Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ - Vistara News

ಕ್ರೀಡೆ

Paris Olympics: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಕನ್ನಡತಿ ಭಾವನಾ ಪ್ರದ್ಯುಮ್ನ

Paris Olympics:ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ 8 ಮಂದಿ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್.ಪೂವಮ್ಮ, ಮಿಜೊ ಚಾಕೊ ಕುರಿಯನ್‌, ಬ್ಯಾಡ್ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ, ಗಾಲ್ಫ್‌ನಲ್ಲಿ ಅದಿತಿ ಅಶೋಕ್‌, ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್‌ ಹಾಗೂ ಧಿನಿಧಿ ದೇಸಿಂಘು ಸ್ಪರ್ಧಿಸಲಿದ್ದಾರೆ. ಟೇಬಲ್‌ ಟೆನಿಸ್‌ನಲ್ಲಿ ಅರ್ಚನಾ ಕಾಮತ್‌, ಟೆನಿಸ್‌ನಲ್ಲಿ ರೋಹನ್‌ ಬೋಪಣ್ಣ ಕಣದಲ್ಲಿದ್ದಾರೆ.

VISTARANEWS.COM


on

Paris Olympics
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಕ್ರೀಡಾಕೂಟ ಆರಂಭಕ್ಕೆ ಇನ್ನು ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿವೆ. ಜುಲೈ 26ರಂದು ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಭಾರತದಿಂದ ಒಟ್ಟು ಈ ಬಾರಿ 117 ಮಂದಿ ಕ್ರೀಡಾಪಟುಗಳು ಪದಕ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ. ಕರ್ನಾಟಕದಿಂದ 8 ಮಂದಿ ಸ್ಪರ್ಧಿಸಲಿದ್ದಾರೆ. ವಿಶೇಷವೆಂದರೆ ಒಲಿಂಪಿಕ್ಸ್​ ವೇಳೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಕೂಡ ಕರ್ನಾಟಕದವರೇ ಎನ್ನುವುದು ಹೆಮ್ಮೆಯ ವಿಚಾರ.

ಹೌದು, ಕಳೆದ 9 ವರ್ಷಗಳಿಂದ ಪ್ಯಾರಿಸ್​ನಲ್ಲಿ ಸಂಗೀತ ಕಚೇರಿ ಸೇರಿ ಹಲವು ಸಂಸ್ಕೃತಿಯ ಕಾರ್ಯಕ್ರಮ ನಡೆಸುತ್ತಿರುವ ಕರ್ನಾಟಕ ಮೂಲದ ಭಾವನಾ ಪ್ರದ್ಯುಮ್ನ(Bhavana Pradyumna) ಅವರು ಕನ್ಸರ್ವೇಟರಿ ಆಫ್ ಪ್ಯಾರಿಸ್‌ ಸಂಸ್ಥೆಯ ಮೂಲಕ ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ನಡೆಯುವ 24 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಜುಲೈ 27ರಂದು ಶಾಸ್ತ್ರೀಯ ಸಂಗೀತ ಕಚೇರಿ ನಡೆಸುವ ಮೂಲಕ ಅವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಾಸ್ತ್ರೀಯ ಸಂಗೀತ, ನೃತ್ಯ ಕಾರ್ಯಕ್ರಮಗಳು ಮೂಡಿಬರಲಿದೆ. ಒಟ್ಟು 180 ಕಲಾವಿದರಿಂದ ಸಂಗೀತ, ನಾಟಕ ಕಾರ್ಯಕ್ರಮ ನಡೆಯಲಿದೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್​ಗೆ ಹೋದಾಗ ಭಾವನಾ ಪ್ರದ್ಯುಮ್ನ ಅವರು ಮೋದಿಗೆ ಸ್ವಾಗತಿಸಿದ್ದರು.

ಕರ್ನಾಟಕದ ಸ್ಪರ್ಧಿಗಳು


ಈ ಬಾರಿ ಒಲಿಂಪಿಕ್ಸ್‌ನಲ್ಲಿ ಕರ್ನಾಟಕದ 8 ಮಂದಿ ಸ್ಪರ್ಧಿಸಲಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ಎಂ.ಆರ್.ಪೂವಮ್ಮ, ಮಿಜೊ ಚಾಕೊ ಕುರಿಯನ್‌, ಬ್ಯಾಡ್ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ, ಗಾಲ್ಫ್‌ನಲ್ಲಿ ಅದಿತಿ ಅಶೋಕ್‌, ಈಜು ಸ್ಪರ್ಧೆಯಲ್ಲಿ ಶ್ರೀಹರಿ ನಟರಾಜ್‌ ಹಾಗೂ ಧಿನಿಧಿ ದೇಸಿಂಘು ಸ್ಪರ್ಧಿಸಲಿದ್ದಾರೆ. ಟೇಬಲ್‌ ಟೆನಿಸ್‌ನಲ್ಲಿ ಅರ್ಚನಾ ಕಾಮತ್‌, ಟೆನಿಸ್‌ನಲ್ಲಿ ರೋಹನ್‌ ಬೋಪಣ್ಣ ಕಣದಲ್ಲಿದ್ದಾರೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪದಕ ಗೆಲ್ಲುವುದು ಭಾರತದ ಪ್ರಮುಖ ಗುರಿಯಾಗಿದೆ. ಟೋಕಿಯೊದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ. 29 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡಕ್ಕೆ ಟೋಕಿಯೊ ಒಲಿಂಪಿಕ್​ ಚಿನ್ನದ ಪದಕ ವಿಜೇತ, ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ನಾಯಕನಾಗಿದ್ದಾರೆ.

