Manu Bhaker: ವಯಲಿನ್‌ ಮೂಲಕ ರಾಷ್ಟ್ರಗೀತೆ ನುಡಿಸಿದ ಮನು ಭಾಕರ್; ವಿಡಿಯೊ ವೈರಲ್​ - Vistara News

ಕ್ರೀಡೆ

Manu Bhaker: ವಯಲಿನ್‌ ಮೂಲಕ ರಾಷ್ಟ್ರಗೀತೆ ನುಡಿಸಿದ ಮನು ಭಾಕರ್; ವಿಡಿಯೊ ವೈರಲ್​

Manu Bhaker: ವೈರಲ್​ ಆಗುತ್ತಿರುವ ವಿಡಿಯೊದಲ್ಲಿ ಮನು ಭಾಕರ್​ ಅವರು ಸ್ವಿಮ್ಮಿಂಗ್‌ ಪೂಲ್‌ ಬಳಿ ಕುಳಿತು ವಯಲಿನ್‌ ಮೂಲಕ ರಾಷ್ಟ್ರಗೀತೆ ಜನ ಗಣ ಮನವನ್ನು ಬಹಳ ಇಂಪಾಗಿ ನುಡಿಸಿದ್ದಾರೆ.

VISTARANEWS.COM


on

Manu Bhaker
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಪ್ಯಾರಿಸ್​: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ(paris olympics) 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ವಿಭಾಗದಲ್ಲಿ ಕಂಚಿನ(Bronze Medalist Manu Bhaker) ಪದಕ ಗೆದ್ದು ಭಾರತೀಯರ ಮನಗೆದ್ದ ಮನು ಭಾಕರ್(Manu Bhaker) ಇದೀಗ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದ್ದಾರೆ. ಅವರು ಭಾರತದ ರಾಷ್ಟ್ರಗೀತೆಯನ್ನು ವಯಲಿನ್‌ ಮೂಲಕ ನುಡಿಸಿದ ವಿಡಿಯೊವೊಂದು ವೈರಲ್ ಆಗಿದೆ.

ವೈರಲ್​ ಆಗುತ್ತಿರುವ ವಿಡಿಯೊದಲ್ಲಿ ಮನು ಭಾಕರ್​ ಅವರು ಸ್ವಿಮ್ಮಿಂಗ್‌ ಪೂಲ್‌ ಬಳಿ ಕುಳಿತು ವಯಲಿನ್‌ ಮೂಲಕ ರಾಷ್ಟ್ರಗೀತೆ ಜನ ಗಣ ಮನವನ್ನು ಬಹಳ ಇಂಪಾಗಿ ನುಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವರದಿಯಾದ ಪ್ರಕಾರ ಮನು ಕಂಚಿನ ಪದಕ ಗೆದ್ದ ಬಳಿಕ ವಯಲಿನ್‌ ನಡಿಸಿದ್ದು ಎನ್ನಲಾಗಿದೆ. ಆದರೆ, ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್​ ಶೂಟಿಂಗ್​ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು. ಇಂದು ನಡೆಯುವ 10 ಮೀಟರ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ(Paris Olympics) ಸರಬ್ಜೊತ್‌ ಸಿಂಗ್‌ ಜತೆ ಕಂಚಿನ ಪದಕದ ಪ್ಲೇ ಆಫ್ ಸುತ್ತಿನಲ್ಲಿ ಮನು ಕಣಕ್ಕಿಳಿಯಲಿದ್ದಾರೆ. ಭಾರತದ ಈ ಜೋಡಿ ಕೊರಿಯಾದ ಒಹ್‌ ಯೆ ಜಿನ್‌-ಲೀ ವೊನ್ಹೊ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ.

