Wayanad Landslide: 144 ಸೈನಿಕರು 31 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ್ದು ಹೇಗೆ? - Vistara News

ದೇಶ

Wayanad Landslide: 144 ಸೈನಿಕರು 31 ಗಂಟೆಯೊಳಗೆ 190 ಅಡಿ ಉದ್ದದ ಸೇತುವೆ ನಿರ್ಮಿಸಿದ್ದು ಹೇಗೆ?

ಭೂಕುಸಿತವಾಗಿರುವ ವಯನಾಡಿನ (Wayanad Landslide) ಚೂರಲ್ಮಲಾದಿಂದ ಮುಂಡಕ್ಕೈ ಗೆ ಸಂಪರ್ಕ ಕಲ್ಪಿಸಲು ಭಾರತೀಯ ಸೈನಿಕರು 31 ಗಂಟೆಗಳಲ್ಲಿ ಅದ್ಭುತ ಸೇತುವೆಯನ್ನು ನಿರ್ಮಿಸಿದ್ದಾರೆ. 190 ಅಡಿ ಉದ್ದದ ಸೇತುವೆ ನಿರ್ಮಾಣ ಕಾರ್ಯ ಸುಲಭವಾಗಿರಲಿಲ್ಲ. ಆದರೂ ನಮ್ಮ ಸೈನಿಕರು ಸೀಮಿತ ಅವಧಿಯಲ್ಲಿ ಅದನ್ನು ನಿರ್ಮಿಸಿದ್ದಾರೆ. ಇದರ ಕಾರ್ಯಾಚರಣೆ ಹೇಗಿತ್ತು ಗೊತ್ತೇ? ಅಂದ ಹಾಗೆ, ಈ ಸೇತುವೆಗೆ ಬೆಂಗಳೂರಿನ ನಂಟೂ ಇದೆ.

VISTARANEWS.COM


on

Wayanad Landslide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಯನಾಡು: ಪ್ರವಾಹ ಪೀಡಿತ ವಯನಾಡಿನಲ್ಲಿ (Wayanad Landslide) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆ (Indian army) 31 ಗಂಟೆಗಳ ಅವಧಿಯಲ್ಲಿ ಯಾವುದೇ ವಿರಾಮವಿಲ್ಲದೆ 190 ಅಡಿ ಉದ್ದದ ಸೇತುವೆಯನ್ನು (Bailey bridge) ನಿರ್ಮಿಸಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ವಯನಾಡಿನ ಕುಗ್ರಾಮವಾದ ಚೂರಲ್ಮಲಾ ಮತ್ತು ಮುಂಡಕ್ಕೈ ಭೂಕುಸಿತದಿಂದಾಗಿ ಧ್ವಂಸಗೊಂಡಿದ್ದು, ಇಲ್ಲಿ ಫ್ಯಾಬ್ರಿಕೇಟೆಡ್ ಟ್ರಸ್ ಬೈಲಿ ಸೇತುವೆಯನ್ನು ನಿರ್ಮಿಸಲಾಗಿದೆ.

ಬೆಟ್ಟಗಳಿಂದ ಪ್ರಬಲ ಬಂಡೆಗಳು ಉರುಳಿ ಬಿದ್ದ ಪರಿಣಾಮ ಇಲ್ಲಿದ್ದ 100 ಅಡಿ ಉದ್ದದ ಕಾಂಕ್ರೀಟ್ ಸೇತುವೆ ಸಂಪೂರ್ಣ ಧ್ವಂಸಗೊಂಡಿದೆ. ನಿರ್ಮಾಣಗೊಂಡ ಹೊಸ ಸೇತುವೆ ಮೇಲೆ ಸೈನ್ಯವು ಮೊದಲು ಆಂಬ್ಯುಲೆನ್ಸ್ ಅನ್ನು ಹಾದುಹೋಗಲು ಅವಕಾಶ ಮಾಡಿಕೊಟ್ಟಿತು. ಬಳಿಕ ಮಿಲಿಟರಿ ಸೇವೆಯನ್ನು ಒದಗಿಸಲು ಕಳುಹಿಸಿತ್ತು.

3 ಮೀಟರ್ ಅಗಲದ ಸೇತುವೆಯ ಸಾಮರ್ಥ್ಯವನ್ನು 24 ಟನ್‌ಗಳನ್ನು ಹೊತ್ತೊಯ್ಯಬಲ್ಲ ಟ್ರಕ್ ಮೂಲಕ ಪರೀಕ್ಷೆ ನಡೆಸಲಾಯಿತು. ಈ ಸೇತುವೆ ನಿರ್ಮಾಣದಿಂದ ಮುಂಡಕ್ಕೈನಲ್ಲಿ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಬಹುದು ಎಂದು ಕರ್ನಾಟಕ ಮತ್ತು ಕೇರಳ ಉಪ ಪ್ರದೇಶ ಕಮಾಂಡಿಂಗ್ ಅಧಿಕಾರಿ ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ ತಿಳಿಸಿದ್ದಾರೆ.

