Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು? - Vistara News

ಪ್ರಮುಖ ಸುದ್ದಿ

Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Atal Setu: ಟೆಕ್ಕಿಯಾಗಿರುವ ವ್ಯಕ್ತಿಯು ಇದಕ್ಕೂ ಮೊದಲು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು 2023ರಲ್ಲಿ ಕೂಡ ಫ್ಲೋರ್‌ ಕ್ಲೀನರ್‌ ಲಿಕ್ವಿಡ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಇನ್ನು ಅಟಲ್‌ ಸೇತುವೆ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಎರಡನೇ ಪ್ರಕರಣ ಇದಾಗಿದೆ.

VISTARANEWS.COM


on

Atal Setu
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ, ದೇಶದ ಅತಿ ಉದ್ದದ ಸಮುದ್ರ ಸೇತುವೆ ಎನಿಸಿರುವ, ಅಟಲ್‌ ಸೇತು (Atal Setu) ಎಂದು ಕರೆಯಲಾಗುವ ‘ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’ (Mumbai Trans Harbour Link-MTHL) ಈಗ ವೇಗದ ಸಂಚಾರಕ್ಕಿಂತ ಹೆಚ್ಚಾಗಿ ಆತ್ಮಹತ್ಯೆ ಪ್ರಕರಣಗಳಿಗೆ ಜಾಸ್ತಿ ಸುದ್ದಿಯಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದ ಟೆಕ್ಕಿಯೊಬ್ಬರು, ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ದೊಂಬಿವಿಲಿ ನಿವಾಸಿಯಾಗಿರುವ, ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ 38 ವರ್ಷದ ವ್ಯಕ್ತಿಯು ಸೇತುವೆ ಮೇಲೆ ಕಾರಿನಲ್ಲಿ ನಿಧಾನವಾಗಿ ಬರುತ್ತಾರೆ. ಕಾರಿನಿಂದ ಇಳಿದವರೇ ಸೇತುವೆ ಮೇಲಿನಿಂದ ಅವರು ಕೆಳಗೆ ಹಾರುತ್ತಾರೆ. ಈ ವಿಡಿಯೊ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನ್ಹಾವಾ ಶೇವಾ ಎಂಡ್‌ ಬಳಿಯಲ್ಲಿ ವ್ಯಕ್ತಿಯು ನದಿಗೆ ಹಾರಿದ್ದಾರೆ.

ಹಣಕಾಸು ಬಿಕ್ಕಟ್ಟಿನಿಂದ ಇಂತಹ ತೀರ್ಮಾನ?

ವ್ಯಕ್ತಿಯು ಹಣಕಾಸು ಸಮಸ್ಯೆಯಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು. ಅವರು ಸಾಲ ಮಾಡಿದ್ದರು. ಅದರನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನವಿ ಮುಂಬೈ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ವ್ಯಕ್ತಿಯ ಶವದ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಾಗೆಯೇ, ಶವ ಸಿಕ್ಕರೆ ಮಾಹಿತಿ ನೀಡುವಂತೆ ಕರಾವಳಿ ಪೊಲೀಸರು, ಮೀನುಗಾರರಿಗೆ ಸೂಚನೆ ನೀಡಿದ್ದಾರೆ.

ಟೆಕ್ಕಿಯಾಗಿರುವ ವ್ಯಕ್ತಿಯು ಇದಕ್ಕೂ ಮೊದಲು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಕುವೈತ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು 2023ರಲ್ಲಿ ಕೂಡ ಫ್ಲೋರ್‌ ಕ್ಲೀನರ್‌ ಲಿಕ್ವಿಡ್‌ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಇನ್ನು ಅಟಲ್‌ ಸೇತುವೆ ಮೇಲಿನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಎರಡನೇ ಪ್ರಕರಣ ಇದಾಗಿದೆ. ಕಳೆದ ಮಾರ್ಚ್‌ನಲ್ಲಿ ವೈದ್ಯೆಯೊಬ್ಬರು ಅಟಲ್‌ ಸೇತು ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಇದನ್ನೂ ಓದಿ: Self Harming: ಸಾಮೂಹಿಕ ಅತ್ಯಾಚಾರ; ಕ್ರಮ ಕೈಗೊಳ್ಳದ ಪೊಲೀಸರು; ಮನ ನೊಂದು ಬಾಲಕಿ ಆತ್ಮಹತ್ಯೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

