Kannada New Movie: 25 ದಿನ ಪೂರೈಸಿದ ದೀಕ್ಷಿತ್ ಶೆಟ್ಟಿಯ 'ಬ್ಲಿಂಕ್' ಸಿನಿಮಾ! - Vistara News

ಸ್ಯಾಂಡಲ್ ವುಡ್

Kannada New Movie: 25 ದಿನ ಪೂರೈಸಿದ ದೀಕ್ಷಿತ್ ಶೆಟ್ಟಿಯ ‘ಬ್ಲಿಂಕ್’ ಸಿನಿಮಾ!

Kannada New Movie: ಬ್ಲಿಂಕ್ ಸಿನಿಮಾ ವಿದೇಶದಲ್ಲಿಯೂ ತೆರೆಕಂಡಿದೆ. ಆಸ್ಟ್ರೇಲಿಯಾ, ಯುಎಸ್ ಎ, ಯುಕೆ ಐರ್ಲ್ಯಾಂಡ್ ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಕೆನಡಾ, ಜರ್ಮನಿ ಹಾಗೂ ಮಲೇಷ್ಯಾದಲ್ಲಿಯೂ ಬಿಡುಗಡೆಯಾಗಿದ್ದು, ಇದೀಗ 25 ದಿನ ಪೂರೈಸಿ 50 ದಿನದತ್ತ ಹೆಜ್ಜೆ ಇಟ್ಟಿದೆ.ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

VISTARANEWS.COM


on

Kannada New Movie blink cinema 25 days
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸ್ಟಾರ್ ಹೀರೊ ಸಿನಿಮಾಗಳ (Kannada New Movie) ಅಬ್ಬರದ ನಡುವೆಯೇ ಮಾರ್ಚ್ 8ರಂದು ತೆರೆಗೆ ಬಂದ ಬ್ಲಿಂಕ್ ಸಿನಿಮಾಗೀಗ 25ರ ಸಂಭ್ರಮ. ಈ ಕ್ಷಣಗಳನ್ನು ಮಾಧ್ಯಮದರೊಟ್ಟಿಗೆ ಚಿತ್ರತಂಡ ಹಂಚಿಕೊಂಡಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಚಿತ್ರತಂಡ ʻಬ್ಲಿಂಕ್ʼ ಪಯಣದ ಬಗ್ಗೆ ಅನುಭವ ಹಂಚಿಕೊಂಡಿದೆ.

ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ʻʻಬಹಳಷ್ಟು ಕನಸುಗಳನ್ನು ಇಟ್ಟುಕೊಂಡು ಮಾಡಿದ ಪ್ರಾಜೆಕ್ಟ್. ಮುಖ್ಯವಾಗಿ ಕೋರ್ ಟೀಂ ಥಿಯೇಟರ್ ಹಿನ್ನೆಲೆಯಿಂದ ಬಂದಿರುವಂತಹದ್ದು. ಸಿನಿಮಾ ಮಾಡುವಾಗ ಸಾಕಷ್ಟು ಸಂದೇಹ ಇತ್ತು. ಜನ ಈ ರೀತಿ ವಿಷಯವನ್ನು ತೆಗೆದುಕೊಳ್ತಾರಾ? ಎಂದು. ನಾವು ಸಿನಿಮಾ ಮುಗಿಸಿಕೊಂಡು ಎಲ್ಲೇ ಹೋದರು, ಡಿಸ್ಟ್ರಿಬ್ಯೂಷನ್ ಕಂಪನಿಗೆ ಹೋದರೂ ಪ್ರೆಸೆಂಟ್ ಮಾಡುತ್ತೀರಾ ಎಂದು ಕೇಳಿದಾಗ ಹಿಂದೇಟು ಹಾಕಿದರು. ಆದರೆ ಸಿನಿಮಾ 25 ದಿನ ಪೂರೈಸಿದೆ. ಈ ಚಿತ್ರವನ್ನು ಅಪ್ಪಿ ಒಪ್ಪಿದ್ದಾರೆ. ಹೀಗಾಗಿ ಈ ರೀತಿ ಹೊಸ ಸಿನಿಮಾಗಳು ಬರುವುದು ಮುಖ್ಯ. 25 ದಿನ ಬ್ಲಿಂಕ್ ಕಂಪ್ಲೀಟ್ ಆಗಿರುವುದು ಖುಷಿ ಇದೆ. ಆದರೆ 25 ದಿನ ಅಷ್ಟೇ ಓಡುವಂತಹ ಸಿನಿಮಾವಲ್ಲ. ಬ್ಲಿಂಕ್ ನನ್ನ ಪ್ರಕಾರ ಇನ್ನೂ ಹೆಚ್ಚಿನ ಜನಕ್ಕೆ ಸೇರುವ ಸಿನಿಮಾ. ಮುಂದಿನ ದಿನಗಳಲ್ಲಿ ಯಾವುದೇ ಒಂದು ಸೈನ್ಸ್ ಫಿಕ್ಷನ್ ಸಿನಿಮಾ ಆಗಬೇಕು ಎಂದರೆ ಇದು ಮಾದರಿಯಾಗುತ್ತದೆʼʼ ಎಂದರು.

ಇದನ್ನೂ ಓದಿ: Kannada New Movie: ಸೆಟ್ಟೇರಿತು ‘ಸುಮಾ’ ಚಿತ್ರ; ಮಹಿಳಾ ಪ್ರಧಾನ ಕಥೆಗೆ ರವಿಕಿರಣ್ ಸಾಥ್‌

