Valmiki Corporation scam: ವಾಲ್ಮೀಕಿ ನಿಗಮ ಹಗರಣ; ಕೋರ್ಟ್‌ಗೆ 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ - Vistara News

ಪ್ರಮುಖ ಸುದ್ದಿ

Valmiki Corporation scam: ವಾಲ್ಮೀಕಿ ನಿಗಮ ಹಗರಣ; ಕೋರ್ಟ್‌ಗೆ 3 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ

Valmiki Corporation scam: 12 ಆರೋಪಿಗಳ ವಿರುದ್ಧ ಸುಮಾರು 3 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ಬೆಂಗಳೂರಿನ ಎಸಿಎಂಎಂ ಕೋರ್ಟ್‌ಗೆ ಎಸ್‌ಐಟಿ ಸಲ್ಲಿಸಿದೆ.

VISTARANEWS.COM

on

Valmiki Corporation Scam
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ (Valmiki Corporation scam) ಸಂಬಂಧಿಸಿ ಎಸ್‌ಐಟಿ ತಂಡದಿಂದ ಕೋರ್ಟ್‌ಗೆ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. 12 ಆರೋಪಿಗಳ ವಿರುದ್ಧ ಸುಮಾರು 3 ಸಾವಿರ ಪುಟಗಳ ಚಾರ್ಜ್ ಶೀಟ್ ಅನ್ನು ನಗರದ ಎಸಿಎಂಎಂ ಕೋರ್ಟ್ ಸಲ್ಲಿಸಲಾಗಿದೆ.

ಆರೋಪಿಗಳಾದ ಸತ್ಯನಾರಾಯಣ ವರ್ಮ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ. ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ತೇಜ, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಪ್ರಕರಣದಲ್ಲಿ ಸುಮಾರು 50 ಕೋಟಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಸೀಜ್ ಮಾಡಿ ನ್ಯಾಯಾಲಯದ ಸುಪರ್ದಿಗೆ ನೀಡಲಾಗಿದೆ. ಪ್ರಕರಣದಲ್ಲಿ ಮೊದಲಿಗೆ ಬಂಧನವಾದ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ | Stock Market: ಷೇರುಪೇಟೆ ಮಹಾ ಪತನ; ಸೆನ್ಸೆಕ್ಸ್‌ 2,000 ಅಂಕ ಕುಸಿತ; 17 ಲಕ್ಷ ಕೋಟಿ ರೂ. ಲಾಸ್‌!

Inspector Death: ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ, ಎರಡು ತಿಂಗಳ ಹಿಂದೆ ಟ್ರಾನ್ಸ್‌ಫರ್‌ ಆಗಿದ್ದ ಸಿಸಿಬಿ ಎಸ್‌ಐ

police inspector death thimmegowda
police inspector death thimmegowda

ಬೆಂಗಳೂರು: ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌ ಆತ್ಮಹತ್ಯೆ (police inspector death) ಮಾಡಿಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ಸಿಸಿಬಿಗೆ (CCB) ಟ್ರಾನ್ಸ್‌ಫರ್‌ (Tarnsfer) ಆಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ತಿಮ್ಮೇಗೌಡ (Thimmegowda) ಆತ್ಮಹತ್ಯೆ ಮಾಡಿಕೊಂಡವರು. ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಬಿಡದಿಯಲ್ಲಿ ಆತ್ಮಹತ್ಯೆಗೆ (Self harming) ಶರಣಾಗಿದ್ದಾರೆ.

ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ತಿಮ್ಮೇಗೌಡ ಸಾವಿಗೆ ಶರಣಾಗಿದ್ದಾರೆ. ಈ ಹಿಂದೆ ಕುಂಬಳಗೋಡಿನ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ಎರಡು ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆಗೊಂಡಿದ್ದರು. ತಮ್ಮ ತೋಟದ ಜಾಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ.

ಇದನ್ನೂ ಓದಿ: Road Accident : ಅಮಾವಾಸ್ಯೆಗೆಂದು ದೇವಸ್ಥಾನಕ್ಕೆ ತೆರಳುತ್ತಿದ್ದ ಬೈಕ್‌ ಸವಾರ ಅಪಘಾತಕ್ಕೆ ಬಲಿ

1998ರ ರೂರಲ್ ಬ್ಯಾಚ್ ಇನ್ಸ್‌ಪೆಕ್ಟರ್ ತಿಮ್ಮೇಗೌಡ, ಚನ್ನಪಟ್ಟಣದ ಹಳ್ಳಿಯೊಂದರ ನಿವಾಸಿ. ಗ್ರಾಮೀಣ ಕೃಪಾಂಕದಲ್ಲಿ ಆಯ್ಕೆಯಾಗಿದ್ದ ತಿಮ್ಮೇಗೌಡ ವಿಧಾನಸಭೆ ಚುನಾವಣೆ ವೇಳೆಗೆ ಬಿಡದಿಯಿಂದ ಅತ್ತಿಬೆಲೆಗೆ ವರ್ಗಾವಣೆಯಾಗಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಅತ್ತಿಬೆಲೆಯಲ್ಲಿ ಪಟಾಕಿ ದುರಂತ ನಡೆದ ಬಳಿಕ ಆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದರು. ನಂತರ ಕುಂಬಳಗೋಡು ಠಾಣೆಗೆ ವರ್ಗಾವಣೆಯಾಗಿದ್ದು, ಇತ್ತೀಚೆಗೆ ಸಿಸಿಬಿಗೆ ವರ್ಗಾವಣೆಯಾಗಿತ್ತು.

ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಬೆನ್ನಲ್ಲೇ ಇನ್ನೊಬ್ಬ ಎಸ್‌ಐ ಆತ್ಮಹತ್ಯೆ ಪ್ರಕರಣ ನಡೆದಿದೆ. ಪಿಎಸ್‌ಐ ಪರಶುರಾಮ್ ಅವರ ಟ್ರಾನ್ಸ್‌ಫರ್‌ಗಾಗಿ ಲಂಚ ಕೇಳಿದ ಸ್ಥಳೀಯ ಶಾಸಕ ಹಾಗೂ ಆತನ ಪುತ್ರನ ಮೇಲೆ ದೂರು ದಾಖಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Sheikh Hasina: ರಾಜೀನಾಮೆ ನೀಡಿ ಶೇಖ್‌ ಹಸೀನಾ ವಿದೇಶಕ್ಕೆ ಪಲಾಯನ; ಸುರಕ್ಷತೆಗಾಗಿ ಭಾರತಕ್ಕೆ ಆಗಮನ?

