Minister Of Parliament: ನೀವು ಮತ ಹಾಕಿ ಕಳುಹಿಸಿರುವ ಸಂಸದರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತೇ? - Vistara News

Latest

Minister Of Parliament: ನೀವು ಮತ ಹಾಕಿ ಕಳುಹಿಸಿರುವ ಸಂಸದರಿಗೆ ಎಷ್ಟು ಸಂಬಳ ಸಿಗುತ್ತದೆ ಗೊತ್ತೇ?

ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದ ತಕ್ಷಣ ತಮ್ಮತಮ್ಮ ಕ್ಷೇತ್ರದ ಸಂಸದರಿಗೆ (Minister Of Parliament) ಸಿಗುವ ವಿವಿಧ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಇದರಲ್ಲಿ ಅವರ ವೇತನ, ಸೌಲಭ್ಯಗಳು ಸೇರಿವೆ. ಹಾಗಾದರೆ ಪ್ರತಿ ಕ್ಷೇತ್ರದ ಸಂಸದರು ಐದು ವರ್ಷಗಳ ಅಧಿಕಾರಾವಧಿಯಲ್ಲಿ ಏನೆಲ್ಲಾ ಸೌಲಭ್ಯ ಪಡೆಯುತ್ತಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

Minister Of Parliament
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲೋಕಸಭಾ ಚುನಾವಣೆ 2024ರ (Loksabha election-2024) ಫಲಿತಾಂಶ (result) ಈಗಾಗಲೇ ಹೊರಬಿದ್ದಿದೆ. ಇದರೊಂದಿಗೆ ತಮ್ಮತಮ್ಮ ಕ್ಷೇತ್ರದ ಸಂಸದರ (Minister Of Parliament) ಅಧಿಕಾರ, ಅವರ ವಿಶೇಷ ಸೌಲಭ್ಯಗಳ ಕುರಿತಾಗಿ ಒಂದಷ್ಟು ತಿಳಿದುಕೊಳ್ಳುವ ಆಸಕ್ತಿಯಂತೂ ಎಲ್ಲರಲ್ಲೂ ಇದ್ದೇ ಇರುತ್ತದೆ.

ಭಾರತೀಯ ಸಂಸತ್ತಿನ ಎರಡು ಸದನಗಳಲ್ಲಿ ಒಂದಾಗಿರುವ ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಸದಸ್ಯರು ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಲು ಸಾರ್ವಜನಿಕರಿಂದ ಚುನಾಯಿತರಾಗುತ್ತಾರೆ. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸತ್ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇವರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಸಂಬಳ ಎಷ್ಟು?:

ಸಂಸದರು ಮಾಸಿಕವಾಗಿ 1 ಲಕ್ಷ ರೂ. ವೇತನವನ್ನು ಪಡೆಯುತ್ತಾರೆ. ಅವರ ಸಂಬಳವು ಪ್ರತಿ ಐದು ವರ್ಷಗಳಿಗೊಮ್ಮೆ ದೈನಂದಿನ ಭತ್ಯೆಗಳ ರೂಪದಲ್ಲಿ ಹೆಚ್ಚಾಗುತ್ತದೆ.

ಸಂಸತ್ತಿನ ಸದಸ್ಯರ ಭತ್ಯೆಗಳು ಮತ್ತು ಪಿಂಚಣಿ (ತಿದ್ದುಪಡಿ) ಕಾಯಿದೆ 2010ರ ಪ್ರಕಾರ ಅವರ ಮೂಲ ವೇತನವು ತಿಂಗಳಿಗೆ 50,000 ರೂ. ಅನ್ನು ಒಳಗೊಂಡಿರುತ್ತದೆ, ಸಂಬಳದ ಪ್ರಕಾರ, ಸಂಸತ್ತಿನ ಅಧಿವೇಶನಗಳಿಗೆ ಹಾಜರಾಗಲು ದೈನಂದಿನ ಭತ್ಯೆಯಾಗಿ ಅವರು 2,000 ರೂಪಾಯಿಗಳನ್ನು ಪಡೆಯುತ್ತಾರೆ. ಸಂಸದರು ರಸ್ತೆ ಮೂಲಕ ಪ್ರಯಾಣಿಸುತ್ತಿದ್ದರೆ ಪ್ರತಿ ಕಿ.ಮೀ.ಗೆ 16 ರೂ.ನಂತೆ ಪ್ರಯಾಣ ಭತ್ಯೆಗೆ ಅರ್ಹರಾಗಿರುತ್ತಾರೆ.

ಅವರು ತಿಂಗಳಿಗೆ 45,000 ರೂ.ಗಳ ಕ್ಷೇತ್ರ ಭತ್ಯೆಯನ್ನೂ ಪಡೆಯುತ್ತಾರೆ. ದೂರವಾಣಿ ಮತ್ತು ಅಂಚೆ ವೆಚ್ಚಕ್ಕೆ 15,000 ರೂ. ಸೇರಿದಂತೆ ಕಚೇರಿ ವೆಚ್ಚವಾಗಿ ತಿಂಗಳಿಗೆ 45,000 ರೂ. ಪಡೆಯುತ್ತಾರೆ.

ಇದನ್ನೂ ಓದಿ: Muslim Women: ಟಕಾ ಟಕ್‌ ಅಂದ್ರಲ್ಲ, 1 ಲಕ್ಷ ರೂ. ಕೊಡಿ; ಕಾಂಗ್ರೆಸ್‌ ಕಚೇರಿಗೆ ಲಗ್ಗೆ ಇಟ್ಟ ಮುಸ್ಲಿಂ ಮಹಿಳೆಯರು!

ಕಾರ್ಯದರ್ಶಿ, ಸಹಾಯಕರ ವೇತನ ನೀಡಲು ಅವರು ಭತ್ಯೆ ಬಳಸಿಕೊಳ್ಳಬಹುದು. ಪ್ರತಿ ತಿಂಗಳು ಸದಸ್ಯರು ತಮಗೆ ಮತ್ತು ತಮ್ಮ ಕುಟುಂಬಕ್ಕೆ ಉಚಿತ ವೈದ್ಯಕೀಯ ಸೇವೆ ಪಡೆಯಲು 500 ರೂ. ಪಡೆಯುತ್ತಾರೆ.

ಸಂಸದರಿಗೆ ವಿವಿಧ ಸಭೆಗಳಿಗೆ ಹಾಜರಾಗಲು ಸೇರಿದಂತೆ ತಮ್ಮ ಕರ್ತವ್ಯಗಳ ನಿರ್ವಹಣೆಗೆ ಉಂಟಾಗುವ ಪ್ರಯಾಣ ವೆಚ್ಚಗಳಿಗೆ ಮರುಪಾವತಿಗಳನ್ನು ನೀಡಲಾಗುತ್ತದೆ. ಸಂಸದರು ತಮ್ಮ ಅಧಿಕಾರ ಅವಧಿಗೆ ಬಾಡಿಗೆ ರಹಿತ ವಸತಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.

