Euro 2024: ಅಂತಿಮ ಹಂತದಲ್ಲಿ ಗೋಲು ಬಾರಿಸಿ ಪೋರ್ಚುಗಲ್​ಗೆ ರೋಚಕ ಗೆಲುವು ತಂದ ಫ್ರಾನ್ಸಿಸ್ಕೊ - Vistara News

ಕ್ರೀಡೆ

Euro 2024: ಅಂತಿಮ ಹಂತದಲ್ಲಿ ಗೋಲು ಬಾರಿಸಿ ಪೋರ್ಚುಗಲ್​ಗೆ ರೋಚಕ ಗೆಲುವು ತಂದ ಫ್ರಾನ್ಸಿಸ್ಕೊ

Euro 2024: ಫ್ರಾನ್ಸಿಸ್ಕೊ ​​ಕಾನ್ಸಿಕಾವೊ ಅವರು ಪೋರ್ಚುಗಲ್ ತಂಡದ ಮಾಜಿ ಆಟಗಾರ ಸೆರ್ಗಿಯೋ ಕಾನ್ಸಿಕಾವೊ ಅವರ ಮಗ. ಇವರ ತಂದೆ ಕಾನ್ಸಿಕಾವೊ 2000ರಲ್ಲಿ ನೆಡೆದಿದ್ದ ಯುರೋ ಕಪ್​ನಲ್ಲಿ ಜರ್ಮನಿ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ್ದರು.

VISTARANEWS.COM


on

Euro 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಡಾರ್ಟ್​: ಯುವ ಆಟಗಾರ ಫ್ರಾನ್ಸಿಸ್ಕೊ ​​ಕಾನ್ಸಿಕಾವೊ ಅವರು ಹೆಚ್ಚುವರಿ ಸಮಯದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಯುರೋ ಕಪ್(Euro 2024) ಫುಟ್ಬಾಲ್​ ಟೂರ್ನಿಯಲ್ಲಿ ಪೋರ್ಚುಗಲ್​(Portugal) ತಂಡ ಚೆಕ್‌ ಗಣರಾಜ್ಯದ(Czechs ) ವಿರುದ್ಧ 2-1 ಗೋಲ್​ ಅಂತರದ ರೋಚಕ ಗೆಲುವು ಸಾಧಿಸಿ ಕೂಡದಲ್ಲಿ ಗೆಲುವಿನ ಶುಭಾರಂಭ ಕಂಡಿದೆ.

ಇಂದು(ಬುಧವಾರ) ನಡೆದ ಈ ರೋಚಕ(Euro cup) ಪಂದ್ಯದಲ್ಲಿ 90 ನಿಮಿಷದ ಆಟದಲ್ಲಿ ಉಭಯ ತಂಡಗಳು 1-1 ಗೋಲು ಬಾರಿಸಿತು. ಪ್ರೇಕ್ಷಕರು ಈ ಪಂದ್ಯ ಡ್ರಾ ಗೊಳ್ಳುವ ಮೂಲಕ ಅಂತ್ಯ ಕಾಣಲಿದೆ ಎಂದು ನಿರೀಕ್ಷೆ ಮಾಡಿದ್ದರು. ಆದರೆ ಹೆಚ್ಚುವರಿ ಆಟದ ಸಮಯದಲ್ಲಿ 21 ವರ್ಷದ ಯುವ ಆಟಗಾರ ಫ್ರಾನ್ಸಿಸ್ಕೊ ​​ಕಾನ್ಸಿಕಾವೊ ಯಾರು ಊಹಿಸದ ರೀತಿಯಲ್ಲಿ ಚೆಂಡನ್ನು ಎದುರಾಳಿ ಗೋಲು ಪೆಟ್ಟಿಗೆಗೆ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

ಫ್ರಾನ್ಸಿಸ್ಕೊ ​​ಕಾನ್ಸಿಕಾವೊ ಅವರು ಪೋರ್ಚುಗಲ್ ತಂಡದ ಮಾಜಿ ಆಟಗಾರ ಸೆರ್ಗಿಯೋ ಕಾನ್ಸಿಕಾವೊ ಅವರ ಮಗ. ಇವರ ತಂದೆ ಕಾನ್ಸಿಕಾವೊ 2000ರಲ್ಲಿ ನೆಡೆದಿದ್ದ ಯುರೋ ಕಪ್​ನಲ್ಲಿ ಜರ್ಮನಿ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ್ದರು. ಇದೀಗ ತಂದೆಯಂತೆ ಮಗ ಫ್ರಾನ್ಸಿಸ್ಕೊ ಕೂಡ ಪೋರ್ಚುಗಲ್ ತಂಡದ ಪರ ಮಿಂಚಲು ಆರಂಭಿಸಿದ್ದಾರೆ. ಆದರೆ, ಅನುಭವಿ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಪೆನಾಲ್ಟಿ ಕಿಕ್​ ಸಿಕ್ಕರೂ ಕೂಡ ಇದರಲ್ಲಿ ಗೋಲು ಬಾರಿಸಲು ವಿಫಲರಾದರು.

ಇದನ್ನೂ ಓದಿ Austria vs France: ಗಂಭೀರ ಗಾಯಗೊಂಡ ಎಂಬಾಪೆ; ಮುಂದಿನ ಪಂದ್ಯಕ್ಕೆ ಅನುಮಾನ

ಟರ್ಕಿಗೆ ಭರ್ಜರಿ ಗೆಲುವು

ಮಂಗಳವಾರ ತಡರಾತ್ರಿ ನಡೆದ ಎಫ್​ ಗುಂಪಿನ ಪಂದ್ಯದಲ್ಲಿ ಟರ್ಕಿ ತಂಡ ಜಾರ್ಜಿಯಾ ವಿರುದ್ಧ 3-1 ಅಂತರದ ಭಜ್ಋಇ ಗೆಲುವು ಸಾಧಿಸಿದೆ. ಪಂದ್ಯದ 25ನೇ ನಿಮಿಷದಲ್ಲಿ ಮೆರ್ಟಮುಲ್ಡರ್​ ಗೋಲು ಬಾರಿಸಿ ಟರ್ಕಿಗೆ ಮುನ್ನಡೆ ತಂದುಕೊಟ್ಟರು. ಇದಾದ 7 ನಿಮಿಷದ ಅಂತರದಲ್ಲಿ ಜಾರ್ಮಿಯ ತಂಡದ ಜಾರ್ಜಸ್​ ಮಿಕೌಟಾಡ್ಜೆ ಗೋಲು ಬಾರಿಸಿ ಪ.ದ್ಯವನ್ನು ಸಮಬಲಕ್ಕೆ ತಂದರು.

