Actor Darshan: ಬಂಧಿತರಲ್ಲಿ ಹಲವರಿಗೆ ದರ್ಶನ್ ನೇರ ಪರಿಚಯವೇ ಇಲ್ವಂತೆ; ʻದಚ್ಚುʼ ಅರೆಸ್ಟ್ ಆದ ಬಳಿಕವೇ ಮುಖಾಮುಖಿ! - Vistara News

ಸ್ಯಾಂಡಲ್ ವುಡ್

Actor Darshan: ಬಂಧಿತರಲ್ಲಿ ಹಲವರಿಗೆ ದರ್ಶನ್ ನೇರ ಪರಿಚಯವೇ ಇಲ್ವಂತೆ; ʻದಚ್ಚುʼ ಅರೆಸ್ಟ್ ಆದ ಬಳಿಕವೇ ಮುಖಾಮುಖಿ!

Actor Darshan: ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊಬೈಲ್‌ ಪಾಸ್‌ವರ್ಡ್‌ (Mobile Password) ನೀಡಲು ದರ್ಶನ್‌ ಮತ್ತು ಆತನ ಗ್ಯಾಂಗ್‌ ನಿರಾಕರಿಸುತ್ತಿದೆ. ಇದರಿಂದ ಪೊಲೀಸರ ತನಿಖೆಗೆ ಅಡಚಣೆಯಾಗುತ್ತಿದೆ ಎಂದು ತಿಳಿದುಬಂದಿದೆ.ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

VISTARANEWS.COM


on

Actor Darshan of many acquaintance unknown of darshan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ದರ್ಶನ್‌ (Actor Darshan) ಟೀಮ್‌ನಿಂದ ಹತ್ಯೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Murder Case) ಮೊಬೈಲ್‌ಗಾಗಿ (mobile phone) ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ. ರೇಣುಕಾಸ್ವಾಮಿ ಕೊಲೆಯಾಗಿ ಹತ್ತು ದಿನ ಕಳೆಯುತ್ತಿದ್ದರೂ ಮೊಬೈಲ್ ಪತ್ತೆಯಾಗಿಲ್ಲ. ಇನ್ನು ಕೊಲೆ ಕೇಸ್‌ಗೆ ಸಂಬಂಧಪಟ್ಟಂತೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಭಾಗಿಯಾದವರ ಸಂಖ್ಯೆ 19 ಮಂದಿ. 19 ಮಂದಿಯಲ್ಲಿ ಹಲವರಿಗೆ ದರ್ಶನ್‌ ಅವರ ನೇರ ಪರಿಚಯವೇ ಇಲ್ಲ ಎಂದು ತಿಳಿದು ಬಂದಿದೆ.

ಹಲವರು ದರ್ಶನ್‌ ಅವರನ್ನು ಭೇಟಿಯಾಗಿದ್ದೇ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಎನ್ನಲಾಗಿದೆ. ದರ್ಶನ್‌ಗಾಗಿ ಕೃತ್ಯ ಎಸಗಿದವರಲ್ಲಿ ಕೆಲವರು ದರ್ಶನ್‌ ಅವರನ್ನು ಮುಖಾಮುಖಿ ನೋಡಿದ್ದೇ ಪೊಲೀಸ್ ಸ್ಟೇಷನ್ ನಲ್ಲಿ ಎನ್ನಲಾಗಿದೆ. ಪ್ರಕರಣದಲ್ಲಿ ಪವಿತ್ರಾಗೌಡ, ಪವಿತ್ರಾಗೌಡ ಮ್ಯಾನೇಜರ್ ಪವನ್‌, ಸ್ಟೋನಿಬ್ರೂಕ್ಸ್ ಮಾಲೀಕ ವಿನಯ್, ದರ್ಶನ್ ಮ್ಯಾನೇಜರ್ ನಾಗರಾಜ್, ಸ್ಕಾರ್ಪಿಯೋ ಕಾರು ಮಾಲೀಕ ಪುನೀತ್, ವಿನಯ್,ದೀಪಕ್, ಪ್ರದೋಶ್, ಚಿತ್ರದುರ್ಗದ ರಾಘವೇಂದ್ರ, ಮಂಡ್ಯದ ನಂದೀಶ್ ಮಾತ್ರ ದರ್ಶನ್‌ಗೆ ನೇರ ಪರಿಚಯ ಇದ್ದರಂತೆ. ರಾಘವೇಂದ್ರ ಜತೆ ಕಿಡ್ನಾಪ್ ಮಾಡಿದ್ದ ಅನುಕುಮಾರ್, ಈಟಿಯೋಸ್ ಕಾರು ಚಾಲಕ ರವಿ, ಲಕ್ಷ್ಮಣ್, ಜಗದೀಶ್ ಇವರುಗಳು ದರ್ಶನ್ ಅವರನ್ನು ಕಂಡಿದ್ದೆ ಪೊಲೀಸ್ ಸ್ಟೇಷನ್‌ನಲ್ಲಿ ಎಂದು ತಿಳಿದು ಬಂದಿದೆ.

