Hindu Temple: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಹಿಂದು ದೇವಾಲಯವನ್ನೇ ನೆಲಸಮಗೊಳಿಸಿದ ಪಾಕ್‌ ಆಡಳಿತ - Vistara News

ವಿದೇಶ

Hindu Temple: ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಹಿಂದು ದೇವಾಲಯವನ್ನೇ ನೆಲಸಮಗೊಳಿಸಿದ ಪಾಕ್‌ ಆಡಳಿತ

Hindu Temple: ಪಾಕಿಸ್ತಾನದಲ್ಲಿ ಹಿಂದು ದೇವಾಲಯಗಳ ಮೇಲಿನ ದಾಳಿ ಮುಂದುವರಿದಿದೆ. ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಪಾಕಿಸ್ತಾನದ ಅಫ್ಘಾನಿಸ್ತಾನ ಗಡಿಯಲ್ಲಿರುವ ಐತಿಹಾಸಿಕ ಹಿಂದು ದೇವಾಲಯವನ್ನು ಪಾಕ್‌ ಕೆಡವಿದೆ. ಖೈಬರ್‌ ಪಖ್ತುಂಖ್ವಾ ಪ್ರಾಂತ್ಯದಲ್ಲಿದ್ದ ಈ ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ಕೆಡವಿ ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಈಗಾಗಲೇ ಕಟ್ಟಡ ಕಾಮಗಾರಿ ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Hindu Temple
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಹಿಂದು ದೇವಾಲಯಗಳ (Hindu Temple) ಮೇಲಿನ ದಾಳಿ ಮುಂದುವರಿದಿದೆ. ಪಾಕಿಸ್ತಾನದ ಅಫ್ಘಾನಿಸ್ತಾನ ಗಡಿಯಲ್ಲಿರುವ ಐತಿಹಾಸಿಕ ಹಿಂದು ದೇವಾಲಯವನ್ನು ಪಾಕ್‌ ಕೆಡವಿದೆ ಎಂದು ಮೂಲಗಳು ತಿಳಿಸಿವೆ. ಖೈಬರ್‌ ಪಖ್ತುಂಖ್ವಾ (Khyber Pakhtunkhwa) ಪ್ರಾಂತ್ಯದಲ್ಲಿದ್ದ ಈ ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ಕೆಡವಿ ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತಿದೆ.

1947ರಲ್ಲಿ ಭಾರತ-ಪಾಕಿಸ್ತಾನ ವಿಭಜನೆಯಾದಾಗ ಈ ದೇವಸ್ಥಾನವನ್ನು ಮುಚ್ಚಲಾಗಿತ್ತು. ಇದೀಗ ಪಾಕ್‌ ಸರ್ಕಾರ ಆ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ದೇವಾಲಯವನ್ನು ಕೆಡವಿದೆ. ಈಗಾಗಲೇ ವಾಣಿಜ್ಯ ಸಂಕೀರ್ಣದ ಕಾಮಗಾರಿ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ವರ್ಷಗಳಿಂದ ದೇವಾಲಯವು ಹಂತ ಹಂತವಾಗಿ ಕುಸಿಯಲು ಆರಂಭಿಸಿತ್ತು.

ಅಧಿಕಾರಿಗಳು ಹೇಳೋದೇನು?

ದೇವಸ್ಥಾನ ಕೆಡವಿರುವ ಬಗ್ಗೆ ಪಾಕಿಸ್ತಾನ ಆಡಳಿತ ಬೇರೆಯದ್ದೇ ಹೇಳಿಕೆ ನೀಡಿದೆ. ಇಲ್ಲಿ ಹಿಂದು ದೇವಾಲಯ ಅಸ್ತಿತ್ವದಲ್ಲಿದ್ದ ಬಗ್ಗೆ ತಮಗೆ ತಿಳಿದೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಣಿಜ್ಯ ಸಂಕೀರ್ಣವನ್ನು ಎಲ್ಲ ಕಾನೂನು ಪಾಲಿಸಿಯೇ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಲಾಂಡಿ ಕೊಟಾಲ್ ಮೂಲದ ಪತ್ರಕರ್ತ ಇಬ್ರಾಹಿಂ ಶಿನ್ವಾರಿ ಈ ಬಗ್ಗೆ ಮಾತನಾಡಿ, ʼʼಮುಖ್ಯ ಲ್ಯಾಂಡಿ ಕೊಟಾಲ್ ಬಜಾರ್‌ನಲ್ಲಿ ಈ ಐತಿಹಾಸಿಕ ದೇವಾಲಯವಿತ್ತುʼʼ ಎಂದು ಹೇಳಿದ್ದಾರೆ. ʼʼಸ್ಥಳೀಯ ಹಿಂದೂ ಕುಟುಂಬಗಳು ಭಾರತಕ್ಕೆ ವಲಸೆ ಹೋದ ನಂತರ 1947 ರಲ್ಲಿ ಈ ದೇವಾಲಯವನ್ನು ಮುಚ್ಚಲಾಯಿತು. 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸಗೊಂಡ ಬಳಿಕ ಕೆಲವರು ಈ ದೇವಾಲಯಕ್ಕೆ ಭಾಗಶಃ ಹಾನಿ ಮಾಡಿದ್ದರುʼʼ ಎಂದು ಅವರು ತಿಳಿಸಿದ್ದಾರೆ.

ʼʼಬಾಲ್ಯದಲ್ಲಿ ಈ ದೇವಸ್ಥಾನದ ಬಗ್ಗೆ ಅನೇಕ ಕಥೆಗಳನ್ನು ತಮ್ಮ ಪೂರ್ವಜರಿಂದ ಕೇಳಿದ್ದೆʼʼ ಎಂದು ಶಿನ್ವಾರಿ ಸ್ಪಷ್ಟಪಡಿಸಿದ್ದಾರೆ. ʼʼಹೀಗಾಗಿ ಇಲ್ಲಿ ಹಿಂದು ದೇವಸ್ಥಾನವಿತ್ತು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲʼʼ ಎಂದು ತಿಳಿಸಿದ್ದಾರೆ.

