Assault Case: ಗೃಹ ಸಚಿವರ ಕ್ಷೇತ್ರದಲ್ಲಿ ಭೂಸೇನೆ ಯೋಧನ ಮೇಲೆಯೇ ಮಾರಣಾಂತಿಕ ಹಲ್ಲೆ; ಇಲ್ಲಿ ಕೇಳೋರೇ ಇಲ್ವಾ? - Vistara News

ಕ್ರೈಂ

Assault Case: ಗೃಹ ಸಚಿವರ ಕ್ಷೇತ್ರದಲ್ಲಿ ಭೂಸೇನೆ ಯೋಧನ ಮೇಲೆಯೇ ಮಾರಣಾಂತಿಕ ಹಲ್ಲೆ; ಇಲ್ಲಿ ಕೇಳೋರೇ ಇಲ್ವಾ?

Assault Case: ಬೈರೇನಹಳ್ಳಿ ಕ್ರಾಸ್ ಬಳಿ ದಾರಿಗೆ ಅಡ್ಡಲಾಗಿ ನಿಂತವರನ್ನು ದಾರಿ ಬಿಡಿ ಎಂದು ಯೋಧ ಗೋವಿಂದರಾಜು (30) ಕೇಳಿದ್ದರು. ಇದಕ್ಕೆ ಕೆರಳಿದ 5 ಜನ ಪುಂಡರ ಗುಂಪು ಗೋವಿಂದರಾಜು ಬಳಿ ಜಗಳ ತೆಗೆದು ಹಲ್ಲೆ ನಡೆಸಿದೆ. ಕುಡಿದ ಮತ್ತಿನಲ್ಲಿದ್ದ ಪುಂಡರು ಮದ್ಯದ ಬಾಟಲಿಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

VISTARANEWS.COM


on

assault case koratagere
ಆರೋಪಿಗಳಾದ ಪುನೀತ್‌, ಭರತ್
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರು: ಗೃಹ ಸಚಿವ ಜಿ. ಪರಮೇಶ್ವರ್‌ (Home Minister G Parameshwara) ಅವರ ಸ್ವಕ್ಷೇತ್ರ ಕೊರಟಗೆರೆಯಲ್ಲಿ (Koratagere) ಪುಂಡರ ಹಾವಳಿ (hooliganism) ಮಿತಿಮೀರಿದ್ದು, ದಾರಿ ಬಿಡಿ ಎಂದು ಕೇಳಿದ್ದಕ್ಕೆ ಸೈನಿಕನ (Soldier) ಮೇಲೆಯೇ ಮಾರಣಾಂತಿಕ ಹಲ್ಲೆ (Assault case) ನಡೆಸಲಾಗಿದೆ. ಸದ್ಯ ಹಲ್ಲೆಗೀಡಾಗಿರುವ ಯೋಧ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ.

ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ಬೈರೇನಹಳ್ಳಿ ಕ್ರಾಸ್ ಬಳಿ ದಾರಿಗೆ ಅಡ್ಡಲಾಗಿ ನಿಂತವರನ್ನು ದಾರಿ ಬಿಡಿ ಎಂದು ಯೋಧ ಗೋವಿಂದರಾಜು (30) ಕೇಳಿದ್ದರು. ಇದಕ್ಕೆ ಕೆರಳಿದ 5 ಜನ ಪುಂಡರ ಗುಂಪು ಗೋವಿಂದರಾಜು ಬಳಿ ಜಗಳ ತೆಗೆದು ಹಲ್ಲೆ ನಡೆಸಿದೆ. ಕುಡಿದ ಮತ್ತಿನಲ್ಲಿದ್ದ ಪುಂಡರು ಮದ್ಯದ ಬಾಟಲಿಗಳಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಕೋರರನ್ನು ಕೊರಟಗೆರೆ ತಾಲ್ಲೂಕಿನ ಅರಸಾಪುರದ ಭರತ್ (29), ಮಧುಗಿರಿ ತಾಲ್ಲೂಕಿನ ಕೊಡಗದಾಲದ ಪುನೀತ (32), ಹುಣಸವಾಡಿಯ ಗೌರಿಶಂಕರ (32), ಶಿವಾ (32), ಕೊಡಿಗೇನಹಳ್ಳಿ ಸಮೀಪದ ಭಟ್ಟಗೆರೆಯ ದಿಲೀಪ್ (35) ಎಂದು ಗುರುತಿಸಲಾಗಿದೆ. ಸದ್ಯ ಐವರ ವಿರುದ್ಧ ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುನೀತ ಹಾಗೂ ಭರತ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಗೋವಿಂದರಾಜು ಭಾರತೀಯ ಭೂಸೇನೆ ಸಿಪಾಯಿಯಾಗಿ ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಜೆಯ ಮೇಲೆ ತಮ್ಮ ಊರು ರಾಯವಾರಕ್ಕೆ ಬಂದಿದ್ದ ಗೋವಿಂದರಾಜು, ಕೆಲಸದ ನಿಮಿತ್ತ ಬೇರೇನಹಳ್ಳಿ ಕ್ರಾಸ್‌ಗೆ ಹೋಗಿದ್ದಾಗ ಘಟನೆ ನಡೆದಿದೆ. ಇತ್ತೀಚೆಗೆ ಭೈರೇನಹಳ್ಳಿ ಕ್ರಾಸ್ ಹಲವು ಕ್ರೈಂಗಳಿಗೆ ಸಾಕ್ಷಿಯಾಗಿದೆ. ಈ ಮುಂಚೆ ಕಾರ್‌ ಹಾರ್ನ್ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ‌ ಇರಿಯಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಗೃಹ ಸಚಿವ ಪರಮೇಶ್ವರ್ ಕಾರಿನ ಮೇಲೆ ಕಲ್ಲು ತೂರಲಾಗಿತ್ತು. ಈ ಸ್ಥಳದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ರೂ ಪೊಲೀಸರು ತಲೆ‌ ಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಪಾದಿಸಿದ್ದಾರೆ.

