Pakistan Army: ಭಾರತದ ಗಡಿಯಲ್ಲಿ ಉಗ್ರರಿಗೆ ಪಾಕ್ ಸೇನೆಯಿಂದಲೇ ತರಬೇತಿ, ಮಾರ್ಗದರ್ಶನ; ಮತ್ತೊಂದು ಕಳ್ಳಾಟ ಬಯಲು - Vistara News

ವಿದೇಶ

Pakistan Army: ಭಾರತದ ಗಡಿಯಲ್ಲಿ ಉಗ್ರರಿಗೆ ಪಾಕ್ ಸೇನೆಯಿಂದಲೇ ತರಬೇತಿ, ಮಾರ್ಗದರ್ಶನ; ಮತ್ತೊಂದು ಕಳ್ಳಾಟ ಬಯಲು

Pakistan Army: ಪಾಕಿಸ್ತಾನದ ಸೇನಾ ನೆಲೆಗಳಲ್ಲಿ, ಬಂಕರ್‌ಗಳಲ್ಲಿಯೇ ಉಗ್ರರಿಗೆ ಸೈನಿಕರು ಆಶ್ರಯ ನೀಡಿದ್ದಾರೆ. ಅವರನ್ನು ಗಡಿಯ ತನಕ ಕರೆದುಕೊಂಡು ಬಂದು, ಭಾರತದೊಳಗೆ ನುಸುಳಲು ಯಾವ ಮಾರ್ಗದ ಮೂಲಕ ತೆರಳಬೇಕು ಎಂಬುದಾಗಿ ಮಾರ್ಗದರ್ಶನ ನೀಡಿದ್ದಾರೆ. ಈ ಫೋಟೊಗಳು ಈಗ ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿವೆ.

VISTARANEWS.COM


on

Pakistan Army
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಇಸ್ಲಾಮಾಬಾದ್:‌ ಜಮ್ಮು-ಕಾಶ್ಮೀರದಲ್ಲಿ ಇತ್ತೀಚೆಗೆ ಉಗ್ರರ ದಾಳಿಗಳು ಜಾಸ್ತಿಯಾಗಿವೆ. ಅದರಲ್ಲೂ, ನಾಗರಿಕರು ಹಾಗೂ ಸೈನಿಕರನ್ನು ಗುರಿಯಾಗಿಸಿ ಉಗ್ರರು ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ಉಗ್ರರಿಗೆ ನೆರವು ನೀಡುವ ಪಾಕಿಸ್ತಾನದ ಕುತಂತ್ರ ಬುದ್ಧಿಯ ಅನಾವರಣ ಆಗಿದೆ. ಹೌದು, ಜಮ್ಮು-ಕಾಶ್ಮೀರ (Jammu Kashmir) ಗಡಿ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ (Pakistan Terrorists) ಪಾಕಿಸ್ತಾನದ ಸೇನೆಯೇ (Pakistan Army) ತರಬೇತಿ ನೀಡುತ್ತಿದೆ. ಹಾಗೆಯೇ, ಯಾವ ಮಾರ್ಗದ ಮೂಲಕ ಭಾರತವನ್ನು ಪ್ರವೇಶಿಸಬಹುದು ಎಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತಿದೆ ಎಂದು ತಿಳಿದುಬಂದಿದೆ. ಹಾಗೆಯೇ, ಉಗ್ರರಿಗೆ ಪಾಕಿಸ್ತಾನದ ಸೈನಿಕರು ಮಾರ್ಗದರ್ಶನ ನೀಡುತ್ತಿರುವ ಫೋಟೊಗಳು ಕೂಡ ಲಭ್ಯವಾಗಿವೆ. ಈ ಕುರಿತು ಇಂಡಿಯಾ ಟಿವಿ ವರದಿ ಮಾಡಿದೆ.

ಹೌದು, ಪಾಕ್‌ ಆಕ್ರಮಿತ ಕಾಶ್ಮೀರದ ಗಡಿಯ ಕೊಟ್ಲಿ ಸೇರಿ ಹಲವು ಪ್ರದೇಶಗಳಲ್ಲಿ ಪಠಾಣಿ ಉಡುಪುಗಳನ್ನು ಧರಿಸಿರುವ ಉಗ್ರರಿಗೆ ಪಾಕಿಸ್ತಾನದ ಸೈನಿಕರು ತರಬೇತಿ ನೀಡುತ್ತಿರುವ, ಅವರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸುತ್ತಿರುವ ಹಾಗೂ ಭಾರತದ ಕಡೆಗೂ ನುಗ್ಗಿಸುತ್ತಿರುವ ಫೋಟೊಗಳು ಲಭ್ಯವಾಗಿವೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ಪಾಕ್‌ ಸೈನಿಕರು ತರಬೇತಿ ನೀಡುತ್ತಿರುವ ಫೋಟೊಗಳು ಲಭ್ಯವಾದ ಬೆನ್ನಲ್ಲೇ, ಅವರಿಗೆ ಮಾರ್ಗದರ್ಶನ ನೀಡುವ ಫೋಟೊಗಳು ಕೂಡ ಲಭ್ಯವಾಗಿವೆ.

