PMAY: ನಗರ ಪ್ರದೇಶಗಳ ಬಡವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್;‌ 1 ಕೋಟಿ ಮನೆ ನಿರ್ಮಾಣಕ್ಕೆ ಕೇಂದ್ರ ಅಸ್ತು - Vistara News

ದೇಶ

PMAY: ನಗರ ಪ್ರದೇಶಗಳ ಬಡವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್;‌ 1 ಕೋಟಿ ಮನೆ ನಿರ್ಮಾಣಕ್ಕೆ ಕೇಂದ್ರ ಅಸ್ತು

PMAY: ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, 1 ಕೋಟಿ ಕುಟುಂಬಗಳಿಗೆ ಹಣಕಾಸು ನೆರವು ನೀಡಲಿದೆ. ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾದ ಮೊದಲ ಸಂಪುಟ ಸಭೆಯಲ್ಲೇ ಪಿಎಂಎವೈ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು.

VISTARANEWS.COM


on

PMAY
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದೆ. ಪ್ರಧಾನಮಂತ್ರಿ ಆವಾಸ್‌ ಯೋಜನೆ- ನಗರ 2.0 ಜಾರಿಗೆ (PMAY 2.0) ಕೇಂದ್ರ ಸಚಿವ ಸಂಪುಟ ಸಭೆಯು ಸಮ್ಮತಿ ಸೂಚಿಸಿದ್ದು, ನಗರ ಪ್ರದೇಶಗಳ 1 ಕೋಟಿ ಬಡವರು ಹಾಗೂ ಮಧ್ಯಮವರ್ಗದವರು ಇದರ ಪ್ರಯೋಜನ ಪಡೆಯಲಿದ್ದಾರೆ. ಅಂದರೆ ಪಿಎಂಎವೈ ಯೋಜನೆ ಅಡಿಯಲ್ಲಿ ನಗರ ಪ್ರದೇಶಗಳಲ್ಲಿ 1 ಕೋಟಿ ಮನೆಗಳನ್ನು ನಿರ್ಮಿಸಲಾಗುತ್ತದೆ.

ಮುಂದಿನ 5 ವರ್ಷಗಳಲ್ಲಿ ಒಂದು ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, 1 ಕೋಟಿ ಕುಟುಂಬಗಳಿಗೆ ಹಣಕಾಸು ನೆರವು ನೀಡಲಿದೆ. ನಗರ ಪ್ರದೇಶಗಳಲ್ಲಿ ಸುಸಜ್ಜಿತ ಮನೆ ನಿರ್ಮಿಸುವವರಿಗೆ ಕೇಂದ್ರ ಸರ್ಕಾರವು 1 ಚದರ ಅಡಿಗೆ 3 ಸಾವಿರ ರೂ. ನೆರವು ನೀಡಲಿದೆ. ಇನ್ನು ಇಂಟರೆಸ್ಟ್‌ ಸಬ್ಸಿಡಿ ಯೋಜನೆ ಅಡಿಯಲ್ಲಿ ಬಡ ಕುಟುಂಬಗಳಿಗೆ 25-35 ಲಕ್ಷ ರೂ.ವರೆಗೆ ಶೇ.4ರ ಬಡ್ಡಿದರದೊಂದಿಗೆ ಸಾಲ ನೀಡುತ್ತದೆ. 1.8 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು 2.3 ಲಕ್ಷ ಕೋಟಿ ರೂ. ವ್ಯಯಿಸಲಾಗಿದೆ. ಹಾಗೆಯೇ, ಪಿಎಂಎವೈ 2.0 ಯೋಜನೆಗೆ 10 ಲಕ್ಷ ಕೋಟಿ ರೂ. ಹೂಡಿಕೆ ಮಾಡಲು ತೀರ್ಮಾನಿಸಿದೆ.

8 ರೈಲ್ವೆ ಲೈನ್‌ ಯೋಜನೆಗಳಿಗೆ ಅನುಮೋದನೆ

ದೇಶದ 7 ರಾಜ್ಯಗಳ 14 ಜಿಲ್ಲೆಗಳ ಮೂಲಕ ಹಾದು ಹೋಗುವ 8 ಹೊಸ ರೈಲ್ವೆ ಲೈನ್‌ ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ವ್ಯಾಪಾರ, ಸಂಪರ್ಕ ಹಾಗೂ ಉದ್ಯೋಗ ಸೃಷ್ಟಿಗೆ ಈ ಯೋಜನೆಗಳು ಸಹಕಾರಿಯಾಗಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್‌, ಬಿಹಾರ, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ 8 ಹೊಸ ರೈಲ್ವೆ ಲೈನ್‌ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಡವರು ಸ್ವಂತ ಮನೆ ಕನಸನ್ನು ನನಸು ಮಾಡುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್‌ ಯೋಜನೆ ಜಾರಿಗೆ ತಂದಿದೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರವು ಸುಮಾರು 4.21 ಕೋಟಿ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಪಿಎಂಎವೈ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರು.

ಇದನ್ನೂ ಓದಿ: CM Siddaramaiah: ಬಜೆಟ್ ಮೂಲಪಾಠವೇ ಗೊತ್ತಿಲ್ಲದ ನಿರ್ಮಲಾ ಸೀತಾರಾಮನ್; ಸಂಪುಟದಿಂದ ಕೈಬಿಡಲು ಸಿಎಂ ಒತ್ತಾಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Creamy Layer: ಎಸ್‌ಸಿ, ಎಸ್‌ಟಿಗೆ ಕೆನೆಪದರ ಮೀಸಲಾತಿ ಇಲ್ಲ; ಸುಪ್ರೀಂ ಆದೇಶದ ಬೆನ್ನಲ್ಲೇ ಕೇಂದ್ರ ಸ್ಪಷ್ಟನೆ

Creamy Layer: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡುವ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಕೆನೆಪದರ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿವಿಧ ಸೂಚನೆ ನೀಡಿದೆ. ಸಂವಿಧಾನದ ನಿಬಂಧನೆಗಳ ಅನ್ವಯ ಮೀಸಲಾತಿ ನೀಡಲು ಎನ್‌ಡಿಎ ಸರ್ಕಾರವು ಬದ್ಧವಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದರು.

