Murder Case: ಜಮೀನು ವಿವಾದಕ್ಕೆ ಚಿಕ್ಕಬಳ್ಳಾಪುರದಲ್ಲಿ ಹರಿಯಿತು ನೆತ್ತರು; ಸಂಬಂಧಿಕನಿಂದಲೇ ತಂದೆ-ಮಗನ ಕೊಲೆ - Vistara News

ಕ್ರೈಂ

Murder Case: ಜಮೀನು ವಿವಾದಕ್ಕೆ ಚಿಕ್ಕಬಳ್ಳಾಪುರದಲ್ಲಿ ಹರಿಯಿತು ನೆತ್ತರು; ಸಂಬಂಧಿಕನಿಂದಲೇ ತಂದೆ-ಮಗನ ಕೊಲೆ

Murder Case: ಚಿಕ್ಕಬಳ್ಳಾಪುರದಲ್ಲಿ ಇಂದು ಬೆಳಿಗ್ಗೆ ನಡೆದ ಶೂಟೌಟ್ ಪ್ರಕರಣದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದಲ್ಲಿ ಬಶೀರ್ ಅಹ್ಮದ್ ಪಿಸ್ತೂಲಿನಿಂದ ಗುಂಡು ಹಾರಿಸಿದ ಬಳಿಕ ಮಚ್ಚಿನಿಂದ ದಾಳಿ ನಡೆಸಿದ್ದ. ಗುಂಡೇಟು ತಗುಲಿ ನಜೀರ್ ಅಹ್ಮದ್ (46) ಸ್ಥಳದಲ್ಲೇ ಅಸುನೀಗಿದ್ದರೆ, ಮಚ್ಚಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರ ತಂದೆ ಮಹಬೂಬ್ ಸಾಬ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

VISTARANEWS.COM


on

Murder Case
ಒಳ ಚಿತ್ರದಲ್ಲಿ ಮೃತ ನಜೀರ್ ಅಹ್ಮದ್.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಇಂದು ಬೆಳಿಗ್ಗೆ ನಡೆದ ಶೂಟೌಟ್ (Shootout) ಪ್ರಕರಣದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದಲ್ಲಿ ಬಶೀರ್ ಅಹ್ಮದ್ (66) ಪಿಸ್ತೂಲಿನಿಂದ ಗುಂಡು ಹಾರಿಸಿದ ಬಳಿಕ ಮಚ್ಚಿನಿಂದ ದಾಳಿ ನಡೆಸಿದ್ದ. ಗುಂಡೇಟು ತಗುಲಿ ನಜೀರ್ ಅಹ್ಮದ್ (46) ಸ್ಥಳದಲ್ಲೇ ಅಸುನೀಗಿದ್ದರೆ, ಮಚ್ಚಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರ ತಂದೆ ಮಹಬೂಬ್ ಸಾಬ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ (Murder Case).

ಘಟನೆ ವಿವರ

ಸೌದಿಯಲ್ಲಿ ಕೆಲಸ ಮಾಡಿಕೊಂಡಿದ್ದ ಬಶೀರ್ ಅಹ್ಮದ್ ಮೃತ ಮಹಬೂಬ್ ಸಾಬ್‌ನ ಸಹೋದರ. ಈತ ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ಇಂದು ಬೆಳಿಗ್ಗೆ ನಜೀರ್‌ ಅಹ್ಮದ್ ಮತ್ತು ಮಹಬೂಬ್ ಸಾಬ್ ಎಂದಿನಂತೆ ನಮಾಜ್‌ ಮಾಡಲು ಮಸೀದಿಗೆ ಹೋಗುತ್ತಿದ್ದಾಗ ಬಶೀರ್ ಅಹ್ಮದ್ ತನ್ನ ಪಿಸ್ತೂಲಿನಿಂದ ಶೂಟ್‌ ಮಾಡಿದ್ದ. ಇದರಿಂದ ನಜೀರ್‌ ಸ್ಥಳದಲ್ಲೇ ಮೃತಪಟ್ಟಿದ್ದರು. ಇಷ್ಟಕ್ಕೇ ಸುಮ್ಮನಾಗದ ಬಶೀರ್‌ ಬಳಿಕ ಮಚ್ಚಿನಿಂದ ದಾಳಿ ನಡೆಸಿದ್ದ. ಇದರಿಂದ ಮಹಬೂಬ್ ಸಾಬ್ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕಾರಣವೇನು?

ಜಮೀನು ವಿವಾದ ಹಾಗೂ ಕೌಟುಂಬಿಕ ಕಲಹದಿಂದ ಈ ಕೊಲೆ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಗುಡಿಬಂಡೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಬಶೀರ್ ಅಹ್ಮದ್‌ನನ್ನು ವಶಕ್ಕೆ ಪಡೆದಿದ್ದಾರೆ.