“ಪಾಕಿಸ್ತಾನದ ಸೇನಾ ನೆಲೆಗಳಲ್ಲಿ, ಬಂಕರ್‌ಗಳಲ್ಲಿಯೇ ಉಗ್ರರಿಗೆ ಸೈನಿಕರು ಆಶ್ರಯ ನೀಡಿದ್ದಾರೆ. ಅವರನ್ನು ಗಡಿಯ ತನಕ ಕರೆದುಕೊಂಡು ಬಂದು, ಭಾರತದೊಳಗೆ ನುಸುಳಲು ಯಾವ ಮಾರ್ಗದ ಮೂಲಕ ತೆರಳಬೇಕು ಎಂಬುದಾಗಿ ಮಾರ್ಗದರ್ಶನ ನೀಡಿದ್ದಾರೆ” ಎಂದು ಮೂಲಗಳು ತಿಳಿಸಿವೆ. ಇನ್ನು, ಪಾಕಿಸ್ತಾನದ ಎಸ್‌ಎಸ್‌ಜಿ ಕಮಾಂಡೋಗಳೇ ಉಗ್ರರಿಗೆ ದಾರಿ ತೋರಿಸುತ್ತಿರುವ ಫೋಟೊಗಳು ಕೂಡ ಬಹಿರಂಗವಾಗಿವೆ.

ಉಗ್ರರ ಬೇಟೆಗೆ ಭಾರತದ ಸೇನೆ ಸಜ್ಜು

ಜಮ್ಮು-ಕಾಶ್ಮೀರದಲ್ಲಿ ಉಗ್ರರನ್ನು ಸದೆಬಡಿಯಲು ಭಾರತೀಯ ಸೇನೆ ಸಂಪೂರ್ಣವಾಗಿ ಸಜ್ಜಾಗಿದೆ. ಉಗ್ರರನ್ನು ಮಟ್ಟ ಹಾಕುವ ಪಣ ತೊಟ್ಟಿರುವ ಭಾರತೀಯ ಸೇನೆ 500ಕ್ಕೂ ಹೆಚ್ಚು ಪ್ಯಾರಾ ಕಮಾಂಡೋಗಳನ್ನು ಜಮ್ಮುವಿನಲ್ಲಿ ನಿಯೋಜಿಸಿದೆ. ಈ ಪ್ಯಾರಾ ಕಮಾಂಡೋಗಳು ಪಾಕಿಸ್ತಾನ ಮೂಲದ ಉಗ್ರರ ಬೇಟೆಯಲ್ಲಿ ತೊಡಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಕೆಲವು ದಿನಗಳಿಂದ ಉಗ್ರರ ಉಪಟಳ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದರ ಹಿಂದೆ ಒಂದರಂತೆ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಈ ಪ್ರದೇಶದಲ್ಲಿ 50-55 ಉಗ್ರರು ಬೀಡು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ಸೇನೆ ಭದ್ರತೆಯನ್ನು ಹೆಚ್ಚಿಸಿದೆ. ಇನ್ನು ಕಳೆದ ವಾರದಿಂದ ನಡೆಯುತ್ತಿರುವ ಉಗ್ರರ ದಾಳಿ ಹಿಂದೆ ಪಾಕಿಸ್ತಾನ ನಿವೃತ ಸೈನಿಕರು ಅಥವಾ ಸೇನಾ ತರಬೇತಿ ಇರುವ ಉಗ್ರರ ಕೈವಾಡ ಇರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ಇದನ್ನೂ ಓದಿ: Pakistan Crisis: ಲೀಟರ್‌ ಪೆಟ್ರೋಲ್‌ಗೆ 275 ರೂ., ಸಾಲ 79 ಲಕ್ಷ ಕೋಟಿ ರೂ.; ಪಾಕ್‌ ಸಂಪೂರ್ಣ ದಿವಾಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Viral Video: ಎರಡು ವಾರಗಳ ಹಿಂದೆಯಷ್ಟೇ ಮದುವೆಯಾಗಿದ್ದ ಭಾರತೀಯ ಯುವಕ ಅಮೆರಿಕದಲ್ಲಿ ಗುಂಡೇಟಿಗೆ ಬಲಿ; ವಿಡಿಯೋ ಫುಲ್‌ ವೈರಲ್‌