Wayanad Landslide
Wayanad Landslide


ಸೇತುವೆಯ ಅಗಲವು ಮಣ್ಣು ತೆಗೆಯುವ ಯಂತ್ರ, ಅಗೆಯುವ ಯಂತ್ರಗಳು, ಆಂಬ್ಯುಲೆನ್ಸ್‌ ಮತ್ತು ಜೀಪ್‌, ಟ್ರಕ್‌ಗಳು ಸಾಗಲು ಸಾಕಷ್ಟು ಉತ್ತಮವಾಗಿದೆ. ಮುಂಡಕೈಗೆ ಇಲ್ಲಿಯವರೆಗೆ ಕೇವಲ ಟೀ ಎಸ್ಟೇಟ್‌ನಲ್ಲಿದ್ದ ಆಫ್ ರೋಡ್ ಜೀಪುಗಳನ್ನು ಮಾತ್ರ ಕಳುಹಿಸಲು ಸಾಧ್ಯವಾಗುತ್ತಿತ್ತು ಎಂದು ಅಧಿಕಾರಿ ತಿಳಿಸಿದರು. ಮಂಡಕೈ ಪ್ರದೇಶದಲ್ಲಿ 400 ಮನೆಗಳಿದ್ದು, ಭೂಕುಸಿತದಿಂದ 30 ಮಂದಿ ಮಾತ್ರ ಬದುಕುಳಿದಿದ್ದಾರೆ. ಅಲ್ಲಿ ಇನ್ನೂ ಅನೇಕ ಜನರಿದ್ದು, ಕಾಣೆಯಾಗಿದ್ದಾರೆ ಎಂದು ಅವರು ಹೇಳಿದರು.

ಸೇತುವೆ ಹೇಗೆ ನಿರ್ಮಿಸಲಾಯಿತು?

ಜುಲೈ 30ರಂದು ಚೂರಲ್ಮಲಾದಲ್ಲಿ ಬೈಲಿ ಸೇತುವೆಗಾಗಿ 20 ಟ್ರಕ್‌ಗಳಲ್ಲಿ ಬೆಂಗಳೂರಿನಿಂದ ಪ್ರತಿ 10 ಅಡಿ ಉದ್ದದ ಪ್ಯಾನಲ್‌ಗಳನ್ನು ಸಾಗಿಸಲಾಗಿತ್ತು. 190 ಅಡಿ ಉದ್ದದ ಸೇತುವೆ ನಿರ್ಮಿಸಲು ಒಟ್ಟು 19 ಉಕ್ಕಿನ ಫಲಕಗಳನ್ನು ಬಳಸಲಾಗಿದೆ. ಇದು ಒಂದೇ ಪಿಯರ್‌ನಿಂದ ಆಧರಿತವಾಗಿದ ಎಂದು ಮೇಜರ್ ಜನರಲ್ ಮ್ಯಾಥ್ಯೂ ಹೇಳಿದರು.

Wayanad Landslide
Wayanad Landslide


ಮಂಗಳವಾರ ಸಂಜೆಯೇ ಮದ್ರಾಸ್ ಎಂಜಿನಿಯರ್ ಗ್ರೂಪ್‌ನ ಅಧಿಕಾರಿಗಳು, ಸೇನೆಯ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ ಸ್ಥಳಕ್ಕೆ ಆಗಮಿಸಿತ್ತು. ಬುಧವಾರ ಬೆಳಗ್ಗೆ 9 ಗಂಟೆಗೆ ಸೀಮಿತ ಸ್ಥಳಾವಕಾಶದಲ್ಲಿ ಸೇತುವೆ ನಿರ್ಮಾಣ ಕಾರ್ಯವನ್ನು 144 ಅಧಿಕಾರಿಗಳು ಪ್ರಾರಂಭಿಸಿದರು. ಒಂದು ಟ್ರಕ್‌ಗೆ ಮಾತ್ರ ಸ್ಥಳಾವಕಾಶವಿತ್ತು. ಪ್ರತಿಕೂಲ ಹವಾಮಾನ ಪರಿಸ್ಥಿತಿ, ಸಾಕಷ್ಟು ಸ್ಥಳಾವಕಾಶದ ಕೊರತೆಯಿಂದ ಕಾಮಗಾರಿ ವಿಳಂಬವಾಯಿತು. ಇವೆಲ್ಲದರ ಹೊರತಾಗಿಯೂ ಅಧಿಕಾರಿಗಳು ರಾತ್ರಿಯಿಡೀ ಬಿಡುವಿಲ್ಲದೆ ದುಡಿದು ಆಗಸ್ಟ್ 1ರಂದು ಸಂಜೆ 6 ಗಂಟೆಗೆ ಸೇತುವೆಯನ್ನು ಸಿದ್ಧಗೊಳಿಸಿದರು ಎಂದು ಅವರು ತಿಳಿಸಿದರು.



ಇದನ್ನೂ ಓದಿ: Wayanad Landslide: ವಯನಾಡು ಹಿಂದೆ ಹೇಗಿತ್ತು? ಈಗ ಹೇಗಿದೆ? ದುರಂತ ಸ್ಥಳದ ದೃಶ್ಯ ಸೆರೆ ಹಿಡಿದ ಇಸ್ರೋ

ಬೈಲಿ ಸೇತುವೆಗೆ ಸಮಾನಾಂತರವಾದ ಕಾಲುಸೇತುವೆ ನಿರ್ಮಾಣ ಕಾರ್ಯವನ್ನು ಗುರುವಾರ ಮುಂಜಾನೆ 3 ಗಂಟೆ ಸುಮಾರಿಗೆ ಸೇನೆಯ ಸಿಬ್ಬಂದಿ ಪ್ರಾರಂಭಿಸಿದರು. 100 ಅಡಿ ಉದ್ದದ ಈ ಸೇತುವೆಯನ್ನು ಸಂಜೆ 6 ಗಂಟೆಗೆ ಪೂರ್ಣಗೊಳಿಸಿದ್ದೇವೆ ಎಂದರು. ಈ ಎರಡು ಸೇತುವೆಗಳನ್ನು ಸರ್ಕಾರ ಬಯಸಿದಷ್ಟು ಕಾಲ ಇರಿಸಿಕೊಳ್ಳಬಹುದು. ಈ ಹಿಂದೆ ಶಬರಿಮಲೆಯಲ್ಲಿ ನಿರ್ಮಿಸಿರುವ ಬೈಲಿ ಸೇತುವೆ ಇನ್ನೂ ಇದೆ ಎಂದು ಅವರು ತಿಳಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Border Security Force : ಗಡಿಯಲ್ಲಿ ಭಯೋತ್ಪಾದನೆ ಹೆಚ್ಚಳ; ಬಿಎಸ್​ಎಫ್​ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಕೇಂದ್ರ ಸರ್ಕಾರ

