Waqf Act: ವಕ್ಫ್‌ ಮಂಡಳಿ ಪರಮಾಧಿಕಾರಕ್ಕೆ ಮೋದಿ ಮೂಗುದಾರ; ಏನೆಲ್ಲ ತಿದ್ದುಪಡಿ? 9.4 ಲಕ್ಷ ಎಕರೆ ಯಾರ ಪಾಲು? - Vistara News

EXPLAINER

Waqf Act: ವಕ್ಫ್‌ ಮಂಡಳಿ ಪರಮಾಧಿಕಾರಕ್ಕೆ ಮೋದಿ ಮೂಗುದಾರ; ಏನೆಲ್ಲ ತಿದ್ದುಪಡಿ? 9.4 ಲಕ್ಷ ಎಕರೆ ಯಾರ ಪಾಲು?

Waqf Act: ಏನಿದು ವಕ್ಫ್‌ ಮಂಡಳಿ? ಕಾಯ್ದೆ ಏನು ಹೇಳುತ್ತದೆ? ಯಾಕಾಗಿ ಕೇಂದ್ರ ಸರ್ಕಾರ ತಿದ್ದುಪಡಿ ತರುತ್ತಿದೆ? ಇದಕ್ಕೆ ವಿರೋಧ ಏಕೆ ವ್ಯಕ್ತವಾಗುತ್ತಿದೆ? ತಿದ್ದುಪಡಿ ತಂದರೆ ಏನೆಲ್ಲ ಬದಲಾವಣೆ ಆಗಲಿದೆ? ದೇಶದಲ್ಲಿ ವಕ್ಫ್‌ ಆಸ್ತಿ ಎಷ್ಟಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಹೀಗಿದೆ…

VISTARANEWS.COM


on

Waqf Act
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ (Waqf Act) ತಿದ್ದುಪಡಿ ತರಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವು (Central Government) ಸಂಸತ್‌ನಲ್ಲಿ ವಿಧೇಯಕ ಮಂಡಿಸಲಿದೆ, ಸುಮಾರು 40 ತಿದ್ದುಪಡಿ ತರಲು ತೀರ್ಮಾನಿಸಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಏನಿದು ವಕ್ಫ್‌ ಮಂಡಳಿ? ಕಾಯ್ದೆ ಏನು ಹೇಳುತ್ತದೆ? ಯಾಕಾಗಿ ಕೇಂದ್ರ ಸರ್ಕಾರ ತಿದ್ದುಪಡಿ ತರುತ್ತಿದೆ? ಇದಕ್ಕೆ ವಿರೋಧ ಏಕೆ ವ್ಯಕ್ತವಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಕಾಯ್ದೆ? ಏನದು ಪರಮಾಧಿಕಾರ?

ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ದಾನವಾಗಿ ನೀಡಿದ ಭೂಮಿಯನ್ನು ನಿಯಂತ್ರಿಸುವ ದಿಸೆಯಲ್ಲಿ 1995ರಲ್ಲಿ ವಕ್ಫ್‌ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಮುಸ್ಲಿಂ ಕಾನೂನನ್ನು ಕೂಡ ಅನ್ವಯ ಮಾಡಲಾಗಿದೆ. ಧಾರ್ಮಿಕ ಕಾರಣಕ್ಕಾಗಿ ನೀಡಿದ ಆಸ್ತಿಯು ವಕ್ಫ್‌ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅಷ್ಟೇ ಅಲ್ಲ, ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿಯು ತನ್ನ ಆಸ್ತಿಯನ್ನು ಘೋಷಿಸುವ ಜತೆಗೆ ಅದನ್ನು ವಶಕ್ಕೆ ಪಡೆಯುವ ಪರಮಾಧಿಕಾರ ಹೊಂದಿದೆ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿದೆ.

ವಕ್ಫ್‌ ಮಂಡಳಿ ಆಸ್ತಿ ಎಷ್ಟು? ತಿದ್ದುಪಡಿ ಏಕೆ?

ವರದಿಗಳ ಪ್ರಕಾರ, ದೇಶದಲ್ಲಿ ವಕ್ಫ್‌ ಮಂಡಳಿಯು ಸುಮಾರು 8.7 ಲಕ್ಷ ಆಸ್ತಿಗಳನ್ನು ಹೊಂದಿದೆ. ಇದರ ವ್ಯಾಪ್ತಿಯು ಸುಮಾರು 9.4 ಲಕ್ಷ ಎಕರೆ ಆಗಿದೆ. 2022ರಲ್ಲಿ ಹಿಂದುಗಳೇ ಬಹುಸಂಖ್ಯಾತರಾಗಿರುವ ತಮಿಳುನಾಡಿನ ತಿರುಚೆಂದುರೈ ಎಂಬ ಹಳ್ಳಿಯನ್ನು ವಕ್ಫ್‌ ಬೋರ್ಡ್‌ ತಮ್ಮದು ಎಂದು ಘೋಷಿಸಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇನ್ನು, ಕಳೆದ ವರ್ಷ, ದೆಹಲಿ ವಕ್ಫ್‌ ಬೋರ್ಡ್‌ ಮಂಡಳಿಯ ಅಧೀನದಲ್ಲಿರುವ 123 ಆಸ್ತಿಗಳ ಪರಿಶೀಲನೆಗೆ ದೆಹಲಿ ಹೈಕೋರ್ಟ್‌ ಆದೇಶಿಸಿತ್ತು. ವಕ್ಫ್‌ ಮಂಡಳಿಯು ಇಂತಹ ವಿವಾದಿತ ಆಸ್ತಿಗಳನ್ನೇ ತುಂಬ ಹೊಂದಿದೆ. ಇಸ್ಲಾಂನಲ್ಲಿರುವ ಕೆಲ ಉಪ ಪಂಗಡಗಳೇ ವಕ್ಫ್‌ ಮಂಡಳಿಯನ್ನು ವಿರೋಧಿಸುತ್ತಿವೆ.

ಕಾಯ್ದೆಗೆ ಏನೆಲ್ಲ ತಿದ್ದುಪಡಿ?

ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಮಂಡಳಿಗೆ ಸೇರಿಸಲು ಪಾರದರ್ಶಕ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರಲ್ಲೂ, ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್‌ ಆಸ್ತಿ ಎಂದು ಘೋಷಿಸುವ ಪರಮಾಧಿಕಾರ ತೆಗೆಯಲಿದೆ. ಇನ್ನು, ವಕ್ಫ್‌ ಆಸ್ತಿಗಳ ಮೇಲೆ ನಿಗಾ ಇರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಇದುವರೆಗೆ ವಕ್ಫ್‌ ಮಂಡಳಿಯಲ್ಲಿ ಹೆಣ್ಣುಮಕ್ಕಳ ಸಹಭಾಗಿತ್ವವೇ ಇರಲಿಲ್ಲ. ಹಾಗಾಗಿ, ಪ್ರತಿಯೊಂದು ರಾಜ್ಯಗಳ ವಕ್ಫ್‌ ಮಂಡಳಿಗಳಲ್ಲಿ ಹೆಣ್ಣುಮಕ್ಕಳಿಗೂ ಸ್ಥಾನ ನೀಡುವುದು. ರಾಜ್ಯಗಳ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡುವುದು. ಕೇಂದ್ರ ಸಮಿತಿಗಳಲ್ಲೂ ಇಬ್ಬರೂ ಹೆಣ್ಣುಮಕ್ಕಳು ಇರಬೇಕು ಎಂಬ ನಿಯಮ ಜಾರಿಗೆ ತರುವುದು. ಮುಸ್ಲಿಮರು ಕೂಡ ವಕ್ಫ್‌ ಆಸ್ತಿಯನ್ನು ಸೃಷ್ಟಿಸಬಹುದು ಎಂಬ ನಿಯಮ ಜಾರಿಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗೆ ಪ್ರಸ್ತಾವನೆ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಸಾದುದ್ದೀನ್‌ ಓವೈಸಿ ವಿರೋಧ

ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ವಿರೋಧಿಸಿದ್ದಾರೆ. “ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮಂಡಳಿಯ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದೆ. ಅಷ್ಟೇ ಅಲ್ಲ, ಇದು ಧಾರ್ಮಿಕ ಸ್ವಾತಂತ್ರ್ಯದಲ್ಲಿ ಸರ್ಕಾರ ಮೂಗು ತೂರಿಸಿದಂತೆ, ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಂತೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ವಕ್ಫ್‌ ಮಂಡಳಿ ವ್ಯಾಪ್ತಿಯ ಆಸ್ತಿಗಳು ವಿವಾದಿತ ಎನಿಸಿದ್ದರೆ, ನ್ಯಾಯಾಲಯವು ಅದನ್ನು ತೀರ್ಮಾನ ಮಾಡುತ್ತದೆ. ಅದರ ಬದಲು ರಾಜಕೀಯ ಪಕ್ಷ ನೇತೃತ್ವದ ಶಾಸಕಾಂಗವೊಂದು ಹೇಗೆ ಧಾರ್ಮಿಕ ವಿಚಾರದಲ್ಲಿ ಮೂಗು ತೂರಿಸುತ್ತದೆ? ಯಾವುದೇ ಕಾರಣಕ್ಕೂ ವಕ್ಫ್‌ ಆಸ್ತಿಯನ್ನು ಕಬಳಿಸಲು ಬಿಡುವುದಿಲ್ಲ” ಎಂದು ಅಸಾದುದ್ದೀನ್‌ ಓವೈಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Waqf Board: ಜಾಮಾ ಮಸೀದಿ ಸೇರಿ ವಕ್ಫ್‌ ಬೋರ್ಡ್‌ಗೆ ಕಾಂಗ್ರೆಸ್‌ ನೀಡಿದ 123 ಆಸ್ತಿ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Independence Day 2024: ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಎದುರು ಸೋಲುವ ಭಯ; ಹಾಕಿ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಿರಲಿಲ್ಲ ಗ್ರೇಟ್‌ ಬ್ರಿಟನ್‌!

Independence Day 2024: ಸ್ವಾತಂತ್ರ್ಯ ಪೂರ್ವದಲ್ಲಿ, ಹಾಲಿ ಹಾಕಿ ಚಾಂಪಿಯನ್‌ ಆಗಿದ್ದ ಗ್ರೇಟ್‌ ಬ್ರಿಟನ್‌ 1928, 1932 ಮತ್ತು 1936ರಲ್ಲಿ ಧ್ಯಾನ್‌ ಚಂದ್‌ ನೇತೃತ್ವದ ಭಾರತೀಯ ಹಾಕಿ ತಂಡದ ಎದುರು ಸೋತು ಅವಮಾನ ಅನುಭವಿಸುವ ಭಯದಿಂದ ತನ್ನ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಲಿಲ್ಲ! ತನ್ನ ವಸಾಹತು ದೇಶವಾದ ಭಾರತದ ಎದುರು ಸೋತರೆ ಪ್ರತಿಷ್ಠೆಗೆ ಧಕ್ಕೆ ಆಗುತ್ತದೆ ಎನ್ನುವುದು ಬ್ರಿಟಿಷರ ಲೆಕ್ಕಾಚಾರವಾಗಿತ್ತು. ಕೊನೆಗೆ 1948ರ ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ಭಾರತದ ಎದುರು ಬ್ರಿಟನ್‌ ತನ್ನ ತಂಡವನ್ನು ಕಳುಹಿಸಿತು. ಆದರೆ ಈ ಕೂಟದಲ್ಲಿ ಭಾರತೀಯ ತಂಡವು ಗ್ರೇಟ್‌ ಬ್ರಿಟನ್‌ ತಂಡವನ್ನು ಹೀನಾಯವಾಗಿ ಸೋಲಿಸಿ ಚಾಂಪಿಯನ್‌ ಆಯಿತು!