ಮೊದಲಾರ್ಥ 1-1 ಗೋಲಿನಿಂದ ಮುಕ್ತಾಯಕಂಡಿತು. ದ್ವಿತಿಯಾರ್ಧದಲ್ಲಿ ಮುನ್ನುಗ್ಗಿ ಆಡಿದ ಟರ್ಕಿ ಪರ ಅರ್ದಾ ಗುಲರ್​(65ನೇ ನಿಮಿಷ) ಮತ್ತು ಕೆರೆಮ್​ ಅಕ್ತುರ್ಕೊಗ್ಲು(90+7) ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದೇ ವೇಳೆ ಅರ್ದಾ ಗುಲರ್ ಅವರು ಯುರೋ ಕಪ್​ ಗೋಲು ಬಾರಿಸಿದ ಅತಿ ಕಿರಿಯ ಆಟಗಾರ ಎನ್ನುವ ಹಿರಿಮೆಗೆ ಪಾತ್ರ ರಾದರು. ಅವರಿಗೆ 19 ವರ್ಷ ವಯಸ್ಸು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

Virat Kohli: “ಪ್ರೀತಿಯ ನರೇಂದ್ರ ಮೋದಿ ಸರ್, ನಿಮ್ಮ ಪ್ರೀತಿಯ ಮಾತುಗಳಿಗೆ ಮತ್ತು ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು. ಕಪ್ ಗೆದ್ದ ಈ ತಂಡದ ಭಾಗವಾಗಿರುವುದು ಒಂದು ಸೌಭಾಗ್ಯ . ಇದು ಇಡೀ ರಾಷ್ಟ್ರಕ್ಕೆ ಸಂತೋಷ ನೀಡಿದ ಈ ಕ್ಷಣದ ಸಂಭ್ರಮ ನಮಗಿದೆ ಎಂದು ಬರೆದುಕೊಂಡಿದ್ದಾರೆ.

VISTARANEWS.COM


on

Virat Kohli
Koo

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup 2024 ಚಾಂಪಿಯನ್​ ಪಟ್ಟ ಅಲಂಕರಿಸಿದ್ದ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ ಶುಭಾಶಯ ತಿಳಿಸಿದ್ದರು. ಇದೇ ವೇಳೆ ಟಿ20 ಮಾದರಿಯಲ್ಲಿ ನಿವೃತ್ತಿ ಪಡೆದ ಕೊಹ್ಲಿ, ಹಾಗೂ ರೋಹಿತ್​ಗೂ ವಿಶೇಷ ಹಾರೈಕೆಗಳನ್ನು ತಿಳಿಸಿದ್ದರು. ಆ ಸಂದೇಶಕ್ಕೆ ವಿರಾಟ್ ಕೊಹ್ಲಿ (Virat Kohli) ಪ್ರತಿಕ್ರಿಯೆ ನೀಡಿದ್ದು, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಮಣಿಸಿದ ಭಾರತ ಇತಿಹಾಸದಲ್ಲಿ ಎರಡನೇ ಬಾರಿಗೆ ಟಿ 20 ವಿಶ್ವಕಪ್ ಅನ್ನು ಗೆದ್ದುಕೊಂಡಿತು. 2007 ರಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದ ನಂತರ ಮೊದಲ ಬಾರಿಗೆ ಈ ಟ್ರೋಫಿ ಗೆದ್ದಿತು. ಸೆಮಿಫೈನಲ್ ತನಕ ಬ್ಯಾಟಿಂಗ್​ನಲ್ಲಿ ಹೆಣಗಾಡುತ್ತಿದ್ದ ವಿರಾಟ್ ಕೊಹ್ಲಿ, ಫೈನಲ್​​ನಲ್ಲಿ ನಿರ್ಣಾಯಕ ಅರ್ಧ ಶತಕ ಬಾರಿಸಿದ್ದರು.

ಭಾರತ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿತ್ತು. ಆದರೆ ಮಾಜಿ ನಾಯಕ ಕೊಹ್ಲಿ 76 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಉತ್ತರವಾಗಿ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು. ವಿಜಯದ ನಂತರ, ಪ್ರಧಾನಿ ಮೋದಿ ಟೀಮ್ ಇಂಡಿಯಾ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಸ್ಮರಣೀಯ ವಿಜಯಕ್ಕಾಗಿ ಅವರನ್ನು ಅಭಿನಂದಿಸಿದ್ದರು.

ಮೋದಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ವಿಶೇಷ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು. ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಪಂದ್ಯದ ನಂತರ ಟಿ 20 ಯಿಂದ ನಿವೃತ್ತಿ ಘೋಷಿಸಿದರು, ಆದರೆ ಪಂದ್ಯಾವಳಿಯು ದ್ರಾವಿಡ್ ಅವರ ಕೊನೆಯ ಕೋಚಿಂಗ್​​ ನೇಮಕವಾಗಿತ್ತು. ಫೈನಲ್​​ನಲ್ಲಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್​​ಗಾಗಿ ಕೊಹ್ಲಿಯನ್ನು ಪ್ರಧಾನಿ ಶ್ಲಾಘಿಸಿದ್ದರು. ಎಕ್ಸ್ ಮೂಲಕ ವಿಶೇಷ ಸಂದೇಶ ಪೋಸ್ಟ್ ಮಾಡಿದ್ದರು.

