ಚುನಾವಣೆಯಲ್ಲಿ ಈ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದ ಗಿಳಿ; ಬಳಿಕ ಗಿಳಿ ಮಾಲೀಕನ ಬಂಧನ! - Vistara News

ದೇಶ

ಚುನಾವಣೆಯಲ್ಲಿ ಈ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದ ಗಿಳಿ; ಬಳಿಕ ಗಿಳಿ ಮಾಲೀಕನ ಬಂಧನ!

ತಮಿಳುನಾಡಿನ ಕಡಲೂರು ಲೋಕಸಭೆ ಕ್ಷೇತ್ರದಲ್ಲಿ ಪಟ್ಟಾಲಿ ಮಕ್ಕಳ್‌ ಕಚ್ಚಿ (ಪಿಎಂಕೆ) ಪಕ್ಷದಿಂದ ಸ್ಪರ್ಧಿಸಿರುವ ಥಂಕರ್‌ ಬಚ್ಚನ್‌ ಅವರು ಇತ್ತೀಚೆಗೆ ಗಿಳಿ ಶಾಸ್ತ್ರ ಕೇಳಿದ್ದರು. ಬೀದಿ ಬದಿ ಗಿಳಿ ಶಾಸ್ತ್ರ ಹೇಳಿಕೊಂಡು ಜೀವನ ಸಾಗಿಸುತ್ತಿದ್ದ ಸೆಲ್ವರಾಜ್‌ ಎಂಬುವರ ಗಿಳಿಯು ಥಂಕರ್‌ ಬಚ್ಚನ್‌ ಅವರು ಗೆಲುವು ಸಾಧಿಸುತ್ತಾರೆ ಎಂದು ಸೂಚಿಸಿತ್ತು. ಈ ಸುದ್ದಿ ವೈರಲ್‌ ಆಗುತ್ತಲೇ ಸೆಲ್ವರಾಜ್‌ ಅವರು ಕಂಬಿ ಎಣಿಸುವಂತಾಗಿದೆ. ಯಾಕೆ ಅಂತೀರಾ? ಇಲ್ಲಿದೆ ಮಾಹಿತಿ.

VISTARANEWS.COM


on

Fortune Teller
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಗೆಲುವು ಸಾಧಿಸಲು ಅಭ್ಯರ್ಥಿಗಳು ಇನ್ನಿಲ್ಲದ ರಣತಂತ್ರ ರೂಪಿಸುತ್ತಿದ್ದಾರೆ. ಇದರ ಜತೆಗೆ ನಾಮಪತ್ರ ಸಲ್ಲಿಕೆಗೂ ಮುನ್ನ ಮನೆ ದೇವರಿಗೆ ಪೂಜೆ, ಜ್ಯೋತಿಷಿಗಳ ಬಳಿ ತೆರಳಿ ಭವಿಷ್ಯ ಕೇಳುವುದು, ಆರಾಧಿಸುವ ಸ್ವಾಮೀಜಿಗಳ ಆಶೀರ್ವಾದ ಪಡೆಯುವುದು ಸೇರಿ ಗೆಲುವಿಗಾಗಿ ಹಲವು ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ತಮಿಳುನಾಡಿನ ಕಡಲೂರು (Cuddalore) ಲೋಕಸಭೆ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರು ಚುನಾವಣೆ ಗೆಲುವಿಗಾಗಿ ಗಿಳಿ ಶಾಸ್ತ್ರದ (Fortune Teller) ಮೊರೆ ಹೋಗಿದ್ದಾರೆ. ಈಗ ಗಿಳಿಯನ್ನು (Parrot) ಇಟ್ಟುಕೊಂಡು ಜನರ ಭವಿಷ್ಯ ತಿಳಿಸುತ್ತಿದ್ದ ಗಿಳಿಯ ಮಾಲೀಕ ಕಂಬಿ ಎಣಿಸುವಂತಾಗಿದೆ.

ಸಿನಿಮಾ ನಿರ್ದೇಶಕರೂ ಆಗಿರುವ ಥಂಕರ್‌ ಬಚ್ಚನ್‌ ಅವರು ಬಿಜೆಪಿ ಮಿತ್ರಪಕ್ಷವಾದ ಪಟ್ಟಾಲಿ ಮಕ್ಕಳ್‌ ಕಚ್ಚಿ (PMK0 ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಇತ್ತೀಚೆಗೆ ಅವರು ಚುನಾವಣೆ ಪ್ರಚಾರದ ವೇಳೆ ಸೆಲ್ವರಾಜ್‌ ಎಂಬ ಗಿಳಿ ಶಾಸ್ತ್ರದವನ ಬಳಿ ತೆರಳಿದ್ದಾರೆ. ಚುನಾವಣೆಯಲ್ಲಿ ನನ್ನ ಅದೃಷ್ಟ ಹೇಗಿದೆ ಹೇಳಿ ಎಂದಿದ್ದಾರೆ. ಆಗ ಗಿಳಿಯ ಮೂಲಕ ಸೆಲ್ವರಾಜ್‌ ಅವರು ಭವಿಷ್ಯ ನುಡಿದಿದ್ದಾರೆ. ಗಿಳಿಯು ಥಂಕರ್‌ ಬಚ್ಚನ್‌ ಅವರೇ ಗೆಲುವು ಸಾಧಿಸುತ್ತಾರೆ ಎಂಬುದಾಗಿ ಸೂಚಿಸಿದೆ. ಆದರೆ, ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಕಡಲೂರು ಅರಣ್ಯ ಇಲಾಖೆ ಪೊಲೀಸರು ಸೆಲ್ವರಾಜ್‌ ಅವರನ್ನು ಬಂಧಿಸಿದ್ದಾರೆ. ಗಿಳಿಯನ್ನು ಪಂಜರದಿಂದ ಬಿಟ್ಟಿದ್ದಾರೆ. ಬಳಿಕ ಸೆಲ್ವರಾಜ್‌ ಅವರಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ.