Viral Video: ಜೂ.29ರಂದು ಮೆಕ್ಸಿಕನ್‌ ಯುವತಿ ವಿವಿಯಾನಾ ಜಾಮೋರಾ ಜೊತೆ ಗವಿನ್‌ ವಿವಾಹ ನಡೆದಿತ್ತು. ಇವರಿಬ್ಬರು ಮನೆಗೆ ಮರಳುತ್ತಿರುವಾಗ ರಸ್ತೆಯಲ್ಲಿ ಮತ್ತೊಂದು ವಾಹನದ ಚಾಲಕನ ಜೊತೆ ಸಣ್ಣ ಜಗಳ ನಡೆದಿತ್ತು. ಪರಸ್ಪರ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿದೆ. ಕೋಪದ ಭರದಲ್ಲಿ ವಾಹನದೊಳಗಿದ್ದ ಆರೋಪಿ ಗವಿನ್‌ ಮೇಲೆ ಗುಂಡು ಹಾರಿಸುತ್ತಾನೆ.

VISTARANEWS.COM


on

Viral Video
Koo

ವಾಷಿಂಗ್ಟನ್‌: ರಸ್ತೆಯಲ್ಲಿ ನಡೆದ ಜಗಳ ತಾರಕಕ್ಕೇರಿ ದುಷ್ಕರ್ಮಿಯೋರ್ವ ಭಾರತ ಮೂಲದ ಅಮೆರಿಕನ್‌ ಮೇಲೆ ಗುಂಡು ಹಾರಿಸಿ ಕೊಲೆಗೈದಿರುವ ಘಟನೆ ಅಮೆರಿಕ(America)ದ ಇಂಡಿಯಾನಾದಲ್ಲಿ ನಡೆದಿದೆ. ಎರಡು ವಾರಗಳ ಹಿಂದೆಯಷ್ಟೇ ಮದುವೆಯಾಗಿದ್ದ ಭಾರತೀಯ ಮೂಲದ ಗವಿನ್‌ ದಸೌರ್‌ ದುಷ್ಕರ್ಮಿಯ ಗುಂಡೇಟಿ(Shot Dead)ಗೆ ಬಲಿಯಾಗಿದ್ದಾನೆ. ಈ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ.

ಜೂ.29ರಂದು ಮೆಕ್ಸಿಕನ್‌ ಯುವತಿ ವಿವಿಯಾನಾ ಜಾಮೋರಾ ಜೊತೆ ಗವಿನ್‌ ವಿವಾಹ ನಡೆದಿತ್ತು. ಇವರಿಬ್ಬರು ಮನೆಗೆ ಮರಳುತ್ತಿರುವಾಗ ರಸ್ತೆಯಲ್ಲಿ ಮತ್ತೊಂದು ವಾಹನದ ಚಾಲಕನ ಜೊತೆ ಸಣ್ಣ ಜಗಳ ನಡೆದಿತ್ತು. ಪರಸ್ಪರ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕೇರಿದೆ. ಕೋಪದ ಭರದಲ್ಲಿ ವಾಹನದೊಳಗಿದ್ದ ಆರೋಪಿ ಗವಿನ್‌ ಮೇಲೆ ಗುಂಡು ಹಾರಿಸುತ್ತಾನೆ. ಗಂಭೀರವಾಗಿ ಗಾಯಗೊಂಡ ಗವನಿ ತಕ್ಷಣ ನೆಲಕ್ಕೆ ಕುಸಿದು ಬಿದ್ದಿದ್ದಾನೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದಾನೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ದಸೌರ್ ತನ್ನ ಕಾರಿನಿಂದ ಕೆಳಗೆ ಇಳಿದು ಪಿಕಪ್ ಟ್ರಕ್‌ನ ಚಾಲಕನ ಮೇಲೆ ಕಿರುಚಾಡುತ್ತಿರುವುದನ್ನು, ತನ್ನ ಕೈಯಲ್ಲಿದ್ದ ಗನ್‌ನಲ್ಲಿ ವಾಹನಕ್ಕೆ ಪಂಚ್‌ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಪೊಲೀಸರ ಪ್ರಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅರೆಸ್ಟ್‌ ಮಾಡಲಾಗಿದೆ. ಇನ್ನು ಪೊಲೀಸರು ಹೇಳುವ ಪ್ರಕಾರ ಗವಿನ್‌ ಕೈಯಲ್ಲೂ ಗನ್‌ ಇದ್ದ ಕಾರಣ ತನ್ನ ಜೀವ ರಕ್ಷಣೆಗಾಗಿ ಆರೋಪಿ ಗುಂಡು ಹಾರಿಸಿರಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ಆರೋಪಿಯನ್ನು ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸ್‌ ವಕ್ತಾರರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಗುಳ್ಳೆ ನರಿ; ವಿಡಿಯೊ ವೈರಲ್​