NEET UG 2024: ನೀಟ್‌ ಪ್ರಶ್ನೆಪತ್ರಿಕೆಯನ್ನು ಎಗರಿಸಿದ್ದು ಯಾವ ಕೇಂದ್ರದಿಂದ? ಸಿಬಿಐ ಸ್ಫೋಟಕ ಮಾಹಿತಿ ಬಯಲು

NEET UG 2024: ಹಜಾರಿಬಾಗ್‌ನಲ್ಲಿರುವ ಎನ್‌ಟಿಎ ಸಿಟಿ ಕೋಆರ್ಡಿನೇಟರ್‌ ಕಮ್‌ ಪ್ರಿನ್ಸಿಪಾಲ್‌ ಆಫ್‌ ಓಯಸಿಸ್‌ ಸ್ಕೂಲ್‌ ಮತ್ತು ಸೆಂಟರ್‌ ಸೂಪರಿಂಟೆಂಡೆಂಟ್‌ ಕಮ್‌ ವೈಸ್‌ ಪ್ರಿನ್ಸಿಪಾಲ್‌ ಆಫ್‌ ಓಯಸಿಸ್‌ ಸ್ಕೂಲ್‌ನಿಂದ ಅಧಿಕಾರಿಗಳ ಕಣ್ಣುತಪ್ಪಿಸಿ ಅಥವಾ ಅವರ ಮೌನಸಮ್ಮತಿಯ ಮಧ್ಯೆಯೇ ನೀಟ್‌ ಪ್ರಶ್ನೆಪತ್ರಿಕೆಯನ್ನು ಎಗರಿಸಲಾಗಿದೆ ಎಂಬುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

VISTARANEWS.COM


on

NEET UG 2024
Koo

ನವದೆಹಲಿ: ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET UG 2024) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿರುವ ಜತೆಗೆ, ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ. ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ನೀಟ್‌ ವಿರುದ್ಧ ನಿರ್ಣಯವನ್ನೇ ಮಂಡಿಸಲಾಗಿದೆ. ಇದರ ಬೆನ್ನಲ್ಲೇ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ ಅಧಿಕೃಿಗಳು, ಸ್ಫೋಟಕ ಮಾಹಿತಿ ಬಯಲಿಗೆಳೆದಿದ್ದಾರೆ. ಜಾರ್ಖಂಡ್‌ನ ಜಹಾರಿಬಾಗ್‌ನಲ್ಲಿರುವ (Hazaribagh) ಕಚೇರಿಯಿಂದಲೇ ಪ್ರಶ್ನೆಪತ್ರಿಕೆಯನ್ನು (NEET Paper Leak Case) ಕಳ್ಳತನ ಮಾಡಲಾಗಿದೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ‌

ಹೌದು, ಹಜಾರಿಬಾಗ್‌ನಲ್ಲಿರುವ ಎನ್‌ಟಿಎ ಸಿಟಿ ಕೋಆರ್ಡಿನೇಟರ್‌ ಕಮ್‌ ಪ್ರಿನ್ಸಿಪಾಲ್‌ ಆಫ್‌ ಓಯಸಿಸ್‌ ಸ್ಕೂಲ್‌ ಮತ್ತು ಸೆಂಟರ್‌ ಸೂಪರಿಂಟೆಂಡೆಂಟ್‌ ಕಮ್‌ ವೈಸ್‌ ಪ್ರಿನ್ಸಿಪಾಲ್‌ ಆಫ್‌ ಓಯಸಿಸ್‌ ಸ್ಕೂಲ್‌ನಿಂದ ಅಧಿಕಾರಿಗಳ ಕಣ್ಣುತಪ್ಪಿಸಿ ಅಥವಾ ಅವರ ಮೌನಸಮ್ಮತಿಯ ಮಧ್ಯೆಯೇ ನೀಟ್‌ ಪ್ರಶ್ನೆಪತ್ರಿಕೆಯನ್ನು ಎಗರಿಸಲಾಗಿದೆ. ನೀಟ್‌ ಪರೀಕ್ಷೆ ನಡೆದ ಮೇ 5ರಂದು ಪಂಕಜ್‌ ಕುಮಾರ್‌ ಅಲಿಯಾಸ್‌ ಆದಿತ್ಯ ಅಲಿಯಾಸ್‌ ಸಾಹಿಲ್‌ ಎಂಬಾತನು ಪ್ರಶ್ನೆಪತ್ರಿಕೆಯನ್ನು ತೆಗೆದುಕೊಂಡು ಹೋಗಿ, ಹಣ ಕೊಟ್ಟವರಿಗೆ ಅದನ್ನು ಹಂಚಿಕೆ ಮಾಡಿದ್ದಾನೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್‌ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್‌ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.

