Viral News: ಶ್ವಾನದ ಜತೆ ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿಯ ವೇಳೆ ಹಲ್ಲೆ; ಶಾಕಿಂಗ್‌ ವಿಡಿಯೊ ಇಲ್ಲಿದೆ - Vistara News

ವೈರಲ್ ನ್ಯೂಸ್

Viral News: ಶ್ವಾನದ ಜತೆ ವಾಕಿಂಗ್‌ ಹೋಗುತ್ತಿದ್ದ ವ್ಯಕ್ತಿಯ ವೇಳೆ ಹಲ್ಲೆ; ಶಾಕಿಂಗ್‌ ವಿಡಿಯೊ ಇಲ್ಲಿದೆ

Viral News: ಸಾಕು ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಜತೆಗೆ ವ್ಯಕ್ತಿಯನ್ನು ರಕ್ಷಿಸಲು ಬಂದ ಮನೆಯವರಿಗೂ ಹೊಡೆತ ಬಿದ್ದಿದೆ. ಸದ್ಯ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗಿದೆ. ಹೈದರಾಬಾದ್‌ನ ರಹಮತ್‌ನಗರದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರ ಗುಂಪು ದೊಣ್ಣೆ ತೆಗೆದುಕೊಂಡು ಹಲ್ಲೆ ನಡೆಸುವ ದೃಶ್ಯ ನೋಡಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ.

VISTARANEWS.COM


on

Viral News
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್‌: ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ನಾಯಿ ದಾಳಿಯಿಂದ ಮಕ್ಕಳು ಬಲಿಯಾಗಿರುವ ಘಟನೆಯೂ ಅಲ್ಲಲ್ಲಿ ವರದಿಯಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ರಸ್ತೆಯಲ್ಲಿ ಓಡಾಡುವಾಗ ನಾಯಿ ಕಂಡರೆ ಬೆಚ್ಚಿ ಬೀಳುವಂತಾಗಿದೆ. ಈ ಮಧ್ಯೆ ಸಾಕು ನಾಯಿಯನ್ನು ವಾಕಿಂಗ್‌ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಜತೆಗೆ ವ್ಯಕ್ತಿಯನ್ನು ರಕ್ಷಿಸಲು ಬಂದ ಮನೆಯವರಿಗೂ ಹೊಡೆತ ಬಿದ್ದಿದೆ. ಸದ್ಯ ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗಿದೆ (Viral News).

ಹೈದರಾಬಾದ್‌ನ ರಹಮತ್‌ನಗರದಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕರ ಗುಂಪು ದೊಣ್ಣೆ ತೆಗೆದುಕೊಂಡು ಹಲ್ಲೆ ನಡೆಸುವ ದೃಶ್ಯ ನೋಡಿ ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ವಿವಿಧ ಸೆಕ್ಷನ್‌ ಅಡಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮೇ 8ರಂದು ಮಧು, ಆತನ ಸಹೋದರ ಶ್ರೀನಾಥ್‌ ಮತ್ತು ಆತನ ಸ್ನೇಹಿತ ತಮ್ಮ ನೆಚ್ಚಿನ ಸಾಕು ನಾಯಿ ಸೈಬೇರಿಯನ್‌ ಹಸ್ಕಿ ಜತೆ ವಾಕಿಂಗ್‌ ಹೊರಟಿದ್ದರು. ಈ ವೇಳೆ ನಾಯಿ ತಮ್ಮ ಮೇಲೆ ದಾಳಿ ನಡೆಸಿದೆ ಎಂದು ನೆರೆಮನೆಯ ಧನಂಜಯ್‌ ಮತ್ತು ಆತನ ಮನೆಯವರು ಆರೋಪಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಎರಡೂ ಕಡೆಯವರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ.

ಘಟನೆ ವಿವರ

ಶ್ರೀನಾಥ್ ಅವರು ತಮ್ಮ ನಾಯಿಯನ್ನು ಕರೆದುಕೊಂಡು ವಾಕಿಂಗ್‌ ಹೋಗಿದ್ದರು. ಇದೇ ಸಮಯದಲ್ಲಿ ಧನಂಜಯ್ ಮತ್ತು ಆತನ ಇಬ್ಬರು ಸ್ನೇಹಿತರೂ ಆ ರಸ್ತೆಯಲ್ಲಿ ಓಡಾಡುತ್ತಿದ್ದರು. ಈ ವೇಳೆ ಶ್ರೀನಾಥ್ ನಾಯಿಯ ಹಗ್ಗವನ್ನು ಬಿಗಿಯಾಗಿ ಹಿಡಿದಿರುವುದು ಕಂಡು ಬಂದಿದೆ. ಜತೆಗೆ ನಾಯಿ ಧನಂಜಯ್‌ ಮೇಲೆ ದಾಳಿ ನಡೆಸಲು ಮುಂದಾಗಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ. ಬಳಿಕ ಆತ ಅಲ್ಲಿಂದ ಆಚೆ ಬರುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಧನಂಜಯ್‌ ಮತ್ತು ಇತರರು ದೊಣ್ಣೆ ಹಿಡಿದುಕೊಂಡು ಶ್ರೀನಾಥ್‌ ಬಳಿಗೆ ಬರುತ್ತಾರೆ. ನಂತರ ಹಲ್ಲೆ ನಡೆಸುತ್ತಾರೆ. ಶ್ರೀನಾಥ್‌ ನೆಲದ ಮೇಲೆ ಬಿದ್ದಾಗಲೂ ಸುಮ್ಮನಾಗದ ಧನಂಜಯ್‌ ಮತ್ತು ತಂಡ ಮತ್ತೂ ಹೊಡೆಯುತ್ತಾರೆ. ಇದೇ ವೇಳೆ ಶ್ರೀನಾಥ್‌ ಮನೆಯವರು ಆತನ ನೆರವಿಗೆ ಧಾವಿಸುತ್ತಾರೆ. ಧಾವಿಸಿ ಬಂದ ಶ್ರೀನಾಥ್‌ ಕುಟುಂಬದ ಮಹಿಳೆಗೂ ಹೊಡೆತ ಬೀಳುತ್ತದೆ.

