Rakshit Shetty: ಕಿರುತೆರೆಗೂ ಲಗ್ಗೆ ಇಟ್ಟ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿʼ ಚಿತ್ರ; ಎಲ್ಲಿ, ಯಾವಾಗ ಪ್ರಸಾರ? - Vistara News

ಸಿನಿಮಾ

Rakshit Shetty: ಕಿರುತೆರೆಗೂ ಲಗ್ಗೆ ಇಟ್ಟ ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿʼ ಚಿತ್ರ; ಎಲ್ಲಿ, ಯಾವಾಗ ಪ್ರಸಾರ?

Rakshit Shetty: ಕಳೆದ ವರ್ಷ ತೆರೆಕಂಡು ಗಮನ ಸೆಳೆದ ಕನ್ನಡ ಚಿತ್ರಗಳ ಪೈಕಿ ಸಪ್ತ ಸಾಗರದಾಚೆ ಎಲ್ಲೋ ಕೂಡ ಒಂದು. ಒದರ ಮೊದಲ ಭಾಗ ಈಗಾಗಲೇ ಕಿರುತೆರೆಯಲ್ಲಿ ಪ್ರಸಾರವಾಗಿದೆ. ಇದೀಗ ಎರಡನೇ ಭಾಗ ಸೈಡ್‌ ಬಿ ಕೂಡ ಪ್ರಸಾರವಾಗಲಿದೆ. ಯಾವಾಗ, ಯಾವ ಚಾನಲೆಎ ಎನ್ನುವ ವಿವರ ಇಲ್ಲಿದೆ.

VISTARANEWS.COM


on

Rakshit Shetty
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕಳೆದ ವರ್ಷ ತೆರೆಕಂಡ ʼಸಪ್ತ ಸಾಗರದಾಚೆ ಎಲ್ಲೋʼ (Sapta Saagaradaache Ello) ಸರಣಿ ಚಿತ್ರಗಳು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದವು. ಯಶಸ್ವಿ ನಿರ್ದೇಶಕ ಹೇಮಂತ್‌ ಎಂ. ರಾವ್‌ ಮತ್ತು ರಕ್ಷಿತ್‌ ಶೆಟ್ಟಿ (Rakshit Shetty) ಕಾಂಬಿನೇಷ್‌ನ ಈ ದೃಶ್ಯ ಕಾವ್ಯ ಕನ್ನಡ ಜತೆಗೆ ಇತರ ಭಾಷೆಗಳಲ್ಲಿಯೂ ತೆರೆಕಂಡು ಗಮನ ಸೆಳೆದಿತ್ತು. ಒಟಿಟಿಯಲ್ಲಿಯೂ ಸ್ಟ್ರೀಮಿಂಗ್‌ ಆಗಿ ಮೆಚ್ಚುಗೆ ಪಡೆದಿದ್ದ ಈ ಚಿತ್ರ ಇದೀಗ ಕಿರುತೆರೆಗೂ ಲಗ್ಗೆ ಇಟ್ಟಿದೆ. ಯಾವ ಚಾನಲ್‌ನಲ್ಲಿ, ಯಾವಾಗ ಪ್ರಸಾರವಾಗಲಿದೆ ಎನ್ನುವ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಯಾವಾಗ ಪ್ರಸಾರ?

ಜೀ ಕನ್ನಡ ವಾಹಿನಿಯಲ್ಲಿ ಮೊಟ್ಟ ಮೊದಲ ಬಾರಿಗೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ’ ಸಿನಿಮಾ ಪ್ರಸಾರ ಆಗಲಿದೆ. ಭಾನುವಾರ (ಮಾರ್ಚ್ 24) ರಾತ್ರಿ 7.30ಕ್ಕೆ ಈ ಸಿನಿಮಾ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ. ʼಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ’ ಕೂಡ ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು.

‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ’ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್‌ ಮತ್ತು ಚೈತ್ರಾ ಜೆ. ಆಚಾರ್ ಜೋಡಿ ಮೋಡಿ ಮಾಡಿತ್ತು. ಇವರೊಂದಿಗೆ ಅಚ್ಯುತ್ ಕುಮಾರ್, ಜೆ.ಪಿ. ತೂಮಿನಾಡ್, ರಮೇಶ್ ಇಂದಿರಾ, ಗೋಪಾಲ ಕೃಷ್ಣ ದೇಶಪಾಂಡೆ, ಯಮುನಾ ಶ್ರೀನಿಧಿ ಪಾತ್ರಗಳು ಕೂಡ ಜನರನ್ನು ಆಕರ್ಷಿಸಿದ್ದವು. ಜತೆಗೆ ಚರಣ್ ರಾಜ್ ಸಂಯೋಜನೆಯ ಹಾಡುಗಳು ನೋಡುಗರ ಹೃದಯ ಗೆದ್ದಿದ್ದರೆ, ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಕೂಡ ಮೆಚ್ಚುಗೆ ಗಳಿಸಿತ್ತು.

ಹಿಟ್‌ ಕಾಂಬಿನೇಷನ್‌

2016ರಲ್ಲಿ ತೆರೆಕಂಡ ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಸಿನಿಮಾದ ಬಳಿಕ ʼಸಪ್ತ ಸಾಗರದಾಚೆ ಎಲ್ಲೋʼ ಚಿತ್ರಕ್ಕಾಗಿ ನಿರ್ದೇಶಕ ಹೇಮಂತ್‌ ಎಂ. ರಾವ್‌ ಮತ್ತು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ (Rakshit Shetty) ಒಂದಾಗಿದ್ದರು. ಅನಂತ್‌ನಾಗ್‌, ವಶಿಷ್ಟ ಸಿಂಹ, ಶ್ರುತಿ ಹರಿಹರನ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ ಸಿನಿಮಾ ಚಿತ್ರ ಪ್ರೇಮಿಗಳ ಗಮನ ಸೆಳೆದಿತ್ತು. ಜತೆಗೆ ಪರಭಾಷಿಕರೂ ಈ ಚಿತ್ರವನ್ನು ಹೊಗಳಿದ್ದರು. ಹೀಗಾಗಿ ʼಸಪ್ತ ಸಾಗರದಾಚೆ ಎಲ್ಲೋʼ ಸೆಟ್ಟೇರಿದಾಗಿನಿಂದ ನಿರೀಕ್ಷೆ ಗರಿಗೆದರಿತ್ತು. ಕಮರ್ಷಿಯಲ್‌ ಅಂಶಗಳಿಲ್ಲದೆ ಈ ಶುದ್ಧ ಕ್ಲಾಸಿಕ್‌ ಚಿತ್ರ ನಿರೀಕ್ಷೆಯಂತೆ ವಿಮರ್ಶಕರ ಮೆಚ್ಚುಗೆ ಗಳಿಸಿತ್ತು. ಮಾತ್ರವಲ್ಲ ರಕ್ಷಿತ್‌ ಶೆಟ್ಟಿ, ರುಕ್ಮಿಣಿ ವಸಂತ್‌ ಮತ್ತು ಚೈತ್ರಾ ಜೆ. ಆಚಾರ್‌ ಅವರ ವೃತ್ತಿ ಬದುಕಿನ ಅತ್ಯುತ್ತಮ ಚಿತ್ರಗಳ ಪೈಕಿ ಇದೂ ಒಂದು ಎನಿಸಿಕೊಂಡಿತ್ತು.