Continue Reading

ವಿದೇಶ

Bangladesh Protests: ಸರ್ಕಾರಿ ಉದ್ಯೋಗದಲ್ಲಿನ ಶೇ. 30 ಮೀಸಲಾತಿ ಕಡಿತಗೊಳಿಸಿದ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯ

Bangladesh Protests: ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಲವು ದಿನಗಳಿಂದ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕೊನೆಗೂ ಜಯ ಸಿಕ್ಕಿದೆ. ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ನಿಯಮವನ್ನು ಕೋರ್ಟ್‌ ಹಿಂತೆಗೆದುಕೊಂಡಿದೆ.

VISTARANEWS.COM


on

Bangladesh Protests
Koo

ಢಾಕಾ: ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶ (Bangladesh)ದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸಾಸ್ವರೂಪ ಪಡೆದಿರುವ ಮಧ್ಯೆಯೇ ಅಲ್ಲಿನ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ (Bangladesh Protests) ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ (Job Reservation) ನೀಡುವ ನಿಯಮವನ್ನು ಕೋರ್ಟ್‌ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ.

“ಹೈಕೋರ್ಟ್ ತೀರ್ಪು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ” ಎಂದು ಅಟಾರ್ನಿ ಜನರಲ್ ಎ.ಎಂ.ಅಮೀನ್ ಉದ್ದೀನ್ ತಿಳಿಸಿದರು. ʼʼನಾಗರಿಕ ಸೇವಾ ಉದ್ಯೋಗ (Civil service jobs)ಗಳಲ್ಲಿ ಶೇ. 5 ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದವರ ಮಕ್ಕಳಿಗೆ ಮತ್ತು ಶೇ. 2ರಷ್ಟು ಇತರ ವರ್ಗಗಳಿಗೆ ಮೀಸಲಿಡಲಾಗುವುದುʼʼ ಎಂದು ಅವರು ಹೇಳಿದರು. ಅದರ ಪ್ರಕಾರ ನಿವೃತ್ತ ಸೈನಿಕರ ಸಂಬಂಧಿಕರ ಕೋಟಾವನ್ನು ಶೇ. 30ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಈಗ ಶೇ. 93ರಷ್ಟು ಹುದ್ದೆಗಳನ್ನು ಅರ್ಹತೆಯ ಆಧಾರದ ಮೇಲೆ ಭರ್ತಿ ಮಾಡಬೇಕಾಗಿದೆ. ಉಳಿದ ಶೇ. 2 ಅನ್ನು ಜನಾಂಗೀಯ ಅಲ್ಪಸಂಖ್ಯಾತರು, ತೃತೀಯ ಲಿಂಗಿಗಳು ಮತ್ತು ಅಂಗವಿಕಲರಿಗೆ ಹಂಚಿಕೆ ಮಾಡಲಾಗುತ್ತದೆ.

ವಿವಾದಾತ್ಮಕ ನಾಗರಿಕ ಸೇವಾ ನೇಮಕಾತಿ ನಿಯಮಗಳ ಬಗ್ಗೆ ತೀರ್ಪು ನೀಡಿದ ನಂತರ ಬಾಂಗ್ಲಾದೇಶದ ಉನ್ನತ ನ್ಯಾಯಾಲಯವು ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ತರಗತಿಗೆ ಮರಳುವಂತೆ ಕೇಳಿದೆ ಎಂದು ಪ್ರಕರಣದಲ್ಲಿ ಭಾಗಿಯಾಗಿರುವ ವಕೀಲರೊಬ್ಬರು ತಿಳಿಸಿದರು. ಇದುವರೆಗೆ ಹಿಂಸಾಚಾರದಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಏನಿದು ವಿವಾದ?

