Paris Olympics: ಟ್ರ್ಯಾಕ್‌ & ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದರೆ ಅಥ್ಲೀಟ್​ಗಳಿಗೆ ಸಿಗಲಿದೆ ಭಾರೀ ಮೊತ್ತದ ನಗದು ಬಹುಮಾನ - Vistara News

ಕ್ರೀಡೆ

Paris Olympics: ಟ್ರ್ಯಾಕ್‌ & ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದರೆ ಅಥ್ಲೀಟ್​ಗಳಿಗೆ ಸಿಗಲಿದೆ ಭಾರೀ ಮೊತ್ತದ ನಗದು ಬಹುಮಾನ

Paris Olympics: ಟೋಕಿಯೊ ಒಲಿಂಪಿಕ್​ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್​ ಚೋಪ್ರಾ ಅವರು ಈ ಬಾರಿ ಚೆನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್‌ ಡಾಲರ್‌ ಬಹುಮಾನ ದೊರೆಯಲಿದೆ.

VISTARANEWS.COM


on

Paris Olympics
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೊನಾಕೊ: ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಟ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಒಲಿಂಪಿಕ್ ಕೂಟದಲ್ಲಿ ನಗದು ಪ್ರಶಸ್ತಿ ನೀಡಲಾಗುತ್ತಿದೆ. ಟ್ರ್ಯಾಕ್ ಮತ್ತು ಫೀಲ್ಡ್(track & field gold medallists) ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ 41.60 ಲಕ್ಷ ನಗದು ಪ್ರಶಸ್ತಿ ನೀಡಲು ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ತೀರ್ಮಾನಿಸಿದೆ.

ಟೋಕಿಯೊ ಒಲಿಂಪಿಕ್​ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಜಯಿಸಿದ್ದ ನೀರಜ್​ ಚೋಪ್ರಾ ಅವರು ಈ ಬಾರಿ ಚೆನ್ನ ಗೆದ್ದರೆ ಅವರಿಗೆ 50,000 ಅಮೆರಿಕನ್‌ ಡಾಲರ್‌ ಬಹುಮಾನ ದೊರೆಯಲಿದೆ. ನೀರಜ್​ ಅವರು ಟ್ರ್ಯಾಕ್‌ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆ ಹೊಂದಿದ್ದು ಈ ಬಾರಿಯೂ ಅವರು ಚಿನ್ನದ ಪದಕ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ.

ಈ ಬಾರಿ ಚಿನ್ನ ಗೆದ್ದ ಅಥ್ಲೀಟ್​ಗಳಿಗೆ ಮಾತ್ರ ನಗುದು ಬಹುಮಾನ ದೊರಕಲಿದೆ. 2028ರಲ್ಲಿ ಲಾಸ್‌ ಏಂಜಲಿಸ್​ನಲ್ಲಿ ನಡೆಯುವ ಒಲಿಂಪಿಕ್ ಕೂಟದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಎಲ್ಲರಿಗೂ ನಗದು ಪ್ರಶಸ್ತಿ ನೀಡುವುದಾಗಿವಿಶ್ವ ಅಥ್ಲೆಟಿಕ್ ಸಂಸ್ಥೆ ಘೋಷಿಸಿದೆ. ಡೈಮಂಡ್ ಲೀಗ್, ಕಾಂಟಿನೆಂಟಲ್ ಕಪ್‌ಗಳಲ್ಲಿ ಪದಕ ಗೆದ್ದಾಗ ನಗದು ಬಹುಮಾನ ನೀಡಲಾಗುತ್ತಿತ್ತು. ಆದರೆ ಒಲಿಂಪಿಕ್ಸ್​ ಬಹುಮಾನದಲ್ಲಿ ಈ ಸೌಕರ್ಯ ಇರಲಿಲ್ಲ. ಇದೀಗ ಒಲಿಂಪಿಕ್ಸ್​ನಲ್ಲಿಯೂ ಈ ನಿಯಮ ಬಂದಿರುವುದು ಸಂತಸ ತಂದಿದೆ ಎಂದು ಡಬ್ಲ್ಯುಎ ಅಧ್ಯಕ್ಷ ಸೆಬಾಸ್ಟಿಯನ್ ಕೊ ಹೇಳಿದ್ದಾರೆ.

ಭಾರತದಿಂದ ಈ ಬಾರಿ ಅಥ್ಲೆಟಿಕ್ಸ್​ನಲ್ಲಿ 29 ಸ್ಪರ್ಧಿಗಳು ಸ್ಪರ್ಧಿಸಲಿದ್ದಾರೆ. 18 ಪುರುಷರು ಹಾಗೂ 11 ಮಹಿಳೆಯರು ಸೇರಿದ್ದಾರೆ. ಆರಂಭದಲ್ಲಿ ಅಥ್ಲೀಟ್​ಗಳ ಸಂಖ್ಯೆ​ 30 ಇತ್ತು. ಆದರೆ ವನಿತಾ ಶಾಟ್‌ಪುಟರ್‌ ಅಭಾ ಖತುವಾ ಗೈರಿನಿಂದ 29ಕ್ಕೆ ಇಳಿಯಿತು. ಆದರೆ ಅವರನ್ನು ಕೈಬಿಟ್ಟ ಬಗ್ಗೆ ಯಾವುದೇ ಕಾರಣ ಅಥವಾ ವಿವರಣೆ ನೀಡಲಾಗಿಲ್ಲ.  29 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.

