Money Guide: ಎನ್‌ಪಿಎಸ್‌ನಿಂದ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ವರೆಗೆ; ಇಂದಿನಿಂದ ಬದಲಾಗುತ್ತವೆ ಈ ಎಲ್ಲ ನಿಯಮಗಳು - Vistara News

ಮನಿ-ಗೈಡ್

Money Guide: ಎನ್‌ಪಿಎಸ್‌ನಿಂದ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ವರೆಗೆ; ಇಂದಿನಿಂದ ಬದಲಾಗುತ್ತವೆ ಈ ಎಲ್ಲ ನಿಯಮಗಳು

Money Guide: ಇಂದಿನಿಂದ (ಏಪ್ರಿಲ್ 1) ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಸಹಜವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೆಲವು ಹಣಕಾಸಿನ ನಿಯಮಗಳಲ್ಲಿ ಬದಲಾವಣೆ ಕಂಡು ಬರಲಿದೆ. ಎನ್​ಪಿಎಸ್, ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌, ಯೆಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌, ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌, ಓಲಾ ಮನಿ ವ್ಯಾಲೆಟ್, ಇಪಿಎಫ್‌ಒ, ಎಸ್‌ಬಿಐ ಅಮೃತ್‌ ಕಲಶ್‌ ವಿಶೇಷ ಎಫ್‌ಡಿ ನಿಯಮಗಳಲ್ಲಿ ಬದಲಾವಣೆ ಕಂಡು ಬರಲಿದೆ. ಅವು ಯಾವುವು ಎನ್ನುವ ವಿವರ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

money guide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 2024-2025ರ ಹಣಕಾಸು ವರ್ಷವು (Financial Year) ಇಂದಿನಿಂದ (ಏಪ್ರಿಲ್ 1) ಪ್ರಾರಂಭವಾಗಲಿದ್ದು, ಸಹಜವಾಗಿ ಹಣಕಾಸಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೆಲವು ಬದಲಾವಣೆಗಳು ಜಾರಿಗೆ ಬರಲಿವೆ. ಈ ಬದಲಾವಣೆಗಳು ಹಣವನ್ನು ಖರ್ಚು ಮಾಡುವ ಅಥವಾ ಉಳಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಈ ಬದಲಾವಣೆ ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದು ತಿಳಿದುಕೊಳ್ಳುವುದು ಮುಖ್ಯ. ಆ ಬಗೆಗಿನ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಎನ್​ಪಿಎಸ್  (NPS)

ಹೆಚ್ಚಿನ ಭದ್ರತೆ ಒದಗಿಸಲು ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಚಂದಾದಾರರ ಹಿತಾಸಕ್ತಿಗಳನ್ನು ಕಾಪಾಡಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು ಹೆಚ್ಚು ಸುರಕ್ಷಿತವಾದ ವಿಧಾನವನ್ನು ಘೋಷಿಸಿದೆ. ಇದಕ್ಕಾಗಿ ಎರಡು ಅಂಶಗಳ ಆಧಾರ್ ದೃಢೀಕರಣ(ಅಥೆಂಟಿಕೇಷನ್‌)ವನ್ನು ಪರಿಚಯಿಸಿದೆ. ಇನ್ನು ಮುಂದೆ ಪಾಸ್‌ವರ್ಡ್‌ನೊಂದಿಗೆ ಆಧಾರ್ ದೃಢೀಕರಣವನ್ನೂ ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗುತ್ತದೆ. ಇದರಿಂದ ಅನಧಿಕೃತ ಎನ್‌ಪಿಎಸ್‌ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ನಿಯಮ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ.

ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ (SBI credit card)

ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್‌ಗಳ ಲೆಕ್ಕಾಚಾರ ಪ್ರಕ್ರಿಯೆಯಲ್ಲಿ ಏಪ್ರಿಲ್‌ 1ರಿಂದ ಬದಲಾವಣೆಗಳನ್ನು ಘೋಷಿಸಿದೆ. ಅದರಂತೆ ಕೆಲವು ವಿಶೇಷ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಕ್ರೆಡಿಟ್ ಕಾರ್ಡ್‌ಗಳ ಮೂಲಕ ದರ ಪಾವತಿಗಳನ್ನು ಮಾಡುವಾಗ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದಿಲ್ಲ.  ಈ ಬದಲಾವಣೆಯು ಔರಮ್, ಎಸ್ಬಿಐ ಕಾರ್ಡ್ ಎಲೈಟ್, ಎಸ್ಬಿಐ ಕಾರ್ಡ್ ಎಲೈಟ್ ಅಡ್ವಾಂಟೇಜ್, ಎಸ್‌ಬಿಐ ಕಾರ್ಡ್ ಪಲ್ಸ್ ಮತ್ತು ಸಿಂಪ್ಲಿಕ್ಲಿಕ್ ಎಸ್‌ಬಿಐ ಕಾರ್ಡ್‌ಗಳಿಗೆ (AURUM, SBI Card Elite, SBI Card Elite Advantage, SBI Card Pulse, SimplyCLICK SBI Card) ಅನ್ವಯಿಸುತ್ತದೆ. ಇದುವರೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ದರ ಪಾವತಿ ಮಾಡುವವರಿಗೆ ರಿವಾರ್ಡ್ ಪಾಯಿಂಟ್ಸ್‌ ಸಿಗುತ್ತಿತ್ತು. ಇದುವರೆಗೆ ಗಳಿಸಿರುವ ರಿವಾರ್ಡ್ ಪಾಯಿಂಟ್‌ಗಳು 2024ರ ಏಪ್ರಿಲ್ 15ರ ನಂತರ ಮುಕ್ತಾಯಗೊಳ್ಳಲಿವೆ. ಅಂದರೆ ರಿವಾರ್ಡ್ ಪಾಯಿಂಟ್ಸ್‌ ಪಡೆದಿದ್ದರೆ ಈ ಅವಧಿಯೊಳಗೆ ಬಳಸಿಕೊಳ್ಳಬೇಕು. 

ಯೆಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ (YES Bank credit card)

ಹೊಸ ಹಣಕಾಸು ವರ್ಷದಲ್ಲಿ 10,000 ರೂ. ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡುವ ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ದಾರರು ಕಾಂಪ್ಲಿಮೆಂಟರಿಯಾಗಿ ದೇಶೀಯ ಲಾಂಜ್ (Domestic lounge) ಪ್ರವೇಶದ ಸೌಲಭ್ಯ ಪಡೆಯಲಿದ್ದಾರೆ.

ಐಸಿಐಸಿಐ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ (ICICI Bank credit card)

ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ನೆರವಾಗಲು ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಕೆಲವು ಬದಲಾವಣೆಗಳನ್ನು ಮಾಡಿದೆ. 35,000 ರೂ. ವ್ಯಯಿಸಿದರೆ ನೀವು ಒಂದು ಪೂರಕ ಏರ್‌ಪೋರ್ಟ್ ಲಾಂಜ್ ಪ್ರವೇಶ ಪಡೆಯಬಹುದು.