ದರ್ಶನ್‌ಗಾಗಿ ರೇಣುಕಾಸ್ವಾಮಿ ಮೃತ ದೇಹ ಬಿಸಾಡಿದ್ದ ಕೇಶವ್, ಕಾರ್ತಿಕ್, ನಿಖಿಲ್ ನಾಯಕ್
ದರ್ಶನ್‌ ಅವರನ್ನು ಮೊದಲು ಭೇಟಿಯಾಗಿದ್ದು ಕೊಲೆಯಾದ ಮಾರನೇ ದಿನ ಅಂದರೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಎನ್ನಲಾಗಿದೆ. ದರ್ಶನ್ ತಂಗಿದ್ದ ಮೈಸೂರಿನ ಖಾಸಗಿ ಹೋಟೆಲ್‌ಗೆ ಕೇಶವ್, ಕಾರ್ತಿಕ್, ನಿಖಿಲ್ ರನ್ನು ಕರೆದೊಯ್ದು ದೀಪಕ್ ಭೇಟಿ ಮಾಡಿಸಿದ್ದ . ದೀಪಕ್ ಸೂಚನೆಯಂತೆ ರೇಣುಕಾಸ್ವಾಮಿ ಮೃತದೇಹವನ್ನು ಸುಮ್ಮನಹಳ್ಳಿ ರಾಜಕಾಲುವೆಗೆ ಬಿಸಾಡಿದ್ರು. ನಂತರ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಹೋಗಿ ಹಣಕಾಸಿನ ವಿಚಾರಕ್ಕೆ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾಗಿ ಸರೆಂಡರ್ ಆಗಿದ್ದರು ಕೇಶವ್, ಕಾರ್ತಿಕ್‌, ನಿಖಿಲ್‌ನಾಯಕ್.

ಇದನ್ನೂ ಓದಿ: Actor Darshan: ಹತ್ಯೆಯಾದ ರೇಣುಕಾಸ್ವಾಮಿ ಮೊಬೈಲ್‌ ಹೋಯಿತೆಲ್ಲಿ?

ಮೊಬೈಲ್ ಪತ್ತೆಯಾಗಿಲ್ಲ

ಕಳೆದ ಹತ್ತು ದಿನಗಳಿಂದ ಹುಡುಕಾಡಿದರೂ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ರೇಣುಕಾಸ್ವಾಮಿ ಮೊಬೈಲ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದೆ. ಅಶ್ಲೀಲ ಕಮೆಂಟ್ ಸಂಬಂಧಪಟ್ಟಂತೆ ಇದರಿಂದ ಸಾಕ್ಷಿಗಳನ್ನು ರಿಟ್ರೀವ್‌ ಮಾಡಬೇಕಾಗಿದೆ. ಆರೋಪಿಗಳು ರೇಣುಕಾಸ್ವಾಮಿ ಮೊಬೈಲ್‌ನಲ್ಲೇ ಕ್ಷಮಾಪಣಾ ವಿಡಿಯೋ ಮಾಡಿಸಿದ್ದರು. ಆರ್‌ಆರ್ ನಗರ ಪಟ್ಟಣಗೆರೆ ಶೆಡ್, ಕಿಡ್ನಾಪ್ ಮಾಡಿದ ರವಿಯ ಈಟಿಯೋಸ್ ಕಾರು ಸೇರಿ ಹಲವು ಕಡೆ ಹುಡುಕಿದರೂ ಮೊಬೈಲ್ ಪತ್ತೆಯಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆದರೆ, ವಿಚಾರಣೆ ವೇಳೆ ಮೊಬೈಲ್‌ ಪಾಸ್‌ವರ್ಡ್‌ (Mobile Password) ನೀಡಲು ದರ್ಶನ್‌ ಮತ್ತು ಆತನ ಗ್ಯಾಂಗ್‌ ನಿರಾಕರಿಸುತ್ತಿದೆ. ಇದರಿಂದ ಪೊಲೀಸರ ತನಿಖೆಗೆ ಅಡಚಣೆಯಾಗುತ್ತಿದೆ ಎಂದು ತಿಳಿದುಬಂದಿದೆ.

ದರ್ಶನ್‌ & ಗ್ಯಾಂಗ್‌ನಿಂದ ಪೊಲೀಸರು ಇದುವರೆಗೆ 10 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಡೇಟಾ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಇನ್ನು ಕೆಲವು ಮೊಬೈಲ್‌ಗಳಲ್ಲಿದ್ದ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಇನ್ನೂ ಕೆಲವು ಮೊಬೈಲ್‌ಗಳ ಪಾಸ್‌ವರ್ಡ್‌ ನೀಡುತ್ತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇಷ್ಟಾದರೂ ಪಟ್ಟು ಬಿಡದ ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kannada New Movie: ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್‌ಫ್ಲೈ’ ತಂಡ ಸೇರಿದ ಸುಧಾರಾಣಿ!