1971ರಲ್ಲಿ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರು ಮತ್ತು ಹೋರಾಟಗಾರರ ಸಂಬಂಧಿಕರಿಗೆ ಉದ್ಯೋಗಗಳಲ್ಲಿ ಶೇ. 30ರಷ್ಟು ಮೀಸಲಾತಿ ಘೋಷಣೆಯಾದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದರು. ರಾಜಧಾನಿ ಢಾಕಾ ಮತ್ತು ಇತರ ನಗರಗಳಲ್ಲಿ ನೂರಾರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಳೆದ ತಿಂಗಳಿನಿಂದ ರ‍್ಯಾಲಿಗಳನ್ನು ಪ್ರಾರಂಭಿಸಿದರು. ಶಾಂತವಾಗಿಯೇ ನಡೆಯುತ್ತಿದ್ದ ಪ್ರತಿಭಟನೆಕಾರರ ಮೇಲೆ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತರೂಢ ಅವಾಮಿ ಲೀಗ್‌ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದರು. ಆ ಬಳಿಕ ಪ್ರತಿಭಟನೆ ಹಿಂಸೆಯ ರೂಪ ತಾಳಿತು.

ದೇಶದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆಗಳು ಮತ್ತು ಗಲಭೆಗಳು ನಡೆಯುತ್ತಿರುವ ಕಾರಣ ಸುಮಾರು 1,000ರಷ್ಟು ಆತಂಕಿತ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ. 778 ಭಾರತೀಯರು ಭೂಮಾರ್ಗದಲ್ಲಿ ತಾಯ್ನೆಲಕ್ಕೆ ಬಂದು ಸೇರಿದ್ದು, 200ಕ್ಕೂ ಅಧಿಕ ವಿದ್ಯಾರ್ಥಿಗಳು ವಿಮಾನದಲ್ಲಿ ಮರಳಿದ್ದಾರೆ.

ಇದನ್ನೂ ಓದಿ: Bangla Agitation Explainer: ಬಾಂಗ್ಲಾದೇಶ ಏಕೆ ಹೊತ್ತಿ ಉರಿಯುತ್ತಿದೆ? ವಿದ್ಯಾರ್ಥಿಗಳು ಏಕೆ ಹಿಂಸಾಚಾರಕ್ಕಿಳಿದಿದ್ದಾರೆ?

ಈ ಪ್ರತಿಭಟನೆಯ ಹಿಂದೆ ರಾಜಕೀಯದ ಛಾಯೆಯೂ ಇದೆ. 1971ರ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದುದು ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಅವಾಮಿ ಲೀಗ್‌ ಪಕ್ಷ. ಈಗ ಪ್ರಧಾನಿ ಆಗಿರುವ ಶೇಖ್‌ ಹಸೀನಾ ಇವರ ಮಗಳು. ಹಾಗಾಗಿ ಅವಾಮಿ ಲೀಗ್‌ನ ಬೆಂಬಲಿಗರಿಗೆ ಮಾತ್ರ ಈ ಮೀಸಲಾತಿಯಿಂದ ಲಾಭ ಆಗುತ್ತದೆ ಎನ್ನುವುದು ಪ್ರತಿಪಕ್ಷಗಳ ಆರೋಪ.

Continue Reading

ವಿದೇಶ

Fire Accident: ಕುವೈತ್‌ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ; ಕೇರಳದ ಒಂದೇ ಕುಟುಂಬದ ನಾಲ್ವರ ಸಾವು

Fire Accident: ಅಗ್ನಿ ದುರಂತದಲ್ಲಿ ಮ್ಯಾಥ್ಯೂಸ್‌ ಮುಳಕ್ಕಲ್‌, ಅವರ ಪತ್ನಿ ಲಿನಿ ಅಬ್ರಾಹಂ ಹಾಗೂ ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇವರು ಕೇರಳದ ಆಲಪ್ಪುಳ ಜಿಲ್ಲೆಯ ನೀರಟ್ಟುಪುರಂ ನಿವಾಸಿಗಳಾಗಿದ್ದು, ಕುವೈತ್‌ ಸಿಟಿಯಲ್ಲಿ ವಾಸವಿದ್ದರು. ನಾಲ್ವರೂ ರಜೆಯ ಹಿನ್ನೆಲೆಯಲ್ಲಿ ಕೇರಳಕ್ಕೆ ಆಗಮಿಸಿದ್ದರು. ರಜೆ ಮುಗಿಸಿಕೊಂಡು ಕುವೈತ್‌ಗೆ ಹೋದ ದಿನವೇ ದುರಂತ ಸಂಭವಿಸಿದೆ.