ಇದನ್ನೂ ಓದಿ: Naga Vamsi: ಸಪ್ತ ಸಾಗರದಾಚೆ ಎಲ್ಲೋ ತುಂಬಾ ಗೋಳು ಸಿನಿಮಾ, ಯಾಕೆ ನೋಡಬೇಕು? ನಿರ್ಮಾಪಕ ನಾಗ ವಂಶಿ!

ಸದ್ಯ ʼಸಪ್ತ ಸಾಗರದಾಚೆ ಎಲ್ಲೋʼ ಸರಣಿ ಚಿತ್ರಗಳ ಯಶಸ್ಸಿನಲ್ಲಿ ತೇಲುತ್ತಿರುವ ರಕ್ಷಿತ್‌ ಶೆಟ್ಟಿ (Rakshit Shetty) ವಿವಿಧ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿ ಇದ್ದಾರೆ. ʼಉಳಿದವರು ಕಂಡಂತೆʼ ಸಿನಿಮಾದ ಮುಂದುವರಿದ ಭಾಗ ʼರಿಚರ್ಡ್‌ ಆ್ಯಂಟನಿ: ಲಾರ್ಡ್‌ ಆಫ್‌ ದಿ ಸಿʼ ಚಿತ್ರವನ್ನು ನಿರ್ದೇಶಿಸುವ ಜತೆಗೆ ನಟಿಸಲಿದ್ದಾರೆ. ಜತೆಗೆ ಇನ್ನೊಂದಷ್ಟು ಸಿನಿಮಾದ ಭಾಗವಾಗುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Pooja Hegde: ಕಾರ್ಕಳದ ಕಣಜಾರು ದೇಗುಲಕ್ಕೆ ಭೇಟಿ ನೀಡಿದ ನಟಿ ಪೂಜಾ ಹೆಗ್ಡೆ

Pooja Hegde: ಬಹುಭಾಷಾ ನಟಿ, ಕರಾವಳಿ ಮೂಲದ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದ ಪೂಜಾ ಹೆಗ್ಡೆ ಅವರನ್ನು ದೇವಸ್ಥಾನದ ಸಮಿತಿಯ ಸದಸ್ಯರು ಗೌರವಿಸಿದರು. ಸನ್ಮಾನದ ವೇಳೆ ಅಭಿಮಾನಿಯೊರ್ವ ರಚಿಸಿದ ತಮ್ಮ ಭಾವಚಿತ್ರವನ್ನು ನಟಿ ಸ್ವೀಕರಿಸಿದರು.

VISTARANEWS.COM


on

Pooja Hegde
Koo

ಉಡುಪಿ: ಬಹುಭಾಷಾ ನಟಿ, ಕರಾವಳಿ ಮೂಲದ ಪೂಜಾ ಹೆಗ್ಡೆ (Pooja Hegde) ಇತ್ತೀಚೆಗೆ ಕಾರ್ಕಳಕ್ಕೆ ಭೇಟಿ ನೀಡಿದರು. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬ್ರಹ್ಮಕಲಶೋತ್ಸವ ಸಭಾ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದ ಪೂಜಾ ಹೆಗ್ಡೆ ಅವರನ್ನು ದೇವಸ್ಥಾನದ ಸಮಿತಿಯ ಸದಸ್ಯರು ಗೌರವಿಸಿದರು. ಸನ್ಮಾನದ ವೇಳೆ ಅಭಿಮಾನಿಯೊರ್ವ ರಚಿಸಿದ ತಮ್ಮ ಭಾವಚಿತ್ರವನ್ನು ನಟಿ ಸ್ವೀಕರಿಸಿದರು. ಪ್ರತಿವರ್ಷ ದೈವಕೋಲ, ದೇವಸ್ಥಾನದ ಜಾತ್ರೆ, ಉತ್ಸವದಲ್ಲಿ ಪೂಜಾ ಹೆಗ್ಡೆ ಭಾಗಿಯಾಗುತ್ತಾರೆ.

ಈ ವೇಳೆ ಅವರು ಕಣಜೂರಿನ ತನ್ನ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಭೂತಾರಾಧನೆ, ದೈವರಾಧನೆ ಕುರಿತೂ ಮಾತನಾಡಿದ್ದಾರೆ. ಮುಂಬೈಯಲ್ಲಿ ಹುಟ್ಟಿ ಬೆಳೆದ ಪೂಜಾ ಹೆಗ್ಡೆ ಪ್ರತಿವರ್ಷದ ರಜೆಯಲ್ಲಿ ತಮ್ಮ ಅಜ್ಜನ ಮನೆಯಾದ ಕಣಜೂರಿಗೆ ಭೇಟಿ ನೀಡುತ್ತಿದ್ದರಂತೆ. ʼʼಬೇಸಿಗೆ ರಜೆಯನ್ನು ಇಲ್ಲಿ ಬಹಳ ಖುಷಿಯಿಂದ ಕಳೆಯುತ್ತಿದ್ದೆವು. ನಮಗೆ ಊರು ಬಿಟ್ಟು ಹೋಗಲು ಮನಸ್ಸಾಗುತ್ತಲೇ ಇರಲಿಲ್ಲ” ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದೇವರ ಅನುಗ್ರಹ ಇಲ್ಲದೆ ಏನೂ ಸಾಧನೆ ಮಾಡಲಾಗದು. ಸಿನಿಮಾ ಕುಟುಂಬವಲ್ಲದ ಕಡೆಯಿಂದ ನಾನು ಈ ಕ್ಷೇತ್ರಕ್ಕೆ ಬಂದಿದ್ದೇನೆ. ನಾನು ಸಾಧನೆ ಮಾಡಲು ದೇವರ ಅನುಗ್ರಹವೇ ಕಾರಣʼʼ ಎಂದು ಹೇಳಿದ್ದಾರೆ.