ನೀಟ್‌ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್‌ ಮಾರ್ಕ್ಸ್‌ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್‌ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್‌ ಮಾರ್ಕ್ಸ್‌ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್‌ ಮೈಂಡ್‌ ಅಮಿತ್‌ ಆನಂದ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: NEET UG 2024: ನೀಟ್‌ ಪರಿಷ್ಕೃತ ಫಲಿತಾಂಶ ಪ್ರಕಟ ಆಗಿಲ್ಲ, ಹಳೇ ಲಿಂಕ್‌ ಹಂಚಿಕೆ ಎಂದ ಕೇಂದ್ರ; ಮತ್ತೊಂದು ಪ್ರಮಾದ?

Continue Reading

ಕರ್ನಾಟಕ

V Sumangala: ಶಿಕ್ಷಣ ಇಲಾಖೆಯಲ್ಲಿ 1.62 ಕೋಟಿ ರೂ. ಅಕ್ರಮ; DSERT ನಿರ್ದೇಶಕಿ ಸುಮಂಗಲಾ ಅಮಾನತು!

V Sumangala: ಇ-ವೇಸ್ಟ್‌ ವಿಲೇವಾರಿಗೆ ಸಂಬಂಧಿಸಿದಂತೆ ಅನರ್ಹ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಕಂಪನಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್‌ ನೀಡಿದ ಪರಿಣಾಮ ಸರ್ಕಾರಕ್ಕೆ 1.62 ಕೋಟಿ ರೂ. ನಷ್ಟವಾಗಿದೆ. ಇದೇ ಕಾರಣಕ್ಕಾಗಿ ಕರ್ತವ್ಯ ಲೋಪ, ಅಧಿಕಾರದ ದುರ್ಬಳಕೆ ಸೇರಿ ಹಲವು ಆರೋಪಗಳಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

V Sumangala
Koo

ಬೆಂಗಳೂರು: ರಾಜ್ಯದಲ್ಲಿ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳು ಭಾರಿ ಸುದ್ದಿಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಶಿಕ್ಷಣ ಇಲಾಖೆಯಲ್ಲೂ ಅಕ್ರಮ ನಡೆದಿರುವುದು ಬಯಲಾಗಿದೆ. ರಾಜ್ಯ ಶಿಕ್ಷಣ ಇಲಾಖೆ ಅಧೀನದ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (DSERT) ಇ-ತ್ಯಾಜ್ಯ ವಿಲೇವಾರಿ ಟೆಂಡರ್‌ನಲ್ಲಿ ಸುಮಾರು 1.62 ಕೋಟಿ ರೂ. ಅಕ್ರಮ ನಡೆದಿರುವುದು ಸಾಬೀತಾದ ಕಾರಣ ಡಿಎಸ್‌ಇಆರ್‌ಟಿ ನಿರ್ದೇಶಕಿ ವಿ. ಸುಮಂಗಲಾ (V Sumangala) ಅವರನ್ನು ರಾಜ್ಯ ಸರ್ಕಾರ (Karnataka Government) ಅಮಾನತುಗೊಳಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅವರು ವಿ. ಸುಮಂಗಲಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇ-ವೇಸ್ಟ್‌ ವಿಲೇವಾರಿಗೆ ಸಂಬಂಧಿಸಿದಂತೆ ಅನರ್ಹ ಕಂಪನಿಗೆ ಟೆಂಡರ್‌ ನೀಡಲಾಗಿದೆ. ಕಂಪನಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಅರ್ಹತೆ ಇಲ್ಲದ ಕಂಪನಿಗೆ ಟೆಂಡರ್‌ ನೀಡಿದ ಪರಿಣಾಮ ಸರ್ಕಾರಕ್ಕೆ 1.62 ಕೋಟಿ ರೂ. ನಷ್ಟವಾಗಿದೆ. ಇದೇ ಕಾರಣಕ್ಕಾಗಿ ಕರ್ತವ್ಯ ಲೋಪ, ಅಧಿಕಾರದ ದುರ್ಬಳಕೆ ಸೇರಿ ಹಲವು ಆರೋಪಗಳಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಏನಿದು ಪ್ರಕರಣ?

