Actor Darshan: ದರ್ಶನ್‌ ಗ್ಯಾಂಗ್‌ನ ನಾಲ್ಕನೇ ಆರೋಪಿ ತಾಯಿ ನಿಧನ - Vistara News

ಸ್ಯಾಂಡಲ್ ವುಡ್

Actor Darshan: ದರ್ಶನ್‌ ಗ್ಯಾಂಗ್‌ನ ನಾಲ್ಕನೇ ಆರೋಪಿ ತಾಯಿ ನಿಧನ

Actor Darshan: ಈ ಮುಂಚೆ ಡಿಗ್ಯಾಂಗ್ ಜತೆ ಸೇರಿಕೊಂಡ ಅನುಕುಮಾರ್ ಜೈಲು ಸೇರಿದ್ದ. ಈ ನೋವಿನಲ್ಲೇ ಅನುಕುಮಾರ್ ತಂದೆ ಹೃದಯಾಘಾತಕ್ಕೆ ಬಲಿಯಾಗಿದ್ದರು. ಮನೆಗೆ ಆಧಾರವಾಗಿದ್ದ ಮಗನೇ ಈ ರೀತಿಯ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಇದು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದ ಅನು ಕುಮಾರ್ ತಂದೆ ನೋವಿನಲ್ಲೇ ಮೃತಪಟ್ಟಿದ್ದರು.

VISTARANEWS.COM


on

Actor Darshan 4th accused mother dies
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆಗಸ್ಟ್ 1 ರವರೆಗೆ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಇದೀಗ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್‌ (Actor Darshan) ಗ್ಯಾಂಗ್‌ನ ನಾಲ್ಕನೇ ಆರೋಪಿ ರಾಘವೇಂದ್ರನ ತಾಯಿ ನಿಧನರಾಗಿದ್ದಾರೆ. ರಾಘವೇಂದ್ರ ಅಲಿಯಾಸ್‌ ರಘು ತಾಯಿ ಮಂಜುಳಮ್ಮ (75) ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ರಾಘವೇಂದ್ರ ಚಿತ್ರದುರ್ಗ ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದ. ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ರಾಘವೇಂದ್ರನ ತಾಯಿ ಮಾನಸಿಕ ಅಸ್ವಸ್ಥತೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಇಷ್ಟೂ ದಿನ ರಘು ಸಹೋದರ ಮುರುಳಿ ಮನೆಯಲ್ಲಿದ್ದರು. ಮುರುಳಿ ಮದುವೆಯಾಗದೇ ತಾಯಿ ಆರೈಕೆ ಮಾಡುತಿದ್ದ. ಆದರೆ ರಘು ಲವ್ ಮ್ಯಾರೇಜ್ ಆಗಿ ಪತ್ನಿ ಜತೆ ಪ್ರತ್ಯೇಕವಾಗಿ ವಾಸವಾಗಿದ್ದ‌. ಆಗಾಗ ಬಂದು ತಾಯಿಯ ಕ್ಷೇಮ ವಿಚಾರಿಸುತ್ತಿದ್ದ ಎನ್ನಲಾಗಿದೆ.

ಈ ಮುಂಚೆ ಡಿಗ್ಯಾಂಗ್ ಜತೆ ಸೇರಿಕೊಂಡ ಅನುಕುಮಾರ್ ಜೈಲು ಸೇರಿದ್ದ. ಈ ನೋವಿನಲ್ಲೇ ಅನುಕುಮಾರ್ ತಂದೆ ಹೃದಯಾಘಾತಕ್ಕೆ ಬಲಿಯಾಗಿದ್ದರು. ಮನೆಗೆ ಆಧಾರವಾಗಿದ್ದ ಮಗನೇ ಈ ರೀತಿಯ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಇದು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದ ಅನು ಕುಮಾರ್ ತಂದೆ ನೋವಿನಲ್ಲೇ ಮೃತಪಟ್ಟಿದ್ದರು.

ಇದನ್ನೂ ಓದಿ: Actor Darshan: ದರ್ಶನ್‌ಗಿಲ್ಲ ಮನೆಯೂಟ ತಿನ್ನೋ ಭಾಗ್ಯ; ಅರ್ಜಿ ವಿಚಾರಣೆ ಜು.29ಕ್ಕೆ ಮುಂದೂಡಿಕೆ