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಟೋಕಿಯೋಗೆ ಆಗಮಿಸಿದ್ದ ಮನು ಭಾಕರ್​ಗೆ ಅದೃಷ್ಟ ಕೈಕೊಟ್ಟಿತ್ತು. ಕೂಟದ ಮೊದಲ ಸ್ಪರ್ಧೆಯಲ್ಲೇ ಅವರ ಪಿಸ್ತೂಲ್​ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಅವರಿಗೆ ಫೈನಲ್​ಗೇರುವ ಅವಕಾಶ ಕೈತಪ್ಪಿತ್ತು. ಮೊದಲ ಸುತ್ತಿನಲ್ಲಿ ಎದುರಾಗ ಈ ಆಘಾತದಿಂದ ಚೇತರಿಕೊಳ್ಳದ ಮನು ಆ ಬಳಿಕ ಆಡಿದ 2 ಸ್ಪರ್ಧೆಗಳಲ್ಲಿಯೂ ಏಕಾಗ್ರತೆ ಸಾಧಿಸಲು ವಿಫಲರಾಗಿ ಸೋಲು ಕಂಡಿದ್ದರು. ಇದು ಅವರ ಪದಾರ್ಪಣ ಒಲಿಂಪಿಕ್ಸ್​ ಕೂಟವಾಗಿತ್ತು. ಆಗ ಅವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಅಂದಿನ ನಿರಾಸೆಯನ್ನು ಈ ಬಾರಿ ಪ್ಯಾರಿಸ್​ನಲ್ಲಿ ಪದಕ ಗೆಲ್ಲುವ ಮೂಲಕ ನೀಗಿಸಿಕೊಂಡರು.

ಇದನ್ನೂ ಓದಿ Paris Olympics: ಮನು ಭಾಕರ್​-ಸರಬ್ಜೊತ್‌ ಸಿಂಗ್​ ಕಂಚಿನ ನಿರೀಕ್ಷೆ; ಭಾರತದ ಇಂದಿನ ಸ್ಪರ್ಧೆಗಳ ವಿವರ ಹೀಗಿದೆ

ಹರಿಯಾಣದ 22 ವರ್ಷದ ಮನು ಭಾಕರ್​ ಕಳೆದ ಅರ್ಹತಾ ಸುತ್ತಿನಲ್ಲಿ ಒಟ್ಟು 580 ಅಂಕ ಕಲೆ ಹಾಕಿ 3ನೇ ಸ್ಥಾನದೊಂದಿಗೆ ಫೈನಲ್​ಗೆ ಪ್ರವೇಶಿಸಿದ್ದರು. ಈ ಬಾರಿಯ ಒಲಿಂಪಿಕ್ಸ್​ ಪದಕ ನಿರೀಕ್ಷೆಯ ಕ್ರೀಡಾಪಟುಗಳಲ್ಲಿ ಮನು ಭಾಕರ್​ ಕೂಡ ಕಾಣಿಸಿಕೊಂಡಿದ್ದರು. ಭಾರತೀಯರು ನಿರೀಕ್ಷೆ ಮಾಡಿದಂತೆ ಅವರು ಪದಕ ಗೆದ್ದು ಅವರ ಮೇಲಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಹಾರ್ದಿಕ್ ವಿರುದ್ಧ ಅಸಮಾಧಾನ: ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಸಹೋದರ ಕೃನಾಲ್ ಪಾಂಡ್ಯ.

VISTARANEWS.COM


on

ಭಾರತೀಯ ಕ್ರಿಕೆಟ್ ಲೋಕದ ಫೇಮಸ್ ‘ಪಾಂಡ್ಯ ಬ್ರದರ್ಸ್’ ನಡುವೆ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳು ಇತ್ತೀಚಿನ ದಿನಗಳಲ್ಲಿ ಜೋರಾಗಿ ಕೇಳಿಬರುತ್ತಿವೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿರುವ ದೊಡ್ಡಣ್ಣ ಕೃನಾಲ್ ಪಾಂಡ್ಯ, ಆರ್‌ಸಿಬಿ ಇನ್‌ಸೈಡರ್ ಮಿಸ್ಟರ್ ನ್ಯಾಗ್ಸ್ ಜೊತೆಗಿನ ಸಂದರ್ಶನದಲ್ಲಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ತಮ್ಮ ಸಹೋದರ ಹಾರ್ದಿಕ್ ಪಾಂಡ್ಯ ಅವರೊಂದಿಗಿನ ಭಿನ್ನಾಭಿಪ್ರಾಯದ ಬಗ್ಗೆ ನೇರವಾದ ಉತ್ತರ ನೀಡದಿದ್ದರೂ, “ಕುಟುಂಬದಲ್ಲಿ ಹಲವು ಸದಸ್ಯರಿರುತ್ತಾರೆ, ಕೆಲವೊಮ್ಮೆ ಕೆಲವರನ್ನು ಮಿಸ್ ಮಾಡಿಕೊಳ್ಳಬೇಕಾಗುತ್ತದೆ” ಎಂದು ಹೇಳುವ ಮೂಲಕ ಇಬ್ಬರ ನಡುವೆ ಬಿರುಕು ಮೂಡಿರುವ ಸುಳಿವು ನೀಡಿದ್ದಾರೆ.

