Actor Darshan: ಜೈಲಿನ ಊಟ ನಂಗಂತೂ ಸಖತ್‌ ಇಷ್ಟ ಆಗಿತ್ತು , ದರ್ಶನ್‌ಗೆ ಯಾಕೆ ಕಷ್ಟ ಆಗ್ತಿದೆ ಎಂದ ಚೇತನ್‌ ಅಹಿಂಸಾ! - Vistara News

ಸ್ಯಾಂಡಲ್ ವುಡ್

Actor Darshan: ಜೈಲಿನ ಊಟ ನಂಗಂತೂ ಸಖತ್‌ ಇಷ್ಟ ಆಗಿತ್ತು , ದರ್ಶನ್‌ಗೆ ಯಾಕೆ ಕಷ್ಟ ಆಗ್ತಿದೆ ಎಂದ ಚೇತನ್‌ ಅಹಿಂಸಾ!

Actor Darshan: ದರ್ಶನ್ ತಮಗೆ ಮನೆಯೂಟ ಬೇಕು ಎಂದು ಪಟ್ಟು ಹಿಡಿದ ಬೆನ್ನಲ್ಲಿಯೇ, ತಮ್ಮ ಜೈಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಸ್ಟಾರ್ ಗಳಿಗೆ ಯೋಗ್ಯತೆ ಮೀರಿ ತುಂಬಾ ಬಿಲ್ಡಪ್ ಸಿಕ್ಕಿದೆ ಎಂದಿದ್ದಾರೆ.ಸುಮ್ಮನೆ ಪೊಲೀಸರು ಸಮಯ ವ್ಯರ್ಥ ಮಾಡಿಕೊಂಡು ಇಲ್ಲದೇ ಇರುವುದನ್ನು ಹುಟ್ಟು ಹಾಕುವುದಿಲ್ಲ. ನಿರ್ಧಾರ ಬರಲಿ. ದರ್ಶನ್‌ ಹಾಗೂ ರೇಣುಕಾ ಸ್ವಾಮಿ ಸಮಸ್ಯೆ ಅಲ್ಲʼʼಎಂದು ಮಾತು ಶುರು ಮಾಡಿದರು.

VISTARANEWS.COM


on

Actor Darshan Chethan Kumar on Darshan Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ಚೇತನ್‌ ಅಹಿಂಸಾ (Chethan Kumar) ತಮ್ಮ ಹೇಳಿಕೆ ಗಳ ಮೂಲಕವೇ ಸಾಕಷ್ಟು ಸುದ್ದಿಯಲ್ಲಿ ಇರುತ್ತಾರೆ. ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದರೂ ಕೂಡ. ಎರಡೆರಡು ಬಾರಿ ಜೈಲಿಗೆ ಕೂಡ ಹೋಗಿ ಬಂದರು. ಇದೀಗ ದರ್ಶನ್ ಬಂಧನ ಕುರಿತು ಮಾಧ್ಯಮದ ಜತೆ ಮಾತನಾಡಿದ್ದಾರೆ. ದರ್ಶನ್ ತಮಗೆ ಮನೆಯೂಟ ಬೇಕು ಎಂದು ಪಟ್ಟು ಹಿಡಿದ ಬೆನ್ನಲ್ಲಿಯೇ, ತಮ್ಮ ಜೈಲಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಸಿನಿಮಾ ಸ್ಟಾರ್ ಗಳಿಗೆ ಯೋಗ್ಯತೆ ಮೀರಿ ತುಂಬಾ ಬಿಲ್ಡಪ್ ಸಿಕ್ಕಿದೆ ಎಂದಿದ್ದಾರೆ.

ಚೇತನ್‌ ಅಹಿಂಸಾ ಮಾತನಾಡಿ ʻʻನಾನು ದರ್ಶನ್‌ ಅವರನ್ನು ಹಲವು ಸಲ ಭೇಟಿಯಾಗಿದ್ದೇನೆ. ಅವರು ದೊಡ್ಡ ಸ್ಟಾರ್‌. ಕೋಟಿ ಕಲೆಕ್ಷನ್‌ ಮಾಡುವ ಹೀರೊ. ಆದರೆ ಸಿನಿಮಾ ರಂಗದಲ್ಲಿ ವಿಚಾರಣ, ನಡವಳಿಕೆ, ಅಲೋಚನೆ, ಪ್ರತಿಭೆ ಇದಕೆಲ್ಲ ಬೆಲೆ ಇಲ್ಲ. ಹಣಕ್ಕೆ ಮಾತ್ರ ಬೆಲೆ. ದರ್ಶನ್‌ ಈ ಕೊಲೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆರೋಪಿ ನಿಜ. ಆದರೆ ಅಪರಾಧಿ ಅಲ್ಲ. ಬಹಳ ಗಂಭೀರ ವಾದ ಆರೋಪ ಇದು. ಸುಮ್ಮನೆ ಪೊಲೀಸರು ಸಮಯ ವ್ಯರ್ಥ ಮಾಡಿಕೊಂಡು ಇಲ್ಲದೇ ಇರುವುದನ್ನು ಹುಟ್ಟು ಹಾಕುವುದಿಲ್ಲ. ನಿರ್ಧಾರ ಬರಲಿ. ದರ್ಶನ್‌ ಹಾಗೂ ರೇಣುಕಾ ಸ್ವಾಮಿ ಸಮಸ್ಯೆ ಅಲ್ಲʼʼಎಂದು ಮಾತು ಶುರು ಮಾಡಿದರು.