ಪತಿಯಿಂದ ಪತ್ನಿಯ ಮೇಲೆ ಹಲ್ಲೆ; ಕೊಲೆಗೆ ಯತ್ನ

ರಾಮನಗರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಗೆ ಚಾಕುವಿನಿಂರ ಇರಿದು ಕೊಲೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ತುಳಸಿ ತೋಟದ ಬೀದಿಯಲ್ಲಿ ನಡೆದಿದೆ. ಶ್ವೇತಾ (32) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ವೇತಾ ಅವರಿಗೆ ಚನ್ನಪಟ್ಟಣ ಸಾರ್ವಜನಿಕರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಹಲ್ಲೆ ನಡೆಸಿರುವ ಪತಿ ಅರವಿಂದನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಪಟ್ಟಣ ಪೂರ್ವ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕುಡಿದು ಬಂದ ಅರವಿಂದ ಶ್ವೇತಾ ಜತೆ ಜಗಳವಾಡಿ ಬಳಿಕ ಚಾಕುವಿನಿಂದ ಇರಿದಿದ್ದಾನೆ.

ಮರ ಬಿದ್ದು ಯುವಕ‌ ಸಾವು

ಕಾರವಾರ: ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮರ ಬಿದ್ದು ಯುವಕ‌ನೋರ್ವ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಶಿರಸಿ ರಸ್ತೆಯ ಬಾಚನಳ್ಳಿ ಗ್ರಾಮದಲ್ಲಿ ನಡೆದಿದೆ. ವಿನಯ ಗಾಡಿಗ (25) ಮೃತ ದುರ್ದೈವಿ. ಯಲ್ಲಾಪುರದ ಹಾಸಣಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬ್ಬಿನಗದ್ದೆ ನಿವಾಸಿಯಾಗಿದ್ದ ವಿನಯ ಗಾಡಿಗ ಯಲ್ಲಾಪುರದಿಂದ ಮಂಚಿಕೇರಿ ಕಡೆ ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮೈಮೇಲೆ ಮರ ಬಿದ್ದ ಪರಿಣಾಮ ವಿನಯ ಗಾಡಿಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸರು ಭೇಟಿ ನೀಡಿದ್ದಾರೆ. ಮರ ತುಂಡರಿಸಿ ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಸಂಚಾರವನ್ನು ಸುಗಮಗೊಳಿಸಿದರು.

ಇದನ್ನೂ ಓದಿ: Shootout: ಚಿಕ್ಕಬಳ್ಳಾಪುರದಲ್ಲಿ ಬೆಳ್ಳಂಬೆಳಿಗ್ಗೆ ಗುಂಡಿನ ಸದ್ದು: ಚಿಕ್ಕಪ್ಪನಿಂದಲೇ ಅಣ್ಣನ ಮಗನ ಕೊಲೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

ಆನೇಕಲ್‌ನಲ್ಲಿ ಪುರಸಭೆ ಸದಸ್ಯನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ

Anekal: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆನೇಕಲ್‌ ಪುರಸಭೆಯ 22ನೇ ವಾರ್ಡ್‌ ಸದಸ್ಯರಾಗಿರುವ ರವಿ ಅವರ ಮೇಲೆ ವೈಷ್ಯಮ್ಯ ಇತ್ತು. ಇದೇ ಕಾರಣಕ್ಕಾಗಿ ಏಕಾಏಕಿ ದಾಳಿ ನಡೆಸಿ, ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

VISTARANEWS.COM


on

Anekal
Koo

ಆನೇಕಲ್:‌ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ (Anekal) ಪಟ್ಟಣದಲ್ಲಿ ಪುರಸಭೆ ಸದಸ್ಯರೊಬ್ಬರನ್ನು (Municipality Member) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಆನೇಕಲ್‌ ಪಟ್ಟಣದ ಹೊಸೂರು ಮುಖ್ಯ ರಸ್ತೆಯಲ್ಲಿ ಪುರಸಭೆ ಸದಸ್ಯ ರವಿ ಅಲಿಯಾ ಸ್ಕ್ರ್ಯಾಪ್‌ ರವಿ ಎಂಬುವರನ್ನು ಬುಧವಾರ (ಜುಲೈ 24) ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.

ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆನೇಕಲ್‌ ಪುರಸಭೆಯ 22ನೇ ವಾರ್ಡ್‌ ಸದಸ್ಯರಾಗಿರುವ ರವಿ ಅವರ ಮೇಲೆ ವೈಷ್ಯಮ್ಯ ಇತ್ತು. ಇದೇ ಕಾರಣಕ್ಕಾಗಿ ಏಕಾಏಕಿ ದಾಳಿ ನಡೆಸಿ, ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ದಾಳಿ ಮಾಡಿದವರು ಯಾರು, ಅವರಿಗೆ ಯಾವ ಸೇಡು ಇತ್ತು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಪುರಸಭೆ ಸದಸ್ಯ ರವಿ.

