Rahul Gandhi: ರಾಹುಲ್ ಗಾಂಧಿ ಅಲ್ಲ, ರಾಹುಲ್ ಖಾನ್! ಪಾಕಿಸ್ತಾನದ ಟಿವಿಯಲ್ಲಿ ಬಿಸಿಬಿಸಿ ಚರ್ಚೆ! - Vistara News

ವೈರಲ್ ನ್ಯೂಸ್

Rahul Gandhi: ರಾಹುಲ್ ಗಾಂಧಿ ಅಲ್ಲ, ರಾಹುಲ್ ಖಾನ್! ಪಾಕಿಸ್ತಾನದ ಟಿವಿಯಲ್ಲಿ ಬಿಸಿಬಿಸಿ ಚರ್ಚೆ!

Rahul Gandhi: ಪಾಕಿಸ್ತಾನದ ಚಾನಲ್‌ ಒಂದರಲ್ಲಿ ಮಾತನಾಡುತ್ತ ಅತಿಥಿಯೊಬ್ಬರು ರಾಹುಲ್‌ ಗಾಂಧಿ ಅವರ ಜಾತಿಯನ್ನು ಪ್ರಶ್ನಿಸಿದ್ದಾರೆ. ʼʼರಾಹುಲ್ ಹೇಗೆ ಗಾಂಧಿಯಾದರು? ರಾಹುಲ್ ಅವರು ನೆಹರೂ ಕುಟುಂಬದ ಕುಡಿ. ಇದು ನೆಹರೂ ವಂಶ. ಇವರೊಂದಿಗೆ ಗಾಂಧಿಯ ಹೆಸರು ಹೇಗೆ ಥಳುಕು ಹಾಕಿಕೊಂಡಿದೆ?ʼʼ ಎಂದು ಅವರು ಕೇಳಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗುತ್ತಿದೆ

VISTARANEWS.COM


on

Rahul Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ ನಡೆಯುತ್ತಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆ ಕಂಡು ಬರುತ್ತಿದೆ. ಜುಲೈ 29 ಸಂಸತ್‌ನಲ್ಲಿ ಜಾತಿಗಣತಿ (Caste Census) ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಪ್ರಸ್ತಾಪಿಸಿದ್ದು, ಲೋಕಸಭೆಯಲ್ಲಿ ನಾವು ಜಾತಿಗಣತಿ ಮಂಡಿಸುತ್ತೇವೆ ಎಂದಿದ್ದರು. ಇದಕ್ಕೆ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ (Anurag Thakur) ತಿರುಗೇಟು ನೀಡಿ, “ತಮ್ಮ ಜಾತಿಯೇ ಯಾವುದೆಂದು ಗೊತ್ತಿರದವರು ಜಾತಿಗಣತಿ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಹೇಳಿದ್ದರು. ಸದ್ಯ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಅಚ್ಚರಿ ಎಂದರೆ ಈ ವಿಚಾರ ದೇಶದ ಗಡಿ ದಾಟಿ ಪಾಕಿಸ್ತಾನದಲ್ಲಿಯೂ ಚರ್ಚೆಯಾಗುತ್ತಿದೆ. ಪಾಕಿಸ್ತಾನದ ಚಾನಲ್‌ ಒಂದರಲ್ಲಿ ಮಾತನಾಡುತ್ತ ಅತಿಥಿಯೊಬ್ಬರು ರಾಹುಲ್‌ ಗಾಂಧಿ ಅವರ ಜಾತಿಯನ್ನು ಪ್ರಶ್ನಿಸಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗುತ್ತಿದೆ (Viral Video).

ಸುಮಾರು 2.18 ನಿಮಿಷದ ವಿಡಿಯೊ ಇದಾಗಿದ್ದು, ಸಂವಾದದಲ್ಲಿ ಪಾಲ್ಗೊಂಡ ಅತಿಥಿ ರಾಹುಲ್‌ ಅವರು ಗಾಂಧಿ ಹೇಗಾದರು ಎಂದು ಪ್ರಶ್ನಿಸಿದ್ದಾರೆ. ʼʼರಾಹುಲ್ ಹೇಗೆ ಗಾಂಧಿಯಾದರು? ರಾಹುಲ್ ಅವರು ನೆಹರೂ ಕುಟುಂಬದ ಕುಡಿ. ಇದು ನೆಹರೂ ವಂಶ. ಇವರೊಂದಿಗೆ ಗಾಂಧಿಯ ಹೆಸರು ಹೇಗೆ ಥಳುಕು ಹಾಕಿಕೊಂಡಿದೆ?ʼʼ ಎಂದು ಅವರು ಕೇಳಿದ್ದಾರೆ.

ವಾದ ಹೀಗಿದೆ

ʼʼನೆಹರೂ ಅವರ ಮಗಳು ಇಂದಿರಾ ಫಿರೋಜ್ ಖಾನ್ ಅವರನ್ನು ವಿವಾಹವಾದರು. ಫಿರೋಜ್ ಖಾನ್ ನವಾಬ್ ಖಾನ್ ಅವರ ಮಗ. ಫಿರೋಜ್ ಖಾನ್ ಅವರ ಮಗ ರಾಜೀವ್ ಕ್ರಿಶ್ಚಿಯನ್ ಮಹಿಳೆ ಸೋನಿಯಾ ಅವರನ್ನು ವಿವಾಹವಾಗಿದ್ದಾರೆ. ನಂತರ ಸೋನಿಯಾ ಮತ್ತು ರಾಜೀವ್ ಅವರ ಮಗಳು ಪ್ರಿಯಾಂಕಾ ಕ್ರಿಶ್ಚಿಯನ್ ರಾಬರ್ಟ್ ವಾದ್ರಾ ಅವರನ್ನು ವಿವಾಹವಾದರು. ಅವರ ಮನೆಯಲ್ಲಿ ಮುಸ್ಲಿಂ-ಕ್ರಿಶ್ಚಿಯನ್-ಪಾರ್ಸಿ ಇದ್ದಾರೆʼʼ ಎಂದಿದ್ದಾರೆ. ಸದ್ಯ ಈ ವಿಡಿಯೊ ಅನೇಕರ ಗಮನ ಸೆಳೆದಿದ್ದು ಮತ್ತೊಂದು ಸುತ್ತಿನ ಚರ್ಚೆಗೆ ಕಾರಣವಾಗಿದೆ.

