Titanic Movie : ಟೈಟಾನಿಕ್​, ಗಾಂಧಿ ಸಿನಿಮಾದ ನಟ ಬರ್ನಾರ್ಡ್ ಹಿಲ್ ನಿಧನ - Vistara News

Latest

Titanic Movie : ಟೈಟಾನಿಕ್​, ಗಾಂಧಿ ಸಿನಿಮಾದ ನಟ ಬರ್ನಾರ್ಡ್ ಹಿಲ್ ನಿಧನ

Titanic Movie: ಪ್ರಭಾವಶಾಲಿ ಬ್ರಿಟಿಷ್ ಕಿರು ಸರಣಿ ‘ಬಾಯ್ಸ್ ಫ್ರಮ್ ದಿ ಬ್ಲ್ಯಾಕ್ಸ್ಟಫ್’ ನಲ್ಲಿ ಕಾರ್ಮಿಕ ವರ್ಗದ ನಾಯಕ ಯೋಸರ್ ಹ್ಯೂಸ್ ಅವರಂತಹ ಸಂಕೀರ್ಣ ಪಾತ್ರಗಳನ್ನು ಮಾಡಿರುವ ಅವರ ಪ್ರತಿಭೆಯನ್ನು ಸ್ಮರಿಸಿದ್ದಾರೆ. ಬರ್ನಾರ್ಡ್​ ಹಿಲ್​ ಭಾರತೀಯರಿಗೆ ಟೈಟಾನಿಕ್​ ಸಿನಿಮಾ ಮೂಲಕ ಪರಿಚಿತ. ಅವರು ಆ ಸಿನಿಮಾದಲ್ಲಿ ಹಡಗಿನ ಕ್ಯಾಪ್ಟನ್​ ಎಡ್ವರ್ಡ್ ಸ್ಮಿತ್ ಪಾತ್ರದಲ್ಲಿ ನಟಿಸಿದ್ದರು.

VISTARANEWS.COM


on

Bernard Hill
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಟ್ರೈಲಜಿ ಮತ್ತು ವಿಶ್ವ ವಿಖ್ಯಾತಿ ಪಡೆದ ಹಾಲಿವುಡ್​ ಸಿನಿಮಾ ‘ಟೈಟಾನಿಕ್’ ನಲ್ಲಿ (Titanic Movie) ಪ್ರಭಾವಶಾಲಿ ಪಾತ್ರಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಇಂಗ್ಲಿಷ್ ನಟ ಬರ್ನಾರ್ಡ್ ಹಿಲ್ (Bernard Hill) ನಿಧನ ಹೊಂದಿದ್ದಾರೆ. ಅವರಿಗೆ ತಮ್ಮ 79 ವರ್ಷ. ಸ್ಕಾಟ್ಲೆಂಟ್​ನ ಜನಪ್ರಿಯ ಹಾಡುಗಾರ್ತಿ ಬಾರ್ಬರಾ ಡಿಕ್ಸನ್ ಈ ಸುದ್ದಿಯನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪ್ರಕಟಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿಲ್ ಅವರು 1982ರಲ್ಲಿ ಮಹಾತ್ಮ ಗಾಂಧಿಯ ಜೀವನ ಚರಿತ್ರೆಯ ಕುರಿತು ರಿಚರ್ಡ್​ ಅಟೆನ್​ಬರೊ ಅವರ ಗಾಂಧಿ ಸಿನಿಮಾದಲ್ಲೂ ನಟಿಸಿದ್ದರು.

“ಬರ್ನಾರ್ಡ್ ಹಿಲ್ ಅವರ ನಿಧನದಿಂದ ನಾನು ದುಃಖ ತೃಪ್ತನಾಗಿದ್ದೇನೆ. ನಾವು 1974-1975 ರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ನಿಜವಾಗಿಯೂ ಗಮನಾರ್ಹ ನಟ. ಅವರೊಂದಿಗೆ ಕೆಲಸ ಮಾಡುವುದು ಒಂದು ಗೌರವವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಹಿಲ್ ಅವರ ನಿಧನದ ನಂತರ ಅಭಿಮಾನಿಗಳು ಅವರಿಗೆ ಗೌರವ ಸಲ್ಲಿಸಿದ್ದಾರೆ. ಅನೇಕರು ಅವರ ಬಹುಮುಖ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

ಪ್ರಭಾವಶಾಲಿ ಬ್ರಿಟಿಷ್ ಕಿರು ಸರಣಿ ‘ಬಾಯ್ಸ್ ಫ್ರಮ್ ದಿ ಬ್ಲ್ಯಾಕ್ಸ್ಟಫ್’ ನಲ್ಲಿ ಕಾರ್ಮಿಕ ವರ್ಗದ ನಾಯಕ ಯೋಸರ್ ಹ್ಯೂಸ್ ಅವರಂತಹ ಸಂಕೀರ್ಣ ಪಾತ್ರಗಳನ್ನು ಮಾಡಿರುವ ಅವರ ಪ್ರತಿಭೆಯನ್ನು ಸ್ಮರಿಸಿದ್ದಾರೆ. ಬರ್ನಾರ್ಡ್​ ಹಿಲ್​ ಭಾರತೀಯರಿಗೆ ಟೈಟಾನಿಕ್​ ಸಿನಿಮಾ ಮೂಲಕ ಪರಿಚಿತ. ಅವರು ಆ ಸಿನಿಮಾದಲ್ಲಿ ಹಡಗಿನ ಕ್ಯಾಪ್ಟನ್​ ಎಡ್ವರ್ಡ್ ಸ್ಮಿತ್ ಪಾತ್ರದಲ್ಲಿ ನಟಿಸಿದ್ದರು.