Border Security Force : ಅಗರ್ವಾಲ್ ಅವರು ಕಳೆದ ವರ್ಷ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಕ್ಯಾಬಿನೆಟ್​ನಲ್ಲಿ ನೇಮಕಾತಿ ಸಮಿತಿ ಹೊರಡಿಸಿದ ಪ್ರತ್ಯೇಕ ಆದೇಶಗಳಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ “ಅಕಾಲಿಕವಾಗಿ” ವಾಪಸ್ ಕಳುಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

VISTARANEWS.COM


on

Border Security Force
Koo

ನವದೆಹಲಿ: ಗಡಿಯ ಮೂಲಕ ಪಾಕಿಸ್ತಾನದ ಉಗ್ರರ ನುಸುಳುವಿಕೆ ವರದಿಯಾದ ಬೆನ್ನಲ್ಲೇ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ. ಶುಕ್ರವಾರ ಗಡಿ ಭದ್ರತಾ ಪಡೆ (Border Security Force) ಡೈರೆಕ್ಟರ್​ ನಿತಿನ್ ಅಗರ್ವಾಲ್ ಮತ್ತು ಅವರ ಡೆಪ್ಯುಟಿ ಡೈರೆಕ್ಟರ್​ (ಪಶ್ಚಿಮ) ವೈಬಿ ಖುರಾನಿಯಾ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ರಾಜ್ಯ ಕೇಡರ್​ಗಳಿಗೆ ವಾಪಸ್ ಕಳುಹಿಸಿದೆ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. ಅಗರ್ವಾಲ್ ಅವರು 1989ರ ಬ್ಯಾಚ್​​ನ ಕೇರಳ ಕೇಡರ್ ಅಧಿಕಾರಿಯಾಗಿದ್ದು, ಖುರಾನಿಯಾ 1990ರ ಬ್ಯಾಚ್​ನ ಒಡಿಶಾ ಕೇಡರ್​ಗೆ ಸೇರಿದವರಾಗಿದ್ದಾರೆ.

ಅಗರ್ವಾಲ್ ಅವರು ಕಳೆದ ವರ್ಷ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಕ್ಯಾಬಿನೆಟ್​ನಲ್ಲಿ ನೇಮಕಾತಿ ಸಮಿತಿ ಹೊರಡಿಸಿದ ಪ್ರತ್ಯೇಕ ಆದೇಶಗಳಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ “ಅಕಾಲಿಕವಾಗಿ” ವಾಪಸ್ ಕಳುಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿರಾಡ್​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

ಅಂತರರಾಷ್ಟ್ರೀಯ ಗಡಿಯಿಂದ ನಿರಂತರ ಒಳನುಸುಳುವಿಕೆ ಹಿನ್ನೆಲೆಯಲ್ಲಿ ಈ ಕ್ರಮ ಎಂದು ಹೇಳಲಾಗಿದೆ. ಸಮನ್ವಯದ ಕೊರತೆ ಸೇರಿದಂತೆ ನಿರ್ಣಾಯಕ ವಿಷಯಗಳ ಬಗ್ಗೆ ಬಿಎಸ್ಎಫ್ ಮುಖ್ಯಸ್ಥರ ವಿರುದ್ಧ ದೂರುಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ. ಬಿಎಸ್ಎಫ್ ಸುಮಾರು 2.65 ಲಕ್ಷ ಸಿಬ್ಬಂದಿಯನ್ನು ಹೊಂದಿದೆ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶದ ಗಡಿಗಳನ್ನು ಕಾಯುತ್ತಿದೆ.

Continue Reading

ಪ್ರಮುಖ ಸುದ್ದಿ

High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿಡಾರ್​​​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

high-speed road corridor :

VISTARANEWS.COM


on

high-speed road corridor
Koo

ಬೆಂಗಳೂರು: ಸರಕು ಸಾಗಾಟ ವ್ಯವಸ್ಥೆಯಲ್ಲಿ ದಕ್ಷತೆ ಹೆಚ್ಚಿಸುವ ಉದ್ದೇಶ ಹಾಗೂ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ದೇಶಾದ್ಯಂತ ಹೊಸ ರಸ್ತೆ ಜಾಲವನ್ನು (High Speed Road Corridor) ಸೃಷ್ಟಿಸಲು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಶುಕ್ರವಾರ ಒಪ್ಪಿಗೆ ಕೊಟ್ಟಿದೆ. ಅಂತೆಯೇ 50,655 ಕೋಟಿ ರೂ.ಗಳ ವೆಚ್ಚದಲ್ಲಿ 936 ಕಿ.ಮೀ ಉದ್ದದ 8ಎಂಟು ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆಗಳಿಗೆ ನರೇಂದ್ರ ಮೋದಿ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.

