟಾಡೆಲ್’ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಕೂಡ ವರುಣ್ ದವನ್ ಜೊತೆ ಸಿಟಾಡೆಲ್​ ನಲ್ಲಿ ನಟಿಸಿದ್ದಾರೆ. ಇದನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದಾರೆ.

ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸುವ ಮುಂಬರುವ ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ಸಲ್ಮಾನ್ ಖಾನ್ ರೊಮ್ಯಾನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಚಿತ್ರಕ್ಕಾಗಿ ನಿರ್ದೇಶಕ ವಿಷ್ಣುವರ್ಧನ್ ಅವರೊಂದಿಗೆ ಸಮಂತಾ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಈ ಸಿನಿಮಾಗೆ ಸಮಂತಾ ಜತೆಗೆ ತ್ರಿಶಾ ಮತ್ತು ಅನುಷ್ಕಾ ಶೆಟ್ಟಿ ಕೂಡ ಇರಲಿದ್ದಾರೆ ಎಂದು ಹೇಳಲಾಗಿದೆ. ಸದ್ಯಕ್ಕೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

Continue Reading

ಕರ್ನಾಟಕ

Rave Party: ರೇವ್‌ ಪಾರ್ಟಿ ಕೇಸ್‌ನಲ್ಲಿ ತೆಲುಗು ನಟಿ ಹೇಮಾಗೆ 12 ದಿನ ನ್ಯಾಯಾಂಗ ಬಂಧನ

Rave Party: ಮೇ 19ರಂದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಡೆದಿದ್ದ ರೇವ್‌ ಪಾರ್ಟಿ ಪ್ರಕರಣದಲ್ಲಿ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಮಾದಕ ವಸ್ತು ಸೇವನೆ ಆರೋಪದಲ್ಲಿ ತೆಲುಗು ನಟಿ ಹೇಮಾ ಅವರನ್ನು ಬಂಧಿಸಲಾಗಿದೆ.

VISTARANEWS.COM


on

Rave Party
Koo

ಬೆಂಗಳೂರು: ರೇವ್‌ ಪಾರ್ಟಿ ಪ್ರಕರಣದಲ್ಲಿ (Rave Party) ಬಂಧನವಾಗಿದ್ದ ತೆಲುಗು ನಟಿ ಹೇಮಾ ಅವರಿಗೆ 12 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ಸಲ್ಮಾ .ಎ.ಎಸ್ ಅವರು, ನಟಿ ಹೇಮಾ ಅವರನ್ನು ಜೂನ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದ್ದಾರೆ.

ಮೇ 19ರಂದು ಎಲೆಕ್ಟ್ರಾನಿಕ್‌ ಸಿಟಿಯ (Electronic city) ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ಸೋಮವಾರ ಸಂಜೆ ನಟಿ ಹೇಮಾ ಹಾಜರಾಗಿದ್ದರು. ಈ ವೇಳೆ ಅವರನ್ನು ಅಧಿಕಾರಿಗಳು ಬಂಧಿಸಿದ್ದರು.

ರೇವ್ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ (Telugu actress Hema) ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್‌ ಮಾಡಿದ್ದರು. ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾದಾಗ ಅವರನ್ನು ಬಂಧಿಸಲಾಗಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ರಾತ್ರಿ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ಅವರ ಮುಂದೆ ನಟಿಯನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶೆ, ನಟಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ತಾವು ಬೇರೆ ಕಡೆ ಇರುವುದಾಗಿ ವಿಡಿಯೊ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರಿಂದ ನಟಿಯನ್ನು ಬಂಧಿಸಲಾಗಿದೆ.