ಇದನ್ನೂ ಓದಿ Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

ಅತ್ಯಧಿಕ 18 ಮಂದಿ ಸಹಾಯಕ ಸಿಬಂದಿಯನ್ನು ಶೂಟಿಂಗ್‌ ತಂಡಕ್ಕೆ ಒದಗಿಸಲಾಗಿದೆ. ಕುಸ್ತಿಗೆ 12, ಬಾಕ್ಸಿಂಗ್‌ಗೆ 11, ಹಾಕಿಗೆ 10, ಟಿಟಿ ಮತ್ತು ಬ್ಯಾಡ್ಮಿಂಟನ್‌ಗೆ 9, ಗಾಲ್ಫ್​ಗೆ 5, ಆರ್ಚರಿ, ಹಾಯಿದೋಣಿ ಮತ್ತು ವೇಟ್‌ಲಿಫ್ಟಿಂಗ್‌ಗೆ
4, ಟೆನಿಸ್‌ಗೆ 3, ಈಜಿಗೆ 2 ಹಾಗೂ ಜೂಡೋಗೆ ಒಬ್ಬರು ಸಹಾಯಕ ಸಿಬ್ಬಂದಿ ನೀಡಲಾಗಿದೆ. ಒಟ್ಟು 140 ಮಂದಿ ಅಧಿಕಾರಿಗಳು ಹಾಗೂ ಸಹಾಯಕ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. 2

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Ravindra Jadeja: ಟೀಮ್​ ಇಂಡಿಯಾ ಪರ ಜಡೇಜಾ ಇನ್ನು ಏಕದಿನ ಆಡುವುದು ಅನುಮಾನ; ಕಾರಣವೇನು?

Ravindra Jadeja: ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್​ ಟ್ರೋಫಿಯಲ್ಲಿಯೂ ಜಡೇಜಾಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಅವರನ್ನು ಏಕದಿನ ತಂಡದಲ್ಲಿ ಮುಂದುವರಿಸುವ ಯೋಜನೆ ಇದಿದ್ದರೆ ಲಂಕಾ ಸರಣಿಯಲ್ಲಿ ಅವಕಾಶ ನೀಡಬೇಕಿತ್ತು.

VISTARANEWS.COM


on

Ravindra Jadeja
Koo

ಮುಂಬಯಿ: ಟಿ20 ವಿಶ್ವಕಪ್​ ಗೆದ್ದ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದ ರವೀಂದ್ರ ಜಡೇಜಾ ಅವರನ್ನು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಕೈಬಿಡಲಾಗಿದೆ. ಇದೀಗ ಕ್ರಿಕೆಟ್​ ವಲಯದಲ್ಲಿ ಜಡೇಜಾ(Ravindra Jadeja) ಅವರ ಏಕದಿನ ಕ್ರಿಕೆಟ್‌ ಬದುಕು ಬಹುತೇಕ ಮುಕ್ತಾಯಗೊಂಡಿದೆ ಎಂದು ಚರ್ಚೆಗಳು ನಡೆಯುತ್ತಿದೆ.

ಅಕ್ಷರ್‌ ಪಟೇಲ್‌ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಬಿಸಿಸಿಐ ಯೋಜನೆ ರೂಪಿಸಿದೆ. ಇದೇ ಕಾರಣಕ್ಕೆ ಜಡೇಜಾರನ್ನು ಏಕದಿನ ಸರಣಿಯಿಂದ ಕೈಬಿಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟಿ20 ವಿಶ್ವಕಪ್​ನಲ್ಲಿಯೂ ಜಡೇಜಾ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಅಕ್ಷರ್​ ಪಟೇಲ್ ಬ್ಯಾಟಿಂಗ್​ ಮತ್ತು ಬೌಲಿಂಗ್​ 2 ವಿಭಾಗದಲ್ಲಿಯೂ​ ನಿರೀಕ್ಷಿತ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು.

ಇದನ್ನೂ ಓದಿ Ravindra Jadeja: ವಿಶ್ವಕಪ್​ ಟ್ರೋಫಿಯೊಂದಿಗೆ ತಾಯಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಜಡೇಜಾ

ಜಡೇಜಾಗೆ ಈಗ 35 ವರ್ಷ, ಮುಂದಿನ ಏಕದಿನ ವಿಶ್ವಕಪ್​ ನಡೆಯಲು ಇನ್ನೂ ಮೂರು ವರ್ಷಗಳಿವೆ. 2027ರಲ್ಲಿ ಏಕದಿನ ವಿಶ್ವಕಪ್​ ನಡೆಯಲಿದೆ. ಈ ವೇಳೆಗೆ ಜಡೇಜಾಗೆ 38 ವರ್ಷ ವಯಸ್ಸಾಗಿರುತ್ತದೆ. ಇಲ್ಲಿಯ ಅವರೆಗೆ ಅವರ ಫಾರ್ಮ್​ ಹೇಗಿರುತ್ತದೆ ಎನ್ನುವ ಪ್ರಶ್ನೆ ಕೂಡ ಸಹಜ. ಅಲ್ಲದೆ ಜಡೇಜಾ ಪದೇಪದೆ ಗಾಯಕ್ಕೂ ತುತ್ತಾಗುತ್ತಿರುತ್ತಾರೆ. ಯುವ ಆಟಗಾರರನ್ನು ಬೆಳೆಸುವ ಸಲುವಾಗಿ ಫಾರ್ಮ್​ ಕಳೆದುಕೊಂಡ ಹಿರಿಯ ಆಟಗಾರರನ್ನು ಬಿಸಿಸಿಐ ತಂಡದಿಂದ ಕೈಬಿಡುವುದು ಖಚಿತ.

ಮುಂದಿನ ವರ್ಷ ನಡೆಯುವ ಚಾಂಪಿಯನ್ಸ್​ ಟ್ರೋಫಿಯಲ್ಲಿಯೂ ಜಡೇಜಾಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಅವರನ್ನು ಏಕದಿನ ತಂಡದಲ್ಲಿ ಮುಂದುವರಿಸುವ ಯೋಜನೆ ಇದಿದ್ದರೆ ಲಂಕಾ ಸರಣಿಯಲ್ಲಿ ಅವಕಾಶ ನೀಡಬೇಕಿತ್ತು. ಅಕ್ಷರ್‌ಗೆ ಹೆಚ್ಚಿನ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಜಡೇಜಾರನ್ನು ಬಿಸಿಸಿಐ ಮುಂದುವರಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಜಡೇಜಾ ಭಾರತ ಪರ 197 ಏಕದಿನ ಪಂದ್ಯಗಳನ್ನಾಡಿದ್ದು, 2756 ರನ್‌ ಕಲೆಹಾಕಿದ್ದಾರೆ. 220 ವಿಕೆಟ್‌ಗಳನ್ನೂ ಪಡೆದಿದ್ದಾರೆ.