VISTARANEWS.COM


on

Fire Accident
Koo

ಕುವೈತ್‌ ಸಿಟಿ: ಕುವೈತ್‌ ನಗರದಲ್ಲಿರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಶುಕ್ರವಾರ (ಜುಲೈ 19) ರಾತ್ರಿ ಭೀಕರ ಅಗ್ನಿ ದುರಂತ (Fire Accident) ಸಂಭವಿಸಿದ್ದು, ಕೇರಳ ಮೂಲದ, ಒಂದೇ ಕುಟುಂಬದ (Kerala Family) ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ. ಕುವೈತ್‌ ರಾಜಧಾನಿಯಲ್ಲಿರುವ (Kuwait City) ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಪತಿ, ಪತ್ನಿ ಹಾಗೂ ಆ ದಂಪತಿಯ ಇಬ್ಬರು ಮಕ್ಕಳು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿ ದುರಂತದಲ್ಲಿ ಮ್ಯಾಥ್ಯೂಸ್‌ ಮುಳಕ್ಕಲ್‌, ಅವರ ಪತ್ನಿ ಲಿನಿ ಅಬ್ರಾಹಂ ಹಾಗೂ ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇವರು ಕೇರಳದ ಆಲಪ್ಪುಳ ಜಿಲ್ಲೆಯ ನೀರಟ್ಟುಪುರಂ ನಿವಾಸಿಗಳಾಗಿದ್ದು, ಕುವೈತ್‌ ಸಿಟಿಯಲ್ಲಿ ವಾಸವಿದ್ದರು. ನಾಲ್ವರೂ ರಜೆಯ ಹಿನ್ನೆಲೆಯಲ್ಲಿ ಕೇರಳಕ್ಕೆ ಆಗಮಿಸಿದ್ದರು. ರಜೆ ಮುಗಿಸಿಕೊಂಡು ಕುವೈತ್‌ಗೆ ಹೋದ ದಿನವೇ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ದುರಂತದಲ್ಲಿ ನಾಲ್ವರೂ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.

ಅಬ್ಬಾಸಿಯಾ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯ ಫ್ಲ್ಯಾಟ್‌ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಏರ್‌ ಕಂಡಿಷನರ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿ ಬೆಂಕಿ ಹೊತ್ತಿಕೊಂಡಿದೆ. ಇದಾದ ಬಳಿಕ ಉಸಿರುಗಟ್ಟಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮ್ಯಾಥ್ಯೂಸ್‌ ಮುಳಕ್ಕಲ್‌ ಅವರು ರಾಯಿಟರ್ಸ್‌ ನ್ಯೂಸ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಅವರ ಪತ್ನಿಯು ಅದಾನ್‌ ಎಂಬ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿದ್ದರು. ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ದುರಂತದ ಹಿನ್ನೆಲೆಯಲ್ಲಿ ಕುವೈತ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯು ಸಂತಾಪ ವ್ಯಕ್ತಪಡಿಸಿದೆ. “ಕುವೈತ್‌ ನಗರದಲ್ಲಿ ಅಗ್ನಿ ದುರಂತದಿಂದ ಮ್ಯಾಥ್ಯೂಸ್‌ ಮುಳಕ್ಕಲ್‌, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವ ಸುದ್ದಿಯು ಆಘಾತಕಾರಿಯಾಗಿದೆ. ನಾಲ್ವರ ಶವಗಳನ್ನು ಭಾರತಕ್ಕೆ ಕಳುಹಿಸುವ ದಿಸೆಯಲ್ಲಿ ರಾಯಭಾರ ಕಚೇರಿಯು ನಿರಂತರವಾಗಿ ಪ್ರಯತ್ನಿಸುತ್ತಿದೆ” ಎಂದು ರಾಯಭಾರ ಕಚೇರಿಯು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

ಕಳೆದ ತಿಂಗಳು 45 ಮಂದಿ ಸಾವು

ಕುವೈತ್‌ನ ಮಂಗಾಫ್ ನಗರದಲ್ಲಿರುವ ಆರು ಮಹಡಿಯ ಬೃಹತ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಭಾರತದ 45 ಮಂದಿ ಮೃತಪಟ್ಟಿದ್ದರು. ಆರು ಮಹಡಿಯ ಕಟ್ಟಡದ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಇಡೀ ಕಟ್ಟಡಕ್ಕೆ ಆವರಿಸಿದೆ. ಇದರಿಂದಾಗಿ 45 ಭಾರತೀಯರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು. ಇದಾದ ಬಳಿಕ ಭಾರತೀಯರ ಶವಗಳನ್ನು ಕುವೈತ್‌ನಿಂದ ಭಾರತಕ್ಕೆ ರವಾನಿಸಲಾಗಿತ್ತು.

ಇದನ್ನೂ ಓದಿ: Kuwait Emir : ಕೊಲ್ಲಿ ರಾಷ್ಟ್ರ ಕುವೈತ್ ಗೆ ಹೊಸ ರಾಜನ ನೇಮಕ

Continue Reading

ವೈರಲ್ ನ್ಯೂಸ್

Viral Video: ಏಳು ತಿಂಗಳ ಮಗುವಿನ ಮೇಲೆ ಗುಂಡು ಹಾರಿಸಿದ ಕ್ರೂರ ಮಹಿಳೆ!