ಇದಲ್ಲದೆ ಸಂಸದರಿಗೆ ಮತ್ತು ಅವರ ಕುಟುಂಬದವರಿಗೆ ಬಸ್‌, ರೈಲು ಮತ್ತು ವಿಮಾನ ಪ್ರಯಾಣ ಉಚಿತವಾಗಿರುತ್ತದೆ. ಸಂಸದರು ಮತ್ತು ಅವರ ಕುಟುಂಬದವರಿಗೆ ಚಿಕಿತ್ಸೆ ಉಚಿತವಾಗಿರುತ್ತದೆ. ಒಂದೇ ಒಂದು ದಿನ ಸಂಸದರಾಗಿದ್ದರೂ ಬದುಕಿರುವವರೆಗೂ ಪ್ರತಿ ತಿಂಗಳು 25,000 ರೂ. ಪಿಂಚಣಿ ಸಿಗುತ್ತದೆ. ಹತ್ತು ವರ್ಷ ಎಂಪಿ ಆಗಿದ್ದರೆ 35,000 ರೂ. ಪಿಂಚಣಿ ಸಿಗುತ್ತದೆ. ಜತೆಗೆ ಇತರ ಸೌಲಭ್ಯಗಳೂ ಮುಂದುವರಿಯುತ್ತವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Thalapathy Vijay: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್

Thalapathy Vijay ಸಿನಿಮಾ ತಾರೆಯರು ಎಂದರೆ ಎಲ್ಲರೂ ಇಷ್ಟಪಡುತ್ತಾರೆ. ಅವರ ಜೊತೆ ನಿಂತು ಸೆಲ್ಫಿ ತೆಗೆದುಕೊಲ್ಳುವುದು, ಅವರ ಜೊತೆ ಮಾತನಾಡುವುದು ಎಂದರೆ ಅಭಿಮಾನಿಗಳಿಗೆ ಹಬ್ಬ. ಆದರೆ ಇಲ್ಲೊಬ್ಬಳು ಹುಡುಗಿ ತಮಿಳು ನಟ ದಳಪತಿ ವಿಜಯ್ ಹೆಗಲ ಮೇಲೆ ಕೈಯನ್ನು ತೆಗೆಯುವಂತೆ ವಿಜಯ್‌ಗೆ ಕೇಳಿಕೊಂಡ ವಿಡಿಯೊವೊಂದು ಸಖತ್ ವೈರಲ್ ಆಗಿದೆ. ಸಮಾರಂಭದಲ್ಲಿ 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗಿತ್ತು. ಆ ವೇಳೆ ಉತ್ತಮ ಅಂಕ ಪಡೆದು ಗೌರವಿಸಲ್ಪಟ್ಟ ಹುಡುಗಿಯೊಬ್ಬಳ ಭುಜದ ಮೇಲೆ ನಟ ವಿಜಯ್ ಕೈ ಹಾಕಿದ್ದು, ತಕ್ಷಣ ಆ ಹುಡುಗಿ ತನ್ನ ಭುಜದ ಸುತ್ತಲಿನ ಕೈಯನ್ನು ತೆಗೆಯುವಂತೆ ವಿಜಯ್‌ಗೆ ಹೇಳಿದ್ದಾಳಂತೆ.

VISTARANEWS.COM


on

Thalapathy Vijay
Koo

ಚೆನ್ನೈ : ಸಿನಿಮಾ ತಾರೆಯರು ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಅವರು ಒಂದು ವೇಳೆ ಕಣ್ಣಮುಂದೆ ಬಂದರೆ ಉತ್ಸಾಹದಲ್ಲಿ ಅವರ ಜೊತೆ ಸೆಲ್ಫಿ ತೆಗೆಯುವುದು, ಅವರನ್ನು ಹಗ್, ಕಿಸ್ ಮಾಡುವುದು ಹೀಗೆ ವಿಚಿತ್ರವಾಗಿ ವರ್ತಿಸುತ್ತಾರೆ ಜನ. ಆದರೆ ಇಲ್ಲೊಂದು ಹುಡುಗಿ ತನ್ನ ಭುಜದ ಮೇಲೆ ಕೈ ಹಾಕಿದ ಸೂಪರ್ ಸ್ಟಾರ್‌ಗೆ ಕೈ ತೆಗೆಯುವಂತೆ ಹೇಳಿದ್ದಾಳೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Thalapathy Vijay) ಆಗಿದೆ.

ತಮಿಳು ನಟ ವಿಜಯ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಕಾಲಿವುಡ್ ಚಿತ್ರರಂಗದಲ್ಲಿ ಹೆಸರಾಂತ ನಟ ದಳಪತಿ ವಿಜಯ್. ಕಾಲಿವುಡ್ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ನಟನಿಗೆ ಅಪಾರ ಅಭಿಮಾನಿ ಬಳಗವೂ ಇದೆ. ನಟ‌ ವಿಜಯ್‌ ಜೂನ್ 28ರಂದು, ಚೆನ್ನೈನಲ್ಲಿ ತಮಿಳಗ ವೆಟ್ರಿ ಕಳಗಂ ಆಯೋಜಿಸಿದ್ದ ಎರಡನೇ ವಾರ್ಷಿಕ ಶಿಕ್ಷಣ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸಮಾರಂಭದಲ್ಲಿ 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗಿತ್ತು. ಆ ವೇಳೆ ಉತ್ತಮ ಅಂಕ ಪಡೆದು ಗೌರವಿಸಲ್ಪಟ್ಟ ಹುಡುಗಿಯೊಬ್ಬಳ ಭುಜದ ಮೇಲೆ ನಟ ವಿಜಯ್ ಕೈ ಹಾಕಿದ್ದು, ತಕ್ಷಣ ಆ ಹುಡುಗಿ ತನ್ನ ಭುಜದ ಸುತ್ತಲಿನ ಕೈಯನ್ನು ತೆಗೆಯುವಂತೆ ವಿಜಯ್‌ಗೆ ಹೇಳಿದ್ದಾಳೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಹುಡುಗಿ ತನ್ನ ಭುಜದ ಸುತ್ತಲಿನ ಕೈಯನ್ನು ತೆಗೆಯುವಂತೆ ನಟ ವಿಜಯ್‌ನನ್ನು ಕೇಳುತ್ತಿರುವುದನ್ನು ತೋರಿಸುತ್ತದೆ. ಈ ವಿಡಿಯೊ ಶೀರ್ಷಿಕೆಯಲ್ಲಿ ನಟನನ್ನು ಟೀಕಿಸಲಾಗಿತ್ತು.

ಆದರೆ ಪೋಸ್ಟ್ ಮಾಡಿದ ಈ ವಿಡಿಯೊ ಕೇವಲ ಭಾಗಶಃ ಕ್ಲಿಪ್ ಆಗಿದೆ. ವಿಜಯ್ ಅವರ ಕೈಯನ್ನು ತೆಗೆಯುವಂತೆ ಕೇಳಿದ ನಂತರ, ಹುಡುಗಿ ಕ್ಯಾಮೆರಾಗಳಿಗೆ ಪೋಸ್ ನೀಡುವಾಗ ಅವರ ತೋಳನ್ನು ಹಿಡಿದಿದ್ದಾಳೆ ಎನ್ನಲಾಗಿದೆ. ಅರ್ಧ ವಿಡಿಯೊ ಹಂಚಿಕೊಳ್ಳುವ ಮೂಲಕ ನಟ ವಿಜಯ್ ಅವರ ಬಗ್ಗೆ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ನೆಟ್ಟಿಗರು ಕಿಡಿಕಾರಿದ್ದಾರೆ.

