Actor Dharmendra: ಪೋಷಕರ ಜತೆ ಸಾಕಷ್ಟು ಸಮಯ ಕಳೆಯಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ರಾ ನಟ ಧರ್ಮೇಂದ್ರ? - Vistara News

ಸಿನಿಮಾ

Actor Dharmendra: ಪೋಷಕರ ಜತೆ ಸಾಕಷ್ಟು ಸಮಯ ಕಳೆಯಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ರಾ ನಟ ಧರ್ಮೇಂದ್ರ?

Actor Dharmendra: ಇತ್ತೀಚೆಗೆ ಧರ್ಮೇಂದ್ರ ಅವರು ತಂದೆ ಮತ್ತು ಹಿರಿಯ ಮಗ ಸನ್ನಿ ಡಿಯೋಲ್ (Sunny Deol) ಜತೆಗೆ ಪೋಸ್‌ ಕೊಟ್ಟ ಹಳೆಯ ಫೋಟೊವನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಧರ್ಮೇಂದ್ರ ತಂದೆ ಕೇವಲ್ ಕ್ರಿಶನ್ ವಾಕಿಂಗ್ ಸ್ಟಿಕ್ ಹಿಡಿದು ಕುಳಿತುಕೊಂಡಿದ್ದಾರೆ. ಧರ್ಮೇಂದ್ರ ಹಾಗೂ ಅಜ್ಜನ ಪಕ್ಕ ಮೊಮ್ಮಗ ಸನ್ನಿ ಡಿಯೋಲ್‌ ಅಕ್ಕ ಪಕ್ಕ ಇದ್ದಾರೆ. ಧರ್ಮೇಂದ್ರ ಪೀಚ್ ಟಿ-ಶರ್ಟ್ ಧರಿಸಿದ್ದರೆ, ಸನ್ನಿ ಬಿಳಿ ಶರ್ಟ್‌ ಧರಿಸಿದ್ದರು.

VISTARANEWS.COM


on

Actor Dharmendra not spending enough time with parents
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹಿರಿಯ ನಟ ಧರ್ಮೇಂದ್ರ (Actor Dharmendra) ಅವರು ಆಗಾಗ ತಮ್ಮ ಕುಟುಂಬದ ಜತೆ ಇರುವ ಸಹೋದ್ಯೋಗಿಗಳ ಜತೆ ಸಮಯ ಕಳೆದಿರುವ ಹಳೆಯ ಫೋಟೊಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಧರ್ಮೇಂದ್ರ ಅವರು ತಂದೆ ಮತ್ತು ಹಿರಿಯ ಮಗ ಸನ್ನಿ ಡಿಯೋಲ್ (Sunny Deol) ಜತೆಗೆ ಪೋಸ್‌ ಕೊಟ್ಟ ಹಳೆಯ ಫೋಟೊವನ್ನು ಎಕ್ಸ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ದಿವಂಗತ ತಂದೆ ಕೇವಲ್ ಕ್ರಿಶನ್ (Kewal Krishan) ಅವರ ಅಪರೂಪದ ಚಿತ್ರ ಹಂಚಿಕೊಂಡು ʻನನ್ನ ಪೋಷಕರಿಗೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕೆಂದು ಬಯಸುತ್ತೇನೆʼ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಹೀಗಾಗಿ ಧರ್ಮೇಂದ್ರ ಅವರು ಪೋಷಕರ ಜತೆ ಸಾಕಷ್ಟು ಸಮಯ ಕಳೆಯಲೇ ಇಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ನಟ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಧರ್ಮೇಂದ್ರ ತಂದೆ ಕೇವಲ್ ಕ್ರಿಶನ್ ವಾಕಿಂಗ್ ಸ್ಟಿಕ್ ಹಿಡಿದು ಕುಳಿತುಕೊಂಡಿದ್ದಾರೆ. ಧರ್ಮೇಂದ್ರ ಹಾಗೂ ಅಜ್ಜನ ಪಕ್ಕ ಮೊಮ್ಮಗ ಸನ್ನಿ ಡಿಯೋಲ್‌ ಅಕ್ಕ ಪಕ್ಕ ಇದ್ದಾರೆ. ಧರ್ಮೇಂದ್ರ ಪೀಚ್ ಟಿ-ಶರ್ಟ್ ಧರಿಸಿದ್ದರೆ, ಸನ್ನಿ ಬಿಳಿ ಶರ್ಟ್‌ ಧರಿಸಿದ್ದರು.

