Viral Video: ಗಲ್ಲಿ ಕ್ರಿಕೆಟ್​ನಲ್ಲಿ ಎಡಗೈ ಬ್ಯಾಟಿಂಗ್​ ನಡೆಸಿದ ಕೆ.ಎಲ್​ ರಾಹುಲ್​ - Vistara News

ಕ್ರೀಡೆ

Viral Video: ಗಲ್ಲಿ ಕ್ರಿಕೆಟ್​ನಲ್ಲಿ ಎಡಗೈ ಬ್ಯಾಟಿಂಗ್​ ನಡೆಸಿದ ಕೆ.ಎಲ್​ ರಾಹುಲ್​

Viral Video: ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ತಂಡ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಅಂತಿಮ ನಾಲ್ಕರ ಘಟಕ್ಕೆ ತೇರ್ಗಡೆಯಾಗುವ ಅವಕಾಶ ಲಕ್ನೋ ತಂಡಕ್ಕೆ ಬಹಳ ಕಡಿಮೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಕಾರಣ ತಂಡದ ರನ್‌ರೇಟ್​ ಕಳಪೆಯಾಗಿದೆ

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಲಕ್ನೋ ಸೂಪರ್ ಜೈಂಟ್ಸ್ (LSG) ನಾಯಕ ಕೆ.ಎಲ್ ರಾಹುಲ್(KL Rahul) ಗಲ್ಲಿ ಕ್ರಿಕೆಟ್​ ಆಡಿದ ವಿಡಿಯೊವೊಂದು ವೈರಲ್​ ಆಗಿದೆ(Viral Video). ಅಚ್ಚರಿ ಎಂದರೆ ಅವರು ಎಡಗೈ ಶೈಲಿಯಲ್ಲಿ ಬ್ಯಾಟಿಂಗ್​ ನಡೆಸಿದ್ದು. ಇಂದು ನಡೆಯುವ ಐಪಿಎಲ್​(IPL 2024) ಪಂದ್ಯದಲ್ಲಿ ಲಕ್ನೋ ತಂಡ ಮುಂಬೈ(Mumbai Indians) ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಮುಂಬೈಗೆ ಬಂದ ವೇಳೆ ರಾಹುಲ್​ ಇಲ್ಲಿನ ಗಲ್ಲಿಯೊಂದರಲ್ಲಿ ಕ್ರಿಕೆಟ್​ ಆಡಿದ್ದಾರೆ.

ರಾಹುಲ್​ ಬಲಗೈ ಬ್ಯಾಟರ್​ ಆಗಿದ್ದರೂ ಕೂಡ ಎಡಗೈನಲ್ಲಿ ಬ್ಯಾಟಿಂಗ್​ ನಡೆಸಿದ್ದು ಅಚ್ಚರಿ ತಂದಿದೆ. ಸ್ಟಾರ್​ ಸ್ಪೋರ್ಟ್ಸ್​ ನಡೆಸಿದ ಕಾರ್ಯಕ್ರಮ ಇದಾಗಿತ್ತು. ರಾಹುಲ್​ ಅವರ ಈ ಬ್ಯಾಟಿಂಗ್​ ಫೋಟೊ ಕಂಡ ನೆಟ್ಟಿಗರು ಕೆಲ ತಮಾಷೆಯ ಕಮೆಂಟ್​ಗಳನ್ನು ಮಾಡಿದ್ದಾರೆ. ಟಿ20 ವಿಶ್ವಕಪ್​ನಲ್ಲಿ ಅವಕಾಶ ಸಿಗದ ಕಾರಣ ಅವರು ಎಡಗೈನಲ್ಲಿ ಬ್ಯಾಟಿಂಗ್​ ನಡೆಸಿ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ಮ ಪಡುತಿದ್ದಾರೆ ಎಂದು ನಗುವ ಎಮೊಜಿಯೊಂದಿಗೆ ಕಮೆಂಟ್​ ಮಾಡಿದ್ದಾರೆ.


ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ 10 ವಿಕೆಟ್​ಗಳ ಹೀನಾಯ ಸೋಲು ಕಂಡ ಬೇಸರದಲ್ಲಿ ಸಿಟ್ಟಿಗೆದ್ದ ಫ್ರಾಂಚೈಸಿ ಮಾಲಿಕ ಸಂಜೀವ್ ಗೋಯೆಂಕಾ(Sanjiv Goenka) ಮೈದಾನದಲ್ಲೇ ನಾಯಕ ಕೆ.ಎಲ್​ ರಾಹುಲ್(KL Rahul)​ ಜತೆ ಜಗಳವಾಡಿದ್ದರು. ಈ ಘಟನೆ ಬಳಿಕ ಅನೇಕ ಮಾಜಿ ಆಟಗಾರರು ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಘಟನೆಗೆ ಸಂಬಂಧಿಸಿ ರಾಹುಲ್​ ಲಕ್ನೋ ತಂಡ ತೊರೆಯಲಿದ್ದಾರೆ, ಆರ್​ಸಿಬಿ ಸೇರಲಿದ್ದಾರೆ, ತಂಡದ ಆಟಗಾರರೊಂದಿಗೆ ಪ್ರಯಾಣಿಸದೆ ಪ್ರತ್ಯೇಕವಾಗಿ ಪ್ರಯಾಣಿಸಿದ್ದಾರೆ ಹೀಗೆ ಹಲವು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. 

ಇದನ್ನೂ ಓದಿ Viral Video: ವಿಚ್ಛೇದನ ಕೇಸ್​ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ ಎಂದ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ

ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್​ ಮಾತ್ರವಲ್ಲದೆ, ಬೌಲಿಂಗ್​ನಲ್ಲಿಯೂ ಲಕ್ನೋ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಕನಿಷ್ಠ 1 ವಿಕೆಟ್​ ಕೂಡ ಕೀಳಲಾಗದ ಘೋರ ವೈಫಲ್ಯ ಕಂಡಿತ್ತು. ಈ ಹೀನಾಯ ಸೋಲಿನಿಂದ ಸಿಟ್ಟಿಗೆದ್ದ ಸಂಜೀವ್ ಗೋಯೆಂಕಾ ನಾಯಕ ರಾಹುಲ್ ಅವರೊಂದಿಗೆ ಕೋಪದಲ್ಲಿ ಮಾತನಾಡುತ್ತಿರುವಂತೆ ಕಂಡುಬಂದಿತ್ತು. ಇವರಿಬ್ಬರ ನಡುವಣ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ಕೇಳಿಸಿಲ್ಲವಾಗಿದ್ದರೂ, ಈ ದೃಶ್ಯ ನೋಡುವಾಗ ಇದು ಅಸಮಾಧಾನದ ನುಡಿ ಎಂದು ತಿಳಿದು ಬಂದಿತ್ತು. ಗೋಯೆಂಕಾ ಮಾತಿಗೆ ರಾಹುಲ್ ಪ್ರತಿಕ್ರಿಯೆ ನೀಡಲು ಮುಂದಾದರೂ ಕೂಡ ಇದನ್ನು ಗೋಯೆಂಕಾ ಒಪ್ಪಿಕೊಳ್ಳದೆ ಏನೋ ಬೈಯುತ್ತಿರುವಂತೆ ದೃಶ್ಯದಲ್ಲಿ ಕಂಡುಬಂದಿತ್ತು. ಗೋಯೆಂಕಾ ವರ್ತನೆಗೆ ಆಕ್ರೋಶ ವ್ಯಕ್ತವಾದ ಕಾರಣ ಗೋಯೆಂಕಾ ಅವರು ರಾಹುಲ್​ ಅವರನ್ನು ಮನೆಗೆ ಕರೆದು ಜತೆಯಾಗಿ ಡಿನ್ನರ್​ ನಡೆಸಿದ್ದರು. ಇದರ ಫೋಟೊ ಕೂಡ ವೈರಲ್​ ಆಗಿತ್ತು.

