Anant Ambani: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಪ್ಲ್ಯಾನಿಂಗ್‌ ಹೇಗಿದೆ? ಸಖತ್‌ ಕ್ಯೂರಿಯಸ್‌ ಆಗಿರಲಿದೆ ರಾಧಿಕಾ ಉಡುಪು! - Vistara News

ಸಿನಿಮಾ

Anant Ambani: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಪ್ಲ್ಯಾನಿಂಗ್‌ ಹೇಗಿದೆ? ಸಖತ್‌ ಕ್ಯೂರಿಯಸ್‌ ಆಗಿರಲಿದೆ ರಾಧಿಕಾ ಉಡುಪು!

Anant Ambani: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ,ಮಗಳು ರಾಹಾ ಕಪೂರ್, ಹಾಗೆಯೇ ರಣವೀರ್ ಸಿಂಗ್, ಸಲ್ಮಾನ್ ಖಾನ್, ಮಾಜಿ ಭಾರತೀಯ ಕ್ರಿಕೆಟ್ ನಾಯಕ ಎಂಎಸ್ ಧೋನಿ – ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಝಿವಾ ಈಗಾಗಲೇ ಇಟಲಿಗೆ ತೆರಳಿದ್ದಾರೆ. ಇವರೆಲ್ಲರೂ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

VISTARANEWS.COM


on

Anant Ambani things to know from celebrity guests to space theme bash
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ಗಾಗಿ (Anant Ambani Radhika) ಎರಡನೇ ವಿವಾಹ ಪೂರ್ವ ಸಮಾರಂಭವನ್ನು ಮೇ 28ರಿಂದ 30ರವರೆಗೆ ಇಟಲಿಯಲ್ಲಿ ಆಯೋಜಿಸಿದ್ದಾರೆ.  ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು ಮತ್ತು ಅಂಬಾನಿ ಕುಟುಂಬದ ಇತರ ಗಣ್ಯ ವ್ಯಕ್ತಿಗಳು ಎರಡನೇ ವಿವಾಹ ಪೂರ್ವ ಸಂಭ್ರಮಾಚರಣೆಗೆ ತೆರಳುತ್ತಿದ್ದಾರೆ. 2024ರ ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ನಡೆದ ಪ್ರಿ ವೆಡ್ಡಿಂಗ್‌ ಆಚರಣೆಗಳಂತೆಯೇ ಇದು ಕೂಡ ಅದ್ಧೂರಿಯಾಗಿ ನಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ,ಮಗಳು ರಾಹಾ ಕಪೂರ್, ಹಾಗೆಯೇ ರಣವೀರ್ ಸಿಂಗ್, ಸಲ್ಮಾನ್ ಖಾನ್, ಮಾಜಿ ಭಾರತೀಯ ಕ್ರಿಕೆಟ್ ನಾಯಕ ಎಂಎಸ್ ಧೋನಿ – ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಝಿವಾ ಈಗಾಗಲೇ ಇಟಲಿಗೆ ತೆರಳಿದ್ದಾರೆ. ಇವರೆಲ್ಲರೂ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

ಆಚರಣೆ ಎಲ್ಲಿ ಪ್ರಾರಂಭವಾಗುತ್ತದೆ? ಹೇಗೆ ಇರಲಿದೆ?

ವರದಿಯ ಪ್ರಕಾರ, ಮೇ 28 ಮತ್ತು 30ರ ನಡುವೆ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು)  800 ಅತಿಥಿಗಳಿಗಾಗಿ  ಪಾರ್ಟಿ ಆಯೋಜಿಸಲಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿದೆ. 

ಮೇ 30 ರಂದು, ಅತಿಥಿಗಳು ಬಂದಿಳಿಯುತ್ತಾರೆ. ನಂತರ ಔತಣಕೂಟ ಮತ್ತು ಪಾರ್ಟಿಯು 1 ಗಂಟೆಗೆ ಪ್ರಾರಂಭವಾಗುತ್ತದೆ. ಮೇ 31 ರಂದು ಬೆಳಗ್ಗೆ ಕ್ರೂಸ್‌ನಲ್ಲಿ ಅತಿಥಿಗಳು ಇಳಿಯುತ್ತಾರೆ. ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ರಣವೀರ್ ಸಿಂಗ್ ಮುಂತಾದ ಗಣ್ಯ ಸೆಲೆಬ್ರಿಟಿಗಳು ಇರಲಿದ್ದಾರೆ. ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಕುಟುಂಬದೊಂದಿಗೆ ಆಚರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ ರಾಧಿಕಾ ಮರ್ಚಂಟ್‌ ಡ್ರೆಸ್‌!

ರಾಧಿಕಾ ಮರ್ಚಂಟ್‌ ಅಂದವಾದ ಕಸ್ಟಮ್-ನಿರ್ಮಿತ ಗ್ರೇಸ್ ಲಿಂಗ್ ಕೌಚರ್ ( Grace Ling Couture piece) ಪೀಸ್ ಧರಿಸುತ್ತಾರೆ ಎನ್ನಲಾಗಿದೆ. ಈ ಉಡುಪು 3D ವಿನ್ಯಾಸದಲ್ಲಿ ಇರಲಿದೆಯಂತೆ. ಏರೋಸ್ಪೇಸ್ ಅಲ್ಯೂಮಿನಿಯಂ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ ಎನ್ನಲಾಗಿದೆ.

