Murder Case: ಪತ್ನಿಯನ್ನು ಕೊಂದು ಪರಾರಿಯಾದ, ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಸತ್ತ! - Vistara News

ಕ್ರೈಂ

Murder Case: ಪತ್ನಿಯನ್ನು ಕೊಂದು ಪರಾರಿಯಾದ, ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಸತ್ತ!

Murder Case: ಕೊಲೆ ನಡೆದ ಐದು ದಿನದ ಬಳಿಕ, ಆರೋಪಿ ತಬ್ರೇಝ್ ಪಾಷಾನ ಬೆನ್ನು ಹತ್ತಿದ ಪೊಲೀಸರಿಗೆ ಆತನ ಹೆಣ ಎದುರಾಗಿದೆ. ಫೇಸ್‌ಬುಕ್ ಲೈವ್ ಮಾಡುತ್ತಲೇ ಪತ್ನಿಯ ಹತ್ಯೆ ಮಾಡಿದ್ದ ಪಾತಕಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಜೀವ ಕಳೆದುಕೊಂಡಿದ್ದಾನೆ.

VISTARANEWS.COM


on

Murder case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೋಲಾರ: ಪತ್ನಿಯನ್ನು ಕೊಂದು (Murder Case) ಪರಾರಿಯಾಗಿದ್ದ ಪಾತಕಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ತೀವ್ರವಾಗಿ ಗಾಯಗೊಂಡು ಸತ್ತುಹೋಗಿದ್ದಾನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ (Bangalore Crime) ಪತ್ನಿಯನ್ನು ಕೊಂದಿದ್ದ (husband killed wife) ಆರೋಪಿ, ಕೋಲಾರದಲ್ಲಿ (Kolar News) ಸಾವಿಗೀಡಾಗಿದ್ದಾನೆ.

ಕೊಲೆ ನಡೆದ ಐದು ದಿನದ ಬಳಿಕ, ಆರೋಪಿ ತಬ್ರೇಝ್ ಪಾಷಾನ ಬೆನ್ನು ಹತ್ತಿದ ಪೊಲೀಸರಿಗೆ ಆತನ ಹೆಣ ಎದುರಾಗಿದೆ. ಫೇಸ್‌ಬುಕ್ ಲೈವ್ ಮಾಡುತ್ತಲೇ ಪತ್ನಿಯ ಹತ್ಯೆ ಮಾಡಿದ್ದ ಪಾತಕಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಜೀವ ಕಳೆದುಕೊಂಡಿದ್ದಾನೆ.

ಫಾತಿಮಾ‌ (34) ಪತಿಯಿಂದ ಕೊಲೆಯಾದ ಮಹಿಳೆ. ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಐದು ವರ್ಷಗಳ ಹಿಂದೆಯೇ ಈ ದಂಪತಿ ದೂರವಾಗಿದ್ದರು. ಆರೋಪಿ ತಬ್ರೇಝ್ ಪಾಷಾ ಕಳ್ಳತನ ಕೇಸ್, ಗಾಂಜಾ ಕೇಸ್‌ನಲ್ಲಿ ಭಾಗಿಯಾಗಿದ್ದ. ಇತ್ತ ಅಂಗವಿಕಲ ತಾಯಿಯೊಂದಿಗೆ ಇಬ್ಬರು ಮಕ್ಕಳ ಜತೆ ಫಾತಿಮಾ ವಾಸವಿದ್ದಳು. ಆದರೂ ಆಗಾಗ ಮನೆಗೆ ಬಂದು ಜಗಳ ಮಾಡುತ್ತಿದ್ದ. ಪದೇ ಪದೆ ಮನೆಗೆ ಬರುವಂತೆ ಕಿರುಕುಳ ಕೊಡುತ್ತಿದ್ದ.

ಇತ್ತೀಚೆಗೆ ರಸ್ತೆಯಲ್ಲಿ ಆಕೆಯನ್ನು ಅಡ್ಡ ಹಾಕಿ ಜಗಳ ತೆಗೆದಿದ್ದ ತಬ್ರೇಝ್, ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದ. ಹೀಗಾಗಿ ಫಾತಿಮಾ ತಾಯಿ, ತಬ್ರೇಝ್ ಏನಾದರೂ ಮಾಡುತ್ತಾನೆ ಎಂಬ ಆತಂಕದಿಂದ ಮನೆಗೆ ಸಿಸಿಟಿವಿ ಅಳವಡಿಸಿದ್ದರು. ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಗೆ ಬಂದು ಜಗಳ ತೆಗೆದಿದ್ದ ತಬ್ರೇಜ್ ಪಾಷ, ಇಬ್ಬರು ಮಕ್ಕಳನ್ನು ಹೊರಗೆ ಕಳಿಸಿದ್ದ. ತಾಯಿಯ ಮುಂದೆಯೇ ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ.

