Festive Look | ಟ್ರೆಂಡಿ ಎಥ್ನಿಕ್‌ವೇರ್‌ ಧರಿಸಿ ಹಬ್ಬಕ್ಕೆ ಲಕ್ಷ್ಮಿಯಂತೆ ಕಂಗೊಳಿಸಿ - Vistara News

ಧಾರ್ಮಿಕ

Festive Look | ಟ್ರೆಂಡಿ ಎಥ್ನಿಕ್‌ವೇರ್‌ ಧರಿಸಿ ಹಬ್ಬಕ್ಕೆ ಲಕ್ಷ್ಮಿಯಂತೆ ಕಂಗೊಳಿಸಿ

ರೇಷ್ಮೆ ಸೀರೆ ಇಲ್ಲವೇ ಲಂಗ-ದಾವಣಿ ಜತೆಗೆ ಟ್ರೆಡಿಷನಲ್‌ ಆಭರಣ, ಅದಕ್ಕೊಪ್ಪುವ ಮೇಕಪ್‌ ಹಾಗೂ ಹೂವಿನ ಜಡೆಯಲ್ಲಿ ಸಿಂಗಾರಗೊಂಡಲ್ಲಿ ಹಬ್ಬಕ್ಕೆ ಥೇಟ್ ಲಕ್ಕ್ಷ್ಮಿಯಂತೆ ಕಂಗೊಳಿಸಬಹುದು.

VISTARANEWS.COM


on

Festive Look
ಚಿತ್ರಗಳು: ಸೋನಿಕಾ ಗೌಡ, ನಟಿ ಹಾಗೂ ಮಾಡೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವರಮಹಾಲಕ್ಷ್ಮಿ ಹಬ್ಬಕ್ಕೆ ಥೇಟ್‌ ಲಕ್ಷ್ಮಿಯಂತೆ ಕಂಗೊಳಿಸಿ. ಇದು ಈ ಹಬ್ಬದ ಸೀಸನ್‌ನ ಫ್ಯಾಷನ್‌ ಥೀಮ್‌ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಹೌದು. ವರಮಹಾಲಕ್ಷ್ಮಿ ಹಬ್ಬದಂದು ಎಥ್ನಿಕ್‌ ಲುಕ್‌ಗೆ ಸೈ ಎನ್ನಿ. ಟ್ರೆಡಿಷನಲ್‌ ಸೀರೆ ಹಾಗೂ ಆಭರಣಗಳು ಇದಕ್ಕೆ ಹೊಂದುವ ಮೇಕಪ್‌ ಮತ್ತು ಹೇರ್‌ಸ್ಟೈಲ್‌ ಮಾಡಿದಲ್ಲಿ ಕಣ್ತುಂಬಿಸಿಕೊಳ್ಳುವ ಲಕ್ಷ್ಮಿ ಲುಕ್‌ ನಿಮ್ಮದಾಗುವುದು ಎನ್ನುತ್ತಾರೆ ನಟಿ ಹಾಗೂ ಮಾಡೆಲ್‌ ಸೋನಿಕಾ ಗೌಡ. ಅವರು ಹೇಳುವಂತೆ, ಹಬ್ಬಗಳಂದು ವೆಸ್ಟರ್ನ್ ಔಟ್‌ಫಿಟ್‌ಗಳಿಗೆ ಬೈ ಬೈ ಹೇಳಿ, ಟ್ರೆಡಿಷನಲ್‌ ಲುಕ್ಕನ್ನು ತಮ್ಮದಾಗಿಸಿಕೊಳ್ಳಬೇಕು. ಆಗಷ್ಟೇ ಹಬ್ಬದ ಸಂಭ್ರಮ ಇಮ್ಮಡಿಯಾಗುವುದು.

Festive Look

ಶ್ರಾವಣ ಮಾಸಕ್ಕೆ ಗಾಡ್ಡೆಸ್‌ ಥೀಮ್‌

ಆಕರ್ಷಕ ರೇಷ್ಮೆ ಸೀರೆ ಇಲ್ಲವೇ ಲಂಗ-ದಾವಣಿ, ಇದಕ್ಕೆ ಸೂಕ್ತವೆನಿಸುವ ಮೇಕಪ್‌, ಕಣ್ಣಿಗೆ ಕಾಜಲ್‌, ಕಲರ್ಡ್‌ ವಿಂಗ್‌ ಐ ಲೈನರ್‌, ಡಿಸೈನರ್‌ ಡಾರ್ಕ್‌ ಶೇಡ್‌ನ ಅಗಲವಾದ ಬಂಗಾಲಿ ಬಿಂದಿ, ಕಿವಿಗೆ ಟ್ರಡಿಷನಲ್‌ ಬಿಗ್‌ ಜುಮ್ಕಾ, ಕತ್ತಿಗೆ ಮಲ್ಟಿಪಲ್‌ ಲೆಯರ್ಡ್‌ ಆ್ಯಂಟಿಕ್‌ ಹಾರ, ಬಿಗ್‌ ಚೋಕರ್‌, ಕೈತುಂಬಾ ಕಾಣುವ ಬ್ಯಾಂಗಲ್‌ ಸೆಟ್‌, ಬಳುಕುವ ಸೊಂಟವನ್ನು ಸುತ್ತುವ ಕಮರ್‌ಬಾಂದ್‌, ಕೈಗೆ ಬಾಜೂಬಂದ್‌. ಇವೆಲ್ಲಾ ಈ ಲುಕ್‌ಗೆ ಸಾಥ್‌ ನೀಡುತ್ತವೆ. ಥೇಟ್‌ ಲಕ್ಷ್ಮಿಯ ಪ್ರತಿರೂಪದಂತೆ ಮಾನಿನಿಯರನ್ನು ಪ್ರತಿಬಿಂಬಿಸುತ್ತವೆ.

“ಶ್ರಾವಣ ಮಾಸದಲ್ಲಿ ಸಾಕಷ್ಟು ಹಬ್ಬಗಳು, ವ್ರತಗಳು ಬರುವುದರಿಂದ ಎಥ್ನಿಕ್‌ ಫ್ಯಾಷನ್‌ ಲೋಕ ಕಂಪ್ಲೀಟ್‌ ಬದಲಾಗುತ್ತದೆ. ಅದರಲ್ಲೂ ಸೌತ್‌ ಇಂಡಿಯನ್‌ ಸ್ಟೈಲ್‌ಗೆ ಹೊಂದುವಂತೆ ಮಹಿಳೆಯರು ದೇವಿ ಲಕ್ಷ್ಮಿಯಂತೆ ಸಿಂಗರಿಸಿಕೊಳ್ಳುವುದು ಫೆಸ್ಟಿವ್‌ ಥೀಮ್‌ ಆಗಿ ಬದಲಾಗುತ್ತದೆ. ಅಂದರೆ, ಇದು ಇಂಡಿಯನ್‌ ಗಾಡ್ಡೆ

ಸ್‌ ಲುಕ್‌ನ ಥೀಮ್‌” ಎನ್ನುತ್ತಾರೆ ಯಶ್ವಿ ಸ್ಟುಡಿಯೋ ಡಿಸೈನರ್ಸ್.