ಒಲಿಂಪಿಕ್ಸ್​ ಭದ್ರತಾ ಕಾರ್ಯದಲ್ಲಿ ಭಾರತದ ಶ್ವಾನದಳ; ಬೆಂಗಳೂರಿನಲ್ಲಿ ತರಬೇತಿ

ಭಯೋತ್ಪಾದನಾ ದಾಳಿ ತಡೆ ಭದ್ರತಾ ಕಾರ್ಯಕ್ಕಾಗಿ ಭಾರತೀಯ ಸೇನೆಯಲ್ಲಿ ತರಬೇತುಗೊಂಡ ಶ್ವಾನದಳವನ್ನು ನಿಯೋಜಿಸಲಾಗಿದೆ. ಈ ಶ್ವಾನಪಡೆಯ ಸಾಮರ್ಥ್ಯ ಪರೀಕ್ಷೆ ನಡೆದದ್ದು ಬೆಂಗಳೂರಿನಲ್ಲಿ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್‌) ಮತ್ತು ವಿಶೇಷ ಕಮಾಂಡೊ ಪಡೆಯ ಭಾರತೀಯ ಕೆ9 (ಕೆನೈನ್) ಹತ್ತು ಶ್ವಾನಗಳ ಪಡೆಯನ್ನು ಪ್ಯಾರಿಸ್‌ಗೆ ಕಳುಹಿಸಲಾಗಿದೆ. ಬೆಂಗಳೂರು ಸಮೀಪದ ತರಳುವಿನಲ್ಲಿರುವ ಸಿಆರ್‌ಪಿಎಫ್ ಶ್ವಾನ ತಳಿ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರದಲ್ಲಿ ಈ ಶ್ವಾನಪಡೆಯ ಸಾಮರ್ಥ್ಯ ಪರೀಕ್ಷೆ ನಡೆಸಿದ ಬಳಿಕ ಪ್ಯಾರಿಸ್‌ಗೆ ಕಳುಹಿಸಲಾಗಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿರುವ ಭದ್ರತಾ ಪಡೆಗಳೊಂದಿಗೆ ಈ ಶ್ವಾನಪಡೆಯು ಕಾರ್ಯನಿರ್ವಹಿಸಲಿದೆ.

ಈ ಶ್ವಾನಗಳಿಗೆ ಹತ್ತು ವಾರಗಳ ಕಾಲ ವಿಶೇಷ ತರಬೇತಿ ನೀಡಲಾಗಿದೆ. ಸಿಎಪಿಎಫ್‌, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌), ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ), ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆಗಳಿಂದ ಈ ಶ್ವಾನ ಮತ್ತು ನಿರ್ವಹಾಕರನ್ನು ಆಯ್ಕೆ ಮಾಡಲಾಗಿದೆ. ಈ ಶ್ವಾನಪಡೆಯಲ್ಲಿರುವ ಬೆಲ್ಜಿಯನ್ ಮೆಲಿನೊಸ್ ತಳಿಯು ಪ್ರಮುಖವಾಗಿದೆ. ಬಾಂಬ್‌ ಪತ್ತೆ ಕಾರ್ಯಾಚರಣೆಯಲ್ಲಿ ಅತ್ಯಂತ ಚುರುಕಾದ ತಳಿ ಇದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರೀಡೆ

Virat Kohli: ಲಂಕಾ ಸರಣಿಯಲ್ಲಿ ರನ್​ ದಾಖಲೆ ಬರೆಯಲು ಸಜ್ಜಾದ ವಿರಾಟ್​ ಕೊಹ್ಲಿ

Virat Kohli:ಸದ್ಯ 292* ಏಕದಿನ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 13,848* ರನ್(virat kohli odi runs)​ ಬಾರಿಸಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 152 ರನ್​ ಬಾರಿಸಿದರೆ 14 ಸಾವಿರ ರನ್​ ಪೂರೈಸಲಿದ್ದಾರೆ

VISTARANEWS.COM


on

Virat Kohli
Koo

ಮುಂಬಯಿ: ಟೀಮ್​ ಇಂಡಿಯಾ ಬ್ಯಾಟರ್, ಹಲವು ದಾಖಲೆಗಳ ಸರದಾರ​ ವಿರಾಟ್​ ಕೊಹ್ಲಿಗೆ(Virat Kohli) ಶ್ರೀಲಂಕಾ(India tour of Sri Lanka) ವಿರುದ್ಧದ ಏಕದಿನ ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಹೌದು, ಕೊಹ್ಲಿ 152 ರನ್ ಗಳಿಸಿದರೆ ಏಕದಿನ ಕ್ರಿಕೆಟ್​ನಲ್ಲಿ 14 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಲಂಕಾ ವಿರುದ್ಧದ ಏಕದಿನ ಸರಣಿ ಆಗಸ್ಟ್​ 2ರಿಂದ ಆರಂಭಗೊಳ್ಳಲಿದೆ.

ಸದ್ಯ 292* ಏಕದಿನ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ 13,848* ರನ್(virat kohli odi runs)​ ಬಾರಿಸಿದ್ದಾರೆ. ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 152 ರನ್​ ಬಾರಿಸಿದರೆ 14 ಸಾವಿರ ರನ್​ ಮೈಲುಗಲ್ಲು ತಲುಪಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 14000ಕ್ಕೂ ಹೆಚ್ಚು ರನ್ ಗಳಿಸಿದ ಸಾರ್ವಕಾಲಿದ ದಾಖಲೆ ಸಚಿನ್ ತೆಂಡೂಲ್ಕರ್ ಮತ್ತು ಕುಮಾರ ಸಂಗಕ್ಕಾರ ಹೆಸರಿನಲ್ಲಿದೆ. ಸಚಿನ್ 463 ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದರೆ, ಕುಮಾರ ಸಂಗಕ್ಕಾರ 404 ಪಂದ್ಯಗಳನ್ನಾಡಿ 14,234 ರನ್ ಬಾರಿಸಿದ್ದಾರೆ. ಕೊಹ್ಲಿಗೆ ಸಂಗಕ್ಕಾರ ದಾಖಲೆ ಮುರಿಯುವ ಅವಕಾಶವಿದೆ. ಆದರೆ ಸಚಿನ್​ ದಾಖಲೆ ಮುರಿಯುವುದು ಕಷ್ಟ ಸಾಧ್ಯ.