Sheikh Hasina: ಪ್ರಧಾನಿ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಪ್ರತಿಭಟನಾಕಾರರು ಕರ್ಫ್ಯೂ ಧಿಕ್ಕರಿಸಿ, ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು ಮತ್ತು ಪ್ರಧಾನಿಯವರ ಅರಮನೆಗೆ ನುಗ್ಗಿ ಬೆಂಕಿ ಹಚ್ಚಿದರು. ಶೇಖ್‌ ಹಸೀನಾ ಮತ್ತು ಅವರ ಸಹೋದರಿ ಪ್ರಧಾನಿಗಳ ಅಧಿಕೃತ ನಿವಾಸವನ್ನು ತೊರೆದು ಸುರಕ್ಷಿತ ಸ್ಥಳದತ್ತ ತೆರಳಿದ್ದಾರೆ. ಅವರು ಅಧಿಕೃತ ಭಾಷಣವನ್ನು ರೆಕಾರ್ಡ್ ಮಾಡಲು ಬಯಸಿದ್ದರು. ಆದರೆ ಅದನ್ನು ಮಾಡಲು ಆಕೆಗೆ ಅವಕಾಶ ಸಿಗಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಶೇಖ್‌ ಹಸೀನಾ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM

on

Sheikh Hasina
Koo

ಢಾಕಾ: 1971ರ ಯುದ್ಧದ ಹೋರಾಟಗಾರರ ಕುಟುಂಬಸ್ಥರಿಗೆ ಮೀಸಲಾತಿ ನೀಡುವ ಪ್ರಕರಣವು ಬಾಂಗ್ಲಾದೇಶದಲ್ಲಿ ನಾಗರಿಕ ದಂಗೆಗೆ (Bangladesh Protests) ಕಾರಣವಾಗಿದ್ದು, ಈಗ ಪ್ರಧಾನಿ ಶೇಖ್‌ ಹಸೀನಾ (Sheikh Hasina) ಅವರ ತಲೆದಂಡವಾಗಿದೆ. ಪ್ರಧಾನಿಯ ಅರಮನೆಗೆ ಪ್ರತಿಭಟನಾಕಾರರು ನುಗ್ಗಿದ ಬಳಿಕ ಶೇಖ್‌ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಅವರು ವಿದೇಶಕ್ಕೆ ಪರಾರಿಯಾಗಿದ್ದಾರೆ. ಅಲ್ಲದೆ, ಸುರಕ್ಷತೆ ದೃಷ್ಟಿಯಿಂದ ಅವರು ಭಾರತಕ್ಕೆ ಆಗಮಿಸಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಭಾರತ ಹಾಗೂ ಬಾಂಗ್ಲಾದೇಶ ನಡುವೆ ಉತ್ತಮ ದ್ವಿಪಕ್ಷೀಯ ಸಂಬಂಧ ಇದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೇಖ್‌ ಹಸೀನಾ ಆಪ್ತರಾಗಿದ್ದಾರೆ. ಅವರು ಬಾಂಗ್ಲಾದೇಶದಲ್ಲೇ ಇದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂಬ ಕಾರಣಕ್ಕಾಗಿ ಅವರು ಭಾರತಕ್ಕೆ ಆಗಮಿಸಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಶೇಖ್‌ ಹಸೀನಾ ಮತ್ತು ಅವರ ಸಹೋದರಿ ಪ್ರಧಾನಿಗಳ ಅಧಿಕೃತ ನಿವಾಸವನ್ನು ವಿದೇಶಕ್ಕೆ ಹಾರಿದ್ದಾರೆ ಎನ್ನಲಾಗಿದೆ. ಅವರು ಅಧಿಕೃತ ಭಾಷಣವನ್ನು ರೆಕಾರ್ಡ್ ಮಾಡಲು ಬಯಸಿದ್ದರು. ಆದರೆ ಅದನ್ನು ಮಾಡಲು ಆಕೆಗೆ ಅವಕಾಶ ಸಿಗಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಶೇಖ್‌ ಹಸೀನಾ ರಾಜೀನಾಮೆ ದೇಶ ತೊರೆದಿರಬಹುದು ಎಂದು ಹೇಳಲಗುತ್ತಿದೆ.

ಪ್ರಧಾನಿ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಪ್ರತಿಭಟನಾಕಾರರು ಕರ್ಫ್ಯೂ ಧಿಕ್ಕರಿಸಿ, ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು ಮತ್ತು ಪ್ರಧಾನಿಯವರ ಅರಮನೆಯನ್ನು ನುಗ್ಗಲು ಯತ್ನಿಸಿದರು. ಢಾಕಾದಲ್ಲಿ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಸೈನಿಕರು ಮತ್ತು ಪೊಲೀಸರು ಪ್ರಧಾನಿ ಕಚೇರಿ ಹಾಗೂ ನಿವಾಸಕ್ಕೆ ಮುಳ್ಳುತಂತಿಯ ಬೇಲಿಗಳ ಮೂಲಕ ಬಂದೋಬಸ್ತ್‌ ಮಾಡಿದರಾದರೂ, ಅಪಾರ ಜನಸಮೂಹದ ಮುಂದೆ ಅವರು ನಿಸ್ಸಹಾಯಕರಾದರು. ಬೀದಿಗಳಲ್ಲಿ ಹರಿದುಬಂದ ಪ್ರತಿಭಟನಾಕಾರರ ಪ್ರವಾಹ ಅಡೆತಡೆಗಳನ್ನು ಕಿತ್ತುಹಾಕಿತು. ಸ್ಥಳೀಯ ಮಾಧ್ಯಮಗಳ ಪ್ರಕಾರ ಅಂದಾಜು 4,00,000 ಪ್ರತಿಭಟನಾಕಾರರು ಬೀದಿಗಳಲ್ಲಿದ್ದಾರೆ.