ಮನೆಗೆ ಬರುವ ಮುನ್ನ ಹಾಗೂ ಹತ್ಯೆಯ ವೇಳೆ ತನ್ನ ಕೃತ್ಯವನ್ನು ಈ ಪಾತಕಿ ಫೇಸ್‌ಬುಕ್‌ ಲೈವ್ ಮಾಡಿದ್ದ. ಕೊಲೆಯ ಬಳಿಕ ಕೋಲಾರಕ್ಕೆ ಕಾಲ್ಕಿತ್ತಿದ್ದ. ಮೊಬೈಲ್ ಬಳಸದೇ ಕೋಲಾರದ ಮಸೀದಿಯಲ್ಲಿ ನಾಲ್ಕು ದಿನ ಉಳಿದುಕೊಂಡಿದ್ದ. ಬಳಿಕ ನಿನ್ನೆ ಕೋಲಾರದ ಚಿಕ್ಕಮ್ಮನ ಮನೆಗೆ ತೆರಳಿದ್ದ.

ಆರೋಪಿಯನ್ನು ಬಂಧಿಸಲು ಕೋಲಾರಕ್ಕೆ ತೆರಳಿದ್ದ ಚಾಮರಾಜಪೇಟೆ ಪೊಲೀಸರ ತಂಡ ಚಿಕ್ಕಮ್ಮನ ಮನೆಗೆ ಪ್ರವೇಶಿಸಿದಾಗ, ತಪ್ಪಿಸಿಕೊಳ್ಳುವ ಭರದಲ್ಲಿ ಸುಮಾರು 12 ಅಡಿ ಎತ್ತರದ ಮನೆಯ ಟೆರೇಸ್‌ನಿಂದ ಈತ ಜಿಗಿದಿದ್ದಾನೆ. ಆಗ ಬಿದ್ದು ಅಸ್ವಸ್ಥನಾಗಿದ್ದ. ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಸಾವಿಗೀಡಾಗಿದ್ದಾನೆ.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಬೆಂಗಳೂರು: ಹಾಡಹಗಲೆ ಯುವಕನ ಬರ್ಬರ ಹತ್ಯೆ (Murder case) ನಡೆದಿದೆ. ಬೆಂಗಳೂರಿನ ಶೇಷಾದ್ರಿ ಪುರಂ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಘಟನೆ ನಡೆದಿದೆ. ಅಜಿತ್ ಕುಮಾರ್‌ (25) ಕೊಲೆಯಾದವನು.

ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ರಶಿಲ್ಲಾರ್ ಸ್ಟ್ರೀಟ್‌ನಲ್ಲಿ ಅಜಿತ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಭೇಟಿ ನೀಡಿದ್ದಾರೆ.

ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಂತಕರಿಗಾಗಿ ಹುಡುಕಾಟ ನಡೆಸಿರುವ ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಕೊಲೆ ಆರೋಪಿಗಳ ನಡುವೆಯೇ ಚಕಮಕಿ, ಗೋಳಾಟ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Road Accident: ಗರ್ಭಿಣಿಯ ಮೇಲೆ ಹರಿದ ಲಾರಿ, ಹೊಟ್ಟೆಯಿಂದ ಹೊರಬಂದ ಮಗು ಸಹಿತ ಅಪ್ಪಚ್ಚಿ

Road Accident: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿ ಘೋರ ದುರಂತ ಸಂಭವಿಸಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. 8 ತಿಂಗಳ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ. ಟಿಪ್ಪರ್ ಮೈಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ ಮಗು ಕೂಡ ಹೊರಗೆ ಬಂದು ಅಸುನೀಗಿದೆ.

VISTARANEWS.COM


on

nelamangala road accident
Koo

ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ನಡೆದ ಘೋರ ಅಪಘಾತ (Road Accident) ಒಂದರಲ್ಲಿ, ಟಿಪ್ಪರ್‌ ಲಾರಿಗೆ ಗರ್ಭಿಣಿ (Pregnant death) ಬಲಿಯಾಗಿದ್ದಾರೆ. ಹೊಟ್ಟೆಯಲ್ಲಿದ್ದ ಮಗು ಸಹಿತ ಹೊಟ್ಟೆಯಿಂದ ಹೊರಬಂದು ಸಾವಿಗೀಡಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಎಡೇಹಳ್ಳಿ ಬಳಿ ಘೋರ ದುರಂತ ಸಂಭವಿಸಿದೆ. ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿದೆ. 8 ತಿಂಗಳ ಗರ್ಭಿಣಿ ಮಹಿಳೆ ಸಾವನ್ನಪ್ಪಿದ್ದಾರೆ. ಟಿಪ್ಪರ್ ಮೈಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ ಮಗು ಕೂಡ ಹೊರಗೆ ಬಂದು ಅಸುನೀಗಿದೆ.