ವೈವಿಧ್ಯಮಯ ಪಾತ್ರ

ಹಿಲ್ ಅವರು ತಮ್ಮ ಐದು ದಶಕಗಳಿಗೂ ಹೆಚ್ಚಿನ ವೃತ್ತಿಜೀವನದಲ್ಲಿ ರಂಗಭೂಮಿ, ದೂರದರ್ಶನ ಮತ್ತು ಚಲನಚಿತ್ರದಾದ್ಯಂತ ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದರು. ‘ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಟರ್ನ್ ಆಫ್ ದಿ ಕಿಂಗ್’ ಮತ್ತು ‘ಟೈಟಾನಿಕ್’ ಸಿನಿಮಾಗಳ ಮೂಲಕ ಅಕಾಡಮಿ ಪ್ರಶಸ್ತಿಗಳನ್ನು ಗೆದ್ದಿದ್ದರು.

ಇದನ್ನೂ ಓದಿ: Self-Healing Roads: ರಸ್ತೆಗಳಲ್ಲಿ ಹೊಂಡಗಳೇ ಇರಲ್ಲ! ಬರಲಿವೆ ಸೆಲ್ಫ್‌ ಹೀಲಿಂಗ್‌ ರೋಡ್‌ಗಳು!

ಬಿಬಿಸಿ ಟಿವಿ ಸರಣಿ “ವೂಲ್ಫ್ ಹಾಲ್” ನಲ್ಲಿ, ಬರ್ನಾರ್ಡ್ ಹಿಲ್ ಡ್ಯೂಕ್ ಆಫ್ ನಾರ್ಫೋಕ್ ಆಗಿ ಸ್ಮರಣೀಯ ಅಭಿನಯ ಮಾಡಿದ್ದರು. ಕಾರ್ಡಿನಲ್ ವೋಲ್ಸಿಯ ವಿರೋಧಿ ಮತ್ತು ಅನ್ನಿ ಬೊಲೆನ್ ಅವರ ಚಿಕ್ಕಪ್ಪನಾದ ಈ ಪಾತ್ರವು ಹಿಲ್ ಅವರ ಬಹುಮುಖ ನಟನಾ ಕೌಶಲ್ಯವನ್ನು ಪ್ರದರ್ಶಿಸಿತ್ತು.

ದಶಕಗಳ ಸುದೀರ್ಘ ವೃತ್ತಿಜೀವನದುದ್ದಕ್ಕೂ, ಹಿಲ್ ವಿವಿಧ ಪಾತ್ರಗಳನ್ನು ಮಾಡಿದ್ದರ. ಅದು ಶಾಶ್ವತ ಪರಿಣಾಮ ಬೀರಿತ್ತು. 1976 ರ ಗೌರವಾನ್ವಿತ ಬಿಬಿಸಿ ಸರಣಿ “ಐ, ಕ್ಲಾಡಿಯಸ್” ನಲ್ಲಿ ಕಾಣಿಸಿಕೊಂಡಾಗಿನಿಂದ ಹಿಡಿದು 1982 ರಲ್ಲಿ ಮೆಚ್ಚುಗೆ ಪಡೆದ ಚಲನಚಿತ್ರ “ಗಾಂಧಿ” ಯಲ್ಲಿನ ಅವರ ಸರ್ಜೆಂಟ್​ ಪುಟ್ನಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 1989 ರಲ್ಲಿ “ಶೆರ್ಲಿ ವ್ಯಾಲೆಂಟೈನ್”, 2002 ರಲ್ಲಿ “ದಿ ಸ್ಕಾರ್ಪಿಯನ್ ಕಿಂಗ್” ಮತ್ತು 2008 ರ ಟಾಮ್ ಕ್ರೂಸ್ ಚಲನಚಿತ್ರ “ವಾಲ್ಕೈರಿ” ನಂತಹ ಸಿನಿಮಾಗಳಲ್ಲಿ ಪಾತ್ರ ವಹಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Parineethi Chopra: ಏಳುಮಲ್ಲಿಗೆ ತೂಕದ ಚೆಲುವೆ ಪರಿಣಿತಿ ಚೋಪ್ರಾ ಸಿಕ್ಕಾಪಟ್ಟೆ ದಪ್ಪಗಾಗಿದ್ದು ಯಾಕೆ?

Parineethi Chopra: ಸಿನಿಮಾಕ್ಕಾಗಿ ನಟ-ನಟಿಯರು ತಮ್ಮ ದೇಹತೂಕವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮ ಇದರಿಂದ ಅವರು ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಾರೆ. ಏಳು ಮಲ್ಲಿಗೆ ತೂಕದಂತಿರುವ ನಟಿಯರು ಸಡನ್ನಾಗಿ ಊದಿಕೊಂಡಾಗ ಜನರ ಬಾಯಿಗೆ ತುತ್ತಾಗುತ್ತಾರೆ. ಪರಿಣಿತಿ ಚೋಪ್ರಾ ಕೂಡ ಈ ಸಮಸ್ಯೆ ಎದುರಿಸಿದ್ದಾರೆ. ಇಮ್ತಿಯಾಜ್ ಅಲಿ ಅವರ ಚಿತ್ರ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದಲ್ಲಿ ನಟಿಸಿದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ(Parineethi Chopra) ಅವರು ತಮ್ಮ ತೂಕ ಹೆಚ್ಚಳದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಈ ಚಿತ್ರಕ್ಕಾಗಿ ಅವರು 16 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ.