ಟಿ20 ವಿಶ್ವಕಪ್​ ಬಳಿಕ ಲಂಡನ್​ಗೆ ತೆರಳಿ ಕುಟುಂಬದ ಜತೆ ಕಾಲ ಕಳೆಯುತ್ತಿದ್ದ ವಿರಾಟ್​ ಕೊಹ್ಲಿ ಲಂಕಾ ಏಕದಿನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಕೊಹ್ಲಿ ಜತೆ ರೋಹಿತ್​ ಕೂಡ ವಿಶ್ರಾಂತಿ ಪಡೆಯಲು ನಿರ್ದರಿಸಿದ್ದಾರೆ ಎನ್ನಲಾಗಿತ್ತು. ಆದರೆ, ಗಂಭೀರ್​ ಎಲ್ಲ ಹಿರಿಯ ಆಟಗಾರರರು ಕೂಡ ಈ ಸರಣಿಯಲ್ಲಿ ಆಡುವಂತೆ ಸೂಚನೆ ನೀಡಿದ್ದರು. ಗುರುವಾರ ತಂಡ ಪ್ರಕಟಗೊಳ್ಳುವ ವೇಳೆ ಅಚ್ಚರಿ ಎಂಬಂತೆ ಎಲ್ಲ ಹಿರಿಯ ಆಟಗಾರರು ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ Virat Kohli: ಮೊದಲ ಬಾರಿಗೆ ಮಗ ಅಕಾಯ್ ಜತೆ ಕಾಣಿಸಿಕೊಂಡ ವಿರಾಟ್​ ಕೊಹ್ಲಿ; ವಿಡಿಯೊ ವೈರಲ್​

ಗಂಭೀರ್​ ಕೋಚ್​ ಆಗುತ್ತಿದ್ದಂತೆಯೇ ಕೆಲ ನೆಟ್ಟಿಗರು ಗಂಭೀರ್​ ಮತ್ತು ಕೊಹ್ಲಿ ನಡುವಣ ಆನ್ ಫೀಲ್ಡ್ ಜಗಳ ಮತ್ತೆ ಶುರುವಾಗಿ ಇದು ತಂಡಕ್ಕೆ ಭಾದಿಸಲಿದೆ ಎಂದು ಹೇಳಲಾಗಿತ್ತು. ಅಲ್ಲದೆ ಗಂಭೀರ್​ ಅವರನ್ನು ಕೋಚ್​ ಆಗಿ ಆಯ್ಕೆ ಮಾಡುವ ಮುನ್ನ ವಿರಾಟ್​ ಕೊಹ್ಲಿ(virat kohli) ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ, ವರದಿಗಳ ಪ್ರಕಾರ ಕೊಹ್ಲಿ ಬಿಸಿಸಿಐ ಅಧಿಕಾರಿಗಳನ್ನು ಸಂಪರ್ಕಿಸಿ ಗಂಭೀರ್ ಜತೆಗೆ ನಡೆಸಿದ ಕಿತ್ತಾಟಗಳನ್ನು ಮರೆತು ಅವರೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಆಶ್ವಾಸ ನೀಡಿರುವುದಾಗಿ ತಿಳಿದುಬಂದಿದೆ.

ಏಕದಿನ ತಂಡ


ರೋಹಿತ್ ಶರ್ಮ (ನಾಯಕ), ಶುಭಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್ (ವಿ.ಕೀ), ರಿಷಬ್ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.

Continue Reading

ಕ್ರೀಡೆ

Mohammed Shami: ಕೊಹ್ಲಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಮಿ; ವಿಡಿಯೊ ವೈರಲ್​

Mohammed Sham: ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ  ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದಾರೆ.

VISTARANEWS.COM


on

Mohammed Shami
Koo

ಕೆಲವು ದಿನಗಳ ಹಿಂದಷ್ಟೇ ಭಾರತ ತಂಡದ ಮಾಜಿ ಆಟಗಾರ ಅಮಿತ್​ ಮಿಶ್ರಾ(amit mishra) ಅವರು ವಿರಾಟ್​ ಕೊಹ್ಲಿ(Virat Kohli) ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದರು. ಹಣ, ಅಂತಸ್ತು ಬಂದ ಮೇಲೆ ಕೊಹ್ಲಿ ಸಂಪೂರ್ಣ ಬದಲಾಗಿದ್ದಾರೆ ಎಂದು ಹೇಳಿದ್ದರು. ಇದೀಗ ಟೀಮ್​ ಇಂಡಿಯಾದ ಪ್ರಧಾನ ವೇಗಿ ಮೊಹಮ್ಮದ್​ ಶಮಿ(Mohammed Shami) ಕೂಡ ಪರೋಕ್ಷವಾಗಿ ಕೊಹ್ಲಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