Kannada New Movie: ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆಯಾಗಿರುವ ಸುಧಾರಾಣಿ ಈಗ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾದ ಭಾಗವಾಗಿದ್ದಾರೆ. ಅವರು ಪದ್ಮಾ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಸುಧಾರಾಣಿ ಒಂದೊಳ್ಳೆ ಪಾತ್ರವನ್ನು ನಿಭಾಯಿಸಿರುವ ಖುಷಿ ಅವರಲ್ಲಿದೆ. ಈಗಾಗಲೇ ಸುಧಾರಾಣಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ.

VISTARANEWS.COM


on

Kannada New Movie niveditha Shivarajkumar frefly cinema sudharani join
Koo

ಬೆಂಗಳೂರು: ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ (Kannada New Movie) ಸಿನಿಮಾ ತಾರಾಬಳಗದ ಮೂಲಕ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ನಟಿ ಹಾಗೂ ನಿರ್ದೇಶಕಿಯಾಗಿರುವ ಶೀತಲ್ ಶೆಟ್ಟಿ, ಹಿರಿಯ ಕಲಾವಿದ ಮೂಗು ಸುರೇಶ್ ಅವರನ್ನು ಚಿತ್ರತಂಡ ಪರಿಚಯಿಸಿತ್ತು. ಫೈರ್ ಫ್ಲೈ ಸಿನಿಮಾ ಬಳಗಕ್ಕೀಗ ಹಿರಿಯ ನಟಿ ಸುಧಾರಾಣಿ ಸೇರಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದ ಅದ್ಭುತ ಕಲಾವಿದೆಯಾಗಿರುವ ಸುಧಾರಾಣಿ ಈಗ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾದ ಭಾಗವಾಗಿದ್ದಾರೆ. ಅವರು ಪದ್ಮಾ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನ ತಾಯಿಯಾಗಿ ಸುಧಾರಾಣಿ ಒಂದೊಳ್ಳೆ ಪಾತ್ರವನ್ನು ನಿಭಾಯಿಸಿರುವ ಖುಷಿ ಅವರಲ್ಲಿದೆ. ಈಗಾಗಲೇ ಸುಧಾರಾಣಿ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತಾಡಿರುವ ಸುಧಾರಾಣಿ, ‘ಅಪ್ಪಾಜಿಯವರ ಮನೆಯಿಂದ ಯಾರು ಏನೇ ಮಾಡಿದರೂ ಅದು ನನ್ನ ತವರು ಮನೆ. ಹಾಗಾಗಿ ಇವತ್ತಿಗೂ ಅವರಲ್ಲಿ ಯಾರಾದ್ರೂ ಬಂದು ಹಿಂದೆ ಬಂದು ನಿಂತು ಹೋಗು ಅಂದ್ರೆ ನಾನು ತಯಾರಿದ್ದೇನೆ. ಏಕೆಂದರೆ ಇದು ನನ್ನ ಮನೆ. ನಿವಿ ನನ್ನ ಕಣ್ಣ ಮುಂದೆ ಹುಟ್ಟಿ ಬೆಳೆದಂತ ಮಗು, ಇವತ್ತು ಅವಳು ಒಂದು ನಿರ್ಮಾಣ ಸಂಸ್ಥೆ ಶುರು ಮಾಡುತ್ತಿದ್ದಾಳೆ. ಅವಳು ನಿರ್ಮಾಪಕಿಯಾಗಿದ್ದಾಳೆ. ನನಗೆ ತುಂಬಾ ಖುಷಿ ಇದೆ. ಕಥೆಯಿಂದ ಹಿಡಿದು ಪ್ರೊಡಕ್ಷನ್ ವರೆಗೂ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಕನ್ನಡದ ಕಲಾಭಿಮಾನಿಗಳು ಈ ಚಿತ್ರಕ್ಕೆ ಬೆಂಬಲ ನೀಡಬೇಕು. ನಿರ್ದೇಶಕರಿಗೆ ಸ್ವಲ್ಪ ಮುಜುಗರ ಇತ್ತು. ನನ್ನ ಇಷ್ಟು ಚಿಕ್ಕ ಪಾತ್ರ ಕೇಳಬೇಕು ಅಂತಾ ಆದ್ರೆ ಚೊಚ್ಚಲ ನಿರ್ದೇಶಕರಾಗಿ ಅವರಲ್ಲಿದ್ದ ಹುಮ್ಮಸ್ಸು. ಆಸಕ್ತಿ ನನಗೆ ಇಷ್ಟ ಆಯಿತು. ನಿರ್ದೇಶಕರಾಗಿ ನಟನೆಯೂ ಮಾಡುತ್ತಿರುವುದರಿಂದ ಎಲ್ಲರಿಗೂ ಅವರ ಮೊದಲ ಸಿನಿಮಾ ದೊಡ್ಡ ಬಜೆಟ್, ಮಲ್ಟಿಸ್ಟಾರ್ಸ್, ಆಕ್ಷನ್ ಸಿನಿಮಾ ಆಗಿರಬೇಕು ಅಂತಾ ಬಹುತೇಕರು ಯೋಚನೆ ಮಾಡುತ್ತಾರೆ. ಆದರೆ ಈ ವಿಚಾರದಲ್ಲಿ ಅವರು ವಿಭಿನ್ನ. ಸಂಬಂಧಗಳ ಬಗ್ಗೆ ಅವರು ಫೋಕಸ್ ಮಾಡಿದ್ದಾರೆ. ಇಡೀ ಕುಟುಂಬ ಕುಳಿತುಕೊಂಡು, ನೋಡಿ ಇಷ್ಟವಾಗುವಂತ ಚಿತ್ರವನ್ನು ಮಾಡಿದ್ದಾರೆ’ ಎಂದಿದ್ದಾರೆ.