Festive Look

ಟ್ರೆಡಿಷನಲ್‌ ಸೀರೆ ಅಥವಾ ಉಡುಪು

ಹಬ್ಬದಂದು ಟ್ರಡಿಷನಲ್‌ ಲುಕ್‌ಗೆ ಸಾಥ್‌ ನೀಡುವ ಬಾರ್ಡರ್‌ ರೇಷ್ಮೆ ಸೀರೆ ಅಥವಾ ಎಥ್ನಿಕ್‌ ಲುಕ್‌ ನೀಡುವ ಲೆಹೆಂಗಾ, ಲಂಗ-ದಾವಣಿಯಂತಹ ಡ್ರೆಸ್‌ಕೋಡ್‌ಗೆ ಯೆಸ್‌ ಎನ್ನಿ ಎನ್ನುತ್ತಾರೆ ಸ್ಟೈಲಿಸ್ಟ್ಸ್‌.

ಸಾಂಪ್ರದಾಯಿಕ ಆಭರಣಗಳನ್ನು ಧರಿಸಿ

ಫಂಕಿ ಹಾಗೂ ಜಂಕ್‌ ಜುವೆಲರಿಗಳನ್ನು ಆವಾಯ್ಡ್‌ ಮಾಡಿ. ಆದಷ್ಟೂ ಟ್ರೆಡಿಷನಲ್‌ ಆಭರಣಗಳಾದ ಜುಮಕಿ, ಮಾಟಿ, ಮಾಂಗ್‌ಟೀಕಾ, ನೆಕ್‌ಲೇಸ್‌, ಹಾರ, ಬಳೆ ಸೆಟ್‌, ಸೊಂಟವನ್ನು ಸುತ್ತುವ ಡಾಬು, ಬಾಜುಬಂದ್‌ನಂತವನ್ನು ಧರಿಸಿ. ಕಾಲಿಗೆ ಗೆಜ್ಜೆ, ಕಾಲುಂಗುರ ಹಾಕಿಕೊಳ್ಳಿ. ಎಥ್ನಿಕ್‌ ಲಿಕ್‌ ನಿಮ್ಮದಾಗುವುದು.

Festive Look

ಆಕರ್ಷಕ ಹೇರ್‌ಸ್ಟೈಲ್‌

ಇನ್ನು ಹೂವಿನ ಜಡೆ, ಮೊಗ್ಗಿನ ಜಡೆ, ಜಡೆ ಬಿಲ್ಲೆ ಹಬ್ಬದಂದು ಧರಿಸಬಹುದಾದ ಹೇರ್‌ಸ್ಟೈಲ್‌. ಕೂದಲು ಗಿಡ್ಡವಾಗಿದ್ದರೂ ಇದೀಗ ಮಾರುಕಟ್ಟೆಯಲ್ಲಿ ಸಿಗುವ ಆಕ್ಸೆಸರೀಸ್‌ಗಳಿಂದ ಎಥ್ನಿಕ್‌ ಸ್ಟೈಲ್‌ಗೆ ಸೂಟ್‌ ಆಗುವಂತಹ ನಾನಾ ಬಗೆಯ ಜಡೆಯ ಸಿಂಗಾರ ಮಾಡಿಕೊಳ್ಳಬಹುದು. ಇದು ಕೂಡ ಟ್ರೆಡಿಷನಲ್‌ ಲುಕ್‌ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಹಬ್ಬದ ಮೇಕಪ್‌ ಹೀಗಿರಲಿ

ಹಬ್ಬಕ್ಕೆ ಮೇಕಪ್‌ನಲ್ಲಿ ಮೊದಲ ಪ್ರಾಮುಖ್ಯತೆ ಹಣೆಗಿಡುವ ಬಿಂದಿಗಿದೆ. ನಂತರ ಕಂಗಳ ಸೌಂದರ್ಯ ಹೆಚ್ಚಿಸುವ ಕಾಡಿಗೆಗಿದೆ. ಸದ್ಯಕ್ಕೆ ಫಂಕಿ ಮೇಕಪ್‌ಗಳನ್ನು ತೊರೆದು ಡಿಸೆಂಟ್‌ ಲುಕ್‌ ನೀಡುವ ಫೆಸ್ಟಿವ್‌ ಮೇಕಪ್‌ ಮಾಡಿಕೊಳ್ಳುವುದು ಉತ್ತಮ. ಉಡುವ ಸೀರೆಗೆ ಮ್ಯಾಚ್ ಆಗುವಂತಹ ಬಿಂದಿ ಹಚ್ಚಿ. ಐ ಲೈನರ್‌, ಮಸ್ಕರಾ ಬಳಸಿ. ಲಿಪ್‌ಸ್ಟಿಕ್‌ ಸ್ಕಿನ್‌ ಟೋನ್‌ಗೆ ತಕ್ಕಂತೆ ಲೇಪಿಸಿ. ಮಳೆನೀರಿಗೆ ಹಾಳಾಗದ ಮಾನ್ಸೂನ್‌ ಮೇಕಪ್‌ ತಮ್ಮದಾಗಿಸಿಕೊಳ್ಳಿ ಎನ್ನುತ್ತಾರೆ ಸೌಂದರ್ಯ ತಜ್ಞೆ ಶ್ವೇತಾ ಮಹಾದೇವ್‌.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Festive Fashion: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಡಿಷನಲ್‌ ಲೆಹೆಂಗಾ ಎಂಟ್ರಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಧಾರ್ಮಿಕ

Temple Bell: ದೇವಾಲಯದಿಂದ ಹಿಂತಿರುಗುವಾಗ ಗಂಟೆ ಬಾರಿಸಲೇಬಾರದು ಯಾಕೆ ಗೊತ್ತೇ?

ದೇವರ ಆರಾಧನೆಗೆ ಪ್ರತಿಯೊಂದು ಧರ್ಮದಲ್ಲೂ ಹಲವಾರು ನಿಯಮಗಳಿವೆ. ಅಂತಹ ಒಂದು ನಿಯಮ ಹಿಂದೂ ಧರ್ಮದಲ್ಲಿ ಇರುವುದು ದೇವಾಲಯದಿಂದ ಹಿಂದಿರುಗುವಾಗ ಗಂಟೆ ಬಾರಿಸಬಾರದು ಎಂಬುದಾಗಿದೆ. ಇದು ಯಾಕೆ, ಗಂಟೆ ಬಾರಿಸುವುದರಿಂದ ಏನು ಪ್ರಯೋಜನ, ಗಂಟೆಯನ್ನು (Temple Bell) ಯಾವಾಗ ಬಾರಿಸಬೇಕು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Temple Bell
Koo

ಹಿಂದೂ ಧರ್ಮದಲ್ಲಿ (hindu dharma) ಪ್ರತಿಯೊಂದು ಆರಾಧನೆಗೂ (worship) ನಿಯಮ ಮತ್ತು ನಿಬಂಧನೆಗಳಿವೆ. ಅದರಲ್ಲೂ ಪೂಜೆಯ (puje) ವೇಳೆ, ದೇವಾಲಯದ (temple) ಒಳಗೆ ಕಟ್ಟುನಿಟ್ಟಾಗಿ ಈ ನಿಯಮಗಳನ್ನು ಪಾಲಿಸುವುದರಿಂದ ನಾವು ಸಾಕಷ್ಟು ಪ್ರಯೋಜನವನ್ನು ಪಡೆಯಬಹುದು. ಈ ನಿಯಮಗಳಲ್ಲಿ ಒಂದು ಪೂಜೆಗಾಗಿ ದೇವಾಲಯವನ್ನು ಪ್ರವೇಶಿಸುವಾಗ ಗಂಟೆ (Temple Bell) ಬಾರಿಸುವುದು.