ಮುಂಬೈ ಎದುರಾಳಿ


ಇಂದು ನಡೆಯುವ ಪಂದ್ಯದಲ್ಲಿ ಲಕ್ನೋ ತಂಡ ಮುಂಬೈ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆದ್ದರೂ ಅಂತಿಮ ನಾಲ್ಕರ ಘಟಕ್ಕೆ ತೇರ್ಗಡೆಯಾಗುವ ಅವಕಾಶ ಲಕ್ನೋ ತಂಡಕ್ಕೆ ಬಹಳ ಕಡಿಮೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ಕಾರಣ ತಂಡದ ರನ್‌ರೇಟ್​ ಕಳಪೆಯಾಗಿದೆ. ಒಂದೊಮ್ಮೆ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದಿದ್ದರೆ ಲಕ್ನೋಗೆ ಈ ಪಂದ್ಯ ಪ್ಲೇ ಆಫ್​ ಹಂತಕ್ಕೇರಲು ಮಹತ್ವದ ಪಂದ್ಯವಾಗಿರುತ್ತಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2025 : ಐಪಿಎಲ್​ ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ

IPL 2025: ಎರಡಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವರಿಗೆ ಅವಕಾಶವಿರಲಿಲ್ಲ. ಕಳೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎಂಬ ಎರಡು ಹೊಸ ತಂಡಗಳನ್ನು ಸೇರಿಸಿದ್ದರಿಂದ ಬಿಸಿಸಿಐ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ಕಡಿಮೆ ಮಾಡಿತ್ತು.

VISTARANEWS.COM


on

IPL 2025
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಫ್ರಾಂಚೈಸಿಗಳು ಮುಂದಿನ ಮೂರು ಋತುಗಳಿಗೆ ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳುವ ಸಂಖ್ಯೆ ಹೆಚ್ಚಿಸುವಂತೆ ಬಿಸಿಸಿಐಗೆ ವಿನಂತಿಸಿವೆ ಎಂದು ವರದಿಯಾಗಿದೆ. ಮುಂಬರುವ ಐಪಿಎಲ್​ಗೆ ಮೆಗಾ ಹರಾಜು ನಡೆಯುತ್ತೆ. ಫ್ರಾಂಚೈಸಿಗಳು ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. 2022ರ ಮೆಗಾ ಹರಾಜಿನಲ್ಲಿ ಎಂಟು ಫ್ರಾಂಚೈಸಿಗಳಿಗೆ ಗರಿಷ್ಠ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಕ್ಯಾಪ್ಡ್ ಅಥವಾ ಅನ್​ಕ್ಯಾಪ್ಡ್​​ ಸೇರಿದಂತೆ ಗರಿಷ್ಠ ಮೂವರು ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡಲಾಗಿತ್ತು.

ಎರಡಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ಅವರಿಗೆ ಅವಕಾಶವಿರಲಿಲ್ಲ. ಕಳೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಎಂಬ ಎರಡು ಹೊಸ ತಂಡಗಳನ್ನು ಸೇರಿಸಿದ್ದರಿಂದ ಬಿಸಿಸಿಐ ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು ಕಡಿಮೆ ಮಾಡಿತ್ತು. ಹಿಂದಿನ ಮೆಗಾ ಹರಾಜಿನಲ್ಲಿ, ಆಟಗಾರರ ಉಳಿಸಿಕೊಳ್ಳುವಿಕೆ ಹರಾಜಿನ ಸಮಯದಲ್ಲಿ ರೈಟ್ ಟು ಮ್ಯಾಚ್ (ಆರ್​ಟಿಎಂ) ಕಾರ್ಡ್​​ಗಳ ಬಳಕೆಯ ಮೂಲಕ ಐದು ಆಟಗಾರರನ್ನು ಉಳಿಸಿಕೊಳ್ಳಲು ಫ್ರಾಂಚೈಸಿಗಳಿಗೆ ಅವಕಾಶ ನೀಡಲಾಗಿತ್ತು.

ಬಿಸಿಸಿಐ ಆಟಗಾರರ ಹರಾಜು ಪ್ರಕ್ರಿಯೆ ಆರಂಭ

ಮುಂಬರುವ ಐಪಿಎಲ್ 2025 ಮೆಗಾ ಹರಾಜಿಗೆ, ಬಿಸಿಸಿಐ ಉಳಿಸಿಕೊಳ್ಳುವ ನಿಯಮವನ್ನು ಇನ್ನೂ ಪ್ರಕಟಿಸಿಲ್ಲ. ಆದಾಗ್ಯೂ, ಮಂಡಳಿಯು ಈಗಾಗಲೇ ಉಳಿಸಿಕೊಳ್ಳುವ ಆಟಗಾರರ ನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಕ್ರಿಕ್​ಬಜ್​ ವರದಿ ಮಾಡಿದೆ. ಈ ತಿಂಗಳ ಕೊನೆಯಲ್ಲಿ ಫ್ರಾಂಚೈಸಿ ಮಾಲೀಕರ ಸಭೆಯಲ್ಲಿ ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬಿಸಿಸಿಐ ಹಂಗಾಮಿ ಸಿಇಒ ಮತ್ತು ಐಪಿಎಲ್ ಉಸ್ತುವಾರಿ ಹೇಮಂಗ್ ಅಮಿನ್ ಈಗಾಗಲೇ ಫ್ರಾಂಚೈಸಿಗಳ ಸಿಇಒಗಳೊಂದಿಗೆ ಸಮಾಲೋಚನೆ ನಡೆಸಿ ಉಳಿಸಿಕೊಳ್ಳುವ ನೀತಿಯ ಬಗ್ಗೆ ಅವರ ಅಭಿಪ್ರಾಯಗಳನ್ನು ಪಡೆದಿದ್ದಾರೆ.

ಹೆಚ್ಚಿನ ಫ್ರಾಂಚೈಸಿಗಳು ಐದರಿಂದ ಏಳು ಆಟಗಾರರನ್ನು ಉಳಿಸಿಕೊಳ್ಳಲು ವಿನಂತಿ ಮಾಡಿದ್ದರೆ. ಫ್ರಾಂಚೈಸಿಗಳಲ್ಲಿ ಒಂದು ಎಂಟು ಆಟಗಾರರನ್ನು ಉಳಿಸಿಕೊಳ್ಳಲು ಸೂಚಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಅದೇ ಸಮಯದಲ್ಲಿ, ಕೆಲವು ಫ್ರಾಂಚೈಸಿಗಳು ಉಳಿಸಿಕೊಳ್ಳುವ ನಿಯಮ ಇರಬಾರದು ಎಂದು ಹೇಳಿದೆ ಎನ್ನಲಾಗಿದೆ. ಮತ್ತೊಂದು ಫ್ರಾಂಚೈಸಿ ಆರ್​ಟಿಎಂ ಮಾತ್ರ ಹೊಂದಲು ವಿನಂತಿಸಿದೆ ಮತ್ತು ಯಾವುದೇ ಅವಕಾಶವಿಲ್ಲ.

ಇದನ್ನೂ ಓದಿ: Rahul Dravid : ಕ್ರಿಕೆಟ್ ಬುದ್ಧ ನಕ್ಕು ನಲಿದಾಡಿದಾಗ, ಅರಿವಿಲ್ಲದೇ ಕೆನ್ನೆಗೆ ಜಾರಿತ್ತು ಭಾವಾತಿಶಯದ ಅಶ್ರುಧಾರೆ – ಸಲಾಂ ಜಾಮಿ ಭಾಯ್!

ಈ ವರ್ಷದ ಮೇ ತಿಂಗಳಲ್ಲಿ, ಹಿರಿಯ ವೀಕ್ಷಕವಿವರಣೆಗಾರ ಹರ್ಷ ಭೋಗ್ಲೆ ಅವರು ಕೆಕೆಆರ್ ಸಿಇಒ ವೆಂಕಿ ಮೈಸೂರು ಅವರು ಎಂಟು ಆರ್ಟಿಎಂ ಕಾರ್ಡ್ಗಳನ್ನು ಉಳಿಸಿಕೊಳ್ಳಲು ಬಯಸಿದ್ದಾರೆ ಎಂದು ಬಹಿರಂಗಪಡಿಸಿದ್ದರು. ಅಂತಹ ಕ್ರಮವು ಆಟಗಾರರಿಗೆ ಹರಾಜಿನಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ಫ್ರಾಂಚೈಸಿಗಳು ಸಹ ಅವರನ್ನು ಮರಳಿ ಖರೀದಿಸಲು ಸಾಧ್ಯವಾಗುತ್ತದೆ.

ಫ್ರಾಂಚೈಸಿಗಳೊಂದಿಗೆ ಮಾತನಾಡಿದ ನಂತರ, ಬಿಸಿಸಿಐ ಈಗ ಪ್ರಕ್ರಿಯೆಯನ್ನು ಅಂತಿಮಗೊಳಿಸುತ್ತಿದೆ ಮತ್ತು ಮಾಲೀಕರ ಸಭೆಯಲ್ಲಿ ತನ್ನ ಅಂತಿಮ ನಿರ್ಧಾರವನ್ನು ಬಹಿರಂಗಪಡಿಸಲಿದೆ. ಏತನ್ಮಧ್ಯೆ, ಭಾರತದ ನಾಯಕ ರೋಹಿತ್ ಶರ್ಮಾ ಸೇರಿದಂತೆ ಹಲವಾರು ಪ್ರಮುಖ ಆಟಗಾರರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಬಿಸಿಸಿಐ ಸದ್ಯಕ್ಕೆ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ.