ಮೃತ ಮಹಿಳೆಯನ್ನು ಎಡೇಹಳ್ಳಿ ಗ್ರಾಮದ ಸಿಂಚನ (30) ಎಂದು ಗುರುತಿಸಲಾಗಿದೆ. ಪತಿ ಮಂಜುನಾಥ್ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ಬಳಿಕ ಟಿಪ್ಪರ್ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೋಟೆಲ್‌, ಮಾಲ್‌ಗಳಲ್ಲಿ ಆಹಾರದಲ್ಲಿ ಕೆಮಿಕಲ್‌, ಕಲರ್‌ ಬಳಸಿದರೆ ಕ್ರಮ; ತರಕಾರಿ ಮಾರಾಟಗಾರರಿಗೂ ಲೈಸೆನ್ಸ್‌ ಕಡ್ಡಾಯ

ಬೆಂಗಳೂರು: ರಾಜಧಾನಿಯ ಹೋಟೆಲ್ ಹಾಗೂ ಮಾಲ್‌ಗಳಲ್ಲಿ ನೀಡಲಾಗುವ ಆಹಾರದಲ್ಲಿ ಕೃತಕ ಕಲರ್‌ (Added colour) ಹಾಗೂ ಕೆಮಿಕಲ್ (Chemicals in Food) ಬಳಕೆ ಮಾಡದಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಹಾಗೂ ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಮಾಲ್‌ಗಳು ಹಾಗೂ ಹೋಟೆಲ್ ಮಾಲೀಕರ ಜೊತೆಗೆ ಸಭೆ ನಡೆಸಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಈ ಕುರಿತು ಸೂಚನೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿ ಆಹಾರದಲ್ಲೂ ಕಲರ್ ಬಳಕೆ, ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ತನಿಖೆ ಮಾಡಿದಾಗ ಮಾಲ್‌ಗಳಲ್ಲಿನ ಫುಡ್ ಕಳಪೆ ಎಂದು ಪತ್ತೆಯಾಗಿದೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಎಲ್ಲರೂ ಆಹಾರದಲ್ಲಿ ಶುಚಿತ್ವ ಕಾಪಾಡುವಂತೆ ಹಾಗೂ ಕಲರ್ ಮುಕ್ತ ಆಹಾರ ನೀಡುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.

ಇದರ ಜೊತೆಗೆ ತರಕಾರಿ ಮಾರಾಟಗಾರರಿಗೂ ಲೈಸನ್ಸ್ ಪಡೆಯುವುದು ಕಡ್ಡಾಯವಾಗಲಿದೆ. ಎಲ್ಲಾ ತರಕಾರಿ ವ್ಯಾಪಾರಿಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಲೈಸೆನ್ಸ್ ಪಡೆಯಬೇಕು. ತರಕಾರಿಗಳ ಸ್ಯಾಂಪಲ್‌ಗಳನ್ನು ಅಗತ್ಯ ಬಿದ್ದರೆ ಪರೀಕ್ಷೆ ನಡೆಸಬೇಕು. ತರಕಾರಿ- ಹಣ್ಣು ಮಾರುವಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ಸಾವಯವ ತರಕಾರಿ ಮಾರುತ್ತೇವೆ ಎಂದು ಹೆಚ್ಚಿನ ದರದಲ್ಲಿ ಕಳಪೆ ತರಕಾರಿ ಹಣ್ಣುಗಳನ್ನು ಮಾರುತ್ತಿರುವುದು ಕಂಡುಬರುತ್ತಿದೆ. ಇದರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್‌

Continue Reading

ಕರ್ನಾಟಕ

B.Ed Exam Scam: ಬಿ.ಇಡಿ ಪರೀಕ್ಷೆ ಅಕ್ರಮ; ಗುಲ್ಬರ್ಗಾ ವಿವಿ ಕುಲಸಚಿವೆ ಸೇರಿ ಐವರ ವಿರುದ್ಧ ಎಫ್‌ಐಆರ್‌

B.Ed Exam Scam: ಪರೀಕ್ಷಾ ಅಕ್ರಮಕ್ಕೆ ಅನುಕೂಲ‌ ಮಾಡಿಕೊಟ್ಟಿದ್ದಾರೆಂಬ ಆರೋಪದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವೆ ಸೇರಿ ಐವರ ವಿರುದ್ಧ ಕೇಸ್‌ ದಾಖಲಾಗಿದೆ. ಆದರೆ, ಈ ಮೊದಲೇ ದೂರು ನೀಡಿದ್ದರೂ ಪೊಲೀಸರು ತಮ್ಮ ದೂರನ್ನು ಸ್ವೀಕರಿಸಿಲ್ಲ ಎಂದು ಕುಲಸಚಿವೆ ಆರೋಪಿಸಿದ್ದಾರೆ.