ಗಿಲ್​ ಭವಿಷ್ಯದ ನಾಯಕ!


ರೋಹಿತ್​ ಶರ್ಮ ಬಳಿಕ ಹಾರ್ದಿಕ್​ ಪಾಂಡ್ಯ ಅಥವಾ ಕೆ.ಎಲ್​ ರಾಹುಲ್​ ಏಕದಿನ ತಂಡದ ನಾಯಕ ಎಂದು ಹೇಳಲಾಗಿತ್ತು. ಆದರೆ, ಲಂಕಾ ಸರಣಿಗೆ ತಂಡ ಪ್ರಕಟಿಸುವಾಗ ಯುವ ಆಟಗಾರ ಶುಭಮನ್​ ಗಿಲ್​ ಅವರನ್ನು ಉಪನಾಯನಾಗಿ ಆಯ್ಕೆ ಮಾಡುವ ಮೂಲಕ ಅವರು ಭವಿಷ್ಯದ ನಾಯಕ ಎಂಬ ಸಂದೇಶವನ್ನು ಬಿಸಿಸಿಐ ನೀಡಿತ್ತು. 2027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಶುಭಮನ್‌ ಗಿಲ್‌ಗೆ ಉಪನಾಯಕನ ಸ್ಥಾನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಏಕದಿನ ತಂಡ


ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Continue Reading

ಕ್ರೀಡೆ

Paris Olympics 2024 : ಒಲಿಂಪಿಕ್ಸ್​ಗೆ ತೆರಳಿರುವ ಭಾರತದ ಹಿರಿಯ ಮತ್ತು ಕಿರಿಯ ಸ್ಪರ್ಧಿಗಳು ಯಾರು ಗೊತ್ತೇ? ಇಲ್ಲಿದೆ ಅವರ ವಿವರ

Paris Olympics 2024: ಈ ಹಿಂದಿನ ಗರಿಷ್ಠ 7 ಪದಕಗಳ ದಾಖಲೆ ಮುರಿಯುವ ಭರವಸೆ ಹೊಂದಿದೆ. ಭಾರತವು ಕ್ರೀಡಾಳುಗಳ ತಂಡದಲ್ಲಿ ಅನುಭವ ಮತ್ತು ಉತ್ಸಾಹಿ ಯುವ ಪಡೆಯಿದೆ. ಅದರಲ್ಲಿ 44 ವರ್ಷದ ರೋಹನ್ ಬೋಪಣ್ಣ (Rohan Bopanna) ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ ಅತ್ಯಂತ ಹಿರಿಯ ಅಥ್ಲೀಟ್ ಆಗಿದ್ದಾರೆ. 14 ವರ್ಷದ ಧಿನಿಧಿ ದೇಸಿಂಘು ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಎನಿಸಿಕೊಂಡಿದ್ದಾರೆ.

VISTARANEWS.COM


on

Paris Olympics 2024
Koo

ಬೆಂಗಳೂರು: ಭಾರತವು 117 ಸದಸ್ಯರ ಬಲವಾದ ತಂಡದೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ತೆ 2024ಕ್ಕೆ (Paris Olympics 2024) ತೆರಳಲಿದೆ. ಇದು 2021ರಲ್ಲಿ ಕಳುಹಿಸಿರುವ ನಾಲ್ಕು ಸದಸ್ಯರು ಕಡಿಮೆ ಇರುವ ನಿಯೋಗ. ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಹಲವಾರು ಕ್ರೀಡೆಗಳಲ್ಲಿ ಸಾಕಷ್ಟು ಯಶಸ್ಸು ಪಡೆದಿರುವ ಭಾರತೀಯ ನಿಯೋಗವು ಪ್ರಣಯ ನಗರಕ್ಕೆ ತೆರಳಿದೆ. ಈ ಹಿಂದಿನ ಗರಿಷ್ಠ 7 ಪದಕಗಳ ದಾಖಲೆ ಮುರಿಯುವ ಭರವಸೆ ಹೊಂದಿದೆ. ಭಾರತವು ಕ್ರೀಡಾಳುಗಳ ತಂಡದಲ್ಲಿ ಅನುಭವ ಮತ್ತು ಉತ್ಸಾಹಿ ಯುವ ಪಡೆಯಿದೆ. ಅದರಲ್ಲಿ 44 ವರ್ಷದ ರೋಹನ್ ಬೋಪಣ್ಣ (Rohan Bopanna) ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಭಾರತದ ಅತ್ಯಂತ ಹಿರಿಯ ಅಥ್ಲೀಟ್ ಆಗಿದ್ದಾರೆ. 14 ವರ್ಷದ ಧಿನಿಧಿ ದೇಸಿಂಘು ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಎನಿಸಿಕೊಂಡಿದ್ದಾರೆ.