ಓಲಾ ಮನಿ ವ್ಯಾಲೆಟ್ (OLA Money wallet)

ಓಲಾ ಮನಿ ಕಿರು ಪಿಪಿಐ (Prepaid Payment Instrument) ವ್ಯಾಲೆಟ್ ಸೇವೆಗಳನ್ನು ಒದಗಿಸುವುದಾಗಿ ಈಗಾಗಲೇ ಘೋಷಿಸಿದೆ. ಇದು ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ. ಓಲಾ ಮನಿ ವ್ಯಾಲೆಟ್‌ಗೆ ತಿಂಗಳಿಗೆ 10,000 ರೂ. ಸೇರಿಸುವ ಮಿತಿ ಅನ್ವಯವಾಗಲಿದೆ. ಮಾರ್ಚ್ 22ರಂದು ಎಸ್ಎಂಎಸ್ ಮೂಲಕ ಗ್ರಾಹಕರಿಗೆ ಈ ಬದಲಾವಣೆಯ ಬಗ್ಗೆ ತಿಳಿಸಲಾಗಿದೆ.

ಇಪಿಎಫ್‌ಒ (EPFO)

ಹೊಸ ಹಣಕಾಸು ವರ್ಷದ ಆರಂಭದ ದಿನ ನೌಕರರ ಭವಿಷ್ಯ ನಿಧಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ಅಂದರೆ ಏಪ್ರಿಲ್ 1ರಿಂದ ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ ನೀವು ಉದ್ಯೋಗವನ್ನು ಬದಲಾಯಿಸಿದರೆ, ನಿಮ್ಮ ಹಳೆಯ ಪಿಎಫ್ ಅಕೌಂಟ್‌ ಅನ್ನು ಅನ್ನು ಆಟೋ ಮೋಡ್‌ಗೆ ವರ್ಗಾಯಿಸಲಾಗುತ್ತದೆ. ಇದರಿಂದ ಉದ್ಯೋಗವನ್ನು ಬದಲಾಯಿಸಿದಾಗ ಪಿಎಫ್ ಮೊತ್ತವನ್ನು ವರ್ಗಾಯಿಸಲು ನೀವು ವಿನಂತಿಸುವ ಅಗತ್ಯವಿಲ್ಲ.

ಎಸ್‌ಬಿಐ ಅಮೃತ್‌ ಕಲಶ್‌ ವಿಶೇಷ ಎಫ್‌ಡಿ (SBI Amrit Kalash Deposit)

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐಯ ವಿಶೇಷ ಯೋಜನೆ ಅಮೃತ್‌ ಕಲಶ್‌ ಎಫ್‌ಡಿ ಡೆಪಾಸಿಟ್‌ ಸ್ಕೀಮ್‌ನ ಅವಧಿ ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ.‌ ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್‌ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಈಗಿನ ಆರೋಗ್ಯ ವಿಮಾ ಪಾಲಿಸಿ ಬಗ್ಗೆ ಸಮಾಧಾನ ಇಲ್ಲವೆ? ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಬಳಸಿ

Money Guide: ಕಾಯಿಲೆ ಬಂದಾಗ ಔಷಧ ಹುಡುಕುವುದಕ್ಕಿಂತ ಕಾಯಿಲೆಯೇ ಬರದಂತೆ ಮುಂಜಾಗ್ರತೆ ಹೊಂದುವುದು ಜಾಣತನ. ಅದೇ ರೀತಿ ಕಾಯಿಲೆ ಬಂದಾಗ ಇನ್ಶೂರೆನ್ಸ್‌ ಮಾಡಿಸುವುದಕ್ಕಿಂತ ಮೊದಲೇ ಮಾಡಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ವಿವಿಧ ಕಂಪನಿಗಳು ಹಲವಾರು ವಿಶೇಷತೆಗಳನ್ನು ಒಳಗೊಂಡ ಆರೋಗ್ಯ ವಿಮೆಯನ್ನು ಪರಿಚಯಿಸಿವೆ. ಒಂದುವೇಳೆ ನೀವು ಈಗಾಗಲೇ ಖರೀದಿಸಿದ ಪಾಲಿಸಿಯಲ್ಲಿ ತೃಪ್ತರಾಗದಿದ್ದರೆ ಅದನ್ನು ಬದಲಾಯಿಸುವ ಆಯ್ಕೆ ಇದೆ. ಇದನ್ನೇ ಹೆಲ್ತ್ ಇನ್ಶೂರೆನ್ಸ್ ಪೋರ್ಟಬಿಲಿಟಿ ಎಂದು ಕರೆಯಲಾಗುತ್ತದೆ. ಈ ಯೋಜನೆ ಬಗೆಗಿನ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಯಾವುದೇ ಉದ್ಯೋಗವಿರಲಿ ಹೆಲ್ತ್‌ ಇನ್ಶೂರೆನ್ಸ್‌ (Health Insuranceಮಾಡಿಸುವುದು ಅತ್ಯಗತ್ಯ. ಯಾವಾಗ, ಯಾವ ರೀತಿಯ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಕಾಯಿಲೆ ಬಂದಾಗ ಔಷಧ ಹುಡುಕುವುದಕ್ಕಿಂತ ಕಾಯಿಲೆಯೇ ಬರದಂತೆ ಮುಂಜಾಗ್ರತೆ ಹೊಂದುವುದು ಜಾಣತನ. ಅದೇ ರೀತಿ ಕಾಯಿಲೆ ಬಂದಾಗ ಇನ್ಶೂರೆನ್ಸ್‌ ಮಾಡಿಸುವುದಕ್ಕಿಂತ ಮೊದಲೇ ಮಾಡಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ವಿವಿಧ ಕಂಪನಿಗಳು ಹಲವಾರು ವಿಶೇಷತೆಗಳನ್ನು ಒಳಗೊಂಡ ಆರೋಗ್ಯ ವಿಮೆಯನ್ನು ಪರಿಚಯಿಸಿವೆ. ಒಂದುವೇಳೆ ನೀವು ಈಗಾಗಲೇ ಖರೀದಿಸಿದ ಪಾಲಿಸಿಯಲ್ಲಿ ತೃಪ್ತರಾಗದಿದ್ದರೆ ಅದನ್ನು ಬದಲಾಯಿಸುವ ಆಯ್ಕೆ ಇದೆ. ಅಂದರೆ ನೀವು ನಿಮ್ಮ ಮೊಬೈಲ್‌ ನಂಬರ್‌ ಅನ್ನು ಬದಲಾಯಿಸದೆ ಸಿಮ್‌ ಕಂಪನಿಯನ್ನು ಬದಲಾಯಿಸುವಂತೆ ಆರೋಗ್ಯ ವಿಮೆಯನ್ನೂ ಬದಲಾಯಿಸಬಹುದು. ಆ ಕುರಿತಾದ ವಿವರ ಇಲ್ಲಿದೆ (Money Guide).

ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ (Health Insurance Portability)

ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ಆಯ್ಕೆಯ ಮತ್ತೊಂದು ಇನ್ಶೂರೆನ್ಸ್ ಕಂಪನಿಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಎನ್ನಲಾಗುತ್ತದೆ. ಈ ಆಯ್ಕೆಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (Insurance Regulatory and Development Authority of India) 2011ರಲ್ಲಿ ಪರಿಚಯಿಸಿದೆ. ನಿಮ್ಮ ಆರೋಗ್ಯ ವಿಮಾ ಪಾಲಿಸಿಯ ವೈಶಿಷ್ಟ್ಯಗಳು ಅಥವಾ ಪ್ರೀಮಿಯಂ ಬಗ್ಗೆ ನಿಮಗೆ ಸಮಾಧಾನ ಇಲ್ಲದಿದ್ದರೆ ಅಥವಾ ಇನ್ನೊಂದು ಕಂಪನಿ ಇನ್ನೂ ಹೆಚ್ಚಿನ ಆಯ್ಕೆಯನ್ನು ನೀಡುತ್ತಿದ್ದರೆ ಅದಕ್ಕೆ ಬದಲಾಯಿಸಬಹುದು.

ಅನುಕೂಲಗಳೇನು?

ಇದು ಇನ್ಶೂರೆನ್ಸ್ ಕಂಪನಿಗಳಲ್ಲಿನ ಬದಲಾವಣೆ ಮಾತ್ರವಲ್ಲ. ಇದರ ಜತೆಗೆ ಇನ್ನೂ ಅನೇಕ ಅನುಕೂಲಗಳು ಲಭಿಸುತ್ತವೆ. ನೀವು ಕಂಪನಿ ಬದಲಾಯಿಸುವಾಗ ಉತ್ತಮ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಹುದು. ಜತೆಗೆ ನಿಮ್ಮ ಕಾಯುವ ಅವಧಿ (Waiting Period) ಮತ್ತು ನೋ-ಕ್ಲೈಮ್ ಬೋನಸ್ ಅನ್ನು ಸಹ ವರ್ಗಾಯಿಸಬಹುದು. ಆದ್ದರಿಂದ ನೀವು ಮೊದಲಿನಿಂದಲೇ ಕಾಯುವ ಅವಧಿಯನ್ನು ಪ್ರಾರಂಭಿಸಬೇಕಾಗಿಲ್ಲ. ಜತೆಗೆ ನೀವು ಕ್ಯುಮುಲೇಟಿವ್ ಬೋನಸ್ (Cumulative bonus) ಅನ್ನು ಕಳೆದುಕೊಳ್ಳುವುದಿಲ್ಲ.

ವೈಶಿಷ್ಟ್ಯಗಳು

ಅಗತ್ಯ ಸೌಲಭ್ಯ ಪಡೆದುಕೊಳ್ಳಿ

ನಿಮ್ಮ ಅಗತ್ಯವನ್ನು ಈಗಿರುವ ಪಾಲಿಸಿ ಪೂರೈಸುವುದಿಲ್ಲ ಎಂದಾದರೆ ನೀವು ಇದನ್ನು ಒಳಗೊಳ್ಳುವ ಪಾಲಿಸಿಗೆ ಬದಲಾಯಿಸಬಹುದು. ಉದಾಹರಣೆಗೆ ಅಂಕಿತಾ ಪಾಲಿಸಿ ಖರೀದಿಸುವಾಗ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದರೂ ಅದು ಹೆರಿಗೆ ಪ್ರಯೋಜನ ಮತ್ತು ವ್ಯಾಪಕ ಆಸ್ಪತ್ರೆ ವ್ಯಾಪ್ತಿಯನ್ನು ಒಳಗೊಂಡಿರಲಿಲ್ಲ. ಈಗ ಅವರಿಗೆ ಈ ಸೌಲಭ್ಯದ ಅಗತ್ಯವಿದೆ. ಹೀಗಾಗಿ ಅವರು ಈ ಸೌಲಭ್ಯವನ್ನು ಹೊಂದಿರುವ ವಿಮಾ ಯೋಜನೆಗೆ ತಮ್ಮ ಪಾಲಿಸಿಯನ್ನು ಬದಲಾಯಿಸಬಹುದು. ಜತೆಗೆ ವಿಮೆಯ ಮೊತ್ತವನ್ನು ಹೆಚ್ಚಿಸುವ ಆಯ್ಕೆಯೂ ಇದೆ.

ವೆಚ್ಚ ಕಡಿತ

ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಕಡಿಮೆ ಪ್ರೀಮಿಯಂ ಹೊಂದಿರುವ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ ನೀವು ಭವಿಷ್ಯಕ್ಕೆ ಅಗತ್ಯವಾದ ಯೋಜನೆಗಳನ್ನು ಹುಡುಕುತ್ತಿದ್ದೀರಿ ಎಂದಿಟ್ಟುಕೊಳ್ಳೋಣ. ನೀವು ಪಾಲಿಸಿ ಹೊಂದಿರುವ ಕಂಪನಿಯಲ್ಲಿ ಇದು ದುಬಾರಿಯಾಗಿದ್ದು, ಮತ್ತೊಂದು ಕಂಪನಿಯಲ್ಲಿ ರಿಯಾಯಿತಿ ದರದಲ್ಲಿ ಲಭಿಸುತ್ತದೆ ಮತ್ತು ಹೆಚ್ಚಿನ ಪ್ರಯೋಜನ ಹೊಂದಿದೆ ಎಂದಾದರೆ ಅದರತ್ತ ನಿಮ್ಮ ಪಾಲಿಸಿಯನ್ನು ಬದಲಾಯಿಸಿ.