ಪ್ರಧಾನಿ ಮೋದಿಯವರ ಸಂದೇಶಕ್ಕೆ ಕೊಹ್ಲಿ ಸೋಮವಾರ (ಜುಲೈ 1) ಉತ್ತರಿಸಿದ್ದಾರೆ. ಎಕ್ಸ್ ನಲ್ಲಿ, ಭಾರತದ ಬ್ಯಾಟಿಂಗ್ ಸೂಪರ್ ಸ್ಟಾರ್ ತಮ್ಮನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರೀತಿಯ ನರೇಂದ್ರ ಮೋದಿ ಸರ್, ನಿಮ್ಮ ಪ್ರೀತಿಯ ಮಾತುಗಳಿಗೆ ಮತ್ತು ನಿಮ್ಮ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು. ಕಪ್ ಗೆದ್ದ ಈ ತಂಡದ ಭಾಗವಾಗಿರುವುದು ಒಂದು ಸೌಭಾಗ್ಯ . ಇದು ಇಡೀ ರಾಷ್ಟ್ರಕ್ಕೆ ಸಂತೋಷ ನೀಡಿದ ಈ ಕ್ಷಣದ ಸಂಭ್ರಮ ನಮಗಿದೆ ಎಂದು ಬರೆದುಕೊಂಡಿದ್ದಾರೆ.

ವಿರಾಟ್ ಕೊಹ್ಲಿಯ ಅದ್ಭುತ ಟಿ 20 ಐ ವೃತ್ತಿಜೀವನ

ಟಿ20 ಕ್ರಿಕೆಟ್​​ನಲ್ಲಿ ಅತ್ಯಂತ ಬಲಿಷ್ಠ ಬ್ಯಾಟರ್​ಗಳಲ್ಲಿ ಒಬ್ಬರಾಗಿ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದಾರೆ. 2010 ರಲ್ಲಿ ಆಟದ ಕಿರು ಸ್ವರೂಪದಲ್ಲಿ ಪಾದಾರ್ಪಣೆ ಮಾಡಿದ ಬ್ಯಾಟಿಂಗ್ ದಿಗ್ಗಜ 2012 ರಲ್ಲಿ ಮೊದಲ ಟಿ 20 ವಿಶ್ವಕಪ್​​ನಲ್ಲಿ ಆಡಿದ್ದರು.

ಇದನ್ನೂ ಓದಿ: ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

ಬ್ಯಾಟಿಂಗ್ ಘಟಕದ ಮುಖ್ಯ ಆಧಾರವಾಗುವ ಜತೆಗೆ ಟಿ 20 ಐ ತಂಡದ ಅವಿಭಾಜ್ಯ ಸದಸ್ಯರಾಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ವಿರಾಟ್ ಕೊಹ್ಲಿ ಒಟ್ಟು 125 ಟಿ 20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ಸ್ವರೂಪದಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದವರು. ರೋಹಿತ್ ಶರ್ಮಾ ಮಾತ್ರ ಟಿ20ಐನಲ್ಲಿ ಅವರಿಗಿಂತ ಹೆಚ್ಚು ರನ್ ಗಳಿಸಿದ್ದಾರೆ.

125 ಪಂದ್ಯಗಳನ್ನಾಡಿರುವ ಕೊಹ್ಲಿ 48.69ರ ಸರಾಸರಿಯಲ್ಲಿ 4188 ರನ್ ಗಳಿಸಿದ್ದಾರೆ. ಅವರು ಟಿ 20 ಪಂದ್ಯಗಳಲ್ಲಿ ಒಂದು ಶತಕ ಮತ್ತು 38 ಅರ್ಧಶತಕಗಳನ್ನು ಬಾರಿಸಿದ್ದಾರೆ. ಟಿ 20 ವಿಶ್ವಕಪ್​ನಲ್ಲಿ ದಾಖಲೆಯೂ ಅಷ್ಟೇ ಪ್ರಭಾವಶಾಲಿಯಾಗಿದೆ. ಕೊಹ್ಲಿ ಪ್ರಸ್ತುತ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. 35 ಪಂದ್ಯಗಳಲ್ಲಿ 15 ಅರ್ಧಶತಕಗಳ ಸಹಾಯದಿಂದ 1292 ರನ್ ಗಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

ZIM v IND 2024 :ಭಾರತ ವಿರುದ್ಧದ ಸರಣಿಯಲ್ಲಿ ನಖ್ವಿಯ ಭಾಗವಹಿಸುವಿಕೆ ಅವರ ಪೌರತ್ವದ ಸ್ಥಾನಮಾನದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಬೆಲ್ಜಿಯಂನ ಬ್ರಸೆಲ್​​ನಲ್ಲಿ ಪಾಕಿಸ್ತಾನಿ ಪೋಷಕರಿಗೆ ಜನಿಸಿದ್ದರು ನಖ್ವಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಜಿಂಬಾಬ್ವೆಯನ್ನು ಪ್ರತಿನಿಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವರನ್ನು ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು.

VISTARANEWS.COM


on

ZIM v IND 2024
Koo

ಬೆಂಗಳೂರು: ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಜುಲೈ 6 ರಂದು ಪ್ರಾರಂಭವಾಗಲಿರುವ ವಿಶ್ವ ಚಾಂಪಿಯನ್ ಭಾರತ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಗೆ (ZIM v IND 2024) ಜಿಂಬಾಬ್ವೆ ಕ್ರಿಕೆಟ್​ ಸಂಸ್ಥೆ ಸೋಮವಾರ (ಜುಲೈ 1) ತನ್ನ ತಂಡವನ್ನು ಪ್ರಕಟಿಸಿದೆ. ಅನುಭವಿ ಆಲ್​ರೌಂಡರ್​ ಸಿಕಂದರ್ ರಾಜಾ ಅವರನ್ನು ಜಿಂಬಾಬ್ವೆ ತಂಡದ ನಾಯಕರನ್ನಾಗಿ ಘೋಷಿಸಲಾಗಿದೆ. ತಂಡದಲ್ಲಿ ಬೆಲ್ಜಿಯಂ ಮೂಲದ ಆಟಗಾರ ಅಂಟಮ್ ನಖ್ವಿ ಕೂಡ ಸೇರಿಕೊಂಡಿದ್ದಾರೆ.