ಜಾಮ್‌ನಗರದಲ್ಲಿ ನಡೆದ ಆಚರಣೆಯಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ರಿಹಾನ್ನಾ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಶಾರುಖ್ ಖಾನ್, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿದಂತೆ ಸುಮಾರು 1,200 ಅತಿಥಿಗಳು ಭಾಗವಹಿಸಿದ್ದರು. ಕಳೆದ ವರ್ಷ ಜನವರಿಯಲ್ಲಿ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ಸಾಂಪ್ರದಾಯಿಕ ಗೋಲ್‌ ಧನಾ ಕಾರ್ಯಕ್ರಮವಾಗಿ ನಡೆದಿತ್ತು. ಮದುವೆ ಜುಲೈ 12ರಂದು ನಡೆಯಲಿದೆ.

ಈ ಮುಂಚೆ ನಡೆದ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಮುಕೇಶ್‌ ಅಂಬಾನಿ ಅವರು ಸುಮಾರು 1 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Vijayalakshmi Darshan: ಜೈಲಲ್ಲಿ ದರ್ಶನ್‌ ಭೇಟಿ ಬೆನ್ನಲ್ಲೇ ಫ್ಯಾನ್ಸ್‌ಗೆ ದೊಡ್ಡ ಸಂದೇಶ ಕೊಟ್ಟ ವಿಜಯಲಕ್ಷ್ಮೀ; ಇಲ್ಲಿದೆ ಪೋಸ್ಟ್!

Vijayalakshmi Darshan: ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್‌ ಅವರನ್ನು ಭೇಟಿ ಮಾಡಿಕೊಂಡು ಬಂದ ಬಳಿಕ ಇದೇ ಮೊದಲ ಬಾರಿಗೆ ವಿಜಯಲಕ್ಷ್ಮೀ ಅವರು ಪೋಸ್ಟ್‌ ಮಾಡಿದ್ದಾರೆ. ಅಭಿಮಾನಿಗಳು ಶಾಂತಿಯಿಂದ ವರ್ತಿಸಬೇಕು. ನಮಗೆ ನ್ಯಾಯ ಸಿಗಲಿದೆ ಎಂದು ಹೇಳುವ ಮೂಲಕ ಅವರು ಅಭಿಮಾನಿಗಳ ದುಃಖ, ಬೇಸರವನ್ನು ತಣಿಸುವ ಪ್ರಯತ್ನ ಮಾಡಿದ್ದಾರೆ.

VISTARANEWS.COM


on

Vijayalakshmi Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್‌ (Actor Darshan) ಬಂಧಿತನಾಗಿ, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲಿನಲ್ಲಿರುವ ಪತಿಯನ್ನು ಭೇಟಿಯಾಗಿ ಬಂದಿರುವ ಪತ್ನಿ ವಿಜಯಲಕ್ಷ್ಮೀ (Vijayalakshmi Darshan) ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕ ನಟನ ಅಭಿಮಾನಿಗಳಿಗೆ ದೊಡ್ಡ ಸಂದೇಶವೊಂದನ್ನು ರವಾನಿಸಿದ್ದಾರೆ. “ಅಭಿಮಾನಿಗಳು ಶಾಂತಿಯಿಂದ ಇರಬೇಕು” ಎಂಬುದಾಗಿ ಅವರು ಪೋಸ್ಟ್‌ ಮೂಲಕ ಮನವಿ ಮಾಡಿದ್ದಾರೆ.

ವಿಜಯಲಕ್ಷ್ಮೀ ಪೋಸ್ಟ್‌ ಹೀಗಿದೆ…

” ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ “ಸೆಲೆಬ್ರಿಟಿಗಳನ್ನು” ತನ್ನ ಹೃದಯದಲ್ಲೇ ಹೊತ್ತಿರುವುದು ನಿಮಗೇ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಪ್ರತಿ ಕಾಳಜಿ ವ್ಯಕ್ತಪಡಿಸಿದ್ದಾರೆ” ಎಂಬುದಾಗಿ ವಿಜಯಲಕ್ಷ್ಮೀ ದರ್ಶನ್‌ ಪೋಸ್ಟ್‌ ಮಾಡಿದ್ದಾರೆ.

“ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನರ ಅನುಪಸ್ಥಿತಿಯನ್ನು ದುರುಪಯೋಗ ಪಡೆಸಿಕೊಂಡು ಅವರಿಗೆ ಕೇಡು ಬಯಸುವ/ಮಾಡುವವರನ್ನು ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ” ಎಂದು ಅವರು ಹೇಳಿದ್ದಾರೆ. ಇದಕ್ಕೆ ದರ್ಶನ್‌ ಅವರ ನೂರಾರು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿಗೆ ಸೋಮವಾರ (ಜೂನ್‌ 24) ದರ್ಶನ್ ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಆಗಮಿಸಿದ್ದರು. ಮೊದಲು ಜೈಲಿನ ಚೆಕ್ ಪೋಸ್ಟ್ ಸಮೀಪ ಕಾರು ನಿಲ್ಲಿಸಲಾಗಿತ್ತು. ಆಗ ಮಾಧ್ಯಮಗಳ ಕ್ಯಾಮೆರಾ ಕಂಡು ವಿಜಯಲಕ್ಷ್ಮಿ, ವಿನೀಶ್ ವಾಪಸ್ ತೆರಳಿದರು. ನಂತರ ಬೇರೊಂದು ಕಾರಿನಲ್ಲಿ ಜೈಲಿನ ಬಳಿ ಬಂದರು. ಆಗ ಮಾಧ್ಯಮಗಳ ಕಣ್ತಪ್ಪಿಸಿ ಜೈಲಿನ ಒಳಗೆ ದರ್ಶನ್‌ ಪತ್ನಿ, ಪುತ್ರನನ್ನು ಪೊಲೀಸರು ಕರೆದೊಯ್ದಿದ್ದರು.‌ ದರ್ಶನ್‌ ಭೇಟಿ ಬಳಿಕ ಇದೇ ಮೊದಲ ಬಾರಿಗೆ ವಿಜಯಲಕ್ಷ್ಮೀ ಅವರು ಪೋಸ್ಟ್‌ ಮಾಡಿದ್ದಾರೆ.

