Niveditha Shivarajkumar: ʻಫೈರ್ ಫ್ಲೈ' ಸಿನಿಮಾಗೆ 'ಹೆಂಗೆ ನಾವು' ಹುಡುಗಿ ನಾಯಕಿ! ಯಾವಾಗ ತೆರೆಗೆ? - Vistara News

ಸ್ಯಾಂಡಲ್ ವುಡ್

Niveditha Shivarajkumar: ʻಫೈರ್ ಫ್ಲೈ’ ಸಿನಿಮಾಗೆ ‘ಹೆಂಗೆ ನಾವು’ ಹುಡುಗಿ ನಾಯಕಿ! ಯಾವಾಗ ತೆರೆಗೆ?

Niveditha Shivarajkumar: ಈಗಾಗಲೇ ಫೈರ್ ಫ್ಲೈ ಸಿನಿತಂಡ ಸುಧಾರಾಣಿ, ಅಚ್ಯುತ್ ಕುಮಾರ್ , ಶೀತಲ್ ಶೆಟ್ಟಿ ಸೇರಿದಂತೆ ಹಲವರನ್ನು ಪರಿಚಯಿಸಿದೆ. ಇದೀಗ ಚಿತ್ರದ ನಾಯಕಿ (Niveditha Shivarajkumar) ಯಾರು ಅನ್ನೋದನ್ನು ಅನಾವರಣ (rachana inder) ಮಾಡಿದೆ.

VISTARANEWS.COM


on

Niveditha Shivarajkumar Fire fly rachana inder Heroine
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ʻಫೈರ್ ಫ್ಲೈʼ. ಈ ಚಿತ್ರ ನಾನಾ ಕಾರಣಗಳಿಂದ ನಿರೀಕ್ಷೆ ಹೆಚ್ಚಿಸಿದೆ. ಅದರಲ್ಲಿ ಪ್ರಮುಖವಾಗಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಶಿವರಾಜ್‌ಕುಮಾರ್ ಚಿತ್ರ ನಿರ್ಮಾಣ ಮಾಡುತ್ತಿರುವುದು ಒಂದು ವಿಷಯವಾದರೆ, ಮತ್ತೊಂದು ಕಾರಣ ಸಿನಿಮಾದ ತಾರಾಬಳಗ. ಈಗಾಗಲೇ ಫೈರ್ ಫ್ಲೈ ಸಿನಿತಂಡ ಸುಧಾರಾಣಿ, ಅಚ್ಯುತ್ ಕುಮಾರ್ , ಶೀತಲ್ ಶೆಟ್ಟಿ ಸೇರಿದಂತೆ ಹಲವರನ್ನು ಪರಿಚಯಿಸಿದೆ. ಇದೀಗ ಚಿತ್ರದ ನಾಯಕಿ (Niveditha Shivarajkumar) ಯಾರು ಅನ್ನೋದನ್ನು ಅನಾವರಣ (rachana inder) ಮಾಡಿದೆ.

ಲವ್ ಮಾಕ್‌ಟೇಲ್‌, ಹರಿಕಥೆ ಅಲ್ಲ ಗಿರಿಕಥೆ, ತ್ರಿಬಲ್‌ ರೈಡಿಂಗ್ ಸಿನಿಮಾಗಳಲ್ಲಿ ಬಬ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಚನಾ ಇಂದರ್ ವಂಶಿಗೆ ಜೋಡಿಯಾಗಿ ಅಭಿನಯಿಸಿದ್ದಾರೆ.‌ ನೇಹಾ ಎಂಬ ಪಾತ್ರದಲ್ಲಿ ರಚನಾ ಬಣ್ಣ ಹಚ್ಚಿದ್ದು, ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ‘ನಿವೇದಿತಾ ಶಿವರಾಜ್ ಕುಮಾರ್ ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಿನಿಮಾದಲ್ಲಿ ನೇಹಾ ಎಂಬ ಪಾತ್ರ ಮಾಡಿದ್ದೇನೆ. ನೇಹಾ ಬದುಕನ್ನು ತುಂಬಾ ಇಷ್ಟಪಡುತ್ತಾಳೆ. ಎಂಜಾಯ್ ಮಾಡುತ್ತಾಳೆ. ಭವಿಷ್ಯದ ಬಗ್ಗೆ ಯೋಚನೆ ಮಾಡೋದಿಲ್ಲ. ಸಿನಿಮಾವನ್ನು ನಾನು ನೋಡಲು ಕಾತರಳಾಗಿದ್ದಾನೆ. ಚಿತ್ರದ ಒಂದಷ್ಟು ಕ್ಲಿಪ್ ನೋಡಿದಾಗ ಮನರಂಜನೆ ನೀಡುವ ಸಿನಿಮಾ ಎನಿಸಿತು. ವಂಶಿ ತುಂಬಾ ಹಾರ್ಡ್ ವರ್ಕ್ ಮಾಡಿದ್ದಾರೆ. ದೀಪಾವಳಿಗೆ ನಮ್ಮ ಚಿತ್ರ ತೆರೆಗೆ ಬರುತ್ತಿದೆ’ ಎಂದಿದ್ದಾರೆ.