VISTARANEWS.COM


on

Creamy Layer
Koo

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಅತೀ ಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದ್ದು, ಇದೊಂದು ಐತಿಹಾಸಿಕ ತೀರ್ಪು ಎಂದೇ ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಮಹತ್ವದ ಹೇಳಿಕೆ ನೀಡಿದೆ. “ಅಂಬೇಡ್ಕರ್‌ ಅವರು ರಚಿಸಿದ ಮೂಲ ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಕೆನೆ ಪದರ (Creamy Layer) ಮೀಸಲಾತಿ ಇಲ್ಲ” ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnaw) ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಅವರು, “ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡುವ ಕುರಿತು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ಕೆನೆಪದರ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವಿವಿಧ ಸೂಚನೆ ನೀಡಿದೆ. ಸಂವಿಧಾನದ ನಿಬಂಧನೆಗಳ ಅನ್ವಯ ಮೀಸಲಾತಿ ನೀಡಲು ಎನ್‌ಡಿಎ ಸರ್ಕಾರವು ಬದ್ಧವಾಗಿದೆ. ಆದರೆ, ಅಂಬೇಡ್ಕರ್‌ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದಲ್ಲಿ ಎಸ್‌ಸಿ ಹಾಗೂ ಎಸ್‌ಟಿಗಳಿಗೆ ಕೆನೆಪದರ ಮೀಸಲಾತಿ ಇಲ್ಲ” ಎಂದು ಹೇಳಿದ್ದಾರೆ.

“ಸಂವಿಧಾನದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಕ್ರೀಮಿ ಲೇಯರ್‌ ನಿಬಂಧನೆ ಇಲ್ಲ. ಸಂವಿಧಾನದ ಅನುಗುಣವಾಗಿಯೇ ಎಸ್‌ಸಿ, ಎಸ್‌ಟಿಯವರಿಗೆ ಮೀಸಲಾತಿ ನೀಡಬೇಕಾಗುತ್ತದೆ” ಎಂದು ತಿಳಿಸಿದರು. ಮತ್ತೊಂದೆಡೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಲ್ಲೇ ಅತಿ ಹಿಂದುಳಿದ ಸಮುದಾಯದವರನ್ನು ಗುರುತಿಸುವಾಗ ಹಲವು ಮಾನದಂಡ, ಪರಿಶೀಲನೆ ಮಾಡಬೇಕು. ನಂತರವೇ ಅವರಿಗೆ ಒಳ ಮೀಸಲಾತಿ ನೀಡಬೇಕು ಎಂದು ಕೋರ್ಟ್‌ ತಿಳಿಸಿದೆ.

ಒಳಮೀಸಲಾತಿಯ ಲಾಭವೇನು?

ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಇದೆ ಎಂದು ಹೇಳಿದೆ. ಆದರೆ ಉಪ-ವರ್ಗೀಕರಣವನ್ನು ನೀಡುವಾಗ, ರಾಜ್ಯವು ಉಪ-ವರ್ಗಕ್ಕೆ 100% ಮೀಸಲಾತಿಯನ್ನು ಮೀಸಲಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜ್ಯವು ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಉಪ-ವರ್ಗೀಕರಣದ ಪ್ರಾತಿನಿದ್ಯ ನೀಡಬಹುದಾಗಿದೆ. ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂದಿದೆ. SC/ST ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಈ ವಿಚಾರವನ್ನು ಅಲ್ಲಗಳೆಯುವಂತಿಲ್ಲ. SC/ST ಗಳಲ್ಲಿ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ಇನ್ನೂ ಹಿಂದುಳಿದ ವರ್ಗಗಳಿವೆ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: Urban local bodies: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟಿಸಿದ ಸರ್ಕಾರ; ಇಲ್ಲಿದೆ ಪಟ್ಟಿ

Continue Reading

ದೇಶ

Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Tarsem Singh: ಪಂಜಾಬ್‌ನವನಾದ ತರ್ಸೇಮ್‌ ಸಿಂಗ್‌, ಉಗ್ರ ಲಖಬೀರ್‌ ಲಾಂಡಾನ ಸಹೋದರನಾಗಿದ್ದಾನೆ. ಈತನು ಮತ್ತೊಬ್ಬ ಉಗ್ರ ಹರ್ವಿಂದರ್‌ ಸಿಂಗ್‌ ರಿಂಡಾನ ಆಪ್ತನೂ ಆಗಿದ್ದಾನೆ. ಈತನು ಬಬ್ಬರ್‌ ಖಲಿಸ್ತಾನ ಇಂಟರ್‌ನ್ಯಾಷನಲ್‌ (BKI) ಉಗ್ರ ಸಂಘಟನೆಯ ಸದಸ್ಯನೂ ಆಗಿದ್ದಾನೆ. ಈತನನ್ನು ಎನ್‌ಐಎ ಅಧಿಕಾರಿಗಳು ಯುಎಇಯಲ್ಲಿ ಬಂಧಿಸಿದ್ದಾರೆ.

VISTARANEWS.COM


on

Tarsem Singh
Koo

ನವದೆಹಲಿ: ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ವಿದೇಶದಲ್ಲೂ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಯಶಸ್ವಿಯಾಗಿದೆ. ಖಲಿಸ್ತಾನಿ ಉಗ್ರ (Khalistan Terrorist) ತರ್ಸೇಮ್‌ ಸಿಂಗ್‌ನನ್ನು (Tarsem Singh) ಎನ್‌ಐಎ ಅಧಿಕಾರಿಗಳು ಯುಎಇಯ ಅಬುಧಾಬಿಯಲ್ಲಿ ಬಂಧಿಸಿದ್ದು, ಭಾರತಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ತರ್ಸೇಮ್‌ ಸಿಂಗ್‌ ವಿರುದ್ಧ ಎನ್‌ಐಎ ಅಧಿಕಾರಿಗಳು ಇದಕ್ಕೂ ಮೊದಲೇ ಜಾಮೀನು ರಹಿತ ವಾರಂಟ್‌ ಹೊರಡಿಸಿದ್ದರು. ಅದರಂತೆ, ಯುಎಇ ಅಧಿಕಾರಿಗಳು, ಇಂಟರ್‌ಪೋಲ್‌ ಜತೆ ಸಂಪರ್ಕ ಸಾಧಿಸಿ, ಹಸ್ತಾಂತರ ಪ್ರಕ್ರಿಯೆ ಮುಗಿಸಿ, ತರ್ಸೇಮ್‌ ಸಿಂಗ್‌ನನ್ನು ಅಬುಧಾಬಿಯಲ್ಲಿ ಬಂಧಿಸಿದ್ದಾರೆ.