ದರ್ಶನ್‌ಗಿಲ್ಲ ಮನೆಯೂಟ ತಿನ್ನೋ ಭಾಗ್ಯ

 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್‌ಗೆ ಮತ್ತೆ ಜೈಲೂಟವೇ ಗತಿಯಾಗಿದೆ. ಯಾಕೆಂದರೆ, ಮನೆ ಊಟಕ್ಕೆ ಅವಕಾಶ ಕೋರಿ ದರ್ಶನ್ ಸಲ್ಲಿಸಿದ್ದ ರಿಟ್ ವಿಚಾರಣೆಯನ್ನು ಹೈಕೋರ್ಟ್‌ ಮುಂದೂಡಿದೆ. ಮನೆ ಊಟಕ್ಕೆ ಅವಕಾಶ ಕಲ್ಪಿಸಲು ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕು ಎಂದು ದರ್ಶನ್‌ (Actor Darshan) ಕೋರಿದ್ದ ಅರ್ಜಿ ವಿಚಾರಣೆಯನ್ನು ಜುಲೈ 29ಕ್ಕೆ ಮುಂದೂಡಲಾಗಿದೆ.

ದರ್ಶನ್ ಪರ ವಕೀಲ ಫಣೀಂದ್ರ ವಾದ ಮಂಡಿಸಿ, ವಿಚಾರಣಾಧೀನ ಕೈದಿಗಳಿಗೆ ಖಾಸಗಿ ಸೋರ್ಸ್‌ನಿಂದ ಅಗತ್ಯ ವಸ್ತುಗಳನ್ನು ಪಡೆಯಲು ಅವಕಾಶವಿದೆ. ಕಾರಗೃಹ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಇದೆ. ವಿಚಾರಣಾಧಿನ ಕೈದಿ, ಶಿಕ್ಷೆಗೆ ಗುರಿಯಾಗದ ಕೈದಿಗೂ ಮನೆಯ ಊಟ, ಹಾಸಿಗೆ ನೀಡಲು ಜೈಲು ಮ್ಯಾನ್ಯುಯಲ್‌ನಲ್ಲಿ ಅವಕಾಶ ಇದೆ ಎಂದು ಹೇಳಿದರು.

ಊಟವನ್ನು ಸ್ನೇಹಿತರು, ಕುಟುಂಬಸ್ಥರ ಬಳಿ ಪಡೆಯಲು ಜೈಲ್ ಎಸ್ಪಿ, ಐಜಿಪಿ ಚೆಕ್ ಮಾಡಬೇಕು ಅಂತ ನಿಯಮ ಇದೆ. ಅದಲ್ಲದೇ ಆ ಆಹಾರದಿಂದ ತೊಂದರೆಯಾದರೆ ಅದಕ್ಕೆ ಅವರೇ ಕಾರಣ ಇರುತ್ತಾರೆ ಎಂದು ಬಾಂಬೆ ಹೈಕೋರ್ಟ್‌ನ ಅಸ್ಕರ್ ಯೂಸಫ್ ಪ್ರಕರಣದ ಆದೇಶವನ್ನು ಉಲ್ಲೇಖಿಸಿದರು. ನಿಗದಿತ ಸಮಯದಲ್ಲಿ ಕೈದಿ, ತನ್ನ ಖರ್ಚಿನಲ್ಲಿ ಊಟ ಹೊರಗಿನಿಂದ ಪಡೆಯಬಹುದು ಎಂದರು.

ಈ ವೇಳೆ ಪ್ರತಿಕ್ರಿಯಿಸಿದ ಜಡ್ಜ್‌ ಎಸ್.ಆರ್. ಕೃಷ್ಣಕುಮಾರ್, ನೀವು ಆಹಾರ, ಹಾಸಿಗೆ ಮೂಲಭೂತ ಹಕ್ಕು ಎನ್ನುತ್ತಿದ್ದೀರಿ. ಆದರೆ ನಾನು ಈಗ ಮಧ್ಯಂತರ ಆದೇಶ ಮಾಡಲು ಸಾಧ್ಯವಿಲ್ಲ. ಸಂಪೂರ್ಣ ಪ್ರಕರಣದ ವಿಚಾರಣೆ ಮಾಡಬೇಕು. ವಿಚಾರಣಾಧೀನ ಕೈದಿ ಇದ್ದಾಗ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಅಧಿಕಾರ ಇದೆ. ಅಲ್ಲಿ ಮೊದಲು ಅರ್ಜಿ ಸಲ್ಲಿಸಿ ಅವಕಾಶ ಕೋರಬೇಕು. ಅಲ್ಲಿ ನಿರಾಕರಣೆಯಾದರೆ, ಮುಂದೆ ನೋಡೋಣ ಎಂದು ಹೇಳಿ, ಮುಂದಿನ ವಿಚಾರಣೆ 29ಕ್ಕೆ ಮುಂದೂಡಿದರು.