ರವಿ ಅವರ ಶವವನ್ನು ಆನೇಕಲ್‌ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರು ಹಾಗೂ ಆಪ್ತರು ಜಮಾಯಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು, ಕೊಲೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್‌ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಶೂಟೌಟ್;‌ ಸಾವಿನ ಸಂಖ್ಯೆ 2

ಚಿಕ್ಕಬಳ್ಳಾಪುರದಲ್ಲಿ ಬುಧವಾರ ಬೆಳಗ್ಗೆ ನಡೆದ ಶೂಟೌಟ್ (Shootout) ಪ್ರಕರಣದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದಲ್ಲಿ ಬಶೀರ್ ಅಹ್ಮದ್ (66) ಪಿಸ್ತೂಲಿನಿಂದ ಗುಂಡು ಹಾರಿಸಿದ ಬಳಿಕ ಮಚ್ಚಿನಿಂದ ದಾಳಿ ನಡೆಸಿದ್ದ. ಗುಂಡೇಟು ತಗುಲಿ ನಜೀರ್ ಅಹ್ಮದ್ (46) ಸ್ಥಳದಲ್ಲೇ ಅಸುನೀಗಿದ್ದರೆ, ಮಚ್ಚಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರ ತಂದೆ ಮಹಬೂಬ್ ಸಾಬ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ

ಇದನ್ನೂ ಓದಿ: Murder Case: ಲೇಡಿಸ್‌ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್‌; ಪ್ರಿಯತಮನೇ ಕೊಲೆಗಾರ

Continue Reading

ದೇಶ

Dog Attack: ವಕೀಲನ ಮೇಲೆ ಶ್ವಾನ ದಾಳಿ; ಖಾಸಗಿ ಅಂಗಕ್ಕೆ ಕಚ್ಚಿದ ಪಿಟ್‌ ಬುಲ್‌

Dog Attack: ನಗರದ ಆವಾಸ್ ವಿಕಾಸ್ ಕಾಲೋನಿಯಲ್ಲಿ ಜುಲೈ 16ರಂದು ಸಂಜೆ ಈ ಘಟನೆ ನಡೆದಿದ್ದು, ಸಂತ್ರಸ್ತ ವಕೀಲ ವಿಕಾಸ್ ಭವನದ ಬಳಿ ವಾಸವಿದ್ದು, ಅಲ್ಲಿನ ಬಿಜೆಪಿ ಮುಖಂಡ, ದಿವಂಗತ ವಕೀಲ ಸುಧೀರ್ ಕುಮಾರ್ ಸಿಂಗ್ ಸಿಧು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

VISTARANEWS.COM


on

Dog attack
Koo

ಲಖನೌ: ಉತ್ತರಪ್ರದೇಶ(Uttar Pradesh)ದಲ್ಲಿ ಶ್ವಾನ ದಾಳಿ ನಿಲ್ಲುತ್ತಲೇ ಇಲ್ಲ. ಬಾರಬಂಕಿಯಲ್ಲಿ ವಕೀಲ(Lawyer)ರೊಬ್ಬರ ಮೇಲೆ ಪಿಟ್‌ಬುಲ್‌ ಶ್ವಾನ ದಾಳಿ(Dog Attack) ನಡೆಸಿರುವ ಪ್ರಕರಣ ದಾಖಲಾಗಿದೆ. ನಡುರಸ್ತೆಯಲ್ಲೇ ವಕೀಲನ ಖಾಸಗಿ ಅಂಗಕ್ಕೆ ನಾಯಿ ಕಚ್ಚಿದೆ. ಗಂಭೀರವಾಗಿ ಗಾಯಗೊಂಡಿದ್ದ ವಕೀಲನನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಲಕ್ನೋಗೆ ಕಳುಹಿಸಲಾಯಿತು.

ನಗರದ ಆವಾಸ್ ವಿಕಾಸ್ ಕಾಲೋನಿಯಲ್ಲಿ ಜುಲೈ 16ರಂದು ಸಂಜೆ ಈ ಘಟನೆ ನಡೆದಿದ್ದು, ಸಂತ್ರಸ್ತ ವಕೀಲ ವಿಕಾಸ್ ಭವನದ ಬಳಿ ವಾಸವಿದ್ದು, ಅಲ್ಲಿನ ಬಿಜೆಪಿ ಮುಖಂಡ, ದಿವಂಗತ ವಕೀಲ ಸುಧೀರ್ ಕುಮಾರ್ ಸಿಂಗ್ ಸಿಧು ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಅಲ್ಲಿಂದ ಅವನು ತನ್ನ ಮನೆಯ ಕಡೆಗೆ ಹಿಂತಿರುಗುತ್ತಿರುವಾಗ ದರಿಯಾಬಾದ್ ಬ್ಲಾಕ್ ಮುಖ್ಯಸ್ಥ ಆಕಾಶ್ ಪಾಂಡೆ ಅವರ ಮನೆ ಬಳಿ ತಲುಪಿದ ತಕ್ಷಣ, ಅವರ ತಂದೆ ವಿವೇಕಾನಂದ ಪಾಂಡೆ ಅವರನ್ನು ಸಂಭಾಷಣೆಗೆ ನಿಲ್ಲಿಸಿದರು. ಈ ವೇಳೆ ಶೌಚಾಲಯಕ್ಕೆ ತೆರಳಲು ಗಡಿ ಗೋಡೆ ಬಳಿ ಬಂದಿದ್ದ ವೇಳೆ ಸಾಕು ನಾಯಿ ದಾಳಿ ಮಾಡಿದೆ ಎಂದಿದ್ದಾರೆ.