ಡಿಎಸ್‌ಇಆರ್‌ಟಿ ಸೇರಿ ಹಲವು ಕಚೇರಿಗಳಲ್ಲಿ ನಿರುಪಯುಕ್ತವಾಗಿರುವ, ಹಾಳಾದ, ವಿದ್ಯುನ್ಮಾನ ಉಪಕರಣಗಳ (ಇ-ವೇಸ್ಟ್‌ ಅಥವಾ ಇ-ತ್ಯಾಜ್ಯ) ವಿಲೇವಾರಿ ಮಾಡಲು ಟೆಂಡರ್‌ ಕರೆಯಲಾಗಿತ್ತು. ಟೆಂಡರ್‌ ಕರೆದು, ಕಾರ್ಯಾದೇಶ ನೀಡಲಾಗಿರುವ ಇ-ಪ್ರಗತಿ ರಿಸೈಕ್ಲಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಬಿಡ್‌ನಲ್ಲಿ ಅರ್ಹತೆ ಇರಲಿಲ್ಲ. ಟೆಂಡರ್‌ ನೀಡುವ ವೇಳೆ ಕಂಪನಿಯು ಹಲವು ವಾಸ್ತವಿಕ ಸಂಗತಿಗಳನ್ನು ಮುಚ್ಚಿಟ್ಟಿದೆ. ಇಷ್ಟಾದರೂ ಅದೇ ಕಂಪನಿಗೆ ಟೆಂಡರ್‌ ನೀಡಲಾಗಿದೆ ಎಂಬುದು ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.

ಕಂಪನಿಗೆ ಬಿಡ್‌ನಲ್ಲಿ ಎಲ್‌ 1 ಎಂದು ಘೋಷಿಸಿ, ಟೆಂಡರ್‌ ನೀಡುವ ಬದಲು ಕಂಪನಿ ಒದಗಿಸುವ ದಾಖಲೆಗಳನ್ನು ಪರಿಶೀಲನೆ ನಡೆಸಬೇಕಿತ್ತು. ಲೋಪಗಳು ಇದ್ದರೆ ಟೆಂಡರ್‌ ನೀಡಬಾರದಿತ್ತು. ಆದರೆ, ಕಂಪನಿಗೆ ಲಾಭ ಮಾಡಿಕೊಡುವ ದೃಷ್ಟಿಯಿಂದಲೇ ಟೆಂಡರ್‌ ಮಂಜೂರು ಮಾಡಲಾಗಿದೆ ಎಂಬುದು ಬಹಿರಂಗವಾಗಿದೆ. ಇದರಿಂದಾಗಿ, ವಿ. ಸುಮಂಗಲಾ ಅವರನ್ನು ಅಮಾನತುಗೊಳಿಸುವ ಜತೆಗೆ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ತೊರೆಯುವಂತಿಲ್ಲ ಎಂದು ಕೂಡ ಆದೇಶಿಸಲಾಗಿದೆ.

ಇದನ್ನೂ ಓದಿ: Karnataka Assembly Session: ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣದ ಚರ್ಚೆಗೆ ಪ್ರತಿಪಕ್ಷಗಳ ಬಿಗಿ ಪಟ್ಟು

Continue Reading

ದೇಶ

HD Deve Gowda: ವ್ಹೀಲ್‌ಚೇರ್‌ನಲ್ಲೇ ತೆರಳಿ ಮೋದಿಯನ್ನು ಭೇಟಿಯಾದ ದೇವೇಗೌಡ; ಇಲ್ಲಿವೆ ಫೋಟೊಗಳು