“ಲಾಂಡಿ ಕೊಟಾಲ್ ಬಜಾರ್‌ನಲ್ಲಿರುವ ಸಂಪೂರ್ಣ ಭೂಮಿ ರಾಜ್ಯದ ಒಡೆತನದಲ್ಲಿದೆ” ಎಂದು ಲ್ಯಾಂಡಿ ಕೊಟಾಲ್‌ನ ಸಹಾಯಕ ಆಯುಕ್ತ ಮುಹಮ್ಮದ್ ಇರ್ಷಾದ್ ಹೇಳಿದ್ದಾರೆ. ದೇವಾಲಯದ ನೆಲಸಮದ ಬಗ್ಗೆ ಕೇಳಿದಾಗ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ʼʼಮುಸ್ಲಿಮೇತರರ ಧಾರ್ಮಿಕ ಪ್ರಾಮುಖ್ಯತೆಯ ಐತಿಹಾಸಿಕ ಕಟ್ಟಡಗಳ ರಕ್ಷಣೆ ಮತ್ತು ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳುವುದು ಜಿಲ್ಲಾಡಳಿತ ಮತ್ತು ಸಂಬಂಧಿತ ಸರ್ಕಾರಿ ಇಲಾಖೆಗಳ ಜವಾಬ್ದಾರಿʼʼ ಎಂದು ಪಾಕಿಸ್ತಾನ ಹಿಂದು ಮಂದಿರ ನಿರ್ವಹಣಾ ಸಮಿತಿಯ ಹರೂನ್ ಸರಬ್ಡಿಯಾಲ್ ಅಭಿಪ್ರಾಯ ಪಟ್ಟಿದ್ದಾರೆ.

ʼʼಪುರಾತತ್ವ ಮತ್ತು ವಸ್ತು ಸಂಗ್ರಹಾಲಯ, ಪೊಲೀಸ್, ಸಂಸ್ಕೃತಿ ಇಲಾಖೆ ಮತ್ತು ಸ್ಥಳೀಯ ಸರ್ಕಾರವು ಪೂಜಾ ಸ್ಥಳಗಳು ಸೇರಿದಂತೆ ಅಂತಹ ಸ್ಥಳಗಳನ್ನು ರಕ್ಷಿಸಲು 2016ರ ಕಾನೂನಿಗೆ ಬದ್ಧವಾಗಿವೆʼʼ ಎಂದು ಅವರು ಹೇಳಿದ್ದಾರೆ. ʼʼಅಲ್ಪಸಂಖ್ಯಾತರು ಬಳಸದ ಅಥವಾ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸದನ್ನು ನಿರ್ಮಿಸುವ ಬದಲು ಸ್ಥಳೀಯ ಸಮುದಾಯಗಳ ಸಾಮೂಹಿಕ ಪ್ರಯೋಜನಕ್ಕಾಗಿ ಯಾವುದೇ ಕಲ್ಯಾಣ ಚಟುವಟಿಕೆಗೆ ಬಳಸಬಹುದುʼʼ ಎಂದು ಸರಬ್ಡಿಯಾಲ್ ಸಲಹೆ ಹೇಳಿದ್ದಾರೆ.

ಇದನ್ನೂ ಓದಿ: Pakistan: ದೇಗುಲ ಧ್ವಂಸ ಬೆನ್ನಲ್ಲೇ 30 ಪಾಕ್ ಹಿಂದೂಗಳ ಅಪಹರಣ! ನೆರವಿಗೆ ಮನವಿ ಮಾಡಿದ ಆಯೋಗ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

Gopi Hinduja: ಗೋಪಿಚಂದ್‌ ಅವರ ಆಸ್ತಿಯ ಮೌಲ್ಯವು ಕಳೆದ ವರ್ಷ 35 ಶತಕೋಟಿ ಪೌಂಡ್ಸ್‌ ಇತ್ತು. ಈಗ ಅದು 37 ಶತಕೋಟಿ ಪೌಂಡ್ಸ್‌ಗೆ ಏರಿಕೆಯಾಗಿದೆ. ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌ ಕಳೆದ ಹಲವು ವರ್ಷಗಳಿಂದಲೂ ಪ್ರಕಟವಾಗುತ್ತಿದೆ. ಆದರೆ, ಹಿಂದುಜಾ ಗ್ರೂಪ್, ಕಳೆದ 3 ವರ್ಷದಿಂದಲೂ ಮೊದಲ ಸ್ಥಾನದಲ್ಲಿದೆ.

VISTARANEWS.COM


on

Gopi Hinduja
Koo

ಲಂಡನ್‌: ಬ್ರಿಟಿಷರು ನಮ್ಮನ್ನು ಆಳಿದರು, ಶತಮಾನಗಳವರೆಗೆ ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದರು ಎಂಬ ಬೇಸರವು ಪ್ರತಿ ಭಾರತೀಯನನ್ನೂ ಕಾಡುತ್ತದೆ. ಆದರೆ, ಭಾರತ ಮೂಲದ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾದರೆ, ಭಾರತವು ಆರ್ಥಿಕತೆ ಸೇರಿ ಯಾವುದೇ ವಿಷಯದಲ್ಲಿ ಹಿಂದಿಕ್ಕಿದರೆ ನಮಗೆ ಖುಷಿಯಾಗುತ್ತದೆ. ಇಂತಹ ಖುಷಿಗೆ ಮತ್ತೊಂದು ಕಾರಣ ಸಿಕ್ಕಿದೆ. ಭಾರತ ಮೂಲದ ಗೋಪಿಚಂದ್‌ ಹಿಂದುಜಾ (Gopi Hinduja) ಹಾಗೂ ಅವರ ಕುಟುಂಬವು ಬ್ರಿಟನ್‌ನ ಶ್ರೀಮಂತ (UK’s Richest) ಕುಟುಂಬ ಅಥವಾ ಉದ್ಯಮಿ ಎಂಬ ಖ್ಯಾತಿಗೆ ಭಾಜನವಾಗಿದೆ. ಅಷ್ಟೇ ಅಲ್ಲ, ಸತತ ಮೂರನೇ ವರ್ಷವೂ ಹಿಂದುಜಾ ಕುಟುಂಬವೇ ಅತ್ಯಂತ ಶ್ರೀಮಂತ ಎಂಬ ಖ್ಯಾತಿಗೆ ಪಾತ್ರವಾಗಿದೆ.