ಇದನ್ನು ಗಮನಿಸಿ

  • ಅಸ್ತಿತ್ವದಲ್ಲಿರುವ ನಿಮ್ಮ ಪಾಲಿಸಿಯ ಅವಧಿ ಮುಗಿಯುವ ಕನಿಷ್ಠ 45 ದಿನಗಳ ಮೊದಲು ನೀವು ಪೋರ್ಟೆಬಿಲಿಟಿಗೆ ಅರ್ಜಿ ಸಲ್ಲಿಸಬೇಕು.
  • ನಿಮ್ಮ ಹೊಸ ವಿಮಾದಾರರು ಪ್ರೀಮಿಯಂಗಳು, ನಿಯಮಗಳು ಮತ್ತು ಷರತ್ತುಗಳು ಸೇರಿದಂತೆ ಲಭ್ಯವಿರುವ ವಿವಿಧ ಆರೋಗ್ಯ ವಿಮಾ ಯೋಜನೆಗಳ ಪ್ರಯೋಜನವನ್ನು ಪಡೆಯಲು ವಿವಿಧ ನಮೂನೆಗಳನ್ನು ನಿಮಗೆ ಒದಗಿಸುತ್ತಾರೆ. ಅದನ್ನು ಗಮನವಿಟ್ಟು ಓದಿ.
  • ನೀವು ಬಯಸುವ ಯೋಜನೆ ಮತ್ತು ವ್ಯಾಪ್ತಿಯನ್ನು ಆಯ್ಕೆ ಮಾಡಿ ಮತ್ತು ಎಲ್ಲ ದಾಖಲೆಗಳನ್ನು ಸಲ್ಲಿಸಿ.
  • ಹೊಸ ವಿಮಾ ಕಂಪನಿ ಹಿಂದಿನ ವಿಮಾದಾರರಿಂದ ಮಾಹಿತಿಯನ್ನು ಪಡೆಯುವ ಮೂಲಕ ಹಿಂದಿನ ಕ್ಲೈಮ್ ಇತಿಹಾಸ, ವೈದ್ಯಕೀಯ ದಾಖಲೆಗಳು ಪರಿಶೀಲಿಸುತ್ತದೆ.
  • ಹೊಸ ವಿಮಾದಾರರು ಪೋರ್ಟೆಬಿಲಿಟಿಗೆ ಅರ್ಹರೇ ಅಥವಾ ಇಲ್ಲವೇ ಎಂದು ನಿರ್ಧರಿಸಲು ಈ ಮಾಹಿತಿಯನ್ನು ಬಳಸುತ್ತಾರೆ. ಬಳಿಕ 15 ದಿನಗಳೊಳಗೆ ನಿಮ್ಮ ಅರ್ಜಿ ಸ್ವೀಕೃತವಾಗುತ್ತದೆ.

ಯಾವೆಲ್ಲ ಸೌಲಭ್ಯಗಳನ್ನು ಪೋರ್ಟ್‌ ಮಾಡಬಹುದು?

  • ಪ್ರಸ್ತುತ ಇರುವ ಇನ್ಶೂರೆನ್ಸ್ ಮೊತ್ತ
    ನಿಮ್ಮ ಸಂಗ್ರಹಿತ ಕ್ಯುಮುಲೇಟಿವ್ ಬೋನಸ್
    ಮೊದಲೇ ಅಸ್ತಿತ್ವದಲ್ಲಿರುವ ಕಾಯುವ ಅವಧಿ
    ನಿರ್ದಿಷ್ಟ ರೋಗ ನಿರೀಕ್ಷಣಾ ಅವಧಿ
    ಹೆರಿಗೆ ಪ್ರಯೋಜನದ ಕಾಯುವ ಅವಧಿ (ಆಯ್ಕೆ ಮಾಡಿಕೊಂಡಿದ್ದರೆ)

ಅಗತ್ಯವಿರುವ ದಾಖಲೆಗಳು?

  • ನಿಮ್ಮ ಪ್ರಸ್ತುತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ವೇಳಾಪಟ್ಟಿ.
    ಗುರುತಿನ ಪುರಾವೆ
    ವೈದ್ಯಕೀಯ ವಿವರಗಳು

ಇದನ್ನೂ ಓದಿ: Money Guide: ಹೆಲ್ತ್‌ ಇನ್ಶೂರೆನ್ಸ್‌ ಕ್ಲೈಮ್‌ ಆಗುತ್ತಿಲ್ಲವೆ?; ಈ ಸಮಸ್ಯೆ ಇರಬಹುದು ಗಮನಿಸಿ

Continue Reading

ಮನಿ ಗೈಡ್

Money Guide: ಪಿಎಫ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ; ಇಲ್ಲಿದೆ ಸಂಪೂರ್ಣ ಮಾಹಿತಿ

Money Guide: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ  ಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲಾಗುತ್ತದೆ. ಆ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಈ ವರ್ಷ ಸರ್ಕಾರ ಪಿಎಫ್‌ ಖಾತೆಗಳಿಗೆ ಸಂಬಂಧಿಸಿದ ನಿಯಮದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಅದೇನು ಎನ್ನುವ ವಿವರ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ (Employees Provident Fund-EPFಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಯೋಜನೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡಲಾಗುತ್ತದೆ. ಆ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್‌ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಾಗ್ಯೂ ಕೆಲವೊಮ್ಮೆ ತೀರಾ ಅನಿವಾರ್ಯ ಸಂದರ್ಭದಲ್ಲಿ ಕೆಲವೊಂದಷ್ಟು ಮೊತ್ತವನ್ನು ಹಿಂಪಡೆಯಬಹುದು. ಹೀಗಾಗಿ ಪಿಎಫ್‌ ಉದ್ಯೋಗಿಗಳ ಪಾಲಿಗೆ ಆಪತ್ಬಾಂಧವ ಎನಿಸಿಕೊಂಡಿದೆ. ಈ ವರ್ಷ ಸರ್ಕಾರ ಪಿಎಫ್‌ ಖಾತೆಗಳಿಗೆ ಸಂಬಂಧಿಸಿದ ನಿಯಮದಲ್ಲಿ ಕೆಲವೊಂದು ಬದಲಾವಣೆಗಳನ್ನು ತಂದಿದೆ. ಅದೇನು ಎನ್ನುವ ವಿವರ ಮನಿಗೈಡ್‌ (Money Guide)ನಲ್ಲಿದೆ.

ಅಟೋ ಸೆಟಲ್‌ಮೆಂಟ್‌

ಹೊಸದಾಗಿ ಅಟೋ ಸೆಟಲ್‌ಮೆಂಟ್‌ ಸೌಲಭ್ಯವನ್ನು ಇಪಿಎಫ್ಒ ಇತ್ತೀಚೆಗೆ ಪರಿಚಯಿಸಿದೆ. ಅನಾರೋಗ್ಯದ ಕಾರಣಕ್ಕಾಗಿ ಮುಂಗಡ ಕ್ಲೈಮ್ ಮಾಡಲು 2020ರ ಏಪ್ರಿಲ್‌ನಲ್ಲಿ ಅಟೋ ಸೆಟಲ್‌ಮೆಂಟ್‌ ಮೋಡ್ ಅನ್ನು ಪರಿಚಯಿಸಲಾಗಿತ್ತು. ಈಗ ಈ ಮಿತಿಯನ್ನು 1 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರಲ್ಲಿ ಉನ್ನತ ಶಿಕ್ಷಣ ಮತ್ತು ಮದುವೆಯ ಆಯ್ಕೆಯನ್ನೂ ಪರಿಚಯಿಸಲಾಗಿದೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಇದನ್ನು ಸ್ವಯಂ ಪ್ರಕ್ರಿಯೆಗೊಳಿಸಲಾಗುತ್ತದೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ ಐಟಿ ವ್ಯವಸ್ಥೆಯಿಂದ ಇಂತಹ ಕ್ಲೈಮ್‌ಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ.

