V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ - Vistara News

ಪ್ರಮುಖ ಸುದ್ದಿ

V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

V Somanna profile: ಅತಿ ಸಣ್ಣ ಕುಗ್ರಾಮವೊಂದರಿಂದ ಒಂದು ಜತೆ ಬಟ್ಟೆ ಮತ್ತು ಪುಟ್ಟ ಬ್ಯಾಗ್ ಹಿಡಿದುಕೊಂಡು ಹೊಟ್ಟೆಪಾಡಿಗಾಗಿ ಬೆಂಗಳೂರೆಂಬ ಮಹಾ ನಗರಕ್ಕೆ ಕಾಲಿಟ್ಟ ಸೋಮಣ್ಣ ಅವರು, ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರಿನ ಪ್ರಮುಖ ನಾಯಕರಾಗಿ ಬೆಳೆದರು. ಮೊದಲು ಕಾರ್ಪೊರೇಟರ್‌, ಬಳಿಕ ಶಾಸಕ, ಈಗ ಸಂಸದ-ಸಚಿವ…ಹೀಗೆ ವಿ ಸೋಮಣ್ಣ ಅವರ ರಾಜಕೀಯ ಹಾದಿ ರೋಚಕವಾಗಿದೆ.

VISTARANEWS.COM


on

V Somanna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿ ಸೋಮಣ್ಣ ಅವರು (V Somanna profile) ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಕಾರ್ಪೋರೇಟರ್‌ ಆಗಿ ರಾಜಕೀಯ ಹಾದಿ ತುಳಿದವರು. ಈಗ ಕೇಂದ್ರ ಸಚಿವರಾಗುವ ತನಕ ಅವರು ಸಾಗಿ ಬಂದ ರಾಜಕೀಯ ಹಾದಿ ರೋಚಕವಾಗಿದೆ. ವಿ ಸೋಮಣ್ಣ ಅವರು ಜನ ಸಮೂಹದ ನಡುವಿನಿಂದ ನಾಯಕರಾಗಿ ಬೆಳೆದು ಬಂದವರು. ಹಾಗಾಗಿ 40 ವರ್ಷಗಳ ಬಳಿಕವೂ ಅವರ ಪ್ರಭಾವ ಮತ್ತು ವರ್ಚಸ್ಸು ರಾಜ್ಯ ರಾಜಕಾರಣದಲ್ಲಿ ಪ್ರಖರವಾಗಿ ಉಳಿದಿದೆ.
ನಾಡಿನ ಅತಿ ಸಣ್ಣ ಕುಗ್ರಾಮವೊಂದರಿಂದ ಒಂದು ಜತೆ ಬಟ್ಟೆ ಮತ್ತು ಪುಟ್ಟ ಬ್ಯಾಗ್ ಹಿಡಿದುಕೊಂಡು ಹೊಟ್ಟೆಪಾಡಿಗಾಗಿ ಬೆಂಗಳೂರೆಂಬ ಮಹಾ ನಗರಕ್ಕೆ ಕಾಲಿಟ್ಟ ಸೋಮಣ್ಣ ಅವರು, ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರಿನ ಪ್ರಮುಖ ನಾಯಕರಾಗಿ ಬೆಳೆದರು.

ಅವರು ರಾಮನಗರ ಜಿಲ್ಲೆಯ ಮರಳವಾಡಿ ಎಂಬ ಸಣ್ಣ ಊರಿನ ತೇರಬೀದಿಯಿಂದ ಬೆಂಗಳೂರೆಂಬ ರಾಜಬೀದಿಯಲ್ಲಿ ಅಂಬೆಗಾಲಿಟ್ಟು, ಜನತಾ ಬಜಾರ್‌ನಿಂದ ಜನತಾಪಕ್ಷಕ್ಕೆ ಪ್ರವೇಶ ಪಡೆದು, ಕಾರ್ಪೊರೇಟರ್ ಆಗಿ ಲೋಕಲ್ ಲೀಡರ್ ಎಂದು ಗುರುತಿಸಿಕೊಂಡು, ಶಾಸಕರಾಗಿ ವಿಧಾನಸಭೆಗೆ ಪ್ರವೇಶ ಪಡೆದು, ಸಚಿವರಾಗಿ ಇಡೀ ರಾಜ್ಯ ಗುರುತಿಸುವಂಥ ಕೆಲಸ ಮಾಡುವ ಮೂಲಕ ನಾಡಿನ ಮುಂಚೂಣಿ ರಾಜಕೀಯ ಧುರೀಣರಾಗಿ ಬೆಳೆದವರು.
ಶಿಸ್ತು, ಶ್ರದ್ಧೆ, ನೇರ ನಡೆ-ನುಡಿ, ಸರಳ ಸಜ್ಜನಿಕೆ, ಎನಗಿಂತ ಕಿರಿಯರಿಲ್ಲ ಎಂಬ ನಿನಮ್ರತೆ, ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಛಲ, ಜನ ಸಾಮಾನ್ಯರ ತೀರಾ ಸಾಮಾನ್ಯ ಸಮಸ್ಯೆಗಳಿಗೂ ಸ್ಪಂದಿಸುವ ಗುಣ, ಅಭಿವೃದ್ಧಿ ಕುರಿತ ದೂರದೃಷ್ಟಿ, ಅಧ್ಯಯನ ಪ್ರವೃತ್ತಿ, ಜಾತಿ ಧರ್ಮ ಜನಾಂಗದ ಸೀಮಾ ರೇಖೆಯನ್ನು ದಾಟಿ ಜನರೊಂದಿಗೆ ಬೆರೆಯುವಿಕೆ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ನಿಷ್ಠೆ, ಆದರೆ ನಾಲ್ಕು ಜನರಿಗೆ ಒಳಿತಾಗುತ್ತದೆ ಎಂದೆನಿಸಿದರೆ ಸಾಮ ದಾನ ಭೇದ ದಂಡ ಅಸ್ತ್ರ ಪ್ರಯೋಗಿಸಲೂ ಹಿಂಜರಿದ ದಿಟ್ಟತನ, ಧರ್ಮೋ ರಕ್ಷತಿ ರಕ್ಷಿತಃ ಎಂಬ ಗೀತೋಪದೇಶದ ಪಾಲನೆ, ಸರ್ವ ಜಾತಿ-ಧರ್ಮಗಳ ಸ್ವಾಮೀಜಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರ…ಹೀಗೆ ಹತ್ತು ಹಲವಾರು ಹೆಚ್ಚುಗಾರಿಕೆಗಳು ಸೋಮಣ್ಣ ಅವರನ್ನು ಇಂದು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿವೆ.

ಊರು ಬಿಡುವಾಗ ಅಮ್ಮ ಕೊಟ್ಟ 15 ರೂ. ಇತ್ತು…

ಮರಳವಾಡಿ ಎಂಬ ಕುಗ್ರಾಮದಿಂದ ಬದುಕಿನ ದಾರಿ ಹುಡುಕುತ್ತ ತಾವು ಬೆಂಗಳೂರಿಗೆ ಬಂದ ಕತೆಯನ್ನು ಸೋಮಣ್ಣ ಹೇಳುವುದು ಹೀಗೆ:
ಊರಲ್ಲಿ ಪಿಯುಸಿ ಮುಗಿಯುತ್ತಿದ್ದಂತೆ, ಅದ್ಯಾವುದೋ ಹೊಸ ದಿಕ್ಕಿನತ್ತ ನನ್ನ ಮನಸ್ಸು ತುಡಿಯುತ್ತಿತ್ತು. ಊರು ಬಿಟ್ಟು ಬೆಂಗಳೂರಿಗೆ ಹೋಗಲು ಮನಸ್ಸು ತವಕಿಸುತ್ತಿತ್ತು. ಆದರೆ ಮನೆಯಲ್ಲಿ ವ್ಯವಸಾಯ ಮಾಡುವಂತೆ ಒತ್ತಾಯಿಸುತ್ತಿದ್ದರು. ಅದೊಂದು ದಿನ ಗಟ್ಟಿ ಮನಸ್ಸು ಮಾಡಿ ಊರು ಬಿಟ್ಟೆ. ಜೇಬಿನಲ್ಲಿ ಅಮ್ಮ ಕೊಟ್ಟ 15 ರೂ. ಇತ್ತು. ಜತೆಗೆ ಇನ್ನೊಂದು ಜತೆ ಬಟ್ಟೆಯ ಸಣ್ಣ ಬ್ಯಾಗು.