ಪಂಜಾಬ್‌ನವನಾದ ತರ್ಸೇಮ್‌ ಸಿಂಗ್‌, ಉಗ್ರ ಲಖಬೀರ್‌ ಲಾಂಡಾನ ಸಹೋದರನಾಗಿದ್ದಾನೆ. ಈತನು ಮತ್ತೊಬ್ಬ ಉಗ್ರ ಹರ್ವಿಂದರ್‌ ಸಿಂಗ್‌ ರಿಂಡಾನ ಆಪ್ತನೂ ಆಗಿದ್ದಾನೆ. ಈತನು ಬಬ್ಬರ್‌ ಖಲಿಸ್ತಾನ ಇಂಟರ್‌ನ್ಯಾಷನಲ್‌ (BKI) ಉಗ್ರ ಸಂಘಟನೆಯ ಸದಸ್ಯನೂ ಆಗಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ. 2023ರ ನವೆಂಬರ್‌ನಲ್ಲಿ ಅಬುಧಾಬಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಎನ್‌ಐಎ ವಿಶೇಷ ನ್ಯಾಯಾಲಯವು ವಾರಂಟ್‌ ಹೊರಡಿಸಿದ ಬಳಿಕ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿತ್ತು.

ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಿದ ಬಳಿಕ 2023ರಲ್ಲಿ ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರನನ್ನು ವಶಪಡಿಸಿಕೊಳ್ಳಲಾಗಿತ್ತು ಇದಾದ ಬಳಿಕ ಎನ್‌ಐಎ ಅಧಿಕಾರಿಗಳು ಯುಎಇ, ಇಂಟರ್‌ಪೋಲ್‌ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ಸಮರ್ಪಕ ದಾಖಲೆಗಳನ್ನು ಒದಗಿಸಿ, ಯುಎಇಗೆ ತೆರಳಿ, ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ತರ್ಸೇಮ್‌ ಸಿಂಗ್‌ನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಎನ್‌ಐಎ ಅಧಿಕಾರಿಗಳು ಆತನನ್ನು ಕರೆತರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಉಗ್ರ ಚಟುವಟಿಕೆಗಳ ಹಿನ್ನೆಲೆಯಲ್ಲಿ ತರ್ಸೇಮ್‌ ಸಿಂಗ್‌ ವಿರುದ್ಧ ಎನ್‌ಐಎ 2022ರ ಆಗಸ್ಟ್‌ನಲ್ಲಿ ಸುಮೋಟೊ (ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವುದು) ಕೇಸ್‌ ದಾಖಲಿಸಿಕೊಂಡಿತ್ತು. ಖಲಿಸ್ತಾನ ಲಿಬರೇಷನ್‌ ಫೊರ್ಸ್‌, ಬಿಕೆಐ, ಇಂಟರ್‌ನ್ಯಾಷನಲ್‌ ಸಿಖ್‌ ಯೂತ್‌ ಫೆಡರೇಷನ್‌ ಸೇರಿ ಹಲವು ಉಗ್ರ ಸಂಘಟನೆಗಳು ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುಮೋಟೊ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ತರ್ಸೇಮ್‌ ಸಿಂಗ್‌ ಕೃತ್ಯಗಳು ಬಯಲಾಗಿವೆ. ಇದಾದ ಬಳಿಕ ಎನ್‌ಐಎ ತನಿಖೆ ಚುರುಕುಗೊಳಿಸಿದೆ.

ಇದನ್ನೂ ಓದಿ: Khalistani Terrorist: ಖಲಿಸ್ತಾನಿ ಭಯೋತ್ಪಾದಕ ಲಾಂಡಾನ ಪ್ರಮುಖ ಸಹಾಯಕ ಬಲ್ಜೀತ್ ಸಿಂಗ್ ಬಂಧನ

Continue Reading

ತಂತ್ರಜ್ಞಾನ

Independence Day 2024: ಹೊಗೆ ಬಂಡಿಯಿಂದ ವಂದೇ ಭಾರತ್‌‌ವರೆಗೆ; ಭಾರತೀಯ ರೈಲ್ವೆಯ ಅದ್ಭುತ ಪಯಣ!

ಬ್ರಿಟಿಷ್ ಆಳ್ವಿಕೆಯಲ್ಲಿ ತಮ್ಮ ಅಗತ್ಯಕ್ಕೆ ಭಾರತೀಯ ಸಾರಿಗೆಗೆ ರೈಲ್ವೆಯನ್ನು ಸೇರ್ಪಡೆ ಮಾಡಿದ್ದರೂ ಭಾರತ ಸ್ವಾತಂತ್ರ್ಯಗೊಂಡ ಬಳಿಕ ಭಾರತೀಯ ರೈಲ್ವೆಯು (Indian Railways) ವೇಗವಾಗಿ ಅಭಿವೃದ್ಧಿಯನ್ನು ಹೊಂದಿತ್ತು. ದೇಶ ವಿಭಜನೆಯಾದಾಗ ಶೇ. ೪೦ರಷ್ಟು ರೈಲು ಸಂಪರ್ಕ ಕಳೆದುಕೊಂಡರೂ ತನ್ನ ಪ್ರಯಾಣದಲ್ಲಿ ಮತ್ತಷ್ಟು ವೇಗ ತುಂಬುವಲ್ಲಿ ಹಿಂದೇಟು ಹಾಕಲಿಲ್ಲ. ಪ್ರಸ್ತುತ ಭಾರತದ ಬಹುತೇಕ ನಗರಗಳನ್ನು ಸಂಪರ್ಕಿಸುತ್ತಿರುವ ರೈಲ್ವೆಯು ಸಾಕಷ್ಟು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದ ಈವರೆಗೆ ಇದರ ಪ್ರಯಾಣ ಹೇಗಿತ್ತು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

VISTARANEWS.COM


on

By

Independence day 2024
Koo

ಭಾರತ ಈಗ 78ನೇ ಸ್ವಾತಂತ್ರ್ಯ ದಿನಾಚರಣೆಯ (Independence day 2024) ಸಂಭ್ರಮದಲ್ಲಿದೆ. ನಾವೆಲ್ಲರೂ ಅಭೂತಪೂರ್ವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದೇವೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ ದ (Azadi Ka Amrit Mahotsava) ವೇಳೆ ವಿವಿಧ ಕಾರ್ಯಕ್ರಮಗಳನ್ನು ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ (PM narendra Modi) ಅವರು ದೇಶಾದ್ಯಂತ 75 ‘ವಂದೇ ಭಾರತ್’ (Vande Bharat) ರೈಲುಗಳ ಸಂಚಾರದ ಘೋಷಣೆಯನ್ನು ಮಾಡಿದ್ದರು. ಇದು ಭಾರತೀಯ ರೈಲ್ವೇಯ ಅಭಿವೃದ್ಧಿಯಲ್ಲಿ (Indian Railways) ಇದೊಂದು ಮೈಲುಗಲ್ಲಾಯಿತು. ಬಳಿಕ ವಂದೇ ಭಾರತ್, ಸ್ಥಳೀಯ ಸೆಮಿ-ಹೈ ಸ್ಪೀಡ್ ರೈಲು ಸೆಟ್‌ಗೆ ಉತ್ತೇಜನ ನೀಡಲಾಯಿತು.