ಜೈಲೂಟದಿಂದಾಗಿ ಫುಡ್‌ ಪಾಯಿಸನಿಂಗ್‌ ಹಾಗೂ ಅತಿಸಾರ ಆಗುತ್ತಿದೆ. ಹೀಗಾಗಿ ಮನೆಯೂಟ ತರಿಸಿಕೊಳ್ಳಲು ಅನುಮತಿ ನೀಡುವಂತೆ ದರ್ಶನ್‌ ಮನವಿ ಮಾಡಿದ್ದರು. ಜೈಲಿನ ಆಹಾರ ದರ್ಶನ್‌ಗೆ ಒಗ್ಗದೇ ಫುಡ್ ಪಾಯಿಸನಿಂಗ್ ಆಗುತ್ತಿದೆ. ಹೀಗೆಂದು ಜೈಲಿನ ವೈದ್ಯರೇ ಹೇಳಿದ್ದರು. ಅತಿಸಾರದಿಂದಾಗಿ ದರ್ಶನ್ ತೂಕ ತುಂಬಾ ಕಡಿಮೆಯಾಗಿದೆ. ಹಲವು ಕೆಜಿಗಳಷ್ಟು ತೂಕವನ್ನು ದರ್ಶನ್ ಕಳೆದುಕೊಂಡಿದ್ದಾರೆ. ದರ್ಶನ್ ಜಾಮೀನಿಗಾಗಿ ವಕೀಲರು ಬೇಕಾದ ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಇನ್ನು ಕೆಲವಷ್ಟು ದಿನ ದರ್ಶನ್ ಜೈಲಿನಲ್ಲೆ ಇರಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಮನೆ ಊಟಕ್ಕೆ ಅನುಮತಿ ನೀಡುವಂತೆ ಜೈಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Tanisha Kuppanda: ಪೂಜಾ ಗಾಂಧಿ ಜತೆ ಲಿಪ್ ಲಾಕ್; 6 ಟೇಕ್ಸ್‌ ತೆಗೆದುಕೊಂಡ ಅನುಭವ ಹಂಚಿಕೊಂಡ ʻಬೆಂಕಿʼ ತನಿಷಾ!

Tanisha Kuppanda: ದಂಡುಪಾಳ್ಯ 2 ಸಿನಿಮಾದಲ್ಲಿ ನಟಿ ಪೂಜಾ ಗಾಂಧಿಯವರಿಗೆ ಲಿಪ್ ಲಾಕ್ (Liplock) ಮಾಡಿರುವ ಬಗ್ಗೆ ತನಿಷಾ ಮಾತನಾಡಿದ್ದಾರೆ.  ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿ ಸುದ್ದಿಯಾಗಿದ್ದರು.

VISTARANEWS.COM


on

Tanisha Kuppanda Lip lock with Pooja Gandhi shares her experience
Koo

 ತನಿಷಾ ಕುಪ್ಪಂಡ (Tanisha Kuppanda) ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿ ಸುದ್ದಿಯಾಗಿದ್ದರು. ಇದೀಗ  ದಂಡು ಪಾಳ್ಯ ಸಿನಿಮಾದಲ್ಲಿ ಪೂಜಾ ಗಾಂಧಿಗೆ ಕಿಸ್ ಮಾಡಿದ ಅನುಭವದ ಬಗಗೆ ಹೇಳಿಕೊಂಡಿದ್ದಾರೆ.

 ಬಿಗ್ ಬಾಸ್’ ಬೆಡಗಿ ತನಿಷಾ ಕುಪ್ಪಂಡ (Tanisha Kuppanda) ದೊಡ್ಮನೆ ಆಟ ಮುಗಿದ ಮೇಲೆ ನಟನೆ, ಉದ್ಯಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ‘ನನ್ನಮ್ಮ ಸೂಪರ್ ಸ್ಟಾರ್-3’ರಲ್ಲಿ (Nanamma Super Star 3) ತನಿಷಾ ಭಾಗಿಯಾಗಿದ್ದರು.  ತನಿಷಾ ಕುಪ್ಪಂಡ ‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ಪ್ರಾರಂಭಿಸಿ ಸುದ್ದಿಯಾಗಿದ್ದರು. ಇದೀಗ ದಂಡುಪಾಳ್ಯ 2 ಸಿನಿಮಾದಲ್ಲಿ ನಟಿ ಪೂಜಾ ಗಾಂಧಿಯವರಿಗೆ ಲಿಪ್ ಲಾಕ್ (Liplock) ಮಾಡಿರುವ ಬಗ್ಗೆ ಮಾತನಾಡಿದ್ದಾರೆ. 

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಹಲ್ಲೆ ದೃಶ್ಯ ಐಫೋನ್‌ನಲ್ಲಿ ರೆಕಾರ್ಡ್‌; ಸಿನಿಮಾ ಶೈಲಿಯಲ್ಲಿ ನಡೆದಿತ್ತು ಕೃತ್ಯ!

