Physical Abuse: ಮದುವೆಗೊಪ್ಪದ ಬಾಲಕಿಯ ಅತ್ಯಾಚಾರ; ಕೆನ್ನೆಯ ಮೇಲೆ ಬಿಸಿ ಕಬ್ಬಿಣದಿಂದ ಪಾಗಲ್‌ ಪ್ರೇಮಿ ಹೆಸರು! - Vistara News

Latest

Physical Abuse: ಮದುವೆಗೊಪ್ಪದ ಬಾಲಕಿಯ ಅತ್ಯಾಚಾರ; ಕೆನ್ನೆಯ ಮೇಲೆ ಬಿಸಿ ಕಬ್ಬಿಣದಿಂದ ಪಾಗಲ್‌ ಪ್ರೇಮಿ ಹೆಸರು!

Physical Abuse: ನಾನು ಏಪ್ರಿಲ್ 19 ರಂದು ಮನೆಗೆ ಸಾಮಗ್ರಿ ಖರೀದಿಸಲು ಅಂಗಡಿಗೆ ಹೋಗಿದ್ದೆ. ಅವನು ನನ್ನನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ದಿದ್ದ. ಅಲ್ಲಿ ತಪ್ಪು ಕೆಲಸಗಳನ್ನು ಮಾಡಿದನು. ನಂತರ ಅವನು ನನ್ನ ಮುಖವನ್ನು ರಾಡ್ ನಿಂದ ಸುಟ್ಟು ತನ್ನ ಹೆಸರನ್ನು ಬರೆದನು, ಅವನ ಸಹೋದರಿ ಮತ್ತು ತಾಯಿ ನನ್ನನ್ನು ಹಿಡಿದುಕೊಂಡಿದ್ದರು. ನಾನು ಕೂಗುತ್ತಲೇ ಇದ್ದೆ, ಆದರೆ ಯಾರೂ ನಮ್ಮನ್ನು ರಕ್ಷಿಸಲು ಬರಲಿಲ್ಲ” ಎಂದು ಬಾಲಕಿ ತಿಳಿಸಿದ್ದಾರೆ.

VISTARANEWS.COM


on

Physical Abuse
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಖನೌ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ 17 ವರ್ಷದ ಬಾಲಕಿಯೊಬ್ಬಳನ್ನು ಮೂರು ದಿನಗಳ ಕಾಲ ಒತ್ತೆಯಾಳಾಗಿ ಇರಿಸಿ, ಅತ್ಯಾಚಾರ ಎಸಗಿದ (Physical Abuse) ಘಟನೆ ಲಖೀಂಪುರದಲ್ಲಿ ನಡೆದಿದೆ. ಕ್ರೂರಿ ಆಕೆಯ ಮುಖದ ಮೇಲೆ ಬಿಸಿ ಕಬ್ಬಿಣದ ರಾಡ್​​ನಿಂದ ತನ್ನ ಹೆಸರನ್ನು ಬರೆದಿದ್ದಾನೆ ಎಂದೂ ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 19 ರಂದು, 21 ವರ್ಷದ ಯುವಕ ಈ ಕೆಲಸ ಮಾಡಿದ್ದಾರೆ. ತನ್ನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಆಕೆಯನ್ನು ಬಲವಂತವಾಗಿ ತನ್ನ ಮನೆಗೆ ಕರೆಯೊಯ್ದಿದ್ದ. ಅವಳನ್ನು ಮೂರು ದಿನಗಳ ಕಾಲ ಅಲ್ಲಿ ಬಂಧಿಯಾಗಿಟ್ಟು ಹಲ್ಲೆ ಹಾಗೂ ಅತ್ಯಾಚಾರ ಮಾಡಿದ್ದ.

ನಾನು ಏಪ್ರಿಲ್ 19 ರಂದು ಮನೆಗೆ ಸಾಮಗ್ರಿ ಖರೀದಿಸಲು ಅಂಗಡಿಗೆ ಹೋಗಿದ್ದೆ. ಅವನು ನನ್ನನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ದಿದ್ದ. ಅಲ್ಲಿ ತಪ್ಪು ಕೆಲಸಗಳನ್ನು ಮಾಡಿದನು. ನಂತರ ಅವನು ನನ್ನ ಮುಖವನ್ನು ರಾಡ್ ನಿಂದ ಸುಟ್ಟು ತನ್ನ ಹೆಸರನ್ನು ಬರೆದನು, ಅವನ ಸಹೋದರಿ ಮತ್ತು ತಾಯಿ ನನ್ನನ್ನು ಹಿಡಿದುಕೊಂಡಿದ್ದರು. ನಾನು ಕೂಗುತ್ತಲೇ ಇದ್ದೆ, ಆದರೆ ಯಾರೂ ನಮ್ಮನ್ನು ರಕ್ಷಿಸಲು ಬರಲಿಲ್ಲ” ಎಂದು ಬಾಲಕಿ ತಿಳಿಸಿದ್ದಾರೆ.

