Viral Video: ಎಸ್ಕಲೇಟರ್ ಮೇಲೆ ಮಗುವನ್ನು ನಿಲ್ಲಿಸಲು ತಾಯಿಯ ಕಸತ್ತು; ಮುಂದೇನಾಯ್ತು ನೋಡಿ - Vistara News

Latest

Viral Video: ಎಸ್ಕಲೇಟರ್ ಮೇಲೆ ಮಗುವನ್ನು ನಿಲ್ಲಿಸಲು ತಾಯಿಯ ಕಸತ್ತು; ಮುಂದೇನಾಯ್ತು ನೋಡಿ

Viral Video: ಇಬ್ಬರೂ ಮಹಿಳೆಯರು ಮಗುವಿನ ಕೈಗಳನ್ನು ಹಿಡಿದುಕೊಂಡು ಎಸ್ಕಲೇಟರ್ ಹತ್ತಿದ್ದಾರೆ. ಎಸ್ಕಲೇಟರ್ ಹತ್ತುವಾಗ ಅವರು ಮಗುವನ್ನು ಮೇಲಕ್ಕೆತ್ತಿದ ಪರಿಣಾಮ ಸಮತೋಲನವನ್ನು ಕಳೆದುಕೊಂಡು ಮಗುವಿನೊಂದಿಗೆ ಕೆಳಗೆ ಬಿದ್ದಿದ್ದಾರೆ. ಮೊದಲಿಗೆ ಅವರಿಗೆ ಸಹಾಯ ಮಾಡಲು ಯಾರೂ ಬರಲಿಲ್ಲ. ನಂತರ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದಿದ್ದಾನೆ. ಈ ವಿಡಿಯೊ ನೋಡಿ ಹಲವರು ಭಯಭೀತರಾಗಿದ್ದಾರೆ. ಕೆಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಇತ್ತೀಚಿನ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳು, ಮಾಲ್‍ಗಳು ಮತ್ತು ರೈಲು ನಿಲ್ದಾಣಗಳಲ್ಲಿ ಎಸ್ಕಲೇಟರ್‌ಗಳು ಸಾಮಾನ್ಯ. ಒಂದು ಮಹಡಿಯಿಂದ ಮತ್ತೊಂದು ಮಹಡಿಗೆ ಹೋಗಲು ಈ ಎಸ್ಕಲೇಟರ್‌ಗಳನ್ನು ಬಳಸಲಾಗುತ್ತದೆ. ಇದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ಆದರೆ ಇದನ್ನು ಎಲ್ಲರೂ ಬಳಸುವುದಿಲ್ಲ, ಯಾಕೆಂದರೆ ಇದನ್ನು ಬಳಸುವ ವಿಧಾನ ಕೆಲವರಿಗೆ ತಿಳಿದಿರುವುದಿಲ್ಲ. ಕೆಲವರಿಗೆ ಬೀಳುತ್ತೇವೆ ಎಂಬ ಭಯ. ಇದೀಗ ಈ ರೀತಿಯ ಎಸ್ಕಲೇಟರ್‌ಗಳನ್ನು ಬಳಸಿ ಮಗುವಿನ ಜೊತೆಗೆ ಮಹಿಳೆಯರಿಬ್ಬರು ಬಿದ್ದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿ ಆತಂಕ ಮೂಡಿಸುತ್ತಿದೆ.

ಈ ವೈರಲ್ ವಿಡಿಯೊದಲ್ಲಿ, ಇಬ್ಬರು ಮಹಿಳೆಯರು ಮಗುವಿನೊಂದಿಗೆ ಎಸ್ಕಲೇಟರ್ ಏರಲು ಪ್ರಯತ್ನಿಸುತ್ತಿದ್ದಾರೆ. ಬಳಿಕ ಇಬ್ಬರೂ ಮಹಿಳೆಯರು ಮಗುವಿನ ಕೈಗಳನ್ನು ಎತ್ತಿ ಹಿಡಿದು ಅದನ್ನು ಎಸ್ಕಲೇಟರ್‌ ಮೇಲೆ ನಿಲ್ಲಿಸಲು ಪ್ರಯತ್ನಿಸಿ ಹಿಡಿದುಕೊಂಡಿದ್ದಾರೆ. ಮಗುವನ್ನು ಮೇಲಕೆತ್ತಿದ ಪರಿಣಾಮ ತಮ್ಮ ಸಮತೋಲನವನ್ನು ಕಳೆದುಕೊಂಡು ಮಗುವಿನೊಂದಿಗೆ ಕೆಳಗೆ ಬಿದ್ದಿದ್ದಾರೆ. ಮೊದಲಿಗೆ ಅವರಿಗೆ ಸಹಾಯ ಮಾಡಲು ಯಾರೂ ಬರಲಿಲ್ಲ. ನಂತರ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಓಡಿ ಬಂದಿದ್ದಾನೆ. ಮಗುವಿನೊಂದಿಗೆ ಬಿದ್ದು ಅಪಾಯದಲ್ಲಿದ್ದರೂ ಈ ವೇಳೆ ಅವರಿಬ್ಬರು ನಗುತ್ತಿರುವುದು ಕಂಡು ಬಂದಿದೆ. ಆದರೆ ಈ ವಿಡಿಯೊ ನೋಡಿ ಹಲವರು ಭಯಬೀತರಾಗಿದ್ದಾರೆ. ಹಲವರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಏಕೆಂದರೆ ಸಣ್ಣ ತಪ್ಪು ಜೀವಕ್ಕೆ ಅಪಾಯವಾಗಬಹುದು.

ಈ ವಿಡಿಯೊ ವೈರಲ್ ಆದ ಕೂಡಲೇ ವೀಕ್ಷಕರು ಕಮೆಂಟ್ ಮಾಡಿದ್ದಾರೆ. ಅನೇಕರು ಮಹಿಳೆಯರ ಈ ನಡೆಯನ್ನು ಪ್ರಶ್ನಿಸಿದ್ದಾರೆ. ಕೆಲವರು ಇದನ್ನು ತೀವ್ರ ಅಜಾಗರೂಕತೆಯ ಕೃತ್ಯ ಎಂದು ಕರೆದಿದ್ದಾರೆ. ಈ ವಿಡಿಯೊವನ್ನು ಆಗಸ್ಟ್ 3 ರಂದು ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ “ಘರ್ ಕೆ ಕಾಲೇಶ್” ಎಂಬ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ, ಇದು 1.4 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಈ ಘಟನೆಯ ಬಗ್ಗೆ ನೆಟ್ಟಿಗರು ತಮ್ಮ ಹತಾಶೆ ಮತ್ತು ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಯುವತಿ ಜತೆ ಡ್ಯಾನ್ಸ್ ಮಾಡ್ತಾ ಮಾಡ್ತಾ ಪ್ರಾಣಬಿಟ್ಟ ಯುವಕ; ಆಘಾತಕಾರಿ ವಿಡಿಯೊ