Kannada New Movie: ‘ಫಾರೆಸ್ಟ್’ ಸಿನಿಮಾದ “ಓಡೋ ಓಡೋ” ಹಾಡಿಗೆ ಅಭಿಮಾನಿಗಳು ಫಿದಾಇದನ್ನೂ ಓದಿ:

ಫೈರ್ ಫ್ಲೈ ಸಿನಿಮಾವನ್ನು ಯುವ ನಟ ವಂಶಿ ಡೈರೆಕ್ಟ್ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಾಯಕರಾಗಿಯೂ ಈ ಮೂಲಕ ವಂಶಿ ಕನ್ನಡಕ್ಕೆ ಪರಿಚಯ ಆಗುತ್ತಿದ್ದಾರೆ. ಚಿತ್ರಕ್ಕೆ ಅಭಿಲಾಷ್ ಕಳತ್ತಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ರಘು ನಿಡುವಳ್ಳಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

ನಾಯಕ- ನಿರ್ದೇಶಕ ವಂಶಿಗೆ ಇಲ್ಲಿ ಜಯ್ ರಾಮ್ ಸಹ-ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡುತ್ತಿದೆ. ಈ ಸಂಸ್ಥೆಯ ಮೊದಲ ಕೂಸು ಫೈರ್ ಫ್ಲೈ ಸಿನಿಮಾ ದೀಪಾವಳಿಗೆ ತೆರೆಗೆ ಬರಲಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Kiccha Sudeep: ಕನ್ನಡಿಗರ ಸ್ವಾಭಿಮಾನವೇ ಮುಖ್ಯ; ಫೋನ್ ಪೇ ಬ್ರ್ಯಾಂಡ್‌ ಅಂಬಾಸಿಡರ್ ಸ್ಥಾನ ತ್ಯಜಿಸುತ್ತಾರಾ ಕಿಚ್ಚ ಸುದೀಪ್?

‌Kiccha Sudeep: ಕನ್ನಡಿಗರಿಗೆ ಉದ್ಯೋಗ ಮೀಸಲು ಕುರಿತು ನೀಡಿರುವ ಹೇಳಿಕೆಗೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಕನ್ನಡಿಗರ ಕ್ಷಮೆ ಕೇಳಬೇಕು’ ಹಾಗೂ ಕನ್ನಡಿಗರಿಗೆ ಮೀಸಲಾತಿ ಪ್ರಕಾರ ಉದ್ಯೋಗ ನೀಡಬೇಕು ಎಂಬ ನಿಲುವಿಗೆ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

VISTARANEWS.COM


on

Kiccha Sudeep
Koo

ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಭಾಗವಾಗಿ ʼಬಾಯ್ಕಾಟ್‌ ಫೋನ್‌ ಪೇ ʼ ಅಭಿಯಾನ ಕೂಡ ಶುರುವಾಗಿದ್ದು, ಈ ನಡುವೆ ಕನ್ನಡಿಗರ ಪರ, ಕನ್ನಡಿಗರ ಅಭಿಯಾನಕ್ಕೆ ನಟ ಕಿಚ್ಚ ಸುದೀಪ್‌ (Kiccha Sudeep) ಬೆಂಬಲ ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ನಾಡು-ನುಡಿಯ ವಿಚಾರ ಬಂದಾಗ ಸದಾ ಮುಂದಿರುತ್ತಾರೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ʻʻಕಂಪನಿ, ಹಣಕ್ಕಿಂತ ಕನ್ನಡಿಗನಾಗಿ ನನ್ನ ಸ್ವಾಭಿಮಾನ ಮುಖ್ಯʼʼ ಎನ್ನುವುದು ಸುದೀಪ್ ಅವರ ನಿರ್ಧಾರವಾಗಿದೆ ಎನ್ನಲಾಗಿದೆ. ಈ ಕಾರಣದಿಂದ ಒಂದು ದಿನದ ಒಳಗಾಗಿ ಕಿಚ್ಚ ತಮ್ಮ ನಿರ್ಧಾರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