‘ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌’ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಗೋಪಿಚಂದ್‌ ಹಿಂದುಜಾ ಅವರೇ ಬ್ರಿಟನ್‌ನ ಶ್ರೀಮಂತ ಉದ್ಯಮಿ ಎನಿಸಿದ್ದಾರೆ. ಇವರ ಆಸ್ತಿಯ ಒಟ್ಟು ಮೌಲ್ಯವು 37 ಶತಕೋಟಿ ಪೌಂಡ್ಸ್‌ (ಸುಮಾರು 3.9 ಲಕ್ಷ ಕೋಟಿ ರೂ.) ಇದೆ. ಬ್ರಿಟನ್‌ನವರೇ ಆದ ಸರ್‌ ಲೆನಾರ್ಡ್‌ ಬ್ಲಾವಾಟ್ನಿಕ್‌ (29 ಶತಕೋಟಿ ಪೌಂಡ್ಸ್)‌, ಡೇವಿಡ್‌, ಸೈಮನ್‌ ರುಬೇನ್‌ ಮತ್ತು ಕುಟುಂಬ (24.98 ಶತಕೋಟಿ ಪೌಂಡ್ಸ್)‌, ಸರ್‌ ಜಿಮ್‌ ರ‍್ಯಾಟ್‌ಕ್ಲಿಫ್‌ (23 ಶತಕೋಟಿ ಪೌಂಡ್ಸ್)‌ ಆಸ್ತಿಯೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ.

ಗೋಪಿಚಂದ್‌ ಹಿಂದುಜಾ ಅವರು ಭಾರತ ಮೂಲದವರಾಗಿದ್ದು, ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇವರ ತಂದೆಯೂ ಉದ್ಯಮಿಯಾಗಿದ್ದರು. ಹಿಂದುಜಾ ಗ್ರೂಪ್‌ಗೆ ಗೋಪಿಚಂದ್‌ ಹಿಂದುಜಾ ಅವರು ಸಹ ಚೇರ್ಮನ್‌ ಆಗಿದ್ದಾರೆ. ಇವರ ಆಸ್ತಿಯ ಮೌಲ್ಯವು ಕಳೆದ ವರ್ಷ 35 ಶತಕೋಟಿ ಪೌಂಡ್ಸ್‌ ಇತ್ತು. ಈಗ ಅದು 37 ಶತಕೋಟಿ ಪೌಂಡ್ಸ್‌ಗೆ ಏರಿಕೆಯಾಗಿದೆ. ಸಂಡೇ ಟೈಮ್ಸ್‌ ರಿಚ್‌ ಲಿಸ್ಟ್‌ ಕಳೆದ ಹಲವು ವರ್ಷಗಳಿಂದಲೂ ಪ್ರಕಟವಾಗುತ್ತಿದೆ. ಆದರೆ, ಹಿಂದುಜಾ ಗ್ರೂಪ್, ಕಳೆದ 3 ವರ್ಷದಿಂದಲೂ ಮೊದಲ ಸ್ಥಾನದಲ್ಲಿದೆ.

“ಗೋಪಿಚಂದ್‌ ಹಿಂದುಜಾ ಹಾಗೂ ಅವರ ಕುಟುಂಬವು ಜಗತ್ತಿನಾದ್ಯಂತ 48 ದೇಶಗಳಲ್ಲಿ ಉದ್ಯಮಗಳನ್ನು ಹೊಂದಿದೆ. ಆಟೋಮೋಟಿವ್‌, ತೈಲ, ಕೆಮಿಕಲ್‌, ಬ್ಯಾಂಕಿಂಗ್‌, ಐಟಿ, ಫೈನಾನ್ಸ್‌, ಸೈಬರ್‌ ಸೆಕ್ಯುರಿಟಿ, ಆರೋಗ್ಯ, ಮೂಲ ಸೌಕರ್ಯ ಅಭಿವೃದ್ಧಿ, ಮನರಂಜನೆ, ಮಾಧ್ಯಮ, ರಿಯಲ್‌ ಎಸ್ಟೇಟ್‌ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಹಿಂದುಜಾ ಗ್ರೂಪ್‌ ಪ್ರಾಬಲ್ಯ ಸಾಧಿಸಿದೆ” ಎಂದು ದಿ ಸಂಡೇ ಟೈಮ್ಸ್‌ ಬಣ್ಣಿಸಿದೆ. ಹಿಂದುಜಾ ಕುಟುಂಬಸ್ಥರು ಮುಂಬೈನಲ್ಲಿ ಸಣ್ಣದೊಂದು ಉದ್ಯಮ ಆರಂಭಿಸಿ, ಈಗ ಬ್ರಿಟನ್‌ನ ಶ್ರೀಮಂತ ಔದ್ಯಮಿಕ ಕುಟುಂಬ ಎನಿಸಿದೆ. ಇವರ ಮನೆಯು ಬ್ರಿಟನ್‌ ಅರಸ ವಾಸಿಸುವ ಬಕಿಂಗ್‌ಹ್ಯಾಮ್‌ ಪ್ಯಾಲೇಸ್‌ ಬಳಿಯೇ ಇದೆ.

ಇದನ್ನೂ ಓದಿ: Indian billionaires: ಭಾರತದಲ್ಲಿ 200 ಬಿಲಿಯನೇರ್‌ಗಳು! ಅತಿ ಶ್ರೀಮಂತರ ಸಂಖ್ಯೆಯಲ್ಲಿ ಭಾರತ ನಂ.3

Continue Reading

ಕಲೆ/ಸಾಹಿತ್ಯ

Konkani Book Release: ಇಟಾಲಿಯನ್-ಬ್ರಿಟಿಷ್ ಲೇಖಕ ರಚಿಸಿರುವ ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ ಕೃತಿ ಬಿಡುಗಡೆ

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್- ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಕೃತಿಯನ್ನು ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Konkani Book Release ) ಬಿಡುಗಡೆಗೊಳಿಸಿದರು. ಕರಾವಳಿಯಲ್ಲಿ ಕೊಂಕಣಿ ಮಾತನಾಡುವ ಜಿಎಸ್‌ಬಿ ಸಮುದಾಯದವರು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಇದೊಂದು ಅಪೂರ್ವ ಕೃತಿಯಾಗಿದೆ.

