Actor Darshan : ಶಂಖ ಊದುತ್ತ, ಜಾಗಟೆ ಬಾರಿಸುತ್ತ ದರ್ಶನ್‌ ಭೇಟಿಗೆ ಬಂದ ವಿಶೇಷ ಚೇತನ ಅಭಿಮಾನಿ! - Vistara News

ಸ್ಯಾಂಡಲ್ ವುಡ್

Actor Darshan : ಶಂಖ ಊದುತ್ತ, ಜಾಗಟೆ ಬಾರಿಸುತ್ತ ದರ್ಶನ್‌ ಭೇಟಿಗೆ ಬಂದ ವಿಶೇಷ ಚೇತನ ಅಭಿಮಾನಿ!

Actor Darshan: ಭಾನುವಾರ ರಜೆ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಯಾಗುವ ಅವಕಾಶ ಇರುವುದಿಲ್ಲ. ಹೀಗಿದ್ದರೂ ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಹಾಗೂ ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್‌ ನೋಡಲು ಬಂದಿದ್ದಾರೆ.

VISTARANEWS.COM


on

Actor Darshan in Parappana Agrahara Jail special fan who came to visit
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Actor Darshan ) ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತಿದ್ದಾರೆ. ಹಲವು ಅಭಿಮಾನಿಗಳು ದರ್ಶನ್​ರನ್ನು ಭೇಟಿಯಾಗಲು ಪ್ರತಿನಿತ್ಯ ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೇವಲ ಕುಟುಂಬ ಸದಸ್ಯರಿಗೆ ಹಾಗೂ ವಕೀಲರಿಗಷ್ಟೆ ಅವಕಾಶ ನೀಡಲಾಗಿದೆ. ಭಾನುವಾರ ರಜೆ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಯಾಗುವ ಅವಕಾಶ ಇರುವುದಿಲ್ಲ. ಹೀಗಿದ್ದರೂ ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಹಾಗೂ ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್‌ ನೋಡಲು ಬಂದಿದ್ದಾರೆ.

ಇಂದು ಭಾನುವಾರ ಆದ ಕಾರಣ ದರ್ಶನ್‌ ಭೇಟಿಗೆ ಯಾರಿಗೂ ಅವಕಾಶ ಇಲ್ಲ. ಆದರೂ ನಟ ದರ್ಶನ್ ಭೇಟಿಗೆ ವಿಶೇಷ ಚೇತನ ಆಗಮಿಸಿದ್ದರು, ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಕಿವಿ ಕೇಳಿಸದಿದ್ದರು ಶಂಖ ಊದುತ್ತಾ, ಜಾಗಟೆ ಬಾರಿಸುತ್ತ ಜೈಲಿನ ಬಳಿ ಬಂದಿದ್ದರು. ತುರುವೆಕೆರೆಯ ಜಡಿಯೊ ಗ್ರಾಮದ ವಿಶೇಷ ಚೇತನ ಅಭಿಮಾನಿಯಾಗಿದ್ದಾರೆ. ʻʻನಟ ದರ್ಶನ್ ಒಳ್ಳೆಯ ವ್ಯಕ್ತಿ. ಅಂತಹವರನ್ನು ಜೈಲಿನಲ್ಲಿಟ್ಟರೆ ಸಿನಿ ಕಾರ್ಮಿಕರು, ನಿರ್ಮಾಪಕರಿಗೆ ತೊಂದರೆ. ಅವ್ರು ತಪ್ಪು ಮಾಡಿರಬಹುದು. ಆದರೆ ನಟ ದರ್ಶನ್ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡಬೇಕು. ದರ್ಶನ್ ಬಿಡುಗಡೆಗಾಗಿ ಗೃಹ ಮಂತ್ರಿ ಜಿ ಪರಮೇಶ್ವರ ಭೇಟಿಗೆ ಹೋಗಿದ್ದೆ. ಆದರೆ ಅವರು ಸಿಗಲಿಲ್ಲʼʼ ಎಂದು ವಿಶೇಷ ಚೇತನ ಅಭಿಮಾನಿ ಗೋವಿಂದ ರಾಜು ಹೇಳಿಕೆ ನೀಡಿದರು.

ಇದನ್ನೂ ಓದಿ: Actor Darshan: ಎಲ್ಲಾ ಹಣೆಬರಹ ಸ್ವಾಮಿ ಏನು ಮಾಡೋದು? ದರ್ಶನ್‌ ಕೇಸ್‌ ಬಗ್ಗೆ ಶಿವಣ್ಣ ಮಾತು!

ಇನ್ನು ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್ ನೋಡಲು ಆಗಮಿಸಿದ್ದರು. ತಿಂಗಳಿಗೆ ಒಮ್ಮೆ ದರ್ಶನ್ ಅಣ್ಣನ ಭೇಟಿ ಮಾಡುತ್ತಿದ್ದೆ ಆದರೆ ಈಗ ಜೈಲಿನಲ್ಲಿ ಇದ್ದಾರೆ. ಹಾಗಾಗಿ ನೋಡಲು ಬಂದೆ. ನಮ್ ಬಾಸ್ ಒಳ್ಳೆಯ ಕೆಲಸಗಳನ್ನು ಜನರಿಗೆ ಮಾಡುತ್ತಿದ್ದರು. ಈಗ ಅವರು ಜೈಲಿನಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ತಂದೆ ತಾಯಿ‌ ಬಿಟ್ರೆ ದರ್ಶನ್ ನನಗೆ ದೇವರುʼʼಎಂದಿದ್ದಾರೆ.

ದರ್ಶನ್ ಭೇಟಿ ಮಾಡಬೇಕೆಂದು ಅಭಿಮಾನಿಯೊಬ್ಬ ರಂಪಾಟವಾಡಿರುವುದು ಕಂಡುಬಂದಿದೆ. ಜೈಲ್ ಚೆಕ್ ಪೋಸ್ಟ್ ಬಳಿ ರಸ್ತೆಯಲ್ಲಿ ಕುಳಿತ ಅಭಿಮಾನಿ, ದರ್ಶನ್ ನೋಡಬೇಕೆಂದು ಕಣ್ಣೀರು ಹಾಕಿದ್ದಾನೆ. ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿ, ದರ್ಶನ್ ನೋಡಲೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಆತನನ್ನು ಮನವೊಲಿಸಲು ಪೊಲೀಸರು ಹೈರಾಣಾದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Sumalatha Ambareesh: ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇರಲಿ ; ದರ್ಶನ್​ ಬಗ್ಗೆ ಸುಮಲತಾ ಅಂಬರೀಶ್‌​ ಮೊದಲ ಪ್ರತಿಕ್ರಿಯೆ

Sumalatha Ambareesh: ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ರಿಯಾಕ್ಷನ್‌ ಮಾಡಿಲ್ಲ ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇದೀಗ . ಈಗ ಇದೇ ಮೊದಲ ಬಾರಿಗೆ ದರ್ಶನ್​ (Darshan) ಬಂಧನದ ಬಗ್ಗೆ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ, ನನ್ನ ಬಳಿ ಯಾವುದೇ ಸತ್ಯ ಅಥವಾ ಮಾಹಿತಿಯಿಲ್ಲದೆ ನಾನು ಅಸಡ್ಡೆಯ, ಅನಗತ್ಯ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ ಎಂದಿದ್ದಾರೆ.