ಒಂದು ಕಾಲದಲ್ಲಿ ಮುಂಬೈ ಇಂಡಿಯನ್ಸ್ ಪರ ಒಟ್ಟಾಗಿ ಕಣಕ್ಕಿಳಿಯುತ್ತಿದ್ದ ಈ ಸಹೋದರರು ಈಗ ಬೇರೆ ಬೇರೆ ತಂಡಗಳಲ್ಲಿದ್ದಾರೆ. ಹಾರ್ದಿಕ್ ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದರೆ, ಕೃನಾಲ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಆದರೆ ಇತ್ತೀಚೆಗೆ ಹಾರ್ದಿಕ್ ಅವರು ನತಾಶಾ ಅವರಿಂದ ವಿಚ್ಛೇದನ ಪಡೆದ ಬಳಿಕ ಮಹಿಕಾ ಶರ್ಮಾ ಜೊತೆಗಿನ ಒಡನಾಟ ಬೆಳೆಸಿಕೊಂಡಿರುವುದು ಮತ್ತು ಆ ನಂತರ ಹಾರ್ದಿಕ್ ವರ್ತನೆಯಲ್ಲಿ ಬದಲಾವಣೆ ಆಗಿರುವುದು ಈ ಸಹೋದರರ ನಡುವಿನ ಕಿರಿಕ್‌ಗೆ ಮುಖ್ಯ ಕಾರಣ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಹಿಂದೆ ಮುಂಬೈ ಮತ್ತು ಆರ್‌ಸಿಬಿ ಪಂದ್ಯದಲ್ಲಿ ಹಾರ್ದಿಕ್ ವಿಕೆಟ್ ಬಿದ್ದಾಗ ಕೃನಾಲ್ ಅತಿಯಾಗಿ ಸಂಭ್ರಮಿಸಿದ್ದು ಕೂಡ ಈ ವದಂತಿಗಳಿಗೆ ಪುಷ್ಟಿ ನೀಡುವಂತಿದೆ.

ಸಂದರ್ಶನದ ವೇಳೆ ಮಿಸ್ಟರ್ ನ್ಯಾಗ್ಸ್ ಅವರು ಡಬ್ಲ್ಯೂಡಬ್ಲ್ಯೂಇ (WWE) ಖ್ಯಾತಿಯ ಕೇನ್ ಮತ್ತು ಅಂಡರ್‌ಟೇಕರ್ ಅವರ ಉದಾಹರಣೆ ನೀಡಿ, “ನಿಮ್ಮಿಬ್ಬರ ಮಧ್ಯೆ ಫೈಟ್ ನಡೆಯುತ್ತಿದೆಯೇ?” ಎಂದು ಕೇಳಿದಾಗ ಕೃನಾಲ್ “ಆಲ್ ಓಕೆ” ಎಂದು ನಗುತ್ತಲೇ ಉತ್ತರಿಸಿದ್ದಾರೆ. ಆದರೆ ಅವರ ನಗು ಮತ್ತು ಮಾತುಗಳ ಹಿಂದೆ ಅಸಮಾಧಾನದ ಛಾಯೆ ಇರುವುದು ಅಭಿಮಾನಿಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಮಾತಿಗಷ್ಟೇ ಕೃನಾಲ್ ಎಲ್ಲವೂ ಸರಿಯಿದೆ ಎಂದಿದ್ದಾರೋ ಅಥವಾ ನಿಜವಾಗಿಯೂ ಇಬ್ಬರ ನಡುವಿನ ಮನಸ್ತಾಪ ಬಗೆಹರಿದಿದೆಯೋ ಎಂಬ ಕುತೂಹಲ ಈಗ ಕ್ರಿಕೆಟ್ ವಲಯದಲ್ಲಿ ತೀವ್ರವಾಗಿದೆ.