ಈ ಬಗ್ಗೆ ತನಿಷಾ ಮಾತನಾಡಿ ʻʻಅದು ಪ್ರಾಪರ್ ಕಿಸ್ ಥರ ಇರಲಿಲ್ಲ, ಬಲವಂತದ ಕಿಸ್ಸಿಂಗ್ ಸೀನ್ ಅದಾಗಿತ್ತು, ಹಾಗಾಗಿ ನಾನು ಪೂಜಾ ಗಾಂಧಿಯವರಿಗೆ ಗಂಡಸರ ರೀತಿ ಕಿಸ್ ಮಾಡಿದ ಹಾಗಿತ್ತು, ಅದಕ್ಕೆ ಪೂಜಾ ಅವರು ಅಮ್ಮ ನೀನು ತುಂಬಾ ರಫ್ ಆಗಿ ಇದ್ಯಾ.. ಅಂದಿದ್ರುʼʼ ಎಂದು ಶೂಟಿಂಗ್ ದಿನಗಳನ್ನ ಮೆಲುಕು ಹಾಕಿದ್ದಾರೆ. 

ಬಹಳ ಕಾಂಟ್ರೋವರ್ಸಿ ಸೃಷ್ಟಿಸಿದ ದೃಶ್ಯ ಇದಾಗಿತ್ತು. ಇದೇ ಲಿಪ್ ಲಾಪ್ ಸೀನ್ ಮಾಡಲು 6 ಟೇಕ್ ತೆಗೆದುಕೊಂಡಿರೋ ಬಗ್ಗೆ ಮಾತನಾಡಿದ್ದಾರೆ ತನಿಷಾ.

ಒಂದ್ಸಲ ಟೆಕ್ನಿಕಲ್ ಪ್ರಾಬ್ಲಂ ಆಯ್ತು, ಇನ್ನೊಂದ್ಸಲ ಲೈಟಿಂಗ್ ಸಮಸ್ಯೆ ಹಾಗೇ ಹೀಗೆ ಅಂತ 6 ಸಲ ರೀಟೇಕ್ ಮಾಡ್ಸಿದ್ರು ಎಂದು ತಮ್ಮ ಲಿಪ್ ಲಾಕ್ ಅನುಭವ ಬಿಚ್ಚಿಟ್ಟಿದ್ದಾರೆ. ಪೂಜಾ ಗಾಂಧಿ ಅವರಿಗೆ 6 ಸಲ ಮುದ್ದು ಮುದ್ದಾಗಿ ಕಿಸ್ ಮಾಡಿದ್ದೀನಿ ಎಂದು ಹೇಳಿಕೊಂಡ ತನಿಷಾ, ಕಿಸ್ ಮಾಡೋವಾಗ ಆಕೆ ಪುಟ್ಟ ಮಗುವಿನಂತೆ ಅನಿಸಿದ್ದರು ಎಂದಿದ್ದಾರೆ.

Continue Reading

ಸಿನಿಮಾ

Actor Darshan: ರೇಣುಕಾ ಸ್ವಾಮಿ ಹಲ್ಲೆ ದೃಶ್ಯ ಐಫೋನ್‌ನಲ್ಲಿ ರೆಕಾರ್ಡ್‌; ಸಿನಿಮಾ ಶೈಲಿಯಲ್ಲಿ ನಡೆದಿತ್ತು ಕೃತ್ಯ!

Actor Darshan: ದರ್ಶನ್ ಗೆ ಸಿಮ್ ಕೊಟ್ಟಿದ್ದ ಬಗ್ಗೆ ಹೇಮಂತ್ ವಿಚಾರಣೆ ಆಗಿದೆ. ಅದೇ ರೀತಿ ಎ1 ಆರೋಪಿ ಪವಿತ್ರಾಗೌಡಗೆ ಸಿಮ್ ಕಾರ್ಡ್ ಕೊಟ್ಟಿದ್ದ ವ್ಯಕ್ತಿ ವಿಚಾರಣೆ ಆಗಿದೆ. ಮನೋಜ್ ಎಂಬಾತನ ವಿಚಾರಣೆ ನಡೆಸಿ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮನೋಜ್ ಬಸವೇಶ್ವರನಗರ ನಿವಾಸಿಯಾದ್ದರು.