ಈಗಾಗಲೇ ಈ ವಿಡಿಯೊವನ್ನು 2 ಲಕ್ಷಕ್ಕಿಂತ ಅದಿಕ ಮಂದಿ ವೀಕ್ಷಿಸಿದ್ದಾರೆ. ʼʼರಾಹುಲ್‌ ಗಾಂಧಿ ಅಲ್ಲ, ರಾಹುಲ್‌ ಖಾನ್‌ ಎನ್ನುವುದು ನಿಮ್ಮ ವಾದ ತಾನೇ?ʼʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ʼʼನೀವು ಗಾಂಧಿ ಕುಟುಂಬದ ಕಣ್ಣನ್ನು ತೆರೆಸಿದ್ದೀರಿʼʼ ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. ʼʼಗಾಂಧಿ ಕುಟುಂಬದ ಸತ್ಯ ಹೊರ ಬಿತ್ತುʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼಪ್ರತಿಯೊಬ್ಬರಿಗೂ ರಾಹುಲ್‌ ಗಾಂಧಿ ಅವರ ಕುಟುಂಬದ ಬಗ್ಗೆ ಗೊತ್ತು. ಇದೀಗ ಪಾಕಿಸ್ತಾನದ ಮಾಧ್ಯಮಗಳೂ ಈ ಬಗ್ಗೆ ಚರ್ಚೆ ನಡೆಸುತ್ತಿವೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʼʼಜಾತಿ ಗಣತಿ ಯಾವಾಗ ಆರಂಭಿಸುತ್ತೀರಿ?ʼʼ ಎಂದು ನೇರವಾಗಿ ರಾಹುಲ್‌ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

ಅನುರಾಗ್‌ ಠಾಕೂರ್‌ ಹೇಳಿದ್ದೇನು?

ಸಂಸತ್‌ನಲ್ಲಿ ಮಾತನಾಡಿದ ಅನುರಾಗ್‌ ಠಾಕೂರ್‌, “ದೇಶದಲ್ಲಿ ಜಾತಿಗಣತಿ ಬಗ್ಗೆ ತುಂಬ ಮಾತನಾಡುತ್ತಾರೆ. ಜಾತಿಗಣತಿಯನ್ನು ಲೋಕಸಭೆಯಲ್ಲಿ ಮಂಡಿಸುತ್ತೇವೆ ಎನ್ನುತ್ತಾರೆ. ಆದರೆ ಜಾತಿಗಣತಿ ಬಗ್ಗೆ ಮಾತನಾಡುವವರಿಗೇ ತಮ್ಮ ಜಾತಿ ಯಾವುದು ಎಂದು ಗೊತ್ತಿಲ್ಲ” ಎಂದು ಟೀಕಿಸಿದ್ದರು. ಅನುರಾಗ್‌ ಠಾಕೂರ್‌ ಹೇಳಿಕೆಗೆ ರಾಹುಲ್‌ ಗಾಂಧಿ ಪ್ರತ್ಯುತ್ತರ ನೀಡಿ, “ನೀವು ನನ್ನನ್ನು ಎಷ್ಟು ಅವಮಾನಿಸುತ್ತೀರೋ ಅವಮಾನಿಸಿ. ಆದರೆ ನಾವು ಸಂಸತ್‌ನಲ್ಲಿ ಜಾತಿಗಣತಿ ವಿಧೇಯಕ ಮಂಡಿಸುತ್ತೇವೆ ಎಂಬುದನ್ನು ನೀವು ಮರೆಯದಿರಿ” ಎಂದು ಸವಾಲು ಹಾಕಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Emergency Landing: ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಕಾರಣವಾಯ್ತು ಹೇನು! ಏನಿದು ವಿಚಿತ್ರ ಪ್ರಕರಣ? ಇಲ್ಲಿದೆ ವಿವರ

Emergency Landing: ಕೆಲವು ದಿನಗಳ ಹಿಂದೆ ಅಮೆರಿಕದ ಲಾಸ್ ಏಂಜಲೀಸ್‌ನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್‌ ವಿಮಾನವನ್ನು ಏಕಾಏಕಿ ಫೋನಿಕ್ಸ್‌ನಲ್ಲಿ ಲ್ಯಾಂಡ್ ಮಾಡಲಾಗಿತ್ತು. ಇದಕ್ಕೆ ಕಾರಣವಾಗಿದ್ದು ಮಹಿಳಾ ಪ್ರಯಾಣಿಕರೊಬ್ಬರ ತಲೆಯಲ್ಲಿ ಹರಿದಾಡುತ್ತಿದ್ದ ಹೇನು! ಟಿಕ್‌ಟಾಕ್‌ ಬಳಕೆದಾರ ಎಥಾನ್ ಜುಡೆಲ್ಸನ್ ಜೂನ್‌ನಲ್ಲಿ ನಡೆದ ಈ ಘಟನೆಯನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