ನಟಿ ಚೈತ್ರಾ ಆಚಾರ್ ಮಾತನಾಡಿ, ʻʻʻಬ್ಲಿಂಕ್ʼ ನನ್ನ ಪಾಲಿಗೆ ಲಕ್ಕಿ ಸಿನಿಮಾ. ಈ ಚಿತ್ರದ ಶೂಟ್ ಮಾಡುವಾಗಲೇ ಸಪ್ತ ಸಾಗರದಾಚೆ ಎಲ್ಲೋ ತಂಡದಿಂದ ಕಾಲ್ ಬಂದಿದ್ದು. ಹೀಗಾಗಿ ಈ ಚಿತ್ರ ತುಂಬಾ ಲಕ್ಕಿ ನನಗೆ. ಈ ಕಥೆ ಹೇಳಲು ಬಂದಾಗ ಶ್ರೀನಿಧಿ ಬೆಂಗಳೂರು ಎಷ್ಟು ಕ್ಲಾರಿಟಿಯಾಗಿ ಕಥೆ ಹೇಳಿದರು. ಅವರು ಮಾಡಿದ ಒಂದು ಶಾರ್ಟ್ ಫಿಲ್ಮಂ ತೋರಿಸಿದರು. ಬಳಿಕ ನಾನು ಒಪ್ಪಿಕೊಂಡೆ. ನಾನು ಈ ಸಿನಿಮಾದ ಭಾಗವಾಗಿರುವುದು ಖುಷಿ ಕೊಟ್ಟಿದೆ. ಈ ಚಿತ್ರ ಜನಕ್ಕೂ ತಲುಪಿದೆ. ನಿರ್ಮಾಪಕರು ಈ ಸಿನಿಮಾಗೆ ದುಡ್ಡು ಹಾಕಿ ಸುಮ್ಮನಾಗದೇ ಫೀಲ್ಡ್ ಗೆ ಇಳಿದು, ಅವರೇ ಡಿಸ್ಟ್ರಿಬ್ಯೂಷನ್ ತೆಗೆದುಕೊಂಡು ಥಿಯೇಟರ್ ನವರು ಕೊಡುವ ಶೋ ತೆಗೆದುಕೊಂಡು, ಆ ಶೋ ಹೌಸ್ ಫುಲ್ ಆದವು. ಇದು ಕಂಟೆಂಟ್ ಗೆದ್ದಿರುವ ಪವರ್ ಎನ್ನಬಹುದು ಎಂದರು.

ನಿರ್ದೇಶಕ ಶ್ರೀನಿಧಿ ಬೆಂಗಳೂರು ಮಾತನಾಡಿ, ʻʻಚಲನಚಿತ್ರರಂಗಕ್ಕೆ ನಾನು ಹೊಸಬ. ಬೆರಗು ಕಣ್ಣಿನಿಂದ ನಾನು ಈ ಕಲಾ ಪ್ರಪಂಚವನ್ನು ನೋಡುತ್ತಿದ್ದೇನೆ. ಮೊಲದ ಚಿತ್ರವನ್ನು ನಾವು ಪ್ರಾರಂಭ ಮಾಡಿದಾಗ ನನಗೆ ಇಷ್ಟು ನಂಬಿಕೆ ಇರಲಿಲ್ಲ. ಈ ಚಿತ್ರ ಇಷ್ಟು ವಿಸ್ತಾರವಾಗಿ ಪ್ರೇಕ್ಷಕರಿಗೆ ತಲುಪುತ್ತದೆ ಎಂದುಕೊಂಡಿರಲಿಲ್ಲ. ಚಿತ್ರ 25 ದಿನ ಪೂರೈಸಿ 50 ದಿನತ್ತ ದಾಪುಗಾಲು ಇಡುತ್ತಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಪ್ರೇಕ್ಷಕರು ಹಾಗೂ ಮಾಧ್ಯಮಗಳು. ಹೊಸಬರ ಕನಸಿಗೆ ಬೆನ್ನುತಟ್ಟಿದ ಪ್ರತಿಯೊಬ್ಬರಿಗೆ ಧನ್ಯವಾದʼʼ ಎಂದು ಸಂತಸ ಹಂಚಿಕೊಂಡರು.

‘’ಬ್ಲಿಂಕ್’ ಸಿನಿಮಾಕ್ಕೆ ಚಿತ್ರರಂಗದ ಕೆಲವು ಪ್ರಮುಖ ನಟ, ನಟಿಯರು ಸಹ ಬೆಂಬಲ ವ್ಯಕ್ತಪಡಿಸಿದರು. ಸಿನಿಮಾಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆ, ಸಿನಿಮಾದ ಬಗ್ಗೆ ಕೇಳಿ ಬಂದ ಉತ್ತಮ ವಿಮರ್ಶೆಗಳನ್ನು ಗಮನಿಸಿ ಸ್ವತಃ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ‘ಬ್ಲಿಂಕ್’ ಸಿನಿಮಾ ನೋಡುವ ಇಂಗಿತ ವ್ಯಕ್ತಪಡಿಸಿದ್ದರು. ಇನ್ನುಳಿದಂತೆ ಸಿಂಪಲ್ ಸುನಿ, ನವೀನ್ ಶಂಕರ್, ರುಕ್ಮಿಣಿ ವಸಂತ್ ಹಾಗೂ ನಟಿ ಬೃಂದಾ ಆಚಾರ್ ಸೇರಿದಂತೆ ಹಲವಾರು ಕನ್ನಡ ತಾರೆಯರು ‘ಬ್ಲಿಂಕ್’ ಗೆ ಬಹುಪರಾಕ್ ಎಂದಿದ್ದರು.

ಇದನ್ನೂ ಓದಿ: Kannada New Movie: ʻನಾಡಪ್ರಭು ಕೆಂಪೇಗೌಡʼ ಸಿನಿಮಾ ಘೋಷಣೆ: ನಟ ಯಾರು?

ಶ್ರೀನಿಧಿ ಬೆಂಗಳೂರು ನಿರ್ದೇಶನದ ‘ಬ್ಲಿಂಕ್’ ಚಿತ್ರಕ್ಕೆ ರವಿಚಂದ್ರ ಎ. ಜೆ ಬಂಡವಾಳ ಹೂಡಿದ್ದಾರೆ. ‘ದಿಯಾ’ ಖ್ಯಾತಿಯ ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್, ಗೋಪಾಲ ದೇಶಪಾಂಡೆ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಈ ಸಿನಿಮಾ ಭಿನ್ನವಾದ ಕತೆ ಹೊಂದಿದೆ. ಟೈಮ್ ಲೂಪ್, ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಹೊಂದಿರುವ ಸಿನಿಮಾ ಇದಾಗಿದೆ. ಬ್ಲಿಂಕ್ ಸಿನಿಮಾ ವಿದೇಶದಲ್ಲಿಯೂ ತೆರೆಕಂಡಿದೆ. ಆಸ್ಟ್ರೇಲಿಯಾ, ಯುಎಸ್ ಎ, ಯುಕೆ ಐರ್ಲ್ಯಾಂಡ್ ನಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಕೆನಡಾ, ಜರ್ಮನಿ ಹಾಗೂ ಮಲೇಷ್ಯಾದಲ್ಲಿಯೂ ಬಿಡುಗಡೆಯಾಗಿದ್ದು, ಇದೀಗ 25 ದಿನ ಪೂರೈಸಿ 50 ದಿನದತ್ತ ಹೆಜ್ಜೆ ಇಟ್ಟಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Kiran Raj: ʻರಾನಿʼ ಸಿನಿಮಾ ಸಾಂಗ್‌ ಔಟ್‌; ಇದೇ ಭಾನುವಾರ ಕಿರಣ್ ರಾಜ್‌ ʻರೀಲ್ಸ್ with ಫ್ಯಾನ್ಸ್ʼ!