ಸೇತುವೆಯಿಂದ ಪಲ್ಟಿ ಹೊಡೆದ ಕಾರು, ತಿರುಪತಿಗೆ ಹೋಗುತ್ತಿದ್ದ 4 ಮಂದಿ ದುರ್ಮರಣ

ಹಾವೇರಿ: ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಭೀಕರ ಆಪಘಾತವೊಂದು ಸಂಭವಿಸಿದ್ದು, ತಿರುಪತಿಗೆ ಯಾತ್ರಾರ್ಥಿಗಳಾಗಿ ಹೊರಟಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 6 ಜನರಿಗೆ ಗಂಭೀರ ಗಾಯಗಳಾಗಿವೆ.

ಹಾವೇರಿಯಿಂದ ತಿರುಪತಿ ದೇವರ ದರ್ಶನಕ್ಕೆ ಕಾರಿನಲ್ಲಿ ಹೊರಟಿದ್ದ ಕುಟುಂಬ ಈ ಭೀಕರ ಅಪಘಾತಕ್ಕೀಡಾಗಿದೆ. ರಾಣೆಬೇನ್ನೂರಿನ ಹಲಗೇರಿ ಬೈಪಾಸ್ ಬಳಿ ವಾಹನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಪಲ್ಟಿ ಹೊಡೆದಿದೆ. ಎನ್ಎಚ್ 4 ಪಿಬಿ ರಸ್ತೆಯಿಂದ ಹಾರಿ ಕೆಳಗೆ ಸರ್ವಿಸ್ ರಸ್ತೆಗೆ ಬಿದ್ದಿದೆ.

ಮೃತಪಟ್ಟವರನ್ನು ಸುರೇಶ ವೀರಪ್ಪ ಜಾಡಿ (45), ಐಶ್ವರ್ಯ ಈರಪ್ಪ ಬಾರ್ಕಿ (22), ಚೇತನಾ ಪ್ರಭುರಾಜ ಸಮಗಂಡಿ (7), ಪವಿತ್ರಾ ಪ್ರಭುರಾಜ ಸಮಗಂಡಿ‌ (28) ಎಂದು ಗುರುತಿಸಲಾಗಿದೆ. ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಶ ಹೊನ್ನಪ್ಪ ಬಾರ್ಕಿ, ಹೊ‌ನ್ನಪ್ಪ ನೀಲಪ್ಪ ಬಾರ್ಕಿ, ಪ್ರಭುರಾಜ ಈರಪ್ಪ ಸಮಗಂಡಿ, ಗೀತಾ ಹೊನ್ನಪ್ಪ ಬಾರ್ಕಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: Road Accident : ಬೈಕ್‌ ಸ್ಕಿಡ್‌ ಆಗಿ ಕಂದಕಕ್ಕೆ ಬಿದ್ದ ಸವಾರ ಮೃತ್ಯು; ಕೆರೆಗೆ ಕಾರು ಹಾರಿಸಿ ಪ್ರಾಣಬಿಟ್ಟ ಚಾಲಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Assault Case: ಕರ್ನಾಟಕದ ಪ್ರವಾಸಿಗರಿಗೆ ಬಾಸುಂಡೆ ಬರುವಂತೆ ಥಳಿಸಿದ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ; ಹಣ ಸುಲಿಗೆ

ಸೂರಲ್ ಜಲಪಾತದ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಣ ವಸೂಲಿ ಆರೋಪ ಮೊದಲಿನಿಂದಲೂ ಇದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರದ ಐವರು ಯುವಕರ ತಂಡವನ್ನು ಇವರು ತಡೆದು ಥಳಿಸಿದ್ದಾರೆ. ಬೆನ್ನು, ಕಾಲು ಕೈಗೆ ಬಾಸುಂಡೆ ಬರುವ ಹಾಗೆ ಥಳಿಸಿ (Assault Case) ವಿಕೃತಿ ತೋರಿದ್ದಾರೆ.

VISTARANEWS.COM


on

sural falls assault case
Koo

ಬೆಳಗಾವಿ: ಕರ್ನಾಟಕದ ಪ್ರವಾಸಿಗರನ್ನು (Karnataka Tourists) ಗೋವಾದ ಅರಣ್ಯ ಇಲಾಖೆ (Goa Forest department) ಸಿಬ್ಬಂದಿ ಮನಬಂದಂತೆ ಥಳಿಸಿದ (Assault Case) ಘಟನೆ ಗೋವಾ ಗಡಿಯಲ್ಲಿರುವ ಸೂರಲ್ ಜಲಪಾತದ (Sural Falls) ಬಳಿ ನಡೆದಿದೆ. ಜಲಪಾತ ವೀಕ್ಷಣೆಗೆ ಹೋಗಿದ್ದ ಕನ್ನಡದ ಪ್ರವಾಸಿಗರಿಗೆ ಮೈಮೇಲೆ ಬಾಸುಂಡೆ ಬರುವ ಹಾಗೆ ಥಳಿಸಿ, ಅವರಿಂದ ಹಣ ಕಿತ್ತುಕೊಂಡು ವಿಕೃತಿ ಮೆರೆದಿದ್ದಾರೆ.