ಅಮೆರಿಕದ ಫಿಲಡೆಲ್ಫಿಯಾ ನಗರದ ಈಶಾನ್ಯ ಭಾಗದಲ್ಲಿ ಏಳು ತಿಂಗಳ ಗಂಡು ಮಗುವನ್ನು ಸ್ಟ್ರೋಲರ್ ನಲ್ಲಿ ಮಲಗಿಸಿ ಸುತ್ತಾಡಿ ಬರಲು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ದರೋಡೆಕೋರ ಮಹಿಳೆ ಗುಂಡಿನ ದಾಳಿ ನಡೆಸಿದ್ದಾಳೆ. ಗುಂಡು ಮಗುವಿನ ಕಾಲಿಗೆ ತಾಗಿದೆ. ಈ ಘಟನೆಯ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral video
Koo

ಮಗುವಿನೊಂದಿಗೆ ಸುತ್ತಾಡಿ ಬರಲು ಹೋಗುತ್ತಿದ್ದ ತಾಯಿಯ ಮೇಲೆ ಮಹಿಳೆಯೊಬ್ಬಳು ಗುಂಡಿನ ದಾಳಿ ನಡೆಸಿದ್ದು, ಗುಂಡು ಮಗುವಿನ ಕಾಲಿಗೆ (Shoots Baby) ತಾಗಿದೆ. ಅಮೆರಿಕದ ಫಿಲಿಡೆಲ್ಫಿಯಾದಲ್ಲಿ (Philadelphia) ನಡೆದ ಈ ಘಟನೆಯ ದೃಶ್ಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಏಳು ತಿಂಗಳ ಗಂಡು ಮಗುವನ್ನು ಸ್ಟ್ರೋಲರ್ ನಲ್ಲಿ ಮಲಗಿಸಿ ಸುತ್ತಾಡಿ ಬರಲು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ದರೋಡೆಕೋರ ಮಹಿಳೆ ಗುಂಡಿನ ದಾಳಿ ನಡೆಸಿದ್ದಾಳೆ. ಗುಂಡು ಮಗುವಿನ ಕಾಲಿಗೆ ತಾಗಿದೆ. ಇದೀಗ ಮಗುವಿನ ಅರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಫಿಲಡೆಲ್ಫಿಯಾ ನಗರದ ಈಶಾನ್ಯ ಭಾಗದಲ್ಲಿ ಈ ಘಟನೆ ನಡೆದಿದ್ದು, ಗುಂಡು ಹಾರಿಸಿದ ದರೋಡೆಕೋರ ಮಹಿಳೆಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಮಗುವಿನ ಮೇಲೆ ಗುಂಡು ಹಾರಿಸಿರುವ ಭಯಾನಕ ದೃಶ್ಯ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದೆ. ಮಗು ಮತ್ತು ಪೋಷಕ ಮಹಿಳೆ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆಯೊಬ್ಬಳು ಏಕಾಏಕಿ ಬಂದು ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ದರೋಡೆಕೋರ ಮಹಿಳೆಯು ಹಲವು ಬಾರಿ ಗುಂಡು ಹಾರಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.


ಪೊಲೀಸರು ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಹೀಗೆ ಬರೆದಿದ್ದರೆ. 2024ರ ಜುಲೈ 18ರಂದು ಮೆರಿಡಿಯನ್ ಸ್ಟ್ರೀಟ್‌ನ 4000 ಬ್ಲಾಕ್‌ನಲ್ಲಿ ಏಳು ತಿಂಗಳ ಮಗುವಿನ ಕಾಲಿನ ಮೇಲೆ ಮಹಿಳೆಯೊಬ್ಬಳು ಗುಂಡು ಹರಿಸಿದ್ದಾಳೆ. ಗುಂಡಿನ ದಾಳಿಯಲ್ಲಿ ಬೇರೆ ಯಾರಿಗೂ ಗಾಯವಾಗಿಲ್ಲ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಬಳಿಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಮಗುವಿನ ಆರೋಗ್ಯ ಸ್ಥಿರವಾಗಿದೆ.

ಇದನ್ನೂ ಓದಿ: Udupi News : ಸತ್ತ ನಾಯಿಯನ್ನು ಸ್ಕೂಟರ್‌ಗೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ದ ಅಸಾಮಿ!