ನಿನ್ನೆ ನಡೆದ ಭೀಕರ ಘರ್ಷಣೆಗಳಲ್ಲಿ 98 ಜನರು ಮೃತಪಟ್ಟಿದ್ದಾರೆ. ನಂತರ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಸಜ್ಜಾಗಿದ್ದಾರೆ. ಕಳೆದ ತಿಂಗಳು ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇದುವರೆಗೆ ಸಾವಿನ ಸಂಖ್ಯೆ 300ನ್ನೂ ದಾಟಿ ಏರುತ್ತಿದೆ.

ರಾಜೀನಾಮೆಗೆ ಒತ್ತಾಯಿಸಿ ಹಿಂಸೆ

ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ (Bangladesh Protests) ಹಲವು ದಿನಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ನೂರಾರು ಜನ ಮೃತಪಟ್ಟ ಬೆನ್ನಲ್ಲೇ ಮತ್ತೊಂದು ಹಿಂಸಾಚಾರ ಭುಗಿಲೆದ್ದಿದೆ. ಪ್ರಧಾನಿ ಶೇಖ್‌ ಹಸೀನಾ (Sheikh Hasina) ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾರೂಪ ತಾಳಿದ್ದು, ಮೃತರ ಸಂಖ್ಯೆ 98ಕ್ಕೆ ತಲುಪಿದೆ. ಈ ಪೈಕಿ 14 ಮಂದಿ ಪೊಲೀಸರು ಅಸುನೀಗಿದ್ದು, ಬಾಂಗ್ಲಾದೇಶಕ್ಕೆ ತೆರಳದಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಭಾನುವಾರ (ಆಗಸ್ಟ್‌ 4) ನಡೆದ ಭೀಕರ ಘರ್ಷಣೆಗಳಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಜುಲೈಯಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಮೃತರ ಸಂಖ್ಯೆ ಒಟ್ಟು 300ಕ್ಕೆ ಏರಿದೆ. ಬಾಂಗ್ಲಾದಲ್ಲಿ ಕೆಲ ದಿನಗಳ ಹಿಂದೆ ತೀವ್ರ ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ನಿಯಮವನ್ನು ಕೋರ್ಟ್‌ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಪ್ರತಿಪಕ್ಷಗಳ ಮುಖಂಡರು, ಸಾರ್ವಜನಿಕರು ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಇಲ್ಲವೇ ಶೇಖ್‌ ಹಸೀನಾ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಭಾನುವಾರ ಸಾವಿರಾರು ಪ್ರತಿಭಟನಾಕಾರರು ದೇಶದ ಹಲವಾರು ಭಾಗಗಳಲ್ಲಿ ಜಮಾಯಿಸಿ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರು ಈಶಾನ್ಯ ಪಟ್ಟಣ ಎನಾಯೆತ್ಪುರದ ಠಾಣೆಗೂ ಮುತ್ತಿಗೆ ಹಾಕಿದರು. ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೋಮವಾರ, ಮಂಗಳವಾರ ಮತ್ತು ಬುಧವಾರ ಮೂರು ದಿನಗಳ ಸಾರ್ವತ್ರಿಕ ರಜಾದಿನವನ್ನು ಘೋಷಿಸಲಾಗಿದೆ.

ಇದನ್ನೂ ಓದಿ: Bangladesh Protests: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ; ಮೃತರ ಸಂಖ್ಯೆ 98ಕ್ಕೆ ಏರಿಕೆ: ಭಾರತೀಯರಿಗೆ ಮುನ್ನೆಚ್ಚರಿಕೆ

Continue Reading

ಪ್ರಮುಖ ಸುದ್ದಿ

BJP-JDS Padayatra: ಪಾದಯಾತ್ರೆ ವೇಳೆ ಹೃದಯಾಘಾತದಿಂದ ಜೆಡಿಎಸ್ ಕಾರ್ಯಕರ್ತೆ ಸಾವು

BJP-JDS Padayatra: ಭ್ರಷ್ಟಾಚಾರ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್‌ ವತಿಯಿಂದ ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಇದರಲ್ಲಿ ಪಾಲ್ಗೊಂಡಿದ್ದ ಜೆಡಿಎಸ್‌ ಕಾರ್ಯಕರ್ತೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

VISTARANEWS.COM

on

BJP-JDS Padayatra
Koo

ಬೆಂಗಳೂರು: ಮೈಸೂರು ಚಲೋ ಪಾದಯಾತ್ರೆ ವೇಳೆ ಹೃದಯಾಘಾತದಿಂದ ಜೆಡಿಎಸ್ ಕಾರ್ಯಕರ್ತೆ ಮೃತಪಟ್ಟಿರುವ ಘಟನೆ (BJP-JDS Padayatra) ಸೋಮವಾರ ನಡೆದಿದೆ. ಆಸ್ಪತ್ರೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹಾಗೂ ವಿವಿಧ ಮುಖಂಡರು ಭೇಟಿ ನೀಡಿ ಅಂತಿಮ ದರ್ಶನ್‌ ಪಡೆದಿದ್ದಾರೆ.

ಚನ್ನಪಟ್ಟಣದ ಬನಶಂಕರಿಯ ಗೌರಮ್ಮ ಎಂಬುವರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಪಾದಯಾತ್ರೆ ವೇಳೆ ಹೃದಯಾಘಾತವಾಗಿದ್ದರಿಂದ ಅವರು ಅಸ್ವಸ್ಥಗೊಂಡಿದ್ದರು. ಅವರನ್ನು ಕೂಡಲೇ ಚನ್ನಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ನಿಖಿಲ್‌ ಕುಮಾರಸ್ವಾಮಿ ತೆರಳಿ ಅಂತಿಮ ದರ್ಶನ ಪಡೆದು, ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.

ಬಿಜೆಪಿ ಮುಖಂಡ ಅಸ್ವಸ್ಥ; ಆಸ್ಪತ್ರೆಗೆ ದಾಖಲು

bs yediyurappa

ಚನ್ನಪಟ್ಟಣದಲ್ಲಿ ಪಾದಯಾತ್ರೆ ವೇಳೆ ಬಿಜೆಪಿ ಮುಖಂಡರೊಬ್ಬರು ಕೂಡ ಅಸ್ವಸ್ಥಗೊಂಡಿದ್ದು, ಅವರನ್ನು ಕೂಡಲೇ ಆಂಬ್ಯುಲೆನ್ಸ್ ಮೂಲಕ ರಾಮನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಬಿಜೆಪಿ ಜಯನಗರ ಮಂಡಲ ಉಪಾಧ್ಯಕ್ಷ ಶಂಕರ್ ಅಸ್ವಸ್ಥಗೊಂಡವರು.