VISTARANEWS.COM


on

By

Independence Day 2024
Koo

ಪ್ಯಾರಿಸ್‌ನಲ್ಲಿ ಆರಂಭವಾಗಿರುವ ಒಲಿಂಪಿಕ್ಸ್‌ನಲ್ಲಿ (paris olympics 2024) ಸರಬ್ಜೋತ್‌ ಸಿಂಗ್‌ (Bronze Medalist Sarabjot Singh), ಮನು ಭಾಕರ್​ (Bronze Medalist Manu Bhaker) ಮತ್ತು ಸ್ವಪ್ನಿಲ್‌ ಈಗಾಗಲೇ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ಹಾಗೆ ನೋಡಿದರೆ ಸ್ವಾತಂತ್ರ್ಯ ಪೂರ್ವವೇ ನಮ್ಮ ಕ್ರೀಡಾಪಟುಗಳು ಬಂಗಾರದ ಸಾಧನೆ ಮಾಡಿದ್ದರು. ಸ್ವತಂತ್ರ ಭಾರತದಲ್ಲಿ (Independence Day 2024) ನಮ್ಮ ಕ್ರೀಡಾಪಟುಗಳ ಸಾಧನೆಯೂ ಗಮನಾರ್ಹ. ಆದರೆ ತೀರಾ ಆಶಾದಾಯಕವೇನೂ ಅಲ್ಲ. ಭಾರತ ಒಲಿಂಪಿಕ್ ಇತಿಹಾಸದಲ್ಲಿ ಇದುವರೆಗೆ 10 ಚಿನ್ನದ ಪದಕಗಳು ಸೇರಿ ಒಟ್ಟು 35 ಪದಕಗಳನ್ನು ಗೆದ್ದಿದೆ. ಆ ಸುವರ್ಣ ಕ್ಷಣ ಯಾವುದು, ಹೇಗಿತ್ತು ಎನ್ನುವ ಕುರಿತು ಮಾಹಿತಿ ಇಲ್ಲಿದೆ. ವಿಶೇಷವೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ, ಹಾಲಿ ಹಾಕಿ ಚಾಂಪಿಯನ್‌ ಆಗಿದ್ದ ಗ್ರೇಟ್‌ ಬ್ರಿಟನ್‌ 1928, 1932 ಮತ್ತು 1936ರಲ್ಲಿ ಧ್ಯಾನ್‌ ಚಂದ್‌ ನೇತೃತ್ವದ ಭಾರತೀಯ ಹಾಕಿ ತಂಡದ ಎದುರು ಸೋತು ಅವಮಾನ ಅನುಭವಿಸುವ ಭಯದಿಂದ ತನ್ನ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಲಿಲ್ಲ! ತನ್ನ ವಸಾಹತು ದೇಶವಾದ ಭಾರತದ ಎದುರು ಸೋತರೆ ಪ್ರತಿಷ್ಠೆಗೆ ಧಕ್ಕೆ ಆಗುತ್ತದೆ ಎನ್ನುವುದು ಬ್ರಿಟಿಷರ ಲೆಕ್ಕಾಚಾರವಾಗಿತ್ತು. ಕೊನೆಗೆ 1948ರ ಒಲಿಂಪಿಕ್ಸ್‌ನಲ್ಲಿ ಸ್ವತಂತ್ರ ಭಾರತದ ಎದುರು ಬ್ರಿಟನ್‌ ತನ್ನ ತಂಡವನ್ನು ಕಳುಹಿಸಿತು. ಆದರೆ ಈ ಕೂಟದಲ್ಲಿ ಭಾರತೀಯ ತಂಡವು ಗ್ರೇಟ್‌ ಬ್ರಿಟನ್‌ ತಂಡವನ್ನು ಹೀನಾಯವಾಗಿ ಸೋಲಿಸಿ ಚಾಂಪಿಯನ್‌ ಆಯಿತು! 1928ರಲ್ಲಿ ಮೊದಲ ಬಾರಿ ಭಾರತೀಯ ಹಾಕಿ ತಂಡ ಮೊದಲ ಬಾರಿ ಒಲಿಂಪಿಕ್ಸ್‌ ಪ್ರವೇಶಿಸಿತ್ತು. ಗಮನಾರ್ಹ ಸಂಗತಿ ಎಂದರೆ ಈಗ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ ‌‌ನಲ್ಲಿ ಭಾರತೀಯ ಹಾಕಿ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್‌‌ನನ್ನು ರೋಚಕವಾಗಿ ಸೋಲಿಸಿ ಸೆಮಿ ಫೈನಲ್‌‌ಗೆ ಲಗ್ಗೆ ಹಾಕಿದೆ.

ಜಾಗತಿಕ ಕ್ರೀಡಾಕೂಟವಾದ ಒಲಿಂಪಿಕ್ಸ್​ನಲ್ಲಿ ಭಾರತ ಇದುವರೆಗೂ ಹೆಚ್ಚಿನ ಪದಕ ಗೆದ್ದಿಲ್ಲ. ಆದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆಯನ್ನು ಭಾರತ ತಂಡ ಇನ್ನೂ ಉಳಿಸಿಕೊಂಡಿದೆ.

Independence Day 2024
Independence Day 2024


1928ರಲ್ಲಿ ಮೊದಲ ಚಿನ್ನ

1928ರಲ್ಲಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಹಾಕಿ ಸ್ವರ್ಣ ಯುಗ ಆರಂಭವಾಯಿತು. ಮುಂದೆ ಮೂರು ದಶಕಗಳ ಕಾಲ ಇದು ಮುಂದುವರಿಯಿತು. ಹಾಲೆಂಡ್ ತಂಡವನ್ನು 6-0 ಅಂತರದಿಂದ ಸೋಲಿಸುವ ಮೂಲಕ ಭಾರತೀಯರು ಹಾಕಿಯಲ್ಲಿ ಚೊಚ್ಚಲ ಒಲಿಂಪಿಕ್ ಚಿನ್ನ ಗೆದ್ದರು. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಭಾರತ ಬಾರಿಸಿದ 29 ಗೋಲುಗಳಲ್ಲಿ 14 ಗೋಲುಗಳನ್ನು ಧ್ಯಾನ್ ಚಂದ್ ಅವರೇ ಹೊಡೆದಿದ್ದರು. ಈ ಒಲಿಂಪಿಕ್‌ಗೆ ಗ್ರೇಟ್ ಬ್ರಿಟನ್ ತನ್ನ ಹಾಕಿ ತಂಡವನ್ನು ಕಳುಹಿಸರಲಿಲ್ಲ. ಏಕೆಂದರೆ ಒಲಿಂಪಿಕ್ಸ್‌ಗೆ ಸ್ವಲ್ಪ ಮೊದಲು ಗ್ರೇಟ್ ಬ್ರಿಟನ್ ಭಾರತದ ಎದುರು 4-0 ಅಂತರದಿಂದ ಸೋಲಿಸಲ್ಪಟ್ಟಿತು. ಇದು ‘ವಸಾಹತುಶಾಹಿಗಳು’ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ‘ವಸಾಹತು’ವನ್ನು ಕಳೆದುಕೊಳ್ಳುವ ಭಯದಲ್ಲಿದೆ ಎಂಬ ಚರ್ಚೆ ಹುಟ್ಟು ಹಾಕಿತ್ತು. ಈ ಮುಜುಗರವೇ ಬೇಡ ಎಂದು ಗ್ರೇಟ್‌ ಬ್ರಿಟನ್‌ ಹಾಕಿ ತಂಡವನ್ನೇ ಕಳುಹಿಸಿರಲಿಲ್ಲ ಎನ್ನಲಾಗುತ್ತದೆ!

1932ರಲ್ಲಿ ಎರಡನೇ ಪದಕ

1928ರಲ್ಲಿ ಭಾರತ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ಮಾತ್ರ ಲಾಸ್ ಏಂಜಲೀಸ್ ಕ್ರೀಡಾಕೂಟದಲ್ಲಿ ಹಾಕಿ ಗೌರವಕ್ಕಾಗಿ ಪ್ರವೇಶ ಪಡೆಯಿತು. ಇದರಲ್ಲಿ ಭಾರತೀಯರು ಜಪಾನ್ ಅನ್ನು 11- 1ರಿಂದ ಸೋಲಿಸಿ ಬಳಿಕ ಯುನೈಟೆಡ್ ಸ್ಟೇಟ್ ಅನ್ನು 24- 1ರಿಂದ ಪರಾಭವಗೊಳಿಸಿ ಮತ್ತೊಂದು ಚಿನ್ನದ ಪದಕವನ್ನು ಮಡಿಲಿಗೆ ಹಾಕಿಕೊಂಡಿತ್ತು.

Independence Day 2024
Independence Day 2024


1936ರಲ್ಲಿ ಗೋಲ್ಡನ್ ಹ್ಯಾಟ್ರಿಕ್

1928 ಮತ್ತು 1932ರಲ್ಲಿ ಹಾಕಿ ಜಗತ್ತನ್ನು ಭಾರತ ಸಮಗ್ರವಾಗಿ ಗೆದ್ದಿದ್ದರೂ, 1936ರಲ್ಲಿ ಬರ್ಲಿನ್ ಕ್ರೀಡಾಕೂಟ ವಿಶೇಷವಾಗಿತ್ತು. ಧ್ಯಾನ್ ಚಂದ್ ನೇತೃತ್ವದಲ್ಲಿ ಭಾರತೀಯರು ಆ ಬಾರಿಯೂ ಸವಾಲನ್ನು ಎದುರಿಸಿದರು. ಜರ್ಮನಿಯನ್ನು 8-1ರಿಂದ ಸೋಲಿಸಿ ಸತತ ಮೂರನೇ ಒಲಿಂಪಿಕ್ ಚಿನ್ನವನ್ನು ಗೆದ್ದರು.

