Vashu Bhagnani: 'ಬೆಲ್ ಬಾಟಮ್' ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್! - Vistara News

ಸಿನಿಮಾ

Vashu Bhagnani: ‘ಬೆಲ್ ಬಾಟಮ್’ ಚಿತ್ರದ ನಿರ್ಮಾಪಕ ದಿವಾಳಿ; ಕಚೇರಿ ಕಟ್ಟಡ ಸೇಲ್!

ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳಿಂದ ಭಾರಿ ನಷ್ಟ ಅನುಭವಿಸಿದ್ದರಿಂದ 250 ಕೋಟಿ ರೂ. ಸಾಲವನ್ನು ಮರು ಪಾವತಿಸಲು ಬಾಲಿವುಡ್ ನ ಖ್ಯಾತ ಚಿತ್ರ ನಿರ್ಮಾಪಕ ವಶು ಭಗ್ನಾನಿ (Vashu Bhagnani) ಅವರು ತಮ್ಮ ಪೂಜಾ ಎಂಟರ್‌ಟೈನ್‌ಮೆಂಟ್‌ನ ಏಳು ಮಹಡಿಗಳ ಕಚೇರಿಯನ್ನು ಮಾರಾಟ ಮಾಡಿದ್ದಾರೆ.

VISTARANEWS.COM


on

Vashu Bhagnani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಲಿವುಡ್ ನ (Bollywood) ಖ್ಯಾತ ಚಿತ್ರ ನಿರ್ಮಾಪಕ (Producer) ವಶು ಭಗ್ನಾನಿ (Vashu Bhagnani) ಅವರು ತಮ್ಮ 250 ಕೋಟಿ ಸಾಲವನ್ನು ಪಾವತಿಸಲು ಪೂಜಾ ಎಂಟರ್‌ಟೈನ್‌ಮೆಂಟ್‌ನ (Pooja Entertainment) ಏಳು ಮಹಡಿಗಳ ಕಚೇರಿಯನ್ನು ಮಾರಾಟ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಫ್ಲಾಪ್ ಗಳಿಂದ ಪೂಜಾ ಎಂಟರ್‌ಟೈನ್‌ಮೆಂಟ್‌ ಭಾರೀ ನಷ್ಟ ಅನುಭವಿದೆ.

ವಶು ಭಗ್ನಾನಿ ಮಾರಾಟದಿಂದ ಪಡೆದ ಹಣದಿಂದ ಸಾಲವನ್ನು ತೀರಿಸುತ್ತಿದ್ದಾರೆ ಮತ್ತು ಪ್ರೊಡಕ್ಷನ್ ಹೌಸ್ ಶೇ. 80ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದೆ ಎನ್ನಲಾಗಿದೆ.

2021ರಲ್ಲಿ ಕೋವಿಡ್ ಸಾಂಕ್ರಾಮಿಕದ ಬಳಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರ ಬೆಲ್ ಬಾಟಮ್. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸೋತಿತು ಮತ್ತು ಮುಂದಿನ ಚಿತ್ರ ಮಿಷನ್ ರಾಣಿಗಂಜ್, ದೊಡ್ಡ ಬಜೆಟ್ ನ ಗಣಪತ್ ಪ್ರದರ್ಶನ ನೀಡಲು ವಿಫಲವಾದಾಗ ಕಂಪನಿಗೆ ಭಾರೀ ಹಿನ್ನಡೆಯಾಯಿತು. ಸ್ವಾಧೀನ ಒಪ್ಪಂದದ ಹೊರತಾಗಿಯೂ ನೆಟ್‌ಫ್ಲಿಕ್ಸ್‌ನಿಂದ ತಿರಸ್ಕರಿಸಲ್ಪಟ್ಟಿತು.

ಈ ಹೊತ್ತಿಗೆ ಕಂಪನಿಯ ನಷ್ಟವನ್ನು ಅನುಭವಿಸುತ್ತಿತ್ತು. ಬಡೇ ಮಿಯಾನ್ ಚೋಟೆ ಮಿಯಾನ್‌ನಲ್ಲಿನ ಅಗಾಧ ಹೂಡಿಕೆ ಮಾಡಿ ಸಂಪೂರ್ಣ ಕೈಸುಟ್ಟುಕೊಂಡಿತ್ತು.