HD Deve Gowda: ದೆಹಲಿಯಲ್ಲಿ ವ್ಹೀಲ್‌ ಚೇರ್‌ನಲ್ಲಿಯೇ ತೆರಳಿದ ದೇವೇಗೌಡ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ದೇವೇಗೌಡರು ತೆರಳಿ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ದೇವೇಗೌಡ ಅವರನ್ನು ಭೇಟಿಯಾಗಿರುವ ಫೋಟೊಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

VISTARANEWS.COM


on

HD Deve Gowda
Koo

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಮೊದಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Deve Gowda) ಅವರ ಮೇಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗೌರವ ಹೊಂದಿದ್ದರು. ಹಲವು ಸಂದರ್ಭಗಳಲ್ಲಿ ಮೋದಿ ಅವರು ಗೌರವವನ್ನು ತೋರಿಸಿದ್ದರು. ಇನ್ನು, ಮೈತ್ರಿ ಮಾಡಿಕೊಂಡ ಬಳಿಕವಂತೂ ದೇವೇಗೌಡರು ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಇನ್ನು, ಇದರ ಮಧ್ಯೆಯೇ, ದೆಹಲಿಯಲ್ಲಿ ದೇವೇಗೌಡ ಹಾಗೂ ನರೇಂದ್ರ ಮೋದಿ ಅವರು ಭೇಟಿಯಾಗಿದ್ದಾರೆ.

ವ್ಹೀಲ್‌ ಚೇರ್‌ನಲ್ಲಿಯೇ ತೆರಳಿದ ದೇವೇಗೌಡ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ದೇವೇಗೌಡರು ತೆರಳಿ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ದೇವೇಗೌಡ ಅವರನ್ನು ಭೇಟಿಯಾಗಿರುವ ಫೋಟೊಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಭೇಟಿ ವೇಳೆ ಕರ್ನಾಟಕ ಸೇರಿ ಹಲವು ವಿಷಯಗಳ ಕುರಿತು ಇಬ್ಬರೂ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ದೇವೇಗೌಡ ಅವರನ್ನು ಭೇಟಿಯಾಗಿರುವ ಕುರಿತು ಮೋದಿ ಅವರು ಪೋಸ್ಟ್‌ ಕೂಡ ಹಂಚಿಕೊಂಡಿದ್ದಾರೆ. “7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿಯಾದೆ. ಅವರನ್ನು ಭೇಟಿಯಾಗುವುದೇ ಗೌರವದ ಸಂಗತಿಯಾಗಿದೆ. ಅವರು ಪ್ರಮುಖ ವಿಷಯಗಳ ಕುರಿತು ಹೊಂದಿರುವ ಜ್ಞಾನ, ದೃಷ್ಟಿಕೋನವು ಮೆಚ್ಚುವಂಥದ್ದು. ಅವರು ನೀಡಿದ ಸಲಹೆಗಳು ನನಗೆ ಹಲವು ಸಂದರ್ಭಗಳಲ್ಲಿ ಉಪಯುಕ್ತವಾಗಿವೆ” ಎಂಬುದಾಗಿ ಮೋದಿ ಪೋಸ್ಟ್‌ ಮಾಡಿದ್ದಾರೆ.

ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಎಚ್‌.ಡಿ.ದೇವೇಗೌಡ ಅವರು ಪತ್ರ ಬರೆದಿದ್ದರು. ʼʼನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸುತ್ತಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅನಾರೋಗ್ಯದ ಕಾರಣದಿಂದ ನನಗೆ ಈ ಕಾರ್ಯಕ್ರಮದಲ್ಲಿ ಭಾವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಖಂಡಿತವಾಗಿಯೂ ನಾನು ಟಿವಿಯಲ್ಲಿ ಲೈವ್‌ನಲ್ಲೇ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ. ಕಾಂಗ್ರೆಸ್ ಏನೇ ಹೇಳಲಿ, ಭಾರತೀಯ ಪ್ರಜಾಪ್ರಭುತ್ವವು ದೃಢವಾಗಿದೆʼʼ ಎಂದು ದೇವೇಗೌಡ ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: HD Kumaraswamy: ನನ್ನ ಮತ್ತು ದೇವೇಗೌಡರ ಸರ್ಕಾರ ಕೆಡವಿದ್ದು ಯಾರು ಅಂತ ಹೇಳಿ; ಡಿಕೆಶಿ ವಿರುದ್ಧ ಎಚ್‌ಡಿಕೆ ಕಿಡಿ