Actor Kiran Raj: ಈ ಹಿಂದೆ ಹಿಂದಿ ಟೀಸರ್‌ ಬಿಡುಗಡೆಯಾಗಿದ್ದು (Hindi teaser Release) ಭರ್ಜರಿ ರೆಸ್ಪಾನ್ಸ್‌ (Good Response) ಪಡೆದುಕೊಂಡಿತ್ತು. ಗುರುತೇಜ್‌ ಶೆಟ್ಟಿ (Director Gurutej Shetty) ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಟಾಕ್‌ ನಡೆಯುತ್ತಿದೆ. ರಾನಿ ಚಿತ್ರ ಭೂಗತ ಜಗತ್ತಿನ ಕಥೆಯನ್ನು ಹೊಂದಿದೆ ಎನ್ನಲಾಗಿದೆ.

VISTARANEWS.COM


on

Actor Kiran Raj Ronny Movie Reels with Fans Song
Koo

ಬೆಂಗಳೂರು: ʻಕನ್ನಡತಿ ಧಾರಾವಾಹಿʼ (Kannadathi serial) ಮೂಲಕ ಕನ್ನಡ ನಾಡಿನ ಮೂಲೆಮೂಲೆಯಲ್ಲಿ ಅಭಿಮಾನಿಗಳನ್ನು ಪಡೆದ ಕಿರಣ್‌ರಾಜ್‌ (Actor Kiran Raj) ನಾಯಕನಾಗಿ ನಟಿಸುತ್ತಿರುವ ʻರಾನಿʼ (Ronny Movie) ಸಿನಿಮಾ ಒಂದೊಲೊಂದು ಸುದ್ದಿ ಮಾಡುತ್ತಲೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಈ ಚಿತ್ರದ ರೊಮ್ಯಾಂಟಿಕ್ ಹಾಡೊಂದು ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆದಿದೆ.

“ನೀನೆಂದರೆ ನೀನೆಂದರೆ ನನಗೊಂತರ ಅರಿಯದ ಅಮಲು” ಎನ್ನುವ ಸಾಲಿನಿಂದ ಶುರುವಾಗುವ ಹಾಡಿಗೆ ಸಾವಿರಾರು ಜನ ಇನ್‌ಸ್ಟಾ ರೀಲ್ಸ್ ಮಾಡುವ ಮುಖಾಂತರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹಾಡು ಹಿಟ್ ಮಾಡಿದ ಅಭಿಮಾನಿಗಳೊಂದಿಗೆ ಕಿರಣ್ ರಾಜ್ ಇದೆ ಭಾನುವಾರ ರೀಲ್ಸ್ ಮಾಡುತ್ತಿದ್ದಾರೆ.ಪೊಸ್ಟರ್,ಟೀಸರ್,ಹಾಡುಗಳಿಂದ ಭಾರಿ ನಿರೀಕ್ಷೆ ಹುಟ್ಟಿಸಿರುವ “ರಾನಿ” ಚಿತ್ರ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ಈ ಹಿಂದೆ ಹಿಂದಿ ಟೀಸರ್‌ ಬಿಡುಗಡೆಯಾಗಿದ್ದು (Hindi teaser Release) ಭರ್ಜರಿ ರೆಸ್ಪಾನ್ಸ್‌ (Good Response) ಪಡೆದುಕೊಂಡಿತ್ತು. ಗುರುತೇಜ್‌ ಶೆಟ್ಟಿ (Director Gurutej Shetty) ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಬಗ್ಗೆ ಈಗಾಗಲೇ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಟಾಕ್‌ ನಡೆಯುತ್ತಿದೆ. ರಾನಿ ಚಿತ್ರ ಭೂಗತ ಜಗತ್ತಿನ ಕಥೆಯನ್ನು ಹೊಂದಿದೆ ಎನ್ನಲಾಗಿದೆ.

ಇದನ್ನೂ ಓದಿ: Karan Johar: ಬರ್ತ್‌ಡೇ ದಿನ ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕರಣ್ ಜೋಹರ್!

ಟೀಸರ್‌ ಹೇಗಿತ್ತು?

 ʻನಾನು ಮನುಷ್ಯನಾಗಬಯಸುತ್ತೇನೆ, ಡಾನ್‌ ಅಲ್ಲʼ ಎಂದು ಕಿರಣ್‌ರಾಜ್‌ ಅಬ್ಬರಿಸುವ ದೃಶ್ಯವೊಂದು ಇದರಲ್ಲಿತ್ತು. ಇದರೊಂದಿಗೆ ಇದು ಆಕಸ್ಮಿಕವಾಗಿ ಭೂಗತ ಜಗತ್ತು ಪ್ರವೇಶಿಸಿದ ಅಮಾಯಕ ಯುವಕನೊಬ್ಬನ ಕಥೆಯಂತೆ ಕಾಣಿಸುತ್ತಿತ್ತು. ಜತೆಗೆ ಸಖತ್‌ ರೊಮ್ಯಾನ್ಸ್‌ ಕೂಡಾ ಕಾಣಿಸಿತ್ತು. ಟೀಸರ್‌ನಲ್ಲಿ ಕಿರಣ್‌ರಾಜ್‌ ಅವರ ಆಕ್ಷನ್‌, ರವಿಶಂಕರ್‌ ಅವರ ಅಬ್ಬರ ಕಣ್ಮನ ತಣಿಸುವಂತಿತ್ತು. ಕಿರಣ್‌ ಅಂತೂ ಕಿಲ್ಲರ್‌ ಲುಕ್‌ನಿಂದ ಕೊಲ್ಲುತ್ತಾರೆ. ಮಣಿಕಾಂತ್‌ ಕದ್ರಿ ಅವರ ಹಿನ್ನೆಲೆ ಸಂಗೀತವೂ ಟೀಸರ್‌ಗೆ ಹೊಸ ರೂಪ ನೀಡಿತ್ತು.