ರೋಹನ್ ಬೋಪಣ್ಣ ಸಾಧನೆಯ ವಿವರ ಇಲ್ಲಿದೆ

ಪ್ಯಾರಿಸ್​​ನಲ್ಲಿ ನಡೆಯಲಿರುವ ಒಲಿಂಪಿಕ್ ಪದಕ ಗೆಲ್ಲಲು ಬೋಪಣ್ಣ ಹೋಗಲಿದ್ದಾರೆ. ಇದು ಒಲಿಂಪಿಕ್ಸ್​​ನಲ್ಲಿ ಹಿರಿಯ ಆಟಗಾರನ ಮೂರನೇ ಎಂಟ್ರಿಯಾಗಿದೆ. ಬೋಪಣ್ಣ ಮತ್ತು ಮಹೇಶ್ ಭೂಪತಿ 2012ರಲ್ಲಿ ಪುರುಷರ ಡಬಲ್ಸ್ ನಲ್ಲಿ ಎರಡನೇ ಸುತ್ತು ತಲುಪಿದ್ದರು.

2016ರಲ್ಲಿ ಬೋಪಣ್ಣ ಮತ್ತು ಲಿಯಾಂಡರ್ ಪೇಸ್ ಪುರುಷರ ಡಬಲ್ಸ್ ವಿಭಾಗದಲ್ಲಿ ಜೋಡಿಯಾಗಿದ್ದರು. ಆದರೆ ಪದಕ ಗೆಲ್ಲಲಿಲ್ಲ. ಆದರೆ, ಬೋಪಣ್ಣ ಮತ್ತು ಅವರ ಮಿಶ್ರ ಡಬಲ್ಸ್ ಪಾಲುದಾರಾದ ಸಾನಿಯಾ ಮಿರ್ಜಾ ಅವರು ಪ್ಲೇಆಫ್​ ಹಂತಕ್ಕೆ ತೇರ್ಗಡೆಯಾಗಿದ್ದರು. ಆದರೆ, ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಜೆಕ್ ಗಣರಾಜ್ಯದ ಲೂಸಿ ಹ್ರಾಡೆಕಾ ಮತ್ತು ರಾಡೆಕ್ ಸ್ಟೆಪಾನೆಕ್ ವಿರುದ್ಧ ನೇರ ಸೆಟ್​ನಲ್ಲಿ ಸೋತಿದ್ದರು.

ಬೋಪಣ್ಣ ಟೋಕಿಯೊ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿರಲಿಲ್ಲ. ಇದೀಗ 44 ವರ್ಷದ ಬೋಪಣ್ಣ, ಪ್ರವಾಸದಲ್ಲಿ ತಮ್ಮ ಶ್ರೇಯಾಂಕದ ಮೂಲಕ ಭಾರತದ ಕೋಟಾವನ್ನು ಭದ್ರಪಡಿಸಿಕೊಂಡರು. ವಿಶ್ವದ 62ನೇ ಶ್ರೇಯಾಂಕಿತ ಆಟಗಾರ ಎನ್.ಶ್ರೀರಾಮ್ ಬಾಲಾಜಿ ಅವರೊಂದಿಗೆ ಕರ್ನಾಟಕದ ಟೆನಿಸ್ ದಿಗ್ಗಜ ಡಬಲ್ಸ್​ ಪಾಲುದಾರಾಗಿದ್ದಾರೆ. ಅವರು ಈ ವರ್ಷದ ಆರಂಭದಲ್ಲಿ ವಿಶ್ವದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು. ಅವರು ಮತ್ತು ಅವರ ಆಸ್ಟ್ರೇಲಿಯಾದ ಪಾಲುದಾರ ಮ್ಯಾಥ್ಯೂ ಎಬ್ಡೆನ್ ಆಸ್ಟ್ರೇಲಿಯನ್ ಓಪನ್ ಕಿರೀಟ ಗೆದ್ದಿದ್ದರು. ಈ ವೇಳೆ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ ಗೆದ್ದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರು ಪ್ರೆಂಚ್​ ಓಪನ್​ನಲ್ಲಿ ಪುರುಷರ ಡಬಲ್ಸ್ ಸೆಮಿಫೈನಲ್ ತಲುಪಿದ್ದರು.

ಇದನ್ನೂ ಓದಿ: Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ 117 ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವಿವರ ಇಲ್ಲಿದೆ

ಎಟಿಪಿ 500 ಟೂರ್ನಮೆಂಟ್ ಹ್ಯಾಂಬರ್ಗ್ ಓಪನ್​ ಬೋಪಣ್ಣ ಮತ್ತು ಬಾಲಾಜಿ ಆಡಿದ್ದರು. ಆದರೆ ಅವರು ಮೊದಲ ಸುತ್ತಿನಲ್ಲೇ ಸೋಲುವ ಮೂಲಕ ನಿರಾಸೆ ಎದುರಿಸಿದ್ದರ.

ಭಾರತದ ಅತ್ಯಂತ ಕಿರಿಯ ಆಟಗಾರ್ತಿ ಧಿನಿಧಿ ದೇಸಿಂಘು

ಬೆಂಗಳೂರಿನ 14 ವರ್ಷದ ಈಜುಗಾರ್ತಿ ಧಿನಿಧಿ ದೇಸಿಂಘು 2024 ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತದ ಅತ್ಯಂತ ಕಿರಿಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅನುಭವಿ ಈಜುಗಾರ ಶ್ರೀಹರಿ ನಟರಾಜ್ ಅವರೊಂದಿಗೆ ಒಲಿಂಪಿಕ್ ಕ್ರೀಡಾಕೂಟದ ಕೋಟಾವನ್ನು ನೀಡಿದದ್ದರು.

ಮಹಿಳೆಯರ 200 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ದೇಸಿಂಘು ಸ್ಪರ್ಧಿಸಲಿದ್ದು, ಇತಿಹಾಸದಲ್ಲಿ ಎರಡನೇ ಕಿರಿಯ ಭಾರತೀಯ ಒಲಿಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ, ಆರತಿ ಸಹಾ 1952 ರ ಹೆಲ್ಸಿಂಕಿ ಒಲಿಂಪಿಕ್ಸ್​ನಲ್ಲಿ 11 ನೇ ವಯಸ್ಸಿನಲ್ಲಿ ಕಿರಿಯ ಭಾರತೀಯ ಒಲಿಂಪಿಯನ್ ಎಂಬ ದಾಖಲೆ ಮಾಡಿದ್ದರು. ಶಾಲೆಯಲ್ಲಿ ಕೇವಲ ಒಂಬತ್ತನೇ ತರಗತಿಯಲ್ಲಿದ್ದರೂ, ದೇಸಿಂಘು ಈಗಾಗಲೇ ತನ್ನ ಕೌಶಲ ಹಾಗೂ ಅಸಾಧಾರಣ ಪ್ರತಿಭೆ ತೋರಿದ್ದಾರೆ.