Vashu Bhagnani


ಇಷ್ಟೊಂದು ನಷ್ಟದಲ್ಲಿದ್ದರೂ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯದ ಆಕ್ಷನ್ ಚಿತ್ರಕ್ಕೆ ಹಣ ಪಾವತಿಸುವುದಾಗಿ ಭರವಸೆಯನ್ನು ನೀಡಿದೆ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಈ ಚಿತ್ರದ ಐತಿಹಾಸಿಕ ವೈಫಲ್ಯವು ಕಂಪನಿಯನ್ನು ಬಹುತೇಕ ದುರ್ಬಲಗೊಳಿಸಿತು. ಅಪಾರ ಸಾಲವನ್ನು ತೀರಿಸಲು ಕಟ್ಟಡವನ್ನು ಮಾರಾಟ ಮಾಡದೆ ವಶುಗೆ ಬೇರೆ ದಾರಿ ಇರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Nisha Ravikrishnan:ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ʻಗಟ್ಟಿಮೇಳ’ ನಟಿ!

ಆರ್ಥಿಕ ಪರಿಸ್ಥಿತಿಯ ಹೊರತಾಗಿಯೂ ವಶು ಮತ್ತು ಅವರ ಮಗ ಜಾಕಿ ಭಗ್ನಾನಿ ಅವರು ತಮ್ಮ ಕಾರ್ಯಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ ಮತ್ತು ಅವರು ಮತ್ತೆ ಪುಟಿದೇಳಲು ಸಹಾಯ ಮಾಡುವ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಪ್ರೊಡಕ್ಷನ್ ಹೌಸ್‌ನ ಸಿಬ್ಬಂದಿಯೊಬ್ಬರು ಪೂಜಾ ಎಂಟರ್‌ಟೈನ್‌ಮೆಂಟ್‌ಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿದ ಒಂದು ದಿನದ ಅನಂತರ ಈ ಮಾಹಿತಿ ಹೊರಬಿದ್ದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Golden Star Ganesh Birthday:  ಈ ವರ್ಷವೂ ಬರ್ತ್​ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ ಗೋಲ್ಡನ್ ಸ್ಟಾರ್ ಗಣೇಶ್

Golden Star Ganesh Birthday:  ಗೋಲ್ಡನ್‌ ಸ್ಟಾರ್‌ ಗಣೇಶ್‌ ಮೂಲ ಹೆಸರು ಗಣೇಶ್‌ ಕಿಶಾನ್‌. ಇವರು ನಟ, ನಿರ್ದೇಶಕ, ನಿಮಾಪಕ ಮತ್ತು ಟಿವಿ ನಿರೂಪಕರಾಗಿ ಜನಪ್ರಿಯತೆ ಪಡೆದಿದ್ದಾರೆ. ಫಿಲ್ಮ್‌ ಫೇರ್‌ ಅವಾರ್ಡ್‌ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ತಮ್ಮ ಬರ್ತ್​ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

VISTARANEWS.COM


on

Golden Star Ganesh Birthday Not Celebrating His Birthday This Year
Koo

ಬೆಂಗಳೂರು: ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ತಮ್ಮ ಬರ್ತ್​ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.2019ರಲ್ಲಿ ನಟ ಗಣೇಶ್‌ ಅವರು ತನ್ನ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಕೆಲವು ವಾರಗಳ ಹಿಂದೆ ತಂದೆ ಅಗಲಿದ ಕಾರಣ ಹುಟ್ಟುಹಬ್ಬ ಕ್ಯಾನ್ಸಲ್‌ ಮಾಡಿಕೊಂಡಿದ್ದರು. 2021ರಲ್ಲೂ ಕೊರೊನಾದಿಂದ (Golden Star Ganesh Birthday) ಜಗತ್ತು ನೋವಿನಲ್ಲಿರುವ ಕಾರಣದಿಂದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಇದೀಗ ಗಣೇಶ್‌ ಅವರು ʻʻನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯನಿಲ್ಲ.ಆದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಗಣೇಶ್‌ ಪೋಸ್ಟ್‌ನಲ್ಲಿ ʻʻಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯವಿಲ್ಲ. ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ. ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಮುಂದಿನ ವರ್ಷ ಖಂಡಿತ ಒಟ್ಟಿಗೆ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ’ ಎಂದು ಬರೆದುಕೊಂಡಿದ್ದಾರೆ.