Continue Reading

ಕೊಡಗು

Kodagu News : ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೈಬ್ ಸೈಟ್ ಲೋಕಾರ್ಪಣೆ

Kodagu News : ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.

VISTARANEWS.COM


on

Kodava Family Hockey Tournament Website Launched

ಕೊಡಗು: 25ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ವೆಬ್ ಸೈಟ್ ಲೋಕಾರ್ಪಣೆ ಕಾರ್ಯಕ್ರಮ ಮಡಿಕೇರಿ ಹೊರ ವಲಯದ ಖಾಸಗಿ ರೆಸಾರ್ಟ್ ನಲ್ಲಿ (Kodagu News ) ನಡೆಯಿತು. ಪ್ರತಿ ವರ್ಷ ಕೂಡ ಒಂದೊಂದು ಕುಟುಂಬಗಳು ಪಂದ್ಯಾಟ ಆಯೋಜಿಸುವ ಜವಬ್ದಾರಿ ಹೊತ್ತುಕೊಳ್ಳುತ್ತೆ. ಈ ಬಾರಿ ಮುದ್ದಂಡ ಕುಟುಂಬಕ್ಕೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜವಬ್ದಾರಿ ಹೆಗಲೇರಿದ್ದು ಪಂದ್ಯಾವಳಿಯಲ್ಲಿ ಅಚ್ಚುಕಟ್ಟಾಗಿ ಆಯೋಜಿಸುವ ಗುರಿ ಹೊಂದಿದ್ದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ 25ನೇ ವರ್ಷದ ಪಂದ್ಯಾವಳಿ ಅಯೋಜಿಸಲಾಗಿದೆ.

ಮೊದಲಿಗೆ ದೀಪ ಬೆಳಗುವ ಮೂಲಕ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ‌ 2025 ನೇ ಮುದಂಡ ಕ್ರಿಕೇಟ್ ಪಂದ್ಯಾವಳಿಯ ವೆಬ್ ಸೈಟ್ ಲಾಂಚ್ ಮಾಡಿದ್ದು ಎಲ್ಲಾ ರೀತಿಯ ಮಾಹಿತಿಯನ್ನ ವೆಬ್ ಸೈಟ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

ಹಾಕಿ ಪಂದ್ಯಾವಳಿಯ ಗೌರವ ಅಧ್ಯಕ್ಷರಾದ ಎಂಬಿ ದೇವಯ್ಯ ಮಾತನಾಡಿ ಮುದ್ದಂಡ ಕುಟುಂಬದ ಹಿರಿಯರು ಹಾಕಿ ಅಕಾಡೆಮಿ ಸಹಕಾರದಲ್ಲಿ ಈ ಬಾರಿ ಹಾಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದೇವೆ. ಈಗಾಗಲೇ ಸಮಿತಿಯನ್ನು ರಚನೆ ಮಾಡಿದ್ದೇವೆ. ಕೆಲಸಗಳನ್ನು ಆರಂಭಿಸಿದ್ದು, ಎಲ್ಲರು ಸಹಕಾರ ನೀಡುವಂತೆ ಮನವಿ ಮಾಡಿದರು. 25ನೇ ವರ್ಷದ ಕಾರ್ಯಕ್ರಮ ಆಯೋಜನೆಗೆ ನಮಗೆ ಸಿಕ್ಕಿರೋದು ಬಹಳ ಸಂತೋಷವಿದ್ದು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡುವ ಗುರಿ ಹೊಂದಿದೆ.