Continue Reading

ಕ್ರೀಡೆ

Rahul Dravid: ನಾನು ನಿರುದ್ಯೋಗಿ, ಎಲ್ಲಾದರೂ ಕೆಲಸ ಇದ್ದರೆ ಹೇಳಿ ಎಂದ ರಾಹುಲ್​ ದ್ರಾವಿಡ್​; ವಿಡಿಯೊ ವೈರಲ್​

Rahul Dravid: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಅವರಿಗೆ ಸಂದರ್ಶಕರೊಬ್ಬರು ಮುಂದಿನ ನಡೆಯ ಬಗ್ಗೆ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್​, ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಹೊಸ ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಹಾಸ್ಯ ಚಟಾಕಿ ಹಾರಿಸಿದರು.

VISTARANEWS.COM


on

Rahul Dravid
Koo

ಬಾರ್ಬಡೋಸ್​: ಟಿ20 ವಿಶ್ವಕಪ್​ ಟೂರ್ನಿಯ ಮುಕ್ತಾಯದೊಂದಿಗೆ ರಾಹುಲ್​ ದ್ರಾವಿಡ್​(Rahul Dravid) ಅವರ ಕೋಚಿಂಗ್​ ಕೂಡ ಮುಕ್ತಾಯಗೊಂಡಿದೆ. ಮುಂದಿನ ನಡೆ ಏನೆಂದು ಕೇಳಿದ ಪ್ರಶ್ನೆಗೆ ಹಾಸ್ಯಾಸ್ಪದವಾಗಿ(Rahul Dravid jokes) ಉತ್ತರಿಸಿದ ದ್ರಾವಿಡ್​, ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ(Rahul Dravid jokes unemployed from next week) ಎಲ್ಲಾದರೂ ಕೆಲಸ ಇದ್ದರೆ ಹೇಳಿ ಎಂದರು. ಈ ವಿಡಿಯೊ ವೈರಲ್​ ಆಗಿದೆ.

2021ರಲ್ಲಿ ಟಿ20 ವಿಶ್ವಕಪ್‌ ಬಳಿಕ, ಕೋಚ್‌ ಆಗಿದ್ದ ರವಿಶಾಸ್ತ್ರಿ ನಿರ್ಗಮನದಿಂದ ತೆರವಾದ ಸ್ಥಾನವನ್ನು ದ್ರಾವಿಡ್‌ ವಹಿಸಿದ್ದರು. ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕಳೆದ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಅಂತ್ಯಗೊಂಡಿತ್ತು. ಆ ಬಳಿಕ, ದ್ರಾವಿಡ್​ಗೆ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಕೂಡ ಇರಲಿಲ್ಲ. ಆದರೂ ಕೂಡ ದ್ರಾವಿಡ್​ ಮತ್ತು ಇತರ ತರಬೇತಿ ಸಿಬ್ಬಂದಿಯನ್ನು ಟಿ20 ವಿಶ್ವಕಪ್​ ತನಕ ಮುಂದುವರಿಸಲಾಗಿತ್ತು. ತಮ್ಮ ಕೊನೆಯ ಮಾರ್ಗದರ್ಶದಲ್ಲಿ ಭಾರತ ಟಿ20 ವಿಶ್ವಕಪ್​ ಗೆದ್ದಿರುವುದು ಅವರಿಗೂ ಸಂತಸ ತಂದಿದೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದ ರಾಹುಲ್ ದ್ರಾವಿಡ್ ಅವರಿಗೆ ಸಂದರ್ಶಕರೊಬ್ಬರು ಮುಂದಿನ ನಡೆಯ ಬಗ್ಗೆ ಪ್ರಶ್ನೆ ಮಾಡಿದರು. ಈ ಪ್ರಶ್ನೆಗೆ ಉತ್ತರಿಸಿದ ದ್ರಾವಿಡ್​, ಈ ಗೆಲುವಿನಿಂದ ನಾನು ಶೀಘ್ರದಲ್ಲೇ ಹೊರಬರುತ್ತೇನೆ. ಏಕೆಂದರೆ ಮುಂದಿನ ವಾರದಿಂದ ನಾನು ನಿರುದ್ಯೋಗಿರುತ್ತೇನೆ. ಹೊಸ ಕೆಲಸ ಇದ್ದರೆ ಹೇಳಿ ಎಂದು ದ್ರಾವಿಡ್ ಹಾಸ್ಯ ಚಟಾಕಿ ಹಾರಿಸಿದ್ದಾರೆ” ಈ ವಿಡಿಯೊ ವೈರಲ್​ ಆಗಿದೆ. ಕಳೆದ ವರ್ಷವೇ ದ್ರಾವಿಡ್​ ಅವರು ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಮತ್ತೊಮ್ಮೆ ಕೋಚ್​ ಹುದ್ದೆಯಲ್ಲಿ ಮುಂದುವರಿಯಲು ಇಷ್ಟವಿಲ್ಲ ಎಂದು ಹೇಳಿದ್ದರು. ದ್ರಾವಿಡ್​ ಅವರ ಇಬ್ಬರು ಮಕ್ಕಳು ಕೂಡ ಕ್ರಿಕೆಟರ್​ ಆಗಿರುವ ಕಾರಣ ಇವರ ಕ್ರಿಕೆಟ್​ ಭವಿಷ್ಯ ರೂಪಿಸುವಲ್ಲಿ ದ್ರಾವಿಡ್​ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬಹುದು.

ಇದನ್ನೂ ಓದಿ Team India stuck in Barbados: ಟೀಮ್​ ಇಂಡಿಯಾ ತವರಿಗೆ ವಾಪಸಾಗುವುದು ಮತ್ತಷ್ಟು ವಿಳಂಬ

ನಾಯಕನಾಗಿ ಗೆಲ್ಲಲಾಗದ ವಿಶ್ವಕಪ್(T20 World Cup 2024)​ ಟ್ರೋಫಿಯನ್ನು ರಾಹುಲ್​ ದ್ರಾವಿಡ್‌(Rahul Dravid) ಕೊನೆಗೂ ಭಾರತ ತಂಡದ ತರಬೇತುದಾರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ.

1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಾಹುಲ್‌ ದ್ರಾವಿಡ್‌ 2012ರ ವರೆಗೆ ಭಾರತ ತಂಡದ ಪರವಾಗಿ ಆಡಿದ್ದರು. ಆದರೆ ವಿಶ್ವಕಪ್ ಎನ್ನುವುದು ಅವರಿಗೆ ಕನಸಾಗಿತ್ತು. ಈ ಕೊರಗು ಕೂಡ ಅವರಲ್ಲಿತ್ತು. ಇದೀಗ ನಾಯಕನಾಗಿ, ಆಟಗಾರನಾಗಿ ಗೆಲ್ಲಲಾಗದ ವಿಶ್ವಕಪ್‌ ಅನ್ನು ತರಬೇತುದಾರನಾಗಿ ಗಳಿಸಿಕೊಂಡಿದ್ದಾರೆ.

2007ರಲ್ಲಿ ವೆಸ್ಟ್​ ಇಂಡೀಸ್​ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ರಾಹುಲ್​ ದ್ರಾವಿಡ್​ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್​ ಹಂತದಿಂದಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗ ಅವಮಾನಕ್ಕೆ ಸಿಲುಕಿತ್ತು. ಅಂದು ಅವಮಾನ ಎದುರಿಸಿದ ವಿಂಡೀಸ್​ ನೆಲದಲ್ಲೇ ಇದೀಗ ದ್ರಾವಿಡ್​ ತರಬೇತುದಾರನಾಗಿ ಕಪ್​ ಗೆದ್ದು ಸಂಭ್ರಮಿಸಿ ತಮ್ಮ ಎಲ್ಲ ಹಿಂದಿನ ನೋವನ್ನು ಮರೆತರು.

Continue Reading

ಕ್ರಿಕೆಟ್

Rahul Dravid : ಕ್ರಿಕೆಟ್ ಬುದ್ಧ ನಕ್ಕು ನಲಿದಾಡಿದಾಗ, ಅರಿವಿಲ್ಲದೇ ಕೆನ್ನೆಗೆ ಜಾರಿತ್ತು ಭಾವಾತಿಶಯದ ಅಶ್ರುಧಾರೆ – ಸಲಾಂ ಜಾಮಿ ಭಾಯ್!