ಗೋಲ್ಡನ್‌ ಸ್ಟಾರ್‌ ಗಣೇಶ್‌ ಮೂಲ ಹೆಸರು ಗಣೇಶ್‌ ಕಿಶಾನ್‌. ಇವರು ನಟ, ನಿರ್ದೇಶಕ, ನಿಮಾಪಕ ಮತ್ತು ಟಿವಿ ನಿರೂಪಕರಾಗಿ ಜನಪ್ರಿಯತೆ ಪಡೆದಿದ್ದಾರೆ. ಫಿಲ್ಮ್‌ ಫೇರ್‌ ಅವಾರ್ಡ್‌ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಇದನ್ನೂ ಓದಿ: Samarjit Lankesh: ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅಭಿನಯದ `ಗೌರಿ’ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

ತ್ರಿಶೂಲ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಶಾಂತ್ ಜಿ ರುದ್ರಪ್ಪ ನಿರ್ಮಿಸಿರುವ, ಶ್ರೀನಿವಾಸರಾಜು ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಸಿನಿಮಾವು ಇದೇ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ.

2006ರ ಮುಂಗಾರು ಮಳೆ ಸಿನಿಮಾದ ಮೂಲಕ ಗಣೇಶ್‌ ಜನಪ್ರಿಯತೆ ಪಡೆದರು. ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ನಿರ್ಮಿಸಿದ ಸಿನಿಮಾವದು.

Continue Reading

ಸ್ಯಾಂಡಲ್ ವುಡ್

Actor Darshan: ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ; ಖಾಸಗಿ ಕಾರಿನಲ್ಲಿ ಕರೆದೊಯ್ದ ಪೊಲೀಸ್ ಸಿಬ್ಬಂದಿ

Actor Darshan: ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ ಕೊಟ್ಟಿದ್ದು, ಬಂಧಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ರಾಜಾತಿಥ್ಯ ನೀಡಿದೆ. ಸಾಮಾನ್ಯರು ಜೈಲಿಗೆ ಎಂಟ್ರಿ‌ ಕೊಡಬೇಕಾದರೆ ಹತ್ತಾರು ರೂಲ್ಸ್‌ ಹೇಳುತ್ತಾರೆ. ಅದೇ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಕಂಡಿಷನ್ ಇಲ್ಲವೆಂಬಂತಾಗಿದೆ.

VISTARANEWS.COM


on

Actor Darshan Family Jail Entry Police personnel taken in a private car
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್‌ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇದೀಗ ದರ್ಶನ್‌ ತಾಯಿ, ತಮ್ಮ, ಪತ್ನಿ , ಮಗ ಭೇಟಿ ಮಾಡಿದ್ದಾರೆ. ಆದರೀಗ ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ ಕೊಟ್ಟಿರುವುದು ತಿಳಿದು ಬಂದಿದೆ. ಹೀಗಾಗಿ ಸಾಮಾನ್ಯರಿಗೊಂದು ಕಾನೂನು ನಟ ದರ್ಶನ್ ಕುಟುಂಬಕ್ಕೆ ಒಂದು ಕಾನೂನು ಎನ್ನುವಂತಾಗಿದೆ.

ಖಾಸಗಿ ವಾಹನದಲ್ಲಿಯೇ ನಟ ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ ಕೊಟ್ಟಿದ್ದು, ಬಂಧಿಖಾನೆ ಇಲಾಖೆ ಕಾನೂನನ್ನು ಗಾಳಿಗೆ ತೂರಿ ರಾಜಾತಿಥ್ಯ ನೀಡಿದೆ. ಸಾಮಾನ್ಯರು ಜೈಲಿಗೆ ಎಂಟ್ರಿ‌ ಕೊಡಬೇಕಾದರೆ ಹತ್ತಾರು ರೂಲ್ಸ್‌ ಹೇಳುತ್ತಾರೆ. ಅದೇ ನಟ ದರ್ಶನ್ ಕುಟುಂಬಕ್ಕೆ ಮಾತ್ರ ಕಂಡಿಷನ್ ಇಲ್ಲವೆಂಬಂತಾಗಿದೆ.