VISTARANEWS.COM


on

Parineethi Chopra
Koo

ಮುಂಬೈ : ಇತ್ತೀಚೆಗೆ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ಇಮ್ತಿಯಾಜ್ ಅಲಿ ಅವರ ಚಿತ್ರ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದಲ್ಲಿ ನಟಿಸಿದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ(Parineethi Chopra) ಅವರು ತಮ್ಮ ತೂಕ ಹೆಚ್ಚಳದಿಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು. ಇದೀಗ ಅವರು ತಮ್ಮ ತೂಕ ಹೆಚ್ಚಳಕ್ಕೆ ಸಂಬಂಧಪಟ್ಟ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ನಟಿ ನಟಿ ಪರಿಣಿತಿ ಚೋಪ್ರಾ ಅವರು ಚಿತ್ರದ ಯಶಸ್ಸಿನ ನಂತರ ಸುದ್ದಿ ಮಾಧ್ಯಮವೊಂದರಲ್ಲಿ ಸಂದರ್ಶನ ನೀಡಿದ್ದು, ಅದರಲ್ಲಿ ಅವರು ಸಿನಿಮಾ ತಾರೆಯರು ಸಿನಿಮಾದ ಪಾತ್ರಕ್ಕಾಗಿ ತೂಕ ಹೆಚ್ಚು-ಕಡಿಮೆ ಮಾಡಿಕೊಳ್ಳುವುದಾಗಿ ತಿಳಿಸಿ ಹೇಳಿದ್ದಾರೆ. ಅವರು ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದಲ್ಲಿ ಅಮರ್ ಜೋತ್ ಕೌರ್ ಪಾತ್ರದಲ್ಲಿ ನಟಿಸಿದ್ದು, ಇದರಲ್ಲಿ ಅವರು ದಪ್ಪವಾಗಿ ಕಾಣಿಸುತ್ತಿದ್ದರು. ಆದರೆ ಈ ಚಿತ್ರಕ್ಕಾಗಿ ಅವರು 16 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ.

‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ಯಶಸ್ಸಿನ ನಂತರ ನಟಿ 15 ದಿನಗಳ ವಿರಾಮ ತೆಗೆದುಕೊಂಡು ತಮ್ಮ ಪತಿ ರಾಜಕಾರಣಿ ರಾಘವ್ ಚಡ್ಡಾ ಅವರೊಂದಿಗೆ ಸಮಯ ಕಳೆದಿದ್ದಾರಂತೆ. ಇದೀಗ ಮತ್ತೆ ತಮ್ಮ ನಟನಾ ಕ್ಷೇತ್ರಕ್ಕೆ ಹಿಂತಿರುಗಿದ ನಟಿ ಉತ್ತಮ ಚಿತ್ರಗಳನ್ನು ನೀಡುವ ಯೋಜನೆಯಲ್ಲಿದ್ದಾರಂತೆ. ಆದರೆ ತನ್ನಿಂದ ಅಭಿಮಾನಿಗಳು ಇನ್ನು ಉತ್ತಮವಾದ ಅಭಿನಯವನ್ನು ಬಯಸುತ್ತಿದ್ದಾರೆ. ಹಾಗಾಗಿ ತಾನು ಇನ್ನೂ ಹೆಚ್ಚು ಕಲಿಯಬೇಕಿದೆ ಎಂಬುದಾಗಿ ತಿಳಿಸಿದ್ದಾರೆ.

ಅಲ್ಲದೇ ‘ ಚಮ್ಕಿಲಾ’ ಚಿತ್ರಕ್ಕಾಗಿ ಅವರು 100 ಪ್ರತಿಶತದಷ್ಟು ಕೆಲಸ ಮಾಡಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಈ ಚಿತ್ರಕ್ಕಾಗಿ ನಟಿ ತಾವು16 ಕೆಜಿ ಹೆಚ್ಚಿಸಿದ್ದು, ಇಂತಹ ಕೆಲಸ ಮಾಡಲು ಒಂದು ಎರಡು ನಟಿಯರು ಬಿಟ್ಟರೆ ಬೇರೆ ಯಾರು ಮಾಡಲು ಸಿದ್ಧರಿರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಹಾಗೇ ಈ ಚಿತ್ರಕ್ಕಾಗಿ ಅವರು 2 ವರ್ಷಗಳಿಂದ ಬೇರೆ ಯಾವ ಕೆಲಸ ಮಾಡಲಿಲ್ಲ. ಸೆಟ್ ನಲ್ಲಿ ಲೈವ್ ಆಗಿ ಹಾಡುವುದು, ಧ್ವನಿ ನೀಡುವಂತಹ ಕೆಲಸ ಮಾಡಿದ್ದು, ಈ ಕೆಲಸವನ್ನು ಹೆಚ್ಚಿನ ಸಿನಿಮಾ ತಾರೆಯರು ಸ್ಟುಡಿಯೊದಲ್ಲಿ ಮಾಡುತ್ತಾರೆ. ಈ ರೀತಿ ರಿಸ್ಕ್ ಯಾರು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೇ ಕೆಲಸಗಳನ್ನು ಮಾಡುವುದರಿಂದ ಇದು ನಮಗೆ ಹೆಚ್ಚು ಪ್ರೇರಣೆ ನೀಡುತ್ತದೆ ಮತ್ತು ಚಿತ್ರತಂಡ ನಮ್ಮನ್ನು ಸ್ವೀಕರಿಸುತ್ತಾರೆ ಎಂದು ಅವರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾಗೆ ದುಬಾರಿ ಗಿಫ್ಟ್‌ ನೀಡಿದ ಪತಿ ಜಹೀರ್ ಇಕ್ಬಾಲ್!