2012ರಲ್ಲಿ ತಮಿಳಿನ ʼಮುಗಮೂಡಿʼ ಸಿನಿಮಾದ ಮೂಲ ಪೂಜಾ ಹೆಗ್ಡೆ ಸಿನಿ ರಂಗಕ್ಕೆ ಕಾಲಿಟ್ಟರು. ಜೀವ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗದಿದ್ದರೂ ಪೂಜಾ ಗಮನ ಸೆಳೆದಿದ್ದರು. 2014ರಲ್ಲಿ ʼಒಕ ಲೈಲ ಕೋಸಮ್‌ʼ ಮತ್ತು ʼಮುಕುಂದʼ ಚಿತ್ರಗಳ ಮೂಲಕ ಟಾಲಿವುಡ್‌ ಪ್ರವೇಶಿಸಿದರು. ಬಳಿಕ ನೇರ ಬಾಲಿವುಡ್‌ ತೆರಳಿದರು. 2016ರಲ್ಲಿ ರಿಲೀಸ್‌ ಆದ ʼಮೊಹೆಂಜದಾರೊ’ ಸಿನಿಮಾದಲ್ಲಿ ಹೃತಿಕ್‌ ರೋಷನ್‌ಗೆ ನಾಯಕಿಯಾಗಿ ಗಮನ ಸೆಳೆದರು.

ಹೀಗೆ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ಪೂಜಾ ಹೆಗ್ಡೆ ಟಾಪ್‌ ನಾಯಕಿಯರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಟಾಲಿವುಡ್‌, ಬಾಲಿವುಡ್‌ನ ಟಾಪ್‌ ನಾಯಕರ ಜತೆಗೆ ತೆರೆ ಹಂಚಿಕೊಂಡಿದ್ದಾರೆ. ಸದ್ಯ ಶಾಹಿದ್ ಕಪೂರ್ ಜತೆಗೆ ‘ದೇವ’ ಹಿಂದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಶನ್‌ ಆಂಡ್ರ್ಯೂಸ್ ನಿರ್ದೇಶನದ ಈ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ ಎನ್ನಲಾಗಿದೆ. ಜತೆಗೆ ಅಹನ್‌ ಶೆಟ್ಟಿ ಅಭಿನಯದ ಮುಂದಿನ ಸಿನಿಮಾದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Pooja Hegde: 45 ಕೋಟಿ ರೂ. ಬೆಲೆಯ ಹೊಸ ಮನೆ ಖರೀದಿಸಿದ ಪೂಜಾ ಹೆಗ್ಡೆ

ಕೆಲವು ದಿನಗಳ ಹಿಂದೆಯಷ್ಟೇ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜತೆ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ ಎಂದು ವರದಿಯಾಗಿತ್ತು. ಮದುವೆಗೆ ಎಲ್ಲ ಸಿದ್ಧತೆ ನಡೆಯುತ್ತಿದೆ ಎಂತಲೂ ಸುದ್ದಿಯಾಗಿತ್ತು. ಆ ಖ್ಯಾತ ಕ್ರಿಕೆಟಿಗ ಯಾರು ಎಂಬುದರ ಬಗ್ಗೆ ಎಲ್ಲೂ ರಿವೀಲ್ ಆಗಿರಲಿಲ್ಲ. ಈ ಬಗ್ಗೆ ನಟಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ತೆಲುಗು ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿದ್ದವು. ಸದ್ಯ ಈ ವಿಚಾರ ತಣ್ಣಗಾಗಿದೆ.

Continue Reading

ಸಿನಿಮಾ

Actor Upendra: ಉಪೇಂದ್ರ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ರಿ-ರಿಲೀಸ್‌ ಆಗಲಿದೆ ಈ ಕ್ಲಾಸಿಕ್‌ ಸಿನಿಮಾ

Actor Upendra: 1998ರಲ್ಲಿ ತೆರೆಕಂಡ ಉಪೇಂದ್ರ ಅಭಿನಯದ, ನಿರ್ದೇಶನದ ʼಎʼ ಚಿತ್ರವನ್ನು ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ. ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಮೂಡಿಸಿದ್ದ ಈ ಸಿನಿಮಾ ಸಾಂಪ್ರದಾಯಿಕ ಚೌಕಟ್ಟು ಮೀರಿ ಪ್ರಯೋಗಾತ್ಮಕ ಚಿತ್ರ ಎನಿಸಿಕೊಂಡಿತ್ತು. ಇದೀಗ ಈ ಚಿತ್ರವನ್ನು ರಿ-ರಿಲೀಸ್‌ ಮಾಡಲು ಸಿನಿಮಾತಂಡ ಯೋಜನೆ ಹಾಕಿಕೊಂಡಿದೆ.

VISTARANEWS.COM


on

Actor Upendra
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ರಿಯಲ್‌ ಸ್ಟಾರ್‌ ಉಪೇಂದ್ರ (Actor Upendra) ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಉಪೇಂದ್ರ ನಟಿಸಿ, ನಿರ್ದೇಶನ ಮಾಡಿದ್ದ ಕ್ಲಾಸಿಕ್ ಸಿನಿಮಾ ʼಎʼ (A) ರಿ-ರಿಲೀಸ್‌ ಆಗಲಿದೆ. 1998ರ ಫೆಬ್ರವರಿ 12ರಂದು ತೆರೆಗೆ ಬಂದಿದ್ದ ಈ ಚಿತ್ರ ಇದೀಗ 26 ವರ್ಷಗಳ ಬಳಿಕ ಮತ್ತೊಮ್ಮೆ ಬಿಡುಗಡೆಯಾಗಲಿದೆ. ಸ್ವತಃ ಉಪೇಂದ್ರ ಅವರೇ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾದ ಪ್ರೋಮೊ ರಿಲೀಸ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ತನ್ನ ವಿಭಿನ್ನ ಶೀರ್ಷಿಕೆಯಿಂದಲೇ ಆ ಕಾಲದಲ್ಲಿ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದ ಚಿತ್ರ ʼಎʼ. ಅದುವರೆಗೆ ನಿರ್ದೇಶಕನಾಗಿ ಹಾಗೂ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಉಪೇಂದ್ರ ಈ ಚಿತ್ರದ ಮೂಲಕ ನಾಯಕನಾಗಿಯೂ ಪರಿಚಿತರಾದರು. ವಿಭಿನ್ನ ಕಥಾ ಹಂದರ, ಮೇಕಿಂಗ್‌ ಶೈಲಿಯಿಂದ ಈ ಚಿತ್ರ ನೋಡುಗರನ್ನು ಆಕರ್ಷಿಸಿತ್ತು. ನಾಯಕಿಯಾಗಿ ಚಾಂದಿನಿ ಕಾಣಿಸಿಕೊಂಡ ಈ ಸಿನಿಮಾ ಸಾಂಪ್ರದಾಯಿಕ ಕಟ್ಟು-ಕಟ್ಟಳೆಗಳನ್ನು ಮುರಿದು ಪ್ರಯೋಗಾತ್ಮಕ ಚಿತ್ರ ಎನಿಸಿಕೊಂಡಿತ್ತು.