VISTARANEWS.COM


on

Emergency Landing
Koo

ವಾಷಿಂಗ್ಟನ್‌: ತಲೆಯಲ್ಲಿ ಹರಿದಾಡಿ ಕಿರಿಕಿರಿ ಉಂಟು ಮಾಡುವ ಹೇನಿನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಈ ಚಿಕ್ಕ ಜೀವಿ ವಿಮಾನದ ತುರ್ತು ಭೂ ಸ್ಪರ್ಶ (Emergency Landing)ಕ್ಕೆ ಕಾರಣವಾಗಿದೆ ಎಂದರೆ ನಂಬುತ್ತೀರಾ? ನಂಬಲು ಕಷ್ಟ ಅಲ್ಲವೇ? ಆದರೆ ಇಂತಹದ್ದೊಂದು ವಿಚಿತ್ರ ಪ್ರಸಂಗ ಅಮೆರಿಕದಲ್ಲಿ ನಡೆದಿದೆ. ಅರೇ! ಜುಜುಬಿ ಹೇನಿಗಾಗಿ ವಿಮಾನವನ್ನು ತುರ್ತಾಗಿ ಇಳಿಸಿದ್ದು ಯಾಕೆ? ಏನಿದು ಘಟನೆ? ಮುಂತಾದ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Viral News).

ಕೆಲವು ದಿನಗಳ ಹಿಂದೆ ಅಮೆರಿಕದ ಲಾಸ್ ಏಂಜಲೀಸ್‌ನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್‌ ವಿಮಾನ (American Airlines flight)ವನ್ನು ಏಕಾಏಕಿ ಫೋನಿಕ್ಸ್‌ನಲ್ಲಿ ಲ್ಯಾಂಡ್ ಮಾಡಲಾಗಿತ್ತು. ಇದಕ್ಕೆ ಕಾರಣವಾಗಿದ್ದು ಮಹಿಳಾ ಪ್ರಯಾಣಿಕರೊಬ್ಬರ ತಲೆಯಲ್ಲಿ ಹರಿದಾಡುತ್ತಿದ್ದ ಹೇನು! ಟಿಕ್‌ಟಾಕ್‌ ಬಳಕೆದಾರ ಎಥಾನ್ ಜುಡೆಲ್ಸನ್ ಜೂನ್‌ನಲ್ಲಿ ನಡೆದ ಈ ಘಟನೆಯನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಏನಿದು ಘಟನೆ?

ಫೋನಿಕ್ಸ್‌ ವಿಮಾನ ನಿಲ್ದಾಣಕ್ಕೆ ತಲುಪಿದ ನಂತರ ಎಥಾನ್ ಜುಡೆಲ್ಸನ್ ವಿಡಿಯೊ ಮಾಡಿದ್ದಾರೆ. ʼʼನಾನು ಸುಮಾರು 12 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿಯೇ ಇದ್ದೆ. ಇದಕ್ಕೆ ಕಾರಣ ಮಹಿಳಾ ಪ್ರಯಾಣಿಕರೊಬ್ಬರ ತಲೆಯಲ್ಲಿ ಕಂಡು ಬಂದ ಹೇನುʼʼ ಎಂದು ಅವರು ಬರೆದುಕೊಂಡಿದ್ದಾರೆ. ಫೋನಿಕ್ಸ್‌ನಲ್ಲಿ ಏಕಾಏಕಿ ಏಕೆ ವಿಮಾನವನ್ನು ಲ್ಯಾಂಡ್‌ ಮಾಡಲಾಗುತ್ತಿದೆ ಎನ್ನುವುದಕ್ಕೆ ಸಿಬ್ಬಂದಿ ಸೂಕ್ತವಾದ ಕಾರಣ ನೀಡಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

ವಿಮಾನ ತುರ್ತು ಭೂ ಸ್ಪರ್ಶ ಮಾಡಲಾಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದರು. ನನ್ನನ್ನೂ ಸೇರಿದಂತೆ ಹಲವರಿಗೆ ಏನಾಗಿದೆ ಅನ್ನೋದೇ ಗೊತ್ತಾಗಲಿಲ್ಲ. ಭೂಸ್ಪರ್ಶ ಯಾಕೆ ಎನ್ನುವ ಗೊಂದಲ ಕಾಡಿತ್ತು. ವಿಮಾನದಲ್ಲಿರುವ ಎಲ್ಲ ಪ್ರಯಾಣಿಕರು ಆರೋಗ್ಯವಾಗಿದ್ದಾರೆ. ಯಾರೂ ಅಸ್ವಸ್ಥರಾಗಿಲ್ಲ, ಯಾರಿಗೂ ತುರ್ತು ಚಿಕಿತ್ಸೆಯ ಅವಶ್ಯಕತೆ ಬಿದ್ದಿಲ್ಲ. ಹೀಗಿದ್ದರೂ ತುರ್ತು ಭೂಸ್ಪರ್ಶವೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದರು. ಫೋನಿಕ್ಸ್‌ ತಲುಪಿದ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದಷ್ಟೇ ವಿಮಾನದ ಸಿಬ್ಬಂದಿ ತಿಳಿಸಿದ್ದರು ಎಂದು ಅಂದಿನ ಘಟನೆಯನ್ನು ಎಂದು ಜುಡೆಲನ್ಸ್ ವಿವರಿಸಿದ್ದಾರೆ.