ಭಾರತ ವಿರುದ್ಧದ ಸರಣಿಯಲ್ಲಿ ನಖ್ವಿಯ ಭಾಗವಹಿಸುವಿಕೆ ಅವರ ಪೌರತ್ವದ ಸ್ಥಾನಮಾನದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಬೆಲ್ಜಿಯಂನ ಬ್ರಸೆಲ್​​ನಲ್ಲಿ ಪಾಕಿಸ್ತಾನಿ ಪೋಷಕರಿಗೆ ಜನಿಸಿದ್ದರು ನಖ್ವಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಜಿಂಬಾಬ್ವೆಯನ್ನು ಪ್ರತಿನಿಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವರನ್ನು ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು.

ಕೆರಿಬಿಯನ್ ಮತ್ತು ಯುಎಸ್ಎಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಲು ಜಿಂಬಾಬ್ವೆ ತಂಡ ವಿಫಲಗೊಂಡಿತ್ತು. ಆ ಬಳಿ ಜಿಂಬಾಬ್ವೆ ಹೊಸ ಮುಖ್ಯ ಕೋಚ್ ಜಸ್ಟಿನ್ ಸಮ್ಮನ್ಸ್ ಅವರ ಅಡಿಯಲ್ಲಿ ತಂಡವನ್ನು ಪುನರ್​ರಚನೆ ಮಾಡಲಾಯಿತು. ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ವಿಶ್ವಕಪ್​ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ಹೊಸ ಮುಖ್ಯ ಕೋಚ್ ಜಸ್ಟಿನ್ ಸಮ್ಮನ್ಸ್ ಅವರ ಅಡಿಯಲ್ಲಿ ಪುನರ್ನಿರ್ಮಾಣ ಮಾಡುವ ಗುರಿಯನ್ನು ಹೊಂದಿರುವ ಜಿಂಬಾಬ್ವೆ, ರಾಜಾ ನೇತೃತ್ವದ ಯುವ ತಂಡವನ್ನು ಆಯ್ಕೆ ಮಾಡಿದೆ. ಇದು ಭಾರತ ವಿರುದ್ಧ ಆಡಿ ತನ್ನು ಅನುಭವ ಹೆಚ್ಚಿಸಿಕೊಳ್ಳಲಿದೆ.

ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

86 ಟಿ 20 ಪಂದ್ಯಗಳನ್ನು ಹೊಂದಿರುವ ನಾಯಕ ರಾಜಾ ತಂಡದ ಅತ್ಯಂತ ಅನುಭವಿ ಆಟಗಾರ. ಲ್ಯೂಕ್ ಜಾಂಗ್ವೆ ಜಿಂಬಾಬ್ವೆ ಪರ ಚುಟುಕು ಸ್ವರೂಪದಲ್ಲಿ 63 ಪಂದ್ಯಗಳನ್ನು ಆಡಿದ ಇನ್ನೊಬ್ಬ ಆಟಗಾರ. ವೇಗದ ಬೌಲರ್​ಗಳಾದ ರಿಚರ್ಡ್ ಎನ್ಗರವ (52 ಟಿ 20 ಐ) ಮತ್ತು ಬ್ಲೆಸ್ಸಿಂಗ್ ಮುಜರಬಾನಿ (51 ಟಿ 20 ಐ) ತಂಡದಲ್ಲಿರುವ ಇತರ ಅನುಭವಿ ಕ್ರಿಕೆಟಿಗರು. ಅಲ್ಲಿನ ಅನುಭವಿ ಆಟಗಾರರಾದ ಕ್ರೇಗ್ ಎರ್ವಿನ್ ಮತ್ತು ಸೀನ್ ವಿಲಿಯಮ್ಸ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ರಿಯಾನ್ ಬರ್ಲ್, ಜಾಯ್ಲಾರ್ಡ್ ಗುಂಬಿ ಮತ್ತು ಐನ್ಸ್ಲೆ ಎನ್ಡ್ಲೋವು ಕೂಡ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಜಿಂಬಾಬ್ವೆ ತಂಡ: ಸಿಕಂದರ್ ರಾಜಾ (ನಾಯಕ), ಅಕ್ರಮ್ ಫರಾಜ್, ಬೆನೆಟ್ ಬ್ರಿಯಾನ್, ಕ್ಯಾಂಪ್ಬೆಲ್ ಜೋನಾಥನ್, ಚಟಾರಾ ತೆಂಡೈ, ಜೊಂಗ್ವೆ ಲ್ಯೂಕ್, ಕೈಯಾ ಇನ್ನೋಸೆಂಟ್, ಮದಂಡೆ ಕ್ಲೈವ್, ಮಡ್ವೆರೆ ವೆಸ್ಲಿ, ಮಾವುಮಣಿ ತಡಿವಾನಾಶೆ, ಮಸಕಡ್ಜಾ ವೆಲ್ಲಿಂಗ್ಟನ್, ಮಾವುಟಾ ಬ್ರಾಂಡನ್, ಮುಜರಬಾನಿ ಬ್ಲೆಸ್ಸಿಂಗ್, ಮೈಯರ್ಸ್ ಡಿಯೋನ್, ನಖ್ವಿ ಅಂಟಮ್, ಎನ್ಗರವಾ ರಿಚರ್ಡ್, ಶುಂಬಾ ಮಿಲ್ಟನ್.