ನಾನೇನು ತಪ್ಪು ಮಾಡಿಲ್ಲ ಎಂದ ನಟಿ

ಕೋರ್ಟ್‌ಗೆ ಹಾಜರುಪಡಿಸುವಾಗ ನಟಿ ಹೇಮಾ ಮಾತನಾಡಿ, ನಾನೇನು ತಪ್ಪು ಮಾಡಿಲ್ಲ. ನಾನು ನಿಜವಾಗಿಯೂ ಹೈದರಾಬಾದ್‌ನಿಂದಲೇ ವಿಡಿಯೊ ಕಳುಹಿಸಿದ್ದೆ. ಬರ್ತ್ ಡೇ ಕೇಕ್ ಕಟ್ ಮಾಡಿ ಹೈದರಾಬಾದ್‌ಗೆ ಹೋಗಿಬಿಟ್ಟಿದ್ದೆ. ನಮ್ಮ ಮನೆಯಿಂದ ಬಿರಿಯಾನಿ ಮಾಡುವ ವಿಡಿಯೊ ಹಾಕಿದ್ದೆ. ನಾನು ಡ್ರಗ್ಸ್ ತೆಗೆದುಕೊಂಡಿಲ್ಲ. ಅವರು ಎಲ್ಲಾ ಟೆಸ್ಟ್‌ಗಳನ್ನು ಮಾಡಿದ್ದಾರೆ. ಸುಖಾಸುಮ್ಮನೆ ನನ್ನನ್ನು ಸಿಲುಕಿಸುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Rave Party: ರೇವ್ ಪಾರ್ಟಿ ಪ್ರಕರಣ; ವಿಚಾರಣೆಗೆ ಹಾಜರಾದ ತೆಲುಗು ನಟಿ ಹೇಮಾ ಅರೆಸ್ಟ್‌

ಎಂಡಿಎಂಎ ಸೇವಿಸಿದ್ದ ನಟಿ

ನಟಿ ಹೇಮಾ ಯಾವ ಡ್ರಗ್ಸ್ ಸೇವಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಅವರು ಎಂಡಿಎಂಎ ಎಂಬ ಡ್ರಗ್ಸ್ ಅನ್ನು ಸೇವನೆ ಮಾಡಿದ್ದರು ಎಂದು ವರದಿ ಹೇಳುತ್ತಿದೆ. ಮಾತ್ರೆ ರೂಪದಲ್ಲಿ ಇರುವ ಈ ಡ್ರಗ್ಸ್ ಅನ್ನು ಪಾರ್ಟಿಯಲ್ಲಿ ನೀಡಲಾಗಿತ್ತು. ಹೇಮಾ ಅವರು ಈ ಎಂಡಿಎಂಎ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.

ಸದ್ಯ ಈ ಪಾರ್ಟಿಯನ್ನು ಆಯೋಜನೆ ಮಾಡಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಐವರನ್ನು ಈಗ ವಶಕ್ಕೆ ಪಡೆದುಕೊಳ್ಳಲು ಸಿಸಿಬಿ ಅರ್ಜಿ ಸಲ್ಲಿಸಲು ಮುಂದಾಗಿದೆ. ಅವರನ್ನು ಮತ್ತಷ್ಟು ವಿಚಾರಣೆಗೊಳಪಡಿಸಲು ಪ್ಲ್ಯಾನ್‌ ಮಾಡಿದ್ದು, ಈ ಡ್ರಗ್ಸ್‌ಗಳು ಎಲ್ಲಿಂದ ಬಂದವು? ಯಾರು ವಿತರಣೆ ಮಾಡುತ್ತಿದ್ದಾರೆ? ಇದರ ಜಾಲ ಯಾವುದು? ಎಂಬಿತ್ಯಾದಿ ಅಂಶಗಳನ್ನು ಬಯಲಿಗೆಳೆಯಲು ತಯಾರಿ ನಡೆಸಲಾಗಿದೆ.

ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆಗಿದ್ದ ತೆಲುಗು ನಟಿ ಹೇಮಾ!

ರೇವ್‌ ಪಾರ್ಟಿಗೆ ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ ಅವರು ಪೊಲೀಸರ ಮುಂದೆ ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆಗಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ. ನಾನು ತೆಲುಗಿನ ಫೇಮಸ್‌ ನಟಿ ಎಂದು ಹೇಳಿಕೊಂಡಿದ್ದೇ ಅವರಿಗೆ ಮುಳುವಾಗಿದೆ ಎನ್ನಲಾಗಿದೆ.