VISTARANEWS.COM


on

By

Konkani Book Release
Koo

ಮಂಗಳೂರು: ಇಟಾಲಿಯನ್- ಬ್ರಿಟಿಷ್ ಲೇಖಕ (Italian-born British citizen) ಗಿನೋ ಡಿ’ಕ್ಲೆಮೆಂಟೆ ಅವರು ಸಂಪಾದಿಸಿದ ಕೃತಿ ”ಜಿಎಸ್‌ಬಿ ಕೊಂಕಣಿ ಮಾರ್ಗದರ್ಶಿ’ ಕೃತಿಯನ್ನು (Konkani Book Release) ಕೇರಳದ (kerala) ಎರ್ನಾಕುಲಂನಲ್ಲಿರುವ (Ernakulam) ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು (Samyameendra Thirtha Swamiji ) ಬಿಡುಗಡೆಗೊಳಿಸಿದರು.

ಸಂಸ್ಕೃತಿಗಳ ಗಮನಾರ್ಹ ಸಮ್ಮಿಲನದ ಕುರಿತಾಗಿ ಇಟಾಲಿಯನ್-ಬ್ರಿಟಿಷ್ ಪ್ರಜೆ ಗಿನೋ ಡಿ ಕ್ಲೆಮೆಂಟೆ ಅವರು ಸಂಪಾದಿಸಿ ಬರೆದಿರುವ ಸಂವಾದಾತ್ಮಕ ಜಿಎಸ್‌ಬಿ (ಗೌಡ ಸಾರಸ್ವತ ಬ್ರಾಹ್ಮಣ) ಕೊಂಕಣಿ ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ ರಚಿಸಿದ್ದಾರೆ.

ಕೇರಳದ ಎರ್ನಾಕುಲಂನಲ್ಲಿರುವ ಕಾಶಿ ಮಠದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಪ್ರತಿಷ್ಠಿತ ದಿಗ್ವಿಜಯ್ ಮಹೋತ್ಸವದಲ್ಲಿ ಅನಾವರಣಗೊಂಡ ಈ ಮಾರ್ಗದರ್ಶಿ ಕೃತಿ ಶ್ರೀಮಂತ ಭಾರತೀಯ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರದಲ್ಲಿ ಮಹತ್ವದ ಮೈಲುಗಲ್ಲನ್ನು ಗುರುತಿಸುತ್ತದೆ.


Gino’s Guide for Conversational GSB Konkani ಕೃತಿಯು ಜಿ ಎಸ್ ಬಿ ಸಮುದಾಯದ ಪರಂಪರೆಯನ್ನು ಪೋಷಿಸುವ ಸಮರ್ಪಿತ ಸಂಸ್ಥೆಯಾದ ಜಿಎಸ್ ಬಿ ವರ್ಲ್ಡ್‌ವೈಡ್‌ನ ಯುವಜನರಿಂದ ಸುಗಮಗೊಳಿಸಲ್ಪಟ್ಟ ಅಡ್ಡ-ಸಾಂಸ್ಕೃತಿಕ ತಿಳುವಳಿಕೆ ಮತ್ತು ಭಾಷಾ ಸಂರಕ್ಷಣೆಗೆ ಅಸಾಧಾರಣ ಬದ್ಧತೆಯನ್ನು ಪ್ರತಿನಿಧಿಸುತ್ತದೆ.

ಕೃತಿಯ ಕುರಿತು ಮಾತನಾಡಿದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ, ಇದು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಮುದಾಯಗಳ ಮೇಲೆ ಬೀರುವ ಮಹತ್ವದ ಪರಿಣಾಮವನ್ನು ಒತ್ತಿ ಹೇಳುತ್ತದೆ ಎಂದರು.

ಗಿನೋ ಡಿ ಕ್ಲೆಮೆಂಟೆ ಅವರ ಕೆಲಸವು ಸಮರ್ಪಣಾ ಶಕ್ತಿ ಮತ್ತು ಸಾಂಸ್ಕೃತಿಕ ಮೆಚ್ಚುಗೆಗೆ ಸಾಕ್ಷಿಯಾಗಿದೆ. ನಮ್ಮ ಸಮುದಾಯದ ಹೊರಗಿನವರಿಂದ ಅಂತಹ ಆಳವಾದ ತೊಡಗಿಸಿಕೊಳ್ಳುವಿಕೆಯನ್ನು ನೋಡುವುದು ಅಪರೂಪ. ಈ ಮಾರ್ಗದರ್ಶಿ ನಮ್ಮ ಭಾಷಾ ಸಂರಕ್ಷಣೆಯ ಪ್ರಯತ್ನಗಳಲ್ಲಿ ಒಂದು ಸ್ಮಾರಕ ಸಾಧನೆಯಾಗಿದೆ ಎಂದು ಹೇಳಿದರು.

ಮಾರ್ಗದರ್ಶಿಯು ದೈನಂದಿನ ಸಂಭಾಷಣೆಗಳಿಗೆ ಪ್ರಾಯೋಗಿಕ ನುಡಿಗಟ್ಟುಗಳು ಮತ್ತು ಉದಾಹರಣೆಗಳೊಂದಿಗೆ ಉಚ್ಚಾರಣೆ, ವ್ಯಾಕರಣ ಮತ್ತು ಶಬ್ದಕೋಶದ ವಿವರವಾದ ಅವಲೋಕನವನ್ನು ನೀಡುತ್ತದೆ. ಇದು ಆರಂಭಿಕ ಮತ್ತು ಮುಂದುವರಿದ ಕಲಿಯುವವರಿಬ್ಬರನ್ನೂ ಪೂರೈಸುತ್ತದೆ, ಜಿಎಸ್ ಬಿ ಕೊಂಕಣಿಯನ್ನು ಕರಗತ ಮಾಡಿಕೊಳ್ಳಲು ಉತ್ಸುಕರಾಗಿರುವ ಯಾರಿಗಾದರೂ ಇದೊಂದು ಬಹುಮುಖ್ಯ ಸಂಪನ್ಮೂಲವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Narayana Murthy: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳಿಗೆ ಕತ್ತರಿ? ನಾರಾಯಣ ಮೂರ್ತಿ ಶಾಕಿಂಗ್‌ ಹೇಳಿಕೆ

ಲೇಖಕರ ಹಿನ್ನೆಲೆ ಏನು?