ಈ ಚಿತ್ರದಲ್ಲಿ ಕಿರಣ್‌ ರಾಜ್‌ ಜತೆಗೆ ರವಿಶಂಕರ್‌, ಮೈಕೋ ನಾಗರಾಜ್‌, ನಾಗತಿಹಳ್ಳಿ ಚಂದ್ರಶೇಖರ್‌, ಬಿ ಸುರೇಶ್‌, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್‌ ಹೆಗ್ಡೆ, ಪ್ರಥ್ವೀರಾಜ್‌, ಯಶ್‌ ಶೆಟ್ಟಿ, ಉಮೇಶ್‌, ಸುಜಯ್‌ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್‌ ಮಲಾನಿ, ಅನಿಲ್‌, ಧರ್ಮೇಂದ್ರ ಅರಸ್‌, ಮನಮೋಹನ ರೈ ಮೊದಲಾದವರು ಇದ್ದಾರೆ. ಪ್ರಮೋದ್‌ ಮರವಂತೆ ಈ ಚಿತ್ರದ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಮಣಿಕಾಂತ್‌ ಕದ್ರಿ ಟ್ಯೂನ್‌ ಹಾಕಿದ್ದಾರೆ.

ಇದೊಂದು ಪಕ್ಕಾ ಆಕ್ಷನ್‌ ಚಿತ್ರವಾಗಿದೆ. ಆದರೆ, ಅತ್ಯಂತ ಸೂಕ್ಷ್ಮ ಅಂಶಗಳನ್ನು ಬೆಸೆದುಕೊಂಡು ಕಟ್ಟಿದ ದೃಶ್ಯ ಕಾವ್ಯ ಎಂಬುದು ಟೀಸರ್‌ನಿಂದ ಸ್ಪಷ್ಟವಾಗುತ್ತದೆ. ರಾನಿ ಸಿನಿಮಾದಲ್ಲಿ ಆರು ಆಕ್ಷನ್‌ ಸೀನ್‌ಗಳಿವೆ ಎಂದು ಚಿತ್ರತಂಡ ಹೇಳಿದೆ.


ಎಲ್ಲಾ ರಾಜ್ಯದಲ್ಲೂ ಕನ್ನಡದಲ್ಲೇ ಸಿನಿಮಾ ಬಿಡುಗಡೆಯಾಗಲಿದೆ ಎನ್ನುವುದು ಸದ್ಯದ ಲೆಕ್ಕಾಚಾರ. ಹಿಂದಿ ಟೀಸರ್‌ ಔಟ್‌ ಆಗಿರುವುದರಿಂದ ಹಿಂದಿಗೆ ಡಬ್‌ ಆಗಿ ಬಿಡುಗಡೆಯಾದರೂ ಅಚ್ಚರಿ ಇಲ್ಲ.

Continue Reading

ಸ್ಯಾಂಡಲ್ ವುಡ್

Samarjit Lankesh: `ಗೌರಿ’ ಚಿತ್ರದ ಮ್ಯೂಸಿಕಲ್ ಟೀಸರ್ ಬಿಡುಗಡೆ ಮಾಡಿದ ಮಹಿಳಾ ಕ್ರಿಕೆಟ್‌ ತಾರೆ!

Samarjit Lankesh: ಕರ್ನಾಟಕದ ಹೆಮ್ಮೆಯ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರು ʻಲವ್ ಯೂ ಸಮಂತ’ ಸಾಂಗ್‌ ಟೀಸರನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ʻಗೌರಿ’ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಜತೆ ʻಟೈಂ ಬರುತ್ತೆ.. ಟೈಂ ಬರುತ್ತೆ..’ ಹಾಡಿಗೆ ಶ್ರೇಯಾಂಕ ಪಾಟೀಲ್ ಹುಕ್ ಸ್ಟೆಪ್ ಹಾಕಿದರು. ಕಾರ್ಯಕ್ರಮದಲ್ಲಿ ಬಿಗ್‍ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ʻಮಿಸ್ ಟೀನ್ ಯುನಿವರ್ಸ್ʼ ಸ್ವೀಜಲ್ ಮುಂತಾದವರು ಹಾಜರಿದ್ದರು.

VISTARANEWS.COM


on

Samarjit Lankesh Love you Samantha Song Teaser
Koo

ಬೆಂಗಳೂರು: ಸಾಂಸ್ಕೃತಿಕ ನಗರಿ (Samarjit Lankesh) ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮವೋ ಸಂಭ್ರಮ. ಕಾರಣ ಈ ಕಾಲೇಜಿನ ಕ್ಲಾಸ್ ರೂಂನಲ್ಲಿ ʻಗೌರಿ’ ಚಿತ್ರತಂಡ ಚಿತ್ರದ ಮ್ಯೂಸಿಕಲ್ ಟೀಸರ್ ರಿಲೀಸ್ (Love you Samantha Song Teaser) ಮಾಡಿದೆ. ಕರ್ನಾಟಕದ ಹೆಮ್ಮೆಯ ಕ್ರಿಕೆಟ್‌ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಅವರು ʻಲವ್ ಯೂ ಸಮಂತ’ ಸಾಂಗ್‌ ಟೀಸರನ್ನು ಬಿಡುಗಡೆಗೊಳಿಸಿದರು.

ತೆರೆ ಮೇಲೆ ಟೀಸರ್ ಮೂಡುತ್ತಿದ್ದಂತೆ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು. ಕ್ಲಾಸ್ ರೂಂನಲ್ಲಿದ್ದ ಬೆಂಚ್ ಮೇಲೆ ಹತ್ತಿ ಶಿಳ್ಳೆ ಹೊಡೆಯುತ್ತ ʻಲವ್ ಯೂ ಸಮಂತಾ’ ಹಾಡಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ʻಗೌರಿ’ ಚಿತ್ರದ ನಾಯಕ ಸಮರ್ಜಿತ್ ಲಂಕೇಶ್ ಜತೆ ʻಟೈಂ ಬರುತ್ತೆ.. ಟೈಂ ಬರುತ್ತೆ..’ ಹಾಡಿಗೆ ಶ್ರೇಯಾಂಕಾ ಪಾಟೀಲ್ ಹುಕ್ ಸ್ಟೆಪ್ ಹಾಕಿದರು.