VISTARANEWS.COM


on

Actor Darshan Renuka Swamy assault scene recorded on iPhone
Koo

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿದಂತೆ (Actor Darshan) ಆರೋಪಿಗಳು ಹಲ್ಲೆ ಬಳಿಕ ಐ ಫೋನ್‌ನಲ್ಲಿ ರೆಕಾರ್ಡ್‌ ಕೂಡ ಮಾಡಿರುವುದು ತಿಳಿದು ಬಂದಿದೆ. ಹಲ್ಲೆ ಬಳಿಕ ಹೊಡೆದ ಜಾಗದಲ್ಲಿ ರೇಣುಕಾಸ್ವಾಮಿ ಕುಸಿದು ಬಿದ್ದಿದ್ದರಂತೆ. ಸ್ಯಾಕ್ಷಿ ನಾಶ ಮಾಡಬೇಕು ಎಂದು ಮಸ್ತ್‌ ಪ್ಲ್ಯಾನ್‌ ಕೂಡ ಆಗಿತ್ತು. ಅದರಲ್ಲಿಯೇ ಒಬ್ಬ ಆರೋಪಿ ಹಲ್ಲೆ ನಡೆದ ಬಳಿಕ ಐಫೋನ್‌ನಲ್ಲಿ ರೆಕಾರ್ಡ್‌ ಮಾಡಿದ್ದಾರಂತೆ. ಸಿನಿಮಾ ಶೈಲಿಯಲ್ಲಿ ನಡೆದಿದ್ದ ಕೃತ್ಯವನ್ನು ಸೆರೆ ಹಿಡಿದಿದ್ದಾರೆ.

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿಂದಂತೆ. ಐವರು ಆರೋಪಿಗಳಿಗೆ ಸಿಮ್ ಕಾರ್ಡ್ ಕೊಟ್ಟಿದ್ದವರ ವಿಚಾರಣೆಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ಮಾಡುತ್ತಿದ್ದಾರೆ. ಸಿಮ್ ಕಾರ್ಡ್ ಕೊಟ್ಟ ಬಗ್ಗೆ ಐವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. A2 ಆರೋಪಿ ನಟ ದರ್ಶನ್‌ಗೆ ಹೇಮಂತ್ ಸಿಮ್ ಕೊಟ್ಟಿದ್ದ .ಹೇಮಂತ್ ವಿಚಾರಣೆ ನಡೆಸಿ ಪೊಲೀಸರು ಹೇಳಿಕೆ ದಾಖಲಿಸಿದ್ದರು. ಬೆಂಗಳೂರಿನ ಪ್ರಕಾಶ್ ನಗರ ನಿವಾಸಿ ಹೇಮಂತ್.

ದರ್ಶನ್ ಗೆ ಸಿಮ್ ಕೊಟ್ಟಿದ್ದ ಬಗ್ಗೆ ಹೇಮಂತ್ ವಿಚಾರಣೆ ಆಗಿದೆ. ಅದೇ ರೀತಿ ಎ1 ಆರೋಪಿ ಪವಿತ್ರಾಗೌಡಗೆ ಸಿಮ್ ಕಾರ್ಡ್ ಕೊಟ್ಟಿದ್ದ ವ್ಯಕ್ತಿ ವಿಚಾರಣೆ ಆಗಿದೆ. ಮನೋಜ್ ಎಂಬಾತನ ವಿಚಾರಣೆ ನಡೆಸಿ ಪೊಲೀಸರು ಮಾಹಿತಿ ಪಡೆದಿದ್ದಾರೆ. ಮನೋಜ್ ಬಸವೇಶ್ವರನಗರ ನಿವಾಸಿಯಾದ್ದರು. ಹಾಗೂ ಉಳಿದ ಮೂವರು ಆರೋಪಿಗಳಿಗೆ ಸಿಮ್ ಕೊಟ್ಟವರ ವಿಚಾರಣೆ ಆಗಿದೆ. ಕಾರ್ತಿಕ್, ಕೇಶವಮೂರ್ತಿ, ನಿಖಲಿ ನಾಯಕ್ ಗೆ ಸಿಮ್ ಕಾರ್ಡ್ ಕೊಟ್ಟವರ ವಿಚಾರಣೆ ಕೂಡ ಆಗಿದೆ.

ಇದನ್ನೂ ಓದಿ: Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!

ಕಾರ್ತಿಕ್ ಎಂಬುವ ವೇಲು ಎಂಬಾತನ ಹೆಸರಲ್ಲಿದ್ದ ಸಿಮ್ ಬಳಸಿದ್ದ . ಗೀತಾ ಹೆಸರಲ್ಲಿದ್ದ ಸಿಮ್ ಬಳಸಿದ್ದ ನಿಖಿಲ್ ನಾಯಕ್. ಐದು ಮಂದಿಯನ್ನ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಪೊಲೀಸರು. ಕೊಲೆ ವೇಳೆ ಬೇರೊಬ್ಬರ ಹೆಸರಲ್ಲಿದ್ದ ಸಿಮ್ ಕಾರ್ಡ್ ಆರೋಪಿಗಳು ಬಳಸಿದ್ದರು. ಐವರು ಆರೋಪಿಗಳ ಪೋನ್ ಪರಿಶೀಲನೆ ವೇಳೆ ಸಿಮ್ ಕಾರ್ಡ್ ಸಿಕ್ರೇಟ್ ಬಯಲಾಗಿದೆ.