ಜಿನೋ ಡಿ ಕ್ಲೆಮೆಂಟೆ ಮೂಲತಃ ಇಟಲಿಯವರಾಗಿದ್ದು, ಈಗ ಬ್ರಿಟಿಷ್ ಪ್ರಜೆಯಾಗಿದ್ದಾರೆ. ಮದುವೆಯ ಮೂಲಕ ಜಿ ಎಸ್ ಬಿ ಸಂಸ್ಕೃತಿಗೆ ಆಳವಾದ ವೈಯಕ್ತಿಕ ಸಂಪರ್ಕವನ್ನು ಹೊಂದಿದ್ದಾರೆ. ಅವರ ಸಂಗಾತಿಯು ಕರ್ನಾಟಕದ ಕಾರ್ಕಳ ತಾಲೂಕಿನ ಮೂಲದವರಾಗಿದ್ದಾರೆ. ಈ ಕೌಟುಂಬಿಕ ಬಂಧವು ಜಿನೋ ಅವರ ಜಿಎಸ್‌ಬಿ ಕೊಂಕಣಿಯ ತಲ್ಲೀನಗೊಳಿಸುವ ಅಧ್ಯಯನಕ್ಕೆ ಪ್ರೇರೇಪಿಸಿತು. ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅವರ ಉತ್ಸಾಹವು ಈ ಸಮಗ್ರ ಮಾರ್ಗದರ್ಶಿಯಲ್ಲಿ ಉತ್ತುಂಗಕ್ಕೇರಿತು. ಭಾರತೀಯ ಭಾಷೆಗಳ ದಾಖಲೀಕರಣ ಮತ್ತು ಪ್ರಚಾರಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ.

Continue Reading

ವಿದೇಶ

MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

MDH, Everest Spices: ಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನಗಳನ್ನು ನೇಪಾಳ ನಿಷೇಧಿಸಿದೆ. ʼʼಈ ಮಸಲಾ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಆಮದನ್ನು ನಿಷೇಧಿಸಲಾಗಿದೆ. ಜತೆಗೆ ನಾವು ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸಿದ್ದೇವೆ” ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹರ್ಜನ್ ತಿಳಿಸಿದ್ದಾರೆ.

VISTARANEWS.COM


on

MDH, Everest Spices
Koo

ಕಾಠ್ಮಂಡುಕ್ಯಾನ್ಸರ್ ಉಂಟು ಮಾಡುವ ಕೀಟ ನಾಶಕವನ್ನು ಒಳಗೊಂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಜನಪ್ರಿಯ ಭಾರತೀಯ ಮಸಾಲೆ ಬ್ರ್ಯಾಂಡ್‌ಗಳಾದ ಎಂಡಿಎಚ್ ಮತ್ತು ಎವರೆಸ್ಟ್ ಗ್ರೂಪ್‌ನ ಉತ್ಪನ್ನ (MDH, Everest Spices)ಗಳನ್ನು ನೇಪಾಳ ನಿಷೇಧಿಸಿದೆ. ಈ ಹಿಂದೆ ಇದೇ ಕಾರಣಕ್ಕೆ ಈ ಉತ್ಪನ್ನಗಳನ್ನು ಸಿಂಗಾಪುರ, ಹಾಂಕಾಂಗ್‌ ಮುಂತಾದೆಡೆ ಬ್ಯಾನ್‌ ಮಾಡಲಾಗಿತ್ತು. ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಎಥಿಲೀನ್ ಆಕ್ಸೈಡ್ (Ethylene Oxide) ಅಂಶ ಇದೆ ಎನ್ನುವ ದೂರು ಕೇಳಿ ಬಂದ ಕಾರಣಕ್ಕೆ ಈ ಉತ್ಪನ್ನಗಳ ಆಮದು, ಮಾರಾಟ ಮತ್ತು ಬಳಕೆಯನ್ನು ನೇಪಾಳದಲ್ಲಿ ನಿಷೇಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಎರಡು ನಿರ್ದಿಷ್ಟ ಬ್ರ್ಯಾಂಡ್‌ಗಳ ಮಸಾಲೆಗಳಲ್ಲಿನ ರಾಸಾಯನಿಕಗಳ ಬಗ್ಗೆ ಪರೀಕ್ಷೆಗಳು ನಡೆಯುತ್ತಿವೆ. ಅಂತಿಮ ವರದಿ ಬರುವವರೆಗೆ ನಿಷೇಧವು ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ʼʼಈ ಮಸಲಾ ಪದಾರ್ಥಗಳಲ್ಲಿ ಹಾನಿಕಾರಕ ರಾಸಾಯನಿಕಗಳಿವೆ ಬಗ್ಗೆ ಸುದ್ದಿ ಬಂದ ನಂತರ ಒಂದು ವಾರದ ಹಿಂದೆ ಆಮದನ್ನು ನಿಷೇಧಿಸಲಾಗಿದೆ. ಜತೆಗೆ ನಾವು ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸಿದ್ದೇವೆ” ಎಂದು ನೇಪಾಳದ ಆಹಾರ ತಂತ್ರಜ್ಞಾನ ಮತ್ತು ಗುಣಮಟ್ಟ ನಿಯಂತ್ರಣ ಇಲಾಖೆಯ ವಕ್ತಾರ ಮೋಹನ್ ಕೃಷ್ಣ ಮಹರ್ಜನ್ ತಿಳಿಸಿದ್ದಾರೆ.

“ಹಾಂಗ್‌ಕಾಂಗ್ ಮತ್ತು ಸಿಂಗಾಪುರ್ ಈಗಾಗಲೇ ಈ ಉತ್ಪನ್ನಗಳಿಗೆ ನಿಷೇಧ ಹೇರಿವೆ. ಅಮೆರಿಕ ಹಾಗೂ ಆಸ್ಟ್ರೇಲಿಯಾ ಕೂಡ ಈ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹೀಗಾಗಿ ನಾವು ಕೂಡ ಪರೀಕ್ಷೆ ನಡೆಸಲು ಮುಂದಾಗಿದ್ದೇವೆʼʼ ಎಂದು ಅವರು ವಿವರಿಸಿದ್ದಾರೆ. ಈ ಮಧ್ಯೆ ರಫ್ತಾಗುವ ಭಾರತೀಯ ಮಸಾಲೆಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಸ್ಪೈಸ್ ಮಂಡಳಿ ಕ್ರಮ ಕೈಗೊಂಡಿದೆ. ಮಂಡಳಿ ಟೆಕ್ನೋ-ಸೈಂಟಿಫಿಕ್ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದಿದೆ. ಜತೆಗೆ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಿದೆ.