ಇದನ್ನೂ ಓದಿ: Kannada New Movie: ‘ರೂಪಾಂತರ’ಗೊಂಡ ರಾಜ್ ಬಿ. ಶೆಟ್ಟಿ! ಮತ್ತೊಂದು ವಿಭಿನ್ನ ಚಿತ್ರ

‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಕೂಡ ಅವರದ್ದೇ ಎಂಬುದು ವಿಶೇಷ. ಈಗ ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ.

ಶಿವರಾಜಕುಮಾರ್ ಅವರು ಯಾವಾಗಲೂ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಅವರ ರೀತಿಯೇ ನಿವೇದಿತಾ ಶಿವರಾಜಕುಮಾರ್ ಕೂಡ ಹೊಸಬರಿಗೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಸಂಸ್ಥೆಯು ಅವರ ಕನಸಿನ ಕೂಸು. ಯುವ ಪ್ರತಿಭೆಗಳಿಗೆ ಹಾಗೂ ಹೊಸ ಆಲೋಚನೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

‘ಫೈರ್ ಫ್ಲೈ’ ಚಿತ್ರಕ್ಕೆ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆಯ ಬರೆಯುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿಕೊಂಡಿದೆ.

Continue Reading

ಕರ್ನಾಟಕ

Actor Darshan: ಜೈಲಲ್ಲಿ ಮುದ್ದೆ-ಚಿಕನ್‌ ಸಾಂಬಾರ್‌ ಸವಿದ ದರ್ಶನ್;‌ ನಟನ ನೋಡಲು ಮುಗಿಬಿದ್ದ ಕೈದಿಗಳು!

Actor Darshan: ಶನಿವಾರ ಬೆಳಗ್ಗೆ ಎದ್ದ ದರ್ಶನ್‌, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್‌ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ.

VISTARANEWS.COM


on

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು (Parappana Agrahara) ಸೇರಿರುವ ನಟ ದರ್ಶನ್‌ (Actor Darshan) ಅವರಿಗೆ ಜೈಲಿನ ಮೆನು ಪ್ರಕಾರವೇ ಊಟ ನೀಡಲಾಗುತ್ತಿದೆ. ಅದರಂತೆ, ಶುಕ್ರವಾರ (ಜೂನ್‌ 28) ರಾತ್ರಿ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ. ಜೈಲಿನ ಅನ್ನ-ಸಾಂಬಾರ್‌ ತಿಂದು ಬಸವಳಿದಿದ್ದ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್‌ ಸಾಂಬಾರ್‌ ಸೇವಿಸಿದ ದರ್ಶನ್‌ ತಡವಾಗಿ ನಿದ್ದೆಗೆ ಜಾರಿದರು ಎಂದು ತಿಳಿದುಬಂದಿದೆ.

ಶನಿವಾರ (ಜೂನ್‌ 29) ಬೆಳಗ್ಗೆ 6 ಗಂಟೆಗೆ ಎದ್ದ ದರ್ಶನ್‌, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್‌ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದರ ಮಧ್ಯೆಯೇ, ನಟ ದರ್ಶನ್‌ ಅವರನ್ನು ನೋಡಲು ಜೈಲಿನಲ್ಲಿರುವ ಕೈದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಕೂಡ ತಿಳಿದುಬಂದಿದೆ.