Continue Reading

ಪ್ರಮುಖ ಸುದ್ದಿ

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

IND vs SA: ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಟೆಸ್ಟ್​ ಪಂದ್ಯದಲ್ಲಿ ಗೆಲುವಿಗೆ 37 ರನ್​​ಗಳ ಗುರಿ ಪಡೆದಿದ್ದ ಭಾರತ 9.2 ಓವರ್​​ಗಳಲ್ಲಿ ವಿಜಯ ದಾಖಲಿಸಿತು. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ರನ್ ​ಗಳಿಸಿ ಅಜೇಯರಾಗಿ ಉಳಿದರು.

VISTARANEWS.COM


on

IND vs SA:
Koo

ಚೆನ್ನೈ: ಬ್ಯಾಟಿಂಗ್​​ನಲ್ಲಿ ಶಫಾಲಿ ವರ್ಮಾ ಅವರ ದಾಖಲೆಯ ದ್ವಿಶತಕ (205), ಸ್ಮೃತಿ ಮಂಧಾನ ಬಾರಿಸಿದ ಅಮೋಘ ಶತಕ (149) ಹಾಗೂ ಸ್ನೆಹ್ ರಾಣಾ ಅವರ ವಿಶ್ವ ದಾಖಲೆಯ 10 ವಿಕೆಟ್​ಗಳ ನೆರವು ಪಡೆದ ಭಾರತ ಮಹಿಳೆಯ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯದಲ್ಲಿ (IND vs SA) 10 ವಿಕೆಟ್​ಗಳ ಭರ್ಜರಿ ವಿಜಯ ಸಾಧಿಸಿದೆ. ಚೆನ್ನೈನ ಎಂಎ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಟೆಸ್ಟ್​ ಪಂದ್ಯದಲ್ಲಿ ಗೆಲುವಿಗೆ 37 ರನ್​​ಗಳ ಗುರಿ ಪಡೆದಿದ್ದ ಭಾರತ 9.2 ಓವರ್​​ಗಳಲ್ಲಿ ವಿಜಯ ದಾಖಲಿಸಿತು. ಶಫಾಲಿ ವರ್ಮಾ ಮತ್ತೆ 24 ರನ್, ಶುಭಾ ಸತೀಶ್ 13 ರನ್ ​ಗಳಿಸಿ ಅಜೇಯರಾಗಿ ಉಳಿದರು.

ಟಾಸ್ ಗೆದ್ದು ಮೊದಲ ಬ್ಯಾಟ್​ ಮಾಡಿದ ಹರ್ಮನ್​ಪ್ರೀತ್ ಬಳಗ ಬೃಹತ್​ ಮೊತ್ತವನ್ನು ಪೇರಿಸಿತು. 115.1 ಓವರ್​​​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 603 ರನ್ ದಾಖಲಿಸಿತು ಇದು ಮಹಿಳಾ ಟೆಸ್ಟ್​ ಕ್ರಿಕೆಟ್​​ನಲ್ಲಿ ವಿಶ್ವದಾಖಲೆಯ ಮೊತ್ತ. ಪ್ರತಿಯಾಗಿ ಆಡಿದ ದಕ್ಷಿಣ ಆಫ್ರಿಕಾ ಮಹಿಳೆಯರ ಬಳಗ ಮೊದಲ ಇನ್ನಿಂಗ್ಸ್​​ನಲ್ಲಿ 84.3 ಓವರ್​ಗಳಿಗೆ 266 ರನ್ ಬಾರಿಸಿ ಆಲ್ಔಟ್ ಆಯಿತು. 337 ರನ್​ಗಳ ಹಿನ್ನಡೆಯೊಂದಿಗೆ ಫಾಲೋ ಆನ್​ಗೆ ಗುರಿಯಾಯಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಫ್ರಿಕಾ, 373 ಗಳಿಸಿಇತು. ಭಾರತ 37 ರನ್​ಗಳ ಗುರಿ ಪಡೆದು ಸುಲಭ ಜಯ ದಾಖಲಿಸಿತು.

ಮಿಂಚಿದ ಆರಂಭಿಕರು

ಭಾರತದ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಪಂದ್ಯದಲ್ಲಿ ಅತಿವೇಗದ ದ್ವಿಶತಕ ಹಾಗೂ ಸ್ಮೃತಿ ಮಂಧಾನ ಶತಕ ಸಿಡಿಸಿದರು. ಹೀಗಾಗಿ ಮೊದಲ ವಿಕೆಟ್​ಗೆ 292 ರನ್​ಗಳ ಜತೆಯಾಟ ಸಿಕ್ಕಿತು. ಸ್ಮೃತಿ ಮಂಧಾನ 161 ಬಾಲ್​ಗಳಲ್ಲಿ 26 ಬೌಂಡರಿ, 1 ಸಿಕ್ಸರ್ ಸಹಿತ 149 ರನ್ ಗಳಿಸಿ ಔಟಾದರು. ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ, 8 ಸಿಕ್ಸರ್ ಸಹಿತ ದಾಖಲೆಯ ಹಾಗೂ ದ್ವಿಶತಕ ಸಿಡಿಸಿದರು. ಬಳಿಕ ಜೆಮಿಮಾ ರೋಡ್ರಿಗಸ್ 55, ಹರ್ಮನ್​ಪ್ರೀತ್ ಕೌರ್ 69, ರಿಚಾ ಘೋಷ್ 86 ರನ್ ಸಿಡಿಸಿದರು.