ನಗರದ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಸಿಕ್ಕಿರುವ ಕೇಸ್‌ನ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಎರಡು ದಿನ ಎಗ್ಗಿಲ್ಲದೆ ಪಾರ್ಟಿ ನಡೆದಿದೆ. ಹೀಗಾಗಿ ಆ ಜೋಶ್‌ನಲ್ಲಿದ್ದ ನಟಿ ಹೇಮಾ ಅವರು ಪೊಲೀಸರು ದಾಳಿ ಮಾಡಿದ ವೇಳೆ ತಮ್ಮ ಬಗ್ಗೆ ಹೇಳಿಕೊಂಡು ಸರಿಯಾಗಿ ಸಿಕ್ಕಿಬಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ತಾವು ದೊಡ್ಡ ಹಳ್ಳ ತೋಡಿ ಬಚಾವ್‌ ಆಗುತ್ತೇನೆ ಎಂದು ಮಾಡಿದ ಪ್ಲ್ಯಾನ್‌ ಫ್ಲಾಪ್‌ ಆಗಿದ್ದು, ಆ ಹಳ್ಳಕ್ಕೆ ಅವರೇ ಬಿದ್ದಂತೆ ಆಗಿದೆ.

ಇದನ್ನೂ ಓದಿ | Viral News: ಕದಿಯಲು ಬಂದ ಮನೆಯಲ್ಲೇ ನಿದ್ದೆಹೋದ ಕಳ್ಳ; ಪೊಲೀಸರೇ ಎಬ್ಬಿಸಬೇಕಾಯಿತು!

ಅಸಲಿಗೆ ಸಿಸಿಬಿ ಪೊಲೀಸರಿಗೆ ಹೇಮಾ ಒಬ್ಬರು ನಟಿ ಎಂಬುದೇ ಗೊತ್ತಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲರನ್ನು ವಿಚಾರಣೆ ನಡೆಸುವಂತೆಯೇ ಹೇಮಾರನ್ನೂ ವಿಚಾರಿಸುತ್ತಿದ್ದರು. ಈ ವೇಳೆ ಪೊಲೀಸರರ ಮುಂದೆ ಹೇಮಾ ನಾನು ದೊಡ್ಡ ನಟಿ ಇದ್ದೇನೆ. ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆಗ ಪೊಲೀಸರು ಪರಿಶೀಲನೆ ಮಾಡಿದಾಗ ಆಕೆ ನಟಿ ಅನ್ನೋದು ಗೊತ್ತಾಗಿದೆ.

Continue Reading

ಕರ್ನಾಟಕ

Rave Party: ರೇವ್ ಪಾರ್ಟಿ ಪ್ರಕರಣ; ವಿಚಾರಣೆಗೆ ಹಾಜರಾದ ತೆಲುಗು ನಟಿ ಹೇಮಾ ಅರೆಸ್ಟ್‌

Rave Party: ಬೆಂಗಳೂರಿನ ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ನಟಿ ಹೇಮಾ ಸೋಮವಾರ ಹಾಜರಾದ ವೇಳೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಳೆ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಸಿಸಿಬಿ ಅಧಿಕಾರಿಗಳು ತೀರ್ಮಾನಿಸಿದ್ದಾರೆ.

VISTARANEWS.COM


on

Rave Party
Koo

ಬೆಂಗಳೂರು: ರೇವ್ ಪಾರ್ಟಿ ಪ್ರಕರಣದಲ್ಲಿ (Rave Party) ಮಾದಕ ವಸ್ತು ಸೇವಿಸಿದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ (Telugu actress Hema) ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಸೋಮವಾರ ವಿಚಾರಣೆಗೆ ಹಾಜರಾಗಿದ್ದ ನಟಿಯನ್ನು ಬಂಧಿಸಲಾಗಿದೆ. ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾಗಿದ್ದು, ಈ ವೇಳೆ ಅವರನ್ನು ಸಿಸಿಬಿ ತನಿಖಾಧಿಕಾರಿಗಳು ಬಂಧಿಸಿ ಹೇಳಿಕೆ ಪಡೆಯುತ್ತಿದ್ದಾರೆ.