ʻʻಹೀರೋಗಳು ಸತ್ತಾಗ ಸ್ಮಾರಕಗಳನ್ನು ಅವರೇ ಮಾಡಿಕೊಳ್ಳಲಿ, ಅವರು ಮಾಡಿರುವ ಸಿನಿಮಾಗಳಿಗೆ ಸಂಭಾವನೆ ಪಡೆದಿರುತ್ತಾರೆ. ಕೋಟಿ ಹಣ ಅವರ ಬಳಿ ಇರುತ್ತೆ. , ಚಿತ್ರರಂಗದಲ್ಲಿ ಮೌನ ಬಿಟ್ಟು ಸತ್ಯ ಹೇಳುವ ಕೆಲಸವನ್ನು ಎಲ್ಲರೂ ಮಾಡಬೇಕು ರೇಣುಕಾಸ್ವಾಮಿ ಪವಿತ್ರಾಗೆ ಅಶ್ಲೀಲ ಮೆಸೇಜ್ ಮಾಡಿದ್ದು ನಂಬ್ತೀವಿ, ಆದರೆ ಅದೇ ದರ್ಶನ್ ಕೊಲೆ ಆರೋಪಿ ಅಂದ್ರೆ ನಂಬಲ್ಲ, ಹೀಗಾಗಿಯೇ ಸ್ಟಾರ್ ಸಂಸ್ಕೃತಿ ಅನ್ನೋದು ಅಳಿಸಬೇಕು. ಚಿತ್ರರಂಗದ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕ. ದರ್ಶನ್ ಆರೋಪಿಯಷ್ಟೇ ಅಪರಾಧಿಯಲ್ಲ ಆದರೆ ಅವರ ಮೇಲೆ ಗಂಭೀರ ಆರೋಪ ಇದೆʼʼ ಎಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ: Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

ʻʻಸೆಲ್ ಅಲ್ಲಿ ದರ್ಶನ್‌ ಅವರು ಇರಬಹುದು. ಆದರೆ ಬ್ಯಾರೆಕ್ಸ್ ಅಲ್ಲಿ ಇರುವುದು ಕಷ್ಟ. ನಾನು ಹೋರಾಟದ ಮೇಲೆ ಎರಡು ಸಲ ಜೈಲಿಗೆ ಹೋಗಿದ್ದೆ. ಮೊದಲ ಬಾರಿ ನಾನು ಜೈಲಿಗೆ ಹೋದಾಗ 6 ಜನರಿರುವ ಸೆಲ್ ನಲ್ಲಿ ಹಾಕಿದ್ದರು. ಎರಡನೇ ಬಾರಿ 40 ಜನರಿರುವ ಬ್ಯಾರೆಕ್ಸ್ ನಲ್ಲಿ ಹಾಕಿದ್ದರು. ಜೈಲಿನ ಊಟ ನನಗೆ ಯಾವತ್ತು ಸಮಸ್ಯೆಯಾಗಲಿಲ್ಲ ಬದಲಿಗೆ ಜೈಲೂಟ ನನಗೆ ಸಖತ್ ಇಷ್ಟವಾಯಿತು. ಜೈಲಿನಲ್ಲಿ ಮುದ್ದೆ ಸ್ವಲ್ಪ ಗಟ್ಟಿ ಇರುತ್ತದೆ. ನನ್ನ 39ನೇ ಹುಟ್ಟುಹಬ್ಬವನ್ನು ನಾನು ಜೈಲಿನಲ್ಲಿ ಆಚರಿಸಿಕೊಂಡೆ ಆಗ ಪುಳಿಯೋಗರೆ ಮಾಡಿದ್ದರು, ಆಗ ತುಂಬಾ ಚೆನ್ನಾಗಿತ್ತು. ಪುಳಿಯೋಗರೆ ಅಷ್ಟೇ ಅಲ್ಲ ಚಿತ್ರಾನ್ನ, ಅನ್ನ ಸಾಂಬಾರು, ಎಲ್ಲವೂ ಚೆನ್ನಾಗಿತ್ತು ಎಂದು ಹೇಳಿದ್ದಾರೆ. ದರ್ಶನ್ ಅವರಿಗೆ ಜೈಲೂಟ ಯಾಕೆ ಇಷ್ಟವಾಗ್ತಿಲ್ಲ ಎನ್ನುವುದು ಗೊತ್ತಿಲ್ಲʼʼ ಎಂದು ಕೂಡ ಚೇತನ್ ಅಹಿಂಸಾ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Sruthi Hariharan: ʻನೀ ನಂಗೆ ಅಲ್ಲವಾʼ? ಎಂದು ಸ್ನೇಹಿತೆಯ ಜತೆ ಪೋಸ್‌ ಕೊಟ್ಟ ಮೂಗುತಿ ಸುಂದರಿ ಶ್ರುತಿ ಹರಿಹರನ್!