Independence Day 2024
Independence Day 2024


1948ರಲ್ಲಿ ಸ್ವತಂತ್ರ ಭಾರತದ ಮೊದಲ ಚಿನ್ನ

ಭಾರತವು ವಸಾಹತುಶಾಹಿಯಾಗಿ ಉಳಿಯುವವರೆಗೂ ಒಲಿಂಪಿಕ್ ಹಾಕಿಯಿಂದ ದೂರ ಉಳಿದಿದ್ದ ಗ್ರೇಟ್ ಬ್ರಿಟನ್ ಸ್ವತಂತ್ರ ಭಾರತವನ್ನು ಎದುರಿಸಲು ಸಜ್ಜಾಯಿತು. ಈ ಸಂದರ್ಭದಲ್ಲೂ ಭಾರತವು ಬ್ರಿಟಿಷರನ್ನು 4-0 ಗೋಲುಗಳಿಂದ ಸೋಲಿಸಿ ಹಾಕಿ ಯುದ್ಧವನ್ನು ಗೆದ್ದಿತು. ಕೆಸರುಮಯವಾದ ಟರ್ಫ್ ಮತ್ತು ಹಗುರವಾದ ಮಳೆಯ ಕಾರಣದಿಂದ ಈ ಆಟ ಸಾಕಷ್ಟು ಕಠಿಣ ಸವಾಲನ್ನು ಒಡ್ಡಿತ್ತು. ಆದರೂ ಭಾರತೀಯರು ತಮ್ಮ ಅತ್ಯುತ್ತಮ ಚೆಂಡಿನ ನಿಯಂತ್ರಣ, ನಿಖರವಾದ ಪಾಸಿಂಗ್ ಮತ್ತು ಬುದ್ಧಿವಂತ ಆಟದಿಂದ ಬ್ರಿಟಿಷ್ ತಂಡವನ್ನು ಸೋಲಿಸಿ ಚಾರಿತ್ರಿಕ ಜಯ ದಾಖಲಿಸಿತು.

1952ರಲ್ಲಿ ಬಲ್ಬೀರ್ ಮ್ಯಾಜಿಕ್

ಹಾಲೆಂಡ್ ವಿರುದ್ಧದ 1952ರ ಹಾಕಿ ಫೈನಲ್ ಎರಡು ಕಾರಣಗಳಿಗಾಗಿ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ಮೊದಲನೆಯದಾಗಿ ಮಳೆಯು ನೆಲವನ್ನು ತೇವಗೊಳಿಸಿದ್ದು ಮಾತ್ರವಲ್ಲ ಹೆಚ್ಚು ಜಾರುವಂತೆ ಮಾಡಿತ್ತು. ಪರಿಸ್ಥಿತಿಗಳು ಭಾರತೀಯರಿಗಿಂತ ಡಚ್ಚರಿಗೆ ಹೆಚ್ಚು ಅನುಕೂಲಕರವೆಂದು ನಿರೀಕ್ಷಿಸಲಾಗಿತ್ತು. ಎರಡನೆಯದಾಗಿ ಭಾರತೀಯರು ಬಲ್ಬೀರ್ ಸಿಂಗ್ ಸೀನಿಯರ್ ಮೇಲೆ ಹೆಚ್ಚು ಅವಲಂಬಿತರಾಗಿದ್ದರು. ಆದರೆ ಭಾರತೀಯರು ಫೈನಲ್‌ನಲ್ಲಿ 3- 1ರಿಂದ ಹಾಲೆಂಡ್ ಅನ್ನು ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಬಲ್ಬೀರ್ ಸಿಂಗ್ ಸೀನಿಯರ್ ಮತ್ತೊಮ್ಮೆ ತಾರೆಯಾದರು. 13 ಭಾರತೀಯ ಗೋಲುಗಳಲ್ಲಿ 9 ಗೋಲುಗಳನ್ನು ಅವರೇ ಹೊಡೆದಿದ್ದರು.

ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಪದಕ ಜಯಿಸಿದ್ದು 1952ರಲ್ಲಿ. ಮಹಾರಾಷ್ಟ್ರದ ಖಾಸಾಬಾ ದಾದಾ ಸಾಹೆಬ್‌ ಜಾಧವ್‌ ಕುಸ್ತಿಯ ಫ್ರೀಸ್ಟೈಲ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದರು. ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತದ ಕ್ರೀಡಾಪಟುವೊಬ್ಬರು ವೈಯಕ್ತಿಕ ವಿಭಾಗದಲ್ಲಿ ಗೆದ್ದ ಮೊದಲ ಪದಕ ಇದಾಗಿತ್ತು.

Independence Day 2024
Independence Day 2024


1956ರಲ್ಲಿ ಐದನೇ ಚಿನ್ನ

ಮೆಲ್ಬೋರ್ನ್‌ನಲ್ಲಿ ನಡೆದ ಫೈನಲ್‌ ಪಂದ್ಯವು ಪಾಕಿಸ್ತಾನದ ವಿರುದ್ಧ ಒಲಿಂಪಿಕ್‌ ಹಂತದಲ್ಲಿ ಭಾರತದ ಮೊದಲ ಕೂಟವಾಗಿತ್ತು. ಎರಡೂ ತಂಡಗಳ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆಯ ತೂಗುಕತ್ತಿ ತೂಗುತ್ತಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಬೆಳ್ಳಿ ಪದಕ ಗೆದ್ದು ಬೀಗಿದರೆ, ಭಾರತವು 1-0 ಗೋಲುಗಳ ಕಿರಿದಾದ ಅಂತರದಿಂದ ಚಿನ್ನವನ್ನು ಗೆದ್ದುಕೊಂಡಿತ್ತು.

1964ರಲ್ಲಿ ಮರಳಿ ಚಿನ್ನ

ಭಾರತವು ಪಾಕಿಸ್ತಾನವನ್ನು 1-0 ಗೋಲುಗಳಿಂದ ಸೋಲಿಸುವ ಮೂಲಕ ವಿಶ್ವ ಹಾಕಿಯಲ್ಲಿ ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಿತು. ಎರಡು ಉತ್ತಮ ತಂಡಗಳು ಗೆಲ್ಲಲು ಸಾಕಷ್ಟು ಪರಿಶ್ರಮ ಪಟ್ಟಿತು. ಭಾರತವು ಅಂತಿಮವಾಗಿ ಕಡಿಮೆ ಅಂತರದಿಂದ ವಿಜಯಿಯಾಯಿತು.

Independence Day 2024
Independence Day 2024


1980ರಲ್ಲಿ ಕೊನೆಯ ಹಾಕಿ ಚಿನ್ನ

ಭಾರತ 16 ವರ್ಷಗಳ ಅನಂತರ ಮಾಸ್ಕೋದಲ್ಲಿ 4– 3 ಗೋಲುಗಳಿಂದ ಸ್ಪೇನ್ ಅನ್ನು ಸೋಲಿಸಿ ಚಿನ್ನವನ್ನು ಗೆದ್ದುಕೊಂಡಿತು. ಆದರೆ ಇದು ಒಲಂಪಿಕ್ ಹಾಕಿಯಲ್ಲಿ ಭಾರತದ ಕೊನೆಯ ಚಿನ್ನದ ಪದಕವಾಯಿತು.

1996ರಲ್ಲಿ ಟೆನಿಸ್​ನಲ್ಲಿ ಮೊದಲ ಪದಕ

1996ರಲ್ಲಿ ಅಮೆರಿಕದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ ಏಕೈಕ ಕಂಚಿನ ಪದಕ ಜಯಿಸಿತ್ತು. ಲಿಯಾಂಡರ್‌ ಪೇಸ್‌ ಟೆನಿಸ್‌ ಸಿಂಗಲ್ಸ್‌ ವಿಭಾಗದಲ್ಲಿ ಕಂಚು ಜಯಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ 44 ವರ್ಷಗಳ ಬಳಿಕ ಭಾರತಕ್ಕೆ ಒಲಿದ ಪದಕ ಇದಾಗಿತ್ತು. ಇಲ್ಲಿ ಲಿಯಾಂಡರ್‌ ಪೇಸ್‌ ಬ್ರೆಜಿಲ್‌ನ ಫೆರ್ನಾಂಡೊ ಮೆಲಿಗಿನಿ ಅವರನ್ನು ಮಣಿಸಿ ಪದಕಕ್ಕೆ ಕೊರಳೊಡ್ಡಿದ್ದರು.

Independence Day 2024
Independence Day 2024


2000ರಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ

2000ದಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಆಂಧ್ರ ಪ್ರದೇಶ ಮೂಲದ ಕರ್ಣಂ ಮಲ್ಲೇಶ್ವರಿ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊಟ್ಟ ಮೊದಲ ಮಹಿಳಾ ಕ್ರೀಡಾಪಟು ಎನಿಸಿಕೊಂಡಿದ್ದರು. 69 ಕೆಜಿ ವಿಭಾಗದಲ್ಲಿ ಮಲ್ಲೇಶ್ವರಿ ಈ ಸಾಧನೆ ಮಾಡಿದ್ದರು.

2004ರಲ್ಲಿ ಒಂದು ಪದಕ

2004ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಏಕೈಕ ಪದಕ ಮಾತ್ರ ಲಭಿಸಿತು. ರಾಜಸ್ಥಾನದ ಶೂಟರ್‌ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಪುರುಷರ ಡಬಲ್‌ ಟ್ರಾಯಪ್‌ ವಿಭಾಗದಲ್ಲಿ ಬೆಳ್ಳಿ ಪದಕಕ್ಕೆ ಗುರಿ ಇರಿಸಿ ಈ ಪದಕ ತಂದುಕೊಟ್ಟಿದ್ದರು. ಈ ಸಾಧನೆಯೊಂದಿಗೆ ವೈಯಕ್ತಿಕ ವಿಭಾಗದಲ್ಲಿ ರಜತ ಗೆದ್ದ ಮೊದಲ ಭಾರತೀಯರೆನಿಸಿದರು.

Independence Day 2024
Independence Day 2024


2008ರಲ್ಲಿ ಮೊದಲ ವೈಯಕ್ತಿಕ ಚಿನ್ನ

ಖಾಸಾಬಾ ದಾದಾ ಸಾಹೇಬ್‌ ಜಾಧವ್‌ ಬಳಿಕ 2008ರ ಚೀನದ ಬೀಜಿಂಗ್ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಅಭಿನವ್ ಬಿಂದ್ರಾ ವೈಯಕ್ತಿಕ ಚಿನ್ನದ ಕನಸು ನನಸು ಮಾಡಿದರು. ಬಿಂದ್ರಾ ಅವರ ಸಾಧನೆ ರಾತ್ರೋರಾತ್ರಿ ಅವರನ್ನು ದೇಶಾದ್ಯಂತ ಪ್ರಸಿದ್ಧರನ್ನಾಗಿ ಮಾಡಿತು.

ಒಲಿಂಪಿಕ್ಸ್‌ ಭಾರತದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಕೂಟ ಇದಾಗಿದೆ. ಸ್ವತಂತ್ರ ಭಾರತದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೊದಲ ಸ್ವರ್ಣ ಸಾಧನೆ ಮಾಡಿದ್ದು ಇದೇ ಕೂಟದಲ್ಲಿ. ಅಲ್ಲದೆ ಮೊಟ್ಟ ಮೊದಲ ಬಾರಿಗೆ ಒಂದೇ ಕೂಟದಲ್ಲಿ 3 ಪದಕಗಳು ಭಾರತದ ಪಾಲಾಗಿದ್ದವು.