VISTARANEWS.COM


on

B.Ed Exam Scam
Koo

ಕಲಬುರಗಿ: ಬಿ.ಇಡಿ ಪರೀಕ್ಷೆ ಅಕ್ರಮಕ್ಕೆ (B.Ed Exam Scam) ಸಂಬಂಧಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ.ಡಾ.ಮೇದಾವಿನಿ ಎಸ್.ಕಟ್ಟಿ ಸೇರಿ ಐವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ನಾಗರಾಜ್ ಎಂಬುವವರು ನೀಡಿದ ದೂರಿನ ಮೇರೆಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪರೀಕ್ಷಾ ಅಕ್ರಮಕ್ಕೆ ಅನುಕೂಲ‌ ಮಾಡಿಕೊಟ್ಟಿದ್ದಾರೆಂಬ ಆರೋಪದಲ್ಲಿ ಕುಲಸಚಿವೆ ಪ್ರೊ.ಡಾ.ಮೇದಾವಿನಿ ಎಸ್.ಕಟ್ಟಿ, ಅಲ್‌ ಬದರ್‌ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಮ್ಮ ಮಂಠಾಳೆ, ಬಿ.ಇಡಿ ವಿಷಯ ನಿರ್ವಾಹಕ ಸ್ವರೂಪ ಭಟ್ಟರ್ಕಿ, ಪರೀಕ್ಷೆ ಮೇಲ್ವಿಚಾರಕ ಮೌನೇಶ್‌ ಅಕ್ಕಿ, ಇಂದಿರಾ ಗಾಂಧಿ ಬಿ.ಇಡಿ ಕಾಲೇಜಿನ ಅಧ್ಯಕ್ಷ ಮೌಲಾ ಪಟೇಲ್‌ ವಿರುದ್ಧ ಪ್ರಕರಣ ದಾಖಲಾಗಿದೆ.

2024ರ ಜುಲೈನಲ್ಲಿ‌ ನಡೆದ ಬಿ.ಇಡಿ ಪರೀಕ್ಷೆ ವೇಳೆ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಬಿ.ಇಡಿ ಪರೀಕ್ಷೆಗೆ 100 ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಅವಕಾಶ ನೀಡಲಾಗಿತ್ತು. ಆದರೆ, ಪರೀಕ್ಷೆಗೆ ಅರ್ಹರು ಕೇವಲ 22 ವಿದ್ಯಾರ್ಥಿಗಳು ಮಾತ್ರ. ಬಿ.ಇಡಿ ಪ್ರಥಮ‌ ಹಾಗೂ ಮೂರನೇ ಸೆಮಿಸ್ಟರ್ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಎನ್ನಲಾಗಿತ್ತು. ನಕಲಿ ದಾಖಲೆಗಳು ಸೃಷ್ಟಿಸಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಹಾಲ್‌ ಟಿಕೆಟ್ ನೀಡಿದ ಆರೋಪ ಇಂದಿರಾಗಾಂಧಿ ಬಿ.ಇಡಿ ಕಾಲೇಜು ಹಾಗೂ ಅಲ್ ಬದರ್ ಕಾಲೇಜು ವಿರುದ್ಧ ಕೇಳಿಬಂದಿತ್ತು.

ದೂರು ಕೊಟ್ಟಿದ್ದ ಕುಲಸಚಿವೆ ಮೇಲೆಯೇ ಎಫ್‌ಐಆರ್‌!

ಪರೀಕ್ಷಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಇಂದಿರಾಗಾಂಧಿ ಬಿ.ಇಡಿ ಕಾಲೇಜು ಹಾಗೂ ಅಲ್ ಬದರ್ ಕಾಲೇಜು ವಿರುದ್ಧ ಜುಲೈ 8ರಂದೇ ಮೌಲ್ಯಮಾಪನ ಕುಲಸಚಿವೆ ಪ್ರೊ.ಡಾ.ಮೇದಾವಿನಿ ಎಸ್.ಕಟ್ಟಿ ಅವರು ಇದೇ ಅಶೋಕನಗರ ಪೊಲೀಸ್ ಠಾಣೆಯಲ್ಲಿ‌ ದೂರು ನೀಡಿದ್ದರು ಎನ್ನಲಾಗಿದೆ. ಆದರೆ, ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು ಎಂಬ ಆರೋಪ ಕೇಳಿಬಂದಿದೆ.