ಬಾಲಕಿ ಹೇಗೋ ಸೆರೆಯಿಂದ ತಪ್ಪಿಸಿಕೊಂಡು ಏಪ್ರಿಲ್ 21ರಂದು ಮನೆಗೆ ಹಿಂದಿರುಗಿದ್ದಳು. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ, ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Pakistan Spy: ATS ಭರ್ಜರಿ ಕಾರ್ಯಾಚರಣೆ; ಪಾಕಿಸ್ತಾನ ಗೂಢಾಚಾರ ಅರೆಸ್ಟ್‌

ಆರಂಭದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 343 (ಅಕ್ರಮ ಬಂಧನ), 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು) ಮತ್ತು 504 (ಉದ್ದೇಶಪೂರ್ವಕ ಅವಮಾನ) ಮತ್ತು ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ನಿಬಂಧನೆಗಳನ್ನು ಸೇರಿಸಲಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Vastu Tips: ಸಣ್ಣ ವಾಸ್ತು ದೋಷವೇ ಕುಟುಂಬದಲ್ಲಿ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು!

ಸಣ್ಣಪುಟ್ಟ ವಾಸ್ತು ದೋಷಗಳು ಮನೆ ಮಂದಿಯ ಸುಖ, ಶಾಂತಿ, ನೆಮ್ಮದಿಯನ್ನು ಮಾತ್ರವಲ್ಲ ಆರೋಗ್ಯವನ್ನು ಕೆಡಿಸುತ್ತದೆ. ಹೀಗಾಗಿ ಮನೆಯ ಒಳಾಂಗಣ, ಹೊರಾಂಗಣದ ಸಣ್ಣ ಪುಟ್ಟ ವಸ್ತುಗಳ ವಿಚಾರದಲ್ಲೂ ವಾಸ್ತು ನಿಯಮಗಳನ್ನು (Vastu Tips) ಅನುಸರಿಸಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಆ ನಿಯಮಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Vastu Tips
Koo

ವ್ಯಕ್ತಿಯ ಜೀವನದಲ್ಲಿ (life) ಅನೇಕ ಸಮಸ್ಯೆಗಳು (problems) ಸಣ್ಣಪುಟ್ಟ ವಾಸ್ತು ದೋಷಗಳಿಂದ (Vastu Tips) ಉಂಟಾಗುತ್ತವೆ. ಮನೆಯವರಲ್ಲಿ ಮನಸ್ತಾಪಗಳು, ಕುಟುಂಬ (family) ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು, ಆರೋಗ್ಯ ಸಮಸ್ಯೆಗಳು (health issues) ಕಾಡುತ್ತವೆ. ವಾಸ್ತುವಿಗೆ ಸಂಬಂಧಿಸಿದ ತಪ್ಪುಗಳನ್ನು ಮಾಡುವ ವ್ಯಕ್ತಿಗಳು ಮಾನಸಿಕ ಮತ್ತು ದೈಹಿಕ ಯಾತನೆ ಅನುಭವಿಸುತ್ತಾರೆ. ಆದ್ದರಿಂದ ಮನೆಯಲ್ಲಿ ಪ್ರತಿಯೊಂದು ವಿಚಾರದಲ್ಲೂ ವಾಸ್ತು ನಿಯಮಗಳನ್ನು ಅನುಸರಿಸುವುದು ಉತ್ತಮ.

ನಿರ್ದಿಷ್ಟ ವಿಷಯಗಳ ಬಗ್ಗೆ ಉತ್ತಮ ಕಾಳಜಿ ವಹಿಸುವ ಮೂಲಕ ಆರೋಗ್ಯಕರ ಜೀವನಶೈಲಿಯನ್ನುನಡೆಸಬಹುದು. ಅಲ್ಲದೇ ಮನೆಯ ಹಲವಾರು ಸಮಸ್ಯೆಗಳನ್ನು ಸರಿಪಡಿಸಬಹುದು.

ಹಳೆಯ ವಸ್ತುಗಳು ಬೇಡ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ತುಂಬಾ ಹಳೆಯ ಮತ್ತು ನಿಷ್ಪ್ರಯೋಜಕ ವಸ್ತುಗಳನ್ನು ಸಂಗ್ರಹಿಸಬಾರದು. ಇವುಗಳನ್ನು ಮಲಗುವ ಕೋಣೆಗಳಲ್ಲಿ ಇಡಬಾರದು. ಒಂದು ವೇಳೆ ಇಟ್ಟರೆ ಇದರಿಂದ ಆರೋಗ್ಯ ಕೆಡುತ್ತದೆ.

ದೇವರ ಪ್ರತಿಮೆ

ಮಲಗುವ ಕೋಣೆಯಲ್ಲಿ ದೇವರ ಪ್ರತಿಮೆ ಅಥವಾ ಚಿತ್ರವನ್ನು ಇಡಬಾರದು. ಅದು ದುರದೃಷ್ಟಕರವೆಂದು ಪರಿಗಣಿಸಲಾಗಿದೆ.