ಸಂದರ್ಶವೊಂದರಲ್ಲಿ ಮಾತನಾಡಿದ ಶಮಿ, “2019ರ ಏಕದಿನ ವಿಶ್ವಕಪ್​ನಲ್ಲಿ ನನ್ನನ್ನು ಕೇವಲ 4 ಪಂದ್ಯಗಳಲ್ಲಿ ಮಾತ್ರ ಆಡಿಸಲಾಯಿತು. ನಾನು 4 ಪಂದ್ಯಗಳಲ್ಲಿ ಬರೋಬ್ಬರಿ 13 ವಿಕೆಟ್​ ಉರುಳಿಸಿದ್ದೆ. ಹ್ಯಾಟ್ರಿಕ್​ ಕೂಟ ಕಿತ್ತಿದ್ದೆ. ಆದರೆ ನನನ್ನು ಕೇವಲ 4 ಪಂದ್ಯಗಳಿಗೆ ಸೀಮಿತ ಮಾಡಲಾಯಿತು. ಮುಂದಿನ ಪಂದ್ಯಗಳಲ್ಲಿ ಆಡುವ ಅವಕಾಶವನ್ನೇ ನೀಡಲಿಲ್ಲ. ಅಂದು ನನಗೆ ಅವಕಾಶ ನೀಡಿದ್ದರೆ, ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​​ ವಿರುದ್ಧ ನಾವು ಗೆಲ್ಲುತ್ತಿದ್ದೆವು. ನನ್ನ ​ಮೇಲೆ ತಂಡದ ನಾಯಕ ಹಾಗೂ ಕೋಚ್​ಗೆ ನಂಬಿಕೆ ಇರಲಿಲ್ಲ” ಎಂದು ಹೇಳುವ ಮೂಲಕ ಅಂದು ಕೋಚ್​ ಆಗಿದ್ದ ರವಿಶಾಸ್ತ್ರಿ(ravi shastri) ಮತ್ತು ನಾಯಕ ವಿರಾಟ್​ ಕೊಹ್ಲಿ ವಿರುದ್ಧ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಶಮಿ  ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್​ಸಿಎ)ಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದಾರೆ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. 

ಇದನ್ನೂ ಓದಿ Mohammed Shami: ಎನ್​ಸಿಎಯಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ ಶಮಿ

ಚೇತರಿಕೆಯ ಹಾದಿಯಲ್ಲಿರುವ ಶಮಿ  ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

ಕೆಲವು ದಿನಗಳ ಹಿಂದೆ ಅಮಿತ್​ ಮಿಶ್ರಾ ಕೂಡ ಸಂದರ್ಶನದಲ್ಲಿ ಮಾತನಾಡುವಾಗ ʼನನಗೆ ವಿರಾಟ್ ಕೊಹ್ಲಿ ಆರಂಭದ ದಿನದಿಂದಲೂ ಗೊತ್ತು. ಆದರೆ ಅಂದು ಇದ್ದಂತಹ ಕೊಹ್ಲಿ ಈಗಿಲ್ಲ. ಹಣ, ಅಂತಸ್ತು ಬಂದ ಮೇಲೆ ಅವರು ಸಂಪೂರ್ಣ ಬದಲಾಗಿದ್ದಾರೆ. ನಮ್ಮಿಬ್ಬರ ನಡುವೆ ಮಾತುಕತೆ ಕೂಡ ನಿಂತಿದೆ. ಮೊದಲಿನಂತೆ ಅವರು ಈಗಿಲ್ಲ. ಇದಕ್ಕೆ ಅವರಿಗೆ ನೇಮ್‌ ಅಂಡ್‌ ಫೇಮ್‌ ಪ್ರಮುಖ ಕಾರಣ” ಎಂದು ಹೇಳಿದ್ದರು.

Continue Reading

ಅಂಕಣ

ರಾಜಮಾರ್ಗ ಅಂಕಣ: ಆಲ್ಫೀ ಹೆವೆಟ್ಟ್- ವೀಲ್ ಚೇರ್ ಮೇಲಿನ ಟೆನ್ನಿಸ್ ಬೆರಗು

ರಾಜಮಾರ್ಗ ಅಂಕಣ: ಜಗತ್ತು ಅವನನ್ನು ‘ವೀಲ್ ಚೇರ್ ಮೇಲಿನ ಕೋಲ್ಮಿಂಚು’ ಎಂದೇ ಕರೆಯುತ್ತದೆ. ಆತನು ಇಂಗ್ಲೆಂಡ್ ದೇಶದವನು. 2015ರಿಂದ ವೀಲ್ ಚೇರ್ ಮೇಲೆ ಕುಳಿತು ಟೆನ್ನಿಸ್ ಆಡುವ ಆತನ ಆಟಕ್ಕೆ ಆತನೇ ಸಾಟಿ. ಕೋರ್ಟ್ ಇಡೀ ಜಿಂಕೆಯಂತೆ ಓಡಾಡುವ, ಅಷ್ಟೇ ವೇಗವಾಗಿ ರಾಕೆಟ್ ಬೀಸುವ ಆಲ್ಫಿ ಸೋತ ಉದಾಹರಣೆಯೇ ನಮಗೆ ಸಿಗುವುದಿಲ್ಲ.

VISTARANEWS.COM


on

ರಾಜಮಾರ್ಗ ಅಂಕಣ alphe hevett
Koo

ಆತ ಗೆದ್ದಿರುವುದು ಬರೋಬ್ಬರಿ 30 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಗ್ರಾನ್‌ಸ್ಲಾಂ ಟೆನ್ನಿಸ್ ಕೂಟಗಳಲ್ಲಿ ವಿಂಬಲ್ಡನ್ನಿಗೆ ಅದರದ್ದೇ ಆದ ಘನತೆಯು ಇದೆ. ಜಗತ್ತಿನ ಮಹಾ ಟೆನ್ನಿಸ್ ದೈತ್ಯರು ಸೆಣಸುವ ಮಹತ್ವದ ಕೂಟ ಅದು. ಆ ಟೆನಿಸ್ ಕೂಟದ ಸೆಂಟರ್ ಕೋರ್ಟಿನಲ್ಲಿ ನಡೆಯುವ ಪ್ರತೀ ಪಂದ್ಯವೂ ರೋಚಕವೇ ಹೌದು. ಅದೇ ಹೊತ್ತಿಗೆ ಬೇರೆ ಬೇರೆ ಸಮಾನಾಂತರ ಕೋರ್ಟುಗಳಲ್ಲಿ, ಬೇರೆ ಬೇರೆ ಹೊತ್ತಲ್ಲಿ ನಡೆಯುವ ಇನ್ನೂ ಹಲವು ಸ್ಪರ್ಧೆಗಳು ಅಷ್ಟಾಗಿ ಪ್ರಚಾರ ಪಡೆಯುವುದಿಲ್ಲ. ಮಾಧ್ಯಮಗಳೂ ಆ ಕಡೆಗೆ ಹೆಚ್ಚು ಗಮನ ಹರಿಸುವುದಿಲ್ಲ. ಆದರೆ ಅಲ್ಲಿನ ಸ್ಪರ್ಧೆಯು ಜೋರಾಗಿಯೇ ಇರುತ್ತದೆ. ಅವುಗಳಲ್ಲಿ ಒಂದು ವಿಭಾಗವೆಂದರೆ ವೀಲ್ ಚೇರ್ ಟೆನ್ನಿಸ್ ಕೂಟ! ಜಗತ್ತಿನ ಮೂಲೆ ಮೂಲೆಯಿಂದ ಬರುವ ನೂರಾರು ವೀಲ್ ಚೇರ್ ಟೆನ್ನಿಸ್ ಆಟಗಾರರು ಅಲ್ಲಿ ಪ್ರಶಸ್ತಿಗಾಗಿ ಗುದ್ದಾಡುತ್ತಾರೆ!