Actor Darshan

6106 ಸ್ಟಿಕ್ಕರ್‌ಗಳಿಗೆ ಡಿಮ್ಯಾಂಡ್

ʻʻಡಿ 6106ʼʼಎಂದು ಒಬ್ಬ ಅಭಿಮಾನಿ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ದರ್ಶನ್ ಕೈದಿ ನಂಬರ್‌ನಲ್ಲಿಯೇ ಮೊಬೈಲ್ ಕವರ್‌ ಕೂಡ ಬಂದಿದೆ. ಬೈಕ್,ಆಟೋಗಳ ಹಿಂದೆ ಕೂಡ ಇದೇ ಕೈದಿ ನಂಬರ್ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ತಮ್ಮ ವಾಹನಗಳಿಗೆ ಈ ರೀತಿಯ ಸ್ಟಿಕ್ಕರ್‌ವನ್ನು ನೂರಾರು ಫ್ಯಾನ್ಸ್‌ ಹಾಕಿಕೊಂಡು ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುತ್ತಿದ್ದಾರೆ. ಕೈದಿ ನಂಬರ್ 6106 ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟ್ರೆಂಡಿಂಗ್ ಆಗುತ್ತಿದೆ.

ಸದ್ಯ ಈಗ ಕೈದಿ ನಂಬರ್ 6106 ಸ್ಟಿಕ್ಕರ್ ಗಳಿಗೆ ಫುಲ್ ಡಿಮ್ಯಾಂಡ್ ಇದೆ ಎನ್ನಲಾಗಿದ್ದು ವಿಭಿನ್ನ ಬಣ್ಣ, ವಿನ್ಯಾಸದಲ್ಲಿ ದರ್ಶನ್ ಫ್ಯಾನ್ಸ್ ಇದನ್ನು ಮಾಡಿಸಿಕೊಂಡು ತಮ್ಮ ವಾಹನಗಳಿಗೆ ಅಂಟಿಸಿಕೊಳ್ಳುತ್ತಿದ್ದಾರೆ.ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇತ್ತೀಚೆಗೆ ಅವರ ವಿಶೇಷ ಚೇತನ ಅಭಿಮಾನಿಯೊಬ್ಬರು ಅವರನ್ನು ನೋಡಲು ಬಂದಿದ್ದರು. ಈ ಘಟನೆಯ ನಂತರ ಅಭಿಮಾನಿಗಳಿಗೆ ನಟ ದರ್ಶನ್ ಮನವಿ ಮಾಡಿದ್ದು ಜೈಲಿನಿಂದಲೇ ನಟ ದರ್ಶನ್ ಮನವಿ ತಿಳಿಸಿದ್ದಾರೆ.

ಇದನ್ನೂ ಓದಿ: Actor Darshan: ಒಂದಲ್ಲ, ಎರಡಲ್ಲ…. ಬರೋಬ್ಬರಿ 50 ನಿಮಿಷ ರೇಣುಕಾ ಸ್ವಾಮಿ ಮೇಲೆ ದರ್ಶನ್‌ ಕ್ರೌರ್ಯ!

Continue Reading

ಸ್ಯಾಂಡಲ್ ವುಡ್

Dhanya Ramkumar: ʻದಿಯಾʼ ಹೀರೊಗೆ ಜೋಡಿಯಾದ ದೊಡ್ಮನೆ ಬ್ಯೂಟಿ!

Dhanya Ramkumar: ಚೌಕಿದಾರ್ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್.

VISTARANEWS.COM


on

Dhanya Ramkumar heroine in choukidaar cinema
Koo

ಬೆಂಗಳೂರು: ʻರಥಾವರʼ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಸಿನಿಮಾ ಚೌಕಿದಾರ್. ಇತ್ತೀಚೆಗಷ್ಟೇ ಡೈಲಾಗ್ ಕಿಂಗ್ ಸಾಯಿಕುಮಾರ್ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಚೌಕಿದಾರ್‌ಗೆ ನಾಯಕಿ ಸಿಕ್ಕಿದ್ದಾಳೆ. ದೊಡ್ಮನೆ ಬ್ಯೂಟಿ ಧನ್ಯರಾಮ್ ಕುಮಾರ್‌ಗೆ (Dhanya Ramkumar) ಪೃಥ್ವಿ ಅಂಬಾರ್‌ ಜೋಡಿಯಾಗಿ ನಟಿಸುತ್ತಿದ್ದಾರೆ.