ಇಮ್ತಿಯಾಜ್ ಅಲಿ ನಿರ್ದೇಶನದ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರವು ಪಂಜಾಬಿ ಗಾಯಕ ಅಮರ್ ಸಿಂಗ್ ಚಮ್ಕಿಲಾ ಅವರ ದಂತಕಥೆಯನ್ನು ಆಧರಿಸಿದೆ. ಅವರ ಹಾಡುಗಳಲ್ಲಿನ ಸಾಹಿತ್ಯದಿಂದ ಅವರನ್ನು ಹಾಡುಹಗಲಿನಲ್ಲಿಯೇ ಗುಂಡಿಕ್ಕಿ ಕೊಲ್ಲಲಾಯಿತು. ಅವರ ಜೊತೆ ಅವರ ಪತ್ನಿ ಅಮರ್ ಜೋತ್ ಅವರನ್ನು ಕೂಡ ಕೊಲ್ಲಲಾಗುತ್ತದೆ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಅಮರ್ ಜೋತ್ ಪಾತ್ರದಲ್ಲಿ ನಟಿಸಿದರೆ, ದಿಲ್ಜಿತ್ ದೋಸಾಂಜ್ ಅಮರ್ ಸಿಂಗ್ ಚಮ್ಕಿಲಾ ಪಾತ್ರ ಮಾಡಿದ್ದಾರೆ. ಈ ಚಿತ್ರ ಸೂಪರ್ ಹಿಟ್ ಆಗಿ ಹೊರಹೊಮ್ಮಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

Continue Reading

Latest

Viral Video: ಪೇಪರ್ ನೋಡದೆ ಪ್ರಮಾಣ ವಚನ ಸ್ವೀಕರಿಸಿ ಬೆರಗುಗೊಳಿಸಿದ ಅತ್ಯಂತ ಕಿರಿಯ ಸಂಸದೆ!

Viral Video: ಪ್ರಮಾಣ ವಚನ ಸ್ವೀಕರಿಸುವ ಸಮಯದಲ್ಲಿ ಹೆಚ್ಚಾಗಿ ಎಲ್ಲಾ ಮಂತ್ರಿಗಳು, ಸಂಸದರು ತಮ್ಮ ಮುಂದೆ ಪೇಪರ್ ಇಟ್ಟುಕೊಂಡು ಅದನ್ನು ನೋಡಿಕೊಂಡೇ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಇಲ್ಲೊಬ್ಬರು ಸಂಸದೆ ಪೇಪರ್ ನೋಡದೇ ಎದುರಿಗಿದ್ದ ಸಭೆಯನ್ನು ನೋಡುತ್ತಾ ಪ್ರಮಾಣ ವಚನ ಸ್ವೀಕರಿಸಿದ್ದು ಎಲ್ಲೆಡೆ ವೈರಲ್ ಆಗಿದೆ. ಅಂದಹಾಗೇ, ಆ ಸಂಸದೇ ಮತ್ಯಾರು ಅಲ್ಲ 26 ವರ್ಷದ ಶಾಂಭವಿ ಚೌಧರಿ. ಇವರ ಬಗ್ಗೆ ಇನ್ನಷ್ಟು ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.

VISTARANEWS.COM


on

Viral Video
Koo

ನವದೆಹಲಿ : ಜನಪ್ರತಿನಿಧಿಗಳು ಸಾಮಾನ್ಯವಾಗಿ ಪೇಪರ್ ನೋಡಿಕೊಂಡೆ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ಅತ್ಯಂತ ಕಿರಿಯ ಸಂಸದೆ ಒಬ್ಬರು ಪೇಪರ್ ನೋಡದೆ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸುದ್ದಿ ವೈರಲ್ (Viral Video) ಆಗಿದೆ.

ಅತ್ಯಂತ ಕಿರಿಯ ಸಂಸದೆ ಎಂದು ಕರೆಸಿಕೊಂಡ ಶಾಂಭವಿ ಚೌಧರಿ ಅವರು ಪೇಪರ್ ನೋಡದೆ ತಮ್ಮ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. 26 ವರ್ಷ ವಯಸ್ಸಿನ ಇವರು ಸಂಸತ್ತಿನಲ್ಲಿ ಸಂಸದೆಯಾಗಿ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಮಾರಂಭದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗಿದ್ದು, ಎಲ್ಲರೂ ಸಂಸದೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೊದಲ್ಲಿ ಶಾಂಭವಿಯವರು ಬಿಳಿ ಬಣ್ಣದ ಸೀರೆ ಧರಿಸಿ ಪೇಪರ್ ನೋಡದೆ ಸಭೆಯನ್ನು ನೋಡಿಕೊಂಡೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಲೋಕ ಸಭಾ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ)ದ ಅಭ್ಯರ್ಥಿಯಾಗಿ ಬಿಹಾರದ ಸಮಸ್ತಿಪುರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸನ್ನಿ ಹಜಾರಿ ಅವರನ್ನು 1,87,251 ಮತಗಳಿಂದ ಸೋಲಿಸಿದ್ದಾರೆ. ಆ ಮೂಲಕ ಇವರು ಸಮಸ್ತಿಪುರದ ಮೊದಲ ಮಹಿಳಾ ಸಂಸದೆ ಎನಿಸಿಕೊಂಡಿದ್ದಾರೆ.
ಶಾಂಭವಿ ಚೌಧರಿ ಅವರು ಜೆಡಿಯು ನಾಯಕರಾದ ಅಶೋಕ್ ಚೌಧರಿ ಅವರ ಪುತ್ರಿ. ಅಶೋಕ್ ಚೌಧರಿ ಅವರು ನಿತೀಶ್ ಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ಅತ್ಯಂತ ಪ್ರಭಾವಶಾಲಿ ಮಂತ್ರಿಗಳಲ್ಲಿ ಒಬ್ಬರಾಗಿದ್ದರು. ಇವರು ಮೊದಲಿಗೆ ಕಾಂಗ್ರೆಸ್ ನಲ್ಲಿದ್ದು ನಂತರ ಜೆಡಿಯು ಪಕ್ಷಕ್ಕೆ ಸೇರಿಕೊಂಡರು. ಅಲ್ಲದೇ ಶಾಂಭವಿ ಚೌಧರಿ ಅವರ ಅಜ್ಜ ದಿ.ಮಹಾವೀರ್ ಚೌಧರಿ ಕೂಡ ಕಾಂಗ್ರೆಸ್ ಸದಸ್ಯರಾಗಿದ್ದರು. ಅವರು ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ: ಸಾನಿಯಾ ಮಿರ್ಜಾ ಗೊತ್ತು, ಆಕೆಯ ತಂಗಿ ಅನಮ್ ಮಿರ್ಜಾ ಗೊತ್ತಾ?