ಕನ್ನಡಿಗರ ಮೀಸಲಾತಿಗೆ ಫೋನ್‌ ಪೇ ಕಂಪನಿ ಸಿಇಒ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸುದೀಪ್‌ ಅವರ ನಿರ್ಧಾರ ಏನಾಗುತ್ತದೆ ಅನ್ನೋದು ಹಲವರ ಪ್ರಶ್ನೆಯಾಗಿತ್ತು. ಕಿಚ್ಚ ಸುದೀಪ್ ಅವರು 2023ರಿಂದ ಫೋನ್‌ ಪೇ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಹೀಗಾಗಿ ಫೋನ್ ಪೇ ಕಂಪನಿ ಇನ್ನು ಒಂದು ದಿನದ ಒಳಗಾಗಿ ಕನ್ನಡಿಗರ ಕ್ಷಮೆ ಕೋರಿ, ರಾಜ್ಯ ಸರ್ಕಾರದ ನಿಲುವಿಗೆ ಬದ್ಧವಾಗದಿದ್ದರೆ ತಾವು ಫೋನ್ ಪೇ ಬ್ರ್ಯಾಂಡ್ ಅಂಬಾಸಿಡರ್ ಆಗಿ ಮುಂದುವರೆಯದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Karnataka Job Reservation : ಹಗರಣಗಳನ್ನು ಮುಚ್ಚಿಡಲು ಕನ್ನಡಿಗರಿಗೆ ಮೀಸಲು ವಿಚಾರ ಮುನ್ನೆಲೆಗೆ ತಂದ ಸರ್ಕಾರ; ಸಿಟಿ ರವಿ ಆರೋಪ

ಕನ್ನಡಿಗರಿಗೆ ಉದ್ಯೋಗ ಮೀಸಲು ಕುರಿತು ನೀಡಿರುವ ಹೇಳಿಕೆಗೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಕನ್ನಡಿಗರ ಕ್ಷಮೆ ಕೇಳಬೇಕು’ ಹಾಗೂ ಕನ್ನಡಿಗರಿಗೆ ಮೀಸಲಾತಿ ಪ್ರಕಾರ ಉದ್ಯೋಗ ನೀಡಬೇಕು ಎಂಬ ನಿಲುವಿಗೆ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಫೋನ್ ಪೇ ವಿರುದ್ಧ ಅಭಿಯಾನ ಜೋರಾಗಿದ್ದು. ಸಿಎಂ ಸಭೆ ಬಳಿಕ ನಿರ್ಧಾರ ಸುದೀಪ್‌ ಅವರು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಸುದೀಪ್ ಆಪ್ತ ಬಳಗದಿಂದ ಮಾಹಿತಿ ಸಿಕ್ಕಿದೆ.

ಫೋನ್ ಪೇ ಬಾಯ್ಕಾಟ್ ಮಾಡುವಂತೆ ಅಭಿಯಾನ ಆರಂಭ

ಬೆಂಗಳೂರು: ಖಾಸಗಿ ವಲಯದ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರಕ್ಕೆ ಫೋನ್ ಪೇ ಸಿಇಒ ಸಮೀರ್ ನಿಗಮ್ ಅಸಮಾಧಾನ ಹೊರಹಾಕಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಕನ್ನಡಿಗರ ವಿಷಯದಲ್ಲಿ ಫೋನ್ ಪೇ ಸಿಇಒ ಸಮೀರ್ ನಿಗಮ್ ಉದ್ಧಟತನ ತೋರಿದ್ದಾರೆ. ಹೀಗಾಗಿ ಫೋನ್‌ ಪೇ ಆ್ಯಪ್ ಅನ್ನು ಯಾರೂ ಬಳಸಬೇಡಿ. 1 ರೇಟಿಂಗ್ ನೀಡಿದ ಬಳಿಕ ಆ್ಯಪ್ ಡಿಲಿಟ್ ಮಾಡುವಂತೆ ಅಭಿಯಾನ ಶುರು ಮಾಡಲಾಗಿದೆ.

ಇನ್ನು ಕೆಲ ನೆಟ್ಟಿಗರು, ಯಾರಾದರೂ ನನ್ನ ಹೆಸರಲ್ಲಿ ಫೋನ್ ಪೇ ಮಾಡಿ ಎಂದರೆ ಯಾರು ಮಾಡಬೇಡಿ. ಯಾಕೆಂದರೆ ನನ್ನ ಹತ್ತಿರ ಫೋನ್ ಪೇ ಇಲ್ಲ. ಕನ್ನಡಿಗರಿಗೆ ಕೆಲಸದಲ್ಲಿ ಮೀಸಲಾತಿ ಕೊಡುವುದಕ್ಕೆ ಎದುರು ಮಾಡಿರುವ ಫೋನ್‌ಪೇ ಸಿಇಒಗೆ ಬುದ್ಧಿ ಕಲಿಸಲು ಫೋನ್‌ಪೇ ಅನ್‌ಇನ್ಸ್ಟಾಲ್ ಮಾಡಿ. ಕನ್ನಡಿಗರ ಬಲ ತೋರಿಸಿ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ | Karnataka Jobs Reservation: ಕನ್ನಡಿಗರಿಗೆ ಮೀಸಲು ಕಡ್ಡಾಯ ಮಾಡಲು ಕಾನೂನು ಸಮಸ್ಯೆ: ಖರ್ಗೆ

Continue Reading

ಸ್ಯಾಂಡಲ್ ವುಡ್

Dhruva Sarja: ದರ್ಶನ್‌ ಪ್ರಕರಣದ ಕುರಿತು ಕೊನೆಗೂ ಪ್ರತಿಕ್ರಿಯೆ ನೀಡಿದ  ಧ್ರುವ ಸರ್ಜಾ!