ಪ್ರತಿ ಹಿಂದೂ ದೇವಾಲಯದಲ್ಲೂ ಗಂಟೆ ಇರುತ್ತದೆ. ಜನರು ದೇವಸ್ಥಾನಕ್ಕೆ ಹೋದಾಗ ಮತ್ತು ಅಲ್ಲಿಂದ ಹಿಂತಿರುಗಿದಾಗ ಅವರು ಗಂಟೆಯನ್ನು ಬಾರಿಸುತ್ತಾರೆ. ಆದರೆ ದೇವಸ್ಥಾನದಿಂದ ಹಿಂತಿರುಗುವಾಗ ಗಂಟೆ ಬಾರಿಸಬಾರದು ಎಂಬುದು ನಿಮಗೆ ತಿಳಿದಿದೆಯೇ?

ದೇವಸ್ಥಾನದಿಂದ ಹಿಂದಿರುಗುವಾಗ ಗಂಟೆ ಏಕೆ ಬಾರಿಸಬಾರದು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಈ ನಿಯಮದ ಹಿಂದೆ ಬಹು ಮಹತ್ವದ ಕಾರಣವಿದೆ.


ದೇವಸ್ಥಾನಗಳಲ್ಲಿ ಗಂಟೆ ಏಕೆ ಬಾರಿಸುತ್ತೇವೆ?

ಶಬ್ದವು ಶಕ್ತಿಗೆ ಸಂಬಂಧಿಸಿದೆ. ನಾವು ದೇವಸ್ಥಾನದ ಗಂಟೆಯನ್ನು ಬಾರಿಸಿದಾಗ ಗಂಟೆ ಬಾರಿಸುವ ವ್ಯಕ್ತಿಗೆ ಧನಾತ್ಮಕ ಶಕ್ತಿಯು ಹರಡುತ್ತದೆ ಮತ್ತು ಸುತ್ತಮುತ್ತಲಿನ ಜನರ ಮೇಲೆ ಅದು ಪರಿಣಾಮ ಬೀರುತ್ತದೆ ಎಂದು ನಂಬಲಾಗುತ್ತದೆ.
ಶಾಸ್ತ್ರ, ಸ್ಕಂದ ಪುರಾಣದಲ್ಲಿ ನಾವು ದೇವಾಲಯದ ಗಂಟೆಯನ್ನು ಬಾರಿಸಿದಾಗ ಅದು ‘ಓಂ’ ಶಬ್ದವನ್ನು ಹೋಲುತ್ತದೆ ಎಂದು ಉಲ್ಲೇಖಿಸಲಾಗಿದೆ. ‘ಓಂ’ ಶಬ್ದವು ಶುದ್ಧ, ಪವಿತ್ರ ಮತ್ತು ಧನಾತ್ಮಕ ಶಕ್ತಿಯೊಂದಿಗೆ ಸಂಬಂಧಿಸಿದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ದೇವಾಲಯವನ್ನು ಪ್ರವೇಶಿಸುವಾಗ ಗಂಟೆಯನ್ನು ಬಾರಿಸುವ ಸಂಪ್ರದಾಯವಿದೆ.

ಮರಳುವಾಗ ಗಂಟೆ ಬಾರಿಸುವುದಿಲ್ಲ ಏಕೆ?

ದೇವಸ್ಥಾನದಿಂದ ಹೊರಬರುವಾಗ ಅನೇಕ ಜನರು ಗಂಟೆ ಬಾರಿಸುವುದನ್ನು ನೋಡಿರಬಹುದು. ಆದರೆ ಇದು ತಪ್ಪು ಎಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೇವಸ್ಥಾನದಿಂದ ಹೊರಡುವಾಗ ಗಂಟೆಯನ್ನು ಬಾರಿಸಬಾರದು. ಯಾಕೆಂದರೆ ಹೀಗೆ ಮಾಡುವುದರಿಂದ ದೇವಾಲಯದ ಧನಾತ್ಮಕ ಶಕ್ತಿಯನ್ನು ದೇವಾಲಯದಲ್ಲಿಯೇ ಬಿಟ್ಟು ಬಂದಂತೆ ಆಗುತ್ತದೆ. ನಾವು ದೇವಾಲಯದಿಂದ ಬರಿಗೈಯಲ್ಲಿ ಮರಳುತ್ತೇವೆ. ಹಾಗಾಗಿ ದೇವಸ್ಥಾನದಿಂದ ಹೊರಡುವಾಗ ಗಂಟೆ ಬಾರಿಸಬಾರದು.


ಗಂಟೆ ಏಕೆ ಬಾರಿಸಬೇಕು?

ಸನಾತನ ಧರ್ಮದಲ್ಲಿ ಪ್ರಾಚೀನ ಕಾಲದಿಂದಲೂ ಪೂಜೆಗೆ ಪ್ರಾಮುಖ್ಯತೆ ನೀಡಲಾಗಿದೆ. ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ನಾವು ದೇವಾಲಯವನ್ನು ಪ್ರವೇಶಿಸುವಾಗ ಗಂಟೆಯನ್ನು ಬಾರಿಸಿದರೆ ಗಂಟೆಯ ಶಬ್ದವು ನಮ್ಮ ದೇಹದಲ್ಲಿನ ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ. ಜನರಿಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ದೇವರಿಗೆ ಗಂಟೆಯ ಸದ್ದು ಇಷ್ಟವಾಗುತ್ತದೆ ಮತ್ತು ಗಂಟೆ ಬಾರಿಸುವ ಮೂಲಕ ಭಕ್ತರು ದೇವರ ಉಪಸ್ಥಿತಿಯ ಅನುಭವ ಪಡೆಯಬಹುದು.

ಗಂಟೆ ಬಾರಿಸುವುದು ದೇವಾಲಯವನ್ನು ಪ್ರವೇಶಿಸಲು ಮತ್ತು ದೇವತೆಗಳ ಗಮನವನ್ನು ಸೆಳೆಯಲು ದೇವರ ಅನುಮತಿ ತಮ್ಮ ಕಡೆಗೆ ಸೆಳೆಯುವುದಾಗಿದೆ. ಗಂಟೆ ಬಾರಿಸುವ ಮೂಲಕ ಭಕ್ತನು ತನ್ನ ಆಗಮನವನ್ನು ದೇವರಿಗೆ ತಿಳಿಸುತ್ತಾನೆ ಎಂದು ಹೇಳಲಾಗುತ್ತದೆ.

ಗಂಟೆಯ ಶಬ್ದವು ದೈವತ್ವವನ್ನು ಸ್ವಾಗತಿಸುವ ಮತ್ತು ದುಷ್ಟತನವನ್ನು ಹೋಗಲಾಡಿಸುವ ಮಂಗಳಕರವೆಂದು ಪರಿಗಣಿಸಲಾಗಿದೆ. ಗಂಟೆಯ ಶಬ್ದವು ಮನಸ್ಸನ್ನು ನಡೆಯುತ್ತಿರುವ ಆಲೋಚನೆಗಳಿಂದ ದೂರವಿಡುತ್ತದೆ. ಹೀಗಾಗಿ ಮನಸ್ಸು ಹೆಚ್ಚು ಗ್ರಹಿಸುವಂತೆ ಮಾಡುತ್ತದೆ.