ಬೆಳಗಾವಿ ಮತ್ತು ಗೋವಾ ಗಡಿಯಲ್ಲಿರುವ ಖಾನಾಪೂರ ತಾಲೂಕಿನ ಕಣಕುಂಬಿ ಬಳಿಯ ಸೂರಲ್ ಜಲಪಾತ ಬಳಿ ಇದು ನಡೆದಿದೆ. ಮಳೆಗಾಲ ಆರಂಭ ಆಗುತ್ತಿದ್ದಂತೆ ಕರ್ನಾಟಕದಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ತೆರಳುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡುವುದಲ್ಲದೆ, ಪ್ರಶ್ನಿಸಿದರೆ ಮೈಮೇಲೆ ಏರಿ ಬರುತ್ತಾರೆ.

ನಿರಂತರವಾಗಿ ಪ್ರವಾಸಿಗರಿಂದ ಒಂದಿಲ್ಲೊಂದು ಕಾರಣ ಹೇಳಿ ಹಣ ಕಿತ್ತುಕೊಳ್ಳುತ್ತಿರುವ ಆರೋಪ ಇವರ ಮೇಲಿದೆ. ಸೂರಲ್ ಜಲಪಾತದ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳಿಂದ ಹಣ ವಸೂಲಿ ಆರೋಪ ಮೊದಲಿನಿಂದಲೂ ಇದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರದ ಐವರು ಯುವಕರ ತಂಡವನ್ನು ಇವರು ತಡೆದು ಥಳಿಸಿದ್ದಾರೆ. ಬೆನ್ನು, ಕಾಲು ಕೈಗೆ ಬಾಸುಂಡೆ ಬರುವ ಹಾಗೆ ಥಳಿಸಿ ವಿಕೃತಿ ತೋರಿದ್ದಾರೆ.

ಹಲ್ಲೆ ಮಾಡಿದ್ದಲ್ಲದೇ ಪರ್ಸ್‌ನಲ್ಲಿದ್ದ ಹಣವನ್ನೂ ಕಿತ್ತುಕೊಂಡಿದ್ದಾರೆ. 1 ಸಾವಿರ ಫೋನ್ ಪೇ ಮಾಡಿಸಿಕೊಂಡಿದ್ದು ಸೇರಿ ಒಟ್ಟು 9 ಸಾವಿರ ರೂಪಾಯಿ ಹಣ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೌರ್ಜನ್ಯವನ್ನು ಸಾವಿರಾರು ಪ್ರವಾಸಿಗರು ಅನುಭವಿಸುತ್ತಿದ್ದು, ಯಾರೂ ದೂರು ನೀಡುತ್ತಿಲ್ಲ ಎಂದು ಹಲ್ಲೆಗೊಳಗಾದವರು ಅಲವತ್ತುಕೊಂಡಿದ್ದಾರೆ. ಗೋವಾ ಅರಣ್ಯ ಇಲಾಖೆಯ ಅಧಿಕಾರಿಗಳು ಇವರ ದೂರನ್ನು ಕೇಳಿಸಿಕೊಂಡಿಲ್ಲ.

ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಮನೆಯಲ್ಲಿ ಬೆಂಕಿ ಆಕಸ್ಮಿಕ

ಕಾರವಾರ: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ (Anantkumar Hegde) ಮನೆಯಲ್ಲಿ ಬೆಂಕಿ ಆಕಸ್ಮಿಕ (Fire mishop) ಸಂಭವಿಸಿದೆ. ಇದು ಶಾರ್ಟ್‌ ಸರ್ಕ್ಯೂಟ್‌ನಿಂದ (Short Circuit) ಆಗಿದೆ ಎಂದು ತಿಳಿದುಬಂದಿದೆ.

ಶಿರಸಿಯ ಕೆಎಚ್‌ಬಿ ಕಾಲೋನಿಯಲ್ಲಿ ಇರುವ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಮೇಲ್ಭಾಗದ ಜಿಮ್ ಮಾಡುವ ಕೊಠಡಿಯಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಸೃಷ್ಟಿಯಾದ ಪರಿಣಾಮ ಜಿಮ್ ಮಾಡುವ ಯಂತ್ರಗಳಿಗೆ ಅಲ್ಪ ಹಾನಿಯಾಗಿದೆ. ಇದನ್ನು ಹೊರತುಪಡಿಸಿದರೆ ಹೊಗೆಯಿಂದ ಗೋಡೆಗಳಿಗೆ ಹಾನಿಯಾಗಿದ್ದು ಅಂದಾಜು 50 ಸಾವಿರದಷ್ಟು ಹಾನಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದು ಯಾವುದೇ ದೊಡ್ಡ ಹಾನಿಯಾಗಿಲ್ಲ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನೀಲ್ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Contaminated Water : ಬೆಳಗಾವಿ, ಕೋಲಾರದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು

Continue Reading

ಕ್ರೈಂ

Actor Darshan: ದರ್ಶನ್‌, ಪ್ರದೋಷ್‌ನಿಂದ ಮೂರು ಪಿಸ್ತೂಲ್‌ ವಶಕ್ಕೆ

Actor Darshan: ದರ್ಶನ್ ಬಳಿ ಎರಡು ಯುಎಸ್ ಮೇಡ್ ಪಿಸ್ತೂಲ್‌ಗಳು, ಪ್ರದೋಷ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್‌ ಇವೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಆದರೆ ಚುನಾವಾಣೆ ವೇಳೆ ಶಸ್ತ್ರಾಸ್ತ್ರ ಠೇವಣಿಯಿಂದ ದರ್ಶನ್ ಮತ್ತು ಪ್ರದೋಷ್ ವಿನಾಯಿತಿ ಪಡೆದಿದ್ದರು.