Continue Reading

ಸಿನಿಮಾ

Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!

Kannada New Movie: ಇತ್ತೀಚೆಗೆ ಬಿಡುಗಡೆಯಾದ ‘ಮೂರನೇ ಕೃಷ್ಣಪ್ಪ’ ಸಿನಿಮಾ ಬಗ್ಗೆಯೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಲಿಲ್ಲ. ಇದೀಗ ಯಾವುದೇ ಸುಳಿವು ನೀಡದೇ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ‘ಮೂರನೇ ಕೃಷ್ಣಪ್ಪ’ ಸಿನಿಮಾ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.

VISTARANEWS.COM


on

Kannada New Movie Moorane Krishnappa in OTT
Koo

ಬೆಂಗಳೂರು: ರಂಗಾಯಣ ರಘು, ಸಂಪತ್ ಮೈತ್ರಿಯಾಯಂತಹ ಅದ್ಭುತ ಕಲಾವಿದರ (Kannada New Movie) ಅಭಿನಯ, ಹಳ್ಳಿ ಸೊಗಡಿನ ‘ಮೂರನೇ ಕೃಷ್ಣಪ್ಪ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. ಬ್ಲಿಂಕ್’, ‘ಶಾಖಾಹಾರಿ’, ‘ಜೂನಿ’, O2, ‘ಧರಣಿ ಮಂಡಲ ಮಧ್ಯದೊಳಗೆ’ ಹಾಗೂ ‘ಕರಟಕ ದಮನಕ’ ಹೀಗೆ ಹಲವು ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚಿನ ಮನ್ನಣೆ ಗಳಿಸಿವೆ. ಇತ್ತೀಚೆಗೆ ಬಿಡುಗಡೆಯಾದ ‘ಮೂರನೇ ಕೃಷ್ಣಪ್ಪ’ ಸಿನಿಮಾ ಬಗ್ಗೆಯೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸಲಿಲ್ಲ. ಇದೀಗ ಯಾವುದೇ ಸುಳಿವು ನೀಡದೇ ಅಮೇಜಾನ್ ಪ್ರೈಂ ವಿಡಿಯೋದಲ್ಲಿ ‘ಮೂರನೇ ಕೃಷ್ಣಪ್ಪ’ ಸಿನಿಮಾ ಸ್ಟ್ರೀಮಿಂಗ್ ಮಾಡಲಾಗುತ್ತಿದೆ.

`ಶಾಖಾಹಾರಿ’ ಚಿತ್ರದ ಗಂಭೀರ ಪಾತ್ರದಲ್ಲಿ ರಂಜಿಸಿದ್ದ ರಂಗಾಯಣ ರಘು ಈ ಚಿತ್ರದಲ್ಲಿ ಎಂದಿನ ತಮ್ಮ ಕಾಮಿಡಿಯಿಂದ ಮೋಡಿ ಮಾಡುತ್ತಾರೆ.

ಇದನ್ನೂ ಓದಿ: Krishan Kumar: ಕೇವಲ 21ನೇ ವಯಸ್ಸಿಗೆ ನಿಧನ ಹೊಂದಿದ ‘ಅನಿಮಲ್’ ಸಿನಿಮಾ ನಿರ್ಮಾಪಕನ ಮಗಳು

ಮೂರನೇ ಕೃಷ್ಣಪ್ಪ’ ಸಿನಿಮಾವನ್ನು ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ರೆಡ್ ಡ್ರ್ಯಾಗನ್ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಮೋಹನ್ ರೆಡ್ಡಿ ಜಿ, ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಇಟ್ಟುಕೊಂಡು ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸುತ್ತಿದ್ದರೆ, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿಯಾಗಿದ್ದಾರೆ.

ಇವರೊಂದಿಗೆ ತುಕಾಲಿ ಸಂತೋಷ್, ಉಗ್ರಂ ಮಂಜು ಸೇರಿದಂತೆ ಹಲವರು ನಟಿಸಿದ್ದಾರೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಕ್ಕೆ ಆನಂದ್ ರಾಜವಿಕ್ರಮ್ ಸಂಗೀತ ನೀಡಿದ್ದು, ಶ್ರೀಕಾಂತ್ ಎಡಿಟಿಂಗ್ ಮಾಡಿದ್ದರೆ, ಯೋಗಿ ಕ್ಯಾಮೆರಾ ಹ್ಯಾಂಡಲ್ ಮಾಡಿದ್ದಾರೆ.