ಮತಗಳಿಗಾಗಿ ಜನರಿಗೆ ಕ್ಷೌರ

ತಮಿಳುನಾಡಿನ ರಾಮನಾಥಪುರಂ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪರಿರಾಜನ್‌ ಎಂಬುವರು ಚುನಾವಣೆ ಪ್ರಚಾರದ ಭಾಗವಾಗಿ ಒಂದು ದಿನದ ಮಟ್ಟಿಗೆ ಕ್ಷೌರಿಕನ ಕೆಲಸ ಮಾಡಿದ್ದಾರೆ. ಜನರಿಗೆ ಕಟಿಂಗ್‌ ಮಾಡಿ, ಅವರ ಗಡ್ಡ ಬೋಳಿಸಿ, ಅವರು ಸಲೂನ್‌ನಿಂದ ಹೊರಡುವಾಗ ಕೈ ಮುಗಿದು ಮತ ಕೇಳುತ್ತಿದ್ದಾರೆ. ಇದು ಸುತ್ತಮುತ್ತಲಿನ ಭಾಗದ ಜನರ ಗಮನವನ್ನೂ ಸೆಳೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಚಟುವಟಿಕೆ ಕುರಿತು ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ.

ತರಕಾರಿ ಮಾರಿ ಪ್ರಚಾರ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿರುವ ಎಸ್.‌ ದಾಮೋದರನ್‌ ಅವರು ತಮಿಳುನಾಡಿ ತಿರುಚಿರಪಳ್ಳಿ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರು ಜನರಿಗೆ ಹುಸಿ ಭರವಸೆಗಳನ್ನು ನೀಡುವ, ಅಬ್ಬರದ ಪ್ರಚಾರ ಮಾಡುವ, ಹಣ ಚೆಲ್ಲುವ ಬದಲು ತರಕಾರಿ ಮಾರಾಟಗಾರರ ಜತೆ ಮಾತನಾಡುವ, ಅವರೂ ತರಕಾರಿ, ಹೂವು, ಹಾರಗಳನ್ನು ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರಚಾರ ಕೈಗೊಂಡಿದ್ದಾರೆ. ಇವರು ತಿರುಚಿರಪಳ್ಳಿಯ ಗಾಂಧಿ ಮಾರ್ಕೆಟ್‌ನಲ್ಲಿ ತರಕಾರಿ ಮಾರಾಟ ಮಾಡಿ ಪ್ರಚಾರ ನಡೆಸಿದ ವಿಡಿಯೊ ಈಗ ವೈರಲ್‌ ಆಗಿದೆ.

ಇದನ್ನೂ ಓದಿ: Lok Sabha Election : ಒಂದೇ ದಿನ ಹತ್ತು ಗ್ರಾಮಗಳಲ್ಲಿ ಚುನಾವಣಾ ಪ್ರಚಾರಕ್ಕೆ ಡಾ. ಸುಧಾಕರ್ ಸಜ್ಜು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Gurmeet Ram Rahim: 22ವರ್ಷಗಳ ಹಳೆಯ ಕೊಲೆ ಕೇಸ್‌; ಗುರ್ಮೀತ್ ರಾಮ್​ ರಹೀಮ್​ ಖುಲಾಸೆ

Gurmeet Ram Rahim:ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಪಂಚಕುಲ ಗುರ್ಮೀತ್ ರಾಮ್ ರಹೀಮ್‌ಗೆ 2021 ರಲ್ಲಿ ಜೀವಾವಧಿ ಶಿಕ್ಷೆ ಮತ್ತು 31 ಲಕ್ಷ ರೂಪಾಯಿ ದಂಡ ವಿಧಿಸಿತ್ತು. 2002ರಲ್ಲಿ ರಂಜೀತ್ ಸಿಂಗ್ ಕೊಲೆಯಾಗಿದ್ದರು. ಸಿಬಿಐ ನ್ಯಾಯಾಲಯವು 19 ವರ್ಷಗಳ ನಂತರ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ಜುಲೈ 10, 2002 ರಂದು ಕುರುಕ್ಷೇತ್ರ ಜಿಲ್ಲೆಯ ಖಾನ್‌ಪುರ್ ಕೊಲ್ಯಾನ್ ಗ್ರಾಮದ ತನ್ನ ಹೊಲಗಳ ಬಳಿ ರಂಜಿತ್ ಸಿಂಗ್ ಕ್ಯಾಂಪ್‌ನ ಮ್ಯಾನೇಜರ್ ಆಗಿದ್ದರು. ರಂಜಿತ್ ಕೊಲೆಯಾದ ಒಂದು ವರ್ಷದ ನಂತರ, 2003 ರಲ್ಲಿ, ಅವರ ಕುಟುಂಬವು ಕೊಲೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿತ್ತು.

VISTARANEWS.COM


on

Gurmeet Ram Rahim
Koo

ನವದೆಹಲಿ: ಇದು 22 ವರ್ಷಗಳ ಹಳೆಯ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್​ ರಹೀಮ್​(Gurmeet Ram Rahim) ರನ್ನು ಹೈಕೋರ್ಟ್​ ಖುಲಾಸೆಗೊಳಿಸಿದೆ. ಡೇರಾ ಸಚ್ಚಾ ಸೌಧಾ(Dera Sacha Sauda) ಮ್ಯಾನೇಜರ್ ಆಗಿದ್ದ ರಂಜಿತ್ ಸಿಂಗ್(Ranjith Singh) ಅವರ ಕೊಲೆ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಸಿಂಗ್ ಹಾಗೂ ಇತರ ನಾಲ್ವರನ್ನು ನಿರ್ದೋಷಿಗಳೆಂದು ಹೈಕೋರ್ಟ್‌ ಘೋಷಿಸಿದ್ದು, ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಈ ಹಿಂದೆ ಈ ಪ್ರಕರಣದಲ್ಲಿ ಎಲ್ಲಾ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ(Life imprisonment) ನೀಡಿ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ಸಿಬಿಐ ನ್ಯಾಯಲಯದ ತೀರ್ಪನ್ನು ರಾಮ್​ ರಹೀಮ್ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದರು.

ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಪಂಚಕುಲ ಗುರ್ಮೀತ್ ರಾಮ್ ರಹೀಮ್‌ಗೆ 2021 ರಲ್ಲಿ ಜೀವಾವಧಿ ಶಿಕ್ಷೆ ಮತ್ತು 31 ಲಕ್ಷ ರೂಪಾಯಿ ದಂಡ ವಿಧಿಸಿತ್ತು. 2002ರಲ್ಲಿ ರಂಜೀತ್ ಸಿಂಗ್ ಕೊಲೆಯಾಗಿದ್ದರು. ಸಿಬಿಐ ನ್ಯಾಯಾಲಯವು 19 ವರ್ಷಗಳ ನಂತರ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ಜುಲೈ 10, 2002 ರಂದು ಕುರುಕ್ಷೇತ್ರ ಜಿಲ್ಲೆಯ ಖಾನ್‌ಪುರ್ ಕೊಲ್ಯಾನ್ ಗ್ರಾಮದ ತನ್ನ ಹೊಲಗಳ ಬಳಿ ರಂಜಿತ್ ಸಿಂಗ್ ಕ್ಯಾಂಪ್‌ನ ಮ್ಯಾನೇಜರ್ ಆಗಿದ್ದರು. ರಂಜಿತ್ ಕೊಲೆಯಾದ ಒಂದು ವರ್ಷದ ನಂತರ, 2003 ರಲ್ಲಿ, ಅವರ ಕುಟುಂಬವು ಕೊಲೆಯ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿತ್ತು.

ಆದರೆ ಆಗಿನ ಸರ್ಕಾರ ಅವರ ಮನವಿಯನ್ನು ನಿರ್ಲಕ್ಷ್ಯ ಮಾಡಿತ್ತು. ಇದಾದ ನಂತರ ಅವರ ಕುಟುಂಬ ಸದಸ್ಯರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮೊರೆ ಹೋಗಿದ್ದರು. ಹೈಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ನಾಲ್ಕು ವರ್ಷಗಳ ನಂತರ, ಅಂದರೆ 2007 ರಲ್ಲಿ, ಸಿಬಿಐ ಕೆಲವು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಇದನ್ನೂ ಓದಿ: Viral Video: BMW ಕಾರು ಬಾನೆಟ್‌ ಮೇಲೆ ವ್ಯಕ್ತಿ…ಬ್ಯುಸಿ ರಸ್ತೆಯಲ್ಲಿ ಬಾಲಕನ ಪುಂಡಾಟ; ವಿಡಿಯೋ ವೈರಲ್‌

ಅಕ್ಟೋಬರ್ 18, 2021 ರಂದು ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು ಗುರ್ಮೀತ್ ರಾಮ್ ರಹೀಮ್ ದೋಷಿ ಎಂದು ತೀರ್ಪು ನೀಡಿತ್ತು. ನ್ಯಾಯಾಲಯ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸೇರಿದಂತೆ 5 ಅಪರಾಧಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

Continue Reading

ದೇಶ

Cyclone Remal: ರೆಮಲ್‌ ಚಂಡಮಾರುತದ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ; 16 ಮಂದಿಯನ್ನು ಬಲಿ ಪಡೆದ ಭೀಕರ ಮಳೆ

Cyclone Remal: ಪ್ರಬಲ ಚಂಡಮಾರುತ ರೆಮಲ್‌ ಅಬ್ಬರಕ್ಕೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಅಕ್ಷರಶಃ ನಲುಗಿ ಹೋಗಿವೆ. ರೆಮಲ್ ಚಂಡಮಾರುತದ ಕಾರಣದಿಂದ ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಭೂಕುಸಿತ ಉಂಟಾಗಿದ್ದು, ಬಾಂಗ್ಲಾದೇಶ ಮತ್ತು ಭಾರತದಾದ್ಯಂತ 16 ಮಂದಿಯನ್ನು ಬಲಿ ಪಡೆದುಕೊಂಡಿದೆ. ಬಾಂಗ್ಲಾದೇಶದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಉಳಿದ ಸಾವು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಈ ಪೈಕಿ ಕೆಲವರು ಸಂತ್ರಸ್ತ ಶಿಬಿರಕ್ಕೆ ಸ್ಥಳಾಂತರಿಸುವ ವೇಳೆ ಮೃತಪಟ್ಟರೆ, ಇನ್ನು ಹಲವರು ಭೀಕರ ಮಳೆಯಿಂದ ಮನೆ ಕುಸಿದು, ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