Rahul Dravid : ದ್ರಾವಿಡ್ ಅವರ ವಿಚಿತ್ರ ವರ್ತನೆ ಗೆಳೆಯರಿಗೂ ಅಚ್ಚರಿಯನ್ನುಂಟು ಮಾಡಿತ್ತಂತೆ. ಆದ್ರೆ ಇದಕ್ಕೆ ಕಾರಣ ಕೇಳಿದಾಗ ಯಾರಿಗೂ ಕೂಡ ನಗುಬರಬಹುದು. ಯಾಕಂದ್ರೆ ಬ್ಯಾಟ್‍ನ ಗ್ರಿಪ್ ಪಡೆದುಕೊಳ್ಳಲು ದ್ರಾವಿಡ್ ಈ ತಂತ್ರವನ್ನು ಬಳಸುತ್ತಿದ್ದರಂತೆ. ಹೀಗೆ ದ್ರಾವಿಡ್ ಬಗ್ಗೆ ಹಲವಾರು ಸ್ವಾರಸ್ಯಕರವಾದ ಘಟನೆಗಳಿವೆ.

VISTARANEWS.COM


on

Rahul Dravid
Koo

ಸನತ್ ರೈ, ಬೆಂಗಳೂರು

ನಾನು ರಾಹುಲ್ ದ್ರಾವಿಡ್ (Rahul Dravid) ಅವರ ಅಪ್ಪಟ ಅಭಿಮಾನಿಯೇನಲ್ಲ. ಆದ್ರೂ ಜಾಮಿ ಬಗ್ಗೆ ಆಗಾಧವಾದ ಪ್ರೀತಿ ಇದೆ. ಅವರ ಕಲಾತ್ಮಕ ಆಟದ ಶೈಲಿಗಂತೂ ಮನಸೋತಿದೆ. ಆಟದ ಮೇಲಿನ ಪ್ರೀತಿ, ಆಕರ್ಷಣೆ, ಬದ್ಧತೆ, ತಾಳ್ಮೆ, ಸ್ಥಿರತೆ, ಶಿಸ್ತು, ಏಕಾಗ್ರತೆ, ಕಲಿಯುವ ಹಂಬಲ, ಪ್ಲ್ಯಾನಿಂಗ್, ಟ್ಯಾಕ್ಟಿಕ್ಸ್, ಸ್ಟ್ರಾಟೆಜಿ ಹೀಗೆ ಕ್ರಿಕೆಟ್ ಆಟವನ್ನು ಪರಿಪೂರ್ಣವಾಗಿ ಪರವಶಮಾಡಿಕೊಂಡವರು ನಮ್ಮ ದಿ ವಾಲ್..

ಆದ್ರೆ ಒಬ್ಬ ಆಟಗಾರನಾಗಿ, ನಾಯಕನಾಗಿ ಅವರ ಕ್ರಿಕೆಟ್ ಬದುಕು ಪರಿಪೂರ್ಣತೆಯನ್ನು ಪಡೆದುಕೊಂಡಿರಲಿಲ್ಲ. ದಿ ಇಂಡಿಯನ್ ಗ್ರೇಟ್ ವಾಲ್, ಕ್ರಿಕೆಟ್ ಬುದ್ಧ.. ಅಪತ್ಭಾಂದವ..ಸೈಲೆಂಟ್ ಕಿಲ್ಲರ್ ಬಿರುದುಗಳು ಅವರ ಹೆಸರಿಗೆ ಅಂಟಿಕೊಂಡಿದ್ದವು. ಹಾಗೇ ನಿಧಾನಗತಿಯ ಬ್ಯಾಟಿಂಗ್‍ನಿಂದಾಗಿ ಹಲವಾರು ಟೀಕೆಗಳಿಗೂ ಗುರಿಯಾಗಿದ್ದರು. ಆದ್ರೆ ದ್ರಾವಿಡ್ ಯಾವತ್ತೂ ಯಾವುದಕ್ಕೂ ಉತ್ತರ ನೀಡುತ್ತಿರಲಿಲ್ಲ. ಬದಲಾಗಿ ತನ್ನ ಬ್ಯಾಟ್‍ನಿಂದಲೇ ಎಲ್ಲರ ಬಾಯಿ ಮುಚ್ಚಿಸುತ್ತಿದ್ದರು. ಇದು ದ್ರಾವಿಡ್ ಅವರ ಜಾಯಮಾನವಾಗಿತ್ತು. ಕ್ರಿಕೆಟ್ ಬದುಕಿನಲ್ಲಿ ಅಂದೂ.. ಇಂದೂ ರೂಢಿಸಿಕೊಂಡು ಬಂದಿರುವ ಪದ್ಧತಿಯೂ ಹೌದು.

ತಂಡಕ್ಕಾಗಿ ಸರ್ವಸ್ಸವನ್ನೇ ತ್ಯಾಗ ಮಾಡಿದ ತ್ಯಾಗಿ..!

1996ರಿಂದ 2012ರವರೆಗೆ ಟೀಮ್ ಇಂಡಿಯಾದ ಹಲವು ಐತಿಹಾಸಿಕ ಗೆಲುವಿನಲ್ಲಿ ರಾಹುಲ್ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದವರು. ಅದು ಆಸ್ಟ್ರೇಲಿಯಾ ವಿರುದ್ಧದ ಈಡನ್ ಗಾರ್ಡನ್ ಟೆಸ್ಟ್ ಪಂದ್ಯದ ರಣರೋಚಕ ಟೆಸ್ಟ್ ಗೆಲುವು ಆಗಿರಬಹುದು, ಅಂತದ್ದೇ ಹತ್ತು ಹಲವು ಪಂದ್ಯಗಳಿರಬಹುದಯ; ಧೋನಿ ಟೀಮ್ ಇಂಡಿಯಾದೊಳಗೆ ಬರುವುದಕ್ಕಿಂತ ಮುನ್ನ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿಭಾಯಿಸಿದವರು ನಮ್ಮ ರಾಹುಲ್. ಮಧ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ಗೋಡೆಯೂ ಆಗಿದ್ದರು. ಹೀಗೆ ತಂಡದ ಹಿತಕ್ಕಾಗಿ ಒಂಚೂರು ಸ್ವಾರ್ಥವಿಲ್ಲದೆ ಸರ್ವಸ್ವವನ್ನು ತ್ಯಾಗ ಮಾಡಿದ್ದ ಕ್ರಿಕೆಟ್ ಜಗತ್ತಿನ ಬುದ್ಧ ನಮ್ಮ ರಾಹುಲ್ ದ್ರಾವಿಡ್.

ರಾಹುಲ್ ಮೂರು ವಿಶ್ವಕಪ್ ಟೂರ್ನಿಗಳನ್ನು ಆಡಿದ್ದಾರೆ. ಆಟಗಾರನಾಗಿ 1999ರ ವಿಶ್ವಕಪ್‍ನಲ್ಲೂ ನಿರಾಸೆ ಅನುಭವಿಸಿದ್ದರು. ಉಪನಾಯಕನಾಗಿ 2003ರ ವಿಶ್ವಕಪ್‍ನಲ್ಲಿ ಕೈಗೆ ಬಂದಿದ್ದ ಟ್ರೋಫಿ ಕೊನೆ ಹಂತದಲ್ಲಿ ಕೈಜಾರಿತ್ತು. ಇನ್ನೂ ನಾಯಕನಾಗಿ 2007ರ ವಿಶ್ವಕಪ್ ಟೂರ್ನಿಯನ್ನು ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದ ರಾಹುಲ್ ಹುಡುಗರು ಲೀಗ್‍ನಲ್ಲಿ ಮುಖಭಂಗ ಅನುಭವಿಸಿದ್ದರು. ಹೀಗಾಗಿ ಸೋಲಿನ ಹೊಣೆ ಹೊತ್ತು ನಾಯಕತ್ವ ಸ್ಥಾನವನ್ನೇ ತ್ಯಜಿಸಿದ ತ್ಯಾಗ ಮೂರ್ತಿ ನಮ್ಮ ಜಾಮಿ.