ಈ ಹಿಂದೆ ಮಹಿಳೆಯೊಬ್ಬಳು ಎಸ್ಕಲೇಟರ್ ಮೇಲೆ ಜಿಗಿಯುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆ ಮಹಿಳೆ ‘ಸ್ಟಂಟ್ ಲವರ್’ ಮಾಲ್‌ನಲ್ಲಿದ್ದಂತೆ ಕಾಣುತ್ತಿತ್ತು, ಆ ಎಸ್ಕಲೇಟರ್‌ನಲ್ಲಿ ಇನ್ನೂ ಕೆಲವು ಜನರಿದ್ದರು. ಇದರಿಂದ ಆ ಮಹಿಳೆ ಮಾಡಿದ ಕೆಲಸ ತುಂಬಾ ಅಪಾಯಕಾರಿ ಎನಿಸಿತು. ಈ ಕ್ಲಿಪ್ ವೈರಲ್ ಆದ ಕೂಡಲೇ, ಜನರು ಆಕೆ ‘ಸ್ಟಂಟ್’ ಮಾಡುತ್ತಿದ್ದಾಳೆ ಎಂದು ಭಾವಿಸಿ ಅದು ಎಷ್ಟು ಅಪಾಯಕಾರಿ ಎಂದು ಟೀಕೆ ಮಾಡಿದ್ದರು. ಆದರೆ ಕೆಲವರು ಆ ಮಹಿಳೆ ಎಸ್ಕಲೇಟರ್ ಒಳಗೆ ಕಾಲಿಡಲು ಹೆದರುತ್ತಿದ್ದಳು, ಆದ್ದರಿಂದ ಜಿಗಿದಿದ್ದಾಳೆ ಎಂದು ಸಮಾಧಾನಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Independence Day 2024: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕಥೆ ಹೇಳುವ ಟಾಪ್‌ 10 ಹಿಂದಿ ಸಿನೆಮಾಗಳಿವು

78ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2024) ಸಂಭ್ರಮದಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ನೋಡಬೇಕು, ನಮ್ಮ ಮಕ್ಕಳಿಗೂ ತೋರಿಸಬೇಕು ಎಂದೆನಿಸುವ ಹಲವು ಹಿಂದಿ ಸಿನಿಮಾಗಳಿವೆ. ನಮ್ಮೊಳಗಿನ ದೇಶಭಕ್ತಿಯನ್ನು ಜಾಗೃತಗೊಳಿಸಲು, ಮಕ್ಕಳಲ್ಲಿ ದೇಶಭಕ್ತಿಯನ್ನು ಚಿಗುರಿಸಲು ನೆರವಾಗಬಲ್ಲ ಈ ಸಿನಿಮಾಗಳನ್ನು ನಾವು ಮತ್ತೊಮ್ಮೆ ನೋಡಬೇಕು. ಈ ಎಲ್ಲ ಚಿತ್ರಗಳು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯರು ತೋರಿದ ಅದಮ್ಯ ಚೇತನಕ್ಕೆ ಸಂದ ಗೌರವವಾಗಿದೆ. ದೇಶ ಸ್ವಾತಂತ್ರ್ಯ ಪಡೆಯಲು ಅವರೆಲ್ಲ ಮಾಡಿರುವ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತದೆ.

VISTARANEWS.COM


on

By

Independence Day 2024
Koo

78ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲು (Independence Day 2024) ನಾವೆಲ್ಲ ಸಿದ್ಧರಾಗಿದ್ದೇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯವು ಸಾಕಷ್ಟು ಮಂದಿಯ ಹೋರಾಟದ ಫಲವಾಗಿ ಬಂದಿದೆ. ಇಂಥವರ (freedom fighter story) ಸ್ಫೂರ್ತಿದಾಯಕ ಕಥೆಗಳನ್ನು ಆಧರಿಸಿ ಹಲವು ಚಲನಚಿತ್ರಗಳು (film) ಬಂದಿವೆ. ಈ ಚಿತ್ರಗಳು ನಮ್ಮಲ್ಲಿ ದೇಶ ಪ್ರೇಮವನ್ನು ಬಡಿದೆಬ್ಬಿಸುತ್ತದೆ. ಈ ಚಿತ್ರಗಳನ್ನು (Indian film) ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಮತ್ತೊಮ್ಮೆ ನಾವು ನೋಡಬೇಕು, ನಮ್ಮ ಮಕ್ಕಳಿಗೂ ತೋರಿಸಬೇಕು. ನಮ್ಮೊಳಗಿನ ದೇಶಭಕ್ತಿಯನ್ನು ಜಾಗೃತಗೊಳಿಸಲು, ಮಕ್ಕಳಲ್ಲಿ ದೇಶಭಕ್ತಿಯನ್ನು ಚಿಗುರಿಸಲು ನೆರವಾಗಬಲ್ಲ ಪ್ರಮುಖ ಹತ್ತು ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಗಾಂಧಿ: (1982ರಲ್ಲಿ ನಿರ್ಮಾಣ)

ರಿಚರ್ಡ್ ಅಟೆನ್‌ಬರೋ ಅವರ ಈ ಚಲನಚಿತ್ರ “ಗಾಂಧಿ” ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯ ನಾಯಕ ಮಹಾತ್ಮ ಗಾಂಧಿಯವರ ಜೀವನವನ್ನು ವಿವರಿಸುತ್ತದೆ. ಗಾಂಧಿಯವರ ಅಹಿಂಸೆ ಮತ್ತು ಅಸಹಕಾರ ಚಳವಳಿಯ ಅಸ್ತ್ರದ ಪರಿಣಾಮವನ್ನು ಸುಂದರವಾಗಿ ಸೆರೆಹಿಡಿದಿದೆ. ಇದು 8 ಆಸ್ಕರ್‌ ಅಕಾಡೆಮಿ ಪ್ರಶಸ್ತಿಗಳನ್ನು ಗಳಿಸಿದೆ.


ಲಗಾನ್: (2001ರಲ್ಲಿ ನಿರ್ಮಾಣ)

ಅಶುತೋಷ್ ಗೋವಾರಿಕರ್ ನಿರ್ದೇಶಿಸಿದ “ಲಗಾನ್” ಚಿತ್ರ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ನಡೆದ ಕ್ರಿಕೆಟ್‌ ಪಂದ್ಯದ ಕಥೆಯಾಗಿದೆ. ಇದು ಭಾರತದ ಹಳ್ಳಿಯ ಜನರ ಸುತ್ತ ಹೆಣೆದ ಕಥೆಯಾಗಿದೆ. ಬ್ರಿಟಿಷ್ ದಬ್ಬಾಳಿಕೆ ಮತ್ತು ಅಮಾನವೀಯ ತೆರಿಗೆಯಿಂದ ತಪ್ಪಿಸಿಕೊಳ್ಳಲು ಹಳ್ಳಿಯ ಜನರು ಕ್ರಿಕೆಟ್ ಪಂದ್ಯದ ಸವಾಲು ಹಾಕುತ್ತಾರೆ. ಈ ಚಿತ್ರವು ಬ್ರಿಟಿಷರ ವಿರುದ್ಧದ ಭಾರತೀಯರ ಏಕತೆ, ಬದ್ಧತೆ ಮತ್ತು ಧೈರ್ಯ-ಸಾಹಸವನ್ನು ಪ್ರತಿಬಿಂಬಿಸಿದೆ.


ರಂಗ್ ದೇ ಬಸಂತಿ: (2006ರಲ್ಲಿ ನಿರ್ಮಾಣ)

ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರ “ರಂಗ್ ದೇ ಬಸಂತಿ” ಸಮಕಾಲೀನ ಭಾರತೀಯ ಯುವಕರ ಕಥೆಯನ್ನು ಒಳಗೊಂಡಿದೆ. ಇದು ಸ್ವಾತಂತ್ರ್ಯ ಹೋರಾಟಗಾರರ ಕಥೆಗಳೊಂದಿಗೆ ಹೆಣೆದುಕೊಂಡಿದೆ. ಈ ಚಲನಚಿತ್ರವು ಹಿಂದಿನ ಮತ್ತು ವರ್ತಮಾನದ ನಡುವಿನ ಕಥೆಯನ್ನು ಹೆಣೆದು ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಹೊಸ ಪೀಳಿಗೆಯನ್ನು ಪ್ರೇರೇಪಿಸುವ ಕಥಾ ಹಂದರವನ್ನು ಇದು ಒಳಗೊಂಡಿದೆ.

