V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ - Vistara News

ಪ್ರಮುಖ ಸುದ್ದಿ

V Somanna profile : ಅಂದು ಜನತಾ ಬಜಾರ್‌ನಲ್ಲಿ ಸೇಲ್ಸ್‌ಮ್ಯಾನ್‌; ಇಂದು ಕೇಂದ್ರ ಸಚಿವ! ವಿ ಸೋಮಣ್ಣ ರಾಜಕೀಯ ಹಾದಿ ಕುತೂಹಲಕರ

V Somanna profile: ಅತಿ ಸಣ್ಣ ಕುಗ್ರಾಮವೊಂದರಿಂದ ಒಂದು ಜತೆ ಬಟ್ಟೆ ಮತ್ತು ಪುಟ್ಟ ಬ್ಯಾಗ್ ಹಿಡಿದುಕೊಂಡು ಹೊಟ್ಟೆಪಾಡಿಗಾಗಿ ಬೆಂಗಳೂರೆಂಬ ಮಹಾ ನಗರಕ್ಕೆ ಕಾಲಿಟ್ಟ ಸೋಮಣ್ಣ ಅವರು, ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರಿನ ಪ್ರಮುಖ ನಾಯಕರಾಗಿ ಬೆಳೆದರು. ಮೊದಲು ಕಾರ್ಪೊರೇಟರ್‌, ಬಳಿಕ ಶಾಸಕ, ಈಗ ಸಂಸದ-ಸಚಿವ…ಹೀಗೆ ವಿ ಸೋಮಣ್ಣ ಅವರ ರಾಜಕೀಯ ಹಾದಿ ರೋಚಕವಾಗಿದೆ.

VISTARANEWS.COM


on

V Somanna profile
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿ ಸೋಮಣ್ಣ ಅವರು (V Somanna profile) ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಕಾರ್ಪೋರೇಟರ್‌ ಆಗಿ ರಾಜಕೀಯ ಹಾದಿ ತುಳಿದವರು. ಈಗ ಕೇಂದ್ರ ಸಚಿವರಾಗುವ ತನಕ ಅವರು ಸಾಗಿ ಬಂದ ರಾಜಕೀಯ ಹಾದಿ ರೋಚಕವಾಗಿದೆ. ವಿ ಸೋಮಣ್ಣ ಅವರು ಜನ ಸಮೂಹದ ನಡುವಿನಿಂದ ನಾಯಕರಾಗಿ ಬೆಳೆದು ಬಂದವರು. ಹಾಗಾಗಿ 40 ವರ್ಷಗಳ ಬಳಿಕವೂ ಅವರ ಪ್ರಭಾವ ಮತ್ತು ವರ್ಚಸ್ಸು ರಾಜ್ಯ ರಾಜಕಾರಣದಲ್ಲಿ ಪ್ರಖರವಾಗಿ ಉಳಿದಿದೆ.
ನಾಡಿನ ಅತಿ ಸಣ್ಣ ಕುಗ್ರಾಮವೊಂದರಿಂದ ಒಂದು ಜತೆ ಬಟ್ಟೆ ಮತ್ತು ಪುಟ್ಟ ಬ್ಯಾಗ್ ಹಿಡಿದುಕೊಂಡು ಹೊಟ್ಟೆಪಾಡಿಗಾಗಿ ಬೆಂಗಳೂರೆಂಬ ಮಹಾ ನಗರಕ್ಕೆ ಕಾಲಿಟ್ಟ ಸೋಮಣ್ಣ ಅವರು, ಮುಂದಿನ ಕೆಲವೇ ವರ್ಷದಲ್ಲಿ ಬೆಂಗಳೂರಿನ ಪ್ರಮುಖ ನಾಯಕರಾಗಿ ಬೆಳೆದರು.

ಅವರು ರಾಮನಗರ ಜಿಲ್ಲೆಯ ಮರಳವಾಡಿ ಎಂಬ ಸಣ್ಣ ಊರಿನ ತೇರಬೀದಿಯಿಂದ ಬೆಂಗಳೂರೆಂಬ ರಾಜಬೀದಿಯಲ್ಲಿ ಅಂಬೆಗಾಲಿಟ್ಟು, ಜನತಾ ಬಜಾರ್‌ನಿಂದ ಜನತಾಪಕ್ಷಕ್ಕೆ ಪ್ರವೇಶ ಪಡೆದು, ಕಾರ್ಪೊರೇಟರ್ ಆಗಿ ಲೋಕಲ್ ಲೀಡರ್ ಎಂದು ಗುರುತಿಸಿಕೊಂಡು, ಶಾಸಕರಾಗಿ ವಿಧಾನಸಭೆಗೆ ಪ್ರವೇಶ ಪಡೆದು, ಸಚಿವರಾಗಿ ಇಡೀ ರಾಜ್ಯ ಗುರುತಿಸುವಂಥ ಕೆಲಸ ಮಾಡುವ ಮೂಲಕ ನಾಡಿನ ಮುಂಚೂಣಿ ರಾಜಕೀಯ ಧುರೀಣರಾಗಿ ಬೆಳೆದವರು.
ಶಿಸ್ತು, ಶ್ರದ್ಧೆ, ನೇರ ನಡೆ-ನುಡಿ, ಸರಳ ಸಜ್ಜನಿಕೆ, ಎನಗಿಂತ ಕಿರಿಯರಿಲ್ಲ ಎಂಬ ನಿನಮ್ರತೆ, ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಛಲ, ಜನ ಸಾಮಾನ್ಯರ ತೀರಾ ಸಾಮಾನ್ಯ ಸಮಸ್ಯೆಗಳಿಗೂ ಸ್ಪಂದಿಸುವ ಗುಣ, ಅಭಿವೃದ್ಧಿ ಕುರಿತ ದೂರದೃಷ್ಟಿ, ಅಧ್ಯಯನ ಪ್ರವೃತ್ತಿ, ಜಾತಿ ಧರ್ಮ ಜನಾಂಗದ ಸೀಮಾ ರೇಖೆಯನ್ನು ದಾಟಿ ಜನರೊಂದಿಗೆ ಬೆರೆಯುವಿಕೆ, ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವಕ್ಕೆ ನಿಷ್ಠೆ, ಆದರೆ ನಾಲ್ಕು ಜನರಿಗೆ ಒಳಿತಾಗುತ್ತದೆ ಎಂದೆನಿಸಿದರೆ ಸಾಮ ದಾನ ಭೇದ ದಂಡ ಅಸ್ತ್ರ ಪ್ರಯೋಗಿಸಲೂ ಹಿಂಜರಿದ ದಿಟ್ಟತನ, ಧರ್ಮೋ ರಕ್ಷತಿ ರಕ್ಷಿತಃ ಎಂಬ ಗೀತೋಪದೇಶದ ಪಾಲನೆ, ಸರ್ವ ಜಾತಿ-ಧರ್ಮಗಳ ಸ್ವಾಮೀಜಿಗಳ ಪ್ರೀತಿ ವಿಶ್ವಾಸಕ್ಕೆ ಪಾತ್ರ…ಹೀಗೆ ಹತ್ತು ಹಲವಾರು ಹೆಚ್ಚುಗಾರಿಕೆಗಳು ಸೋಮಣ್ಣ ಅವರನ್ನು ಇಂದು ರಾಜಕೀಯವಾಗಿ ಇಷ್ಟು ಎತ್ತರಕ್ಕೆ ತಂದು ನಿಲ್ಲಿಸಿವೆ.

ಊರು ಬಿಡುವಾಗ ಅಮ್ಮ ಕೊಟ್ಟ 15 ರೂ. ಇತ್ತು…

ಮರಳವಾಡಿ ಎಂಬ ಕುಗ್ರಾಮದಿಂದ ಬದುಕಿನ ದಾರಿ ಹುಡುಕುತ್ತ ತಾವು ಬೆಂಗಳೂರಿಗೆ ಬಂದ ಕತೆಯನ್ನು ಸೋಮಣ್ಣ ಹೇಳುವುದು ಹೀಗೆ:
ಊರಲ್ಲಿ ಪಿಯುಸಿ ಮುಗಿಯುತ್ತಿದ್ದಂತೆ, ಅದ್ಯಾವುದೋ ಹೊಸ ದಿಕ್ಕಿನತ್ತ ನನ್ನ ಮನಸ್ಸು ತುಡಿಯುತ್ತಿತ್ತು. ಊರು ಬಿಟ್ಟು ಬೆಂಗಳೂರಿಗೆ ಹೋಗಲು ಮನಸ್ಸು ತವಕಿಸುತ್ತಿತ್ತು. ಆದರೆ ಮನೆಯಲ್ಲಿ ವ್ಯವಸಾಯ ಮಾಡುವಂತೆ ಒತ್ತಾಯಿಸುತ್ತಿದ್ದರು. ಅದೊಂದು ದಿನ ಗಟ್ಟಿ ಮನಸ್ಸು ಮಾಡಿ ಊರು ಬಿಟ್ಟೆ. ಜೇಬಿನಲ್ಲಿ ಅಮ್ಮ ಕೊಟ್ಟ 15 ರೂ. ಇತ್ತು. ಜತೆಗೆ ಇನ್ನೊಂದು ಜತೆ ಬಟ್ಟೆಯ ಸಣ್ಣ ಬ್ಯಾಗು.