ಅಷ್ಟೇ ಅಲ್ಲ, ಆಗಷ್ಟೇ ಪ್ರವರ್ಧಮಾನಕ್ಕೆ ಬಂದಿದ್ದ ಟಿ-20 ಕ್ರಿಕೆಟ್ ಯುವಕರ ಆಟ ಅಂತ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗೆ ಕಾರಣೀಕರ್ತರಾಗಿದ್ದು ಕೂಡ ರಾಹುಲ್ ದ್ರಾವಿಡ್. ಏಕದಿನ ವಿಶ್ವಕಪ್‍ನಲ್ಲಿ ಸೋತು ಸುಣ್ಣವಾಗಿದ್ದ ಟೀಮ್ ಇಂಡಿಯಾಗೆ ಭರವಸೆಯ ಬೆಳಕು ಮೂಡಿಸುವಂತೆ ಮಾಡಿದ್ದು ಕೂಡ ರಾಹುಲ್ ಅವರ ದೂರದೃಷ್ಟಿಯ ಯೋಚನೆ. ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿ ರಾಹುಲ್ ದ್ರಾವಿಡ್ ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತವಾಗಿದ್ದರು. ಹೀಗಾಗಿ 2011ರ ವಿಶ್ವಕಪ್ ಟೂರ್ನಿಯಲ್ಲೂ ರಾಹುಲ್‍ಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಆದ್ರೂ ರಾಹುಲ್ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ದೂರದಿಂದಲೇ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವನ್ನು ನೋಡಿ ಖುಷಿಪಟ್ಟಿದ್ದರು.

ಸಂಕಷ್ಟದ ಸನ್ನಿವೇಶದಲ್ಲಿ ಏಕಾಂಗಿಯಾಗಿ ನಿಂತು ಟೀಮ್ ಇಂಡಿಯಾದ ಮರ್ಯಾದೆ ಕಾಪಾಡಿದ್ದ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ ಸರಿಯಾಗಿ ನಡೆಸಿಕೊಳ್ಳಲಿಲ್ಲ. ವಿಶ್ವ ಕ್ರಿಕೆಟ್‍ನ ಮಹಾನ್ ಆಟಗಾರನಿಗೆ ಒಂದು ವಿದಾಯದ ಪಂದ್ಯವನ್ನು ಆಯೋಜನೆ ಮಾಡಲಿಲ್ಲ. ಸಚಿನ್, ಗಂಗೂಲಿ, ಅನಿಲ್ ಕುಂಬ್ಳೆಗೆ ಸಿಕ್ಕ ಗೌರವ ರಾಹುಲ್‍ಗೆ ಸಿಗಲೇ ಇಲ್ಲ. ಅಷ್ಟೇ ಯಾಕೆ, ಟೀಮ್ ಇಂಡಿಯಾ ಆಟಗಾರರು ಕೂಡ ಜಾಮಿಗೆ ಗೆಲುವಿನೊಂದಿಗೆ ವಿದಾಯ ಹೇಳಲಿಲ್ಲ. ಇಂಗ್ಲೆಂಡ್ ವಿರುದ್ಧ 2011ರಲ್ಲಿ ಟಿ-20 ಮತ್ತು ಏಕದಿನ ಪಂದ್ಯಗಳಿಗೆ ಸೋಲಿನೊಂದಿಗೆ ವಿದಾಯ ಹೇಳಿದ್ರು. ಹಾಗೇ ಆಸ್ಟ್ರೇಲಿಯಾ ವಿರುದ್ಧ 2012ರಲ್ಲಿ ಟೆಸ್ಟ್ ಕ್ರಿಕೆಟ್‍ಗೂ ಸೋಲಿನೊಂದಿಗೆ ತನ್ನ 16 ವರ್ಷಗಳ ಕ್ರಿಕೆಟ್ ಬದುಕಿಗೆ ಗುಡ್‍ಬೈ ಹೇಳಿದ್ರು.

ಚೆಂಡಿನಲ್ಲಿ ನೂಲಿನಂತೆ ಗೆರೆ ಎಳೆಯುವ ಕಲಾಕಾರ..!

ಅದೇನೇ ಇರಲಿ, ರಾಹುಲ್ ದ್ರಾವಿಡ್ ನೋಡೋಕೆ ಸೌಮ್ಯ ಸ್ವಭಾವದವರು. ಎಂದೂ ಕೂಡ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಒಂದು ವೇಳೆ ತಾಳ್ಮೆ ಕಳೆದುಕೊಂಡ್ರೆ ಮೈದಾನದಲ್ಲಿ ರೌದ್ರವತಾರದ ಇನ್ನೊಂದು ಮುಖವನ್ನು ನೋಡಿದ್ದೇವೆ. ಆದ್ರೆ ಇವತ್ತಿಗೂ ರಾಹುಲ್ ದ್ರಾವಿಡ್ ಅಂದ ತಕ್ಷಣ ಕಣ್ಣ ಮುಂದೆ ಬರೋದು ಅವರ ಕಲಾತ್ಮಕ ಶೈಲಿಯ ಬ್ಯಾಟಿಂಗ್ ವೈಖರಿ. ಅದು ಶೋಯಿಬ್ ಅಖ್ತರ್, ಬ್ರೇಟ್ ಲೀ ಸೇರಿದಂತೆ ಘಾತಕ ವೇಗಿಗಳ ಬೆಂಕಿ ಎಸೆತಗಳಿಗೆ ತಲೆ ತಗ್ಗಿಸಿ ತನ್ನ ಕಾಲ ಬುಡದಲ್ಲಿ ನಿಲ್ಲಿಸುವಂತಹ ಸಾಮಥ್ರ್ಯ ಇರೋ ಏಕೈಕ ವಿಶ್ವದ ಬ್ಯಾಟ್ಸ್‍ಮೆನ್ ಅಂದ್ರೆ ಅದು ರಾಹುಲ್ ದ್ರಾವಿಡ್. ಇನ್ನು, ದ್ರಾವಿಡ್ ಅವರ ಬ್ಯಾಟ್‍ನ ಸ್ಪರ್ಶಕ್ಕೆ ಚೆಂಡು ನೂಲಿನಲ್ಲಿ ಗೆರೆ ಎಳೆದಂತೆ ಬೌಂಡರಿ ಲೈನ್ ದಾಟುವುದನ್ನು ನೋಡುವುದೇ ಒಂದು ಚೆಂದ. ‘ನೋಡಲೆರಡು ಕಂಗಳು ಸಾಲದು’ ಅಂತರಲ್ಲ, ಹಾಗೇ ಮತ್ತೆ ಮತ್ತೆ ನೋಡಬೇಕು ಅನ್ನಿಸುವಂತಿರುವ ಕಲಾತ್ಮಕ ತಾಂತ್ರಕ ಪರಿಪೂರ್ಣತೆಯ ಬ್ಯಾಟಿಂಗ್ ವೈಖರಿ ನಮ್ಮ ರಾಹುಲ್ ಬಾಬಾರದ್ದು.

ಇದನ್ನೂ ಓದಿ: IND vs ZIM: ಜಿಂಬಾಬ್ವೆ ಟಿ20 ಸರಣಿಗೆ ಭಾರತ ತಂಡಲ್ಲಿ ದಿಢೀರ್​ ಬದಲಾವಣೆ ಮಾಡಿದ ಬಿಸಿಸಿಐ

ರಾಹುಲ್ ದ್ರಾವಿಡ್ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಶಿಸ್ತು ಮತ್ತು ಬದ್ಧತೆ ಯುವ ಕ್ರಿಕೆಟಿಗರಿಗೆ ದಾರಿದೀಪ. ಅದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅದರಲ್ಲಿ ಇದೊಂದು ಸಣ್ಣ ನಿದರ್ಶನ. ಒಂದು ಬಾರಿ ಕಾಲೇಜ್ ಕ್ಲಾಸ್ ರೂಂನಲ್ಲಿ ರಾಹುಲ್ ದ್ರಾವಿಡ್ ಕೈಗೆ ಗ್ಲೌಸ್ ಹಾಕೊಂಡು ಬರೆಯುತ್ತಿದ್ದರು. ದ್ರಾವಿಡ್ ಅವರ ವಿಚಿತ್ರ ವರ್ತನೆ ಗೆಳೆಯರಿಗೂ ಅಚ್ಚರಿಯನ್ನುಂಟು ಮಾಡಿತ್ತಂತೆ. ಆದ್ರೆ ಇದಕ್ಕೆ ಕಾರಣ ಕೇಳಿದಾಗ ಯಾರಿಗೂ ಕೂಡ ನಗುಬರಬಹುದು. ಯಾಕಂದ್ರೆ ಬ್ಯಾಟ್‍ನ ಗ್ರಿಪ್ ಪಡೆದುಕೊಳ್ಳಲು ದ್ರಾವಿಡ್ ಈ ತಂತ್ರವನ್ನು ಬಳಸುತ್ತಿದ್ದರಂತೆ. ಹೀಗೆ ದ್ರಾವಿಡ್ ಬಗ್ಗೆ ಹಲವಾರು ಸ್ವಾರಸ್ಯಕರವಾದ ಘಟನೆಗಳಿವೆ.