ಫೋನಿಕ್ಸ್‌ನಲ್ಲಿ ಇಳಿದ ಕೂಡಲೇ ಪ್ರಯಾಣಿಕರಿಗೆ ಹೋಟೆಲ್‌ ವ್ಯವಸ್ಥೆ ಮಾಡಲಾಯಿತು. ಜತೆಗೆ ಅಮೆರಿಕನ್‌ ಏರ್‌ಲೈನ್ಸ್‌ ಪ್ರಯಾಣಿಕರಿಗೆ 12 ಡಾಲರ್‌ ಅನ್ನು ಒದಗಿಸಿತು. ಪ್ರಯಾಣಿಕರೊಬ್ಬರ ವೈದ್ಯಕೀಯ ಅಗತ್ಯಗಳಿಗಾಗಿ ವಿಮಾನ ಇಳಿಸಲಾಗಿದೆ ಎಂದಷ್ಟೇ ತಿಳಿಸಿದ್ದರು. ಆದರೆ ಈ ಉತ್ತರದಿಂದ ತೃಪ್ತರಾಗದ ಜುಡೆಲನ್ಸ್ ಒಂದಿಬ್ಬರ ಬಳಿ ಮತ್ತೂ ವಿಚಾರಿಸಿದ್ದರು. ಆಗ ಇಬ್ಬರು ಮಹಿಳೆಯರು ಹೇನಿನ ರಹಸ್ಯ ತಿಳಿಸಿದ್ದರು. ತಾವು ಮಹಿಳೆಯೊಬ್ಬರ ತಲೆಯಲ್ಲಿ ಹೇನು ಓಡಾಡುತ್ತಿರುವುದನ್ನು ನೋಡಿ ವಿಮಾನ ಸಿಬ್ಬಂದಿಯ ಗಮನಕ್ಕೆ ತಂದಿರುವುದಾಗಿಯೂ ಅದಕ್ಕಾಗಿ ಅವರು ವಿಮಾನವನ್ನು ಫೋನಿಕ್ಸ್‌ನಲ್ಲಿ ತುರ್ತಾಗಿ ಲ್ಯಾಂಡ್‌ ಮಾಡಿದ್ದಾಗಿ ಜುಡೆಲನ್ಸ್ ಅವರಿಗೆ ಹೇಳಿದ್ದರು. ಇದನ್ನೆಲ್ಲ ಜುಡೆಲನ್ಸ್ ವಿಡಿಯೊದಲ್ಲಿ ವಿವರಿಸಿದ್ದಾರೆ.

ನಿಜವಾದ ಕಾರಣ ಬಹಿರಂಗ ಪಡಿಸದ ಏರ್‌ಲೈನ್ಸ್‌

ಅಮೆರಿಕನ್ ಏರ್‌ಲೈನ್ಸ್‌ನ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ನಿಜವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ʼʼಜೂನ್ 15ರಂದು ಲಾಸ್ ಏಂಜಲೀಸ್‌ನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಅಮೆರಿಕನ್ ಏರ್‌ಲೈನ್ಸ್‌ ಫ್ಲೈಟ್ 2201 ಅನ್ನು ಗ್ರಾಹಕರ ವೈದ್ಯಕೀಯ ಅಗತ್ಯಗಳಿಂದಾಗಿ ಫೋನಿಕ್ಸ್‌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲಾಯಿತುʼʼ ಎಂದಷ್ಟೇ ತಿಳಿಸಿದ್ದಾರೆ. ಒಟ್ಟಿನಲ್ಲಿ ಹೇನಿನಿಂದಾಗಿ ವಿಮಾನವನ್ನೇ ತುರ್ತು ಭೂ ಸ್ಪರ್ಶ ಮಾಡಿಸಿದ ಈ ಘಟನೆಗೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Continue Reading

ವೈರಲ್ ನ್ಯೂಸ್

Snake Bite: ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

Snake Bite: ಸರ್ಪಗಳಲ್ಲಿ ಕಾಳಿಂಗ ಸರ್ಪವು ಅತ್ಯಂತ ಭಯಾನಕ ವಿಷವನ್ನು ಹೊಂದಿರುವಂತ ಹಾವಾಗಿದೆ. ಅದರ ವಿಷದಲ್ಲಿ ಒಂದು ಹನಿ ಮನುಷ್ಯ ದೇಹಕ್ಕೆ ತಗುಲಿದರೆ ಆತ ಸಾಯಬಹುದು. ಅಂತಹದರಲ್ಲಿ ಇಂತಹ ಭಯಾನಕ ಕಾಳಿಂಗ ಸರ್ಪ ಹಾವು ಹಿಡಿಯುವವನನ್ನು ಕಚ್ಚಿ ನಂತರ ತಾನೇ ಜೀವ ಬಿಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಚಂದ್ರಕುಮಾರ್ ಅಹಿರ್ವಾರ್ ಎಂಬ ವ್ಯಕ್ತಿ 5 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದ. ಆಗ ಕೋಪಗೊಂಡ ಹಾವು ಚಂದ್ರಕುಮಾರನ ಎರಡೂ ಕೈ ಹೆಬ್ಬೆರಳುಗಳನ್ನು ಕಚ್ಚಿತ್ತು. ಚಂದ್ರಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಕಾಳಿಂಗ ಸರ್ಪ ಮಾತ್ರ ಸತ್ತೇ ಹೋಗಿದೆ.