ಬೆಂಗಳೂರಿನಲ್ಲಿ ಬಸಪ್ಪ ಸರ್ಕಲ್ ನಲ್ಲಿ ಬಂದು ಇಳಿದೆ. ನನಗಾಗ 18 ವರ್ಷ. ಅಲ್ಲೇ ಪಕ್ಕದಲ್ಲಿ ಸಣ್ಣ ಧೋಬಿ ಅಂಗಡಿ ಇಟ್ಟುಕೊಂಡಿದ್ದ ನಾಗಣ್ಣ ಎಂಬುವರು ನನ್ನನ್ನು ಗುರುತಿಸಿ, ಏನ್ ಸೋಮಣ್ಣ ಇಲ್ಲಿ ಎಂದರು. ಅಣ್ಣಾ ಏನಾದರು ಒಂದು ದಾರಿ ತೋರಿಸು ಅಣ್ಣಾ ಎಂದು ಅವರಿಗೆ ದುಂಬಾಲು ಬಿದ್ದೆ. ಅವರು ಸೀದಾ ನನ್ನನ್ನು ಚಂಗಲ್ ರಾಯ ಶೆಟ್ಟಿ ಎಂಬುವರ ಬಳಿ ಕರೆದೊಯ್ದರು. ಅವರದು ಮೋಟಾರ್ ರಿಪೇರಿ ಅಂಗಡಿ. ಹುಡುಗಾ ನನ್ನ ಜತೆಗೇ ಇದ್ದುಬಿಡು ಎಂದರವರು. ತಮ್ಮ ಅಂಗಡಿಯಲ್ಲೇ ಉಳಿದುಕೊಳ್ಳಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಿಕೊಟ್ಟರು. ಮೋಟಾರು ಬಿಡಿ ಭಾಗಗಳನ್ನು ಎತ್ತಿ ಕೊಡುವುದು, ಅವರು ಕರೆದಲ್ಲಿಗೆ ಹೋಗುವುದು…ಇಷ್ಟೇ ನನ್ನ ಕೆಲಸ.
ಕೆಲ ದಿನಗಳ ಬಳಿಕ ಸಿಂಗಲ್ ರೂಮಿನ ಮನೆಯೊಂದಕ್ಕೆ ಶಿಫ್ಟ್ ಆದೆ. ಕೇವಲ ಆರಡಿ ಎಂಟಡಿ ಅಳತೆಯ ಶೀಟಿನ ಮನೆ ಅದು. ಬಾಡಿಗೆ ತಿಂಗಳಿಗೆ ಕೇವಲ 7 ರೂಪಾಯಿ!

ಪಿಯುಸಿಯಲ್ಲಿ ಫೇಲ್‌ ಆಗಿದ್ದೆ

ನಾನು ಪಿಯುಸಿಯ ಒಂದು ವಿಷಯದಲ್ಲಿ ಫೇಲ್ ಆಗಿದ್ದೆ. ಅದನ್ನು ಪಾಸ್ ಮಾಡಿಕೊಂಡೆ. ಆಗೆಲ್ಲ ಪಿಯುಸಿ ಅಂದರೆ ಒಂದೇ ವರ್ಷ. ಹಗಲು ಮೋಟಾರು ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಲೇ ವಿವಿ ಪುರಂ ಸಂಜೆ ಕಾಲೇಜು ಸೇರಿದೆ. ರಾತ್ರಿಯಿಡೀ ಕಷ್ಟಪಟ್ಟು ಓದಿ ಪದವಿಯಲ್ಲಿ ಒಳ್ಳೆಯ ಅಂಕ ಗಳಿಸಿದೆ.

ಮುಂದೆ ಧೋಬಿ ಅಂಗಡಿಯ ನಾಗಣ್ಣ ನನ್ನನ್ನು ಜಯಸಿಂಹ ಎಂಬುವವರನ್ನು ಪರಿಚಯಿಸಿ ಅವರ ಕಂಪನಿಯಲ್ಲಿ ಕೆಲಸ ಕೊಡಿಸಿದರು. ನಾಗಣ್ಣ ಬಲು ಬುದ್ಧಿವಂತ ಮತ್ತು ಶ್ರಮಜೀವಿ. ನನ್ನ ಬದುಕಿನ ಆರಂಭದ ದಿನಗಳಲ್ಲಿ ನನಗೆ ಆಸರೆಯಾಗಿ ನಿಂತರು. ನಂತರ 1971ರಲ್ಲಿ ನಾನು ಕನ್ಷುಮರ್ ಫೆಡರೇಷನ್ ಗೆ ಅರ್ಜಿ ಸಲ್ಲಿಸಿದೆ. ಗುಮಾಸ್ತನ ಕೆಲಸ ಗಿಟ್ಟಿಸುವುದು ಆ ದಿನಗಳಲ್ಲಿ ನನ್ನ ಮಹತ್ವಾಕಾಂಕ್ಷೆಯಾಗಿತ್ತು! ಎ ಶಾಂತಮಲ್ಲಪ್ಪ ಅವರು ಫೆಡರೇಷನ್ ನ ಅಧ್ಯಕ್ಷರಾಗಿದ್ದರು. ಅವರು ಸಂದರ್ಶನ ತಗೊಂಡು, ”ಗುಮಾಸ್ತನ ಕೆಲಸ ಬೇಡ ನಿನಗೆ. ಸೇಲ್ಸ್ ಅಸಿಸ್ಟೆಂಟ್ ಕೆಲಸಕ್ಕೆ ಬಾ” ಎಂದರು.

ಸೇಲ್ಸ್‌ ಅಸಿಸ್ಟಂಟ್‌ ಕೆಲಸ

ಕೆಲಸಕ್ಕೆ ಸೇರಲು 500 ರೂ. ಡಿಪಾಸಿಟ್ ಕಟ್ಟಬೇಕಿತ್ತು. ಅಷ್ಟು ದುಡ್ಡು ಹೊಂದಿಸಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಊರಲ್ಲಿ ಹೋಗಿ ಕೇಳಿದರೆ, ಏಯ್ ಇಲ್ಲಿ ಬೇಸಾಯ ಮಾಡಿಕೊಂಡಿರು. ಬೆಂಗಳೂರಿಗೆ ಯಾಕೆ ಹೋಗಬೇಕು ನೀನು ಎಂದರು. ಕೊನೆಗೆ ಅಮ್ಮ 200 ರೂ. ಕೊಟ್ಟು ಕಳಿಸಿದರು. ಬೆಂಗಳೂರಿನ ಶಿವಾಜಿ ಟಾಕೀಸ್ ಬಳಿ ಆಗ ಉರುವಲು ಕಟ್ಟಿಗೆ ಮಾರುವ ವೇ ಬ್ರಿಡ್ಜ್ ಇತ್ತು. ಅಲ್ಲಿ ತಿಮ್ಮಯ್ಯ ಎಂಬೊಬ್ಬರ ಪರಿಚಯವಾಗಿತ್ತು. ಅವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಾಗ 500 ರೂ. ಕೊಟ್ಟರು. ಅಂತೂ ಬೆಂಗಳೂರಿನ ಕೆ ಜಿ ರೋಡ್ ನ ಜನತಾ ಬಜಾರ್ ನಲ್ಲಿ ಕೆಲಸ ಶುರು ಮಾಡಿದೆ. ಅಲ್ಲಿಂದ ನನ್ನ ಬದುಕಿಗೆ ಹೊಸ ತಿರುವು ಸಿಕ್ಕಿತು.