ಟೀಮ್ ಇಂಡಿಯಾದ ಮಾಜಿ ಆಟಗಾರ ಮಹಾ ಗುರು ಆಗಿದ್ದೇಗೆ..?

ಇನ್ನು, ವೃತ್ತಿಪರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತ್ರ ದ್ರಾವಿಡ್ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಮನಸು ಮಾಡಿದ್ರೆ ವೀಕ್ಷಕ ವಿವರಣೆಕಾರನಾಗಬಹುದಿತ್ತು.. ತನ್ನದೇ ಕ್ರಿಕೆಟ್ ಅಕಾಡೆಮಿ ಕೂಡ ಶುರು ಮಾಡಬಹುದಿತ್ತು. ಆದ್ರೆ ದ್ರಾವಿಡ್ ಉದ್ದೇಶವೇ ಬೇರೆ ಇತ್ತು. ದೇಶದ ಯುವ ಕ್ರಿಕೆಟಿಗರ ಪ್ರತಿಭೆಯನ್ನು ಬೆಳಕಿಗೆ ತರುವಂತಹ ದೂರದೃಷ್ಟಿಯನ್ನು ಹೊಂದಿದ್ದರು. ಬಲಿಷ್ಠ ಟೀಮ್ ಇಂಡಿಯಾ ಕಟ್ಟುವಂತಹ ಮಹೋನ್ನತ ಕಾರ್ಯಕ್ಕೆ ದ್ರಾವಿಡ್ ಮುಂದಾದ್ರು. ಅದಕ್ಕೆ ಪೂರಕವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿದೇರ್ಶಕನಾದ್ರು. ಬಳಿಕ 19 ವಯೋಮಿತಿ ತಂಡದ ಕೋಚ್ ಆಗಿ ವಿಶ್ವಕಪ್ ಕೂಡ ಗೆಲ್ಲಿಸಿಕೊಂಡು ಬಂದ್ರು. ಆದಾದ ನಂತ್ರ ಭಾರತ ಎ ತಂಡದ ಕೋಚ್ ಆಗಿ ಭವಿಷ್ಯದ ಟೀಮ್ ಇಂಡಿಯಾಗೆ ಫೌಂಡೇಶನ್ ಕಟ್ಟುವ ಕಾರ್ಯದಲ್ಲಿ ನಿರತರಾದ್ರು. ನಮ್ಮ ಕಣ್ಣ ಮುಂದೆ ಸಾಲು ಸಾಲಾಗಿ ಸಮರ್ಥ ಟೀಮ್ ಇಂಡಿಯಾದ ಯುವ ಪಡೆ ನಿಂತಿದೆ ಅಂದ್ರೆ ಅದಕ್ಕೆ ಮೂಲ ಕಾರಣ ಜಾಮಿ. ಯುವ ಆಟಗಾರರಿಗೆ ಶಿಸ್ತು, ಬದ್ಧತೆಯನ್ನು ಹೇಳಿಕೊಟ್ಟ ಹೆಡ್ ಮಾಸ್ಟರ್ ಕೂಡ ಹೌದು ರಾಹುಲ್.

ಸರಿಯಾಗಿ ಮೂರು ವರ್ಷಗಳ ಹಿಂದೆ ದ್ರಾವಿಡ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ನೇಮಕಗೊಂಡ್ರು. ಸುಮಾರು 9-10 ವರ್ಷಗಳ ನಂತ್ರ ಟೀಮ್ ಇಂಡಿಯಾದ ಗರ್ಭಗುಡಿಯೊಳಗೆ ಮಹಾಗುರುವಾಗಿ ಪ್ರವೇಶಿಸಿದ್ರು. ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮಾತ್ರ ದ್ರಾವಿಡ್ ಜೊತೆ ಆಡಿದ್ದರು. ಇನ್ನುಳಿದವರು ಅನುಭವ ಮಾಗದ ಎಳೆತನದ ಯುವ ಆಟಗಾರರು. ದ್ರಾವಿಡ್ ಎಂಟ್ರಿಯಾಗುತ್ತಿದ್ದಂತೆ ತಂಡದಲ್ಲಿ ಕೆಲವೊಂದು ಬದಲಾವಣೆಗಳು ಕೂಡ ಆಗಿದ್ದವು. ರೋಹಿತ್ ಶರ್ಮಾ ಹೆಗಲಿಗೆ ನಾಯಕತ್ವವೂ ಒಲಿದು ಬಂತು. ಹಾಗೇ ನಾಯಕನ ಜೊತೆ ಸೇರಿಕೊಂಡು ಮೂರು ವರ್ಷಗಳ ಪ್ಲ್ಯಾನ್ ಕೂಡ ರೆಡಿಯಾಗಿತ್ತು. ‘ಮಿಷನ್ ಐಸಿಸಿ ಟ್ರೋಫಿ’ ಗೆಲ್ಲಲು ಸೈನ್ಯ ಕಟ್ಟುವ ಕೆಲಸಕ್ಕೆ ಮುಂದಾದ್ರು. ಪ್ರತಿ ಸರಣಿಗಳಲ್ಲೂ ಪ್ರಯೋಗ ಮಾಡಿದ್ರು. ಯುವ ಆಟಗಾರರಿಗೆ ಅವಕಾಶಗಳನ್ನು ನೀಡಿದ್ರು. ಪ್ರತಿ ಆಟಗಾರನ ಸಾಮಥ್ರ್ಯವನ್ನು ಅರಿತುಕೊಂಡ್ರು. ಆದ್ರೆ 2023ರ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್‍ನಲ್ಲಿ ಸೋತಾಗ ಮಂಕಾಗಿದ್ದು ನಿಜ. ಆದ್ರೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆಟಗಾರರ ಮನಸ್ಥಿತಿಯನ್ನು ಅರಿತುಕೊಂಡು ಮತ್ತೆ ಪ್ರೇರಣೆ ನೀಡಿದ್ದು ಕೂಡ ಮಹಾ ಗುರು ರಾಹುಲ್ ದ್ರಾವಿಡ್.

ಮಿಷನ್ ಟಿ-20 ವಿಶ್ವಕಪ್ -2024 ಕಂಪ್ಲೀಟ್…

ಹಾಗೇ ನೋಡಿದ್ರೆ 2024ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆದ್ದೇ ಗೆಲ್ಲುತ್ತೆ ಅನ್ನೋ ನಂಬಿಕೆ ಬಹುತೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇರಲಿಲ್ಲ. ಯಾಕಂದ್ರೆ 13 ವರ್ಷಗಳಿಂದ ಟೀಮ್ ಇಂಡಿಯಾ ಆಟಗಾರರು ಸತತವಾಗಿ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಹೀಗಾಗಿ ಫೈನಲ್‍ಗೆ ಬರಬಹುದು ಎಂಬ ಲೆಕ್ಕಾಚಾರವಂತೂ ಇದ್ದೇ ಇತ್ತು. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ದ್ರಾವಿಡ್ ಶಿಷ್ಯಂದಿರು ನಿರೀಕ್ಷಿತ ಪ್ರದರ್ಶನವನ್ನೇ ನೀಡಿದ್ರು. ಟೀಮ್ ಇಂಡಿಯಾ ಆಡಿರುವ ಎಂಟು ಪಂದ್ಯಗಳ ಗೆಲುವನ್ನು ನೋಡಿದಾಗ ದಶಕಗಳ ಹಿಂದಿನ ಸ್ಟೀವ್ ವಾ, ಪಾಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡವನ್ನು ನೆನಪಿಸುವಂತಿತ್ತು. ಯಾಕಂದ್ರೆ, ದ್ರಾವಿಡ್ ಶಿಷ್ಯಂದಿರು ಎಲ್ಲೂ ಕೂಡ ‘ಶೃತಿ’ ತಪ್ಪಲಿಲ್ಲ. ಬ್ಯಾಟರ್‍ಗಳು ‘ತಾಳ‘ ತಪ್ಪಿದಾಗ ಬೌಲರ್‍ಗಳು ‘ವೀಣೆ’ ನುಡಿಸುವಂತೆ ಬೌಲಿಂಗ್ ಮಾಡುತ್ತಾ ಗೆಲುವಿನ ದಡ ಸೇರಿಸುತ್ತಿದ್ದರು. ಹಾಗೇ ಬೌಲರ್‍ಗಳು ‘ಲಯ‘ ತಪ್ಪಿದಾಗ ಬ್ಯಾಟರ್‍ಗಳು ‘ಡ್ರಮ್ಸ್‘ ಬಾರಿಸುವಂತೆ ಅಂಗಣದಲ್ಲಿ ದರ್ಬಾರು ಮಾಡಿ ಅಭಿಮಾನಿಗಳಿಗೆ ‘ರಸಮಂಜರಿ’ಯ ಮನರಂಜನೆಯನ್ನು ನೀಡುತ್ತಿದ್ದರು. ಇತ್ತ ಡಕೌಟ್‍ನಲ್ಲಿ ನಿರ್ದೇಶಕ/ ಮಹಾ ಗುರು ರಾಹುಲ್ ದ್ರಾವಿಡ್ ಆಚಾರ್ಯನಂತೆ ಶಿಷ್ಯಂದಿರ ಸಾಧನೆಯನ್ನು ಮನದೊಳಗೆ ಖುಷಿಪಟ್ಟು ಹೆಮ್ಮೆಯಿಂದ ಬೀಗುತ್ತಿದ್ದರು. ಅಷ್ಟೇ ಅಲ್ಲ, ರೋಹಿತ್ ಹುಡುಗರು ಟ್ರೋಫಿ ಸ್ವೀಕರಿಸುವಾಗ ತೆರೆಮರೆಯಲ್ಲಿ ನೋಡುತ್ತಿದ್ದ ದ್ರಾವಿಡ್ ಮುಖದಲ್ಲಿ ಮಿಷನ್ ಟಿ-20 ವಿಶ್ವಕಪ್ ಕಂಪ್ಲೀಟ್ ಮಾಡಿದ ಸಾರ್ಥಕತೆ ಎದ್ದುಕಾಣುತ್ತಿತ್ತು.