Sruthi Hariharan: ಜೀವನದಲ್ಲಿ ಸ್ನೇಹದ ಮಹತ್ವ ಮತ್ತು ಸ್ನೇಹಿತೆಯರ ಮಹತ್ವ ಮತ್ತು ಸ್ನೇಹಿತೆರೆಯ ಪ್ರೀತಿಯ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜತೆಗೆ ತಮ್ಮ ಸ್ನೇಹಿತೆಯಾದ ಶಾಶ್ವತಿ ಚಂದ್ರ ಶೇಖರ್ (Shashwati Chandrashekar) ಜೊತೆಗಿನ ಒಂದಷ್ಟು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

Sruthi Hariharan female friendship nangeallava shashwati chandrashekar
Koo

ಮೂಗುತಿ ಸುಂದರಿ ಶ್ರುತಿ ಹರಿಹರನ್ (Sruthi Hariharan) ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇದು ಎಲ್ಲರ ಗಮನ ಸೆಳೆದಿದೆ.

ಜೀವನದಲ್ಲಿ ಸ್ನೇಹದ ಮಹತ್ವ ಮತ್ತು ಸ್ನೇಹಿತೆಯರ ಮಹತ್ವ ಮತ್ತು ಸ್ನೇಹಿತೆರೆಯ ಪ್ರೀತಿಯ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜತೆಗೆ ತಮ್ಮ ಸ್ನೇಹಿತೆಯಾದ ಶಾಶ್ವತಿ ಚಂದ್ರ ಶೇಖರ್ (Shashwati Chandrashekar) ಜೊತೆಗಿನ ಒಂದಷ್ಟು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

ʻʻಸ್ತ್ರೀ ಸ್ನೇಹವು ಎಲ್ಲಾ ಬಂಧಗಳಲ್ಲಿಯೂ ಬಲವಾದ ಮತ್ತು ಹೆಚ್ಚು ಬಾಳಿಕೆ ಬರುವದು ಎಂದು ನಾನು ನಂಬುತ್ತೇನೆ. ನನ್ನ ಆತ್ಮೀಯ ಸ್ನೇಹಿತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಪ್ರತಿಯೊಬ್ಬರೂ ನನ್ನ ಜೀವನದಲ್ಲಿ ಇದ್ದಾರೆ ಎಂದು ಕೃತಜ್ಞನಾಗಿದ್ದೇನೆ. ಒಂದು ನನ್ನ ನೈತಿಕ ದಿಕ್ಸೂಚಿಯಾದರೆ, ಇನ್ನೊಂದು ನನ್ನ ಕನ್ನಡಿ. ಕೆಲವರು ಆಹಾರ ಮತ್ತು ಜೀವನವನ್ನು ಅನ್ವೇಷಿಸುವಲ್ಲಿ ನನ್ನ ಪಾಲುದಾರರಾಗಿದ್ದಾರೆ ಮತ್ತು ಒಬ್ಬರನ್ನೊಬ್ಬರು ನನ್ನ ಆತ್ಮ ಸಂಗಾತಿಯಾಗಿದ್ದಾರೆ. ನಾನು ಅವರನ್ನು ಒಂದೇ ರೀತಿ ಪ್ರೀತಿಸುತ್ತೇನೆ ಎಂದು ನನಗೆ ತಿಳಿದಿದೆ. ಹಾಗಾದರೆ ಅಂತಹ ಸ್ನೇಹಕ್ಕೆ ಇಲ್ಲಿ ಒಂದು ನುಡಿಮುತ್ತು. ನೀವು ನಿಜವಾದ ಸ್ನೇಹಿತ ಎಂದು ಕರೆಯಬಹುದಾದ ಕನಿಷ್ಠ ಒಬ್ಬ ಮಹಿಳೆಯನ್ನು ನೀವು ಹೊಂದಿದ್ದೀರಿ ಎಂದು ನಾನು ಭಾವಿಸುತ್ತೇನೆʼʼ.

ಇದನ್ನೂ ಓದಿ: ಕೇಂದ್ರದ ಹುದ್ದೆಗೆ ವೀರಪ್ಪನ್ ಕಾರ್ಯಾಚರಣೆ ಸಾರಥಿ ವಿಜಯ್‌ ಕುಮಾರ್‌ ರಾಜೀನಾಮೆ, ಕಾರಣ ಏನು?