ಜನತಾ ಬಜಾರ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ, ಇನ್ನಷ್ಟು ದುಡಿಯಬೇಕು ಎಂದೆನಿಸುತ್ತಿತ್ತು. ಅದೇ ಹೊತ್ತಿಗೆ ವಿಜಯಾ ಬ್ಯಾಂಕ್ ಮ್ಯಾನೇಜರ್ ಪ್ರಭಾಕರ್ ಎಂಬುವರ ಪರಿಚಯವಾಯಿತು. ಇನ್ನು ಏನಾದರು ಮಾಡಬೇಕಲ್ಲ ಸರ್ ನಾನು ಅಂದೆ. ಪಿಗ್ಮಿ ಕಲೆಕ್ಟ್ ಮಾಡು ನೀನು ಎಂದು ಸಲಹೆ ನೀಡಿದರು. ಮಧ್ಯಾಹ್ನ 1.30ರಿಂದ 4 ಗಂಟೆಯವರೆಗಿನ ಬಿಡುವಿನ ಅವಧಿಯಲ್ಲಿ ಅಂಗಡಿ ಅಂಗಡಿ ತಿರುಗಿ ಪಿಗ್ಮಿ ಕಲೆಕ್ಟ್ ಮಾಡತೊಡಗಿದೆ. ಸಂಜೆ ಡ್ಯೂಟಿ ಮುಗಿದ ಮೇಲೆ ರಾತ್ರಿ 9 ಗಂಟೆವರೆಗೆ ಮತ್ತೆ ಇದೇ ಕೆಲಸ. ಇದರಿಂದ ತಿಂಗಳಿಗೆ ಸುಮಾರು 2 ಸಾವಿರ ರೂ. ಎಕ್ಟ್ರಾ ಇನ್ ಕಮ್ ಬರತೊಡಗಿತು. ಜನತಾ ಬಜಾರ್ ಸಂಬಳ ಹೆಚ್ಚು ಕಡಿಮೆ ಇಷ್ಟೇ ಬರುತ್ತಿತ್ತು.

ಜನತಾ ಬಜಾರ್‌ನಿಂದ ಜನತಾ ಪಕ್ಷಕ್ಕೆ…

ಜನತಾ ಬಜಾರ್ ಯೂನಿಯನ್‌ನಲ್ಲಿ ನಾನು ಮುಂಚೂಣಿ ನಾಯಕನಾಗಿ ಬೆಳೆದೆ. ಸಹಜವಾಗಿಯೇ ದೇವೇಗೌಡರು, ಬಿ ಎಲ್ ಶಂಕರ್, ಪಿ ಜಿ ಆರ್ ಸಿಂಧಿಯಾ ಮತ್ತಿರರ ಸಂಪರ್ಕಕ್ಕೆ ಬಂದೆ. ಅವರ ಮೂಲಕ ನಾನು ಅನಧಿಕೃತವಾಗಿ ಜನತಾ ಪಕ್ಷಕ್ಕೆ ಎಂಟ್ರಿ ಪಡೆದೆ. ಈ ನಡುವೆ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಅವರು ಕೈಗೊಂಡಿದ್ದ ಆಂದೋಲನದಲ್ಲೂ ಕೈ ಜೋಡಿಸಿದೆ. ಚಂದ್ರಶೇಖರ ಅವರು ನಡೆಸಿದ ರಾಷ್ಟ್ರವ್ಯಾಪಿ ಪಾದಯಾತ್ರೆಯಲ್ಲೂ ಹೆಜ್ಜೆ ಹಾಕಿದೆ.

1986ರ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಪಿ ಜಿ ಆರ್ ಸಿಂಧಿಯಾ ಪರ ಸಕ್ರಿಯವಾಗಿ ಕೆಲಸ ಮಾಡಿದೆ. ಅದೇ ವರ್ಷ ಬೆಂಗಳೂರು ಕಾರ್ಪೊರೇಷನ್ ಎಲೆಕ್ಷನ್ ಘೋಷಣೆ ಆಯಿತು. ಮುನಿಯಪ್ಪ ಅಂತ ಒಬ್ಬರು ರೆವಿನ್ಯು ಇನ್ಸ್ ಪೆಕ್ಟರ್ ನನಗೆ ಆತ್ಮೀಯರಾಗಿದ್ದರು. ಅವರು, ಸೋಮಣ್ಣ ನೀನೂ ಎಲೆಕ್ಷನ್ ಗೆ ನಿಂತು ಬಿಡು ಎಂದು ಹವಾ ಹಾಕಿದರು. ನನಗೂ ಉಮೇದು ಬಂತು. ವಿಜಯ ನಗರ ಕ್ಷೇತ್ರದಲ್ಲಿ ಜನತಾ ಪಕ್ಷದಿಂದ ಟಿಕೆಟ್‌ ಕೊಡುವ ಭರವಸೆಯೂ ಸಿಕ್ಕಿತು. ಆದರೆ ನಾಮಪತ್ರ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಜೀವರಾಜ್ ಆಳ್ವ, ರಘುಪತಿ ಇನ್ನೂ ಕೆಲವರು ಬೇರೆಯವರಿಗೆ ಟಿಕೆಟ್ ಕೊಡಲು ಶತಪ್ರಯತ್ನ ನಡೆಸಿದರು.

ಡಿ ಮಂಜುನಾಥ್ ಆಗ ಜನತಾ ಪಕ್ಷದ ರಾಜ್ಯಾಧ್ಯಕ್ಷರು. ಮಂಜುನಾಥ್, ವಿ ಆರ್ ಕೃಷ್ಣಯ್ಯರ್, ಟಿ ಆರ್ ಶಾಮಣ್ಣ, ಎಚ್ ಡಿ ದೇವೇಗೌಡ, ಬಿ ಎಲ್ ಶಂಕರ್ ಮತ್ತಿತರರನ್ನು ಸಂಪರ್ಕಿಸಿ ನಾನು ಟಿಕೆಟ್ ಗೆ ಪಟ್ಟು ಹಿಡಿದೆ. ಇದಕ್ಕಾಗಿ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಚಂದ್ರಶೇಖರ ಅವರನ್ನೂ ಸಂಪರ್ಕಿಸಿ ವಿನಂತಿಸಿದೆ. ಆದರೆ ಕೊನೆಗೆ ಬಿ ಎಲ್ ಶಂಕರ್ ಒಬ್ಬರು ಮಾತ್ರ ನನ್ನ ಪರವಾಗಿ ನಿಂತರು. ಅಂತಿಮವಾಗಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೊರೆ ಹೋದೆ. ಕನಕಪುರ ಬೈ ಎಲೆಕ್ಷನ್ ನಲ್ಲಿ ಹೆಗಡೆ ಅವರಿಗಾಗಿ ಸಿಂಧಿಯಾ ರಾಜೀನಾಮೆ ನೀಡಿದ್ದರು. ಹೆಗಡೆ ಅವರನ್ನು ಸೋಲಿಸಲು ಕಾಂಗ್ರೆಸ್ ನಾಯಕರೆಲ್ಲ ಶಕ್ತಿ ಪ್ರಯೋಗದಲ್ಲಿ ತೊಡಗಿದ್ದರು. ನಾನು ಯುವಕರ ತಂಡ ಕಟ್ಟಿಕೊಂಡು ಕಾಂಗ್ರೆಸ್ ಮುಖಂಡರನ್ನು ದಿಗ್ಬಂಧನ ಹಾಕಿ ನೀರಿಳಿಸಿದ್ದು ಹೆಗಡೆ ಅವರಿಗೆ ತಿಳಿದಿತ್ತು. ಹಾಗಾಗಿ ಹೆಗಡೆ ಅವರು ಕೃಪೆಯಿಂದಾಗಿ ಕೊನೆಗೂ ಬಿ ಫಾರಂ ಸಿಕ್ಕಿತು. ನಾನು ನಾಮಪತ್ರ ಸಲ್ಲಿಸಿದೆ. ಆದಿ ಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಬೆಂಬಲವೂ ನನಗೆ ಸಿಕ್ಕಿತು.