ದರ್ಶನ್‌ ಪತ್ನಿ, ಪುತ್ರ ಭೇಟಿ ಮಾಡಿ ಹೊರಟ ಬಳಿಕ, ನಟ ವಿನೋದ್ ಪ್ರಭಾಕರ್ ಅವರು ಸ್ನೇಹಿತರ ಜತೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ನಿರ್ಗಮಿಸಿದರು. ನಂತರ ಮಾತನಾಡಿದ ವಿನೋದ್ ಪ್ರಭಾಕರ್ ಅವರು, ಮೃತ ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ಭಗವಂತ ನೀಡಲಿ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದರು.

ಇದನ್ನೂ ಓದಿ: Actor Darshan: `ದರ್ಶನ್‌’ ಫುಲ್‌ ಟೈಟ್‌ ಆದಾಗಲೇ ಅಗ್ರೆಸಿವ್‌ ಆಗೋದು‌ ಎಂದ ಭಾವನಾ ಬೆಳಗೆರೆ!

Continue Reading

ಸ್ಯಾಂಡಲ್ ವುಡ್

Actor Darshan: `ದರ್ಶನ್‌’ ಫುಲ್‌ ಟೈಟ್‌ ಆದಾಗಲೇ ಅಗ್ರೆಸಿವ್‌ ಆಗೋದು‌ ಎಂದ ಭಾವನಾ ಬೆಳಗೆರೆ!

Actor Darshan: ಕೊಲೆ ಕೇಸ್‌ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಆದರೀಗ ವಿಸ್ತಾರ ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.

VISTARANEWS.COM


on

Actor Darshan Full aggressive mode while he drunk
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ಆದ ಬಳಿಕ ರೇಣುಕಾಸ್ವಾಮಿ ನಿವಾಸಕ್ಕೆ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಭೇಟಿ ನೀಡಿ, ಮೃತ ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು. ಮಾತ್ರವಲ್ಲ ಹಲವು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ (Actor Darshan) ನೀಡಿದ್ದಾರೆ. ಆದರೀಗ ವಿಸ್ತಾರ ನ್ಯೂಸ್‌ನಲ್ಲಿ ಭಾವನಾ ಬೆಳಗೆರೆ ಅವರು ʻಕುಡಿದಾಗ ಮಾತ್ರ ದರ್ಶನ್‌ ಅಗ್ರೆಸ್ಸಿವ್‌ ಆಗಿ ಮಾತಾಡಡುತ್ತಾರೆ. ಹಾಗೇ ಈ ಕೃತ್ಯ ಕುಡಿದಾಗಲೇ ಮಾಡಿರಬಹುದುʼʼಎಂದು ಹೇಳಿಕೆ ನೀಡಿದ್ದಾರೆ.

ಭಾವನಾ ಬೆಳಗೆರೆ ಮಾತನಾಡಿ ʻʻದರ್ಶನ್‌ ಅವರು ಕುಡಿದು ಮಾತನಾಡುವಾಗ ಅಗ್ರೆಸಿವ್‌ ಆಗಿ ಮಾತಾಡ್ತಾರೆ. ಇಲ್ಲ ಅಂದರೆ ಆರಾಮಾಗಿ ಮಾತನಾಡುತ್ತಾರೆ. ಪ್ರತಿ ಬಾರಿ ಮಾತನಾಡುವಾಗ ಅಲ್ವಾ! ಎಂಬ ಉತ್ತರಕ್ಕೆ ಕಾಯುತ್ತಾರೆ. ಮಿಕ್ಕಿದ ದಿನದಲ್ಲಿ ಕ್ಯಾಮೆರಾಗೆ ಅಟ್ಯಾಕ್‌ ಮಾಡಲು ಬರುತ್ತಾರೆ. ಕುಡಿದಿದ್ದಾಗ ಯಾರು ಏನೇ ಹೇಳಿದ್ದರೂ ಒಪ್ಪಿಕೊಳ್ಳಲ್ಲ. ಇಂದು ನಾನು ತಂದೆಯವರೆ ಹಿಸ್ಟರಿ ಇಟ್ಟುಕೊಂಡು ಮಾತಾಡ್ತಾ ಇಲ್ಲ. ನನ್ನ ಸ್ವತಃ ಅಣುಭವ ಹಂಚಿಕೊಳ್ಳುತ್ತಿರುವೆʼʼಎಂದರು.

ಇದನ್ನೂ ಓದಿ: ‌Actor Darshan: ರೇಣುಕಾಸ್ವಾಮಿಯನ್ನ ಹೀರೊ ಮಾಡೋದು ನಿಲ್ಲಿಸಿ, ದರ್ಶನ್‌ನ ಬಿಟ್ಟುಕೊಡಲ್ಲ ಎಂದ ಖ್ಯಾತ ನಿರೂಪಕಿ!