ಧರ್ಮೇಂದ್ರ ಫೋಟೊ ಜತೆಗೆ ʻನಾನು ನನ್ನ ಪೋಷಕರಿಗೆ ಹೆಚ್ಚಿನ ಸಮಯವನ್ನು ಮೀಸಲಿಡಬೇಕೆಂದುʼʼಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ನಟನ ಅಭಿಮಾನಿಗಳು ಪೋಸ್ಟ್‌ಗೆ ಹಲವಾರು ಜನ ಕಮೆಂಟ್‌ ಮಾಡಿದ್ದಾರೆ. ʻಸರ್, ದಯವಿಟ್ಟು ನಮ್ಮ ಹೆತ್ತವರನ್ನು ಹೇಗೆ ಸಂತೋಷಪಡಿಸುವುದು ಮತ್ತು ಅವರಿಗಾಗಿ ಹೆಚ್ಚಿನ ಸಮಯವನ್ನು ಹೇಗೆ ಕೊಡಬೇಕು ಎಂಬುದು ನಮಗೆ ತಿಳಿಸಿʼʼಎಂದು ಕಮೆಂಟ್‌ ಮಾಡಿದ್ದಾರೆ. `ನಿಮ್ಮ ಬಗ್ಗೆ ಹೆಮ್ಮೆ ಪಡಬೇಕು ಧರಮ್ ಜಿʼʼಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Dharmendra Changes Name: 64 ವರ್ಷಗಳ ಬಳಿಕ ಹೆಸರನ್ನು ಬದಲಿಸಿದ್ರಾ ನಟ ಧರ್ಮೇಂದ್ರ?

ಧರ್ಮೇಂದ್ರ ಅವರ ತಂದೆ ಕೇವಲ್ ಕ್ರಿಶನ್ ಪಂಜಾಬ್‌ನ ಲುಧಿಯಾನ ಜಿಲ್ಲೆಯ ಸಾಹ್ನೆವಾಲ್ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ಸತ್ವಂತ್ ಕೌರ್ ಅವರನ್ನು ಕೇವಲ್ ಕ್ರಿಶನ್ ವಿವಾಹವಾಗಿದ್ದರು. ಕೇವಲ್ ಕ್ರಿಶನ್ ಅವರಿಗೆ ಇಬ್ಬರು ಮಕ್ಕಳು. ನಟ ಧರ್ಮೇಂದ್ರ ಮತ್ತು ನಟ ಅಜಿತ್ ಡಿಯೋಲ್.

1960ರಲ್ಲಿ `ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ಧರ್ಮೇಂದ್ರ ಅವರು 60ರ ದಶಕದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟ ಅವರು ಈಗಲೂ ನಟನೆ ಮುಂದವರಿಸಿದ್ದಾರೆ.ಧರ್ಮೇಂದ್ರ ಅವರು ಪಂಜಾಬ್‌ನಲ್ಲಿ 1935ರ ಡಿಸೆಂಬರ್ 8ರಂದು ಜನಿಸಿದರು. ಧರ್ಮೇಂದ್ರ ಅವರ ತಂದೆ ಮುಖ್ಯೋಪಾಧ್ಯಾಯರಾಗಿದ್ದರು. ಅವರ ತಾಯಿ ಗೃಹಿಣಿಯಾಗಿದ್ದರು. ನಟನೆ ಮಾಡಬೇಕು ಎಂದು ಧರ್ಮೇಂದ್ರ ಅವರು ಮುಂಬೈಗೆ ಬಂದರು. ಅವರು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಮಧ್ಯದ ಹೆಸರು ಹಾಗೂ ಸರ್​ನೇಮ್​ನ ತೆಗೆದು ಹಾಕಿದರು. ಅವರ ಮಕ್ಕಳಾದ ಸನ್ನಿ ಹಾಗೂ ಬಾಬಿ ‘ಡಿಯೋಲ್​’ ಸರ್​ನೇಮ್​ನ ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡಿದ್ದಾರೆ.

ಕಳೆದ ವರ್ಷ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸಿದ್ದರು.ಧರ್ಮೇಂದ್ರ ಈಗ ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರೊಂದಿಗೆ ಇಕ್ಕಿಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಸನ್ನಿ ಡಿಯೋಲ್ ಜತೆ ಮತ್ತೆ ಒಂದಾಗಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Anupam Kher-Rajinikanth: ಮೋದಿ ಪ್ರಮಾಣವಚನ ವೇಳೆ ರಜನಿಕಾಂತ್‌ಗೆ ಅನುಪಮ್ ಖೇರ್ ಹೇಳಿದ್ದೇನು? ವಿಡಿಯೊ ನೋಡಿ!

Anupam Kher-Rajinikanth ಪ್ರಧಾನಿ ನರೇಂದ್ರ ಮೋದಿಯವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ನಟ ರಜನಿಕಾಂತ್ ಅವರನ್ನು ಭೇಟಿಯಾದ ನಟ ಅನುಪಮ್ ಖೇರ್ ರಜನಿಕಾಂತ್ ಅವರನ್ನು “ಮನುಕುಲಕ್ಕೆ ದೇವರು ನೀಡಿದ ಕೊಡುಗೆ” ಎಂದು ಹಾಡಿಹೊಗಳಿದ್ದಾರೆ. ಈ ವಿಡಿಯೋವನ್ನು ಅನುಪಮ್ ಖೇರ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊವನ್ನು ನೀವೇ ನೋಡಿ.