ಹಿಟ್‌ ಚಿತ್ರ

ಒಬ್ಬ ನಿರ್ದೇಶಕ ಹಾಗೂ ನಾಯಕಿಯ ನಡುವಿನ ಪ್ರೇಮಕಥೆಯನ್ನೆ ಈ ಚಿತ್ರ ಆಧರಿಸಿತ್ತು. ಆದರೆ ಅದನ್ನೇ ಉಪೇಂದ್ರ ವಿಭಿನ್ನವಾಗಿ ತೆರೆ ಮೇಲೆ ತಂದಿದ್ದರು. ಎಲ್ಲವನ್ನೂ ರಿವರ್ಸ್ ಸ್ಕ್ರೀನ್ ಪ್ಲೇಯಲ್ಲಿ ಉಪೇಂದ್ರ ಹೇಳಿದ್ದರು. ಈ ಪ್ರಯೋಗವನ್ನು ವೀಕ್ಷಕರೂ ಮೆಚ್ಚಿಕೊಂಡಿದ್ದರು. ಆ ಮೂಲಕ ಉಪೇಂದ್ರ ಎಂಬ ನಿರ್ದೇಶಕ ಮತ್ತು ನಟ ಗೆಲುವು ಸಾಧಿಸಿದ್ದರು. ಪರಿಣಾಮ ಸೂಪರ್‌ ಚಿತ್ರ ಹಿಟ್‌ ಆಗಿತ್ತು. ಜತೆಗೆ ಸಂಭಾಷಣೆಯೂ ಮೆಚ್ಚುಗೆ ಗಳಿಸಿತ್ತು.

ಮೋಡಿ ಮಾಡಿದ ಸಂಗೀತ

ಚಿತ್ರದ ಯಶಸ್ಸಿನಲ್ಲಿ ಸಂಗೀತದ ಪಾತ್ರವೂ ಮುಖ್ಯವಾಗಿತ್ತು. ಸಿನಿಮಾದ ಹಾಡುಗಳು ಇಂದಿಗೂ ಜನಪ್ರಿಯ. ವಿಶೇಷ ಎಂದರೆ ಗುರು ಕಿರಣ್‌ ʼಎʼ ಸಿನಿಮಾದ ಮೂಲಕ ಮೊದಲ ಬಾರಿ ಸಂಗೀತ ಸಂಯೋಜನೆ ಮಾಡಿದ್ದರು. ಮೊದಲ ಸಿನಿಮಾದಲ್ಲೇ ಸಿಕ್ಸರ್‌ ಭಾರಿಸಿದ್ದರು. ʼಸುಮ್‌ ಸುಮ್ನೆʼ, ʼಚಾಂದಿನಿʼ, ʼಹೇಳ್‌ಕೊಳ್ಳೊಕೆ ಒಂದೂರುʼ, ʼಇದು ಒನ್‌ ಡೇ ಮ್ಯಾಚ್‌ʼ, ʼಮಾರಿ ಕಣ್ಣುʼ ಹೀಗೆ ಸಿನಿಮಾದ ಎಲ್ಲ ಹಾಡುಗಳೂ ಹಿಟ್‌ ಆಗಿದ್ದವು. ಇಂದಿಗೂ ಈ ಹಾಡುಗಳನ್ನು ಸಿನಿ ಪ್ರೇಮಿಗಳು ಗುನುಗುತ್ತಿರುತ್ತಾರೆ. ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಸಿನಿಮಾ ಸುಮಾರು 20 ಕೋಟಿ ರೂ. ಗಳಿಸಿತ್ತು ಎನ್ನಲಾಗಿದೆ.

ಮರು ಬಿಡುಗಡೆ ಯಾಕೆ?

ಚುನಾವಣೆ, ಐಪಿಎಲ್‌ ಮುಂತಾದ ಕಾರಣಕ್ಕೆ ದೊಡ್ಡ ಸಿನಿಮಾಗಳು ಈಗ ರಿಲೀಸ್‌ ಆಗುತ್ತಿಲ್ಲ. ಅಲ್ಲದೆ ಈಗಲೂ ಈ ಚಿತ್ರಕ್ಕೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಲ್ಲದೆ ಇತ್ತೀಚೆಗೆ ರಿ-ರಿಲೀಸ್‌ ಆಗಿದ್ದ ಪುನೀತ್‌ ರಾಜ್‌ ಕುಮಾರ್‌ ಅವರ ʼಜಾಕಿʼ, ʼಅಂಜನಿಪುತ್ರʼ ಮತ್ತು ʼಪವರ್‌ʼ ಸಿನಿಮಾಗಳು ಹಿಟ್‌ ಆಗಿದ್ದವು. ಈ ಎಲ್ಲ ಕಾರಣಗಳಿಂದ ʼಎʼ ಚಿತ್ರವನ್ನು ಮತ್ತೆ ತೆರೆಗೆ ತರಲು ಉಪೇಂದ್ರ ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಯಾವಾಗ ರಿ-ರಿಲೀಸ್‌ ಎನ್ನುವುದನ್ನು ಇನ್ನೂ ಘೋಷಿಸಿಲ್ಲ.

ಈ ಮಧ್ಯೆ ಹಲವು ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನಕ್ಕೆ ಇಳಿದಿರುವ ʼಯುಐʼ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಚಿತ್ರದ ʼಟ್ರೋಲ್‌ ಆಗುತ್ತೆʼ ಹಾಡು ಸೂಪರ್‌ ಹಿಟ್‌ ಆಗಿದ್ದು, ಸಿನಿಮಾ ರಿಲೀಸ್‌ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿಯೂ ʼಯುಐʼ ತೆರೆಗೆ ಬರಲಿದೆ.