ಪಾದಯಾತ್ರೆ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಸಿ.ಕೆ. ರಾಮಮೂರ್ತಿ ಮತ್ತು ರವಿಸುಬ್ರಮಣ್ಯ ಮತ್ತಿತರರು ತೆರಳಿ ಶಂಕರ್ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ | PSI Parashuram Case: ನಾನು ಯಾವ ಪೊಲೀಸ್‌ ಬಳಿಯೂ ದುಡ್ಡು ಕೇಳಿಲ್ಲ: ಶಾಸಕ ಚನ್ನಾರೆಡ್ಡಿ ಪಾಟೀಲ

ಮುಂದಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ 150 ಸೀಟು ಖಚಿತ: ಬಿಎಸ್‌ ಯಡಿಯೂರಪ್ಪ

bs yediyurappa
bs yediyurappa

ರಾಮನಗರ: ಬಿಜೆಪಿ- ಜೆಡಿಎಸ್‌ ಮೈತ್ರಿಕೂಟ ಸಂಬಂಧ ಶಾಶ್ವತ. ರಾಜ್ಯದ ಜನತೆ ಭ್ರಷ್ಟ ಕಾಂಗ್ರೆಸ್‌ (Congress) ಸರಕಾರದಿಂದ ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿಕೂಟದಿಂದ (BJP-JDS Alliance) ಮುಂಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

ʼಮೈಸೂರು ಚಲೋʼ ಪಾದಯಾತ್ರೆಯ (BJP-JDS Padayatra) ಮೂರನೇ ದಿನದ ನಡಿಗೆ ಹಾಗೂ ಚನ್ನಪಟ್ಟಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದು ಈ ರಾಜ್ಯದ ಮುಖ್ಯಮಂತ್ರಿ ಅನೇಕ ಭ್ರಷ್ಟಾಚಾರಕ್ಕೆ ಸಿಲುಕಿದ್ದಾರೆ. ಉಸಿರುಗಟ್ಟುವ ವಾತಾವರಣದಲ್ಲಿ ಸಿಲುಕಿದ್ದಾರೆ. ಗೌರವಯುತವಾಗಿ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ತೋಳ್ಬಲ, ಹೆಂಡದ ಬಲ, ಅಧಿಕಾರದ ಬಲದಿಂದ ಬಂದಿರುವ ಸಿಎಂ ಅನೇಕ ಭ್ರಷ್ಟಾಚಾರಗಳಲ್ಲಿ‌ ಸಿಲುಕಿ ನರಳುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನಾಯಕತ್ವ ಇದ್ದರೆ ಕೂಡಲೇ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಬೇಕು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಸಿದ್ದರಾಮಯ್ಯ ಅವರಂತೆ ಮುಡಾದಲ್ಲಿ 14 ಸೈಟು ಪಡೆದಿರೋದು ಯಾರೂ ಇಲ್ಲ. ಒಬ್ಬ ಮುಖ್ಯಮಂತ್ರಿ ತನ್ನ ಪತ್ನಿ ಹೆಸರಿಗೆ 14 ಸೈಟು ಪಡೆದಿದ್ದಾರೆ. ಅವರೇ ಅದನ್ನು ಒಪ್ಪಿಕೊಂಡಿದ್ದಾರೆ. 60 ಕೋಟಿ ಬೆಲೆ ಬಾಳಲಿದೆ ಅಂತಲೂ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಕೇಂದ್ರದ ನಾಯಕರಿಗೆ ಜವಾಬ್ದಾರಿ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ವಾಲ್ಮೀಕಿ ನಿಗಮದಂಥ ಬೃಹತ್ ಹಗರಣ ಹಿಂದೆಂದೂ ಆಗಿರಲಿಲ್ಲ.‌ ಇನ್ಸ್‌ಪೆಕ್ಟರ್‌ ವರ್ಗಾವಣೆಗೆ 30-40 ಲಕ್ಷ ತಗೋಳೋದು ನೋಡಿರಲಿಲ್ಲ. ಇದರಿಂದಾಗಿ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರೋದನ್ನ ನೀವು ನೋಡಿದ್ದೀರಿ. ಇದು ಅತ್ಯಂತ ಭ್ರಷ್ಟ ಸರಕಾರ ಎಂದು ಅವರು ಆಪಾದಿಸಿದರು.

ಬಿಜೆಪಿ-ಜೆಡಿಎಸ್ ಸಂಬಂಧ ಶಾಶ್ವತ ಸಂಬಂಧ. ನಾವು ಜೊತೆಯಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ. ಮೈಸೂರಿನಲ್ಲಿ ಎರಡು ಲಕ್ಷ ಜನ ಸೇರಿಸಿ ಸಮಾರೋಪ ಮಾಡಲಿದ್ದೇವೆ. ನಿಮ್ಮ ಕೇಂದ್ರದ ನಾಯಕರಿಗೆ ಭ್ರಷ್ಟಾಚಾರದ ಮನವರಿಕೆ ಮಾಡುವ ಕೆಲಸ ಮಾಡ್ತಿದ್ದೇವೆ. ಈಗಲಾದ್ರೂ ಮುಖ್ಯಮಂತ್ರಿ ರಾಜೀನಾಮೆ ಪಡೆಯಬೇಕು. ಪಾದಯಾತ್ರೆ ಮೈಸೂರು ತಲುಪುವುದರ ಒಳಗೆ ಸಿಎಂ ರಾಜೀನಾಮೆ ಕೊಡದಿದ್ರೆ ನಮ್ಮ ಮುಂದಿನ ಹೋರಾಟ ರೂಪಿಸಲಿದ್ದೇವೆ ಎಂದು ಅವರು ಎಚ್ಚರಿಸಿದರು.