ಹಾಗಾಗಿ ಮೂರನೇ ತಲೆಮಾರಿನ ರಾಜಕಾರಣಿಯಾದ ಶಾಂಭವಿ ಅವರಿಗೆ ರಾಜಕೀಯ ವಿಚರದಲ್ಲಿ ಆಸಕ್ತಿ ಇತ್ತು ಎನ್ನಲಾಗಿದೆ. ಶಾಂಭವಿ ಅವರು ಪ್ರತಿಷ್ಠಿತ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ನಿಂದ ‘ಮಾಸ್ಟರ್ಸ್ ಆಫ್ ಆರ್ಟ್ಸ್’ ಪದವಿ ಪಡೆದಿದ್ದಾರೆ. ಹಾಗೇ ಶಾಂಭವಿ ಅವರು ಮಾಜಿ ಐಪಿಎಸ್ ಅಧಿಕಾರಿ ಆಚಾರ್ಯ ಕಿಶೋರ್ ಕುನಾಲ್ ಅವರ ಮಗ ಸಾಯನ್ ಕುನಾಲ್ ಅವರನ್ನು ವಿವಾಹವಾಗಿದ್ದಾರೆ.

Continue Reading

Latest

Viral Video : ‘ಅಲ್ಲಾಹು ಅಕ್ಬರ್’ ಎನ್ನದ ಹಿಂದೂ ಬಾಲಕನಿಗೆ ಎಂಜಲು ನೆಕ್ಕಲು ಹೇಳಿದ ಮುಸ್ಲಿಂ ಯುವಕರು

Viral Video: ಧರ್ಮ ಧರ್ಮದ ನಡುವೆ ಸಾಮರಸ್ಯ ಬೆಳೆದರೆ ದೇಶ ಕೂಡ ಸುಭಿಕ್ಷವಾಗಿರುತ್ತದೆ. ಆದರೆ ಪದೇ ಪದೇ ಒಂದು ಧರ್ಮದವರು ಇನ್ನೊಂದು ಧರ್ಮದ ಮೇಲೆ ಕಿಡಿಕಾರುತ್ತಲೇ ಇರುತ್ತಾರೆ. ಇಂತಹದ್ದೊಂದು ಅಮಾನವೀಯ ಘಟನೆಯೊಂದು ಬಿಹಾರದ ಮೋತಿಪುರ್ ಪಟ್ಟಣದ ಬಟ್ರಾಲ್ ಗ್ರಾಮದಲ್ಲಿ ನಡೆದಿದೆ. ಮುಸ್ಲಿಂ ಯುವಕರ ಗುಂಪೊಂಡು 15 ವರ್ಷದ ಹಿಂದೂ ಬಾಲಕನ್ನು ಕೋಣೆಯೊಂದರಲ್ಲಿ ಬಂಧಿಸಿ ಹಲ್ಲೆ ಮಾಡಿದ್ದು ಅಲ್ಲದೇ, ‘ಅಲ್ಲಾಹು ಅಕ್ಬರ್’ ಮತ್ತು ‘ಮಿಯಾನ್ ಸಾಹೇಬ್ ಜಿಂದಾಬಾದ್’ ಎಂದು ಇಸ್ಲಾಮಿಕ್ ಧರ್ಮದ ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ ಹಾಗೇ ಪಾದಕ್ಕೆ ಎಂಜಲು ಉಗುಳಿ ಅದನ್ನು ನೆಕ್ಕುವಂತೆ ಬಾಲಕನಿಗೆ ಹಿಂಸೆ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo

ಬಿಹಾರ : ಬಿಹಾರದ ಮೋತಿಪುರ್ ಪಟ್ಟಣದ ಬಟ್ರಾಲ್ ಗ್ರಾಮದಲ್ಲಿ ಹಿಂದೂ ಅಪ್ರಾಪ್ತ ಬಾಲಕನ್ನು ವಶಕ್ಕೆ ಪಡೆದ ಮುಸ್ಲಿಂ ಯುವಕರು ಅಮಾನವೀಯವಾಗಿ ಥಳಿಸಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video ) ಆಗಿದೆ.