14ರ ಹರೆಯದ ಈ ಆಟಗಾರ್ತಿಗೆ ಪ್ಯಾರಿಸ್ ಒಲಿಂಪಿಕ್ಸ್ ಪ್ರಮುಖ ಟೂರ್ನಿಗಳ ಮೊದಲ ಪ್ರವೇಶ ಅಲ್ಲ . 2022ರಲ್ಲಿ ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ ಹಾಗೂ 2024ರಲ್ಲಿ ದೋಹಾದಲ್ಲಿ ನಡೆದ ವಿಶ್ವ ಅಕ್ವಾಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಿದ್ದರು.

Continue Reading

ಕ್ರೀಡೆ

Mohammed Shami: ಪಾಕ್​ ಮಾಜಿ ನಾಯಕ ಇಂಜಮಾಮ್ ಬೆಂಡೆತ್ತಿದ ಮೊಹಮ್ಮದ್​ ಶಮಿ

Mohammed Shami: ನೀವೊಬ್ಬ ಮಾಜಿ ಆಟಗಾರರಾಗಿಯೂ ಪದೇಪದೆ ಈ ರೀತಿಯ ಸುಳ್ಳು ಆರೋಪ ಮಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ ಎಂದು ಮೊಹಮ್ಮದ್​ ಶಮಿ(Mohammed Shami) ಇಂಜಮಾಮ್ ಉಲ್ ಹಕ್(Inzamam Ul Haq)ಗೆ ತಿರುಗೇಟು ಕೊಟ್ಟಿದ್ದಾರೆ.

VISTARANEWS.COM


on

Koo

ಬೆಂಗಳೂರು: ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಟೂರ್ನಿಯ ವೇಳೆ ಭಾರತ ತಂಡದ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಅವರ ರಿವರ್ಸ್ ಸ್ವಿಂಗ್ ಎಸೆತವನ್ನು ಪ್ರಶ್ನೆ ಮಾಡಿ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದ ಪಾಕಿಸ್ತಾನ ತಂಡದ ಮಾಜಿ ಆಟಗಾರ ಹಾಗೂ ನಾಯಕ ಇಂಜಮಾಮ್ ಉಲ್ ಹಕ್(Inzamam Ul Haq)ಗೆ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್​ ಶಮಿ(Mohammed Shami) ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ವಿಶ್ಲೇಷಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಇಂಜಮಾಮ್, ಅರ್ಶ್​ದೀಪ್ ರಿವರ್ಸ್ ಸ್ವಿಂಗ್ ಬಗ್ಗೆ ಅನುಮಾನವಿದೆ. 15ನೇ ಓವರ್​ನಲ್ಲಿ ಅವರು ಬೌಲಿಂಗ್​ ನಡೆಸುವ ವೇಳೆ ಚೆಂಡು ಹೆಚ್ಚು ಸ್ವಿಂಗ್​ ಆಗುತ್ತಿತ್ತು. ನಾನು ಗಮನಿಸಿದ ಹಾಗೆ ಈ ರೀತಿ ಚೆಂಡು ಏಕಾಏಕಿ ಸ್ವಿಂಗ್​ ಆಗಲು ಸಾಧ್ಯವಿಲ್ಲ. ನನ್ನ ಪ್ರಕಾರ ಭಾರತೀಯ ಆಟಗಾರರು 12 ಅಥವಾ 13ನೇ ಓವರ್​ನಲ್ಲಿ ಚೆಂಡಿಗೆ ಶೈನಿಂಗ್​ ಹಚ್ಚಿದಂತೆ ಕಾಣುತ್ತಿದೆ. ಅಂಪೈರ್​ಗಳು ಇದನ್ನು ಸೂಕ್ಷವಾಗಿ ಪರಿಗಣಿಸಬೇಕು. ಇಲ್ಲಿ ಯಾವುದೋ ಮೋಸದಾಟ ನಡೆದಂತಿದೆ” ಎಂದು ಆರೋಪಿಸಿದ್ದರು.

“ಇಂಜಮಾಮ್ ಬಗ್ಗೆ ನನಗೆ ಗೌರವವಿದೆ. ಆದರೆ ಅವರು ಜನರನ್ನು ಮೂರ್ಖರನ್ನಾಗಿಸಲು ನೀಡುವ ಹೇಳಿಕೆ ಬಗ್ಗೆ ನನ್ನ ವಿರೋದವಿದೆ. ಕಳೆದ ಏಕದಿನ ವಿಶ್ವಕಪ್​ನಲ್ಲಿಯೂ ಅವರು ಇದೇ ರೀತಿಯ ಹೇಳಿಕೆ ನೀಡಿದಕ್ಕೆ ನಾನು ತಕ್ಕ ಉತ್ತರ ನೀಡಿದ್ದೇನೆ. ನಾನು ಒಂದೇ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಪಾಕಿಸ್ತಾನ ಬೌಲರ್​ಗಳು ಸ್ವಿಂಗ್​ ಮಾಡಿದರೆ ಅದು ಬಾಲ್ ಟ್ಯಾಂಪರಿಂಗ್ ಅಲ್ಲವೇ?, ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳಾಗಿವೆ. ಹಾಗಂತ ಸುಮ್ಮಸುಮ್ಮನೆ ಆರೋಪ ಮಾಡುವುದು ಸರಿಯಲ್ಲ” ಎಂದು ಮೊಹಮ್ಮದ್ ಶಮಿ ತಿರುಗೇಟು ನೀಡಿದರು.