VISTARANEWS.COM


on

Actor Darshan Judicial Custody Jailer Gave UTP Number
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ (Actor Darshan) ಮತ್ತು ಆತನ ಸಹಚರ ಪ್ರದೋಷ್‌ ಬಗ್ಗೆ ಮತ್ತೊಂದು ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದೆ. ಇಬ್ಬರ ಬಳಿಯೂ ಪರವಾನಗಿ ಹೊಂದಿದ ಪಿಸ್ತೂಲ್‌ಗಳಿದ್ದು Licenced Pistol), ಲೋಕಸಭೆ ಚುನಾವಣೆ (Lok Sabha Election 2024) ವೇಳೆ ಇಬ್ಬರೂ ಅವುಗಳನ್ನು ಪೊಲೀಸರ ಬಳಿ ಠೇವಣಿ (deposit) ಇರಿಸಿರಲಿಲ್ಲ ಎಂಬುದು ಗೊತ್ತಾಗಿದೆ. ಇದೀಗ ಅವುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ದರ್ಶನ್ ಬಳಿ ಎರಡು ಯುಎಸ್ ಮೇಡ್ ಪಿಸ್ತೂಲ್‌ಗಳು, ಪ್ರದೋಷ್ ಬಳಿ ಒಂದು ಲೈಸೆನ್ಸ್ ಪಿಸ್ತೂಲ್‌ ಇವೆ. ಕಳೆದ ಲೋಕಸಭಾ ಚುನಾವಣಾ ವೇಳೆ ಲೈಸೆನ್ಸ್ ಪಡೆದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಬೇಕಿತ್ತು. ಆದರೆ ಚುನಾವಾಣೆ ವೇಳೆ ಶಸ್ತ್ರಾಸ್ತ್ರ ಠೇವಣಿಯಿಂದ ದರ್ಶನ್ ಮತ್ತು ಪ್ರದೋಷ್ ವಿನಾಯಿತಿ ಪಡೆದಿದ್ದರು.

ಬೆಂಗಳೂರು ನಗರಾದ್ಯಂತ 7830 ಗನ್ ಲೈಸೆನ್ಸ್ ಪರವಾನಗಿದಾರರಿದ್ದಾರೆ. ಈ ಪೈಕಿ ದರ್ಶನ್ ಮತ್ತು ಪ್ರದೋಷ್ ಸೇರಿ 277 ಜನರಿಗೆ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ನೀಡಲಾಗಿತ್ತು. ಉಳಿದ 7553 ಪರವಾನಗಿ ಹೊಂದಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಠೇವಣಿ ಇರಿಸಿಕೊಂಡಿದ್ದರು. ಆದರೆ ನಟ ದರ್ಶನ್ ಮತ್ತು ಪ್ರದೋಷ್ ಪಿಸ್ತೂಲ್ ವಾಪಸ್ ಮಾಡದೇ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದಿದ್ದಾರೆ.

ಬೆಂಗಳೂರಿನ 277 ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಪಡೆದವರಲ್ಲಿ ದರ್ಶನ್ ಮತ್ತು ಪ್ರದೋಷ್‌ಗೂ ವಿನಾಯಿತಿ ನೀಡಲಾಗಿದ್ದು, ಬೆಂಗಳೂರು ಪೊಲೀಸ್ ಕಮೀಷನರ್ ಅವರಿಂದಲೇ ವಿನಾಯಿತಿ ನೀಡಿ ಆದೇಶ ದೊರೆತಿದೆ. ಕಮೀಷನರ್ ಬಿ. ದಯಾನಂದ ಶಸ್ತ್ರಾಸ್ತ್ರ ಠೇವಣಿ ಸ್ಕ್ರೀನಿಂಗ್ ಕಮಿಟಿಯ ಅಧ್ಯಕ್ಷರಾಗಿದ್ದರು. ಅತಿ ಗಣ್ಯರಿಗೆ ನೀಡುವ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿಯಲ್ಲಿ ನಟ ದರ್ಶನ್ ಮತ್ತು ಪ್ರದೋಷ್ ಕೂಡ ಅವಕಾಶ ಪಡೆದಿದ್ದು, ಕಳೆದ ಮಾರ್ಚ್ 27ರಂದು ವಿನಾಯಿತಿ ನೀಡಿ ಕಮೀಷನರ್ ದಯಾನಂದ್ ಆದೇಶ ನೀಡಿದ್ದರು.

ನಿವೃತ್ತ ನ್ಯಾಯಾಧೀಶರು, ಐಎಎಸ್, ಐಪಿಎಸ್ ಅಧಿಕಾರಿಗಳು, ಬ್ಯಾಂಕ್ ಮ್ಯಾನೇಜರ್ ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಇಲಾಖೆ ಅಧಿಕಾರಿಗಳು, ಶೂಟಿಂಗ್ ಕ್ರೀಡಾಪಟುಗಳು, ಶಾಸಕರು, ಪರಿಷತ್ ಸದಸ್ಯರು ಸೇರಿ ಹಿರಿಯ ರಾಜಕಾರಣಿಗಳಿಗೆ ಮಾತ್ರ ವಿನಾಯಿತಿ ನೀಡಬಹುದು. ಉಳಿದಂತೆ ಎಲ್ಲರ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಆಯಾ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ವಶಕ್ಕೆ ಪಡೆಯಬೇಕು.