ಪೊಲೀಸರು ಆಗಮಿಸಿದಾಗ ಮಗುವಿನ ಪೋಷಕರು ಘಟನಾ ಸ್ಥಳದಲ್ಲಿ ಇರಲಿಲ್ಲ.ಗುಂಡಿನ ದಾಳಿ ನಡೆಸಿದ ಮಹಿಳೆ ತಾನು ಮಾಡಿದ್ದಕ್ಕೆ ಪಶ್ಚಾತ್ತಾಪ ಪಡದೆ ಸುಮ್ಮನೆ ಅಲ್ಲಿಂದ ಹೊರನಡೆದಳು. ಇದು ತುಂಬಾ ಭಯಾನಕವಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

Continue Reading
Advertisement
Mamata Banerjee
ದೇಶ10 mins ago

Mamata Banerjee: ‘ನಾನು ಕಾಫಿರ್‌ ಅಲ್ಲ’ ಎಂದ ಮಮತಾ ಬ್ಯಾನರ್ಜಿಗೆ ಬಿಜೆಪಿ ತಿರುಗೇಟು; ಏನಿದು ವಿವಾದ?

Joe Root
ಪ್ರಮುಖ ಸುದ್ದಿ23 mins ago

Joe Root : ವೆಸ್ಟ್​ ಇಂಡೀಸ್ ವಿರುದ್ಧ ಶತಕ ಬಾರಿಸಿ ಸ್ಟೀವ್​ ವಾ ದಾಖಲೆ ಸರಿಗಟ್ಟಿದ ಜೋ ರೂಟ್​

ಕರ್ನಾಟಕ25 mins ago

Karnataka Rain: ಮಳೆ ಅನಾಹುತ; ಜೀವ, ಬೆಳೆ ಹಾನಿಯ ವರದಿ ಕೂಡಲೇ ಸಲ್ಲಿಸುವಂತೆ ಸಿಎಂ ಸೂಚನೆ

Paris Olympics 2024 :
ಕ್ರೀಡೆ56 mins ago

Paris Olympics 2024 : ಒಲಿಂಪಿಕ್ಸ್​ ಸ್ಪರ್ಧೆಗೆ ಹೊರಟಿರುವ ಅಥ್ಲೀಟ್​ಗೆ 8.5 ಕೋಟಿ ರೂ. ಪ್ರೋತ್ಸಾಹಧನ ನೀಡಿದ ಬಿಸಿಸಿಐ

ಕರ್ನಾಟಕ1 hour ago

Renaming Ramanagara: ರಾಮನಗರದಲ್ಲಿ ಬೆಂಗಳೂರಿನ ಕಸ ಸುರಿಯಲು ಹುನ್ನಾರ: ಎಚ್‌.ಡಿ. ಕುಮಾರಸ್ವಾಮಿ

Budget Session 2024
ದೇಶ1 hour ago

Budget Session 2024: ನಾಳೆಯಿಂದ ಬಜೆಟ್‌ ಅಧಿವೇಶನ; ಕೇಂದ್ರದ ಅಜೆಂಡಾ ಏನು? ಪ್ರತಿಪಕ್ಷಗಳ ತಂತ್ರವೇನು?

Paris Olympics 2024
ಕ್ರಿಕೆಟ್1 hour ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಲಿರುವ ಈ ಅಥ್ಲೀಟ್​ಗೆ ಕೇವಲ 11 ವರ್ಷ! ಇಲ್ಲಿದೆ ಆಕೆಯ ವಿವರ

HD Kumaraswamy
ಕರ್ನಾಟಕ2 hours ago

HD Kumaraswamy: ನನ್ನ ಮತ್ತು ದೇವೇಗೌಡರ ಸರ್ಕಾರ ಕೆಡವಿದ್ದು ಯಾರು ಅಂತ ಹೇಳಿ; ಡಿಕೆಶಿ ವಿರುದ್ಧ ಎಚ್‌ಡಿಕೆ ಕಿಡಿ

Women's Asia Cup 2024
ಪ್ರಮುಖ ಸುದ್ದಿ2 hours ago

Women’s Asia Cup 2024 : ದಾಖಲೆ ಬರೆದ ರಿಚಾ ಘೋಷ್​, ಇತಿಹಾಸ ಸೃಷ್ಟಿಸಿದ ಭಾರತ ತಂಡ

Vande Mataram
ದೇಶ2 hours ago

Vande Mataram: ಸಂಸತ್ತಿನಲ್ಲಿ ವಂದೇ ಮಾತರಂ, ಥ್ಯಾಂಕ್ಸ್‌ ಎಂದು ಹೇಳುವಂತಿಲ್ಲ; ಏಕಿಂಥ ಆದೇಶ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ1 day ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ2 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ2 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ3 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ3 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ5 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ6 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ6 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

ಟ್ರೆಂಡಿಂಗ್‌