ಸ್ವಲ್ಪ ಹೊತ್ತೆನಲ್ಲೇ ನೆರೆಹೊರೆಯವರೆಲ್ಲ ಗುಂಪುಗೂಡುತ್ತಾರೆ. ಬಳಿಕ ಹಲ್ಲೆ ನಡೆಸುತ್ತಿದ್ದವರು ಸ್ಥಳದಿಂದ ಪರಾರಿಯಾಗುತ್ತಾರೆ. ಗಾಯಗೊಂಡ ಶ್ರೀನಾಥ್‌ ಮತ್ತು ಆತನ ಮನೆಯವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾಳಿಗೊಳಗಾದ ನಾಯಿಗೂ ಚಿಕಿತ್ಸೆ ನೀಡಲಾಗಿದೆ. ದೂರುಗಳ ಆಧಾರದ ಮೇಲೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಈ ಘಟನೆ ನೆಟ್ಟಿಗರ ಗಮನ ಸೆಳೆದಿದ್ದು ತೀವ್ರ ಚರ್ಚೆ ಹುಟ್ಟು ಹಾಕಿದೆ.

ಇದನ್ನೂ ಓದಿ: Viral News: ಪಿಟ್‌ಬುಲ್‌ ದಾಳಿಯಿಂದ ಬಾಲಕನ್ನು ರಕ್ಷಿಸಿದ ಬೀದಿ ನಾಯಿಗಳು; ವಿಡಿಯೊ ಇಲ್ಲಿದೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Actor Darshan: ದರ್ಶನ್‌ ಮೇಲಿನ ಅಂಧಾಭಿಮಾನ; ಮಗನನ್ನೇ ಕೈದಿ ಮಾಡಿದ ಹುಚ್ಚು ಫ್ಯಾನ್!

Actor Darshan: ಒಂದು ವರ್ಷದ ಮಗುವಿಗೆ ಜೈಲು ಕೈದಿಯ ರೀತಿ ಬಿಳಿ ಬಟ್ಟೆ ಹಾಕಿಸಿ ಈತ ಫೋಟೋ ‌ಶೂಟ್ ಮಾಡಿಸಿದ್ದು, ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಮಗುವಿಗೆ ದರ್ಶನ್‌ಗೆ ಕೊಡಲಾದ ಕೈದಿ ನಂಬರ್ ನೀಡಿದ್ದಾನೆ. ಕೈ ಕೋಳದ ಮಾದರಿ, ಕೈದಿಗಳ ರೀತಿ ಬಿಳಿ ಬಟ್ಟೆ ಹಾಕಿಸಿದ್ದಾನೆ.

VISTARANEWS.COM


on

actor darshan crazy fans
Koo

ಬೆಂಗಳೂರು: ನಟ ದರ್ಶನ್ (Actor Darshan) ಮೇಲಿನ ಮಿತಿಮೀರಿದ ಅಭಿಮಾನದ ಹುಚ್ಚಿನಿಂದಾಗಿ ಅಭಿಮಾನಿಯೊಬ್ಬ (Darshan Fan) ತಾನು ಹೆತ್ತ ಮಗುವನ್ನೇ ಕೈದಿ (Prisoner) ಮಾಡಿ ಹಾಕಿದ್ದಾನೆ! ಹೌದು, ಇದು ನಟನ ಮೇಲಿನ ಅಂಧಾಭಿಮಾನದ ಎಫೆಕ್ಟ್. ಮಗುವಿಗೆ ಪರಪ್ಪನ ಅಗ್ರಹಾರದ (Parappana Agrahara) ಕೈದಿಯಂತೆ ಫೋಟೋ ಶೂಟ್ (Photo Shoot) ಮಾಡಿಸಿದ್ದಾನೆ ಈ ಪುಣ್ಯಾತ್ಮ.

ರೇಣುಕಾಸ್ವಾಮಿ ಹತ್ಯೆ (Renuka Swamy Murder) ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ನ ಅಭಿಮಾನಿಗಳು ದಿನಕ್ಕೊಂದು ಅವತಾರ ತೋರುತ್ತಿದ್ದಾರೆ. ಇದೀಗ ಹೊಸದು. ಒಂದು ವರ್ಷದ ಮಗುವಿಗೆ ಜೈಲು ಕೈದಿಯ ರೀತಿ ಬಿಳಿ ಬಟ್ಟೆ ಹಾಕಿಸಿ ಈತ ಫೋಟೋ ‌ಶೂಟ್ ಮಾಡಿಸಿದ್ದು, ಅದನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಮಗುವಿಗೆ ದರ್ಶನ್‌ಗೆ ಕೊಡಲಾದ ಕೈದಿ ನಂಬರ್ ನೀಡಿದ್ದಾನೆ. ಕೈ ಕೋಳದ ಮಾದರಿ, ಕೈದಿಗಳ ರೀತಿ ಬಿಳಿ ಬಟ್ಟೆ ಹಾಕಿಸಿದ್ದಾನೆ.

ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಅಭಿಮಾನಿಗಳಿಂದ ನಿತ್ಯ ಒಂದೊಂದು ಹೊಸ ಟ್ರೆಂಡ್ ಸೃಷ್ಟಿಯಾಗುತ್ತಿದೆ. ದರ್ಶನ್‌ಗೆ ನೀಡಿರುವ ಕೈದಿ ನಂಬರ್ ಧರಿಸಿಕೊಂಡು ಒಬ್ಬಾತ ಫೋಟೋ ಶೂಟ್ ಮಾಡಿಸಿಕೊಂಡಿದ್ದ. ಇದೀಗ ಮಗುವಿಗೆ ಹೀಗೆ ಫೋಟೋ ಶೂಟ್ ಮಾಡಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಾನಾ ಥರದ ಅಭಿಪ್ರಾಯಗಳು ವ್ಯಕ್ತವಾಗಿವೆ.

ʼಹಿಂದೆಲ್ಲ ಮಕ್ಕಳಿಗೆ ಕೃಷ್ಣನ ವೇಷ, ಸ್ವಾಮಿ ವಿವೇಕಾನಂದರ ವೇಷ, ಅಂಬೇಡ್ಕರ್ ಅವರಂತಹ ಗಣ್ಯ ವ್ಯಕ್ತಿಗಳ ರೀತಿಯ ಫೋಟೋ ಶೂಟ್ ಟ್ರೆಂಡ್ ಆಗಿತ್ತು. ಆದರೆ ಈಗ ಬೆಳೆಯುವ ಮಗುವಿಗೆ ಕೈದಿ ಫೋಟೋ ‌ಶೂಟ್ ಮಾಡಿಸೋದೆ ಟ್ರೆಂಡ್ ಆಗಿದೆʼ ಎಂದು ಒಬ್ಬರು ಹೇಳಿದ್ದಾರೆ. “ಈಗಿಂದಾನೇ ಮಗನನ್ನು ಜೈಲಿಗೆ ಕಳಿಸೋ ಪ್ಲಾನ್‌ ಇದು. ನಟ ಒಳ್ಳೇದು ಮಾಡಿದಾಗ ಅಭಿಮಾನಿಗಳು ಸಂಭ್ರಮಿಸಿ ತಪ್ಪೇನೂ ಇಲ್ಲ. ಆದರೆ ಕೆಟ್ಟದು ಮಾಡಿದಾಗ ಖಂಡಿಸಿʼ ಎಂದು ಮತ್ತೊಬ್ಬರು ಬರೆದಿದ್ದಾರೆ.

ಫೋನ್‌ಗಾಗಿ ಕಿತ್ತಾಡಿದ ಪ್ರೇಮಿಗಳು, ಲವರ್‌ ಬಾಯ್‌ಗೆ ಸಾರ್ವಜನಿಕರ ಗೂಸಾ

ಹುಬ್ಬಳ್ಳಿ: ಪ್ರೇಮಕಲಹ ಬೀದಿಗೆ ಬಂದರೆ ಸಾರ್ವಜನಿಕರಿಂದ ಏಟೂ ತಿನ್ನಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆ. ಫೋನ್‌ಗಾಗಿ ರಸ್ತೆ ಪಕ್ಕದಲ್ಲೇ ಪ್ರೇಮಿಗಳು ಜಗಳ ಮಾಡಿಕೊಂಡಿದ್ದು, ಹುಡುಗಿಯ ಕತ್ತಿನ ಸುತ್ತ ಶಾಲು ಹಾಕಿ ಎಳೆದಾಡಿದ ಹುಡುಗನಿಗೆ ಸಾರ್ವಜನಿಕರ ಗೂಸಾ ಬಿದ್ದಿದೆ.

ಹುಬ್ಬಳ್ಳಿಯ ಕೊಪ್ಪಿಕರ ರಸ್ತೆಯ ಮಾಲ್ ಬಳಿ ಘಟನೆ ನಡೆದಿದೆ. ಕಿತ್ತಾಡುತ್ತಿರುವ ಪ್ರೇಮಿಗಳ ಜಗಳದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆ ಪಕ್ಕದಲ್ಲಿ ನಿಂತು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಫೋನ್‌ ಕೊಡು ಎಂದು ಹುಡುಗ ಪೀಡಿಸಿದ್ದು, ಆಕೆ ಕೊಡದೆ ಹೋದಾಗ ಆಕೆಯ ಕೊರಳಿಗೆ ಸ್ಕಾರ್ಫ್‌ ಸುತ್ತು ಹಾಕಿ ಎಳೆದಾಡಿದ್ದಾನೆ ಹುಡುಗ.