Cyclone Remal
Koo

ಕೋಲ್ಕತ್ತಾ: ಈ ವರ್ಷದ ಮೊದಲ ಪ್ರಬಲ ಚಂಡಮಾರುತ ರೆಮಲ್‌ (Cyclone Remal) ಅಬ್ಬರಕ್ಕೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಅಕ್ಷರಶಃ ನಲುಗಿ ಹೋಗಿವೆ. ರೆಮಲ್ ಚಂಡಮಾರುತದ ಕಾರಣದಿಂದ ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಭೂಕುಸಿತ ಉಂಟಾಗಿದ್ದು, ಬಾಂಗ್ಲಾದೇಶ ಮತ್ತು ಭಾರತದಾದ್ಯಂತ 16 ಮಂದಿಯನ್ನು ಬಲಿ ಪಡೆದುಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಮಳೆಯಿಂದಾಗಿ ಹಲವು ಮಂದಿ ಗಾಯಗೊಂಡಿದ್ದು, ಅನೇಕ ಮನೆಗಳು, ಮರಗಳು ಧರೆಗುರುಳಿವೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ವಿದ್ಯುತ್ ಮಾರ್ಗಗಳಿಗೆ ತೀವ್ರ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಗಂಟೆಗೆ 135 ಕಿ.ಮೀ ವೇಗದಲ್ಲಿ ಬೀಸಿದ ಚಂಡಮಾರುತವು ಭಾನುವಾರ ತಡರಾತ್ರಿ ಬಾಂಗ್ಲಾದೇಶದ ದಕ್ಷಿಣ ಬಂದರು ಮೊಂಗ್ಲಾ ಮತ್ತು ಪಶ್ಚಿಮ ಬಂಗಾಳದ ಪಕ್ಕದ ಸಾಗರ್ ದ್ವೀಪಗಳ ಸುತ್ತಮುತ್ತಲಿನ ಪ್ರದೇಶವನ್ನು ದಾಟಿದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದು, ಉಳಿದ ಸಾವು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿದೆ. ಈ ಪೈಕಿ ಕೆಲವರು ಸಂತ್ರಸ್ತ ಶಿಬಿರಕ್ಕೆ ಸ್ಥಳಾಂತರಿಸುವ ವೇಳೆ ಮೃತಪಟ್ಟರೆ, ಇನ್ನು ಹಲವರು ಭೀಕರ ಮಳೆಯಿಂದ ಮನೆ ಕುಸಿದು, ವಿದ್ಯುತ್‌ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಿದ್ಯುತ್ ಸ್ಪರ್ಶದಿಂದ ನಾಲ್ವರು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದ ಪ್ರಭಾವ ವಿದ್ಯುತ್ ಮಾರ್ಗಗಳ ಮೇಲೂ ಬೀರಿದ್ದು, ಹಲವು ಕರಾವಳಿ ಪ್ರದೇಶಗಳಿಗೆ ಸಂಪರ್ಕ ಕಡಿತಗೊಂಡಿದೆ. ಪರಿಣಾಮ ಬಾಂಗ್ಲಾದೇಶದ ಲಕ್ಷಾಂತರ ಮಂದಿ ಮತ್ತು ಪಶ್ಚಿಮ ಬಂಗಾಳದ ಸಾವಿರಾರು ಮಂದಿ ವಿದ್ಯುತ್‌ ಇಲ್ಲದೆ ಪರದಾಡುವಂತಾಗಿದೆ. ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 1,200 ವಿದ್ಯುತ್‌ ಕಂಬಗಳು ಧರೆಗುರುಳಿವೆ ಮತ್ತು 300 ಮಣ್ಣಿನ ಗುಡಿಸಲುಗಳು ನೆಲಸಮವಾಗಿದೆ ಎಂದು ಅಂದಾಜಿಸಲಾಗಿದೆ.

ʼʼಅಪಘಾತಗಳನ್ನು ತಪ್ಪಿಸಲು ಕೆಲವು ಪ್ರದೇಶಗಳಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ. ಇತ್ತ ಮರಗಳು ಬಿದ್ದು ಅನೇಕ ಕರಾವಳಿ ಪಟ್ಟಣಗಳ ವಿದ್ಯುತ್‌ ಪೂರೈಕೆಗೆ ಅಡ್ಡಿಯಾಗಿದೆʼʼ ಎಂದು ಬಾಂಗ್ಲಾದೇಶದ ವಿದ್ಯುತ್ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಬೀದಿಗಳಿಗೆ ನುಗ್ಗಿದ ನೆರೆ

ಚಂಡಮಾರುತ ಕಾರಣದಿಂದ ಮೇ 27ರಂದು ಭೀಕರ ಮಳೆಯಾಗಿದ್ದು, ಕೋಲ್ಕತ್ತಾದ ಹಲವು ಬೀದಿಗಳಿಗೆ ನೆರೆ ನೀರು ನುಗ್ಗಿದೆ. ಅನೇಕ ಕಡೆ ಗೋಡೆಗಳು ಕುಸಿದು ಬಿದ್ದಿದ್ದು, ಕನಿಷ್ಠ 52 ಮರಗಳು ಧರೆಗುರುಳಿವೆ. ಭಾನುವಾರ ಸುಮಾರು 50 ವಿಮಾನಗಳ ಹಾರಾಟವನ್ನು ನಿರ್ಬಂಧಿಸಲಾಗಿದ್ದು, ಸದ್ಯ ಸಂಚಾರ ಆರಂಭಿಸಿವೆ. ರೈಲು ಸಂಚಾರವನ್ನು ಪುನರಾರಂಭಿಸಲಾಗಿದೆ.

ಇದನ್ನೂ ಓದಿ: Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

10 ಲಕ್ಷ ಮಂದಿಯ ಸ್ಥಳಾಂತರ

ಭಾರತ ಮತ್ತು ಬಾಂಗ್ಲಾದೇಶದ ಕನಿಷ್ಠ 10 ಲಕ್ಷ ಮಂದಿಯನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ʼʼನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳ ಜನರನ್ನು ನಿರಾಶ್ರಿತ ಶಿಬಿರಗಳಿಗೆ ಕರೆದೊಯ್ಯಲಾಗಿದೆʼʼ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Continue Reading

ದೇಶ

Munnar Tour: ಪ್ರಕೃತಿಯ ನಡುವೆ ಅವಿತಿರುವ ಸೌಂದರ್ಯದ ಗಣಿ ಮುನ್ನಾರ್! ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು

ಪ್ರಕೃತಿಯ ನಡುವೆ ವಿಶ್ರಾಂತಿ ಬಯಸುವವರಿಗೆ ಮುನ್ನಾರ್ (Munnar Tour) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ವಾರಾಂತ್ಯದ ವಿಹಾರದ ಆಯ್ಕೆಗಳನ್ನು ನೀಡುತ್ತವೆ. ಮುನ್ನಾರ್ ಪ್ರದೇಶದಲ್ಲಿ (Munnar Tour) ಕೆಲವು ಗುಪ್ತ ನಿಧಿಗಳಿದ್ದು ಅವುಗಳನ್ನು ಹುಡುಕಿಕೊಂಡು ಹೊರಟರೆ ಬದುಕಿನಲ್ಲಿ ಮತ್ತೊಮ್ಮೆ ಚೈತನ್ಯವನ್ನು ತುಂಬಿಕೊಂಡು ಮರಳಬಹುದು. ಮುನ್ನಾರ್ ಕುರಿತ ವಿಸ್ತೃತ ಪರಿಚಯ ಇಲ್ಲಿದೆ.