ಬೆಂಗಳೂರಿನಲ್ಲಿ ಬಸಪ್ಪ ಸರ್ಕಲ್ ನಲ್ಲಿ ಬಂದು ಇಳಿದೆ. ನನಗಾಗ 18 ವರ್ಷ. ಅಲ್ಲೇ ಪಕ್ಕದಲ್ಲಿ ಸಣ್ಣ ಧೋಬಿ ಅಂಗಡಿ ಇಟ್ಟುಕೊಂಡಿದ್ದ ನಾಗಣ್ಣ ಎಂಬುವರು ನನ್ನನ್ನು ಗುರುತಿಸಿ, ಏನ್ ಸೋಮಣ್ಣ ಇಲ್ಲಿ ಎಂದರು. ಅಣ್ಣಾ ಏನಾದರು ಒಂದು ದಾರಿ ತೋರಿಸು ಅಣ್ಣಾ ಎಂದು ಅವರಿಗೆ ದುಂಬಾಲು ಬಿದ್ದೆ. ಅವರು ಸೀದಾ ನನ್ನನ್ನು ಚಂಗಲ್ ರಾಯ ಶೆಟ್ಟಿ ಎಂಬುವರ ಬಳಿ ಕರೆದೊಯ್ದರು. ಅವರದು ಮೋಟಾರ್ ರಿಪೇರಿ ಅಂಗಡಿ. ಹುಡುಗಾ ನನ್ನ ಜತೆಗೇ ಇದ್ದುಬಿಡು ಎಂದರವರು. ತಮ್ಮ ಅಂಗಡಿಯಲ್ಲೇ ಉಳಿದುಕೊಳ್ಳಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಟ್ಟರು. ಮೋಟಾರು ಬಿಡಿ ಭಾಗಗಳನ್ನು ಎತ್ತಿ ಕೊಡುವುದು, ಅವರು ಕರೆದಲ್ಲಿಗೆ ಹೋಗುವುದು…ಇಷ್ಟೇ ನನ್ನ ಕೆಲಸ.
ಕೆಲ ದಿನಗಳ ಬಳಿಕ ಸಿಂಗಲ್ ರೂಮಿನ ಮನೆಯೊಂದಕ್ಕೆ ಶಿಫ್ಟ್ ಆದೆ. ಕೇವಲ ಆರಡಿ ಎಂಟಡಿ ಅಳತೆಯ ಶೀಟಿನ ಮನೆ ಅದು. ಬಾಡಿಗೆ ತಿಂಗಳಿಗೆ ಕೇವಲ 7 ರೂಪಾಯಿ!

ಪಿಯುಸಿಯಲ್ಲಿ ಫೇಲ್‌ ಆಗಿದ್ದೆ

ನಾನು ಪಿಯುಸಿಯ ಒಂದು ವಿಷಯದಲ್ಲಿ ಫೇಲ್ ಆಗಿದ್ದೆ. ಅದನ್ನು ಪಾಸ್ ಮಾಡಿಕೊಂಡೆ. ಆಗೆಲ್ಲ ಪಿಯುಸಿ ಅಂದರೆ ಒಂದೇ ವರ್ಷ. ಹಗಲು ಮೋಟಾರು ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ವಿವಿ ಪುರಂ ಸಂಜೆ ಕಾಲೇಜು ಸೇರಿದೆ. ರಾತ್ರಿಯಿಡೀ ಕಷ್ಟಪಟ್ಟು ಓದಿ ಪದವಿಯಲ್ಲಿ ಒಳ್ಳೆಯ ಅಂಕ ಗಳಿಸಿದೆ.

ಮುಂದೆ ಧೋಬಿ ಅಂಗಡಿಯ ನಾಗಣ್ಣ ನನ್ನನ್ನು ಜಯಸಿಂಹ ಎಂಬುವವರನ್ನು ಪರಿಚಯಿಸಿ ಅವರ ಕಂಪನಿಯಲ್ಲಿ ಕೆಲಸ ಕೊಡಿಸಿದರು. ನಾಗಣ್ಣ ಬಲು ಬುದ್ಧಿವಂತ ಮತ್ತು ಶ್ರಮಜೀವಿ. ನನ್ನ ಬದುಕಿನ ಆರಂಭದ ದಿನಗಳಲ್ಲಿ ನನಗೆ ಆಸರೆಯಾಗಿ ನಿಂತರು. ನಂತರ 1971ರಲ್ಲಿ ನಾನು ಕನ್ಷುಮರ್ ಫೆಡರೇಷನ್ ಗೆ ಅರ್ಜಿ ಸಲ್ಲಿಸಿದೆ. ಗುಮಾಸ್ತನ ಕೆಲಸ ಗಿಟ್ಟಿಸುವುದು ಆ ದಿನಗಳಲ್ಲಿ ನನ್ನ ಮಹತ್ವಾಕಾಂಕ್ಷೆಯಾಗಿತ್ತು! ಎ ಶಾಂತಮಲ್ಲಪ್ಪ ಅವರು ಫೆಡರೇಷನ್ ನ ಅಧ್ಯಕ್ಷರಾಗಿದ್ದರು. ಅವರು ಸಂದರ್ಶನ ತಗೊಂಡು, ”ಗುಮಾಸ್ತನ ಕೆಲಸ ಬೇಡ ನಿನಗೆ. ಸೇಲ್ಸ್ ಅಸಿಸ್ಟೆಂಟ್ ಕೆಲಸಕ್ಕೆ ಬಾ” ಎಂದರು.

ಸೇಲ್ಸ್‌ ಅಸಿಸ್ಟಂಟ್‌ ಕೆಲಸ

ಕೆಲಸಕ್ಕೆ ಸೇರಲು 500 ರೂ. ಡಿಪಾಸಿಟ್ ಕಟ್ಟಬೇಕಿತ್ತು. ಅಷ್ಟು ದುಡ್ಡು ಹೊಂದಿಸಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಊರಲ್ಲಿ ಹೋಗಿ ಕೇಳಿದರೆ, ಏಯ್ ಇಲ್ಲಿ ಬೇಸಾಯ ಮಾಡಿಕೊಂಡಿರು. ಬೆಂಗಳೂರಿಗೆ ಯಾಕೆ ಹೋಗಬೇಕು ನೀನು ಎಂದರು. ಕೊನೆಗೆ ಅಮ್ಮ 200 ರೂ. ಕೊಟ್ಟು ಕಳಿಸಿದರು. ಬೆಂಗಳೂರಿನ ಶಿವಾಜಿ ಟಾಕೀಸ್ ಬಳಿ ಆಗ ಉರುವಲು ಕಟ್ಟಿಗೆ ಮಾರುವ ವೇ ಬ್ರಿಡ್ಜ್ ಇತ್ತು. ಅಲ್ಲಿ ತಿಮ್ಮಯ್ಯ ಎಂಬೊಬ್ಬರ ಪರಿಚಯವಾಗಿತ್ತು. ಅವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಾಗ 500 ರೂ. ಕೊಟ್ಟರು. ಅಂತೂ ಬೆಂಗಳೂರಿನ ಕೆ ಜಿ ರೋಡ್ ನ ಜನತಾ ಬಜಾರ್ ನಲ್ಲಿ ಕೆಲಸ ಶುರು ಮಾಡಿದೆ. ಅಲ್ಲಿಂದ ನನ್ನ ಬದುಕಿಗೆ ಹೊಸ ತಿರುವು ಸಿಕ್ಕಿತು.