ಸದ್ಯ ಪ್ರದೋಷ್‌ಗೆ ಸಂಬಂಧಪಟ್ಟಂತೆ ಗಿರಿನಗರ ಠಾಣೆ ಹಾಗೂ ದರ್ಶನ್‌ಗೆ ಸಂಬಂಧಪಟ್ಟಂತೆ ಆರ್.ಆರ್.ನಗರ ಠಾಣಾಧಿಕಾರಿಗಳಿಗೆ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಿಕ್ಕೆ ಸೂಚನೆ ನೀಡಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ತನಿಖಾಧಿಕಾರಿಗಳಿಂದ ಎರಡು ಠಾಣೆ ಪೊಲೀಸ್ ಇನ್ಸ್ಪೆಕ್ಟರ್‌ಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Actor Darshan: ಪ್ರಥಮ್‌, ಉಮಾಪತಿಗೆ ಬೆದರಿಕೆ ಹಾಕಿದ ಡಿ ಬಾಸ್‌ ಫ್ಯಾನ್‌ ಬಂಧನ

Continue Reading

ಪ್ರಮುಖ ಸುದ್ದಿ

Pavithra Gowda : ಜೈಲಿನಲ್ಲಿರುವ ಪವಿತ್ರಾ ಗೌಡಗೆ ಬ್ಯಾಗ್​ ತುಂಬಾ ಸಾಮಗ್ರಿ ತಂದು ಕೊಟ್ಟ ಸಹೋದರ

Pavithra Gowda : ಮಂಗಳವಾರ ಪವಿತ್ರಾ ಅವರನ್ನು ಭೇಟಿಯಾಗಲು ಗುರುವಾರ ಮಗಳು ಖುಷಿ, ತಾಯಿ, ತಂದೆ ಹಾಗೂ ತಮ್ಮ ಬಂದಿದ್ದರು. ಅವರು ಪವಿತ್ರಾ ಅವರನ್ನು ಮಾತನಾಡಿಸಿ ಹೋಗಿದ್ದಾರೆ. ಅಂತೆಯೇ ಜೈಲಿನ ಪ್ರಮುಖ ಬೀದಿಯ ಮೂಲಕ ಎಲ್ಲರೂ ಹೋದ ಬಳಿಕ ವಾಪಸ್​ ಕಾರಿನ ಬಳಿಗೆ ಬಂದ ಪವಿತ್ರಾ ತಮ್ಮ, ಚೀಲವನ್ನು ಹಿಡಿದುಕೊಂಡು ಜೈಲಿನ ಆವರಣ ಪ್ರವೇಶಿಸಿದ್ದಾರೆ.

VISTARANEWS.COM


on

Pavitra Gowda
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಗರದ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ, ಮಾಡೆಲ್ ಹಾಗೂ ನಟ ದರ್ಶನ್ ಆಪ್ತೆ ಪವಿತ್ರಾ ಗೌಡ (Pavithra Gowda) ದಿನದಿಂದ ದಿನಕ್ಕೆ ಸೊರಗುತ್ತಿದ್ದಾರೆ ಎಂಬ ಮಾಹಿತಿಯನ ನಡುವೆಯೇ ಮಂಗಳವಾರ ಅವರ ಕುಟುಂಬ ಸದಸ್ಯರು ಬ್ಯಾಗ್ ತುಂಬಾ ಸಾಮಗ್ರಿಗಳನ್ನು ತಂದುಕೊಟ್ಟು ಹೋಗಿದ್ದಾರೆ. ಕಪ್ಪು ಬಣ್ಣದ ಬ್ಯಾಗ್​ನಲ್ಲಿ ಸಾಕಷ್ಟು ವಸ್ತುಗಳನ್ನು ಅವರಿಗೆ ತಲುಪಿಸಿರುವುದು ಮಾಧ್ಯಮಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಈ ವಿಡಿಯೊ ವೈರಲ್​ ಆಗುತ್ತಿದ್ದಂತೆ ಜೈಲು ಸೇರಿರುವ ವಸ್ತುಗಳು ಏನಿರಬಹುದು ಎಂಬು ಕುತೂಹಲ ಹೆಚ್ಚಾಗಿದೆ.

ಸುಖಕರವಾದ ಜೀವನ ಹಾಗೂ ಡಯೆಡ್ ಫುಡ್​ ಸೇರಿದಂತೆ ಬಗೆ ಬಗೆಯ ಭಕ್ಷ್ಯಗಳನ್ನು ತಿಂದು ಅಭ್ಯಾಸವಾಗಿದ್ದ ಪವಿತ್ರಾ ಗೌಡ ಅವರಿಗೆ ಜೈಲೂಟ ಹಿಡಿಸುತ್ತಿಲ್ಲ ಎಂಬುದು ಕೆಲವು ದಿನಗಳಿಂದ ನಡೆಯುತ್ತಿರುವ ಸುದ್ದಿ. ಮುದ್ದೆ ತಿನ್ನಲ್ಲ. ಚಪಾತಿ ಸರಿಯಲ್ಲ, ಸಾರು ಇಷ್ಟವಾಗಲ್ಲ ಎಂದು ಪವಿತ್ರಾ ಕಣ್ಣಿರು ಹಾಕುತ್ತಿರುವುದಾಗಿ ಮೂಲಗಳು ತಿಳಿಸಿದ್ದವು. ಈ ಎಲ್ಲ ಕಾರಣಕ್ಕೆ ಪವಿತ್ರಾ ಸೊರಗಿ ಹೋಗುತ್ತಾರೆ ಎಂಬ ಭಯ ಅವರ ಕುಟುಂಬಸ್ಥರಿಗೆ ಇತ್ತು. ಹೀಗಾಗಿ ಅವರಿಗೆ ಅಗತ್ಯ ವಸ್ತುಗಳನ್ನು ಕೊಟ್ಟು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ಪವಿತ್ರಾ ಅವರನ್ನು ಭೇಟಿಯಾಗಲು ಗುರುವಾರ ಮಗಳು ಖುಷಿ, ತಾಯಿ, ತಂದೆ ಹಾಗೂ ತಮ್ಮ ಬಂದಿದ್ದರು. ಅವರು ಪವಿತ್ರಾ ಅವರನ್ನು ಮಾತನಾಡಿಸಿ ಹೋಗಿದ್ದಾರೆ. ಅಂತೆಯೇ ಜೈಲಿನ ಪ್ರಮುಖ ಬೀದಿಯ ಮೂಲಕ ಎಲ್ಲರೂ ಹೋದ ಬಳಿಕ ವಾಪಸ್​ ಕಾರಿನ ಬಳಿಗೆ ಬಂದ ಪವಿತ್ರಾ ತಮ್ಮ, ಚೀಲವನ್ನು ಹಿಡಿದುಕೊಂಡು ಜೈಲಿನ ಆವರಣ ಪ್ರವೇಶಿಸಿದ್ದಾರೆ. ಅದರಲ್ಲಿ ಬಟ್ಟೆ ಮತ್ತು ಮೆಕಪ್ ಸೆಟ್ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.