VISTARANEWS.COM


on

By

Munnar Tour
Koo

ಪ್ರಕೃತಿಯ ನಡುವೆ ಕಾಲ ಕಳೆಯುವುದು ಯಾರಿಗೆ ಇಷ್ಟವಿಲ್ಲ? ಕಚೇರಿ ಕೆಲಸದ ಜಂಜಾಟವನ್ನು ಬಿಟ್ಟು, ನಿತ್ಯದ ಓಡಾಟಕ್ಕೆ ಬ್ರೇಕ್ ಹಾಕಿ ಕೊಂಚ ಹೊತ್ತು ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಕಳೆಯಬೇಕು ಎಂದರೆ ಭಾರತದ (india) ದಕ್ಷಿಣದ (south) ಕೇರಳ (kerala) ರಾಜ್ಯದಲ್ಲಿ ನೆಲೆಗೊಂಡಿರುವ ಪಶ್ಚಿಮ ಘಟ್ಟಗಳ (Western Ghats) ಕಾಡುಗಳಲ್ಲಿ ಅಡಗಿರುವ ಮುನ್ನಾರ್ ಗೆ (Munnar Tour) ಭೇಟಿ ನೀಡಬಹುದು.

ಚಹಾ ತೋಟಗಳಿಗೆ ಪ್ರಸಿದ್ಧವಾಗಿರುವ ಬೆಟ್ಟ, ಮಂಜು ಮತ್ತು ತಂಪಾದ ವಾತಾವರಣದಿಂದ ಮುಚ್ಚಲ್ಪಟ್ಟಿರುವ ಮುನ್ನಾರ್ ನಗರದಿಂದ ದೂರವಾಗಿ ಮನಸ್ಸಿನ ಶಾಂತಿಯನ್ನು ಹುಡುಕುವವರಿಗೆ ಆಕರ್ಷಕ ತಾಣವಾಗಿದೆ.
ಮುನ್ನಾರ್‌ಗೆ ಭೇಟಿ ನೀಡಿದರೆ ನಿಮ್ಮೊಳಗಿನ ಚೈತನ್ಯವು ಪುನರುಜ್ಜೀವನಗೊಳ್ಳುವುದು ಎಂಬುದರಲ್ಲಿ ಸಂದೇಹವಿಲ್ಲ. ಮುನ್ನಾರ್ ಸುತ್ತಮುತ್ತ ಅನೇಕ ತಾಣಗಳಿವೆ. ವಾರಾಂತ್ಯದ ಪ್ರವಾಸದ ವೇಳೆ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬೇಡಿ.


ಮರಯೂರು

ಮುನ್ನಾರ್‌ನಿಂದ ಕೆಲವು ಕಿಲೋ ಮೀಟರ್‌ಗಳಷ್ಟು ದೂರದಲ್ಲಿರುವ ಮರಯೂರ್ ಕಬ್ಬಿನ ಎಸ್ಟೇಟ್‌ಗಳು, ಶ್ರೀಗಂಧದ ಕಾಡುಗಳು ಮತ್ತು ಇತಿಹಾಸಪೂರ್ವ ಡಾಲ್ಮೆನ್‌ಗಳಿಗೆ ಹೆಸರುವಾಸಿಯಾದ ಸಣ್ಣ ಪಟ್ಟಣವಾಗಿದೆ. ನೈಸರ್ಗಿಕ ಅದ್ಭುತಗಳನ್ನು ಒಳಗೊಂಡಿರುವ ಮರಯೂರಿನಲ್ಲಿ ಸಂದರ್ಶಕರು ಬಿಡುವಿನ ವೇಳೆಯಲ್ಲಿ ಕಬ್ಬಿನ ಗದ್ದೆಗಳ ಉದ್ದಕ್ಕೂ ನಡೆಯಬಹುದು. ಶಿಲಾಯುಗದ ಪ್ರಾಚೀನ ಡಾಲ್ಮೆನ್‌ಗಳನ್ನು ಅನ್ವೇಷಿಸಲು ಅಥವಾ ಹತ್ತಿರದಲ್ಲಿರುವ ತೂವನಂ ಜಲಪಾತಗಳಿಗೆ ಭೇಟಿ ನೀಡಬಹುದು. ಅವುಗಳು ತಮ್ಮ ಸುತ್ತಲೂ ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಹೊಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಲ್ಲ ಮಾಡುವುದು ಮರಯೂರಿನ ವಿಶೇಷತೆಗಳಲ್ಲಿ ಒಂದಾಗಿದೆ.


ದೇವಿಕುಲಂ

ಮುನ್ನಾರ್‌ನಿಂದ 7 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ದೇವಿಕುಲಂ ಒಂದು ಸುಂದರವಾದ ರೆಸಾರ್ಟ್ . ಇಲ್ಲಿ ಪ್ರಕೃತಿಯು ತನ್ನ ಎಲ್ಲಾ ಸೌಂದರ್ಯವನ್ನು ಹಚ್ಚ ಹಸಿರಿನ ಕಣಿವೆಗಳು ಮತ್ತು ಮೌನವಾದ ಸರೋವರಗಳೊಂದಿಗೆ ಬಾಚಿ ಕೊಟ್ಟಿದೆ. ದೇವಿಕುಲಂ ಸರೋವರದಲ್ಲಿ ಶಾಂತವಾದ ದೋಣಿ ವಿಹಾರವನ್ನು ಆನಂದಿಸಬಹುದು. ಚಹಾ ತೋಟಗಳೊಂದಿಗೆ ರೋಲಿಂಗ್ ಬೆಟ್ಟಗಳಿಂದ ಆವೃತವಾಗಿದೆ.

ಸೀತಾದೇವಿ ಸರೋವರವು ಹೆಚ್ಚು ದೂರದಲ್ಲಿಲ್ಲ. ಇದು ಸಮೃದ್ಧ ಖನಿಜಾಂಶದ ಕಾರಣದಿಂದಾಗಿ ಔಷಧೀಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಸಾಹಸಿ ಪ್ರವಾಸಿಗರು ಹೇರಳವಾದ ವನ್ಯಜೀವಿಗಳಿಂದ ತುಂಬಿರುವ ಕಾಡುಗಳ ಮೂಲಕ ಟ್ರೆಕ್ಕಿಂಗ್ ಹೋಗಬಹುದು. ಜೊತೆಗೆ ರಾಕ್ ಕ್ಲೈಂಬಿಂಗ್ ಚಟುವಟಿಕೆಗಳಲ್ಲಿ ತೊಡಗಬಹುದು.