“ಸರಕು ಸಾಗಾಟದಲ್ಲಿ ವೇಗ ಹೆಚ್ಚಸಲು, ವಾಹನಗಳ ದಟ್ಟಣೆಯಿಂದ ಉಂಟಾಗುವ ಸಮಸ್ಯೆ ಕಡಿಮೆ ಮಾಡಲು ಮತ್ತು ದೇಶಾದ್ಯಂತ ರಸ್ತೆ ಸಂಪರ್ಕವನ್ನು ಹೆಚ್ಚಿಸಲು ಒಟ್ಟು 50,000 ಕೋಟಿ ರೂ.ಗಳ ವೆಚ್ಚದಲ್ಲಿ 936 ಕಿ.ಮೀ ಉದ್ದದ 8 ಪ್ರಮುಖ ರಾಷ್ಟ್ರೀಯ ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆಗಳಿಗೆ ಕ್ಯಾಬಿನೆಟ್ ಇಂದು ಅನುಮೋದನೆ ನೀಡಿದೆ” ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಆರು ಪಥದ ಆಗ್ರಾ-ಗ್ವಾಲಿಯರ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್, ನಾಲ್ಕು ಪಥದ ಖರಗ್ಪುರ-ಮೊರೆಗ್ರಾಮ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್, ಆರು ಪಥದ ತರದ್ – ದೀಸಾ – ಮೆಹ್ಸಾನಾ – ಅಹಮದಾಬಾದ್ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್, ನಾಲ್ಕು ಪಥದ ಅಯೋಧ್ಯೆ ರಿಂಗ್ ರಸ್ತೆ, ರಾಯ್ಪುರ-ರಾಂಚಿ ರಾಷ್ಟ್ರೀಯ ಹೈಸ್ಪೀಡ್ ಕಾರಿಡಾರ್​ ಮತ್ತು ಪಥಲ್ಗಾಂವ್ ಮತ್ತು ಗುಮ್ಲಾ ನಡುವಿನ ಐದು ಪಥದ ರಸ್ತೆ , ಆರು ಪಥದ ಕಾನ್ಪುರ ರಿಂಗ್ ರಸ್ತೆ, ನಾಲ್ಕು ಪಥದ ಉತ್ತರ ಗುವಾಹಟಿ ಬೈಪಾಸ್ ಮತ್ತು ಅಸ್ತಿತ್ವದಲ್ಲಿರುವ ಗುವಾಹಟಿ ಬೈಪಾಸ್ ವಿಸ್ತರಣೆ ಹಾಗೂ ಪುಣೆ ಬಳಿಯ ನಾಸಿಕ್​ ಪಥ, ಕೇಡ್ ಕಾರಿಡಾರ್ ಇದರಲ್ಲಿ ಸೇರಿದೆ.

“140 ಕೋಟಿ ಭಾರತೀಯರು ಪ್ರಧಾನಿ ಮೋದಿಗೆ ಐತಿಹಾಸಿಕ ಜನಾದೇಶವನ್ನು ನೀಡಿದ್ದಾರೆ. ಅವರಿಗೆ ಧನ್ಯವಾದಗಳು. 60 ವರ್ಷಗಳ ನಂತರ ಸತತ ಮೂರನೇ ಅವಧಿಗೆ ಸರ್ಕಾರ ಅಧಿಕಾರಕ್ಕೆ ಮರಳಿದೆ. ವಾಧ್ವಾನ್​ ಬಂದರಿಗೂ 76,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದು” ಎಂದು ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

ಮೂಲಸೌಕರ್ಯ ಅಭಿವೃದ್ಧಿಯು ದೇಶದ ಆರ್ಥಿಕ ಸಮೃದ್ಧಿಗೆ ಅಡಿಪಾಯವಾಗಿದೆ. ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ನಿರ್ಣಾಯಕವಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಮೂಲಸೌಕರ್ಯ ಅಭಿವೃದ್ಧಿಗೆ ಖರ್ಚು ಮಾಡುವ ಪ್ರತಿ ರೂಪಾಯಿ ಜಿಡಿಪಿಯ ಮೇಲೆ ಸುಮಾರು 2.5-3.0 ಪಟ್ಟು ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಖಾಸಗಿ ಹೂಡಿಕೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಒಟ್ಟು ಬಂಡವಾಳ ಹೂಡಿಕೆ 2013-14ರಲ್ಲಿ 50,000 ಕೋಟಿ ರೂ.ಗಳಿಂದ 2023-24ರಲ್ಲಿ ಸುಮಾರು 3.1 ಲಕ್ಷ ಕೋಟಿ ರೂ.ಗೆ 6 ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹಿಂದಿನ ಯೋಜನೆ ಆಧಾರಿತ ಅಭಿವೃದ್ಧಿ ವಿಧಾನಕ್ಕೆ ಹೋಲಿಸಿದರೆ, ಸ್ಥಿರ ಮಾನದಂಡಗಳು, ಬಳಕೆದಾರರ ಅನುಕೂಲತೆ ಮತ್ತು ಲಾಜಿಸ್ಟಿಕ್ಸ್ ದಕ್ಷತೆಯನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಿ ಸರ್ಕಾರವು ಕಾರಿಡಾರ್ ಆಧಾರಿತ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ವಿಧಾನವನ್ನು ಅಳವಡಿಸಿಕೊಂಡಿದೆ.