ಪುತ್ರಿಯನ್ನು ನೋಡಿ ಕಣ್ಣೀರು ಹಾಕಿದ ಪವಿತ್ರಾ

ಮಗಳು ಖುಷಿಯನ್ನ ನೋಡುತ್ತಿದ್ದಂತೆ ಜೈಲಿನಲ್ಲಿದ್ದ ಪವಿತ್ರಾ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಪವಿತ್ರಾಗೆ ಮಗಳ ಜೊತೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಅಂತೆಯ ಮಂಗಳವಾರ ಅವರು ನೋಡಲು ಬಂದಾಗ ಪವಿತ್ರಾ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸೋ ಪೋಷಕರ ಜತೆ ಪವಿತ್ರಾ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: Suraj Revanna Case : ಸೂರಜ್ ವಿರುದ್ಧವೇ ತಿರುಗಿ ಬಿದ್ದು ದೂರು ದಾಖಲಿಸಿದ ಆಪ್ತ ಶಿವಕುಮಾರ್​ !

ಎಲ್ಲದ್ದಕ್ಕೂ ಕ್ಯಾತೆ

ಪರಪ್ಪನ ಅಗ್ರಹಾರದಲ್ಲಿ ಪವಿತ್ರಾ ಅಲ್ಲಿನ ವ್ಯವಸ್ಥೆಗಳಿಗೆ ಕ್ಯಾತೆ ಎತ್ತುತ್ತಿದ್ದಾರೆ. ಜಿಮ್ ಮಾಡಲು ಆಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯ ಜಿಮ್​ಗೆ ಹೋಗಿ ಫಿಟ್ನೆಸ್​ ಕಾಪಾಡಿಕೊಂಡಿದ್ದ ನಟಿಗೆ ಇದೀಗ ಜೈಲಿನಲ್ಲಿ ಸಮಸ್ಯೆಯಾಗಿದೆ. ಈ ಬಗ್ಗೆ ಅವರ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.

ಮಧ್ಯಾಹ್ನ ನೀಡಿದ್ದ ಅನ್ನ ಸಾಂಬಾರ್, ಚಪಾತಿ ಮತ್ತು ಮಜ್ಜಿಗೆಯನ್ನು ಜೈಲು ಸಿಬ್ಬಂದಿ ನೀಡಿದ್ದರು. ಆದರೆ ನನಗೆ ಜೈಲೂಟ ತಿನ್ನಲಾಗುತ್ತಿಲ್ಲ ಎಂದು ಪವಿತ್ರಾ ಹೇಳುತ್ತಿದ್ದಾರೆ. ರುಚಿ ಇಲ್ಲದೆ ಊಟ ಸೇವಿಸುವುದು ಹೇಗೆ ಎಂದು ಸಿಬ್ಬಂದಿ ಬಳಿ ಪ್ರಶ್ನೆ ಕೇಳುತ್ತಿದ್ದಾರೆ.

ದರ್ಶನ್ ಭೇಟಿಯಾಗಲು ಬಂದ ಪ್ರಶಾಂತ್ ಚಕ್ರವರ್ತಿ

ಕರ್ನಾಟಕ ಜನಸೇವಾ ಟ್ರಸ್ಟ್​​ನ ನಿರಾಶ್ರಿತರ ಆಶ್ರಮದ ಪ್ರಶಾಂತ್ ಚಕ್ರವರ್ತಿ ಅವರು ಮಂಗಳವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್​ ಅವರನ್ನು ಭೇಟಿಯಾಗಲು ಬಂದಿದ್ದರು. ಪ್ರಶಾಂತ್ ಚಕ್ರವರ್ತಿ ಸೇರಿ ಮತ್ತಿಬ್ಬರ ಆಗಮಿಸಿದ್ದರು. ದರ್ಶನ್ ಭೇಟಿಯಾಗಲು ಸಾಧ್ಯವಾಗದಿದ್ದರೆ ಆರೋಪಿ ನಾಗರಾಜ್ ಭೇಟಿಯಾಗುವುದಾಗಿ ಅವರು ಹೇಳಿದ್ದರು. ಆಶ್ರಮದ ವಿಚಾರವಾಗಿ ಸಮಸ್ಯೆಯಾದಾಗ ದರ್ಶನ್ ಅವರು ಬೆಂಬಲ ಕೊಟ್ಟಿದ್ದರು. ಅದರಿಂದಾಗಿ ಅವರನ್ನ ಭೇಟಿ ಮಾಡಿ ಹೋಗಲು ಬಂದಿದ್ದೇವೆಂದ ಪ್ರಶಾಂತ್ ಚಕ್ರವರ್ತಿ ಹೇಳಿದ್ದರು.