ಚಿನ್ನಕನಲ್

ಮುನ್ನಾರ್‌ನಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಚಿನ್ನಕನಲ್ ಮಂಜಿನ ಬೆಟ್ಟಗಳ ನಡುವೆ ಇರುವ ಸುಂದರವಾದ ಹಳ್ಳಿಯಾಗಿದೆ. ಧುಮ್ಮಿಕ್ಕುವ ಜಲಪಾತಗಳು, ಸಾಂಬಾರ ತೋಟಗಳು ಮತ್ತು ಪಶ್ಚಿಮ ಘಟ್ಟಗಳ ರಮಣೀಯ ನೋಟವು ಚಿನ್ನಕನಾಲ್ ಅನ್ನು ಶಾಂತಿಯನ್ನು ಬಯಸುವವರಿಗೆ ಸ್ವರ್ಗವನ್ನಾಗಿ ಮಾಡುತ್ತದೆ. ಈ ಸ್ಥಳದ ಒಂದು ಆಕರ್ಷಣೆಯೆಂದರೆ ಅಟ್ಟುಕಲ್ ಜಲಪಾತಗಳು. ಇದು ಪ್ರಕೃತಿಯೊಂದಿಗೆ ಭವ್ಯವಾಗಿ ಬೆರೆತುಹೋಗಿದೆ. ವಿಶಾಲವಾಗಿ ಹರಡಿರುವ ಟೀ ಎಸ್ಟೇಟ್‌ಗಳು ಮತ್ತು ಮಸಾಲೆ ತೋಟಗಳು ಇಲ್ಲಿನ ಆಕರ್ಷಣೆಯಾಗಿದೆ.


ಆನಮುಡಿ ಶಿಖರ

ರೋಮಾಂಚನವನ್ನು ಬಯಸುವ ಸಾಹಸಪ್ರಿಯರಿಗೆ ಆನಮುಡಿ ಶಿಖರವನ್ನು ಹತ್ತುವುದು ಮುನ್ನಾರ್‌ನಲ್ಲಿನ ನಡೆಸಬಹುದಾದ ಚಟುವಟಿಕೆಗಳ ಪಟ್ಟಿಯ ಮೇಲ್ಭಾಗದಲ್ಲಿರಬೇಕು. ಆನಮುಡಿಯು ದಕ್ಷಿಣ ಭಾರತದ ಅತ್ಯುನ್ನತ ಶಿಖರವೆಂಬ ಬಿರುದನ್ನು ಪಡೆದ ಕಾರಣ, ಅದರ ಎತ್ತರದ ಮೇಲ್ಭಾಗದ ನೋಟವು ಅದರ ಸುತ್ತಲಿನ ವಿವಿಧ ಕಣಿವೆಗಳು, ಕಾಡುಗಳು ಮತ್ತು ತೊರೆಗಳನ್ನು ಬಹಿರಂಗಪಡಿಸುತ್ತದೆ. ಅಲ್ಲಿಗೆ ಚಾರಣ ಮಾಡುವುದು ದುರ್ಬಲ ಹೃದಯದ ಜನರಿಗೆ ಸಾಧ್ಯವಿಲ್ಲ. ಪರ್ವತಾರೋಹಿಗಳು ಇಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಪ್ರಭೇದಗಳಾದ ನೀಲಗಿರಿ ತಾಹ್ರ್ ಸೇರಿದಂತೆ ವಿವಿಧ ರೀತಿಯ ಸಸ್ಯಗಳು ಮತ್ತು ಪ್ರಾಣಿಗಳನ್ನು ಕಾಣಬಹುದು.


ಟಾಪ್ ಸ್ಟೇಷನ್

ಟಾಪ್ ಸ್ಟೇಷನ್ ಮುನ್ನಾರ್ ನಿಂದ ಸುಮಾರು 32 ಕಿಲೋಮೀಟರ್ ದೂರದಲ್ಲಿರುವ ಒಂದು ಸುಂದರವಾದ ವ್ಯೂ ಪಾಯಿಂಟ್. ಸಮುದ್ರ ಮಟ್ಟದಿಂದ ಸರಿಸುಮಾರು 1,700 ಮೀಟರ್ ಎತ್ತರದಲ್ಲಿದೆ.

ಇದನ್ನೂ ಓದಿ: Best Tourist Places In Tamilnadu: ಈ ಸುಂದರ ದೇವಾಲಯಗಳ ದರ್ಶನಕ್ಕಾದರೂ ತಮಿಳುನಾಡಿಗೆ ಹೋಗಲೇಬೇಕು!

ಈ ಸ್ಥಳವು ನಿಸರ್ಗ ಮತ್ತು ಛಾಯಾಗ್ರಹಣವನ್ನು ಇಷ್ಟಪಡುವ ಜನರಿಗೆ ಬಹಳ ಪ್ರಿಯವಾಗುವುದು. ಇಲ್ಲಿಂದ ಪಶ್ಚಿಮ ಘಟ್ಟಗಳ ವಿಹಂಗಮ ನೋಟಗಳನ್ನು ಆನಂದಿಸಬಹುದು. ಅವುಗಳ ವಿಶಾಲತೆ ಮತ್ತು ತಮಿಳುನಾಡಿನ ಬಯಲು ಪ್ರದೇಶಗಳನ್ನು ಕಾಣಬಹುದು. ಈ ವ್ಯೂಪಾಯಿಂಟ್‌ನ ಹೆಸರು ಹಳೆಯ ರೋಪ್‌ವೇ ನಿಲ್ದಾಣದಿಂದ ಹುಟ್ಟಿಕೊಂಡಿದೆ. ಇದನ್ನು ಮುನ್ನಾರ್‌ನಿಂದ ಕೆಳಗಿನ ತಗ್ಗು ಪ್ರದೇಶಗಳಿಗೆ ಚಹಾವನ್ನು ಸಾಗಿಸಲು ಬಳಸಲಾಗುತ್ತಿತ್ತು. ಹತ್ತಿರದ ಅಂಗಡಿಗಳಿಂದ ಬಿಸಿ ಬಿಸಿ ಚಹಾದ ಸವಿಯನ್ನು ಸವಿಯಬಹುದು.