ಈ ಸಮಾರಂಭದಲ್ಲಿ ನಟ ವಿಜಯ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವ ಮೂಲಕ ಅವರನ್ನು ಶಿಕ್ಷಣದ ಕಡೆಗೆ ಪ್ರೇರೆಪಿಸಿದ್ದಾರೆ. ಕೆಟ್ಟ ಚಟಗಳಿಂದ ದೂರವಿರಲು ಒತ್ತಾಯಿಸಿದ್ದಾರೆ. ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹಾಗೂ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಅದೇ ಕೊನೆ ಅವಕಾಶವೆಂದು ಅಂದುಕೊಳ್ಳಬಾರದು. ಯಶಸ್ಸು ಎಂದಿಗೂ ಕೊನೆಗೊಳ್ಳುವುದಿಲ್ಲ ಮತ್ತು ವೈಫಲ್ಯವು ಎಂದಿಗೂ ಅಂತಿಮವಲ್ಲ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಒಟಿಟಿಯಲ್ಲಿ ಈ ವಾರ ಬಿಡುಗಡೆಯಾಗಲಿರುವ ಹೊಸ ಚಲನಚಿತ್ರಗಳು, ವೆಬ್ ಸರಣಿಗಳ ಪಟ್ಟಿ ಹೀಗಿವೆ

Viral Video

ವಿಜಯ್ ತಮ್ಮ ಮುಂದಿನ ಚಿತ್ರ “ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಜಿಒಎಟಿ) ಗಾಗಿ ಸಜ್ಜಾಗುತ್ತಿದ್ದಾರೆ. ಪ್ರಶಾಂತ್, ಪ್ರಭುದೇವ, ಸ್ನೇಹಾ, ಅಜ್ಮಲ್ ಅಮೀರ್, ವೈಭವ್, ಲೈಲಾ, ಮೋಹನ್, ಅರವಿಂದ್ ಆಕಾಶ್, ಅಜಯ್ ರಾಜ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಚಿತ್ರದಲ್ಲಿ ವಿಜಯ್ ನಾಯಕ ಮತ್ತು ಖಳನಾಯಕನಾಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 5, 2024ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Continue Reading

ವಾಣಿಜ್ಯ

New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಸೇವೆಗಳಲ್ಲಿ ಪರಿಷ್ಕರಣೆ, ಯೂನಿಯನ್ ಬಜೆಟ್‌ನ ಘೋಷಣೆ ಮತ್ತು ಆದಾಯ ತೆರಿಗೆ ರಿಟರ್ನ್ಸ್, ಡಿಜಿಟಲ್ ವ್ಯಾಲೆಟ್‌ಗಳಿಗೆ ಸಂಬಂಧಿಸಿ ಹೊಸ ನಿಯಮಗಳು (New Rules) ಜಾರಿ ಸೇರಿ ಈ ತಿಂಗಳಲ್ಲಿ ಹಲವು ಪ್ರಮುಖ ಬದಲಾವಣೆಗಳು ಆಗಲಿವೆ.

VISTARANEWS.COM


on

By

New Rules
Koo

ಜುಲೈ ತಿಂಗಳಿಗೆ ಹೆಜ್ಜೆ ಇಟ್ಟಿದ್ದೇವೆ. ಈ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ (credit card) ಬಳಕೆದಾರರು, ತೆರಿಗೆದಾರರು (taxpayers) ಮತ್ತು ಡಿಜಿಟಲ್ ವ್ಯಾಲೆಟ್ (digital wallet) ಹೊಂದಿರುವವರು ಗಮನಿಸಬೇಕಾದ ಪ್ರಮುಖ ವಿಷಯಗಳಿವೆ. 2024ರ ಜುಲೈನಲ್ಲಿ ಹಲವು ಪ್ರಮುಖ (New Rules) ಬದಲಾವಣೆಗಳು ಆಗಲಿವೆ.

ಐಸಿಐಸಿಐ ಬ್ಯಾಂಕ್ (ICICI bank) ಮತ್ತು ಎಸ್‌ಬಿಐ (SBI) ಮೂಲಕ ಕ್ರೆಡಿಟ್ ಕಾರ್ಡ್ ಸೇವೆಗಳಲ್ಲಿ ಪರಿಷ್ಕರಣೆ, ಯೂನಿಯನ್ ಬಜೆಟ್‌ನ ಘೋಷಣೆ ಮತ್ತು ಆದಾಯ ತೆರಿಗೆ ರಿಟರ್ನ್ಸ್, ಡಿಜಿಟಲ್ ವ್ಯಾಲೆಟ್‌ಗಳಿಗೆ ಹೊಸ ನಿಯಮಗಳು ಸೇರಿವೆ.

ಯಾವುದೆಲ್ಲ ಪ್ರಮುಖ ಬದಲಾವಣೆ ?

ಆದಾಯ ತೆರಿಗೆ

2024-25ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ (ITR) ಅನ್ನು 2024ರ ಜುಲೈ 31ರೊಳಗೆ ಸಲ್ಲಿಸಬೇಕು. ಸುಗಮ ಮತ್ತು ಸಮಯೋಚಿತ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳಲು ತೆರಿಗೆದಾರರು ಫೈಲಿಂಗ್ ಪ್ರಕ್ರಿಯೆಯನ್ನು ಮೊದಲೇ ಪ್ರಾರಂಭಿಸುವುದು ಸೂಕ್ತ.

ಕ್ರೆಡಿಟ್ ಕಾರ್ಡ್

ಐಸಿಐಸಿಐ ಬ್ಯಾಂಕ್ ಚಾರ್ಜ್ ಸ್ಲಿಪ್ ವಿನಂತಿ, ಚೆಕ್/ನಗದು ಪಿಕ್ ಅಪ್, ಡಯಲ್-ಎ-ಡ್ರಾಫ್ಟ್ ವಹಿವಾಟು, ಔಟ್‌ಸ್ಟೇಷನ್ ಚೆಕ್ ಪ್ರಕ್ರಿಯೆ ಮತ್ತು ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಂತಹ ವಿವಿಧ ಸೇವೆಗಳಿಗೆ ಶುಲ್ಕವನ್ನು ನಿಲ್ಲಿಸಲಿದ್ದು, ಕಾರ್ಡ್ ಬದಲಾವಣೆಗೆ 200 ರೂ. ಶುಲ್ಕ ಜಾರಿ ಮಾಡಿದೆ.

ಎಸ್‌ಬಿಐ ಕಾರ್ಡ್‌ಗಳು ಜುಲೈ 15ರಿಂದ ಅನೇಕ ಕಾರ್ಡ್‌ಗಳಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ವಹಿವಾಟುಗಳಿಗೆ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವುದನ್ನು ನಿಲ್ಲಿಸುತ್ತವೆ.

ಆಕ್ಸಿಸ್ ಬ್ಯಾಂಕ್‌ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಜುಲೈ 15ರೊಳಗೆ ನಿಲ್ಲಿಸಲಿದೆ. ಹೊಸ ಕಾರ್ಡ್ ಹೆಸರು ಮತ್ತು ರಿವಾರ್ಡ್ ಪಾಯಿಂಟ್‌ಗಳೊಂದಿಗೆ ಬರಲಿದೆ.

ಆರ್‌ಬಿಐ ಎಲ್ಲಾ ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಜುಲೈ 1ರಿಂದ ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ಪ್ರಕ್ರಿಯೆಗೊಳಿಸಬೇಕೆಂದು ಆದೇಶಿಸಿದೆ. ಇದು ಹಲವಾರು ಪ್ರಮುಖ ಬ್ಯಾಂಕ್‌ಗಳು ಮತ್ತು ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಪರಿಣಾಮ ಬೀರಲಿದೆ.

ಯೆಸ್ ಬ್ಯಾಂಕ್ ತನ್ನ ಲಾಂಜ್ ಪ್ರವೇಶ ನಿಯಮಗಳನ್ನು ಪರಿಷ್ಕರಿಸಿದೆ. ಪೂರಕ ಪ್ರವೇಶಕ್ಕಾಗಿ ಪ್ರತಿ ತ್ರೈಮಾಸಿಕಕ್ಕೆ ಕನಿಷ್ಠ 35,000 ರೂ. ಖರ್ಚು ಮಾಡಬೇಕಾಗುತ್ತದೆ.