Kodava Family Hockey Tournament Website Launched

ಕಾರ್ಯಕ್ರಮದಲ್ಲಿ ಕೊಡಗು ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಸ್ಥಳೀಯ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ,ಉಳ್ಳಿಯಡ ಪೂವಯ್ಯ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ,ಮುದ್ದಂಡ ಸ್ಪೋರ್ಟ್ಸ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಶಿತ್ ಸುಬ್ಬಯ್ಯ,
ಅತಿಥಿಗಳಾಗಿ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಡೀನ್ ಬೋಪಣ್ಣ, ಉಪಾಧ್ಯಕ್ಷ ಅಶೋಕ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ,ಆದ್ಯ ಪೊನ್ನಣ್ಣ ,ರಂಜಿತ್ ಪೊನ್ನಪ್ಪ, ಚಂಗಪ್ಪ, ದಿವ್ಯ ಪ್ರಮುಖರು ಇದ್ದರು

Continue Reading

ಬೆಂಗಳೂರು

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ; ಫೈನಲ್‌ ಮ್ಯಾಚ್‌ ಗೆದ್ದ ಕೊಲ್ಕತ್ತಾ ರೀಜನ್‌ ಶಾಲೆ ಮಕ್ಕಳು

ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂ ಎಫ್‌ನಲ್ಲಿ 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ 2024-25ರ (KVS Sports Meet) ಮುಕ್ತಾಯಗೊಂಡಿದೆ. ಬಾಲಕರ ರೋಚಕ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ರೀಜನ್‌ ಶಾಲೆ ಮಕ್ಕಳು ಮೊದಲ ಸ್ಥಾನ ಗಳಿಸಿದ್ದಾರೆ.

VISTARANEWS.COM


on

53rd KVS National Games Kolkata Region School children win final match

ಬೆಂಗಳೂರು: ಬೆಂಗಳೂರಿನ ಯಲಹಂಕ ಕೇಂದ್ರೀಯ ವಿದ್ಯಾಲಯದಲ್ಲಿ ಸೆ. 30 ರಿಂದ ಅ. 6 ರವರೆಗೆ 53ನೇ ರಾಷ್ಟ್ರೀಯ ಕ್ರೀಡಾಕೂಟ ನಡೆಸಲಾಯಿತು. ಕ್ರೀಡೆಯಲ್ಲಿ ಹಲವಾರು ಆಟಗಳಿವೆ. ಅದರಲ್ಲಿ ಕ್ರಿಕೆಟ್ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ದೇಶದ ನಾನಾ ರಾಜ್ಯಗಳಿಂದ ಅಂದರೆ ಒಟ್ಟು 18 ರಾಜ್ಯಗಳಿಂದ ಮಕ್ಕಳು ಕ್ರಿಕೆಟ್ ಆಡಲು ಕೆ .ವಿ .ಆರ್ ಡಬ್ಲ್ಯೂ ಎಫ್‌ಗೆ ಬಂದಿದ್ದರು. ಒಟ್ಟು 269 ಶಾಲೆಯ ಮಕ್ಕಳು ನಾಲ್ಕು ವಿವಿಧ ಆಟದ ಮೈದಾನದಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ಪ್ರದರ್ಶಿಸಿದರು. ಅ.6 ರಂದು ಫೈನಲ್ ಮ್ಯಾಚ್‌ ನಡೆಸಲಾಯಿತು.