VISTARANEWS.COM


on

Sumalatha Ambareesh First Reaction To Darshan Arrest And Renuka Swamy Murder Case
Koo

ನಟಿ, ಮಾಜಿ ಸಂಸದೆ ಸುಮಲತಾ ಅಂಬರೀಶ್‌​ (Sumalatha Ambareesh) ಅವರ ಕುಟುಂಬದ ಜೊತೆ ದರ್ಶನ್​ ಅವರಿಗೆ ಆಪ್ತತೆ ಇದೆ. ರೇಣುಕಾ ಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಲತಾ ಅವರು ರಿಯಾಕ್ಷನ್‌ ಮಾಡಿಲ್ಲ ಎಂಬ ಸುದ್ದಿ ಸಾಕಷ್ಟು ಚರ್ಚೆಯಾಗಿತ್ತು. ಇದೀಗ . ಈಗ ಇದೇ ಮೊದಲ ಬಾರಿಗೆ ದರ್ಶನ್​ (Darshan) ಬಂಧನದ ಬಗ್ಗೆ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸುಮಲತಾ ಪೋಸ್ಟ್‌ನಲ್ಲಿ ʻʻ ನಾನು 44 ವರ್ಷಗಳಿಂದ ನಟಿಯಾಗಿ, ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ ಮತ್ತು ಕಳೆದ 5 ವರ್ಷಗಳಿಂದ ಸಂಸದೆಯಾಗಿದ್ದೆ. ಅಲ್ಲದೇ, ನಾನು ಕಲಾವಿದೆಯಾಗಿ, ಪತ್ನಿಯಾಗಿ ಮತ್ತು ತಾಯಿಯಾಗಿ ಅಥವಾ ಸಂಸದೆಯಾಗಿ ಮತ್ತು ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ, ನನ್ನ ಬಳಿ ಯಾವುದೇ ಸತ್ಯ ಅಥವಾ ಮಾಹಿತಿಯಿಲ್ಲದೆ ನಾನು ಅಸಡ್ಡೆಯ, ಅನಗತ್ಯ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ.

ಇಂದು ನಾನು ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಲು, ನನ್ನ ಆಲೋಚನೆಗಳು ಮತ್ತು ನೋವನ್ನು ಹಂಚಿಕೊಳ್ಳಲು ಪೋಸ್ಟ್ ಮಾಡುತ್ತಿದ್ದೇನೆ ಏಕೆಂದರೆ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹೆಚ್ಚಿನ ಊಹಾಪೋಹಗಳನ್ನು ಪ್ರೋತ್ಸಾಹಿಸಲು ಅಥವಾ ನನ್ನ ನಿಲುವಿನ ಬಗ್ಗೆ ಅಭಿಮಾನಿಗಳಲ್ಲಿ ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡಲು ನಾನು ಬಯಸುವುದಿಲ್ಲ.

ನ್ಯಾಯ ದೊರಕಲಿ

ನಾನು ಮೊದಲಿಗೆ ತಮ್ಮ ಮಗ ಮತ್ತು ಪತಿಯನ್ನು ಹೃದಯವಿದ್ರಾವಕ ರೀತಿಯಲ್ಲಿ ಕಳೆದುಕೊಂಡಿರುವ ರೇಣುಕಾಸ್ವಾಮಿ ಅವರ ಹೆತ್ತವರು ಮತ್ತು ಪತ್ನಿಗೆ ನನ್ನ ಸಂತಾಪವನ್ನು ಸೂಚಿಸುತ್ತೇನೆ ಮತ್ತು ಈ ದುರಂತವನ್ನು ಎದುರಿಸಲು ಮತ್ತು ಆ ನೋವನ್ನು ಭರಿಸಲು ಶಕ್ತಿಯನ್ನು ದೇವರು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನಮ್ಮ ಕಾನೂನು ವ್ಯವಸ್ಥೆಯಿಂದ ಅವರಿಗೆ ಸಿಗಬೇಕಾದ ನ್ಯಾಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.

ಇದನ್ನೂ ಓದಿ: Sumalatha Ambareesh : ಬಿಜೆಪಿಗೆ ಸೇರ್ಪಡೆಗೊಂಡರೂ ಪ್ರಚಾರಕ್ಕೆ ಇಳಿಯದ ಸುಮಲತಾ!

ಈ ಘಟನೆಯು ನನ್ನ ಹೃದಯವನ್ನು ಛಿದ್ರಗೊಳಿಸಿತು ಮತ್ತು ನಾನು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಹಲವಾರು ದಿನಗಳವರೆಗೆ ಆಘಾತ ಮತ್ತು ನೋವಿನ ಸ್ಥಿತಿಯಲ್ಲಿದ್ದೆ. ನನ್ನ “ಮೌನ” ದ ಬಗ್ಗೆ ಕಾಮೆಂಟ್ ಮಾಡುತ್ತಿರುವ ಕೆಲವರು, ನನ್ನ ಮತ್ತು ದರ್ಶನ್, ಅವರ ಕುಟುಂಬ ಮತ್ತು ನಾವು ವರ್ಷಗಳಿಂದ ಹಂಚಿಕೊಂಡಿರುವ ಬಾಂಧವ್ಯದ ನಡುವಿನ ಅಗಾಧತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಸ್ಟಾರ್ ಮತ್ತು ಸೂಪರ್‌ಸ್ಟಾರ್ ಆಗುವ ಮೊದಲು ನಾನು ಅವರನ್ನು 25 ವರ್ಷಗಳಿಂದ ಬಲ್ಲೆ. ಯಾವುದೇ ಸ್ಟಾರ್‌ಡಂಗಿಂತ ಹೆಚ್ಚಾಗಿ, ಅವರು ನನ್ನ ಕುಟುಂಬದ ಸದಸ್ಯ ಮತ್ತು ಯಾವಾಗಲೂ ನನಗೆ ಮಗನಂತೆ. ಅವರು ಅಂಬರೀಶ್ ಅವರನ್ನು ಯಾವಾಗಲೂ ತಮ್ಮ ಅಪ್ಪಾಜಿ ಎಂದು ಪರಿಗಣಿಸಿದ್ದಾರೆ ಹಾಗೂ ನನಗೆ ಅವರ ತಾಯಿಯ ಗೌರವ ಮತ್ತು ಸ್ಥಾನ ಮತ್ತು ಮಗನ ಪ್ರೀತಿಯನ್ನು ನೀಡಿದ್ದಾರೆ.