1942 ಎ ಲವ್ ಸ್ಟೋರಿ (1994ರಲ್ಲಿ ಬಿಡುಗಡೆ)

ವಿಧು ವಿನೋದ್ ಚೋಪ್ರಾ ಅವರ ರೊಮ್ಯಾಂಟಿಕ್ ಚಿತ್ರ “1942: ಎ ಲವ್ ಸ್ಟೋರಿ” ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ಆಗಿದೆ. ಕ್ವಿಟ್ ಇಂಡಿಯಾ ಚಳವಳಿಯ ಹಿನ್ನೆಲೆಯನ್ನು ಒಳಗೊಂಡಿದೆ. ಈ ಚಿತ್ರವು ಸ್ವಾತಂತ್ರ್ಯದ ಹೋರಾಟದೊಂದಿಗೆ ಅರಳುವ ಪ್ರೇಮಕಥೆಯನ್ನು ಹೊಂದಿದೆ. ಬ್ರಿಟಿಷರ ವಿರುದ್ಧ ಹೋರಾಟ ಮತ್ತು ಯುವ ಜೋಡಿಯ ಪ್ರೀತಿಯ ಕಥಾನಕ ಪರಿಣಾಮಕಾರಿಯಾಗಿ ಮೂಡಿ ಬಂದಿದೆ.


ಮಂಗಲ್ ಪಾಂಡೆ: ದಿ ರೈಸಿಂಗ್ (2005ರಲ್ಲಿ ನಿರ್ಮಾಣ)

ಕೇತನ್ ಮೆಹ್ತಾ ಅವರ ಐತಿಹಾಸಿಕ ಜೀವನಚರಿತ್ರೆಯ “ಮಂಗಲ್ ಪಾಂಡೆ: ದಿ ರೈಸಿಂಗ್”ನಲ್ಲಿ ಆಮೀರ್ ಖಾನ್ ಮನೋಜ್ಞವಾಗಿ ನಟಿಸಿದ್ದಾರೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ 1857ರ ಸಿಪಾಯಿ ದಂಗೆಯನ್ನು ಹೊತ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಿಪಾಯಿ ಮಂಗಲ್ ಪಾಂಡೆಯ ಜೀವನವನ್ನು ಇದು ಬಿಂಬಿಸಿದೆ.

ನೇತಾಜಿ ಸುಭಾಸ್ ಚಂದ್ರ ಬೋಸ್: ದಿ ಫಾರ್ಗಾಟನ್ ಹೀರೋ (2004ರಲ್ಲಿ ನಿರ್ಮಾಣ)

ಶ್ಯಾಮ್ ಬೆನಗಲ್ ಅವರ ಈ ಚಿತ್ರವು ಪ್ರಭಾವಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನ ಕಥೆಯನ್ನು ಒಳಗೊಂಡಿದೆ. ಇದು ಬೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ) ಸ್ಥಾಪನೆ ಮತ್ತು ಬ್ರಿಟಿಷ್ ಆಳ್ವಿಕೆಯನ್ನು ಉರುಳಿಸಲು ಅವರು ನಡೆಸಿದ ಸಾಹಸಮಯ ಹೋರಾಟದ ಮೇಲೆ ಬೆಳಕು ಚೆಲ್ಲುತ್ತದೆ.


ದಿ ಲೆಜೆಂಡ್ ಆಫ್ ಭಗತ್ ಸಿಂಗ್ (2002ರಲ್ಲಿ ನಿರ್ಮಾಣ)

ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ʼದಿ ಲೆಜೆಂಡ್ ಆಫ್ ಭಗತ್ ಸಿಂಗ್ʼ ಚಿತ್ರದಲ್ಲಿ ಅಜಯ್ ದೇವಗನ್ ಭಾರತದ ಸ್ವಾತಂತ್ರ್ಯಕ್ಕಾಗಿ ವೀರಾವೇಶದಿಂದ ಹೋರಾಡಿದ ಕ್ರಾಂತಿಕಾರಿ ಭಗತ್ ಸಿಂಗ್ ಪಾತ್ರದಲ್ಲಿ ನಟಿಸಿದ್ದಾರೆ. ಬ್ರಿಟಿಷ್ ಆಡಳಿತಗಾರರ ವಿರುದ್ಧ ಭಗತ್‌ ಸಿಂಗ್ ಅವರ ಅಚಲ ಬದ್ಧತೆ ಮತ್ತು ಧೈರ್ಯದ ನಿಲುವನ್ನು ಚಲನಚಿತ್ರವು ಎತ್ತಿ ತೋರಿಸುತ್ತದೆ.


ಶಹೀದ್ (1965ರಲ್ಲಿ ನಿರ್ಮಾಣ)

ಎಸ್. ರಾಮ್ ಶರ್ಮಾ ಅವರ “ಶಹೀದ್” ಚಿತ್ರ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ್ ರಾಜಗುರು ಅವರ ಜೀವನವನ್ನು ಚಿತ್ರಿಸುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಈ ಮೂವರು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರ ದೇಶಭಕ್ತಿ ಮತ್ತು ನಿಸ್ವಾರ್ಥತೆಯನ್ನು ಚಿತ್ರದ ಮೂಲಕ ಗೌರವಿಸಲಾಗಿದೆ.


ಚಿತ್ತಗಾಂಗ್ (2012ರಲ್ಲಿ ನಿರ್ಮಾಣ)

ವೇದವ್ರತ ಪೈನ್ ಅವರ “ಚಿತ್ತಗಾಂಗ್” ಚಿತ್ರವು 1930ರ ಚಿತ್ತಗಾಂಗ್ ದಂಗೆಯ ಸಮಯದಲ್ಲಿ ಬ್ರಿಟಿಷ್ ಸೈನ್ಯಕ್ಕೆ ಸವಾಲೆಸೆದ ಹದಿಹರೆಯದ ಶಾಲಾ ಹುಡುಗರ ಕಥೆಯನ್ನು ಹೇಳುತ್ತದೆ. ಈ ಯುವ ದೇಶಭಕ್ತರ ಗಮನಾರ್ಹ ಶೌರ್ಯ ಮತ್ತು ಸಂಕಲ್ಪವನ್ನು ಚಲನಚಿತ್ರವು ಸಮರ್ಥವಾಗಿ ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: Indian 2 Ott: ಇಂಡಿಯನ್ 2 ಒಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್!


ಬೋಸ್: ದಿ ಫಾರ್ಗಾಟನ್ ಹೀರೊ (2005ರಲ್ಲಿ ನಿರ್ಮಾಣ)

ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜೀವನದ ಮತ್ತೊಂದು ಚಿತ್ರ ಇದು. ಶ್ಯಾಮ್ ಬೆನಗಲ್ ನಿರ್ದೇಶಿಸಿದ “ಬೋಸ್: ದಿ ಫಾರ್ಗಾಟನ್ ಹೀರೋ” ಚಿತ್ರವು ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬೋಸ್ ಅವರ ಅಂತಾರಾಷ್ಟ್ರೀಯ ಮಟ್ಟದ ಪ್ರಯತ್ನಗಳು ಮತ್ತು ಇಂಡಿಯನ್‌ ನ್ಯಾಷನಲ್‌ ಆರ್ಮಿಯನ್ನು ಸಜ್ಜುಗೊಳಿಸುವಲ್ಲಿ ಅವರು ತೋರಿದ ಚಾಣಾಕ್ಷತೆಯನ್ನು ಮನೋಜ್ಞವಾಗಿ ಕಟ್ಟಿ ಕೊಟ್ಟಿದೆ.

ಈ ಎಲ್ಲ ಚಿತ್ರಗಳು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಭಾರತೀಯರು ತೋರಿದ ಅದಮ್ಯ ಚೇತನಕ್ಕೆ ಸಂದ ಗೌರವವಾಗಿದೆ. ದೇಶ ಸ್ವಾತಂತ್ರ್ಯ ಪಡೆಯಲು ಅವರೆಲ್ಲ ಮಾಡಿರುವ ತ್ಯಾಗ ಮತ್ತು ಬಲಿದಾನವನ್ನು ನೆನಪಿಸುತ್ತದೆ.