ಇದನ್ನೂ ಓದಿ Shami-Sania Mirza: ಸಾನಿಯಾ ಮಿರ್ಜಾ ಜತೆ ಮದುವೆ?; ಮೊದಲ ಬಾರಿಗೆ ಸ್ಪಷ್ಟನೆ ಕೊಟ್ಟ ಶಮಿ

“ನೀವೊಬ್ಬ ಮಾಜಿ ಆಟಗಾರರಾಗಿಯೂ ಪದೇಪದೆ ಈ ರೀತಿಯ ಸುಳ್ಳು ಆರೋಪ ಮಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ” ಎಂದು ಶಮಿ ಕುಟುಕಿದ್ದಾರೆ. ರೋಹಿತ್ ಶರ್ಮಾ (Rohit Sharma) ಕೂಡ ಇಂಜಮಾಮ್ ಹೇಳಿಕೆಗೆ ಅಂದು ತಿರುಗೇಟು ನೀಡಿದ್ದರು. ‘ನಾನು ಇದಕ್ಕೆ ಏನು ಉತ್ತರ ಕೊಡಲಿ? ಬಿಸಿಲಿನಲ್ಲಿ ಆಡುತ್ತಿದ್ದರೆ ಮತ್ತು ಪಿಚ್​ ಒಣಗಿದ್ದರೆ ಚೆಂಡು ರಿವರ್ಸ್​ ಸ್ವಿಂಗ್ ಆಗುತ್ತಿದೆ. ಚೆಂಡು ಎಲ್ಲಾ ತಂಡಗಳಿಗೂ ಅದೇ ರೀತಿ ವರ್ತಿಸುತ್ತದೆ. ನಮಗೆ ಮಾತ್ರ ಅನುಕೂಲವಾಗಿಲ್ಲ. ಕೆಲವೊಮ್ಮೆ, ನಿಮ್ಮ ತಲೆಯನ್ನು ತೆರೆದು ಮೆದುಳನ್ನು ಬಳಸಿ ಮಾತನಾಡಬೇಕಾಗುತ್ತದೆ” ಎಂದು ಹೇಳಿದ್ದರು. 

ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ  ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು.

Continue Reading

ಕ್ರಿಕೆಟ್

Viral Video: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಗುಳ್ಳೆ ನರಿ; ವಿಡಿಯೊ ವೈರಲ್​

Viral Video: ಲಂಡನ್​ನಲ್ಲಿ ಕ್ರಿಕೆಟ್​ ಪಂದ್ಯವೊಂದು ನಡೆಯುತ್ತಿದ್ದ ವೇಳೆ ಕಂದು ಬಣ್ಣದ ನರಿಯೊಂದು(Brown Fox) ಏಕಾಏಕಿಯಾಗಿ ಮೈದಾನಕ್ಕೆ ನುಗ್ಗಿದೆ. ನೆರದಿದ್ದ ಪ್ರೇಕ್ಷಕರು ಮತ್ತು ಆಟಗಾರರ ಗದ್ದಲದಿಂದ ಹೆದರಿಕೊಂಡ ಈ ನರಿ ಕೆಲ ಕಾಲ ಮೈದಾನದ ಸುತ್ತಲೂ ಓಡಿ ಕೊನೆಗೂ ಮೈದಾನದಿಂದ ಜಿಗಿದು ಹೊರ ಹೋಗಿದೆ.

VISTARANEWS.COM


on

Viral Video
Koo

ಲಂಡನ್​: ಸಾಮನ್ಯವಾಗಿ ಕ್ರಿಕೆಟ್​ ಪಂದ್ಯದ ವೇಳೆ ನಾಯಿ, ಹಾವು, ಬೆಕ್ಕು ಕಾಣಿಸಿಕೊಳ್ಳುವುದು ಸರ್ವೆ ಸಾಮಾನ್ಯ. ಪಂದ್ಯದ ವೇಳೆ ಇವುಗಳು ಮೈದಾನಕ್ಕೆ ಬಂದು ಪಂದ್ಯಗಳು ಅಡಚಣೆಯಾದ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಆದರೆ, ಈ ಬಾರಿ ವಿಶೇಷ ಅತಿಥಿಯಂತೆ ನರಿಯೊಂದು(Monitor Lizard) ಮೈದಾನಕ್ಕೆ ಬಂದಿದೆ. ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral Video)​ ಆಗಿದೆ. ಲಂಡನ್​ನಲ್ಲಿ ಈ ಘಟನೆ ನಡೆದಿದೆ.

ಲಂಡನ್​ನಲ್ಲಿ ಕ್ರಿಕೆಟ್​ ಪಂದ್ಯವೊಂದು ನಡೆಯುತ್ತಿದ್ದ ವೇಳೆ ಕಂದು ಬಣ್ಣದ ನರಿಯೊಂದು(Brown Fox) ಏಕಾಏಕಿಯಾಗಿ ಮೈದಾನಕ್ಕೆ ನುಗ್ಗಿದೆ. ನೆರದಿದ್ದ ಪ್ರೇಕ್ಷಕರು ಮತ್ತು ಆಟಗಾರರ ಗದ್ದಲದಿಂದ ಹೆದರಿಕೊಂಡ ಈ ನರಿ ಕೆಲ ಕಾಲ ಮೈದಾನದ ಸುತ್ತಲೂ ಓಡಿ ಕೊನೆಗೂ ಮೈದಾನದಿಂದ ಜಿಗಿದು ಹೊರ ಹೋಗಿದೆ. ಆಟಗಾರರು ನರಿ…ನರಿ ಎಂದು ಕೂಗುತ್ತಿರುವುದನ್ನು ವಿಡಿಯೊದಲ್ಲಿ ಕೇಳಬಹುದಾಗಿದೆ.