VISTARANEWS.COM


on

Anupam Kher-Rajinikanth
Koo

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತ ಕಂಡ ಮಹಾನ್ ನಾಯಕ. ಪ್ರಧಾನಿ ಮೋದಿಯವರ ನೇರ ನಡೆ, ದಕ್ಷ ಆಡಳಿತದಿಂದ ಅವರು ಭಾರತ ಮಾತ್ರವಲ್ಲ ವಿಶ್ವದ ನೆಚ್ಚಿನ ನಾಯಕರೆನಿಸಿಕೊಂಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಪಕ್ಷ ಬಹುಮತ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲಾ ನಾಯಕರು ಸೇರಿ ನರೇಂದ್ರ ಮೋದಿಯವರನ್ನು ಮತ್ತೆ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆ ಮಾಡಿದ್ದಾರೆ. ಜೂನ್ 9ರಂದು ನಡೆದ ಪ್ರಧಾನಿ ನರೇಂದ್ರ ಮೋದಿಯವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ದೇಶದ ಪ್ರಮುಖ ವ್ಯಕ್ತಿಗಳು, ಖ್ಯಾತ ಸಿನಿಮಾ ತಾರೆಯರ ದಂಡೇ ಆಗಮಿಸಿತ್ತು.ಈ ಕಾರ್ಯಕ್ರಮಕ್ಕೆ ನಟ ರಜನಿಕಾಂತ್ ಮತ್ತು ನಟ ಅನುಪಮ ಖೇರ್ (Anupam Kher-Rajinikanth)ಅವರು ಆಗಮಿಸಿದ್ದರು.

ರಜನಿಕಾಂತ್‌ ಅವರನ್ನು ನೋಡಿದಾಕ್ಷಣ ಅನುಪಮ್‌ ಖೇರ್‌ ಅವರು ಖುಷಿಯಿಂದ ಹಾಡಿ ಹೊಗಳಿದ್ದಾರೆ. ರಜನಿಕಾಂತ್ ಅವರನ್ನು “ಮನುಕುಲಕ್ಕೆ ದೇವರು ನೀಡಿದ ಕೊಡುಗೆ” ಎಂದು ಅನುಪಮ್‌ ಖೇರ್‌ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ. ಈ ವಿಡಿಯೋವನ್ನು ಅನುಪಮ್ ಖೇರ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಅನುಪಮ್ ಖೇರ್ ಮತ್ತು ರಜನಿಕಾಂತ್ ಅವರು ಭದ್ರತೆಯೊಂದಿಗೆ ನಡೆದುಕೊಂಡು ಹೋಗುವುದು ಕಾಣುತ್ತಿದೆ. ಆ ವೇಳೆ ಕ್ಯಾಮೆರಾವನ್ನು ನೋಡುತ್ತಿದ್ದ ಅನುಪಮ್, “ಒಬ್ಬನೇ, ಮಿಸ್ಟರ್ ರಜನಿ-ದಿ-ಕಾಂತ್! ! ಮನುಕುಲಕ್ಕೆ ದೇವರ ಕೊಡುಗೆ! ವಾಹ್!” ಎಂದು ಹೇಳುತ್ತಾ ರಜನಿಕಾಂತ್ ಅವರನ್ನು ಹೊಗಳಿದ್ದಾರೆ. ಆಗ ರಜನಿಕಾಂತ್ ಅನುಪಮ್ ಖೇರ್ ತೋಳನ್ನು ಹಿಡಿದು ಮುಗುಳ್ನಕ್ಕಿದ್ದಾರೆ. ಈ ಇಬ್ಬರ ನಟರ ಖುಷಿಯನ್ನು ಜನರು ಕೂಡ ಕಣ್ತುಂಬಿಕೊಂಡಿದ್ದಾರೆ.

ಈ ವಿಡಿಯೋಗೆ ನಿರ್ಮಾಪಕ ಆನಂದ್ ಪಂಡಿತ್ ಅವರು, “ರಜನಿಕಾಂತ್‌ ಪ್ರತಿಭೆಯ ಜೊತೆಗೆ, ನಮ್ರತೆ, ದಯೆ ಮತ್ತು ಪ್ರೀತಿಯ ಮಹಾಪೂರವನ್ನು ತುಂಬಿರುವ ವ್ಯಕ್ತಿ ಎಂದು ಪ್ರತಿಕ್ರಿಯಿಸಿದ್ದಾರೆ. ಹಿರಿಯ ನಟ ರಾಕೇಶ್ ಬೇಡಿ ಅವರು,”ಅದರಲ್ಲಿ ಯಾವುದೇ ಸಂದೇಹವಿಲ್ಲ ಹಾಗೇ ತುಂಬಾ ಸರಳ ವ್ಯಕ್ತಿ” ಎಂದು ಕಾಮೆಂಟ್ ಮಾಡಿದ್ದಾರೆ.