ವಿಡಿಯೊದಲ್ಲಿ 15 ವರ್ಷದ ಬಾಲಕನ್ನು ಕೋಣೆಯೊಂದರಲ್ಲಿ ಬಂಧಿಸಿ ಗೋಣಿ ಚೀಲದ ಮೇಲೆ ಕೂರಿಸಿ ಅದರಲ್ಲಿ ಒಬ್ಬ ದುಷ್ಕರ್ಮಿ ಕೋಲು ಹಿಡಿದು ಆತನ ಮೇಲೆ ಪದೇ ಪದೇ ಹಲ್ಲೆ ಮಾಡುತ್ತಿದ್ದಾನೆ. ಮತ್ತೊಬ್ಬ ‘ಅಲ್ಲಾಹು ಅಕ್ಬರ್’ ಮತ್ತು ‘ಮಿಯಾನ್ ಸಾಹೇಬ್ ಜಿಂದಾಬಾದ್’ ಎಂದು ಘೋಷಣೆ ಕೂಗುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ. ಹಾಗೇ ಅದರ ಜೊತೆಗೆ ದುಷ್ಕರ್ಮಿಗಳು ಅವರ ಪಾದಕ್ಕೆ ಎಂಜಲು ಉಗುಳಿ ಅದನ್ನು ನೆಕ್ಕುವಂತೆ ಬಾಲಕನಿಗೆ ಹಿಂಸೆ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೊಲೀಸರು ಈ ಘಟನೆಯ ಬಗ್ಗೆ ಮಾಹಿತಿ ಪಡೆದು ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಮೊಹಮ್ಮದ್ ಮುನ್ನಾ ಮತ್ತು ಸಾಹಿಲ್ ಹಾಗೂ ಮತ್ತೊಬ್ಬ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ ಎನ್ನಲಾಗಿದೆ. ಆದರೆ ಉಳಿದವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ವಿಡಿಯೊವನ್ನು ಆರೋಪಿಗಳೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಉದ್ವಿಗ್ಧ ಪರಿಸ್ಥಿತಿಗೆ ಕಾರಣವಾಗಿದೆ ಎನ್ನಲಾಗಿದೆ. ಈ ಬಗ್ಗೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೋನಾಕ್ಷಿ ಸಿನ್ಹಾ ಮದುವೆ ಲವ್ ಜಿಹಾದ್?; ಶತ್ರುಘ್ನ ಸಿನ್ಹಾ ಹೇಳಿದ್ದೇನು?

ಈ ಬಗ್ಗೆ ಸಂತ್ರಸ್ತ ಬಾಲಕನ ತಂದೆ ದೂರು ದಾಖಲಿಸಿದ್ದಾರೆ. ಈ ಘಟನೆಯಲ್ಲಿ ಬಾಲಕನ ಕೈಗೆ ಪೆಟ್ಟಾಗಿದೆ ಎಂಬುದಾಗಿ ತಿಳಿದುಬಂದಿದೆ. ಬಿಹಾರದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದೆ. ಹಾಗಾಗಿ ಕಾನೂನು ಸುವ್ಯವಸ್ಥೆ ಕಾಪಾಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳೀಯ ಅಧಿಕಾರಿಗಳು, ಪೊಲೀಸರು ಹೆಣಗಾಡುತ್ತಿದ್ದಾರೆ.

Continue Reading

ಉದ್ಯೋಗ

Foxconn’s Hiring: ವಿವಾಹಿತ ಮಹಿಳೆಯರಿಗೆ ಫಾಕ್ಸ್‌ಕಾನ್‌ ಕಂಪನಿಯಲ್ಲಿ ಕೆಲಸ ಕೊಡುವುದಿಲ್ಲ! ಭುಗಿಲೆದ್ದ ವಿವಾದ

ಆಪಲ್ ಸಾಧನಗಳ ಪ್ರಮುಖ ತಯಾರಕರಾದ ಫಾಕ್ಸ್‌ಕಾನ್ ನ ಭಾರತದಲ್ಲಿರುವ ಕಂಪನಿಗೆ ಇತ್ತೀಚೆಗೆ ನೇಮಕಾತಿ (Foxconn’s Hiring) ಪ್ರಕ್ರಿಯೆಗಳು ನಡೆದಿದ್ದು, ವಿವಾಹಿತ ಮಹಿಳೆಯರನ್ನು ಸಂದರ್ಶನ ಮತ್ತು ಆಯ್ಕೆ ವಿಚಾರದಲ್ಲಿ ದೂರ ಇಡಲಾಗಿದೆ. ಇದಕ್ಕೆ ಅವರ ಕೌಟುಂಬಿಕ ಕಾರಣಗಳನ್ನು ನೀಡಿರುವುದಾಗಿ ತಿಳಿದುಬಂದಿದೆ. ಇದು ವಿವಾದ ಮತ್ತು ಚರ್ಚೆಗೆ ಕಾರಣವಾಗಿದೆ.

VISTARANEWS.COM


on

By

Foxconn's Hiring
Koo

ಆಪಲ್ (apple) ಸಾಧನಗಳ ಪ್ರಮುಖ ತಯಾರಕರಾದ ಫಾಕ್ಸ್‌ಕಾನ್ (Foxconn’s Hiring) ಭಾರತದಲ್ಲಿನ (india) ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಸ್ಥಾವರದಲ್ಲಿ (smartphone plant) ವಿವಾಹಿತ ಮಹಿಳೆಯರನ್ನು ಹೊರಗಿಡುತ್ತಿದೆ! ಇದು ಎರಡೂ ಕಂಪನಿಗಳ ನೀತಿ ಸಂಹಿತೆಗಳಿಗೆ ವಿರುದ್ಧವಾಗಿದ್ದು, ವೈವಾಹಿಕ ಸ್ಥಿತಿಯನ್ನು (marital status) ಆಧರಿಸಿ ತಾರತಮ್ಯವನ್ನು ತೋರುತ್ತಿರುವುದು ಸ್ಪಷ್ಟವಾಗಿದೆ.