2024ರ ಬಜೆಟ್ ಪರಿಣಾಮ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ತಿಂಗಳು ಕೇಂದ್ರ ಬಜೆಟ್ 2024 ಅನ್ನು ಪ್ರಕಟಿಸಲಿದ್ದಾರೆ. ಹಲವು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. ಆದಾಯ ತೆರಿಗೆಗಳಲ್ಲಿ ಹೊಂದಾಣಿಕೆ, ವೈದ್ಯಕೀಯ ವೆಚ್ಚ ಕಡಿತ, ಹೆಚ್ಚುವರಿ ತೆರಿಗೆ ರಿಯಾಯಿತಿ ಮತ್ತು ಪಿಂಚಣಿ ಪ್ರಯೋಜನಗಳನ್ನು ಇದು ಒಳಗೊಂಡಿರುವ ಸಾಧ್ಯತೆ ಇದೆ.

ಪೇಟಿಎಂ ವ್ಯಾಲೆಟ್‌ಗಳು

ಶೂನ್ಯ ಬ್ಯಾಲೆನ್ಸ್ ಹೊಂದಿರುವ, ಕಳೆದ ವರ್ಷ ಅಥವಾ ಹೆಚ್ಚಿನ ಅವಧಿಗೆ ಯಾವುದೇ ವಹಿವಾಟುಗಳಿಲ್ಲದ ಪೇಟಿಎಂ ನಿಷ್ಕ್ರಿಯ ವ್ಯಾಲೆಟ್‌ಗಳನ್ನು ಮುಚ್ಚಲಿದೆ. ಈ ಪ್ರಕ್ರಿಯೆ 2024ರ ಜುಲೈ 20ರಿಂದ ಪ್ರಾರಂಭವಾಗುತ್ತದೆ. ವ್ಯಾಲೆಟ್ ಮುಚ್ಚುವ ಮೊದಲು ಬಳಕೆದಾರರಿಗೆ ಸೂಚನೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Money Guide: ಸಾಲಕ್ಕೆ ಅಪ್ಲೈ ಮಾಡುವ ಮುನ್ನ ಈ ಅಂಶ ನಿಮಗೆ ತಿಳಿದಿರಲೇ ಬೇಕು

ಡೆಬಿಟ್ ಕಾರ್ಡ್

ಪಂಜಾಬ್ ನ್ಯಾಷನಲ್ ಬ್ಯಾಂಕ್ 2024ರ ಜುಲೈ 1ರಿಂದ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡುದಾರರಿಗೆ ಪಿಎನ್‌ಬಿ ತನ್ನ ಲಾಂಜ್‌ ಪ್ರವೇಶ ಪ್ರೋಗ್ರಾಂ ಅನ್ನು ನವೀಕರಿಸಿದೆ. ಇದರಲ್ಲಿ ಹೊಸ ನಿಯಮಗಳು ಅನ್ವಯವಾಗಲಿದೆ. ಪ್ರತಿ ತ್ರೈಮಾಸಿಕಕ್ಕೆ ದೇಶೀಯ ವಿಮಾನ ನಿಲ್ದಾಣ ಅಥವಾ ರೈಲ್ವೇ ಲಾಂಜ್ ಪ್ರವೇಶ ವರ್ಷಕ್ಕೆ ಅನುಮತಿ ನೀಡುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೋಣೆ ಪ್ರವೇಶ, ವಿಮಾನ ನಿಲ್ದಾಣದ ಲಾಂಜ್ ಪ್ರವೇಶಕ್ಕಾಗಿ 2 ರೂ. ಅಧಿಕೃತ ಶುಲ್ಕ ವಿಧಿಸಲಾಗುತ್ತದೆ.

Continue Reading

ಫ್ಯಾಷನ್

Off Shoulder Tops Fashion: ನೀವೂ ಆಫ್‌ ಶೋಲ್ಡರ್‌ ಟಾಪ್‌ ಧರಿಸಬಹುದು! ಆದರೆ ಈ ಎಚ್ಚರಿಕೆ ವಹಿಸಿ

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಧರಿಸುವುದು ಇಷ್ಟವಾದರೂ ಹೆಚ್ಚಾಗಿ ನಾವು ಇದರಲ್ಲಿ ಕಂಫರ್ಟ್ ಆಗಿರೋದು ಸಾಧ್ಯವಿಲ್ಲ. ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಸ್ಟೈಲಿಶ್ ಆಗಿ ಮಿಂಚಬಹುದು ಮಾತ್ರವಲ್ಲ ನೀವು ಹೆಚ್ಚು ಕಂಫರ್ಟ್ ಆಗಿ ಇರಬಹುದು. ಅದಕ್ಕಾಗಿ ಇಲ್ಲಿದೆ ಟಿಪ್ಸ್.

VISTARANEWS.COM


on

By

Off Shoulder Tops Fashion
Koo

ಶೋಲ್ಡರ್ ಇಲ್ಲದ ಟಾಪ್‌ಗಳು (Off Shoulder Tops Fashion) ಹೆಚ್ಚು ಸ್ಟೈಲಿಶ್ (stylish) ಲುಕ್ ನೀಡುವುದು ಮಾತ್ರವಲ್ಲ ಇದು ಟ್ರೆಂಡಿ (trendy) ಆಯ್ಕೆಯೂ ಹೌದು. ಆದರೆ ಹೆಚ್ಚಿನವರಿಗೆ ಇದನ್ನು ಧರಿಸುವುದು, ನಿರ್ವಹಣೆ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಇಷ್ಟವಿದ್ದರೂ ಇಂತಹ ದಿರಸು ಹಾಕಿಕೊಂಡು ಹೊರಗೆ ಹೋಗಲು ಬಹುತೇಕ ಮಂದಿ ಹಿಂಜರಿಯುತ್ತಾರೆ. ಆದರೆ ಸರಿಯಾದ ರೀತಿಯಲ್ಲಿ ಶೋಲ್ಡರ್ ಇಲ್ಲದ ದಿರಸು ಧರಿಸಿದರೆ ಹೆಚ್ಚು ಕಂಫರ್ಟ್ ಫೀಲ್ ಆಗುವುದು ಮಾತ್ರವಲ್ಲ ಎಲ್ಲರ ನಡುವೆ ಸ್ಟೈಲಿಶ್ ಆಗಿಯೂ ಮಿಂಚಬಹುದು.

ಶೋಲ್ಡರ್ ಇಲ್ಲದ ದಿರಸುಗಳನ್ನು ಧರಿಸಲು ಈ ಆರು ಪ್ರಮುಖ ಸಲಹೆಗಳನ್ನು ಪಾಲಿಸಿ. ಆಗ ನೀವೂ ಸ್ಟೈಲಿಶ್ ಆಗಿ ಮಿಂಚಬಹುದು.

ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಿ

ಶೋಲ್ಡರ್ ಇಲ್ಲದ ದಿರಸು ಧರಿಸಿ ಹೆಚ್ಚು ಕಂಫರ್ಟ್ ಆಗಬೇಕಾದರೆ ಸ್ಟ್ರಾಪ್ ಇಲ್ಲದ ಬ್ರಾ ಆಯ್ಕೆ ಮಾಡಬೇಕು. ಇದು ಆಫ್-ದ-ಶೋಲ್ಡರ್ ಟಾಪ್‌ಗಳಿಗೆ ಹೆಚ್ಚು ಬೆಂಬಲವನ್ನು ನೀಡುತ್ತದೆ. ಮುಖ್ಯವಾಗಿ ಎದೆ ಭಾಗ ಅಗಲವಾಗಿದ್ದರೆ ಸರಿಯಾದ ಒಳ ಉಡುಪು ಆಯ್ದುಕೊಳ್ಳುವುದು ಬಹು ಮುಖ್ಯವಾಗಿರುತ್ತದೆ. ಬ್ರ್ಯಾಂಡೆಡ್ ಒಳ ಉಡುಪುಗಳನ್ನು ಆಯ್ಕೆ ಮಾಡಿ. ಇದರಲ್ಲಿ ಒಳ ಉಡುಪಿನ ಮೇಲ್ಭಾಗ ಮತ್ತು ಕೆಳ ಭಾಗದಲ್ಲಿ ನಯವಾದ ಮತ್ತು ಆಕರ್ಷಕವಾದ ಸ್ಟ್ರಾಪ್ ಗಳನ್ನು ಹೊಂದಿರುತ್ತದೆ. ಇಂತವುಗಳು ಹೆಚ್ಚು ಕಂಫರ್ಟ್ ಕೊಡುತ್ತದೆ ಮತ್ತು ದಿರಿಸಿನ ಮೇಲಿನ ಅನುಮಾನವನ್ನು ಮನಸ್ಸಿನಿಂದ ತೊಡೆದು ಹಾಕುತ್ತದೆ.


ಸ್ಟ್ರಕ್ಚರ್ಡ್ ಟಾಪ್ಸ್

ಶೋಲ್ಡರ್ ಇಲ್ಲದ ದಿರಸು ಧರಿಸುವಾಗ ಮೇಲ್ಭಾಗದಲ್ಲಿ ಹೆಚ್ಚುವರಿ ಬೆಂಬಲ ಮತ್ತು ಸಹಾಯಕ್ಕೆ ಬಿಲ್ಟ್-ಇನ್ ಬೋನಿಂಗ್, ಅಂಡರ್‌ವೈರ್ ಅಥವಾ ನೆಕ್‌ಲೈನ್ ಸುತ್ತಲೂ ದಪ್ಪವಾದ ರಬ್ಬರ್ ಬ್ಯಾಂಡ್‌ ಇರುವುದನ್ನು ಖಚಿತಪಡಿಸಿಕೊಳ್ಳಿ. ರಚನಾತ್ಮಕ ಮೇಲ್ಭಾಗಗಳು ಹೆಚ್ಚು ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲ ದೇಹದ ಗಾತ್ರಕ್ಕೆ ತಕ್ಕಂತೆ ಸರಿಯಾಗಿ ಹೊಂದಿಕೆಯಾಗುವಂತೆ ಮಾಡಿ ಕೊಂಚ ಸ್ಲಿಮ್ ಮತ್ತು ಫಿಟ್ ಆಗಿರುವಂತೆ ತೋರಿಸುತ್ತದೆ.

ಮೃದು ಬಟ್ಟೆಗಳಿಗೆ ಆದ್ಯತೆ ನೀಡಿ

ಆಫ್-ದಿ-ಶೋಲ್ಡರ್ ಟಾಪ್‌ಗಳಿಗಾಗಿ ಹೆಚ್ಚು ದಪ್ಪವಾದ ಬಟ್ಟೆಗಳು ಸರಿಯಾದ ಆಯ್ಕೆಯಲ್ಲ. ತೆಳು ಮತ್ತು ಮೃದುವಾದ ಬಟ್ಟೆಗಳು ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹತ್ತಿ, ಲೆನಿನ್ ಬಟ್ಟೆಗಳಿಂದ ವಿನ್ಯಾಸಗೊಳಿಸಿರುವ ದಿರಿಸನ್ನು ಆಯ್ಕೆ ಮಾಡಿಕೊಳ್ಳಬಹುದು.


ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡಿ

ಶೋಲ್ಡರ್ ಇಲ್ಲಿದ ದಿರಸು ಧರಿಸುವಾಗ ಸರಿಯಾದ ಬಾಟಮ್ ದಿರಸನ್ನು ಆಯ್ಕೆ ಮಾಡುವುದು ಕೂಡ ಬಹು ಮುಖ್ಯವಾಗಿದೆ. ಇದು ಶೋಲ್ಡರ್ ಲೆಸ್ ಟಾಪ್‌ಗಳಿಗೆ ಸಪೋರ್ಟಿವ್ ಆಗಿದ್ದರೆ ಹೆಚ್ಚು ಕಂಫರ್ಟ್ ಫೀಲ್ ಕೊಡುತ್ತದೆ. ಹೊಕ್ಕುಳ ಬಳಿ ಬರುವ ಜೀನ್ಸ್ ಅಥವಾ ಸ್ಕರ್ಟ್‌ ಗಳನ್ನು ಆಯ್ಕೆ ಮಾಡುವುದು ಮತ್ತು ಹೆಚ್ಚು ದಪ್ಪ, ಅಗಲವಾದ ಎಲಾಸ್ಟಿಕ್ ಇರುವ ಶೋಲ್ಡರ್ ಲೆಸ್ ಟಾಪ್ ಗಳಿಗೆ ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಎ-ಲೈನ್ ಸ್ಕರ್ಟ್‌ಗಳು ಮತ್ತು ವೈಡ್ ಲೆಗ್ ಪ್ಯಾಂಟ್‌ಗಳು ಹೆಚ್ಚು ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: International Mud Day: ಆರೋಗ್ಯ, ಸೌಂದರ್ಯದ ಪಾಲಿಗೆ ಹೊನ್ನು ಈ ಮಣ್ಣು!

ಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡಿ

ಶೋಲ್ಡರ್ ಲೆಸ್ ಟಾಪ್ ಗಳಲ್ಲಿ ಭುಜದ ಮೇಲ್ಭಾಗ ಸಮಾನವಾಗಿ ಇರುವುದಿಲ್ಲ. ಎದೆ ಭಾಗ ದೊಡ್ಡದಾಗಿರುವವರಿಗೆ ಕಂಠರೇಖೆಯ ದಿರಿಸುಗಳು ಹೆಚ್ಚು ಸುಂದರವಾಗಿ ಕಾಣುತ್ತದೆ. ಇದು ಎದೆಯ ಭಾಗದಲ್ಲಿ ಸುತ್ತುವರೆದಿರುವ ಲೇಯರ್‌ಗಳು, ರಫಲ್ಸ್ ಅಥವಾ ಇತರ ವಿಶೇಷ ವಿನ್ಯಾಸವನ್ನು ಒಳಗೊಂಡಿರುತ್ತದೆ.


ಸೂಕ್ತ ಆಭರಣ ಧರಿಸಿ

ಶೋಲ್ಡರ್ ಲೆಸ್ ಟಾಪ್‌ಗಳನ್ನು ಆಯ್ಕೆ ಮಾಡುವಾಗ ದಪ್ಪ ಕಿವಿಯೋಲೆಗಳು, ನೆಕ್ಲೇಸ್‌ಗಳು ಕೂಡ ಗಮನ ಸೆಳೆಯುವಂತಿರಬೇಕು. ನೆಕ್ಲೇಸ್ ಧರಿಸಲು ಇಷ್ಟವಿಲ್ಲದೇ ಇದ್ದರೆ ಸ್ಟ್ರೈಕಿಂಗ್ ಕಿವಿಯೋಲೆಗಳನ್ನು ಆಯ್ಕೆ ಮಾಡಿ. ಇದರೊಂದಿಗೆ ಆಕರ್ಷಕ ಬೆಲ್ಟ್‌ ಗಳು ಸ್ಟೈಲಿಶ್ ಲುಕ್ ನೀಡುತ್ತದೆ ಮಾತ್ರವಲ್ಲ ಇದು ಸೊಂಟದ ಭಾಗ ಬಿಗಿಗೊಳಿಸಲು ಅದ್ಭುತವಾದ ಪರಿಕರವಾಗಿದೆ.