ರಾಜಾರೋಷವಾಗಿ ನಟ ದರ್ಶನ್ ಕುಟುಂಬದವರಿಗೆ ಜೈಲು ಎಂಟ್ರಿ ನೀಡಲಾಗಿದೆ. ಮಾಧ್ಯಮಗಳ ಕಣ್ತಪ್ಪಿಸಿ ನಟ ದರ್ಶನ್ ಅವರನ್ನು ಕುಟುಂಬ ಭೇಟಿ ಮಾಡಿದೆ. ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ತಾಯಿ, ತಮ್ಮ ಪತ್ನಿ ಮಗ ಎಂಟ್ರಿ ಕೊಟ್ಟರು. ಹತ್ತು ಗಂಟೆ ಸುಮಾರಿಗೆ ಕುಟುಂಬ ಜೈಲಿಗೆ ಬಂದಿತ್ತು. ಪರಪ್ಪನ ಅಗ್ರಹಾರ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಉದಯ್ ದರ್ಶನ್ ಭೇಟಿಗೆ ಕರೆದೊಯ್ದರು. ಉದಯ್‌ ಅವರು ಕಳೆದ ಸೋಮವಾರ ಸಹ ಮಾಧ್ಯಮಗಳ ಕಣ್ತಪ್ಪಿಸಿ ಪತ್ನಿ ಮಗನನ್ನು ಕರೆದೊಯ್ದಿದ್ದರು. ಇಂದು ಕೂಡ ಖಾಸಗಿ ಕಾರಿನಲ್ಲಿ ಉದಯ್‌ ಕುಟುಂಬವನ್ನು ಕರೆದೊಯ್ದಿದ್ದಾರೆ.

ಇದನ್ನೂ ಓದಿ: Actor Darshan: ದರ್ಶನ್ ನನ್ನ ಮಗು, ಆತ ಕೊಟ್ಟ ಕೊಡುಗೆ ಕಡೆ ನೋಡೋಣ ಎಂದ ಹಂಸಲೇಖ!

ದರ್ಶನ್‌ ತನ್ನ ಕುಟುಂಬದವರ ಜೊತೆಗೆ ಕೂಡ ಸುಮಧುರ ಬಾಂಧವ್ಯ ಹೊಂದಿಲ್ಲ. ಸಹೋದರ ದಿನಕರ್‌ ಮೇಲೆ ಆತ ಈ ಹಿಂದೆ ಹಲ್ಲೆ ನಡೆಸಿದ್ದಿದೆ. ತಾಯಿ ಮೀನಾ ಅವರ ಮಾತು ಕೂಡ ಕೇಳಿಸಿಕೊಳ್ಳದೆ ಪುಂಡಾಟ ಮಾಡಿದ ಉದಾಹರಣೆ ಇದೆ. ಆದರೂ, ಮನೆಯವರು ಬಂದರೆ ಮಾತ್ರ ಒಳಗೆ ಬಿಡಿ ಎಂದು ದರ್ಶನ್‌ ಜೈಲು ಸಿಬ್ಬಂದಿಗೆ ತಿಳಿಸಿದ್ದಾನೆ.

ಜೈಲೂಟ ಒಗ್ಗದೆ ಇದ್ದರೂ ವಿಧಿಯಿಲ್ಲದೆ ಜೈಲೂಟ ಸವಿಯುತ್ತಿರುವ ದರ್ಶನ್ ಇಂದು ಜೈಲಿನ ಮೆನುವಿನಂತೆ ಉಪ್ಪಿಟ್ಟು ಸೇವಿಸಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಲಿದ್ದು, ದರ್ಶನ್‌ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮಡದಿ ಮಗ ಆಗಮಿಸಿದ್ದರು. ಅವರು ಬಂದು ಹೋದ ದಿನ ಖುಷಿಯಾಗಿದ್ದ ದರ್ಶನ್‌, ಬಳಿಕ ಮತ್ತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಹ ಬಂಧಿಗಳ ಜೊತೆ ಬೆರೆಯದೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾನೆ.