ಎರಡು ಬಾರಿ ನೋಟಿಸ್ ನೀಡಿದ್ದರೂ ಸಹ ವಿಚಾರಣೆಗೆ ನಟಿ ಬಂದಿರಲಿಲ್ಲ. ಇನ್ನು ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ನಟಿಯನ್ನು ಬಂಧಿಸಲಾಗಿದೆ. ಸದ್ಯ ನಟಿಗೆ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತಿದೆ.

ಮೇ 19ರಂದು ಎಲೆಕ್ಟ್ರಾನಿಕ್‌ ಸಿಟಿಯ (Electronic city) ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ನಟಿ ಹಾಜರಾಗಿದ್ದರು. ಈ ವೇಳೆ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಇದನ್ನೂ ಓದಿ | Prajwal Revanna Case: ಹೈಕೋರ್ಟ್‌ಗೆ ಮತ್ತೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ಭವಾನಿ ರೇವಣ್ಣ

ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ತಾವು ಬೇರೆ ಕಡೆ ಇರುವುದಾಗಿ ವಿಡಿಯೊ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರಿಂದ ನಟಿಯನ್ನು ವಶಕ್ಕೆ ಪಡೆದಿದ್ದು, ನಾಳೆ ಕೋರ್ಟ್‌ಗೆ ಹಾಜರುಪಡಿಸಲು ಸಿಸಿಬಿ ತೀರ್ಮಾನಿಸಿದೆ.

ನಟಿ ಹೇಮಾ ಸೇವಿಸಿದ್ದು ಯಾವ ಡ್ರಗ್ಸ್?

ನಟಿ ಹೇಮಾ ಯಾವ ಡ್ರಗ್ಸ್ ಸೇವಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಅವರು ಎಂಡಿಎಂಎ ಎಂಬ ಡ್ರಗ್ಸ್ ಅನ್ನು ಸೇವನೆ ಮಾಡಿದ್ದರು ಎಂದು ವರದಿ ಹೇಳುತ್ತಿದೆ. ಮಾತ್ರೆ ರೂಪದಲ್ಲಿ ಇರುವ ಈ ಡ್ರಗ್ಸ್ ಅನ್ನು ಪಾರ್ಟಿಯಲ್ಲಿ ನೀಡಲಾಗಿತ್ತು. ಹೇಮಾ ಅವರು ಈ ಎಂಡಿಎಂಎ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.

ಸದ್ಯ ಈ ಪಾರ್ಟಿಯನ್ನು ಆಯೋಜನೆ ಮಾಡಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಐವರನ್ನು ಈಗ ವಶಕ್ಕೆ ಪಡೆದುಕೊಳ್ಳಲು ಸಿಸಿಬಿ ಅರ್ಜಿ ಸಲ್ಲಿಸಲು ಮುಂದಾಗಿದೆ. ಅವರನ್ನು ಮತ್ತಷ್ಟು ವಿಚಾರಣೆಗೊಳಪಡಿಸಲು ಪ್ಲ್ಯಾನ್‌ ಮಾಡಿದ್ದು, ಈ ಡ್ರಗ್ಸ್‌ಗಳು ಎಲ್ಲಿಂದ ಬಂದವು? ಯಾರು ವಿತರಣೆ ಮಾಡುತ್ತಿದ್ದಾರೆ? ಇದರ ಜಾಲ ಯಾವುದು? ಎಂಬಿತ್ಯಾದಿ ಅಂಶಗಳನ್ನು ಬಯಲಿಗೆಳೆಯಲು ತಯಾರಿ ನಡೆಸಲಾಗಿದೆ.

ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆಗಿದ್ದ ತೆಲುಗು ನಟಿ ಹೇಮಾ!

ರೇವ್‌ ಪಾರ್ಟಿಗೆ ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ ಅವರು ಪೊಲೀಸರ ಮುಂದೆ ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆಗಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ. ನಾನು ತೆಲುಗಿನ ಫೇಮಸ್‌ ನಟಿ ಎಂದು ಹೇಳಿಕೊಂಡಿದ್ದೇ ಅವರಿಗೆ ಮುಳುವಾಗಿದೆ ಎನ್ನಲಾಗಿದೆ.