Continue Reading

ಪ್ರಮುಖ ಸುದ್ದಿ

Suraj Revanna Case : ಸೂರಜ್ ವಿರುದ್ಧವೇ ತಿರುಗಿ ಬಿದ್ದು ದೂರು ದಾಖಲಿಸಿದ ಆಪ್ತ ಶಿವಕುಮಾರ್​ !

Suraj Revanna Case: ಶಿವಕುಮಾರ್​ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ವಿರುದ್ದ ದೂರು ನೀಡಲು ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಶಿವಕುಮಾರ್​ ಶಿವಕುಮಾರ್ ಹೊಳೆನರಸೀಪುರ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದವರಾಗಿದ್ದಾರೆ. ಹಿಂದೆ ಸೂರಜ್ ಪರವಾಗಿ ಸಂತ್ರಸ್ತನ ವಿರುದ್ಧ ದೂರು ನೀಡಿ ಗಮನ ಸೆಳೆದಿದ್ದರು.

VISTARANEWS.COM


on

Suraj Revanna Case
Koo

ಹಾಸನ: ಅಸಹಜ ಲೈಂಗಿಕ ಕ್ರಿಯೆ ಪ್ರಕರಣದಲ್ಲಿ ಸೂರಜ್​ ರೇವಣ್ಣ (Suraj Revanna Case) ​​ ಪರವಾಗಿ ನಿಂತು ಸಂತ್ರಸ್ತರ ವಿರೋಧ ಕಟ್ಟಿಕೊಂಡಿದ್ದ ಶಿವಕುಮಾರ್​ ದಿಢೀರ್​ ತಮ್ಮ ನಿಲುವು ಬದಲಾಯಿಸಿದ್ದಾರೆ. ಇದೀಗ ಅವರು ಹೊಳೆನರಸೀಪುರ ಪೊಲೀಸ್ ಠಾಣೆಗೆ ಬಂದು ಸೂರಜ್ ರೇವಣ್ಣ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಶಿವಕುಮಾರ್​ ಈ ಹಿಂದೆ ಸಂತ್ರಸ್ತರ ವಿರುದ್ಧವಾಗಿದ್ದರು. ಹೀಗಾಗಿ ಸಂತ್ರಸ್ತರು ಶಿವಕುಮಾರ್ ವಿರುದ್ಧವೇ ದೂರು ದಾಖಲಿಸಿದ್ದರು. ಅಲ್ಲಿಂದ ಅವರು ನಾಪತ್ತೆಯಾಗಿದ್ದರು. ಇದೀಗ ದಿಢೀರ್​ ಪ್ರತ್ಯಕ್ಷಗೊಂಡ ಸೂರಜ್ ವಿರುದ್ಧ ದೂರು ದಾಖಲಿಸಿದ್ದಾರೆ.

ಶಿವಕುಮಾರ್​ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ರೇವಣ್ಣ ವಿರುದ್ದ ದೂರು ನೀಡಲು ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಶಿವಕುಮಾರ್​ ಶಿವಕುಮಾರ್ ಹೊಳೆನರಸೀಪುರ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದವರಾಗಿದ್ದಾರೆ. ಹಿಂದೆ ಸೂರಜ್ ಪರವಾಗಿ ಸಂತ್ರಸ್ತನ ವಿರುದ್ಧ ದೂರು ನೀಡಿ ಗಮನ ಸೆಳೆದಿದ್ದರು.

ಶಿವಕಮಾರ ವಿರುದ್ಧವೂ ದಾಖಲಾಗಿದೆ ದೂರು

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡಾ.ಸೂರಜ್‌ ರೇವಣ್ಣ (Suraj Revanna Case) ಆಪ್ತ, ನಾಪತ್ತೆಯಾಗಿರುವ ಶಿವಕುಮಾರ್‌ ವಿರುದ್ಧವೂ ಸಂತ್ರಸ್ತ ದೂರು ದಾಖಲಿಲಾಗಿತ್ತು. ನನಗೆ ಆಗಿರುವ ಅನ್ಯಾಯದ ಬಗ್ಗೆ ಶಿವಕುಮಾರ್ ಬಳಿ ಹೇಳಿದ್ದೆ, ನನಗೆ ದೈಹಿಕ ಹಿಂಸೆ ಆಗಿದ್ದರೂ ಶಿವಕುಮಾರ್ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ ಎಂದು ಸಂತ್ರಸ್ತ ಆರೋಪಿಸಿದ್ದರು.

ಹೀಗಾಗಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿ ಸೂರಜ್‌ ಆಪ್ತ ಶಿವಕುಮಾರ್ ಹೆಸರು ಸೇರ್ಪಡೆ ಮಾಡಲಾಗಿತ್ತು. ಸೂರಜ್‌ಗೆ 5 ಕೋಟಿ ರೂ. ನೀಡುವಂತೆ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ ಎಂದು ಸಂತ್ರಸ್ತನ ವಿರುದ್ಧ ಶಿವಕುಮಾರ್ ದೂರು ನೀಡಿದ್ದರು. ಆ ಬಳಿಕ ಶಿವಕುಮಾರ್‌ ಹಾಗೂ ಸಂತ್ರಸ್ತ ಇಬ್ಬರೂ ಸೇರಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

ಇದನ್ನೂ ಓದಿ: Suraj Revanna Case: ತಮ್ಮನಿಗೆ ಮೂರು ಸಲ; ಈಗ ಅಣ್ಣನಿಗೂ ಪುರುಷತ್ವ ಪರೀಕ್ಷೆ! ಇದೇ ಬೇರೆ ಥರ!