ಭಾನುವಾರ ನಡೆದ ಪ್ರಧಾನಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಆಗಮಿಸುವ ಮುನ್ನ ರಜನಿಕಾಂತ್ ವಿಮಾನ ನಿಲ್ದಾಣದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕ್ರಮದ ಐತಿಹಾಸಿಕ ಮಹತ್ವವನ್ನು ಶ್ಲಾಘಿಸಿದರು ಮತ್ತು ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗುತ್ತಿರುವುದಕ್ಕೆ ಅಭಿನಂದಿಸಿದರು. ಪ್ರಬಲ ಪ್ರತಿಪಕ್ಷಗಳ ಉಪಸ್ಥಿತಿಯು ಪ್ರಜಾಪ್ರಭುತ್ವದ ಆರೋಗ್ಯಕರ ಸಂಕೇತವಾಗಿದೆ ಎಂದು ಅವರು ಹೇಳಿದರು.‌

ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧನ; ನಟಿ ಸಂಜನಾಗೆ ಶಾಕ್‌, ರಕ್ಷಿತಾ ಹಾರ್ಟ್‌ಬ್ರೇಕ್, ದೇವರಲ್ಲಿ ಪ್ರಾರ್ಥನೆ!

ನಟ ರಜನೀಕಾಂತ್ ಅವರು ಕೊನೆಯದಾಗಿ ‘ಲಾಲ್ ಸಲಾಮ್ ‘ ಚಿತ್ರದಲ್ಲಿ ಕಾಣಿಸಿಕೊಂಡರು ಮತ್ತು ಹಾಗೇ ರಜನಿಕಾಂತ್ ಅವರ 170ನೇ ಸಿನಿಮಾ ಟಿಜೆ ಜ್ಞಾನವೇಲ್ ನಿರ್ದೇಶನದ ‘ವೆಟ್ಟೈಯನ್’ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

Continue Reading

ಚಿತ್ರದುರ್ಗ

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Murder case: ರೇಣುಕಾ ಸ್ವಾಮಿ ಎಂಬಾತ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಬಂಧಿಯಾಗಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬೇಡ ಜಂಗಮ ಸಮುದಾಯದವರು ಒತ್ತಾಯಿಸಿದ್ದಾರೆ.

VISTARANEWS.COM


on

By

actor Darshan
Koo

ಚಿತ್ರದುರ್ಗ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಗೆಳತಿ ಪವಿತ್ರಗೌಡ ಸೇರಿ 13 ಮಂದಿ ಬಂಧಿಯಾಗಿದ್ದಾರೆ. ಇದೀಗ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯವು ಕೇಳಿ ಬಂದಿದೆ. ಬೇಡ ಜಂಗಮ ಸಮುದಾಯದ ಜಿಲ್ಲಾಧ್ಯಕ್ಷ ಎಂ.ಟಿ ಮಲ್ಲಿಕಾರ್ಜುನ ಸ್ವಾಮಿ ಒತ್ತಾಯಿಸಿದ್ದಾರೆ.

ಪೊಲೀಸರು ಆರೋಪಿಗಳನ್ನು ತನಿಖೆ ಮಾಡುವುದು ಬೇಡ. ದರ್ಶನ್ ಪ್ರಭಾವಿಯಾಗಿದ್ದು, ಪ್ರಭಾವ ಬೀರಿ ಹೊರಗೆ ಬರಬಹುದು. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಒತ್ತಾಯಿಸಿದ್ದಾರೆ. ನಮ್ಮ ಸಮುದಾಯದ ಸ್ವಾಮೀಜಿಗಳು ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.ಅವರೊಟ್ಟಿಗೆ ಚರ್ಚಿಸಿ ಮುಂದಿನ ಕ್ರಮವಹಿಸಲಾಗುತ್ತದೆ ಎಂದರು.

ಮೃತ ಕುಟುಂಬಸ್ಥರಿಗೆ ಭಾವನಾ ಬೆಳಗೆರೆ ಸಾಂತ್ವನ

ರೇಣುಕಾ ಸ್ವಾಮಿ ಮನೆಗೆ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕಿ ಭಾವನಾ ಬೆಳಗೆರೆ ಭೇಟಿ ನೀಡಿದರು. ಹಿರಿಯೂರು ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಭಾವನಾ, ವಿಷಯ ತಿಳಿದು ರೇಣುಕಾಸ್ವಾಮಿ ಮನೆಗೆ ಭೇಟಿ ಕೊಟ್ಟರು. ಮೃತನ ಪತ್ನಿ ಸಹನಾಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧನ; ನಟಿ ಸಂಜನಾಗೆ ಶಾಕ್‌, ರಕ್ಷಿತಾ ಹಾರ್ಟ್‌ಬ್ರೇಕ್, ದೇವರಲ್ಲಿ ಪ್ರಾರ್ಥನೆ!