ಮತ್ತೆ ಕ್ರಿಕೆಟ್ ಬುದ್ಧ ನಕ್ಕಾಗ… ನಕ್ಕು ನಲಿದಾಡಿದಾಗ…ನಾ ಸೋತು ಹೋದೆ..!

ಹೌದು, ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಸೋತಾಗ ಕಣ್ಣೀರು ಹಾಕಿದ್ದಾರೆ. ವೇದನೆ ಅನುಭವಿಸಿದ್ದಾರೆ. ಹಾಗೇ, ಟೀಮ್ ಇಂಡಿಯಾ ಗೆದ್ದಾಗಲೂ ಸಂಭ್ರಮಪಟ್ಟಿದ್ದಾರೆ. ಆದ್ರೆ ಗೆದ್ದಾಗ ಕಣ್ಣೀರು ಹಾಕಿದ್ದು ಇದೇ ಮೊದಲು.. ಜೊತೆಗೆ ಈ ಪರಿ ಸಂಭ್ರಮಪಟ್ಟಿದ್ದು ಇದೇ ಮೊದಲ ಸಲ. ಈ ರೀತಿ ದ್ರಾವಿಡ್ ಯಾವತ್ತೂ ಸಂಭ್ರಮಪಟ್ಟಿರುವುದನ್ನು ಯಾರು ಕೂಡ ನೋಡಿರಲಿಲ್ಲ. ಯಾಕಂದ್ರೆ ತನಗೆ ಗಗನ ಕುಸುಮವಾಗಿದ್ದ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ತನ್ನ ಶಿಷ್ಯಂದಿರ ಮೂಲಕ ಪಡೆದುಕೊಂಡು ತನ್ನ ಕ್ರಿಕೆಟ್ ಬದುಕನ್ನು ಸಾರ್ಥಕವನ್ನಾಗಿಸಿಕೊಂಡ ಸಂತೃಪ್ತಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ರೋಹಿತ್, ವಿರಾಟ್, ಜಡೇಜಾ ಅವರ ಕಣ್ಣೇದುರೇ ಸೋಲಿನೊಂದಿಗೆ ವಿದಾಯ ಹೇಳಿದ್ದ ದ್ರಾವಿಡ್‍ಗೆ ವಿಶ್ವಕಪ್ ಗೆಲ್ಲುವ ಮೂಲಕ ಮಹಾ ಗುರುವಿಗೆ ಅರ್ಥಪೂರ್ಣ ವಿದಾಯ ಹೇಳುವಂತೆ ಮಾಡಿದವರು ಇದೇ ಕೋಹ್ಲಿ, ಶರ್ಮಾ & ಜಡೇಜಾ.. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಹುಡುಗರು ದ್ರಾವಿಡ್‍ಗೆ ಟಿ-20 ವಿಶ್ವಕಪ್ ಟ್ರೋಫಿಯನ್ನೇ ಗುರು ಕಾಣಿಕೆಯನ್ನಾಗಿ ನೀಡಿದ್ರು. ಅಲ್ಲದೆ ವಿರಾಟ್, ರೋಹಿತ್ ಸೇರಿದಂತೆ ಟೀಮ್ ಇಂಡಿಯಾ ಹುಡುಗರು ಗುರು ಎಂಬುದನ್ನು ಮರೆತು ದ್ರಾವಿಡ್ ಅವರನ್ನು ಮಗುವಿನಂತೆ ಮೇಲಕ್ಕೆತ್ತಿ ಕೊಂಡಾಟ ಮಾಡಿ ಸಂಭ್ರಮಿಸಿದ ಕ್ಷಣವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗೇ ರೋಹಿತ್ ಮತ್ತು ವಿರಾಟ್‍ನನ್ನು ದ್ರಾವಿಡ್ ತಬ್ಬಿಕೊಂಡು ಮುದ್ದಾಡುತ್ತಿದ್ದ ದೃಶ್ಯವನ್ನು ಯಶಸ್ವಿ ಜೈಸ್ವಾಲ್ ಪುಟ್ಟ ಮಗುವಿನಂತೆ ನೋಡುತ್ತಿದ್ದ ದೃಶ್ಯವಂತೂ ಕಣ್ಣಿಗೆ ಕಟ್ಟುವಂತಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ವಿಶ್ವಕಪ್ ಟ್ರೋಫಿಯನ್ನು ದ್ರಾವಿಡ್ ಕೈಗಿಟ್ಟಾಗ ಭಾವೋದ್ರಿಕ್ತರಾಗಿ ಒಂದು ಕ್ಷಣ ಸುಮ್ಮನಿದ್ದ ದ್ರಾವಿಡ್, ಏಕಾಏಕಿ ಟ್ರೋಪಿಯನ್ನು ಮೇಲಕ್ಕೆತ್ತಿ ಸಂಭ್ರಮಿಸಿದ ರೀತಿಯನ್ನು ವರ್ಣಿಸಲು ಅಸಾಧ್ಯ. ಟ್ರೋಫಿಯೊಂದಿಗೆ ಮನ ತಣಿಸುವಷ್ಟು ಜಾಮಿ ಸಂಭ್ರಮಿಸಿ, ಕುಣಿದಾಡಿದ್ರು. ಎರಡು ದಶಕಗಳ ನೋವುಗಳನ್ನು ಕೇವಲ ಎರಡು ನಿಮಿಷಗಳಲ್ಲಿ ಮರೆಮಾಚುವಂತೆ ಮಾಡಿ ನಾಚಿ ನೀರಾದ್ರು.

ಒಟ್ಟಿನಲ್ಲಿ ಐಸಿಸಿ ಟಿ-20 ವಿಶ್ವಕಪ್ ಟ್ರೋಫಿ ದ್ರಾವಿಡ್ ಕೈಗೆ ಸ್ಪರ್ಶಿಸುತ್ತಿದ್ದಂತೆ ಎಲ್ಲ ನೋವು , ಬೇಸರ, ವೇದನೆ ಮಾಯವಾಗಿ ಅಲ್ಲಿ ತುಂಬಿಕೊಂಡಿದ್ದು ಬರೀ ಸಂಭ್ರಮ..ಸಡಗರ.. ಭಾವೋದ್ವೇಗ, ಆನಂದಭಾಷ್ಟ.. ಆ ಭಾವುಕ ದೃಶ್ಯಗಳನ್ನು ನೋಡಿದ ಕೋಟ್ಯಾನುಕೋಟಿ ಅಭಿಮಾನಿಗಳ ಹೃನ್ಮನ ತುಂಬಿ ಬಂದಿದೆ. ನನ್ನಲ್ಲೂ ಅರಿವಿಲ್ಲದೇ ಭಾವೋದ್ವೇಗದಿಂದ ಕಣ್ಣೀರಧಾರೆ.. ಅರೇ ಕ್ಷಣ ನನ್ನನ್ನೇ ಮರೆತಂಗೆ ಶೂನ್ಯ ಭಾವ… ಕೊನೆಗೂ ನಾನು ದ್ರಾವಿಡ್‍ನ ಅಪ್ಪಟ ಅಭಿಮಾನಿಯಾದೆ.. ಸಲಾಂ ಜಾಮಿ ಭಾಯ್!