ಮಲ್ಟಿ ಲೊಕೇಷನ್‌ ಕ್ಲೈಮ್‌ ಸೆಟಲ್‌ಮೆಂಟ್‌

ಇಪಿಎಫ್ ಕ್ಲೈಮ್ ಪ್ರಕ್ರಿಯೆಯನ್ನು ನಿಗದಿತ ಸಮಯದೊಳಗೆ ಮುಗಿಸಲು ಇಪಿಎಫ್ಒ ಬಹು-ಸ್ಥಳ ಇತ್ಯರ್ಥಕ್ಕಾಗಿ ಲಿಂಕ್ ಕಚೇರಿ ಸೆಟಪ್ ಪರಿಚಯಿಸಿದೆ. ಇದರೊಂದಿಗೆ ಕ್ಲೈಮ್‌ಗೆ ಸಂಬಂಧಿಸಿದ ಹೊರೆಯನ್ನು ಕಡಿಮೆ ಮಾಡಬಹುದು. ಇದು ಕ್ಲೈಮ್‌ ಪ್ರಕ್ರಿಯೆಯನ್ನೂ ವೇಗಗೊಳಿಸುತ್ತದೆ.

ಆಧಾರ್ ವಿವರ ಇಲ್ಲದೆ ಇಪಿಎಫ್ ಡೆತ್ ಕ್ಲೈಮ್‌

ಒಂದು ವೇಳೆ ಪಿಎಫ್‌ ಗ್ರಾಹಕ ಮೃತಪಟ್ಟರೆ ಆಧಾರ್ ವಿವರಗಳನ್ನು ನೀಡದೆ ಡೆತ್‌ ಕ್ಲೈಮ್‌ ಪ್ರಕ್ರಿಯೆಯನ್ನು ಸುಲಭಗೊಳಿಸಲು ಈ ಆಯ್ಕೆಯನ್ನು ಪರಿಚಯಿಸಲಾಗಿದೆ. ಇದನ್ನು ತಾತ್ಕಾಲಿಕ ಕ್ರಮವಾಗಿ ಜಾರಿಗೆ ತರಲಾಗಿದೆ. ಜತೆಗೆ ಇದಕ್ಕೆ ಒಐಸಿ (OIC)ಯಿಂದ ಸರಿಯಾದ ಅನುಮೋದನೆಯ ಅಗತ್ಯವಿದೆ.

ಚೆಕ್ ಲೀಫ್ ಕಡ್ಡಾಯ ಅಪ್‌ಲೋಡ್‌ ನಿಯಮ ಸಡಿಲಿಕೆ

2024ರ ಮೇ 28ರ ಸುತ್ತೋಲೆಯಲ್ಲಿ ಇಪಿಎಫ್ಒ ಕೆಲವು ಸಂದರ್ಭಗಳಲ್ಲಿ ಚೆಕ್ ಲೀಫ್ ಇಮೇಜ್ ಅಥವಾ ದೃಢೀಕರಿಸಿದ ಬ್ಯಾಂಕ್ ಪಾಸ್‌ಬುಕ್‌ ಅನ್ನು ಅಪ್‌ಲೋಡ್‌ ಮಾಡುವ ಕಡ್ಡಾಯ ನಿಯಮವನ್ನು ಸಡಿಲಗೊಳಿಸಿದೆ. ಈ ಕ್ರಮವು ಆನ್‌ಲೈನ್ ಕ್ಲೈಮ್ ಪ್ರಕ್ರಿಯೆಯನ್ನು ಹೆಚ್ಚು ತ್ವರಿತವಾಗಿ ಸುಗಮಗೊಳಿಸುತ್ತದೆ. ಜತೆಗೆ ಕ್ಲೈಮ್‌ ವಿಫಲವಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆಧರೆ ಇದಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇಪಿಎಫ್‌ ಖಾತೆಯ ವೈಶಿಷ್ಟ್ಯ

  • ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
  • ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
  • ಹೀಗೆ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆಗಳೊಂದಿಗೆ ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ಮೀಸಲಿಡಲಾಗುತ್ತದೆ. ಇದು ಭಾರತದಲ್ಲಿ ಕಡ್ಡಾಯ.

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Continue Reading

ಮನಿ-ಗೈಡ್

Money Guide: ಈ ಯೋಜನೆಯಲ್ಲಿ ಪ್ರತಿ ತಿಂಗಳು 3,475 ರೂ. ಹೂಡಿಕೆ ಮಾಡಿ 1 ಲಕ್ಷ ರೂ. ಮಾಸಿಕ ಪಿಂಚಣಿ ಪಡೆಯಿರಿ

Money Guide: ಪ್ರತಿಯೊಬ್ಬ ಉದ್ಯೋಗಿಯೂ ಕೆಲಸಕ್ಕೆ ಸೇರಿದಾಗಿನಿಂದಲೇ ನಿವೃತ್ತಿ ಜೀವನಕ್ಕಾಗಿ ಯೋಜನೆ ರೂಪಿಸುವುದು ಅನಿವಾರ್ಯ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ದೇಶದಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme-NPS) ಕೂಡ ಒಂದು. ಎನ್‌ಪಿಎಸ್‌ ಅನ್ನು ನಿವೃತ್ತಿಗೆ ಉತ್ತಮ ಯೋಜನೆ ಎಂದೇ ಪರಿಗಣಿಸಲಾಗುತ್ತದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ವಿಶೇಷ ಎಂದರೆ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತಿಂಗಳಿಗೆ 1 ಲಕ್ಷ ರೂ.ವರೆಗೆ ನಿವೃತ್ತಿ ವೇತನ ಪಡೆಯಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪ್ರತಿಯೊಬ್ಬ ಉದ್ಯೋಗಿಯೂ ಕೆಲಸಕ್ಕೆ ಸೇರಿದಾಗಿನಿಂದಲೇ ನಿವೃತ್ತಿ ಜೀವನಕ್ಕಾಗಿ ಯೋಜನೆ ರೂಪಿಸುವುದು ಅಗತ್ಯ ಎಂದು ಹಿರಿಯರು ಹೇಳುತ್ತಿದ್ದರು. ಇಂದು ಇದು ಅನಿವಾರ್ಯ ಎನಿಸಿಕೊಂಡಿದೆ. ಬೆಲೆ ಏರಿಕೆ, ದುಬಾರಿಯಾಗುತ್ತಿರುವ ಜೀವನ ವೆಚ್ಚ ಇದಕ್ಕೆ ಕಾರಣ. ಅದಕ್ಕಾಗಿ ಈಗಲೇ ಒಂದಷ್ಟು ಮೊತ್ತವನ್ನು ಕೂಡಿಡಲು ಆರಂಭಿಸಬೇಕು ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಇದೇ ಕಾರಣಕ್ಕೆ ದೇಶದಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿವೆ. ಈ ಪೈಕಿ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme-NPS) ಕೂಡ ಒಂದು. ಎನ್‌ಪಿಎಸ್‌ ಅನ್ನು ನಿವೃತ್ತಿಗೆ ಉತ್ತಮ ಯೋಜನೆ ಎಂದೇ ಪರಿಗಣಿಸಲಾಗುತ್ತದೆ. 18ರಿಂದ 70 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಜತೆಗೆ ಇದರಲ್ಲಿ ಹೂಡಿಕೆ ಮಾಡಿದರೆ ಹಲವು ರೀತಿಯ ತೆರಿಗೆ ಪ್ರಯೋಜನಗಳೂ ಲಭ್ಯ. ಈ ಯೋಜನೆ ಬಗೆಗಿನ ವಿವರ ಇಲ್ಲಿದೆ (Money Guide).