ಇದನ್ನೂ ಓದಿ: Importance Of Tilaka: ಹಣೆಯ ಮೇಲೆ ತಿಲಕ ಇಟ್ಟರೆ ಏನೇನು ಪ್ರಯೋಜನ? ಇದಕ್ಕಿದೆ ವೈಜ್ಞಾನಿಕ ಕಾರಣ!

ಗಂಟೆಯ ಶಬ್ದವು ದೇಹ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಇರುವ ಎಲ್ಲಾ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ನಾಶಪಡಿಸುತ್ತದೆ ಎಂದು ವೈಜ್ಞಾನಿಕವಾಗಿ ಹೇಳಲಾಗುತ್ತದೆ, ಇದರಿಂದಾಗಿ ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿರುತ್ತದೆ.

ಗಂಟೆಯನ್ನು ಯಾವಾಗ ಬಾರಿಸಬೇಕು?

ಬೆಳಗ್ಗೆ ಮತ್ತು ಸಂಜೆ ದೇವಾಲಯದ ಗಂಟೆಯನ್ನು ಬಾರಿಸಬೇಕು ಎಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಇದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಆದ್ದರಿಂದ ಪೂಜೆಯನ್ನು ಪ್ರಾರಂಭಿಸುವ ಮೊದಲು ನಿಯಮಿತವಾಗಿ ಮನೆಯಲ್ಲೂ ಗಂಟೆ ಬಾರಿಸುವುದು ಒಳ್ಳೆಯದು.

Continue Reading

ಬಾಗಲಕೋಟೆ

Bhandara Fair : ಲೋಕಾಪುರದ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ

Bhandara Fair : 27 ಗ್ರಾಮಗಳ ಸಮ್ಮುಖದಲ್ಲಿ ನಡೆಯುವ ವಿಶಿಷ್ಟ ಭಂಡಾರ ಜಾತ್ರೆಗೆ ಅದ್ಧೂರಿ ಚಾಲನೆ ನೀಡಲಾಗಿದ್ದು, ಭಕ್ತ ಸಮೂಹವು ಭಂಡಾರದಲ್ಲಿ ಮಿಂದೆದ್ದಿದ್ದಾರೆ.

VISTARANEWS.COM


on

By

Bhandara Fair
Koo

ಬಾಗಲಕೋಟೆ: ಐತಿಹಾಸಿಕ ಲೋಕಾಪುರದ ಭಂಡಾರ ಜಾತ್ರೆಗೆ (Bhandara Fair) ಶನಿವಾರ ಅದ್ಧೂರಿ ಚಾಲನೆ ನೀಡಲಾಗಿದೆ. ಲಕ್ಷಾಂತರ ಭಕ್ತರ ಸಮೂಹವು ಭಂಡಾರದಲ್ಲಿ ಮಿಂದೆದ್ದರು. ಮುಧೋಳ ನಗರದಲ್ಲಿ ಪ್ರತಿ 7 ವರ್ಷಕ್ಕೊಮ್ಮೆ ಲೋಕಾಪುರ ದುರ್ಗಾದೇವಿ ಜಾತ್ರೆ ನಡೆಯಲಿದೆ.

ಭಂಡಾರ ಜಾತ್ರೆಯಲ್ಲಿ ಗ್ರಾಮ ದೇವತೆಗಳಾದ ದ್ಯಾಮವ್ವ, ದುರ್ಗವ್ವ ದೇವಿ ಜಾತ್ರೆ ಇದಾಗಿದ್ದು, ಸುಮಾರು 27 ಗ್ರಾಮಸ್ಥರ ಸಮ್ಮುಖದಲ್ಲಿ ನಡೆಯುವ ವಿಶಿಷ್ಟ ದೇವಿ ಜಾತ್ರೆ ಆಗಿದೆ. 5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.

ಇನ್ನೂ ಆದಿ ಶಕ್ತಿ ದುರ್ಗಾದೇವಿ ರಥೋತ್ಸವಕ್ಕೆ 50 ಟನ್ ಭಂಡಾರವನ್ನು ಭಕ್ತರು ತೂರಲಿದ್ದಾರೆ. ಪಟ್ಟಣದ ರಥ ಬೀದಿ ಸೇರಿ ಪ್ರಮುಖ ಮಾರ್ಗಗಳಲ್ಲಿ ರಥೋತ್ಸವ ಸಂಚಾರಿಸಿದೆ. ಇನ್ನೂ ಯುವಕರು ಡೊಳ್ಳು ಕುಣಿತ, ಡಿಜೆ ಸದ್ದಿಗೆ ಭಂಡಾರ ಬಳಿದು ಹೆಜ್ಜೆ ಹಾಕಿದರು. ಕುಂಬ ಹೊತ್ತ ಸಾವಿರಾರು ಮಹಿಳೆರ ಮುಂಭಾಗ ದೇವಿಯ ಪಲ್ಲಕ್ಕಿ ಮೆರವಣಿಗೆ ನಡೆದಿದೆ.

ಟನ್ ಗಟ್ಟಲೆ ಭಂಡಾರ ಎರೆಚಿ ಜನರು ಸಂಭ್ರಮಿಸಿದರು. ದುರ್ಗವ್ವ ದೇವಿ ಓಣಿಯ ದೇವಸ್ಥಾನದಿಂದ ಭಂಡಾರ ಜಾತ್ರೆಯ ಮೆರವಣಿಗೆ ನಡೆಯಿತು. ದೇವಿಗೆ ಭಕ್ತರು ಉಡಿ ತುಂಬಿ ಪ್ರಾರ್ಥಿಸಿ ರಸ್ತೆ ಉದ್ದಕ್ಕೂ ಭಂಡಾರ ಎರಚುತ್ತಾ ದೇವಿಗೆ ಘೋಷಣೆ ಕೂಗುತ್ತಾ ಜಾತ್ರೆಯನ್ನು ಆಚರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಧಾರ್ಮಿಕ

Importance Of Tilaka: ಹಣೆಯ ಮೇಲೆ ತಿಲಕ ಇಟ್ಟರೆ ಏನೇನು ಪ್ರಯೋಜನ? ಇದಕ್ಕಿದೆ ವೈಜ್ಞಾನಿಕ ಕಾರಣ!

ಕೇವಲ ಶಾಸ್ತ್ರಕ್ಕಾಗಿ, ನಂಬಿಕೆಗಾಗಿ ಹಣೆಗೆ ಇಡುವ ತಿಲಕ ಇಡುವುದರಿಂದ ಹಲವು ಪ್ರಯೋಜನಗಳೂ ಇವೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಧಾರ್ಮಿಕ ಪ್ರಾಮುಖ್ಯತೆ (Importance Of Tilaka) ಹೊಂದಿರುವ ತಿಲಕಕ್ಕೆ ಸಂಬಂಧಿಸಿ ಸರಳ ಮತ್ತು ಪರಿಣಾಮಕಾರಿ ಕ್ರಮಗಳನ್ನು ಅಳವಡಿಸಿಕೊಂಡರೆ, ದುರದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸಬಹುದು. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Importance Of Tilaka
Koo

ಹಿಂದೂ (hindu) ಧರ್ಮದಲ್ಲಿ (Religious) ಹಣೆಗೆ ಸಾಂಕೇತಿಕವಾಗಿಯಾದರೂ ತಿಲಕವಿಟ್ಟು ಮನೆಯಿಂದ ಹೊರಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತಿಲಕ (Importance Of Tilaka) ಶುಭ ಸಂಕೇತ. ಪ್ರತಿಯೊಂದು ಕೆಲಸದಲ್ಲೂ (work) ಯಶಸ್ಸು ಸಿಗಲಿ ಎನ್ನುವ ಭಾವನೆಯ ಪ್ರತೀಕ. ತಿಲಕ ಇಡುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಒಂದು ಸಂಪ್ರದಾಯ ಸಂಪೂರ್ಣ ಗುರುತನ್ನು ಹೇಳುತ್ತದೆ.