ಮಗುವನ್ನು ಈ ರೀತಿಯ ಪರಿಸ್ಥಿತಿಯಲ್ಲಿ ನೋಡುವುದನ್ನು ಸಹಿಸುವುದಿಲ್ಲ

ಯಾವ ತಾಯಿಯೂ ತನ್ನ ಮಗುವನ್ನು ಈ ರೀತಿಯ ಪರಿಸ್ಥಿತಿಯಲ್ಲಿ ನೋಡುವುದನ್ನು ಸಹಿಸುವುದಿಲ್ಲ. ನಾನು ದರ್ಶನ್ ಅವರನ್ನು ಪ್ರೀತಿಸುವ ಹೃದಯ ಹೊಂದಿರುವ, ಅತ್ಯಂತ ಕಾಳಜಿಯುಳ್ಳ ಮತ್ತು ಉದಾರ ವ್ಯಕ್ತಿ ಎಂದು ತಿಳಿದಿದ್ದೇನೆ. ಪ್ರಾಣಿಗಳ ಬಗ್ಗೆ ಅವನ ಸಹಾನುಭೂತಿ ಮತ್ತು ಸಹಾಯ ಮಾಡುವ ಮನೋಭಾವವು ಯಾವಾಗಲೂ ಅವನ ಸ್ವಭಾವದ ಭಾಗವಾಗಿದೆ. ಈ ಕೃತ್ಯವನ್ನು ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದು ನಾನು ನಂಬಿದ್ದೇನೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.

ದರ್ಶನ್ ಜೊತೆಗೆ ಅವನ ಪತ್ನಿ ವಿಜಯಲಕ್ಷ್ಮಿ ಮತ್ತು ಮುಗ್ಧ ಮಗನನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿಕೊಂಡಿರುವುದು ತುಂಬಾ ಅನ್ಯಾಯವಾಗಿದೆ. ಅಷ್ಟೇ ಅಲ್ಲದೆ ಇತರೆ ಆರೋಪಿಗಳ ಬಡ ಕುಟುಂಬಗಳು ಕೂಡ ಸಂಕಷ್ಟಕ್ಕೆ ಸಿಲುಕಿರುವುದು ನೋವಿನ ಸಂಗತಿಯಾಗಿದೆ. ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ಸಾರ್ವಜನಿಕರು ಸಂತ್ರಸ್ತ ಅಥವಾ ಆರೋಪಿಯ ಕುಟುಂಬಗಳು, ಈಗಾಗಲೇ ಈ ಭಯಾನಕ ಪರಿಸ್ಥಿತಿಯನ್ನು ಎದುರಿಸುತ್ತಿರುವವರ ಮೇಲೆ ತಮ್ಮ ಕಾಮೆಂಟ್‌ಗಳು ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸಬೇಕು.

ತನಿಖೆ ನಡೆಯುತ್ತಿದೆ ಮತ್ತು ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಮತ್ತು ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ನನಗೆ ಅಪಾರ ನಂಬಿಕೆಯಿದೆ. ದರ್ಶನ್ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಇನ್ನೂ ಯಾವುದೂ ಸಾಬೀತಾಗಿಲ್ಲ ಅಥವಾ ಶಿಕ್ಷೆಯಾಗಿಲ್ಲ. ಇದು ಕಾನೂನಿಗೆ ಬಿಟ್ಟದ್ದು ಮತ್ತು ಈ ಕುರಿತು ಈಗಾಗಲೇ ನಿರ್ಣಯಿಸುವುದು ಮತ್ತು ಶಿಕ್ಷೆ ವಿಧಿಸುವುದು ಬೇರೆ ಯಾರೂ ಅಲ್ಲ. ಈ ವಿಚಾರದಲ್ಲಿ ಅವರ ನಿಲುವು, ಸತ್ಯಾಸತ್ಯತೆಗಳನ್ನು ಸ್ಪಷ್ಟಪಡಿಸುವ ಅವಕಾಶವಾದರೂ ಇರಲಿ.

ಈ ಪರಿಸ್ಥಿತಿಯಲ್ಲಿ, ನಾನು ನೆಮ್ಮದಿಯಿಂದ, ಈ ಸಮಸ್ಯೆಯಿಂದ ದೂರವಿರುವುದು ಅಸಾಧ್ಯ.
ಇದು ನನ್ನದೇ ಕೌಟುಂಬಿಕ ಸಮಸ್ಯೆ. ಇದು ಅವರ ಜೀವನ ಮತ್ತು ಕುಟುಂಬದ ನೆಮ್ಮದಿ, ಭದ್ರತೆ, ಭವಿಷ್ಯಕ್ಕೆ ಸಂಬಂಧಪಟ್ಟಂತೆ ಅತ್ಯಂತ ಗಂಭೀರ ವಿಷಯ. ನಮಗೆಲ್ಲ ನೋವಾಗುತ್ತಿದೆ. ಚಿತ್ರರಂಗ ಅಸ್ತವ್ಯಸ್ತವಾಗಿದೆ. ಸಾವಿರ ಜನರ ಜೀವನೋಪಾಯ ಅವರ ಚಲನಚಿತ್ರ ನಿರ್ಮಾಣಗಳ ಮೇಲೆ ಅವಲಂಬಿತವಾಗಿದೆ. ಇದನ್ನು ಎದುರಿಸುವುದು ಯಾರಿಗೂ ಸುಲಭವಾಗಿರಲಿಲ್ಲ.

ತುಂಬಾ ನೋವಿನ ಸಂಗತಿ

ಆಘಾತ ಮತ್ತು ಯಾತನೆಯ ಮನಸ್ಸಿನ ಸ್ಥಿತಿಯಿಂದ ಹೊರಬರಲು ಮತ್ತು ಹಲವು ಮೂಲಗಳಿಂದ ಬರುವ ಎಲ್ಲಾ ಗೊಂದಲಮಯ ಸುದ್ದಿಗಳನ್ನು ಅರ್ಥಮಾಡಿಕೊಳ್ಳಲು ನನ್ನನ್ನು ನಾನೇ ಸಮಾಧಾನಗೊಳಿಸಬೇಕಿತ್ತು. ಇದು ನಾನು ಸಾಂದರ್ಭಿಕವಾಗಿ ಪ್ರತಿಕ್ರಿಯಿಸಲು ಯಾವುದೋ ಸಿನಿಮಾ ಅಥವಾ ರಾಜಕೀಯ ಘಟನೆಯಲ್ಲ. ಈ ಬಗ್ಗೆ ಚರ್ಚಿಸಲು ಅಥವಾ ಅಂತಹ ಅಪರಾಧದಲ್ಲಿ ಆರೋಪಿಯಾಗಿ ದರ್ಶನ್ ನಿಂತಿರುವುದನ್ನು ನೋಡುವುದು ನನಗೆ ತುಂಬಾ ನೋವಿನ ಸಂಗತಿ ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಆರೋಪಿಯಾಗಿರುವುದು ಎಂದರೆ ಅವನು ಅಪರಾಧಿ ಎಂದು ಅರ್ಥವಲ್ಲ ಎಂಬುದನ್ನು ನೆನಪಿನಲ್ಲಿಡೋಣ. ಬೇರೆಯವರಂತೆ ಕಾನೂನಾತ್ಮಕವಾಗಿ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಹಕ್ಕು ಅವರಿಗೂ ಇದೆ.