ಅಖಿಲ ಭಾರತ ಸಾಂಬಾರ ಪದಾರ್ಥಗಳ ರಫ್ತುದಾರರ ವೇದಿಕೆ ಮತ್ತು ಭಾರತೀಯ ಮಸಾಲೆ ಮತ್ತು ಆಹಾರ ಪದಾರ್ಥ ರಫ್ತುದಾರರ ಸಂಘದಂತಹ 130ಕ್ಕೂ ಹೆಚ್ಚು ಸಂಘಗಳೊಂದಿಗೆ ಭಾರತೀಯ ಸ್ಪೈಸ್ ಮಂಡಳಿ ಸಮಾಲೋಚನೆಯನ್ನೂ ನಡೆಸಿದೆ. ಮಂಡಳಿಯು ಎಲ್ಲ ರಫ್ತುದಾರರಿಗೆ ಎಥಿಲೀನ್ ಆಕ್ಸೈಡ್ ಬಳಕೆ ಬಗ್ಗೆ ಎಚ್ಚರಿಕೆ ನೀಡಿದೆ.

ಕೆಲವು ದಿನಗಳ ಹಿಂದೆ ಎಂಡಿಎಚ್‌, ಎವರೆಸ್ಟ್‌ ಮಸಾಲೆ ಸೇರಿದಂತೆ ಭಾರತದ ಒಟ್ಟು 527 ಉತ್ಪನ್ನಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲಿನ್‌ ಆಕ್ಸೈಡ್‌ ಹೆಚ್ಚಿನ ಪ್ರಮಾಣದಲ್ಲಿದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದರು. ಹೀಗಾಗಿ 572 ಉತ್ಪನ್ನಗಳ ಪೈಕಿ 87 ಉತ್ಪನ್ನಗಳ ರಫ್ತನ್ನು ಈಗಾಗಲೇ ಗಡಿಯಲ್ಲಿ ರದ್ದುಗೊಳಿಸಲಾಗಿದೆ.

ಇನ್ನು ಅಪಾಯಕಾರಿ ರಾಸಾಯನಿಕಗಳು ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳಲ್ಲೂ ಕಂಡು ಬಂದಿವೆ. ಇನ್ನು ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಸ್ವಚ್ಛಗೊಳಿಸ ಬಳಸುವ ಕ್ರಿಮಿನಾಶಕವಾಗಿ ಬಳಸಲಾಗುತ್ತದೆ. ಈ ರಾಸಾಯನಿಕ ದೇಹಕ್ಕೆ ಸೇರಿದರೆ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರು ಸಾಧ್ಯತೆ ಅತಿ ಹೆಚ್ಚಿದೆ.

ಇದನ್ನೂ ಓದಿ: MDH, Everest Spices: ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ಗಳ ಗುಣಮಟ್ಟ ತಪಾಸಣೆಗೆ ಸೂಚನೆ

Continue Reading

ವಿದೇಶ

Zakir Naik: ಹಿಂದುಗಳನ್ನು ಮತಾಂತರಗೊಳಿಸುವ ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕು; ವಿವಾದ ಹುಟ್ಟುಹಾಕಿದ ಮೌಲ್ವಿ

Zakir Naik: ಭಾರತದ ವಿವಾದಿತ ಮತಪ್ರಭಾಷಣಕಾರ, ಭಾಷಣಕಾರ ಜಾಕೀರ್ ನಾಯ್ಕ್‌ನನ್ನು ದೇಶದ ಚಕ್ರವರ್ತಿಯನ್ನಾಗಿ ಘೋಷಿಸಬೇಕೆಂದು ಹೇಳಿ ಪಾಕಿಸ್ತಾನದ ಮೌಲ್ವಿಯೊಬ್ಬ ವಿವಾದದ ಕಿಡಿ ಹೊತ್ತಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ʼʼಡಾ.ಜಾಕೀರ್ ನಾಯ್ಕ್‌ ತನ್ನ ವಿಡಿಯೊದ ಮೂಲಕ ಅನೇಕ ಹಿಂದುಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಹೀಗಾಗಿ ಅವರು ಅಲ್ಲಾಹುವಿನ ಸ್ನೇಹಿತ ಎನಿಸಿಕೊಂಡಿದ್ದಾರೆ. ಜತೆಗೆ ಭಾರತದ ಚಕ್ರವರ್ತಿ ಯಾಕಾಗಬಾರದು?ʼʼ ಎಂದು ಪ್ರಶ್ನಿಸಿಸುವ ಮೂಲಕ ನಾಲಿಗೆ ಹರಿಯಬಿಟ್ಟಿದ್ದಾನೆ.

VISTARANEWS.COM


on

Zakir Naik
Koo

ಇಸ್ಲಾಮಾಬಾದ್‌: ಪಾಕಿಸ್ತಾನದ ಮೌಲ್ವಿಯೊಬ್ಬ ಭಾರತದ ವಿವಾದಿತ ಮತಪ್ರಭಾಷಣಕಾರ, ಭಾಷಣಕಾರ ಜಾಕೀರ್ ನಾಯ್ಕ್‌ (Zakir Naik)ನನ್ನು ದೇಶದ ಚಕ್ರವರ್ತಿಯನ್ನಾಗಿ ಘೋಷಿಸಬೇಕೆಂದು ಹೇಳಿ ವಿವಾದ ಹುಟ್ಟು ಹಾಕಿದ್ದಾನೆ. ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ‘ಸಾಂಪ್ರದಾಯಿಕ ಹಿಂದೂ ಧರ್ಮ’ವನ್ನು ಉತ್ತೇಜಿಸುವ ಪಕ್ಷವು ಭಾರತವನ್ನು ಆಳುತ್ತಿರುವ ಅವಧಿಯಲ್ಲಿ ಸಾವಿರಾರು ಹಿಂದುಗಳನ್ನು ಮತಾಂತರಗೊಳಿಸಲು ಯತ್ನಿಸುವ ಜಾಕೀರ್ ನಾಯ್ಕ್‌ನ ಪಾತ್ರವನ್ನು ಮೌಲ್ವಿ ಶ್ಲಾಘಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video).