Dhruva Sarja: ದರ್ಶನ್ ಅರೆಸ್ಟ್ ಆದ ಬೆನ್ನಲ್ಲಿಯೇ ಮಾಧ್ಯಮದವರು, ಧ್ರುವ ಅವರಲ್ಲಿ ಈ ಪ್ರಕರಣದ ಕುರಿತು ಮಾತನಾಡುವಂತೆ ಮನವಿಯನ್ನ ಮಾಡಿಕೊಂಡಿದ್ದರು. ಧ್ರುವಾ ಸರ್ಜಾ ಪ್ರಶ್ನೆ ಕೇಳಿಯೂ ಕೇಳಿಸದಂತೆ ಹೋದರು.  ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಅವರ ʻಕೆಡಿʼ ಹಾಗೂ ʻಮಾರ್ಟಿನ್‌ʼ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಜತೆಗೆ ನಿರ್ದೇಶಕ ಪ್ರೇಮ್ ‘ಕೆಡಿ’ ಸಿನಿಮಾವನ್ನು ಡಿಸೆಂಬರ್‌ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.

VISTARANEWS.COM


on

Dhruva Sarja reaction about darshan isue
Koo

ಬೆಂಗಳೂರು: ಕಾವೇರಿ ಹೋರಾಟದ ಸಂದರ್ಭದಲ್ಲಿ ನಟ ದರ್ಶನ್‌ (Actor Darshan) ಹಾಗೂ ತಮ್ಮ ನಡುವಿನ ಎದ್ದು ತೋರಿದ ಮನಸ್ತಾಪದ ವಿಚಾರವನ್ನು ಧ್ರುವ ಸರ್ಜಾ (Dhruva Sarja) ತಮ್ಮ ಬರ್ತ್‌ಡೇ ಸಂಭ್ರಮದ ಸಂದರ್ಭದಲ್ಲಿ ಮಾತನಾಡಿದ್ದರು. ದರ್ಶನ್ ಅವರ ಬಳಿ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು ಎಂದು ಹೇಳಿಕೆ ನೀಡಿದ್ದರು. ಧ್ರುವ ಅವರಿಗೆ ಈ ಹಿಂದೆ ದರ್ಶನ್‌ ಪ್ರಕರಣದ ಬಗ್ಗೆ ಕೇಳಿದಾಗ ಉತ್ತರಿಸಿರಲಿಲ್ಲ. ಇದೀಗ ಮಾಧ್ಯಮವೊಂದಕ್ಕೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

ಧ್ರುವ ಸರ್ಜಾ ಮಾತನಾಡಿ ʻʻಯಾರೋ ಲೋ ಆಗಿದ್ದಾರೆ, ಕುಗ್ಗಿದ್ದಾರೆ ಎಂದು ಏನೇನೋ ಮಾತನಾಡಬಾರದು. ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ನಮ್ಮದೂ ಒಂದು ಕಲ್ಲಿರಲಿ ಎಂದು ಬೀಸಲು ಹೋಗುವುದಿಲ್ಲ. ದರ್ಶನ್ ಸರ್ ಅವರಿಗೂ ಒಬ್ಬ ಮಗ ಇದ್ದಾನೆ, ರೇಣುಕಾ ಸ್ವಾಮಿಗೂ ಮಗು ಆಗಲಿದೆ. ಅವರ ಕುಟುಂಬಗಳನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಏನೇ ಆಗಲಿ ಅಗಲಿರುವ ರೇಣುಕಾ ಸ್ವಾಮಿಗೆ ನ್ಯಾಯ ಸಿಗಬೇಕು. ಕಾನೂನು ಎಲ್ಲಕ್ಕಿಂತ ದೊಡ್ಡದು. ಸುಮ್ಮನೇ ನಾವು ಏನೇನೋ ಮಾತನಾಡಬಾರದು.’ ಎಂದಿದ್ದಾರೆ.