ಸ್ನೇಹ್ ರಾಣಾ ದಾಳಿಗೆ ಕುಸಿದ ಪ್ರವಾಸಿ ತಂತ

ಮೊದಲ ಇನ್ನಿಂಗ್ಸ್​ ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ಸ್ನೇಹ್ ರಾಣಾ ಬೌಲಿಂಗ್ ದಾಳಿಗೆ ತತ್ತರಿಸಿತು. ಇದರ ನಡುವೆಯೂ ಸುನೆ ಲುಸ್ (65) ಮತ್ತು ಮರಿಜಾನ್ನೆ ಕಪ್ (74) ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿಸಿದರು. ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ, ಸ್ನೇಹ್​ ರಾಣಾ 8 ವಿಕೆಟ್ ಕಿತ್ತರು. ವೋಲ್ವಾರ್ಡ್ (20), ಅನ್ನೆಕೆ ಬಾಷ್ (39), ನಾಡಿನ್ ಡಿ ಕ್ಲರ್ಕ್ (39) ಸಣ್ಣ ಮೊತ್ತಗಳನ್ನು ಪೇರಿಸಿದರು. ಆದಾಗ್ಯೂ 266 ರನ್​​ಗಳಿಗೆ ಆಲೌಟ್ ಆಯಿತು. 337 ರನ್​ಗಳ ಹಿನ್ನಡೆ ಅನುಭವಿಸಿತು. ಹೀಗಾಗಿ ಭಾರತ ಫಾಲೋಆನ್ ಹೇರಿತು.

ವೋಲ್ವರ್ತ್​​ ಮತ್ತು ಸುನೆ ಲೂಸ್ ಶತಕ

337 ರನ್​ಗಳ ಹಿನ್ನಡೆ ಅನುಭವಿಸಿದ ಪ್ರವಾಸಿ ಎರಡನೇ ಇನ್ನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಿತು. ನಾಯಕಿ ಲಾರಾ ವೋಲ್ವರ್ತ್​​ ಮತ್ತು ಸುನೆ ಲುಸ್​ ಶತಕ ಸಿಡಿಸಿ ಗಮನ ಸೆಳೆದರು. ಲಾರಾ 16 ಬೌಂಡರಿ ಸಹಿತ 122 ರನ್ ಬಾರಿಸಿದರೆ ಲುಸ್​ 203 ಎಸೆತಗಳಲ್ಲಿ 18 ಬೌಂಡರಿ ಸಹಿತ 109 ರನ್ ಗಳಿಸಿದರು. ನಾಡಿನ್ ಡಿ ಕ್ಲರ್ಕ್ (61) ಅರ್ಧಶತಕ ಸಿಡಿಸಿದರು. ಮೊದಲ ಇನ್ನಿಂಗ್ಸ್​​ನಲ್ಲಿ 8 ವಿಕೆಟ್ ಕಿತ್ತಿದ್ದ ಸ್ನೆಹ್ ರಾಣಾ ಎರಡನೇ ಇನ್ನಿಂಗ್ಸ್​​ನಲ್ಲಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ, ರಾಜೇಶ್ವರಿ ಗಾಯಕ್ವಾಡ್ ತಲಾ 2 ವಿಕೆಟ್, ಶಫಾಲಿ ವರ್ಮಾ, ಹರ್ಮನ್ ಪ್ರೀತ್ ಕೌರ್ ತಲಾ 1 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಆಟವನ್ನು ಕೊನೆಗೊಳಿಸಿದರು.

ಭಾರತಕ್ಕೆ 37 ರನ್​​ಗಳ ಗುರಿ ಸಿಕ್ಕಿತು. 4ನೇ ದಿನದಾಟದ ಕೊನೆಯಲ್ಲಿ ಸಾಧಾರಣ ಗುರಿ ಬೆನ್ನಟ್ಟಿದ ಭಾರತ 9.2 ಓವರ್​​​ಗಳಲ್ಲೇ 37 ರನ್ ಗಳಿಸಿತು. ಟೆಸ್ಟ್ ಸರಣಿಗೂ ಮುನ್ನ ಸೌತ್ ಆಫ್ರಿಕಾ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು.

Continue Reading

ಪ್ರಮುಖ ಸುದ್ದಿ

Hurricane Beryl : ವೆಸ್ಟ್​ ಇಂಡೀಸ್​ನಲ್ಲಿ ಚಂಡಮಾರುತ, ಸಂಕಷ್ಟದಲ್ಲಿ ಸಿಲುಕಿದ ಚಾಂಪಿಯನ್ ಭಾರತ ತಂಡ

Hurricane Beryl : ವಿಮಾನ ನಿಲ್ದಾಣ ಮಾತ್ರವಲ್ಲ, ಬಾರ್ಬಡೋಸ್​​ನ ಎಲ್ಲಾ ಹೋಟೆಲ್​​, ರೆಸ್ಟೋರೆಂಟ್​ಗಳು ಮತ್ತು ಅಂಗಡಿಗಳನ್ನು ಸಹ ಮುಚ್ಚಲಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯಿಂದಾಗಿ ಭಾರತೀಯ ತಂಡ ಉಳಿದುಕೊಂಡಿರುವ ಹೋಟೆಲ್ ಪ್ರಸ್ತುತ ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲಾಗಿದೆ. ಹೀಗಾಗಿ ಭಾರತ ತಂಡದ ಆಟಗಾರರಿಗೆ ಅತ್ಯ ಸೌಕರ್ಯಗಳು ಸಿಗುತ್ತಿಲ್ಲ.