ನಗರದ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಸಿಕ್ಕಿರುವ ಕೇಸ್‌ನ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಎರಡು ದಿನ ಎಗ್ಗಿಲ್ಲದೆ ಪಾರ್ಟಿ ನಡೆದಿದೆ. ಹೀಗಾಗಿ ಆ ಜೋಶ್‌ನಲ್ಲಿದ್ದ ನಟಿ ಹೇಮಾ ಅವರು ಪೊಲೀಸರು ದಾಳಿ ಮಾಡಿದ ವೇಳೆ ತಮ್ಮ ಬಗ್ಗೆ ಹೇಳಿಕೊಂಡು ಸರಿಯಾಗಿ ಸಿಕ್ಕಿಬಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ತಾವು ದೊಡ್ಡ ಹಳ್ಳ ತೋಡಿ ಬಚಾವ್‌ ಆಗುತ್ತೇನೆ ಎಂದು ಮಾಡಿದ ಪ್ಲ್ಯಾನ್‌ ಫ್ಲಾಪ್‌ ಆಗಿದ್ದು, ಆ ಹಳ್ಳಕ್ಕೆ ಅವರೇ ಬಿದ್ದಂತೆ ಆಗಿದೆ.

ಅಸಲಿಗೆ ಸಿಸಿಬಿ ಪೊಲೀಸರಿಗೆ ಹೇಮಾ ಒಬ್ಬರು ನಟಿ ಎಂಬುದೇ ಗೊತ್ತಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲರನ್ನು ವಿಚಾರಣೆ ನಡೆಸುವಂತೆಯೇ ಹೇಮಾರನ್ನೂ ವಿಚಾರಿಸುತ್ತಿದ್ದರು. ಈ ವೇಳೆ ಪೊಲೀಸರರ ಮುಂದೆ ಹೇಮಾ ನಾನು ದೊಡ್ಡ ನಟಿ ಇದ್ದೇನೆ. ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆಗ ಪೊಲೀಸರು ಪರಿಶೀಲನೆ ಮಾಡಿದಾಗ ಆಕೆ ನಟಿ ಅನ್ನೋದು ಗೊತ್ತಾಗಿದೆ.

ಕಿರಿಕ್‌ ಮಾಡಿದ್ದ ನಟಿ ಹೇಮಾ

ಜಿಆರ್ ಫಾರ್ಮ್ ಹೌಸ್‌ನಲ್ಲಿ ಶನಿವಾರ ರಾತ್ರಿಯಿಂದಲೇ ರೇವ್ ಪಾರ್ಟಿ ಶುರುವಾಗಿತ್ತು ಎಂಬುದು ಗೊತ್ತಾಗಿದೆ. ಒಂದು ದಿನ ಪಾರ್ಟಿ ಆದ ಬಳಿಕ ಸಿಸಿಬಿ ಪೊಲೀಸರಿಗೆ ವಿಚಾರ ತಿಳಿದು ರೈಡ್ ಮಾಡಲಾಗಿದೆ‌. ಇದರ ಜತೆಗೆ ಸಿಸಿಬಿ ಪೊಲೀಸರೊಂದಿಗೆ ನಟಿ ಹೇಮಾ ಕಿರಿಕ್ ಮಾಡಿದ್ದಾರೆ. ವಿಚಾರಣೆಗೆಂದು ಪೊಲೀಸರು ಇರಿಸಿಕೊಂಡಿದ್ದಾಗ ಕಿರಿಕ್ ತೆಗೆದು, ನನಗೆ ಸರಿಯಾದ ಊಟ ಕೊಟ್ಟಿಲ್ಲ. ನಾನೊಬ್ಬ ನಟಿ ಸರಿಯಾಗಿ ಟ್ರೀಟ್ ಮಾಡಿ ಎಂದು ಆಕ್ರೋಶ ಹೊರಹಾಕಿದ್ದರು ಎಂದು ತಿಳಿದುಬಂದಿದೆ.

Continue Reading

ಸ್ಯಾಂಡಲ್ ವುಡ್

Kannada New Movie: `ಮಂಡೇಲಾ’ ಚಿತ್ರಕ್ಕೆ ನಾರಿ ಶ್ರೀನಿವಾಸ್ ನಾಯಕ!