ಜನತಾ ಬಜಾರ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ, ಇನ್ನಷ್ಟು ದುಡಿಯಬೇಕು ಎಂದೆನಿಸುತ್ತಿತ್ತು. ಅದೇ ಹೊತ್ತಿಗೆ ವಿಜಯಾ ಬ್ಯಾಂಕ್ ಮ್ಯಾನೇಜರ್ ಪ್ರಭಾಕರ್ ಎಂಬುವರ ಪರಿಚಯವಾಯಿತು. ಇನ್ನು ಏನಾದರು ಮಾಡಬೇಕಲ್ಲ ಸರ್ ನಾನು ಅಂದೆ. ಪಿಗ್ಮಿ ಕಲೆಕ್ಟ್ ಮಾಡು ನೀನು ಎಂದು ಸಲಹೆ ನೀಡಿದರು. ಮಧ್ಯಾಹ್ನ 1.30ರಿಂದ 4 ಗಂಟೆಯವರೆಗಿನ ಬಿಡುವಿನ ಅವಧಿಯಲ್ಲಿ ಅಂಗಡಿ ಅಂಗಡಿ ತಿರುಗಿ ಪಿಗ್ಮಿ ಕಲೆಕ್ಟ್ ಮಾಡತೊಡಗಿದೆ. ಸಂಜೆ ಡ್ಯೂಟಿ ಮುಗಿದ ಮೇಲೆ ರಾತ್ರಿ 9 ಗಂಟೆವರೆಗೆ ಮತ್ತೆ ಇದೇ ಕೆಲಸ. ಇದರಿಂದ ತಿಂಗಳಿಗೆ ಸುಮಾರು 2 ಸಾವಿರ ರೂ. ಎಕ್ಟ್ರಾ ಇನ್ ಕಮ್ ಬರತೊಡಗಿತು. ಜನತಾ ಬಜಾರ್ ಸಂಬಳ ಹೆಚ್ಚು ಕಡಿಮೆ ಇಷ್ಟೇ ಬರುತ್ತಿತ್ತು.

ಜನತಾ ಬಜಾರ್‌ನಿಂದ ಜನತಾ ಪಕ್ಷಕ್ಕೆ…

ಜನತಾ ಬಜಾರ್ ಯೂನಿಯನ್‌ನಲ್ಲಿ ನಾನು ಮುಂಚೂಣಿ ನಾಯಕನಾಗಿ ಬೆಳೆದೆ. ಸಹಜವಾಗಿಯೇ ದೇವೇಗೌಡರು, ಬಿ ಎಲ್ ಶಂಕರ್, ಪಿ ಜಿ ಆರ್ ಸಿಂಧಿಯಾ ಮತ್ತಿರರ ಸಂಪರ್ಕಕ್ಕೆ ಬಂದೆ. ಅವರ ಮೂಲಕ ನಾನು ಅನಧಿಕೃತವಾಗಿ ಜನತಾ ಪಕ್ಷಕ್ಕೆ ಎಂಟ್ರಿ ಪಡೆದೆ. ಈ ನಡುವೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಕೈಗೊಂಡಿದ್ದ ಆಂದೋಲನದಲ್ಲೂ ಕೈ ಜೋಡಿಸಿದೆ. ಚಂದ್ರಶೇಖರ ಅವರು ನಡೆಸಿದ ರಾಷ್ಟ್ರವ್ಯಾಪಿ ಪಾದಯಾತ್ರೆಯಲ್ಲೂ ಹೆಜ್ಜೆ ಹಾಕಿದೆ.

1986ರ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಪಿ ಜಿ ಆರ್ ಸಿಂಧಿಯಾ ಪರ ಸಕ್ರಿಯವಾಗಿ ಕೆಲಸ ಮಾಡಿದೆ. ಅದೇ ವರ್ಷ ಬೆಂಗಳೂರು ಕಾರ್ಪೊರೇಷನ್ ಎಲೆಕ್ಷನ್ ಘೋಷಣೆ ಆಯಿತು. ಮುನಿಯಪ್ಪ ಅಂತ ಒಬ್ಬರು ರೆವಿನ್ಯು ಇನ್ಸ್ ಪೆಕ್ಟರ್ ನನಗೆ ಆತ್ಮೀಯರಾಗಿದ್ದರು. ಅವರು, ಸೋಮಣ್ಣ ನೀನೂ ಎಲೆಕ್ಷನ್ ಗೆ ನಿಂತು ಬಿಡು ಎಂದು ಹವಾ ಹಾಕಿದರು. ನನಗೂ ಉಮೇದು ಬಂತು. ವಿಜಯ ನಗರ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಟಿಕೆಟ್‌ ಕೊಡುವ ಭರವಸೆಯೂ ಸಿಕ್ಕಿತು. ಆದರೆ ನಾಮಪತ್ರ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಜೀವರಾಜ್ ಆಳ್ವ, ರಘುಪತಿ ಇನ್ನೂ ಕೆಲವರು ಬೇರೆಯವರಿಗೆ ಟಿಕೆಟ್ ಕೊಡಲು ಶತಪ್ರಯತ್ನ ನಡೆಸಿದರು.

ಡಿ ಮಂಜುನಾಥ್ ಆಗ ಜನತಾ ಪಕ್ಷದ ರಾಜ್ಯಾಧ್ಯಕ್ಷರು. ಮಂಜುನಾಥ್, ವಿ ಆರ್ ಕೃಷ್ಣಯ್ಯರ್, ಟಿ ಆರ್ ಶಾಮಣ್ಣ, ಎಚ್ ಡಿ ದೇವೇಗೌಡ, ಬಿ ಎಲ್ ಶಂಕರ್ ಮತ್ತಿತರರನ್ನು ಸಂಪರ್ಕಿಸಿ ನಾನು ಟಿಕೆಟ್ ಗೆ ಪಟ್ಟು ಹಿಡಿದೆ. ಇದಕ್ಕಾಗಿ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಚಂದ್ರಶೇಖರ ಅವರನ್ನೂ ಸಂಪರ್ಕಿಸಿ ವಿನಂತಿಸಿದೆ. ಆದರೆ ಕೊನೆಗೆ ಬಿ ಎಲ್ ಶಂಕರ್ ಒಬ್ಬರು ಮಾತ್ರ ನನ್ನ ಪರವಾಗಿ ನಿಂತರು. ಅಂತಿಮವಾಗಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊರೆ ಹೋದೆ. ಕನಕಪುರ ಬೈ ಎಲೆಕ್ಷನ್ ನಲ್ಲಿ ಹೆಗಡೆ ಅವರಿಗಾಗಿ ಸಿಂಧಿಯಾ ರಾಜೀನಾಮೆ ನೀಡಿದ್ದರು. ಹೆಗಡೆ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರೆಲ್ಲ ಶಕ್ತಿ ಪ್ರಯೋಗದಲ್ಲಿ ತೊಡಗಿದ್ದರು. ನಾನು ಯುವಕರ ತಂಡ ಕಟ್ಟಿಕೊಂಡು ಕಾಂಗ್ರೆಸ್ ಮುಖಂಡರನ್ನು ದಿಗ್ಬಂಧನ ಹಾಕಿ ನೀರಿಳಿಸಿದ್ದು ಹೆಗಡೆ ಅವರಿಗೆ ತಿಳಿದಿತ್ತು. ಹಾಗಾಗಿ ಹೆಗಡೆ ಅವರು ಕೃಪೆಯಿಂದಾಗಿ ಕೊನೆಗೂ ಬಿ ಫಾರಂ ಸಿಕ್ಕಿತು. ನಾನು ನಾಮಪತ್ರ ಸಲ್ಲಿಸಿದೆ. ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಬೆಂಬಲವೂ ನನಗೆ ಸಿಕ್ಕಿತು.