ಮೊದಲಿಗೆ ವಿವಿ ಪೊಲೀಸ್ ಠಾಣೆಯಿಂದ ರಾಘವೇಂದ್ರ ಪೊಲೀಸ್ ಠಾಣೆ, ಅಲ್ಲಿಂದ ಮತ್ತೆ ಅಶೋಕನಗರ ಪೊಲೀಸ್ ಠಾಣೆಗೆ ಕುಲಸಚಿವೆ ಅಲೆದಾಡಿದ್ದಾರೆ. ಆದರೆ, ಮೊದಲು ದೂರು ದಾಖಲಿಸಿದ್ದ ಪ್ರಕರಣದ ತನಿಖೆ ಬಿಟ್ಟು, ನಂತರ ದಾಖಲಿಸಿದ್ದ ಪ್ರಕರಣದ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಮೌಲ್ಯಮಾಪನ ಕುಲಸಚಿವೆ ಪ್ರೊ.ಡಾ.ಮೇದಾವಿನಿ ಎಸ್.ಕಟ್ಟಿ ಆರೋಪಿಸಿದ್ದಾರೆ.

ಇದನ್ನೂ ಓದಿ | Viral News: ಗುಪ್ತಾಂಗ ಭಾಗದಲ್ಲಿ ಪತ್ತೆಯಾಯ್ತು ಮೊಬೈಲ್‌; ಪರೀಕ್ಷೆಯಲ್ಲಿ ಕಾಪಿ ಹೊಡಿಯೋಕೆ ಅಭ್ಯರ್ಥಿಗಳ ಹೊಸ ಟೆಕ್ನಿಕ್‌!

ಬೇಗ ಎಫ್‌ಐಆರ್‌ ಮಾಡಲು ಅಗೋದಿಲ್ಲಾ ಎಂದಿದ್ದ ಪೊಲೀಸರು, ಈಗ ಏಕಾ ಏಕಿ ತಮ್ಮ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದೇಕೆ? ಎಂದು ಕಲಬುರಗಿ ಸೌತ್ ಎಸಿಪಿ ಭೋತೆಗೌಡ ಅವರ ಮೇಲೆ ಕುಲಸಚಿವೆ ಅನುಮಾನ ವ್ಯಕ್ತಪಡಿಸಿದ್ದಾರೆ.

Continue Reading

ಕರ್ನಾಟಕ

Mangalore Homestay case: ಮಂಗಳೂರು ಹೋಮ್‌ ಸ್ಟೇ ದಾಳಿ ಪ್ರಕರಣದ ಎಲ್ಲಾ 40 ಆರೋಪಿಗಳು ಖುಲಾಸೆ

Mangalore Homestay case: ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು. ಪತ್ರಕರ್ತ ನವೀನ್ ಸೂರಿಂಜೆ ಪ್ರಕರಣವನ್ನು ನ್ಯಾಯಾಲಯ ಈ ಹಿಂದೆಯೇ ಕೈಬಿಟ್ಟಿತ್ತು. ಉಳಿದ 40 ಆರೋಪಿಗಳನ್ನು ಕೋರ್ಟ್ ಮಂಗಳವಾರ ದೋಷ ಮುಕ್ತಗೊಳಿಸಿದೆ.

VISTARANEWS.COM


on

Mangalore Homestay case
Koo

ಮಂಗಳೂರು: ಮಂಗಳೂರು ಹೋಮ್‌ ಸ್ಟೇ ದಾಳಿ ಪ್ರಕರಣದ (Mangalore Homestay case) ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕಾಂತರಾಜು ಮಹತ್ವದ ತೀರ್ಪು ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ದೋಷಮುಕ್ತರಾಗಿದ್ದಾರೆ.

ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು. ಪತ್ರಕರ್ತ ನವೀನ್ ಸೂರಿಂಜೆ ಪ್ರಕರಣವನ್ನು ನ್ಯಾಯಾಲಯ ಈ ಹಿಂದೆಯೇ ಕೈಬಿಟ್ಟಿತ್ತು. ಇಂದು ಉಳಿದ 40 ಆರೋಪಿಗಳನ್ನು ಕೋರ್ಟ್ ದೋಷ ಮುಕ್ತಗೊಳಿಸಿದೆ. ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿದೆ.

ಏನಿದು ಪ್ರಕರಣ?

2012ರ ಜುಲೈ 28 ರಂದು ಹಿಂದು ಸಂಘಟನೆಯ ಕಾರ್ಯಕರ್ತರು ಪಡೀಲ್ ಹೋಂ ಸ್ಟೇ ಮೇಲೆ ದಾಳಿ ಮಾಡಿದ್ದರು. ಯುವಕ ಯುವತಿಯರು ಹೋಂ ಸ್ಟೇಯಲ್ಲಿ ತಂಗಿದ್ದು, ಬರ್ತ್ ಡೇ ಪಾರ್ಟಿ ಮಾಡುತ್ತಿದ್ದಾಗ ಅವರ ಮೇಲೆ ಹಿಂದು ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ತೀವ್ರ ಹಲ್ಲೆ ನಡೆಸಿದ್ದರು. ಈ ಬಗ್ಗೆ ಸಂತ್ರಸ್ತರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂತಿಮವಾಗಿ ಪೊಲೀಸರು 44 ಮಂದಿಯ ಮೇಲೆ ಆರೋಪ ಪಟ್ಟಿ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಘಟನೆ ನಡೆದು ಸುದೀರ್ಘ 12 ವರ್ಷ ವಿಚಾರಣೆ ಬಳಿಕ ಮಂಗಳವಾರ ಅಂತಿಮ ತೀರ್ಪು ಹೊರಬಿದ್ದಿದೆ.