ಪೃಥ್ವಿ ಅಂಬಾರ್ ನಾಯಕನಾಗಿ ಅಭಿನಯಿಸುತ್ತಿರುವ ʻಚೌಕಿದಾರ್ʼ ಸಿನಿಮಾದಲ್ಲಿ ಧನ್ಯರಾಮ್ ಕುಮಾರ್ ಹೀರೊಯಿನ್ ಆಗಿ ಬಣ್ಣ ಹಚ್ಚುತ್ತಿದ್ದಾರೆ. ʻನಿನ್ನ ಸನಿಹಕೆʼ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಿತರಾಗಿದ್ದ ಧನ್ಯ ಇತ್ತೀಚೆಗಷ್ಟೇ ʻಜಡ್ಜಮೆಂಟ್ʼ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದರು. ಸದ್ಯ ಕಾಲಪತ್ತರ್ ರಿಲೀಸ್ ಗೆ ಎದುರು ನೋಡುತ್ತಿರುವ ದೊಡ್ಮನೆ ಸುಂದರಿ ಈಗ ಚೌಕಿದಾರ್ ಬಳಗ ಸೇರಿಕೊಂಡಿದ್ದಾರೆ.

ಚೌಕಿದಾರ್ ಬಹುಭಾಷೆಯಲ್ಲಿ ಮೂಡಿ ಬರ್ತಿದೆ. ಕನ್ನಡದ ಜತೆಗೆ ಹಲವು ಭಾಷೆಯಲ್ಲಿ ಚಿತ್ರ ತಯಾರಾಗುತ್ತಿದೆ. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ, ಹಾಗಂತ ಚೌಕಿದಾರ್ ಕಂಪ್ಲೀಟ್ ಆಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್ ಟೈನರ್.

ಇದನ್ನೂ ಓದಿ: Kanguva Release Date: ʻಕಂಗುವ’ ರಿಲೀಸ್‌ ಡೇಟ್‌ ಅನೌನ್ಸ್‌; ಧ್ರುವ ಸರ್ಜಾ ಸಿನಿಮಾ ಜತೆ ಕ್ಲ್ಯಾಶ್‌!

ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆ ಮಾಡಿದ್ದ ಚಿತ್ರತಂಡ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿತ್ತು. ಚೌಕಿದಾರ್ ಸಿನಿಮಾಗೆ ಬಹುಭಾಷಾ ನಟ ಸಾಯಿಕುಮಾರ್ ಎಂಟ್ರಿ ಕೊಟ್ಟಿದದರು. ಆದ್ರೆ ಡೈಲಾಗ್ ಕಿಂಗ್ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.

ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಡಾ.ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ ಮೂರನೇ ತಾರೀಖಿನಂದು ಬಂಡಿ ಮಹಾಕಾಳಿ ದೇಗುಲದಲ್ಲಿ ಚೌಕಿದಾರ್ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.

Continue Reading

ಕ್ರೈಂ

Actor Darshan: ಪರಪ್ಪನ ಅಗ್ರಹಾರಕ್ಕೆ ದರ್ಶನ್‌ ನೋಡಲು ಆಗಮಿಸಿದ ಯುವತಿ; ಯಾರಾಕೆ?

Actor Darshan: ದರ್ಶನ್ ಅವರೇ ಈಗ ಅಭಿಮಾನಿಗಳಿಗೆ ಪರಪ್ಪನ ಅಗ್ರಹಾರಕ್ಕೆ ಬರಬೇಡಿ ಎಂದು ವಿಶೇಷ ಮನವಿ ಮಾಡಿದ್ದಾರೆ. ಹೀಗಿದ್ದರೂ ದರ್ಶನ್ ಭೇಟಿಗೆ ಯುವತಿವೊಬ್ಬಳು ಆಗಮಿಸಿದ್ದಳು. ಮಾಸ್ಕ್ ಧರಿಸಿ ಜೈಲು ಬಳಿ ಬಂದು , ಬಳಿಕ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಪಸ್ಸು ಹೋಗಿದ್ದಾರೆ.

VISTARANEWS.COM


on

Actor Darshan A young woman came to Parappa Agrahara to see Darshan
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ದರ್ಶನ್ ಫ್ಯಾನ್ಸ್ ಜೈಲಿನ ಎದುರು ಸೇರುತ್ತಿದ್ದಾರೆ. ದರ್ಶನ್ ಪರ ಘೋಷಣೆ ಕೂಗುತ್ತಿದ್ದಾರೆ.ಹೀಗಾಗಿ ದರ್ಶನ್ ಅವರೇ ಈಗ ಅಭಿಮಾನಿಗಳಿಗೆ ಪರಪ್ಪನ ಅಗ್ರಹಾರಕ್ಕೆ ಬರಬೇಡಿ ಎಂದು ವಿಶೇಷ ಮನವಿ ಮಾಡಿದ್ದಾರೆ. ಹೀಗಿದ್ದರೂ ದರ್ಶನ್ ಭೇಟಿಗೆ ಯುವತಿವೊಬ್ಬಳು ಆಗಮಿಸಿದ್ದಳು. ಮಾಸ್ಕ್ ಧರಿಸಿ ಜೈಲು ಬಳಿ ಬಂದು , ಬಳಿಕ ಭೇಟಿಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಾಪಸ್ಸು ಹೋಗಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ಬಳಿ ಯುವತಿ ದರ್ಶನ್‌ ನೋಡಲು ಆಗಮಿಸಿದ್ದಳು. ಬ್ಲೂ ಕಲರ್ ಹುಂಡೈ ಕ್ರೆಟಾ ಕಾರಿನಲ್ಲಿ ಆಗಮಿಸಿದ್ದ ಯುವತಿ, ಕ್ಯಾಮೆರಾ ನೋಡುತ್ತಿದ್ದಂತೆ ವಾಪಸ್ಸು ಆಗಿದ್ದಾರೆ. ʻʻದರ್ಶನ್ ಸರ್ ನಮ್ಮ ಕುಟುಂಬದವರು. ಅವರನ್ನು ನೋಡಲು ಬಂದಿದ್ದೆ. ಜೈಲು ಅಧಿಕಾರಿಗಳು ಅವಕಾಶ ನೀಡುವುದಿಲ್ಲʼʼ ಎಂದರು ಯುವತಿ. ಹೆಸರನ್ನು ಎಲ್ಲಿಯೂ ಹೇಳಿಕೊಂಡಿಲ್ಲ.