ಮೌಲ್ವಿ ತನ್ನ ಭಾಷಣದಲ್ಲಿ, ʼʼಡಾ.ಜಾಕೀರ್ ನಾಯ್ಕ್‌ ಇಂದು ತಮ್ಮ ಭಾಷಣ, ವಿಡಿಯೊದ ಮೂಲಕ ಸಾವಿರಾರು ಹಿಂದುಗಳ ಮತಾಂತರ ನಡೆಸಿದ್ದಾರೆ. ಸದ್ಯ ಭಾರತದಲ್ಲಿ ಆಡಳಿತ ನಡೆಸುತ್ತಿರುವ, ಮೋದಿ ನೇತೃತ್ವದ ಹಿಂದು ಪರವಾದ ಸರ್ಕಾರದ ಅವಧಿಯಲ್ಲಿ ಡಾ.ಝಾಕೀರ್‌ಗೆ ಪ್ರವಾದಿ ಇಬ್ರಾಹಿಂ ಅವರಂತೆ ಕಷ್ಟಕರ ಜೀವನ ನಡೆಸುವುದು ಅನಿವಾರ್ಯ ಎನಿಸಿಕೊಂಡಿದೆʼʼ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿಗೆ ಮೌಲ್ವಿಯ ವಾಕ್‌ ಪ್ರವಾಹ ನಿಂತಿಲ್ಲ. ಮುಂದುವರಿದು, ʼʼಡಾ.ಜಾಕೀರ್ ನಾಯ್ಕ್‌ ತನ್ನ ವಿಡಿಯೊದ ಮೂಲಕ ಅನೇಕ ಹಿಂದುಗಳನ್ನು ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿದ್ದಾರೆ. ಹೀಗಾಗಿ ಅವರು ಅಲ್ಲಾಹುವಿನ ಸ್ನೇಹಿತ ಎನಿಸಿಕೊಂಡಿದ್ದಾರೆ. ಜತೆಗೆ ಭಾರತದ ಚಕ್ರವರ್ತಿ ಯಾಕಾಗಬಾರದು?ʼʼ ಎಂದು ಪ್ರಶ್ನಿಸಿಸುವ ಮೂಲಕ ನಾಲಿಗೆ ಹರಿಯಬಿಟ್ಟಿದ್ದಾನೆ.

ವ್ಯಾಪಕ ಆಕ್ರೋಶ

ಸದ್ಯ ಪಾಕಿಸ್ತಾನದ ಈ ಮೌಲ್ವಿಯ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ. ಜಾಕೀರ್ ನಾಯ್ಕ್‌ನನ್ನು ಭಾರತದ ಚಕ್ರವರ್ತಿಯನ್ನಾಗಿಸಬೇಕೆಂಬ ಮೌಲ್ವಿಯ ಆಘಾತಕಾರಿ ಘೋಷಣೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ʼʼಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ನಿನ್ನ ಜಾಕೀರ್ ನಾಯ್ಕ್‌ ಪಲಾಯನ ಮಾಡಿದ್ದು ಯಾಕೆ ಎನ್ನುವುದಕ್ಕೆ ಮೊದಲು ಉತ್ತರಿಸುʼʼ ಎಂದು ಒಬ್ಬರು ಹೇಳಿದ್ದಾರೆ. ʼʼಜಾಕೀರ್ ʼನಾಲಾಯಕ್‌ʼ ಭಯೋತ್ಪಾದನೆಯನ್ನು ಉತ್ತೇಜಿಸುತ್ತಾನೆ. ಒಂದು ವೇಳೆ ಆತ ನಿಜವನ್ನೇ ಹೇಳಿದ್ದರೆ ಹೇಡಿಯಂತೆ ಪಲಾಯನ ಮಾಡುವ ಅಗತ್ಯ ಏನಿತ್ತು?ʼʼ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಜಾಕೀರ್ ನಾಯ್ಕ್ ಬಿಡುಗಡೆ ಮಾಡಿದ್ದ ವಿಡಿಯೊದಲ್ಲಿ ಯುಎಇಯಲ್ಲಿನ ದೇವಾಲಯ ನಿರ್ಮಾಣದ ಕೆಲಸವನ್ನು ಒಪ್ಪಿಕೊಳ್ಳದಂತೆ ಮುಸ್ಲಿಂ ಯುವಕರಿಗೆ ಸಂದೇಶ ನೀಡಿದ್ದ. ಇಂತಹ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಇಸ್ಲಾಮಿಕ್ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಇದಕ್ಕೆ ಕಾರಣ ನೀಡಿದ್ದ. ಇತ್ತೀಚೆಗೆ ಪ್ರಧಾನಿ ಮೋದಿ ಅವರು ಅಬುಧಾಬಿಯಲ್ಲಿನ ಬಿಎಪಿಎಸ್ ಹಿಂದು ಮಂದಿರ ಉದ್ಘಾಟಿಸಿದ್ದನ್ನು ಉಲ್ಲೇಖಿಸಿ ಈ ವಿಡಿಯೊವನ್ನು ಮಾಡಲಾಗಿತ್ತು.

“ಆಲ್ಕೋಹಾಲ್ ಉತ್ಪಾದಿಸುವ ಕಂಪನಿಯಲ್ಲಿ ಕೆಲಸ ಮಾಡುವುದು ಮತ್ತು ಸಾವಿರಾರು ಜನರನ್ನು ಕೊಲ್ಲಲಿರುವ ಕೊಕೇನ್ ಅಥವಾ ಗಾಂಜಾವನ್ನು ಉತ್ಪಾದಿಸುವುದು ದೊಡ್ಡ ಪಾಪ. ಆದರೆ ದೇವಾಲಯ ನಿರ್ಮಾಣಕ್ಕಾಗಿ ಕೆಲಸ ಮಾಡುವುದು ಅದಕ್ಕಿಂತಲೂ ದೊಡ್ಡ ಪಾಪ. ಇಸ್ಲಾಂ ಹೊರತುಪಡಿಸಿ ಬೇರೆ ಯಾವುದೇ ಧರ್ಮಗಳ ಪೂಜಾ ಸ್ಥಳಕ್ಕಾಗಿ ನೀವು ಕೆಲಸ ಮಾಡುವುದು ಹರಾಮ್” ಎಂದು ನಾಯ್ಕ್‌ ಹೇಳಿದ್ದ. ಜತೆಗೆ “ಸಾವಿರಾರು ಮುಗ್ಧ ಮನುಷ್ಯರನ್ನು ಕೊಲ್ಲುತ್ತಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ತಯಾರಿಸುವುದು ದೇವಾಲಯ ಅಥವಾ ಚರ್ಚ್ ನಿರ್ಮಾಣದಲ್ಲಿ ಕೆಲಸ ಮಾಡುವುದಕ್ಕಿಂತ ಉತ್ತಮ ಕಾರ್ಯʼʼ ಎಂದೂ ಅಭಿಪ್ರಾಯಪಟ್ಟಿದ್ದ.