Continue Reading

ಪರಿಸರ

ವಿಸ್ತಾರ ಗ್ರಾಮ ದನಿ: ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ; ನಮ್ಮ ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳು ಕೃಷಿಕರಿಗಾಗಿ ಏನು ಮಾಡಬಹುದು?

Vistara Gramadani: ಈಗ ಪರಿಸರ ಸೂಕ್ಷ್ಮ ವ್ಯಾಪ್ತಿ ಪ್ರದೇಶದ ಸಾರ್ವಜನಿಕರು, ರೈತರು ಆಕ್ಷೇಪಣೆ ಅರ್ಜಿ ಕೊಡಲೇ ಬೇಕಾಗಿದೆಯಾ? ಯಾರ್ಯಾರೆಲ್ಲ ಕೊಡಬೇಕು? ಯಾರಿಗೆ ಕೊಡಬೇಕು? ಹೇಗೆ ಕೊಡಬೇಕು? 5-6 ವರ್ಷಗಳ ಹಿಂದೆ, ಹಿಂದಿನ ಕರಡು ಅಧಿ ಸೂಚನೆಗೆ ಆಕ್ಷೇಪಣೆ ಕೊಟ್ಟಾಗಿದೆಯಲ್ಲ? ಮತ್ತೆ ಕೊಡಬೇಕಾ? ಹೌದಾದರೆ ಕಾರಣ ಏನು? ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ಶಾಸಕರು, ಸಂಸದರು, ಸಚಿವರು ಮತ್ತು ಅಧಿಕಾರಿಗಳು ತಕ್ಷಣ ಒಂದಿಷ್ಟು ಕ್ರಮಗಳನ್ನು ಸ್ಥಳೀಯ ನಿವಾಸಿಗಳ ಪರವಾಗಿ ಮಾಡಬಹುದಾ?

VISTARANEWS.COM


on

ವಿಸ್ತಾರ ಗ್ರಾಮ ದನಿ
Koo

-ಅರವಿಂದ ಸಿಗದಾಳ್, ಮೇಲುಕೊಪ್ಪ
ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ (ವಿಸ್ತಾರ ಗ್ರಾಮ ದನಿ) ಎಂದು ಅಧಿಸೂಚನೆ ಹೊರಡಿಸಿದ ಕರ್ನಾಟಕದ 20,668 ಹೆಕ್ಟೇರ್‌ಗಳಲ್ಲಿ ನಮ್ಮ ಯಾರ್ಯಾರ ಜಮೀನು, ತೋಟ, ಗದ್ದೆ, ಮನೆಗಳು ಸೇರಿಕೊಂಡಿವೆಯೋ ಗೊತ್ತಿಲ್ಲ. 60 ದಿನಗಳೊಳಗೆ ಸಾರ್ವಜನಿಕರು ಆಕ್ಷೇಪಣೆ ಇದ್ದರೆ ಸಲ್ಲಿಸುವಂತೆ ಅಧಿಸೂಚನೆಯಲ್ಲಿ ಕಾಲಾವಕಾಶ ಕೊಡಲಾಗಿದೆ. ಈಗ ಪರಿಸರ ಸೂಕ್ಷ್ಮ ವ್ಯಾಪ್ತಿ ಪ್ರದೇಶದ ಸಾರ್ವಜನಿಕರು, ರೈತರು ಆಕ್ಷೇಪಣೆ ಅರ್ಜಿ ಕೊಡಲೇ ಬೇಕಾಗಿದೆಯಾ? ಯಾರ್ಯಾರೆಲ್ಲ ಕೊಡಬೇಕು? ಯಾರಿಗೆ ಕೊಡಬೇಕು? ಹೇಗೆ ಕೊಡಬೇಕು? 5-6 ವರ್ಷಗಳ ಹಿಂದೆ, ಹಿಂದಿನ ಕರಡು ಅಧಿ ಸೂಚನೆಗೆ ಆಕ್ಷೇಪಣೆ ಕೊಟ್ಟಾಗಿದೆಯಲ್ಲ? ಮತ್ತೆ ಕೊಡಬೇಕಾ? ಹೌದಾದರೆ ಕಾರಣ ಏನು?
ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ನಮ್ಮ ಕ್ಷೇತ್ರಗಳ ಶಾಸಕರು, ಸಂಸದರು, ಸಚಿವರು ಮತ್ತು ಅಧಿಕಾರಿಗಳು ತಕ್ಷಣ ಒಂದಿಷ್ಟು ಕ್ರಮಗಳನ್ನು ಸ್ಥಳೀಯ ನಿವಾಸಿಗಳ, ರೈತರ ಪರವಾಗಿ ಮಾಡಬಹುದಾ?

Western Ghats

ಏನೇನು ಮಾಡಬಹುದು?