Continue Reading

ಪ್ರಮುಖ ಸುದ್ದಿ

Space mission : ಇಂಡೊ- ಯುಎಸ್​ ಬಾಹ್ಯಾಕಾಶ ಯಾನಕ್ಕೆ ಭಾರತದ ಶುಭಾಂಶು ಶುಕ್ಲಾ ‘ಪ್ರಧಾನ ಗಗನಯಾತ್ರಿ’

Space mission : “ಗಗನಯಾತ್ರಿ” ಎಂದೂ ಕರೆಯಲ್ಪಡುವ ಇಬ್ಬರೂ ಅಧಿಕಾರಿಗಳ ತರಬೇತಿ ಆಗಸ್ಟ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಯೋಜನೆ ಅವಧಿಯಲ್ಲಿ ಅಧಿಕಾರಿಗಳು ಐಎಸ್ಎಸ್​​ನಲ್ಲಿ ಆಯ್ದ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರದರ್ಶನ ಪ್ರಯೋಗಗಳನ್ನು ನಡೆಸಲಿದ್ದಾರೆ. ಬಾಹ್ಯಾಕಾಶ ಕುರಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

VISTARANEWS.COM


on

Space mission
Koo

ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊ ಜಂಟಿಯಾಗಿ ಕೈಗೊಳ್ಳಲಿರುವ ಬಾಹ್ಯಾಕಾಶ ಯಾನ ಯೋಜನೆಗೆ (Space mission) ಭಾರತದ ವಾಯು ಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಆಯ್ಕೆಯಾಗಿದ್ದಾರೆ. ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ಪ್ರಮುಖ ಗಗನಯಾತ್ರಿಯಾಗಿ ಕಳುಹಿಸಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ತಿಳಿಸಿದೆ. ಇಸ್ರೋದ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (HSFC) ಅಮೆರಿಕ ಮೂಲದ ಆಕ್ಸಿಯೋಮ್ ಸ್ಪೇಸ್​​ನೊಂದಿಗೆ ಮುಂಬರುವ ಆಕ್ಸಿಯಮ್ -4 ಮಿಷನ್​ಗಾಗಿ ಬಾಹ್ಯಾಕಾಶ ಹಾರಾಟ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಪ್ರೈಮರಿ ಮಿಷನ್ ಪೈಲಟ್ ಆಗಿದ್ದರೆ, ಭಾರತೀಯ ವಾಯುಪಡೆಯ ಮತ್ತೊಬ್ಬ ಅಧಿಕಾರಿ ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಬ್ಯಾಕಪ್ ಮಿಷನ್ ಪೈಲಟ್ ಆಗಿದ್ದಾರೆ.

“ಗಗನಯಾತ್ರಿ” ಎಂದೂ ಕರೆಯಲ್ಪಡುವ ಇಬ್ಬರೂ ಅಧಿಕಾರಿಗಳ ತರಬೇತಿ ಆಗಸ್ಟ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಯೋಜನೆ ಅವಧಿಯಲ್ಲಿ ಅಧಿಕಾರಿಗಳು ಐಎಸ್ಎಸ್​​ನಲ್ಲಿ ಆಯ್ದ ವೈಜ್ಞಾನಿಕ ಸಂಶೋಧನೆ ಮತ್ತು ತಂತ್ರಜ್ಞಾನ ಪ್ರದರ್ಶನ ಪ್ರಯೋಗಗಳನ್ನು ನಡೆಸಲಿದ್ದಾರೆ. ಬಾಹ್ಯಾಕಾಶ ಕುರಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಆಕ್ಸಿಯೋಮ್ -4 ಮಿಷನ್ ಸಿಬ್ಬಂದಿಗಳ ಪಟ್ಟಿಯಲ್ಲಿ ಅಮೆರಿಕದ ಪೆಗ್ಗಿ ವಿಟ್ಸನ್ (ಕಮಾಂಡರ್), ಭಾರತದ ಗ್ರೂಪ್ ಕ್ಯಾಪ್ಟನ್ ಶುಕ್ಲಾ (ಪೈಲಟ್), ಪೋಲೆಂಡ್​​ನ ಸಾವೋಜ್ ಉಜ್ನಾನ್​ಸ್ಕಿ (ಮಿಷನ್ ಸ್ಪೆಷಲಿಸ್ಟ್) ಮತ್ತು ಹಂಗೇರಿಯ ಟಿಬೋರ್ ಕಾಪು (ಮಿಷನ್ ಸ್ಪೆಷಲಿಸ್ಟ್) ಇದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

ಕಳೆದ ವರ್ಷ ವಾಯುಪಡೆಯಿಂದ ನಾಲ್ಕು ಪರೀಕ್ಷಾ ಪೈಲಟ್​​​ಗಳನ್ನು ಆಯ್ಕೆ ಮಾಡಲಾಗಿತ್ತು. ಅವರ ಪ್ರಾಥಮಿಕ ತರಬೇತಿಯನ್ನು ಬೆಂಗಳೂರಿನ ಇಸ್ರೋದ ಗಗನಯಾತ್ರಿ ತರಬೇತಿ ಸೌಲಭ್ಯದಲ್ಲಿ ಪ್ರಾರಂಭಿಸಲಾಗಿತ್ತು. ಗಗನಯಾನ ಮಿಷನ್ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಭಾರತದ ಮಾನವ ಬಾಹ್ಯಾಕಾಶ ಹಾರಾಟ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಮೂರು ದಿನಗಳ ಕಾರ್ಯಾಚರಣೆಗಾಗಿ ಮೂವರು ಸದಸ್ಯರ ತಂಡವನ್ನು 400 ಕಿ.ಮೀ ಕಕ್ಷೆಗೆ ಉಡಾಯಿಸಲು ಮಿಷನ್ ಯೋಜನೆ ರೂಪಿಸಿದೆ. ಇದು ಭಾರತೀಯ ಜಲಪ್ರದೇಶದಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳುವುದರ ಮೂಲಕ ಕೊನೆಗೊಳ್ಳುತ್ತದೆ.

ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಯಾರು?

ಲಕ್ನೋದಲ್ಲಿ ಜನಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಸುಮಾರು 18 ವರ್ಷಗಳ ಹಿಂದೆ ಕಠಿಣ ಮತ್ತು ದೀರ್ಘ ಮಿಲಿಟರಿ ತರಬೇತಿಗಾಗಿ ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರಿದ್ದರು. ಅಲ್ಲಿಂದ ಭಾರತೀಯ ವಾಯುಪಡೆಯಲ್ಲಿ ಅವರ ಪ್ರಯಾಣ ಪ್ರಾರಂಭವಾಯಿತು.

ಶುಕ್ಲಾ ಅವರ ಹಿರಿಯ ಸಹೋದರಿಯ ಹೇಳುವಂತೆ, ಕಾರ್ಗಿಲ್ ಯುದ್ಧ ಸಮಯದಲ್ಲಿ ಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗದ ವೀರ ಕಥೆಗಳನ್ನು ಓದಿದ ನಂತರ ಸೇನೆ ಸೇರಲು ಪ್ರೇರಣೆ ಪಡೆದಿದ್ದರು. 1999 ರಲ್ಲಿ ಕಾರ್ಗಿಲ್​ನಲ್ಲಿ ಯುದ್ಧ ಪ್ರಾರಂಭವಾದಾಗ ಪಾಕಿಸ್ತಾನದ ಒಳನುಸುಳುವವರು ನಿಯಂತ್ರಣ ರೇಖೆಯನ್ನು (ಎಲ್ಒಸಿ) ದಾಟಿ ಭಾರತೀಯ ಪೋಸ್ಟ್ಗಳನ್ನು ಅತಿಕ್ರಮಿಸಿದಾಗ ಅವರಿಗೆ ಕೇವಲ 14 ವರ್ಷ ವಯಸ್ಸಾಗಿತ್ತು.

Continue Reading

ವಾಣಿಜ್ಯ

Income Tax Returns: ಜುಲೈ 31ರೊಳಗೆ 7.28 ಕೋಟಿ ಐಟಿಆರ್ ಸಲ್ಲಿಕೆ! ಇದು ಹೊಸ ದಾಖಲೆ

ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಕೆ ಗಡುವಿನೊಳಗೆ ಒಟ್ಟು 7.28 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಫೈಲಿಂಗ್ ಮಾಡಲಾಗಿದೆ. ಇದರಲ್ಲಿ ಜುಲೈ 31ರಂದು ಒಂದೇ ದಿನ ಅತ್ಯಧಿಕ ಐಟಿಆರ್‌ಗಳ ಫೈಲಿಂಗ್ ನಡೆದಿದೆ. ಈ ದಿನ 69.92 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಈ ಬಾರಿ ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ದರಿಂದ ಫೈಲಿಂಗ್‌ನಲ್ಲಿ ಏಕಾಏಕಿ ಹೆಚ್ಚಳಕ್ಕೆ ಕಾರಣವಾಯಿತು.

VISTARANEWS.COM


on

By

Income Tax Returns
Koo

ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಕೆ ಗಡುವಿನ ಒಳಗೆ, ಅಂದರೆ 2024ರ ಜುಲೈ 31ರೊಳಗಿನ 2024- 25ರ ಮೌಲ್ಯಮಾಪನ ವರ್ಷಕ್ಕೆ (financial year) ಒಟ್ಟು 7.28 ಕೋಟಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಲಾಗಿದೆ. ಇದು ಕಳೆದ ವರ್ಷ 6.77 ಕೋಟಿಯಾಗಿದ್ದು, ಈ ವರ್ಷ ಶೇ. 7.5ರಷ್ಟು ಹೆಚ್ಚಾಗಿದೆ ಮತ್ತು ಈ ವರ್ಷದ ಐಟಿಆರ್ ಸಲ್ಲಿಕೆಯಲ್ಲಿ ಶೇ. 72ರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆರಿಸಿಕೊಂಡಿದ್ದಾರೆ ಎಂದು ಹಣಕಾಸು ಸಚಿವರು (finance minister) ಶುಕ್ರವಾರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಬಾರಿ ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರು ಸಮಯಕ್ಕೆ ಸರಿಯಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ್ದರಿಂದ ಫೈಲಿಂಗ್‌ನಲ್ಲಿ ಏಕಾಏಕಿ ಹೆಚ್ಚಳಕ್ಕೆ ಕಾರಣವಾಯಿತು. 2024ರ ಜುಲೈ 31ರವರೆಗೆ ಸಲ್ಲಿಸಿದ ಐಟಿಆರ್ ಹೊಸ ದಾಖಲೆಗೆ ಇದು ಕಾರಣವಾಯಿತು. ಆರ್ಥಿಕ ವರ್ಷ 2024ರಲ್ಲಿ ಈವರೆಗೆ ಸಲ್ಲಿಸಿರುವ ಐಟಿಆರ್ ಗಳ ಸಂಖ್ಯೆ 7.28 ಕೋಟಿಗಿಂತ ಹೆಚ್ಚು, ಇದು ಆರ್ಥಿಕ ವರ್ಷ 2023- 24ಕ್ಕೆ ಹೋಲಿಸಿದರೆ ಒಟ್ಟು ಐಟಿಆರ್‌ಗಳಿಗಿಂತ ಶೇ. 7.5ರಷ್ಟು ಹೆಚ್ಚು ಎಂದು ಸಚಿವಾಲಯ ತಿಳಿಸಿದೆ.