ಅಭಿನವ್‌ ಬಿಂದ್ರ 10 ಮೀ. ಏರ್‌ ರೈಫ‌ಲ್‌ನಲ್ಲಿ ಸ್ವರ್ಣ ಗೆದ್ದು ಇತಿಹಾಸ ನಿರ್ಮಿಸಿದ್ದರು. ಕುಸ್ತಿಪಟು ಸುಸೀಲ್‌ ಕುಮಾರ್‌ ಪುರುಷರ ಕುಸ್ತಿಯ 75 ಕೆಜಿ ವಿಭಾಗದಲ್ಲಿ ಕಂಚು ಗೆದ್ದರೆಮ ಬಾಕ್ಸಿಂಗ್‌ನಲ್ಲಿ ವಿಜೇಂದರ್‌ ಸಿಂಗ್‌ 66 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದರು.

2012ರಲ್ಲಿ ಆರು ಪದಕ

ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಅಮೋಘ ಸಾಧನೆಯೊಂದನ್ನು ಮಾಡಿತು. ಶೂಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌, ಕ್ಷೇತ್ರಕ್ಕೆ ಹೊಸ ಆಯಾಮ ಸೃಷ್ಟಿಸಿದ ಕೂಟ ಇದಾಗಿತ್ತು. 2 ಬೆಳ್ಳಿ ಹಾಗೂ 4 ಕಂಚಿನ ಪದಕಗಳು ಭಾರತದ ಪಾಲಾದವು. ಶೂಟಿಂಗ್‌ನಲ್ಲಿ ವಿಜಯ್‌ ಕುಮಾರ್‌ 25 ಮೀ. ರ್ಯಾಪಿಟ್‌ ಫೈರ್‌ ಪಿಸ್ತೂಲ್‌ನಲ್ಲಿ ಬೆಳ್ಳಿ ಗೆದ್ದರೆ, ಸುಶೀಲ್‌ ಕುಮಾರ್‌ ಪುರುಷರ 66 ಕೆಜಿ ಫ್ರೀ ಸ್ಟೈಲ್‌ನಲ್ಲಿ ರಜತ ಸಾಧನೆಯೊಂದಿಗೆ ಸತತ 2ನೇ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದರು. ಮತ್ತೊಬ್ಬ ಶೂಟರ್‌ ಗಗನ್‌ ನಾರಂಗ್‌ (10 ಮೀ ಏರ್‌ ರೈಫ‌ಲ್‌), ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌, ಬಾಕ್ಸರ್‌ ಮೇರಿ ಕೋಮ್‌ ಹಾಗೂ ಮತ್ತೊಬ್ಬ ಕುಸ್ತಿಪಟು ಯೋಗೇಶ್ವರ್‌ ದತ್‌ ಕಂಚಿನ ಪದಕ ಜಯಿಸಿದರು.

2016ರಲ್ಲಿ ಬೆಳ್ಳಿ, ಕಂಚು

ಲಂಡನ್‌ನಲ್ಲಿ ಅರ್ಧ ಡಜನ್‌ ಪದಕ ಗೆದ್ದಿದ್ದ ಭಾರತದ ಕ್ರೀಡಾಪಟುಗಳ ಮೇಲೆ ರಿಯೋ ಒಲಿಂಪಿಕ್ಸ್‌ನಲ್ಲಿ ಅಪಾರ ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ, ಈ ಎಲ್ಲ ನಿರೀಕ್ಷೆ ಹುಸಿಗೊಂಡಿತು.

ಭಾರತ ಕೇವಲ 2 ಪದಕಕ್ಕೆ ಮಾತ್ರ ಸೀಮಿತವಾಯಿತು. ಭಾರತದ ಸ್ಟಾರ್‌ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಕೊನೆಯ ಹಂತದಲ್ಲಿ ಎಡವಿ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಆದರೆ, ಸಿಂಧು ಬ್ಯಾಡ್ಮಿಂಟನ್‌ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಮೊದಲ ಭಾರತೀಯ ಶಟ್ಲರ್‌ ಎನಿಸಿಕೊಂಡರು. ಇತ್ತೀಚೆಗೆ ಕುಸ್ತಿಗೆ ನಿವೃತ್ತಿ ಹೇಳಿದ್ದ ಸಾಕ್ಷಿ ಮಲಿಕ್‌ ಕೂಡ ಈ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಜಯಿಸಿದ್ದರು.

Independence Day 2024
Independence Day 2024


2021ರಲ್ಲಿ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಚಿನ್ನ

ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಹಲವು ಕಟ್ಟುಪಾಡುಗಳ ನಡುವೆ ಜಪಾನ್​ನ ಟೋಕಿಯೊದಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಸ್ಟಾರ್​ ಜಾವೆಲಿನ್​ ಎಸೆತಗಾರ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದು ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಕ್ರೀಡಾ ಕೂಟದಲ್ಲಿ ಭಾರತ ಒಟ್ಟು 7 ಪದಕ ಜಯಿಸಿತ್ತು. ಇದರಲ್ಲಿ ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕ ಒಳಗೊಂಡಿತ್ತು. ಒಟ್ಟಾರೆಯಾಗಿ ಭಾರತ ಪದಕ ಪಟ್ಟಿಯಲ್ಲಿ 48ನೇ ಸ್ಥಾನ ಪಡೆದಿತ್ತು. 

ಇದನ್ನೂ ಓದಿ: Manu Bhaker: ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್

ಪಿ ವಿ ಸಿಂಧು ಕಂಚಿನ ಪದಕ ಜಯಿಸಿ ಸತತವಾಗಿ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಸಾಧನೆ ಮಾಡಿದರು. ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು 1980ರ ಬಳಿಕ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯಲ್ಲಿ ಪದಕ ಗೆದ್ದು ಸಂಭ್ರಮಿಸಿತ್ತು.

ಬಾಕ್ಸರ್​ ಲವ್ಲೀನಾ ಬೋರ್ಗೊಹೈನ್ ಕಂಚು ಗೆದ್ದರೆ, ಮೀರಾಬಾಯಿ ಚಾನು ಬೆಳ್ಳಿಯೊಂದಿಗೆ ಮಿನುಗಿದರು. ಕುಸ್ತಿಪಟು ರವಿ ದಹಿಯಾ ಬೆಳ್ಳಿ, ಬಜರಂಗ್ ಪೂನಿಯಾ ಕಂಚು ಗೆದ್ದರು.​

Continue Reading

ವಿದೇಶ

Israel Attack: ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿದ ಇಸ್ರೇಲ್‌ ಗುಪ್ತದಳ! ಪ್ಯಾಲೆಸ್ತೀನ್‌ ಕಮಾಂಡರ್‌ ನರಳಿ ನರಳಿ ಸತ್ತ! ಸೇಡಿನ interesting story

ಇಸ್ಮಾಯಿಲ್ ಹನಿಯೆಹ್ ಮತ್ತು ಫುವಾಡ್ ಶುಕರ್ ಎಂಬ ಹಮಾಸ್‌ ಉಗ್ರ ನಾಯಕರ ಮೇಲೆ ದಾಳಿ ನಡೆಸಿ ಇಸ್ರೇಲ್ (Israel Attack) ಕೊಂದು ಹಾಕಿದೆ. ಈ ಮೂಲಕ ತನ್ನ ಶತ್ರುವನ್ನು ಎಲ್ಲಿ ಬೇಕಾದರೂ ಕೊಲ್ಲಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. 1978ರಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಣ್ಣ ಸುಳಿವನ್ನೂ ಬಿಟ್ಟು ಕೊಡದ ಹಾಗೆ ಇಸ್ರೇಲ್‌ ಗುಪ್ತಚರ ದಳ ʼಮೊಸಾದ್‌ʼ ಪ್ಯಾಲೆಸ್ತೀನ್‌ ಕಮಾಂಡರ್‌ನನ್ನು ಅತ್ಯಂತ ಚಾಣಾಕ್ಷತನದಿಂದ ಕೊಂದು ಹಾಕಿತ್ತು. ಈ ಕುರಿತ ರೋಚಕ ಮಾಹಿತಿ ಇಲ್ಲಿದೆ.

VISTARANEWS.COM


on

By

Israel Attack
Koo

ಇಬ್ಬರು ದೊಡ್ಡ ಶತ್ರುಗಳನ್ನು ಇಸ್ರೇಲ್ (Israel Attack) ಕೇವಲ ಹನ್ನೆರಡು ಗಂಟೆಗಳ ಅವಧಿಯಲ್ಲಿ ಕೊಂದು ಹಾಕಿದೆ. ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್‌ನ ಉನ್ನತ ನಾಯಕ ಇಸ್ಮಾಯಿಲ್ ಹನಿಯೆಹ್ (Ismail Haniyeh) ಮತ್ತು ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಹಿಜ್ಬುಲ್ಲಾ ಕಮಾಂಡರ್ ಫುವಾಡ್ ಶುಕರ್ (Fuad Shukar) ಮೇಲೆ ವೈಮಾನಿಕ ದಾಳಿ ನಡೆಸಿ ಕೊಂದು ಹಾಕಲಾಗಿದೆ. ಈ ಎರಡೂ ಘಟನೆಗಳ ಹಿಂದೆ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ (Israel’s intelligence agency Mossad) ಕೈವಾಡ ಇರುವುದು ಅತ್ಯಂತ ಸ್ಪಷ್ಟವಾಗಿದೆ.

ಇಸ್ರೇಲ್ ತನ್ನ ಶತ್ರುವನ್ನು ಎಲ್ಲಿ ಬೇಕಾದರೂ ಕೊಲ್ಲಬಹುದು ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ. 1978ರಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ಸಣ್ಣ ಸುಳಿವನ್ನೂ ಬಿಟ್ಟು ಕೊಡದ ಹಾಗೆ ʼಮೊಸಾದ್‌ʼ ಪ್ಯಾಲೇಸ್ಟಿನಿಯನ್ ಕಮಾಂಡರ್ ವಾಡಿ ಹಡ್ಡಾಡ್‌ನನ್ನು (Wadie Haddad) ಟೂತ್‌ಪೇಸ್ಟ್‌ನಲ್ಲಿ ವಿಷ ಬೆರೆಸಿ ಕೊಂದು ಹಾಕಿತ್ತು!