Continue Reading

ಕ್ರೀಡೆ

IND vs ZIM: ಜಿಂಬಾಬ್ವೆ ಟಿ20 ಸರಣಿಗೆ ಭಾರತ ತಂಡಲ್ಲಿ ದಿಢೀರ್​ ಬದಲಾವಣೆ ಮಾಡಿದ ಬಿಸಿಸಿಐ

IND vs ZIM: ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಬದಲಿಗೆ ಸಾಯಿ ಸುದರ್ಶನ್(Sai Sudharsan), ಜಿತೇಶ್ ಶರ್ಮಾ(Jitesh Sharma) ಮತ್ತು ಹರ್ಷಿತ್ ರಾಣಾ(Harshit Rana) ಅವರನ್ನು ಮೊದಲ ಎರಡು ಪಂದ್ಯಗಳಿಗಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

VISTARANEWS.COM


on

IND vs ZIM
Koo

ಮುಂಬಯಿ: ಜುಲೈ 6 ರಿಂದ ಆರಂಭಗೊಳ್ಳಲಿರುವ ಜಿಂಬಾಬ್ವೆ (IND vs ZIM) ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಈಗಾಗಲೇ ಭಾರತ ತಂಡ ಪ್ರಕಟಗೊಂಡಿದೆ. ಶುಭಮನ್​ ಗಿಲ್​ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಅಂತಿಮ ಕ್ಷಣದಲ್ಲಿ ಬಿಸಿಸಿಐ ತಂಡದಲ್ಲಿ ಮೂರು ಬದಲಾವಣೆ ಮಾಡಿದೆ.

ಚಂಡಮಾರುತದಿಂದ ಬಾರ್ಬಡೋಸ್‌ನಲ್ಲಿ ಸಿಲುಕಿರುವ ಟಿ20 ವಿಶ್ವಕಪ್​ ತಂಡದ ಭಾಗವಾಗಿದ್ದ, ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಬದಲಿಗೆ ಸಾಯಿ ಸುದರ್ಶನ್(Sai Sudharsan), ಜಿತೇಶ್ ಶರ್ಮಾ(Jitesh Sharma) ಮತ್ತು ಹರ್ಷಿತ್ ರಾಣಾ(Harshit Rana) ಅವರನ್ನು ಮೊದಲ ಎರಡು ಪಂದ್ಯಗಳಿಗಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಪರಿಷ್ಕೃತ ತಂಡವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಪ್ರಕಟಿಸಿದೆ.

ಹರ್ಷಿತ್ ರಾಣಾ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಮೊನಚಾದ ಬೌಲಿಂಗ್​ ಮೂಲಕ ಒಟ್ಟು 19 ವಿಕೆಟ್​ ಕಿತ್ತು ಮಿಂಚಿದ್ದರು. ಮಾಯಾಂಕ್​ ಅಗರ್ವಾಲ್​ ವಿಕೆಟ್​ ಕಿತ್ತು ದುರ್ವರ್ತನೆ ತೋರಿದ ಕಾರಣಕ್ಕೆ ದಂಡ ಮತ್ತು ಒಂದು ಪಂದ್ಯದ ನಿಷೇಧ ಶಿಕ್ಷೆ ಕೂಡ ಎದುರಿಸಿದ್ದರು.

ಮೊದಲ 2 ಪಂದ್ಯಕ್ಕೆ ಪರಿಷ್ಕೃತ ತಂಡ


ಶುಭಮನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಧ್ರುವ್ ಜುರೆಲ್ (ವೀಕಿ), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಜಿತೇಶ್ ಶರ್ಮಾ (ವೀಕಿ) , ಹರ್ಷಿತ್ ರಾಣಾ.

ಇದನ್ನೂ ಓದಿ Team India : ಜಿಂಬಾಬ್ವೆ ಪ್ರವಾಸಕ್ಕೆ ಟೀಮ್ ಇಂಡಿಯಾ ಪ್ರಕಟ, ಶುಭ್​ಮನ್ ಗಿಲ್​ಗೆ ನಾಯಕತ್ವ

5 ಪಂದ್ಯಗಳ ಟಿ20 ಸರಣಿ ಇದಾಗಿದ್ದು, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಿಯಾನ್ ಪರಾಗ್ 2024 ರ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಫಲಿತಾಂಶವಾಗಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲಿ ಪಂದ್ಯಗಳನ್ನಾಡಲಿದ್ದಾರೆ. ಪರಾಗ್ ಅಸ್ಸಾಂ ನಿಂದ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಮೊದಲ ಕ್ರೀಡಾಪಟುವಾಗಿದ್ದಾರೆ.

ವೇಳಾಪಟ್ಟಿ: ಭಾರತದ ಜಿಂಬಾಬ್ವೆ ಪ್ರವಾಸ

1ನೇ ಟಿ20: ಜುಲೈ 6, ಹರಾರೆ, ಸಂಜೆ 4.30

2ನೇ ಟಿ20: ಜುಲೈ 7, ಹರಾರೆ, ಸಂಜೆ 4.30

3ನೇ T20: ಜುಲೈ 10, ಹರಾರೆ, ಸಂಜೆ 4.30

4ನೇ T20: ಜುಲೈ 13, ಹರಾರೆ, ಸಂಜೆ 4.30

5 ನೇ T20: ಜುಲೈ 14, ಹರಾರೆ, ಸಂಜೆ 4.30

Continue Reading
Advertisement
Tamanna Bhatia
Latest5 mins ago

Tamanna Bhatia: ‘ಜೀ ಕರ್ದಾ’ದಲ್ಲಿ ತಮನ್ನಾ ಭಾಟಿಯಾ ಪೂರ್ತಿ ಟಾಪ್‌ಲೆಸ್‌! ವಿಡಿಯೊ ಇದೆ

bengaluru student Vaishnavi M who won the prestigious award from IIT Bombay
ಬೆಂಗಳೂರು15 mins ago

Bengaluru News: ಬೆಂಗಳೂರಿನ ವಿದ್ಯಾರ್ಥಿನಿಗೆ ಐಐಟಿ ಬಾಂಬೆಯ ಪ್ರತಿಷ್ಠಿತ ಪ್ರಶಸ್ತಿ

IPL 2025
ಪ್ರಮುಖ ಸುದ್ದಿ21 mins ago

IPL 2025 : ಐಪಿಎಲ್​ ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ

Dharma Keerthiraj starrer production No 1 movie Muhurta
ಕರ್ನಾಟಕ23 mins ago

Kannada New Movie: ಗೋಪಿನಾಥ ಬೆಟ್ಟದಲ್ಲಿ ನಡೆದ ಧರ್ಮ ಕೀರ್ತಿರಾಜ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರದ ಮುಹೂರ್ತ

Anjanadri Temple Hundi Count
ಕರ್ನಾಟಕ26 mins ago

Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು

Pancreatitis
ಆರೋಗ್ಯ28 mins ago

Pancreatitis: ಏನಿದು ಪ್ಯಾಂಕ್ರಿಯಾಟೈಟಿಸ್‌ನಿಂದ ಉಂಟಾಗುವ ಉರಿಯೂತ? ಇದಕ್ಕೇನು ಪರಿಹಾರ?

MLA Shivaram Hebbar spoke in Taluk level janaspandana programme yallapur
ಉತ್ತರ ಕನ್ನಡ30 mins ago

Uttara Kannada News: ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಶಿವರಾಮ ಹೆಬ್ಬಾರ್ ಸೂಚನೆ

Advocate G Devarajegowda
ಕರ್ನಾಟಕ31 mins ago

Advocate G Devarajegowda: ಅತ್ಯಾಚಾರ ಕೇಸ್‌; ಜೈಲಿನಿಂದ ವಕೀಲ ದೇವರಾಜೇಗೌಡ ರಿಲೀಸ್‌

Uttara Kannada News Meeting by DC Gangubai Manakar in Karwar
ಉತ್ತರ ಕನ್ನಡ33 mins ago

Uttara Kannada News: ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಕಾಮಗಾರಿ ಚುರುಕುಗೊಳಿಸಲು ಡಿಸಿ ಸೂಚನೆ

Minister Lakshmi Hebbalkar has submitted various proposals to the Union Minister seeking grant for the strengthening of the department
ಕರ್ನಾಟಕ35 mins ago

Lakshmi Hebbalkar: ಅಂಗನವಾಡಿ ಬಲವರ್ಧನೆಗೆ ಕೇಂದ್ರದ ನೆರವು ಕೋರಿದ ಲಕ್ಷ್ಮೀ ಹೆಬ್ಬಾಳಕರ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