ಲಕ್ನೋದಲ್ಲಿ ಚಿಕಿತ್ಸೆ

ಕುಟುಂಬ ಸದಸ್ಯರ ಪ್ರಕಾರ, ನಾಯಿ ನೇರವಾಗಿ ವಕೀಲರ ಖಾಸಗಿ ಅಂಗದ ಮೇಲೆ ದಾಳಿ ಮಾಡಿತು. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಕೀಲರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಸ್ಥಿತಿಯನ್ನು ನೋಡಿದ ವೈದ್ಯರು ಪ್ರಥಮ ಚಿಕಿತ್ಸೆಯ ನಂತರವೇ ಅವರನ್ನು ಲಖ್ನಾಫ್ ಟ್ರಾಮಾ ಸೆಂಟರ್‌ಗೆ ಕಳುಹಿಸಿದ್ದಾರೆ. ಇದಾದ ಬಳಿಕ ವಕೀಲರ ಕುಟುಂಬದವರು ಅವರನ್ನು ಲಕ್ನೋ ವೈದ್ಯಕೀಯ ಕಾಲೇಜಿನ ಟ್ರಾಮಾ ಸೆಂಟರ್‌ಗೆ ದಾಖಲಿಸಿದ್ದರು. ಅಲ್ಲಿ ಅವರ ಚಿಕಿತ್ಸೆ ಮುಂದುವರಿಯುತ್ತಿದೆ ಎಂದಿದ್ದಾರೆ.

ಮೂತ್ರ ವಿಸರ್ಜನೆ ವೇಳೆ ನಡೆದಿತ್ತಾ ದಾಳಿ?

ಇನ್ನು ಮತ್ತೊಂದು ವರದಿ ಪ್ರಕಾರ ಅಂತ್ಯಕ್ರಿಯೆ ಮುಗಿಸಿಕೊಂಡು ಸಂತ್ರಸ್ತ ವಕೀಲ ವಾಪಾಸಾಗುತ್ತಿದ್ದಾಗ, ದಾರಿ ಮಧ್ಯೆ ಮೂತ್ರ ವಿಸರ್ಜನೆಗೆ ಮುಂದಾಗಿದ್ದರು. ಈ ವೇಳೆ ಶ್ವಾನ ದಾಳಿ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಒಬ್ಬ ಜವಾಬ್ದಾರಿಯುತ ವಕೀಲನಾಗಿ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಎಷ್ಟು ಸರಿ ಎಂಬ ಬಗ್ಗೆಯೂ ಚರ್ಚೆ ಶುರುವಾಗಿದೆ. ಮತ್ತೊಂದೆಡೆ ಇಂತಹ ಅಪಾಯಕಾರಿ ಶ್ವಾನಗಳನ್ನು ಸಾಕುವವರ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.

ಈ ಹಿಂದೆಯೂ ಪ್ರಕರಣಗಳು ನಡೆದಿವೆ

ಉತ್ತರ ಪ್ರದೇಶದಲ್ಲಿ ಪಿಟ್‌ಬುಲ್ ನಾಯಿ ದಾಳಿ ನಡೆದಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ನೋಯ್ಡಾ, ಗಾಜಿಯಾಬಾದ್, ಮೀರತ್ ಮತ್ತು ಲಕ್ನೋದಲ್ಲಿ ಪಿಟ್‌ಬುಲ್ ನಾಯಿಗಳ ದಾಳಿಯಲ್ಲಿ ಮಕ್ಕಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ಗಾಯಾಳುಗಳ ಹೇಳಿಕೆ ಆಧರಿಸಿ ಪೊಲೀಸ್ ಪ್ರಕರಣಗಳನ್ನೂ ದಾಖಲಿಸಲಾಗಿದೆ. ಅದೇ ಸಮಯದಲ್ಲಿ, ದೆಹಲಿ ಎನ್‌ಸಿಆರ್‌ನಲ್ಲಿ ಇಂತಹ ಹಲವಾರು ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಾಲಯವು ಈ ಅಪಾಯಕಾರಿ ನಾಯಿಗಳನ್ನು ಸಾಕುವುದನ್ನು ನಿಷೇಧಿಸಿದೆ. ಇದರ ಹೊರತಾಗಿಯೂ, ಅನೇಕ ಜನರು ಈ ನಾಯಿಗಳನ್ನು ಸಾಕುತ್ತಿದ್ದಾರೆ.