1832ರಲ್ಲಿ ಮದ್ರಾಸ್‌ನಲ್ಲಿ ಭಾರತಕ್ಕೆ ಮೊದಲ ರೈಲಿನ ಪ್ರಸ್ತಾಪವನ್ನು ಮಾಡಲಾಯಿತಾದರೂ ಭಾರತವು 1853ರಲ್ಲಿ ಮೊದಲ ಪ್ರಯಾಣಿಕ ರೈಲನ್ನು ಪಡೆದುಕೊಂಡಿತು. ಬಾಂಬೆಯಿಂದ ಥಾಣೆ, ಕಲ್ಯಾಣ್, ಥಾಲ್ ಮತ್ತು ಭೋರ್ ಘಾಟ್‌ಗಳನ್ನು ಸಂಪರ್ಕಿಸಲು ಮೊದಲ ರೈಲು ಯೋಜನೆ ಪ್ರಾರಂಭವಾಯಿತು.

ಬಾಂಬೆ ಸರ್ಕಾರದ ಮುಖ್ಯ ಎಂಜಿನಿಯರ್ ಜಾರ್ಜ್ ಕ್ಲಾರ್ಕ್ ಅವರು 1843ರಲ್ಲಿ ಭಾಂಡೂಪ್‌ಗೆ ಭೇಟಿ ನೀಡಿದರು. ಸ್ಟೀಮ್ ಎಂಜಿನ್ 1853 ರಲ್ಲಿ ಭಾರತಕ್ಕೆ ಬಂದ 20 ವರ್ಷಗಳ ಅನಂತರ ದೆಹಲಿ, ಬಾಂಬೆ, ಕಲ್ಕತ್ತಾ ಮತ್ತು ಮದ್ರಾಸ್ ಸೇರಿದಂತೆ ಅದರ ಎಲ್ಲಾ ಪ್ರಮುಖ ಮಹಾನಗರ ಕೇಂದ್ರಗಳನ್ನು ರೈಲ್ವೇ ಜಾಲದೊಂದಿಗೆ ಲಿಂಕ್ ಮಾಡಲಾಯಿತು.

ಬಳಿಕ 50 ವರ್ಷಗಳಲ್ಲಿ ದೇಶದ ಬೆಟ್ಟ ಪ್ರದೇಶಗಳಲ್ಲೂ ರೈಲು ಮಾರ್ಗಗಳನ್ನು ಹಾಕಲಾಯಿತು. ರೈಲು ಸೌಲಭ್ಯ ಭಾರತಕ್ಕೆ ಪ್ರವೇಶಿಸಿದ ಒಂದು ಶತಮಾನಕ್ಕಿಂತ ಕಡಿಮೆ ಸಮಯದಲ್ಲಿ ವಾರ್ಷಿಕ 600 ಕಿ.ಮೀ ಪ್ರಮಾಣದಲ್ಲಿ 54,000 ಕಿಲೋಮೀಟರ್‌ಗಳಷ್ಟು ಟ್ರ್ಯಾಕ್‌ಗಳನ್ನು ದೇಶದ ಜಾಲಕ್ಕೆ ಸೇರಿಸಲಾಯಿತು. ಹೆಚ್ಚುತ್ತಿರುವ ಅಗತ್ಯವನ್ನು ಗಮನಿಸಿ 1901 ರಲ್ಲಿ ರೈಲ್ವೆ ಮಂಡಳಿಯನ್ನು ರಚಿಸಲಾಯಿತು.

ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ರೈಲು ಪ್ರಯಾಣ ಅರಂಭಿಸಿದ್ದರೂ ಸ್ವಾತಂತ್ರ್ಯದ ಬಳಿಕ ಭಾರತೀಯ ರೈಲ್ವೇ ವೇಗವಾಗಿ ಅಭಿವೃದ್ಧಿ ಹೊಂದಿತು. 1947ರಲ್ಲಿ ಬ್ರಿಟಿಷರ ನಿರ್ಗಮನ ಮತ್ತು ದೇಶ ಎರಡು ವಿಭಜನೆಯಾದುದರಿಂದ ಹೊಸದಾಗಿ ರಚಿಸಲಾದ ಪಾಕಿಸ್ತಾನಕ್ಕೆ ಶೇ. 40ಕ್ಕಿಂತ ಹೆಚ್ಚು ರೈಲು ಸಂಪರ್ಕ ಕಡಿದುಕೊಂಡಿತ್ತು. ಪರಿಣಾಮ ದೇಶಾದ್ಯಂತ ಪರಿಣಾಮ ಬೀರಿತ್ತು.

ಭಾರತೀಯ ರೈಲ್ವೆಯ ಪ್ರಯಾಣ ಹೇಗಿತ್ತು?


1853-1869

ಭಾರತದಲ್ಲಿ ರೈಲು ಸೇವೆಯನ್ನು 1830ರ ದಶಕದಲ್ಲಿ ಪ್ರಸ್ತಾಪಿಸಲಾಗಿದ್ದರೂ ಇತಿಹಾಸಕಾರರು 1853ರ ಏಪ್ರಿಲ್ 16ರಂದು ಭಾರತದ ಪ್ರಯಾಣಿಕ ರೈಲು ಕ್ರಾಂತಿಯನ್ನು ಉಂಟು ಮಾಡಿದ್ದು ಕಿಕ್ ಸ್ಟಾರ್ಟರ್ ಎಂದು ಉಲ್ಲೇಖಿಸಿದ್ದಾರೆ. ಈ ದಿನ ದೇಶದ ಮೊದಲ ಪ್ಯಾಸೆಂಜರ್ ರೈಲು ಬಾಂಬೆಯ ಬೋರಿ ಬಂದರ್ ನಿಲ್ದಾಣ ಮತ್ತು ಥಾಣೆ ನಡುವೆ 34 ಕಿ.ಮೀ. ಪ್ರಯಾಣವನ್ನು ಪ್ರಾರಂಭಿಸಿತು. ಇದು ಮೂರು ಉಗಿ ಲೋಕೋಮೋಟಿವ್‌ಗಳಿಂದ 14 ಕಾರುಗಳನ್ನು ಮತ್ತು 400 ಪ್ರಯಾಣಿಕರನ್ನು ಸಾಗಿಸಿತು.