ದರ್ಶನ್ ಯಾವಾಗಲೂ ನನ್ನನ್ನು ಮದರ್ ಇಂಡಿಯಾ ಎಂದು ಕರೆಯುತ್ತಾರೆ ಮತ್ತು ನಾನು ಬದುಕಿರುವವರೆಗೂ ಅವನು ನನ್ನ ಹಿರಿಯ ಮಗನಾಗಿರುತ್ತಾನೆ. ನಮ್ಮ ಬಂಧ ಒಂದೇ ಮತ್ತು ಯಾವುದೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರ ತಾಯಿಯಾಗಿ ನಾನು ಸತ್ಯ ಹೊರಬರಲಿ ಮತ್ತು ಎಲ್ಲರಿಗೂ ನ್ಯಾಯ ಸಿಗಲಿ ಎಂದು ದೇವರಲ್ಲಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದೇನೆ. ಅವರು ತಮ್ಮನ್ನು ತಾವು ನಿರಪರಾಧಿ ಎಂದು ಸಾಬೀತುಪಡಿಸಿ ಹೊರಬರುತ್ತಾರೆ ಮತ್ತು ಚಿತ್ರೀಕರಣ, ಸಾಮಾನ್ಯ ಜೀವನವನ್ನು ಪುನರಾರಂಭಿಸುತ್ತಾರೆ ಎಂದು ನಾನು ಭರವಸೆ ಹೊಂದಿದ್ದೇನೆ.

ದರ್ಶನ್ ಅಭಿಮಾನಿಗಳಿಗೆ ಒಂದು ಹೃತ್ಪೂರ್ವಕ ವಿನಂತಿ, ದಯವಿಟ್ಟು ಶಾಂತವಾಗಿರಿ ಮತ್ತು ಈ ಕ್ಷಣದಲ್ಲಿ ಹೇಳಿಕೆಗಳನ್ನು ನೀಡಬೇಡಿ ಅಥವಾ ಯಾವುದೇ ನಕಾರಾತ್ಮಕತೆಗೆ ಪ್ರತಿಕ್ರಿಯಿಸಬೇಡಿ. ಅದು ಅವರ ಕುಟುಂಬ ಅಥವಾ ಹತ್ತಿರದವರ ಮೇಲೆ ಪರಿಣಾಮ ಬೀರಬಹುದು. ಇದು ಕೇವಲ ಕೆಟ್ಟ ಹಂತ, ಆದರೆ ಅವರಿಗೆ ನಮ್ಮೆಲ್ಲರ ನೈತಿಕ ಬೆಂಬಲದ ಅಗತ್ಯವಿದೆ. ಆದ್ದರಿಂದ ಎದೆಗುಂದಬೇಡಿ.

ನಮ್ಮಲ್ಲಿ ಯಾರೂ ಕಾನೂನಿಗಿಂತ ಮೇಲಲ್ಲ ಮತ್ತು ನಾವು ಅದನ್ನು ಗೌರವಿಸಬೇಕು, ಮತ್ತು ತಾಳ್ಮೆಯಿಂದ ಕಾಯಬೇಕು. ಒಳ್ಳೆಯ ಸಮಯ ಮರಳಲು ಪ್ರಾರ್ಥಿಸಬೇಕು.

ನಮ್ಮ ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇರಲಿ.
ದೇವರಲ್ಲಿ ನಂಬಿಕೆಯಿರಲಿ.
ಎಲ್ಲವೂ ಸರಿಯಾಗುತ್ತವೆ.
ಸತ್ಯಮೇವ ಜಯತೇ ʼʼಎಂದು ಬರೆದುಕೊಂಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Yuva Rajkumar: ಶ್ರೀದೇವಿ-ಯುವರಾಜ್ ವಿಚ್ಛೇದನ: ಆಗಸ್ಟ್ 23ಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ

Yuva Rajkumar: ಡಿವೋರ್ಸ್ ಪ್ರಕರಣ ವಿಚಾರವಾಗಿ ಅಮೆರಿಕದಿಂದ ಬಂದಿದ್ದ ಶ್ರೀದೇವಿ ವಿಚಾರಣೆಗೆ ಹಾಜರಾಗದೆ ಅಮೆರಿಕಕ್ಕೆ ಹಿಂತಿರುಗುತ್ತಿರುವ ವಿಷಯ ಸದ್ಯ ಕುತೂಹಲ ಮೂಡಿಸಿದೆ. ಹಾರ್ವರ್ಡ್‌ನಲ್ಲಿ ಶಿಕ್ಷಣ ಮುಂದುವರಿಸುವ ಸಲುವಾಗಿ ಭಾರತದಿಂದ ಅಮೆರಿಕಕ್ಕೆ ಹೋಗುತ್ತಿರುವುದಾಗಿ ಶ್ರೀದೇವಿ ತಿಳಿಸಿದ್ದಾರೆ. ತನ್ನ ಮೇಲೆ ಮಾಡಿರುವ ಆರೋಪಗಳಿಗೆ ತಕ್ಕ ಉತ್ತರ ಕೊಡ್ತೀನಿ. ನಾನು ಬಿಟ್ಟು ಕೊಡಲ್ಲ, ಸರಿಯಾದ ಸಮಯ ಬಂದಾಗ ಮತ್ತೆ ವಾಪಾಸ್ ಬರ್ತೀನಿ ಎಂದಿದ್ದಾರೆ.

VISTARANEWS.COM


on

Yuva Rajkumar Shreedevi Divorce Application case
Koo

ಬೆಂಗಳೂರು: ಡಾ.ರಾಜ್‌ಕುಮಾರ್‌ ವಂಶದ ಕುಡಿ, ನಟ ಯುವ ರಾಜ್‌ಕುಮಾರ್‌ (Yuva Rajkumar) ಅವರು ಪತ್ನಿ ಶ್ರೀದೇವಿ ಭೈರಪ್ಪ (Sridevi Byrappa) ಅವರಿಗೆ ಡಿವೋರ್ಸ್ ನೋಟಿಸ್‌ ನೀಡಿದ ವಿಚಾರ ಕೆಲವು ದಿನಗಳ ಹಿಂದೆ ಭಾರೀ ಸುದ್ದಿಯಾಗಿತ್ತು. ಈ ನೋಟಿಸ್‌ಗೆ ಸಂಬಂಧಿಸಿ ಇಂದು (ಜುಲೈ 4) ನಡೆಯಬೇಕಾಗಿದ್ದ ವಿಚಾರಣೆ ಮುಂದೂಡಲಾಗಿದೆ. ಆರಂಭಿಕ ವಿಚಾರಣೆ ಬಳಿಕ, ಮುಂದಿನ ವಿಚಾರಣೆಯನ್ನು‌ ಆಗಸ್ಟ್ 23 ಕ್ಕೆ ಮುಂದೂಡಲಾಗಿದೆ.