Continue Reading

ದೇಶ

Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

Human trafficking Case:ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢಯ ಒಟ್ಟು 15 ಸ್ಥಳಗಳಲ್ಲಿ ದಾಳಿ ನಡೆಸಿದ ಎನ್‌ಐಎ ಐವರನ್ನು ಬಂಧಿಸಿದೆ ಬಂಧಿತ ಆರೋಪಿಗಳನ್ನು ವಡೋದರದ ಮನೀಶ್ ಹಿಂಗು, ಗೋಪಾಲ್‌ಗಂಜ್‌ನ ಪಹ್ಲಾದ್ ಸಿಂಗ್, ನೈಋತ್ಯ ದೆಹಲಿಯ ನಬಿಯಾಲಂ ರೇ, ಗುರುಗ್ರಾಮದ ಬಲ್ವಂತ್ ಕಟಾರಿಯಾ ಮತ್ತು ಚಂಡೀಗಢದ ಸರ್ತಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಎನ್‌ಐಎ ರಾಜ್ಯ ಪೊಲೀಸ್‌ ಮತ್ತು ಕೇಂದ್ರೀಯ ಗುಪ್ತಚರ ಇಲಾಖೆ ಜೊತೆಗೂಡಿ ಈ ರೇಡ್‌ ನಡೆಸಿದೆ.

VISTARANEWS.COM


on

Human trafficking
Koo

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದಾಳಿ ನಡೆಸಿದ್ದು, ಭಾರೀ ಮಾನವ ಕಳ್ಳಸಾಗಣೆ(Human trafficking Case) ಜಾಲವನ್ನು ಬೇಧಿಸಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರನ್ನು ಅರೆಸ್ಟ್‌ ಮಾಡಿದ್ದಾರೆ. ಈ ಆರೋಪಿಗಳು ಕೆಲಸ ಕೊಡಿಸುವುದಾಗಿ ನಂಬಿಸಿ ಭಾರತೀಯ ಯುವಕರನ್ನು ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.

15 ಸ್ಥಳಗಳಲ್ಲಿ ಶೋಧ ಕಾರ್ಯ

ಮಹಾರಾಷ್ಟ್ರ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಚಂಡೀಗಢಯ ಒಟ್ಟು 15 ಸ್ಥಳಗಳಲ್ಲಿ ದಾಳಿ ನಡೆಸಿದ ಎನ್‌ಐಎ ಐವರನ್ನು ಬಂಧಿಸಿದೆ ಬಂಧಿತ ಆರೋಪಿಗಳನ್ನು ವಡೋದರದ ಮನೀಶ್ ಹಿಂಗು, ಗೋಪಾಲ್‌ಗಂಜ್‌ನ ಪಹ್ಲಾದ್ ಸಿಂಗ್, ನೈಋತ್ಯ ದೆಹಲಿಯ ನಬಿಯಾಲಂ ರೇ, ಗುರುಗ್ರಾಮದ ಬಲ್ವಂತ್ ಕಟಾರಿಯಾ ಮತ್ತು ಚಂಡೀಗಢದ ಸರ್ತಾಜ್ ಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಎನ್‌ಐಎ ರಾಜ್ಯ ಪೊಲೀಸ್‌ ಮತ್ತು ಕೇಂದ್ರೀಯ ಗುಪ್ತಚರ ಇಲಾಖೆ ಜೊತೆಗೂಡಿ ಈ ರೇಡ್‌ ನಡೆಸಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಂಟು FIR ದಾಖಲಾಗಿವೆ

ಎನ್‌ಐಎ ತನಿಖೆಯಿಂದ ಆರೋಪಿಗಳು ಕಾನೂನುಬದ್ಧ ಉದ್ಯೋಗದ ಸುಳ್ಳು ಭರವಸೆಯ ಮೇಲೆ ಭಾರತೀಯ ಯುವಕರನ್ನು ವಿದೇಶಿ ದೇಶಗಳಿಗೆ ಆಮಿಷವೊಡ್ಡುವ ಮತ್ತು ಕಳ್ಳಸಾಗಣೆ ಮಾಡುವ ಸಂಘಟಿತ ಕಳ್ಳಸಾಗಣೆ ಸಿಂಡಿಕೇಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. “ಯುವಕರು ಲಾವೋಸ್, ಗೋಲ್ಡನ್ ಟ್ರಯಾಂಗಲ್ ಸ್ಪೆಷಲ್ ಎಕನಾಮಿಕ್ ಝೋನ್ (SEZ), ಮತ್ತು ಕಾಂಬೋಡಿಯಾದ ಇತರ ಸ್ಥಳಗಳಲ್ಲಿ ನಕಲಿ ಕಾಲ್ ಸೆಂಟರ್‌ಗಳಲ್ಲಿ ಕೆಲಸ ಮಾಡಲು ಬಲವಂತ ಮಾಡಲಾಗುತ್ತದೆ. ಈ ಕಾಲ್‌ ಸೆಂಟರ್‌ ಮುಖ್ಯವಾಗಿ ವಿದೇಶಿ ಪ್ರಜೆಗಳಿಂದ ನಿಯಂತ್ರಿಸಲ್ಪಡುತ್ತದೆ ಎಂದು ಎನ್‌ಐಎ ಹೇಳಿದೆ.