ಕೆಲವು ತಿಂಗಳುಗಳ ಹಿಂದೆ ಕೊಲಂಬೊದಲ್ಲಿ ನಡೆದಿದ್ದ ಅಫಘಾನಿಸ್ತಾನ ಮತ್ತು ಶ್ರೀಲಂಕಾ(Sri Lanka vs Afghanistan) ನಡುವಣ ಏಕೈಕ ಟೆಸ್ಟ್​ ಪಂದ್ಯದಲ್ಲಿ ಉಡವೊಂದು(Monitor Lizard) ಬೌಂಡರಿ ಗೆರೆ ದಾಟಿ ಮೈದಾನಕ್ಕೆ ಎಂಟ್ರಿ ಕೊಟ್ಟಿತ್ತು. ಸೀಳಿದಂತಿದ್ದ ಕೆಂಗುಲಾಬಿ ಬಣ್ಣದ ನಾಲಿಗೆಯನ್ನು ಹೊರಚಾಚುತ್ತಾ ಮೈದಾನದಲ್ಲಿ ಓಡಾಡಿತ್ತು. ಈ ವಿಡಿಯೊ ಕೂಡ ವೈರಲ್ ಆಗಿತ್ತು. 

ಉಡವನ್ನು ಕಂಡ ಫೀಲ್ಡ್​ ಅಂಪೈರ್ ಬೌಲಿಂಗ್​ ನಡೆಸಲು ಓಡಿ ಬಂದ ನಿಜತ್ ಮಸೂದ್ ಅವರನ್ನು ತಡೆದು ನಿಲ್ಲಿಸಿ ಬಳಿಕ ಮೈದಾನ ಸಿಬ್ಬಂದಿಗೆ ಉಡವನ್ನು ಹೊರಗಡೆ ಹಾಕುವಂತೆ ಸೂಚನೆ ನೀಡಿದ್ದರು. ಈ ವೇಳೆ ಮೈದಾನದ ಹೊರಗಿದ್ದ ಅಂಪೈರ್​ ಉಡವನ್ನು ಓಡಿಸಲು ಕೆಲ ಕಾಲ ಹರ ಸಾಹಸ ಪಟ್ಟು ಅಂತಿಮವಾಗಿ ಉಡವನ್ನು ಮೈದಾನದಿಂದ ಓಡಿಸಿದ್ದರು.

ದಿಟ್ಟ ಹೋರಾಟ ನಡೆಸಿದ ವಿಂಡೀಸ್​


ಇಂಗ್ಲೆಂಡ್‌ ಎದುರಿನ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ದಿಟ್ಟ ಆಟವಾಡುವ ಮೂಲಕ ತೀವ್ರ ಪೈಪೋಟಿ ನೀಡಿದೆ. ಇಂಗ್ಲೆಂಡ್​ ತಂಡದ ಮೊದಲ ಇನಿಂಗ್ಸ್​ನ 416 ರನ್ನಿಗೆ ಉತ್ತರವಾಗಿ ಬ್ಯಾಟಿಂಗ್​ ನಡೆಸುತ್ತಿರುವ ವೆಸ್ಟ್​ ಇಂಡೀಸ್​ ಕಾವೆಮ್‌ ಹಾಜ್‌(120) ಅಮೋಘ ಶತಕದ ನೆರವಿನಿಂದ 5 ವಿಕೆಟಿಗೆ 351 ರನ್‌ ಗಳಿಸಿ ದ್ವಿತೀಯ ದಿನದಾಟ ಮುಂದುವರಿಸಿದೆ. ಇನ್ನೂ 65 ರನ್​ ಹಿನ್ನಡೆಯಲ್ಲಿದೆ. ಸದ್ಯದ ಪರಿಸ್ಥಿತಿ ನೋಡುವಾಗ ವಿಂಡೀಸ್​ ಮೊದಲ ಇನಿಂಗ್ಸ್​ನಲ್ಲಿ ಭಾರೀ ಮುನ್ನಡೆ ಸಾಧಿಸುವ ನಿರೀಕ್ಷೆಯಿದೆ. ಜಾಸನ್​ ಹೋಲ್ಡರ್​(23) ಮತ್ತು ಜೋಶುವಾ ಡಾ ಸಿಲ್ವಾ(32) ರನ್​ ಗಳಿಸಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ Viral Video: ನೋಡ ನೋಡ್ತಿದ್ದಂತೆ ಕುಸಿದು ಬಿತ್ತು ಕ್ಲಾಸ್‌ರೂಂ ಗೋಡೆ; ಒಳಗಿದ್ದ ಮಕ್ಕಳ ಕತೆ ಏನಾಯ್ತು ಗೊತ್ತಾ? ವಿಡಿಯೋ ಇದೆ

ಮುಂಬೈ ತಂಡ ಸೇರಲಿದ್ದಾರೆ ಬೆನ್ ಸ್ಟೋಕ್ಸ್​​

ದಕ್ಷಿಣ ಆಫ್ರಿಕಾದ ಪ್ರೀಮಿಯರ್ ಫ್ರ್ಯಾಂಚೈಸ್ ಲೀಗ್ ಎಸ್ಎ 20 ಯ ಮುಂದಿನ ಆವೃತ್ತಿಯಲ್ಲಿ ಇಂಗ್ಲೆಂಡ್ ಸ್ಟಾರ್ ಬೆನ್ ಸ್ಟೋಕ್ಸ್ (Ben Stokes) ಎಂಐ ಕೇಪ್ ಟೌನ್​ ತಂಡಕ್ಕೆ ಆಡಲು ಸಹಿ ಹಾಕಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಎಸ್ಎ 20 ಅನ್ನು 2023 ರಲ್ಲಿ ಒಟ್ಟು ಆರು ತಂಡಗಳೊಂದಿಗೆ ಪ್ರಾರಂಭಿಸಲಾಯಿತು. ಎಲ್ಲಾ ತಂಡಗಳು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಮಾಲೀಕರ ಒಡೆತನದಲ್ಲಿವೆ. ಎಂಐ ಕೇಪ್ ಟೌನ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಪಾಲುದಾರ ತಂಡವಾಗಿದೆ.