ʻʻಆಗಿನ ಕಾಲದ ನಟರನ್ನು ನಾವು ಪೂಜಿಸುತ್ತಿದ್ದೇವು. ಅಣ್ಣಾವ್ರ ಆಗಲಿ ಹಲವು ನಟರು ಇಷ್ಟವಾಗುತ್ತಿದ್ದರು. ಆದರೆ ಆಗ ಅಭಿಮಾನಿಗಳ ನಡುವೆ ಜಿದ್ದಾ ಜಿದ್ದಿ ಇರಲಿಲ್ಲ. ಆದರೆ ಈಗ ದರ್ಶನ್‌ ಅಥವಾ ಅಪ್ಪು, ಸುದೀಪ್‌ ಈ ರೀತಿ ಅಭಿಮಾನಿಗಳು ಮಾತನಾಡಲು ಶುರು ಮಾಡಿದ್ದಾರೆ. ಮುಂಚೆ ಎಲ್ಲರೂ ಒಟ್ಟಿಗೆ ನಿಂತು ಬೆಳೆಸುತ್ತಿದ್ದರು. ಆದರೀಗ ಒಬ್ಬರ ಫ್ಯಾನ್ಸ್‌ ಇನ್ನೊಬ್ಬರ ಸಿನಿಮಾ ಕೂಡ ನೋಡುತ್ತಿಲ್ಲʼʼಎಂದರು.

ನಮ್ಮ ತಂದೆ ಅವತ್ತು ಬುದ್ಧಿ ಹೇಳಿದ್ದೇ ತಪ್ಪಾ?

ʻʻನನ್ನ ತಂದೆ ದರ್ಶನ್‌ ಅವರಿಗೆ ವಿಜಯಲಕ್ಷ್ಮಿ ಅವರನ್ನು ಹೊಡೆಯಬೇಡ ಎಂದಿದ್ದಾಗ, ದರ್ಶನ್‌ ನನ್ನ ಹೆಂಡತಿ ಅವಳು ಹೊಡತ್ತೀನಿ, ನೀನು ಯಾರು ಎಂದು ಕೇಳಿದ್ದರು. ಆದರೆ ನನ್ನ ತಂದೆ ಬುದ್ಧಿ ಮಾತು ಹೇಳಿದ್ದರು. ಕುಡಿದಾಗ ಮಾತ್ರ ದರ್ಶನ್‌ ಹೀಗೆ. ಆದರೆ ಬೇರೆ ಸಮಯದಲ್ಲಿ ತುಂಬ ಸಾಫ್ಟ್‌. ಈ ಕೃತ್ಯ ಆದಾಗ ಅವರು ಕುಡಿದಾಗಲೇ ಮಾಡಿರೋದು. ಆದರೆ ಈಗ ಕಾನೂನು ಒಂದೇ. ಕುಡಿದು ಮಾಡಿದೆ ಅಂತ ಕ್ಷಮೆ ಏನು ಕಡಿಮೆ ಆಗಲ್ಲ. ಆದರೆ ದರ್ಶನ್‌ ಯಾವಾಗ ಈ ರೀತಿಯ ಗೂನವನ್ನು ಸರಿ ಮಾಡ್ಕೋತ್ತಾರೆ? ಆದರೆ ಮುಂದೆ ಏನಾಗುತ್ತೆ ಎನ್ನುವುದು ಗೊತ್ತಿಲ್ಲʼʼಎಂದರು.

ರೇಣುಕಾ ಸ್ವಾಮಿ ಚಿತ್ರದುರ್ಗದವರಾಗಿದ್ದು ಬಡ ಮಧ್ಯಮ ಕುಟುಂಬದವರಾಗಿದ್ದಾರೆ. ಕಳೆದ ವರ್ಷ ಇದೇ ತಿಂಗಳು ಮದುವೆಯಾಗಿದ್ದ ರೇಣುಕಾ ಸ್ವಾಮಿಯ ಪತ್ನಿ ಐದು ತಿಂಗಳ ಗರ್ಭಿಣಿ. ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿಯನ್ನು ಶನಿವಾರ ಅಪಹರಣ ಮಾಡಿದ್ದ ನಟ ದರ್ಶನ್ ಸಹಚರರು ಪಟ್ಟಣಗೆರೆಯ ಶೆಡ್​ನಲ್ಲಿ ಕೂಡಿಹಾಕಿ ಹೊಡೆದು, ಚಿತ್ರಹಿಂಸೆ ನೀಡಿ ಕೊಲೆ ಮಾಡಿ, ಚರಂಡಿಗೆ ಎಸಗಿ ಹೋಗಿದ್ದರು.

Continue Reading

ಕಾಲಿವುಡ್

Actress Akshita: ಕನ್ನಡತಿ ಅಕ್ಷಿತಾ ಈಗ ತಮಿಳು ಚಿತ್ರದ ನಾಯಕಿ!

Actress Akshita : ಕನ್ನಡದ ಸಿದ್ಲಿಂಗು-2 ಚಿತ್ರವನ್ನು ನಿರ್ಮಾಣ ಮಾಡಿದ್ದ ಬ್ಯಾನರಿನಲ್ಲಿಯೇ ಈ ಚಿತ್ರವೂ ತಯಾರಾಗುತ್ತಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ರೂಪುಗೊಳ್ಳಲಿದೆ. ವಿಶೇಷವೆಂದರೆ, ಅಕ್ಷಿತಾ ಬಯಸಿದಂಥಾ ಪಾತ್ರವೇ ಇಲ್ಲಿ ಸಿಕ್ಕಿದೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗೆಗಾಗಲಿ, ಅಕ್ಷಿತಾರ ಪಾತ್ರದ ಬಗೆಗಾಗಲಿ ಹೆಚ್ಚೇನೂ ಮಾಹಿತಿ ಜಾಹೀರು ಮಾಡುವಂತಿಲ್ಲ.