Continue Reading

ಕ್ರೀಡೆ

Maharaja Trophy: ಮೈಸೂರು ವಾರಿಯರ್ಸ್ ತಂಡ ಸೇರಿದ ದ್ರಾವಿಡ್ ಪುತ್ರ ಸಮಿತ್

Maharaja Trophy: ಆಲ್ ರೌಂಡರ್ ಚೇತನ್ ಎಲ್‌ಆರ್ ಹರಾಜಿನಲ್ಲಿ ಭಾರೀ ಮೊತ್ತ ಪಡೆದರು. ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಅವರನ್ನು 8.60 ಲಕ್ಷ ರೂ.ಗೆ ಖರೀದಿ ಮಾಡಿತು

VISTARANEWS.COM


on

Maharaja Trophy
Koo

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ 3ನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು. ಅಚ್ಚರಿ ಎಂದರೆ, ಭಾರತ ತಂಡದ ಮಾಜಿ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರ ಪುತ್ರ18 ವರ್ಷದ ಸಮಿತ್ ದ್ರಾವಿಡ್(Samit Dravid) ಹರಾಜಿನಲ್ಲಿ 50 ಸಾವಿರ ಮೊತ್ತಕ್ಕೆ ಮೈಸೂರು ವಾರಿಯರ್ಸ್(Mysuru Warriors) ತಂಡದ ಪಾಲಾಗಿದ್ದಾರೆ. ಇದೇ ಮೊದಲ ಬಾರಿಗೆ ಟೂರ್ನಿಯ ಹರಾಜಿನಲ್ಲಿ ಅವರು ಕಾಣಿಸಿಕೊಂಡಿದ್ದರು. ಚೊಚ್ಚಲ ಪ್ರಯತ್ನದಲ್ಲೇ ಯಶಸ್ಸು ಕೂಡ ಕಂಡಿದ್ದಾರೆ. ಪಂದ್ಯಾವಳಿ ಆಗಸ್ಟ್​ 15- ಸೆಪ್ಟೆಂಬರ್​ 1 ರವರೆಗೆ ನಡೆಯಲಿದೆ.

ಆಲ್ ರೌಂಡರ್ ಚೇತನ್ ಎಲ್‌ಆರ್ ಹರಾಜಿನಲ್ಲಿ ಭಾರೀ ಮೊತ್ತ ಪಡೆದರು. ಬೆಂಗಳೂರು ಬ್ಲಾಸ್ಟರ್ಸ್‌ ತಂಡವು ಅವರನ್ನು 8.60 ಲಕ್ಷ ರೂ.ಗೆ ಖರೀದಿ ಮಾಡಿತು. ಇದಾದ ಬಳಿಕ ಅತಿ ಹೆಚ್ಚು ಹಣ ಪಡೆದ ಆಟಗಾರನೆಂದರೆ ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್. ಅವರನ್ನು ಮಂಗಳೂರು ಡ್ರ್ಯಾಗನ್ಸ್ ತಂಡವು 7.60 ಲಕ್ಷ ರೂ. ನೀಡಿ ಖರೀದಿ ಮಾಡಿತು.

ಇದನ್ನೂ ಓದಿ Paris Olympics 2024: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಪುರುಷರ ಆರ್ಚರಿ ತಂಡ; 4ನೇ ಸ್ಥಾನ ಪಡೆದ ಧೀರಜ್​ ಬೊಮ್ಮದೇವರ

ಬೆಂಗಳೂರು ಬ್ಲಾಸ್ಟರ್, ಗುಲ್ಬರ್ಗಾ ಮಿಸ್ಟಿಕ್ಸ್‌, ಹುಬ್ಬಳ್ಳಿ ಟೈಗರ್ಸ್‌, ಮಂಗಳೂರು ಡ್ರ್ಯಾಗನ್ಸ್‌, ಮೈಸೂರು ವಾರಿಯರ್, ಶಿವಮೊಗ್ಗ ಲಯನ್ಸ್‌ ಮಹಾರಾಜ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾಗಿವೆ.