ದರ್ಶನ್‌ ಭೇಟಿ ಮಾಡಿದ ರಕ್ಷಿತಾ- ಪ್ರೇಮ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ರನ್ನು (Actor Darshan) ಕೆಲ ಆಪ್ತರು ಭೇಟಿ ಮಾಡುತ್ತಿದ್ದಾರೆ. ಈ ನಡುವೆ ನಟಿ ರಕ್ಷಿತಾ, ಪ್ರೇಮ್ ದಂಪತಿ ಶನಿವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ಬಳಿಕ ಪ್ರಕರಣದ ಬಗ್ಗೆ ರಕ್ಷಿತಾ, ಪ್ರೇಮ್ ದಂಪತಿ ಬೇಸರ ಹೊರಹಾಕಿದ್ದು, ಇಂತಹ ಪ್ರಕರಣ ನಡೆಯಬಾರದಿತ್ತು ಎಂದು ಹೇಳಿದ್ದಾರೆ.

ನಟ ದರ್ಶನ್ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ನಟಿ ರಕ್ಷಿತಾ, ಈ ಘಟನೆ ನಡೆದಿರುವುದು ದುರಾದೃಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ ಎಂದು ಹೇಳಿದರು.

ನಿರ್ದೇಶಕ ಜೋಗಿ ಪ್ರೇಮ್ ಪ್ರತಿಕ್ರಿಯಿಸಿ, ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಈ ಸಂದರ್ಭದಲ್ಲಿ ಪ್ರಕರಣದ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಹೇಳಿ, ಜೈಲಿನಲ್ಲಿ ದರ್ಶನ್ ಜತೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.

Continue Reading

ಸ್ಯಾಂಡಲ್ ವುಡ್

Actor Darshan: ದರ್ಶನ್ ನನ್ನ ಮಗು, ಆತ ಕೊಟ್ಟ ಕೊಡುಗೆ ಕಡೆ ನೋಡೋಣ ಎಂದ ಹಂಸಲೇಖ!

Actor Darshan: ಇಷ್ಟು ದಿನವೂ ದರ್ಶನ್‌ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇಂದಾದರೂ ಅವರು ಆಗಮಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ. ಚಿತಾ ರಾಮ್, ರಕ್ಷಿತಾ, ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ದರ್ಶನ್ ಪರ ನಿಂತಿದ್ದಾರೆ. ಈಗ ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Actor Darshan is like my son says hamsalekha
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್‌ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್‌ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇಂದಾದರೂ ಅವರು ಆಗಮಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ. ರಚಿತಾ ರಾಮ್, ರಕ್ಷಿತಾ, ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ದರ್ಶನ್ ಪರ ನಿಂತಿದ್ದಾರೆ. ಈಗ ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹಂಸಲೇಖ ಮಾತನಾಡಿ ʻʻನಾವು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷ ಇದೆಯಲ್ಲ ಅದನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್‌ . ದ್ವೇಷ ಅಂದರೆ ಅದು ಕ್ಯಾರೆಕ್ಟರ್ ಅಯ್ಯ. ಆತರ ಸಿನಿಮಾದಲ್ಲಿ ತೋರಿಸಬೇಕಷ್ಟೆ ನಾವು. ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಅನ್ನು ತರಬಾರದು. ಇದು ಕಲಾವಿದರ ಕರ್ತವ್ಯ.” ಎಂದು ಹಂಸಲೇಖ ಹೇಳಿದ್ದಾರೆ.

“ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ನನ್ನ ಮಗು ತಪ್ಪು ಮಾಡಿದ್ದರೆ, ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನಾನು ನೋವು ತಿನ್ನುತ್ತೀನಿ. ಆ ಮಗು ಕೂಡ ಅಷ್ಟೇ ನೋವು ತಿನ್ನುತ್ತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ನೋಡೋಣ.” ಎಂದು ದರ್ಶನ್ ಜೈಲು ಸೇರಿರುವ ಬಗ್ಗೆ ಹಂಸಲೇಖ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Actor Darshan: ಇಂದಾದ್ರೂ ಭೇಟಿಗೆ ಬರ್ತಾರಾ ದರ್ಶನ್‌ ಅಮ್ಮ, ತಮ್ಮ?