VISTARANEWS.COM


on

Actress Akshita entry to kollywood cinema
Koo

ಬೆಂಗಳೂರು: ಕನ್ನಡದ ನಟ ನಟಿಯರು ಬೇರೆ ಭಾಷೆಗಳಲ್ಲಿ ಮಿಂಚುವುದು ಹೊಸತೇನಲ್ಲ. ಆದರೆ, ಬೇರೆ ಭಾಷೆಗಳಲ್ಲಿ ಜನಪ್ರಿಯತೆ ದಕ್ಕಿದ ಮೇಲೂ ಕನ್ನಡತನವನ್ನೇ ಧ್ಯಾನಿಸುತ್ತಾ, ತಾಯ್ನೆಲದ ಪ್ರೇಕ್ಷಕರನ್ನು ಚೆಂದದ ಪಾತ್ರಗಳ ಮೂಲಕ ಪ್ರಧಾನ ಆದ್ಯತೆಯಾಗಿಸಿಕೊಂಡವರ ಸಂಖ್ಯೆ ಕಡಿಮೆಯಿದೆ. ಆ ಸಾಲಿಗೆ ಸೇರುವ ಗುಣ ಹೊಂದಿರುವವರು ಅಕ್ಷಿತಾ ಬೋಪಯ್ಯ. ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿರುವ ಅಕ್ಷಿತಾ, ಕಾಲದ ಸೆಳವಿಗೆ ಸಿಕ್ಕು ತಮಿಳು ಸೀರಿಯಲ್ ಜಗತ್ತಿಗೆ ಅಡಿಯಿರಿಸಿದ್ದರು. ಈವತ್ತಿಗೆ ಆಕೆಯ ಪಾಲಿಗೆ ತಮಿಳು ಕಿರುತೆರೆಯಲ್ಲಿ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನೂ ಸಂಪಾದಿಸಿಕೊಂಡಿರುವ ಅಕ್ಷಿತಾ ಈಗ ತಮಿಳು ಚಿತ್ರವೊಂದರ ಮೂಲಕ ನಾಯಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ.

ʻಬ್ರಹ್ಮಚಾರಿʼ, ʻಐ ಲವ್ ಯೂʼ, ʻಶಿವಾರ್ಜುನʼ ಮುಂತಾದ ಚಿತ್ರಗಳ ಮೂಲಕ ಅಕ್ಷಿತಾ ಕನ್ನಡದ ಪ್ರೇಕ್ಷಕರಿಗೆಲ್ಲ ಪರಿಚಿತರಾಗಿದ್ದಾರೆ. ಈ ನಡುವೆ ತಮಿಳು ಸೀರಿಯಲ್‌ಗಳಾಗಿ ನಟಿಸುವ ಮೂಲಕ ಭಾರೀ ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ. ಹಾಗೆ ಅಕ್ಷಿತಾ ನಟಿಸುತ್ತಿದ್ದ ಪ್ರಸಿದ್ಧ ತಮಿಳು ಧಾರಾವಾಹಿ ನಾಲ್ಕು ತಿಂಗಳ ಹಿಂದೆ ಮುಕ್ತಾಯಗೊಂಡಿತ್ತು. ಅದಾದ ನಂತರ ಸೀರಿಯಲ್ಲುಗಳ ಅವಕಾಶವಿದ್ದರೂ ಕೂಡಾ ಅಕ್ಷಿತಾರ ಆಸಕ್ತಿ ಹೊರಳಿಕೊಂಡಿದ್ದದ್ದು ಸಿನಿಮಾ ರಂಗದತ್ತ. ತಮಿಳು ಕಿರುತೆರೆ ಜಗತ್ತಿನ ಮುಖ್ಯ ನಾಯಕಿಯಾಗಿ ದಾಖಲಾಗಿದ್ದ ಅಕ್ಷಿತಾ, ಸಿನಿಮಾದಲ್ಲಿ ನಟಿಸುವ ಮೂಲಕ ಏಕತಾನತೆಯನ್ನು ದಾಟಿಕೊಳ್ಳುವ ನಿರ್ಧಾರ ಮಾಡಿದ್ದರು.
ಅಂಥಾ ಹೊತ್ತಿನಲ್ಲಿ ತಮಿಳಿನಲ್ಲೊಂದು ಚೆಂದದ ಅವಕಾಶ ಸಿಕ್ಕಿದೆ.

ಕನ್ನಡದ ಸಿದ್ಲಿಂಗು-2 ಚಿತ್ರವನ್ನು ನಿರ್ಮಾಣ ಮಾಡಿದ್ದ ಬ್ಯಾನರಿನಲ್ಲಿಯೇ ಈ ಚಿತ್ರವೂ ತಯಾರಾಗುತ್ತಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ರೂಪುಗೊಳ್ಳಲಿದೆ. ವಿಶೇಷವೆಂದರೆ, ಅಕ್ಷಿತಾ ಬಯಸಿದಂಥಾ ಪಾತ್ರವೇ ಇಲ್ಲಿ ಸಿಕ್ಕಿದೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗೆಗಾಗಲಿ, ಅಕ್ಷಿತಾರ ಪಾತ್ರದ ಬಗೆಗಾಗಲಿ ಹೆಚ್ಚೇನೂ ಮಾಹಿತಿ ಜಾಹೀರು ಮಾಡುವಂತಿಲ್ಲ. ಆದರೆ, ಒಂದೊಳ್ಳ್ಳೆ ತಂಡ, ಹೊಸತೆನ್ನಿಸುವಂಥಾ ಕಥಾನಕದೊಂದಿಗೆ ಈ ಸಿನಿಮಾ ತಯಾರಾಗುತ್ತಿರುವ ಬಗ್ಗೆ ಅಕ್ಷಿತಾರೊಳಗೊಂದು ಖುಷಿ ಇದೆ. ಸದ್ಯ ಕೊಡಗಿನ ಸುತ್ತಮುತ್ತ ಸದರಿ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