ನಿಷೇಧ

ದ್ವೇಷವನ್ನು ಉತ್ತೇಜಿಸುವ ಭಾಷಣ ಮಾಡುವ ಕಾರಣಕ್ಕೆ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (IRF) ಸ್ಥಾಪಕ ಜಾಕೀರ್ ನಾಯ್ಕ್‌ನನ್ನು 2016ರಲ್ಲಿ ಭಾರತದಲ್ಲಿ ನಿಷೇಧಿಸಲಾಗಿತ್ತು. ಮುಸ್ಲಿಂ ಯುವಕರನ್ನು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಲು ಪ್ರಚೋದಿಸಿದ ಆರೋಪ ಆತನ ಮೇಲಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆತನ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಮಾತ್ರವಲ್ಲ ಜಾರಿ ನಿರ್ದೇಶನಾಲಯ (ED) ಆತನ ಸಂಸ್ಥೆಯ ವಿರುದ್ಧ ಮನಿ ಲಾಂಡರಿಂಗ್ ಆರೋಪದ ಮೇಲೆ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Zakir Naik: ಒಮಾನ್‌ನಿಂದ ಜಾಕೀರ್‌ ನಾಯ್ಕ್‌ ಗಡಿಪಾರು, ಮೂಲಭೂತವಾದಿಯ ಬಂಧನಕ್ಕೆ ಭಾರತ ಮುಹೂರ್ತ ಫಿಕ್ಸ್‌?

Continue Reading
Advertisement
Road Accident
ಪ್ರಮುಖ ಸುದ್ದಿ22 mins ago

Road Accident: ಕೊಪ್ಪಳ ಬಳಿ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿಯಾಗಿ ಮೂವರ ದುರ್ಮರಣ; 20ಕ್ಕೂ ಹೆಚ್ಚು ಮಂದಿಗೆ ಗಾಯ

Virat Kohli
ಕ್ರೀಡೆ41 mins ago

Virat kohli : ಪಾಕಿಸ್ತಾನಕ್ಕೆ ಬರುವೆ ಎಂದು ಅಲ್ಲಿನ ಪರ್ವತಾರೋಹಿಗೆ ಭರವಸೆ ಕೊಟ್ಟಿದ್ದ ವಿರಾಟ್​ ಕೊಹ್ಲಿ! ಇಲ್ಲಿದೆ ವಿಡಿಯೊ

Narendra modi
ದೇಶ47 mins ago

Narendra Modi: ಕಾಂಗ್ರೆಸ್‌ ಗೆದ್ದರೆ ಬುಲ್ಡೋಜರ್‌ನಿಂದ ರಾಮಮಂದಿರ ನೆಲಸಮ ಎಂದ ಮೋದಿ!

ಕರ್ನಾಟಕ1 hour ago

Rain News: ಮುಧೋಳದಲ್ಲಿ ಸಿಡಿಲಿಗೆ ಬಾಲಕಿ ಬಲಿ; ಚನ್ನರಾಯಪಟ್ಟಣ, ಗುಂಡ್ಲುಪೇಟೆ ಸೇರಿ ವಿವಿಧೆಡೆ ವರುಣಾರ್ಭಟ

dilip Kumar
ಪ್ರಮುಖ ಸುದ್ದಿ1 hour ago

Milind Kumar : ಆರ್​ಸಿಬಿಯ ಮಾಜಿ ಆಟಗಾರ ಕ್ರಿಕೆಟ್​ನಿಂದ ನಿವೃತ್ತಿ

Fan Code OTT Subscription Now for Jio AirFiber JioFiber Jio Mobility Customers
ದೇಶ2 hours ago

Reliance Jio: ಜಿಯೋ ಏರ್‌ಫೈಬರ್, ಜಿಯೋಫೈಬರ್, ಜಿಯೋ ಮೊಬಿಲಿಟಿ ಗ್ರಾಹಕರಿಗೆ ಫ್ಯಾನ್ ಕೋಡ್ ಒಟಿಟಿ ಸಬ್‌ಸ್ಕ್ರಿಪ್ಷನ್!

Gopi Hinduja
ವಿದೇಶ2 hours ago

Gopi Hinduja: ನಮ್ಮನ್ನಾಳಿದ ಬ್ರಿಟನ್‌ನಲ್ಲಿ ಭಾರತದ ಉದ್ಯಮಿಯೇ ಅತ್ಯಂತ ಸಿರಿವಂತ; ಯಾರಿವರು?

AC visited Gandabommanahalli Goshala and inspected
ವಿಜಯನಗರ2 hours ago

Vijayanagara News: ಗಂಡಬೊಮ್ಮನಹಳ್ಳಿಯ ಗೋಶಾಲೆಗೆ ಉಪ ವಿಭಾಗಾಧಿಕಾರಿ ಭೇಟಿ, ಪರಿಶೀಲನೆ

Application Invited for TTTI and Toyota Skill Courses from Toyota Technical Training Institute
ಕರ್ನಾಟಕ2 hours ago

Toyota: ಟೊಯೊಟಾ ಕೌಶಲ್ಯ ಕೋರ್ಸ್‌ಗೆ ಅರ್ಜಿ ಆಹ್ವಾನ; ಗ್ರಾಮೀಣ ಯುವಕರೇ ಈ ಅವಕಾಶ ಬಳಸಿಕೊಳ್ಳಿ

SSLC Exam 2024
ಕರ್ನಾಟಕ3 hours ago

SSLC 2024 Exam 2: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ3 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ17 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ18 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ1 day ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