ದರ್ಶನ್‌, ಪವಿತ್ರಗೌಡ ಸೇರಿ 13 ಮಂದಿ ಬಂಧನ

ನಟನೆ, ಸಿನಿಮಾಗಳ ಜತೆಗೆ ವಿವಾದಗಳಿಂದಲೂ ಹೆಚ್ಚು ಸುದ್ದಿಯಲ್ಲಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ (Actor Darshan) ಅವರೀಗ ಗಂಭೀರ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ (Renukaswamy) ಎಂಬ 28 ವರ್ಷದ ಯುವಕನ ಕೊಲೆ ಪ್ರಕರಣದಲ್ಲಿ ದರ್ಶನ್‌ ಅವರನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲ, ದರ್ಶನ್‌ ಅವರ ವಿರುದ್ಧ ಕೊಲೆ, ಅಪಹರಣ ಹಾಗೂ ಸಾಕ್ಷ್ಯನಾಶ ಪ್ರಕರಣಗಳ ಸಂಕಷ್ಟ ಎದುರಾಗಿದ್ದು, ಆರೋಪ ಸಾಬೀತಾದರೆ ಇವರಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್‌ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐಪಿಸಿ ಸೆಕ್ಷನ್‌ 364ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಿದ್ದಾರೆ. ಇನ್ನು ಗೋಡೌನ್‌ನಲ್ಲಿ ಇರಿಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಇದಾದ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಹಾಗಾಗಿ, ಐಪಿಸಿ ಸೆಕ್ಷನ್‌ 302ರ ಅಡಿಯಲ್ಲಿ ಕೇಸ್‌ ದಾಖಲಾಗಲಿದೆ. ಇನ್ನು ಹತ್ಯೆ ಬಳಿಕ ಶವವನ್ನು ಬಿಸಾಕಿದ ಕಾರಣ ಸಾಕ್ಷ್ಯ ನಾಶದ ಪ್ರಕರಣವನ್ನೂ ಸೇರಿಸಲಾಗುತ್ತದೆ. ಹಾಗಾಗಿ, ಯಾವ ಪ್ರಕರಣಗಳಲ್ಲಿ ಆರೋಪ ಸಾಬೀತಾದರೂ ದರ್ಶನ್‌ ಅವರಿಗೆ ಜೈಲು ಶಿಕ್ಷೆಯಾಗಲಿದೆ. ಕೊಲೆ ಕೇಸ್‌ನಲ್ಲಿ ಆರೋಪ ಸಾಬೀತಾದರಂತೂ ಜೀವಾವಧಿ ಶಿಕ್ಷೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ದರ್ಶನ್‌ ಕೈವಾಡವೇನು?

ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ ಹಿನ್ನೆಲೆಯಲ್ಲಿ ದರ್ಶನ್‌ ಆಪ್ತರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ರೇಣುಕಾಸ್ವಾಮಿ ಮೇಲೆ ದರ್ಶನ್‌ ಅವರೇ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಮೃತಪಟ್ಟಿದ್ದರು. ನಂತರ ಶವವನ್ನು ಚರಂಡಿ ಬಳಿ ಎಸೆಯಲಾಗಿತ್ತು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Actor Darshan: ಕೊಲೆ ಕೇಸ್‌ನಲ್ಲಿ ದರ್ಶನ್‌ ಬಂಧನ; ನಟಿ ಸಂಜನಾಗೆ ಶಾಕ್‌, ರಕ್ಷಿತಾ ಹಾರ್ಟ್‌ಬ್ರೇಕ್, ದೇವರಲ್ಲಿ ಪ್ರಾರ್ಥನೆ!