ಕೆಲವು ವಾರಗಳ ಹಿಂದೆ ಕೇರಳದಲ್ಲೂ ಇಂತಹದ್ದೇ ಒಂದು ಜಾಲವನ್ನು ಸಿಬಿಐ ಬಯಲಿಗೆಳೆದಿತ್ತು. ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್‌(Russia-Ukraine War)ಗೆ ಮಾನವ ಕಳ್ಳಸಾಗಾಟ(Human trafficking) ಮಾಡುತ್ತಿದ್ದ ಕೇರಳದ ತಿರುವನಂತಪುರಂ ಮೂಲದ ಇಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ(CBI) ಬಂಧಿಸಿತ್ತು. ಟ್ರಾವೆಲ್‌ ಏಜೆಂಟ್‌ಗಳ ಮೋಸದಾಟಕ್ಕೆ ಬಲಿಯಾಗಿ ವಿದೇಶಕ್ಕೆ ಹೋಗಿ ಯುವಕರು ಸಂಕಷ್ಟ ಎದುರಿಸುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಟ್ರಾವೆಲ್‌ ಏಕೆಂಟ್‌ಗಳ ಮೇಲೆ ಕಣ್ಣಿಟ್ಟ ಸಿಬಿಐಗೆ ಈ ದಂಧೆ ಬೆಳಕಿಗೆ ಬಂದಿತ್ತು.

ಈ ಟ್ರಾವೆಲ್‌ ಏಜೆಂಟ್‌ಗಳು ರಷ್ಯಾದಲ್ಲಿ ಕೆಲಸ ಕೊಡಿಸುವುದಾಗ ಭಾರತೀಯ ಯುವಕರನ್ನು ನಂಬಿಸಿ, ಅಲ್ಲಿಗೆ ಕಳುಹಿಸಿ ಅವರ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡು ಯುದ್ಧ ಪೀಡಿತ ಪ್ರದೇಶಕ್ಕೆ ಕಳಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 17 ವಿಸಾ ಕಂಪನಿಗಳು ಹಾಗೂ ಅದರ ಮಾಲಕರು, ಏಜೆಂಟ್‌ಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿದೆ. ಅವರ ವಿರುದ್ಧ ಸಂಚು, ವಂಚನೆ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಏಜೆಂಟ್‌ಗಳ ಮೂಲಕ ಭಾರತೀಯ ಯುವಕರನ್ನು ರಷ್ಯಾ ಸೇನೆ, ಭದ್ರತಾ ಸಿಬ್ಬಂದಿ ಅಥವಾ ಇತರೆ ಕ್ಷೇತ್ರಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರಷ್ಯಾಗೆ ಕಳುಹಿಸಿಕೊಡಲಾಗುತ್ತದೆ. ಸಂತ್ರಸ್ತರಿಂದ ಇದಕ್ಕಾಗಿ ಏಜೆಂಟ್‌ಗಳು ಸ್ವಲ್ಪ ಹಣವನ್ನೂ ಪಡೆಯುತ್ತಾರೆ. ಅಲ್ಲಿ ಕಾಲಿಟ್ಟೊಡನೇ ಅವರ ಪಾಸ್‌ಪೋರ್ಟ್‌ ಕಿತ್ತುಕೊಂಡು ರಷ್ಯಾ ಸೇನೆಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗುತ್ತದೆ. ಅಲ್ಲಿ ಅವರಿಗೆ ಯುದ್ಧ ತರಬೇತಿ ನೀಡಿ ಅಲ್ಲಿಂದ ಅವರನ್ನು ಯುದ್ಧ ಪೀಡಿತ ಪ್ರದೇಶಗಳಿಗೆ ಕಳಿಸುತ್ತಾರೆ.

ಇದನ್ನೂ ಓದಿ:Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

Continue Reading
Advertisement
Success Story
ಕೃಷಿ3 mins ago

Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

Radhika Pandit
ಸ್ಯಾಂಡಲ್ ವುಡ್10 mins ago

Radhika Pandit: ಅಭಿಮಾನಿಗಳ ಪ್ರಶ್ನೆ ಎದುರಿಸಲು ನಟಿ ರಾಧಿಕಾ ಪಂಡಿತ್ ಸಿದ್ಧ; ಹೊಸ ಸಿನಿಮಾ ಘೋಷಿಸ್ತಾರಾ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ?

chakravarthy sulibele
ಬೆಂಗಳೂರು15 mins ago

Chakravarthy Sulibele: ಮೈಸೂರಿನಲ್ಲಿ ಇಂದು ಸಂಜೆ ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್‌ ಸಮ್ಮಾನ್‌ ಪ್ರಶಸ್ತಿ ಪ್ರದಾನ

gold rate today bipasha
ಚಿನ್ನದ ದರ16 mins ago

Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೀಗಿದೆ

Team India Coach
ಕ್ರೀಡೆ20 mins ago

Team India Coach: ಟೀಮ್​ ಇಂಡಿಯಾದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಧಾನಿ ಮೋದಿ, ಅಮಿತ್ ಶಾ!

Gurmeet Ram Rahim
ದೇಶ23 mins ago

Gurmeet Ram Rahim: 22ವರ್ಷಗಳ ಹಳೆಯ ಕೊಲೆ ಕೇಸ್‌; ಗುರ್ಮೀತ್ ರಾಮ್​ ರಹೀಮ್​ ಖುಲಾಸೆ

School reopen
ಬೆಂಗಳೂರು27 mins ago

School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ

T20 World Cup 2024
ಕ್ರೀಡೆ1 hour ago

T20 World Cup 2024: ಮಿನಿ ವಿಶ್ವಕಪ್​ ಸಮರದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್‌ ಗಳಿಸಿದ ದಾಂಡಿಗರಿವರು!

Cyclone Remal
ದೇಶ1 hour ago

Cyclone Remal: ರೆಮಲ್‌ ಚಂಡಮಾರುತದ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ; 16 ಮಂದಿಯನ್ನು ಬಲಿ ಪಡೆದ ಭೀಕರ ಮಳೆ

Prajwal revanna Case
ಪ್ರಮುಖ ಸುದ್ದಿ1 hour ago

Prajwal Revanna Case: ಪ್ರಜ್ವಲ್‌ ರೇವಣ್ಣ ಮೇ 31ರ ಮೊದಲು ಬರಲೇಬೇಕು! ಕಾರಣ ಇಲ್ಲಿದೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ20 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