ಬಳಿಕ ಈಸ್ಟರ್ನ್ ಇಂಡಿಯಾ ರೈಲ್ವೇ, ಗ್ರೇಟ್ ಇಂಡಿಯಾ ಪೆನಿನ್ಸುಲಾ ಕಂಪೆನಿ, ಮದ್ರಾಸ್ ರೈಲ್ವೇ, ಬಾಂಬೆ ಬರೋಡಾ ಮತ್ತು ಸೆಂಟ್ರಲ್ ಇಂಡಿಯಾ ರೈಲ್ವೇ ಸೇರಿದಂತೆ ಎಂಟು ರೈಲ್ವೇ ಕಂಪೆನಿಗಳನ್ನು 1855 ಮತ್ತು 1860ರ ನಡುವೆ ಸ್ಥಾಪಿಸಲಾಯಿತು.

Independence day 2024
Independence day 2024


1901-1925

ವರ್ಷಗಳ ನಿರ್ಮಾಣ ಮತ್ತು ಹಣಕಾಸಿನ ಹೂಡಿಕೆಯ ಅನಂತರ ರೈಲ್ವೇಯು ಅಂತಿಮವಾಗಿ 1901ರಲ್ಲಿ ಲಾಭವನ್ನು ಗಳಿಸಲು ಪ್ರಾರಂಭಿಸಿತ್ತು. ಈ ಶತಮಾನದ ಆರಂಭಿಕ ವರ್ಷಗಳಲ್ಲಿ ಸರ್ಕಾರದ ಹಸ್ತಕ್ಷೇಪದ ಪ್ರಮಾಣವು ಹೆಚ್ಚಾಯಿತು. ಜಿಐಪಿಆರ್ 1900ರಲ್ಲಿ ಸರ್ಕಾರಿ ಸ್ವಾಮ್ಯದ ಮೊದಲ ಕಂಪನಿಯಾಗಿದೆ. 1907ರ ಹೊತ್ತಿಗೆ ಸರ್ಕಾರವು ಎಲ್ಲಾ ಪ್ರಮುಖ ಮಾರ್ಗಗಳನ್ನು ಖರೀದಿಸಿತು ಮತ್ತು ಅವುಗಳನ್ನು ಖಾಸಗಿ ನಿರ್ವಾಹಕರಿಗೆ ಮರಳಿ ಗುತ್ತಿಗೆ ನೀಡಲು ಪ್ರಾರಂಭಿಸಿತು.

Independence day 2024
Independence day 2024


1925-1946

ಮೊದಲ ಎಲೆಕ್ಟ್ರಿಕ್ ರೈಲು 1925ರ ಫೆಬ್ರವರಿ 3ರಂದು ಬಾಂಬೆ ಮತ್ತು ಕುರ್ಲಾ ನಡುವೆ ಓಡಿತು. ಮುಂಬರುವ ವರ್ಷಗಳಲ್ಲಿ ಮತ್ತಷ್ಟು ವಿದ್ಯುದ್ದೀಕರಣಕ್ಕೆ ಪೂರ್ವನಿದರ್ಶನವನ್ನು ಸ್ಥಾಪಿಸಿತು. 1929ರ ಹೊತ್ತಿಗೆ, ರೈಲ್ವೇ ಜಾಲವು 66,000 ಕಿ.ಮೀ. ಉದ್ದಕ್ಕೆ ಬೆಳೆದಿತ್ತು ಮತ್ತು ವಾರ್ಷಿಕವಾಗಿ ಸುಮಾರು 620 ಮಿಲಿಯನ್ ಪ್ರಯಾಣಿಕರು ಮತ್ತು 90 ಮಿಲಿಯನ್ ಟನ್ ಗಳಷ್ಟು ಸರಕುಗಳನ್ನು ಸಾಗಿಸಿತು.


1951-1952

1951-1952ರಲ್ಲಿ ಅಸ್ತಿತ್ವದಲ್ಲಿರುವ ರೈಲು ಜಾಲಗಳನ್ನು ವಲಯಗಳೊಂದಿಗೆ ಬದಲಾಯಿಸಲು ನಿರ್ಧರಿಸಲಾಯಿತು. 1952ರಲ್ಲಿ ಒಟ್ಟು ಆರು ವಲಯಗಳು ಅಸ್ತಿತ್ವಕ್ಕೆ ಬಂದವು. 2003ರಲ್ಲಿ ಆಡಳಿತದ ಉದ್ದೇಶಗಳಿಗಾಗಿ ಅಸ್ತಿತ್ವದಲ್ಲಿರುವ ವಲಯಗಳಿಂದ 6 ಮತ್ತಷ್ಟು ವಲಯಗಳನ್ನು ಮಾಡಲಾಯಿತು ಮತ್ತು 2006ರಲ್ಲಿ ಮತ್ತೊಂದು ವಲಯವನ್ನು ಸೇರಿಸಲಾಯಿತು. ಭಾರತೀಯ ರೈಲ್ವೆ ಈಗ 18 ವಲಯ ರೈಲ್ವೇಗಳನ್ನು ಹೊಂದಿದೆ. 1985 ರಿಂದ ಸ್ಟೀಮ್ ಎಂಜಿನ್‌ಗಳನ್ನು ಹಂತಹಂತವಾಗಿ ತೆಗೆದುಹಾಕಲಾಯಿತು ಮತ್ತು ವಿದ್ಯುತ್ ಮತ್ತು ಡೀಸೆಲ್ ಎಂಜಿನ್‌ಗಳು ಅವುಗಳ ಸ್ಥಾನವನ್ನು ಪಡೆದುಕೊಂಡವು.