ಅಚ್ಚುಕಟ್ಟಾಗಿರಲಿ

ಮಲಗುವ ಕೋಣೆಯನ್ನು ಅಚ್ಚುಕಟ್ಟಾಗಿ ಇರುವಂತೆ ವಿಶೇಷ ಗಮನ ನೀಡಬೇಕು. ಅಸ್ತವ್ಯಸ್ತವಾಗಿರುವ ಮಲಗುವ ಕೋಣೆಗಳಿಂದ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುತ್ತದೆ.

ಆಹಾರ ಸೇವನೆ

ಮನೆಯಲ್ಲಿ ಆಹಾರ ಸೇವನೆ ಮಾಡುವಾಗ ಅಥವಾ ಏನನ್ನಾದರೂ ತಿನ್ನುವಾಗ ಯಾವಾಗಲೂ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಂಡು ತಿನ್ನಬೇಕು.

ನಲ್ಲಿ ನೀರು

ಮನೆಯಲ್ಲಿ ಒಡೆದ ನಲ್ಲಿಯನ್ನು ಆದಷ್ಟು ಬೇಗ ಸರಿಪಡಿಸಿ. ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿರುವುದು ದುರದೃಷ್ಟಕರ ಎಂದು ಹೇಳಲಾಗುತ್ತದೆ.

ಮಲಗುವ ದಿಕ್ಕು

ಪೂರ್ವ ಅಥವಾ ದಕ್ಷಿಣಕ್ಕೆ ತಲೆ ಇಟ್ಟು ಮಲಗುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗ್ಗುತ್ತದೆ.


ಕಸ ಸಂಗ್ರಹ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮೆಟ್ಟಿಲುಗಳ ಕೆಳಗೆ ಹೆಚ್ಚಿನ ಪ್ರಮಾಣದ ಕಸವನ್ನು ಸಂಗ್ರಹಿಸಲು ಬಿಡಬಾರದು. ಇದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.

ಓದುವ ದಿಕ್ಕು

ಮಕ್ಕಳು ಓದುವಾಗ ಯಾವಾಗಲು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಬೇಕು. ಇದರಿಂದ ಓದಿದ್ದು ಹೆಚ್ಚು ಕಾಲ ನೆನಪಿನಲ್ಲಿರುತ್ತದೆ.

ಇದನ್ನೂ ಓದಿ: Vastu Tips: ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ಫೋಟೊ ಅಳವಡಿಸಿದರೆ ಏನಾಗುತ್ತದೆ?

ಮರ, ಸಸ್ಯಗಳು

ಅತ್ಯುತ್ತಮ ಆರೋಗ್ಯಕ್ಕಾಗಿ, ಮನೆಯ ಸುತ್ತಮುತ್ತ ಮರ ಮತ್ತು ಸಸ್ಯಗಳನ್ನು ಬೆಳೆಸಿ. ಇದು ಕುಟುಂಬದ ಎಲ್ಲರನ್ನು ಸಂತೋಷವಾಗಿರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ.

ಕಿಟಕಿ, ಬಾಗಿಲು

ಮನೆಯೊಳಗೇ ಉತ್ತಮ ಶಕ್ತಿಯನ್ನು ಸ್ವಾಗತಿಸಲು, ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಸಮಯದವರೆಗೆ ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ.

Continue Reading

ರಾಜಕೀಯ

Lok Sabha Election 2024: ಈ ಬಾರಿ 74 ಮಹಿಳಾ ಸಂಸದರು, ಯಾವ ಪಕ್ಷದಲ್ಲಿ ಎಷ್ಟು ಮಂದಿ?

18ನೇ ಲೋಕಸಭೆಗೆ (Lok Sabha Election 2024) ಈ ಬಾರಿ 74 ಮಹಿಳೆಯರು ಸಂಸದರಾಗಿ ಪ್ರವೇಶ ಪಡೆದಿದ್ದರೆ. ಇದರಲ್ಲಿ ಬಹುಪಾಲು ಬಿಜೆಪಿಯದ್ದಾಗಿದ್ದು, ಬಳಿಕ ಕಾಂಗ್ರೆಸ್ ನವರದ್ದಾಗಿದೆ. ಬಿಜೆಪಿ 31, ಕಾಂಗ್ರೆಸ್ 13, ಟಿಎಂಸಿ 11 ಮಹಿಳಾ ಸಂಸದರು ಸೇರಿದಂತೆ ಒಟ್ಟು 74 ಮಹಿಳೆಯರು ಲೋಕಸಭೆಯಲ್ಲಿ ತಮ್ಮ ಪಕ್ಷಗಳನ್ನು ಪ್ರತಿನಿಧಿಸಲಿದ್ದಾರೆ.