ಪ್ಯಾಲೆಸ್ತೀನ್‌ ವಿಮೋಚನೆಗಾಗಿ ಪಾಪ್ಯುಲರ್ ಫ್ರಂಟ್ ಎಂಬ ಪ್ಯಾಲೆಸ್ತೀನ್ ಸಂಘಟನೆಯ ಮುಖ್ಯಸ್ಥನಾಗಿದ್ದ ವಾಡಿ ಹಡ್ಡಾಡ್‌ನನ್ನು 1978ರಲ್ಲಿ ಕೊಲ್ಲಲಾಯಿತು. ಬಾಗ್ದಾದ್‌ನಲ್ಲಿ ಊಟ ಸೇವಿಸಿದ ಬಳಿಕ ಆತ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸಿದ್ದ. ಅನಂತರ ಅವನಿಗೆ ಹಸಿವು ಕಡಿಮೆಯಾಗಿತ್ತು. ಸುಮಾರು 25 ಪೌಂಡ್‌ಗಳಿಗಿಂತ ಹೆಚ್ಚು ತೂಕವನ್ನು ಕಳೆದುಕೊಂಡ. ಆತನ ಸ್ಥಿತಿ ಗಂಭೀರವಾದಾಗ ಇರಾನಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ವೈದ್ಯರು ಹೆಪಟೈಟಿಸ್ ಅನ್ನು ಶಂಕಿಸಿದರು. ಶಕ್ತಿಯುತವಾದ ಪ್ರತಿಜೀವಕಗಳನ್ನು ನೀಡಲಾಯಿತು. ಅತ್ಯುತ್ತಮ ವೈದ್ಯರು ಆತನಿಗೆ ಚಿಕಿತ್ಸೆ ನೀಡಿದರು. ಆದರೆ ಹಡ್ದಾಡ್‌ನ ಸ್ಥಿತಿ ಸುಧಾರಿಸಲಿಲ್ಲ. ಕೂದಲು ಉದುರಲಾರಂಭಿಸಿತು. ಜ್ವರ ಕಡಿಮೆಯಾಗಲೇ ಇಲ್ಲ. ವಿಷ ಉಣಿಸಿರುವ ಶಂಕೆ ವ್ಯಕ್ತವಾದರೂ ಅದು ಯಾವುದು, ಹೇಗೆ ಅದನ್ನು ನೀಡಲಾಯಿತು ಎಂಬುದನ್ನು ವೈದ್ಯರಿಗೆ ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.

ಪ್ಯಾಲೆಸ್ತೀನ್‌ ಲಿಬರೇಶನ್ ಆರ್ಗನೈಸೇಶನ್‌ನ ನಾಯಕ ಯಾಸರ್ ಅರಾಫತ್, ಪೂರ್ವ ಜರ್ಮನಿಯ ರಹಸ್ಯ ದಳವಾದ ʼಸ್ಟಾಸಿʼಯಿಂದ ಸಹಾಯ ಪಡೆಯಲು ಸಹಾಯಕರನ್ನು ಕೇಳಿದರು. ಇದು ಸೋವಿಯತ್ ರಷ್ಯಾ ಪ್ಯಾಲೆಸ್ತೀನ್‌ ಹೋರಾಟಗಾರರಿಗೆ ಸಹಾಯ ಮಾಡಿದ ಸಮಯವಾಗಿತ್ತು. ಅವರಿಗೆ ಪಾಸ್‌ಪೋರ್ಟ್‌, ಆಶ್ರಯ, ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರವನ್ನು ಒದಗಿಸಿತು.

Israel Attack
Israel Attack


ಅರಾಫತ್‌ನ ಸಹಾಯಕನು ಪೂರ್ವ ಜರ್ಮನ್ ರಹಸ್ಯ ಸೇವೆ ಅಥವಾ ಸ್ಟಾಸಿಯನ್ನು ತಲುಪಿದಾಗ ಹಡ್ಡಾಡ್‌ನನ್ನು 1978ರ ಮಾರ್ಚ್ 19ರಂದು ಇರಾಕ್‌ ರಾಜಧಾನಿ ಬಾಗ್ದಾದ್‌ನಿಂದ ಪೂರ್ವ ಬರ್ಲಿನ್‌ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಗುಪ್ತಚರ ಮತ್ತು ರಹಸ್ಯ ಸೇವೆಯ ಸಮುದಾಯದ ಸದಸ್ಯರು ಚಿಕಿತ್ಸೆ ನೀಡಿದರು. ಅದಾಗಲೇ ಎರಡು ತಿಂಗಳ ನೋವಿನಿಂದ ಒದ್ದಾಡಿದ್ದ ಹಡ್ಡಾಡ್‌ಗೆ ಏನಾಗಿದೆ ಎಂಬುದನ್ನು ಪತ್ತೆ ಹಚ್ಚಲು ಅಲ್ಲೂ ಸಾಧ್ಯವಾಗಲಿಲ್ಲ.

ಆದರೆ ಬಾಗ್ದಾದ್‌ನಿಂದ ಏರ್‌ಲಿಫ್ಟ್‌ ಆಗುತ್ತಿರುವಾಗ ಹಡ್ಡಾಡ್‌ನ ಅಗತ್ಯ ವಸ್ತುಗಳನ್ನು ಪ್ಯಾಕ್ ಮಾಡಿದಾಗ ಅದರಲ್ಲಿ ಟೂತ್‌ಪೇಸ್ಟ್‌ನ ಟ್ಯೂಬ್ ಒಂದು ಪತ್ತೆಯಾಯಿತು. ನಲವತ್ತೊಂದು ವರ್ಷದ ಹಡ್ಡಾಡ್‌ನನ್ನು ಪೂರ್ವ ಬರ್ಲಿನ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಅದಾಗಲೇ ಆತನ ದೇಹದ ವಿವಿಧ ಭಾಗಗಳಲ್ಲಿ ರಕ್ತಸ್ರಾವವಾಗುತ್ತಿತ್ತು. ಹೃದಯದ ಸುತ್ತ ಇರುವ ಪೆರಿಕಾರ್ಡಿಯಂ, ನಾಲಿಗೆ, ಪ್ಲೆರಲ್ ಪೊರೆಗಳು, ಟಾನ್ಸಿಲ್‌, ಮೂತ್ರ, ಮಲದಲ್ಲೂ ರಕ್ತ ಸೋರಿಕೆಯಾಗಿದ್ದು ಮಾತ್ರವಲ್ಲ ಪ್ಲೇಟ್ಲೆಟ್ ಸಂಖ್ಯೆ ಅಪಾಯಕಾರಿಯಾಗಿ ಕುಸಿಯಿತು.

ವೈದ್ಯರು ಆತನಿಗೆ ಸಾಧ್ಯವಿರುವ ಎಲ್ಲಾ ಪರೀಕ್ಷೆಗಳನ್ನು ನಡೆಸಿದರು. ಆದರೆ ಏನೂ ಫಲಿತಾಂಶ ಹೊರಬರಲಿಲ್ಲ. ಆತನಿಗೆ ಇಲಿ ವಿಷ ಅಥವಾ ಥಾಲಿಯಮ್ ನೀಡಲಾಗಿದೆ ಎಂದು ಊಹಿಸಲಾಯಿತು. ಆದರೆ ಇದಕ್ಕೂ ಸ್ಪಷ್ಟತೆ ಸಿಗಲಿಲ್ಲ. ಅಲ್ಲಿ ಆತ ತೀವ್ರವಾಗಿ ನೋವಿನಿಂದ ಒದ್ದಾಡುತ್ತಿದ್ದ. ಆತನ ಕಿರುಚಾಟ, ನರಳಾಟ ಆಸ್ಪತ್ರೆಯ ತುಂಬೆಲ್ಲ ಕೇಳುತ್ತಿತ್ತು. ವೈದ್ಯರು ಹಗಲು ರಾತ್ರಿ ಆತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಇಡಬೇಕಾಯಿತು.

ಅಲ್ಲಿ ಹತ್ತು ದಿನಗಳ ಕಾಲ ತೀವ್ರ ಸಂಕಟ ಅನುಭವಿಸಿ ಮಾರ್ಚ್ 29ರಂದು ಹಡ್ಡಾಡ್‌ ಸತ್ತೇ ಹೋದ. ಅನಂತರ ಸಂಪೂರ್ಣ ಶವಪರೀಕ್ಷೆ ನಡೆಸಲಾಯಿತು. ಗುಪ್ತಚರ ಸಂಸ್ಥೆ ʼಸ್ಟಾಸಿʼಯ ಫೋರೆನ್ಸಿಕ್ ತಜ್ಞ ಪ್ರೊಫೆಸರ್ ಒಟ್ಟೊ ಪ್ರೊಕೊಪ್ ಅವರು ಈ ಕುರಿತು ಮಾಹಿತಿ ನೀಡಿ, ಹಡ್ಡಾಡ್‌ ಮೆದುಳಿನ ರಕ್ತಸ್ರಾವ ಮತ್ತು ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾನೆ. ಆತನನ್ನು ಹತ್ಯೆ ಮಾಡಿರುವ ಅನುಮಾನವಿದೆ ಎಂದು ಹೇಳಿದರು.

ಇದನ್ನೂ ಓದಿ: Ismail Haniyeh Killing: ಹಮಾಸ್‌ನ ಹೊಸ ಮುಖ್ಯಸ್ಥನಾಗಿ ಖಲೀದ್‌ ಮೆಶಾಕ್‌? ಈತನ ಹಿನ್ನೆಲೆ ಏನು?

ಟೂತ್ ಪೇಸ್ಟ್‌ನಲ್ಲಿತ್ತು ವಿಷ!

ಹಡ್ಡಾಡ್‌ನ ಸಾವು ಸಹಜ ಎಂದು ಕಾಣುವಂತೆ ಮಾಡಲು ಆತ ಬಳಸುತ್ತಿದ್ದ ಟೂತ್ ಪೇಸ್ಟ್ ಅನ್ನೇ ಅಸ್ರ್ರವಾಗಿ ಬಳಸಲಾಗಿತ್ತು. ಹಡ್ಡಾಡ್ ನಿತ್ಯ ಬಳಸುವ ಟೂತ್ ಪೇಸ್ಟ್ ಅನ್ನು ವಿಷಕಾರಿ ಟೂತ್ ಪೇಸ್ಟ್ ನೊಂದಿಗೆ ಬದಲಾಯಿಸಲಾಗಿತ್ತು! ಆತನ ಮರಣದ ಬಳಿಕ ಪರೀಕ್ಷೆ ಮಾಡಿದ ಟೂತ್ ಪೇಸ್ಟ್ ಟ್ಯೂಬ್‌ನಲ್ಲಿ ವಿಷ ಕಂಡು ಬಂದಿತ್ತು. ಟೆಲ್ ಅವೀವ್‌ನ ಆಗ್ನೇಯ ಭಾಗದಲ್ಲಿರುವ ನೆಸ್ ಜಿಯೋನಾದಲ್ಲಿರುವ ಇಸ್ರೇಲ್ ಇನ್‌ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ರಿಸರ್ಚ್‌ನಲ್ಲಿ ಈ ವಿಷವನ್ನು ಅಭಿವೃದ್ಧಿಪಡಿಸಲಾಗಿತ್ತು. ಹಡ್ಡಾಡ್‌ ಹಲ್ಲುಜ್ಜುತ್ತಿದ್ದಾಗ ಈ ವಿಷವು ಅವನ ದೇಹವನ್ನು ಪ್ರವೇಶಿಸುತ್ತಿತ್ತು. ಇದು ನಿಧಾನವಾಗಿ ನಿರ್ಣಾಯಕ ಮಟ್ಟ ತಲುಪಿದಾಗ ಆತನ ಜೀವಕ್ಕೆ ಮಾರಕವಾಯಿತು. ಹೀಗೆ ಅತ್ಯಂತ ಚಾಣಾಕ್ಷತನದಿಂದ ಇಸ್ರೇಲ್‌ ಗುಪ್ತಚರ ದಳವು ತನ್ನ ವೈರಿ ʼಉಗ್ರ ನಾಯಕʼನನ್ನು ಕೊಂದು ಹಾಕಿತ್ತು!