ಜೂನ್ 25ರಂದು ಮಾಧ್ಯಮವೊಂದರಲ್ಲಿ ಪ್ರಕಟವಾದ ತನಿಖಾ ವರದಿಯು ಫಾಕ್ಸ್‌ಕಾನ್ ವಿವಾಹಿತ ಮಹಿಳೆಯರಿಗೆ ಅವರ ಉದ್ಯೋಗ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ತಾರತಮ್ಯವನ್ನು ತೋರಿಸಿದೆ ಎಂದು ಬಹಿರಂಗಪಡಿಸಿತು. ಅವಿವಾಹಿತರಿಗೆ ಹೋಲಿಸಿದರೆ ವಿವಾಹಿತ ಮಹಿಳೆಯರಿಗೆ ಹೆಚ್ಚಿನ ಕುಟುಂಬ ಜವಾಬ್ದಾರಿಗಳು ಕಾರಣ ಎಂಬ ಕಾರಣಕ್ಕಾಗಿ ಅವರಿಗೆ ಕೆಲಸ ನಿರಾಕರಿಸಲಾಗುತ್ತಿದೆ.

ಮದುವೆಯ ನಂತರದ ಸಮಸ್ಯೆಗಳು

ತಮಿಳುನಾಡಿನ ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿರುವ ಪ್ರಮುಖ ಐಫೋನ್ ಅಸೆಂಬ್ಲಿ ಘಟಕದಲ್ಲಿ ಸ್ಮಾರ್ಟ್‌ಫೋನ್ ತಯಾರಕರು ವಿವಾಹಿತ ಮಹಿಳೆಯರನ್ನು ಉದ್ಯೋಗಾವಕಾಶಗಳಿಂದ ವ್ಯವಸ್ಥಿತವಾಗಿ ಹೊರಗಿಟ್ಟಿದ್ದಾರೆ. ಪ್ರಪಂಚದ ಅತಿ ದೊಡ್ಡ ಕಾಂಟ್ರ್ಯಾಕ್ಟ್ ಎಲೆಕ್ಟ್ರಾನಿಕ್ಸ್ ತಯಾರಕರು ವಿವಾಹಿತ ಮಹಿಳೆಯರಿಗೆ “ಮದುವೆ ನಂತರದ ಹೆಚ್ಚಿನ ಸಮಸ್ಯೆಗಳಿರುತ್ತವೆ” ಎಂದು ಪ್ರತಿಪಾದಿಸುವ ಮೂಲಕ ಇದನ್ನು ಸಮರ್ಥಿಸಿದ್ದಾರೆ.
ಭಾರತದಾದ್ಯಂತ ಸುಮಾರು 12 ಫಾಕ್ಸ್‌ಕಾನ್ ನೇಮಕಾತಿ ಏಜೆನ್ಸಿಗಳ ಹಲವಾರು ಮಾಜಿ ಮತ್ತು ಪ್ರಸ್ತುತ ಉದ್ಯೋಗಿಗಳು ಇದನ್ನು ದೃಢಪಡಿಸಿದ್ದಾರೆ.

ತಾರತಮ್ಯಕ್ಕೆ ಕಾರಣಗಳೇನು?

ಏಜೆಂಟ್‌ಗಳು ಮತ್ತು ಫಾಕ್ಸ್‌ಕಾನ್ ಹೆಚ್ ಆರ್ ಅಧಿಕಾರಿಗಳು ಈ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ವಿವಾಹಿತ ಮಹಿಳೆಯರಿಗೆ ಗರ್ಭಾವಸ್ಥೆ ಮತ್ತು ಕುಟುಂಬದ ಜವಾಬ್ದಾರಿ ಹೆಚ್ಚಿರುವುದರಿಂದ ಅವರು ಹೆಚ್ಚಿನ ಕಾರ್ಯಕ್ಷಮತೆಯಿಂದ ಕೆಲಸ ಮಾಡುವುದಿಲ್ಲ. ಅದೂ ಅಲ್ಲದೆ ವಿವಾಹಿತ ಹಿಂದೂ ಮಹಿಳೆಯರು ಮೈತುಂಬ ಆಭರಣ ಧರಿಸಿ ಬರುತ್ತಿರುವ ಕಾರಣ ನಮ್ಮ ಉತ್ಪಾದನೆಗೆ ಅಡ್ಡಿಯಾಗುತ್ತದೆ ಎಂಬ ವಿಚಿತ್ರ ಪ್ರತಿಪಾದನೆ ಕೇಳಿ ಬರುತ್ತಿದೆ.

ತೈವಾನ್ ಪ್ರಧಾನ ಕಚೇರಿಯ ತಯಾರಕರು ಕಾರ್ಮಿಕ ಕೊರತೆಯನ್ನು ಎದುರಿಸುತ್ತಿರುವಾಗ ಹೆಚ್ಚಿನ ಉತ್ಪಾದನಾ ಅವಧಿಯಲ್ಲಿ ವಿವಾಹಿತ ಮಹಿಳೆಯರನ್ನು ನೇಮಿಸಿಕೊಳ್ಳದಿರುವ ತನ್ನ ನೀತಿಯನ್ನು ಸಡಿಲಿಸುತ್ತಿದ್ದಾರೆ ಎಂದು ಕಂಪೆನಿಯ ಹೆಚ್ ಆರ್ ಒಬ್ಬರು ಹೇಳಿದ್ದಾರೆ. ಕೆಲವು ಸಂದರ್ಭಗಳಲ್ಲಿ, ನೇಮಕಾತಿ ಏಜೆನ್ಸಿಗಳು ಮಹಿಳಾ ಅಭ್ಯರ್ಥಿಗಳಿಗೆ ತಮ್ಮ ವೈವಾಹಿಕ ಸ್ಥಿತಿಯನ್ನು ಮರೆಮಾಚಲು ಸಹಾಯ ಮಾಡುತ್ತವೆ ಎನ್ನಲಾಗಿದೆ.