VISTARANEWS.COM


on

By

Lok Sabha Election 2024
Koo

ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಈ ಬಾರಿ 74 ಮಹಿಳೆಯರು ಸಂಸದರಾಗಿ (Women MPs) ಆಯ್ಕೆಯಾಗಿದ್ದಾರೆ. ಈ ಸಂಖ್ಯೆಯು 2019ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. 2019ರಲ್ಲಿ ಒಟ್ಟು 78 ಮಹಿಳೆಯರು ಸಂಸದರಾಗಿದ್ದರು. 1952ರ ಚುನಾವಣೆಗೆ (election) ಹೋಲಿಸಿದರೆ ಮಹಿಳಾ ಸಂಸದರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ (Women’s reservation) ಮಸೂದೆ ಅಂಗೀಕಾರವಾದ ಅನಂತರ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮೊದಲ ಚುನಾವಣೆ ಇದಾಗಿದೆ. ಈ ಕಾನೂನು ಇನ್ನೂ ಜಾರಿಗೆ ಬರಬೇಕಿದೆ.

ಮಹಿಳಾ ಸಂಸದರು ಸಂಖ್ಯೆ ಒಟ್ಟು ಚುನಾಯಿತ ಸದಸ್ಯರಲ್ಲಿ ಕೇವಲ ಶೇ. 13.63ರಷ್ಟಿದೆ. ಇದು ಮಹಿಳೆಯರಿಗೆ ಪ್ರಸ್ತಾಪಿಸಲಾಗಿರುವ ಶೇ. 33 ಮೀಸಲಾತಿಗಿಂತ ಕಡಿಮೆಯಾಗಿದೆ. ದೇಶಾದ್ಯಂತ ಕೆಳಮನೆಗೆ ಆಯ್ಕೆಯಾಗಿರುವ ಒಟ್ಟು ಮಹಿಳಾ ಸಂಸದರ ಪೈಕಿ 11 ಮಂದಿ ಪಶ್ಚಿಮ ಬಂಗಾಳದವರಾಗಿರುವುದು ವಿಶೇಷ.

ಯಾವ ಪಕ್ಷದಿಂದ ಎಷ್ಟು?

ಈ ಬಾರಿ ಲೋಕಸಭೆಯಲ್ಲಿ 14 ರಾಜಕೀಯ ಪಕ್ಷಗಳ ಮಹಿಳಾ ಸಂಸದರು ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ ಬಿಜೆಪಿ 31 ಮಹಿಳಾ ಸಂಸದರನ್ನು ಹೊಂದಿದ್ದು, ಕಾಂಗ್ರೆಸ್ 13, ತೃಣಮೂಲ ಕಾಂಗ್ರೆಸ್ (ಟಿಎಂಸಿ) 11, ಸಮಾಜವಾದಿ ಪಕ್ಷ (ಎಸ್‌ಪಿ) 5, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 3 ಮಹಿಳಾ ಸಂಸದರನ್ನು ಹೊಂದಿದೆ.

ಮೊದಲ ಬಾರಿ ಸಂಸದರಾದವರು

74 ಮಹಿಳಾ ಸಂಸದರಲ್ಲಿ 43 ಮಂದಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ಆಯ್ಕೆಯಾಗಿರುವ ಮಿಸಾ ಭಾರತಿ ಚೊಚ್ಚಲ ಲೋಕಸಭಾ ಸಂಸದರಾಗಿದ್ದಾರೆ.

ಕಣದಲ್ಲಿ ಇದದ್ದು ಎಷ್ಟು ಮಂದಿ ?

ಒಟ್ಟು 797 ಮಹಿಳಾ ಅಭ್ಯರ್ಥಿಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಬಿಜೆಪಿ ಗರಿಷ್ಠ 69 ಮತ್ತು ಕಾಂಗ್ರೆಸ್ 41 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಪಿಆರ್ ಎಸ್ ನ ವಿಶ್ಲೇಷಣೆಯ ಪ್ರಕಾರ ಮಹಿಳಾ ಸಂಸದರಲ್ಲಿ ಶೇ. 16ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಶೇ. 41ರಷ್ಟು ಮಂದಿ ಈ ಹಿಂದೆ ಲೋಕಸಭೆಯ ಸದಸ್ಯರಾಗಿದ್ದರು. ಉಳಿದವರಲ್ಲಿ ಒಬ್ಬ ಸಂಸದರು ಮಾತ್ರ ರಾಜ್ಯಸಭಾ ಸದಸ್ಯರಾಗಿದ್ದರು.

ಕಿರಿಯ ಮಹಿಳಾ ಸಂಸದರು

ಸಮಾಜವಾದಿ ಪಕ್ಷದ ಮಚ್ಲಿಶಹರ್‌ನ 25 ವರ್ಷದ ಪ್ರಿಯಾ ಸರೋಜ್ ಮತ್ತು ಕೈರಾನಾ ಕ್ಷೇತ್ರದ 29 ವರ್ಷದ ಇಕ್ರಾ ಚೌಧರಿ ಗೆಲುವು ಸಾಧಿಸಿದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.