Continue Reading

ಆರೋಗ್ಯ

In Vitro Fertilization: ಐವಿಎಫ್ ವಿಧಾನದಿಂದ ಮಕ್ಕಳಾಗುವುದು ಹೇಗೆ? ಇದಕ್ಕೆ ಎಷ್ಟು ವೆಚ್ಚವಾಗುತ್ತದೆ?

ಬಂಜೆತನದ ಸಮಸ್ಯೆಗಳನ್ನು ಎದುರಿಸುತ್ತಿರುವ ಪೋಷಕರಾಗ ಬಯಸುವ ದಂಪತಿಗೆ ಐವಿಎಫ್ (In Vitro Fertilization) ಆಶಾಕಿರಣವಾಗಿದೆ. ಆದರೆ ಚಿಕಿತ್ಸೆಯ ದುಬಾರಿ ವೆಚ್ಚದಿಂದಾಗಿ ಇದು ಕೇವಲ ಶ್ರೀಮಂತರ ಕೈಗೆ ಮಾತ್ರ ಎಟಕುವಂತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಬೇಡಿಕೆ ಪಡೆಯಲಿದೆ. ಸಾಕಷ್ಟು ದಂಪತಿ ಈ ವಿಧಾನದಿಂದ ಮಕ್ಕಳನ್ನು ಪಡೆಯುತ್ತಿದ್ದಾರೆ. ಏನಿದು ಐವಿಎಫ್? ಈ ಕುರಿತ ಸರಳ ಮಾಹಿತಿ ಇಲ್ಲಿದೆ.

VISTARANEWS.COM


on

By

In Vitro Fertilization
Koo

ತಾಯಿಯಾಗಬೇಕು (Motherhood) ಎನ್ನುವ ಕನಸು ಎಲ್ಲ ಮಹಿಳೆಯರಲ್ಲೂ ಇರುತ್ತದೆ. ಆದರೆ ಕೆಲವು ತೊಂದೆರೆಗಳಿಂದ ಕೆಲವು ಮಹಿಳೆಯರಿಗೆ ಈ ಸೌಭಾಗ್ಯ ಪ್ರಾಪ್ತವಾಗುವುದಿಲ್ಲ. ಆದರೆ ಈಗ ಬೆಳೆದಿರುವ ತಂತ್ರಜ್ಞಾನ ಬಂಜೆತನದ (Infertility) ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಆಶಾಕಿರಣವಾಗಿದೆ. ಇನ್ ವಿಟ್ರೋ ಫರ್ಟಿಲೈಸೇಶನ್ (In Vitro Fertilization) ಇತ್ತೀಚಿನ ದಿನಗಳಲ್ಲಿ ಪೋಷಕರಾಗ ಬಯಸುವ ದಂಪತಿಗೆ ವರದಾನವಾಗಿದೆ.

ಗರ್ಭಧಾರಣೆಯ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ವೈದ್ಯಕೀಯ ತಂತ್ರಜ್ಞಾನದಲ್ಲಿ ನಡೆದಿರುವ ಈ ಬೆಳವಣಿಗೆಯು ಜಾಗತಿಕ ಮರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿದೆ. ಜಾಗತಿಕವಾಗಿ ಐವಿಎಫ್ ಮಾರುಕಟ್ಟೆಯು 2026 ರ ವೇಳೆಗೆ 36.2 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಐವಿಎಫ್ ವಲಯವು ಗಮನಾರ್ಹವಾಗಿ ಬೆಳವಣಿಗೆ ಕಾಣುತ್ತಿದೆ. ಭಾರತದಲ್ಲಿ ಐವಿಎಫ್ ಚಿಕಿತ್ಸೆಗೆ ಕನಿಷ್ಠ ಸರಾಸರಿ 2 ಲಕ್ಷ ರೂ. ನಿಂದ 6 ಲಕ್ಷ ರೂ. ವರೆಗೆ ವೆಚ್ಚವಾಗುತ್ತದೆ. ಆದರೆ ಆಸ್ಪತ್ರೆಯ ಖ್ಯಾತಿ, ವೈದ್ಯರ ಅರ್ಹತೆ ಮತ್ತು ಬಂಜೆತನದ ತೀವ್ರತೆಯಂತಹ ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ.

ಭಾರತದಲ್ಲಿ ಪ್ರಸ್ತುತ ಈ ಚಿಕಿತ್ಸೆಗೆ ಗರಿಷ್ಠ ಸರಿಸುಮಾರು 5- 6 ಲಕ್ಷ ರೂ. ವೆಚ್ಚವಾಗುತ್ತಿದ್ದು, ಇದರ ಮಾರುಕಟ್ಟೆ ಮೌಲ್ಯವು 2030 ರ ವೇಳೆಗೆ 66.37 ಕೋಟಿ ರೂ. ಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ.

In Vitro Fertilization
In Vitro Fertilization


ಭಾರತದಲ್ಲಿ ಯಶಸ್ಸಿನ ಪ್ರಮಾಣ ಎಷ್ಟು?

ಪ್ರಸ್ತುತ ಭಾರತದಲ್ಲಿ ಇದರ ಯಶಸ್ಸಿನ ಪ್ರಮಾಣ ಸುಧಾರಿಸುತ್ತಿದೆ. ಪೋಷಕರ ವಯಸ್ಸನ್ನು ಆಧರಿಸಿ ಜನನ ದರಗಳು ಶೇ. 30ರಿಂದ ಶೇ. 35ರಷ್ಟಿದೆ.

ಐವಿಎಫ್ ಎಂದರೇನು?

ಐವಿಎಫ್ ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್ ಬಂಜೆತನದಿಂದ ಹೋರಾಡುತ್ತಿರುವ ವ್ಯಕ್ತಿಗಳು ಅಥವಾ ದಂಪತಿ ಮಗುವನ್ನು ಪಡೆಯಲು ಸಹಾಯ ಮಾಡುವ ವೈದ್ಯಕೀಯ ವಿಧಾನವಾಗಿದೆ. ಇದು ಮಹಿಳೆಯ ಅಂಡಾಶಯದಿಂದ ಮೊಟ್ಟೆಗಳನ್ನು ಪಡೆದು ಪ್ರಯೋಗಾಲಯದ ವ್ಯವಸ್ಥೆಯಲ್ಲಿ ವೀರ್ಯದೊಂದಿಗೆ ಅವುಗಳನ್ನು ಫಲವತ್ತಾಗಿಸಿ ಅನಂತರ ಭ್ರೂಣವನ್ನಾಗಿ ಮಾಡಿ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯು ವಿವಿಧ ಫಲವತ್ತತೆಯ ಅಡೆತಡೆಗಳನ್ನು ತಡೆಯುತ್ತದೆ.

ಹೇಗಿರುತ್ತದೆ ಐವಿಎಫ್ ಪ್ರಕ್ರಿಯೆ?

ಐವಿಎಫ್ ಪ್ರಕ್ರಿಯೆಯು ಹಲವಾರು ಹಂತಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಹಂತವೂ ಚಿಕಿತ್ಸೆಯ ಯಶಸ್ಸಿಗೆ ನಿರ್ಣಾಯಕವಾಗಿರುತ್ತದೆ. ಆರಂಭಿಕ ಹಾರ್ಮೋನ್ ಪ್ರಚೋದನೆಯಿಂದ ಅಂತಿಮ ಗರ್ಭಧಾರಣೆಯ ಪರೀಕ್ಷೆಯವರೆಗೆ ಪೋಷಕರಾಗಬೇಕು ಎಂದು ಬಯಸುವ ದಂಪತಿ ಅದನ್ನು ಅರ್ಥಮಾಡಿಕೊಳ್ಳುವುದು, ತಾಳ್ಮೆಯಿಂದ ಕಾಯುವುದು ಬಹುಮುಖ್ಯವಾಗಿರುತ್ತದೆ.

ಇದರಲ್ಲಿ ಮುಖ್ಯವಾಗಿ ಆರಂಭಿಕ ಸಮಾಲೋಚನೆ, ರೋಗನಿರ್ಣಯ ಪರೀಕ್ಷೆಗಳು, ಚಿಕಿತ್ಸೆಯ ಯೋಜನೆ, ಅಂಡಾಶಯದ ಪ್ರಚೋದನೆ, ಟ್ರಿಗ್ಗರ್ ಚುಚ್ಚುಮದ್ದು, ಮೊಟ್ಟೆ ಮರುಪಡೆಯುವಿಕೆ, ವೀರ್ಯಾಣು ಸಂಗ್ರಹ, ಫಲೀಕರಣ, ಭ್ರೂಣ ಬೆಳವಣಿಗೆ, ಪೂರ್ವನಿಯೋಜಿತ ಜೆನೆಟಿಕ್ ಟೆಸ್ಟಿಂಗ್ (PGT), ಪ್ರೆಗ್ನೆನ್ಸಿ ಟೆಸ್ಟ್ ಮೊದಲಾದವುಗಳನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಉದ್ದಕ್ಕೂ ವೈದ್ಯಕೀಯ ತಂಡವು ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುತ್ತದೆ. ಐವಿಎಫ್ ನ ಸಂಕೀರ್ಣವೆಂದು ತೋರುತ್ತದೆಯಾದರೂ ತಜ್ಞರು ಇದನ್ನು ಪೋಷಕರಾಗ ಬಯಸುವ ದಂಪತಿಗೆ ಸಾಧ್ಯವಾದಷ್ಟು ಸುಲಭವಾಗುವಂತೆ, ಅರ್ಥವಾಗುವಂತೆ ವಿವರಿಸುತ್ತಾರೆ.

In Vitro Fertilization
In Vitro Fertilization


ತಿಳಿದಿರಲಿ

ಐವಿಎಫ್ ಪ್ರಕ್ರಿಯೆಗೆ ಒಳಗಾಗ ಬಯಸುವವರು ಐವಿಎಫ್ ಪ್ರಕ್ರಿಯೆ, ಸಂಭಾವ್ಯ ಅಪಾಯಗಳು ಮತ್ತು ಯಶಸ್ಸಿನ ದರಗಳನ್ನು ಮೊದಲು ತಿಳಿದುಕೊಳ್ಳಬೇಕು. ಇದಕ್ಕಾಗಿ ತಜ್ಞರನ್ನು ಸಂಪರ್ಕಿಸಿ.

ಸರಿಯಾದ ಚಿಕಿತ್ಸೆ ಎಲ್ಲಿ ದೊರೆಯುತ್ತದೆ ಎಂಬುದನ್ನು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಕೊಳ್ಳಿ. ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಬಹುಮುಖ್ಯವಾಗಿದೆ.

ವೈದ್ಯರು ಸೂಚಿಸುವ ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ. ಅಗತ್ಯವಿದ್ದಾಗ ಭಾವನಾತ್ಮಕವಾಗಿ ಬೆಂಬಲ ಪಡೆಯಲು ಸಿದ್ದರಾಗಿರಿ.