ಸರಿಪಡಿಸಲು ಕ್ರಮ

ಆಪಲ್ ಮತ್ತು ಫಾಕ್ಸ್‌ಕಾನ್ 2022ರಲ್ಲಿ ತಮ್ಮ ನೇಮಕಾತಿ ಅಭ್ಯಾಸಗಳಲ್ಲಿನ ನ್ಯೂನತೆಗಳನ್ನು ಒಪ್ಪಿಕೊಂಡಿವೆ ಮತ್ತು ಪರಿಸ್ಥಿತಿಯನ್ನು ಸರಿಪಡಿಸಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಕಂಪನಿ ಹೇಳಿದೆ. ಆದರೂ ಶ್ರೀಪೆರಂಬದೂರ್ ಸ್ಥಾವರದಲ್ಲಿ 2023 ಮತ್ತು 2024ರ ನೇಮಕಾತಿಯಲ್ಲಿ ಈ ಲೋಪ ಸಂಭವಿಸಿವೆ.

ಇದನ್ನೂ ಓದಿ: Frank Duckworth : ಮಳೆ ಪೀಡಿತ ಪಂದ್ಯಗಳಿಗೆ ಅನ್ವಯಿಸುವ ಡಕ್ವರ್ತ್​​ ಲೂಯಿಸ್ ನಿಯಮದ ರೂವಾರಿ ಫ್ರಾಂಕ್​ ಡಕ್ವರ್ತ್​​ ನಿಧನ

Continue Reading
Advertisement
Pavithra Gowda lipstick case Notice to PSI
ಕ್ರೈಂ10 mins ago

Pavithra Gowda: ಪವಿತ್ರಾಗೆ ಲಿಪ್‌ಸ್ಟಿಕ್‌ ಹಚ್ಚಲು ಅವಕಾಶ ಮಾಡಿಕೊಟ್ಟಿದ್ದ ಮಹಿಳಾ `PSI’ಗೆ ನೋಟಿಸ್‌!

PGCET 2024
ಕರ್ನಾಟಕ21 mins ago

PGCET 2024: ಪಿಜಿಸಿಇಟಿ ಪರೀಕ್ಷೆ ಮುಂದೂಡಿಕೆ; ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟ

Liquor Price karnataka
ಕರ್ನಾಟಕ23 mins ago

Liquor Price Karnataka: ಶ್ರೀಮಂತರಿಗೆ ಮತ್ತು, ಬಡವರಿಗೆ ಕುತ್ತು! ಪ್ರೀಮಿಯಂ ಮದ್ಯ ದರ ಇಳಿಕೆ, ಬಡವರ ಎಣ್ಣೆ ರೇಟ್‌ ಏರಿಕೆ?

Lok Sabha Speaker
ದೇಶ38 mins ago

Lok Sabha Speaker: ಎರಡನೇ ಬಾರಿ ಸ್ಪೀಕರ್‌ ಆದ ಓಂ ಬಿರ್ಲಾಗೆ ಮೋದಿ, ರಾಹುಲ್‌ ಅಭಿನಂದನೆ

Tharun Sudhir and sonal monteiro love story support By Darshan
ಸ್ಯಾಂಡಲ್ ವುಡ್41 mins ago

Tharun Sudhir: ದರ್ಶನ್‌ ತಮಾಷೆಯಿಂದಲೇ ಹುಟ್ಟಿತು ತರುಣ್‌- ಸೋನಲ್‌ ಪ್ರೀತಿ? ಇಬ್ಬರ ಲವ್ ಸ್ಟೋರಿ ಶುರುವಾಗಿದ್ದೇಗೆ?

Kenya Violence
ವಿದೇಶ50 mins ago

Kenya Violence: ಕೀನ್ಯಾದಲ್ಲಿ ಭುಗಿಲೆದ್ದ ಹಿಂಸಾಚಾರ; ಭಾರತೀಯರಿಗೆ ಎಚ್ಚರಿಕೆ ನೀಡಿದ ಹೈಕಮಿಷನ್

ಕಥೆಕೂಟ literature meet
ಕಲೆ/ಸಾಹಿತ್ಯ57 mins ago

ಕಥೆ ನಿಜ, ಕಥೆಗಾರ ಸುಳ್ಳು: ಕಥೆಕೂಟ ಸಮಾವೇಶದಲ್ಲಿ ಟಿಎನ್‌ ಸೀತಾರಾಮ್‌

CM Siddaramaiah
ಕರ್ನಾಟಕ1 hour ago

CM Siddaramaiah: ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿರೋದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದ ಸಿಎಂ

Jayam Ravi's wife Aarti Ravi removes all her Instagram photos
ಕಾಲಿವುಡ್1 hour ago

Jayam Ravi: ಜಯಂ ರವಿ ದಾಂಪತ್ಯದಲ್ಲಿ ಬಿರುಕು? ಡಿವೋರ್ಸ್‌ ಹಾದಿಯಲ್ಲಿ ಮತ್ತೊಂದು ಸ್ಟಾರ್‌ ಜೋಡಿ!

Gold Rate Today
ಚಿನ್ನದ ದರ1 hour ago

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ದರ ಇಳಿಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