Continue Reading

ವಾಣಿಜ್ಯ

Birla Opus: ಬಿರ್ಲಾ ಪೇಂಟ್ ಜಾಹೀರಾತು ನಿಮಗೂ ಇಷ್ಟ ಆಗಿರಬೇಕಲ್ಲವೇ? ಇದರ ಸಂದೇಶ ಏನು? ಹಿನ್ನೆಲೆ ಏನು? ಕುತೂಹಲಕರ ಮಾಹಿತಿ

ಆದಿತ್ಯ ಬಿರ್ಲಾ ಗ್ರೂಪ್‌ನ (Aditya Birla Group) ಗ್ರಾಸಿಮ್ ಇಂಡಸ್ಟ್ರೀಸ್ ಅಡಿಯಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ತನ್ನ ಮೊದಲ ವಿಷಯಾಧಾರಿತ ಸಂವಹನ ಚಿತ್ರವನ್ನು ಬಿಡುಗಡೆ ಮಾಡಿದೆ. ‘ಮೇಕ್ ಲೈಫ್ ಬ್ಯೂಟಿಫುಲ್’ ಎಂಬ ಅಡಿಬರಹದ ಅಡಿಯಲ್ಲಿ ಬಿರ್ಲಾ ಓಪಸ್‌ನ (Birla Opus) ಬ್ರಾಂಡ್ ಫಿಲಾಸಫಿಯನ್ನು ಈ ಜಾಹೀರಾತು ಚಿತ್ರವು ಪ್ರದರ್ಶಿಸಿದೆ. ಬದುಕನ್ನು ಸುಂದರಗೊಳಿಸು ಎಂಬ ಸಂದೇಶ ಸಾರುವ ಈ ಜಾಹೀರಾತಿನ ಕಲ್ಪನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಜಾಹೀರಾತಿನ ಹಿನ್ನೆಲೆಯ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Birla Opus
Koo

ವಕ್ತ್ ಎ ಹಿ ಖುಷಿಯೋ ಕೋ ಖೋಲ್ ದೋ ದುನಿಯಾ ಕೋ ರಂಗ್ ದೋ… ಜಾಹೀರಾತಿನಲ್ಲಿ ಬರುವ ಈ ಹಾಡು ಎಲ್ಲರ ಮನದಲ್ಲೂ ಗುನುಗುನಿಸುತ್ತಿರಬಹುದು. ಬಿರ್ಲಾ ಪೇಂಟ್ ನ (Birla Opus) ಈ ಜಾಹೀರಾತು (advertisement) ಎಲ್ಲರಿಗೂ ಇಷ್ಟವಾಗಿರಬೇಕು. ಇದರ ಸಂದೇಶ ಏನು, ಹಿನ್ನೆಲೆ ಏನು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬಣ್ಣಗಳೇ (colour) ಇಲ್ಲದ ತನ್ನ ಸುತ್ತಮುತ್ತಲಿನ ಪ್ರಪಂಚಕ್ಕೆ ಪುಟ್ಟ ಬಾಲಕನೊಬ್ಬ (kid) ಬಣ್ಣ ಕೊಡುತ್ತಾ ಹೋಗುತ್ತಾನೆ. ತಾಯಿ ಮೊದಲು ಆತನನ್ನು ತಡೆಯುತ್ತಾಳೆ. ಆದರೆ ಬಾಲಕ ತನ್ನ ಪಟ್ಟು ಬಿಡುವುದಿಲ್ಲ. ಎಲ್ಲರೂ ಅವನು ನೀಡಿದ ಬಣ್ಣದ ಖುಷಿಯಲ್ಲಿ ಮಿಂದೇಳುವಗ ಆತನ ತಾಯಿಗೂ ಬಣ್ಣ ಬೇಕೆಂದೆನಿಸುತ್ತದೆ. ಅಲ್ಲಿಗೆ ಜಾಹೀರಾತು ಕೊನೆಗೊಳ್ಳುತ್ತದೆ.

ಆದಿತ್ಯ ಬಿರ್ಲಾ ಗ್ರೂಪ್‌ನ (Aditya Birla Group) ಗ್ರಾಸಿಮ್ ಇಂಡಸ್ಟ್ರೀಸ್ ಅಡಿಯಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ತನ್ನ ಮೊದಲ ವಿಷಯಾಧಾರಿತ ಸಂವಹನ ಚಿತ್ರವನ್ನು ಬಿಡುಗಡೆ ಮಾಡಿದೆ. ‘ಮೇಕ್ ಲೈಫ್ ಬ್ಯೂಟಿಫುಲ್’ ಎಂಬ ಅಡಿಬರಹದ ಅಡಿಯಲ್ಲಿ ಬಿರ್ಲಾ ಓಪಸ್‌ನ ಬ್ರಾಂಡ್ ಫಿಲಾಸಫಿಯನ್ನು ಈ ಚಿತ್ರವು ಪ್ರದರ್ಶಿಸಿದೆ.

ಇದು ಬಿರ್ಲಾ ಓಪಸ್ ಬ್ರ್ಯಾಂಡ್‌ನ ಬದಲಾವಣೆಯ ಶಕ್ತಿಯನ್ನು ಪ್ರದರ್ಶಿಸುತ್ತದೆ ಮತ್ತು ಹೆಚ್ಚು ಸುಂದರವಾದ ಜಗತ್ತನ್ನು ರಚಿಸಲು ಸಹಾಯ ಮಾಡುತ್ತದೆ ಎನ್ನುವ ಸಂದೇಶವನ್ನು ಒಳಗೊಂಡಿದೆ.

ಹಿಂದೆಂದೂ ಮಾಡದಿರುವ ಹೈ-ಡೆಫಿನಿಷನ್, ನೈಜ ಸಿಲೂಯೆಟ್‌ಗಳೊಂದಿಗೆ 3ಡಿ ವೈಶಿಷ್ಟ್ಯದ ಅನಿಮೇಷನ್ ಚಿತ್ರ ಇದಾಗಿದೆ.

ಖ್ಯಾತ ಭಾರತೀಯ ಸಂಗೀತ ಸಂಯೋಜಕ ರಾಮ್ ಸಂಪತ್ ರಚಿಸಿದ ಸುಮಧುರ ಟ್ರ್ಯಾಕ್ ಅನ್ನು ಇದು ಒಳಗೊಂಡಿದೆ. ಜಗತ್ತಿಗೆ ಬಣ್ಣ ನೀಡಿ ಸಂದೇಶದೊಂದಿಗೆ ಅಭಿಯಾನವನ್ನು ಉಂಟು ಮಾಡುವಂತಿದೆ.

ಈ ಜಾಹೀರಾತು ಚಿತ್ರವನ್ನು ಹಿಂದಿ ಮತ್ತು ಎಲ್ಲಾ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲಿ ಮಾಡಲಾಗಿದೆ. ಪ್ರಚಾರ ಅಭಿಯಾನ ಮೂಡಿಸಲು ಮತ್ತು ಪ್ರಯೋಗಗಳನ್ನು ಪ್ರೇರೇಪಿಸಲು ಎಲ್ಲ ಮಾದರಿಯ ಮಾಧ್ಯಮಗಳಿಂದ ಇದು ಬೆಂಬಲಿತವಾಗಿದೆ.
ಲಿಯೋ ಬರ್ನೆಟ್ ಇಂಡಿಯಾದಿಂದ ಸಂವಹನವನ್ನು ಪರಿಕಲ್ಪನೆ ಮಾಡಲಾಗಿದ್ದು, ಬ್ರೆಜಿಲ್ ಮೂಲದ ಪ್ರಮುಖ ಜಾಗತಿಕ ಅನಿಮೇಷನ್ ಸ್ಟುಡಿಯೋ ಝಾಂಬಿ ಸ್ಟುಡಿಯೋ ಇದನ್ನು ನಿರ್ಮಿಸಿದೆ.