ಈ ನಡುವೆ, ನಮ್ಮ ಕಾರ್ಯಕರ್ತರನ್ನು ಸ್ಟೇಷನ್ ಗೆ ಒಯ್ದು ಹಲ್ಲೆ ನಡೆಸಿದ ದುರಹಂಕಾರಿ ಪೊಲೀಸ್ ಅಧಿಕಾರಿಯೊಬ್ಬರಿಗೆ ನಾನು ಸಖತ್ತಾಗಿ ಬೆಂಡೆತ್ತಿದ ಘಟನೆಯಿಂದಾಗಿ ಇಡೀ ವಾರ್ಡ್ ನಲ್ಲಿ ನನ್ನ ಹವಾ ಜೋರಾಯಿತು. ನಾನು ಭಾರಿ ಬಹುಮತದಿಂದ ಗೆಲುವು ಸಾಧಿಸಿದೆ. ಆಗ ಆ ವಾರ್ಡ್ ನಲ್ಲಿ ಏನೇನೂ ಮೂಲಸೌಕರ್ಯ ಇರಲಿಲ್ಲ. ಶಾಂತಿ ಸುವ್ಯವಸ್ಥೆ ಕೂಡ ಕಳವಳಕಾರಿಯಾಗಿತ್ತು. ನಾನು ಹಂತಹಂತವಾಗಿ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸುತ್ತ, ಮೂಲ ಸೌಕರ್ಯ ಕಲ್ಪಿಸುತ್ತ ಬಂದೆ. ಹಾಗಾಗಿ ಮುಂದಿನ 1987ರ ಕಾರ್ಪೊರೇಷನ್ ಚುನಾವಣೆಯಲ್ಲೂ ಭರ್ಜರಿ ಗೆಲುವು ನನ್ನದಾಯಿತು.

ಬಿನ್ನಿಪೇಟೆಯಿಂದ ವಿಧಾನಸಭೆ ಪ್ರವೇಶ

ಎರಡು ಅವಧಿಗೆ ಕಾರ್ಪೋರೇಟರ್ ಆಗಿ ಜನಪ್ರಿಯತೆ ಗಳಿಸಿದ್ದ ನನಗೆ 1994ರಲ್ಲಿ ಬಿನ್ನಿಪೇಟೆ ಕ್ಷೇತ್ರದಲ್ಲಿ ನಿರಾಯಾಸವಾಗಿ ಜನತಾ ಪಕ್ಷದ ಟಿಕೆಟ್ ಸಿಕ್ಕಿತು. ದಾಖಲೆ ಮತಗಳ ಅಂತರದಿಂದ ಗೆದ್ದೆ.
ಆದರೆ ಮುಖ್ಯಮಂತ್ರಿಯಾಗಲು ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ನಡುವೆ ಪೈಪೋಟಿ ನಡೆದು ರಣರಂಪವಾಯಿತು. ನಾನು ದೇವೇಗೌಡರ ಪರ ನಿಂತೆ. ನ್ಯಾಯಯುತವಾಗಿ ದೇವೇಗೌಡರೇ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಆಶಯವಾಗಿತ್ತು. ವಿಂಡ್ಸರ್ ಮ್ಯಾನರ್ ನನ್ನನ್ನು ಕರೆಸಿದರು. ಅಲ್ಲಿ ಹೆಗಡೆ, ಜೆ ಎಚ್ ಪಟೇಲ್ ಮತ್ತು ಬೊಮ್ಮಾಯಿ ಚಿಂತಾಕ್ರಾಂತರಾಗಿ ಕೂತಿದ್ದರು. ಹೆಗಡೆ ಮನೆ ಬಳಿ ಮತ್ತು ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಭಾರಿ ಗದ್ದಲದ ಕುರಿತಾಗಿ ನನ್ನಿಂದ ಮಾಹಿತಿ ಪಡೆದರು. ನಾನು ಇದ್ದ ವಿಷಯ ವಿವರಿಸಿದೆ. ಹೆಗಡೆಯವರು ಗರಂ ಆಗಿದ್ದರು. ಬೊಮ್ಮಾಯಿಯವರು ಸೂಕ್ಷ್ಮವಾಗಿ ನನಗೊಂದು ಬುದ್ಧಿಮಾತು ಹೇಳಿ ಕಳುಹಿಸಿದರು!

ದೇವೇಗೌಡರು ಮುಖ್ಯಮಂತ್ರಿಯಾದರು. ಆದರೆ ನನ್ನನ್ನು ಮಂತ್ರಿ ಮಾಡಲೇ ಇಲ್ಲ! ನಿನ್ನನ್ನು ಮಂತ್ರಿ ಮಾಡಿದರೆ ಹೆಗಡೆಯವರು ತಕರಾರು ಮಾಡ್ತಾರೆ, ಸದ್ಯ ಸುಮ್ಮನಿರು ಎಂದರು!

ಮುಂದೆ ಅನಿರೀಕ್ಷಿತವಾಗಿ ದೇವೇಗೌಡರು ಪ್ರಧಾನಿಯಾದರು. ಮುಖ್ಯಮಂತ್ರಿ ಹುದ್ದೆಗೆ ಮತ್ತೆ ಪೈಪೋಟಿ ಶುರುವಾಯಿತು. ನಾವು 86 ಮಂದಿ ಸಿದ್ದರಾಮಯ್ಯ ಪರ ಸಹಿ ಮಾಡಿ ಪತ್ರ ರೆಡಿ ಮಾಡಿದೆವು. ಆದರೆ ಆ ಪತ್ರ ವರಿಷ್ಠರಿಗೆ ತಲುಪಿಸುವ ಧೈರ್ಯ ಯಾರೂ ಮಾಡಲಿಲ್ಲ. ನಾನೊಬ್ಬನೆ ಆ ಪತ್ರ ಹಿಡಿದು, ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದ ಜನತಾದಳ ರಾಷ್ಟ್ರ ಮಟ್ಟದ ನಾಯಕರಾದ ಬಿಜು ಪಟ್ನಾಯಕ್, ಮಧು ದಂಡವತೆ ಬಳಿ ಹೋಗಿದ್ದೆ. ಅಲ್ಲೇ ಇದ್ದ ಪಟೇಲರು, ನಾನ್ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ನನ್ನನ್ನು ಪ್ರಶ್ನಿಸಿದರು! ನಾನು ಏನೋ ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

ಜೆ ಎಚ್‌ ಪಟೇಲರು ಮಂತ್ರಿ ಮಾಡಿದರು

ನಾಟಕೀಯ ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರನ್ನು ಮಾಡದೆ ಜೆ ಎಚ್ ಪಟೇಲರನ್ನು ಸಿಎಂ ಮಾಡಲಾಯಿತು. ವಿಶೇಷ ಅಂದರೆ ಪಟೇಲರು ನನ್ನನ್ನು ಮಂತ್ರಿಯನ್ನಾಗಿ ಮಾಡಿದರು! ನಿನಗೆ ಕೆಲಸ ಬಾರದ ಖಾತೆ ಕೊಡ್ತೇನೆ ನೋಡು ಎಂದು ಗದರಿಸುತ್ತ ಬಂದೀಖಾನೆ ಇತ್ಯಾದಿ ಪ್ರಮುಖವಲ್ಲದ ಖಾತೆ ಕೊಟ್ಟರು. ಯಾವ ಖಾತೆ ಆದರೇನು ಎಂದು ನಾನು ನಿಷ್ಠೆಯಿಂದ ಕೆಲಸ ಮಾಡಿದೆ.

ಸನ್ನಡತೆಯ ಕೈದಿಗಳ ಬಿಡುಗಡೆ ಸಮಾರಂಭಕ್ಕೆ ಅಂದಿನ ರಾಜ್ಯಪಾಲ ಖರ್ಷಿದ್ ಅಲಂ ಖಾನ್ ಅವರನ್ನು ಕರೆದಿದ್ದೆ. ಪಟೇಲರೂ ಜತೆಗಿದ್ದರು. ಆಗ ರಾಜ್ಯಪಾಲರು ನನ್ನ ಕಾರ್ಯಶೈಲಿ ಬಗ್ಗೆ ಪಟೇಲರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರ ಪರಿಣಾಮವೋ ಏನೋ‌. ಪಟೇಲರು ನನಗೆ ಬೆಂಗಳೂರು ನಗರಾಭಿವೃದ್ಧಿಯಂಥ ಮಹತ್ವದ ಖಾತೆಯ ಹೊಣೆಗಾರಿಕೆ ನೀಡಿದರು. ಬೆಂಗಳೂರಿನ ಹಲವಾರು ಫ್ಲೈ ಓವರ್, ಅಂಡರ್ ಪಾಸ್, ಕಾವೇರಿ ನಾಲ್ಕನೇ ಹಂತದ ಯೋಜನೆ ಸೇರಿದಂತೆ ದೂರದೃಷ್ಟಿಯ ಹಲವಾರು ಯೋಜನೆಗಳು ಆಗ ಜಾರಿಗೆ ಬಂದವು.