ಅತಿ ಹೆಚ್ಚು ಹಣ ಪಡೆದ ಆಟಗಾರರ ಪಟ್ಟಿ


ಚೇತನ್ ಎಲ್ ಆರ್ (ಬೆಂಗಳೂರು ಬ್ಲಾಸ್ಟರ್ಸ್) – 8.60 ಲಕ್ಷ ರೂ

ಶ್ರೇಯಸ್ ಗೋಪಾಲ್ (ಮಂಗಳೂರು ಡ್ರಾಗನ್ಸ್) – 7.60 ಲಕ್ಷ ರೂ

ಕೆ ಗೌತಮ್ (ಮೈಸೂರು ವಾರಿಯರ್ಸ್) – 7.40 ಲಕ್ಷ ರೂ

ಲವ್ನಿತ್ ಸಿಸೋಡಿಯಾ (ಗುಲ್ಬರ್ಗಾ ಮಿಸ್ಟಿಕ್ಸ್) – 7.20 ಲಕ್ಷ ರೂ

ಪ್ರವೀಣ್ ದುಬೆ (ಗುಲ್ಬರ್ಗಾ ಮಿಸ್ಟಿಕ್ಸ್) – 6.80 ಲಕ್ಷ ರೂ

ಮೊಹಮ್ಮದ್ ತಾಹಾ (ಹುಬ್ಬಳ್ಳಿ ಟೈಗರ್ಸ್) – 6.60 ಲಕ್ಷ ರೂ

ವಿದ್ಯಾಧರ್ ಪಾಟೀಲ್ (ಮೈಸೂರು ವಾರಿಯರ್ಸ್) – 6.40 ಲಕ್ಷ ರೂ

ಅನೀಶ್ವರ್ ಗೌತಮ್ (ಹುಬ್ಬಳ್ಳಿ ಟೈಗರ್ಸ್) – 6.20 ಲಕ್ಷ ರೂ

ಹಾರ್ದಿಕ್ ರಾಜ್ (ಹುಬ್ಬಳ್ಳಿ ಟೈಗರ್ಸ್) – 5.80 ಲಕ್ಷ ರೂ

ಜಗದೀಶ ಸುಚಿತ್ (ಮೈಸೂರು ವಾರಿಯರ್ಸ್) – 4.80 ಲಕ್ಷ ರೂ

ಕ್ರಾಂತಿ ಕುಮಾರ್ ಎಂ (ಬೆಂಗಳೂರು ಬ್ಲಾಸ್ಟರ್ಸ್) – 4.40 ಲಕ್ಷ ರೂ

ಕೆ.ಸಿ.ಕಾರಿಯಪ್ಪ (ಹುಬ್ಬಳ್ಳಿ ಟೈಗರ್ಸ್)- 4.20 ಲಕ್ಷ ರೂ

ವೆಂಕಟೇಶ್ ಎಂ (ಮೈಸೂರು ವಾರಿಯರ್ಸ್) – 3.40 ಲಕ್ಷ ರೂ

ಅನಿರುದ್ಧ ಜೋಶಿ (ಬೆಂಗಳೂರು ಬ್ಲಾಸ್ಟರ್ಸ್) – 3 ಲಕ್ಷ ರೂ

ಎಂಜಿ ನವೀನ್ (ಬೆಂಗಳೂರು ಬ್ಲಾಸ್ಟರ್ಸ್) – 2.30 ಲಕ್ಷ ರೂ

ಧೀರಜ್ ಗೌಡ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಪ್ರದೀಪ್ ಟಿ (ಶಿವಮೊಗ್ಗ ಲಯನ್ಸ್) – 1 ಲಕ್ಷ ರೂ