ತಮಿಳು ಒಂದು ಹಂತದಲ್ಲಿ ಅಕ್ಷಿತಾ ಪಾಲಿಗೆ ಗುರುತಿರದ ಭಾಷೆಯಾಗಿತ್ತು. ಆ ಭಾಷೆಯಲ್ಲೇ ಧಾರಾವಾಹಿಯೊಂದರ ನಾಯಕಿಯಾಗೋ ಅವಕಾಶ ಕೂಡಿ ಬಂದಾಗ, ಪ್ರತಿಭೆಯ ಬಲದಿಂದಲೇ ಅದನ್ನು ತಮ್ಮದಾಗಿಸಿಕೊಂಡಿದ್ದವರು ಅಕ್ಷಿತಾ. ಹಾಗೆ ತಮಿಳು ಕಿರುತೆರೆಗೆ ತೆರಳಿ ಅಲ್ಲಿನ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರುವ ಅಕ್ಷಿತಾ ಪಾಲಿಗೆ, ಅಲ್ಲಿಯೇ ನಟಿಯಾಗಿ ನೆಲೆಗಾಣುವ ವಿಪುಲ ಅವಕಾಶಗಳಿದ್ದಾವೆ. ಆದರೂ ಕೂಡಾ ಕನ್ನಡ ಚಿತ್ರರಂಗವೇ ತನ್ನ ಪಾಲಿನ ಖಾಯಂ ನೆಲೆ ಅಂದುಕೊಂಡಿರುವ ಅವರು, ಈಗಾಗಲೇ ಕರ್ನಾಟಕದ ಅಳಿಯ, ಮಿಸ್ಟರ್ ಆಂಡ್ ಮಿಸೆಸ್ ಎಂಬೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆರಡೂ ಸನಿಮಾಗಳೀಗ ಬಿಡುಗಡೆಯ ಹೊಸ್ತಿಲಿನಲ್ಲಿವೆ.

ಹೀಗೆ ಪರಭಾಷಾ ನೆಲದಲ್ಲಿಯೂ ನೆಲೆ ಕಂಡುಕೊಂಡು, ಕನ್ನಡ ಚಿತ್ರರಂಗದಲ್ಲಿಯೂ ಮಿಂಚುವ ಲಕ್ಷಣಗಳನ್ನ ಹೊಂದಿರುವ ಅಕ್ಷಿತಾ ಕೊಡಗಿನವರು. ಬಿಎಸ್‍ಸಿ ಪದವೀಧರೆಯಾಗಿರೋ ಅಕ್ಷಿತಾ ಕ್ಲಾಸಿಕಲ್ ಡ್ಯಾನ್ಸರ್ ಕೂಡಾ ಹೌದು. ಕುಟುಂಬದಲ್ಲಿ ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಕೂಡಾ ಆರಂಭದಿಂದಲೇ ನಟಿಯಾಗೋ ಕನಸು ಸಾಕಿಕೊಂಡಿದ್ದವರು ಅಕ್ಷಿತಾ. ಪದವಿ ಮುಗಿಯುತ್ತಲೇ ಕೆಲಸಕ್ಕೆ ಸೇರಿಕೊಳ್ಳುವ ಸಂದರ್ಭ ಬಂದಾಗ ಸೀದಾ ತನ್ನ ಕನಸಿನ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆಯೂರಿದ್ದ ಈಕೆ, ಸಾಯಿ ಕುಮಾರ್ ನಟಿಸಿದ್ದ ರಿಯಲ್ ಪೊಲೀಸ್ ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಮೂಲಕ ಎಂಟ್ರಿ ಪಡೆದುಕೊಂಡಿದ್ದ ಅಕ್ಷಿತಾ ಆ ನಂತರದಲ್ಲಿ ಒಂದಷ್ಟು ಚಿತ್ರಗಳಲ್ಲಿ ಸಹನಟಿಯಾಗಿ ನಟಿಸಿ, ನಂತರ ನಾಯಕಿಯಾಗಿಯೂ ಹೊರಹೊಮ್ಮಿದ್ದರು.