ವಿಶೇಷ ಎಂದರೆ ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತಿಂಗಳಿಗೆ 1 ಲಕ್ಷ ರೂ.ವರೆಗೆ ನಿವೃತ್ತಿ ವೇತನ ಪಡೆಯಬಹುದು. ಭಾರತ ಸರ್ಕಾರ 2004ರ ಜನವರಿ 1ರಂದು ಎನ್‌ಪಿಎಸ್‌ ಅನ್ನು ಪರಿಚಯಿಸಿತು ಮತ್ತು ಐದು ವರ್ಷಗಳ ನಂತರ (2009) ಅದನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಯಿತು. ಈ ಯೋಜನೆಯು ಭಾರತದ ನಾಗರಿಕರಿಗೆ ವೃದ್ಧಾಪ್ಯದ ಭದ್ರತೆಯಾಗಿ ಪಿಂಚಣಿ ಮತ್ತು ಹೂಡಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಿಯಂತ್ರಿಸುತ್ತದೆ.

ಪ್ರತಿ ತಿಂಗಳು 1 ಲಕ್ಷ ರೂ. ಹೀಗೆ ಪಡೆಯಿರಿ

ಪ್ರತಿ ತಿಂಗಳು 1 ಲಕ್ಷ ರೂ. ಪಿಂಚಣಿ ಪಡೆಯುವುದು ಹೇಗೆ ಎನ್ನುವುದನ್ನು ಉದಾಹರಣೆ ಮೂಲಕ ನೋಡೋಣ. ನೀವು 18ನೇ ವಯಸ್ಸಿನಲ್ಲಿ ಪ್ರತಿ ತಿಂಗಳು ಎನ್‌ಪಿಎಸ್‌ನಲ್ಲಿ 3,475 ರೂ. ಹೂಡಿಕೆ ಮಾಡಲು ಆರಂಭಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಹೀಗೆ ಸುಮಾರು 47 ವರ್ಷ ನಿಯಮಿತವಾಗಿ ಹೂಡಿಕೆ ಮಾಡಿದರೆ ನಿಮ್ಮ ನಿವೃತ್ತಿ ಜೀವನದ ವೇಳೆ ಅಂದರೆ 65 ವರ್ಷ ವಯಸ್ಸಾದಾಗ ಪ್ರತಿ ತಿಂಗಳು 1 ಲಕ್ಷ ರೂ. ಲಭಿಸಲು ಅರಂಭವಾಗುತ್ತದೆ. ವಯಸ್ಸಿಗೆ ಅನುಗುಣವಾಗಿ ಹೂಡಿಕೆಯ ಮೊತ್ತ ಹೆಚ್ಚಾಗುತ್ತದೆ.

ಎನ್‌ಪಿಎಸ್‌ನ ವಿಶೇಷತೆ

ಎನ್‌ಪಿಎಸ್‌ ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಅದರ ಮೂಲಕ ನಿಮ್ಮ ನಿವೃತ್ತಿ ಜೀವನವನ್ನು ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿಸಬಹುದು ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. 18 ವರ್ಷದಿಂದ 70 ವರ್ಷ ವಯಸ್ಸಿನ ಯಾರು ಬೇಕಾದರೂ ಈ ಯೋಜನೆಯಡಿ ಖಾತೆ ತೆರೆಯಬಹುದು. ಈ ಯೋಜನೆಯಲ್ಲಿ ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡುವುದು ಅಗತ್ಯ. ಖಾತೆಯನ್ನು ತೆರೆದ ನಂತರ 60 ವರ್ಷ ವಯಸ್ಸಿನವರೆಗೆ ಅಥವಾ ಯೋಜನೆಯ ಮುಕ್ತಾಯದವರೆಗೆ ಕೊಡುಗೆ ನೀಡಬೇಕು. 60ನೇ ವಯಸ್ಸಿನಲ್ಲಿ, ನೀವು ಈ ನಿಧಿಯ ಗರಿಷ್ಠ 60 ಪ್ರತಿಶತವನ್ನು ಹಿಂತೆಗೆದುಕೊಳ್ಳಬಹುದು. ಹೂಡಿಕೆಯ ಅವಧಿ ಮುಕ್ತಾಯದ ನಂತರ ಮಾಸಿಕ ಪಿಂಚಣಿಯ ಹೊರತಾಗಿ ನೀವು ಒಂದು ದೊಡ್ಡ ಮೊತ್ತವನ್ನು ಹಿಂಪಡೆಯುತ್ತೀರಿ.

ವಿಶೇಷ ಎಂದರೆ ಆನಿವಾಸಿ ಭಾರತೀಯರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅದಾಗ್ಯೂ ಆರ್‌ಬಿಐ ಮತ್ತು ಫೆಮಾ ಸೂಚಿಸುವ ಷರತ್ತುಗಳು ಅನ್ವಯವಾಗುತ್ತವೆ. ಇನ್ನು ಒಸಿಐ (ಓವರ್‌ಸೀಸ್‌ ಸಿಟಿಜನ್ಸ್ ಆಫ್ ಇಂಡಿಯಾ) ಮತ್ತು ಪಿಐಒ (ಪರ್ಸನ್ ಆಫ್ ಇಂಡಿಯನ್ ಒರಿಜಿನ್) ಕಾರ್ಡ್ ಹೊಂದಿರುವವರು ಈ ಯೋಜನೆಗೆ ಅರ್ಹರಲ್ಲ.

ಇದನ್ನೂ ಓದಿ: Money Guide: ವೇತನದ ಜತೆಗೆ ಮಾಸಿಕವಾಗಿ 9,250 ರೂ. ಆದಾಯ ಬೇಕೆ? ಈ ಯೋಜನೆಯಲ್ಲಿ ಹೂಡಿಕೆ ಮಾಡಿ

Continue Reading

ಮನಿ-ಗೈಡ್

Money Guide: ಗೃಹಸಾಲದ ಕಂತು ಪೂರ್ತಿಯಾಯ್ತೆ? ನಿಲ್ಲಿ, ನಿಮ್ಮ ಜವಾಬ್ದಾರಿ ಇನ್ನೂ ಇದೆ!