ಈ ಬಾರಿ ವಿಂಬಲ್ಡನ್ ಕೂಟದ ವೀಲ್ ಚೇರ್ ವಿಭಾಗದ ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಇದೇ ಆಲ್ಫಿ ಹೆವೆಟ್ಟ್ (ALFI HEVETT).

ಆಲ್ಫಿ ಹೆವೆಟ್ಟ್ – ಈಗ ವಿಶ್ವದ ನಂಬರ್ 1 ಆಟಗಾರ!

ಜಗತ್ತು ಅವನನ್ನು ‘ವೀಲ್ ಚೇರ್ ಮೇಲಿನ ಕೋಲ್ಮಿಂಚು’ ಎಂದೇ ಕರೆಯುತ್ತದೆ. ಆತನು ಇಂಗ್ಲೆಂಡ್ ದೇಶದವನು. 2015ರಿಂದ ವೀಲ್ ಚೇರ್ ಮೇಲೆ ಕುಳಿತು ಟೆನ್ನಿಸ್ ಆಡುವ ಆತನ ಆಟಕ್ಕೆ ಆತನೇ ಸಾಟಿ. ಕೋರ್ಟ್ ಇಡೀ ಜಿಂಕೆಯಂತೆ ಓಡಾಡುವ, ಅಷ್ಟೇ ವೇಗವಾಗಿ ರಾಕೆಟ್ ಬೀಸುವ ಆಲ್ಫಿ ಸೋತ ಉದಾಹರಣೆಯೇ ನಮಗೆ ಸಿಗುವುದಿಲ್ಲ. ಇಂದು ಅವನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ವಿಭಾಗಗಳಲ್ಲಿ ವಿಶ್ವದ ನಂಬರ್ 1 ಆಟಗಾರ ಎಂದರೆ ನಾವು, ನೀವು ನಂಬಲೇ ಬೇಕು. ಕಾಲುಗಳಲ್ಲಿ ಇಲ್ಲದ ತ್ರಾಣವನ್ನು ಆತನು ತನ್ನ ಅಗಲವಾದ ಭುಜಗಳಲ್ಲಿ ಬಸಿದು ರಾಕೆಟ್ ಬೀಸುವ ಆತನ ದೈತ್ಯ ಶಕ್ತಿಗೆ ನೀವು ಖಂಡಿತವಾಗಿ ಬೆರಗಾಗುತ್ತೀರಿ!

ಬಾಲ್ಯದಲ್ಲಿ ಕಾಡಿದ ವಿಚಿತ್ರ ಹೆಸರಿನ ಕಾಯಿಲೆ

1997ರ ಡಿಸೆಂಬರ್ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದ ಆಲ್ಫಿ ಆಗ ಆರೋಗ್ಯಪೂರ್ಣವಾಗಿ ಇದ್ದವನು. ಮುಂದೆ ಆರು ವರ್ಷ ಪ್ರಾಯದಲ್ಲಿ Congential Heart defect ಎಂಬ ವಿಚಿತ್ರ ಕಾಯಿಲೆಯು ಆತನ ಉತ್ಸಾಹವನ್ನು ಖಾಲಿ ಮಾಡಿತು. ಆರು ತಿಂಗಳ ನಂತರ ಸರ್ಜರಿ ಕೂಡ ನಡೆಯಿತು. ಪರಿಣಾಮವಾಗಿ ಆತನ ಎರಡೂ ಕಾಲುಗಳ ಶಕ್ತಿ ಉಡುಗಿ ಹೋಗಿ ಆತನು ವೀಲ್ ಚೇರ್ ಮೇಲೆ ಓಡಾಡಬೇಕಾಯಿತು. ಆರಂಭದಲ್ಲಿ ಆಲ್ಫಿ ಸ್ವಲ್ಪ ಮಟ್ಟದಲ್ಲಿ ವಿಚಲಿತರಾದನು. ಆದರೆ ಅದಮ್ಯವಾದ ಜೀವನೋತ್ಸಾಹ ಅವನನ್ನು ಟೆನ್ನಿಸ್ ಕೋರ್ಟಿಗೆ ಎಳೆದು ತಂದಿತು. ವೀಲ್ ಚೇರ್ ಮೇಲೆ ಇಡೀ ಕೋರ್ಟ್ ಓಡಾಡುತ್ತಾ ರಾಕೆಟ್ ಬೀಸುವುದು ಸುಲಭ ಅಲ್ಲ. ಅದಕ್ಕೆ ತುಂಬಾ ಏಕಾಗ್ರತೆ, ದೇಹದ ಬ್ಯಾಲೆನ್ಸ್, ರಟ್ಟೆಗಳ ತ್ರಾಣ, ಆತ್ಮವಿಶ್ವಾಸ ಎಲ್ಲವೂ ಬೇಕು. ಸತತವಾದ ಪರಿಶ್ರಮದಿಂದ ಆಲ್ಫಿ ಈ ಎಲ್ಲ ಸವಾಲುಗಳನ್ನು ಗೆಲ್ಲುತ್ತಾ ಹೋದರು.