ಇದನ್ನೂ ಓದಿ: Ear Infections During Monsoon: ಮಳೆಗಾಲದಲ್ಲಿ ಕಾಡುವ ಕಿವಿನೋವಿನಿಂದ ಮುಕ್ತರಾಗಲು ಸರಳ ಉಪಾಯ ಇಲ್ಲಿದೆ

ನಿರ್ಲಕ್ಷಿಸಬೇಡಿ

ಐವಿಎಫ್ ಚಿಕಿತ್ಸೆಯ ಕುರಿತು ಏನೇ ಸವಾಲುಗಳಿದ್ದರೂ ತಜ್ಞರೊಂದಿಗೆ ಮುಕ್ತವಾಗಿ ಚರ್ಚಿಸಿ. ಯಾವುದೇ ಭಾವನೆಗಳನ್ನು ಮನದೊಳಗೆ ಇಟ್ಟುಕೊಳ್ಳಬೇಡಿ. ನಿಗ್ರಹಿಸಬೇಡಿ.

ಚಿಕಿತ್ಸೆಯ ಸಮಯದಲ್ಲಿ ದೇಹದ ಮೇಲೆ ಹೆಚ್ಚಿನ ಒತ್ತಡ ಹೇರಬೇಡಿ. ಶ್ರಮದಾಯಕ ವ್ಯಾಯಾಮ ಅಥವಾ ಚಟುವಟಿಕೆಗಳನ್ನು ತಪ್ಪಿಸಿ.

ಚಿಕಿತ್ಸೆಯ ವೇಳೆ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಕ್ಷಣವೇ ವೈದ್ಯರ ಗಮನಕ್ಕೆ ತನ್ನಿ.

ಸಕಾರಾತ್ಮಕ ಮನಸ್ಥಿತಿಯಲ್ಲಿ ಈ ಚಿಕಿತ್ಸೆ ಪಡೆಯಲು ಸಿದ್ಧರಾಗಿ. ಪ್ರತಿಯೊಂದು ಹಂತದಲ್ಲೂ ಭರವಸೆ ಇಟ್ಟಿರಿ.

ಎಷ್ಟು ವೆಚ್ಚವಾಗುತ್ತದೆ?

ಈ ವಿಧಾನದಿಂದ ಮಕ್ಕಳನ್ನು ಪಡೆಯಲು ಭಾರತದ ಆಸ್ಪತ್ರೆಗಳಲ್ಲಿ ಸುಮಾರು 1 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೂ ಶುಲ್ಕ ವಿಧಿಸಲಾಗುತ್ತದೆ. ಈ ವೆಚ್ವ ನುರಿತ ವೈದ್ಯರು ಮತ್ತು ಆಸ್ಪತ್ರೆಯ ಸೌಲಭ್ಯವನ್ನು ಆಧರಿಸಿದೆ.

Continue Reading

ವಿದೇಶ

Israel v/s Hamas: ಇಸ್ರೇಲ್‌‌ ಮುಂದಿನ ಟಾರ್ಗೆಟ್ ಯಾರು? ಇಲ್ಲಿದೆ ಹಮಾಸ್ ‘ಉಗ್ರ’ ನಾಯಕರ ಹಿಟ್‌ ಲಿಸ್ಟ್!

ಇರಾನ್‌ನ ನೂತನ ಅಧ್ಯಕ್ಷ ಮಸೌದ್‌ ಪೆಜೆಸ್ಕಿಯಾನ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಹತ್ಯೆಯಾದ ಹಮಾಸ್ ಉಗ್ರ ನಾಯಕ ಇಸ್ಮಾಯಿಲ್‌ ಹನಿಯೆಹ್‌ ಬಳಿಕ ಇಸ್ರೇಲ್ (Israel v/s Hamas) ಇನ್ನು ಯಾರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. ಈಗಾಗಲೇ ಇಸ್ರೇಲ್
ಹಿಟ್‌ ಲಿಸ್ಟ್‌ನಲ್ಲಿರುವ ಹಮಾಸ್ ಉಗ್ರ ನಾಯಕರು ಯಾರು ಗೊತ್ತೇ? ಇಲ್ಲಿದೆ ವಿವರ.

VISTARANEWS.COM


on

By

Israel v/s Hamas
Koo

ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ (Ismail Haniyeh) ಹತ್ಯೆ ಸುದ್ದಿ ಪ್ರಪಂಚದಾದ್ಯಂತ ಸಂಚಲನ ಉಂಟು ಮಾಡಿರುವ ಬೆನ್ನಲ್ಲೇ ಇಸ್ರೇಲ್ (Israel v/s Hamas) ಮುಂದಿನ ಟಾರ್ಗೆಟ್ (israel next target) ಯಾರನ್ನು ಮಾಡಿರಬಹುದು ಎನ್ನುವ ಕುರಿತು ಚರ್ಚೆ ಶುರುವಾಗಿದೆ. ಇರಾನಿನ ಹೊಸ ಅಧ್ಯಕ್ಷ (Iran new president) ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ಅನಂತರ ಇರಾನ್ ರಾಜಧಾನಿಯಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹನಿಯೆಹ್ ಮತ್ತು ಅವರ ಅಂಗರಕ್ಷಕನನ್ನು ಕೊಲ್ಲಲಾಗಿದೆ.

ಇಸ್ರೇಲ್ ನಿಯಂತ್ರಿತ ಗೋಲನ್ ಹೈಟ್ಸ್‌ನಲ್ಲಿ 12 ಯುವಕರು ಕೊಲೆಯಾಗಿ ವಾರ ಕಳೆಯುವಷ್ಟರಲ್ಲಿ ನಡೆದ ರಾಕೆಟ್ ದಾಳಿ ನಡೆಸಿ ಹೆಜ್ಬೊಲ್ಲಾ ಕಮಾಂಡರ್ ಫೌದ್ ಶುಕುರ್‌ನನ್ನು ಕೊಂದಿರುವುದಾಗಿ ಇಸ್ರೇಲ್ ಹೇಳುತ್ತಿದ್ದಂತೆಯೇ, ಹನಿಯೆಹ್ ಮೇಲೂ ದಾಳಿ ನಡೆದಿದೆ. ಇಸ್ರೇಲ್ ಈಗ ಹಮಾಸ್ ಉಗ್ರರ ಹೆಡೆಮುರಿ ಕಟ್ಟಲು ಸಂಪೂರ್ಣ ಸಜ್ಜಾದಂತೆ ಕಾಣುತ್ತಿದೆ. ಹಾಗಾದರೆ ಮುಂದೆ ಇಸ್ರೇಲ್ ಯಾರನ್ನು ಟಾರ್ಗೆಟ್ ಮಾಡಿರಬಹುದು ಎನ್ನುವ ಮಾಹಿತಿ ಇಲ್ಲಿದೆ.

Israel v/s Hamas
Israel v/s Hamas


ಯಾಹ್ಯಾ ಸಿನ್ವಾರ್

ಗಾಜಾದಲ್ಲಿ ಹಮಾಸ್ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ 62 ವರ್ಷದ ಸಿನ್ವಾರ್ ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ನಡೆದ ದಾಳಿಯ ಪ್ರಮುಖ ರೂವಾರಿ. ಸಿನ್ವಾರ್ 1962ರ ಅಕ್ಟೋಬರ್ 29ರಂದು ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ್ದ. 1980ರ ದಶಕದಲ್ಲಿ ಸಿನ್ವಾರ್ ಗಾಜಾದ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದ. ಬಳಿಕ ಈತ ಹಮಾಸ್‌ನ ಭದ್ರತಾ ಸೇವೆಯಾದ ಮಜ್ದ್ ಅನ್ನು ಸ್ಥಾಪಿಸಿದ.

1988ರಲ್ಲಿ ಪ್ಯಾಲೆಸ್ಟೀನಿಯಾದವರ ಹತ್ಯೆಯ ಅಪರಾಧಿ ಎಂದು ಪರಿಗಣಿಸಿ ಸಿನ್ವಾರ್‌ಗೆ ನಾಲ್ಕು ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. 2011ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಹಮಾಸ್‌ನ ಭದ್ರತಾ ಪಡೆಯ ಉನ್ನತ ಶ್ರೇಣಿಯನ್ನು ಸೇರಿಕೊಂಡ. 2015ರಲ್ಲಿ ಅಮೆರಿಕ ಈತನನ್ನು ‘ಅಂತಾರಾಷ್ಟ್ರೀಯ ಭಯೋತ್ಪಾದಕ’ ಎಂದು ಘೋಷಿಸಿತು.

Israel v/s Hamas
Israel v/s Hamas


ಮೊಹಮ್ಮದ್ ಡೀಫ್

ಹಮಾಸ್‌ನ ಮಿಲಿಟರಿ ವಿಭಾಗ ಇಜ್ ಅಲ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್‌ಗಳ ಮುಖ್ಯಸ್ಥನಾಗಿರುವ ಡೀಫ್ ಮೇಲೆ ಇಸ್ರೇಲ್ ನಲ್ಲಿ ಅನೇಕ ಬಾರಿ ದಾಳಿ ನಡೆಸಲಾಗಿದ್ದರೂ ಬದುಕಿ ಉಳಿದಿದ್ದಾನೆ. ಪ್ಯಾಲೆಸ್ಟೀನಿಯರ ವಿರುದ್ಧದ ಅಪರಾಧಗಳನ್ನು ನಿಲ್ಲಿಸಲು, ನಿಂದನೆ ಮತ್ತು ಚಿತ್ರಹಿಂಸೆಗೊಳಗಾದ ಕೈದಿಗಳನ್ನು ಬಿಡುಗಡೆ ಮಾಡಲು, ಪ್ಯಾಲೇಸ್ಟಿನಿಯನ್ ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ನಿಲ್ಲಿಸಲು ಹಮಾಸ್ ಇಸ್ರೇಲ್‌ಗೆ ಪದೇಪದೇ ಎಚ್ಚರಿಸುತ್ತಿದೆ ಎಂದು ಡೀಫ್ ಇತ್ತೀಚೆಗೆ ತನ್ನ ಧ್ವನಿ ಮುದ್ರಣವನ್ನು ಬಿಡುಗಡೆ ಮಾಡಿದ್ದ.

ಹಲವು ದಾಳಿಯಲ್ಲಿ ಡೀಫ್ ಮತ್ತು ಸಿನ್ವಾರ್ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಯಾಹ್ಯಾ ಸಿನ್ವಾರ್‌ನಂತೆ ಡೀಫ್ ಖಾನ್ ಯೂನಿಸ್ ನಿರಾಶ್ರಿತರ ಶಿಬಿರದಲ್ಲಿ ಜನಿಸಿದ್ದ. ಈತನ ಮೊದಲ ಹೆಸರು ಮೊಹಮ್ಮದ್ ಮಸ್ರಿ. ಹಮಾಸ್‌ಗೆ ಸೇರಿದ ಅನಂತರ ಮೊಹಮ್ಮದ್ ಡೀಫ್ ಎಂಬ ಹೆಸರನ್ನು ಪಡೆದ. ಡೀಫ್‌ನನ್ನು 1989ರಲ್ಲಿ ಇಸ್ರೇಲ್ ಬಂಧಿಸಿತ್ತು. ಸುಮಾರು 16 ತಿಂಗಳ ಕಾಲ ಜೈಲಿನಲ್ಲಿದ್ದು ಹೊರ ಬಂದ ಬಳಿಕ ಸುರಂಗಗಳ ಜಾಲವನ್ನು ಮತ್ತು ಅದರ ಬಾಂಬ್ ತಯಾರಿಕೆಯ ಪರಿಣತಿ ಪಡೆದ. ದಶಕಗಳಿಂದ ಇಸ್ರೇಲ್‌ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. 2000ರಲ್ಲಿ ಇಸ್ರೇಲ್‌ನಲ್ಲಿ ಬಂಧನಕ್ಕೆ ಒಳಗಾದರೂ ಬಳಿಕ ತಪ್ಪಿಸಿಕೊಂಡಿದ್ದ.