VISTARANEWS.COM


on

Snake Bite
Koo


ಹಾವು ವಿಶ್ವದ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿ ಜೀವಿಗಳಲ್ಲಿ ಒಂದಾಗಿದೆ. ಹಾಗಾಗಿ ಹಾವು ಕಚ್ಚಿದವರು ಚಿಕಿತ್ಸೆ ಪಡೆಯದಿದ್ದರೆ ಸಾವನಪ್ಪುವುದಂತೂ ಖಂಡಿತ. ಅದರಲ್ಲೂ ಈ ಸರ್ಪಗಳಲ್ಲಿ ಕಾಳಿಂಗ ಸರ್ಪವು ಅತ್ಯಂತ ಭಯಾನಕ ವಿಷವನ್ನು ಹೊಂದಿರುವಂತ ಹಾವಾಗಿದೆ. ಅದರ ವಿಷದಲ್ಲಿ ಒಂದು ಹನಿ ಮನುಷ್ಯ ದೇಹಕ್ಕೆ ತಗುಲಿದರೆ ನಿಮಿಷದೊಳಗೆ ಸಾಯಬಹುದು. ಅಂತಹದರಲ್ಲಿ ಇಂತಹ ಭಯಾನಕ ಕಾಳಿಂಗ ಸರ್ಪ ಹಾವು (Snake Bite) ಹಿಡಿಯುವವನನ್ನು ಕಚ್ಚಿ ನಂತರ ತಾನೇ ಜೀವ ಬಿಟ್ಟ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಾಗರ್ ನಲ್ಲಿ ಬೆಳಕಿಗೆ ಬಂದಿದೆ.

ಹಾವು ಕಚ್ಚಿದ ನಂತರ ಹಾವು ಹಿಡಿಯುವವನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈಗ ಅವನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ನರಯವಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನೆಯ ಬಗ್ಗೆ ತಿಳಿದು ಹಾವು ಹಿಡಿಯುವವರನ್ನು ಸಂಪರ್ಕಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನಮ್ಮ ಹಿರಿಯರು ಹೇಳುವ ಪ್ರಕಾರ ಕಾಳಿಂಗ ಸರ್ಪ ಎಷ್ಟು ವಿಷಕಾರಿ ಎಂದರೆ ಅದು ಕಚ್ಚಿದರೆ ಬಲಿಪಶುವಿಗೆ ಸಾಯುವ ಮೊದಲು ನೀರು ಕೇಳುವ ಅವಕಾಶವೂ ಇರುವುದಿಲ್ಲ ಎನ್ನುತ್ತಾರೆ. ಆದರೆ ಇಲ್ಲಿ ನಡೆದ ಘಟನೆ ಮಾತ್ರ ಬಹಳ ಆಶ್ಚರ್ಯಕರವಾಗಿದೆ. ಕಾಳಿಂಗ ಸರ್ಪ ಮನುಷ್ಯನಿಗೆ ಕಚ್ಚಿದ ನಂತರ ತಾನೇ ಸಾವನಪ್ಪಿದೆ. ಈ ಘಟನೆ ಅಲ್ಲಿನ ಸಮುದಾಯದ ಸದಸ್ಯರಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.

ವರದಿಗಳ ಪ್ರಕಾರ, ನಾರಾಯಣಾವಳಿಯ ಸಾಗರ್-ಖುರೈ ರಸ್ತೆಯ ತಡೆಗೋಡೆಯ ಬಳಿ ಜನರು ಈ ಕಾಳಿಂಗ ಸರ್ಪವನ್ನು ನೋಡಿದ್ದಾರೆ, ನಂತರ ಅವರು ತಕ್ಷಣ ಚಂದ್ರಕುಮಾರ್ ಅಹಿರ್ವಾರ್ ಎಂಬ ಹಾವು ಹಿಡಿಯುವವರಿಗೆ ಮಾಹಿತಿ ನೀಡಿದ್ದಾರೆ. ಅವನು ಸ್ಥಳಕ್ಕೆ ಬಂದು 5 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾನೆ. ಆಗ ಕೋಪಗೊಂಡ ಹಾವು ಚಂದ್ರಕುಮಾರನ ಎರಡೂ ಕೈ ಹೆಬ್ಬೆರಳುಗಳನ್ನು ಕಚ್ಚಿತು. ಹಾಗಾಗಿ ಚಂದ್ರಕುಮಾರ್ ಭಾಗ್ಯೋದಯ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು.

ಇದನ್ನೂ ಓದಿ: ವಯನಾಡ್ ಭೂಕುಸಿತ; ದಕ್ಷಿಣ ಭಾರತದ ಸಿನಿಮಾ ನಟರಿಂದ ಸಂತ್ರಸ್ತರಿಗೆ ನೆರವಿನ‌ ಮಹಾಪೂರ

ಅದೃಷ್ಟವಶಾತ್, ಆತ ಸಂಪೂರ್ಣವಾಗಿ ಚೇತರಿಸಿಕೊಂಡು ಮನೆಗೆ ಹೋಗಿದ್ದಾನೆ. ಆದರೆ ಅಲ್ಲಿ ಅವನನ್ನು ಕಚ್ಚಿದ ಅದೇ ಹಾವು ಸತ್ತು ಹೋಗಿತ್ತು. ಕಾರಣವೆನೆಂದರೆ ಅವನು ಹಾವನ್ನು ಸೆರೆ ಹಿಡಿದು ಪ್ಲಾಸ್ಟಿಕ್ ಪೆಟ್ಟಿಗೆಯಲ್ಲಿ ಹಾಕಿದ್ದ. ಅಲ್ಲಿ ಗಾಳಿಯಾಡಲು ಯಾವುದೇ ರಂಧ್ರಗಳಿರಲಿಲ್ಲ. ಇದರ ಪರಿಣಾಮವಾಗಿ ಹಾವು ಉಸಿರಾಡಲು ಸಾಧ್ಯವಾಗದೆ ಪ್ರಾಣ ಬಿಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಮನುಷ್ಯರ ವಿಷ ಕೆಲವೊಮ್ಮೆ ಹಾವಿನ ವಿಷಕ್ಕಿಂತ ಅಪಾಯಕಾರಿ. ಹಾವಿನ ಸಾವಿಗೆ ಇದೂ ಕಾರಣ ಇರಬಹುದು ಎಂದೂ ಸ್ಥಳೀಯ ಗ್ರಾಮಸ್ಥರು ಚರ್ಚಿಸುತ್ತಿದ್ದಾರೆ!