Actor Darshan: ನಟ ದರ್ಶನ್‌ ಅವರನ್ನು ಕೊಲೆ ಕೇಸ್‌ನಲ್ಲಿ ಬಂಧಿಸಿದ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ ನಟಿಯರಾದ ಸಂಜನಾ ಗಲ್ರಾಣಿ ಹಾಗೂ ರಕ್ಷಿತಾ ಪ್ರೇಮ್‌ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್‌ ಅವರು ಸಂಕಷ್ಟದಿಂದ ಪಾರಾಗಲಿ ಎಂದು ದೇವರಲ್ಲಿ ಪೂಜೆ, ಪ್ರಾರ್ಥನೆ ಮಾಡುತ್ತೇನೆ ಎಂಬುದಾಗಿ ಸಂಜನಾ ಗಲ್ರಾಣಿ ಹೇಳಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರನ್ನು ಪೊಲೀಸರು ಬಂಧಿಸಿರುವ ಸುದ್ದಿಯು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಗೆಳತಿ ಪವಿತ್ರಾ ಗೌಡ (Pavitra Gowda) ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ್ದಕ್ಕೆ ರೇಣುಕಾಸ್ವಾಮಿ ಅವರನ್ನು ದರ್ಶನ್‌ ಹಾಗೂ ಅವರ ಸ್ನೇಹಿತರು ಹತ್ಯೆ ಮಾಡಿದ್ದಾರೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 13 ಜನರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ, ದರ್ಶನ್‌ ಬಂಧನದ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ ನಟಿಯರಾದ ಸಂಜನಾ ಗಲ್ರಾಣಿ (Sanjana Galrani) ಹಾಗೂ ರಕ್ಷಿತಾ ಪ್ರೇಮ್‌ (Rakshita Prem) ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ದರ್ಶನ್‌ ಅವರನ್ನು ಪೊಲೀಸರು ಬಂಧಿಸುತ್ತಲೇ ಸಂಜನಾ ಗಲ್ರಾಣಿ ಅವರು ವಿಡಿಯೊ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. “ನಟ ದರ್ಶನ್‌ ಅವರ ಬಂಧನದಿಂದ ನನಗೆ ಶಾಕ್‌ ಆಗಿದೆ. ಇದು ಬಂಧನ ಆಗಿರದೆ, ಕೇವಲ ವಿಚಾರಣೆ ಆಗಿರಲಿ. ಕೂಡಲೇ ದರ್ಶನ್‌ ಅವರು ಸಂಕಷ್ಟದಿಂದ ಪಾರಾಗಲಿ ಎಂದು ದೇವರಲ್ಲಿ ಪೂಜೆ, ಪ್ರಾರ್ಥನೆ ಮಾಡುತ್ತೇನೆ” ಎಂಬುದಾಗಿ ಸಂಜನಾ ಗಲ್ರಾಣಿ ಹೇಳಿದ್ದಾರೆ. ಇನ್ನು ರಕ್ಷಿತಾ ಪ್ರೇಮ್‌ ಅವರು, ಹಾರ್ಟ್‌ ಬ್ರೇಕ್‌ ಆಗಿರುವ ಎಮೋಜಿ ಪೋಸ್ಟ್‌ ಮಾಡಿದ್ದು, “ಹೇಳಲು ತುಂಬ ಇದೆ. ಆದರೆ, ಏನೂ ಹೇಳಲು ಆಗುತ್ತಿಲ್ಲ” ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ನಟ ದರ್ಶನ್‌, ಗೆಳತಿ ಪವಿತ್ರಾ ಗೌಡ, ಅಭಿಮಾನಿಗಳ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಘವೇಂದ್ರ ಅಲಿಯಾ ರಘು ದರ್ಶನ್‌ ಸೇರಿ 13 ಜನರನ್ನು ಬಂಧಿಸಿರುವ ಪೊಲೀಸರು ಇಂದು ಸಂಜೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಇದಕ್ಕಾಗಿ, ಪೊಲೀಸ್‌ ಠಾಣೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ. ಈಗಾಗಲೇ ದರ್ಶನ್‌ ಹಾಗೂ ಪವಿತ್ರಾ ಗೌಡ ಅವರ ತಪಾಸಣೆ ಮುಗಿದಿದೆ. ಎಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ಕೈಗೊಳ್ಳುತ್ತಿದ್ದಾರೆ.

ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ಹಿನ್ನೆಲೆಯಲ್ಲಿ ದರ್ಶನ್‌ ಆಪ್ತರು ಜೂನ್‌ 8ರಂದು ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ಜೂನ್‌ 9ರ ಭಾನುವಾರ ರಾಜಕಾಲುವೆ ಬಳಿ ಶವ ಪತ್ತೆಯಾಗಿತ್ತು. ಬೀದಿ ನಾಯಿಗಳು ಕಸ ಎಳೆದಾಡುವಾಗ ಶವ ಪತ್ತೆಯಾಗಿತ್ತು. ಇದಾದ ಬಳಿಕ ಅದೇ ದಿನ ರಾಮ್‌ ದೋರ್‌ ಎಂಬ ಸೆಕ್ಯುರಿಟಿ ಗಾರ್ಡ್‌ ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ತನಿಖೆ ನಡೆಸಿದ್ದರು.

ಇದನ್ನೂ ಓದಿ: Actor Darshan : ದರ್ಶನ್​ಗೆ ಮರಣದಂಡನೆಯಾಗಲಿ; ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಒತ್ತಾಯ

Continue Reading

ಸಿನಿಮಾ

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan : ವ್ಯಕ್ತಿಯೊಬ್ಬನ ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ನಟ ದರ್ಶನ್‌ ಸೇರಿ ಇತರೆ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ನಟ ದರ್ಶನ್‌ರನ್ನು ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಖುದ್ದು ವಿಚಾರಣೆ ನಡೆಸುತ್ತಿದ್ದು, ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

VISTARANEWS.COM


on

By

Actor Darshan gets a series of questions from the police
ಕೊಲೆ ಕೇಸ್‌ನಲ್ಲಿ ಬಂಧಿಯಾಗಿರುವ ನಟ ದರ್ಶನ್‌ ಹಾಗೂ ಪವಿತ್ರಗೌಡ
Koo

ಬೆಂಗಳೂರು: ರೇಣುಕಾಸ್ವಾಮಿ ಎಂಬಾತನ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಸೇರಿ ಹಲವರು ಲಾಕ್‌ ಆಗಿದ್ದಾರೆ. ಸೋಮವಾರ ಬೆಳಗ್ಗೆ 9:30ರಿಂದ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಟ ದರ್ಶನ್ ಅವರ ವಿಚಾರಣೆ ನಡೆಯುತ್ತಿದೆ. ದರ್ಶನ್‌ರನ್ನು ಖುದ್ದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇತ್ತ ಇತರೆ ಆರೋಪಿಗಳಿಂದ ವಿಜಯನಗರ ಎಸಿಪಿ ಚಂದನ್ ಹೇಳಿಕೆ ಪಡೆಯುತ್ತಿದ್ದಾರೆ.