ಗೆದ್ದದ್ದು 30 ಗ್ರಾನ್‌ಸ್ಲಾಮ್ ಟ್ರೋಫಿಗಳನ್ನು!

2015ರಿಂದ ಇಂದಿನವರೆಗೂ ತಾನು ಆಡಿದ ಪ್ರತೀಯೊಂದು ಗ್ರಾನಸ್ಲಾಮ್ ಕೂಟಗಳಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ 30 ವಿಶ್ವಮಟ್ಟದ ಪ್ರಶಸ್ತಿಗಳನ್ನು ಆತ ಗೆದ್ದಿದ್ದಾನೆ ಎಂದರೆ ನೀವು ಮೂಗಿನ ಮೇಲೆ ಬೆರಳು ಇಡುತ್ತೀರಿ! ಅದರಲ್ಲಿ 9 ಸಿಂಗಲ್ಸ್ ಪ್ರಶಸ್ತಿಗಳು. 21 ಡಬಲ್ಸ್ ಪ್ರಶಸ್ತಿಗಳು!

ಮೂರು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ, ಒಂದು ಬಾರಿ ಆಸ್ಟ್ರೇಲಿಯನ್ ಒಪನ್, ಒಂದು ಬಾರಿ ವಿಂಬಲ್ಡನ್, ನಾಲ್ಕು ಬಾರಿ ಯು ಎಸ್ ಓಪನ್, ಮೂರು ಬಾರಿ ಮಾಸ್ಟರ್ಸ್ ಓಪನ್ ಸಿಂಗಲ್ಸ್ ಪ್ರಶಸ್ತಿ ಆತನು ಗೆದ್ದಾಗಿದೆ.

ಡಬಲ್ಸ್ ಸ್ಪರ್ಧೆಯಲ್ಲಿ ಆತನಿಗೆ ಆತನೇ ಉಪಮೆ!

ಡಬಲ್ಸನಲ್ಲಿ ಐದು ಬಾರಿ ಆಸ್ಟ್ರೇಲಿಯನ್ ಓಪನ್, ಐದು ಬಾರಿ ಫ್ರೆಂಚ್ ಓಪನ್, ಆರು ಬಾರಿ ವಿಂಬಲ್ಡನ್, ಐದು ಬಾರಿ ಯು. ಎಸ್. ಓಪನ್ ಪ್ರಶಸ್ತಿಗಳನ್ನು ಆಲ್ಫಿ ಗೆದ್ದಿರುವುದು ಬಹಳ ದೊಡ್ಡ ಸಾಧನೆ. ಜಗತ್ತಿನ ಬೇರೆ ಯಾವ ಟೆನ್ನಿಸ್ ಆಟಗಾರ ಕೂಡ ಇಷ್ಟೊಂದು ಪ್ರಶಸ್ತಿಗಳ ಗೊಂಚಲು ಗೆದ್ದಿರುವ ನಿದರ್ಶನ ಇಲ್ಲ! ಪಾರಾ ಒಲಿಂಪಿಕ್ ಕೂಟದಲ್ಲಿ ಕೂಡ ಆತ ಬೆಳ್ಳಿಯ ಪದಕ ಗೆದ್ದಿದ್ದಾನೆ.

2024ರ ವಿಂಬಲ್ಡನ್ ಕೂಟದಲ್ಲಿ ಆತನು ಸಿಂಗಲ್ಸ್ ಮತ್ತು ಡಬಲ್ಸ್ ಎರಡೂ ಟ್ರೋಫಿಗಳನ್ನು ಗೆದ್ದಿರುವುದು ಕೂಡ ದಾಖಲೆಯೇ ಆಗಿದೆ. ಆತನ ಸರ್ವ್, ವಾಲಿ, ಏಸ್, ಮಿಂಚಿನ ಚಲನೆ ಮತ್ತು ಹಿಂಗೈ ಹೊಡೆತಗಳು ತುಂಬಾ ಬಲಿಷ್ಟವಾಗಿವೆ.

ಆರು ವರ್ಷದ ಪ್ರಾಯದಿಂದ ವೀಲ್ ಚೇರ್ ಮೇಲೆ ಅವಲಂಬಿತವಾಗಿರುವ ಆಲ್ಫಿ ಹೆವೆಟ್ಟ್ ನಾರ್ವಿಚ್ ನಗರದ ಸಿಟಿ ಕಾಲೇಜಿನಿಂದ ಪದವಿ ಕೂಡ ಪಡೆದಿದ್ದಾರೆ. 1.67 ಮೀಟರ್ ಎತ್ತರದ, ಇನ್ನೂ 27 ವರ್ಷ ಪ್ರಾಯದ ಆಲ್ಫಿ ರಟ್ಟೆಯಲ್ಲಿ ತ್ರಾಣ ಇರುವಷ್ಟು ವರ್ಷ ಟೆನ್ನಿಸ್ ಆಡುತ್ತೇನೆ ಎಂದು ಹೇಳಿದ್ದಾರೆ!

ಆತನ ದಾಖಲೆಗಳ ಎತ್ತರ ಎಲ್ಲಿಗೆ ತಲುಪುವುದೋ ಯಾರಿಗೆ ಗೊತ್ತು?