ಪ್ರಥಮ ಸ್ಥಾನವನ್ನು ಕೊಲ್ಕತ್ತಾ ರೀಜನ್ ಶಾಲೆ ಮಕ್ಕಳು ಮತ್ತು ದ್ವಿತೀಯ ಸ್ಥಾನವನ್ನು ಜಬಲ್ ಪುರ್ ರೀಜನ್ ಶಾಲೆ ಮಕ್ಕಳು ಗಳಿಸಿಕೊಂಡರು. ನಂತರ ಶಾಲೆ ಆವರಣದಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ ಪಿ. ದೇವಕುಮಾರ್(ಜಂಟಿ ಆಯುಕ್ತ ಕೆ ವಿ ಎಸ್ ಪ್ರಧಾನ ಕಛೇರಿ) ಹಾಗೂ ವಿಶೇಷ ಅತಿಥಿಗಳಾಗಿ ಧರ್ಮೇಂದ್ರ ಪಟ್ಲೆ. (ಉಪ ಆಯುಕ್ತ ಕೆ ವಿ ಎಸ್ ಬೆಂಗಳೂರು), ಆರ್ ಪ್ರಮೋದ್.(ಸಹಾಯಕ ಆಯುಕ್ತ ಕೆ ವಿ ಎಸ್ ಬೆಂಗಳೂರು), ಹೇಮಾ ಕೆ( ಸಹಾಯಕ ಆಯುಕ್ತ ) ಆಗಮಿಸಿದ್ದರು.

ಅತಿಥಿಗಳಿಗೆ ಶಾಲೆಯ ವರ್ಣ ರಂಜಿತಾ NCC ಬ್ಯಾಂಡ್ ತಂಡದ ಮಕ್ಕಳು ಸ್ವಾಗತ ಕೋರಿದರು. ಗಾಯನ ತಂಡದಿಂದ ಸ್ವಾಗತ ಗಾಯನವನ್ನು ಹಾಡಿದರು ನಂತರ ಸ್ವಾಗತ ಭಾಷಣವನ್ನು ಧರ್ಮೇಂದ್ರ ಪಟ್ಲೆ ಮಾಡಿದರು. ನೃತ್ಯ ತಂಡದಿಂದ ಮಕ್ಕಳು ಸ್ವಾಗತ ನೃತ್ಯವನ್ನು ಮಾಡಿದರು.

Continue Reading

ಬೆಂಗಳೂರು

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ; ಮೈದಾನದಲ್ಲಿ ಬಾಲಕರ ರೋಚಕ ಕ್ರಿಕೆಟ್

KVS Sports Meet : 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಮೈದಾನದಲ್ಲಿ ಬಾಲಕರ ಕ್ರಿಕೆಟ್ ರೋಚಕವಾಗಿತ್ತು.

VISTARANEWS.COM


on

53rd KVS National Games inaugurated

ಬೆಂಗಳೂರು: 53ನೇ ಕೆವಿಎಸ್ ರಾಷ್ಟ್ರೀಯ ಕ್ರೀಡಾಕೂಟ 2024-25ಕ್ಕೆ (KVS Sports Meet) ಸೋಮವಾರ ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ ಆರ್‌ಡಬ್ಲ್ಯೂ ಎಫ್‌ನಲ್ಲಿ ಚಾಲನೆ ನೀಡಲಾಯಿತು. 14 ವರ್ಷದೊಳಗಿನ ಬಾಲಕರ ವಿಭಾಗದ ಕ್ರಿಕೆಟ್‌ ರೋಚಕವಾಗಿತ್ತು. ಮುಖ್ಯ ಅತಿಥಿಯಾಗಿ ಕೆವಿಎಸ್‌ ಉಪ ಆಯುಕ್ತರು ಡಾ.ಧರ್ಮೇಂದ್ರ ಪಟ್ಲೆ, ಸಹಾಯಕ ಆಯುಕ್ತ ಆರ್ ಪ್ರಮೋದ್ ಸೇರಿ ಇತರರು ಭಾಗಿಯಾಗಿದ್ದರು.