ಕನ್ನಡ ಚಿತ್ರರಂಗದ ನಷ್ಟದ ಹಾದಿ ಹಿಡಿದಿರುವ ಬಗ್ಗೆನೂ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ. “ಚಂದನವನ ಎಷ್ಟು ಕೀರ್ತಿಯನ್ನು ಗಳಿಸಿತು. ಎಷ್ಟು ಪ್ರಶಸ್ತಿಗಳು. ಎಷ್ಟು ರಾಷ್ಟ್ರ ಪ್ರಶಸ್ತಿಗಳು. ಎಷ್ಟು ಗೌರವ. ಎಂತಹ ಪ್ರತಿಭಾವಂತರು ಹುಟ್ಟಿ ಬೆಳೆದಿದ್ದಾರೆ. ಅಂದರೆ, ಆ ಎತ್ತರಕ್ಕೆ ಏರಿದ್ದಾರೆ. ಆ ಎತ್ತರಕ್ಕೆ ಹೋದ ಮೇಲೆ ಅಲ್ಲಿಂದ ಕೆಳಗೆ ಬೀಳಬೇಕಾಗುತ್ತೆ. ಹಾಗಾಗುವುದು ಬೇಡ. ಅಲ್ಲಿಂದ ಬಿದ್ದ ಕೂಡಲೇ ಅಲ್ಲಿಂದ ಮತ್ತೆ ಏಳುವ ಚಾನ್ಸ್ ಇದೆ.” ಎಂದು ಹಂಸಲೇಖ ಚಿತ್ರರಂಗದ ಬಗ್ಗೆ ಹೇಳಿದ್ದಾರೆ.

ಜೈಲೂಟ ಒಗ್ಗದೆ ಇದ್ದರೂ ವಿಧಿಯಿಲ್ಲದೆ ಜೈಲೂಟ ಸವಿಯುತ್ತಿರುವ ದರ್ಶನ್ ಇಂದು ಜೈಲಿನ ಮೆನುವಿನಂತೆ ಉಪ್ಪಿಟ್ಟು ಸೇವಿಸಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಲಿದ್ದು, ದರ್ಶನ್‌ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮಡದಿ ಮಗ ಆಗಮಿಸಿದ್ದರು. ಅವರು ಬಂದು ಹೋದ ದಿನ ಖುಷಿಯಾಗಿದ್ದ ದರ್ಶನ್‌, ಬಳಿಕ ಮತ್ತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಹ ಬಂಧಿಗಳ ಜೊತೆ ಬೆರೆಯದೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾನೆ.

Continue Reading

ಸ್ಯಾಂಡಲ್ ವುಡ್

Rakshak Bullet: ಅಜ್ಜಿ-ತಂದೆಯ ಸಮಾಧಿ ತೊಳೆದು ವಿಶೇಷ ವಿಡಿಯೊ ಮಾಡಿದ ರಕ್ಷಕ್ ಬುಲೆಟ್

Rakshak Bullet: ಸುದೀಪ್‌ ಬಗ್ಗೆ ಹೇಳಿಕೆಯಿಂದಾಗಿ (Rakshak Bullet) ಟ್ರೋಲ್‌ ಆಗಿ ಕ್ಷಮೆಯೂ ಕೇಳಿದ್ದರು. ಆಗಾಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಉತ್ತಲೇ ಇರುತ್ತಾರೆ. ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಂದೆ ಬುಲೆಟ್ ಪ್ರಕಾಶ್ ಹಾಗೂ ಅಜ್ಜಿ ಗೌರಮ್ಮ ಅವರ ಸಮಾಧಿಯನ್ನು ತೊಳೆದಿದ್ದಾರೆ.

VISTARANEWS.COM


on

Rakshak Bullet Washed His Father grave
Koo

ಬೆಂಗಳೂರು: ಬಿಗ್‌ಬಾಸ್ʼ ಕನ್ನಡ ಸೀಸನ್‌ 10ರಲ್ಲಿ (BBK SEASON 10) ನಟ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್‌ ಬುಲೆಟ್‌ ಒಂದು ತಿಂಗಳ ಕಾಲ ಬಿಗ್‌ಬಾಸ್‌ನಲ್ಲಿದ್ದು ಎಲಿಮಿನೇಟ್‌ ಆಗಿಯೂ ಹೊರಬಂದಿದ್ದರು. ಸುದೀಪ್‌ ಬಗ್ಗೆ ಹೇಳಿಕೆಯಿಂದಾಗಿ (Rakshak Bullet) ಟ್ರೋಲ್‌ ಆಗಿ ಕ್ಷಮೆಯೂ ಕೇಳಿದ್ದರು. ಆಗಾಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಉತ್ತಲೇ ಇರುತ್ತಾರೆ. ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಂದೆ ಬುಲೆಟ್ ಪ್ರಕಾಶ್ ಹಾಗೂ ಅಜ್ಜಿ ಗೌರಮ್ಮ ಅವರ ಸಮಾಧಿಯನ್ನು ತೊಳೆದಿದ್ದಾರೆ.