ಈ ನಡುವೆ, ನಮ್ಮ ಕಾರ್ಯಕರ್ತರನ್ನು ಸ್ಟೇಷನ್ ಗೆ ಒಯ್ದು ಹಲ್ಲೆ ನಡೆಸಿದ ದುರಹಂಕಾರಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನಾನು ಸಖತ್ತಾಗಿ ಬೆಂಡೆತ್ತಿದ ಘಟನೆಯಿಂದಾಗಿ ಇಡೀ ವಾರ್ಡ್ ನಲ್ಲಿ ನನ್ನ ಹವಾ ಜೋರಾಯಿತು. ನಾನು ಭಾರಿ ಬಹುಮತದಿಂದ ಗೆಲುವು ಸಾಧಿಸಿದೆ. ಆಗ ಆ ವಾರ್ಡ್ ನಲ್ಲಿ ಏನೇನೂ ಮೂಲಸೌಕರ್ಯ ಇರಲಿಲ್ಲ. ಶಾಂತಿ ಸುವ್ಯವಸ್ಥೆ ಕೂಡ ಕಳವಳಕಾರಿಯಾಗಿತ್ತು. ನಾನು ಹಂತಹಂತವಾಗಿ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುತ್ತ, ಮೂಲ ಸೌಕರ್ಯ ಕಲ್ಪಿಸುತ್ತ ಬಂದೆ. ಹಾಗಾಗಿ ಮುಂದಿನ 1987ರ ಕಾರ್ಪೊರೇಷನ್ ಚುನಾವಣೆಯಲ್ಲೂ ಭರ್ಜರಿ ಗೆಲುವು ನನ್ನದಾಯಿತು.

ಬಿನ್ನಿಪೇಟೆಯಿಂದ ವಿಧಾನಸಭೆ ಪ್ರವೇಶ

ಎರಡು ಅವಧಿಗೆ ಕಾರ್ಪೋರೇಟರ್ ಆಗಿ ಜನಪ್ರಿಯತೆ ಗಳಿಸಿದ್ದ ನನಗೆ 1994ರಲ್ಲಿ ಬಿನ್ನಿಪೇಟೆ ಕ್ಷೇತ್ರದಲ್ಲಿ ನಿರಾಯಾಸವಾಗಿ ಜನತಾ ಪಕ್ಷದ ಟಿಕೆಟ್ ಸಿಕ್ಕಿತು. ದಾಖಲೆ ಮತಗಳ ಅಂತರದಿಂದ ಗೆದ್ದೆ.
ಆದರೆ ಮುಖ್ಯಮಂತ್ರಿಯಾಗಲು ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವೆ ಪೈಪೋಟಿ ನಡೆದು ರಣರಂಪವಾಯಿತು. ನಾನು ದೇವೇಗೌಡರ ಪರ ನಿಂತೆ. ನ್ಯಾಯಯುತವಾಗಿ ದೇವೇಗೌಡರೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ವಿಂಡ್ಸರ್ ಮ್ಯಾನರ್ ನನ್ನನ್ನು ಕರೆಸಿದರು. ಅಲ್ಲಿ ಹೆಗಡೆ, ಜೆ ಎಚ್ ಪಟೇಲ್ ಮತ್ತು ಬೊಮ್ಮಾಯಿ ಚಿಂತಾಕ್ರಾಂತರಾಗಿ ಕೂತಿದ್ದರು. ಹೆಗಡೆ ಮನೆ ಬಳಿ ಮತ್ತು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಭಾರಿ ಗದ್ದಲದ ಕುರಿತಾಗಿ ನನ್ನಿಂದ ಮಾಹಿತಿ ಪಡೆದರು. ನಾನು ಇದ್ದ ವಿಷಯ ವಿವರಿಸಿದೆ. ಹೆಗಡೆಯವರು ಗರಂ ಆಗಿದ್ದರು. ಬೊಮ್ಮಾಯಿಯವರು ಸೂಕ್ಷ್ಮವಾಗಿ ನನಗೊಂದು ಬುದ್ಧಿಮಾತು ಹೇಳಿ ಕಳುಹಿಸಿದರು!

ದೇವೇಗೌಡರು ಮುಖ್ಯಮಂತ್ರಿಯಾದರು. ಆದರೆ ನನ್ನನ್ನು ಮಂತ್ರಿ ಮಾಡಲೇ ಇಲ್ಲ! ನಿನ್ನನ್ನು ಮಂತ್ರಿ ಮಾಡಿದರೆ ಹೆಗಡೆಯವರು ತಕರಾರು ಮಾಡ್ತಾರೆ, ಸದ್ಯ ಸುಮ್ಮನಿರು ಎಂದರು!

ಮುಂದೆ ಅನಿರೀಕ್ಷಿತವಾಗಿ ದೇವೇಗೌಡರು ಪ್ರಧಾನಿಯಾದರು. ಮುಖ್ಯಮಂತ್ರಿ ಹುದ್ದೆಗೆ ಮತ್ತೆ ಪೈಪೋಟಿ ಶುರುವಾಯಿತು. ನಾವು 86 ಮಂದಿ ಸಿದ್ದರಾಮಯ್ಯ ಪರ ಸಹಿ ಮಾಡಿ ಪತ್ರ ರೆಡಿ ಮಾಡಿದೆವು. ಆದರೆ ಆ ಪತ್ರ ವರಿಷ್ಠರಿಗೆ ತಲುಪಿಸುವ ಧೈರ್ಯ ಯಾರೂ ಮಾಡಲಿಲ್ಲ. ನಾನೊಬ್ಬನೆ ಆ ಪತ್ರ ಹಿಡಿದು, ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದ ಜನತಾದಳ ರಾಷ್ಟ್ರ ಮಟ್ಟದ ನಾಯಕರಾದ ಬಿಜು ಪಟ್ನಾಯಕ್, ಮಧು ದಂಡವತೆ ಬಳಿ ಹೋಗಿದ್ದೆ. ಅಲ್ಲೇ ಇದ್ದ ಪಟೇಲರು, ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ನನ್ನನ್ನು ಪ್ರಶ್ನಿಸಿದರು! ನಾನು ಏನೋ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಜೆ ಎಚ್‌ ಪಟೇಲರು ಮಂತ್ರಿ ಮಾಡಿದರು

ನಾಟಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರನ್ನು ಮಾಡದೆ ಜೆ ಎಚ್ ಪಟೇಲರನ್ನು ಸಿಎಂ ಮಾಡಲಾಯಿತು. ವಿಶೇಷ ಅಂದರೆ ಪಟೇಲರು ನನ್ನನ್ನು ಮಂತ್ರಿಯನ್ನಾಗಿ ಮಾಡಿದರು! ನಿನಗೆ ಕೆಲಸ ಬಾರದ ಖಾತೆ ಕೊಡ್ತೇನೆ ನೋಡು ಎಂದು ಗದರಿಸುತ್ತ ಬಂದೀಖಾನೆ ಇತ್ಯಾದಿ ಪ್ರಮುಖವಲ್ಲದ ಖಾತೆ ಕೊಟ್ಟರು. ಯಾವ ಖಾತೆ ಆದರೇನು ಎಂದು ನಾನು ನಿಷ್ಠೆಯಿಂದ ಕೆಲಸ ಮಾಡಿದೆ.

ಸನ್ನಡತೆಯ ಕೈದಿಗಳ ಬಿಡುಗಡೆ ಸಮಾರಂಭಕ್ಕೆ ಅಂದಿನ ರಾಜ್ಯಪಾಲ ಖರ್ಷಿದ್ ಅಲಂ ಖಾನ್ ಅವರನ್ನು ಕರೆದಿದ್ದೆ. ಪಟೇಲರೂ ಜತೆಗಿದ್ದರು. ಆಗ ರಾಜ್ಯಪಾಲರು ನನ್ನ ಕಾರ್ಯಶೈಲಿ ಬಗ್ಗೆ ಪಟೇಲರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಪರಿಣಾಮವೋ ಏನೋ‌. ಪಟೇಲರು ನನಗೆ ಬೆಂಗಳೂರು ನಗರಾಭಿವೃದ್ಧಿಯಂಥ ಮಹತ್ವದ ಖಾತೆಯ ಹೊಣೆಗಾರಿಕೆ ನೀಡಿದರು. ಬೆಂಗಳೂರಿನ ಹಲವಾರು ಫ್ಲೈ ಓವರ್, ಅಂಡರ್ ಪಾಸ್, ಕಾವೇರಿ ನಾಲ್ಕನೇ ಹಂತದ ಯೋಜನೆ ಸೇರಿದಂತೆ ದೂರದೃಷ್ಟಿಯ ಹಲವಾರು ಯೋಜನೆಗಳು ಆಗ ಜಾರಿಗೆ ಬಂದವು.