ಅಣ್ಣ ಸೂರಜ್‌ 8 ದಿನ ಸಿಐಡಿ ಕಸ್ಟಡಿಗೆ

ಸಲಿಂಗ ಕಾಮ ಪ್ರಕರಣದಲ್ಲಿ ಸಿಕ್ಕಿಬಿದ್ದು ನ್ಯಾಯಾಂಗ ಬಂಧನದಲ್ಲಿದ್ದ ಎಂಎಲ್‌ಸಿ ಸೂರಜ್‌ ರೇವಣ್ಣನನ್ನು (Suraj Revanna Case) 8 ದಿನ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್​ ಬುಧವಾರ ಆದೇಶ ಹೊರಡಿತ್ತು. ಪ್ರಕರಣ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶರಾದ ಕೆ.ಎನ್‌.ಶಿವಕುಮಾರ್‌ ಅವರು ಸೂರಜ್‌ನನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

ವಿಚಾರಣೆಗಾಗಿ ಹತ್ತು ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, 10 ದಿನಕ್ಕೆ ಬದಲಾಗಿ 8 ದಿನ ಸಿಐಡಿ ಕಸ್ಟಡಿಗೆ ನೀಡಲು ಸೂಚಿಸಿದೆ. ಇದರಿಂದ ಜುಲೈ 1 ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ಇರಲಿದ್ದಾರೆ.

ಜುಲೈ 8ರವರೆಗೆ ಪ್ರಜ್ವಲ್‌ಗೆ ನ್ಯಾಯಾಂಗ ಬಂಧನ

ಬುಧವಾರ ನ್ಯಾಯಾಲಯದಲ್ಲಿ ಅಣ್ಣ ಸೂರಜ್ ರೇವಣ್ಣ ಅಸಹಜ ಲೈಂಗಿಕ ಕಿರುಕುಳದ ಪ್ರಕರಣದ ಅರ್ಜಿ ವಿಚಾರಣೆ ಮುಗಿಯುತ್ತಿದ್ದಂತೆ ಪ್ರಜ್ವಲ್ ರೇವಣ್ಣನನ್ನು (Prajwal Revanna) ಕೋರ್ಟ್‌ಗೆ ಎಸ್ಐಟಿ ಟೀಂ ಹಾಜರುಪಡಿಸಿತ್ತು. ಅತ್ಯಾಚಾರ ಪ್ರಕರಣ ಸಂಬಂಧ ಪ್ರಜ್ವಲ್‌ನ ಕಸ್ಟಡಿಗೆ ಪಡೆಯಲಾಗಿತ್ತು. ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ 42 ಎಸಿಎಂಎಂ ಕೋರ್ಟ್‌ಗೆ ಎಸ್ಐಟಿ ಹಾಜರು ಪಡಿಸಿದೆ. ಹೀಗಾಗಿ ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ‌ ಕೋರ್ಟ್‌ ಆದೇಶ ನೀಡಿತ್ತು.

ಸೋದರ ಸೂರಜ್ ರೇವಣ್ಣ ಕೇಸ್‌ನ ಆದೇಶ ಬರೆಸುತ್ತಿರುವುದನ್ನು ನೋಡಿದ ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸಿಐಡಿ‌ ಕಸ್ಟಡಿಗೆ ಹೋಗಲಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಅಣ್ಣನನ್ನು ಎಷ್ಟು ದಿನ ಕಸ್ಟಡಿಗೆ ನೀಡಿದ್ದಾರೆ ಎಂದು ಎಸ್‌ಐಟಿ ಅಧಿಕಾರಿಗಳನ್ನು ಪ್ರಜ್ವಲ್ ಕೇಳಿದ್ದಾರೆ.

Continue Reading
Advertisement
sural falls assault case
ಕ್ರೈಂ6 mins ago

Assault Case: ಕರ್ನಾಟಕದ ಪ್ರವಾಸಿಗರಿಗೆ ಬಾಸುಂಡೆ ಬರುವಂತೆ ಥಳಿಸಿದ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ; ಹಣ ಸುಲಿಗೆ

Members of Parliament
Latest24 mins ago

Members of Parliament: ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ? ಜೈಲಿನಲ್ಲಿದ್ದವರ ಕತೆಯೇನು?

Actor Darshan Judicial Custody Jailer Gave UTP Number
ಕ್ರೈಂ1 hour ago

Actor Darshan: ದರ್ಶನ್‌, ಪ್ರದೋಷ್‌ನಿಂದ ಮೂರು ಪಿಸ್ತೂಲ್‌ ವಶಕ್ಕೆ

Health Tips Kannada
ಆರೋಗ್ಯ1 hour ago

Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

NEET Paper Leak
ಶಿಕ್ಷಣ1 hour ago

NEET Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ರೂವಾರಿ ಸಂಜೀವ್ ಮುಖಿಯಾ; ಈತ ನಟೋರಿಯಸ್‌!

Karnataka Weather
ಕರ್ನಾಟಕ2 hours ago

Karnataka Weather: ಇಂದು ಹಾಸನ, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

David Warner
ಪ್ರಮುಖ ಸುದ್ದಿ2 hours ago

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

Fatty Lever Disease
ಆರೋಗ್ಯ2 hours ago

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Karnataka Milk Federation
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Dina Bhavishya
ಭವಿಷ್ಯ3 hours ago

Dina Bhavishya: ಈ ರಾಶಿಯವರಿಗೆ ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದುಕೊಡಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