ಇದನ್ನೂ ಓದಿ: Rahul Gandhi: ರಾಯ್‌ ಬರೇಲಿ V/S ವಯನಾಡ್‌-ರಾಹುಲ್‌ ಆಯ್ಕೆ ಯಾವುದು?

ಮಹಿಳಾ ಮೀಸಲಾತಿ ಎಷ್ಟು?

ಗಮನಾರ್ಹ ಸಂಗತಿ ಎಂದರೆ ನಾಮ್ ತಮಿಲರ್ ಕಚ್ಚಿಯಂತಹ ಪಕ್ಷಗಳು ಶೇ. 50ರಷ್ಟು ಮಹಿಳಾ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿತ್ತು. ಮಹಿಳಾ ಪ್ರಾತಿನಿಧ್ಯವನ್ನು ಹೊಂದಿರುವ ಇತರ ಪಕ್ಷಗಳಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಕೂಡ ಸೇರಿದೆ. ಈ ಎರಡೂ ಪಕ್ಷಗಳು ಶೇ. 40ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಹೊಂದಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಬಿಜು ಜನತಾ ದಳ (ಬಿಜೆಡಿ) ಶೇ. 33 ರಷ್ಟು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಶೇ.29, ಸಮಾಜವಾದಿ ಪಕ್ಷವು ಶೇ. 20 ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶೇ. 25ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಹೊಂದಿತ್ತು.

Continue Reading

ವೈರಲ್ ನ್ಯೂಸ್

Viral Video: ಮೆಟ್ರೊ ರೈಲಿನೊಳಗೆ ʼವಿದ್ಯಾವಂತ ಮಹಿಳೆಯರʼ ಫೈಟ್‌ ಹೇಗಿದೆ ನೋಡಿ!

ದೆಹಲಿ ಮೆಟ್ರೋದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡ ವಿಡಿಯೋ ಎಕ್ಸ್ ನಲ್ಲಿ ವೈರಲ್ (Viral Video) ಆಗಿದೆ. ಇದರಲ್ಲಿ ಒಬ್ಬ ಮಹಿಳೆ ಮತ್ತೊಬ್ಬರು ಮೆಟ್ರೋದಲ್ಲಿ ಕುಡಿದಿದ್ದಾರೆ ಎಂದು ಆರೋಪಿಸಿದ್ದು ಹೊಡೆದಾಟಕ್ಕೆ ಕಾರಣವಾಗಿದೆ.

VISTARANEWS.COM


on

By

Viral Video
Koo

ದೆಹಲಿ ಮೆಟ್ರೋ (delhi metro) ಎಲ್ಲರಿಗೂ ಈಗ ಹಾಸ್ಯದ ಕೇಂದ್ರವಾಗಿದೆ ಎನ್ನಬಹುದು. ಯಾಕೆಂದರೆ ಒಂದಲ್ಲ ಒಂದು ಕಾರಣಕ್ಕೆ ದೆಹಲಿ (delhi) ಮೆಟ್ರೋ ನಿರಂತರ ಸುದ್ದಿಯಾಗುತ್ತಲೇ ಇದೆ. ಇದೀಗ ಮೆಟ್ರೋದಲ್ಲಿ ಮಹಿಳೆಯರಿಬ್ಬರು ಹೊಡೆದಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Video) ಆಗಿದೆ. ದೆಹಲಿ ಮೆಟ್ರೋ ಬಗ್ಗೆ ಎಲ್ಲರೂ ಮತ್ತೊಮ್ಮೆ ತಮಾಷೆ ಮಾಡುವಂತಾಗಿದೆ.

ದೆಹಲಿ ಮೆಟ್ರೋದಲ್ಲಿ ಇತ್ತೀಚೆಗೆ ನಡೆದ ಘಟನೆಯಲ್ಲಿ ಇಬ್ಬರು ಮಹಿಳೆಯರು ಹೊಡೆದಾಡಿಕೊಂಡ ವಿಡಿಯೋ ಎಕ್ಸ್ (x) ನಲ್ಲಿ ವೈರಲ್ ಆಗಿದೆ. ಇದರಲ್ಲಿ ಒಬ್ಬ ಮಹಿಳೆ ಮತ್ತೊಬ್ಬರು ಮೆಟ್ರೋದಲ್ಲಿ ಕುಡಿದಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಹೊಡೆದಾಟಕ್ಕೆ ಕಾರಣವಾಗಿದೆ. ಮಹಿಳೆಯರಿಬ್ಬರು ಪರಸ್ಪರ ಕೂದಲು ಎಳೆದುಕೊಂಡು ಹೊಡೆದಾಡುತ್ತಿದ್ದರೆ ಉಳಿದವರು ನೋಡಿ ನಗುತ್ತಾ ವಿಡಿಯೋ ಮಾಡುತ್ತಿದ್ದರು.