ʼನಮ್ಮ ಈ ಹೋರಾಟ ನಾವು ಅಧಿಕಾರಕ್ಕೆ ಬರಬೇಕು ಅಂತಲ್ಲ. ಈ ರಾಜ್ಯದಲ್ಲಿ ವಚನಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ. ವಾಲ್ಮೀಕಿ ನಿಗಮದ 187 ಕೋಟಿ ಲೂಟಿ ಮಾಡಿದೆ. ನಮ್ಮ ಹೋರಾಟದ ಪರಿಣಾಮವಾಗಿ ದೆಹಲಿಯಿಂದ ಕಾಂಗ್ರೆಸ್ ವರಿಷ್ಠರು ಬಂದಿದ್ದಾರೆ. ಸಿಎಂ ಪರವಾಗಿ ಗಟ್ಟಿಯಾಗಿ ನಿಲ್ಲುವಂತೆ ಆಡಳಿತ ಪಕ್ಷದ ಶಾಸಕರಿಗೆ ಸೂಚಿಸಲು ಬಂದಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಕೊಡೋದಾಗಿ ಭರವಸೆ ಕೂಡ ನೀಡಿದ್ದಾರೆ. ಆದರೆ ಈ ಸರ್ಕಾರ ಎಷ್ಟು ಬೇಗ ತೊಲಗಲಿದೆಯೋ, ಅಷ್ಟು ಒಳ್ಳೆಯದುʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನುಡಿದರು.

Continue Reading

ಪ್ರಮುಖ ಸುದ್ದಿ

Bangladesh Protests: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ದೇಶದಿಂದ ಪಲಾಯನ; ಪ್ರಧಾನಿ ಅರಮನೆಗೇ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

Bangladesh Protests: ಪ್ರಧಾನಿ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಪ್ರತಿಭಟನಾಕಾರರು ಕರ್ಫ್ಯೂ ಧಿಕ್ಕರಿಸಿ, ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು ಮತ್ತು ಪ್ರಧಾನಿಯವರ ಅರಮನೆಗೆ ನುಗ್ಗಿ ಬೆಂಕಿ ಹಚ್ಚಿದರು. ಶೇಖ್‌ ಹಸೀನಾ ಮತ್ತು ಅವರ ಸಹೋದರಿ ಪ್ರಧಾನಿಗಳ ಅಧಿಕೃತ ನಿವಾಸವನ್ನು ತೊರೆದು ಸುರಕ್ಷಿತ ಸ್ಥಳದತ್ತ ತೆರಳಿದ್ದಾರೆ. ಅವರು ಅಧಿಕೃತ ಭಾಷಣವನ್ನು ರೆಕಾರ್ಡ್ ಮಾಡಲು ಬಯಸಿದ್ದರು. ಆದರೆ ಅದನ್ನು ಮಾಡಲು ಆಕೆಗೆ ಅವಕಾಶ ಸಿಗಲಿಲ್ಲ ಎಂದು ಹೇಳಲಾಗಿದೆ. ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಶೇಖ್‌ ಹಸೀನಾ ರಾಜೀನಾಮೆ ನೀಡಿದ್ದಾರೆ.

VISTARANEWS.COM

on

Bangladesh Protests
Koo

ಹೊಸದಿಲ್ಲಿ/ಢಾಕಾ: ದೇಶಾದ್ಯಂತ ಹಿಂಸಾಚಾರ, ಘರ್ಷಣೆಗಳು (Bangladesh Protests) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Bangladesh Prime Minister Sheikh Hasina) ಅವರು ರಾಜೀನಾಮೆ ನೀಡಿ ರಾಜಧಾನಿ ಢಾಕಾವನ್ನು (Dhaka) ತೊರೆದಿದ್ದಾರೆ. ಪ್ರತಿಭಟನಾಕಾರರು ಪಿಎಂ ನಿವಾಸದತ್ತ ನುಗ್ಗುತ್ತಿದ್ದಾರೆ ಹಾಗೂ ಬೀದಿಗಳಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಪ್ರಧಾನಿಯ ಅರಮನೆಗೇ ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಹೆಚ್ಚು ಸುರಕ್ಷಿತ ಪ್ರದೇಶದತ್ತ ಹಸೀನಾ ತೆರಳಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಅವರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಮತ್ತೊಂದು ಮೂಲ ತಿಳಿಸಿದೆ.

ಶೇಖ್‌ ಹಸೀನಾ ಮತ್ತು ಅವರ ಸಹೋದರಿ ಪ್ರಧಾನಿಗಳ ಅಧಿಕೃತ ನಿವಾಸವನ್ನು ತೊರೆದು ಸುರಕ್ಷಿತ ಸ್ಥಳದತ್ತ ತೆರಳಿದ್ದಾರೆ. ಅವರು ಅಧಿಕೃತ ಭಾಷಣವನ್ನು ರೆಕಾರ್ಡ್ ಮಾಡಲು ಬಯಸಿದ್ದರು. ಆದರೆ ಅದನ್ನು ಮಾಡಲು ಆಕೆಗೆ ಅವಕಾಶ ಸಿಗಲಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ, ಶೇಖ್‌ ಹಸೀನಾ ರಾಜೀನಾಮೆ ನೀಡಿದರು ಎಂದು ಹೇಳಲಾಗಿದೆ.

ಪ್ರಧಾನಿ ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿ ಲಕ್ಷಾಂತರ ಪ್ರತಿಭಟನಾಕಾರರು ಕರ್ಫ್ಯೂ ಧಿಕ್ಕರಿಸಿ, ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು ಮತ್ತು ಪ್ರಧಾನಿಯವರ ಅರಮನೆಯನ್ನು ನುಗ್ಗಲು ಯತ್ನಿಸಿದರು. ಢಾಕಾದಲ್ಲಿ ಶಸ್ತ್ರಸಜ್ಜಿತ ವಾಹನಗಳೊಂದಿಗೆ ಸೈನಿಕರು ಮತ್ತು ಪೊಲೀಸರು ಪ್ರಧಾನಿ ಕಚೇರಿ ಹಾಗೂ ನಿವಾಸಕ್ಕೆ ಮುಳ್ಳುತಂತಿಯ ಬೇಲಿಗಳ ಮೂಲಕ ಬಂದೋಬಸ್ತ್‌ ಮಾಡಿದರಾದರೂ, ಅಪಾರ ಜನಸಮೂಹದ ಮುಂದೆ ಅವರು ನಿಸ್ಸಹಾಯಕರಾದರು. ಬೀದಿಗಳಲ್ಲಿ ಹರಿದುಬಂದ ಪ್ರತಿಭಟನಾಕಾರರ ಪ್ರವಾಹ ಅಡೆತಡೆಗಳನ್ನು ಕಿತ್ತುಹಾಕಿತು. ಸ್ಥಳೀಯ ಮಾಧ್ಯಮಗಳ ಪ್ರಕಾರ ಅಂದಾಜು 400,000 ಪ್ರತಿಭಟನಾಕಾರರು ಬೀದಿಗಳಲ್ಲಿದ್ದಾರೆ.