ತೆರಿಗೆ ಪದ್ಧತಿ ಯಾವುದು ಎಷ್ಟು?

ಆರ್ಥಿಕ ವರ್ಷ 2024-25ಕ್ಕೆ ಸಲ್ಲಿಸಿದ ಒಟ್ಟು 7.28 ಕೋಟಿ ಐಟಿಆರ್‌ಗಳಲ್ಲಿ ಹಳೆಯ ತೆರಿಗೆ ಪದ್ಧತಿಯಲ್ಲಿ ಒಟ್ಟು 2.01 ಕೋಟಿ ಐಟಿಆರ್‌ ಸಲ್ಲಿಕೆಯಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ 5.27 ಕೋಟಿ ಸಲ್ಲಿಸಲಾಗಿದೆ. ಹೀಗಾಗಿ ಶೇ.72ರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದರೆ, ಶೇ. 28ರಷ್ಟು ಮಂದಿ ಹಳೆಯ ತೆರಿಗೆ ಪದ್ಧತಿಯಲ್ಲಿಯೇ ಮುಂದುವರಿದಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

Income Tax Returns
Income Tax Returns


ಜುಲೈ 31ರಂದು ಎಷ್ಟು ಫೈಲಿಂಗ್?

2024ರ ಜುಲೈ 31ರಂದು ಐಟಿಆರ್‌ಗಳ ಫೈಲಿಂಗ್ ಗರಿಷ್ಠ ಮಟ್ಟವನ್ನು ತಲುಪಿತು. ಒಂದೇ ದಿನದಲ್ಲಿ 69.92 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ. ಇದನ್ನು ಇ-ಫೈಲಿಂಗ್ ಪೋರ್ಟಲ್ ಗಮನಿಸಿದೆ.

31ರಂದು ಸಂಜೆ 7ರಿಂದ 8 ಗಂಟೆ ಅವಧಿಯಲ್ಲಿ ಐಟಿಆರ್ ಫೈಲಿಂಗ್ ಪ್ರತಿ ಗಂಟೆಗೆ ಗರಿಷ್ಠ ದರ 5.07 ಲಕ್ಷ. ಐಟಿಆರ್ ಫೈಲಿಂಗ್‌ನ ಪ್ರತಿ ಸೆಕೆಂಡಿಗೆ ಅತ್ಯಧಿಕ ದರ 917. ಇದು ಜುಲೈ 17ರಂದು ಬೆಳಗ್ಗೆ 8.13ಕ್ಕೆ ದಾಖಲಾಗಿದೆ. ಐಟಿಆರ್ ಫೈಲಿಂಗ್‌ನ ಪ್ರತಿ ನಿಮಿಷಕ್ಕೆ ಗರಿಷ್ಠ ದರ 9,367. ಇದು ಜುಲೈ 31ರಂದು ರಾತ್ರಿ 8.8ಕ್ಕೆ ದಾಖಲಾಗಿದೆ.

ಮೊದಲ ಬಾರಿ ಸಲ್ಲಿಸಿದವರು

ಇಲಾಖೆಯು ಜುಲೈ 31ರವರೆಗೆ ಮೊದಲ ಬಾರಿ ಸಲ್ಲಿಸುವವರಿಂದ 58.57 ಲಕ್ಷ ಐಟಿಆರ್‌ಗಳನ್ನು ಸ್ವೀಕರಿಸಿದೆ. ಇದು ತೆರಿಗೆ ಮೂಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಹತ್ವದ ಸೂಚನೆಯಾಗಿದೆ.

ಐತಿಹಾಸಿಕವಾಗಿ ಐಟಿಆರ್‌ಗಳನ್ನು ಐಟಿಆರ್ -1, ಐಟಿಆರ್ -2, ಐಟಿಆರ್ -4, ಐಟಿಆರ್ -6 ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಹಣಕಾಸು ವರ್ಷದ ಮೊದಲ ದಿನದಂದು ಅಂದರೆ ಏಪ್ರಿಲ್ 1ರಂದು ನಿಯೋಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಿಂದಿನ ಹಣಕಾಸು ವರ್ಷಗಳಿಗೆ ಹೋಲಿಸಿದರೆ ಐಟಿಆರ್ -3 ಮತ್ತು ಐಟಿಆರ್ -5 ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಗಳ ಬಗ್ಗೆ ತೆರಿಗೆದಾರರಿಗೆ ಶಿಕ್ಷಣ ನೀಡಲು ಹೆಚ್ಚಿನ ಒತ್ತು ನೀಡಲಾಯಿತು ಎಂದು ಅದು ಹೇಳಿದೆ.

ಯಾವುದು ಎಷ್ಟು?

7.28 ಕೋಟಿ ಐಟಿಆರ್‌ಗಳಲ್ಲಿ ಆರ್ಥಿಕ ವರ್ಷ 2024-25ರಲ್ಲಿ ಶೇ. 45.77ರಷ್ಟು ಅಂದರೆ 3.34 ಕೋಟಿ ಐಟಿಆರ್-1, ಶೇ. 14.93ರಷ್ಟು ಅಂದರೆ 1.09 ಕೋಟಿ ಐಟಿಆರ್ -2, ಶೇ.12.50ರಷ್ಟು 91.10 ಲಕ್ಷ ಐಟಿಆರ್-3, ಶೇ. 25.77ರಷ್ಟು 1.88 ಕೋಟಿ ಐಟಿಆರ್- 4 ಮತ್ತು ಶೇ. 1.03ರಷ್ಟು ಅಂದರೆ 7.48 ಲಕ್ಷ ಐಟಿಆರ್ -5ರಿಂದ ಐಟಿಆರ್ -7 ಅನ್ನು ಸಲ್ಲಿಸಲಾಗಿದೆ. ಈ ಐಟಿಆರ್‌ಗಳಲ್ಲಿ ಶೇ. 43.82ಕ್ಕಿಂತ ಹೆಚ್ಚು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಐಟಿಆರ್ ಸೌಲಭ್ಯವನ್ನು ಬಳಸಿಕೊಂಡು ಸಲ್ಲಿಸಲಾಗಿದೆ ಮತ್ತು ಬಾಕಿಯನ್ನು ಆಫ್‌ಲೈನ್ ಐಟಿಆರ್ ಉಪಯುಕ್ತತೆಗಳನ್ನು ಬಳಸಿ ಸಲ್ಲಿಸಲಾಗಿದೆ.