Money Guide: ಹೋಮ್‌ ಲೋನ್‌ ಸಂಪೂರ್ಣ ಪಾವತಿಸಿದ ಮೇಲೂ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಸಾಲ ಪಾವತಿಯಾದ ಬಳಿಕವೂ ನೀವು ಒಂದಷ್ಟು ಮುಖ್ಯ ಕೆಲಸ ಮಾಡಬೇಕಾಗುತ್ತದೆ. ಭವಿಷ್ಯದಲ್ಲಿ ಯಾವುದೇ ತೊಂದರೆ ಎದುರಾಗದಿರಲು ಕೆಲವು ಅಂಶಗಳತ್ತ ನೀವು ಗಮನ ಹರಿಸಲೇ ಬೇಕು. ಅವು ಯಾವುವು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಸ್ವಂತದ್ದೊಂದು ಸೂರು ಹೊಂದಿರಬೇಕು ಎನ್ನುವ ಕನಸು ಯಾರಿಗೆ ಇಲ್ಲ ಹೇಳಿ? ಆದರೆ ಈ ಕನಸನ್ನು ನನಸು ಮಾಡಿಕೊಳ್ಳುವುದು ಮಾತ್ರ ಬಹು ಪ್ರಯಾಸದ ಸಂಗತಿ. ಅದರಲ್ಲಿಯೂ ಈ ದುಬಾರಿ ದುನಿಯಾದಲ್ಲಿ ಮನೆ ಕಟ್ಟಬೇಕು ಎಂದರೆ ಸಾಮಾನ್ಯ ವರ್ಗದ ಜನರು ಸಾಲದ ಮೊರೆ ಹೋಗಲೇ ಬೇಕಾಗುತ್ತದೆ. ಸರಿ ಅಂತೂ ಗೃಹಸಾಲ ಮಂಜೂರಾಗಿ, ಗೃಹ ಪ್ರವೇಶ ನಡೆದು, ಸಾಲವನ್ನೂ ಕಟ್ಟಿಯಾಯ್ತು ಎಂದುಕೊಳ್ಳೋಣ. ʼಅಬ್ಬ ದೊಡ್ಡ ಹೊರೆಯೊಂದು ತಲೆಯ ಮೇಲಿಂದ ಇಳಿಯಿತುʼ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನ ಇಲ್ಲಿ ಗಮನಿಸಿ. ಸಾಲ ಕಟ್ಟಿದ ಮಾತ್ರಕ್ಕೆ ನಿಮ್ಮ ಎಲ್ಲ ಜವಾಬ್ದಾರಿ ಮುಗಿಯಿತು ಎಂದುಕೊಳ್ಳಬೇಡಿ. ಸಾಲ ತೀರಿಸಿದ ಮೇಲೂ ನೀವು ಮಾಡಿ ಮುಗಿಸಬಹುದಾದು ಬಹು ಮುಖ್ಯ ಕೆಲಸಗಳಿವೆ. ಅವು ಯಾವುವು ಎನ್ನುವ ಮಾಹಿತಿ ತಿಳಿದುಕೊಳ್ಳಲು ಇಂದಿನ ಮನಿಗೈಡ್‌ (Money Guide) ಓದಿ.

ಎನ್‌ಒಸಿ ಪಡೆದುಕೊಳ್ಳಿ

ಗೃಹಸಾಲವನ್ನು ಸಂಪೂರ್ಣವಾಗಿ ಪಾವತಿಸದ ಬಳಿಕ ನೀವು ಮಾಡಬೇಕಾದ ಬಹು ಮುಖ್ಯ ಕೆಲಸ ಎಂದರೆ ಬ್ಯಾಂಕ್‌ನಿಂದ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ಅಥವಾ ನೋ ಡ್ಯೂ ಸರ್ಟಿಫಿಕೆಟ್‌ (ಎನ್‌ಡಿಸಿ) ಪಡೆದುಕೊಳ್ಳುವುದು. ನೀವು ಸಂಪೂರ್ಣ ಸಾಲವನ್ನು ಮರುಪಾವತಿಸಿದ್ದೀರಿ ಎನ್ನುವುದನ್ನು ಬ್ಯಾಂಕ್‌ ಪ್ರಮಾಣಿಕರಿಸುವ ಸರ್ಟಿಫಿಕೆಟ್‌ ಇದು. ಗಮನಿಸಿ, ಈ ಪತ್ರವನ್ನು ಪಡೆದುಕೊಳ್ಳುವ ಮುನ್ನ ಇದರಲ್ಲಿ ನಮೂದಿಸಿರುವ ಎಲ್ಲ ಅಂಶಗಳು ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸಿ. ಅಕ್ಷರ ದೋಷ ಅಥವಾ ಯಾವುದಾದರೂ ಮಾಹಿತಿಯಲ್ಲಿ ತಪ್ಪು ಕಂಡು ಬಂದರೆ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತನ್ನಿ. ಜತೆಗೆ ಈ ಪ್ರಮಾಣ ಪತ್ರದಲ್ಲಿ ಸಾಲ ನೀಡಿದ ಸಂಸ್ಥೆಯ ಹೆಸರು, ಸಾಲದ ಖಾತೆ ಸಂಖ್ಯೆ, ಸಾಲ ಪಡೆದ ಆಸ್ತಿಯ ವಿವರ, ನಿಮ್ಮ ವಿಳಾಸ, ಸಾಲದ ಕಂತು ಆರಂಭಗೊಂಡ ಮತ್ತು ಕೊನೆಗೊಂಡ ದಿನಾಂಕ ಇದೆಯೇ ಎನ್ನುವುದನ್ನು ಪರಿಶೀಲಿಸಿ. ಮನೆ ಇನ್ನು ಸಂಪೂರ್ಣವಾಗಿ ನಿಮ್ಮ ಸೊತ್ತು ಎನ್ನುವುದು ಕೂಡ ಇದರಲ್ಲಿ ನಮೂದಾಗಿದೆ ಎನ್ನುವುದನ್ನು ಚೆಕ್‌ ಮಾಡಿ.

ಮೂಲ ದಾಖಲೆ ಪಡೆದುಕೊಳ್ಳಿ

ಗೃಹಸಾಲಕ್ಕೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್‌ಗಳು ನಿಮ್ಮ ಮನೆಯ ಮೂಲ ದಾಖಲೆಗಳನ್ನು ಪಡೆದುಕೊಳ್ಳುತ್ತವೆ. ಸಾಲ ಪಾವತಿಯಾದ ಬಳಿಕ ಬ್ಯಾಂಕ್‌ಗಳು ಈ ಮೂಲ ದಾಖಲೆಗಳನ್ನು ನಿಮಗೆ ಹಿಂದಿರುಗಿಸಬೇಕು ಎನ್ನುವ ನಿಯಮ ಇದೆ. ಒಂದು ಬೇಳೆ ಬ್ಯಾಂಕ್‌ ಇದನ್ನು ನೀಡಲು ಮರೆತರೆ ನೀವು ನೆನಪಿಸಿ ತಪ್ಪದೆ ಪಡೆದುಕೊಳ್ಳಿ. ದಾಖಲೆಗಳೆಲ್ಲ ಸರಿಯಾಗಿವೆಯೇ ಎನ್ನುವುದನ್ನು ಪರಿಶೀಲಿಸುವುದನ್ನು ಮರೆಯಬೇಡಿ.