ಕೇವಲ ಶಾಸ್ತ್ರಕ್ಕಾಗಿ, ನಂಬಿಕೆಗಾಗಿ ಹಣೆಗೆ ಇಡುವ ತಿಲಕ ಇಡುವುದರಿಂದ ಹಲವು ಪ್ರಯೋಜನಗಳೂ (benifits) ಇವೆ ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಧಾರ್ಮಿಕ ಪ್ರಾಮುಖ್ಯತೆ (religious importance) ಹೊಂದಿರುವ ತಿಲಕಕ್ಕೆ ಸಂಬಂಧಿಸಿ ಸರಳ ಮತ್ತು ಪರಿಣಾಮಕಾರಿ ಕ್ರಮಗಳನ್ನು ಅಳವಡಿಸಿಕೊಂಡರೆ, ದುರದೃಷ್ಟವನ್ನು ಅದೃಷ್ಟವಾಗಿ ಪರಿವರ್ತಿಸಬಹುದು ಎನ್ನಲಾಗುತ್ತದೆ.

ನಮ್ಮ ದೇಹದಲ್ಲಿ ಏಳು ಸೂಕ್ಷ್ಮ ಶಕ್ತಿ ಕೇಂದ್ರಗಳಿವೆ. ಅವುಗಳು ಅಪಾರವಾದ ಶಕ್ತಿ ನಿಕ್ಷೇಪಗಳನ್ನು ಹೊಂದಿವೆ. ಇವುಗಳನ್ನು ಚಕ್ರ (chakra) ಎಂದು ಕರೆಯಲಾಗುತ್ತದೆ. ಮೆದುಳಿನ ಮಧ್ಯದಲ್ಲಿ ಆತ್ಮೀಯ ಚಕ್ರವಿದೆ. ಈ ಚಕ್ರದ ಮೇಲೆ ನಮ್ಮ ದೇಹದ ಮೂರು ನರಗಳಾದ ಅಡ, ಪಿಂಗಲ, ಶುಷನೂತ ಈ ಮೂರು ಸಂಧಿಸುತ್ತವೆ. ಆದ್ದರಿಂದಲೇ ಇದನ್ನು ನಮ್ಮ ದೇಹದಲ್ಲಿ ಪ್ರಮುಖ ಸ್ಥಳವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಹಣೆಯ ಮಧ್ಯದಲ್ಲಿ ತಿಲಕವನ್ನು ಇಡಲಾಗುತ್ತದೆ. ಇದು ನಮ್ಮ ಮೆದುಳನ್ನು ಶಾಂತವಾಗಿರಿಸುತ್ತದೆ.


ಭಾರತೀಯ ಸಂಸ್ಕೃತಿಯ ಪ್ರಕಾರ ಹಣೆಯ ಮೇಲೆ ತಿಲಕವನ್ನು ಇಡುವುದಕ್ಕೆ ವೈದಿಕ ಮತ್ತು ವೈಜ್ಞಾನಿಕ ಆಧಾರಗಳಿವೆ. ವೈದಿಕ ಆಧಾರದ ಮೇಲೆ, ತಿಲಕವನ್ನು ಅನ್ವಯಿಸುವುದು ಗೌರವದ ಸಂಕೇತವಾಗಿದೆ.

ದೇವಸ್ಥಾನದಲ್ಲಿ ಆರತಿ, ಪೂಜೆ ಇತ್ಯಾದಿ ಸಮಯದಲ್ಲೂ ತಿಲಕವನ್ನು ಇಡಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ತಿಲಕ ಇಡದೇ ಮಾಡುವ ಯಾವುದೇ ಕೆಲಸ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ತಿಲಕವನ್ನು ಅನ್ವಯಿಸುವ ವೈಜ್ಞಾನಿಕ ಕಾರಣವೆಂದರೆ ತಿಲಕವನ್ನು ಅನ್ವಯಿಸುವುದರಿಂದ ಮೆದುಳಿನ ಮೇಲಿನ ಹೊರೆ ಕಡಿಮೆಯಾಗುತ್ತದೆ ಮತ್ತು ಮನಸ್ಸು ಶಾಂತವಾಗುತ್ತದೆ. ಮೆದುಳಿನಲ್ಲಿ ಯಾವುದೇ ನೋವು ಇರುವುದಿಲ್ಲ ಮತ್ತು ನೆನಪಿನ ಶಕ್ತಿ ಹೆಚ್ಚುತ್ತದೆ.

ತಿಲಕದ ಧಾರ್ಮಿಕ ಮಹತ್ವ

ಸನಾತನ ಸಂಪ್ರದಾಯದಲ್ಲಿ ಪೂಜೆಯ ಸಮಯದಲ್ಲಿ ಬಳಸುವ ತಿಲಕವು ಧಾರ್ಮಿಕ- ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಪ್ರತಿಯೊಬ್ಬ ವ್ಯಕ್ತಿಯ ಹಣೆಯ ಮೇಲಿನ ತಿಲಕವನ್ನು ನೋಡುವ ಮೂಲಕ ನೀವು ಅವರ ಸಂಪೂರ್ಣ ಧಾರ್ಮಿಕ ಸಂಪ್ರದಾಯವನ್ನು ತಿಳಿಯಬಹುದು. ಶೈವರು, ವೈಷ್ಣವರು ವಿವಿಧ ರೀತಿಯ ತಿಲಕವನ್ನು ಅನ್ವಯಿಸುತ್ತಾರೆ.

ಈ ತಿಲಕವನ್ನು ಧಾರ್ಮಿಕ ಪೂಜೆಗೆ ಮಾತ್ರವಲ್ಲ, ಒಂಬತ್ತು ಗ್ರಹಗಳ ಮಂಗಳಕರವಾಗಿಯೂ ಬಳಸಲಾಗುತ್ತದೆ.
ದೇವಾಲಯದಲ್ಲಿ ಪೂಜೆಯ ಅನಂತರ ತಿಲಕವನ್ನು ಅನ್ವಯಿಸುವುದರಿಂದ ದೇವರ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗುತ್ತದೆ. ಮಾನವನ ಹಣೆಯ ಮಧ್ಯದಲ್ಲಿ ವಿಷ್ಣುವೇ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಈ ಸ್ಥಳದಲ್ಲಿ ತಿಲಕವನ್ನು ಅನ್ವಯಿಸಲಾಗುತ್ತದೆ.