ಇದನ್ನೂ ಓದಿ: Stock Market: ಷೇರುಪೇಟೆಯಲ್ಲಿ ಭಾರೀ ಕುಸಿತ; ಸೆನ್ಸೆಕ್ಸ್‌ 700 ಅಂಕಗಳಷ್ಟು ಪತನ

ಗರಿಷ್ಠ ಫೈಲಿಂಗ್ ಅವಧಿಯಲ್ಲಿ ಇ-ಫೈಲಿಂಗ್ ಪೋರ್ಟಲ್ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು. ಐಟಿಆರ್‌ಗಳನ್ನು ಸಲ್ಲಿಸಲು ತೆರಿಗೆದಾರರಿಗೆ ತಡೆರಹಿತ ಅನುಭವವನ್ನು ನೀಡಿದೆ. ಜುಲೈ 31ರಂದು 3.2 ಕೋಟಿ ಮಂದಿ ಇದರಲ್ಲಿ ಲಾಗಿನ್ ಮಾಡಿದ್ದಾರೆ.

Continue Reading
Advertisement
Border Security Force
ಪ್ರಮುಖ ಸುದ್ದಿ30 mins ago

Border Security Force : ಗಡಿಯಲ್ಲಿ ಭಯೋತ್ಪಾದನೆ ಹೆಚ್ಚಳ; ಬಿಎಸ್​ಎಫ್​ ಮುಖ್ಯಸ್ಥರನ್ನು ಹುದ್ದೆಯಿಂದ ತೆಗೆದು ಹಾಕಿದ ಕೇಂದ್ರ ಸರ್ಕಾರ

African Culture
ವಿದೇಶ1 hour ago

Breast Ironing: ಆಫ್ರಿಕಾದಲ್ಲಿದೆ ಬಿಸಿ ವಸ್ತುಗಳಿಂದ ಯುವತಿಯರ ಸ್ತನ ಚಪ್ಪಟೆಗೊಳಿಸುವ ಕ್ರೂರ ಪದ್ಧತಿ!

high-speed road corridor
ಪ್ರಮುಖ ಸುದ್ದಿ1 hour ago

High Speed Road Corridor : 8 ಹೊಸ ಹೈಸ್ಪೀಡ್​ ರೋಡ್​ ಕಾರಿಡಾರ್​​​ಗೆ ಒಪ್ಪಿಗೆ ಕೊಟ್ಟ ಕೇಂದ್ರ ಸರ್ಕಾರ

RRB ALP Recruitment
ಕರ್ನಾಟಕ1 hour ago

RRB ALP Recruitment: ರೈಲ್ವೆ ಲೋಕೋ ಪೈಲಟ್ ಹುದ್ದೆಗಳ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

Sri Vidyashreesha Theertha Swamiji ashirvachan at Vyasaraja Matha of Sosale village
ಮೈಸೂರು1 hour ago

Mysore News: ದೇವರ ಅನುಗ್ರಹ ದೊರೆತರೆ ಜೀವನದ ಎಲ್ಲ ತಾಪಗಳೂ ನಿವಾರಣೆ: ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ

Minister Shivaraj tangadagi visited and inspected Tungabhadra river side villages
ಮಳೆ1 hour ago

Koppala News: ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು; ನದಿಪಾತ್ರದ ಗ್ರಾಮಗಳಿಗೆ ತಂಗಡಗಿ ಭೇಟಿ

Space mission
ಪ್ರಮುಖ ಸುದ್ದಿ2 hours ago

Space mission : ಇಂಡೊ- ಯುಎಸ್​ ಬಾಹ್ಯಾಕಾಶ ಯಾನಕ್ಕೆ ಭಾರತದ ಶುಭಾಂಶು ಶುಕ್ಲಾ ‘ಪ್ರಧಾನ ಗಗನಯಾತ್ರಿ’

Actor Darshan
ಕರ್ನಾಟಕ2 hours ago

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸಾಕ್ಷಿ ಹೇಳದಂತೆ ಬೆದರಿಕೆ; ದರ್ಶನ್‌ ಗ್ಯಾಂಗ್ ವಿರುದ್ಧ ದೂರು

Fashion workshop
ಫ್ಯಾಷನ್2 hours ago

Fashion Workshop: ಬೆಂಗಳೂರಲ್ಲಿ ಜಪಾನಿನ ಖ್ಯಾತ ಡಿಸೈನರ್‌ ಶಿಂಗೊ ಸಾಟೊ ಫ್ಯಾಷನ್‌ ಕ್ಲಾಸ್‌!

Paris Olympics 2024
ಕ್ರೀಡೆ2 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Rain
ಮಳೆ1 day ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 day ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 day ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ3 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ3 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ4 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ4 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ5 days ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

ಟ್ರೆಂಡಿಂಗ್‌