ಇದನ್ನೂ ಓದಿ: ಕೋಲಾರದಲ್ಲಿ ಶ್ವಾನಗಳ ದಾಳಿಗೆ ಕುರಿಗಳು ಬಲಿ; ಕೊಡಗಿನಲ್ಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ

Continue Reading

ಕರ್ನಾಟಕ

Cat Kidnaping Case: ಬೆಕ್ಕು ಅಪಹರಣ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಮಹತ್ವದ ತೀರ್ಪು

Cat Kidnaping Case: ನ್ಯಾಯಮೂರ್ತಿ ನಾಗಪ್ರಸನ್ನ ಇದ್ದ ನ್ಯಾಯಪೀಠ ಮಧ್ಯಂತರ ಜಾಮೀನು ನೀಡಿದೆ. ಹುಸೇನ್ ಅವರ ನೆರೆಹೊರೆಯವರು ಡೈಸಿ ಕಾಣೆಯಾದ ಮೇಲೆ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504, 506 ಮತ್ತು 509 ರ ಅಡಿಯಲ್ಲಿ ಪೊಲೀಸರು ಆತನ ಮೇಲೆ ಕ್ರಿಮಿನಲ್ ಬೆದರಿಕೆ, ಶಾಂತಿ ಭಂಗ ಮತ್ತು ಮಹಿಳೆಯ ನಮ್ರತೆಗೆ ಅವಮಾನ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

VISTARANEWS.COM


on

Cat kidnaping Case
Koo

ಬೆಂಗಳೂರು: ನೆರೆ ಮನೆಯ ಬೆಕ್ಕನ್ನು ಅಪಹರಿಸಿ ತನ್ನ ಮನೆಯಲ್ಲಿ ಕೂಡಿ ಹಾಕಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿ ವಿರುದ್ಧದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ(High Court stay) ತಂದಿದೆ. ಡೈಸಿ ಎಂಬ ಬೆಕ್ಕನ್ನು ಅಪಹರಿಸಿದ್ದ(Cat Kidnaping Case) ಆರೋಪದಲ್ಲಿ ತಾಹಾ ಹುಸೇನ್‌ ಎಂಬಾತನಿಗೆ ಹೈಕೋರ್ಟ್‌ ಮಧ್ಯಂತರ ರಿಲೀಫ್‌ ಕೊಟ್ಟಿದ್ದು, ಆತನ ವಿರುದ್ಧ ಎಲ್ಲಾ ಮೊಕದ್ದಮೆಗೆ ತಡೆಯಾಜ್ಞೆ ತಂದಿದೆ.

ನ್ಯಾಯಮೂರ್ತಿ ನಾಗಪ್ರಸನ್ನ ಇದ್ದ ನ್ಯಾಯಪೀಠ ಮಧ್ಯಂತರ ಜಾಮೀನು ನೀಡಿದೆ. ಹುಸೇನ್ ಅವರ ನೆರೆಹೊರೆಯವರು ಡೈಸಿ ಕಾಣೆಯಾದ ಮೇಲೆ ಅವರ ವಿರುದ್ಧ ಪೊಲೀಸ್ ದೂರು ದಾಖಲಿಸಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504, 506 ಮತ್ತು 509 ರ ಅಡಿಯಲ್ಲಿ ಪೊಲೀಸರು ಆತನ ಮೇಲೆ ಕ್ರಿಮಿನಲ್ ಬೆದರಿಕೆ, ಶಾಂತಿ ಭಂಗ ಮತ್ತು ಮಹಿಳೆಯ ನಮ್ರತೆಗೆ ಅವಮಾನ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಆಪಾದನೆಯ ತಿರುಳು ಏನೆಂದರೆ, ಪ್ರತಿವಾದಿ ನಂ.2 ರ ಒಡೆತನದ ಡೈಸಿ ಎಂಬ ಹೆಸರಿನ ಬೆಕ್ಕು ಪಕ್ಕದ ಮನೆಗಳ ಗೋಡೆಯಿಂದ ಗೋಡೆಗೆ ಜಿಗಿದು ಕಾಣೆಯಾಗಿತ್ತು. ಆದ್ದರಿಂದ, ಬೆಕ್ಕನ್ನು ಹಿಡಿದಿದ್ದಕ್ಕಾಗಿ ಈ ಅರ್ಜಿದಾರರ ವಿರುದ್ಧ ಮೇಲ್ಕಂಡ ಅಪರಾಧಗಳಿಗೆ ದೂರು ನೀಡಲಾಗಿದೆ. ಅರ್ಜಿದಾರರ ಮನೆಯಲ್ಲಿ ಬೆಕ್ಕು ಇರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬರುತ್ತದೆ ಎಂದು ಆರೋಪಿಸಲಾಗಿದೆ, ಎಂದು ನ್ಯಾಯಾಲಯವು ಹುಸೇನ್ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ತಡೆಯಾಜ್ಞೆ ನೀಡಿದೆ.