Continue Reading

Latest

Viral Video: ಯುವತಿ ಜತೆ ಡ್ಯಾನ್ಸ್ ಮಾಡ್ತಾ ಮಾಡ್ತಾ ಪ್ರಾಣಬಿಟ್ಟ ಯುವಕ; ಆಘಾತಕಾರಿ ವಿಡಿಯೊ

Viral Video: ಸಾವು ಹೇಗೆ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಇಲ್ಲೊಬ್ಬ ವ್ಯಕ್ತಿ ಡ್ಯಾನ್ಸ್ ಮಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಭೈನ್ಸ್ ಲಾನಾ ಗ್ರಾಮದಲ್ಲಿ ನಡೆದಿದೆ. ಮನ್ನಾ ಲಾಲ್ ಜಖರ್ ಅವರ ಹಿರಿಯ ಸಹೋದರ ಕೆಲಸದಿಂದ ನಿವೃತ್ತಿಯನ್ನು ಹೊಂದಿದ ಪ್ರಯುಕ್ತ ‘ಸತ್ಸಂಗ’ ಕಾರ್ಯಕ್ರಮವನ್ನು ಆಚರಿಸಲಾಗಿತ್ತು. ಆ ಸಮಯದಲ್ಲಿ ಇವರು ಸಂಭ್ರಮದಿಂದ ಡ್ಯಾನ್ಸ್ ಮಾಡಿದ್ದು, ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ಕುಸಿದು ಬಿದ್ದ ಆ ಆಘಾತಕಾರಿ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

VISTARANEWS.COM


on

Viral Video
Koo


ಜೀವನ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕ ಮಾತ್ರ. ಅದು ಯಾವ ಕ್ಷಣದಲ್ಲಾದರೂ ಒಡೆಯಬಹುದು. ಹಾಗಾಗಿ ಸಾವು ಯಾರಿಗೆ ಯಾವಾಗ ಸಂಭವಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಇದೀಗ ಶಿಕ್ಷಕನೊಬ್ಬ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಸಾವನಪ್ಪಿದ ಆಘಾತಕಾರಿ ಘಟನೆ ರಾಜಸ್ಥಾನದ ಭೈನ್ಸ್ ಲಾನಾ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಮನ್ನಾ ಲಾಲ್ ಜಖರ್ ಡ್ಯಾನ್ಸ್ ಮಾಡುತ್ತಾ ಸಾವನಪ್ಪಿದ ವ್ಯಕ್ತಿ. ಇವರು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಇವರ ಹಿರಿಯ ಸಹೋದರ ಕೆಲಸದಿಂದ ನಿವೃತ್ತಿಯನ್ನು ಹೊಂದಿದ ಪ್ರಯುಕ್ತ ‘ಸತ್ಸಂಗ’ ಕಾರ್ಯಕ್ರಮವನ್ನು ಆಚರಿಸಲಾಗಿದೆ. ಆ ಸಮಯದಲ್ಲಿ ಇವರು ಸಂಭ್ರಮದಿಂದ ಡ್ಯಾನ್ಸ್ ಮಾಡಿದ್ದು, ಆ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ಕುಸಿದು ಬಿದ್ದ ಆ ಆಘಾತಕಾರಿ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಮಹಿಳೆಯೊಬ್ಬಳ ಜೊತೆ ಜಖರ್ ಡ್ಯಾನ್ಸ್ ಮಾಡುವಾಗ ಅವರು ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದಿದ್ದಾರೆ. ಅವರನ್ನು ಮೇಲೆತ್ತಲು ಕುಟುಂಬಸ್ಥರು ಮತ್ತು ಮತ್ತು ಗ್ರಾಮಸ್ಥರು ಎಷ್ಟೇ ಪ್ರಯತ್ನಿಸಿದರೂ ಅವರು ಎದ್ದೇಳದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಜಖರ್ ಮೃತಪಟ್ಟಿದ್ದಾರೆ ಎಂದ ತಿಳಿಸಿದ್ದಾರೆ. ಜಖರ್‌ಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಈ ಘಟನೆಯು ಕುಟುಂಬ ಮತ್ತು ಗ್ರಾಮವನ್ನು ಆಘಾತಕ್ಕೀಡು ಮಾಡಿದೆ, ಸಂತೋಷದ ಸಂದರ್ಭದ ನಡುವೆ ಈ ಘಟನೆ ಗೊಂದಲವನ್ನುಂಟು ಮಾಡಿದೆ.

ಜೋಧಪುರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಜಖರ್, ಈ ಕಾರ್ಯಕ್ರಮಕ್ಕಾಗಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಆದರೆ ಈ ರೀತಿಯಲ್ಲಿ ದುರಂತಕ್ಕೀಡಾದರು. ಅವರ ಸಾವಿನ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮನುಷ್ಯ ಹೇಗೆ ಅಕಾಲಿಕ ಸಾವಿಗೆ ಗುರುಯಾಗುತ್ತಾನೆ ಎಂಬುದನ್ನು ಈ ವಿಡಿಯೊ ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ; ನೋಡಿದ ಜನ ಸುಸ್ತು!

Viral Video
Viral Video

ಈ ಹಿಂದೆ ಈ ವರ್ಷದ ಮೇ ತಿಂಗಳಿನಲ್ಲಿ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಮಲನ್ವಾಸಾ ಗ್ರಾಮದಲ್ಲಿ ಭಜನೆಗೆ ನೃತ್ಯ ಮಾಡುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ಘಟನೆಯ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೃತರನ್ನು ರಾಜಸ್ಥಾನ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಜೋಧ್ರಾಜ್ ನಗರ್ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಸಂಜೆ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ನಾಗರ್ ನೃತ್ಯ ಮಾಡುತ್ತಿದ್ದಾಗ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನಪ್ಪಿದ್ದರು.