ಇಸ್ರೇಲ್‌ ನಡೆಸಿದ ಒಂದು ದಾಳಿಯಲ್ಲಿ ಆತ ಕಣ್ಣು ಕಳೆದುಕೊಂಡಿದ್ದು, ಒಂದು ಕಾಲಿಗೂ ಗಂಭೀರ ಗಾಯವಾಗಿತ್ತು ಎಂದು ಹಮಾಸ್ ಮೂಲಗಳು ತಿಳಿಸಿದ್ದವು. 2014ರ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಆತನ ಪತ್ನಿ, 7 ತಿಂಗಳ ಮಗ ಮತ್ತು 3 ವರ್ಷದ ಮಗಳು ಸಾವನ್ನಪ್ಪಿದ್ದರು.

Israel v/s Hamas
Israel v/s Hamas


ಖಲೀದ್ ಮಶಾಲ್

ಹಮಾಸ್‌ನ ಸಂಸ್ಥಾಪಕರಲ್ಲಿ ಒಬ್ಬನಾಗಿರುವ ಮಶಾಲ್, 1956ರಲ್ಲಿ ವೆಸ್ಟ್ ಬ್ಯಾಂಕ್‌ನ ಸಿಲ್ವಾಡ್‌ನಲ್ಲಿ ಜನಿಸಿದ. ಬಳಿಕ ಆತನ ಕುಟುಂಬ ಕುವೈತ್‌ಗೆ ಸ್ಥಳಾಂತರಗೊಂಡಿತು. ಮಶಾಲ್ ಪದವಿ ಪಡೆದ ಬಳಿಕ ಕುವೈತ್‌ನಲ್ಲಿಯೇ ಇದ್ದ. ಅಲ್ಲಿ ಆತ ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿ ಸಾಮಾಜಿಕ ಸೇವೆಗಳನ್ನು ಆಯೋಜಿಸಲು ಹಣವನ್ನು ಸಂಗ್ರಹಿಸಿದ.

1996ರಲ್ಲಿ ಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥನಾಗಿ ಆಯ್ಕೆಯಾದ ಮಶಾಲ್, ಹಮಾಸ್‌ನ ಆತ್ಮಹತ್ಯಾ ಬಾಂಬ್ ದಾಳಿಗೆ ಪ್ರತೀಕಾರವಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು 1997ರಲ್ಲಿ ಮಶಾಲ್‌ನ ಹತ್ಯೆ ಮಾಡಲು ಅನುಮೋದನೆ ನೀಡಿದರು. ಮಶಾಲ್ 2017ರವರೆಗೂ ಹಮಾಸ್‌ನ ಮುಖ್ಯಸ್ಥನಾಗಿದ್ದ. ಹಮಾಸ್‌ನ ಪ್ರಮುಖ ಒತ್ತೆಯಾಳು ಸಂಧಾನಕಾರರಲ್ಲಿ ಒಬ್ಬನಾಗಿರುವ ಮಶಾಲ್ ಪ್ರಸ್ತುತ ಕತಾರ್‌ನಲ್ಲಿ ವಾಸಿಸುತ್ತಿದ್ದಾನೆ.

Israel v/s Hamas
Israel v/s Hamas


ಮಹಮೂದ್ ಜಹರ್

ಹಮಾಸ್‌ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬನಾಗಿದ್ದಾನೆ. 1945ರಲ್ಲಿ ಗಾಜಾ ನಗರದ ಬಳಿ ಜನಿಸಿದ ಜಹರ್ ತಂದೆ ಪ್ಯಾಲೇಸ್ಟಿನಿಯನ್ ಮತ್ತು ತಾಯಿ ಈಜಿಪ್ಟಿನವನು. ಗಾಜಾದಲ್ಲಿ ವೈದ್ಯನಾಗಿದ್ದ ಆತನ ರಾಜಕೀಯ ದೃಷ್ಟಿಕೋನದಿಂದ ಕೆಲಸದಿಂದ ವಜಾಗೊಳಿಸಲಾಗಿತ್ತು. 1988ರಲ್ಲಿ ಹಮಾಸ್ ಸ್ಥಾಪನೆಯ ಅನಂತರ ಜಹರ್‌ನನ್ನು ಇಸ್ರೇಲ್ ಜೈಲಿನಲ್ಲಿರಿಸಿತ್ತು. 1992ರಲ್ಲಿ ಲೆಬನಾನ್‌ಗೆ ಗಡೀಪಾರು ಮಾಡಲಾಯಿತು. ಗಾಜಾಕ್ಕೆ ಹಿಂದಿರುಗಿದ ಬಳಿಕ ಈತನ ಮೇಲೆ ಹತ್ಯೆ ಯತ್ನವೂ ನಡೆದಿದ್ದು, ಒಂದು ಸಂದರ್ಭದಲ್ಲಿ ಆತನ ಹಿರಿಯ ಮಗ ಮೃತಪಟ್ಟಿದ್ದಾನೆ.

ಇದನ್ನೂ ಓದಿ: Ismail Haniyeh: ಒಸಾಮಾ ರೀತಿಯೇ ಹಮಾಸ್‌ನ ಇಸ್ಮಾಯಿಲ್‌ ಹನಿಯೇಹ್‌ನನ್ನು ಕೊಂದ ಇಸ್ರೇಲ್;‌ ಆಪರೇಷನ್‌ನ ಡಿಟೇಲ್ಸ್‌ ಇಲ್ಲಿದೆ

2008ರಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹಮಾಸ್‌ನ ಮಿಲಿಟರಿ ವಿಭಾಗದ ಸದಸ್ಯರಾದ ಈತನ ಇನ್ನೊಬ್ಬ ಮಗನೂ ಸಾವನ್ನಪ್ಪಿದ್ದಾನೆ. 2006 ರಲ್ಲಿ ಜಹರ್ ಪ್ಯಾಲೇಸ್ಟಿನಿಯನ್ ಲೆಜಿಸ್ಲೇಟಿವ್ ಕೌನ್ಸಿಲ್ (PLC) ಗೆ ಆಯ್ಕೆಯಾಗಿದ್ದು, ಬಳಿಕ ಆತನನ್ನು ವಿದೇಶಾಂಗ ಸಚಿವನನ್ನಾಗಿ ನೇಮಿಸಲಾಯಿತು.

ಹಮಾಸ್‌ನ ಇವಿಷ್ಟು ಉಗ್ರ ನಾಯಕರು ಇಸ್ರೇಲ್‌ನ ಹಿಟ್‌ ಲಿಸ್ಟ್‌ನಲ್ಲಿದ್ದಾರೆ. ಇವರ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಯಬಹುದು.

Continue Reading
Advertisement
rameshwaram cafe blast scene
ಕ್ರೈಂ14 mins ago

Rameshwaram Cafe Blast: ಬಾಂಬ್‌ ಇರಿಸಿದ ಉಗ್ರನನ್ನು ರಾಮೇಶ್ವರಂ ಕೆಫೆಗೆ ಕರೆತಂದು ಸೀನ್‌ ರಿಕ್ರಿಯೇಟ್‌ ಮಾಡಿದ ಎನ್‌ಐಎ

Electrocution
ದೇಶ27 mins ago

Electrocution: ಡಿಜೆ ವಾಹನಕ್ಕೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಗುಲಿ ಆಘಾತ; 8 ಮಂದಿ ಭಕ್ತರ ಸಾವು

Vishwa Kundapura Kannada Dina 2024 in banglore celebrate
ಬೆಂಗಳೂರು35 mins ago

Vishwa Kundapura Kannada Dina: ಬೆಂಗಳೂರಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಗಮ್ಮತ್ತು ಹೀಗಿತ್ತು!

court verdict
ಪ್ರಮುಖ ಸುದ್ದಿ50 mins ago

Court Verdict: 31 ವರ್ಷ ಲೈಂಗಿಕ ಸಂಬಂಧ, ನಂತರ ಪುರುಷನ ಮೇಲೆ ರೇಪ್ ಕೇಸ್! ನ್ಯಾಯಾಲಯ ಹೇಳಿದ್ದೇನು ನೋಡಿ

Actor Darshan Fans troll ACP Chandan kumar
ಸ್ಯಾಂಡಲ್ ವುಡ್53 mins ago

Actor Darshan: ಹುಲಿ ಅಂತೆ ಹುಲಿ, ʻಡಿಬಾಸ್ʼ ರಿಲೀಸ್‌ ಆಗುವಾಗ ಇವನೇ ಸೆಕ್ಯೂರಿಟಿ ಎಂದು ಎಸಿಪಿ ಚಂದನ್‌ರನ್ನು ಟ್ರೋಲ್‌ ಮಾಡಿದ ಫ್ಯಾನ್ಸ್‌!

drink water
ಫ್ಯಾಷನ್57 mins ago

Water For Health: ಆರೋಗ್ಯವಾಗಿರಬೇಕೆಂದರೆ ನಾವು ದಿನಕ್ಕೆಷ್ಟು ನೀರು ಕುಡಿಯಬೇಕು?

Bangladesh Protests
ವಿದೇಶ1 hour ago

Bangladesh Protests: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ; ಮೃತರ ಸಂಖ್ಯೆ 98ಕ್ಕೆ ಏರಿಕೆ: ಭಾರತೀಯರಿಗೆ ಮುನ್ನೆಚ್ಚರಿಕೆ

Arjun Rampal Says He Knows A Lot Of People Who Need Another Woman
ಬಾಲಿವುಡ್1 hour ago

Arjun Rampal: ಅಕ್ರಮ ಸಂಬಂಧ ಕೆಲವರಿಗೆ ಚಟ, ಮಹಿಳೆಗಾಗಿ ಹಪಹಪಿಸುವುದನ್ನು ನಾನು ನೋಡಿದ್ದೇನೆ ಎಂದ ಖ್ಯಾತ ಬಾಲಿವುಡ್‌ ನಟ!

Independence Day 2024
ಕ್ರೀಡೆ2 hours ago

Independence Day 2024: ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಎದುರು ಸೋಲುವ ಭಯ; ಹಾಕಿ ತಂಡವನ್ನೇ ಒಲಿಂಪಿಕ್ಸ್‌ಗೆ ಕಳುಹಿಸಿರಲಿಲ್ಲ ಗ್ರೇಟ್‌ ಬ್ರಿಟನ್‌!

bagalakote soldier death
ಬಾಗಲಕೋಟೆ2 hours ago

Soldier Death: ಉಸಿರಾಟದ ತೊಂದರೆಯಿಂದ ಯೋಧ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ20 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