ದಾಖಲೆಗಳನ್ನು ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಿ

ಗೃಹಸಾಲ ನೀಡುವಾಗ ನಿಮ್ಮ ಆಸ್ತಿಯ ಹಕ್ಕನ್ನು ಬ್ಯಾಂಕ್‌ ಹೊಂದಿರುತ್ತದೆ. ಒಂದುವೇಳೆ ಸಾಲ ಪಡೆದವರು ಮರು ಪಾವತಿಸದಿದ್ದರೆ ಆಸ್ತಿಯನ್ನು ಮಾರಾಟ ಮಾಡುವ ಹಕ್ಕು ಬ್ಯಾಂಕ್‌ಗೆ ಇರುತ್ತದೆ. ಹೀಗಾಗಿ ಸಾಲ ಮರುಪಾವತಿ ಮಾಡಿದ ಬಳಿಕ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆಸುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಲೇಬೇಡಿ. ಜತೆಗೆ ಋಣಭಾರ ಪ್ರಮಾಣಪತ್ರ ಪಡೆದುಕೊಳ್ಳಿ. ಈ ಬಗ್ಗೆ ಬ್ಯಾಂಕ್‌ ಸಿಬ್ಬಂದಿ ಬಳಿ ಕೇಳಿ ತಿಳಿದುಕೊಳ್ಳಿ.

ಕ್ರೆಡಿಟ್‌ ಸ್ಕೋರ್‌ ಪರಿಶೀಲಿಸಿ

ಸಾಲ ಮಂಜೂರಾದ ಬಳಿಕ ನಿಮ್ಮ ಮರುಪಾವತಿಯನ್ನು ಗಮನಿಸಿ ಕ್ರೆಡಿಟ್‌ ಬ್ಯೂರೋ ಕ್ರೆಡಿಟ್‌ ಸ್ಕೋರ್‌ ನೀಡುತ್ತದೆ. ಹೀಗಾಗಿ ಸಾಲದ ಎಲ್ಲ ಕಂತನ್ನು ಪಾವತಿಸಿದ ಬಳಿಕ ಸಾಲಮುಕ್ತರಾಗಿದ್ದೀರಿ ಎನ್ನುವುದನ್ನು ಬ್ಯಾಂಕ್‌ ಅಪ್‌ಡೇಟ್‌ ಮಾಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ಬ್ಯಾಂಕ್‌ಗಳು ಬ್ಯುರೋಕ್ಕೆ ಮಾಹಿತಿ ನೀಡಲು ಮರೆಯುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ಪರಿಶೀಲಿಸಿ ಬ್ಯಾಂಕ್‌ ಸಿಬ್ಬಂದಿ ಗಮನಕ್ಕೆ ತನ್ನಿ.

ಒಟ್ಟಿನಲ್ಲಿ ಗೃಹಸಾಲದ ಎಲ್ಲ ಕಂತುಗಳನನು ಪಾವತಿಸಿದ ಬಳಿಕ ಭವಿಷ್ಯದಲ್ಲಿ ಯಾವುದೇ ತೊಂದರೆ, ಕಾನೂನು ಸಮಸ್ಯೆ ಎದುರಾಗದಿರಲು ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ.

ಇದನ್ನೂ ಓದಿ: Money Guide: ಬ್ಯಾಂಕ್‌ ಖಾತೆ, ಮ್ಯೂಚುವಲ್‌ ಫಂಡ್‌ ಹೊಂದಿದ್ದೀರಾ? ಹಾಗಾದರೆ ಮೊದಲು ಈ ಕೆಲಸ ಮಾಡಿ

Continue Reading
Advertisement
Narendra Modi
ದೇಶ3 mins ago

Narendra Modi: ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನರೇಂದ್ರ ಮೋದಿ; 3.0 ಯುಗಾರಂಭ!

Narendra Modi 3.0
ಪ್ರಮುಖ ಸುದ್ದಿ8 mins ago

Narendra Modi 3.0 : ಮೋದಿ ಪ್ರಮಾಣ ವಚನ; ಬಿರಿಯಾನಿ, ಹೋಳಿಗೆ ಹಂಚಿದ ಕರುನಾಡಿನ ಅಭಿಮಾನಿಗಳು

Farmer Death
ದಾವಣಗೆರೆ33 mins ago

Farmer Death : ಬ್ಯಾಂಕ್‌ ಅಧಿಕಾರಿಗಳಿಂದ ಮನೆ ಹರಾಜು ನೋಟಿಸ್‌; ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡ ರೈತ

Modi 3.0 Cabinet BS Yediyurappa congratulates Pralhad Joshi
Lok Sabha Election 202454 mins ago

Modi 3.0 Cabinet: ಮತ್ತೆ ಮಂತ್ರಿಯಾಗಿ ದಾಖಲೆ ಬರೆದ ಪ್ರಲ್ಹಾದ್‌ ಜೋಶಿ; ಬೆನ್ನು ತಟ್ಟಿ ಆಶೀರ್ವದಿಸಿದ ಬಿಎಸ್‌ವೈ

Rishabh Pant
ಪ್ರಮುಖ ಸುದ್ದಿ1 hour ago

Rishbha Pant : ನನ್ನ ಕಾಲನ್ನು ತುಂಡರಿಬೇಕಿತ್ತು; ಅಪಘಾತದ ಭಯಾನಕ ಸಂಗತಿಗಳನ್ನು ಹೇಳಿದ ರಿಷಭ್ ಪಂತ್​

Health Tips
ಆರೋಗ್ಯ1 hour ago

Health Tips: ಆರೋಗ್ಯಕರ ಆಗಿರಬೇಕಿದ್ದರೆ ನಾವು ಪ್ರತಿದಿನ ಎಷ್ಟು ಪ್ರಮಾಣದಲ್ಲಿ ಆಹಾರ ಸೇವಿಸಬೇಕು?

Narendra Modi Live
ದೇಶ1 hour ago

Narendra Modi Live: ಸತತ 3ನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನ; ಲೈವ್‌ ಇಲ್ಲಿ ವೀಕ್ಷಿಸಿ

Champions Trophy 2025
ಪ್ರಮುಖ ಸುದ್ದಿ2 hours ago

IND vs PAK : ಭಾರತ ತಂಡವನ್ನು ಪಾಕಿಸ್ತಾನಕ್ಕೆ ಹೋಗಲು ಸಮ್ಮಿಶ್ರ ಸರ್ಕಾರವೂ ಬಿಡುವುದಿಲ್ಲ

Fake CBI Gang
ಕ್ರೈಂ2 hours ago

Fake CBI Gang: ನಿವೃತ್ತ ಅಧಿಕಾರಿಯ 85 ಲಕ್ಷ ರೂ. ಎಗರಿಸಿದ ನಕಲಿ ಸಿಬಿಐ ಗ್ಯಾಂಗ್!

Kannada New Movie Chilli Chicken Official Trailer
ಸ್ಯಾಂಡಲ್ ವುಡ್2 hours ago

Kannada New Movie: ‘ಚಿಲ್ಲಿ ಚಿಕನ್​’ ಟ್ರೈಲರ್‌ ಔಟ್‌; ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