ಲವರ್‌ ಬಾಯ್‌ನ ಈ ಕೃತ್ಯ ನೋಡಿದ ಸ್ಥಳೀಯರು ರೊಚ್ಚಿಗೆದ್ದು ಮಧ್ಯಪ್ರವೇಶಿಸಿದ್ದಾರೆ. ನಮ್ಮ ಮಧ್ಯೆ ನೀವೂ ಬಂದಿದ್ದೇಕೆ ಎಂದು ಉಡಾಫೆಯಿಂದ ಹುಡುಗ ಉತ್ತರಿಸಿದಾಗ ಕ್ರುದ್ಧರಾದ ಸಾರ್ವಜನಿಕರು ಆತನಿಗೆ ಚೆನ್ನಾಗಿ ಗೂಸಾ ಕೊಟ್ಟಿದ್ದಾರೆ. ʼಸಾರ್ವಜನಿಕ ಸಭ್ಯತೆ ಪಾಲಿಸಿʼ ಎಂದು ಪಾಠ ಹೇಳಿದ್ದಾರೆ. ಲವರ್ಸ್ ಜಗಳದ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ‌ ಫುಲ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು

Continue Reading

ಕ್ರಿಕೆಟ್

Virat Kohli: ನನ್ನ ​ಅಹಂಕಾರವೇ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣ ಎಂದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

Virat Kohli: ಕೊಹ್ಲಿ ಅಹಂ ಬಗ್ಗೆ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿಕೆ ನೀಡಿದ್ದರು. ಕೊಹ್ಲಿ ತನ್ನ ತಂಡದಲ್ಲಿರುವ ಸಹ ಆಟಗಾರರಂತೆ ಪ್ರದರ್ಶನ ನೀಡಬೇಕು. ಕೊಂಚ ಸ್ಟಾಂಡರ್ಡ್​ ಕಮ್ಮಿ ಮಾಡುಕೊಳ್ಳುವುದು ಸೂಕ್ತ ಎಂದಿದ್ದರು.

VISTARANEWS.COM


on

Virat Kohli
Koo

ಬಾರ್ಬಡೋಸ್​: ಈ ಬಾರಿಯಾ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ(Virat Kohli) ತಾವು ಬ್ಯಾಟಿಂಗ್ ವೈಫಲ್ಯ ಕಾಣಲು ಕಾರಣ ಏನೆಂಬುದನ್ನು ತಿಳಿಸಿದ್ದಾರೆ. ಕೊಹ್ಲಿ ಈ ಮಾತು ಕೇಳಿ ಕೆಲವರಿಗೆ ಅಚ್ಚರಿಯಾಗಿದೆ. ಹೌದು, ಫೈನಲ್​ ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ನನ್ನ ​ಅಹಂಕಾರವೇ ಈ ವೈಫಲ್ಯಕ್ಕೆ ಕಾರಣ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ಶನಿವಾರ ನಡೆದ ಫೈನಲ್​ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಬಾರಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಫೈನಲ್​ ಪಂದ್ಯಕ್ಕೂ ಮುನ್ನ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕೊಹ್ಲಿ ಸಂಪೂರ್ಣ ವೈಫಲ್ಯ ಕಂಡಿದ್ದರು. ಇದುವರೆಗೂ ವಿಶ್ವಕಪ್​ ಟೂರ್ನಿಯಲ್ಲಿ ಶೂನ್ಯಕ್ಕೆ ಔಟಾಗದೆ ಇದ್ದ ಕೊಹ್ಲಿ ಈ ಬಾರಿ 2 ಸಲ ಶೂನ್ಯಕ್ಕೆ ಔಟಾಗುವ ಮೂಲಕ ಅವಮಾನ ಎದುರಿಸಿದ್ದರು.

ಫೈನಲ್​ ಪಂದ್ಯ ಬಳಿಕ ಮಾತನಾಡಿದ ಕೊಹ್ಲಿ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಈ ಟೂರ್ನಿಯಿಂದ ಜೀವನದಲ್ಲಿ ಹಲವು ಪಾಠ ಕಲಿತಿದ್ದೇನೆ. ನನ್ನ ಅಹಂ ಅನ್ನು ಬದಿಗೆ ಇಟ್ಟು ಹೇಳುವುದಾದರೆ, ನಾನೇ ಎಲ್ಲ, ನಾನೇ ಶ್ರೇಷ್ಠ ಎನ್ನುವ ಅಹಂ ಬಿಡಬೇಕು. ಅಹಂಕಾರದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದು ನನಗೆ ಈಗ ಅರ್ಥವಾಗಿದೆ. ಒಂದು ಕ್ಷಣದಲ್ಲಿ ಎದುರಾದ ಪರಿಸ್ಥಿತಿಗೆ ಗೌರವಿಸಿ, ತಲೆಬಾಗಲೇ ಬೇಕು. ಇದನ್ನು ಬಿಟ್ಟು ಅಹಂ ತೋರಿದರೆ ದೇವರು ಕೂಡ ಮೆಚ್ಚುವುದಿಲ್ಲ. ನನ್ನ ವಿಚಾರದಲ್ಲೂ ಕೂಡ ಅದೇ ಆಯಿತು” ಎಂದು ಕೊಹ್ಲಿ ಮುಕ್ತವಾಗಿ ಹೇಳಿಕೊಂಡರು.