ಎಕ್ಸ್ ನಲ್ಲಿ ಈ ವಿಡಿಯೋವನ್ನು ರಾಹುಲ್ ಶೈನಿ ಎಂಬವರು ಹಂಚಿಕೊಂಡಿದ್ದು, “ದಯೆಯುಳ್ಳ ಜನರ ದೆಹಲಿ ಎಂದಾದರೂ ಸುಧಾರಿಸುತ್ತದೆಯೇ? ಅದೇ ಪ್ರಸಿದ್ಧ ಸ್ಥಳವಾದ ಮೆಟ್ರೋದಲ್ಲಿ ಮತ್ತೆ ಮಹಿಳೆಯರ ನಡುವೆ ಜಗಳವಾಯಿತು…!! ನಂತರ ಪರಸ್ಪರ ಕಪಾಳ ಮೋಕ್ಷ ಮತ್ತು ಜಗಳ ನಡೆಯಿತು. ಜಗಳದ ನಂತರ ಇಬ್ಬರು ಮಹಿಳೆಯರು.” ಎಂಬ ಶೀರ್ಷಿಕೆ ನೀಡಲಾಗಿದೆ.


ವೈರಲ್ ಆದ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅನೇಕರು ದೆಹಲಿ ಮೆಟ್ರೋಗೆ ಇಂತಹ ಘಟನೆಗಳನ್ನು “ಸಾಮಾನ್ಯ” ಎಂದು ಹೇಳಿದ್ದಾರೆ. ಕೆಲವರು ಇದನ್ನು ಹಾಸ್ಯ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ ಹಂಚಿಕೊಂಡಿರುವ ಈ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ: Viral Video: ಮಕ್ಕಳು ಆಟವಾಡ್ತಿದ್ದ ವಾಟರ್‌ ಪಾರ್ಕ್‌ಗೆ ಏಕಾಏಕಿ ನುಗ್ಗಿದ ಬುಲ್ಡೋಜರ್‌; ಆಮೇಲೆ ನಡೆದಿದ್ದೇ ಬೇರೆ- ವಿಡಿಯೋ ನೋಡಿ

ಇದಕ್ಕೆ ಪ್ರತಿಕ್ರಿಯಿಸಿರುವ ಒಬ್ಬ ಬಳಕೆದಾರ, ಮೆಟ್ರೋ ಎಂದಿಗೂ ನಿರಾಶೆಗೊಳಿಸುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ದೆಹಲಿ ಮೆಟ್ರೋ ಮತ್ತೊಂದು ಹಾಸ್ಯ ಕುಚ್ ಭೀ ಹೋಥಾ ಕಭಿ ಭಿ (ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು)” ಎಂದು ಸೇರಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು ಹಾಸ್ಯಮಯವಾಗಿ, “ಅಸ್ಲಿ ರೆಸ್ಲಿಂಗ್ ಟು ಮೆಟ್ರೋ ಮತ್ತು ಇಂಡಿಯನ್ ರೈಲ್ವೇ ಮೈ ಹೋತಿ ಹೈ (ನಿಜವಾದ ಕುಸ್ತಿ ದೆಹಲಿ ಮೆಟ್ರೋದಲ್ಲಿ ನಡೆಯುತ್ತದೆ)” ಎಂದು ಸೇರಿಸಿದ್ದಾರೆ. ಮತ್ತೊಬ್ಬರು, ಈ ಸಮಸ್ಯೆಯು ಇಂದು ಚಿಕ್ಕದಾಗಿ ಕಾಣಿಸಬಹುದು, ಆದರೆ ನಾಳೆ ಇದು ಬಹಳ ಮಹತ್ವದ್ದಾಗಬಹುದು. ದೆಹಲಿ ಮೆಟ್ರೋ ನಲ್ಲಿ ಹೊಡೆದಾಡುವ ಜನರಿಗೆ ದಂಡ ವಿಧಿಸಬೇಕು. ಎಂದು ಹೇಳಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಗ್ರಹಚಾರ ಕೆಟ್ಟಾಗ ಕಾರಿನ ಚಕ್ರ ಕಳಚಿ ತಲೆಗೆ ಅಪ್ಪಳಿಸಬಹುದು! ವಿಡಿಯೊ ನೋಡಿ

ಪಾದಚಾರಿಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನ ಚಕ್ರವೊಂದು ಬಂದು ಅವರ ತಲೆಗೆ ಬಡಿದಿದೆ. ಅಪಘಾತದ ತೀವ್ರತೆಗೆ ಪಾದಚಾರಿ ಮಹಿಳೆ ನೆಲಕ್ಕೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಅಪಘಾತ (accident) ಯಾವಾಗ, ಎಲ್ಲಿ, ಹೇಗೆ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ ನಾವು ಎಲ್ಲೇ ಇದ್ದರೂ ಬಹಳ ಎಚ್ಚರಿಕೆಯಿಂದ ಇರಬೇಕು. ಎಷ್ಟೋ ಬಾರಿ ವಾಹನ (vehicle rider) ಸವಾರರ ಅಜಾಗರೂಕತೆಯಿಂದ ರಸ್ತೆ ಬದಿಯಲ್ಲಿ (Pedestrian) ನಡೆದುಕೊಂಡು ಹೋಗುವವರು ಅಪಘಾತಕ್ಕೆ ಈಡಾಗುವುದು ಇದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋವೊಂದು (Viral Video) ಹರಿದಾಡುತ್ತಿದೆ.

ಪಾದಚಾರಿಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಕಾರಿನ ಚಕ್ರವೊಂದು ಬಂದು ಅವರ ತಲೆಗೆ ಬಡಿದಿದೆ. ಅಪಘಾತದ ತೀವ್ರತೆಗೆ ಪಾದಚಾರಿ ಮಹಿಳೆ ನೆಲಕ್ಕೆ ಬಿದ್ದಿರುವುದು ಈ ವಿಡಿಯೋದಲ್ಲಿ ಸೆರೆಯಾಗಿದೆ.

ಏನಿದೆ ವಿಡಿಯೋದಲ್ಲಿ?

ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಕಾರಿನ ಟೈರ್ ವೊಂದು ಅವರ ಬದಿಯಲ್ಲೇ ಹಾದು ಹೋಗುತ್ತದೆ. ಇನ್ನೇನು ತಾನು ಬಚಾವಾದೆ ಎನ್ನುವಷ್ಟರಲ್ಲಿ ಆ ಚಕ್ರ ಹಿಂದಿನ ಗೋಡೆಗೆ ಬಡಿದು ಮರಳಿ ಅವರ ತಲೆಯ ಹಿಂಭಾಗಕ್ಕೆ ಬಡಿಯುತ್ತದೆ. ಪರಿಣಾಮವಾಗಿ ಮಹಿಳೆ ನೆಲಕ್ಕೆ ಉರುಳಿ ಬಿದ್ದಿದ್ದಾರೆ. ಮುಂದೇನಾಯಿತು ಎಂಬುದು ವಿಡಿಯೋದಲ್ಲಿ ಸೆರೆಯಾಗದೇ ಇದ್ದರೂ ಅಪಘಾತದ ತೀವ್ರತೆಗೆ ಮಹಿಳೆ ತೀವ್ರವಾಗಿ ಗಾಯಗೊಂಡಿರುವ ಸಾಧ್ಯತೆ ಇದೆ.


ಸಿಸಿಟಿವಿ ಕೆಮರಾದಲ್ಲಿ ರೆಕಾರ್ಡ್ ಆಗಿರುವ ಈ ದೃಶ್ಯಾವಳಿಯು ಅನಿರೀಕ್ಷಿತ ಅಪಾಯಗಳ ಬಗ್ಗೆ ಹೇಳುತ್ತದೆ. ಇಂತಹ ಅವಘಡದಿಂದ ಹಲವಾರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಕೆಲವರು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

ಹೀಗಾಗಿ ರಸ್ತೆ ಬದಿ ನಡೆದುಕೊಂಡು ಹೋಗುವಾಗಲೂ ಅನಿರೀಕ್ಷಿತ ಘಟನೆಗಳ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕು.
ಈ ಕುರಿತು ವೈರಲ್ ಆಗಿರುವ ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ಅಪಾಯದಿಂದ ಪಾರಾಗಲು ಅವಕಾಶವಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ದರೋಡೆ ಮಾಡಲು ಬಂದು ನಿದ್ದೆ ಮಾಡಿದ ಕಳ್ಳ

ಸರ್ಕಾರಿ ನೌಕರನೊಬ್ಬನ ಮನೆಗೆ ದರೋಡೆ ಮಾಡಲು ಬಂದ ಕಳ್ಳನೊಬ್ಬ ನಿದ್ದೆಗೆ ಜಾರಿದ ಘಟನೆ ಲಕ್ನೋದಲ್ಲಿ ನಡೆದಿದ್ದು, ಪೊಲೀಸರು ಬಂದ ಬಳಿಕವೇ ಆತನಿಗೆ ಎಚ್ಚರವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ವಿಚಿತ್ರ ಘಟನೆ ಇದಾಗಿದೆ. ಕೈಗೆ ಸಿಕ್ಕಿದ್ದನ್ನೆಲ್ಲಾ ದರೋಡೆ ಮಾಡಲು ಮನೆಗೆ ನುಗ್ಗಿದ ಕಳ್ಳನೊಬ್ಬ ಆರಾಮ ಮತ್ತು ತಂಪಾಗಿಸುವ ಎಸಿ ಗಾಳಿಯ ಅಡಿಯಲ್ಲಿ ನಿದ್ದೆಗೆ ಜಾರಿದನು. ಆತನ ಸಹಚರರು ಆತನನ್ನು ಎಬ್ಬಿಸಲು ಪ್ರಯತ್ನಿಸಿ ಸುಸ್ತಾಗಿ ಆತನನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ.