ಇದನ್ನೂ ಓದಿ: ರಾಜಮಾರ್ಗ ಅಂಕಣ: ನೇಪಥ್ಯಕ್ಕೆ ಸರಿದ ರಂಗ ನಿರ್ದೇಶಕ ಸದಾನಂದ ಸುವರ್ಣ

Continue Reading

ಕ್ರೀಡೆ

Ben Stokes : ದೊಡ್ಡ ಮೊತ್ತ ಪಡೆದು ಮುಂಬೈ ತಂಡ ಸೇರಲಿದ್ದಾರೆ ಬೆನ್ ಸ್ಟೋಕ್ಸ್​​

Ben Stokes: ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಬೆನ್ ಸ್ಟೋಕ್ಸ್ ಎಸ್ಎ 20 ನ ಮೂರನೇ ಆವೃತ್ತಿಯಲ್ಲಿ ಕೇಪ್ ಟೌನ್ ಮೂಲದ ಫ್ರಾಂಚೈಸಿಗಾಗಿ ಆಡುವುದನ್ನು ಕಾಣಬಹುದು. ಮುಂದಿನ ಜನವರಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಆಡಲು ಇಂಗ್ಲೆಂಡ್ ಟೆಸ್ಟ್ ನಾಯಕನಿಗೆ 800,000 ಪೌಂಡ್ (ಅಂದಾಜು 8.65 ಕೋಟಿ ರೂ.) ವರೆಗೆ ಆಫರ್ ನೀಡಲಾಗಿದೆ ಎಂದು ವರದಿ ತಿಳಿಸಿದೆ.

VISTARANEWS.COM


on

Ben Stokes
Koo

ಬೆಂಗಳೂರು: ದಕ್ಷಿಣ ಆಫ್ರಿಕಾದ ಪ್ರೀಮಿಯರ್ ಫ್ರ್ಯಾಂಚೈಸ್ ಲೀಗ್ ಎಸ್ಎ 20 ಯ ಮುಂದಿನ ಆವೃತ್ತಿಯಲ್ಲಿ ಇಂಗ್ಲೆಂಡ್ ಸ್ಟಾರ್ ಬೆನ್ ಸ್ಟೋಕ್ಸ್ (Ben Stokes) ಎಂಐ ಕೇಪ್ ಟೌನ್​ ತಂಡಕ್ಕೆ ಆಡಲು ಸಹಿ ಹಾಕಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಎಸ್ಎ 20 ಅನ್ನು 2023 ರಲ್ಲಿ ಒಟ್ಟು ಆರು ತಂಡಗಳೊಂದಿಗೆ ಪ್ರಾರಂಭಿಸಲಾಯಿತು. ಎಲ್ಲಾ ತಂಡಗಳು ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಮಾಲೀಕರ ಒಡೆತನದಲ್ಲಿವೆ. ಎಂಐ ಕೇಪ್ ಟೌನ್ ಅಂಬಾನಿ ಒಡೆತನದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಪಾಲುದಾರ ತಂಡವಾಗಿದೆ.

ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಬೆನ್ ಸ್ಟೋಕ್ಸ್ ಎಸ್ಎ 20 ನ ಮೂರನೇ ಆವೃತ್ತಿಯಲ್ಲಿ ಕೇಪ್ ಟೌನ್ ಮೂಲದ ಫ್ರಾಂಚೈಸಿಗಾಗಿ ಆಡುವುದನ್ನು ಕಾಣಬಹುದು. ಮುಂದಿನ ಜನವರಿಯಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಆಡಲು ಇಂಗ್ಲೆಂಡ್ ಟೆಸ್ಟ್ ನಾಯಕನಿಗೆ 800,000 ಪೌಂಡ್ (ಅಂದಾಜು 8.65 ಕೋಟಿ ರೂ.) ವರೆಗೆ ಆಫರ್ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಬೆನ್ ಸ್ಟೋಕ್ಸ್ ಇತ್ತೀಚಿನ ದಿನಗಳಲ್ಲಿ ಟಿ 20 ಯಿಂದ ದೂರವಿದ್ದರೂ, ಅವರು ಇನ್ನೂ ವಿಶ್ವದ ಅತ್ಯುತ್ತಮ ಆಲ್​ರೌಂಡರ್​ಗಳಲ್ಲಿ ಒಬ್ಬರು. ಅವರು ಇತ್ತೀಚೆಗೆ ನಿಯಮಿತವಾಗಿ ಬೌಲಿಂಗ್ ಪುನರಾರಂಭಿಸಿದ್ದಾರೆ. ಇದು ಅವರನ್ನು ಇನ್ನಷ್ಟು ಮೌಲ್ಯಯುತವಾಗಿಸುತ್ತದೆ. 2022 ರಲ್ಲಿ ಟಿ 20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿರುವ ಅನುಭವಿ ಆಲ್​ರೌಂಡರ್​ ಐಪಿಎಲ್​​ನಲ್ಲಿ ಯಶಸ್ಸನ್ನು ಅನುಭವಿಸಿದ್ದಾರೆ. ಅಲ್ಲಿ ಅವರು 2017 ರಲ್ಲಿ ಎಂವಿಪಿ ಎಂದು ಹೆಸರಿಸಲ್ಪಟ್ಟರು.

ಭಾರತ ಸರಣಿಯಿಂದ ಬೆನ್ ಸ್ಟೋಕ್ಸ್ ಹೊರಗುಳಿಯಲಿದ್ದಾರೆ

ಒಂದು ವೇಳೆ ಬೆನ್ ಸ್ಟೋಕ್ಸ್ ಮುಂಬೈ ಇಂಡಿಯನ್ಸ್ ಕೇಪ್​ಟೌನ್​ ಸಹಿ ಹಾಕಿದರೆ, ಅವರು ಸಂಪೂರ್ಣ ಎಸ್ಎ 20 ಆಡಲು ಸಜ್ಜಾಗಿದ್ದಾರೆ ಮತ್ತು ಭಾರತ ವಿರುದ್ಧದ 5 ಪಂದ್ಯಗಳ ಟಿ 20 ಐ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿ ತಿಳಿಸಿದೆ. ಆದಾಗ್ಯೂ, ಟೆಸ್ಟ್ ಋತುವಿನತ್ತ ಗಮನ ಹರಿಸಲು ಕಳೆದ ತಿಂಗಳು ಟಿ 20 ವಿಶ್ವಕಪ್​​ನಿಂದ ಹೊರಗುಳಿದ ನಂತರ ಇಂಗ್ಲೆಂಡ್ ಟೆಸ್ಟ್ ನಾಯಕ ಪ್ರಸ್ತುತ ಇಂಗ್ಲೆಂಡ್​ನ ಟಿ 20 ತಂಡದಲ್ಲಿ ಭಾಗಿಯಾಗಿಲ್ಲ.