1980- 2000

1980ರ ದಶಕದಲ್ಲಿ ಉಗಿ ಲೋಕೋಮೋಟಿವ್‌ಗಳ ಹಂತಹಂತವಾಗಿ ಬೆಳವಣಿಗೆ ಹೊಂದಿತ್ತು. ಯಾಕೆಂದರೆ 1970 ರ ದಶಕದಲ್ಲಿ ವಿದ್ಯುದ್ದೀಕರಣವನ್ನು ಉತ್ತೇಜಿಸಲಾಯಿತು. 1980 ಮತ್ತು 1990ರ ನಡುವೆ ಸುಮಾರು 4,500 ಕಿ.ಮೀ. ಟ್ರ್ಯಾಕ್ ಅನ್ನು ವಿದ್ಯುದ್ದೀಕರಿಸಲಾಯಿತು.

ಏತನ್ಮಧ್ಯೆ, ಭಾರತದ ಮೊದಲ ಮೆಟ್ರೋ ವ್ಯವಸ್ಥೆಯು 1984ರಲ್ಲಿ ಕಲ್ಕತ್ತಾದಲ್ಲಿ ಪ್ರಾರಂಭವಾಯಿತು. ಆರ್ಥಿಕ ನಿಶ್ಚಲತೆ ಮತ್ತು ರಾಜಕೀಯ ಕ್ರಾಂತಿಯು 80ರ ದಶಕದಲ್ಲಿ ನೆಟ್ವರ್ಕ್ ನ ಬೆಳವಣಿಗೆಯನ್ನು ನಿರ್ಬಂಧಿಸಿದರೂ, 90ರ ದಶಕದಲ್ಲಿ ಭಾರತದ ಪಶ್ಚಿಮ ಕರಾವಳಿಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ 738 ಕಿ.ಮೀ. ಕೊಂಕಣ ರೈಲ್ವೇ ಪ್ರಾರಂಭವಾಯಿತು.


2000- 2021

2000ರಿಂದ ದೆಹಲಿ (2002), ಬೆಂಗಳೂರು (2011), ಗುರ್ಗಾಂವ್ (2013) ಮತ್ತು ಮುಂಬೈ (2014) ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಮೆಟ್ರೋ ನಿಲ್ದಾಣಗಳು ಹೆಚ್ಚು ಅಭಿವೃದ್ಧಿ ಆಗುತ್ತಿದೆ. ತೊಂಬತ್ತರ ದಶಕವು 2002ರಲ್ಲಿ ನೆಟ್‌ವರ್ಕ್‌ನ ಪೂರ್ವ ಕರಾವಳಿ, ನೈಋತ್ಯ, ಆಗ್ನೇಯ ಮಧ್ಯ, ಉತ್ತರ ಮಧ್ಯ ಮತ್ತು ಪಶ್ಚಿಮ ಮಧ್ಯ ರೈಲ್ವೇ ವಲಯಗಳ ರಚನೆಯನ್ನು ಕಂಡಿತು. ಆದರೂ ಐಆರ್‌ಗೆ ವಾದಯೋಗ್ಯವಾಗಿ ಉತ್ತಮ ಹೆಜ್ಜೆಯೆಂದರೆ ಆನ್‌ಲೈನ್ ರೈಲು ಕಾಯ್ದಿರಿಸುವಿಕೆ ಮತ್ತು ಅದರ ಮೂಲಕ ಟಿಕೆಟಿಂಗ್ ಅನ್ನು ಪ್ರಾರಂಭಿಸುವುದು.

2002ರಲ್ಲಿ ಐಆರ್‌‌ಸಿಟಿಸಿ ವ್ಯವಸ್ಥೆ. ಪ್ರಯಾಣಿಕರು ಈಗ ತಮ್ಮ ಪ್ರಯಾಣವನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು ಅಥವಾ ದೇಶಾದ್ಯಂತ ಸಾವಿರಾರು ಏಜೆಂಟ್‌ಗಳಿಂದ ಟಿಕೆಟ್‌ಗಳನ್ನು ಖರೀದಿಸಬಹುದು.

ಭಾರತೀಯ ರೈಲ್ವೆ ಮಂಡಳಿ

ಭಾರತೀಯ ರೈಲ್ವೇಯು ನಾಲ್ಕು ಸದಸ್ಯರ ರೈಲ್ವೆ ಮಂಡಳಿಯ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದರ ಅಧ್ಯಕ್ಷರು ರೈಲ್ವೇ ಸಚಿವಾಲಯಕ್ಕೆ ವರದಿ ಮಾಡುತ್ತಾರೆ. ರೈಲ್ವೆ ಮಂಡಳಿಯು ರೈಲ್ವೆ ಸಚಿವಾಲಯವಾಗಿಯೂ ಕಾರ್ಯನಿರ್ವಹಿಸುತ್ತದೆ. ರೈಲ್ವೇ ಮಂಡಳಿಯ ಕಚೇರಿಯನ್ನು ನಿರ್ವಹಿಸುವ ಅಧಿಕಾರಿಗಳು ಹೆಚ್ಚಾಗಿ ಸಂಘಟಿತ ಗ್ರೂಪ್ ಎ ರೈಲ್ವೇ ಸೇವೆಗಳು ಮತ್ತು ರೈಲ್ವೇ ಬೋರ್ಡ್ ಸೆಕ್ರೆಟರಿಯೇಟ್ ಸೇವೆಯಿಂದ ಬಂದವರು.

ಭಾರತೀಯ ರೈಲ್ವೇಯು ಭಾರತದ ಆರ್ಥಿಕತೆ ಮತ್ತು ಜನರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸರಕು ಸಾಗಣೆಯಲ್ಲಿ ರೈಲಿನ ಒಟ್ಟಾರೆ ಮಧ್ಯಂತರ ಪಾಲು ಶೇಕಡಾ 35ರಷ್ಟಿದ್ದರೆ, ಆರ್ಥಿಕತೆಯ ಬೆನ್ನೆಲುಬಾದ ಕಲ್ಲಿದ್ದಲು, ಕಬ್ಬಿಣದ ಅದಿರು, ಸಿಮೆಂಟ್ ಮತ್ತು ಆಹಾರ ಧಾನ್ಯಗಳಂತಹ ಬೃಹತ್ ಸರಕುಗಳ ಸಾಗಣೆಯಲ್ಲಿ ಇದು ಪ್ರಮುಖ ಪಾಲನ್ನು ಹೊಂದಿದೆ.

2020ರ ವರ್ಷವು ರೈಲುಗಳಿಲ್ಲದೆ ಜೀವನವು ಹೇಗೆ ಇರುತ್ತದೆ ಎಂಬುದರ ಒಂದು ನೋಟವನ್ನು ಭಾರತಕ್ಕೆ ತೋರಿಸಿತ್ತು. ಮಾರ್ಚ್ 24ರಂದು ಕೊರೋನಾ ವೈರಸ್ ಕಾರಣ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಿಸಿದ್ದರಿಂದ ರೈಲ್ವೆ ತನ್ನ 167 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ತನ್ನ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿತು.