ದರ್ಶನ್ ಅರೆಸ್ಟ್ ಆದ ಬೆನ್ನಲ್ಲಿಯೇ ಮಾಧ್ಯಮದವರು, ಧ್ರುವ ಅವರಲ್ಲಿ ಈ ಪ್ರಕರಣದ ಕುರಿತು ಮಾತನಾಡುವಂತೆ ಮನವಿಯನ್ನ ಮಾಡಿಕೊಂಡಿದ್ದರು. ಧ್ರುವಾ ಸರ್ಜಾ ಪ್ರಶ್ನೆ ಕೇಳಿಯೂ ಕೇಳಿಸದಂತೆ ಹೋದರು.  ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಅವರ ʻಕೆಡಿʼ ಹಾಗೂ ʻಮಾರ್ಟಿನ್‌ʼ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಜತೆಗೆ ನಿರ್ದೇಶಕ ಪ್ರೇಮ್ ‘ಕೆಡಿ’ ಸಿನಿಮಾವನ್ನು ಡಿಸೆಂಬರ್‌ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಇದೇ ಡಿಸೆಂಬರ್‌ನಲ್ಲಿ ದರ್ಶನ್ ಸಿನಿಮಾ ‘ಡಿವಿಲ್’ ಕೂಡ ಬಿಡುಗಡೆಯಾಗಲಿದೆ ಎಂದು ಘೋಷಣೆ ಆಗಿತ್ತು. ಆದರೆ ದರ್ಶನ್‌ ಜೈಲಿನಲ್ಲಿ ಇರುವುದರಿಂದ ಡೆವಿಲ್ ಈ ವರ್ಷ ಬರಲು ಸಾಧ್ಯವೇ ಇಲ್ಲ.

ಇದನ್ನೂ ಓದಿ: Dhruva Sarja: 3 ವರ್ಷವಾದರೂ ʻಮಾರ್ಟಿನ್‌ʼ ಸಿನಿಮಾ ರಿಲೀಸ್‌ ಆಗಲು ತಡವಾಗಿದ್ದೇಕೆ? ನಿರ್ಮಾಪಕರಿಗೆ ಮೋಸ ಮಾಡಿದ್ಯಾರು?

ಧ್ರುವ ಮತ್ತು ದರ್ಶನ್ ನಡುವೆ ಇರುವ ಮನಸ್ತಾಪ ಏನು?

ಕಾವೇರಿಗಾಗಿ ಇಡೀ ಕನ್ನಡ ಚಿತ್ರರಂಗ ಒಂದೇ ವೇದಿಕೆಯನ್ನೇರಿದ್ದ ಸಮಯದಲ್ಲಿ ದರ್ಶನ್ ಮುಖವನ್ನ ಧ್ರುವ ಒಮ್ಮೆಯೂ ನೋಡಿರಲಿಲ್ಲ. ದರ್ಶನ್ ಬಂದಾಗ ಎಲ್ಲರೂ ಎದ್ದು ನಿಂತರೂ ಧ್ರುವ ಮಾತ್ರ ಕುರ್ಚಿಯಿಂದ ಕದಲಿರಲಿಲ್ಲ.

ಈ ಬಗ್ಗೆ ಧ್ರುವ ಮಾತನಾಡಿ ʻʻದರ್ಶನ್ ಅವರು ಹಿರಿಯ ನಟ, ಸೀನಿಯರ್ ಕೂಡ. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಗೆ ಅದೇ ಮರ್ಯಾದೆ ಇರುತ್ತೆ. ಅದರೆ ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು. ನನಗೂ ಸ್ವಾಭಿಮಾನ ಇದೆ, ನಾನು ಅವರೊಟ್ಟಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಹೇಳುವುದು ಇಷ್ಟೇ, ನನ್ನಲ್ಲಿರುವ ಕೆಲವು ಗೊಂದಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ನಾಟಕೀಯವಾಗಿ ಮನಸಲ್ಲೊಂದು ಹೊರಗೊಂದು ಥರ ಇರುವುದು ನನಗೆ ಬರುವುದಿಲ್ಲʼʼಎಂದಿದ್ದರು. ಸದ್ಯಕ್ಕೆ ಡಿಸೆಂಬರ್ ನಲ್ಲಿ ʻಡೆವಿಲ್ʼ ತೆರೆಗೆ ಬರಲು ಸಾಧ್ಯ ಇಲ್ಲ. ಹೀಗಾಗಿ ಗಲ್ಲಾಪೆಟ್ಟಿಗೆಯ ಅಖಾಡಕ್ಕೆ ಧ್ರುವ ಒಬ್ಬರೇ ಧುಮುಕಲಿದ್ದಾರೆ.