ಬೆಳಗ್ಗೆ ಮನೆಯ ಗೇಟ್ ತೆರೆದಿರುವುದನ್ನು ನೋಡಿ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಪಾಸಣೆಗೆ ಬಂದ ಪೊಲೀಸರು ಮನೆಯೊಳಗೇ ಆರಾಮವಾಗಿ ಮಲಗಿರುವ ಕಳ್ಳನನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.

ಕಳ್ಳರು ಮನೆಯಿಂದ ಬಹಳಷ್ಟು ವಸ್ತುಗಳನ್ನು ಕದ್ದೊಯ್ದಿರುವುದು ತಿಳಿದುಬಂದಿದೆ. ಕಳ್ಳ ಎಚ್ಚರಗೊಂಡಾಗ ಅವನ ಮುಂದೆ ಪೊಲೀಸರು ಕುಳಿತಿರುವುದನ್ನು ಕಂಡು ಆತ ಗಾಬರಿಯಾಗಿದ್ದಾನೆ. ಬಳಿಕ ಆತ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ವಿವರಿಸಿದ್ದು, ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದಾರೆ.

Continue Reading
Advertisement
Valmiki Corporation Scam
ಕರ್ನಾಟಕ17 mins ago

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ; ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್‌

Niveditha Gowda chandan matters told by Prashanth Sambargi
ಸ್ಯಾಂಡಲ್ ವುಡ್27 mins ago

Niveditha Gowda: ದುಡ್ಡಿನ ಹಿಂದೆ ಹೋದವರು ಯಾರಂತ ಗೊತ್ತಾಗುತ್ತೆ; ಚಂದನ್‌ಗೆ ನಮ್ಮ ಸಪೋರ್ಟ್‌ ಎಂದ ಪ್ರಶಾಂತ್‌ ಸಂಬರಗಿ!

assault Case in Bengaluru
ಬೆಂಗಳೂರು28 mins ago

Assault case : ಮೊದಲನೇ ಹೆಂಡ್ತಿ ಮಕ್ಕಳೊಂದಿಗೆ ಬಂದು 2ನೇ ಹೆಂಡ್ತಿಗೆ ರಕ್ತ ಬರುವಂತೆ ಬಾರಿಸಿದ ಭೂಪ

Puja Tomar
ಕ್ರೀಡೆ43 mins ago

Puja Tomar: ಯುಎಫ್​ಸಿ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಪೂಜಾ ತೋಮರ್

road Accident
ಕಲಬುರಗಿ1 hour ago

Road Accident : ಟೆಂಪೋ ಪಲ್ಟಿ; ಓವರ್‌ಟೇಕ್‌ ಧಾವಂತಕ್ಕೆ ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

Modi 3.0 Cabinet
ದೇಶ1 hour ago

Modi 3.0 Cabinet: ರಾಜ್ಯದಿಂದ ಜೋಶಿ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿಗೆ ಸಚಿವ ಸ್ಥಾನ; ಡಾ. ಮಂಜುನಾಥ್‌ಗೆ ಇಲ್ಲ ಅವಕಾಶ

Gold Rate Today
ಚಿನ್ನದ ದರ1 hour ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಬೆಲೆ ಗಮನಿಸಿ

Maharaj Movie Objects by Bajrang Dal Starring Junaid Khan
ಬಾಲಿವುಡ್1 hour ago

Maharaj Movie: ಹಿಂದು ಧರ್ಮ, ಶ್ರೀಕೃಷ್ಣನ ಅವಹೇಳನ; ಆಮೀರ್ ಖಾನ್ ಪುತ್ರನಿಗೆ ಬಜರಂಗದಳ ವಾರ್ನಿಂಗ್!

Electric shock
ಬೆಂಗಳೂರು ಗ್ರಾಮಾಂತರ1 hour ago

Electric shock : ಬಟ್ಟೆ ಒಣ ಹಾಕಲು ಹೋದಾಗ ಕರೆಂಟ್‌ ಶಾಕ್‌ನಿಂದ ವಿದ್ಯಾರ್ಥಿ ಸಾವು

JEE Advanced Result 2024
ಶಿಕ್ಷಣ2 hours ago

JEE Advanced 2024 Result: ಜೆಇಇ ಅಡ್ವಾನ್ಸ್ಡ್‌ ಫಲಿತಾಂಶ ಪ್ರಕಟ; ರಿಸಲ್ಟ್‌ ಹೀಗೆ ಚೆಕ್‌ ಮಾಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ2 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ5 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ6 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