  • ಈಗಾಗಲೆ ಪರಿಸರ ಸೂಕ್ಷ್ಮ ಪ್ರದೇಶ ಅಂತ ಗುರುತು ಮಾಡಿದ ಪ್ರತಿ ಗ್ರಾಮದ ಸರ್ವೇ ಸ್ಕೆಚ್ ಕಾಪಿಯನ್ನು ಸುಲಭವಾಗಿ ರೈತರಿಗೆ ದೊರೆಯುವಂತೆ ಮಾಡುವುದು.
  • ಸೂಕ್ಷ್ಮ ಪ್ರದೇಶ ಎಂದು ಗುರುತಿಸಿದ ಪ್ರತಿ ಗ್ರಾಮಗಳ ಸರ್ವೇ ನಂಬರ್‌ಗಳ ಪಟ್ಟಿ ರೈತರಿಗೆ ದೊರೆಯುವಂತೆ ಮಾಡುವುದು. (ಆನ್‌ಲೈನ್‌ನಲ್ಲಿ ದೊರೆಯುವಂತೆ ಮಾಡುವುದು ಹೆಚ್ಚು ಸೂಕ್ತ.)
  • ಈಗಾಗಲೆ ಒತ್ತುವರಿಗೆ 50,53, 57, 94c ಗಳಲ್ಲಿ ಅರ್ಜಿ ಕೊಟ್ಟಿದ್ದು, ಅದನ್ನು ಸಕ್ರಮಗೊಳಿಸುವ ಕೆಲಸ ಆಗಿಲ್ಲ. ಹಕ್ಕು ಪತ್ರ, ಖಾತಾ ವರ್ಗಾವಣೆ ಆಗದೆ ಬಾಕಿ ಉಳಿದಿರುತ್ತದೆ. ಸಮರೋಪಾದಿಯಲ್ಲಿ ಅವುಗಳನ್ನು ಪರಿಶೀಲಿಸಿ ಕ್ಲಿಯರ್ ಮಾಡಿಸುವುದು.
  • ಪರಿಸರ ಸೂಕ್ಷ್ಮ ಪ್ರದೇಶದ ವಿಚಾರದಲ್ಲೇ 5-6 ವರ್ಷಗಳ ಹಿಂದೆ ಅಧಿಕೃತವಾಗಿ ಆಕ್ಷೇಪಣಾ ಅರ್ಜಿಗಳನ್ನು ಸರಕಾರ ಪ್ರತೀ ಪಂಚಾಯತಿಯಲ್ಲೂ ಅಧಿಕಾರಿಗಳನ್ನು ನೇಮಿಸಿ, ಅವರ ಮೂಲಕ ಸ್ವೀಕರಿಸಿತ್ತು. ಇದುವರೆಗೆ ಆ ಆಕ್ಷೇಪಣಾ ಅರ್ಜಿಗಳ ಯಾವುದೇ ಕ್ರಮಗಳನ್ನು ಕೈಗೊಂಡ ಮಾಹಿತಿ ಇರುವುದಿಲ್ಲ. ಈಗ ಮತ್ತೆ ಆಕ್ಷೇಪಣಾ ಅರ್ಜಿಗಳನ್ನು ಪಡೆಯಲು ಹೊರಟಿರುವುದರ ಅಗತ್ಯತೆ ಏನು ಎಂದು ಪರಶೀಲಿಸುವುದು.
  • 5-6 ವರ್ಷಗಳ ಹಿಂದೆ ಅಧಿಕೃತವಾಗಿ ಸ್ವೀಕರಿಸಿದ ಆಕ್ಷೇಪಣಾ ಅರ್ಜಿಗಳ ಮೇಲೆ ಸರಕಾರ ಏನೇನು ಕ್ರಮ ಕೈಗೊಂಡಿದೆ ಎಂದು ಸರಕಾರದಿಂದ ಪಡೆದು ಸಾರ್ವಜನಿಕರ ಗಮನಕ್ಕೆ ತರುವುದು.
  • ಈಗ ಬಿಡುಗಡೆಗೊಳಿಸಿದ 5ನೇ ಕರಡು ಅಧಿಸೂಚನೆಯ ಅನುಷ್ಠಾನದಿಂದ ಆಗುವ ಸ್ಪಷ್ಟ ಪರಿಣಾಮಗಳೇನು ಎಂಬ ಮಾಹಿತಿಯನ್ನು ಸಾಮಾನ್ಯ ಸಾರ್ವಜನಿಕರಿಗೆ ಅರ್ಥವಾಗುವ ಹಾಗೆ ತಜ್ಞರಿಂದ ಸರಳೀಕರಿಸಿ ತಿಳಿಸುವುದು.
  • ಹಿಂದಿನ ಕರಡು ಅಧಿಸೂಚನೆಗೂ ಈಗಿನ ಕರಡು ಅಧಿಸೂಚನೆಗೂ ಇರುವ ವ್ಯತ್ಯಾಸಗಳೇನು? ಏನೂ ವ್ಯತ್ಯಾಸ ಇಲ್ಲ ಮತ್ತು ಹಿಂದೆ ಸಾರ್ವಜನಿಕರು ಕೊಟ್ಟ ಆಕ್ಷೇಪಣೆಗಳನ್ನು ಪರಿಗಣಿಸಿಲ್ಲ ಅಂತಾದರೆ ಪದೇಪದೇ ಕರಡು ಅಧಿಸೂಚನೆ ಮತ್ತು ಆಕ್ಷೇಪಣೆ ಸ್ವೀಕರಿಸುವ ಪ್ರಕ್ರಿಯೆಯ ವ್ಯರ್ಥ ಕಸರತ್ತಿನ ಉದ್ದೇಶ ಏನು ಎಂದು ಮಾಹಿತಿ ಸಂಗ್ರಹಿಸಿ ಸಾರ್ವಜನಿಕರಿಗೆ ಕೊಡುವುದು.
  • 5ನೇ ಕರಡು ಅಧಿಸೂಚನೆಗೆ ಆಕ್ಷೇಪಣೆಗಳನ್ನು 60 ದಿನಗಳಲ್ಲಿ ಸಲ್ಲಿಸಲು ಒಂದು ಸರಳ ಆ್ಯಪ್/ವೆಬ್‌ಸೈಟ್ ಅಭಿವೃದ್ಧಿಪಡಿಸಿ ಆನ್‌ಲೈನ್‌ನಲ್ಲಿ ಆಕ್ಷೇಪಣೆ ಸಲ್ಲಿಸಲು ಅನುವು ಮಾಡಿಕೊಡುವುದು. (ಬೆಳೆ ವಿಮೆ ನೋಂದಣಿಗೆ ಮಾಡಿದ ಸಂವರಕ್ಷಣ ವೆಬ್‌ಸೈಟ್ ಅಥವಾ ಬೆಳೆಸರ್ವೆ ಆ್ಯಪ್ ರೀತಿ ಗೊಂದಲ, ಗೊಜಲುಗಳು ಈ ವೆಬ್‌ಸೈಟ್/ಆ್ಯಪ್‌ಗಳಲ್ಲಿ ಇರಬಾರದು)
  • ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಪರಿಸರಕ್ಕೆ ಹಾನಿಕಾರಕವಾಗಿರುವ ಅಕೇಶಿಯ, ನೀಲಗಿರಿ ಮರಗಳೇ ‘ಒತ್ತುವರಿ’ ಮಾಡಿಕೊಂಡು ಬೆಳೆದಿವೆ! (ಅಥವಾ ಬೆಳಸಲಾಗಿದೆ). ಅವುಗಳನ್ನು ಮೊದಲು ‘ತೆರವು’ಗೊಳಿಸಿ, ಅಲ್ಲಿ ಪರಿಸರ ಸ್ನೇಹಿ ಸಹಜ ಕಾಡುಗಳನ್ನು ಬೆಳೆಯಲು ಕ್ರಮ ವಹಿಸುವುದು.
  • ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿನ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳಲು ಬೇಕಾದ ಕೆಲವು ಸಾಮಾನ್ಯ ಚಟುವಟಿಕೆಗಳಿಗೆ ತೀವ್ರವಾದ ಗಮನ ಕೊಟ್ಟು ಅನುಷ್ಠಾನಕ್ಕೆ ತರುವುದು. ಉದಾಹರಣೆಗೆ ಏಕ ಬಳಿಕೆ ಪ್ಲಾಸ್ಟಿಕ್ ನಿಷೇಧ, 50 ಮೈಕ್ರಾನ್ ಪ್ಲಾಸ್ಟಿಕ್ ಬಳಸಲು ನಿಷೇಧವಿದ್ದರೂ ಬಳಕೆ ಆಗುತ್ತಿರುವುದಕ್ಕೆ ಕಡಿವಾಣ, ಗ್ರಾಮ, ಪಟ್ಟಣ, ಜಿಲ್ಲಾ ಪಂಚಾಯಿತಿಗಳಲ್ಲಿ ಸಂಗ್ರಹವಾಗುತ್ತಿರುವ ಒಣ ಕಸಗಳನ್ನು ಹೆಚ್ಚಿನ ಕಡೆಗಳಲ್ಲಿ ಡಂಪಿಂಗ್ ಮಾಡಲಾಗುತ್ತಿದೆ – ವೈಜ್ಞಾನಿಕ ಸಂಸ್ಕರಣೆ ಮತ್ತು ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳುವುದು.
  • ಪರಿಸರ ಸೂಕ್ಷ್ಮ ಪ್ರದೇಶಗಳು ಹಾಳಾಗುತ್ತಿರುವುದು ಮರಳು ಮೈನಿಂಗ್, JCB, ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ ಕೊರತೆ ಮತ್ತು ಅರಿವಿನ ಕೊರತೆ, ವಿಪರೀತವಾದ ಬೋರ್‌ವೆಲ್‌ಗಳು, ಅವೈಜ್ಞಾನಿಕವಾಗಿ ಬೆಳೆಸುತ್ತಿರುವ ಅಕೇಶಿ ಮತ್ತು ನೀಲಗಿರಿ, ಅವೈಜ್ಞಾನಿಕ ಹೈಟೆಕ್ ರೆಸಾರ್ಟ್‌ಗಳು… ಇವುಗಳಿಂದ ಎನ್ನಲಾಗುತ್ತಿದೆ. ಇವುಗಳ ಮೇಲೆ ಸಮರ್ಪಕ ಕ್ರಮ ಕೈಗೊಳ್ಳುವುದು. (ಮರಳು ಮೈನಿಂಗ್, JCB ಕೆಲಸಗಳು, ಎಲ್ಲಾ ಪ್ಲಾಸ್ಟಿಕ್, ಬೋರ್‌ವೆಲ್‌ಗಳನ್ನು ನಿಷೇಧಿಸುವುದಲ್ಲ, ವೈಜ್ಞಾನಿಕವಾಗಿ ಪರಿಶೀಲನೆಯೊಂದಿಗೆ ಮತ್ತು ಭ್ರಷ್ಟತೆ ಇಲ್ಲದೆ ಪರವಾನಗಿ/ಅನುಮತಿಗಳೊಂದಿಗೆ ಸಮರ್ಪಕ ಕ್ರಮಕ್ಕೆ ಕ್ರಮ ಕೈಗೊಳ್ಳುವುದು)