ಇನ್ನು ಶ್ರುತಿ ಹರಿಹರನ್ ತಮ್ಮ ಜೊತೆ ಫೋಟೋಗೆ ಪೋಸ್ ನೀಡಿದ ತಮ್ಮ ಗೆಳತಿಯಾದ ಶಾಶ್ವತಿ ಚಂದ್ರಶೇಖರ್ ಅವರಿಗೂ ಥ್ಯಾಂಕ್ಯೂ ಮತ್ತು , ಲವ್ ಯೂ ಎಂದು ಹೇಳಿದ್ದು, ನಿನ್ನ ಕ್ರಿಯೇಟಿವಿಟಿ ಮತ್ತು ಗುಣ ಯಾವಾಗ್ಲೂ ನನ್ನನ್ನ ಇನ್’ಸ್ಪೈರ್ ಮಾಡುತ್ತಲೇ ಇರುತ್ತೆ ಎಂದಿದ್ದಾರೆ.  ಫೋಟೋಗಳನ್ನ ಸಂಚಿತ್ ಹೆಗ್ಡೆ ಹಾಡಿರುವ ʻಏನಂದರೂನು ಹಾಗೆ ನೀ ನಂಗೆ ಅಲ್ಲವಾʼ ಎನ್ನುವ ಹಾಡಿನ ಜೊತೆ ಪೋಸ್ಟ್ ಮಾಡಿದ್ದು, ತಮ್ಮ ಜೀವನದ ಎಲ್ಲಾ ಸ್ನೇಹಿತೆಯರ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. 

Continue Reading

ಕರ್ನಾಟಕ

Martin Movie: ಆ.4ಕ್ಕೆ ಮಾರ್ಟಿನ್ ಚಿತ್ರದ ಟ್ರೈಲರ್‌ 1 ರಿಲೀಸ್‌; ವಿಎಫ್‌ಎಕ್ಸ್‌ ವಂಚನೆ ಬಗ್ಗೆ ನಿರ್ಮಾಪಕ ಹೇಳಿದ್ದೇನು?

Martin Movie: ನಟ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್ʼ ಸಿನಿಮಾದ ಟ್ರೈಲರ್‌ 1 ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಆಗಸ್ಟ್ 4ರಂದು ಹಾಗೂ ಮುಂಬೈನಲ್ಲಿ ಆಗಸ್ಟ್ 5ರಂದು ರಿಲೀಸ್ ಆಗಲಿದೆ. ಈ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

VISTARANEWS.COM


on

Martin Movie
Koo

ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ʼಮಾರ್ಟಿನ್ʼ ಸಿನಿಮಾ (Martin Movie) ಅ.11ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಪಂಚ ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವ ಎ.ಪಿ.ಅರ್ಜುನ್‌ ನಿರ್ದೇಶನದ ಈ ಚಿತ್ರದ ಟ್ರೈಲರ್‌ 1 ರಿಲೀಸ್ ಮಾಡಲು ನಿಗದಿ ಮಾಡಿದೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಟ್ರೈಲರ್‌ 1 ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ.

ಆಗಸ್ಟ್ 4ರಂದು ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಹಾಗೂ ಆಗಸ್ಟ್ 5ರಂದು ಮುಂಬೈನಲ್ಲಿ ಟ್ರೈಲರ್‌ 1 ರಿಲೀಸ್ ಆಗಲಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಉದಯ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಈ ವೇಳೆ ಧ್ರುವ ಸರ್ಜಾ, ಎ.ಪಿ. ಅರ್ಜುನ್ ಉಪಸ್ಥಿತರಿದ್ದರು.

ಮೊದಲು ಕನ್ನಡಿಗರಿಗೆ ಟ್ರೇಲರ್ ತೋರಿಸುತ್ತೇವೆ ಎಂದ ಧ್ರುವ ಸರ್ಜಾ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಧ್ರುವ ಸರ್ಜಾ ಅವರು, ಆಗಸ್ಟ್‌ 4ರಂದು ಮೊದಲು ನಮ್ಮ ಕನ್ನಡಿಗರಿಗೆ ಮಾರ್ಟಿನ್‌ ಚಿತ್ರದ ಟ್ರೈಲರ್‌ 1 ತೋರಿಸುತ್ತೇವೆ. ಆ.5ರಂದು ಮುಂಬೈನಲ್ಲಿ ಟ್ರೇಲರ್ ರಿಲೀಸ್ ಆಗಲಿದೆ. ಕಾರ್ಯಕ್ರಮಕ್ಕೆ 28 ದೇಶಗಳಿಂದ ಮಾಧ್ಯಮದವರು ಬರುತ್ತಿದ್ದಾರೆ. ಅದರ ಜತೆ ಭಾರತದ ವಿವಿಧೆಡೆಯಿಂದ ರಿಪೋರ್ಟರ್ಸ್ ಬರುತ್ತಾರೆ ಎಂದು ತಿಳಿಸಿದರು.