ಹಣೆಯ ಮಧ್ಯ ಭಾಗದಲ್ಲಿ ತಿಲಕವನ್ನು ಹಚ್ಚುವುದರಿಂದ ಇತರರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಯಾಕೆಂದರೆ ನಾವು ಇನ್ನೊಬ್ಬ ವ್ಯಕ್ತಿಯನ್ನು ನೋಡಿದಾಗ ನಮ್ಮ ಮೊದಲ ದೃಷ್ಟಿ ಅವನ ಮುಖದ ಮೇಲೆ ಹೋಗುತ್ತದೆ. ಹಣೆಯ ಮಧ್ಯಭಾಗವನ್ನು ‘ಆಗ್ಯ ಚಕ್ರ’ ಎನ್ನುತ್ತಾರೆ. ಈ ಚಕ್ರವನ್ನು ಗುರು ಚಕ್ರ ಎಂದೂ ಕರೆಯುತ್ತಾರೆ. ಯಾಕೆಂದರೆ ಇದನ್ನು ಗುರುವಿನ ಪ್ರತಿನಿಧಿ ಎಂದು ಪರಿಗಣಿಸಲಾಗಿದೆ. ದೇಹದ ಈ ಭಾಗಕ್ಕೆ ತಿಲಕವನ್ನು ಹಚ್ಚಿದಾಗ ಇಲ್ಲಿರುವ ಪೀನಲ್ ಗ್ರಂಥಿಯು ಶಕ್ತಿಯುತವಾಗುತ್ತದೆ ಮತ್ತು ಮೆದುಳಿನ ಒಳಗಿನಿಂದ ಒಂದು ರೀತಿಯ ಬೆಳಕು ಉಂಟಾಗುತ್ತದೆ. ಅದು ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ನಮ್ಮೊಳಗೆ ಏಕಾಗ್ರತೆಯನ್ನು ತರುತ್ತದೆ.

ಪ್ರಯೋಜನಗಳು ಏನೇನು?

ತಿಲಕದಿಂದ ಅನೇಕ ಪ್ರಯೋಜನಗಳಿವೆ. ಹಣೆಯ ಮೇಲೆ ತಿಲಕವನ್ನು ಹಚ್ಚುವುದರಿಂದ ವ್ಯಕ್ತಿಯ ವ್ಯಕ್ತಿತ್ವವು ಪ್ರಭಾವಶಾಲಿಯಾಗುತ್ತದೆ. ಅದು ವ್ಯಕ್ತಿಯ ಮುಖದ ಮೇಲೆ ಹೊಳಪನ್ನು ಹೆಚ್ಚಿಸುತ್ತದೆ. ತಿಲಕದಿಂದ ವ್ಯಕ್ತಿಯ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಹಣೆಯ ಮೇಲೆ ಹಚ್ಚಿದ ತಿಲಕವು ಅನೇಕ ರೀತಿಯ ಗ್ರಹಗಳನ್ನು ಶಾಂತಗೊಳಿಸುತ್ತದೆ. ಇದರಿಂದಾಗಿ ಅನೇಕ ಬಾರಿ ತೊಂದರೆಗಳಿಂದ ನಮಗೆ ರಕ್ಷಣೆ ದೊರೆಯುತ್ತದೆ ಎನ್ನುತ್ತಾರೆ ಜ್ಯೋತಿಷಿಗಳು.


ವೈಜ್ಞಾನಿಕ ಪ್ರಾಮುಖ್ಯತೆ

ವಿಜ್ಞಾನಿಗಳ ಪ್ರಕಾರ ಹಣೆಯ ಮೇಲೆ ತಿಲಕವನ್ನು ಹಚ್ಚುವುದರಿಂದ ನಮ್ಮಲ್ಲಿ ಧನಾತ್ಮಕ ಚಿಂತನೆ ಉಂಟಾಗುತ್ತದೆ. ಸಿರೊಟೋನಿನ್ ಮತ್ತು ಬೀಟಾ ಎಂಡಾರ್ಫಿನ್ ಸ್ರವಿಸುವಿಕೆಯು ಸಮತೋಲಿತ ರೀತಿಯಲ್ಲಿ ಸಂಭವಿಸುತ್ತದೆ. ಇದರಿಂದಾಗಿ ನಮ್ಮ ಮನಸ್ಸಿನಲ್ಲಿ ದುಃಖ ದೂರವಾಗುತ್ತದೆ. ದೇಹದಲ್ಲಿ ಉತ್ಸಾಹ ತುಂಬುತ್ತದೆ. ಇದರಿಂದಾಗಿ ನಮ್ಮ ಮನಸ್ಸು ಸಕಾರಾತ್ಮಕ ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ತಿಲಕವನ್ನು ಹಚ್ಚುವುದರಿಂದ ತಲೆನೋವಿನ ಸಮಸ್ಯೆಯೂ ಕಡಿಮೆಯಾಗುತ್ತದೆ. ನಮ್ಮಲ್ಲಿ ಉತ್ಸಾಹ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಹಣೆಯ ಮೇಲೆ ತಿಲಕವು ಮನಸ್ಸನ್ನು ಸ್ಥಿರ ಮತ್ತು ಶಾಂತವಾಗಿಸುತ್ತದೆ. ಮೆದುಳು ಸಂಬಂಧಿತ ಕಾಯಿಲೆಗಳಾದ ಒತ್ತಡಗಳನ್ನು ದೂರ ಮಾಡುತ್ತದೆ. ಮೆದುಳು ನಮ್ಮ ಎರಡು ಹುಬ್ಬುಗಳ ನಡುವಿನ ಸುಷುಮ್ನಾ, ಇಡಾ ಮತ್ತು ಪಿಂಗಲ ನರಗಳ ಕೇಂದ್ರವಾಗಿದೆ. ಇದನ್ನು ದೈವಿಕ ಕಣ್ಣು ಅಥವಾ ಮೂರನೇ ಕಣ್ಣಿನಂತೆ ಪರಿಗಣಿಸಲಾಗಿದೆ. ಈ ಸ್ಥಳದಲ್ಲಿ ತಿಲಕವನ್ನು ಅನ್ವಯಿಸುವುದರಿಂದ ಅಜ್ಞಾಚಕ್ರವು ಜಾಗೃತಗೊಳ್ಳುತ್ತದೆ ಮತ್ತು ವ್ಯಕ್ತಿಯ ಶಕ್ತಿಯು ಹೆಚ್ಚಾಗುತ್ತದೆ. ಹಣೆಯ ಮೇಲೆ ನಿಯಮಿತವಾಗಿ ತಿಲಕವನ್ನು ಅನ್ವಯಿಸುವುದರಿಂದ ತಂಪು, ತಾಜಾತನ ಮತ್ತು ಶಾಂತಿಯ ಭಾವನೆಯನ್ನು ನೀಡುತ್ತದೆ. ಬುದ್ಧಿ ಚುರುಕಾಗುತ್ತದೆ.

ತಿಲಕ ಮತ್ತು ಅಕ್ಷತೆ

ತಿಲಕ ಮತ್ತು ಅಕ್ಷತೆ ಶುಭ ಸಂಕೇತವಾಗಿದೆ. ಹಣೆಗೆ ತಿಲಕ ಹಚ್ಚಿದ ಬಳಿಕ ಅಕ್ಕಿಯನ್ನು ತಲೆ ಮೇಲೆ ಹಾಕಲಾಗುತ್ತ್ತದೆ. ಈ ಅಕ್ಕಿಯನ್ನು ಅಕ್ಷತ್ ಎಂದೂ ಕರೆಯುತ್ತಾರೆ ಮತ್ತು ಅದು ಎಂದಿಗೂ ನಾಶವಾಗುವುದಿಲ್ಲ ಎಂದರ್ಥ. ಅದಕ್ಕಾಗಿಯೇ ಯಾವುದೇ ಕೆಲಸದ ಯಶಸ್ಸಿಗೆ ಅಕ್ಕಿಯನ್ನು ಬಳಸಲಾಗುತ್ತದೆ. ಅದಕ್ಕಾಗಿಯೇ ಅಕ್ಕಿಯನ್ನು ತಿಲಕದ ಅನಂತರ ಬಳಸಲಾಗುತ್ತದೆ. ಅಲ್ಲದೇ ಹಿಂದೂ ಧರ್ಮದಲ್ಲಿ ಅಕ್ಕಿಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Dina Bhavishya: ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡುವುವರ ಬಗ್ಗೆ ಎಚ್ಚರಿಕೆ ಇರಲಿ

ತಿಲಕವನ್ನು ಎಲ್ಲಿ ಇಡುವುದು?

ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಹಣೆಯ ಮೇಲೆ ತಿಲಕವನ್ನು ಅನ್ವಯಿಸಲಾಗುತ್ತದೆ ಎಂದು ನಮಗೆ ತಿಳಿದಿದೆ. ಆದರೆ ಅದು ಹಾಗಲ್ಲ. ಪೂಜೆಯಲ್ಲಿ ಬಳಸುವ ತಿಲಕವನ್ನು ತಲೆ, ಹಣೆ, ಕುತ್ತಿಗೆ, ಹೃದಯ, ಎರಡೂ ತೋಳುಗಳು, ಹೊಕ್ಕುಳ, ಬೆನ್ನು, ಎರಡೂ ಕಂಕುಳಗಳು ಸೇರಿದಂತೆ ದೇಹದ ಒಟ್ಟು 12 ಸ್ಥಳಗಳಲ್ಲಿ ಅನ್ವಯಿಸಲಾಗುತ್ತದೆ. ಆದರೆ ನಿತ್ಯ ಬಳಸುವ ತಿಲಕವನ್ನು ಹಣೆಯ ಮೇಲೆ ಮಾತ್ರ ಅನ್ವಯಿಸಬೇಕು. ಹಣೆಯ ಬಿಂದುವಿನ ಮೇಲೆ ಅಂದರೆ ಎರಡು ಹುಬ್ಬುಗಳ ನಡುವೆ ಅನ್ವಯಿಸಬಹುದು.

ತಿಲಕವನ್ನು ಹೇಗೆ ಅನ್ವಯಿಸಬೇಕು?

ನಂಬಿಕೆಗೆ ಸಂಬಂಧಿಸಿದ ಈ ತಿಲಕವನ್ನು ಅನ್ವಯಿಸಲು ಕೆಲವು ನಿಯಮಗಳನ್ನು ಮಾಡಲಾಗಿದೆ. ಅವುಗಳೆಂದರೆ ತಿಲಕವನ್ನು ಸ್ನಾನ ಮಾಡಿ ಶುದ್ಧ ವಸ್ತ್ರ ಧರಿಸಿದ ಬಳಿಕವೇ ಅನ್ವಯಿಸಬೇಕು.

Continue Reading

ಪ್ರಮುಖ ಸುದ್ದಿ

Tirupati Temple : ತಿರುಪತಿ ದೇಗುಲವನ್ನು ಹಿಂದೂ ನಂಬಿಕೆಯಂತೆ ಪವಿತ್ರಗೊಳಿಸುವೆ; ಸಿಎಂ ಚಂದ್ರಬಾಬು ನಾಯ್ಡು ಶಪಥ

Tirupati Temple : ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ಹಿಂದಿನ ಜಗನ್ ಮೋಹನ್ ರೆಡ್ಡಿ ಆಡಳಿತದ ಅವಧಿಯಲ್ಲಿ ವೆಂಕಟೇಶ್ವರ ದೇವಾಲಯದ ಮೇಲ್ವಿಚಾರಣೆ ನಡೆಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಲ್ಲಿ ಅಕ್ರಮಗಳು ನಡೆದಿವೆ. ತಿರುಮಲದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮತ್ತು ‘ಹಿಂದೂ ಧರ್ಮ’ವನ್ನು ರಕ್ಷಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

VISTARANEWS.COM


on

Tirupati Temple
Koo

ಬೆಂಗಳೂರು: ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚಂದ್ರಬಾಬು ನಾಯ್ಡು ಅವರು ಗುರುವಾರ ವಿಶ್ವ ಪ್ರಸಿದ್ಧ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ (Tirupati Temple) ಭೇಟಿ ನೀಡಿದರು. ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅವರು ಈ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥಿಸಿದಿರು. ಈ ವೇಳೆ ಅವಉ ತಿರುಪತಿ-ತಿರುಮಲ ಆಡಳಿತವನ್ನು ಹಿಂದೂಗಳ ನಂಬಿಕೆಯಂತೆ ಶುದ್ಧೀಕರಿಸುವ ಪ್ರತಿಜ್ಞೆ ಮಾಡಿದರು. ಮಾಜಿ ಸಿಎಂ ಜಗನ್ ಆಡಳಿತವನ್ನು ಅಪವಿತ್ರಗೊಳಿಸಿದ್ದರು ಎಂಬುದನ್ನು ಅವರು ಬೊಟ್ಟು ಮಾಡಿದರು.

ದೇವಸ್ಥಾನದಲ್ಲಿ ಪ್ರಾರ್ಥನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನಾಯ್ಡು, ಹಿಂದಿನ ಜಗನ್ ಮೋಹನ್ ರೆಡ್ಡಿ ಆಡಳಿತದ ಅವಧಿಯಲ್ಲಿ ವೆಂಕಟೇಶ್ವರ ದೇವಾಲಯದ ಮೇಲ್ವಿಚಾರಣೆ ನಡೆಸುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ನಲ್ಲಿ ಅಕ್ರಮಗಳು ನಡೆದಿವೆ. ತಿರುಮಲದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಮತ್ತು ‘ಹಿಂದೂ ಧರ್ಮ’ವನ್ನು ರಕ್ಷಿಸಲು ತಾನು ಬದ್ಧನಾಗಿದ್ದೇನೆ ಎಂದು ಹೇಳಿದರು.

ನಾನು ತಿರುಮಲದ ಆಡಳಿತವನ್ನು ಸನಾತನ ಸಂಸ್ಕೃತಿ ಪ್ರಕಾರ ಶುದ್ಧೀಕರಣವನ್ನು ಪ್ರಾರಂಭಿಸುತ್ತೇನೆ. ತಿರುಮಲವನ್ನು ಅಪವಿತ್ರಗೊಳಿಸುವುದು ಸ್ವೀಕಾರಾರ್ಹವಲ್ಲ. ತಿರುಮಲದಲ್ಲಿ ಗೋವಿಂದನ ನಾಮ ಜಪ ಮಾತ್ರ ಉಳಿಯುತ್ತದೆ. ಅನ್ಯರ ನಂಬಿಕೆಗಳು ತೊಲಗುತ್ತವೆ ಎಂದು ಅವರು ಹೇಳಿದರು.

ವ್ಯಾಪಾರೀಕರಣ ಇಲ್ಲ

ತಿರುಪತಿ ದೇವಸ್ಥಾನ ಹಿಂದೂ ಧಾರ್ಮಿಕ ನಂಬಿಕೆ ಕೇಂದ್ರ. ಹಿಂದಿನ ರಾಜ್ಯ ಸರ್ಕಾರವು ತಿರುಮಲ ತಿರುಪತಿ ದೇವಸ್ಥಾನವವನ್ನು ವ್ಯಾಪಾರೀಕರಣಗೊಳಿಸುತ್ತು ಎಂದು ಅವರು ಆರೋಪಿಸಿದರು.