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು

ಆದರೆ 1999ರಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಜನತಾದಳ ಒಡೆದು ಚೂರಾಗಿತ್ತು. ಯಾವ ಬಣದಲ್ಲಿ ಯಾರಿದ್ದಾರೆ ಎಂದು ತಿಳಿಯಲಾರದಷ್ಟು ಪರಿಸ್ಥಿತಿ ಡೋಲಾಯಮಾನವಾಗಿತ್ತು. ”ನೀನು ಕಾಂಗ್ರೆಸ್ ಸೇರು. ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗೋದು ಖಚಿತ. ನಿನ್ನನ್ನು ಅವರು ಮಂತ್ರಿ ಮಾಡ್ತಾರೆ,” ಎಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಸಲಹೆ ನೀಡಿದರು. ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿ ಕೃಷ್ಣ ಅವರ ಮೇಲೆ ನಂಬಿಕೆ ಇಟ್ಟೆ. ದಿಲ್ಲಿವರೆಗೂ ಹೋಗಿ ಬಂದೆ. ಕಾಂಗ್ರೆಸ್ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿದವರು ಕೊನೇ ಕ್ಷಣದಲ್ಲಿ ಕೈ ಎತ್ತಿದರು.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನನಗೆ ಕರೆ ಮಾಡಿ, ನಾಳೆ ಬೆಳಗ್ಗೆಯೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸೂಚಿಸಿದರು. ನಿನಗೆ ಟಿಕೆಟ್ ಕೊಡದೇ ಇದ್ದುದು ಗೊತ್ತಾಗಿ ಬೇಸರವಾಯಿತು. ನಿನ್ನಂಥ ಕೆಲಸಗಾರ ಈ ಕ್ಷೇತ್ರಕ್ಕೆ ಬೇಕು. ನಿನ್ನ ಬೆಂಬಲಕ್ಕೆ ನಾವಿದ್ದೇವೆ. ಈಗಷ್ಟೇ ಕಾಲಭೈರವನ ಪೂಜೆ ಮುಗಿಸಿ ಬಂದಿದ್ದೇನೆ. ನಿನಗೆ ಒಳ್ಳೆಯದಾಗುತ್ತದೆ ಎಂದು ಹರಸಿದರು.

ಮರುದಿನ ನಾಮಪತ್ರ ಸಲ್ಲಿಸುವಾಗ ಸಾವಿರಾರು ಜನ ಸೇರಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ನಾನು ಭಾರೀ ಮತಗಳ ಅಂತರದಿಂದ ಜಯಶಾಲಿಯಾದೆ. ನನ್ನ ಗೆಲುವಿನ ಆರ್ಭಟ ಕಂಡು ಎಲ್ಲ ಪಕ್ಷಗಳ ಹಿರಿಯ ಮುಖಂಡರೂ ಅಚ್ಚರಿಪಟ್ಟರು.

ಬದಲಾದ ಸನ್ನಿವೇಶದಲ್ಲಿ 2004ರಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಮೂರನೇ ಬಾರಿ ಆಯ್ಕೆ ಆದೆ. 2008ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಗೋವಿಂದರಾಜ ನಗರ ಕ್ಷೇತ್ರದಿಂದ ಗೆಲುವು ಸಾಧಿಸಿದೆ.
2010ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿ ಆಹಾರ-ನಾಗರಿಕ ಪೂರೈಕೆ, ಮುಜರಾಯಿ ಮತ್ತು ವಸತಿ ಸಚಿವನಾಗಿ ಕಾರ್ಯ ನಿರ್ವಹಿಸಿದೆ. 2016ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿ ಆಯ್ಕೆಯಾದೆ. 2019ರಲ್ಲಿ ಗೋವಿಂದರಾಜ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದೆ. ಮೊದಲು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ನೀಡಿದ್ದರು. ಬಳಿಕ 2021ರಲ್ಲಿ ಮಹತ್ವದ ವಸತಿ ಮತ್ತು ಮೂಲ ಸೌಕರ್ಯ ಖಾತೆಗಳ ಹೊಣೆಗಾರಿಕೆ ನೀಡಿದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣಗೆ ಡಬಲ್‌ ಸೋಲು

ಗೋವಿಂದರಾಜ ನಗರ ಕ್ಷೇತ್ರದಿಂದಲೇ ವಿಧಾನಸಭೆ ಚುನಾವಣೆಗೆ ನಿಲ್ಲಲು ವಿ ಸೋಮಣ್ಣ ತಯಾರಿ ನಡೆಸಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಇವರಿಗೆ ಗೋವಿಂದರಾಜ ನಗರದಲ್ಲಿ ಟಿಕೆಟ್‌ ನೀಡದೆ ಚಾಮರಾಜ ನಗರ ಮತ್ತು ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ವರುಣ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿತು. ಸೋಮಣ್ಣ ಅವರು ಚುನಾವಣೆ ಎದುರಿಸಿದರು. ಆದರೆ ಎರಡೂ ಕ್ಷೇತ್ರಗಳಲ್ಲಿ ಸೋತು ಹೋದರು. ಆದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಹೈಕಮಾಂಡ್‌ ತುಮಕೂರು ಕ್ಷೇತ್ರದ ಟಿಕೆಟ್‌ ನೀಡಿತು. ಸೋಮಣ್ಣ ಅವರು ಇಲ್ಲಿ ನಿರಾಯಾಸವಾಗಿ ಗೆದ್ದರು. ಜತೆಗೆ ಕೇಂದ್ರದಲ್ಲಿ ಮಂತ್ರಿಯೂ ಆದರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

Bengaluru Murder : ವೈಯಾಲಿಕಾವಲ್ ಮಹಿಳೆಯ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

VISTARANEWS.COM


on

By

Murder case
Koo

ಬೆಂಗಳೂರು: ಬೆಂಗಳೂರಿನ (Bengaluru Murder) ವೈಯಾಲಿಕಾವಲ್ ಮಹಾಲಕ್ಷ್ಮೀ ಮರ್ಡರ್ ಕೇಸ್‌ ಟ್ವಿಸ್ಟ್‌ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಮಹಿಳೆಯನ್ನು ಕೊಲೆ ಮಾಡಿದವನು ತನ್ನೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಪೊಲೀಸರ ಮುಂದೆ ಪ್ರಶ್ನೆಗಳ ಸರಮಾಲೆಯೇ ಇದೆ. ಮಹಾಲಕ್ಷ್ಮಿಯನ್ನು ಕೊಂದ ಕೊಲೆಗಾರನನ್ನು ಟ್ರೇಸ್‌ ಮಾಡಿ ಇನ್ನೇನು ಹಿಡಿಬೇಕು ಎನ್ನುವಾಗಲೇ ಕೊಲೆ ಆರೋಪಿ ಮುಕ್ತಿರಂಜನ್ ಎಂಬಾತ ಒಡಿಶಾದಲ್ಲಿ ನಿನ್ನೆ (ಸೆ.25) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಹಾಲಕ್ಷ್ಮೀ ಮರ್ಡರ್ ಕೇಸ್ ಪೊಲೀಸರ ಮುಂದೆ ಹಲವು ಸವಾಲುಗಳನ್ನಿಟ್ಟಿದೆ‌. ಆರೋಪಿ ಅರೆಸ್ಟ್ ಆದಮೇಲೆ ಪ್ರಕರಣಕ್ಕೆ ಒಂದು ಫುಲ್ ಸ್ಟಾಪ್ ಇಡಬಹುದಿತ್ತು. ಆದರೆ ಪೊಲೀಸರಿಗೆ ಸಿಗುವ ಮುನ್ನವೆ ಆರೋಪಿ ಮುಕ್ತಿ ರಂಜನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದಾಗಿ ತನಿಖಾಧಿಕಾರಿಗಳಿಗೆ ಮುಂದಿರುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದಂತಾಗಿದೆ. ಪ್ರಕರಣದ ಆರೋಪಿಯಾಗಿದ್ದ ಒಡಿಶಾ ಮೂಲದ ಮುಕ್ತಿರಂಜನ್ ಪ್ರತಾಪ್ ರಾಯ್ ನಿನ್ನೆ ಬುಧವಾರ ಬೆಳಗ್ಗೆ ಒಡಿಶಾದ ಭದ್ರಕ್ ಜಿಲ್ಲೆಯ ಭೂನಿಪುರದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿಯ ಭೀಕರ ಹತ್ಯೆಗೆ ಕಾರಣವೇನು? ಆರೋಪಿ ಹತ್ಯೆಗೈದಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ಸಿಗುವ ಮುನ್ನವೇ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಇದನ್ನೂ ಓದಿ: Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