ಈ ನಡುವೆ ತಮಿಳು ಸೀರಿಯಲ್ಲುಗಳ ಅವಕಾಶ ಸಿಕ್ಕಿ, ಅಲ್ಲಿ ಪ್ರಸಿದ್ಧಿ ಬಂದರೂ ಕನ್ನಡವೇ ಅಕ್ಷಿತಾರ ಪಾಲಿಗೆ ಪ್ರಧಾನ ಆದ್ಯತೆಯಾಗಿತ್ತು. ಕನ್ನಡದ ನೆಲೆಯಿಂದಲೇ ಬೇರೆ ಬೇರೆ ಭಾಷೆಗಳಲ್ಲಿಯೂ ನಟಿಸಬೇಕೆಂಬುದು ಅವರ ಬಯಕೆ. ಓರ್ವ ನಟಿಯಾಗಿ ಅಕ್ಷಿತಾರದ್ದು ಭಿನ್ನ ಅಭಿರುಚಿ. ಸಿಕ್ಕ ಅವಕಾಶಗಳನ್ನು ಅಳೆದೂ ತೂಗಿ ಒಪ್ಪಿಕೊಳ್ಳುವ ಈಕೆಯ ಪ್ರಧಾನ ಆದ್ಯತೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೇ. ನಟನೆಗೆ ಅವಕಾಶವಿರುವ ಭಿನ್ನ ಪಾತ್ರಗಳಲ್ಲಿ ಮಿಂಚುವ ಆಸೆ ಹೊಂದಿರುವ ಅಕ್ಷಿತಾ ಈಗ ತಮಿಳಿನಲ್ಲಿ ನಾಯಕಿಯಾಗಿ ಅವತರಿಸಿದ್ದಾರೆ. ತೆಲುಗಿಗೂ ಎಂಟರಿ ಕೊಡುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಕನ್ನಡದಲ್ಲಿಯೂ ಒಂದಷ್ಗಟು ಒಳ್ಳೆ ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿವೆ. ಸ್ತ್ರೀ ಪ್ರಧಾನ ಚಿತ್ರದ ಕನಸು ಹೊಂದಿರೋ ಅಕ್ಷಿತಾ, ಅಂಥಾದ್ದೊಂದು ಅಮೋಘ ಅವಕಾಶ ಕನ್ನಡದಿಂದಲೇ ಸಿಗುವ ನಿರೀಕ್ಷೆ ಹೊಂದಿದ್ದಾರೆ.

Continue Reading

ಕಿರುತೆರೆ

Shri Devi Mahathme: ಬರ್ತಿದೆ ಪಾರ್ವತಿ ಜಗನ್ಮಾತೆಯಾದ ಕಥೆ “ಶ್ರೀ ದೇವೀ ಮಹಾತ್ಮೆ”; ವೀಕ್ಷಣೆ ಎಲ್ಲಿ?

Shri Devi Mahathme: ಇನ್ನು ಈ ಧಾರಾವಾಹಿಯು ಅದ್ಧೂರಿಯಾಗಿ, ಅಮೋಘ ಸೆಟ್‌ ಗಳು ಮತ್ತು ಅತ್ಯದ್ಭುತವಾಗಿರುವ ಗ್ರಾಫಿಕ್ಸ್‌ ತಂತ್ರಜ್ಞಾನಗಳಿಂದ ಚಿತ್ರೀಕರಣಗೊಳ್ಳುತ್ತಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರೋಮೋಗಳಿಗೆ ಜನರು ಮನಸೋತಿದ್ದು, ಧಾರಾವಾಹಿಯನ್ನು ನೋಡಲು ಕಾತರತೆಯಿಂದ ಕಾಯುತ್ತಿದ್ದಾರೆ.

VISTARANEWS.COM


on

Koo

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯು (star suvrna) ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕಥೆಗಳನ್ನು ನೀಡುವ ಸಲುವಾಗಿ ಗುರು ರಾಘವೇಂದ್ರ ವೈಭವ, ಹರ ಹರ ಮಹಾದೇವ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ (Shri Devi Mahathme) ಹಾಗು ಎಡೆಯೂರು ಶ್ರೀ ಸಿದ್ದಲಿಂಗೇಶ್ವರದಂತಹ ಧಾರಾವಾಹಿಗಳನ್ನು ನೀಡುತ್ತಾ ಬಂದಿದೆ. ಇದೀಗ ನಿಮ್ಮ ಮನರಂಜನೆಯನ್ನು ದುಪ್ಪಟ್ಟುಗೊಳಿಸಲು ಜಗವನು ಕಾಯುವ ಕರುಣೆಯ ತಾಯಿ ‘ಪಾರ್ವತಿ’ಯ ಕಥೆಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ ಅದೇ “ಶ್ರೀ ದೇವೀ ಮಹಾತ್ಮೆ”.

ಪುರಾಣಗಳ ಪ್ರಕಾರ ಸತಿಯು ಅತ್ಯಂತ ಸುಂದರವಾಗಿರುತ್ತಾಳೆ. ತಪಸ್ವಿ ಶಿವನಿಗೆ ಮನಸೋಲುವ ಸತಿ, ಮುಂದೆ ಪಾರ್ವತಿಯಾಗಿ ಹೇಗೆ ಮರು ಜನ್ಮತಾಳುತ್ತಾಳೆ ? ಹಾಗು ಮಹಾಕಾಳಿಯ ರುದ್ರಾವತಾರವನ್ನು ಏಕೆ ಧರಿಸುತ್ತಾಳೆ ? ಎಂಬುದರ ಜೊತೆಗೆ ಜಗನ್ಮಾತೆಯ ಮಹಿಮೆಯನ್ನು, ಪವಾಡಗಳನ್ನು ಅರ್ಥಗರ್ಭಿತವಾಗಿ ಎಳೆ ಎಳೆಯಾಗಿ ಮನಮುಟ್ಟುವಂತೆ ಜನರಿಗೆ ತಿಳಿಸುವುದೇ ‘ಶ್ರೀ ದೇವೀ ಮಹಾತ್ಮೆ’ಯ ಮುಖ್ಯ ಉದ್ದೇಶ.