ಇದನ್ನೂ ಓದಿ: UI Cinema: ʼಯುಐʼ ಚಿತ್ರದ ಹಾಡಿನ ಪ್ರೋಮೊ ಔಟ್‌; ಮತ್ತೊಮ್ಮೆ ಪ್ರೇಕ್ಷಕರ ಮೆದುಳಿಗೆ ಕೆಲಸ ಕೊಟ್ಟ ಉಪೇಂದ್ರ

Continue Reading

ಕಿರುತೆರೆ

Jyoti Rai: ನೋವಿನ ನಡುವೆಯೂ ಸಹಾಯ ಹಸ್ತ ಚಾಚಿದ ನಟಿ ಜ್ಯೋತಿ ರೈ; ವಿಡಿಯೊ ವೈರಲ್‌ ಮಾಡುವಂತೆ ಸವಾಲು ಹಾಕಿದ್ದೇಕೆ?

Jyoti Rai: ಸದ್ಯ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ನಕಲಿ ಅಶ್ಲೀಲ ವಿಡಿಯೊ ವೈರಲ್‌ ಆಗಿದೆ. ಈ ಬಗ್ಗೆ ನಟಿ ಸೈಬರ್‌ ಪೊಲೀಸರಿಗೆ ದೂರನ್ನೂ ನೀಡಿದ್ದಾರೆ. ಈ ಘಟನೆಯಿಂದ ತೀವ್ರವಾಗಿ ನೊಂದುಕೊಂಡಿರುವ ಅವರು ಇದೀಗ ನೋವಿನ ನಡುವೆಯೂ ಹಿರಿಯ ಗಾಯಕ ಮೊಗಿಲಯ್ಯ ಅವರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಮಾದರಿಯಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ಮೊಗಿಲಯ್ಯ ಅವರಿಗೆ ಜ್ಯೋತಿ ರೈ ಅವರು ಅಕ್ಷಯ ತೃತೀಯದಂದು 50 ಸಾವಿರ ರೂ. ಧನ ಸಹಾಯ ಮಾಡಿದ್ದಾರೆ.

VISTARANEWS.COM


on

Jyoti Rai
Koo

ಹೈದರಾಬಾದ್‌: ಸದ್ಯ ಕಿರುತೆರೆ ನಟಿ, ಬಹುಭಾಷಾ ಕಲಾವಿದೆ, ಕನ್ನಡ ಮೂಲದ ಜ್ಯೋತಿ ರೈ (Jyoti Rai) ಕುರಿತಾದ ಸುದ್ದಿ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜ್ಯೋತಿ ರೈ ಅವರದ್ದು ಎನ್ನಲಾಗುತ್ತಿರುವ ಅಶ್ಲೀಲ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವುದೇ ಇದಕ್ಕೆ ಕಾರಣ. ಈ ಪ್ರಕರಣದಿಂದ ಆಘಾತಕ್ಕೊಳಗಾದ ಅವರು ತೀವ್ರ ಬೇಸರದ ನಡುವೆಯೂ ಜನಪದ ಗಾಯಕರೊಬ್ಬರಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾದರಿಯಾಗಿದ್ದಾರೆ.

ತೆಲುಗಿನ ಜನಪ್ರಿಯ ಜನಪದ ಗಾಯಕ ಪದ್ಮಶ್ರೀ ಪ್ರಶಸ್ತಿ ವಿಜೇತ ಮೊಗಿಲಯ್ಯ (Darshanam Mogilaiah) ತೀವ್ರ ಬಡತನದಲ್ಲಿದ್ದು, ಜೀವನ ನಿರ್ವಹಣೆಗಾಗಿ ಗಾರೆ ಕೆಲಸ ಮಾಡುತ್ತಿದ್ದರು. ಅವರು ಗಾರೆ ಕೆಲಸ ಮಾಡುತ್ತಿರುವ ಚಿತ್ರಗಳು, ವಿಡಿಯೊ ವೈರಲ್ ಆಗಿತ್ತು. ಹೀಗಾಗಿ ತನ್ನ ನೋವನ್ನು ನುಂಗಿ ಜ್ಯೋತಿ ರೈ ಅವರು ಈ ಹಿರಿಯ ಕಲಾವಿದರ ನೆರವಿಗೆ ಧಾವಿಸಿದ್ದಾರೆ.

ಧನ ಸಹಾಯ

ಅಕ್ಷಯ ತೃತೀಯ ದಿನ (ಶುಕ್ರವಾರ)ದಂದು ಜ್ಯೋತಿ ರೈ ಅವರು ಮೊಗಿಲಯ್ಯ ಅವರಿಗೆ 50 ಸಾವಿರ ರೂ. ಧನ ಸಹಾಯ ನೀಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ʼʼಅಕ್ಷಯ ತೃತೀಯದ ಪುಣ್ಯ ದಿನದಂದು ಪದ್ಮಶ್ರೀ ಮೊಗಿಲಯ್ಯ ಅವರಿಗೆ ನಾನು 50 ಸಾವಿರ ರೂ.ಗಳ ಆರ್ಥಿಕ ನೆರವನ್ನು ನೀಡಿದೆ. ಮೊಗಿಲಯ್ಯ ಅಷ್ಟು ಜನಪ್ರಿಯರಾಗಿದ್ದರೂ ತಮ್ಮ ಖಾಸಗಿ ಜೀವನ ಹಾಗೂ ವೃತ್ತಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅವರು ನಡೆಸಿದ ಸುದ್ದಿಗೋಷ್ಠಿಯಿಂದಾಗಿ ಅವರ ಕಷ್ಟಗಳು ನನಗೆ ತಿಳಿದು ಬಂತುʼʼ ಎಂದು ಜ್ಯೋತಿ ರೈ ಹೇಳಿದ್ದಾರೆ.