ಪೇಂಟ್ ಉದ್ಯಮ ಪ್ರವೇಶ

2024ರ ಫೆಬ್ರವರಿಯಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಬಿರ್ಲಾ ಓಪಸ್ ಅನ್ನು ಪ್ರಾರಂಭಿಸುವುದರೊಂದಿಗೆ ಪೇಂಟ್ ಉದ್ಯಮಕ್ಕೆ ಪ್ರವೇಶಿಸಿದೆ. ತನ್ನ ಪೇಂಟ್ಸ್ ವ್ಯವಹಾರವನ್ನು ವಿಸ್ತರಿಸಲು ಬದ್ಧವಾಗಿರುವ ಕಂಪನಿಯು 2025ರ ವೇಳೆಗೆ ರಾಷ್ಟ್ರವ್ಯಾಪಿ ಆರು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ.

ಇದರ ಉದ್ದೇಶ ಏನು?

ಅನಿಮೇಷನ್ ಜಾಹೀರಾತು ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಬಿರ್ಲಾ ಓಪಸ್‌ನ ಸಿಇಒ ರಕ್ಷಿತ್ ಹರ್‌ಗಾವೆ, ಉದ್ದೇಶ ಮತ್ತು ಮೌಲ್ಯದೊಂದಿಗೆ ಇರುವ ಉತ್ಪನ್ನಗಳು ಮತ್ತು ಅನುಭವಗಳನ್ನು ಹುಡುಕುವ ಇಂದಿನ ಗ್ರಾಹಕರ ವಿವೇಚನಾಶೀಲ ಅಭಿರುಚಿಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ಚಿತ್ರದ ತಮಾಷೆಯ ನಿರೂಪಣೆಯೊಂದಿಗೆ ‘ಮೇಕ್’ ಎಂಬ ನಮ್ಮ ಬ್ರ್ಯಾಂಡ್ ನಂಬಿಕೆಯನ್ನು ನಿರೂಪಿಸುತ್ತದೆ. ಲೈಫ್ ಬ್ಯೂಟಿಫುಲ್.. ಎಂಬುದು ನಮ್ಮ ಗ್ರಾಹಕರೊಂದಿಗೆ ಈ ಪರಿವರ್ತನೆಯ ಪ್ರಯಾಣವನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ ಎಂಬ ಸಂದೇಶವನ್ನು ಇದು ಸಾರುತ್ತದೆ ಎಂದು ಹೇಳಿದರು.

ಬಿರ್ಲಾ ಓಪಸ್‌ನ ಮಾರ್ಕೆಟಿಂಗ್ ಮುಖ್ಯಸ್ಥ ಇಂದರ್‌ಪ್ರೀತ್ ಸಿಂಗ್, ಬಿರ್ಲಾ ಓಪಸ್‌ಗಾಗಿ ನಮ್ಮ ಮೊದಲ ಬ್ರ್ಯಾಂಡ್‌ ಕಿರುಚಿತ್ರವನ್ನು ಅನಾವರಣಗೊಳಿಸಲು ನಾವು ರೋಮಾಂಚನಗೊಂಡಿದ್ದೇವೆ. ಹಾಲಿವುಡ್ ಚಲನಚಿತ್ರಗಳಲ್ಲಿನ ಹೆಚ್ ಡಿ ಅನಿಮೇಷನ್‌ಗೆ ಹೋಲಿಸಬಹುದಾದ ವಿಶ್ವದ ಅತ್ಯುತ್ತಮ ಅನಿಮೇಷನ್ ಶೈಲಿಗಳ ಮೂಲಕ ನೈಜ ಸೌಂದರ್ಯವನ್ನು ಈ ಕಿರುಚಿತ್ರವು ಉದಾಹರಿಸುತ್ತದೆ. ಇದು ಭಾರತದಲ್ಲಿನ ಬಣ್ಣಗಳ ಉದ್ಯಮದಲ್ಲಿ ಮೊದಲನೆಯದು. ಖ್ಯಾತ ಸಂಗೀತ ಸಂಯೋಜಕ ರಾಮ್ ಸಂಪತ್ ಅವರು ರಚಿಸಿರುವ ‘ದುನಿಯಾ ಕೋ ರಂಗ್ ದೋ’ ಸಂದೇಶವು ಜೀವನದಲ್ಲಿ ಭರವಸೆ, ಸಂತೋಷ ಮತ್ತು ಸೌಂದರ್ಯವನ್ನು ಕಂಡುಕೊಳ್ಳುವ ಪ್ರಬಲ ಕಲ್ಪನೆಯೊಂದಿಗೆ ಅನುರಣಿಸುತ್ತದೆ ಎಂದರು.

ಬಿರ್ಲಾ ಓಪಸ್ ಇಂದಿನ ಕ್ರಿಯಾತ್ಮಕ ಹೊಸ ಭಾರತೀಯ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾದ ಬ್ರ್ಯಾಂಡ್ ಆಗಿದೆ ಮತ್ತು ನಾವು ಅಭಿಯಾನಕ್ಕೆ ತಾಜಾ ಮತ್ತು ನವೀನ ವಿಧಾನವನ್ನು ನೀಡಲು ಬಯಸಿದ್ದೇವೆ. ಕಥೆ ಹೇಳುವಿಕೆಗಾಗಿ ಅನಿಮೇಷನ್ ಅನ್ನು ಬಳಸುವುದರಿಂದ, ನಮ್ಮ ಚಿತ್ರವು ನಮ್ಮ ಪ್ರೇಕ್ಷಕರು ಹೇಗೆ ಸ್ಫೂರ್ತಿದಾಯಕ ಮತ್ತು ರೂಪಾಂತರಗೊಳ್ಳುವ ಬಣ್ಣದಿಂದ ತಮ್ಮನ್ನು ಸುತ್ತುವರಿದಿರಬಹುದು ಎಂಬುದನ್ನು ಗ್ರಹಿಸಲು ಮಾಡಿರುವ ಕಲಾತ್ಮಕ ವಿಧಾನವಾಗಿದೆ ಎಂದು ಸಿಸಿಒ ಪಬ್ಲಿಸಿಸ್ ಗ್ರೂಪ್ – ಸೌತ್ ಏಷ್ಯಾ ಮತ್ತು ಚೇರ್ಮನ್ ರಾಜದೀಪಕ್ ದಾಸ್ ತಿಳಿಸಿದ್ದಾರೆ.


ಚಿತ್ರದ ಪರಿಕಲ್ಪನೆ ಏನು?