ನಿನ್ನೆ ನಡೆದ ಭೀಕರ ಘರ್ಷಣೆಗಳಲ್ಲಿ 98 ಜನರು ಸಾವನ್ನಪ್ಪಿದ್ದರು. ನಂತರ ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಸಜ್ಜಾಗಿದ್ದಾರೆ. ಕಳೆದ ತಿಂಗಳು ಪ್ರತಿಭಟನೆಗಳು ಭುಗಿಲೆದ್ದಿದ್ದವು. ಇದುವರೆಗೆ ಸಾವಿನ ಸಂಖ್ಯೆ 300ನ್ನೂ ದಾಟಿ ಏರುತ್ತಿದೆ.

ರಾಜೀನಾಮೆಗೆ ಒತ್ತಾಯಿಸಿ ಹಿಂಸೆ

ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯಲ್ಲಿ ಸುಧಾರಣೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ (Bangladesh Protests) ಹಲವು ದಿನಗಳ ಹಿಂದೆ ನಡೆದ ಹಿಂಸಾಚಾರದಲ್ಲಿ ನೂರಾರು ಜನ ಮೃತಪಟ್ಟ ಬೆನ್ನಲ್ಲೇ ಮತ್ತೊಂದು ಹಿಂಸಾಚಾರ ಭುಗಿಲೆದ್ದಿದೆ. ಪ್ರಧಾನಿ ಶೇಖ್‌ ಹಸೀನಾ (Sheikh Hasina) ಅವರ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಹಿಂಸಾರೂಪ ತಾಳಿದ್ದು, ಮೃತರ ಸಂಖ್ಯೆ 98ಕ್ಕೆ ತಲುಪಿದೆ. ಈ ಪೈಕಿ 14 ಮಂದಿ ಪೊಲೀಸರು ಅಸುನೀಗಿದ್ದು, ಬಾಂಗ್ಲಾದೇಶಕ್ಕೆ ತೆರಳದಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಭಾನುವಾರ (ಆಗಸ್ಟ್‌ 4) ನಡೆದ ಭೀಕರ ಘರ್ಷಣೆಗಳಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ. ಜುಲೈಯಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಮೃತರ ಸಂಖ್ಯೆ ಒಟ್ಟು 300ಕ್ಕೆ ಏರಿದೆ. ಬಾಂಗ್ಲಾದಲ್ಲಿ ಕೆಲ ದಿನಗಳ ಹಿಂದೆ ತೀವ್ರ ಕೋಲಾಹಲಕ್ಕೆ ಕಾರಣವಾದ ಬಾಂಗ್ಲಾ ವಿಮೋಚನೆ ಹೋರಾಟದಲ್ಲಿ ಭಾಗಿಯಾಗಿದ್ದವರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ನೀಡುವ ನಿಯಮವನ್ನು ಕೋರ್ಟ್‌ ಹಿಂತೆಗೆದುಕೊಂಡಿದೆ. ಆದರೆ ಸಂಪೂರ್ಣ ರದ್ದುಗೊಳಿಸಲಿಲ್ಲ. ಶೇ. 30ರಷ್ಟಿದ್ದ ಮೀಸಲಾತಿಯನ್ನು ಶೇ. 5ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಪ್ರತಿಪಕ್ಷಗಳ ಮುಖಂಡರು, ಸಾರ್ವಜನಿಕರು ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಇಲ್ಲವೇ ಶೇಖ್‌ ಹಸೀನಾ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಭಾನುವಾರ ಸಾವಿರಾರು ಪ್ರತಿಭಟನಾಕಾರರು ದೇಶದ ಹಲವಾರು ಭಾಗಗಳಲ್ಲಿ ಜಮಾಯಿಸಿ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಪ್ರತಿಭಟನಾಕಾರರು ಈಶಾನ್ಯ ಪಟ್ಟಣ ಎನಾಯೆತ್ಪುರದ ಠಾಣೆಗೂ ಮುತ್ತಿಗೆ ಹಾಕಿದರು. ದೇಶಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸೋಮವಾರ, ಮಂಗಳವಾರ ಮತ್ತು ಬುಧವಾರ ಮೂರು ದಿನಗಳ ಸಾರ್ವತ್ರಿಕ ರಜಾದಿನವನ್ನು ಘೋಷಿಸಲಾಗಿದೆ.

ಈ ಮಧ್ಯೆ ಭಾರತ ಬಾಂಗ್ಲಾದೇಶದಲ್ಲಿರುವ ತನ್ನ ಎಲ್ಲ ಪ್ರಜೆಗಳಿಗೆ ತೀವ್ರ ಎಚ್ಚರಿಕೆ ವಹಿಸಲು ಸೂಚನೆ ನೀಡಿದೆ. ಅನಗತ್ಯವಾಗಿ ಹೊರಗಡೆ ಓಡಾಡದಂತೆ ತಿಳಿಸಿದೆ. ʼʼಸಿಲ್ಹೆಟ್‌ನ ಸಹಾಯಕ ಹೈಕಮಿಷನ್ ವ್ಯಾಪ್ತಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಭಾರತೀಯ ಪ್ರಜೆಗಳು ಈ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ಕೋರಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಸಂಖ್ಯೆ +88-01313076402 ಅನ್ನು ಸಂಪರ್ಕಿಸಿ” ಎಂದು ಸಹಾಯಕ ಹೈಕಮಿಷನ್ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದೆ.