ಇದನ್ನೂ ಓದಿ Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

ಕೊಹ್ಲಿ ಅಹಂ ಬಗ್ಗೆ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಮಾಜಿ ಆಟಗಾರ ಅಂಬಾಟಿ ರಾಯುಡು ಹೇಳಿಕೆ ನೀಡಿದ್ದರು. ಕೊಹ್ಲಿ ತನ್ನ ತಂಡದಲ್ಲಿರುವ ಸಹ ಆಟಗಾರರಂತೆ ಪ್ರದರ್ಶನ ನೀಡಬೇಕು. ಕೊಂಚ ಸ್ಟಾಂಡರ್ಡ್​ ಕಮ್ಮಿ ಮಾಡುಕೊಳ್ಳುವುದು ಸೂಕ್ತ ಎಂದಿದ್ದರು. ಆದರೆ ಈ ವೇಳೆ ಕೊಹ್ಲಿ ಅಭಿಮಾನಿಗಳು ರಾಯುಡು ವಿರುದ್ಧ ಕಿಡಿ ಕಾರಿದ್ದರು. ಇದೀಗ ಕೊಹ್ಲಿಯೇ ತಮ್ಮ ಅಹಂ ಬಗ್ಗೆ ಒಪ್ಪಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ ಅವರು ಈ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದರು. 76 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದರು.

ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ. ಈ ಟಿ 20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ 59 ಎಸೆತಗಳಲ್ಲಿ 76 ರನ್ ಮಾಡುವ ಮೊದಲು ಏಳು ಇನ್ನಿಂಗ್ಸ್‌ಗಳಲ್ಲಿ ಕೇವಲ 75 ರನ್ ಮಾತ್ರ ಗಳಿಸಿದ್ದರು.

Continue Reading

ವೈರಲ್ ನ್ಯೂಸ್

Lovers Fight: ಫೋನ್‌ಗಾಗಿ ಕಿತ್ತಾಡಿದ ಪ್ರೇಮಿಗಳು, ಲವರ್‌ ಬಾಯ್‌ಗೆ ಸಾರ್ವಜನಿಕರ ಗೂಸಾ

Lovers Fight: ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆ ಪಕ್ಕದಲ್ಲಿ ನಿಂತು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಫೋನ್‌ ಕೊಡು ಎಂದು ಹುಡುಗ ಪೀಡಿಸಿದ್ದು, ಆಕೆ ಕೊಡದೆ ಹೋದಾಗ ಆಕೆಯ ಕೊರಳಿಗೆ ಸ್ಕಾರ್ಫ್‌ ಸುತ್ತು ಹಾಕಿ ಎಳೆದಾಡಿದ್ದಾನೆ ಹುಡುಗ.

VISTARANEWS.COM


on

lovers fight hubli
Koo

ಹುಬ್ಬಳ್ಳಿ: ಪ್ರೇಮಕಲಹ (Lovers Fight) ಬೀದಿಗೆ ಬಂದರೆ ಸಾರ್ವಜನಿಕರಿಂದ ಏಟೂ ತಿನ್ನಬೇಕಾಗುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆ. ಫೋನ್‌ಗಾಗಿ (mobile phone) ರಸ್ತೆ ಪಕ್ಕದಲ್ಲೇ ಪ್ರೇಮಿಗಳು ಜಗಳ ಮಾಡಿಕೊಂಡಿದ್ದು, ಅದು ಸಾರ್ವಜನಿಕ ಸಭ್ಯತೆ ಮೀರಿದಾಗ ಹುಡುಗನಿಗೆ ಸಾರ್ವಜನಿಕರ ಗೂಸಾ ಬಿದ್ದಿದೆ.

ಹುಬ್ಬಳ್ಳಿಯ (Hubli news) ಕೊಪ್ಪಿಕರ ರಸ್ತೆಯ ಮಾಲ್ ಬಳಿ ಘಟನೆ ನಡೆದಿದೆ. ಕಿತ್ತಾಡುತ್ತಿರುವ ಪ್ರೇಮಿಗಳ ಜಗಳದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ರಸ್ತೆ ಪಕ್ಕದಲ್ಲಿ ನಿಂತು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ. ಫೋನ್‌ ಕೊಡು ಎಂದು ಹುಡುಗ ಪೀಡಿಸಿದ್ದು, ಆಕೆ ಕೊಡದೆ ಹೋದಾಗ ಆಕೆಯ ಕೊರಳಿಗೆ ಸ್ಕಾರ್ಫ್‌ ಸುತ್ತು ಹಾಕಿ ಎಳೆದಾಡಿದ್ದಾನೆ ಹುಡುಗ.

ಲವರ್‌ ಬಾಯ್‌ನ ಈ ಕೃತ್ಯ ನೋಡಿದ ಸ್ಥಳೀಯರು ರೊಚ್ಚಿಗೆದ್ದು ಮಧ್ಯಪ್ರವೇಶಿಸಿದ್ದಾರೆ. ನಮ್ಮ ಮಧ್ಯೆ ನೀವು ಬಂದಿದ್ದೇಕೆ ಎಂದು ಉಡಾಫೆಯಿಂದ ಹುಡುಗ ಉತ್ತರಿಸಿದಾಗ ಕ್ರುದ್ಧರಾದ ಸಾರ್ವಜನಿಕರು ಆತನಿಗೆ ಚೆನ್ನಾಗಿ ಗೂಸಾ ಕೊಟ್ಟಿದ್ದಾರೆ. ʼಸಾರ್ವಜನಿಕ ಸಭ್ಯತೆ ಪಾಲಿಸಿʼ ಎಂದು ಪಾಠ ಹೇಳಿದ್ದಾರೆ. ಲವರ್ಸ್ ಜಗಳದ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ‌ ಫುಲ್ ವೈರಲ್ ಆಗುತ್ತಿದೆ.