ಮದುವೆ ಆಗುವಂತೆ ಒತ್ತಾಯಿಸಿದ್ದಳು ಮಹಾಲಕ್ಷ್ಮಿ

ಇನ್ನು ತನಿಖೆ ವೇಳೆ ಒಂದಷ್ಟು ಸ್ಫೋಟಕ ವಿಚಾರಗಳು ಹೊರ ಬಿದ್ದಿದ್ದು, ಮದುವೆಯಾಗುವಂತೆ ಮುಕ್ತಿ ರಂಜನ್‌ನ ಮಹಾಲಕ್ಷ್ಮಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆಗಿ ಕೊಲೆ ನಡೆದಿರಬಹುದು ಎಂಬ ಅನುಮಾನ ಮೂಡಿದೆ. ಮಹಾಲಕ್ಷ್ಮಿ ಹಾಗೂ ಮುಕ್ತಿ ರಂಜನ್‌ ಇಬ್ಬರು ಒಂದೆ ಕಡೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಇಬ್ಬರ ಮಧ್ಯೆ ಸ್ನೇಹ, ಸಲುಗೆ ಬೆಳದಿತ್ತು.

ಮುಕ್ತಿರಂಜನ್‌ನನ್ನು ತುಂಬಾ ಹಚ್ಡಿಕೊಂಡಿದ್ದ ಮಹಾಲಕ್ಷ್ಮಿ ಆತನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಳು. ಕೆಲಸ ಮಾಡುತ್ತಿದ್ದ ಸ್ಟೋರ್‌ನಲ್ಲಿ ಬೇರೆ ಹುಡುಗೀಯರ ಜತೆ ಮುಕ್ತಿರಂಜನ್‌ ಮಾತನಾಡಿದರೆ ಮಹಾಲಕ್ಷ್ಮಿ ಸ್ವಲ್ಪವೂ ಸಹಿಸುತ್ತಿರಲಿಲ್ಲ. ಕೂಡಲೇ ಆ ಯುವತಿಯರಿಗೆ ವಾರ್ನ್ ಮಾಡುತ್ತಿದ್ದಳು. ಇನ್ನು ಮುಕ್ತಿರಂಜನ್ ಸಹ ಸ್ವತಃ ಹಠಮಾರಿ ಸ್ವಭಾವದವನಾಗಿದ್ದ ಎಂಬುದು ಇದುವರೆಗಿನ ತನಿಖೆಯಲ್ಲಿ ತಿಳಿದು ಬಂದಿದೆ. ಸೆಪ್ಟೆಂಬರ್ 1ರಂದು ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದರು. ಎರಡನೇ ತಾರೀಖು ಇಬ್ಬರೂ ರಜೆ ಹಾಕಿ ವೈಯಾಲಿಕಾವಲ್ ಮನೆಗೆ ಹೋಗಿದ್ದರಂತೆ. ಈ ವೇಳೆ ಜಗಳ ಆಗಿ, ಕೊಲೆ ಮಾಡಿ ಮುಕ್ತಿರಂಜನ್‌ ಎಸ್ಕೇಪ್ ಆಗಿರಬಹುದು ಎನ್ನಲಾಗಿದೆ.

ಮನೆಯಲ್ಲಿ ಎಲ್ಲೂ ರಕ್ತ ಹರಿದಿಲ್ಲ; ಮೂವರ ಫಿಂಗರ್‌ ಪ್ರಿಂಟ್‌ ಪತ್ತೆ

ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿರುವ ಬಗ್ಗೆಯಂತೂ ಪೊಲೀಸರಿಗೆ ಅನುಮಾನಗಳ ಮೇಲೆ ಅನುಮಾನ ಹುಟ್ಟಿಸಿದೆ. ದೇಹ ಕತ್ತರಿಸುವ ರೀತಿ, ಮನೆಯಲ್ಲಿ ರಕ್ತ ಎಲ್ಲಿಯೂ ಸಹ ಸಿಡಿಯದಂತೆ ಮೃತದೇಹ ಕತ್ತರಿಸಲಾಗಿದೆ. ಹತ್ಯೆಗೈದು ಮೃತದೇಹದ ರಕ್ತ ಹರಿದ ನಂತರ ಕತ್ತರಿಸಲಾಗಿತ್ತಾ ಅನ್ನೋ ಪ್ರಶ್ನೆ ಮುಂದಿವೆ. ಅಲ್ಲದೇ ಮನೆಯಲ್ಲಿ ಇಬ್ಬರಿಂದ ಮೂರು ಜನರ ಫಿಂಗರ್ ಪ್ರಿಂಟ್‌ಗಳು ಪತ್ತೆಯಾಗಿದ್ದು, ಆರೋಪಿಯ ಕೃತ್ಯಕ್ಕೆ ಬೇರೆ ಯಾರಾದರೂ ಸಾಥ್ ನೀಡಿದ್ದರಾ? ಹತ್ಯೆಗೈದು ಇಷ್ಟು ದಿನ ಆರೋಪಿ ತಲೆಮರೆಸಿಕೊಂಡಿದ್ದೆಲ್ಲಿ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿತ್ತು. ಆದರೆ ಪೊಲೀಸರಿಗೆ ಸಿಗುವ ಮುನ್ನವೇ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ತಲೆ ಕೆಡಿಸಿದೆ.

ಸದ್ಯ ಒಡಿಶಾದಲ್ಲಿ ಬೀಡುಬಿಟ್ಟಿರುವ ಬೆಂಗಳೂರು ಪೊಲೀಸರು, ಆರೋಪಿಯ ಕುಟುಂಬಸ್ಥರಿಂದ ಮಾಹಿತಿ ಪಡಿತಿದೆ. ಈಗಾಗಲೇ ರಾಜ್ಯ ಪೊಲೀಸರ ಎರಡು ತಂಡಗಳು ಒಡಿಶಾದಲ್ಲಿರುವುದರಿಂದ ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಮತ್ತೊಂದು ಕಡೆ ಮಹಿಳೆ ಮೊಬೈಲ್ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಹಾವೇರಿ

Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

assault case : ಪತಿ- ಪತ್ನಿ ನಡುವಿನ ಜಗಳಕ್ಕೆ ಅಡಿಕೆ ಗಿಡಗಳು ಬಲಿಯಾಗಿವೆ. ಪತ್ನಿ ಮನೆಗೆ ಬಾರದ್ದಕ್ಕೆ ಕೋಪಗೊಂಡ ಅಳಿಯ ಮಾವನ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾನೆ.