ಯುವ ರಾಜ್ ಕುಮಾರ್ ಸಲ್ಲಿಸಿರುವ ವಿಚ್ಛೇದನಕ್ಕೆ ಶ್ರೀದೇವಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ಬಗ್ಗೆ ವಾದ ಮಂಡಿಸಲು ಶ್ರೀದೇವಿ ಪರ ವಕೀಲರು ಅವಕಾಶ ಕೇಳಿದರು. ಇದಕ್ಕೆ ಅವಕಾಶ ನೀಡದ ನ್ಯಾಯಾಧೀಶರು, ಇದು ಕೌಟುಂಬಿಕ ಕಲಹವಾದ್ದರಿಂದ ಮೊದಲು ಕೌನ್ಸಲಿಂಗ್ ಆಗಬೇಕು.ಕೌನ್ಸಲಿಂಗ್ ಮುಕ್ತಾಯದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಮೀಡಿಯೇಟರ್ ಕೌನ್ಸಲಿಂಗ್ ನಡೆದ ಬಳಿಕವಷ್ಟೆ ಪ್ರಕರಣದ ಮುಂದಿನ ಹಂತಕ್ಕೆ ಅವಕಾಶ ನೀಡಲಾಗುತ್ತದೆ ಎಂದುನ್ಯಾಯಾಧೀಶೆ ಕಲ್ಪನಾ ಹೇಳಿದ್ದಾರೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ಮುಂದೂಡಿದ್ದಾರೆ‌.

ಡಿವೋರ್ಸ್ ಪ್ರಕರಣ ವಿಚಾರವಾಗಿ ಅಮೆರಿಕದಿಂದ ಬಂದಿದ್ದ ಶ್ರೀದೇವಿ ವಿಚಾರಣೆಗೆ ಹಾಜರಾಗದೆ ಅಮೆರಿಕಕ್ಕೆ ಹಿಂತಿರುಗುತ್ತಿರುವ ವಿಷಯ ಸದ್ಯ ಕುತೂಹಲ ಮೂಡಿಸಿದೆ. ಹಾರ್ವರ್ಡ್‌ನಲ್ಲಿ ಶಿಕ್ಷಣ ಮುಂದುವರಿಸುವ ಸಲುವಾಗಿ ಭಾರತದಿಂದ ಅಮೆರಿಕಕ್ಕೆ ಹೋಗುತ್ತಿರುವುದಾಗಿ ಶ್ರೀದೇವಿ ತಿಳಿಸಿದ್ದಾರೆ. ತನ್ನ ಮೇಲೆ ಮಾಡಿರುವ ಆರೋಪಗಳಿಗೆ ತಕ್ಕ ಉತ್ತರ ಕೊಡ್ತೀನಿ. ನಾನು ಬಿಟ್ಟು ಕೊಡಲ್ಲ, ಸರಿಯಾದ ಸಮಯ ಬಂದಾಗ ಮತ್ತೆ ವಾಪಾಸ್ ಬರ್ತೀನಿ ಎಂದಿದ್ದಾರೆ.

ಇದನ್ನೂ ಓದಿ: Yuva Rajkumar: ಅಮೆರಿಕಕ್ಕೆ ಮರಳಿದ ಶ್ರೀದೇವಿ ಭೈರಪ್ಪ; ಡಿವೋರ್ಸ್ ಕಥೆ ಏನಾಯ್ತು?

ಶ್ರೀದೇವಿ ಹೇಳಿದ್ದೇನು?

ಕಳೆದ 15 ದಿನಗಳಿಂದ ನಾನು ಕರ್ನಾಟಕದಲ್ಲಿ ನನ್ನ ಕುಟುಂಬದ ಜತೆ ಇದ್ದಾಗ ಖಾಸಗಿ ಬದುಕನ್ನ ಗೌರವಿಸಿದ್ದಕ್ಕೆ ಧನ್ಯವಾದ. ಕಳೆದ ದಶಕಗಳಿಂದ ನನ್ನ ಜತೆಯಾಗಿದ್ದ ಸ್ನೇಹಿತರ ಬಳಗ ಕೆಲವು ದಿನಗಳ ಹಿಂದಿನ ಸುಳ್ಳಿನ ಸರಮಾಲೆಗೆ ಬಲಿಯಾದದ್ದು ದುರಾದೃಷ್ಟ. ಕಷ್ಟದ ಸಮಯದಲ್ಲಿ ನನ್ನ ಜತೆ ನಿಂತ ಸ್ನೇಹಿತರಿಗೆ, ಚಿತ್ರರಂಗದವರಿಗೆ ಧನ್ಯವಾದಗಳು ಎಂದು ಶ್ರೀದೇವಿ ಬರೆದುಕೊಂಡಿದ್ದಾರೆ.

ಮುಂದುವರಿದು, ಸತ್ಯ ಮತ್ತು ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ನಂಬಿದ್ದೇನೆ ಹಾಗೂ ಅದಕ್ಕಾಗಿ ಹೋರಾಡುತ್ತೇನೆ. ನನ್ನ ಮೇಲೆ ಮಾಡಿರುವ ಪ್ರತಿಯೊಂದು ಸುಳ್ಳು ಆರೋಪದಿಂದ ಮುಕ್ತಳಾಗುವವರೆಗೆ ನನ್ನ ದಾರಿಗೆ ಏನೇ ಎದುರಾದರೂ ಹೆದರುವುದಿಲ್ಲ. ಹಾರ್ವರ್ಡ್‌ನಲ್ಲಿ ನಾನೊಂದು ಶೈಕ್ಷಣಿಕ ಯೋಜನೆಯನ್ನ ಶುರು ಮಾಡಿದ್ದೇನೆ. ಕಾಯಕವನ್ನ ಮುಂದುವರಿಸಲು ನಾನು ಅಮೆರಿಕಕ್ಕೆ ಹಿಂದಿರುಗುತ್ತಿದ್ದೇನೆ. ಸರಿಯಾದ ಸಮಯ ಬಂದಾಗ ನಾನು ಹಿಂದಿರುತ್ತೇನೆ ಹಾಗೂ ಇಲ್ಲಿನ ಕೆಲಸಗಳನ್ನ ಮುಂದುವರಿಸುತ್ತೇನೆ ಎಂದು ಶ್ರೀದೇವಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಬೆಚ್ಚಿ ಬಿದ್ದಿದ್ದ ಸ್ಯಾಂಡಲ್‌ವುಡ್‌

ಕೆಲವು ದಿನಗಳ ಹಿಂದೆ ರಾಜ್​ಕುಮಾರ್ ಕುಟುಂಬದ ಕುಡಿ ಯುವ ರಾಜ್‌ಕುಮಾರ್‌ ಅವರು ವಿಚ್ಛೇದನ ಪಡೆಯಲು ಮುಂದಾದಾಗ ಇಡೀ ಸ್ಯಾಂಡಲ್‌ವುಡ್‌ ಬೆಚ್ಚಿ ಬಿದ್ದಿತ್ತು. ಪತ್ನಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದು ಯುವ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದರು. ಕೋರ್ಟ್‌ ಸಮನ್ಸ್ ಜಾರಿ ಮಾಡಿ ಜುಲೈ 4ಕ್ಕೆ ಪ್ರಕರಣ ಮುಂದೂಡಿತ್ತು.