Continue Reading

ಸಿನಿಮಾ

Kannada New Movie: ಭಾರ್ಗವ್ ಕೃಷ್ಣ ಅಭಿನಯದ `ಓಂ ಶಿವಂ’ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ

Kannada New Movie: ಭಾರ್ಗವ್ ಕೃಷ್ಣ ಅವರ ಅಜ್ಜಿ, ತಾತಾ ಈ ಹಾಡನ್ನು ಬಿಡುಗಡೆ ಮಾಡಿ ಮೊಮ್ಮಗನ ಮೊದಲ ಚಿತ್ರಕ್ಕೆ ಶುಭ ಹಾರೈಸಿದರು. ಭಾರ್ಗವ್ ಕೃಷ್ಣ ಅವರ ತಂದೆ ಕೃಷ್ಣ ಕೆ.ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ‌. ಹಾಡು ಬಿಡುಗಡೆಯ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ‌

VISTARANEWS.COM


on

Om shiva, Kannada movie team song out
Koo

ಬೆಂಗಳೂರು: ಕನ್ನಡದಲ್ಲಿ ಹೊಸ ನಾಯಕನಟರ ಆಗಮನವಾಗುತ್ತಿರುತ್ತದೆ‌. ನೂತನ ನಾಯಕನಟರ ಪಟ್ಟಿಗೆ ಈಗ ಭಾರ್ಗವ್ ಕೃಷ್ಣ ಕೂಡ ಸೇರಿದ್ದಾರೆ. ಪ್ರಸ್ತುತ ಭಾರ್ಗವ್ ಕೃಷ್ಣ ಅಭಿನಯದ ಚೊಚ್ಚಲ ಚಿತ್ರ “ಓಂ ಶಿವಂ” ನ ಲಿರಿಕಲ್ ಸಾಂಗ್ ಇತ್ತೀಚಿಗೆ ಬಿಡುಗಡೆಯಾಯಿತು. ಭಾರ್ಗವ್ ಕೃಷ್ಣ ಅವರ ಅಜ್ಜಿ, ತಾತಾ ಈ ಹಾಡನ್ನು ಬಿಡುಗಡೆ ಮಾಡಿ ಮೊಮ್ಮಗನ ಮೊದಲ ಚಿತ್ರಕ್ಕೆ ಶುಭ ಹಾರೈಸಿದರು. ಭಾರ್ಗವ್ ಕೃಷ್ಣ ಅವರ ತಂದೆ ಕೃಷ್ಣ ಕೆ.ಎನ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ‌. ಹಾಡು ಬಿಡುಗಡೆಯ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ‌

“ಆಲ್ವಿನ್ ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡು ಬಂದು ಕಥೆ ಹೇಳಿದರು. ನಾನು ಕಥೆ ಚೆನ್ನಾಗಿದೆ. ನಾಯಕನನ್ನು ಹುಡುಕಿ. ಚಿತ್ರ ಆರಂಭಿಸೋಣ ಎಂದೆ. ಅದಕ್ಕೆ ಆಲ್ವಿನ್ ಅವರು ನಿಮ್ಮ ಮಗ ಭಾರ್ಗವ್, ನನ್ನ ಕಥೆ ಗೆ ಸರಿ ಹೊಂದುತ್ತಾರೆ. ಅವರೆ ನಮ್ಮ ಚಿತ್ರದ ನಾಯಕ ಎಂದರು. ಈಗ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಮುಂದಿನ ತಿಂಗಳಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೆಯುತ್ತಿದೆ” ಎಂದರು ನಿರ್ಮಾಪಕ ಕೃಷ್ಣ.

“ರಾಜ್ ಬಹದ್ದೂರ್” ಚಿತ್ರದ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು ಎಂದು ಮಾತನಾಡಿದ ನಿರ್ದೇಶಕ ಆಲ್ವಿನ್, “ಓಂ ಶಿವಂ” ಲವ್ ಜಾನರ್ ನ ಚಿತ್ರ. ಆದರೆ ಚಿತ್ರದಲ್ಲಿ ಬರೀ ಲವ್ ಮಾತ್ರ ಇಲ್ಲ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ನಮ್ಮ ಚಿತ್ರಕ್ಕೆ ಇಪ್ಪತ್ತೊಂದು ವಯಸ್ಸಿನ ನಾಯಕ ಬೇಕಾಗಿತ್ತು. ಭಾರ್ಗವ್ ಅವರಿಗೂ ಅಷ್ಟೇ ವಯಸ್ಸು. ಹಾಗಾಗಿ ಅವರನ್ನೇ ಈ ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಮೊದಲ ಪ್ರಯತ್ನದಲ್ಲೇ ಭಾರ್ಗವ್ ಚೆನ್ನಾಗಿ ಅಭಿನಯಿಸಿದ್ದಾರೆ. ನಾಲ್ಕು ಹಾಡುಗಳು, ಅದ್ದೂರಿ ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿದೆ. ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಇದನ್ನೂ ಓದಿ: Kannada New Movie: ಸದ್ದಿಲ್ಲದೇ ಒಟಿಟಿಗೆ ಲಗ್ಗೆ ಇಟ್ಟ ರಂಗಾಯಣ ರಘು ಅಭಿನಯದ ‘ಮೂರನೇ ಕೃಷ್ಣಪ್ಪ’ ಸಿನಿಮಾ!