ಇದನ್ನೂ ಓದಿ | Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Gadag News : ಮಕ್ಕಳ ಕೂದಲು ಕಟ್ ಮಾಡಿದ ಕಂಪ್ಯೂಟರ್ ಶಿಕ್ಷಕನಿಗೆ ಧರ್ಮದೇಟು!

Gadag News
Gadag News

ಗದಗ: ಮಕ್ಕಳ ಕೂದಲು ಕಟ್ ಮಾಡಿದ್ದಕ್ಕೆ ಕಂಪ್ಯೂಟರ್ ಶಿಕ್ಷಕನಿಗೆ ಧರ್ಮದೇಟು ಬಿದ್ದಿದೆ. ಗದಗ (Gadag News) ಬೆಟಗೇರಿ ಸೇಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈಡ್ರಾಮಾವೇ ನಡೆದಿದೆ. ಶಿಕ್ಷಕ ಬೆನೋಯ್ ಎಂಬಾತ ಶಾಲೆಯ ಆರು ಮಕ್ಕಳಿಗೆ ಹೇರ್ ಕಟ್ ಮಾಡಿದ್ದಾರೆ.

ಕೂದಲು ಕಟ್ ಮಾಡುವ ವೇಳೆ ವಿದ್ಯಾರ್ಥಿ ಹಣೆಗೆ ಗಾಯವಾಗಿದೆ. ಏಳನೇ ತರಗತಿ ವಿದ್ಯಾರ್ಥಿಗೆ ಬೆನೋಯ್ ಕತ್ತರಿಯಿಂದ ಗಾಯ ಮಾಡಿದ್ದಾರೆ. ಶಿಕ್ಷಕ ಬೆನೋಯ್ ವರ್ತನೆಗೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಬುರಡಿ ಎದುರೇ ಪೋಷಕರು ಧರ್ಮದೇಟು ನೀಡಿದ್ದಾರೆ.

ಇದನ್ನೂ ಓದಿ: Self Harming: ಹೊಸದುರ್ಗದಲ್ಲಿ ಬ್ಯಾಂಕ್‌ ಆಫೀಸರ್‌ ಸೂಸೈಡ್‌; ರೈಲಿಗೆ ಸಿಲುಕಿ ಮತ್ತಿಬ್ಬರು ಸಾವು

ಬಳಿಕ ಬೆನೋಯ್‌ನ್ನು ವಜಾಗೊಳಿಸುವಂತೆ ಪಾಲಕರು ಆಗ್ರಹಿಸಿದ್ದಾರೆ. ದುರ್ವರ್ತನೆ ತೋರಿದ ಶಿಕ್ಷಕನ ಬಗ್ಗೆ ಬಿಇಒ ಅಧಿಕಾರಿ ವರದಿ ಪಡೆದಿದ್ದಾರೆ. ಮೇಲಾಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಗದಗ ಶಹರ ಬಿಇಒ ಆರ್‌ಎಸ್ ಬುರಡಿ ಮಾಹಿತಿ ನೀಡಿದ್ದಾರೆ.

Continue Reading

ಬೆಂಗಳೂರು

Physical Abuse : ಬೆಂಗಳೂರಿನಲ್ಲಿ ಶಾಲಾ ಬಾಲಕಿ ಮೇಲೆ ನಿರಂತರ ಅತ್ಯಾಚಾರವೆಸಗಿದ ಯುವಕ

Physical Abuse : ಯುವಕನೊಬ್ಬ ಶಾಲಾ ಬಾಲಕಿಯರನ್ನೇ ಟಾರ್ಗೆಟ್‌ ಮಾಡಿ ಅತ್ಯಾಚಾರವೆಸಗಿರುವ ಆರೋಪ ಕೇಳಿ ಬಂದಿದೆ. ಶಾಲಾ ಬಾಲಕಿ 7 ತಿಂಗಳ ಗರ್ಭಿಣಿಯಾದಾಗ ಕೃತ್ಯ ಬೆಳಕಿಗೆ ಬಂದಿದೆ.