2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು. ಇನ್ನೂ ಪವರ್ ಸ್ಟಾರ್‌ ಪುನೀತ್‌ ನಿಧನರಾದಾಗ ಮುಂದೆ ನಿಂತು ಸಾಕಷ್ಟು ಕೆಲಸಗಳು ಮಾಡಿದ್ದರು. ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅವರು ಕಳೆದ ಆರೇಳು ತಿಂಗಳಿಂದ ದೊಡ್ಮನೆಯಿಂದ ದೂರಾಗಿದ್ದರು. ಕಳೆದೊಂದು ವರ್ಷದಿಂದ ದಂಪತಿ ದೂರವೇ ಇದ್ದರು ಎನ್ನಲಾಗಿದೆ. ಸದ್ಯ ಅಮೆರಿಕಾದಲ್ಲಿ ಶ್ರೀದೇವಿ ಉನ್ನತ ಶಿಕ್ಷಣಕ್ಕಾಗಿ ವಾಸಿಸುತ್ತಿದ್ದಾರೆ.

Continue Reading

ಸ್ಯಾಂಡಲ್ ವುಡ್

Shiva Rajkumar: ‘ಭೈರವನ ಕೊನೆ ಪಾಠ’ದಲ್ಲಿ ಶಿವರಾಜ್‌ಕುಮಾರ್‌; ಹ್ಯಾಟ್ರಿಕ್ ಹೀರೊಗೆ ಹೇಮಂತ್‌ ರಾವ್‌ ಆ್ಯಕ್ಷನ್‌ ಕಟ್‌!

Shiva Rajkumar: ಜುಲೈ 12ಕ್ಕೆ ನಟ ಶಿವರಾಜ್‌ಕುಮಾರ್ 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಶಿವಣ್ಣ ಹುಟ್ಟುಹಬ್ಬಕ್ಕೆ ಸಾಕಷ್ಟು ಸರ್‌ಪ್ರೈಸ್‌ಗಳು ಕಾದಿವೆ. ಅದಕ್ಕೂ ಮುಂಚೆಯೇ ಶಿವಣ್ಣ ಇದೀಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಬಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಹೇಮಂತ್‌ ಎಂ ರಾವ್‌ ʻಭೈರವನ ಕೊನೆ ಪಾಠʼ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

VISTARANEWS.COM


on

Shiva Rajkumar Bhairavana Kone PaaTa Title announce
Koo

ಬೆಂಗಳೂರು: ಸ್ಯಾಂಡಲ್‌ವುಡ್‌ ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್‌ (Shiva Rajkumar) ಹಾಗೂ ಆರ್ ಚಂದ್ರು ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ ಆಗಿರುವುದು ಗೊತ್ತೇ ಇದೆ. ಹಾಗೇ ಮಫ್ತಿ’ ಸಿನಿಮಾದಲ್ಲಿ ʻಭೈರತಿ ರಣಗಲ್ʼ (Bhairathi Ranagal) ಆಗಿ ಸಾಕಷ್ಟು ಗಮನ ಸೆಳೆದಿದ್ದರು ಶಿವಣ್ಣ (Shiva Rajkumar). ‘ಭೈರತಿ ರಣಗಲ್ʼ ಪಾರ್ಟ್‌ 1 ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಹೀಗೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಶಿವಣ್ಣ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಿದ್ದಾರೆ. ಅದುವೇ ʻಭೈರವನ ಕೊನೆ ಪಾಠʼ.

ಜುಲೈ 12ಕ್ಕೆ ನಟ ಶಿವರಾಜ್‌ಕುಮಾರ್ 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ಶಿವಣ್ಣ ಹುಟ್ಟುಹಬ್ಬಕ್ಕೆ ಸಾಕಷ್ಟು ಸರ್‌ಪ್ರೈಸ್‌ಗಳು ಕಾದಿವೆ. ಅದಕ್ಕೂ ಮುಂಚೆಯೇ ಶಿವಣ್ಣ ಇದೀಗ ಹೊಸ ಸಿನಿಮಾ ಅನೌನ್ಸ್‌ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಕವಲುದಾರಿ’, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ಮತ್ತು ಬಿ’ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಹೇಮಂತ್‌ ಎಂ ರಾವ್‌ ʻಭೈರವನ ಕೊನೆ ಪಾಠʼ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಡಾ. ವೈಶಾಕ್ ಜೆ ಗೌಡ ಅವರು ತಮ್ಮ ನಿರ್ಮಾಣ ಸಂಸ್ಥೆಯಾದ ವಿಜೆಎಫ್ – ವೈಶಾಕ್ ಜೆ ಫಿಲ್ಮ್ಸ್ ಅಡಿಯಲ್ಲಿ ‘ಭೈರವನ ಕೊನೆ ಪಾಠ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು ಸಿನಿಮಾ ಟೈಟಲ್‌ ಕೂಡ ಕ್ಯಾಚಿ ಆಗಿದ್ದು, ಶಿವಣ್ಣ ಫ್ಯಾನ್ಸ್‌ ಸಖತ್‌ ಥ್ರಿಲ್‌ ಆಗೋದು ಗ್ಯಾರಂಟಿ ಎನ್ನಲಾಗುತ್ತಿದೆ. ಇನ್ನು ಸಿನಿಮಾ ಶೀರ್ಷಿಕೆ ಕುರಿತು ಹೇಮಂತ್‌ ರಾವ್‌ ಮಾತನಾಡಿ ʻʻನಮ್ಮ ಭಾಷೆಗೆ ಹತ್ತಿರವಿರುವ ಶೀರ್ಷಿಕೆಗಳನ್ನು ನಾನು ಇಷ್ಟಪಡುತ್ತೇನೆ. ಈ ಮುಂಚೆ ನಾನು ಮಾಡಿದ ಸಿನಿಮಾಗಳಾದ ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಹೀಗೆ ಎಲ್ಲ ಟೈಟಲ್‌ಗಳು ನಮ್ಮ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಇದೀಗ ʻಭೈರವನ ಕೊನೆ ಪಾಠʼ ಕೂಡ ವಿಭಿನ್ನ ಹಾಗೂ ಕ್ಯಾಚಿ ಟೈಟಲ್‌ ಆಗಿದೆ. ಶಿವಣ್ಣನ ಫ್ಯಾನ್ಸ್‌ಗೂ ಈ ಶೀರ್ಷಿಕೆ ಇಷ್ಟವಾಗಲಿದೆ. ಭೈರವ ಪಾತ್ರ ತುಂಬ ಪ್ರಮುಖವಾದದ್ದು. ಆದ್ದರಿಂದ ಕಥೆಗೆ ಸೂಕ್ತ ಎಂದೆನಿಸಿ ಈ ಶೀರ್ಷಿಕೆ ಇಟ್ಟಿದ್ದೇವೆ. ಆದರೆ ಯಾರು ಈ ಭೈರವ? ಭೈರವ ಪಾಠ ಎಂದರೆ ಏನು? ಎಂಬುದು ಕಥೆಯ ಮುಖ್ಯ ತಿರುಳಾಗಿದೆʼʼಎಂದರು.