ಬೆಕ್ಕುಗಳು ಕಿಟಕಿಯಿಂದ ಒಳಗೆ ಬರುತ್ತವೆ ಮತ್ತು ಹೊರಗೆ ಹೋಗುತ್ತವೆ ಮತ್ತು ಐಪಿಸಿಯ ಸೆಕ್ಷನ್ 504, 506 ಮತ್ತು 509 ರ ಅಡಿಯಲ್ಲಿ ಆಪಾದಿತ ಅಪರಾಧಗಳಿಗೆ ಇಂತಹ ಕ್ಷುಲ್ಲಕ ದೂರಿನ ಮೇಲೆ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ತನ್ನ ಬೆಕ್ಕನ್ನು ತೆಗೆದುಕೊಂಡು ಹೋಗಿರುವುದಾಗಿ ನೆರೆಹೊರೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಹುಸೇನ್ ಅವರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಡೈಸಿ ಬೆಕ್ಕು ಹುಸೇನ್ ಮನೆಯಲ್ಲಿ ಬಂಧಿಯಾಗಿದೆ ಎಂದು ಪೊಲೀಸರು ಹೇಗೆ ತೀರ್ಮಾನಿಸಿದರು ಎಂದು ನ್ಯಾಯಾಲಯ ಪ್ರಶ್ನಿಸಿದಾಗ, ಪೊಲೀಸರು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಹುಸೇನ್ ಅವರ ಮನೆಯಲ್ಲಿ ಬೆಕ್ಕು ಇರುವುದು ಕಂಡುಬಂದಿದೆ. ಬೆಕ್ಕಿಗೆ ಗೋಡೆ ಹತ್ತಿ ನೆರೆ ಮನೆಗೆ ಹೋಗುವ ಅಭ್ಯಾಸ ಇತ್ತು ಎಂದು ವಕೀಲರು ಹೈಕೋರ್ಟ್‌ಗೆ ತಿಳಿಸಿದರು.

ಹುಸೇನ್ ವಿರುದ್ಧದ ಎಲ್ಲಾ ಪ್ರಕ್ರಿಯೆಗಳಿಗೆ ತಡೆ ನೀಡಿದ ಹೈಕೋರ್ಟ್, ಇಂತಹ ಕ್ಷುಲ್ಲಕ ಪ್ರಕರಣಗಳಲ್ಲಿ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕ್ರಿಮಿನಲ್ ನ್ಯಾಯ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ ಎಂದು ಹೇಳಿದೆ. ಆದ್ದರಿಂದ ಅರ್ಜಿ ಇತ್ಯರ್ಥವಾಗುವವರೆಗೆ ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಿ ಮಧ್ಯಂತರ ಆದೇಶ ನೀಡಿದೆ.

ಇದನ್ನೂ ಓದಿ:Rahul Gandhi: ರಾಹುಲ್‌ ಗಾಂಧಿಯನ್ನು ಭೇಟಿಯಾದ ರೈತರು; ಆ.15ರಂದು ದೇಶಾದ್ಯಂತ ರ‍್ಯಾಲಿಗೆ ನಿರ್ಧಾರ!

Continue Reading

ಕರ್ನಾಟಕ

Bitcoin Scam: ಬಿಟ್‌‌ ಕಾಯಿನ್ ಹಗರಣ; ಆರೋಪಿಗಳಾದ ಶ್ರೀಕಿ, ಖಂಡೇಲ್ ವಾಲಾ ಜೈಲಿನಿಂದ ಬಿಡುಗಡೆ

Bitcoin Scam: ಆರೋಪಿಗಳಾದ ಶ್ರೀಕಿ ಮತ್ತು ರಾಬಿನ್ ಖಂಡೇಲ್ ವಾಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ತುಮಕೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು ನೀಡಿದೆ. ಹೀಗಾಗಿ ಇಬ್ಬರೂ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

VISTARANEWS.COM


on

Bitcoin Scam
ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ
Koo

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣದಲ್ಲಿ (Bitcoin Scam) ಬಂಧನವಾಗಿದ್ದ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಖಂಡೇಲ್ ವಾಲಾ, ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಬಿಟ್‌ ಕಾಯಿನ್ ಹಗರಣ ಸಂಬಂಧ ತುಮಕೂರು ತಿಲಕ್‌ಪಾರ್ಕ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ಇದೀಗ ಇಬ್ಬರು ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದಾರೆ.