Kannada New Movie: 1980-90ರ ದಶಕದಲ್ಲಿನ ಸೂಕ್ಷ್ಮ ಹಾಗೂ ಸುಂದರವಾದ ಭಾವನೆಗಳ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶ್ರೀಲಕ್ಷ್ಮಿ ನರಸಿಂಹ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಈ ಚಿತ್ರದಲ್ಲಿ ನಾಯಕನಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ಅವರು ನಟಿಸುತ್ತಿದ್ದಾರೆ.

VISTARANEWS.COM


on

Kannada New Movie Mandela nari shrinivas
Koo

ಬೆಂಗಳೂರು: ʻಮಂಡೇಲಾʼ (Kannada New Movie) ಚಿತ್ರಕ್ಕೆ ನಾರಿ ಶ್ರೀನಿವಾಸ್ ನಾಯಕ. ಪ್ರತಿಭಾವಂತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ನಾರಿ ಶ್ರೀನಿವಾಸ್ ಹಲವು ಹಿಟ್‌ ಸಿನಿಮಾಗಳನ್ನು ನೀಡಿದವರು. ಶ್ರೀಧರ್ ಪೂರ್ವಜಿತ್ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು. ಆ ಚಿತ್ರದ ಹೆಸರು ಮಂಡೇಲಾ.

ಇದೊಂದು ವಿಭಿನ್ನ ಪ್ರಯೋಗದ ಚಿತ್ರ ಎಂದೂ ಹೇಳಬಹುದು. ಸಿನಿಮಾ ಎಂದಮೇಲೆ ಹಲವಾರು ಪಾತ್ರಗಳಿರಬೇಕಲ್ಲವೆ, ಈ ಚಿತ್ರದಲ್ಲೂ ಒಂದಷ್ಟು ಪಾತ್ರಗಳಿವೆ. ಆದರೆ ಪ್ರಮುಖವಾಗಿ ಮೂರು ಪಾತ್ರಗಳ ಮೂಲಕ ನಿರ್ದೇಶಕರು ಕಥೆಯನ್ನು ಹೇಳಹೊರಟಿದ್ದಾರೆ.

1980-90ರ ದಶಕದಲ್ಲಿನ ಸೂಕ್ಷ್ಮ ಹಾಗೂ ಸುಂದರವಾದ ಭಾವನೆಗಳ ಸುತ್ತ ನಡೆಯುವ ಕಥೆ ಈ ಚಿತ್ರದಲ್ಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಶ್ರೀಲಕ್ಷ್ಮಿ ನರಸಿಂಹ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಈ ಚಿತ್ರದಲ್ಲಿ ನಾಯಕನಾಗಿ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ಅವರು ನಟಿಸುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ಇಬ್ಬರು ನಾಯಕಿಯರು ನಟಿಸುತ್ತಿದ್ದು, ಅವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

ಇದನ್ನೂ ಓದಿ: Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

ಕನ್ನಡದಲ್ಲಿ ಈಗಾಗಲೇ ʻಬಾ ನಲ್ಲೆ ಮಧುಚಂದ್ರಕೆʼ, ʻಬೆಳದಿಂಗಳ ಬಾಲೆʼಯಂಥ ಚಿತ್ರಗಳು ಬಂದು ಹೋಗಿವೆ. ಆಗಿನಿಂದಲೂ ಹೊಸಥರದ ಕಂಟೆಂಟ್ ಇರುವ ಕಥೆಗಳನ್ನು ನಮ್ಮ ಜನ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಅದೇರೀತಿ ನಮ್ಮ ಹೊಸ ಈ ಪ್ರಯತ್ನವನ್ನೂ ಪ್ರೇಕ್ಷಕರು ಕೈ ಹಿಡಿಯುತ್ತಾರೆ ಎಂಬ ಭರವಸೆಯನ್ನು ಚಿತ್ರದ ನಾಯಕ ನಾರಿ ಶ್ರೀನಿವಾಸ್ (ಸ್ಮೈಲ್ ಶ್ರೀನು) ಅವರು ವ್ಯಕ್ತಪಡಿಸಿದರು.