ವಿಸ್ತಾರ ಗ್ರಾಮ ದನಿ: ಅಡಿಕೆ ಬೆಳೆಗಾರರೂ ‘ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ʼ ಸಲ್ಲಿಸಬೇಕಾ? ಸಲ್ಲಿಸದಿದ್ದರೆ ಏನಾಗುತ್ತದೆ?ಇದನ್ನೂ ಓದಿ:

ಕಸ್ತೂರಿ ರಂಗನ್ ವರದಿ, ಸೆಕ್ಷನ್ 4, ಸೆಕ್ಷನ್ 17, ಎಲ್ಲಾ ಒತ್ತುವರಿಗಳನ್ನು ತೆರವುಗೊಳಿಸಿ ಎಂಬ ಸರಕಾರದ ಖಡಕ್ ಆದೇಶಗಳು ಒಂದು ಕಡೆ, ಅಭಿವೃದ್ಧಿಯ ಭಾಗವಾಗಿ ನೆಡೆಯುತ್ತಿರುವ ವಿಶಾಲ ಹೈವೇ ರಸ್ತೆಗಳು, ಕಾಡು ಕಡಿದು ನೂರಾರು ಎಕರೆ ಕಾಫಿ ತೋಟ ಮಾಡಿಕೊಳ್ಳುತ್ತಿರುವ ಶ್ರೀಮಂತರು, ಅಪಾಯಕಾರಿ ಅಕೇಶಿಯ ಕಾಡುಗಳು, ಮೈನಿಂಗ್… ಇತ್ಯಾದಿಗಳು ಇನ್ನೊಂದು ಕಡೆ. ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಯಾವುದೇ ದೊಡ್ಡ ತೊಂದರೆ ಮಾಡದೆ, ಸೂಕ್ಷ್ಮ ಪ್ರದೇಶದ ಭಾಗವಾಗಿ ಬದುಕುತ್ತಿರುವ, ತಲೆತಲಾಂತರಗಳಿಂದ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ರೈತರಾಗಿ, ರೈತ ಕಾರ್ಮಿಕಾರಾಗಿ ಬದುಕುತ್ತಿರುವ ಲಕ್ಷಾಂತರ ರೈತ, ರೈತ ಕಾರ್ಮಿಕರ ಬದುಕು ಮಗದೊಂದು ಕಡೆ. ಪರಿಸರ ಸೂಕ್ಷ್ಮ ಪ್ರದೇಶದ ವಿಚಾರ ಬಂದಾಗ ಆತಂಕಕ್ಕೆ ಒಳಗಾಗುವುದು, ಸಂಕಷ್ಟ ಒದಗುವುದು, ಗಾಬರಿಯಾಗುವುದು ಎಲ್ಲ ಸೂಕ್ಷ್ಮ ಪ್ರದೇಶದ ಭಾಗವಾಗಿ ಬದುಕುತ್ತಿರುವ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ರೈತರಿಗೆ, ರೈತ ಕಾರ್ಮಿಕರು. ಮತ್ತೆ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ ಇದೇ ಬಡ ರೈತರ, ರೈತ ಕಾರ್ಮಿಕರ ಅಂಗಳಕ್ಕೆ ಬಂದು ನಿಂತಿದೆ. ಸೂಕ್ಷ್ಮ ಪ್ರದೇಶಗಳ ಶಾಸಕರು, ಸಂಸದರು ಮಂತ್ರಿಗಳು ಮತ್ತು ಅಧಿಕಾರಿಗಳು ಈಗಲೂ ಏನಾದರು ಮಾಡಬಹುದು ಎಂಬ ಆಶಾ ಭಾವದಲ್ಲೇ ರೈತರು, ರೈತ ಕಾರ್ಮಿಕರು ಇದ್ದಾರೆ. ಒಳ್ಳೆಯದಾಗುವ ಹಾಗೆ, ಪರಿಸರ ಸೂಕ್ಷ್ಮ ಪ್ರದೇಶದ ಶಾಸಕರು, ಸಂಸದರು ಮಂತ್ರಿಗಳು ಮತ್ತು ಅಧಿಕಾರಿಗಳು ಏನಾದರು ಮಾಡಬಹುದಾ? ಇದು ರೈತರ, ಕೃಷಿಕರ ಕಳಕಳಿಯ ಪ್ರಶ್ನೆ.

Continue Reading

Latest

Shravan 2024: ಶ್ರಾವಣ ಮಾಸದಲ್ಲೇಕೆ ಮಾಂಸಾಹಾರ ಮಾಡಬಾರದು? ಇದಕ್ಕಿದೆ ವೈಜ್ಞಾನಿಕ ಕಾರಣ!

shravan 2024: ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸದೇ ಇರುವುದಕ್ಕೆ ಕೆಲವು ವೈಜ್ಞಾನಿಕ ಕಾರಣಗಳೂ ಇವೆ. ಈ ಸಮಯದಲ್ಲಿ ಸೀಗಡಿ ಮತ್ತು ಮೀನುಗಳ ಸಂತಾನೋತ್ಪತ್ತಿ ಕಾರ್ಯ ನಡೆಯುತ್ತದೆ. ಇದರಿಂದ ಸಮುದ್ರಾಹಾರವನ್ನು ಸೇವಿಸುವುದರಿಂದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇನ್ನು ಶ್ರಾವಣ ಮಾಸದಲ್ಲಿ ತಂಪಾದ ವಾತಾವರಣ ನಮ್ಮ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ, ಅದಕ್ಕಾಗಿಯೇ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ

VISTARANEWS.COM


on

shravan 2024
Koo


ಶ್ರಾವಣ ಮಾಸ ಎನ್ನುವುದು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವಾದ (shravan 2024) ಮಾಸವಾಗಿದೆ. ಯಾಕೆಂದರೆ ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಯ ಜೊತೆಗೆ ವಿಷ್ಣು, ಲಕ್ಷ್ಮಿ, ಪಾರ್ವತಿ ಮುಂತಾದ ದೇವರುಗಳ ಪೂಜೆ ಪುನಸ್ಕಾರಗಳನ್ನು ವಿಶೇಷವಾಗಿ ಮಾಡಲಾಗುತ್ತದೆ. ಹಾಗಾಗಿ ಈ ಮಾಸದಲ್ಲಿ ಮಾಂಸಹಾರಗಳನ್ನು ಸೇವಿಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದಕಾರಣ ಹೆಚ್ಚಿನ ಜನರು ಶ್ರಾವಣ ಮಾಸದಲ್ಲಿ ಮಾಂಸಹಾರವನ್ನು ತ್ಯಜಿಸುತ್ತಾರೆ. ಆದರೆ ಶ್ರಾವಣ (Shravan 2024) ಮಾಸದಲ್ಲಿ ಮಾಂಸಹಾರ ಸೇವಿಸಬಾರದು ಎಂದು ಹೇಳುವುದು ನಮ್ಮ ನಂಬಿಕೆ ಮಾತ್ರವಲ್ಲ, ಇದರ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳೂ ಇವೆ. ಅದೇನೆಂದು ತಿಳಿಯೋಣ.