ಶ್ರೇಯಾಂಕಾ ಮತ್ತು ಸಮರ್ಜಿತ್ ಡ್ಯಾನ್ಸ್‌ಗೆ ವಿದ್ಯಾರ್ಥಿಗಳು ಫಿದಾ ಆಗಿದ್ದಾರೆ. ಒಮ್ಮೆಲೆ ನೂರಾರು ವಿದ್ಯಾರ್ಥಿಗಳು ಶ್ರೇಯಾಂಕಾ ಪಾಟೀಲ್ ಹಾಗೂ ಸಮರ್ಜಿತ್ ಲಂಕೇಶರನ್ನು ಮುತ್ತಿಕೊಂಡು ಅಭಿನಂದನೆಗಳ ಮಹಾಪೂರ ಹರಿಸಿದರು. ಈ ವೇಳೆ ವಿದ್ಯಾರ್ಥಿಗಳಿಗೆ ʻಗೌರಿ’ ಚಿತ್ರದ ವಿಶೇಷ ಚಾಕ್‍ಲೇಟ್‍ಗಳನ್ನು ಸಹ ವಿತರಿಸಲಾಯಿಗಿದೆ.
ʻಲವ್ ಯೂ ಸಮಂತಾ’ಗೆ ಸಾಹಿತ್ಯ ಕವಿರಾಜ್ ಅವರದ್ದಾದರೆ, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನವಿದೆ.
ಕಾರ್ಯಕ್ರಮದಲ್ಲಿ ಬಿಗ್‍ಬಾಸ್ ಖ್ಯಾತಿಯ ಶೈನ್ ಶೆಟ್ಟಿ, ʻಮಿಸ್ ಟೀನ್ ಯುನಿವರ್ಸ್ʼ ಸ್ವೀಜಲ್ ಮುಂತಾದವರು ಹಾಜರಿದ್ದರು.

ಇದನ್ನೂ ಓದಿ: Karan Johar: ಬರ್ತ್‌ಡೇ ದಿನ ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕರಣ್ ಜೋಹರ್!

ಇಂದ್ರಜಿತ್​ ಲಂಕೇಶ್ (Indrajit Lankesh)​ ಅವರ ಪುತ್ರ ಸಮರ್ಜಿತ್​ ಲಂಕೇಶ್​ (Samarjit Lankesh) ಅವರು ಹೀರೊ ಆಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಇಂದ್ರಜಿತ್‌ ಲಂಕೇಶ್ ಅವರು ತಮ್ಮ ಮಗನ ಮೊದಲ ಸಿನಿಮಾಕ್ಕೆ ‘ಗೌರಿ’ ಎಂದು ಟೈಟಲ್ ಇಟ್ಟಿದ್ದಾರೆ. ಈ ಚಿತ್ರಕ್ಕೆ ‘ಗೌರಿ’ ಎನ್ನುವ ಶೀರ್ಷಿಕೆ ಇಟ್ಟಿದ್ದು ಏಕೆ ಎನ್ನುವ ಪ್ರಶ್ನೆಗೆ ಇಂದ್ರಜಿತ್ ಅವರು ಈ ಹಿಂದೆ ಉತ್ತರ ನೀಡಿದ್ದರು.

ʻʻನನ್ನ ಅಕ್ಕನ ಮೇಲಿ ಪ್ರೀತಿ ಹಾಗೂ ಅಭಿಮಾನಕ್ಕಾಗಿ ಗೌರಿ ಎನ್ನುವ ಶೀರ್ಷಿಕೆ ಇಟ್ಟಿದ್ದೇನೆʼʼಎಂದಿದ್ದರು. ಈ ಸಿನಿಮಾಗಾಗಿ ಸಮರ್ಜಿತ್​ ಲಂಕೇಶ್​ ಅವರು ಡ್ಯಾನ್ಸ್​, ಫೈಟಿಂಗ್​, ಕುದುರೆ ಸವಾರಿ ಸೇರಿದಂತೆ ಅನೇಕ ಕಲೆಗಳನ್ನು ಕಲಿತು ಬಂದಿದ್ದಾರೆ. ಗೌರಿ’ ಚಿತ್ರದಲ್ಲಿ ಸಮರ್ಜಿತ್​ ಲಂಕೇಶ್​ಗೆ ಜೋಡಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಸಾನ್ಯಾ ಅಯ್ಯರ್​ ಅವರು ನಟಿಸಿದ್ದಾರೆ.

ಎಜೆ ಶೆಟ್ಟಿ ಛಾಯಾಗ್ರಹಣ ಮಾಡುತ್ತಿದ್ದು, ಬಿ ಎ ಮಧು, ರಾಜಶೇಖರ್, ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ಕೆ ಕಲ್ಯಾಣ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆಯುತ್ತಿದ್ದಾರೆ.

Continue Reading

ಸ್ಯಾಂಡಲ್ ವುಡ್

Sreenath Bhasi Movie: ʻಮಂಜುಮ್ಮೆಲ್ ಬಾಯ್ಸ್ʼ ನಟನಿಗೆ ಸ್ಯಾಂಡಲ್​ವುಡ್​ ಡೈರೆಕ್ಟರ್ ಆ್ಯಕ್ಷನ್​ ಕಟ್​!

Sreenath Bhasi Movie: ಶ್ರೀನಾಥ್ ಭಾಸಿ (Sreenath Bhasi) ಅವರು ವೈರಸ್, ಹೋಮ್, ಕುಂಬಳಂಗಿ ನೈಟ್ಸ್ ಅಂತಹ ಅದ್ಭುತ ಸಿನಿಮಾಗಳಲ್ಲಿ‌ ನಟಿಸಿ ಸೈ ಎನಿಸಿಕೊಂಡವರು. ಮಾಲಿವುಡ್ ಸ್ಟಾರ್ ನಟ ನಮ್ಮ‌ ಕನ್ನಡದ ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್ ಶಶೀಧರ ಕೆ ಎಮ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಮಲಯಾಳಂ ಸಿನಿಮಾ ʻಸಿಬಿಲ್ ಸ್ಕೋರ್ʼ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.