ವಿಡಿಯೊದಲ್ಲಿ ರಕ್ಷಕ್‌ ಮಾತನಾಡಿ ʻʻಈ ಜಾಗ ನನಗೆ ಒಂಥರ ಸ್ಪೆಷಲ್‌. ಯಾಕಂದರೆ ನನಗೆ ಎಷ್ಟೇ ಖುಷಿ , ಬೇಜಾರು ಆದರೂ ಇಲ್ಲಿ ಬಂದು 5 ನಿಮಿಷ ಕೂತು ನನ್ನ ಮನಸಲ್ಲಿ ಇರೋದು ಹೇಳ್ಕೊಂಡಾಗ ತುಂಬ ಖುಷಿ ಆಗುತ್ತೆ. ನೆಮ್ಮದಿ ಕೂಡ ಆಗತ್ತೆ. ನಾವು ಕ್ಲೀನ್ ಆಗಿದ್ದಂತೆ, ಇವರು ಕ್ಲೀನ್ ಆಗಿರಬೇಕು. ಹೀಗಾಗಿ, ವಾರಕ್ಕೆ ಒಮ್ಮೆ ಬಂದು ಇಲ್ಲಿ ಸಮಾಧಿ ತೊಳೆದು ಹೋಗುತ್ತೇನೆ. ಎಲ್ಲರೂ ಕೇಲ್ತಾರೆ 3 ವರ್ಷದಲ್ಲಿ ರಕ್ಷಕ್‌ ಹೆಂಗೆ ಬೇಳೆದುಬಿಟ್ಟ ಅಂತ. ಈ ಮೂರು ವರ್ಷದ ಹಿಂದೆ ಶ್ರಮ ಇದೆ. ನಮ್ಮ ಅಜ್ಜಿ, ತಂದೆನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದೇನೆ. ಮಗು ರೀತಿ ನೋಡಿಕೊಂಡಿದ್ದೇನೆ. ಊದಿನಕಡ್ಡಿ ಹಚ್ಚಿ, ಅವರಿಷ್ಟದ ತಿಂಡಿನ ಇಟ್ಟು ಹೋಗುತ್ತೇನೆ. ನಮಸ್ಕಾರ ಮಾಡಿ ಹೋಗುತ್ತೇನೆ. ದೊಡ್ಡವರ ಆಶೀರ್ವಾದ ಇದ್ದರೆ ಬೆಳೆಯುತ್ತೀರಾ. ದೊಡ್ಡವರ ಆಶೀರ್ವಾದವೇ ಇದಕ್ಕೆ ಕಾರಣ’ ಎಂದಿದ್ದಾರೆ ರಕ್ಷಕ್.

ಇದನ್ನೂ ಓದಿ: Rakshak Bullet: ಇನ್ಮುಂದೆ ನಂದೇ ರೌಂಡು, ನಂದೇ ಸೌಂಡು ಎಂದ ಮರಿ ಬುಲೆಟ್‌!

ಈಗ ಅವರು ಹಂಚಿಕೊಂಡಿರೋ ಈ ವಿಡಿಯೋಗೆ ಎಲ್ಲ ಕಡೆಗಳಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಸುದೀಪ್‌ ವಿಚಾರವಾಗಿ ಸುದ್ದಿಯಾಗಿದ್ದ ರಕ್ಷಕ್‌

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ʻʻಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆʼʼಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್‌ ಫ್ಯಾನ್ಸ್‌ ಕೂಡ ರಕ್ಷಕ್‌ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಅದರಂತೆ ರಕ್ಷಕ್‌ ಕ್ಷಮೆ ಕೇಳಿದ್ದರು.

ರಕ್ಷಕ್‌ ಹೇಳಿದ್ದೇನು?

ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ರಕ್ಷಕ್‌ ಅವರು ಮಾತನಾಡಿʻʻ ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲುವುದಿಲ್ಲ. ಸುದೀಪ್‌ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಎನ್ನುವ ಥರ ಎಲ್ಲರೂ ಇರ್ತಾರೆ” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿತ್ತು.