ಇನ್ನು ಈ ಧಾರಾವಾಹಿಯು ಅದ್ಧೂರಿಯಾಗಿ, ಅಮೋಘ ಸೆಟ್‌ ಗಳು ಮತ್ತು ಅತ್ಯದ್ಭುತವಾಗಿರುವ ಗ್ರಾಫಿಕ್ಸ್‌ ತಂತ್ರಜ್ಞಾನಗಳಿಂದ ಚಿತ್ರೀಕರಣಗೊಳ್ಳುತ್ತಿದೆ. ಟಿವಿಯಲ್ಲಿ ಪ್ರಸಾರವಾಗುತ್ತಿರುವ ಪ್ರೋಮೋಗಳಿಗೆ ಜನರು ಮನಸೋತಿದ್ದು, ಧಾರಾವಾಹಿಯನ್ನು ನೋಡಲು ಕಾತರತೆಯಿಂದ ಕಾಯುತ್ತಿದ್ದಾರೆ. ಶಿವನ ಪಾತ್ರವನ್ನು ಅರ್ಜುನ್ ರಮೇಶ್, ಪಾರ್ವತಿಯ ಪಾತ್ರವನ್ನು ಜೀವಿತಾ ವಸಿಷ್ಠ ನಿರ್ವಹಿಸುತ್ತಿದ್ದಾರೆ. ಜೊತೆಗೆ ಈ ಪೌರಾಣಿಕ ಧಾರಾವಾಹಿಯು ಅತ್ಯುತ್ತಮ ತಾರಾಗಣವನ್ನು ಹೊಂದಿದ್ದು, ನಂದಿ ಮೂವೀಸ್ ನಿರ್ಮಾಣ ಸಂಸ್ಥೆಯು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ: Shubman Gill: ಕಿರುತೆರೆ​ ನಟಿಯೊಂದಿಗೆ ಶುಭಮನ್​ ಗಿಲ್ ಮದುವೆ?; ಸ್ವತಃ ಸ್ಪಷ್ಟನೆ ನೀಡಿದ ನಟಿ

ಪಾರ್ವತಿ ಜಗನ್ಮಾತೆಯಾದ ಕಥೆ “ಶ್ರೀ ದೇವೀ ಮಹಾತ್ಮೆ” ನಿಮ್ಮ ಮನೆ ಮನದಂಗಳದಲ್ಲಿ ಇದೇ ಜುಲೈ 1 ರಿಂದ ಸೋಮ-ಶನಿವಾರ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

{ಬದಲಾದ ಸಮಯದಲ್ಲಿ ಬರ್ತಿದೆ ನಿಮ್ಮ ನೆಚ್ಚಿನ ಧಾರಾವಾಹಿ “ಗೌರಿ ಶಂಕರ” ಇದೇ ಸೋಮವಾರದಿಂದ ಸಂಜೆ 6.30 ತಪ್ಪದೇ ವೀಕ್ಷಿಸಿ}

Continue Reading
Advertisement
Vijayalakshmi Darshan
ಕರ್ನಾಟಕ8 mins ago

Vijayalakshmi Darshan: ಜೈಲಲ್ಲಿ ದರ್ಶನ್‌ ಭೇಟಿ ಬೆನ್ನಲ್ಲೇ ಫ್ಯಾನ್ಸ್‌ಗೆ ದೊಡ್ಡ ಸಂದೇಶ ಕೊಟ್ಟ ವಿಜಯಲಕ್ಷ್ಮೀ; ಇಲ್ಲಿದೆ ಪೋಸ್ಟ್!

Monsoon Rain Boots Fashion
ಫ್ಯಾಷನ್29 mins ago

Monsoon Rain Boots Fashion: ಮಕ್ಕಳ ಮಾನ್ಸೂನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ 3 ಬಗೆಯ ರೈನ್‌ ಬೂಟ್ಸ್

Narendra Modi
ದೇಶ53 mins ago

Narendra Modi: ಸಂಸತ್ತಿನಲ್ಲಿ ಇಬ್ಬರು ‘ಪುಟಾಣಿ’ ಅತಿಥಿಗಳನ್ನು ಸ್ವಾಗತಿಸಿದ ಮೋದಿ; ಯಾರವರು? Video ನೋಡಿ

Weight Loss Tips
ಆರೋಗ್ಯ59 mins ago

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Nadaprabhu Kempegowda
ಬೆಂಗಳೂರು1 hour ago

Essay on Kempegowda in Kannada: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ!

Nitin Gadkari
ದೇಶ2 hours ago

Nitin Gadkari: ಜಿಪಿಎಸ್‌ ತಂತ್ರಜ್ಞಾನದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಬಂಪರ್;‌ 10 ಸಾವಿರ ಕೋಟಿ ರೂ. ಆದಾಯ!

Paris Fashion Week
ಫ್ಯಾಷನ್2 hours ago

Paris Fashion Week: ಪ್ಯಾರಿಸ್‌ ಹಾಟ್‌ ಕೌಚರ್‌ ಫ್ಯಾಷನ್‌ ವೀಕ್ 2024ರ ಹೈಲೈಟ್ಸ್

Anant Ambani
ದೇಶ2 hours ago

Anant Ambani Video: ಮಹಾರಾಷ್ಟ್ರ ಸಿಎಂ ಹೆಗಲ ಮೇಲೆ ಕೈ ಹಾಕಿದ ಅಂಬಾನಿ ಮಗ! ನೀವೇನಂತೀರಿ?

Viral Video
Latest2 hours ago

Viral Video: ಜಿಮ್‌ಗೆ ಹೋಗುವವರೇ ಹುಷಾರ್‌! ಈ ವಿಡಿಯೊ ನೋಡಿ!

Acharya Pramod Krishnam
ದೇಶ3 hours ago

ಕಾಂಗ್ರೆಸ್‌ನಂತೆ 15 ತಿಂಗಳಲ್ಲಿ ಪ್ರತಿಪಕ್ಷಗಳೂ ರಾಹುಲ್‌ ಗಾಂಧಿಯಿಂದ ನಿರ್ನಾಮ; ಆಚಾರ್ಯ ಪ್ರಮೋದ್‌ ಸ್ಫೋಟಕ ಹೇಳಿಕೆ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