ಕನ್ನಡ, ತೆಲುಗು, ತಮಿಳು ಸೇರಿ ಮೂರು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಜುಲೈ 2 ಅಥವಾ 3ನೇ ವಾರ ಈ ಚಿತ್ರ ಸೆಟ್ಟೇರಲಿದೆ. ಮಂಡೇಲಾದ ಸ್ಕ್ರಿಪ್ಟ್ ಅಂತಿಮ ಹಂತದಲ್ಲಿದೆ.

Continue Reading
Advertisement
Varun Dhawan Natasha Dalal welcome baby girl
ಬಾಲಿವುಡ್16 mins ago

Varun Dhawan: ಹೆಣ್ಣು ಮಗುವಿಗೆ ತಂದೆಯಾದ ಬಾಲಿವುಡ್ ನಟ ವರುಣ್ ಧವನ್

Crude Bomb west bengal election results 2024
ಪ್ರಮುಖ ಸುದ್ದಿ28 mins ago

Election Results 2024: ಪಶ್ಚಿಮ ಬಂಗಾಲದಲ್ಲಿ ಮತ ಎಣಿಕೆಗೂ ಮುನ್ನ ಬಾಂಬ್‌ ಸ್ಫೋಟ, ಐವರಿಗೆ ಗಾಯ

Lok Sabha Election Result 2024
ದೇಶ31 mins ago

Lok Sabha Election Result 2024: ಮುನ್ನಡೆಯಲ್ಲೇ ಮ್ಯಾಜಿಕ್‌ ನಂಬರ್‌ ದಾಟಿದ ಎನ್‌ಡಿಎ; ಇಂಡಿಯಾ ಒಕ್ಕೂಟ ತೀವ್ರ ಪೈಪೋಟಿ

Election Results 2024
Lok Sabha Election 202432 mins ago

Election Results 2024: ಮತ ಎಣಿಕೆ ಆರಂಭ: ಮೋದಿಯಿಂದ ರಾಹುಲ್‌ ಗಾಂಧಿವರೆಗೆ; ಇವರೇ ನೋಡಿ ದೇಶದ ಗಮನ ಸೆಳೆದ ಅಭ್ಯರ್ಥಿಗಳು

Election Results 2024
ಪ್ರಮುಖ ಸುದ್ದಿ46 mins ago

Election Results 2024 : ಲೋಕಸಭಾ ಚುನಾವಣಾ ಮತ ಎಣಿಕೆ ಆರಂಭ; ಇವಿಎಂಗಳಲ್ಲಿದ್ದ ಪಕ್ಷಗಳ ಭವಿಷ್ಯ ಬಹಿರಂಗ

Lok Sabha Election 2024
ದೇಶ55 mins ago

Election Result 2024: ಮತ ಎಣಿಕೆ ಮೊದಲೇ ಕಾಂಗ್ರೆಸ್ ನಾಯಕರಿಂದ ಮತಯಂತ್ರ ದೂಷಣೆ ಆರಂಭ!

Lok Sabha Election Results 2024
ಪ್ರಮುಖ ಸುದ್ದಿ55 mins ago

Election Results 2024: ರಾಜ್ಯದ 474 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಕೌಂಡ್ ಡೌನ್

Election Results 2024 modi face 400 par
ಪ್ರಮುಖ ಸುದ್ದಿ1 hour ago

Election Results 2024: ಎನ್‌ಡಿಎ 400 ಸ್ಥಾನ ತಲುಪಲು ಈ ರಾಜ್ಯಗಳೇ ಹೆದ್ದಾರಿ! ಸಮೀಕ್ಷೆಗಳು ಹೇಳಿದ್ದೇನು?

Lok Sabha Election Result 2024 Live
ದೇಶ2 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Benefits Of Litchi
ಆರೋಗ್ಯ2 hours ago

Benefits Of Litchi: ಸಿಹಿಯಾದ, ರುಚಿಯಾದ ಲಿಚಿ ಹಣ್ಣನ್ನು ತಿಂದರೆ ಆರೋಗ್ಯ ಲಾಭ ಹಲವಾರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ2 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ17 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ18 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು7 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