Continue Reading

ಕರ್ನಾಟಕ

Kannada New Movie: ಜು.26ರಂದು ’ಕುಬುಸʼ ಚಿತ್ರ ರಾಜ್ಯಾದ್ಯಂತ ಬಿಡುಗಡೆ

Kannada New Movie: ಸಾಹಿತಿ ಕುಂ. ವೀರಭದ್ರಪ್ಪ ಕಾದಂಬರಿ ಆಧರಿತ ’ಕುಬುಸʼ ಕನ್ನಡ ಚಿತ್ರವು ಇದೇ ಜು.26ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಬೆಂಗಳೂರಿನಲ್ಲಿ ಚಿತ್ರದ ಟ್ರೇಲರ್‌ಅನ್ನು ಜು.22ರಂದು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡುವರು ಎಂದು ಚಿತ್ರ ನಿರ್ದೇಶಕ ರಘುರಾಮ ಚರಣ ತಿಳಿಸಿದ್ದಾರೆ.

VISTARANEWS.COM


on

Kubusa Kannada film release on 26th July
Koo

ಹೊಸಪೇಟೆ: ಬಳ್ಳಾರಿ ಭಾಗದ ಕನ್ನಡ ಭಾಷೆಯ ಸೊಗಡು ಹೊಂದಿರುವ ಕನ್ನಡದ ಮೊದಲ ಸಿನಿಮಾ ’ಕುಬುಸʼ ಇದೇ ಜು.26ರಂದು ರಾಜ್ಯಾದ್ಯಂತ ತೆರೆ (Kannada New Movie) ಕಾಣಲಿದೆ.

ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಚಿತ್ರ ನಿರ್ದೇಶಕ ರಘುರಾಮ ಚರಣ, ‘ಸಾಹಿತಿ ಕುಂ. ವೀರಭದ್ರಪ್ಪ ಕಾದಂಬರಿ ಆಧರಿತ ಈ ಸಿನಿಮಾವನ್ನು ಕುಟುಂಬದವರೆಲ್ಲರೂ ನೋಡಬಹುದು, ಸಮಾಜಕ್ಕೆ ಉತ್ತಮ ಸಂದೇಶ ಸಹ ಚಿತ್ರದಲ್ಲಿದೆ, ಇದು ನನ್ನ ನಿರ್ದೇಶನದ ಮೊದಲ ಸಿನಿಮಾʼ ಎಂದು ತಿಳಿಸಿದರು.

ಇದನ್ನೂ ಓದಿ: Indian Olympics History: ಭಾರತಕ್ಕೆ ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಮೊದಲ ಸಾಧಕ ಅಭಿನವ್‌ ಬಿಂದ್ರಾ

ಇದೇ ಜು.22ರಂದು ಬೆಂಗಳೂರಿನಲ್ಲಿ ಚಿತ್ರದ ಟ್ರೇಲರ್‌ಅನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡುವರು. ಚಿತ್ರದಲ್ಲಿ ಒಟ್ಟು 4 ಹಾಡುಗಳಿವೆ. ನಟರಾಜ್‌ ಎಸ್. ಭಟ್‌ ನಾಯಕ ನಟನಾಗಿ ಹಾಗೂ ರಂಗಭೂಮಿ ಕಲಾವಿದ ದುರ್ಗಾದಾಸ್ ಅವರ ಪುತ್ರಿ ಹನುಮಕ್ಕ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯರಾದ ರಮ್ಯಾ, ಜಯಲಕ್ಷ್ಮಿ ಸಹ ಪ್ರಮುಖ ಪಾತ್ರದಲ್ಲಿದ್ದಾರೆ ಎಂದರು.

ಚಿತ್ರದಲ್ಲಿ ನಾಯಕಿಯ ಗೆಳತಿಯ ಪಾತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದರಾದ ಮಂಜಮ್ಮ ಜೋಗತಿ ಮಾತನಾಡಿ, ‘ಇದೊಂದು ಬಹಳ ನಿರೀಕ್ಷೆಯ ಚಿತ್ರ, ಕುಂ.ವೀರಭದ್ರಪ್ಪ ಅವರ ಗಟ್ಟಿನೆಲೆಯ ಕಾದಂಬರಿ ಚಿತ್ರಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟಿದೆ. ಜನರಿಗೆ ಇಷ್ಟವಾಗುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.