VISTARANEWS.COM


on

By

Physical Abuse
ಆರೋಪಿ ಸಾದ್ ಮುಸೈಬ್ನಾ
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ (Physical Abuse) ನಡೆದಿರುವ ಆರೋಪ ಕೇಳಿ ಬಂದಿದೆ. ಹೊಟ್ಟೆ ನೋವು ಎಂದು ನರಳಾಡುತ್ತಿದ್ದ ಮಗಳನ್ನು ಆಸ್ಪತ್ರೆಗೆ ಕರೆದುಹೋದ ಪೋಷಕರಿಗೆ ಆಘಾತವೇ ಎದುರಾಗಿತ್ತು. ಯಾಕೆಂದರೆ ಶಾಲೆಗೆ ಹೋಗುತ್ತಿದ್ದ ಮಗಳು 7 ತಿಂಗಳ ಗರ್ಭಿಣಿಯಾಗಿದ್ದಳು. ವೈದ್ಯರು ಹೇಳಿದ ಸುದ್ದಿ ಕೇಳಿ ತಂದೆ-ತಾಯಿ ಶಾಕ್‌ ಆಗಿದ್ದರು. ಬೆಂಗಳೂರಿನ ಡಿ.ಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮಾಡುತ್ತಾ ಅಲ್ಪ-ಸ್ವಲ್ಪ ಫೇಮಸ್‌ ಆಗಿದ್ದ ಸಾದ್ ಮುಸೈಬ್ನಾ ಎಂಬಾತನ ಮೇಲೆ ಬಾಲಕಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. 15 ವರ್ಷದ ಮಗಳನ್ನು ನಂಬಿಸಿ, ಮನವೊಲಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತೆಯನ್ನು ಆರೋಪಿ ಸಾದ್‌ ಮನೆಗೆ ಕರೆದೊಯ್ದು ಆತನ ತಾಯಿ ಹಾಗೂ ಸಹೋದರಿಗೆ ಪರಿಚಯಿಸಿ ನಂಬಿಸಿದ್ದನಂತೆ. ಬಳಿಕ ಪದೆ ಪದೇ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದನಂತೆ. ಈ ಬಗ್ಗೆ ಕೇಳಲು ಆರೋಪಿ ಮನೆಗೆ ಹೋದಾಗ ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದನಂತೆ. ರೌಡಿಗಳ ಪರಿಚಯವಿದೆ, ನಿಮ್ಮ ಮಗಳನ್ನು ಬಿಡುವುದಿಲ್ಲ ಎಂದು ಹಲ್ಲೆ ನಡೆಸಿದ್ದನಂತೆ.

Physical Abuse
Physical Abuse

ಇದನ್ನೂ ಓದಿ: Gadag News : ಮಕ್ಕಳ ಕೂದಲು ಕಟ್ ಮಾಡಿದ ಕಂಪ್ಯೂಟರ್ ಶಿಕ್ಷಕನಿಗೆ ಧರ್ಮದೇಟು!

ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ

ಈ ಎಲ್ಲ ಘಟನೆಗಳಿಂದ ಮನನೊಂದ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಪೋಷಕರು ಆಕೆಯನ್ನು ರಕ್ಷಿಸಿದ್ದಾರೆ. ಆರೋಪಿ ಸಾದ್ ಹಲವಾರು ಬಾರಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಶಾಲೆಗೆ ಬರುವ ಅಮಾಯಕ ಹೆಣ್ಣುಮಕ್ಕಳನ್ನು ಇದೇ ರೀತಿ ಬಳಸಿಕೊಳ್ಳುತ್ತಿದ್ದಾನೆ. ಎಲ್ಲರ ಪರವಾಗಿ ನಾನೇ ಮುಂದೆ ಬಂದು ದೂರು ನೀಡಿದ್ದಾನೆ ಎಂದಿದ್ದಾರೆ.

ಸದ್ಯ ಬಾಲಕಿ ತಂದೆಯ ದೂರಿನನ್ವಯ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮಗಳಿಗೆ ನ್ಯಾಯ ಕೊಡಿಸಲು ತಂದೆ ನಿರಂತರವಾಗಿ ಹೋರಾಡುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತರಿಗೂ ಆರೋಪಿಯ ಕೃತ್ಯದ ಬಗ್ಗೆ ದೂರು ನೀಡಿದ್ದಾರೆ. ಮೊದಮೊದಲು ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಇದೀಗ ಕೊನೆಗೂ ಆರೋಪಿಯ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.