ಮೇ 1ರಂದು ಮತ್ತೆ ರೈಲುಗಳು ಓಡಲಾರಂಭಿಸಿದವು. ಈ ಬಾರಿ, ವಲಸೆ ಕಾರ್ಮಿಕರನ್ನು ಮನೆಗೆ ಕರೆದೊಯ್ಯಲು ಮೇ 1 ಮತ್ತು ಆಗಸ್ಟ್ 30ರ ನಡುವೆ ರೈಲ್ವೇಯು 23 ರಾಜ್ಯಗಳಾದ್ಯಂತ 4,000ಕ್ಕೂ ಹೆಚ್ಚು ಶ್ರಮಿಕ್ ವಿಶೇಷ ರೈಲುಗಳಲ್ಲಿ ಕಾರ್ಮಿಕರನ್ನು ಮನೆಗೆ ಸಾಗಿಸಿ ಅದ್ವಿತೀಯ ಕಾರ್ಯ ಮಾಡಿತು.


ವಿಶೇಷ ರೈಲುಗಳು

ವಲಸಿಗರಿಗಾಗಿ ರೈಲ್ವೆಯು 1,089 ವಿಶೇಷ ರೈಲು ಸೇವೆಗಳನ್ನು ನಿರ್ವಹಿಸಿದರೆ ಕೋಲ್ಕತ್ತಾ ಮೆಟ್ರೋ ತನ್ನ ಶೇಕಡಾ 60ರಷ್ಟು ಸೇವೆಗಳನ್ನು ನಡೆಸುತ್ತಿದೆ. ಮುಂಬಯಿ ಉಪನಗರದಲ್ಲಿ ಶೇ. 88 ರಷ್ಟು ಚಾಲನೆಯಲ್ಲಿದೆ ಮತ್ತು ಚೆನ್ನೈ ಉಪನಗರದಲ್ಲಿ ಶೇ. 50ರಷ್ಟು ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ರೈತರು ತಮ್ಮ ಉತ್ಪನ್ನಗಳನ್ನು ಹೆಚ್ಚು ಶೀಘ್ರವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ರಾಷ್ಟ್ರದಾದ್ಯಂತ ಕಳುಹಿಸಲು ರೈಲ್ವೇ ಎಂಟು ಕಿಸಾನ್ ರೈಲು ಸೇವೆಗಳನ್ನು ಪ್ರಾರಂಭಿಸಿತು.


ಕೋವಿಡ್ ವಾರ್ಡ್‌

ಭಾರತೀಯ ರೈಲ್ವೇ ತನ್ನ ಕೋಚ್‌ಗಳನ್ನು ಕೋವಿಡ್-19 ಕೇರ್ ಕೋಚ್‌ಗಳಾಗಿ ಪರಿವರ್ತಿಸಿತ್ತು. ಹೆಚ್ಚುತ್ತಿರುವ ಕೋವಿಡ್- 19 ಪ್ರಕರಣಗಳ ಮಧ್ಯೆ ಆಸ್ಪತ್ರೆಗಳಲ್ಲಿ ಬೆಡ್ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನದಲ್ಲಿ, ಭಾರತೀಯ ರೈಲ್ವೇಯು ಕೋವಿಡ್-19 ರೋಗಿಗಳ ಚಿಕಿತ್ಸೆಗಾಗಿ ವಿವಿಧ ಸ್ಥಳಗಳಲ್ಲಿ ಪ್ರತ್ಯೇಕ ಕೋಚ್‌ಗಳನ್ನು ನಿಯೋಜಿಸಲು ಪ್ರಾರಂಭಿಸಿತ್ತು.


ಆಕ್ಸಿಜನ್ ಎಕ್ಸ್‌ಪ್ರೆಸ್

ಕೋವಿಡ್- 19 ಪ್ರಕರಣಗಳ ಹೆಚ್ಚಳದಿಂದಾಗಿ ತ್ವರಿತ ವಿತರಣೆಗಾಗಿ ಹಸಿರು ಕಾರಿಡಾರ್‌ಗಳನ್ನು ಬಳಸಿಕೊಂಡು ಭಾರತದಾದ್ಯಂತ ರೋಗಿಗಳಿಗೆ ವೈದ್ಯಕೀಯ ಆಮ್ಲಜನಕ (LMO) ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸಲು ರೈಲ್ವೇಯು ‘ಆಕ್ಸಿಜನ್ ಎಕ್ಸ್‌ಪ್ರೆಸ್’ ರೈಲುಗಳನ್ನು ನಡೆಸಿತು. ಕೋವಿಡ್ ಸೋಂಕಿನಲ್ಲಿ ಕೆಲವು ವೈದ್ಯಕೀಯ ಪರಿಸ್ಥಿತಿಗಳ ಚಿಕಿತ್ಸೆಯಲ್ಲಿ ಆಮ್ಲಜನಕವು ನಿರ್ಣಾಯಕವಾಗಿತ್ತು.


ಬುಲೆಟ್ ರೈಲು

ಮುಂಬಯಿ- ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಭಾರತದ ಆರ್ಥಿಕ ಕೇಂದ್ರವಾದ ಮುಂಬಯಿಯನ್ನು ಅಹಮದಾಬಾದ್ ನಗರದೊಂದಿಗೆ ಸಂಪರ್ಕಿಸುವ ನಿರ್ಮಾಣ ಹಂತದಲ್ಲಿರುವ ಹೈಸ್ಪೀಡ್ ರೈಲು ಮಾರ್ಗವಾಗಿದೆ.


ಇದು ಭಾರತದ ಮೊದಲ ಹೈಸ್ಪೀಡ್ ರೈಲು ಮಾರ್ಗವಾಗಲಿದೆ. ಇದರ ನಿರ್ಮಾಣವು ಏಪ್ರಿಲ್ 2020ರಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿತ್ತು. ಆದರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಲ್ಲಿ ವಿಳಂಬವಾದ ಕಾರಣ ಪೂರ್ಣಗೊಳ್ಳುವ ದಿನಾಂಕವನ್ನು ಅಕ್ಟೋಬರ್ 2027ಕ್ಕೆ ಮುಂದೂಡಲಾಗಿದೆ. ಈ ಯೋಜನೆಗೆ 1.1 ಲಕ್ಷ ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.