VISTARANEWS.COM


on

By

assault case
Koo

ಹಾವೇರಿ : ಪತ್ನಿಯನ್ನು ಮನೆಗೆ ಕಳುಹಿಸಲಿಲ್ಲ ಎಂದು ಮಾವನ ಮೇಲೆ ಸಿಟ್ಟಾದ ಅಳಿಯನೊಬ್ಬ, ಅಡಕೆ ತೋಟ ನಾಶಪಡಿಸಿದ್ದಾನೆ. ಮಾವ ಬೆಳೆಸಿದ್ದ 106 ಅಡಿಕೆ ಗಿಡಗಳನ್ನು ಕಡಿದು ಸಿಟ್ಟು (Assault Case) ಹೊರಹಾಕಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಸಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

assault case
assault case

ದೇವೆಂದ್ರಪ್ಪ ಫಕ್ಕಿರಪ್ಪ ಗಾಣಿಗೇರಗೆ ಸೇರಿದ ಅಡಿಕೆ ತೋಟವನ್ನು ಅಳಿಯ ಬಸವರಾಜ್ ಎಂಬಾತ ಅಡಿಕೆ ಬೆಳೆ ನಾಶ ಮಾಡಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸೊರಬ ಮೂಲದ ಬಸವರಾಜ್ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ. ಆದರೆ ಪತ್ನಿ ಜತೆಗೆ ನಿತ್ಯವು ಜಗಳವಾಡುತ್ತಿದ್ದ. ಗಂಡನ ಕಿರುಕುಳಕ್ಕೆ ಬೇಸತ್ತ ಪತ್ನಿ ತವರು ಮನೆ ಸೇರಿದ್ದಳು. ಮೂರು ತಿಂಗಳಿನಿಂದ ಪತ್ನಿ ತವರು ಮನೆಯಲ್ಲಿ ಇದ್ದಿದ್ದಕ್ಕೆ ಸಿಟ್ಟಾದ ಬಸವರಾಜ್‌, ಅಡಿಕೆ ತೋಟವನ್ನು ನಾಶ ಮಾಡಿದ್ದಾನೆ. ಪತಿ- ಪತ್ನಿ ನಡುವಿನ ಜಗಳಕ್ಕೆ ಅಡಕೆ ಗಿಡಗಳು ಬಲಿಯಾಗಿವೆ.

ಇದನ್ನೂ ಓದಿ: Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

ಕುಡಿದು ಪೀಡಿಸುತ್ತಿದ್ದ ಅಳಿಯನಿಗೆ ಅತ್ತೆಯಿಂದ ಗೂಸಾ

ಬೆಳಗಾವಿ: ಕಂಠ ಪೂರ್ತಿ ಕುಡಿದು ಪೀಡಿಸುತ್ತಿದ್ದ ಅಳಿಯನಿಗೆ ಅತ್ತೆಯಿಂದ ಗೂಸಾ ಬಿದ್ದಿದೆ. ನಡುಬೀದಿಯಲ್ಲೇ ಕುಡುಕ ಅಳಿಯನ ಹಿಡಿದು ಅತ್ತೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಳಗಾವಿ ತಾಲೂಕಿನ ಶಿಂಧೊಳ್ಳಿ ಕ್ರಾಸ್ ಬಳಿ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ವ್ಯಕ್ತಿಯನ್ನು ಮನೆಗೆ ಕರೆದುಕೊಂಡು ಹೋಗಲು ಪತ್ನಿ, ಅತ್ತೆ ಹರಸಾಹಸ ಪಡುತ್ತಿದ್ದರು. ಮನೆಗೆ ಬರಲು ಹಿಂದೇಟ್ಟು ಹಾಕುತ್ತಿದ್ದ ಕುಡುಕ ಅಳಿಯನಿಗೆ ಕಪಾಳಮೋಕ್ಷ ಮಾಡಿ ಹಿಗ್ಗಾಮುಗ್ಗಾ ಥಳಿಸಿದರು. ಕುಡುಕನ ಅವಾಂತರಕ್ಕೆ ಸ್ಥಳೀಯರು ಹೈರಾಣಾದರು. ಜತೆಗೆ ಅಲ್ಲಿದ್ದವರೇ ವಿಡಿಯೊ ಮಾಡಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದಾವಣಗೆರೆ

Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು. ಆದರೆ ಮುಂದೊಂದು ದಿನ ತನ್ನ ಅಕ್ರಮ ಸಂಬಂಧಕ್ಕೆ ಪತಿ ಎಲ್ಲಿ ಅಡ್ಡಿಯಾಗುತ್ತಾನೋ ಎಂದು ತಿಳಿದು ಪ್ರಿಯಕರನ ಜತೆ ಸೇರಿ ಕೊಂದಿದ್ದಳು. ಇದೀಗ ವರ್ಷದ ನಂತರದ ಪ್ರಕರಣವನ್ನು ಪೊಲೀಸರು ಭೇದಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

VISTARANEWS.COM


on

By

Murder case
Koo

ದಾವಣಗೆರೆ: ವರ್ಷದ ಹಿಂದೆ ವ್ಯಕ್ತಿಯೊಬ್ಬ ಸಾವಿನ ಜಾಡು ಹಿಡಿದು ಹೊರಟ ಪೊಲೀಸರು‌ ಪ್ರಕರಣವನ್ನು ಭೇದಿಸಿದ್ದಾರೆ. ತನ್ನ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿ ಆಗುತ್ತಾನೆಂದು ತಿಳಿದ ಪಾಪಿ ಪತ್ನಿ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಕೊಲೆಯಾದ ಒಂದು ವರ್ಷದ ಬಳಿಕ ಪ್ರಕರಣ ಭೇದಿಸಿದ ಪೊಲೀಸರು, ಇಲಿಯಾಸ್ ಅಹಮ್ಮದ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ಘಟನೆ ನಡೆದಿದೆ. 2023ರ ಫೆಬ್ರವರಿಯಲ್ಲಿ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿ ಅನಾಮಧೇಯ ಮೃತದೇಹ ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ಕಾಣೆಯಾದ ಇಲಿಯಾಸ್ ಅಹಮ್ಮದ್ ಇರಬಹುದು ಎಂದು ಪೊಲೀಸರು ಅನುಮಾನಗೊಂಡಿದ್ದರು.

ಕೂಡಲೇ‌ ಮೃತನ ಮಕ್ಕಳ ಹಾಗೂ ಮೃತ ದೇಹದ ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು. ಡಿಎನ್ಎ ಪರೀಕ್ಷೆಯಲ್ಲಿ ಮೃತ ಇಲಿಯಾಸ್ ಅಹಮ್ಮದ್ ಎಂದು ಧೃಡವಾಗಿತ್ತು. ಬಳಿಕ ಇಲಿಯಾಸ್‌ನ ಸಾವಿನ ಜಾಡು ಹಿಡಿದು ಹೊರಟ ಬಸವಪಟ್ಟಣ ಪೊಲೀಸರು, ಇಲಿಯಾಸ್ ಪತ್ನಿ ಬಿಬಿ ಆಯೇಷಾ ಆಕೆಯ ಪ್ರಿಯಕರ ಮಂಜುನಾಥ್ ಕೊಲೆ ಅರೋಪಿಗಳೆಂದು ಸಾಬೀತಾಗಿದೆ.

ಪಾರ್ಟಿ ನೆಪದಲ್ಲಿ ಕೊಲೆ

ಪತಿ ಇಲಿಯಾಸ್‌ಗೆ ನಿದ್ದೆ ಮಾತ್ರೆ ಹಾಕಿ ಆಯೇಷಾ ಮತ್ತು ಮಂಜುನಾಥ್ ಇಬ್ಬರು ದೈಹಿಕ ಸಂಪರ್ಕ ಬೆಳೆಸುತ್ತಿದ್ದರು. ಮುಂದೊಂದು ದಿನ ನಮ್ಮಿಬ್ಬರ ಸಂಬಂಧಕ್ಕೆ ಪತಿ ಅಡ್ಡಿಯಾದರೆ ಅಂತ ಆಯೇಷಾಗೆ ಚಿಂತೆ ಕಾಡಿತ್ತು. ಹೀಗಾಗಿ ಪತಿ ಇಲಿಯಾಸ್‌ನನ್ನು ಕೊಂದರೆ ಅಕ್ರಮ ಸಂಬಂಧಕ್ಕೆ ಅಡ್ಡಿ ಇರುವುದಿಲ್ಲ ಎಂದು ಪ್ಲ್ಯಾನ್‌ ಮಾಡಿಕೊಂಡಿದ್ದರು. ಅದರಂತೆ ಮಂಜುನಾಥ್ ಉಪಾಯದಿಂದ‌ ಇಲಿಯಾಸ್‌ನನ್ನು ಸಾಗರಪೇಟೆ ಬಳಿ ಡಾಬಾದಲ್ಲಿ ಪಾರ್ಟಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಚೆನ್ನಾಗಿ ಮದ್ಯ ಕುಡಿಸಿದ್ದ.