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಬೆನ್ ಸ್ಟೋಕ್ಸ್ ಎಸ್ಎ 20 ನ ಮೂರನೇ ಆವೃತ್ತಿಯಲ್ಲಿ ಕೇಪ್ ಟೌನ್ ಮೂಲದ ಫ್ರಾಂಚೈಸಿಗಾಗಿ ಆಡುವುದನ್ನು ಕಾಣಬಹುದು. ಮುಂದಿನ ಜನವರಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಆಡಲು ಇಂಗ್ಲೆಂಡ್ ಟೆಸ್ಟ್ ನಾಯಕನಿಗೆ 800,000 ಪೌಂಡ್ (ಅಂದಾಜು 8.65 ಕೋಟಿ ರೂ.) ವರೆಗೆ ಆಫರ್ ನೀಡಲಾಗಿದೆ ಎಂದು ವರದಿ ತಿಳಿಸಿದೆ. ಬೆನ್ ಸ್ಟೋಕ್ಸ್ ಇತ್ತೀಚಿನ ದಿನಗಳಲ್ಲಿ ಟಿ 20 ಯಿಂದ ದೂರವಿದ್ದರೂ, ಅವರು ಇನ್ನೂ ವಿಶ್ವದ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಒಬ್ಬರು. ಅವರು ಇತ್ತೀಚೆಗೆ ನಿಯಮಿತವಾಗಿ ಬೌಲಿಂಗ್ ಪುನರಾರಂಭಿಸಿದ್ದಾರೆ. ಇದು ಅವರನ್ನು ಇನ್ನಷ್ಟು ಮೌಲ್ಯಯುತವಾಗಿಸುತ್ತದೆ.

Continue Reading
Advertisement
Ravindra Jadeja
ಕ್ರಿಕೆಟ್20 mins ago

Ravindra Jadeja: ಟೀಮ್​ ಇಂಡಿಯಾ ಪರ ಜಡೇಜಾ ಇನ್ನು ಏಕದಿನ ಆಡುವುದು ಅನುಮಾನ; ಕಾರಣವೇನು?

Bangladesh protests
ವಿದೇಶ22 mins ago

Bangladesh Protests: ಬಾಂಗ್ಲಾದಲ್ಲಿ ನಿಲ್ಲದ ಹಿಂಸಾಚಾರ; 1000 ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್‌; ಸಾವಿನ ಸಂಖ್ಯೆ 115ಕ್ಕೆ ಏರಿಕೆ

Star suvarna Ravi Shankar entered television suvarna grahamanthri
ಕಿರುತೆರೆ32 mins ago

Star Suvarna: `ಸುವರ್ಣ ಗೃಹಮಂತ್ರಿ’ಯ ಸಾರಥಿಯಾಗಿ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ರವಿಶಂಕರ್

Paris Olympics 2024
ಕ್ರೀಡೆ40 mins ago

Paris Olympics 2024 : ಒಲಿಂಪಿಕ್ಸ್​ಗೆ ತೆರಳಿರುವ ಭಾರತದ ಹಿರಿಯ ಮತ್ತು ಕಿರಿಯ ಸ್ಪರ್ಧಿಗಳು ಯಾರು ಗೊತ್ತೇ? ಇಲ್ಲಿದೆ ಅವರ ವಿವರ

Union Budget 2024
ದೇಶ54 mins ago

Union Budget 2024: ಸ್ಟಾಂಡರ್ಡ್‌ ಡಿಡಕ್ಷನ್‌, 80 ಸಿ ಮೊತ್ತ ಹೆಚ್ಚಳ; ಬಜೆಟ್‌ನಲ್ಲಿ ಏನೆಲ್ಲ ತರಿಗೆ ರಿಲೀಫ್?

Kanguva Movie Suriya to have 3 different looks in Siva
ಕಾಲಿವುಡ್1 hour ago

Kanguva Movie: ʻಕಂಗುವʼ ಚಿತ್ರದಲ್ಲಿ ಮೂರು ಅವತಾರಗಳಲ್ಲಿ ಮಿಂಚಲಿದ್ದಾರಂತೆ ಸೂರ್ಯ

Building Collapsed
ದೇಶ1 hour ago

Building Collapsed: ಭಾರೀ ಮಳೆಗೆ ನಾಲ್ಕು ಅಂತಸ್ತಿಗೆ ಕಟ್ಟಡ ಧರಾಶಾಹಿ; ಮಹಿಳೆ ಬಲಿ

Opposition Party leader R Ashok pressmeet about Valmiki Development Corporation scam
ಕರ್ನಾಟಕ1 hour ago

R Ashok: ವಾಲ್ಮೀಕಿ ಹಗರಣ; ಮುಖ್ಯಮಂತ್ರಿ ಏನು ಕತ್ತೆ ಕಾಯುತ್ತಿದ್ದರೇ ಎಂದ ಆರ್‌. ಅಶೋಕ್‌

King Cobra Rescue
ವೈರಲ್ ನ್ಯೂಸ್1 hour ago

King Cobra Rescue: 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪವನ್ನು ಹಿಡಿದದ್ದು ಹೇಗೆ? ವಿಡಿಯೊ ನೋಡಿ

ಕ್ರೀಡೆ1 hour ago

Mohammed Shami: ಪಾಕ್​ ಮಾಜಿ ನಾಯಕ ಇಂಜಮಾಮ್ ಬೆಂಡೆತ್ತಿದ ಮೊಹಮ್ಮದ್​ ಶಮಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ5 hours ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ1 day ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ1 day ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