VISTARANEWS.COM


on

Sreenath Bhasi Movie Shashidhar direction new Movie
Koo

ಬೆಂಗಳೂರು: ʻಮಂಜುಮ್ಮೆಲ್ ಬಾಯ್ಸ್ʼ ಮಾಲಿವುಡ್ ಇಂಡಸ್ಟ್ರೀಗೆ ಈ ವರ್ಷ ಸಿಕ್ಕಂತಹ ಸೂಪರ್ ಡೂಪರ್ ಹಿಟ್ ಸಿನಿಮಾ. ವಿಶ್ವಾದ್ಯಂತ ಪ್ರೇಕ್ಷಕರು ಸಿನಿಮಾವನ್ನ ನೋಡಿ ಇಷ್ಟಪಡುತ್ತಿದ್ದಾರೆ. ಪಾತ್ರಧಾರಿಗಳ ಬಗ್ಗೆ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಇಂಚಿಂಚೂ ಮಾತನಾಡುತ್ತಿದ್ದಾರೆ. ಇದೇ ವೇಳೆ ʻಡಾಟರ್ ಆಫ್ ಪಾರ್ವತಮ್ಮʼ, ವೀರಂ, ʻಶುಗರ್ ಲೆಸ್ʼ ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಶಶಿಧರ ಅವರು ಶುಗರ್ ಲೆಸ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೀಗ ಮಲಯಾಳಂನಲ್ಲಿ ತಮ್ಮ ಮೊದಲ‌ ಚಿತ್ರವನ್ನ ನಿರ್ದೇಶನ‌ ಮಾಡಲು‌ ಹೊರಟಿದ್ದಾರೆ. ಈ ಮೂಲಕ ಇದು ಶಶಿಧರ ಅವರ ಸಿನಿಜರ್ನಿಯ (Sreenath Bhasi Movie) ಎರಡನೇ ಡೈರೆಕ್ಷನ್‌ನ ಸಿನಿಮಾವಾಗಲಿದೆ.

ಸಿಬಿಲ್ ಸ್ಕೋರ್‌ನಲ್ಲಿ ಶ್ರೀನಾಥ್ ಭಾಸಿ

ಶ್ರೀನಾಥ್ ಭಾಸಿ (Sreenath Bhasi) ಅವರು ವೈರಸ್, ಹೋಮ್, ಕುಂಬಳಂಗಿ ನೈಟ್ಸ್ ಅಂತಹ ಅದ್ಭುತ ಸಿನಿಮಾಗಳಲ್ಲಿ‌ ನಟಿಸಿ ಸೈ ಎನಿಸಿಕೊಂಡವರು. ಮಾಲಿವುಡ್ ಸ್ಟಾರ್ ನಟ, ನಮ್ಮ‌ ಕನ್ನಡದ ಪ್ರೊಡ್ಯೂಸರ್ ಹಾಗೂ ಡೈರೆಕ್ಟರ್ ಶಶಿಧರ ಕೆ ಎಮ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಮಲಯಾಳಂ ಸಿನಿಮಾ ʻಸಿಬಿಲ್ ಸ್ಕೋರ್ʼದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.

ಇದನ್ನೂ ಓದಿ: Manjummel Boys: ‘ಮಂಜುಮ್ಮೆಲ್ ಬಾಯ್ಸ್’ ಒಟಿಟಿ ಡೇಟ್ ಅನೌನ್ಸ್ ಮಾಡಿದ ಡಿಸ್ನಿ!

ಈ‌ ಸಿನಿಮಾವನ್ನು ಕನ್ನಡದ ನಿರ್ದೇಶಕರೇ ನಿರ್ದೇಶನ ಮಾಡುತ್ತಿದ್ದು, ಹಾಗೇ ಮಲಯಾಳಂ ಸಿನಿಮಾ ಆಗಿರುವುದರಿಂದ ಈ ಸಿನಿಮಾದಲ್ಲಿ ಟೆಕ್ನಿಶಿಯನ್ಸ್ ಆರ್ಟಿರ್ಸ್ಟ್ ಕನ್ನಡ ಹಾಗೂ ಮಲಯಾಳಂನವರಾಗಿರುತ್ತಾರೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಸೋಹನ್ ಸೀನುಲಾಲ್, ದೀಪಕ್ ಪ್ರಿನ್ಸ್ ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ದಿ ಎಮೋಷನ್ಸ್ ಫ್ಯಾಕ್ಟರಿ ಗ್ರೂಪ್(EFG) ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ವಿವೇಕ್ ಶ್ರೀಕಂಠಯ್ಯ ಬಂಡವಾಳ ಹೂಡುತ್ತಿದ್ದಾರೆ. ಕೋ ಪ್ರೊಡ್ಯೂಸರ್ ಆಗಿ ವಿಕ್ರಮ್, ಲೈನ್ ಪ್ರೊಡ್ಯೂಸರ್ ಆಗಿ ದೀಪು ಕರುಣಾಕರಣ್ ಎಕ್ಸೆಕ್ಯೂಟೀವ್ ಪ್ರೊಡ್ಯೂಸರ್ ಆಗಿ ಶಾಜಿ ಫ್ರಾನ್ಸಿಸ್ ಕೈ ಜೋಡಿಸಿದ್ದಾರೆ. ಸಿನಿಮಾದ ಛಾಯಾಗ್ರಹಣ ಪ್ರದೀಪ್ ನಾಯರ್, ಡೈಲಾಗ್ಸ್ ಅರ್ಜುನ್ ಟಿ ಸತ್ಯನ್, ಸೋಬಿನ್ ಕೆ ಸೋಮನ್ ಸಂಕಲನವಿದೆ. ಇನ್ನೂ ಕ್ರಿಯೇಟಿವ್ ಹೆಡ್ ಆಗಿ ಶರತ್ ವಿನಾಯಕ್ ಸಿನಿಮಾಗೆ ಜತೆಯಾಗಿದ್ದಾರೆ.

Continue Reading

ಸ್ಯಾಂಡಲ್ ವುಡ್

Kiccha Sudeep: ʻಮ್ಯಾಕ್ಸ್ʼ ಪ್ರಿ- ಕ್ಲೈಮ್ಯಾಕ್ಸ್ ಫೋಟೊ ಲೀಕ್‌? ಬೆಂಕಿ ಬಿರುಗಾಳಿ ಅಂದ್ರು ಫ್ಯಾನ್ಸ್‌!