1999ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು

ಆದರೆ 1999ರಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಜನತಾದಳ ಒಡೆದು ಚೂರಾಗಿತ್ತು. ಯಾವ ಬಣದಲ್ಲಿ ಯಾರಿದ್ದಾರೆ ಎಂದು ತಿಳಿಯಲಾರದಷ್ಟು ಪರಿಸ್ಥಿತಿ ಡೋಲಾಯಮಾನವಾಗಿತ್ತು. ”ನೀನು ಕಾಂಗ್ರೆಸ್ ಸೇರು. ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಆಗೋದು ಖಚಿತ. ನಿನ್ನನ್ನು ಅವರು ಮಂತ್ರಿ ಮಾಡ್ತಾರೆ,” ಎಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಸಲಹೆ ನೀಡಿದರು. ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿ ಕೃಷ್ಣ ಅವರ ಮೇಲೆ ನಂಬಿಕೆ ಇಟ್ಟೆ. ದಿಲ್ಲಿವರೆಗೂ ಹೋಗಿ ಬಂದೆ. ಕಾಂಗ್ರೆಸ್ ಟಿಕೆಟ್ ಕೊಡಿಸುತ್ತೇವೆ ಎಂದು ಹೇಳಿದವರು ಕೊನೇ ಕ್ಷಣದಲ್ಲಿ ಕೈ ಎತ್ತಿದರು.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ನನಗೆ ಕರೆ ಮಾಡಿ, ನಾಳೆ ಬೆಳಗ್ಗೆಯೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸೂಚಿಸಿದರು. ನಿನಗೆ ಟಿಕೆಟ್ ಕೊಡದೇ ಇದ್ದುದು ಗೊತ್ತಾಗಿ ಬೇಸರವಾಯಿತು. ನಿನ್ನಂಥ ಕೆಲಸಗಾರ ಈ ಕ್ಷೇತ್ರಕ್ಕೆ ಬೇಕು. ನಿನ್ನ ಬೆಂಬಲಕ್ಕೆ ನಾವಿದ್ದೇವೆ. ಈಗಷ್ಟೇ ಕಾಲಭೈರವನ ಪೂಜೆ ಮುಗಿಸಿ ಬಂದಿದ್ದೇನೆ. ನಿನಗೆ ಒಳ್ಳೆಯದಾಗುತ್ತದೆ ಎಂದು ಹರಸಿದರು.

ಮರುದಿನ ನಾಮಪತ್ರ ಸಲ್ಲಿಸುವಾಗ ಸಾವಿರಾರು ಜನ ಸೇರಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಿಂತು ನಾನು ಭಾರೀ ಮತಗಳ ಅಂತರದಿಂದ ಜಯಶಾಲಿಯಾದೆ. ನನ್ನ ಗೆಲುವಿನ ಆರ್ಭಟ ಕಂಡು ಎಲ್ಲ ಪಕ್ಷಗಳ ಹಿರಿಯ ಮುಖಂಡರೂ ಅಚ್ಚರಿಪಟ್ಟರು.

ಬದಲಾದ ಸನ್ನಿವೇಶದಲ್ಲಿ 2004ರಲ್ಲಿ ಬಿನ್ನಿಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಮೂರನೇ ಬಾರಿ ಆಯ್ಕೆ ಆದೆ. 2008ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಗೋವಿಂದರಾಜ ನಗರ ಕ್ಷೇತ್ರದಿಂದ ಗೆಲುವು ಸಾಧಿಸಿದೆ.
2010ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿ ಆಹಾರ-ನಾಗರಿಕ ಪೂರೈಕೆ, ಮುಜರಾಯಿ ಮತ್ತು ವಸತಿ ಸಚಿವನಾಗಿ ಕಾರ್ಯ ನಿರ್ವಹಿಸಿದೆ. 2016ರಲ್ಲಿ ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಎರಡನೇ ಬಾರಿ ಆಯ್ಕೆಯಾದೆ. 2019ರಲ್ಲಿ ಗೋವಿಂದರಾಜ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು ಭಾರಿ ಮತಗಳ ಅಂತರದಿಂದ ಜಯ ಸಾಧಿಸಿದೆ. ಮೊದಲು ತೋಟಗಾರಿಕೆ ಮತ್ತು ರೇಷ್ಮೆ ಖಾತೆ ನೀಡಿದ್ದರು. ಬಳಿಕ 2021ರಲ್ಲಿ ಮಹತ್ವದ ವಸತಿ ಮತ್ತು ಮೂಲ ಸೌಕರ್ಯ ಖಾತೆಗಳ ಹೊಣೆಗಾರಿಕೆ ನೀಡಿದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಸೋಮಣ್ಣಗೆ ಡಬಲ್‌ ಸೋಲು

ಗೋವಿಂದರಾಜ ನಗರ ಕ್ಷೇತ್ರದಿಂದಲೇ ವಿಧಾನಸಭೆ ಚುನಾವಣೆಗೆ ನಿಲ್ಲಲು ವಿ ಸೋಮಣ್ಣ ತಯಾರಿ ನಡೆಸಿದ್ದರು. ಆದರೆ ಬಿಜೆಪಿ ಹೈಕಮಾಂಡ್‌ ಇವರಿಗೆ ಗೋವಿಂದರಾಜ ನಗರದಲ್ಲಿ ಟಿಕೆಟ್‌ ನೀಡದೆ ಚಾಮರಾಜ ನಗರ ಮತ್ತು ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ವರುಣ ಕ್ಷೇತ್ರಗಳಲ್ಲಿ ಟಿಕೆಟ್‌ ನೀಡಿತು. ಸೋಮಣ್ಣ ಅವರು ಚುನಾವಣೆ ಎದುರಿಸಿದರು. ಆದರೆ ಎರಡೂ ಕ್ಷೇತ್ರಗಳಲ್ಲಿ ಸೋತು ಹೋದರು. ಆದರೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಹೈಕಮಾಂಡ್‌ ತುಮಕೂರು ಕ್ಷೇತ್ರದ ಟಿಕೆಟ್‌ ನೀಡಿತು. ಸೋಮಣ್ಣ ಅವರು ಇಲ್ಲಿ ನಿರಾಯಾಸವಾಗಿ ಗೆದ್ದರು. ಜತೆಗೆ ಕೇಂದ್ರದಲ್ಲಿ ಮಂತ್ರಿಯೂ ಆದರು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

CM Siddaramaiah: ಕರ್ನಾಟಕದಲ್ಲಿ ವಾಸಿಸುತ್ತಿರುವ ಪರ ಭಾಷಿಕರು ಕನ್ನಡ ಕಲಿಯಲೇಬೇಕು: ಸಿದ್ದರಾಮಯ್ಯ

CM Siddaramaiah: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದ ಬಳಿ ನಾಡದೇವಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ನಿರ್ಮಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರು ಕರ್ನಾಟಕದಲ್ಲಿ ಕನ್ನಡ ವಾತಾವರಣ ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

VISTARANEWS.COM


on

CM Siddaramaiah
Koo

ಬೆಂಗಳೂರು: ಕನ್ನಡ ಭಾಷೆ, ನೆಲ, ಜಲವನ್ನು ಸಂರಕ್ಷಣೆ (CM Siddaramaiah) ಮಾಡಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಕರ್ನಾಟಕದಲ್ಲಿ (Karnataka) ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Bengaluru News) ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದ ಬಳಿ ನಾಡದೇವಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ನಿರ್ಮಿಸಲು ಇಂದು ಭೂಮಿ ಪೂಜೆ ನೆರವೇರಿಸಿದ ನಂತರ ಅವರು ಮಾತನಾಡಿದರು.

ಮಾತೃಭಾಷೆಯಲ್ಲಿ ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು

ಪ್ರತಿಯೊಬ್ಬರೂ ಕೂಡ ಕರ್ನಾಟಕದಲ್ಲಿ ಬಾಳಿ ಬದುಕುವವರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ ಎಂದು ತೀರ್ಮಾನ ಮಾಡಬೇಕು. ಕನ್ನಡಿಗರು ಉದಾರಿಗಳು. ಹಾಗಾಗಿಯೇ ಬೇರೆ ಭಾಷೆ ಮಾತನಾಡುವವರೂ ಕೂಡ ಕನ್ನಡ ಕಲಿಯದೇ ಬದುಕುವ ವಾತಾವರಣ ಕರ್ನಾಟಕದಲ್ಲಿದೆ ಎಂದು ವಿಷಾದಿಸಿದರು.