53rd KVS National Games inaugurated

ಇದೇ ವೇಳೆ ಕೆ.ವಿ.ಎಸ್ ಧ್ವಜಾರೋಹಣವನ್ನು ಮುಖ್ಯ ಅತಿಥಿಗಳು ನೆರವೇರಿಸಿದರು. ಪಾತ್ರ ಮತ್ತು ನಾಯಕತ್ವ ಎರಡನ್ನೂ ಅಭಿವೃದ್ಧಿಪಡಿಸುವಲ್ಲಿ ಕ್ರೀಡೆಯ ಮಹತ್ವವನ್ನು ಎತ್ತಿ ತೋರಿಸಿದರು. ಆಟಗಾರರನ್ನು ಹುಮ್ಮಸ್ಸಿನಿಂದ ಸ್ಪರ್ಧಿಸಲು ಪ್ರೋತ್ಸಾಹಿಸಿದರು. ಮುಂಬರುವ ದಿನಗಳಲ್ಲಿ ರೋಚಕ ಕ್ರಿಕೆಟ್ ಪಂದ್ಯಗಳನ್ನು ನೋಡುವ ನಿರೀಕ್ಷೆಯಿದೆ, ಏಕೆಂದರೆ ಭಾಗವಹಿಸುವವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮೈದಾನಕ್ಕೆ ತರುತ್ತಾರೆ ಎಂದು ಅಭಿಪ್ರಾಯಪಟ್ಟರು.

Continue Reading
Advertisement
Latest3 hours ago

ಫರ್ಮಾನ್ ಖಾನ್ ಜೊತೆ ಮದುವೆಯಾದ ಒಂದೇ ತಿಂಗಳಲ್ಲಿ ಮೊನಾಲಿಸಾ ಭೋಸ್ಲೆ ಗರ್ಭಿಣಿ!

Latest3 hours ago

ಎಸ್ಎಸ್ಎಲ್‌ಸಿ: ಹಿಂದಿಗೆ ಈ ಬಾರಿ ಗ್ರೇಡ್‌ ಬದಲು ಅಂಕ: ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ

Latest4 hours ago

ಇರಾನ್‌ ಸರಕು ಸಾಗಣೆ ಹಡಗಿನ ಮೇಲೆ ಗುಂಡಿನ ದಾಳಿ: ಅಮೆರಿಕ ವಿರುದ್ಧ ಆಕ್ರೋಶ

Latest4 hours ago

ಹೋಮ್‌ಸ್ಟೇನಲ್ಲಿ ಅತ್ಯಾಚಾರ: ಸುತ್ತೋಲೆ ಹೊರಡಿಸಲಾಗಿದೆ ಎಂದ ಸಚಿವ ಪರಮೇಶ್ವರ್‌

Latest5 hours ago

ಜೈಲಿನಲ್ಲಿದ್ದುಕೊಂಡೆ ವಿಧ್ವಂಸ ಕೃತ್ಯಕ್ಕೆ ಸಂಚು: 7 ಆರೋಪಿಗಳಿಗೆ ಕಠಿಣ ಶಿಕ್ಷೆ ಪ್ರಕಟಿಸಿದ ಎನ್‌ ಐ ಎ ಕೋರ್ಟ್

Latest5 hours ago

ಸಚಿವ ಪ್ರಲ್ಹಾದ ಜೋಶಿ ಮನವಿಗೆ ಸ್ಪಂದನೆ; “ಧಾರವಾಡ ಆಕಾಶವಾಣಿ ಕೇಂದ್ರ” ಸ್ಥಳಾಂತರಿಸದಿರಲು ನಿರ್ಧಾರ

Latest5 hours ago

ಚಿನ್ನ ಕಳ್ಳ ಸಾಗಣೆ: ನಟಿ ರನ್ಯಾರಾವ್‌ ಗೆ ಸಿಕ್ತು ಜಾಮೀನು

Latest5 hours ago

ತಮಿಳುನಾಡು: ಯಾರು ಹಿತವರು ಈ ಮೂವರೊಳಗೆ?:dmk; aiadmk; tvk

Latest6 hours ago

ಗೋಲ್ಡ್ ಸ್ಮಗ್ಲಿಂಗ್ ಹಗರಣ: ನಟಿ ರನ್ಯಾ ರಾವ್​​ಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ!

ಅವಿಭಾಗೀಕೃತ6 hours ago

“ನಿಮ್ಮಿಂದಲೇ ಟ್ರಾಫಿಕ್‌ ಜಾಮ್!‌ ಗೆಟ್‌ ಔಟ್‌” ಎಂದು ಸಚಿವರನ್ನು ನಿಂದಿಸಿದ ಮಹಿಳೆ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