ಡ್ರ್ಯಾಗರ್‌ ಹಿಡಿದು ಪೋಸ್‌

ಇನ್ನೊಂದೆಡೆ ಆರೋಪಿ ತಾಯಿ ನನ್ನ ಮಗ ಹೀರೋ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ. ಬರ್ತ್‌ಡೇ ಪಾರ್ಟಿಯೊಂದರಲ್ಲಿ ಡ್ರ್ಯಾಗರ್ ಹಿಡಿದು ಆರೋಪಿ ಪೋಸ್‌ ಕೊಟ್ಟಿದ್ದಾನೆ. ಆತನ ಕುಟುಂಬದಿಂದ ನಮಗೆ ಜೀವ ಬೆದರಿಕೆ ಇದೆ ಅಂತಲೂ ಬಾಲಕಿ ಪೋಷಕರು ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Vinesh Phogat
ಪ್ರಮುಖ ಸುದ್ದಿ27 mins ago

Vinesh Phogat: ಒಲಿಂಪಿಕ್ಸ್​ ಫೈನಲ್​ನಿಂದ ವಿನೇಶ್​ ಫೋಗಟ್​ ಅನರ್ಹ; ಚಿನ್ನದ ಆಸೆ ನುಚ್ಚುನೂರು!

Niharika Konidela Nagendra Babu says Industry Is Not Our Father's Property
ಟಾಲಿವುಡ್36 mins ago

Niharika Konidela: ತೆಲುಗು ಚಿತ್ರರಂಗ ನನ್ನ ಅಪ್ಪನ ಆಸ್ತಿ ಅಲ್ಲ ಎಂದ ನಟ ಚಿರಂಜೀವಿ ಸಹೋದರ ನಾಗಬಾಬು!

Bangladesh Unrest
ದೇಶ52 mins ago

Bangladesh Unrest: ಬಾಂಗ್ಲಾದೇಶಕ್ಕೆ ಎಂದಿನಂತೆ ವಿಮಾನ ಹಾರಾಟ; ಢಾಕಾದಿಂದ ದಿಲ್ಲಿಗೆ ಬಂದಿಳಿದ 205 ಭಾರತೀಯರು

Israel Palestine war
ವಿದೇಶ56 mins ago

Israel Palestine War: ಜೈಲಿನೊಳಗೇ ಪ್ಯಾಲೆಸ್ತೀನ್‌ ಕೈದಿಗಳ ಮೇಲೆ ಇಸ್ರೇಲಿ ಯೋಧರಿಂದ ಅತ್ಯಾಚಾರ; ಶಾಕಿಂಗ್‌ ವಿಡಿಯೋ ಎಲ್ಲೆಡೆ ವೈರಲ್‌

nelamangala road accident
ಬೆಂಗಳೂರು57 mins ago

Road Accident: ಗರ್ಭಿಣಿಯ ಮೇಲೆ ಹರಿದ ಲಾರಿ, ಹೊಟ್ಟೆಯಿಂದ ಹೊರಬಂದ ಮಗು ಸಹಿತ ಅಪ್ಪಚ್ಚಿ

Rishabh Pant
ಕ್ರೀಡೆ1 hour ago

Rishabh Pant: ನೀರಜ್​ ಬಂಗಾರ ಗೆದ್ದರೆ ಅದೃಷ್ಟಶಾಲಿಗೆ ಪಂತ್​ ಕಡೆಯಿಂದ ಸಿಗಲಿದೆ ನಗದು ಬಹುಮಾನ

Akshay Kumar Riteish Fardeen recreate Heyy Babyy
ಬಾಲಿವುಡ್1 hour ago

Akshay Kumar: ಅಕ್ಷಯ್ ಕುಮಾರ್ ಸಿನಿಮಾ ಹಾಡಿಗೆ ಹೊಸ ಟಚ್‌ ಕೊಟ್ಟ ʻಹೇ ಬೇಬಿʼ ಖ್ಯಾತಿಯ ರಿತೇಶ್, ಫರ್ದೀನ್ ಖಾನ್; ವಿಡಿಯೊ ವೈರಲ್‌!

Viral Video
Latest1 hour ago

Viral Video: ಮೃಗಾಲಯದಲ್ಲಿ ಮಂಗನ ಎದುರು ಯುವತಿಯ ‘ಕಪಿ ಚೇಷ್ಟೆ’! ಪರಿಣಾಮ ಏನಾಯ್ತು ನೋಡಿ!

chemicals in food
ಬೆಂಗಳೂರು2 hours ago

Chemicals in Food: ಹೋಟೆಲ್‌, ಮಾಲ್‌ಗಳಲ್ಲಿ ಆಹಾರದಲ್ಲಿ ಕೆಮಿಕಲ್‌, ಕಲರ್‌ ಬಳಸಿದರೆ ಕ್ರಮ; ತರಕಾರಿ ಮಾರಾಟಗಾರರಿಗೂ ಲೈಸೆನ್ಸ್‌ ಕಡ್ಡಾಯ

Gold Rate Today
ಚಿನ್ನದ ದರ2 hours ago

Gold Rate Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಇಂದೂ ಇಳಿಕೆಯಾದ ಚಿನ್ನದ ಬೆಲೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು19 hours ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ20 hours ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ6 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ6 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ6 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