ಇದನ್ನೂ ಓದಿ: Bangladesh: ಪ್ರಧಾನಿ ರಾಜೀನಾಮೆಗೆ ಒತ್ತಾಯಿಸಿ ಬಾಂಗ್ಲಾದೇಶದಲ್ಲಿ ಹಿಂಸಾಚಾರ; 91 ಜನ ಸಾವು

Continue Reading

ಪ್ರಮುಖ ಸುದ್ದಿ

BS Yediyurappa: ಮುಂದಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ 150 ಸೀಟು ಖಚಿತ: ಬಿಎಸ್‌ ಯಡಿಯೂರಪ್ಪ

ತೋಳ್ಬಲ, ಹೆಂಡದ ಬಲ, ಅಧಿಕಾರದ ಬಲದಿಂದ ಬಂದಿರುವ ಸಿಎಂ ಅನೇಕ ಭ್ರಷ್ಟಾಚಾರಗಳಲ್ಲಿ‌ ಸಿಲುಕಿ ನರಳುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನಾಯಕತ್ವ ಇದ್ದರೆ ಕೂಡಲೇ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಬಿಎಸ್‌ ಯಡಿಯೂರಪ್ಪ (BS Yediyurappa) ಆಗ್ರಹಿಸಿದರು.

VISTARANEWS.COM

on

bs yediyurappa
Koo

ರಾಮನಗರ: ಬಿಜೆಪಿ- ಜೆಡಿಎಸ್‌ ಮೈತ್ರಿಕೂಟ ಸಂಬಂಧ ಶಾಶ್ವತ. ರಾಜ್ಯದ ಜನತೆ ಭ್ರಷ್ಟ ಕಾಂಗ್ರೆಸ್‌ (Congress) ಸರಕಾರದಿಂದ ಬೇಸತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ ಮೈತ್ರಿಕೂಟದಿಂದ (BJP-JDS Alliance) ಮುಂಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ.

ʼಮೈಸೂರು ಚಲೋʼ ಪಾದಯಾತ್ರೆಯ (BJP-JDS Padayatra) ಮೂರನೇ ದಿನದ ನಡಿಗೆ ಹಾಗೂ ಚನ್ನಪಟ್ಟಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇಂದು ಈ ರಾಜ್ಯದ ಮುಖ್ಯಮಂತ್ರಿ ಅನೇಕ ಭ್ರಷ್ಟಾಚಾರಕ್ಕೆ ಸಿಲುಕಿದ್ದಾರೆ. ಉಸಿರುಗಟ್ಟುವ ವಾತಾವರಣದಲ್ಲಿ ಸಿಲುಕಿದ್ದಾರೆ. ಗೌರವಯುತವಾಗಿ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ತೋಳ್ಬಲ, ಹೆಂಡದ ಬಲ, ಅಧಿಕಾರದ ಬಲದಿಂದ ಬಂದಿರುವ ಸಿಎಂ ಅನೇಕ ಭ್ರಷ್ಟಾಚಾರಗಳಲ್ಲಿ‌ ಸಿಲುಕಿ ನರಳುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನಾಯಕತ್ವ ಇದ್ದರೆ ಕೂಡಲೇ ಸಿದ್ದರಾಮಯ್ಯ ಅವರಿಂದ ರಾಜೀನಾಮೆ ಪಡೆಯಬೇಕು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಸಿದ್ದರಾಮಯ್ಯ ಅವರಂತೆ ಮುಡಾದಲ್ಲಿ 14 ಸೈಟು ಪಡೆದಿರೋದು ಯಾರೂ ಇಲ್ಲ. ಒಬ್ಬ ಮುಖ್ಯಮಂತ್ರಿ ತನ್ನ ಪತ್ನಿ ಹೆಸರಿಗೆ 14 ಸೈಟು ಪಡೆದಿದ್ದಾರೆ. ಅವರೇ ಅದನ್ನು ಒಪ್ಪಿಕೊಂಡಿದ್ದಾರೆ. 60 ಕೋಟಿ ಬೆಲೆ ಬಾಳಲಿದೆ ಅಂತಲೂ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಕೇಂದ್ರದ ನಾಯಕರಿಗೆ ಜವಾಬ್ದಾರಿ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ವಾಲ್ಮೀಕಿ ನಿಗಮದಂಥ ಬೃಹತ್ ಹಗರಣ ಹಿಂದೆಂದೂ ಆಗಿರಲಿಲ್ಲ.‌ ಇನ್ಸ್‌ಪೆಕ್ಟರ್‌ ವರ್ಗಾವಣೆಗೆ 30-40 ಲಕ್ಷ ತಗೋಳೋದು ನೋಡಿರಲಿಲ್ಲ. ಇದರಿಂದಾಗಿ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರೋದನ್ನ ನೀವು ನೋಡಿದ್ದೀರಿ. ಇದು ಅತ್ಯಂತ ಭ್ರಷ್ಟ ಸರಕಾರ ಎಂದು ಅವರು ಆಪಾದಿಸಿದರು.

ಬಿಜೆಪಿ-ಜೆಡಿಎಸ್ ಸಂಬಂಧ ಶಾಶ್ವತ ಸಂಬಂಧ. ನಾವು ಜೊತೆಯಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದೇವೆ. ಮುಂಬರುವ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ. ಮೈಸೂರಿನಲ್ಲಿ ಎರಡು ಲಕ್ಷ ಜನ ಸೇರಿಸಿ ಸಮಾರೋಪ ಮಾಡಲಿದ್ದೇವೆ. ನಿಮ್ಮ ಕೇಂದ್ರದ ನಾಯಕರಿಗೆ ಭ್ರಷ್ಟಾಚಾರದ ಮನವರಿಕೆ ಮಾಡುವ ಕೆಲಸ ಮಾಡ್ತಿದ್ದೇವೆ. ಈಗಲಾದ್ರೂ ಮುಖ್ಯಮಂತ್ರಿ ರಾಜೀನಾಮೆ ಪಡೆಯಬೇಕು. ಪಾದಯಾತ್ರೆ ಮೈಸೂರು ತಲುಪುವುದರ ಒಳಗೆ ಸಿಎಂ ರಾಜೀನಾಮೆ ಕೊಡದಿದ್ರೆ ನಮ್ಮ ಮುಂದಿನ ಹೋರಾಟ ರೂಪಿಸಲಿದ್ದೇವೆ ಎಂದು ಅವರು ಎಚ್ಚರಿಸಿದರು.