ಶ್ರೀಕಿ ಮತ್ತು ರಾಬಿನ್ ಖಂಡೇಲ್ ವಾಲಾ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ತುಮಕೂರಿನ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು ನೀಡಿದೆ. ಹೀಗಾಗಿ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಪ್ರಕರಣದ ಒಂದನೇ ಆರೋಪಿ ಶ್ರೀಕಿ 50 ಸಾವಿರ ಮೊತ್ತದ ಬಾಂಡ್‌ ಹಾಗೂ ಒಬ್ಬರ ಭದ್ರತೆ ನೀಡಬೇಕು ಮತ್ತು ಎರಡನೇ ಆರೋಪಿ ರಾಬಿನ್‌ ಖಂಡೇಲ್‌ವಾಲಾ 25 ಸಾವಿರ ಮೊತ್ತದ ನಗದು ಭದ್ರತೆ ಸೇರಿ ಇತರೆ ಷರತ್ತುಗಳನ್ನು ವಿಧಿಸಲಾಗಿದೆ.

ಸರ್ಕಾರ ತಮ್ಮ‌ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ) ಕಾಯ್ದೆ–2000 ಅನ್ನು ಅನ್ವಯಿಸಿತ್ತು. ಇತ್ತೀಚೆಗಷ್ಟೇ ಹೈಕೋರ್ಟ್, ಕೋಕಾ ಕಾಯ್ದೆ ಹೇರಿದ್ದ ಆದೇಶವನ್ನು ರದ್ದುಪಡಿಸಿದೆ. ಹೀಗಾಗಿ ಪ್ರಕರಣದ ತನಿಖೆ ನಡೆಸಿರುವ, ವಿಶೇಷ ತನಿಖಾ ತಂಡ (ಎಸ್ಐಟಿ) 60 ದಿನಗಳ ಒಳಗಾಗಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಬೇಕಿತ್ತು. ಆದರೆ, 60 ದಿನ ಕಳೆದರೂ ಯಾವುದೇ (ಪ್ರಾಥಮಿಕ ಅಥವಾ ಅಂತಿಮ‌ ವರದಿ) ಆರೋಪ ಪಟ್ಟಿ ಸಲ್ಲಿಸಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ ತೀರ್ಪುಗಳ ಪ್ರಕಾರ ನಾವು ಕಾನೂನು ಬದ್ಧ ಜಾಮೀನು ಪಡೆಯಲು ಅರ್ಹರಾಗಿದ್ದು ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.

ಇದನ್ನೂ ಓದಿ: Murder Case: ಜಮೀನು ವಿವಾದಕ್ಕೆ ಚಿಕ್ಕಬಳ್ಳಾಪುರದಲ್ಲಿ ಹರಿಯಿತು ನೆತ್ತರು; ಸಂಬಂಧಿಕನಿಂದಲೇ ತಂದೆ-ಮಗನ ಕೊಲೆ

ಬಹುಕೋಟಿ ಮೌಲ್ಯದ ಬಿಟ್ ಕಾಯಿನ್ ಕಳವು ಮಾಡಿ ಅವುಗಳನ್ನು ಪಶ್ಚಿಮ ಬಂಗಾಳದ ತನ್ನ ಸಹಚರ ರಾಬಿನ್ ಖಂಡೇಲ್ ವಾಲಾಗೆ ವರ್ಗಾವಣೆ ಮಾಡಿದ ಆರೋಪ ಶ್ರೀಕಿ ಮೇಲಿದೆ. ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.

Prajwal Revanna Case: ಪ್ರಜ್ವಲ್ ರೇವಣ್ಣಗೆ ಹಿನ್ನಡೆ; 4ನೇ ಕೇಸ್‌ನಲ್ಲೂ ನಿರೀಕ್ಷಣಾ ಜಾಮೀನು ಅರ್ಜಿ ವಜಾ!

Prajwal Revanna Case
Prajwal Revanna Files Anticipatory Bail Plea Ahead Of His Returing To India

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ನಾಲ್ಕನೇ ಕೇಸ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾಋ ವಜಾಗೊಳಿಸಿದೆ.

ಈ ಹಿಂದೆ ಮೂರು ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿತ್ತು. ಇದರಲ್ಲಿ ಒಂದು ಜಾಮೀನು ಅರ್ಜಿ, ಎರಡು ನಿರೀಕ್ಷಣಾ ಜಾಮೀನು ಅರ್ಜಿ ಸೇರಿವೆ. ಇದೀಗ ಮೂರನೇ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಸಂತೋಷ್ ಗಜಾನನ ಭಟ್ ಅವರು ಅರ್ಜಿ ವಜಾಗೊಳಿಸಿದ್ದಾರೆ. ಇದರಿಂದ ನಾಲ್ಕನೇ ಕೇಸ್‌ನಲ್ಲಿಯೂ ಪ್ರಜ್ವಲ್‌ಗೆ ಹಿನ್ನಡೆಯಾದಂತಾಗಿದೆ.