ಮುಂದುವರಿದು, ʼʼಸದ್ಯಕ್ಕೆ ನಾನು ಸಹ ಕಷ್ಟದ ದಿನಗಳನ್ನು ಕಳೆಯುತ್ತಿದ್ದೇನೆ. ಆದರೆ ಅವರ ಕಷ್ಟ ಕೇಳಿದಾಗ ನನ್ನೊಳಗೆ ಮೂಡಿದ ಬೆಳಕು, ಮೊಗಿಲಯ್ಯ ಅವರನ್ನು ಭೇಟಿಯಾಗಿ ಸಹಾಯ ಮಾಡಲು ಪ್ರೇರೇಪಿಸಿತು. ಹೀಗಾಗಿ ಅವರಿಗೆ ಸಹಾಯ ಮಾಡಿದೆ. ಅವರಿಗೆ ಇನ್ನಷ್ಟು ಸಹಾಯ ಮಾಡುವ ಆಸೆಯಿದೆ. ನನ್ನಿಂದ ಸಾಧ್ಯವಾಗಿದ್ದನ್ನು ನಾನು ಮಾಡಿದ್ದೇನೆ. ಇನ್ಯಾರಿಗಾದರೂ ಮೊಗಿಲಯ್ಯ ಅವರಿಗೆ ಸಹಾಯ ಮಾಡುವ ಇಚ್ಛೆಯಿದ್ದರೆ ಬನ್ನಿ ಎಲ್ಲರೂ ಒಟ್ಟು ಸೇರಿ ನೆರವಾಗೋಣʼʼ ಎಂದು ಕರೆ ನೀಡಿದ್ದಾರೆ.

ಸವಾಲು

ಇದರ ಜತೆಗೆ ತಮ್ಮದು ಎನ್ನಲಾದ ನಕಲಿ ವಿಡಿಯೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಗಳಿಗೆ ಸವಾಲು ಹಾಕಿದ್ದಾರೆ. ʼʼಈ ವಿಡಿಯೊ (ಮೊಗಿಲಯ್ಯ ಅವರಿಗೆ ಆರ್ಥಿಕ ನೆರವು ನೀಡುತ್ತಿರುವ ವಿಡಿಯೊ)ವನ್ನು ವೈರಲ್‌ ಮಾಡುವ ತಾಕತ್ತು ನಿಮ್ಮಲ್ಲಿ ಇದೆಯಾ? ಇದು ನಿಜವಾದುದು. ಈ ಕೆಳಗಿನ ಸಾಲುಗಳು ಕೆಲಸ ಇಲ್ಲದವರಿಗೆ, ಬುದ್ಧಿ ಇಲ್ಲದವರಿಗಾಗಿ. ಜಗತ್ತು ನನ್ನೆಡೆಗೆ ಅಂಧಕಾರವನ್ನು ದೂಡಿದಾಗ ನನ್ನೊಳಗಿನ ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ನನ್ನೊಳಗಿನ ಬೆಳಕು ಉರಿಯಲು ಇಂತಹ ಕತ್ತಲೇ ಇಂಧನ. ನಿರಾಶಾವಾದದ ಬೂದಿಯಿಂದ ಸಾಧ್ಯತೆಯ ಫೀನಿಕ್ಸ್ ಏಳುತ್ತದೆ. ನಕಾರಾತ್ಮಕ ಶಕ್ತಿಯು ಮೆಟ್ಟಿಲು; ನಾನು ಅದರ ಮೇಲೆ ಹತ್ತಿ ಸಕಾರಾತ್ಮಕತೆಯ ದಿಗಂತದ ಕಡೆಗೆ ಸಾಗುತ್ತೇನೆʼʼ ಎಂದು ಜ್ಯೋತಿ ರೈ ಬರೆದುಕೊಂಡಿದ್ದಾರೆ. ಸದ್ಯ ಅವರ ಈ ಪೋಸ್ಟ್‌ ವೈರಲ್‌ ಆಗಿದೆ. ಅಭಿಮಾನಿಗಳು ಅವರ ಈ ದಿಟ್ಟತನವನ್ನು, ಮಾನವೀಯತೆಯ ಗುಣವನ್ನು ಮೆಚ್ಚಿದ್ದಾರೆ.

ಇದನ್ನೂ ಓದಿ: Jyothi Rai: ಯುಟ್ಯೂಬ್‌ ಸಬ್‌ಸ್ಕ್ರೈಬ್‌ ಮಾಡಿದ್ರೆ ಜ್ಯೋತಿ ರೈ ವಿಡಿಯೊ ಅಪ್‌ಲೋಡ್‌ ಮಾಡ್ತೀನಿ ಎಂದ ಕಿಡಿಗೇಡಿ!

ಇತ್ತೀಚೆಗೆ ಜ್ಯೋತಿ ರೈ ಅವರದ್ದು ಎನ್ನಲಾದ ಮೂರು ಅಶ್ಲೀಲ ವಿಡಿಯೊ ಹಾಗೂ ಕೆಲವು ಫೋಟೊಗಳು ವೈರಲ್ ಆಗಿದ್ದವು. ಬಳಿಕ ನಟಿ ಈ ಬಗ್ಗೆ ಸುದೀರ್ಘವಾಗಿ ಪತ್ರವನ್ನು ಬರೆದು ಸ್ಪಷ್ಟನೆ ನೀಡಿದ್ದರು. ʻʻನಾನು ಅಪರಿಚಿತ ವ್ಯಕ್ತಿಗಳಿಂದ ಕೆಲವು ಸಂದೇಶಗಳನ್ನು ಸ್ವೀಕರಿಸಿ ಆಘಾತಕ್ಕೆ ಒಳಗಾಗಿದ್ದೇನೆ. ಇಂತಹ ವ್ಯಕ್ತಿಗಳ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಕುಟುಂಬದ ಪ್ರತಿಷ್ಠೆ ಅಪಾಯದಲ್ಲಿದೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ, ಸರಿ ಮಾಡಲು ಸಾಧ್ಯವಾದಂತಹ ಡ್ಯಾಮೇಜ್ ಆಗಲಿದೆ. ನಿಮ್ಮ ತನಿಖೆಗೆ ಅನುಕೂಲವಾಗುವಂತೆ ಯೂಸರ್ ಐಡಿಗಳನ್ನು ಪೋಸ್ಟ್‌ ಮಾಡಿದ್ದೇನೆʼʼ ಎಂದು ಹೇಳಿಕೊಂಡಿದ್ದರು. ಜತೆಗೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಹ ನೀಡಿದ್ದರು.