“ಮೊದಲು ನಾನು ನನ್ನ ತಂದೆಗೆ ಧನ್ಯವಾದ ತಿಳಿಸುತ್ತೇನೆ. ಆಲ್ವಿನ್ ಅವರು ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಮೊದಲ ಚಿತ್ರವಾಗಿರುವುದರಿಂದ ಸಾಕಷ್ಟು ತಯಾರಿ ಮಾಡಿಕೊಂಡು ಬಂದಿರುವುದಾಗಿ” ನಾಯಕ ಭಾರ್ಗವ್ ಕೃಷ್ಣ ತಿಳಿಸಿದರು.

ನಾಯಕಿ ವಿರಾಣಿಕ ಶೆಟ್ಟಿ ಅಂಜಲಿ ನನ್ನ ಪಾತ್ರದ ಹೆಸರು ಎಂದು ಹೇಳಿದರು. ನಟರಾದ ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ವರ್ಧನ್, ನಟಿಯರಾದ ಅಪೂರ್ವ, ಲಕ್ಷ್ಮೀ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಗೀತ ನಿರ್ದೇಶಕ ವಿಜಯ್ ಯಾರ್ಡ್ಲೆ, ಛಾಯಾಗ್ರಾಹಕ ವೀರೇಶ್ ಹಾಗೂ ಸಾಹಸ ನಿರ್ದೇನ ಇದೆ.

Continue Reading

ಕರ್ನಾಟಕ

Kannada New Movie: ‘ಫಾರೆಸ್ಟ್’ ಸಿನಿಮಾದ “ಓಡೋ ಓಡೋ” ಹಾಡಿಗೆ ಅಭಿಮಾನಿಗಳು ಫಿದಾ

Kannada New Movie: ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಫಾರೆಸ್ಟ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ಆರ್ಯ ಅವರು ಬರೆದು ಧರ್ಮವಿಶ್ ಸಂಗೀತ ನೀಡಿರುವ, ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿರುವ “ಓಡೋ ಓಡೋ” ಹಾಡು ಎನ್.ಎಂ.ಕೆ. ಸಿನಿಮಾಸ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದ್ದು, ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

VISTARANEWS.COM


on

Kannada New Movie Forest Kannada movie Odo Odo song hit
Koo

ಬೆಂಗಳೂರು: ಕನ್ನಡದಲ್ಲೀಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳದೇ ಕಾರುಬಾರು. ಉತ್ತಮ ಕಂಟೆಂಟ್ ಇರುವ ಚಿತ್ರಗಳು ಇತ್ತೀಚಿಗೆ ಯಶಸ್ವಿಯಾಗಿರುವ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟಿದೆ. ಅಂತಹುದೇ ಉತ್ತಮ ಕಂಟೆಂಟ್‌ನೊಂದಿಗೆ ಕನ್ನಡಿಗರ ಮುಂದೆ ಬರಲಿದೆ “ಫಾರೆಸ್ಟ್” (Kannada New Movie) ಚಿತ್ರ.

ಎನ್.ಎಂ.ಕೆ ಸಿನಿಮಾಸ್ ಲಾಂಛನದಲ್ಲಿ ಎನ್.ಎಂ. ಕಾಂತರಾಜ್ ನಿರ್ಮಾಣದ, ಚಂದ್ರ ಮೋಹನ್ ನಿರ್ದೇಶನದ ಹಾಗೂ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಫಾರೆಸ್ಟ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.

ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಪುನೀತ್ ಆರ್ಯ ಅವರು ಬರೆದು ಧರ್ಮವಿಶ್ ಸಂಗೀತ ನೀಡಿರುವ “ಓಡೋ ಓಡೋ” ಹಾಡು ಎನ್.ಎಂ.ಕೆ. ಸಿನಿಮಾಸ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.

ಖ್ಯಾತ ಗಾಯಕ ಕೈಲಾಶ್ ಖೇರ್ ಹಾಡಿರುವ ಈ ಹಾಡನ್ನು ಈಗಾಗಲೇ ಹನ್ನೊಂದು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.

ಈ ಮಲ್ಟಿಸ್ಟಾರರ್ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಮಡಿಕೇರಿ, ಎಂ.ಎಂ.ಹಿಲ್ಸ್, ಸಂಪಾಜೆ ಫಾರೆಸ್ಟ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.

ನಿರ್ದೇಶಕ ಚಂದ್ರಮೋಹನ್ ಅವರು ಸತ್ಯಶೌರ್ಯ ಸಾಗರ್ ಅವರ ಜತೆಗೂಡಿ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ಸತ್ಯಶೌರ್ಯ ಸಾಗರ್ ಅವರೇ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಧರ್ಮವಿಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಆನಂದ್ ರಾಜವಿಕ್ರಮ್ ಅವರದು. ರವಿಕುಮಾರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಅಮರ್ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನ “ಫಾರೆಸ್ಟ್” ಚಿತ್ರಕ್ಕಿದೆ.