ಇದನ್ನೂ ಓದಿ: OTT Releases: ಒಟಿಟಿಯಲ್ಲಿ ಈ ವಾರ ಮಿರ್ಜಾಪುರ ಸೀಸನ್ 3 ಸೇರಿದಂತೆ ಹಲವು ಸಿನಿಮಾ, ಸಿರೀಸ್‌ಗಳು!

ನಿರ್ಮಾಪಕ ವೈಶಾಕ್ ಜೆ ಗೌಡ ಸಿನಿಮಾ ಟೈಟಲ್‌ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಮೊದಲ ಬಾರಿ ಶೀರ್ಷಿಕೆ ಕೇಳಿದಾಗ ತುಂಬ ಕುತೂಹಲ ಆಯ್ತು. ಹಾಗೇ ಖುಷಿ ಕೂಡ ಆಯ್ತು. ಪ್ರೇಕ್ಷಕರಿಗೂ ಅದೇ ಅನುಭವ ಆಗಲಿದೆ. ಇದು ಬಹಳ ವಿಶೇಷವಾದ ಚಿತ್ರವಾಗಿದ್ದು, ಯುಗಯುಗಕ್ಕೂ ನೆನಪಿನಲ್ಲಿ ಉಳಿಯುವ ಸಿನಿಮಾ ಆಗಲಿದೆ. ಪ್ರೇಕ್ಷಕರು ಫಸ್ಟ್ ಲುಕ್ ಕೂಡ ಇಷ್ಟಪಡುತ್ತಾರೆʼʼಎಂದರು.

ಇನ್ನು ಚಿತ್ರದ ತಾಂತ್ರಿಕ ವರ್ಗ ಹಾಗೂ ತಾರಾಗಣ ಹೀಗೆ ಅನೇಕ ಮಾಹಿತಿಗಳನ್ನು ಮುಂದಿನ ದಿನಗಳಲ್ಲಿ ಅಪ್‌ಡೇಟ್‌ ಮಾಡಲಾಗುವುದು ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಭೈರವನ ಕೊನೆ ಪಾಠ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಶಿವರಾಜ್‌ಕುಮಾರ್‌ ಬರ್ತ್‌ಡೇ ದಿನ ಬಿಡುಗಡೆಗೊಳ್ಳಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸದ್ಯಕ್ಕೆ ಶಿವರಾಜ್‌ಕುಮಾರ್‌ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಒಂದೆಡೆ ನರ್ತನ್‌ ನಿರ್ದೇಶನದ ‘ಭೈರತಿ ರಣಗಲ್‌’ ಚಿತ್ರೀಕರಣ ನಡೆಯುತ್ತಿದ್ದು, ಇದರ ಜತೆಗೆ ರೋಹಿತ್‌ ಪದಕಿ ನಿರ್ದೇಶನದ ‘ಉತ್ತರಕಾಂಡ’ ಸಿನಿಮಾ ಮಾಡುತ್ತಿದ್ದಾರೆ ಶಿವಣ್ಣ. ಈ ನಡುವೆ ‘45’ ಸಿನಿಮಾ ಸೇರಿ ತಮಿಳು, ತೆಲುಗು ಚಿತ್ರರಂಗದಲ್ಲೂ ಶಿವಣ್ಣ ನಟಿಸುತ್ತಿದ್ದಾರೆ ಎನ್ನಲಾಗಿದೆ. ‘ಘೋಸ್ಟ್‌ 2’, ‘ದಳವಾಯಿ ಮುದ್ದಣ್ಣ’ ಚಿತ್ರಗಳೂ ಅವರ ಕೈಯಲ್ಲಿವೆ.

Continue Reading

ಸ್ಯಾಂಡಲ್ ವುಡ್

Prajwal Devaraj: ಪ್ರಜ್ವಲ್ ದೇವರಾಜ್‌ ಬರ್ತ್‌ಡೇ; ‘ಕರಾವಳಿ’ಯಿಂದ ಸಿಕ್ತು ಭರ್ಜರಿ ಗಿಫ್ಟ್!

Prajwal Devaraj: ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ಯಕ್ಷಗಾನ ಕಂಬಳ, ಮಹಿಷಾಸುರ ಹೀಗೆ ವೆರೈಟಿ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಡೈನಮಿಕ್ ಪ್ರಿನ್ಸ್ ಪಾತ್ರ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ಪ್ರಜ್ವಲ್ ಅವರ ವೆರೈಟಿ ಗೆಟಪ್ ನ ಪೋಸ್ಟರ್ ಗಳನ್ನು ನೋಡುತ್ತಿದ್ದರೆ ತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿಸುವಂತಿದೆ.

VISTARANEWS.COM


on

Prajwal Devaraj birthday Karavali Cinema Update
Koo

ಬೆಂಗಳೂರು: ‘ಕರಾವಳಿ’ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡುತ್ತಿರುವ ಮತ್ತು ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಕರಾವಳಿ’ ನಿರ್ದೇಶಕ ಗುರುದತ್ ಗಾಣಿಗ ಸಾರಥ್ಯದಲ್ಲಿ ಮೂಡಿ ಬರುತ್ತದೆ. ಕರಾವಳಿ ಈಗಾಗಲೇ ಫಸ್ಟ್ ಲುಕ್ ಮತ್ತು ಪೋಸ್ಟರ್ ಮೂಲಕ ಬಾರಿ ಕುತೂಹಲ ಮೂಡಿಸಿದೆ. ಮತ್ತೊಂದು ಭರ್ಜರಿ ಪೋಸ್ಟ್ ಅನಾವರಣವಾಗಿದೆ. ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಪ್ರಯುಕ್ತ ಬಂದಿರುವ ಈ ಪೋಸ್ಟರ್ ಕರಾವಳಿ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಿನಿಮಾದಿಂದ ಈಗಾಗಲೇ ರಿಲೀಸ್ ಆಗಿರುವ ಪ್ರಜ್ವಲ್ ಅವರ ಎರಡು ಲುಕ್ ವೈರಲ್ ಆಗಿದೆ. ಇದೀಗ ಜನ್ಮದಿನದ ಪ್ರಯುಕ್ತ ಬಿಡುಗಡೆಯಾಗಿರುವ ಮತ್ತೊಂದು ಲುಕ್ ಗಮನ ಸೆಳೆಯುತ್ತದೆ.

ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿಸಿದೆ. ಯಕ್ಷಗಾನ ಕಂಬಳ, ಮಹಿಷಾಸುರ ಹೀಗೆ ವೆರೈಟಿ ಗೆಟಪ್ ನಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಪ್ರಜ್ವಲ್ ಯಕ್ಷಗಾನ ಕಲಾವಿದನಾ ಅಥವಾ ಕಂಬಳ ಕೊಡಿಸುವವನಾ? ಡೈನಮಿಕ್ ಪ್ರಿನ್ಸ್ ಪಾತ್ರ ಯಾವುದು ಎನ್ನುವ ಕುತೂಹಲ ಹೆಚ್ಚಾಗಿದೆ. ಪ್ರಜ್ವಲ್ ಅವರ ವೆರೈಟಿ ಗೆಟಪ್ ನ ಪೋಸ್ಟರ್ ಗಳನ್ನು ನೋಡುತ್ತಿದ್ದರೆ ತ್ರಿ ಪಾತ್ರದಲ್ಲಿ ನಟಿಸುತ್ತಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿಸುವಂತಿದೆ.

ಇದನ್ನೂ ಓದಿ: Prajwal Devaraj: ಪ್ರಜ್ವಲ್ ದೇವರಾಜ್ ಬರ್ತ್‌ಡೇ ಸೆಲೆಬ್ರೇಷನ್‌ ಕ್ಯಾನ್ಸಲ್‌; ದರ್ಶನ್‌ ಕಾರಣ?

ಬರ್ತ್‌ಡೇ ಪ್ರಯುಕ್ತ ರಿಲೀಸ್ ಆಗಿರುವ ಪೋಸ್ಟರ್ನಲ್ಲಿ ಪ್ರಜ್ವಲ್ ಕೋಣಗಳ ಮಧ್ಯೆ ಒಬ್ಬಂಟಿಯಾಗಿ ಕೊಟ್ಟಿಗೆಯಲ್ಲಿ ಕುಳಿತಿದ್ದಾರೆ. ಗಂಭೀರ ನೋಟ ಬೀರುತ್ತಾ ಕುಳಿತಿರುವ ಪ್ರಜ್ವಲ್ ಅವರ ಸಿಂಪಲ್ ವ್ಯಕ್ತಿತ್ವದ ಲುಕ್ ಆಕರ್ಷಕವಾಗಿದೆ.

ಕರಾವಳಿ ಈಗಾಗಲೇ 60ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದಲ್ಲಿ ಪ್ರಜ್ವಲ್ ಗೆ ನಾಯಕಿಯಾಗಿ ನಟಿ ಸಂಪದಾ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ಅವರದೇ ಗಾಣಿಗ ಫಿಲ್ಮ್ಸಂ ಹಾಗೂ ವಿಕೆ ಫಿಲ್ಮಂ ಅಸೋಸಿಯೇಷನ್ ನಲ್ಲಿ ನಿರ್ಮಾಣವಾಗುತ್ತಿದೆ. ಕರಾವಳಿ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ. ಪಕ್ಕಾ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ  ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ.

Continue Reading
Advertisement
Kalki 2898 AD
ಸಿನಿಮಾ3 mins ago

Kalki 2898 AD: ಕಲ್ಕಿ 2898 ಎಡಿ ಚಿತ್ರದ 10 ಕುತೂಹಲಕರ ಸಂಗತಿಗಳಿವು!

Costliest City
ದೇಶ7 mins ago

Costliest City: ಮುಂಬಯಿ ಈಗ ಭಾರತದ ಅತ್ಯಂತ ದುಬಾರಿ ನಗರ; ಬೆಂಗಳೂರಿಗೆ ಎಷ್ಟನೇ ಸ್ಥಾನ?

Actor Darshan
ಕರ್ನಾಟಕ12 mins ago

Actor Darshan: ದರ್ಶನ್‌ಗೆ ಮತ್ತೆ ಪರಪ್ಪನ ಅಗ್ರಹಾರವೇ ಗತಿ; ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Team India
ಕ್ರೀಡೆ13 mins ago

Team India: ಮೋದಿಗೆ ನಮೋ ಹೆಸರಿನ ಟೀಮ್​ ಇಂಡಿಯಾ ಜೆರ್ಸಿ ಉಡುಗೊರೆ ನೀಡಿದ ಬಿಸಿಸಿಐ

Sumalatha Ambareesh First Reaction To Darshan Arrest And Renuka Swamy Murder Case
ಸ್ಯಾಂಡಲ್ ವುಡ್19 mins ago

Sumalatha Ambareesh: ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇರಲಿ ; ದರ್ಶನ್​ ಬಗ್ಗೆ ಸುಮಲತಾ ಅಂಬರೀಶ್‌​ ಮೊದಲ ಪ್ರತಿಕ್ರಿಯೆ

cm siddaramaiah MUDA scam
ಪ್ರಮುಖ ಸುದ್ದಿ19 mins ago

CM Siddaramaiah: ʼಮುಡಾದ ತಪ್ಪು, ನಾನು ಸಿಎಂ ಅಂತ ಸೈಟ್‌ ಬಿಡೋಕೆ ಆಗುತ್ತಾ?ʼ ಸಿಎಂ ಸಿದ್ದರಾಮಯ್ಯ

Satsang programme on 5th July in Bengaluru
ಬೆಂಗಳೂರು37 mins ago

Bengaluru News: ಬೆಂಗಳೂರಿನಲ್ಲಿ ಜು.5ರಂದು ಸತ್ಸಂಗ ಕಾರ್ಯಕ್ರಮ

Hassan News Distribution of free notebook bag to government primary schools in Alur
ಹಾಸನ39 mins ago

Hassan News: ಆಲೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್‌ ವಿತರಣೆ

To complete pending railway projects in the state former MP DK Suresh appeals central government
ಬೆಂಗಳೂರು41 mins ago

DK Suresh: ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ; ಕೇಂದ್ರಕ್ಕೆ ಡಿ.ಕೆ. ಸುರೇಶ್ ಮನವಿ

ದೇಶ50 mins ago

Hemant Soren: ಹೇಮಂತ್‌ ಸೊರೆನ್‌ಗೆ ಮತ್ತೆ ಒಲಿದ ಸಿಎಂ ಪಟ್ಟ; ಜು.7ರಂದು ಪ್ರಮಾಣ ವಚನ- ರಾಜ್ಯಪಾಲರಿಂದ ಗ್ರೀನ್‌ ಸಿಗ್ನಲ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Chikkaballapura News
ಚಿಕ್ಕಬಳ್ಳಾಪುರ2 hours ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ3 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ4 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

ಟ್ರೆಂಡಿಂಗ್‌