ʼನಮ್ಮ ಈ ಹೋರಾಟ ನಾವು ಅಧಿಕಾರಕ್ಕೆ ಬರಬೇಕು ಅಂತಲ್ಲ. ಈ ರಾಜ್ಯದಲ್ಲಿ ವಚನಭ್ರಷ್ಟ ಸರ್ಕಾರ ಅಧಿಕಾರದಲ್ಲಿದೆ. ವಾಲ್ಮೀಕಿ ನಿಗಮದ 187 ಕೋಟಿ ಲೂಟಿ ಮಾಡಿದೆ. ನಮ್ಮ ಹೋರಾಟದ ಪರಿಣಾಮವಾಗಿ ದೆಹಲಿಯಿಂದ ಕಾಂಗ್ರೆಸ್ ವರಿಷ್ಠರು ಬಂದಿದ್ದಾರೆ. ಸಿಎಂ ಪರವಾಗಿ ಗಟ್ಟಿಯಾಗಿ ನಿಲ್ಲುವಂತೆ ಆಡಳಿತ ಪಕ್ಷದ ಶಾಸಕರಿಗೆ ಸೂಚಿಸಲು ಬಂದಿದ್ದಾರೆ. ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಕೊಡೋದಾಗಿ ಭರವಸೆ ಕೂಡ ನೀಡಿದ್ದಾರೆ. ಆದರೆ ಈ ಸರ್ಕಾರ ಎಷ್ಟು ಬೇಗ ತೊಲಗಲಿದೆಯೋ, ಅಷ್ಟು ಒಳ್ಳೆಯದುʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನುಡಿದರು.

ಚನ್ನಪಟ್ಟಣದಲ್ಲಿ ಪಾದಯಾತ್ರೆ ವೇಳೆ ಅಸ್ವಸ್ಥಗೊಂಡ ಬಿಜೆಪಿ ಮುಖಂಡ

ಚನ್ನಪಟ್ಟಣದಲ್ಲಿ ಪಾದಯಾತ್ರೆ ವೇಳೆ ಬಿಜೆಪಿ ಮುಖಂಡರೊಬ್ಬರು ಅಸ್ವಸ್ಥಗೊಂಡರು. ಕೂಡಲೇ ಆಂಬ್ಯುಲೆನ್ಸ್ ಮೂಲಕ ಅವರನ್ನು ರಾಮನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಬೆಂಗಳೂರಿನ ಬಿಜೆಪಿ ಜಯನಗರ ಮಂಡಲ ಉಪಾಧ್ಯಕ್ಷ ಶಂಕರ್ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಸಿ.ಕೆ. ರಾಮಮೂರ್ತಿ ಮತ್ತು ರವಿಸುಬ್ರಮಣ್ಯ ಆಸ್ಪತ್ರೆಗೆ ತೆರಳಿ ಶಂಕರ್ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ: BJP-JDS Padayatra: ಬಿಜೆಪಿ-ಜೆಡಿಎಸ್‌ ಪಿತೂರಿಗೆ ಜಗ್ಗಲ್ಲ, ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ: ಕೆ.ಸಿ. ವೇಣುಗೋಪಾಲ್

Continue Reading
Advertisement
Sheikh Hasina
ಪ್ರಮುಖ ಸುದ್ದಿ3 mins ago

Sheikh Hasina: ರಾಜೀನಾಮೆ ನೀಡಿ ಶೇಖ್‌ ಹಸೀನಾ ವಿದೇಶಕ್ಕೆ ಪಲಾಯನ; ಸುರಕ್ಷತೆಗಾಗಿ ಭಾರತಕ್ಕೆ ಆಗಮನ?

Nia Sharma Trolled For Wearing Plunging Neckline Bralette
ಬಾಲಿವುಡ್7 mins ago

Nia Sharma: ಬ್ರಾ ಧರಿಸಿ ಪೋಸ್‌ ಕೊಟ್ಟ ಕಿರುತೆರೆ ನಟಿ ನಿಯಾ ಶರ್ಮಾರನ್ನು ಕಾಲೆಳೆದ ನೆಟ್ಟಿಗರು!

Emergency Landing
ವೈರಲ್ ನ್ಯೂಸ್29 mins ago

Emergency Landing: ವಿಮಾನದ ಎಮರ್ಜೆನ್ಸಿ ಲ್ಯಾಂಡಿಂಗ್‌ಗೆ ಕಾರಣವಾಯ್ತು ಹೇನು! ಏನಿದು ವಿಚಿತ್ರ ಪ್ರಕರಣ? ಇಲ್ಲಿದೆ ವಿವರ

BJP-JDS Padayatra
ಪ್ರಮುಖ ಸುದ್ದಿ35 mins ago

BJP-JDS Padayatra: ಪಾದಯಾತ್ರೆ ವೇಳೆ ಹೃದಯಾಘಾತದಿಂದ ಜೆಡಿಎಸ್ ಕಾರ್ಯಕರ್ತೆ ಸಾವು

Bangladesh Protests
ಪ್ರಮುಖ ಸುದ್ದಿ39 mins ago

Bangladesh Protests: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ, ದೇಶದಿಂದ ಪಲಾಯನ; ಪ್ರಧಾನಿ ಅರಮನೆಗೇ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

Shira News
ತುಮಕೂರು1 hour ago

Shira News: ಶಿರಾ ನಗರಸಭೆಯಿಂದ ದೊಡ್ಡಕೆರೆಯ ಸುತ್ತಲಿನ ಪ್ರದೇಶದ ಸ್ವಚ್ಛತೆ

Shravana 2024
ಧಾರ್ಮಿಕ1 hour ago

Shravana 2024: ಶ್ರಾವಣ ಉಪವಾಸದ ವೇಳೆ ಈ 5 ಪಾನೀಯ ಆರೋಗ್ಯಕರ

bs yediyurappa
ಪ್ರಮುಖ ಸುದ್ದಿ1 hour ago

BS Yediyurappa: ಮುಂದಿನ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ 150 ಸೀಟು ಖಚಿತ: ಬಿಎಸ್‌ ಯಡಿಯೂರಪ್ಪ

PSI Parashuram Case
ಕರ್ನಾಟಕ1 hour ago

PSI Parashuram Case: ನಾನು ಯಾವ ಪೊಲೀಸ್‌ ಬಳಿಯೂ ದುಡ್ಡು ಕೇಳಿಲ್ಲ: ಶಾಸಕ ಚನ್ನಾರೆಡ್ಡಿ ಪಾಟೀಲ

Snake Bite
ವೈರಲ್ ನ್ಯೂಸ್2 hours ago

Snake Bite: ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ7 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