ದರ್ಶನ್‌ನಿಂದ ವಿಶೇಷ ಮನವಿ!

ದರ್ಶನ್‌ ಹೇಳಿದ್ದು ಹೀಗೆ ʻʻಅಭಿಮಾನಿಗಳು ಯಾರು ಕೂಡ ಜೈಲಿನ ಬಳಿ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು. ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು. ಅದರಲ್ಲೂ ನಿನ್ನೆ ವಿಶೇಷ ಚೇತನ ಯುವತಿ ಸೌಮ್ಯ ಭೇಟಿಗೆ ಆಗಮಿಸಿದ್ದು ಕೂಡ ಬೇಸರ ತಂದಿದೆʼʼಎಂದು ಸಂದೇಶ ರವಾನಿಸಿದ್ದಾರೆ.

ಇದನ್ನೂ ಓದಿ: Actor Darshan: ಜೈಲಿನಲ್ಲಿ ದರ್ಶನ್‌ಗೆ ತಾಯಿ, ತಮ್ಮನ ನೆನಪಾಗ್ತಿದೆಯಂತೆ!

ಇತ್ತೀಚೆಗೆ ಸೌಮ್ಯ ಹೆಸರಿನ ವಿಶೇಷ ಚೇತನ ಯುವತಿ ದರ್ಶನ್ ಭೇಟಿಗೆ ಬಂದಿದ್ದರು. ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಹಠ ಮಾಡಿದ್ದರು. ಇದನ್ನು ಕೇಳಿ ದರ್ಶನ್ ಬೇಸರಗೊಂಡಿದ್ದಾರೆ. ಅನ್ನ ಆಹಾರ ಸೇವಿಸದೇ ಹಠ ಮಾಡಿದ್ದರು ಸೌಮ್ಯ. ನಟ ದರ್ಶನ್ ‌ಕೊಡಿಸಿದ್ದ ಆಟೋದಲ್ಲಿ ಪೋಷಕರ ಜತೆ ಸೌಮ್ಯ ಆಗಮಿಸಿದ್ದರು. ಸೌಮ್ಯ ಜೈಲಿನ ಬಳಿ ಆಗಮಿಸಿದ್ದ ವಿಚಾರ ತಿಳಿದು ದರ್ಶನ್ ಬೇಸರಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್ ಎಂಬ ವಿಶೇಷ ಚೇತನ ಕೂಡ ಆಗಮಿಸಿದ್ದ.ತ್ರಿ ವೀಲರ್ ಬೈಕ್‌ನಲ್ಲಿ ವಿಶೇಷ ಚೇತನ ಆಗಮಿಸಿದ್ದ . ಈ ಎಲ್ಲಾ ವಿಚಾರ ತಿಳಿದು ಅಭಿಮಾನಿಗಳ ಬಳಿ ದರ್ಶನ್ ಈ ರೀತಿ ಮನವಿ ಮಾಡಿದ್ದಾರೆ.