Kiccha Sudeep: ಈ ಹಿಂದೆ ಕಿಚ್ಚ ಸುದೀಪ್‌ ಅವರು ಶೂಟಿಂಗ್‌ ಕಂಪ್ಲೀಟ್‌ ಎಂದು ಟ್ವೀಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಕಿಚ್ಚ ಸುದೀಪ್‌ ಎಕ್ಸ್‌ನಲ್ಲಿ ʻʻಮಹಾಬಲಿಪುರಂನಲ್ಲಿ ʻಮ್ಯಾಕ್ಸ್‌ʼಗಾಗಿ ಒಂದು ಸುತ್ತು. ಸುದೀರ್ಘ 10 ತಿಂಗಳ ಪ್ರಯಾಣ. ನಾನು‌ ಪ್ರತಿ ಘಳಿಗೆಯನ್ನು ಆನಂದಿಸಿದೆ. ಸೆಟ್‌ನಲ್ಲಿ ಅದ್ಭುತ ತಂಡ ಮತ್ತು ಸುಂದರ ತಾರೆಯನ್ನು ಒಳಗೊಂಡಿತ್ತು. ಧನ್ಯವಾದಗಳು ಧನು ಸರ್. ನನ್ನನ್ನು ಚೆನ್ನಾಗಿ ಹೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು, ವಿಜಯ್ ಮತ್ತು ಇಡೀ ತಂಡಕ್ಕೆ ಧನ್ಯವಾದʼʼಎಂದು ಬರೆದುಕೊಂಡಿದ್ದರು.

VISTARANEWS.COM


on

Kiccha Sudeep Max cinema Pre climax Photo leak
Koo

ಬೆಂಗಳೂರು: ‘ವಿಕ್ರಾಂತ್ ರೋಣ’ ಬಳಿಕ ಕಿಚ್ಚ ಸುದೀಪ್ (Kiccha Sudeep) ಒಪ್ಪಿಕೊಂಡಿರುವ ಸಿನಿಮಾ ʻಮ್ಯಾಕ್ಸ್ʼ (MAX). ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ‘ಮ್ಯಾಕ್ಸ್’ ಬಗ್ಗೆ ಏನಾದರೂ ಅಪ್‌ಡೇಟ್ ಕೊಡ್ತಾರ ಎಂದು ಕಿಚ್ಚ ಫ್ಯಾನ್ಸ್‌ ಕಾದಿದ್ದರು. ಕಿಚ್ಚ ಸುದೀಪ್‌ ʻಮ್ಯಾಕ್ಸ್‌ʼ ಸಿನಿಮಾ (Max cinema Pre climax) ಶೂಟಿಂಗ್‌ ಕಂಪ್ಲೀಟ್‌ ಆಗಿದೆ ಎಂದು ವಾರದ ಹಿಂದೆ ಎಕ್ಸ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಆದರೀಗ ಸಿನಿಮಾದ ಪ್ರಿ- ಕ್ಲೈಮ್ಯಾಕ್ಸ್ ಫೋಟೊ ಲೀಕ್‌ ಆಗಿದೆ ಎಂದು ಹೇಳಲಾಗುತ್ತಿದೆ. ಜಾತ್ರೆಯ ಸೆಟಪ್‌, ಕಾಳೀಮಾತೆಯ ವಿಗ್ರಹ. ಸುದೀಪ್ ಕಾಳಿ ವಿಗ್ರಹ ಮುಂದೆ ನಡೆದು ಬರುತ್ತಿರುವುದನ್ನು ಕಂಡು ಕ್ಲೈಮ್ಯಾಕ್ಸ್ ಅಥವಾ ಇಂಟ್ರವಲ್‌ ವೇಳೆಗೆ ಬರುವ ಸನ್ನಿವೇಶ ಎಂದು ಜನ ಊಹಿಸುತ್ತಿದ್ದಾರೆ.

`ಪ್ರೀ-ಕ್ಲೈಮ್ಯಾಕ್ಸ್ ನಿಮ್ಮೆಲ್ಲರಿಗೂ ಮ್ಯಾಕ್ಸಿಮಮ್‌ ಹಬ್ಬವನ್ನು ಆನಂದಿಸುವಂತೆ ಮಾಡುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಯಾವ ರೀತಿ ನೋಡಲು ಬಹಳ ದಿನಗಳಿಂದ ಕಾಯುತ್ತಿದ್ದಾರೋ, ನಿಜಕ್ಕೂ ಸುದೀಪ್ ಅಣ್ಣ ಹಾಗೇ ಕಾಣುತ್ತಾರೆʼʼಎಂದು ಪ್ರದೀಪ್‌ ಎಂಬುವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kiccha Sudeep: ʻಮ್ಯಾಕ್ಸ್‌ʼ ಸಿನಿಮಾ ಶೂಟಿಂಗ್‌ ಮುಗಿಸಿದ ಕಿಚ್ಚ ಸುದೀಪ್‌: ರಿಲೀಸ್‌ ಯಾವಾಗ?

ಈ ಹಿಂದೆ ಕಿಚ್ಚ ಸುದೀಪ್‌ ಅವರು ಶೂಟಿಂಗ್‌ ಕಂಪ್ಲೀಟ್‌ ಎಂದು ಟ್ವೀಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಕಿಚ್ಚ ಸುದೀಪ್‌ ಎಕ್ಸ್‌ನಲ್ಲಿ ʻʻಮಹಾಬಲಿಪುರಂನಲ್ಲಿ ʻಮ್ಯಾಕ್ಸ್‌ʼಗಾಗಿ ಒಂದು ಸುತ್ತು. ಸುದೀರ್ಘ 10 ತಿಂಗಳ ಪ್ರಯಾಣ. ನಾನು‌ ಪ್ರತಿ ಘಳಿಗೆಯನ್ನು ಆನಂದಿಸಿದೆ. ಸೆಟ್‌ನಲ್ಲಿ ಅದ್ಭುತ ತಂಡ ಮತ್ತು ಸುಂದರ ತಾರೆಯನ್ನು ಒಳಗೊಂಡಿತ್ತು. ಧನ್ಯವಾದಗಳು ಧನು ಸರ್. ನನ್ನನ್ನು ಚೆನ್ನಾಗಿ ಹೋಸ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು, ವಿಜಯ್ ಮತ್ತು ಇಡೀ ತಂಡಕ್ಕೆ ಧನ್ಯವಾದʼʼಎಂದು ಬರೆದುಕೊಂಡಿದ್ದರು.