Continue Reading

ಪ್ರಮುಖ ಸುದ್ದಿ

Mr. & Mrs. Mahi : ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ನಟನೆಯ ಮಿಸ್ಟರ್& ಮಿಸೆಸ್​ ಮಹಿ’ ಬಿಡುಗಡೆ ದಿನಾಂಕ ಪ್ರಕಟ

Mr. & Mrs. Mahi: ಭಾರತವು ಕ್ರಿಕೆಟ್ ಅನ್ನು ಆರಾಧಿಸುವ ರಾಷ್ಟ್ರವಾಗಿದೆ,. ಕ್ರೀಡಾ ಅಭಿಮಾನಿಗಳಿಗೆ ಕ್ರಿಕೆಟ್ ಧರ್ಮಕ್ಕಿಂತ ಹೆಚ್ಚು. ಎಲ್ಲಾ ವಯಸ್ಸಿನ ಜನರು ವ್ಯಾಪಕವಾಗಿ ಅನುಸರಿಸುವ ಮತ್ತು ಪ್ರೀತಿಸುವ ಕ್ರೀಡೆಯಾಗಿದೆ. ಹೀಗಾಗಿ ಸಿನಿಮಾ ನಿರ್ಮಾಕರು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿ ಬಾಲಿವುಡ್ ನಿರ್ದೇಶಕ ಶರಣ್ ಶರ್ಮಾ ಅವರು ನಟರಾದ ಜಾನ್ವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಕ್ರಿಕೆಟ್ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.

VISTARANEWS.COM


on

Mr. & Mrs. Mahi'
Koo

ಬೆಂಗಳೂರು: ಕ್ರಿಕೆಟ್​ ಭಾರತದಲ್ಲಿ ಒಂದು ಧರ್ಮ. ಎಲ್ಲರೂ ಒಂದಾಗುವ ಅಪರೂಪದ ಕ್ರೀಡೆ. ಅಂತೆಯೇ ಕ್ರಿಕೆಟ್​ ಮತ್ತು ಸಿನಿಮಾ ಕ್ಷೇತ್ರಕ್ಕೆ ಬಿಡಿಸಲಾಗದ ನಟು. ಹೀಗಾಗಿ ಬಾಲಿವುಡ್​ ಸೇರಿದಂತೆ ನಾನಾ ಭಾಷೆಗಳ ಸಿನಿ ಇಂಡಸ್ಟ್ರಿಯಲ್ಲಿ ಕ್ರಿಕೆಟ್​ ಆಧಾರವಾಗಿಟ್ಟುಕೊಂಡು ಹಲವಾರು ಸಿನಿಮಾಗಳನ್ನು ತೆಗೆಯಲಾಗಿದೆ. ಅವುಗಳಲ್ಲಿ ಬಹುತೇಕ ಸಿನಿಮಾಗಳು ಸಕ್ಸೆಸ್​ ಆಗಿವೆ. ಅಂತೆಯೇ ಕ್ರಿಕೆಟ್ ಕತೆಯನ್ನೇ ಮೂಲವಾಗಿಟ್ಟುಕೊಂಡಿರುವ ‘ಮಿಸ್ಟರ್ ಅಂಡ್ ಮಿಸೆಸ್ ಮಹಿ’ (Mr. & Mrs. Mahi) ಸಿನಿಮಾವೊಂದು ರೆಡಿಯಾಗುತ್ತಿದೆ. ಆ ಸಿನಿಮಾದಲ್ಲಿ ಬಾಲಿವುಡ್​ ಬ್ಯೂಟಿ ಜಾಹ್ನವಿ ಕಪೂರ್​ ಹಾಗೂ ಪ್ರತಿಭಾವಂತ ನಟ ರಾಜ್​ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

ಭಾರತವು ಕ್ರಿಕೆಟ್ ಅನ್ನು ಆರಾಧಿಸುವ ರಾಷ್ಟ್ರವಾಗಿದೆ,. ಕ್ರೀಡಾ ಅಭಿಮಾನಿಗಳಿಗೆ ಕ್ರಿಕೆಟ್ ಧರ್ಮಕ್ಕಿಂತ ಹೆಚ್ಚು. ಎಲ್ಲಾ ವಯಸ್ಸಿನ ಜನರು ವ್ಯಾಪಕವಾಗಿ ಅನುಸರಿಸುವ ಮತ್ತು ಪ್ರೀತಿಸುವ ಕ್ರೀಡೆಯಾಗಿದೆ. ಹೀಗಾಗಿ ಸಿನಿಮಾ ನಿರ್ಮಾಕರು ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅದೇ ರೀತಿ ಬಾಲಿವುಡ್ ನಿರ್ದೇಶಕ ಶರಣ್ ಶರ್ಮಾ ಅವರು ನಟರಾದ ಜಾನ್ವಿ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಕ್ರಿಕೆಟ್ ಆಧಾರಿತ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.

‘ಮಿಸ್ಟರ್ ಅಂಡ್ ಮಿಸೆಸ್ ಮಹಿ’ ಎಂಬ ಶೀರ್ಷಿಕೆಯ ಈ ಚಲನಚಿತ್ರವು ಕ್ರಿಕೆಟ್ ಕ್ರೀಡೆಯ ಮೇಲಿನ ತಮ್ಮ ಪ್ರೀತಿಯನ್ನು ಅರಸುತ್ತಾ ಹಲವಾರು ಸವಾಲುಗಳು ಮತ್ತು ಅಡೆತಡೆಗಳ ಮೂಲಕ ಎದುರಿಸುವ ಸುಂದರ ಜೋಡಿಯೊಂದರ ಸುತ್ತ ಸುತ್ತುತ್ತದೆ.

ಚಿತ್ರದ ಟ್ರೈಲರ್ ಇನ್ನೂ ಬಿಡುಗಡೆಯಾಗದಿದ್ದರೂ, ಪ್ರಮುಖ ನಟಿ ಜಾಹ್ನವಿ ಕಪೂರ್ ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನು ಅನಾವರಣಗೊಳಿಸಿದ್ದಾರೆ. ‘ಮಿಸ್ಟರ್ ಅಂಡ್ ಮಿಸೆಸ್ ಮಹಿ’ 2024 ರ ಟಿ 20 ವಿಶ್ವಕಪ್ ಪ್ರಾರಂಭವಾಗುವ ಕೇವಲ 24 ಗಂಟೆಗಳ ಮೊದಲು ಮೇ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: IPL 2024 : ಐಪಿಎಲ್​ನಲ್ಲಿ ಹೊಸ ಇತಿಹಾಸ; ಸಚಿನ್​ ದಾಖಲೆ ಮುರಿದ ಸಾಯಿ ಸುದರ್ಶನ್​

ಈ ಯೋಜನೆಯ ಸುತ್ತ ತಿಂಗಳುಗಳ ಊಹಾಪೋಹಗಳಿವೆ. ಏತನ್ಮಧ್ಯೆ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಅಭಿಮಾನಿಗಳು ಅಂತಿಮವಾಗಿ ದೊಡ್ಡ ಪರದೆಯ ಮೇಲೆ ಜಾಹ್ನವಿ ಕಪೂರ್ ಅಭಿನಯ ನೋಡಲು ಕಾತರರಾಗಿದ್ದಾರೆ. ಅವರೆಲ್ಲರೂ ಅದಕ್ಕಾಗಿ ಕಾಯುತ್ತಿದ್ದಾರೆ.