Continue Reading

Latest

Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

Viral Video: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಅಂತಾರಾಷ್ಟ್ರೀಯ ಸ್ನೇಹಿತರ ದಿನದಂದು ನಾಯಿಮರಿ ಮತ್ತು ಮಗುವಿನ ಸ್ನೇಹದ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅಳುತ್ತಿರುವ ಹುಡುಗನನ್ನು ಆತನ ಸ್ನೇಹಿತನಂತೆ ಇದ್ದ ಸಾಕುಪ್ರಾಣಿ ನಾಯಿಮರಿ ಸಂತೈಸುತ್ತಿದೆ. 39 ಸೆಕೆಂಡುಗಳ ಈ ವಿಡಿಯೊದಲ್ಲಿ ಪುಟ್ಟ ಹುಡುಗನೊಬ್ಬ ನೆಲದ ಮೇಲೆ ಕುಳಿತು ತನ್ನ ಬೆನ್ನನ್ನು ಮಂಚದ ಮೇಲೆ ಇಟ್ಟುಕೊಂಡು ಬೇಸರದಿಂದ ಅಳುತ್ತಿದ್ದಾನೆ. ಆಗ ಅವನ ಪಕ್ಕ ಇದ್ದ ನಾಯಿಮರಿ ಅವನನ್ನು ಸಮಾಧಾನಪಡಿಸುತ್ತಿದೆ.ಈ ಮುದ್ದಾದ ವಿಡಿಯೊ ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ನವದೆಹಲಿ: ಜಗತ್ತಿನೆಲ್ಲೆಡೆ ಆಗಸ್ಟ್ 4ರಂದು ಸ್ನೇಹಿತರ ದಿನವನ್ನು ಆಚರಿಸಲಾಗಿದೆ. ನಮ್ಮ ರಕ್ತ ಸಂಬಂಧಿಕರ ಜೊತೆ ನಮ್ಮ ಸಂಬಂಧ ಬೆಸೆದುಕೊಳ್ಳುವುದು ಸಹಜ. ಆದರೆ ನಮ್ಮ ಜೊತೆ ಯಾವುದೇ ಸಂಬಂಧವಿಲ್ಲದೇ ಬೆಸೆದುಕೊಳ್ಳುವುದೇ ಸ್ನೇಹ. ಜಗತ್ತಿನಲ್ಲಿ ಹೆಚ್ಚಿನ ಜನರಿಗೆ ಸಂಬಂಧಿಕರಿಗಿಂತ ಹೆಚ್ಚು ನೆರವಾಗುವವರು ಸ್ನೇಹಿತರು. ತಮ್ಮ ಸುಖ, ದುಃಖಗಳನ್ನು ಹಂಚಿಕೊಳ್ಳುವ ಮನಸ್ಸೆಂದರೆ ಅದು ಸ್ನೇಹ. ಎಷ್ಟೋ ಜನರು ತಮ್ಮ ಕಷ್ಟಗಳನ್ನು ಸಂಬಂಧಿಕರಿಗಿಂತ ಹೆಚ್ಚು ಸ್ನೇಹಿತರ ಬಳಿಯೇ ಹಂಚಿಕೊಳ್ಳುತ್ತಾರೆ. ಯಾಕೆಂದರೆ ಸ್ನೇಹ ಸಂಬಂಧ ಅಷ್ಟೋಂದು ಬಲವಾಗಿರುತ್ತದೆ. ನಾವು ಸ್ನೇಹವನ್ನು ಮನುಷ್ಯರ ಜೊತೆಯೇ ಮಾಡಬೇಕೆಂದಿಲ್ಲ. ಕೆಲವರು ತಮ್ಮ ಸಾಕು ಪ್ರಾಣಿಗಳ ಜೊತೆಯೂ ಸ್ನೇಹ ಬೆಳೆಸುತ್ತಾರೆ. ಇಂತಹ ಸ್ನೇಹವನ್ನು ವ್ಯಕ್ತಪಡಿಸುವ ಸ್ನೇಹಿತರ ದಿನದಂದು ಉದ್ಯಮಿಯೊಬ್ಬರು ಉತ್ತಮ ಸ್ನೇಹಕ್ಕೆ ನಿರ್ದಶನವೆಂಬಂತೆ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದು ಅದು ಸಖತ್ ವೈರಲ್ (Viral Video) ಆಗಿದೆ.

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಅಂತರರಾಷ್ಟ್ರೀಯ ಸ್ನೇಹಿತರ ದಿನದಂದು ನಾಯಿಮರಿ ಮತ್ತು ಮಗುವಿನ ಸ್ನೇಹದ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅಳುತ್ತಿರುವ ಹುಡುಗನನ್ನು ಆತನ ಸ್ನೇಹಿತನಂತೆ ಇದ್ದ ಸಾಕುಪ್ರಾಣಿ ನಾಯಿಮರಿ ಸಂತೈಸುತ್ತಿದೆ. 39 ಸೆಕೆಂಡುಗಳ ಈ ವಿಡಿಯೊದಲ್ಲಿ ಪುಟ್ಟ ಹುಡುಗನೊಬ್ಬ ನೆಲದ ಮೇಲೆ ಕುಳಿತು ತನ್ನ ಬೆನ್ನನ್ನು ಮಂಚದ ಮೇಲೆ ಇಟ್ಟುಕೊಂಡು ಬೇಸರದಿಂದ ಅಳುತ್ತಿದ್ದಾನೆ. ಆಗ ಅವನ ಪಕ್ಕ ಇದ್ದ ನಾಯಿಮರಿ ಅವನನ್ನು ಸಮಾಧಾನಪಡಿಸುತ್ತಿದೆ. ಹಾಗೇ ಅವನ ಕಣ್ಣೀರನ್ನು ಒರೆಸಿಕೊಳ್ಳಲು ಅದು ಟಿಶ್ಯೂವನ್ನು ಅವನಿಗೆ ತಂದು ನೀಡಿದೆ. ಮತ್ತು ಅಳುತ್ತಿರುವ ಅವನ ಮುಖವನ್ನೇ ಬೇಸರದಿಂದ ನೋಡುತ್ತಿದೆ. ಆ ಹುಡುಗ ಕೂಡ ನಾಯಿಮರಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಈ ದೃಶ್ಯವನ್ನು ನೋಡಿದ ಎಂತವರಿಗೂ ಹೃದಯ ಭಾರವೆನಿಸುತ್ತದೆ. ಮೂಕ ಪ್ರಾಣಿಗಳಲ್ಲಿರುವ ಸ್ನೇಹದ ಮನೋಭಾವನೆಯನ್ನು ಈ ವಿಡಿಯೊ ಎತ್ತಿ ತೋರಿಸಿದೆ.