ಇಲ್ಲಿನ ಪ್ರಸಾದ ಉತ್ತಮ ಗುಣಮಟ್ಟದ್ದಾಗಿರಬೇಕು. ಅನಗತ್ಯವಾಗಿ ದರ ಹೆಚ್ಚಿಸಬಾರದು ಮತ್ತು ದರ್ಶನದ ಟಿಕೆಟ್ ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಬಾರದು. ಹಿಂದಿನ ಆಡಳಿತ ಈ ಧಾರ್ಮಿಕ ಸ್ಥಳವನ್ನು ಗಾಂಜಾ, ಮದ್ಯ ಮತ್ತು ಮಾಂಸಾಹಾರಿ ಆಹಾರದ ಕೇಂದ್ರವನ್ನಾಗಿ ಪರಿವರ್ತಿಸಿದ್ದರು. ಹೀಗಾಗಿ ಶುದ್ಧೀಕರಣವು ಟಿಟಿಡಿಯಿಂದ ಪ್ರಾರಂಭವಾಗುತ್ತದೆ ಎಂದು ನಾಯ್ಡು ಪ್ರತಿಪಾದಿಸಿದರು.

ಇದನ್ನೂ ಓದಿ: Amit Shah: ತಮಿಳಿಸೈಗೆ ಅಮಿತ್ ಶಾ ಬೈಗುಳದ ವಿಡಿಯೋ; ವಿವಾದಕ್ಕೆ ತೆರೆ ಎಳೆದ ತಮಿಳುನಾಡು ಬಿಜೆಪಿ ನಾಯಕಿ

2047ರ ವೇಳೆಗೆ ತೆಲುಗು ಜನರು ವಿಶ್ವದಲ್ಲೇ ನಂಬರ್ ಒನ್ ಆಗಲಿದ್ದಾರೆ. ನಾನು ಆಂಧ್ರಪ್ರದೇಶವನ್ನು ದೇಶದ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತೇನೆ. ಅಪರಾಧವನ್ನು ಸಹಿಸುವುದಿಲ್ಲ. ಅಪರಾಧಗಳನ್ನು ಮಾಡಿದ ನಂತರ ಕೆಲವರು ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ರಾಜಕೀಯ ಪಿತೂರಿಗಳನ್ನು ಸಹಿಸುವುದಿಲ್ಲ. ನಾವು ಒಳ್ಳೆಯವರನ್ನು ರಕ್ಷಿಸುತ್ತೇವೆ” ಎಂದು ಟಿಡಿಪಿ ಮುಖ್ಯಸ್ಥರು ಹೇಳಿದರು.

ಪತ್ನಿ, ಮಗ ನಾರಾ ಲೋಕೇಶ್, ಸೊಸೆ ಮತ್ತು ಇತರ ಸಂಬಂಧಿಕರು ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಮುಖ್ಯಮಂತ್ರಿಗಳು ಗುರುವಾರ ಸಂಜೆ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿದರು. ನಂತರ ರಸ್ತೆ ಮಾರ್ಗ ಮೂಲಕ ತಿರುಮಲಕ್ಕೆ ಪ್ರಯಾಣಿಸಿದರು. ಅಲ್ಲಿ ಅವರು ರಾತ್ರಿ ಕಳೆದರು. ಗುರುವಾರ ಮುಂಜಾನೆ, ಅವರು ಪವಿತ್ರ ಬೆಟ್ಟದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.

Continue Reading
Advertisement
Elon Musk
ಪ್ರಮುಖ ಸುದ್ದಿ30 mins ago

Elon Musk: ಕೃತಕ ಬುದ್ಧಿಮತ್ತೆ ಬಳಸಿ ಇವಿಎಂಗಳ ಹ್ಯಾಕಿಂಗ್‌ ಸಾಧ್ಯ ಎಲಾನ್‌ ಮಸ್ಕ್‌; ಬಿಜೆಪಿ ನಾಯಕ ಟಾಂಗ್!‌

Shootout Case
ಪ್ರಮುಖ ಸುದ್ದಿ33 mins ago

Shootout Case: ಭೀಮಾ ತೀರದಲ್ಲಿ ಗುಂಡಿನ ದಾಳಿ; ರೌಡಿಶೀಟರ್‌ ಸ್ಥಳದಲ್ಲೇ ಸಾವು

kusina mane
ರಾಮನಗರ34 mins ago

Kusina Mane: ಗ್ರಾಮೀಣ ಮಹಿಳೆಯರ ಪಾಲಿಗೆ ವರದಾನವಾದ ಕೂಸಿನ ಮನೆ; ಮಕ್ಕಳ ದಾಖಲಾತಿ ಹೆಚ್ಚಳ

Job Alert
ಉದ್ಯೋಗ1 hour ago

Job Alert: ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್‌ನಲ್ಲಿದೆ 164 ಹುದ್ದೆ; ಆನ್‌ಲೈನ್‌ ಮೂಲಕ ಅಪ್ಲೈ ಮಾಡಿ

murder case in Bengaluru rural
ಬೆಂಗಳೂರು ಗ್ರಾಮಾಂತರ1 hour ago

Murder case : ತಾಯಿಗೆ ಚಿತ್ರಹಿಂಸೆ ನೀಡುತ್ತಿದ್ದ ಬಾಯ್‌ಫ್ರೆಂಡ್‌ನನ್ನು ಕೊಂದು ಮುಗಿಸಿದ ಮಗ

V Cinemas multiplex inauguration by dolly dhanjay Ramesh arvind
ಸ್ಯಾಂಡಲ್ ವುಡ್1 hour ago

V Cinemas: ರಮೇಶ್ ಅರವಿಂದ್ – ಡಾಲಿ ಧನಂಜಯರಿಂದ ‘ವಿ ಸಿನಿಮಾಸ್’ ಮಲ್ಟಿಪ್ಲೆಕ್ಸ್ ಉದ್ಘಾಟನೆ

Petrol Diesel Price
ರಾಜಕೀಯ1 hour ago

Petrol Diesel Price: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

Team India Coach
ಕ್ರೀಡೆ1 hour ago

Team India Coach: ಭಾರತ ತಂಡದ ಕೋಚ್​ ಆಗಿ ಗಂಭೀರ್​ ಆಯ್ಕೆ; ಶೀಘ್ರದಲ್ಲೇ ಅಧಿಕೃತ ಘೋಷಣೆ

murder Case
ಬೆಂಗಳೂರು ಗ್ರಾಮಾಂತರ2 hours ago

Murder Case : ಓವರ್‌ ಟೇಕ್‌ ವಿಷ್ಯಕ್ಕೆ ಯುವಕನ ಕೊಚ್ಚಿ ಕೊಂದ ದುಷ್ಕರ್ಮಿಗಳು; ಮಗನ ಶವ ಕಂಡು ತಂದೆ ಕಣ್ಣೀರು

R Ashok
ಕರ್ನಾಟಕ2 hours ago

R Ashok:‌ ದುಡ್ಡಿಗಾಗಿ ಕಾರ್ಪೊರೇಷನ್‌, ಯುಟಿಲಿಟಿ ಬಿಲ್ಡಿಂಗ್‌ ಅಡ ಇಡಲು ಸಿದ್ದರಾಮಯ್ಯ ಪ್ಲಾನ್; ಅಶೋಕ್‌ ಆರೋಪ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Vijayanagara News
ವಿಜಯನಗರ2 hours ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 day ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಟ್ರೆಂಡಿಂಗ್‌