ರೀಲ್ಸ್‌ಗಾಗಿ ಗನ್‌ ತೋರಿಸಿ ಶೋಕಿ ಮಾಡಿದವನು ಜೈಲುಪಾಲು

ಬೆಂಗಳೂರು: ರಿಲ್ಸ್ ಶೋಗಾಗಿ ಶೋಕಿ (Reels Obsession) ಮಾಡಿದವನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಮುದ್ದೆ ಮುರಿಯಲು ಕಳಿಸಿದ್ದಾರೆ. ಈತ ಎಕೆ 47 (AK 47 Rifle) ರೈಫಲ್‌ ಹಿಡಿದ ಗನ್ ಮ್ಯಾನ್‌ಗಳನ್ನು ಬಾಡಿಗಾರ್ಡ್ಸ್‌ (Bodyguards) ಆಗಿಟ್ಟುಕೊಂಡು, ಪಾಶ್ ಕಾರುಗಳನ್ನು ಚಲಾಯಿಸಿಕೊಂಡು, ಮೈಮೇಲೆ ಕಿಲೋಗಟ್ಟಲೆ ಚಿನ್ನ ಧರಿಸಿಕೊಂಡು ಶೋಕಿ ಮಾಡುತ್ತಿದ್ದ. ಬೀದಿಬೀದಿಯಲ್ಲಿ ಈತನ ಗನ್‌ ಝಳಪಿಸುವಿಕೆ ಕಂಡು ಜನ ಆತಂಕಕ್ಕೊಳಗಾಗಿದ್ದರು.

ಬೆಂಗಳೂರಿನಲ್ಲಿ ಹೀಗೆ ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್ ಹೆಸರು ಅರುಣ್ ಕಟಾರೆ. ಕೊತ್ತನೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ. ರೌಡಿ ಚಟುವಟಿಕೆ ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸಿದ್ದ ಕೊತ್ತನೂರು ಸಿಬ್ಬಂದಿ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ವಶಕ್ಕೆ ಪಡೆದಿದ್ದಾರೆ.

ಈತ ಬಾಡಿಗಾರ್ಡ್ಸ್‌ ಥರ ಮನುಷ್ಯರನ್ನಿಟ್ಟುಕೊಂಡು, ಅವರ ಕೈಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋಆಫ್‌ ಮಾಡುತ್ತಿದ್ದ. ಮೈಮೇಲೆ ನಕಲಿ ಚಿನ್ನ ಹೇರಿಕೊಳ್ಳುತ್ತಿದ್ದ. ಅರುಣ್ ಕಟಾರೆ ಶೋನಿಂದ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಮಾಹಿತಿ ನೀಡಿದ್ದರು.

ಆರ್ಮ್ಸ್ ಕಾಯಿದೆ ಸೆ. 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ, ನಕಲಿ ಗನ್ ಹಿಡಿದು ಏರಿಯಾದಲ್ಲಿ ಹವಾ ಸೃಷ್ಟಿಸಲು ಹೋದವನ ಗುಟ್ಟು ಬಯಲಾಗಿದೆ. ರೀಲ್ಸ್ ಶೋಕಿಗೆ ಬಿದ್ದ ಯುವಕನನ್ನು ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.

ಇದನ್ನೂ ಓದಿ: Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು

Continue Reading

Latest

Viral Video: ರಸ್ತೆ ಮೇಲೆಯೇ ಮಹಿಳೆಯ ವಶೀಕರಣ! 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ

Viral Video: ಪತಿಗೆ ಟಿಫಿನ್ ನೀಡಿ ಹಿಂದಿರುಗುತ್ತಿದ್ದ ಮಹಿಳೆಯನ್ನು ರಾಜಸ್ಥಾನದ ಉದಯಪುರ ಬೀದಿಯಲ್ಲಿ ಹಾಡುಹಗಲೇ ಸಂಮೋಹನಗೊಳಿಸಿ ಆಕೆಯಿಂದ 4.5 ಲಕ್ಷ ಮೌಲ್ಯದ ಚಿನ್ನ, ಮೊಬೈಲ್ ಫೋನ್ ಮತ್ತು ಹಣವನ್ನು ದರೋಡೆ ಮಾಡಲಾಗಿದೆ.ದುಷ್ಕರ್ಮಿಗಳಲ್ಲಿ ಒಬ್ಬರು ಆಕೆಯ ಕೈಯಿಂದ 50 ರೂಪಾಯಿ ನೋಟನ್ನು ತೆಗೆದುಕೊಂಡರು, ಮತ್ತು ಇನ್ನೊಬ್ಬ ದುಷ್ಕರ್ಮಿ ನೋಟನ್ನು ಮತ್ತೆ ಅವಳ ಕೈಯಲ್ಲಿ ಇಟ್ಟನು. ಕೆಲವೇ ಸೆಕೆಂಡುಗಳಲ್ಲಿ, ರೇಖಾ ಪ್ರಜ್ಞೆ ಕಳೆದುಕೊಂಡರು ಮತ್ತು ಅವರ ಸೂಚನೆಗಳನ್ನು ಅನುಸರಿಸಿದ್ದಾರೆ. ಮುಂದೇನಾಯಿತು? ಈ ಸುದ್ದಿ ಓದಿ.