ಆಗಸ್ಟ್ 2ರಿಂದ ಬುಕ್ ಮೈ ಶೋನಲ್ಲಿ ಟ್ರೇಲರ್ ರಿಲೀಸ್‌ ಟಿಕೆಟ್‌ ಬುಕ್ ಮಾಡಬಹುದು. ಆಗಸ್ಟ್ 4ರಂದು ಮಧ್ಯಾಹ್ನ 1 ಗಂಟೆಗೆ ಟ್ರೇಲರ್ ರಿಲೀಸ್ ಆಗಲಿದೆ ಎಂದು ಹೇಳಿದರು.

ನಿರ್ದೇಶಕನ ವಿರುದ್ಧ ದೂರು ನೀಡಿಲ್ಲ: ನಿರ್ಮಾಪಕ ಉದಯ್ ಮೆಹ್ತಾ

ಮಾರ್ಟಿನ್‌ ಚಿತ್ರದ ವಿಎಫ್‌ಎಕ್ಸ್‌ಗಾಗಿ ನಿರ್ದೇಶಕ ಎ.ಪಿ. ಅರ್ಜುನ್‌ 50 ಲಕ್ಷ ರೂ. ಕಮಿಷನ್‌ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ನಾನು ನೆನ್ನೆ ಭಾರತಕ್ಕೆ ಬಂದೆ, ಈ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡುತ್ತೇನೆ. ನಮ್ಮ ಟೀಮ್‌ನ ಯಾವ ಸದಸ್ಯನ ಮೇಲೂ ಕಂಪ್ಲೇಂಟ್ ಕೊಟ್ಟಿಲ್ಲ. ನಾನು ಕಂಪ್ಲೇಂಟ್ ಕೊಟ್ಟಿರುವುದು ಸತ್ಯ ರೆಡ್ಡಿ ಎಂಬುವವರ ಡಿಜಿಟಲ್ ಕಂಪನಿ ವಿರುದ್ಧ ಎಂದು ತಿಳಿಸಿದರು.

15 ವರ್ಷಗಳಿಂದ ನಾನು ಸಿನಿಮಾ ರಂಗದಲ್ಲಿದೇನೆ. ಇದುವರೆಗೂ ನಾನು ಯಾವುದೇ ವಿವಾದ ಮಾಡಿಲ್ಲ. ನಾನು ಫ್ಯಾಷನೇಟ್ ಪ್ರೊಡ್ಯೂಸರ್, ನನಗೆ ಈ ರೀತಿ ಮೋಸವಾಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇಲ್ಲಿ ಅನುಭವ ಲೆಕ್ಕಕ್ಕೆ ಬರೋಲ್ಲ, ಸಡನ್ ಅಪಘಾತವಾದಾಗ ಏನೂ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.

ಕಮಿಷನ್‌ ಪಡೆದಿರುವುದು ಸಾಬೀತಾದ್ರೆ 1 ಕೋಟಿ ಕೊಡ್ತೇನೆ: ನಿರ್ದೇಶಕ ಎ.ಪಿ.ಅರ್ಜುನ್

50 ಲಕ್ಷ ಕಮಿಷನ್‌ ಆರೋಪ ಬಗ್ಗೆ ನಿರ್ದೇಶಕ ಪ್ರತಿಕ್ರಿಯಿಸಿ, ಸುದ್ದಿ ಮಾಡುವವರು ಆಧಾರಗಳನ್ನು ಇಟ್ಟುಕೊಟ್ಟು ಪ್ರಸಾರ ಮಾಡಬೇಕು. ನಾನು ಕೇವಲ 5000 ರೂ. ಕಮಿಷನ್‌ ಪಡೆದಿರುವುದು ಸಾಬೀತಾದರೂ ನಿಮಗೆ 1 ಕೋಟಿ ರೂ. ಕೊಡುತ್ತೇನೆ. ಈ ರೀತಿ ಸುಳ್ಳು ಆರೋಪಗಳಿಂದ ನಮ್ಮ ಕುಟುಂಬಸ್ಥರು ಗಾಬರಿಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Actor Shahrukh Khan: ಅಮೆರಿಕದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ; ಬಾಲಿವುಡ್‌ ಬಾದ್‌ಶಾಗೆ ಕಾಡುತ್ತಿರುವ ಸಮಸ್ಯೆ ಏನು?