ಇದಕ್ಕೂ ಕೆಲವು ದಿನಗಳ ಹಿಂದೆ ಟ್ರೈಲರ್ ರಫ್ ಕಟ್ ಆಗಿರುವ ಬಗ್ಗೆ ಸುದೀಪ್ ಮಾಹಿತಿ ಹಂಚಿಕೊಂಡಿದ್ದರು. ಸುದೀಪ್‌ ಎಕ್ಸ್‌ನಲ್ಲಿ ʻʻಮ್ಯಾಕ್ಸ್ (Max) ಕ್ಲೈಮ್ಯಾಕ್ಸ್‌ನ ಪ್ರಮುಖ ಭಾಗ ಪೂರ್ಣಗೊಳಿಸಲಾಗಿದೆ. ಇಲ್ಲಿಯವರೆಗೆ ಚಿತ್ರೀಕರಿಸಿದ ಅಷ್ಟೂ ಶಾಟ್‌ಗಳನ್ನು ನೋಡಿದೆ. ಚಿತ್ರದ ಪ್ರತಿ ಬಿಟ್ ನೋಡಿ, ತಂಡದ ಎಫರ್ಟ್‌ ಕಂಡು ಸಂತೋಷವಾಗಿದೆ. ಸ್ವಲ್ಪ ಭಾಗ ಚಿತ್ರೀಕರಣ ಬಾಕಿ ಇದೆ. ಟ್ರೈಲರ್ ವೇಳೆ ರಫ್ ಕಟ್ ಸಹ ನೋಡಿದೆ ಮತ್ತು ಅದು ನನ್ನನ್ನು ರೋಮಾಂಚನಗೊಳಿಸಿತುʼʼಎಂದು ಬರೆದುಕೊಂಡಿದ್ದರು.

ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಪಾತ್ರದ ಹೆಸರು ವಿಭಿನ್ನವಾಗಿಯೇ ಇದೆ. ʻಅರ್ಜುನ್ ಮಹಾಕ್ಷಯ್ʼ ಹೆಸರಿನ ಸುದೀಪ್ ಪಾತ್ರ ಸ್ಪೆಷಲ್ ಆಗಿಯೇ ಇರಲಿದೆ ಎಂದು ವರದಿಯಾಗಿದೆ. ʻಮ್ಯಾಕ್ಸ್ʼ ಸಿನಿಮಾದಲ್ಲಿ ಸುದೀಪ್ ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ ಎನ್ನಲಾಗಿದೆ.

ʻಮ್ಯಾಕ್ಸ್ʼ ಸಿನಿಮಾಕ್ಕೆ ಕನ್ನಡದ ತಾರೆಯರು ಇದ್ದಾರೆ. ಕನ್ನಡದ ಟೆಕ್ನಿಷನ್‌ಗಳೂ ಇದ್ದಾರೆ. ಹಾಗೆ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಕೂಡ ಈ ಸಿನಿಮಾದಲ್ಲಿ ಇದ್ದಾರೆ.

ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading
Advertisement
ಕರ್ನಾಟಕ10 mins ago

Lockup Death: ಲಾಕಪ್‌ ಡೆತ್‌ ಅಲ್ಲ ಎಂದಿದ್ದ ಮೃತ ಯುವಕನ ತಂದೆ ಮತ್ತೆ ಉಲ್ಟಾ!

Actor Kiran Raj Ronny Movie Reels with Fans Song
ಸ್ಯಾಂಡಲ್ ವುಡ್10 mins ago

Actor Kiran Raj: ʻರಾನಿʼ ಸಿನಿಮಾ ಸಾಂಗ್‌ ಔಟ್‌; ಇದೇ ಭಾನುವಾರ ಕಿರಣ್ ರಾಜ್‌ ʻರೀಲ್ಸ್ with ಫ್ಯಾನ್ಸ್ʼ!

Speech Fasting
ಆರೋಗ್ಯ11 mins ago

Speech Fasting: ಸದಾ ವಟವಟ ಮಾತಾಡ್ತಾ ಇರ್ತೀರಾ? ʼಮೌನವ್ರತʼ ಮಾಡಿ, ಆರೋಗ್ಯ ಸುಧಾರಣೆ ನೋಡಿ!

Jawa Yezdi
ಆಟೋಮೊಬೈಲ್12 mins ago

Jawa Yezdi : ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ನ ಜಾವಾ 42 ಬಾಬರ್ ರೆಡ್ ಶೀನ್‌ ಬಿಡುಗಡೆ

road Accident
ಕಲಬುರಗಿ25 mins ago

Road Accident : ಅಯೋಧ್ಯೆಯಲ್ಲಿ ಭೀಕರ ಅಪಘಾತ; ಕಲಬುರಗಿ ಮೂಲದ ಮೂವರು ದುರ್ಮರಣ, 19 ಮಂದಿಗೆ ಗಾಯ

KKR vs SRH Final 2024
ಕ್ರೀಡೆ39 mins ago

KKR vs SRH Final 2024: ನಾಳೆ ಕೆಕೆಆರ್​-ಹೈದರಾಬಾದ್​ ಫೈನಲ್​ ಕಾದಾಟ; ಯಾರಿಗೆ ಒಲಿಯಲಿದೆ ಐಪಿಎಲ್​ ಕಿರೀಟ?

Life Expectancy
ಆರೋಗ್ಯ47 mins ago

Life Expectancy: ಕೊರೊನಾದಿಂದ ನಮ್ಮ ಆಯುಷ್ಯದಲ್ಲಿ 2 ವರ್ಷ ಕಡಿತ; WHO ಭೀಕರ ವರದಿ

Tiger Project PM Modi hotel bill in Karnataka dues Rs 6 crore and Centre vs state departments clash
ರಾಜಕೀಯ49 mins ago

PM Modi: ಮೋದಿ ಬಂಡೀಪುರ ಭೇಟಿ ಆತಿಥ್ಯಕ್ಕೆ 6 ಕೋಟಿ ರೂ. ಖರ್ಚು; ಬಿಲ್‌ ಬಾಕಿಗೆ ಕೇಂದ್ರ – ರಾಜ್ಯ ಇಲಾಖೆಗಳ ಜಟಾಪಟಿ

Karnataka Rain
ಮಳೆ52 mins ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

Munawar Faruqui hospitalised Bigg Boss 17 winner
ಸಿನಿಮಾ1 hour ago

Munawar Faruqui: ʻಬಿಗ್ ಬಾಸ್ 17ʼರ ವಿಜೇತ ಮುನಾವರ್ ಫಾರೂಕಿ ಆಸ್ಪತ್ರೆಗೆ ದಾಖಲು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ52 mins ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