ಆರೋಗ್ಯ ಕಾರಣ:

ಬೇಸಿಗೆ ಕಾಲದ ನಂತರ ಮಳೆಗಾಲ ಪ್ರಾರಂಭವಾಗುತ್ತದೆ. ಇದು ಬಿಸಿಲಿನ ಬೇಗೆಯಿಂದ ದಣಿದ ಜನರಿಗೆ ತಂಪಾದ ಅನುಭವವನ್ನು ನೀಡುತ್ತದೆ ನಿಜ. ಆದರೆ ಈ ಸಮಯದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ತಂಪಾದ ಗಾಳಿಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಹೊಟ್ಟೆಯ ಸೋಂಕುಗಳು, ಅತಿಸಾರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಡುತ್ತವೆ. ಅಲ್ಲದೇ ಈ ವಾತಾವರಣ ನಮ್ಮ ಜೀರ್ಣಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಮೊಟ್ಟೆಗಳು, ಸಮುದ್ರಾಹಾರ, ಚಿಕನ್ ಮತ್ತು ಮಟನ್‌ನಿಂದ ದೂರವಿರಲು ಸಲಹೆ ನೀಡಲಾಗಿದೆ.

shravan 2024
shravan 2024

ಮೀನುಗಳ ಸಂತಾನೋತ್ಪತ್ತಿ ಸಮಯ:

ಈ ಸಮಯದಲ್ಲಿ ಸೀಗಡಿ ಮತ್ತು ಮೀನುಗಳ ಸಂತಾನೋತ್ಪತ್ತಿ ಕಾರ್ಯವನ್ನು ನಡೆಯುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಸಂತಾನೋತ್ಪತ್ತಿ ಸಮಯದಲ್ಲಿ ಜೀವಿಗಳನ್ನು ಕೊಲ್ಲುವುದು ಮಹಾಪಾಪ. ಈ ಸಂಗತಿಯನ್ನು ಪರಿಗಣಿಸಿ ಹಿಂದೂಗಳ ನಂಬಿಕೆಯ ಆಧಾರದ ಮೇಲೆ ಈ ಸಮಯದಲ್ಲಿ ಮಾಂಸಾಹಾರ ಮತ್ತು ಮೊಟ್ಟೆಗಳನ್ನು ಸೇವಿಸುವುದರಿಂದ ದೂರ ಇರುತ್ತಾರೆ. ಸಾಮಾನ್ಯವಾಗಿ ಈ ಸಮಯದಲ್ಲಿ ಸಮುದ್ರದಲ್ಲಿ ಮೀನುಗಾರಿಗೆ ನಿಷೇಧ ಇರುತ್ತದೆ. ಆದಾಗ್ಯೂ ಈ ಅವಧಿಯಲ್ಲಿ ಸಮುದ್ರಾಹಾರವನ್ನು ಸೇವಿಸುವುದರಿಂದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಇದೊಂದು ವೈಜ್ಞಾನಿಕ ಕಾರಣವೂ ಇದೆ.

ಅಲ್ಲದೇ ಈ ಸಮಯದಲ್ಲಿ ಕೀಟಗಳ ಹಾವಳಿ ಕೂಡ ಹೆಚ್ಚಾಗಿರುತ್ತದೆ. ಇದರಿಂದ ನೀವು ಮಾಂಸವಾಗಿ ಸೇವಿಸುವಂತಹ ಜೀವಿಗಳು ಈ ಕೀಟಗಳನ್ನು ಹೆಚ್ಚು ಸೇವನೆ ಮಾಡುತ್ತದೆ. ಇದನ್ನು ನಾವು ಸೇವಿಸಿದಾಗ ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಅದಕ್ಕಾಗಿಯೇ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರವನ್ನು ಸೇವಿಸುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ಮೊಟ್ಟೆಗಳು, ಸಮುದ್ರಾಹಾರ, ಚಿಕನ್ ಮತ್ತು ಮಟನ್‌ನಿಂದ ದೂರವಿರಲು ಸಲಹೆ ನೀಡಲಾಗಿದೆ.

ಇದನ್ನೂ ಓದಿ: Shravan 2024: ಇಂದಿನಿಂದ ಶ್ರಾವಣ ಶುಭಾರಂಭ; ಈ ತಿಂಗಳ ವಿಶೇಷ ಏನು?

ಈ ಮಾಸದಲ್ಲಿ ಸಸ್ಯಹಾರವನ್ನು ಹೆಚ್ಚು ಸೇವಿಸಿ. ಯಾಕೆಂದರೆ ಸಸ್ಯಹಾರ ಸುಲಭವಾಗಿ ಜೀರ್ಣವಾಗುತ್ತವೆ. ಇದರಿಂದ ನಿಮ್ಮ ಜೀರ್ಣಕ್ರಿಯೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ತರಕಾರಿ, ಸೊಪ್ಪುಗಳಲ್ಲಿರುವ ಪೋಷಕಾಂಶಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ದೇಹದ ರೋಗ ನಿರೋಧಕ ಶಕ್ತಿಗಳನ್ನುಹೆಚ್ಚಿಸುವುದರ ಮೂಲಕ ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುತ್ತವೆ. ಈ ಮೂಲಕ ಕಾಯಿಲೆ ಬೀಳುವುದನ್ನು ತಡೆಯಬಹುದು.

Continue Reading

Latest

Viral Video: ಮಗನನ್ನೇ ಹೊಡೆದು ಕೊಂದು, ಸುಟ್ಟು ಹಾಕಿ ಕೊಳಕ್ಕೆ ಎಸೆದ ತಂದೆ-ತಾಯಿ; ಹೃದಯ ತಲ್ಲಣಿಸುವ ವಿಡಿಯೊ

Viral Video: ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಮಾತಿದೆ. ತಮ್ಮ ಮಕ್ಕಳು ಹೇಗೇ ಇರಲಿ ತಾಯಿಯಾದವಳಿಗೆ ಆ ಮಗುವಷ್ಟು ಸುಂದರ ಈ ಪ್ರಪಂಚಲ್ಲಿ ಯಾರೂ ಇಲ್ಲ ಎಂಬಂತಹ ಭಾವ. ಆದರೆ ಇಲ್ಲೊಂದು ಘಟನೆ ಮಾತ್ರ ಇದಕ್ಕೆ ವ್ಯತಿರಿಕ್ತವಾಗಿದೆ. ಮಾನಸಿಕ ಅಸ್ವಸ್ಥ ಯುವಕನನ್ನು ಹೆತ್ತವರೇ ಹಾಡುಹಗಲೇ ನಿರ್ದಯವಾಗಿ ಕೊಂದ ಆಘಾತಕಾರಿ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ನಡೆದಿದೆ. ಯುವಕನ ತಾಯಿ ಅವನನ್ನು ಕೋಲುಗಳಿಂದ ಹೊಡೆಯುತ್ತಿರುವ ವಿಡಿಯೊವೊಂದು ಎಲ್ಲೆಡೆ ವೈರಲ್ ಆಗಿದೆ. ತಾಯಿ, ಚಿಕ್ಕಮ್ಮ ಮತ್ತು ತಂದೆ ಮೂವರು ಸೇರಿ ಮಾನಸಿಕ ಅಸ್ವಸ್ಥನಾದ ಯುವಕನನ್ನು ಹೊಡೆದು ಒಂದು ಕೋಣೆಯಲ್ಲಿ ಬಂಧಿಸಿ ಸುಟ್ಟು ಹಾಕಿ ಶವವನ್ನು ಸ್ಥಳೀಯ ಕೊಳದಲ್ಲಿ ಎಸೆದಿದ್ದಾರೆ.