‘ಮಾರ್ಟಿನ್’ ಚಿತ್ರದ ವಿಎಫ್‌ಎಕ್ಸ್‌ ವರ್ಕ್‌ ಜವಾಬ್ದಾರಿಯನ್ನು ಡಿಜಿಟಲ್‌ ಟೆರೇನ್ ಕಂಪನಿಗೆ ನೀಡಲಾಗಿತ್ತು. ಇದಕ್ಕಾಗಿ ನಿರ್ಮಾಪಕ ಉದಯ್‌ ಕೊಟ್ಟಿದ್ದ 2.5 ಕೋಟಿ ರೂ.ಗಳಲ್ಲಿ 50 ಲಕ್ಷ ರೂ.ಗಳನ್ನು ನಿರ್ದೇಶಕ ಎ.ಪಿ.ಅರ್ಜುನ್ ಕಮಿಷನ್‌ ಆಗಿ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ನಿರ್ದೇಶಕ ಎ.ಪಿ.ಅರ್ಜುನ್ ಹಾಗೂ ನಿರ್ಮಾಪಕ ಉದಯ್‌ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.

ಮಾರ್ಟಿನ್ ಚಿತ್ರಕ್ಕೆ ಮಣಿ ಶರ್ಮಾ ಅವರ ಸಂಗೀತ ಮತ್ತು ಸತ್ಯ ಹೆಗಡೆ ಅವರ ಛಾಯಾಗ್ರಹಣವಿದೆ. ಮಾರ್ಟಿನ್‌ ಸಿನಿಮಾದಲ್ಲಿ ಕನ್ನಡದ ಕಲಾವಿದರ ಜತೆಗೆ ಹಿಂದಿ, ತೆಲುಗು, ತಮಿಳು ಚಿತ್ರರಂಗದ ಕಲಾವಿದರು ನಟಿಸಿದ್ದಾರೆ. ಅಚ್ಯುತ್‌ ಕುಮಾರ್‌, ನಿಕಿತನ್‌ ಧೀರ್‌, ನವಾಬ್‌ ಶಾ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಧೀರನ್‌ ಅಧಿಕಾರಂ ಒಂಡ್ರು’ತಮಿಳು ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ರೋಹಿತ್‌ ಪಾಠಕ್‌ ಸಹ ‘ಮಾರ್ಟಿನ್‌’ನಲ್ಲಿ ಬಹು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Continue Reading

ಕರ್ನಾಟಕ

Kannada New Movie: ನಟ ಲಿಖಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ʼಫುಲ್ ಮೀಲ್ಸ್ʼ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್‌

Kannada New Movie: ‘ಫುಲ್ ಮೀಲ್ಸ್ʼ ಚಿತ್ರವನ್ನು ನಿರ್ಮಿಸುವುದರ ಜತೆಗೆ ನಾಯಕ ನಟನಾಗಿ ನಟಿಸುತ್ತಿರುವ ಲಿಖಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ “ಫುಲ್ ಮೀಲ್ಸ್” ಚಿತ್ರತಂಡ ಲಿಖಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

VISTARANEWS.COM


on

Likhith Shetty starrer Full Meals movie Motion poster release
Koo

ಬೆಂಗಳೂರು: “ಸಂಕಷ್ಟಕರ ಗಣಪತಿ”, “ಫ್ಯಾಮಿಲಿ ಪ್ಯಾಕ್”, “ಅಬ್ಬಬ್ಬ” ಚಿತ್ರಗಳ ಖ್ಯಾತಿಯ ನಟ ಲಿಖಿತ್ ಶೆಟ್ಟಿ ಪ್ರಸ್ತುತ ‘ಫುಲ್ ಮೀಲ್ಸ್ʼ ಚಿತ್ರವನ್ನು ನಿರ್ಮಿಸುವುದರ ಜತೆಗೆ ನಾಯಕ ನಟನಾಗಿ ನಟಿಸುತ್ತಿದ್ದಾರೆ. “ಫುಲ್ ಮೀಲ್ಸ್” ಚಿತ್ರದ ನಾಯಕ ಲಿಖಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಮೋಷನ್ ಪೋಸ್ಟರ್ (Kannada New Movie) ಬಿಡುಗಡೆ ಮಾಡುವ ಮೂಲಕ “ಫುಲ್ ಮೀಲ್ಸ್” ಚಿತ್ರತಂಡ ಲಿಖಿತ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಲಿಖಿತ್ ಶೆಟ್ಟಿ ಇಬ್ಬರು ನಾಯಕಿಯರ ಸಾಂಗತ್ಯದಲ್ಲಿರುವ ರೊಮ್ಯಾಂಟಿಕ್ ಥೀಮ್ ಹೊಂದಿರುವ ಈ ಸುಂದರವಾದ ಮೋಷನ್ ಪೋಸ್ಟರ್ ನೋಡುಗರ ಗಮನ ಸೆಳೆದಿದ್ದು, ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ.

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಸಂಪೂರ್ಣವಾಗಿದ್ದು, ಸದ್ಯ ರೀರೆಕಾರ್ಡಿಂಗ್ ನಡೆಯುತ್ತಿದೆ. ವರ್ಷಾಂತ್ಯದೊಳಗೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿರುವುದಾಗಿ ಲಿಖಿತ್ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: UGCET 2024 : ಯುಜಿಸಿಇಟಿ ಆಪ್ಶನ್ ದಾಖಲಿಸಲು ಮತ್ತಷ್ಟು ದಿನ ಅವಕಾಶ

ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಸಿನಿಮಾ, ಮನೋರಂಜನೆಯ ಜತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನಿಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಲಿಖಿತ್ ಶೆಟ್ಟಿಯವರಿಗಿದೆ.

ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾಗೆ ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ, ಗುರು ಕಿರಣ್ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಚಿತ್ರಕ್ಕಿದೆ.

ಇದನ್ನೂ ಓದಿ: Karnataka Rain : ಗಾಳಿ-ಮಳೆಗೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ಜಾನುವಾರುಗಳು ಸಾವು; ಮತ್ತೆ ಮುಳುಗಡೆಯಾದ ತ್ರಿವೇಣಿ ಸಂಗಮ

ಲಿಖಿತ್ ಶೆಟ್ಟಿ ಅವರಿಗೆ ನಾಯಕಿಯರಾಗಿ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಅಭಿನಯಿಸಿದ್ದು, ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೊನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಇದೆ.

Continue Reading

ಸ್ಯಾಂಡಲ್ ವುಡ್

Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

Kannada New Movie: ವಂಶಿ ಚೊಚ್ಚಲ ಬಾರಿಗೆ ನಿರ್ದೇಶಿಸಿ ನಟಿಸುತ್ತಿರುವ ʻಫೈರ್ ಫ್ಲೈʼ ಸಿನಿಮಾಗೆ ಚರಣ್ ರಾಜ್ ಅದ್ಭುತ ಸಂಗೀತ ಒದಗಿಸಿದ್ದಾರೆ. ಶೀಘ್ರದಲ್ಲಿಯೇ ಚರಣ್ ಟ್ಯೂನ್ ಹಾಕಿರುವ ಹಾಡುಗಳ ಹಬ್ಬ ಆನಂದ್ ಆಡಿಯೊ ಯೂಟ್ಯೂಬ್ ನಲ್ಲಿ ಶುರುವಾಗಲಿದೆ. ಆನಂದ್ ಆಡಿಯೋ ಸಂಸ್ಥೆ ಒಂದೊಳ್ಳೆ ಮೊತ್ತಕ್ಕೆ ಫೈರ್ ಫ್ಲೈ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

VISTARANEWS.COM


on

Kannada New Movie Audio rights of Niveditha Shivarajkumar produced movie sold for huge amount
Koo

ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಸಿನಿಮಾ ʻಫೈರ್ ಫ್ಲೈʼ (Kannada New Movie) ಬಹಳ ವಿಶೇಷವಾಗಿದೆ. ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಎಂಬ ಕಾರಣದ ಜತೆಗೆ ಹೆಸರಾಂತ ತಾರೆಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನವ ನಾಯಕ ಮತ್ತು ನಿರ್ದೇಶಕ ವಂಶಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ʻಫೈರ್ ಫ್ಲೈʼ ಸಿನಿಮಾದ ಆಡಿಯೊ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ.

ವಂಶಿ ಚೊಚ್ಚಲ ಬಾರಿಗೆ ನಿರ್ದೇಶಿಸಿ ನಟಿಸುತ್ತಿರುವ ʻಫೈರ್ ಫ್ಲೈʼ ಸಿನಿಮಾಗೆ ಚರಣ್ ರಾಜ್ ಅದ್ಭುತ ಸಂಗೀತ ಒದಗಿಸಿದ್ದಾರೆ. ಶೀಘ್ರದಲ್ಲಿಯೇ ಚರಣ್ ಟ್ಯೂನ್ ಹಾಕಿರುವ ಹಾಡುಗಳ ಹಬ್ಬ ಆನಂದ್ ಆಡಿಯೊ ಯೂಟ್ಯೂಬ್ ನಲ್ಲಿ ಶುರುವಾಗಲಿದೆ. ಆನಂದ್ ಆಡಿಯೋ ಸಂಸ್ಥೆ ಒಂದೊಳ್ಳೆ ಮೊತ್ತಕ್ಕೆ ಫೈರ್ ಫ್ಲೈ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

‘ಫೈರ್ ಫ್ಲೈ’ ಸಿನಿಮಾದಲ್ಲಿ ವಂಶಿ ಅವರು ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಅವರ ಪುತ್ರಿ ನಿವೇದಿತಾ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ಹೀರೋ ಆಗಿ ಪ್ರೇಕ್ಷಕರರ ಮುಂದೆ ಬರಲಿದ್ದಾರೆ.

ಇದನ್ನೂ ಓದಿ: Actor Dhanush: ಮೂರೇ ದಿನಕ್ಕೆ 50 ಕೋಟಿ ರೂ. ಕಲೆಕ್ಷನ್‌ ಮಾಡಿದ ಧನುಷ್‌ ನಟನೆಯ ʻ50ʼನೇ ಸಿನಿಮಾ!