ಇದನ್ನೂ ಓದಿ: Shivamogga News: ಶಿವಮೊಗ್ಗದಲ್ಲಿ ಜೂ.22ರಂದು ಯುವ ಸ್ಫೂರ್ತಿ ಸಂವಾದ ಕಾರ್ಯಕ್ರಮ

ತಮಿಳುನಾಡು, ಆಂಧ್ರ, ಕೇರಳಕ್ಕೆ ಹೋದರೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ನಾವೂ ಕೂಡ ನಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು. ಅದು ನಮಗೆ ಹೆಮ್ಮೆಯ ವಿಷಯವಾಗಬೇಕು. ಅದರಲ್ಲಿ ಕೀಳರಿಮೆ ಅಗತ್ಯವಿಲ್ಲ ಎಂದು ತಿಳಿಸಿದರು.

ಕರ್ನಾಟಕದಲ್ಲಿ ವಾಸ ಮಾಡುವವರು ಕನ್ನಡ ಕಲಿಯಬೇಕು

ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ. ಅದಕ್ಕಾಗಿ ಇಲ್ಲಿ ವಾಸ ಮಾಡುವವರೆಲ್ಲರೂ ಕನ್ನಡವನ್ನು ಕಲಿಯಲೇಬೇಕು. ಹಾಗೆಂದು ನಾವು ಸುಮ್ಮನಿರುವಂತಿಲ್ಲ. ಕನ್ನಡಿಗರು ದುರಭಿಮಾನಿಗಳಲ್ಲ. ಆದರೆ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ದುರಭಿಮಾನಿಗಳಂತೆ ನಾವು ಆಗಬೇಕಿಲ್ಲ. ಆದರೆ ನಮ್ಮ ಭಾಷೆ, ನೆಲ, ನಾಡಿನ ಬಗ್ಗೆ ಗೌರವ, ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಭುವನೇಶ್ವರಿ ತಾಯಿ ಎಲ್ಲರಿಗೂ ಈ ನಿಟ್ಟಿನಲ್ಲಿ ಎಲ್ಲರಿಗೂ ಸ್ಪೂರ್ತಿ ಕೊಡಲಿ ಎಂದು ಆಶಿಸುತ್ತೇನೆ ಎಂದರು.

ನವೆಂಬರ್ ಒಂದರೊಳಗೆ ಕಾಮಗಾರಿ ಪೂರ್ಣಗೊಳಿಸಿ

ನವೆಂಬರ್ 01, 2024ರೊಳಗೆ ಪೂರ್ಣಗೊಳ್ಳಬೇಕು. ಈಗಾಗಲೇ ಕೆಲಸ ಪ್ರಾರಂಭವಾಗಿದೆ. ಹಣದ ಕೊರತೆಯೂ ಇಲ್ಲ.ಇದೊಂದು ಉತ್ತಮವಾದ ಕೆಲಸ. ವಿಧಾನಸೌಧದ ಆವರಣದಲ್ಲಿ ಸುಮಾರು 25 ಅಡಿ ಎತ್ತರ ಇರುವ ಕಂಚಿನ ಪ್ರತಿಮೆ ನಿರ್ಮಾಣವಾಗಲಿದೆ. ಜನರಿಗೆ ಆರ್ಕರ್ಷಣೆಯಾಗುವ ರೀತಿಯಲ್ಲಿ ಇರಬೇಕೆಂದು ಸೂಚಿಸಲಾಗಿದೆ. ಅನೇಕ ರಾಜಕಾರಣಿಗಳ ಪ್ರತಿಮೆಗಳನ್ನು ಸ್ಥಾಪಿಸಿದ್ದೇವೆ. ಪ್ರತಿಮೆ ವಿಧಾನಸೌಧದ ಆಕರ್ಷಣೆಯನ್ನು ಇಮ್ಮಡಿಗೊಳಿಸುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: BCCI: ಟೀಮ್​ ಇಂಡಿಯಾದ ತವರಿನ ಕ್ರಿಕೆಟ್​ ಸರಣಿಯ ವೇಳಾಪಟ್ಟಿ ಪ್ರಕಟ

2023, ನವೆಂಬರ್ 01 ರಂದು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಇಡೀ ವರ್ಷ ಕರ್ನಾಟಕ ಸಂಭ್ರಮ ಎಂಬ ಹೆಸರಿನಡಿ ಹೆಸರಾಯಿತು ‘ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯವನ್ನು ಇಟ್ಟು ಇಡೀ ವರ್ಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನವೆಂಬರ್ 01 2023 ರಂದು ಹಂಪಿಯಿಂದ ಕಾರ್ಯಕ್ರಮ ಪ್ರಾರಂಭವಾಗಿತ್ತು. ಗದಗಿನಲ್ಲಿಯೂ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಮಕರಣವಾದ ನಂತರ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಅಲ್ಲಿಗೆ ಭೇಟಿ ನೀಡಿದ್ದರು. ಅವರ ಕಾಲದಲ್ಲಿಯೇ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿಯವರೆಗೆ ಮೈಸೂರು ರಾಜ್ಯ ಎಂದಿತ್ತು.

ತಾಯಿ ಭುವನೇಶ್ವರಿಯ ಪೂಜೆಯನ್ನು ಬಹಳ ವರ್ಷಗಳಿಂದ ರಾಜಮಹಾರಾಜರು ಮಾಡಿಕೊಂಡು ಬರುತ್ತಿದ್ದಾರೆ. ಕರ್ನಾಟಕದಲ್ಲಿಯೂ ತಾಯಿ ಭುವನೇಶ್ವರಿಯ ಪೂಜೆ ಮಾಡುತ್ತೇವೆ. ಏಕೀಕರಣದ ನಂತರ ಅದಕ್ಕೂ ಮುನ್ನವೇ ಪೂಜೆ ಮಾಡಿ ಗೌರವಿಸಿ, ಸ್ಮರಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ ಎಂದರು.

ಇದನ್ನೂ ಓದಿ: Working Hours: ಅತಿ ಹೆಚ್ಚು ಕೆಲಸದ ಸಮಯ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಈ ಸಂದರ್ಭದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಶಾಸಕರು ಹಾಗೂ ಇತರರು ಉಪಸ್ಥಿತರಿದ್ದರು.

Continue Reading

ದೇಶ

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್;‌ ಕೊನೆಗೂ ಸಿಕ್ಕಿತು ಜಾಮೀನು

Arvind Kejriwal: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳಿಂದ ಅರವಿಂದ್‌ ಕೇಜ್ರಿವಾಲ್‌ ಅವರು ತಿಹಾರ ಜೈಲಿನಲ್ಲಿದ್ದರು. ಚುನಾವಣೆ ಸಂದರ್ಭದಲ್ಲಿ ಅವರು ಮಧ್ಯಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದರು. ಈಗ ಅವರಿಗೆ ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಇದು ಕೇಜ್ರಿವಾಲ್‌ ಅವರಿಗೆ ಬಿಗ್‌ ರಿಲೀಫ್‌ ಆಗಿದೆ.

VISTARANEWS.COM


on

Arvind Kejriwal
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನೂರಾರು ಕೋಟಿ ರೂ. ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಜೈಲು ಸೇರಿದ್ದ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ದೆಹಲಿಯ ರೋಸ್‌ ಅವೆನ್ಯೂ ನ್ಯಾಯಾಲಯವು, ಒಂದು ಲಕ್ಷ ರೂ. ಬಾಂಡ್‌ ಪಡೆದು, ಅವರಿಗೆ ಜಾಮೀನು ಮಂಜೂರು ಮಾಡಿದೆ.

ಇದರೊಂದಿಗೆ ಅರವಿಂದ್‌ ಕೇಜ್ರಿವಾಲ್‌ ಅವರ ಮೂರು ತಿಂಗಳ ಜೈಲುವಾಸವೂ ತಾತ್ಕಾಲಿಕವಾಗಿ ಅಂತ್ಯವಾದಂತಾಗಿದೆ. ಶುಕ್ರವಾರ ಬಾಂಡ್‌ ಬೇಲ್‌ಗೆ ಅರವಿಂದ್‌ ಕೇಜ್ರಿವಾಲ್‌ ಅರ್ಜಿ ಹಾಕಬಹುದಾಗಿದ್ದು, ಶುಕ್ರವಾರವೇ (ಜೂನ್‌ 21) ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಬೇಲ್‌ ಬಾಂಡ್‌ಗಳನ್ನು ಸ್ವೀಕರಿಸಲು ಎರಡು ದಿನ ಟೈಮ್‌ ಬೇಕು ಎಂಬುದಾಗಿ ಇ.ಡಿ ಮನವಿ ಮಾಡಿತ್ತು. ಆದರೆ, ಇದಕ್ಕೆ ನ್ಯಾ. ನಿಯಾಯ್‌ ಬಿಂದು ಅವರು ನಕಾರ ವ್ಯಕ್ತಪಡಿಸಿದರು.