ಕಪ್ಪು ಬಿಳುಪಿನ ಜಗತ್ತಿನಲ್ಲಿ ಚಿತ್ರವು ತೆರೆದುಕೊಳ್ಳುತ್ತದೆ. ಮಗು ತನ್ನ ಮನೆಯಲ್ಲಿರುವ ವಸ್ತುವನ್ನು ಸ್ಪರ್ಶಿಸುತ್ತದೆ. ಅದು ಬಣ್ಣ ಪಡೆಯುತ್ತದೆ. ಮಗುವಿಗೆ ರೋಮಾಂಚನವಾಗುತ್ತದೆ. ಮಗು ಈ ರೀತಿ ಮಾಡುವುದನ್ನು ಯಾರಾದರೂ ನೋಡಿದರೆ ಆತನ ಮೇಲೆ ಕೋಪಗೊಳ್ಳಬಹುದು ಎಂದು ತಾಯಿ ಕಳವಳ ವ್ಯಕ್ತಪಡಿಸುತ್ತಾಳೆ. ಆದ್ದರಿಂದ ಹಾಗೆ ಮಾಡದಂತೆ ಹೇಳಿ ಅವನನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಮನೆಯಿಂದ ತಾಯಿಯೊಂದಿಗೆ ಮಗನು ಹೊರಬಂದಾಗ ಅವನು ಮತ್ತೆ ತನ್ನ ಶಕ್ತಿಯನ್ನು ಬಳಸಲು ಪ್ರಯತ್ನಿಸುತ್ತಾನೆ ಮತ್ತು ಅನಂತರ ಅದನ್ನು ಸಂಭ್ರಮಿಸುತ್ತಾ ಹೋಗುತ್ತಾನೆ. ಮಂದ ಮತ್ತು ನಿರ್ಜೀವ ಜಗತ್ತನ್ನು ಅವನು ವರ್ಣರಂಜಿತ, ರೋಮಾಂಚಕ ಮತ್ತು ಸಂತೋಷವಾಗಿ ಪರಿವರ್ತಿಸುತ್ತಾ ಸಾಗುತ್ತಾನೆ. ಜಗತ್ತನ್ನು ಸುಂದರ ಸ್ಥಳವನ್ನಾಗಿ ಮಾಡಲು ತನ್ನ ಮಗ ತಂದ ಸಕಾರಾತ್ಮಕ ಪರಿಣಾಮವನ್ನು ತಾಯಿ ಅನಂತರ ಅರಿತುಕೊಳ್ಳುತ್ತಾಳೆ.

ಇದನ್ನೂ ಓದಿ: NEET-UG Row: ನೀಟ್‌ ಕೌನ್ಸೆಲಿಂಗ್‌ಗೆ ತಡೆ ಇಲ್ಲ ಎಂದು ಪುನರುಚ್ಚರಿಸಿದ ಸುಪ್ರೀಂ ಕೋರ್ಟ್

ಬಿರ್ಲಾ ಓಪಸ್ ಪೇಂಟ್ಸ್

ಆದಿತ್ಯ ಬಿರ್ಲಾ ಗ್ರೂಪ್‌ನ ಪ್ರಮುಖ ಸಂಸ್ಥೆಯಾದ ಗ್ರಾಸಿಮ್ ಇಂಡಸ್ಟ್ರೀಸ್ ಅಡಿಯಲ್ಲಿರುವ ಬಿರ್ಲಾ ಓಪಸ್ ಪೇಂಟ್ಸ್ ಭಾರತದ ಗ್ರಾಹಕರಿಗೆ ಅಲಂಕಾರಿಕ ಚಿತ್ರಕಲೆಗೆ ಬೇಕಾದ ಬಣ್ಣಗಳನ್ನು ಒದಗಿಸುತ್ತದೆ. 2024ರಲ್ಲಿ ಪ್ರಾರಂಭವಾದ ಬಿರ್ಲಾ ಓಪಸ್ ಪೇಂಟ್ಸ್ ಇಂಟೀರಿಯರ್, ಎಕ್ಸ್‌ಟೀರಿಯರ್ಸ್, ವಾಟರ್‌ಫ್ರೂಫಿಂಗ್, ಎನಾಮೆಲ್ ಪೇಂಟ್‌ಗಳು, ವುಡ್ ಫಿನಿಶ್‌ಗಳು ಮತ್ತು ವಾಲ್‌ಪೇಪರ್‌ಗಳಂತಹ ವಿಭಾಗಗಳಾದ್ಯಂತ ಉನ್ನತ ಉತ್ಪನ್ನಗಳ ಶ್ರೇಣಿಯನ್ನು ಒಳಗೊಂಡ ಸಂಪೂರ್ಣ ಪೋರ್ಟ್‌ಫೋಲಿಯೊವನ್ನು ಹೊಂದಿದೆ.

ಭಾರತದಾದ್ಯಂತ ಹರಡಿರುವ ಆರು ಉತ್ಪಾದನಾ ಘಟಕಗಳೊಂದಿಗೆ ಬಿರ್ಲಾ ಓಪಸ್ ಪೇಂಟ್ಸ್ ಅಲಂಕಾರಿಕ ಬಣ್ಣಗಳ ವಿಭಾಗದಲ್ಲಿ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಅಂತೂ, ಈ ವಿಶಿಷ್ಟ ಜಾಹೀರಾತು ಈ ಉತ್ಪನ್ನಕ್ಕೆ ಭಾರಿ ಪ್ರಚಾರ ತಂದು ಕೊಟ್ಟಿದೆ.‌ ಈ ಜಾಹೀರಾತಿನ ಸೃಜನಶೀಲ ಕಲ್ಪನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Continue Reading
Advertisement
karnataka Weather Forecast
ಮಳೆ51 seconds ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Medha Patkar
ದೇಶ29 mins ago

Medha Patkar: ನರ್ಮದಾ ಬಚಾವೋ ಹೋರಾಟಗಾರ್ತಿ ಮೇಧಾ ಪಾಟ್ಕರ್‌ಗೆ ಜೈಲು; 10ಲಕ್ಷ ರೂ. ದಂಡ

Karave Protest
ಕರ್ನಾಟಕ31 mins ago

Karave Protest: ಕನ್ನಡಿಗರಿಗೆ ಉದ್ಯೋಗ ನೀಡಲು ಕರವೇ ನಾರಾಯಣ ಗೌಡ ನಿಯೋಗ ಮನವಿ; ಶೀಘ್ರವೇ ಕ್ರಮ ಎಂದ ಸಿಎಂ

Arecanut Insurance Karnataka last date
ಕೃಷಿ50 mins ago

Arecanut Insurance : ಮೆಣಸು, ಅಡಿಕೆಗೆ ವಿಮೆ ಪ್ರೀಮಿಯಂ ಕಟ್ಟಲು ಜು.31 ಕೊನೆಯ ದಿನ

Thalapathy Vijay
Latest1 hour ago

Thalapathy Vijay: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್

The whole society should be very careful about fake news says CM Siddaramaiah
ಕರ್ನಾಟಕ1 hour ago

Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

Money Guide
ಮನಿ-ಗೈಡ್1 hour ago

Money Guide: ವಿದೇಶ ಪ್ರವಾಸಕ್ಕೆ ಮುಂದಾಗಿದ್ದೀರಾ? ಅತ್ಯುತ್ತಮ ಕೊಡುಗೆ ನೀಡುವ ಈ ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್‌ ಬಗ್ಗೆ ತಿಳಿಯಿರಿ

Suraj Revanna Case
ಪ್ರಮುಖ ಸುದ್ದಿ2 hours ago

Suraj Revanna Case: ಸೂರಜ್ ರೇವಣ್ಣ ಮತ್ತೆ 2 ದಿನ ಸಿಐಡಿ ಕಸ್ಟಡಿಗೆ; ವಕೀಲ ದೇವರಾಜೇಗೌಡಗೆ ಜಾಮೀನು

Actor Yash to recreate the 50s and 70s era in Toxic
ಸಿನಿಮಾ2 hours ago

Actor Yash: ರಾಕಿಂಗ್‌ ಸ್ಟಾರ್‌ ಯಶ್‌ ʼಟಾಕ್ಸಿಕ್‌ʼ ಸಿನಿಮಾದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌!

New Rules
ವಾಣಿಜ್ಯ2 hours ago

New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ52 seconds ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