Continue Reading
Advertisement
National Doctor’s Day
ಆರೋಗ್ಯ3 seconds ago

National Doctor’s Day: ಇಂದು ರಾಷ್ಟ್ರೀಯ ವೈದ್ಯರ ದಿನ; ಕಾಳಜಿಯ ಕೈಗಳಿಗೆ ಕೃತಜ್ಞತೆ ಹೇಳುವ ದಿನ

hassan murder case
ಕ್ರೈಂ9 mins ago

Murder Case: ಎಸ್‌ಪಿ ಕಚೇರಿ ಆವರಣದಲ್ಲೇ ಪತ್ನಿಯನ್ನು ಇರಿದು ಕೊಂದ ಪೊಲೀಸ್ ಕಾನ್‌ಸ್ಟೇಬಲ್

Golden Star Ganesh Birthday Not Celebrating His Birthday This Year
ಸ್ಯಾಂಡಲ್ ವುಡ್9 mins ago

Golden Star Ganesh Birthday:  ಈ ವರ್ಷವೂ ಬರ್ತ್​ಡೇ ಆಚರಿಸಿಕೊಳ್ಳದಿರಲು ನಿರ್ಧರಿಸಿದ ಗೋಲ್ಡನ್ ಸ್ಟಾರ್ ಗಣೇಶ್

ICC Team of the Tournament
ಪ್ರಮುಖ ಸುದ್ದಿ12 mins ago

ICC Team of the Tournament : ಐಸಿಸಿ ಟೀಮ್​ ಆಫ್​​ ದಿ ಟೂರ್ನಮೆಂಟ್​ನಲ್ಲಿ ಆರು ಭಾರತೀಯರು​; ಕೊಹ್ಲಿಗಿಲ್ಲ ಚಾನ್ಸ್​

Job Alert
ಉದ್ಯೋಗ32 mins ago

Job Alert: HCLನಲ್ಲಿ ಖಾಲಿ ಇರುವ 56 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಮಾಸಿಕ ವೇತನ 1 ಲಕ್ಷ ರೂ.ವರೆಗೆ: ಇಂದೇ ಅಪ್ಲೈ ಮಾಡಿ

murder case
ಬೆಂಗಳೂರು40 mins ago

Murder Case : ರೌಡಿಯಾಗಲು ಹೊರಟವನನ್ನು ಕೊಂದು ಹಾಕಿದ್ರು ಪುಂಡರು

Viral News
ವೈರಲ್ ನ್ಯೂಸ್43 mins ago

Viral News: ನೀರ ಬಿಟ್ಟು ರಸ್ತೆಗೆ ಬಂದ ಮೊಸಳೆಗೆ ಇಲ್ಲೇನು ಕೆಲಸ? ಅಪರೂಪದ Video ಇಲ್ಲಿದೆ ನೋಡಿ

Dinesh Karthik
ಕ್ರಿಕೆಟ್45 mins ago

Dinesh Karthik : ಆರ್​​ಸಿಬಿ ಬ್ಯಾಟಿಂಗ್ ಕೋಚ್​, ಮಾರ್ಗದರ್ಶಕರಾಗಿ ದಿನೇಶ್​ ಕಾರ್ತಿಕ್ ನೇಮಕ

Actor Darshan Family Jail Entry Police personnel taken in a private car
ಸ್ಯಾಂಡಲ್ ವುಡ್49 mins ago

Actor Darshan: ದರ್ಶನ್ ಕುಟುಂಬ ಜೈಲಿಗೆ ಎಂಟ್ರಿ; ಖಾಸಗಿ ಕಾರಿನಲ್ಲಿ ಕರೆದೊಯ್ದ ಪೊಲೀಸ್ ಸಿಬ್ಬಂದಿ

Dengue fever rises across the state including Bengaluru BBMP Commissioner also get fever
ಪ್ರಮುಖ ಸುದ್ದಿ56 mins ago

Dengue Fever: ರಾಜಧಾನಿಯಲ್ಲಿ ಡೆಂಗ್ಯು ಜ್ವರಕ್ಕೆ ಒಂದು ಬಲಿ, ರಾಜ್ಯದಲ್ಲಿ ಸಾವಿನ ಸಂಖ್ಯೆ 6ಕ್ಕೆ ಏರಿಕೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ18 hours ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು23 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ4 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

ಟ್ರೆಂಡಿಂಗ್‌