ವಿಚಾರಣೆಯಲ್ಲಿ ನಟ ದರ್ಶನ್‌ಗೆ ಪ್ರಶ್ನೆಗಳ ಸುರಿಮಳೆಯನ್ನೇ ಕೇಳಲಾಗುತ್ತಿದೆ. ಪವಿತ್ರಾಗೌಡಗೂ ಮೃತ ರೇಣುಕಾಸ್ವಾಮಿಗೂ ಹೇಗೆ ಪರಿಚಯ? ಪವಿತ್ರಗೌಡ ಬಗ್ಗೆ ಪೋಸ್ಟ್ ಮಾಡಿದರೆ ನಿಮಗ್ಯಾಕೆ ಕೋಪ? ನಿಮಗೂ ಪವಿತ್ರಾಗೌಡಗೂ ಏನು ಸಂಬಂಧ? ಪವಿತ್ರಾಗೌಡ ಈ ಬಗ್ಗೆ ನಿಮ್ಮ ಬಳಿ ದೂರು ನೀಡಿದ್ದರಾ ಎಂದು ದರ್ಶನ್‌ಗೆ ಡಿಸಿಪಿ ಗಿರೀಶ್‌ ಪ್ರಶ್ನೆಗಳನ್ನು ಕೇಳಿದ್ದಾರೆ. ಪ್ರಕರಣಕ್ಕೆ ಕಾರಣ ಏನು? ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿದ್ದು ಯಾರು? ಅಶ್ಲೀಲವಾಗಿ ಕಾಮೆಂಟ್ ಮಾಡಿದರೆ ಪೊಲೀಸರಿಗೆ ದೂರು ನೀಡಬಹುದಿತ್ತು. ದೂರು ನೀಡದೇ ಚಿತ್ರದುರ್ಗದಿಂದ ಆರ್‌ಆರ್‌ನಗರಕ್ಕೆ ರೇಣುಕಾಸ್ವಾಮಿಯನ್ನು ಕರೆಸಿದ್ದು ಯಾಕೆ? ಪ್ರಶ್ನಿಸಿದ್ದಾರೆ.

ಇತ್ತ ಕೊಲೆ ಕೇಸ್‌ನಲ್ಲಿ ಸ್ವತಃ ತಾವೇ ಶರಣಾಗಿರುವ ಇತರೆ ಆರೋಪಿಗಳಿಗೂ ಹಲವು ಆಯಾಮದಲ್ಲಿ ವಿಚಾರಣೆ ನಡೆಯುತ್ತಿದೆ. ರೇಣುಕಾಸ್ವಾಮಿ ಪೋಸ್ಟ್ ಬಗ್ಗೆ ದರ್ಶನ್‌ಗೆ ಹೇಳಿದವರು ಯಾರು? ರೇಣುಕಾಸ್ವಾಮಿಗೆ ಮೊದಲು ಹಲ್ಲೆ ಮಾಡಿದ್ದು ಯಾರು? ಹಲ್ಲೆ ನಂತರ ರೇಣುಕಾಸ್ವಾಮಿ ಮೃತಪಟ್ಟಿದ್ದು ದೃಢಪಡಿಸಿದ್ದು ಯಾರು, ನಂತರ ಮೃತದೇಹವನ್ನು ಡಿಸ್‌ಪೋಸ್‌ ಮಾಡುವ ಐಡಿಯಾ ಕೊಟ್ಟಿದ್ಯಾರು? ಘಟನೆ ನಂತರ ಎಲ್ಲರೂ ಎಲ್ಲಿ ಹೋಗಿದ್ದೀರಿ? ಎಂದು ಮೂವರು ಆರೋಪಿಗಳಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಇದನ್ನೂ ಓದಿ: Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಹಣಕಾಸಿನ ಡ್ರಾಮಾ ಮಾಡಿದ್ದ ಆರೋಪಿಗಳು

ನಿನ್ನೆ ಸೋಮವಾರ ಮೂವರು ಆರೋಪಿಗಳು ಪೊಲೀಸರ ಮುಂದೆ ಹಣಕಾಸಿನ ಡ್ರಾಮಾ ಮಾಡಿದ್ದರು. ಪೊಲೀಸರ ಮುಂದೆ ಸುಳ್ಳು ಹೇಳಿಕೆ ನೀಡಲು ಸೂಚಿಸಿದವರು ಯಾರು? ಎಂದು ಹಲವು ಆಯಾಮಗಳಲ್ಲಿ ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಪೊಲೀಸರು ಪ್ರಶ್ನಿಸುತ್ತಿದ್ದಾರೆ.

ಏನಿದು ಪ್ರಕರಣ?

ರೇಣುಕಾಸ್ವಾಮಿ ಎಂಬಾತ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಟ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರನ್ನು ಪೊಲೀಸರು (ಜೂ.11) ಬಂಧಿಸಿದ್ದಾರೆ. ಮೈಸೂರಿನಲ್ಲಿರುವ (Mysore) ದರ್ಶನ್‌ ಅವರ ತೋಟದ ಮನೆಯಲ್ಲಿ ಬೆಂಗಳೂರಿನ ಪೊಲೀಸರು ದರ್ಶನ್‌ ಅವರನ್ನು ಬಂಧಿಸಿದ್ದರು. ನಟನನ್ನು ಬಂಧಿಸಿ (Actor Darshan Arrested) ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು.