ಏನಿದು ಪ್ರಕರಣ?

ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ. 5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಅರವಿಂದ್‌ ಕೇಜ್ರಿವಾಲ್‌ ಮಾತ್ರವಲ್ಲ ಬಿಆರ್‌ಎಸ್‌ ನಾಯಕಿ ಕೆ. ಕವಿತಾ ಅವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್​ ಅವರಿಗೆ ಇ.ಡಿ. 9 ಬಾರಿ ನೋಟಿಸ್ ಜಾರಿ ಮಾಡಿತ್ತು. ಬಳಿಕ ಮಾರ್ಚ್​ 21ರಂದು ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಅವರು ಮಧ್ಯಂತರ ಜಾಮೀನು ಪಡೆದು ಒಂದು ತಿಂಗಳು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಜೈಲಿಗೆ ಮರಳುವಂತೆ ಕೋರ್ಟ್‌ ಈ ಹಿಂದೆಯೇ ಆದೇಶಿಸಿತ್ತು. ಅದರಂತೆ, ಕೇಜ್ರಿವಾಲ್‌ ಅವರು ಜೈಲಿಗೆ ಮರಳಿದ್ದರು. ಈಗ ಕೊನೆಗೂ ಅವರಿಗೆ ರಿಲೀಫ್‌ ಸಿಕ್ಕಂತಾಗಿದೆ.

ಇದನ್ನೂ ಓದಿ: Swati Maliwal: ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲೇ ಆಪ್‌ ಸಂಸದೆ ಸ್ವಾತಿ ಮೇಲೆ ಹಲ್ಲೆ!

Continue Reading

ಬೆಂಗಳೂರು

Lakshmi Hebbalkar: ಲಕ್ಷ್ಮೀ ಹೆಬ್ಬಾಳಕರ್ ಭರವಸೆ; ಅಂಗನವಾಡಿ ನೌಕರರ ಮುಷ್ಕರ ವಾಪಸ್‌

Lakshmi Hebbalkar: ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟವನ್ನು ಹಿಂಪಡೆದಿದ್ದಾರೆ.

VISTARANEWS.COM


on

Action will be taken to ensure that the Anganwadi workers do not suffer in any way says Minister Lakshmi Hebbalkar
Koo

ಬೆಂಗಳೂರು: ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ (Lakshmi Hebbalkar) ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಹೋರಾಟವನ್ನು ಹಿಂಪಡೆದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಎಲ್‌ಕೆಜಿ, ಯುಕೆಜಿ‌ ಆರಂಭಿಸುವ ಕುರಿತ ಆದೇಶ ರದ್ದು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ- ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯವರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಗುರುವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌, ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿದರು.

ಇದನ್ನೂ ಓದಿ: Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಈ ವೇಳೆ ಸಚಿವರು, ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ, ಅಂಗನವಾಡಿ ಕೇಂದ್ರಗಳಿಗೆ ಮತ್ತು ಕಾರ್ಯಕರ್ತೆಯರ ಅಸ್ತಿತ್ವಕ್ಕೆ ತೊಂದರೆಯಾಗಲು ಬಿಡುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಯವರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಮುಖ್ಯಮಂತ್ರಿಯವರು ಕೂಡ ಅಂಗನವಾಡಿ ಕೇಂದ್ರಗಳ ಅಸ್ವಿತ್ವಕ್ಕೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಬಗ್ಗೆ ಬರುವ ಸೋಮವಾರ ಕೂಡ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಿ ಚರ್ಚಿಸಲಾಗುವುದು. ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಯಾವುದೇ ರೀತಿಯಿಂದಲೂ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು. ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟಕ್ಕೆ ಫಲ ಸಿಗಲಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: Shivamogga News: ಶಿವಮೊಗ್ಗದಲ್ಲಿ ಜೂ.22ರಂದು ಯುವ ಸ್ಫೂರ್ತಿ ಸಂವಾದ ಕಾರ್ಯಕ್ರಮ

ಈ ವೇಳೆ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್. ಕೆ.ಅತೀಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಜಿ.ಸಿ. ಪ್ರಕಾಶ್, ನಿರ್ದೇಶಕ ಎನ್.ಸಿದ್ದೇಶ್ವರ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್. ನಿಶ್ಚಲ್, ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ, ಉಪಾಧ್ಯಕ್ಷೆ ಸುನಂದ, ಕಾರ್ಮಿಕ ಸಂಘಟನೆಗಳ ಮುಖಂಡರಾಧ ಮೀನಾಕ್ಷಿ ಸುಂದರಂ ಉಪಸ್ಥಿತರಿದ್ದರು.

Continue Reading

ಪ್ರಮುಖ ಸುದ್ದಿ

Mecca Heatwave Death : ಮೆಕ್ಕಾದಲ್ಲಿ ನಿಧನ ಹೊಂದಿದ ಹಜ್​ ಯಾತ್ರಿಗಳಿಗೆ ಅಲ್ಲೇ ಸಂಸ್ಕಾರ; ಹಜ್​ ಕಮಿಟಿ ಮಾಹಿತಿ

Mecca Heatwave Death : ಭಾರತ‌ ಸರ್ಕಾರ ಹಾಗೂ ಸೌದಿ ಅರೇಬಿಯಾದ ಒಡಂಬಡಿಕೆ ಪ್ರಕಾರ ಶವ ತೆಗೆದುಕೊಂಡು ಬರುವುದಕ್ಕೆ ಆಗಲ್ಲ. ಅಂತೆಯೇ ಇಸ್ಲಾಂ ಧರ್ಮದಲ್ಲಿ ಮೆಕ್ಕಾದಲ್ಲಿ ಶವಸಂಸ್ಕಾರ ಮಾಡೋದು ಪುಣ್ಯವಾದ ಕೆಲಸ. ಇಸ್ಲಾಂ ಅನುಯಾಯಿಗಳು ಬಲವಾಗಿ ನಂಬುತ್ತಾರೆ. ಹಾಗಾಗಿ ಮೆಕ್ಕಾದಿಂದ ಯಾವುದೇ ಮೃತದೇಹವನ್ನು ತೆಗೆದುಕೊಂಡು ಬರುವುದಿಲ್ಲ ಎಂದ ಹೇಳಿದ್ದಾಎರ

VISTARANEWS.COM


on

Mecca Heatwave Death
Koo

ವಿಜಯನಗರ: ಸೌದಿ ಅರೇಬಿಯಾದ ಮೆಕ್ಕಾದಲ್ಲಿ ತಾಪಮಾನ ಏರಿಕೆಯಿಂದ ಉಂಟಾದ ಆಘಾತದಿಂದ ಕರ್ನಾಟಕದ ಇಬ್ಬರು ಮೃತಪಟ್ಟಿರುವ (Mecca Heatwave Death) ಬಗ್ಗೆ ರಾಜ್ಯ ಹಜ್ ಕಮಿಟಿ ಕಾರ್ಯನಿರ್ವಹಣಾ ಅಧಿಕಾರಿ ಸರ್ಫರಾಜ್ ಖಾನ್​ ಮಾಹಿತಿ ನೀಡಿದ್ದಾರೆ. ಮೃತಪಟ್ಟಿರುವ ಇಬ್ಬರನ್ನು ಅಲ್ಲೇ ಸಂಸ್ಕಾರ ಮಾಡಲಾಗುವುದು ಎಂದು ಹೇಳಿದ್ದಾರೆ. ಇಸ್ಲಾಂ ಪ್ರಕಾರ ಪವಿತ್ರ ಸ್ಥಳವಾಗಿರುವ ಮೆಕ್ಕಾದಲ್ಲಿ ಮೃತಪಟ್ಟರೆ ಶ್ರೇಷ್ಠ ಹಾಗೂ ಪುಣ್ಯ. ಅಂತೆಯೇ ಅವರನ್ನು ಅಲ್ಲಿಯೇ ಸಂಸ್ಕಾರ ಮಾಡಲಾಗುವುದು ಹೊಸಪೇಟೆಯ ಡಿಸಿ ಕಚೇರಿಯಲ್ಲಿ ಅವರು ಮಾಹಿತಿ ನೀಡಿದ್ದಾರೆ.