VISTARANEWS.COM


on

Hurricane Beryl
Koo

ಬೆಂಗಳೂರು: ವೆಸ್ಟ್​ ಇಂಡೀಸ್​ನಲ್ಲಿ ಬಾರ್ಬಡೋಸ್​ಗೆ ಬೆರಿಲ್ ಚಂಡಮಾರುತದಿಂದಾಗಿ (Hurricane Beryl) ಅಪ್ಪಳಿಸಿದೆ. ವಿಶ್ವ ಕಪ್​ ಫೈನಲ್ ಪಂದ್ಯ ಮುಗಿದ ಮರುದಿನದೇ ಈ ಪಾಕೃತಿಕ ವಿಕೋಪ ಸಂಭವಿಸಿದೆ. ಹೀಗಾಗಿ ವಿಶ್ವ ಕಪ್​ ಗೆದ್ದು ಸಂಭ್ರಮದಲ್ಲಿರುವ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದೆ. ತವರಿಗೆ ಮರಳಲು ಸಾಧ್ಯವಾಗದೇ, ಅಲ್ಲಿಯೂ ಸೂಕ್ತ ವ್ಯವಸ್ಥೆ ಇಲ್ಲದೆ ನಲುಗುವಂತಾಗಿದೆ. ಭಾರತೀಯ ತಂಡದ ಬಗ್ಗೆ ಬಿಸಿಸಿಐ ಹೊಸ ಅಪ್​​ಡೇಟ್​ ನೀಡಿದ್ದು, ಟಿ 20 ವಿಶ್ವಕಪ್ 2024 ರ ಗೆಲುವಿನ ನಂತರ ಭಾರತಕ್ಕೆ ತೆರಳಬೇಕಿದ್ದ ಟೀಮ್ ಇಂಡಿಯಾ, ಚಂಡಮಾರುತದಿಂದಾಗಿ ಬಾರ್ಬಡೋಸ್​ನಲ್ಲಿ ಸಿಲುಕಿಕೊಂಡಿದೆ ಎಂದು ಬರೆದುಕೊಂಡಿದೆ. ಎಲ್ಲಾ ಹೊರಹೋಗುವ ವಿಮಾನಗಳನ್ನು ರದ್ದುಪಡಿಸಲಾಗಿತ್ತು ಮತ್ತು ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಹೇಳಿದೆ. ಅದರ ನಡುವೆಯೂ ಅಲ್ಲಿರುವ ಆಟಗಾರರು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಮಾನ ನಿಲ್ದಾಣ ಮಾತ್ರವಲ್ಲ, ಬಾರ್ಬಡೋಸ್​​ನ ಎಲ್ಲಾ ಹೋಟೆಲ್​​, ರೆಸ್ಟೋರೆಂಟ್​ಗಳು ಮತ್ತು ಅಂಗಡಿಗಳನ್ನು ಸಹ ಮುಚ್ಚಲಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯಿಂದಾಗಿ ಭಾರತೀಯ ತಂಡ ಉಳಿದುಕೊಂಡಿರುವ ಹೋಟೆಲ್ ಪ್ರಸ್ತುತ ಸೀಮಿತ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಲಾಗಿದೆ. ಹೀಗಾಗಿ ಭಾರತ ತಂಡದ ಆಟಗಾರರಿಗೆ ಅತ್ಯ ಸೌಕರ್ಯಗಳು ಸಿಗುತ್ತಿಲ್ಲ.

ಟೀಮ್ ಇಂಡಿಯಾಗೆ ಬಿಸಿಸಿಐ ಭರವಸೆ

ಚಂಡಮಾರುತವು ಕಡಿಮೆಯಾದ ನಂತರ ಬಾರ್ಬಡೋಸ್​ನಿಂದ ಹೊರಬರಲು ಟೀಮ್ ಇಂಡಿಯಾ, ಸಹಾಯಕ ಸಿಬ್ಬಂದಿ ಮತ್ತು ಮಾಧ್ಯಮ ತಂಡಕ್ಕೆ ಸಹಾಯ ಮಾಡುವುದಾಗಿ ಬಿಸಿಸಿಐ ಭರವಸೆ ನೀಡಿದೆ. ಖ್ಯಾತ ಪತ್ರಕರ್ತ ಬೋರಿಯಾ ಮಜುಂದಾರ್ ಅವರ ವರದಿಗಳ ಪ್ರಕಾರ, ಹೋಟೆಲ್​​ನಲ್ಲಿ ಸೀಮಿತ ಸಿಬ್ಬಂದಿಯಿಂದಾಗಿ ಭಾರತೀಯ ತಂಡವು ಸರದಿಯಲ್ಲಿ ನಿಂತಿ ಕಾಗದದ ತಟ್ಟೆಗಳಲ್ಲಿ ಊಟ ಮಾಡುತ್ತಿದೆ.

ಇದನ್ನೂ ಓದಿ: ICC Team of the Tournament : ಐಸಿಸಿ ಟೀಮ್​ ಆಫ್​​ ದಿ ಟೂರ್ನಮೆಂಟ್​ನಲ್ಲಿ ಆರು

ವರದಿಗಳ ಪ್ರಕಾರ, ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ತಂಡ ಮತ್ತು ಸಹಾಯಕ ಸಿಬ್ಬಂದಿ ಚಾರ್ಟರ್ ವಿಮಾನದ ಮೂಲಕ ವಾಪಸ್ ತೆರಳಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ತಂಡವು ಬಾರ್ಬಡೋಸ್ನಿಂದ ಹೊರಟಿದೆ. ಇದು ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಪರಿಹಾರವಾಗಿದೆ ಆದರೆ ಭಾರತೀಯ ತಂಡವು ದ್ವೀಪ ರಾಷ್ಟ್ರವನ್ನು ಇನ್ನೂ ತೊರೆದಿಲ್ಲ. ಅವರಿಗೆ ತಕ್ಷಣದ ಪರಿಹಾರ ಸಿಕ್ಕಿಲ್ಲ.

ಭಾರತ ತಂಡವು ಜುಲೈ 1 ರಂದು ಹೊರಡಬೇಕಿತ್ತು. ಆದರೆ ಚಂಡಮಾರುತದಿಂದಾಗಿ ಬಾರ್ಬಡೋಸ್ ನ ಆಡಳಿತ ಹೆಚ್ಚಿನ ಎಚ್ಚರಿಕೆ ವಹಿಸಿದೆ. ವಿಮಾನ ನಿಲ್ದಾಣವನ್ನು ಸೋಮವಾರ ಮಧ್ಯಾಹ್ನದವರೆಗೆ (ಬಿಎಸ್ಟಿ) ಮುಚ್ಚಲಾಗುವುದು ಮತ್ತು ಚಂಡಮಾರುತ ಕಡಿಮೆಯಾದ ನಂತರವೇ ಅದನ್ನು ಮತ್ತೆ ತೆರೆಯಲಾಗುತ್ತದೆ. ಎಲ್ಲವೂ ಸುಧಾರಿಸಿಕೊಂಡ ನಂತರ ಭಾರತ ತಂಡ ಅಲ್ಲಿಂದ ಹೊರಡಬೇಕಾಗಿದೆ.

ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ಭಾನುವಾರ ಬೆಳಿಗ್ಗೆ ಗ್ರೇಡ್​ 3 ಚಂಡಮಾರುತವಾಗಿ ಪರಿವರ್ತನೆಗೊಂಡಿದೆ ಭಾನುವಾರ ಬೆಳಿಗ್ಗೆಯೇ ಮಾರುತದ ಗಂಟೆಗೆ 120 ಕಿಲೋಮೀಟರ್​ನಷ್ಟಿತ್ತು. ಚಂಡಮಾರುತವು ಕ್ಷಣದಿಂದ ಕ್ಷಣಕ್ಕೆ ಬಲಗೊಳ್ಳುತ್ತಿದೆ.

ಪೋರ್ಟೊ ರಿಕೊದ ಆಗ್ನೇಯ ಮತ್ತು ವೆನೆಜುವೆಲಾದ ಉತ್ತರಕ್ಕೆ ವಿಂಡ್ವರ್ಡ್ ದ್ವೀಪಗಳಿಗೆ ಬೆರಿಲ್ ಚಂಡಮಾರುತ ಅಪ್ಪಳಿಸಲಿದೆ ನಿರೀಕ್ಷೆಯಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ರಾತ್ರಿ 8:30 ರ ಹೊತ್ತಿಗೆ ಬೆರಿಲ್ ಬಾರ್ಬಡೋಸ್​​ನ ಪೂರ್ವ-ಆಗ್ನೇಯಕ್ಕೆ ಸುಮಾರು 355 ಮೈಲಿ ದೂರದಲ್ಲಿ ಸಾಗಲಿದೆ. ಮುಂಬರುವ ಗಂಟೆಗಳಲ್ಲಿ ಪರಿಸ್ಥಿತಿ ತೀವ್ರವಾಗಬಹುದು ಎಂದು ವರದಿಯಾಗಿದೆ.

Continue Reading
Advertisement
Virat Kohli
ಕ್ರಿಕೆಟ್12 mins ago

Virat Kohli : ಶುಭಾಶಯ ಕೋರಿದ ನರೇಂದ್ರ ಮೋದಿಗೆ ಪ್ರತಿಕ್ರಿಯೆ ಕೊಟ್ಟ ಕೊಹ್ಲಿ; ಇಲ್ಲಿದೆ ಅದರ ವಿವರ

Challa Sreenivasulu Setty
ವಾಣಿಜ್ಯ12 mins ago

Challa Sreenivasulu Setty: ಚಲ್ಲಾ ಶ್ರೀನಿವಾಸುಲು ಸೆಟ್ಟಿ; ಅಂದು ಪ್ರೊಬೆಷನರಿ ಅಧಿಕಾರಿ, ಈಗ ಎಸ್‌ಬಿಐ ಅಧ್ಯಕ್ಷ!

CM Siddaramaiah
ವೈರಲ್ ನ್ಯೂಸ್28 mins ago

CM Siddaramaiah: ಏರ್‌ಪೋರ್ಟ್‌ನಲ್ಲೇ ಟಿ20 ವಿಶ್ವಕಪ್‌ ಫೈನಲ್‌ ವೀಕ್ಷಿಸಿದ್ದ ಸಿಎಂ ಸಿದ್ದರಾಮಯ್ಯ; 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡ ವಿಡಿಯೊ!

Sha Rukh Khan
Latest47 mins ago

Sha Rukh Khan: ಸಾಲದ ಇಎಂಐ ಕಟ್ಟಲಾಗದೆ ಕಾರನ್ನು ಕಳೆದುಕೊಂಡಿದ್ದ ಶಾರುಖ್ ಖಾನ್!

ZIM v IND 2024
ಪ್ರಮುಖ ಸುದ್ದಿ48 mins ago

ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

A total of Rs 13.93 crore livelihood relief for the farmer families of the district says DC Gangubai Manakar
ಉತ್ತರ ಕನ್ನಡ49 mins ago

Uttara Kannada News: ಜಿಲ್ಲೆಯ ರೈತ ಕುಟುಂಬಗಳಿಗೆ 13.93 ಕೋಟಿ ರೂ. ಜೀವನೋಪಾಯ ಪರಿಹಾರ: ಡಿಸಿ

IND vs SA:
ಪ್ರಮುಖ ಸುದ್ದಿ1 hour ago

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

Viral News
Latest1 hour ago

Viral News: ಮಹಿಳೆಯ ಬೆತ್ತಲೆ ದೇಹದ ಮೇಲೆ ಮೃಷ್ಟಾನ್ನ ಬಡಿಸುವ ರೆಸ್ಟೋರೆಂಟ್‌!

Viral Video
Latest1 hour ago

Viral Video: 1 ನಿಮಿಷದಲ್ಲಿ 35 ಪುಲ್-ಅಪ್! ಮೇಜರ್ ಜನರಲ್ ವಿಡಿಯೊ ಫುಲ್ ವೈರಲ್

Hero MotoCorp has introduced the new motorcycle The Centennial
ವಾಣಿಜ್ಯ1 hour ago

Hero MotoCorp: ಹೊಸ ಬೈಕ್‌ ‘ದಿ ಸೆಂಟೆನಿಯಲ್’ ಪರಿಚಯಿಸಿದ ಹೀರೋ ಮೋಟೋಕಾರ್ಪ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