ಇತ್ತೀಚೆಗೆ, ಜಾಹ್ನವಿ ಕಪೂರ್ ತಮ್ಮ ಮುಂಬರುವ ಚಿತ್ರದ ಪ್ರಚಾರದ ಕಾರಣಕ್ಕಾಗಿ ಈ ತಿಂಗಳ ಆರಂಭದಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್​​ ಪಂದ್ಯವನ್ನು ವೀಕ್ಷಿಸಿದ್ದರು.

ಎಲ್ಲವೂ ಗುಟ್ಟು

ಅಂದ ಹಾಗೆ ಸಿನಿಮಾದ ಬಗ್ಗೆ ಯಾರಿಗೂ ಹೆಚ್ಚಿನ ಮಾಹಿತಿ ಇಲ್ಲ. ಈ ಸಿನಿಮಾ ಧೋನಿಯ ಕತೆಯನ್ನು ಆಧರಿಸಿದ್ದು ಎಂದು ಎಂದು ಹೇಳಲಾಗುತ್ತಿದೆ. ಹೆಸರನ್ನು ಹೇಳುವಾಗ ಮಹೇಂದ್ರ ಸಿಂಗ್ ಧೋನಿಗೆ ಸಂಬಂಧಿಸಿದ ಕತೆ ಎಂದು ಹೇಳಲಾಗುತ್ತಿದೆ. ಆದರೆ, ಅದರ ಬಗ್ಗೆ ಖಚಿತತೆ ಇಲ್ಲ. ಆದರೆ, ಕ್ರಿಕೆಟ್​ ಆಧಾರಿತ ಸಿನಿಮಾ ಎಂಬುದು ಖಾತರಿ. ಹೀಗಾಗಿ ಸಿನಿ ಪ್ರೇಮಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳನ್ನು ಏಕಕಾಲಕ್ಕೆ ಸೆಳೆಯುವ ಉದ್ದೇಶವನ್ನು ನಿರ್ದೇಶಕರು ಹೊಂದಿದ್ದಾರೆ.

Continue Reading
Advertisement
IPL 2024
ಪ್ರಮುಖ ಸುದ್ದಿ11 mins ago

IPL 2024 : ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ತಂಡದ ನಾಯಕ ಬದಲು; ಮಾಹಿತಿ ಬಹಿರಂಗ

7th Pay Commission
ನೌಕರರ ಕಾರ್ನರ್1 hour ago

7th Pay Commission: 7ನೇ ವೇತನ ಆಯೋಗ; ವರದಿ ಜಾರಿಯಾದ್ರೆ ರಾಜ್ಯ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಲಿದೆ?

James Anderson
ಪ್ರಮುಖ ಸುದ್ದಿ1 hour ago

James Anderson : ಕೋಚ್ ಒತ್ತಡಕ್ಕೆ ಮಣಿದು ನಿವೃತ್ತಿ ಘೋಷಿಸಿದ ಇಂಗ್ಲೆಂಡ್​ ತಂಡ ವೇಗದ ಬೌಲರ್​

Sleeping tips
ಆರೋಗ್ಯ1 hour ago

Sleeping Tips: ನಿಮಗೆ ರಾತ್ರಿ ನಿದ್ದೆ ಬರುತ್ತಿಲ್ಲವೆ? ಮಲಗುವ ಮುನ್ನ ಈ ಪೇಯಗಳನ್ನು ಕುಡಿಯಿರಿ!

Lok Sabha Election
ದೇಶ1 hour ago

Lok Sabha Election: 3ನೇ ಹಂತದಲ್ಲಿ 65% ಮತದಾನ; ಕರ್ನಾಟಕದಲ್ಲಿ ಶೇ.71.84ರಷ್ಟು ಹಕ್ಕು ಚಲಾವಣೆ

Babar Azam
ಪ್ರಮುಖ ಸುದ್ದಿ2 hours ago

Babar Azam : ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಪಾಕ್​ ನಾಯಕ ಅಜಮ್​

Money Guide
ಮನಿ-ಗೈಡ್2 hours ago

Money Guide: ಮಹಿಳಾ ಸಮ್ಮಾನ್‌ ಸರ್ಟಿಫಿಕೆಟ್‌: ಈ ಅಮ್ಮಂದಿರ ದಿನ ನೀವು ನೀಡಬಹುದಾದ ಅತ್ಯುತ್ತಮ ಉಡುಗೊರೆ

Karnataka rain
ಮಳೆ2 hours ago

Karnataka Rain: ಶನಿವಾರ ಸಂಜೆ ಅಬ್ಬರಿಸಿದ ಗಾಳಿ ಮಳೆಗೆ ತೊಯ್ದು ತೊಪ್ಪೆಯಾದ ಮಂದಿ; ರಸ್ತೆಗೆ ಬಿದ್ದ ಮರಗಳು

IPL 2024
ಕ್ರೀಡೆ2 hours ago

IPL 2024 : ಗೆಲುವಿನ ನಡುವೆಯೂ ಬೇಸರ; ಶುಭ್​ಮನ್ ಗಿಲ್​ಗೆ 24 ಲಕ್ಷ ರೂಪಾಯಿ ದಂಡ

Arvind Kejriwal
ದೇಶ2 hours ago

ಮೋದಿಯಿಂದ ಯೋಗಿ ಆದಿತ್ಯನಾಥ್‌ ರಾಜಕೀಯ ಜೀವನ ಶೀಘ್ರದಲ್ಲೇ ಖತಂ; ಕೇಜ್ರಿವಾಲ್‌ ಸ್ಫೋಟಕ ಭವಿಷ್ಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bengaluru News
ಬೆಂಗಳೂರು4 hours ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ14 hours ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ1 day ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ1 day ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ1 day ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ2 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ2 days ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ2 days ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ2 days ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ2 days ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

ಟ್ರೆಂಡಿಂಗ್‌