ಕರ್ನಾಟಕದಿಂದ ಒಟ್ಟು 10,300 ಜನ ಯಾತ್ರಾರ್ಥಿಗಳು ಹಜ್ ಗೆ ಹೋಗಿದ್ದರು. 52 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ಏರಿದ್ದ ಕಾರಣ ಕರ್ನಾಟಕದ ಇಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ತೆರಳಿದ್ದ ಇಬ್ಬರು ಯಾತ್ರಾರ್ಥಿಗಳು ಜೂನ್ 16ರಂದು ಮೆಕ್ಕಾದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಆರ್ ಟಿ ನಗರದ ನಿವಾಸಿ ರುಕ್ಸಾನಾ (90), ಹಾಗೂ ಅಬ್ದುಲ್ ಅನ್ಸಾರಿ (54) ಮೃತಪಟ್ಟವರು. ಅವರಿಬ್ಬರೂ ಬೆಂಗಳೂರು ಎಂಬಾರ್ಕೆಸೆ ಪಾಯಿಂಟ್ ನಿಂದ ಹಜ್ ಗೆ ಹೋಗಿದ್ದರು ಎಂದು ಸರ್ಫಾರಾಜ್ ಅವರು ಮಾಹಿತಿ ನೀಡಿದ್ದಾರೆ.

ಭಾರತ‌ ಸರ್ಕಾರ ಹಾಗೂ ಸೌದಿ ಅರೇಬಿಯಾದ ಒಡಂಬಡಿಕೆ ಪ್ರಕಾರ ಶವ ತೆಗೆದುಕೊಂಡು ಬರುವುದಕ್ಕೆ ಆಗಲ್ಲ. ಅಂತೆಯೇ ಇಸ್ಲಾಂ ಧರ್ಮದಲ್ಲಿ ಮೆಕ್ಕಾದಲ್ಲಿ ಶವಸಂಸ್ಕಾರ ಮಾಡೋದು ಪುಣ್ಯವಾದ ಕೆಲಸ. ಇಸ್ಲಾಂ ಅನುಯಾಯಿಗಳು ಬಲವಾಗಿ ನಂಬುತ್ತಾರೆ. ಹಾಗಾಗಿ ಮೆಕ್ಕಾದಿಂದ ಯಾವುದೇ ಮೃತದೇಹವನ್ನು ತೆಗೆದುಕೊಂಡು ಬರುವುದಿಲ್ಲ ಎಂದ ಹೇಳಿದ್ದಾರೆ.

ಇದನ್ನೂ ಓದಿ: NEET UG : ಫಿಸಿಕ್ಸ್​ನಲ್ಲಿ 85, ಕೆಮೆಸ್ಟ್ರಿಯಲ್ಲಿ 5! ನೀಟ್ ಆಕಾಂಕ್ಷಿಯ ಸ್ಕೋರ್ ಕಾರ್ಡ್ ಸೋರಿಕೆ, ಆರೋಪಿ ಸೆರೆ

ಸೌದಿ ಅರೇಬಿಯಾದ ಸರ್ಕಾರ ಮತ್ತು ಕೌನ್ಸಿಲ್ ಜನರಲ್ ಮೃತಪಟ್ಟವರು ಶವ ಸಂಸ್ಕಾರ ಮಾಡಿದ್ದಾರೆ. ಮೃತಪಟ್ಟಿರುವ ರುಕ್ಸಾನಾ ಪತಿ ಹಾಗೂ ಅಬ್ದುಲ್ ಅನ್ಸಾರಿ ಅವರ ಪತ್ನಿ ಸಹ ಹಜ್ ಗೆ ಹೋಗಿದ್ದಾರೆ. ಅವರ ಕುಟುಂಬಸ್ಥರು ಅಲ್ಲಿಯೇ ಇದ್ದಾರೆ ಎಂದು ಅವರು ಹೇಳಿದ್ದಾರೆ.

ಸಂಜೆ 4ರವರೆಗೆ ಹೊರಗೆ ಬರದಂತೆ ಸೂಚನೆ

ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಯಾರು ಹೊರಗಡೆ ಬರಬಾರದು ಅಂತಾ ಸೂಚನೆ ನೀಡಿದ್ದಾರೆ. ಹಜ್​ಗೆ ಹೋದ ಎಲ್ಲ ಯಾತ್ರಾರ್ಥಿಗಳು ಕಡ್ಡಾಯ ಪಾಲನೆ ಮಾಡಬೇಕು. ಇಲ್ಲಿಂದ ಹಜ್ ಗೆ ಹೋಗುವಾಗ ಎಲ್ಲ ಪ್ರತಿಯೊಬ್ಬರಿಗೂ ತರಬೇತಿ ಕೊಟ್ಟಿರುತ್ತೇವೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ತರಬೇತಿ ಕ್ಯಾಂಪ್ ಮಾಡಿದ್ದೇವೆ. ತಾಪಮಾನ ಜಾಸ್ತಿಯಿದ್ದಾಗ ಯಾವ ಥರ ಇರಬೇಕು ಅಂತಾ ಹೇಳಿದ್ದೇವೆ. ಜಾಗೃತಿ ಮೂಡಿಸಿದ್ರೂ ದುರಂತ ಆಗಬಾರದಿತ್ತು ಎಂಬುದೇ ನನ್ನ ಅಭಿಪ್ರಾಯ.

Continue Reading
Advertisement
CM Siddaramaiah
ಪ್ರಮುಖ ಸುದ್ದಿ4 mins ago

CM Siddaramaiah: ಕರ್ನಾಟಕದಲ್ಲಿ ವಾಸಿಸುತ್ತಿರುವ ಪರ ಭಾಷಿಕರು ಕನ್ನಡ ಕಲಿಯಲೇಬೇಕು: ಸಿದ್ದರಾಮಯ್ಯ

Tumkur DC Shubha Kalyan inaugurated the Janaspandana programme in Koratagere
ತುಮಕೂರು15 mins ago

Koratagere News: ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮ; ಡಿಸಿ ಶುಭ‌ ಕಲ್ಯಾಣ್

Power cut There will be power outage in various parts of Bengaluru on June 22
ಕರ್ನಾಟಕ16 mins ago

Power Cut: ಬೆಂಗಳೂರಿನ ವಿವಿಧ ಕಡೆ ಜೂ. 22ರಂದು ವಿದ್ಯುತ್‌ ವ್ಯತ್ಯಯ

Arvind Kejriwal
ದೇಶ17 mins ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್;‌ ಕೊನೆಗೂ ಸಿಕ್ಕಿತು ಜಾಮೀನು

Vijayanagara DC MS Diwakar meeting with officials of various departments
ವಿಜಯನಗರ19 mins ago

Vijayanagara News: ಜೂ. 21ರಂದು ಮುಖ್ಯಮಂತ್ರಿಗಳಿಂದ ಕೆಡಿಪಿ ಸಭೆ; ಡಿಸಿ ಎಂ.ಎಸ್.ದಿವಾಕರ್‌

Action will be taken to ensure that the Anganwadi workers do not suffer in any way says Minister Lakshmi Hebbalkar
ಬೆಂಗಳೂರು24 mins ago

Lakshmi Hebbalkar: ಲಕ್ಷ್ಮೀ ಹೆಬ್ಬಾಳಕರ್ ಭರವಸೆ; ಅಂಗನವಾಡಿ ನೌಕರರ ಮುಷ್ಕರ ವಾಪಸ್‌

Mecca Heatwave Death
ಪ್ರಮುಖ ಸುದ್ದಿ49 mins ago

Mecca Heatwave Death : ಮೆಕ್ಕಾದಲ್ಲಿ ನಿಧನ ಹೊಂದಿದ ಹಜ್​ ಯಾತ್ರಿಗಳಿಗೆ ಅಲ್ಲೇ ಸಂಸ್ಕಾರ; ಹಜ್​ ಕಮಿಟಿ ಮಾಹಿತಿ

CM Siddaramaiah
ಕರ್ನಾಟಕ1 hour ago

CM Siddaramaiah: ಪೆಟ್ರೋಲ್‌ ಬೆಲೆ ಏರಿಸಿದ್ದು ಗ್ಯಾರಂಟಿಗೋ? ಅಭಿವೃದ್ಧಿಗೋ? ಸಿದ್ದರಾಮಯ್ಯ ಹೀಗಂತಾರೆ!

Virat kohli
ಪ್ರಮುಖ ಸುದ್ದಿ1 hour ago

Virat kohli : ಕೊಹ್ಲಿಯನ್ನು ಮತ್ತೆ ಸ್ವಾರ್ಥಿ ಎಂದು ದೂರಿದ ಪಾಕಿಸ್ತಾನದ ಮೊಹಮ್ಮದ್ ಹಫೀಜ್​

Darshan Arrested
ಕರ್ನಾಟಕ2 hours ago

Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ2 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