VISTARANEWS.COM


on

Koo

ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ಹೆಚ್ಚು ನಡೆಯುತ್ತಿದ್ದು, ಹಾಡಹಗಲಿನಲ್ಲೇ ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲೇ ಕಳ್ಳರು ದರೋಡೆ ಶುರು ಮಾಡಿದ್ದಾರೆ. ಇದೀಗ ಇಂತಹದೊಂದು ಘಟನೆ ರಾಜಸ್ಥಾನದ ಉದಯಪುರ ಬೀದಿಯಲ್ಲಿ ನಡೆದಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವೈರಲ್ (Viral Video )ಆಗಿದೆ.

ಜೂನ್ 28ರಂದು ಪತಿಗೆ ಟಿಫಿನ್ ನೀಡಿ ಹಿಂದಿರುಗುತ್ತಿದ್ದ ಮಹಿಳೆಯನ್ನು ರಾಜಸ್ಥಾನದ ಉದಯಪುರ ಬೀದಿಯಲ್ಲಿ ಹಾಡಹಗಲೇ ಸಂಮೋಹನಗೊಳಿಸಿ ಆಕೆಯಿಂದ 4.5 ಲಕ್ಷ ಮೌಲ್ಯದ ಚಿನ್ನ, ಮೊಬೈಲ್ ಫೋನ್ ಮತ್ತು ಹಣವನ್ನು ದರೋಡೆ ಮಾಡಲಾಗಿದೆ. ಸಂತ್ರಸ್ತೆಯನ್ನು ರೇಖಾ ಜೈನ್ ಎಂದು ಗುರುತಿಸಲಾಗಿದೆ. ಇಡೀ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

ವಿಡಿಯೊದಲ್ಲಿ ಮಹಿಳೆ ದೆಹಲಿ ಗೇಟ್ ಜಂಕ್ಷನ್ ಬಳಿಯ ವಾಚ್‌ಶಾಪ್ ಹೊರಗಿನ ಬೀದಿಯಲ್ಲಿ ನಡೆದುಹೋಗುವಾಗ ಇಬ್ಬರು ವ್ಯಕ್ತಿಗಳು ಅವಳನ್ನು ತಡೆದರು. ಅವರು ಆಕೆಯ ಬಳಿ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದರೂ ಮತ್ತು ರೇಖಾ ಅದಕ್ಕೆ ಉತ್ತರಿಸುತ್ತಿದ್ದರು. ನಂತರ ಅವಳು ತನ್ನ ಪರ್ಸ್‌ನಿಂದ 50 ರೂಪಾಯಿಗಳನ್ನು ತೆಗೆದುಕೊಂಡು ಅವರಿಗೆ ನೀಡಿದಳು.

ದುಷ್ಕರ್ಮಿಗಳಲ್ಲಿ ಒಬ್ಬರು ಆಕೆಯ ಕೈಯಿಂದ 50 ರೂಪಾಯಿ ನೋಟನ್ನು ತೆಗೆದುಕೊಂಡರು, ಮತ್ತು ಇನ್ನೊಬ್ಬ ದುಷ್ಕರ್ಮಿ ನೋಟನ್ನು ಮತ್ತೆ ಅವಳ ಕೈಯಲ್ಲಿ ಇಟ್ಟನು. ಕೆಲವೇ ಸೆಕೆಂಡುಗಳಲ್ಲಿ, ರೇಖಾ ಪ್ರಜ್ಞೆ ಕಳೆದುಕೊಂಡರು ಮತ್ತು ಅವರ ಸೂಚನೆಗಳನ್ನು ಅನುಸರಿಸಿದ್ದಾರೆ. ಈ ವೇಳೆ ಅವರು ತಮ್ಮ ಬಳಿ ಇದ್ದ ಚಿನ್ನ, ಮೊಬೈಲ್ ಫೋನ್ ಮತ್ತು ಹಣವನ್ನು ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ರೇಖಾ ಪ್ರಜ್ಞೆ ಬಂದ ಬಳಿಕ ತನ್ನ ಪತಿಗೆ ವಿಚಾರ ತಿಳಿಸಿದ್ದು, ಇಬ್ಬರು ಸೇರಿ ನಗರದ ಸೂರಜ್ಪೋಲ್ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ರೇಖಾ, ಆರೋಪಿಗಳು ತಾನು ನಂಬಿದ ದೇವರ ಬಗ್ಗೆ ಕೇಳಿದ್ದು, ಅದಕ್ಕೆ ಆಕೆ ಭಗವಾನ್ ಮಹಾವೀರ ಸ್ವಾಮಿಯ ಬಗ್ಗೆ ಪ್ರಸ್ತಾಪಿಸಿದಾಗ, ಆಕೆಯ ಬಳಿ ಹಣ ಕೇಳಿದ್ದಾರೆ. ಅವಳು ತನ್ನ ಪರ್ಸ್‌ನಿಂದ 50 ರೂಪಾಯಿಗಳನ್ನು ತೆಗೆದುಕೊಂಡು ಅದನ್ನು ಧಾರ್ಮಿಕ ಕಾರಣಕ್ಕಾಗಿ ಎಂದು ಭಾವಿಸಿ ಅವರಿಗೆ ನೀಡಿದಳು. ದುಷ್ಕರ್ಮಿಗಳಲ್ಲಿ ಒಬ್ಬರು ಆಕೆಯ ಕೈಯಿಂದ 50 ರೂಪಾಯಿ ನೋಟನ್ನು ತೆಗೆದುಕೊಂಡರು, ಮತ್ತು ಇನ್ನೊಬ್ಬ ದುಷ್ಕರ್ಮಿ ನೋಟನ್ನು ಮತ್ತೆ ಅವಳ ಕೈಯಲ್ಲಿ ಇಟ್ಟನು.