ಚಿತ್ರಕ್ಕೆ ಪ್ರದೀಪ್‌ ಚಂದ್ರ ಅವರ ಸಂಗೀತವಿದೆ. 30 ಲಕ್ಷ ರೂ.ದೊಳಗೆ ನಿರ್ಮಿಸಲು ಹೊರಟಿದ್ದ ಸಿನಿಮಾದ ಬಜೆಟ್‌ 1.50 ಕೋಟಿ ರೂ. ಮೀರಿದೆ. ನಡುವೆ ಕೊರೊನಾದಂತಹ ಅಡೆತಡೆಗಳು ಬಂದವು, ಹೀಗಾಗಿ ಚಿತ್ರ ಬಿಡುಗಡೆ ವಿಳಂಬವಾಗಿದೆ. ರಾಜ್ಯದ 25 ಟಾಕೀಸ್‌ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Indian Navy Recruitment: ಭಾರತೀಯ ನೌಕಾ ಪಡೆಯಲ್ಲಿದೆ 741 ಹುದ್ದೆ; 10ನೇ ತರಗತಿ ಪಾಸಾದವರಿಗೂ ಇದೆ ಅವಕಾಶ

ಈ ಸಂದರ್ಭದಲ್ಲಿ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್‌, ರಂಗಭೂಮಿ ಕಲಾವಿದ ಮಾ.ಬಾ.ಸೋಮಣ್ಣ, ಉಪನ್ಯಾಸಕ ದಯಾನಂದ ಕಿನ್ನಾಳ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವೀರಸಂಗಯ್ಯ, ನಟಿ ಭಾರತಿ, ನಿರ್ಮಾಪಕಿ ವಿ.ಶೋಭಾ, ಗಂಟೆ ಸೋಮಶೇಖರ್, ಗುಜ್ಜಲ್‌ ಗಣೇಶ್‌ ಹಾಗೂ ಇತರರು ಉಪಸ್ಥಿತರಿದ್ದರು.

Continue Reading
Advertisement
Illegal Mining Case
ದೇಶ7 mins ago

Illegal Mining Case: ಅಕ್ರಮ ಗಣಿಗಾರಿಕೆ ಪ್ರಕರಣ; ಕಾಂಗ್ರೆಸ್‌ ಶಾಸಕ ಇಡಿ ಬಲೆಗೆ

LKG UKG in Anganwadis
ಕರ್ನಾಟಕ23 mins ago

LKG UKG in Anganwadis: ದೇಶದಲ್ಲೇ ಮೊದಲ ಬಾರಿ ಅಂಗನವಾಡಿಗಳಲ್ಲಿ ಎಲ್‌‌ಕೆಜಿ, ಯುಕೆಜಿ; ಜು.22ಕ್ಕೆ ಉದ್ಘಾಟನೆ

Viral Video
ಕ್ರಿಕೆಟ್40 mins ago

Viral Video: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಗುಳ್ಳೆ ನರಿ; ವಿಡಿಯೊ ವೈರಲ್​

terror activities
ದೇಶ47 mins ago

Terror Activities: ಉಗ್ರರ ಬೇಟೆಗೆ 500ಕ್ಕೂ ಹೆಚ್ಚು ಪ್ಯಾರಾ ಕಮಾಂಡೋಗಳು ಗಡಿಯಲ್ಲಿ ಸಜ್ಜು

Siddaramaiah
ಕರ್ನಾಟಕ1 hour ago

CM Siddaramaiah: ವಾರದಲ್ಲಿ 4 ದಿನ ಶಾಲೆಗಳಿಗೆ ಮೊಟ್ಟೆ ಪೂರೈಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್ ಜತೆ ಒಪ್ಪಂದ: ಸಿಎಂ

Viral News
ವೈರಲ್ ನ್ಯೂಸ್1 hour ago

Viral News: ಸ್ತನ ಸೌಂದರ್ಯ ಶಸ್ತ್ರಚಿಕಿತ್ಸೆಯ ವಿಡಿಯೊ; ಆಸ್ಪತ್ರೆ ವಿರುದ್ಧ ಮಹಿಳೆಯಿಂದ ಕೇಸ್‌!

gold rate today
ವಾಣಿಜ್ಯ1 hour ago

Gold Rate Today: ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಸ್ವರ್ಣ ಪ್ರಿಯರಿಗೆ ಶುಭ ಸುದ್ದಿ

karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

Tanisha Kuppanda Lip lock with Pooja Gandhi shares her experience
ಸ್ಯಾಂಡಲ್ ವುಡ್1 hour ago

Tanisha Kuppanda: ಪೂಜಾ ಗಾಂಧಿ ಜತೆ ಲಿಪ್ ಲಾಕ್; 6 ಟೇಕ್ಸ್‌ ತೆಗೆದುಕೊಂಡ ಅನುಭವ ಹಂಚಿಕೊಂಡ ʻಬೆಂಕಿʼ ತನಿಷಾ!

Tantrik Arrest
ಕ್ರೈಂ1 hour ago

Tantrik Arrest: ರೋಗ ಗುಣಪಡಿಸುವುದಾಗಿ ಹೇಳಿ ಯುವತಿಯ ತಲೆಗೆ 18 ಸೂಜಿ ಚುಚ್ಚಿದ ಮಂತ್ರವಾದಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 hour ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ3 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