ಇದನ್ನೂ ಓದಿ | BMTC Bus: ಬಿಎಂ‌ಟಿಸಿ ಬಸ್‌ನಲ್ಲಿ ಹಿಂದಿ ಬೋರ್ಡ್; ಕನ್ನಡ ಮಾಯವಾಗಿದ್ದಕ್ಕೆ ಸಾರ್ವಜನಿಕರ ಆಕ್ರೋಶ!

ಏನಿದು ಪ್ರಕರಣ?

ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನದ ಭೀತಿಯಿಂದ 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸಾದಾಗ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಅದನ್ನು ಚಿತ್ರೀಕರಿಸಿದ ಆರೋಪ ಪ್ರಜ್ವಲ್‌ ವಿರುದ್ದ ಕೇಳಿ ಬಂದಿದೆ. ಆರೋಪಿ ಪ್ರಜ್ವಲ್‌ ರೇವಣ್ಣ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Continue Reading
Advertisement
Nitish Kumar
ದೇಶ30 mins ago

Nitish Kumar: ನೀನೂ ಹೆಣ್ಣು; ವಿಧಾನಸಭೆಯಲ್ಲೇ ಆರ್‌ಜೆಡಿ ಶಾಸಕಿಗೆ ನಿತೀಶ್‌ ಕುಮಾರ್‌ ಗದರಿದ್ದೇಕೆ?

Paris Olympics
ಕ್ರೀಡೆ45 mins ago

Paris Olympics: ಕೊಕೊ ಗಾಫ್ ಅಮೆರಿಕದ ಧ್ವಜಧಾರಿ; ಈ ಗೌರವ ಪಡೆದ ಅತಿ ಕಿರಿಯ ಕ್ರೀಡಾಪಟು

Anekal
ಕ್ರೈಂ2 hours ago

ಆನೇಕಲ್‌ನಲ್ಲಿ ಪುರಸಭೆ ಸದಸ್ಯನ ಬರ್ಬರ ಹತ್ಯೆ; ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಕೊಲೆ

Hardik Pandya
ಕ್ರೀಡೆ2 hours ago

Hardik Pandya: ವಿಚ್ಛೇದನ ನೀಡಿ ಒಂದು ವಾರ ಕಳೆಯುವ ಮುನ್ನವೇ ಮಾಜಿ ಪತ್ನಿಯ ಪೋಸ್ಟ್​ಗೆ ಲೈಕ್ಸ್​, ಕಮೆಂಟ್​ ಮಾಡಿದ ಹಾರ್ದಿಕ್​ ಪಾಂಡ್ಯ

King Chopper
ದೇಶ2 hours ago

Sea King Chopper: ಸಾವಿನ ದವಡೆಯಲ್ಲಿದ್ದ ಚೀನಾ ನಾವಿಕನನ್ನು ರಕ್ಷಿಸಿದ ಭಾರತೀಯ ನೌಕಾಪಡೆ; ಮಾನವೀಯತೆಗೆ ಮೆಚ್ಚುಗೆ

ahoratri dharani until the guilts are punished says Opposition party Leader R Ashok
ಕರ್ನಾಟಕ2 hours ago

R Ashok: ಹಗರಣಕೋರರಿಗೆ ಶಿಕ್ಷೆಯಾಗುವವರೆಗೂ ಅಹೋರಾತ್ರಿ ಧರಣಿ; ಆರ್. ಅಶೋಕ್‌ ಘೋಷಣೆ

Traffic Restrictions
ಬೆಂಗಳೂರು3 hours ago

Traffic Restrictions: ವೈಟ್ ಟಾಪಿಂಗ್ ಕಾಮಗಾರಿ; ನಾಳೆಯಿಂದ ರಾಜಾಜಿನಗರದ ಈ ಮಾರ್ಗದಲ್ಲಿ ಸಂಚಾರ ನಿಷೇಧ

Mohammed Shami
ಕ್ರೀಡೆ3 hours ago

Mohammed Shami: 19ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ; ತಡೆದು ನಿಲ್ಲಿಸಿದ್ದು ಯಾರು?

KP Poorchandra Tejaswi samagra kruthi Jagattu 14 samputagalu Lokarpane On July 29 in Bengaluru
ಬೆಂಗಳೂರು3 hours ago

Book Release: ಜು.29ರಂದು ಬೆಂಗಳೂರಿನಲ್ಲಿ 14 ಸಂಪುಟಗಳ ಪೂರ್ಣಚಂದ್ರ ತೇಜಸ್ವಿ ಕೃತಿ ಲೋಕಾರ್ಪಣೆ

Asteria Aerospace has introduced a SkyDeck platform that helps in various fields including agriculture
ದೇಶ3 hours ago

SkyDeck: ಕೃಷಿ ಮತ್ತಿತರ ಕ್ಷೇತ್ರಗಳಿಗೆ ನೆರವಾಗುವ ʼಸ್ಕೈಡೆಕ್ʼ ಪ್ಲಾಟ್‌ಫಾರ್ಮ್! ಏನಿದು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ1 day ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ1 day ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ1 day ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ4 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ5 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ5 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ6 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ6 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