ಇದನ್ನೂ ಓದಿ: ಶಿಕ್ಷಣ ತಜ್ಞ ಡಾ ಎಂ ಆರ್ ಜಯರಾಮ್‌ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

ಕೆಲವೇ ಸೆಕೆಂಡುಗಳಲ್ಲಿ, ರೇಖಾ ಪ್ರಜ್ಞೆ ಕಳೆದುಕೊಂಡರು ಮತ್ತು ಅವರ ಸೂಚನೆಗಳನ್ನು ಅನುಸರಿಸಿದರು ಎಂಬುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿವನ್ನು ಪರೀಕ್ಷಿಸಿದಾಗ ರೇಖಾ ಪೊಲೀಸರಿಗೆ ನೀಡಿದ ವಿವರಗಳು ಸಿಸಿಟಿವಿ ದೃಶ್ಯಾವಳಿಗಳಿಂದ ದೃಢಪಟ್ಟಿವೆ. ಪೊಲೀಸರು ಈಗ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Continue Reading
Advertisement
Yogi Adityanath
ದೇಶ7 mins ago

Yogi Adityanath: ಉತ್ತರಪ್ರದೇಶಕ್ಕೆ ಅಪಮಾನ ಮಾಡಲು ರಾಹುಲ್‌ ಗಾಂಧಿ ಸಂಚು; ಯೋಗಿ ಕಿಡಿ

Good News For Farmers
ದೇಶ12 mins ago

Good News For Farmers: ಬಿಸಿಲಿನ ಝಳಕ್ಕೆ ಬಸವಳಿದ ಕೃಷಿಕರಿಗೆ ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ; ಈ ತಿಂಗಳು ಉತ್ತಮ ವರ್ಷಧಾರೆ

train service
ಬೆಂಗಳೂರು31 mins ago

Train services: ಗೋಲಗುಂಬಜ್ ಎಕ್ಸ್‌ಪ್ರೆಸ್‌ ವೇಳಾಪಟ್ಟಿ ಪರಿಷ್ಕರಣೆ; ಬೆಂಗಳೂರಿನಿಂದ ವಿಶೇಷ ರೈಲುಗಳ ಓಡಾಟ

Pawan Kalyan
ದೇಶ42 mins ago

Pawan Kalyan: ವೇತನವೇ ಬೇಡ ಎಂದ ಪವನ್‌ ಕಲ್ಯಾಣ್‌- ಮತ್ತೊಮ್ಮೆ ಗಮನ ಸೆಳೆದ ಆಂಧ್ರ ಡಿಸಿಎಂ

actor darshan crazy fans
ವೈರಲ್ ನ್ಯೂಸ್45 mins ago

Actor Darshan: ದರ್ಶನ್‌ ಮೇಲಿನ ಅಂಧಾಭಿಮಾನ; ಮಗನನ್ನೇ ಕೈದಿ ಮಾಡಿದ ಹುಚ್ಚು ಫ್ಯಾನ್!

Harshika Poonacha
ಸ್ಯಾಂಡಲ್ ವುಡ್56 mins ago

Harshika Poonacha: ಮದುವೆಯಾಗಿ ವರ್ಷದೊಳಗೆ ಸಿಹಿ ಸುದ್ದಿ ಹಂಚಿಕೊಂಡ ಹರ್ಷಿಕಾ ಪೂಣಚ್ಚ–ಭುವನ್

Jasprit Bumrah
ಕ್ರೀಡೆ1 hour ago

Jasprit Bumrah: ವಿಶ್ವಕಪ್​ ಗೆದ್ದ ಖುಷಿಯಲ್ಲಿ ಜಸ್​ಪ್ರೀತ್​ ಬುಮ್ರಾಗೆ ಟ್ರೀಟ್​ ಕೊಡಿಸಿದ ಪತ್ನಿ

Virat Kohli
ಕ್ರಿಕೆಟ್2 hours ago

Virat Kohli: ನನ್ನ ​ಅಹಂಕಾರವೇ ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣ ಎಂದ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

crimes in karnataka physical abuse
ಕ್ರೈಂ2 hours ago

Physical Abuse: ಎಚ್‌ಐವಿ ಪೀಡಿತ ವ್ಯಕ್ತಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ, ಚಿನ್ನಾಭರಣ ದರೋಡೆ

Indian Origin Businessman
ವಿದೇಶ2 hours ago

Indian Origin Businessman: 8,300 ಕೋಟಿ ರೂ. ವಂಚನೆ; ಭಾರತೀಯ ಮೂಲದ ಅಮೆರಿಕದ ಉದ್ಯಮಿಗೆ ಜೈಲು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