ಈ ಚಿತ್ರಕ್ಕೆ ಜಯ್ ರಾಮ್ ಅವರು ಸಹ-ನಿರ್ದೇಶಕನ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಸಿನಿಮಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ಫೈರ್ ಫ್ಲೈ ಸಿನಿಮಾ ಥಿಯೇಟರ್ ಬೆಳಗಲಿದೆ.

Continue Reading
Advertisement
Wayanad Landslide
ದೇಶ10 mins ago

Wayanad Landslide: ಮಣ್ಣಿನ ರಾಶಿಯಂತಾದ ಮುಂಡಕೈ; 400 ಮನೆಗಳ ಪೈಕಿ ಉಳಿದಿದ್ದು 30 ಮಾತ್ರ!

Emmanuel Macron
ವಿದೇಶ12 mins ago

Emmanuel Macron: ಕ್ರೀಡಾ ಸಚಿವೆಗೆ ಎಲ್ಲರೆದುರೇ ಚುಂಬಿಸಿದ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌-ವಿಡಿಯೋ ಇದೆ

Asim Riaz Drops Cryptic Post After Fight With Rohit Shetty
ಬಾಲಿವುಡ್27 mins ago

Asim Riaz: ಸ್ಪರ್ಧಿಯನ್ನು ಹೊರಗೆ ಹಾಕಿದ ʻಖತ್ರೋನ್ ಕೆ ಖಿಲಾಡಿʼ ಶೋ; ಪೋಸ್ಟ್‌ ಮೂಲಕ ಪರೋಕ್ಷವಾಗಿ ತಿರುಗೇಟು ಕೊಟ್ಟ ಅಸಿಮ್ ರಿಯಾಜ್!

hd kumaraswamy in bjp jds meet
ಪ್ರಮುಖ ಸುದ್ದಿ45 mins ago

HD Kumaraswamy: ಬಿಜೆಪಿ ಪಾದಯಾತ್ರೆಗೆ ನಾವು ಬೆಂಬಲ ಕೊಡಲ್ಲ, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ: ಎಚ್‌ಡಿಕೆ ಕಿಡಿ; ಮೈತ್ರಿಕೂಟದಲ್ಲಿ ಅಪಸ್ವರ

Sruthi Hariharan female friendship nangeallava shashwati chandrashekar
ಸ್ಯಾಂಡಲ್ ವುಡ್1 hour ago

Sruthi Hariharan: ʻನೀ ನಂಗೆ ಅಲ್ಲವಾʼ? ಎಂದು ಸ್ನೇಹಿತೆಯ ಜತೆ ಪೋಸ್‌ ಕೊಟ್ಟ ಮೂಗುತಿ ಸುಂದರಿ ಶ್ರುತಿ ಹರಿಹರನ್!

wayanad landslide mandya family
ಮಂಡ್ಯ1 hour ago

Wayanad Landslide: ಮಂಡ್ಯದ 9 ಜನರ ಕುಟುಂಬ ಭೂಕುಸಿತದಲ್ಲಿ ಸಂಪೂರ್ಣ ಕಣ್ಮರೆ

Wayanad Landslide
ದೇಶ1 hour ago

Wayanad Landslide: ಎಲ್ಲೆಂದರಲ್ಲಿ ಹೆಣಗಳ ರಾಶಿ; ಕೊಚ್ಚಿ ಹೋದ ಬದುಕು: ಸ್ಮಶಾನದಂತಾದ ಭೂಲೋಕದ ಸ್ವರ್ಗ ವಯನಾಡು

Vanitha Vijaykumar Set To Tie The Knot Again
ಟಾಲಿವುಡ್1 hour ago

Vanitha Vijaykumar: 43 ವರ್ಷದ ನಟಿ ವನಿತಾ ವಿಜಯಕುಮಾರ್ 4ನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜು?

Viral Video
Latest2 hours ago

Viral Video: 3 ತಿಂಗಳಿಂದ ಕಾಣೆಯಾಗಿದ್ದ ಬಾಲಕಿ ಗುಹೆಯಲ್ಲಿ ಡಿಢೀರ್‌ ಪ್ರತ್ಯಕ್ಷ; ಹಾವಿನಂತೆ ವರ್ತನೆ ಕಂಡು ಜನ ಶಾಕ್‌-ವಿಡಿಯೋ ಇದೆ

Charminar Clock
Latest2 hours ago

Charminar Clock: 135 ವರ್ಷ ಇತಿಹಾಸ ಇರೋ ಚಾರ್‌ಮಿನಾರ್ ಗಡಿಯಾರ ಸೌಂದರ್ಯಕ್ಕೆ ಪಾರಿವಾಳಗಳಿಂದ ಧಕ್ಕೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ19 hours ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 day ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ2 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ2 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ2 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ3 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ3 days ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ3 days ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ3 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

ಟ್ರೆಂಡಿಂಗ್‌