Viral Video
Viral Video

ಇದನ್ನೂ ಓದಿ: ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!

“ನಿಜವಾದ ಸ್ನೇಹಿತರು ನಮ್ಮ ಪ್ರತಿ ಕಣ್ಣೀರನ್ನು ಹಂಚಿಕೊಳ್ಳುತ್ತಾರೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ಈ ದೃಶ್ಯ ನಿಜವಾಗಿಯೂ ಸುಂದರವಾಗಿದೆ,” ಎಂದು ಇನ್ನೊಬ್ಬರು ಹೇಳಿದರು. “ಇದು ಮುದ್ದಾದ ಸಂಬಂಧ,” ಎಂದು ಮೂರನೆಯವರು ತಿಳಿಸಿದ್ದಾರೆ. “ಸ್ನೇಹವು ಎಂದಿಗೂ ವಿಶೇಷ ಜನರೊಂದಿಗೆ ಇರುವುದಿಲ್ಲ … ನಾವು ಸ್ನೇಹಿತರಾಗಿರುವ ಜನರು ವಿಶೇಷವಾಗುತ್ತಾರೆ” ಎಂದು ಬಳಕೆದಾರ ಸುಲೇಮಾನ್ ಖಾನ್ ಎಂಬುವವರು ಹಂಚಿಕೊಂಡಿದ್ದಾರೆ.

Continue Reading
Advertisement
Nia Sharma Trolled For Wearing Plunging Neckline Bralette
ಬಾಲಿವುಡ್4 mins ago

Nia Sharma: ಬ್ರಾ ಧರಿಸಿ ಪೋಸ್‌ ಕೊಟ್ಟ ಕಿರುತೆರೆ ನಟಿ ನಿಯಾ ಶರ್ಮಾರನ್ನು ಕಾಲೆಳೆದ ನೆಟ್ಟಿಗರು!

Emergency Landing
ವೈರಲ್ ನ್ಯೂಸ್25 mins ago

Emergency Landing: ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಕಾರಣವಾಯ್ತು ಹೇನು! ಏನಿದು ವಿಚಿತ್ರ ಪ್ರಕರಣ? ಇಲ್ಲಿದೆ ವಿವರ

BJP-JDS Padayatra
ಪ್ರಮುಖ ಸುದ್ದಿ32 mins ago

BJP-JDS Padayatra: ಪಾದಯಾತ್ರೆ ವೇಳೆ ಹೃದಯಾಘಾತದಿಂದ ಜೆಡಿಎಸ್ ಕಾರ್ಯಕರ್ತೆ ಸಾವು

Bangladesh Protests
ಪ್ರಮುಖ ಸುದ್ದಿ35 mins ago

Bangladesh Protests: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ದೇಶದಿಂದ ಪಲಾಯನ; ಪ್ರಧಾನಿ ಅರಮನೆಗೇ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

Shira News
ತುಮಕೂರು1 hour ago

Shira News: ಶಿರಾ ನಗರಸಭೆಯಿಂದ ದೊಡ್ಡಕೆರೆಯ ಸುತ್ತಲಿನ ಪ್ರದೇಶದ ಸ್ವಚ್ಛತೆ

Shravana 2024
ಧಾರ್ಮಿಕ1 hour ago

Shravana 2024: ಶ್ರಾವಣ ಉಪವಾಸದ ವೇಳೆ ಈ 5 ಪಾನೀಯ ಆರೋಗ್ಯಕರ

bs yediyurappa
ಪ್ರಮುಖ ಸುದ್ದಿ1 hour ago

BS Yediyurappa: ಮುಂದಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ 150 ಸೀಟು ಖಚಿತ: ಬಿಎಸ್‌ ಯಡಿಯೂರಪ್ಪ

PSI Parashuram Case
ಕರ್ನಾಟಕ1 hour ago

PSI Parashuram Case: ನಾನು ಯಾವ ಪೊಲೀಸ್‌ ಬಳಿಯೂ ದುಡ್ಡು ಕೇಳಿಲ್ಲ: ಶಾಸಕ ಚನ್ನಾರೆಡ್ಡಿ ಪಾಟೀಲ

Snake Bite
ವೈರಲ್ ನ್ಯೂಸ್2 hours ago

Snake Bite: ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

Road Accident
ಬೆಂಗಳೂರು2 hours ago

Road Accident : ಅಡ್ಡ ಬಂದ ನಾಯಿ ಮರಿ ಮೇಲೆ ಬೈಕ್ ಹತ್ತಿಸಿದ ಸವಾರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