VISTARANEWS.COM


on

Viral Video
Koo


ಕರೀಂಗಂಜ್: ಪೋಷಕರು ಯಾವಾಗಲೂ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಾರೆ ಎಂದು ಹೇಳುತ್ತಾರೆ. ಅಲ್ಲದೇ ಪೋಷಕರಿಗೆ ತಮ್ಮ ಮಕ್ಕಳು ಹೇಗೆ ಇದ್ದರು ಅದು ಚೆನ್ನ. ಮಕ್ಕಳಿಗೆ ಯಾವುದೇ ಸಂಕಟ ಬರದಂತೆ ನೋಡಿಕೊಳ್ಳುತ್ತಾರೆ. ವಿಶೇಷವಾಗಿ ಪೋಷಕರು ತಮ್ಮ ಮಕ್ಕಳು ವಿಕಲಚೇತನರು ಆಗಿದ್ದರೆ ಅವರ ಬಗ್ಗೆ ಹೆಚ್ಚಿನ ಕಾಳಜಿ ತೋರಿಸುತ್ತಾರೆ. ಅವರು ಬದುಕಿರುವ ತನಗೆ ಅವರ ರಕ್ಷಣೆ ಮಾಡುತ್ತಾರೆ. ಅಂತಹದರಲ್ಲಿ ಇಲ್ಲೊಂದು ಕುಟುಂಬ ಮಾನಸಿಕ ಅಸ್ವಸ್ಥನಾದ ಮಗನನ್ನು ತಮಗೆ ಹೊರೆಯಾದ ಎಂದು ಕೊಂದು ಹಾಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಮಾನಸಿಕ ಅಸ್ವಸ್ಥ ಯುವಕನನ್ನು ಪೋಷಕರು ಹಾಡಹಗಲೇ ನಿರ್ದಯವಾಗಿ ಕೊಂದ ಆಘಾತಕಾರಿ ಘಟನೆ ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಯನ್ನು ನೋಡುಗರು ವಿಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಅದರಲ್ಲಿ ಯುವಕನ ತಾಯಿ ಅವನನ್ನು ಕೋಲುಗಳಿಂದ ಹೊಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಖುದ್ ಪುರಹುರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 32 ವರ್ಷದ ಸುಹೈಲ್ ಅಹಮ್ಮದ್ ಚೌಧರಿ ಬಲಿಪಶುವಾಗಿದ್ದು, ತಾಯಿ ದಿಲುವಾರಾ ಬೇಗಂ, ಚಿಕ್ಕಮ್ಮ ಹಸ್ನಾ ಬೇಗಂ ಮತ್ತು ತಂದೆ ಅಬ್ದುಲ್ ಶಾಹಿದ್ ಎಂಬುವವರು ಆತನನ್ನು ಕೋಲುಗಳಿಂದ ಹೊಡೆಯುತ್ತಿದ್ದಾರೆ ಎನ್ನಲಾಗಿದೆ. ನಂತರ ಇಷ್ಟಕ್ಕೆ ಸುಮ್ಮನಾಗದ ಪೋಷಕರು ಅವನನ್ನು ಒಂದು ಕೋಣೆಯಲ್ಲಿ ಬಂಧಿಸಿ ಸುಟ್ಟು ಹಾಕಿ ಶವವನ್ನು ಸ್ಥಳೀಯ ಕೊಳದಲ್ಲಿ ಎಸೆದಿದ್ದಾರೆ ಎನ್ನಲಾಗಿದೆ.

ಕುಟುಂಬಕ್ಕೆ ಆತ ಹೊರೆಯಾದ ಕಾರಣ ಕುಟುಂಬವು ಈ ರೀತಿ ಯುವಕನನ್ನು ಕೊಂದಿದೆ ಮತ್ತು ಸಂತ್ರಸ್ತ ಸಣ್ಣ ಕಳ್ಳತನ ಮತ್ತು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಯುವಕನ ಶವ ಕೊಳದಲ್ಲಿ ತೇಲುತ್ತಿದ್ದ ಹಿನ್ನಲೆಯಲ್ಲಿ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಕೊಳದಿಂದ ಶವವನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Physical Abuse: ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನಿಗೆ 106 ವರ್ಷ ಜೈಲು ಶಿಕ್ಷೆ

ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯುವಕನ ದೇಹದ ಮೇಲೆ ಅನೇಕ ಗಾಯಗಳಾಗಿದ್ದು, ಅಧಿಕ ರಕ್ತಸ್ರಾವವಾಗಿದೆ. ಹಾಗೇ ಅವನ ಕೈಕಾಲಿನ ಮೂಳೆ ಮುರಿದಿದೆ ಎಂಬುದಾಗಿ ತಿಳಿದುಬಂದಿದೆ. ಆದರೆ ಇಂತಹ ಅಪರಾಧದಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Continue Reading
Advertisement
Women's T20 World Cup
ಪ್ರಮುಖ ಸುದ್ದಿ19 mins ago

Women’s T20 World Cup : ಬಾಂಗ್ಲಾದಲ್ಲಿ ಕ್ಷೋಭೆ; ಮಹಿಳೆಯ ಟಿ20 ವಿಶ್ವ ಕಪ್ ಮುಂದೂಡಿಕೆ?

Bangladesh Protest
ವಿದೇಶ39 mins ago

Bangladesh Protest: ಶೇಖ್‌ ಹಸೀನಾ ಭಾರತಕ್ಕೆ ಬಂದ ಬೆನ್ನಲ್ಲೇ ಬಾಂಗ್ಲಾದಲ್ಲಿ 4 ಹಿಂದು ದೇಗುಲಗಳ ಧ್ವಂಸ; ಹಿಂದು ಕೌನ್ಸಿಲರ್‌ ಹತ್ಯೆ!

ಪ್ರಮುಖ ಸುದ್ದಿ2 hours ago

Rohit Sharma : ಧೋನಿಯ ನಾಯಕತ್ವದ ದಾಖಲೆಯೊಂದನ್ನು ಮುರಿದ ರೋಹಿತ್ ಶರ್ಮಾ

ಪ್ರಮುಖ ಸುದ್ದಿ2 hours ago

Gowri Movie: ‘ಗೌರಿ’ ಚಿತ್ರದ ಟ್ರೈಲರ್ ಅನಾವರಣ ಮಾಡಿದ ಕಿಚ್ಚ ಸುದೀಪ್

Bangladesh Protest
ದೇಶ2 hours ago

Bangladesh Protest: ಬಾಂಗ್ಲಾದೇಶ ಹಿಂಸಾಚಾರ ಕುರಿತು ಮೋದಿ ಮಹತ್ವದ ಸಭೆ; ಚರ್ಚಿಸಿದ ವಿಷಯಗಳೇನು?

Independence Day 2024
ಸಿನಿಮಾ2 hours ago

Independence Day 2024: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಕಥೆ ಹೇಳುವ ಟಾಪ್‌ 10 ಹಿಂದಿ ಸಿನೆಮಾಗಳಿವು

CM Siddaramaiah instructs to provide immediate relief to those affected by heavy rains
ಕರ್ನಾಟಕ2 hours ago

CM Siddaramaiah: ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ತಕ್ಷಣ ಪರಿಹಾರ; ಸಿದ್ದರಾಮಯ್ಯ ಸೂಚನೆ

ಪ್ರಮುಖ ಸುದ್ದಿ3 hours ago

Vinod Kambli : ಹದಗೆಟ್ಟಿದೆ ಮಾಜಿ ಕ್ರಿಕೆಟರ್​ ವಿನೋದ್ ಕಾಂಬ್ಳಿ ಆರೋಗ್ಯ ; ಸಚಿನ್ ಜತೆಗಾರನಿಗೆ ಈಗ ಕೈ ಹಿಡಿದುಕೊಂಡು ನಡೆಯುವ ಪರಿಸ್ಥಿತಿ!

Urban local bodies
ಪ್ರಮುಖ ಸುದ್ದಿ3 hours ago

Urban local bodies: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿದ ಸರ್ಕಾರ; ಇಲ್ಲಿದೆ ಪಟ್ಟಿ

ವಿಸ್ತಾರ ಗ್ರಾಮ ದನಿ
ಪರಿಸರ3 hours ago

ವಿಸ್ತಾರ ಗ್ರಾಮ ದನಿ: ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆ; ನಮ್ಮ ಶಾಸಕರು, ಸಂಸದರು, ಸಚಿವರು, ಅಧಿಕಾರಿಗಳು ಕೃಷಿಕರಿಗಾಗಿ ಏನು ಮಾಡಬಹುದು?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ1 week ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