ಇದನ್ನೂ ಓದಿ: Samsung Galaxy: ಸ್ಯಾಮ್‌ಸಂಗ್‌ನಿಂದ ಗ್ಯಾಲಕ್ಸಿ ವಾಚ್7, ಗ್ಯಾಲಕ್ಸಿ ವಾಚ್ ಅಲ್ಟ್ರಾ, ಬಡ್ಸ್ 3 ಸರಣಿ ಬಿಡುಗಡೆ

ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್ ಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Continue Reading
Advertisement
Pakistan Army
ವಿದೇಶ2 mins ago

Pakistan Army: ಭಾರತದ ಗಡಿಯಲ್ಲಿ ಉಗ್ರರಿಗೆ ಪಾಕ್ ಸೇನೆಯಿಂದಲೇ ತರಬೇತಿ, ಮಾರ್ಗದರ್ಶನ; ಮತ್ತೊಂದು ಕಳ್ಳಾಟ ಬಯಲು

Guru Purnima 2024 mahotsava celebrated in different parts of the country
ಬೆಂಗಳೂರು ಗ್ರಾಮಾಂತರ14 mins ago

Guru Purnima 2024 : ವಿವಿಧೆಡೆ ಅದ್ಧೂರಿಯಾಗಿ ನೆರವೇರಿದ ಗುರುಪೂರ್ಣಿಮಾ ಮಹೋತ್ಸವ

Paris Olympics 2024
ಪ್ರಮುಖ ಸುದ್ದಿ26 mins ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆದ ಅಥ್ಲೀಟ್​ ಯಾರು? ಇಲ್ಲಿದೆ ಈ ಶ್ರೇಷ್ಠ ಕ್ರೀಡಾಪಟುವಿನ ವಿವರ

Viral Video
ವಿದೇಶ27 mins ago

Viral Video: ಎರಡು ವಾರಗಳ ಹಿಂದೆಯಷ್ಟೇ ಮದುವೆಯಾಗಿದ್ದ ಭಾರತೀಯ ಯುವಕ ಅಮೆರಿಕದಲ್ಲಿ ಗುಂಡೇಟಿಗೆ ಬಲಿ; ವಿಡಿಯೋ ಫುಲ್‌ ವೈರಲ್‌

Jasmine Bhasin says her corneas got damaged
ಸಿನಿಮಾ28 mins ago

Jasmin Bhasin: ಲೆನ್ಸ್‌ ಧರಿಸಿ ಎಡವಟ್ಟು; ಕಣ್ಣು ಕಳೆದುಕೊಂಡ್ರಾ ಖ್ಯಾತ ನಟಿ?

Women's T20 World Cup
ಕ್ರೀಡೆ35 mins ago

Women’s T20 World Cup: ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರ; ಮಹಿಳಾ ಟಿ20 ವಿಶ್ವಕಪ್ ​ಸ್ಥಳಾಂತರ ಸಾಧ್ಯತೆ!

karnataka rain
ಮಳೆ46 mins ago

Karnataka Rain : ಭಾರಿ ಮಳೆ ಎಫೆಕ್ಟ್‌; ಬೆಳಗಾವಿಯಲ್ಲಿ 17 ಸಂಪರ್ಕ ಸೇತುವೆಗಳು ಜಲಾವೃತ

Actor Naresh Shares Emotional Video About His Baby And Taged Director Nag Ashwin
ಟಾಲಿವುಡ್1 hour ago

Actor Naresh: ನನ್ನ ಬೇಬಿಯನ್ನು ದಯವಿಟ್ಟು ಹುಡುಕಿಕೊಡಿ ಎಂದು ಗಳಗಳನೇ ಅತ್ತ ನಟ ನರೇಶ್‌!

Viral Video
ಕ್ರೀಡೆ1 hour ago

Viral Video: ವಿಂಡೀಸ್​ ವೇಗಿಯ ಸಿಕ್ಸರ್​ ಹೊಡೆತಕ್ಕೆ ಸ್ಟೇಡಿಯಂನ ಮೇಲ್ಛಾವಣಿಯ ಹೆಂಚುಗಳು ಪುಡಿಪುಡಿ

IT Employees
ಕರ್ನಾಟಕ1 hour ago

IT Employees: ಐಟಿ ನೌಕರರಿಗೆ ದಿನಕ್ಕೆ 14 ಗಂಟೆ ಕೆಲಸ; ಉದ್ಯೋಗಿಗಳ ಒಕ್ಕೂಟ ಆಕ್ರೋಶ, ಅದರ ವಾದ ಹೀಗಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ1 day ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ2 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ2 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ3 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ5 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ6 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ6 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