ಬಲವಂತವಾಗಿ ಚಾನಲ್‌ನಲ್ಲಿ ಈಜಾಡಲು ಕರೆದುಕೊಂಡು ಹೋಗಿ ಮಂಜುನಾಥ್ ಕೊಲೆ ಮಾಡಿದ್ದ. ಇಲಿಯಾಸ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ 24/09/2024ರಂದು ಕುಟುಂಬಸ್ಥರ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಇಲಿಯಾಸ್ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಇಲಿಯಾಸ್ ಪತ್ನಿ ಆಯೇಷಾ, ಪ್ರಿಯಕರ ಮಂಜುನಾಥ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

New Serial: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಕಾಂಟ್ರಾಕ್ಟ್ ಮದುವೆಯನ್ನೊಳಗೊಂಡ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಶುರುವಾಗ್ತಿದೆ. ಇದೇ ಸೋಮವಾರದಿಂದ ಅಂದರೆ ಸೆ.30ರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

VISTARANEWS.COM


on

By

new serial
Koo

ಬೆಂಗಳೂರು: ಕನ್ನಡ ಕಿರುತೆರೆಯಲ್ಲಿ ಅದೆಷ್ಟೋ ಮದುವೆ ಆಧಾರಿತ ಕಥೆಗಳು ಬಂದು ಹೋಗಿವೆ. ಆದರೆ ಇದೀಗ ‘ನಿನ್ನ ಜೊತೆ ನನ್ನ ಕಥೆ’ ಎಂಬ ಹೊಸ ಧಾರಾವಾಹಿಯ ಮೂಲಕ ವಿನೂತನ ಕಥೆಯನ್ನು (New Serial) ವೀಕ್ಷಕರಿಗೆ ಹೇಳಲು ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣ (star suvarna) ಸಜ್ಜಾಗಿದೆ.

ಕರ್ನಾಟಕದ ಸಕ್ಕರೆನಾಡು ಎಂದೇ ಪ್ರಸಿದ್ಧವಾಗಿರುವ ಮಂಡ್ಯದಲ್ಲಿ ಈ ಕಥೆಯು ಕೇಂದ್ರೀಕೃತವಾಗಿರುತ್ತದೆ. ಸಾಮಾನ್ಯವಾಗಿ ಮನಸು-ಮನಸುಗಳ ಬೆಸುಗೆಯಿಂದ ಮದುವೆಯಾಗುತ್ತದೆ. ಆದರೆ ಇದೊಂತರ ಡಿಫರೆಂಟ್ ಕಥೆ ಅಂತಾನೇ ಹೇಳಬಹುದು. ಕಥಾನಾಯಕಿ ಭೂಮಿ ಚಹಾ (ಟೀ) ಮಾರುವವಳಾಗಿದ್ದು, ಪೊಲೀಸ್ ಕಾನ್ಸ್‌ಟೇಬಲ್‌ ಆಗಬೇಕೆಂಬ ಕನಸನ್ನು ಹೊಂದಿರುತ್ತಾಳೆ. ಇನ್ನೊಂದು ಕಡೆ ಯಾರದ್ದೋ ಸಂಚಿಗೆ ಬಲಿಯಾಗಿ ಭೂಮಿಯ ತಾಯಿ ತಪ್ಪೇ ಮಾಡದಿದ್ರೂ ಜೈಲು ಸೇರಿರುತ್ತಾರೆ.

new serial
new serial

ಇನ್ನು ಈ ಕಥೆಯ ನಾಯಕ ಅಜಿತ್‌, ಶ್ರೀಮಂತ ಕುಟುಂಬದಲ್ಲಿ ಬೆಳೆದಿದ್ದು ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ಮದುವೆ ಅಂದ್ರೇನೆ ಇಷ್ಟವಿರದ ಆದಿಗೆ ಮನೆಯಲ್ಲಿ ಮದುವೆಯ ತಯಾರಿ ಮಾಡುತ್ತಿರುತ್ತಾರೆ. ಮುಂದೆ, ಅನಿವಾರ್ಯ ಕಾರಣಗಳಿಂದಾಗಿ ಭೂಮಿ ಹಾಗು ಅಜಿತ್‌ ಇಬ್ಬರು ಪರಸ್ಪರ ಷರತ್ತುಗಳಿಗೆ ಒಪ್ಪಿಕೊಂಡು ಒಂದು ವರ್ಷದ ಕಾಂಟ್ರಾಕ್ಟ್‌ನೊಂದಿಗೆ ಮದುವೆಯಾಗ್ತಾರೆ. ಕಾಂಟ್ರಾಕ್ಟ್ ಮದುವೆಯಿಂದ ಒಂದಾದ ಈ ಜೀವಗಳ ಮನಸುಗಳು ಮುಂದೆ ಹೇಗೆ ಒಂದಾಗುತ್ತೆ ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಈ ಕಥೆಯ ನಾಯಕನ ಪಾತ್ರದಲ್ಲಿ ನಟಿಸುತ್ತಿರುವ ನಟ ನಿರಂಜನ್ ವರ್ಷಗಳ ಬಳಿಕ “ನಿನ್ನ ಜೊತೆ ನನ್ನ ಕಥೆ” ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಮರಳುತ್ತಿದ್ದಾರೆ. ನಾಯಕಿಯಾಗಿ ನಟಿ ನಿರುಷ ಗೌಡ ನಟಿಸುತ್ತಿದ್ದು ಕಥೆಯು ಅದ್ಬುತ ತಾರಾಬಳಗವನ್ನು ಹೊಂದಿದೆ. ಹೊಚ್ಚ ಹೊಸ ಧಾರಾವಾಹಿ “ನಿನ್ನ ಜೊತೆ ನನ್ನ ಕಥೆ” ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Murder case
ಬೆಂಗಳೂರು6 ಗಂಟೆಗಳು ago

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

assault case
ಹಾವೇರಿ7 ಗಂಟೆಗಳು ago

Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

Murder case
ದಾವಣಗೆರೆ7 ಗಂಟೆಗಳು ago

Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

new serial
ಬೆಂಗಳೂರು10 ಗಂಟೆಗಳು ago

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

World Retinal Day 2024
ಪ್ರಮುಖ ಸುದ್ದಿ11 ಗಂಟೆಗಳು ago

World Retinal Day 2024 : ಶಾಕಿಂಗ್‌ ನ್ಯೂಸ್‌; ಜಾಗತಿಕವಾಗಿ 1 ಬಿಲಿಯನ್ ಜನರು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರಂತೆ!

MUda Scam
ರಾಜಕೀಯ11 ಗಂಟೆಗಳು ago

Muda Scam : ಸಿದ್ದರಾಮಯ್ಯ ರಾಜೀನಾಮೆಗೆ ಹೆಚ್ಚಾದ ಒತ್ತಡ; ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ ಪ್ರತಿಭಟನೆ

Cancer Treatment AI
ಆರೋಗ್ಯ12 ಗಂಟೆಗಳು ago

Cancer Treatment : ವೈದ್ಯಕೀಯ ಲೋಕದಲ್ಲಿ ಎಐ; ಕ್ಯಾನ್ಸರ್‌ಕಾರಕ ಗಡ್ಡೆ ಪತ್ತೆಗೂ ಬಂದಿದೆ ಎಐ ಚಾಲಿತ ಸೈಬರ್‌ನೈಫ್‌-ಎಸ್7 ಸಿಸ್ಟಮ್‌!

Dina Bhavishya
ಭವಿಷ್ಯ12 ಗಂಟೆಗಳು ago

Dina Bhavishya :ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Self Harming
ಕೋಲಾರ2 ದಿನಗಳು ago

Self Harming : ಹೆಂಡ್ತಿ ಮನೆಯವರ ಕಿರುಕುಳ; ವಿಡಿಯೊ ಮಾಡಿ ಮಾರ್ಕಂಡೇಶ್ವರ ಬೆಟ್ಟದಲ್ಲಿ ನೇಣಿಗೆ ಶರಣು

karnataka weather Forecast
ಮಳೆ2 ದಿನಗಳು ago

Karnataka Weather : ರಾಜ್ಯಾದ್ಯಂತ ವ್ಯಾಪಕ ಮಳೆ ; ಉಡುಪಿ, ಉತ್ತರ ಕನ್ನಡಕ್ಕೆ ರೆಡ್‌ ಅಲರ್ಟ್‌

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