ಚಾಂಪಿಯನ್ಸ್​ ಟ್ರೋಫಿಗಾಗಿ ಇಂಗ್ಲೆಂಡ್​ನ ಯೋಜನೆಗಳಲ್ಲಿ ಉಳಿದರೆ ಸ್ಟೋಕ್ಸ್ ಫೆಬ್ರವರಿಯಲ್ಲಿ ಭಾರತದ ವಿರುದ್ಧ ಏಕದಿನ ಸರಣಿಯನ್ನು ಆಡಬಹುದು. ಆ ಸಂದರ್ಭದಲ್ಲಿ, ಅವರು ಎಸ್ಎ 20 ನಲ್ಲಿ ಕೆಲವು ಪಂದ್ಯಗಳನ್ನು ಕಳೆದುಕೊಳ್ಳಬಹುದು. ಬೆನ್ ಸ್ಟೋಕ್ಸ್ ಈವರೆಗೆ 43 ಟಿ 20 ಪಂದ್ಯಗಳನ್ನು ಆಡಿದ್ದಾರೆ ಮತ್ತು 500 ಕ್ಕೂ ಹೆಚ್ಚು ರನ್ ಗಳಿಸುವುದರ ಜೊತೆಗೆ 26 ವಿಕೆಟ್​​ಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ: Women’s Asia Cup 2024 : ಏಷ್ಯಾ ಕಪ್​ನ ಮೊದಲ ಪಂದ್ಯದಲ್ಲೇ ಗೆದ್ದು ಇತಿಹಾಸ ಸೃಷ್ಟಿಸಿದ ನೇಪಾಳ ಮಹಿಳಾ ತಂಡ

ಅವರು ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುವಲ್ಲಿ ನಿರತರಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಇನ್ನಿಂಗ್ಸ್ ಮತ್ತು 114 ರನ್​​ಗಳಿಂದ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ 2022 ರ ನಂತರ ತಮ್ಮ ಮೊದಲ ಟೆಸ್ಟ್ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ ಮತ್ತು ನಡೆಯುತ್ತಿರುವ ಕಾರ್ಯಯೋಜನೆಯಲ್ಲಿ ವೆಸ್ಟ್ ಇಂಡೀಸ್ ಅನ್ನು ಸೋಲಿಸಲು ತಮ್ಮನ್ನು ಬೆಂಬಲಿಸಲಿದೆ.

Continue Reading
Advertisement
viral news baby
ವೈರಲ್ ನ್ಯೂಸ್10 mins ago

Viral News: 25 ಬೆರಳುಗಳಿರುವ ಮಗು ಜನನ! ನೋಡಲು ಮುಗಿಬಿದ್ದ ಜನ

Use Salt For Cleaning
ಲೈಫ್‌ಸ್ಟೈಲ್21 mins ago

Use Salt For Cleaning: ಉಪ್ಪು ಕೇವಲ ಅಡುಗೆಗಷ್ಟೇ ಅಲ್ಲ, ನಿಮ್ಮ ಕಿಚನ್‌ನ ಸ್ವಚ್ಛತೆಗೂ ಬಳಸಿ!

Kiran Kumar
ಕರ್ನಾಟಕ35 mins ago

ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಿಂದ ಕಿರಣ್‌ ಕುಮಾರ್‌ ಡಿ ಕೆ ಅಮಾನತು

Assembly monsoon session UT Khader karnataka assembly live
ಪ್ರಮುಖ ಸುದ್ದಿ40 mins ago

Assembly Monsoon Session: ಮುಂಗಾರು ಅಧಿವೇಶನಕ್ಕೆ ಮುನ್ನವೇ 2 ಕೋಟಿ ಖರ್ಚು ಮಾಡಿ ವಿಧಾನಸೌಧ ಸಿಂಗಾರ!

Virat Kohli
ಕ್ರೀಡೆ45 mins ago

Virat Kohli: ಲಂಕಾ ಸರಣಿಯಲ್ಲಿ ರನ್​ ದಾಖಲೆ ಬರೆಯಲು ಸಜ್ಜಾದ ವಿರಾಟ್​ ಕೊಹ್ಲಿ

Actor Darshan 4th accused mother dies
ಸ್ಯಾಂಡಲ್ ವುಡ್56 mins ago

Actor Darshan: ದರ್ಶನ್‌ ಗ್ಯಾಂಗ್‌ನ ನಾಲ್ಕನೇ ಆರೋಪಿ ತಾಯಿ ನಿಧನ

Microsoft Global Outage
ದೇಶ57 mins ago

Microsoft Global Outage: ಮೈಕ್ರೊಸಾಫ್ಟ್ ಟ್ರಬಲ್; ಯಾರ ಮೇಲೆ ಏನು ಪರಿಣಾಮ? ಮುಂದೇನು?

Mohammed Shami
ಕ್ರೀಡೆ1 hour ago

Mohammed Shami: ಕೊಹ್ಲಿ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಶಮಿ; ವಿಡಿಯೊ ವೈರಲ್​

Kannada New Movie Moorane Krishnappa in OTT
ಸಿನಿಮಾ1 hour ago

Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!

odscene act driver
ಕ್ರೈಂ1 hour ago

Obscene Act: ಡ್ರೈವಿಂಗ್‌ ಹೇಳಿಕೊಡುವ ನೆಪದಲ್ಲಿ ಖಾಸಗಿ ಅಂಗ ತೋರಿಸಿದ ಟ್ರೇನರ್‌, ಯುವತಿಯ ದೂರು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ21 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ22 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ2 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ4 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ5 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ5 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ6 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