ಯುವತಿ ಪೋಷಣೆಗೆ ಆಟೋ ಕೊಡಿಸಿದ್ದ ದರ್ಶನ್‌

2016 ರಲ್ಲಿ ಈ ಬಡ ಕುಟುಂಬಕ್ಕೆ ನಟ ದರ್ಶನ್‌ ಆಟೋವೊಂದನ್ನು ಕೊಡಿಸಿದ್ದರು. ಲಕ್ಷ್ಮೀ ಹಾಗೂ ರಂಗಸ್ವಾಮಿ ದಂಪತಿಯ ಪುತ್ರಿ ಸೌಮ್ಯಳನ್ನು ಪೋಷಣೆಗಾಗಿ ನಟ ದರ್ಶನ್‌ ಖುದ್ದು ಆಟೋ ಕೊಡಿಸಿದ್ದರು. ಹೀಗಾಗಿ ಇದೇ ಆಟೋದಲ್ಲಿ ಜೈಲಿಗೆ ಬಂದು ದರ್ಶನ್‌ ಭೇಟಿಗಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಇಂದು ದರ್ಶನ್ ಭೇಟಿಗೆ ಅವರ ಕುಟುಂಬದವರು ಬರುತ್ತಿದ್ದು, ವಿಶೇಷ ಚೇತನ ಯುವತಿ ಭೇಟಿಗೆ ಅವಕಾಶವನ್ನು ಅಧಿಕಾರಿಗಳು ನಿರಾಕರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನ ಸೆರೆವಾಸ ಏಳನೇ ದಿನಕ್ಕೆ ಕಾಲಿಟ್ಟಿದೆ. ರಾತ್ರಿ ಮುದ್ದೆ, ಅನ್ನ, ಸಾಂಬಾರ್, ಚಪಾತಿ ಮತ್ತು ಮಜ್ಜಿಗೆ ಕುಡಿದು ದರ್ಶನ್‌ ತಡವಾಗಿ ನಿದ್ರೆಗೆ ಜಾರಿದರು. ಮುಂಜಾನೆ 6 ಗಂಟೆ ಸುಮಾರಿಗೆ ಎಚ್ಚರಗೊಂಡು ಎಂದಿನಂತೆ ಬಿಸಿನೀರು ಸೇವಿಸಿದ್ದಾರೆ ದರ್ಶನ್‌. ಕೆಲಹೊತ್ತು ಕೊಠಡಿಯಲ್ಲಿ ವಾಕಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Continue Reading
Advertisement
US Presidential Election
ವಿದೇಶ14 mins ago

US Presidential Election: ಬಹಿರಂಗ ಚರ್ಚೆ ಬಳಿಕ ಅಭ್ಯರ್ಥಿಯ ಬದಲಾವಣೆ? ಬೈಡೆನ್‌ ಬದಲಿಗೆ ಮಿಶೆಲ್‌ ಒಬಾಮಾ ಕಣಕ್ಕೆ?

IND vs SA Final
ಕ್ರೀಡೆ16 mins ago

IND vs SA Final: ಇಂದು ಫೈನಲ್​ ಪಂದ್ಯ ನಡೆಯುವುದೇ ಅನುಮಾನ; ಕಾರಣವೇನು?

Sadhguru Jaggi Vasudev
ಆರೋಗ್ಯ16 mins ago

Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

Kannada New Movie niveditha Shivarajkumar frefly cinema sudharani join
ಸಿನಿಮಾ27 mins ago

Kannada New Movie: ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್‌ಫ್ಲೈ’ ತಂಡ ಸೇರಿದ ಸುಧಾರಾಣಿ!

Actor Darshan
ಕರ್ನಾಟಕ47 mins ago

Actor Darshan: ಜೈಲಲ್ಲಿ ಮುದ್ದೆ-ಚಿಕನ್‌ ಸಾಂಬಾರ್‌ ಸವಿದ ದರ್ಶನ್;‌ ನಟನ ನೋಡಲು ಮುಗಿಬಿದ್ದ ಕೈದಿಗಳು!

Amarnath Yatra
ದೇಶ55 mins ago

Amarnath Yatra: ವ್ಯಾಪಕ ಬಿಗಿ ಭದ್ರತೆಯೊಂದಿಗೆ ಈ ಬಾರಿಯ ಅಮರನಾಥ ಯಾತ್ರೆ ಆರಂಭ; ಪವಿತ್ರ ಗುಹೆಯತ್ತ ಹೊರಟ ಮೊದಲ ತಂಡ

BBMP Scam
ಬೆಂಗಳೂರು1 hour ago

BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

Assam Tour
ಪ್ರವಾಸ2 hours ago

Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು

Ashada Month
ಧಾರ್ಮಿಕ2 hours ago

Ashada Month: ಆಷಾಢವನ್ನು ಅಶುಭ ತಿಂಗಳು ಅನ್ನುವುದೇಕೆ? ಇದಕ್ಕಿದೆ ವೈಜ್ಞಾನಿಕ ಕಾರಣ!

Mango Storage
ಆಹಾರ/ಅಡುಗೆ2 hours ago

Mango Storage: ಮಾವಿನ ಹಣ್ಣಿನ ಸೀಸನ್‌ ಮುಗಿದರೇನಂತೆ? ತಿಂಗಳ ಕಾಲ ಇದನ್ನು ಶೇಖರಿಸಿ ಇಡುವ ವಿಧಾನ ಇಲ್ಲಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ14 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

ಟ್ರೆಂಡಿಂಗ್‌