ಪ್ರತೀಕ್ ಜೈನ್ (ಬೆಂಗಳೂರು ಬ್ಲಾಸ್ಟರ್ಸ್) – 1 ಲಕ್ಷ ರೂ

ದರ್ಶನ್ ಎಂಬಿ (ಮಂಗಳೂರು ಡ್ರಾಗನ್ಸ್) – 1 ಲಕ್ಷ ರೂ

ಶರತ್ ಬಿಆರ್ (ಗುಲ್ಬರ್ಗಾ ಮಿಸ್ಟಿಕ್ಸ್) – 1 ಲಕ್ಷ ರೂ

ಪ್ರಸಿದ್ಧ್​ ಕೃಷ್ಣ (ಮೈಸೂರು ವಾರಿಯರ್ಸ್) – 1 ಲಕ್ಷ ರೂ

Continue Reading
Advertisement
NEET UG 2024
ದೇಶ4 hours ago

NEET UG 2024: ನೀಟ್‌ ಪ್ರಶ್ನೆಪತ್ರಿಕೆಯನ್ನು ಎಗರಿಸಿದ್ದು ಯಾವ ಕೇಂದ್ರದಿಂದ? ಸಿಬಿಐ ಸ್ಫೋಟಕ ಮಾಹಿತಿ ಬಯಲು

V Sumangala
ಕರ್ನಾಟಕ4 hours ago

V Sumangala: ಶಿಕ್ಷಣ ಇಲಾಖೆಯಲ್ಲಿ 1.62 ಕೋಟಿ ರೂ. ಅಕ್ರಮ; DSERT ನಿರ್ದೇಶಕಿ ಸುಮಂಗಲಾ ಅಮಾನತು!

Sri lanka Team
ಕ್ರೀಡೆ5 hours ago

Sri lanka Team: ಟಿ20 ಸರಣಿ ಆರಂಭಕ್ಕೂ ಮುನ್ನವೇ ಲಂಕಾಗೆ ಗಾಯದ ಬರೆ; ಇಬ್ಬರು ವೇಗಿಗಳು ಔಟ್​

HD Deve Gowda
ದೇಶ6 hours ago

HD Deve Gowda: ವ್ಹೀಲ್‌ಚೇರ್‌ನಲ್ಲೇ ತೆರಳಿ ಮೋದಿಯನ್ನು ಭೇಟಿಯಾದ ದೇವೇಗೌಡ; ಇಲ್ಲಿವೆ ಫೋಟೊಗಳು

Team India
ಕ್ರೀಡೆ6 hours ago

Team India: ಲಂಕಾ ಸರಣಿಗೂ ಮುನ್ನವೇ ಟೀಮ್​ ಇಂಡಿಯಾ ಜೆರ್ಸಿಯಲ್ಲಿ ಮಹತ್ವದ ಬದಲಾವಣೆ

Atal Setu
ಪ್ರಮುಖ ಸುದ್ದಿ6 hours ago

Atal Setu: ಅಟಲ್‌ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?

Health Minister Dinesh Gundurao instructs to send a team of deputy directors to dengue hot spots
ಕರ್ನಾಟಕ7 hours ago

Dengue Fever: ಬೆಂಗಳೂರಿನಲ್ಲೇ ಶೇ.50ರಷ್ಟು ಡೆಂಗ್ಯೂ ಪ್ರಕರಣಗಳು; ಹಾಟ್‌ಸ್ಪಾಟ್‌ಗಳಿಗೆ ಅಧಿಕಾರಿಗಳ ತಂಡ

Media Connect Founder and ceo Dr Divya Rangenahalli honored at Chess Festival in bengaluru
ಬೆಂಗಳೂರು7 hours ago

Media Connect: ಚೆಸ್‌ ಹಬ್ಬದಲ್ಲಿ ಮೀಡಿಯಾ ಕನೆಕ್ಟ್‌ ಸಂಸ್ಥಾಪಕಿ ಡಾ. ದಿವ್ಯಾ ರಂಗೇನಹಳ್ಳಿಗೆ ಸನ್ಮಾನ

1200 farmers suicides in last 15 months in Karnataka says Minister Pralhad Joshi Minister Pralhad Joshi alleges
ಕರ್ನಾಟಕ7 hours ago

Pralhad Joshi: ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ 1200 ರೈತರ ಆತ್ಮಹತ್ಯೆ!

BJP Protest
ಕರ್ನಾಟಕ7 hours ago

BJP Protest: ದಾಖಲೆ ನೀಡದೆ ಹೇಡಿಯಂತೆ ಪಲಾಯನ; ಸಿಎಂ ರಾಜೀನಾಮೆ ಪಡೆಯಲು ರಾಜ್ಯಪಾಲರಿಗೆ ಆರ್‌.ಅಶೋಕ್‌ ಮನವಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ11 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್14 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ15 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ16 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