ನಟ ದರ್ಶನ್‌ ಜತೆಗೆ ಗೆಳತಿ, ನಟಿಯೂ ಆದ ಪವಿತ್ರಾ ಗೌಡ (Pavithra Gowda) ಅವರ ಕುರಿತು ಅಶ್ಲೀಲ ಪೋಸ್ಟ್‌ ಮಾಡಿದ ಹಿನ್ನೆಲೆಯಲ್ಲಿ ನಡೆದ ರೇಣುಕಾಸ್ವಾಮಿ ಎಂಬಾತ ಕೊಲೆ ನಡೆದಿದೆ ಎನ್ನಲಾಗಿತ್ತು. ಸದ್ಯ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan) ಹಾಗೂ ಅವರ ಗೆಳತಿ ಪವಿತ್ರಾ ಗೌಡ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
MS Dhoni
ಕ್ರೀಡೆ41 seconds ago

MS Dhoni Fan: ಪ್ಯಾರಿಸ್​ನಲ್ಲಿ ಧೋನಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಭಿಮಾನಿ

Job Alert
ಉದ್ಯೋಗ3 mins ago

Job Alert: ಬಿಎಸ್ಎಫ್‌ನಲ್ಲಿದೆ ಬರೋಬ್ಬರಿ 1,526 ಹುದ್ದೆ; ದ್ವಿತೀಯ ಪಿಯು ಪಾಸಾದವರು ಇಂದೇ ಅರ್ಜಿ ಸಲ್ಲಿಸಿ

Anupam Kher-Rajinikanth
ಪ್ರಮುಖ ಸುದ್ದಿ9 mins ago

Anupam Kher-Rajinikanth: ಮೋದಿ ಪ್ರಮಾಣವಚನ ವೇಳೆ ರಜನಿಕಾಂತ್‌ಗೆ ಅನುಪಮ್ ಖೇರ್ ಹೇಳಿದ್ದೇನು? ವಿಡಿಯೊ ನೋಡಿ!

Mukesh Khanna
ದೇಶ15 mins ago

Mukesh Khanna: ಅಯೋಧ್ಯೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಕೊಟ್ಟ ʼಮಹಾಭಾರತʼದ ಭೀಷ್ಮ

union minister pralhad joshi takes charge of renewable energy Food Consumer Affairs ministry
ಕರ್ನಾಟಕ18 mins ago

Pralhad Joshi: ಹೊಸ ಖಾತೆಗಳ ಅಧಿಕಾರ ಸ್ವೀಕರಿಸಿದ ಪ್ರಲ್ಹಾದ್‌ ಜೋಶಿ; ಲಕ್ಷ್ಮಿ ಪೂಜೆಯೊಂದಿಗೆ ಕಾರ್ಯಾರಂಭ

Yamaha Fascino S
Latest29 mins ago

Yamaha Fascino S : ಎಲ್ಲಿದ್ದೀಯಾ ಅಂಥ ಕೇಳಿದ್ರೆ, ಇಲ್ಲಿದ್ದೀನಿ ಅನ್ನುತ್ತೆ ಈ ಸ್ಕೂಟರ್​! ವಿಶೇಷ ಫೀಚರ್ ಇರುವ ಸ್ಕೂಟರ್ ಈಗ ಭಾರತದಲ್ಲಿ

RSA vs BAN
ಕ್ರೀಡೆ36 mins ago

RSA vs BAN: ಬಾಂಗ್ಲಾ ಸೋಲಿಗೆ ಐಸಿಸಿ ಹೊಸ ನಿಯಮವೇ ಕಾರಣ; ಬೌಂಡರಿ ದಾಖಲಾದರೂ ರನ್​ ನೀಡಲಿಲ್ಲವೇಕೆ?

actor Darshan
ಚಿತ್ರದುರ್ಗ47 mins ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Mohan Bhagwat
ದೇಶ54 mins ago

Mohan Bhagwat: ಜನ ಸೇವಕ ಎಂದಿಗೂ ಅಹಂಕಾರಿ ಆಗಿರುವುದಿಲ್ಲ: ಮೋಹನ್‌ ಭಾಗವತ್‌

Lifetime achievement felicitation ceremony for retired Judge Chandrashekharaiah on June 29 in Bengaluru
ಬೆಂಗಳೂರು1 hour ago

Bengaluru News: ಬೆಂಗಳೂರಿನಲ್ಲಿ ಜೂ. 29ರಂದು ನಿವೃತ್ತ ನ್ಯಾ. ಚಂದ್ರಶೇಖರಯ್ಯಗೆ ಅಭಿನಂದನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

actor Darshan
ಚಿತ್ರದುರ್ಗ47 mins ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ6 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

ಟ್ರೆಂಡಿಂಗ್‌