ವಂದೇ ಭಾರತ್ ಎಕ್ಸ್‌ಪ್ರೆಸ್

ಪ್ರಸ್ತುತ ದೇಶದಲ್ಲಿ 51 ವಂದೇ ಭಾರತ್ ರೈಲುಗಳು ಸೇವೆಯಲ್ಲಿವೆ.
ವಂದೇ ಭಾರತ್ ಎಂಬುದು ಭಾರತದ ಸ್ವಂತ ಸೆಮಿ-ಹೈ ಸ್ಪೀಡ್ ರೈಲು ಸೆಟ್‌ಗೆ ನೀಡಿದ ಹೆಸರು. 16 ಕೋಚ್‌ಗಳನ್ನು ಒಳಗೊಂಡಿರುವ ಈ ರೈಲು ಸ್ವಯಂ ಚಾಲಿತವಾಗಿದೆ. ಹೆಚ್ಚು ಜನಪ್ರಿಯವಾಗುತ್ತಿದೆ.

ಇದನ್ನೂ ಓದಿ: Bangalore Traffic: ಬೆಂಗಳೂರಿನ ಟ್ರಾಫಿಕ್‌ ಸಿಗ್ನಲ್‌ನಲ್ಲಿ 15 ನಿಮಿಷ ನಿಲ್ಲೋ ಪರಿಸ್ಥಿತಿ ಬರಲಿದೆ, ಎಚ್ಚರ!


ರೈಲ್ವೆಯ ಮುಂದಿನ ಭವಿಷ್ಯ ಏನು?

ಬಳಕೆದಾರರ ಅನುಭವವನ್ನು ಸುಧಾರಿಸುವ ಉದ್ದೇಶದಿಂದ ಪ್ರಯಾಣಿಕರ ರೈಲು ಕಾರ್ಯಾಚರಣೆಗಳನ್ನು ಕೈಗೊಳ್ಳಲು ಖಾಸಗಿ ಘಟಕಗಳಿಗೆ ಅನುಮತಿ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಇಲ್ಲಿಯವರೆಗೆ, ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ಗೆ ಮಾತ್ರ ಖಾಸಗಿ ಘಟಕಗಳಿಗೆ ಅನುಮತಿಸಲಾಗಿತ್ತು. ಮುಂದೆ ಭಾಗಶಃ ಖಾಸಗಿಯವರಿಗೆ ಅವಕಾಶ ನೀಡಿ ರೈಲ್ವೆ ಸೌಲಭ್ಯ ಮತ್ತಷ್ಟು ಸುಧಾರಿಸುವ ಪ್ರಸ್ತಾಪವಿದೆ.

Continue Reading

ದೇಶ

CAA Rules: ಪಾಕ್‌, ಬಾಂಗ್ಲಾ, ಆಘ್ಘನ್‌ ನಿರಾಶ್ರಿತರಿಗೆ ಸಿಹಿ ಸುದ್ದಿ; ಸಿಎಎ ನಿಯಮ ಸಡಿಲಿಸಿದ ಕೇಂದ್ರ ಸರ್ಕಾರ!

CAA Rules: ಭಾರತದ ಪೌರತ್ವ ಪಡೆಯಲು ನಿರಾಶ್ರಿತ ಅಲ್ಪಸಂಖ್ಯಾತರು ಇನ್ನು ಮುಂದೆ ಸುಲಭವಾಗಿ ಪೌರತ್ವ ಪಡೆಯುವ ರೀತಿಯಲ್ಲಿ ಸಿಎಎ ಕಾಯ್ದೆಯ ಪರಿಚ್ಛೇದ 1 ಎ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಿಸಿದೆ. ದಾಖಲೆ ಸಲ್ಲಿಕೆಯಲ್ಲಿ ನಿರಾಶ್ರಿತರಿಗೆ ವಿಳಂಬ, ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಸಿಎಎ ನಿಯಮಗಳನ್ನು ಬದಲಾಯಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

VISTARANEWS.COM


on

CAA Rules
Koo

ನವದೆಹಲಿ: ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದ್ದು, ಹಿಂದುಗಳ ಮೇಲೆ ಹಲ್ಲೆ, ಹತ್ಯೆ, ದೇವಾಲಯಗಳ ಮೇಲೆ ದಾಳಿಗಳು ನಡೆಯುತ್ತಿವೆ. ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಬಾಂಗ್ಲಾದೇಶದಲ್ಲಿ ಹಿಂದುಗಳು ಸೇರಿ ಹಲವು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯ (CAA) ನಿಯಮಗಳನ್ನು ಬದಲಿಸಿದೆ.

ಹೌದು, ಭಾರತದ ಪೌರತ್ವ ಪಡೆಯಲು ನಿರಾಶ್ರಿತ ಅಲ್ಪಸಂಖ್ಯಾತರು ಇನ್ನು ಮುಂದೆ ಸುಲಭವಾಗಿ ಪೌರತ್ವ ಪಡೆಯುವ ರೀತಿಯಲ್ಲಿ ಸಿಎಎ ಕಾಯ್ದೆಯ ಪರಿಚ್ಛೇದ 1 ಎ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಿಸಿದೆ. ಅದರಂತೆ, ನಿರಾಶ್ರಿತರು ಕೇಂದ್ರ ಸರ್ಕಾರ, ಯಾವುದೇ ರಾಜ್ಯ ಸರ್ಕಾರ ಅಥವಾ ನ್ಯಾಯಾಂಗ ನೀಡುವ ದಾಖಲೆ, ಭೂಮಿಯ ದಾಖಲೆ ನೀಡಿದರೂ ಸಾಕು, ಭಾರತದ ಪೌರತ್ವವನ್ನು ಪಡೆಯಬಹುದಾಗಿದೆ. ಇದರ ಜತೆಗೆ ನಿರಾಶ್ರಿತರ ಅಜ್ಜ-ಅಜ್ಜಿ, ಮುತ್ತಜ್ಜ-ಮುತ್ತಜ್ಜಿಯು ಬಾಂಗ್ಲಾ, ಪಾಕ್‌ ಹಾಗೂ ಅಫಘಾನಿಸ್ತಾನದ ನಿವಾಸಿಗಳು ಎಂಬುದರ ಯಾವುದೇ ದಾಖಲೆ ನೀಡಿದರೂ ಭಾರತದ ಪೌರತ್ವ ಪಡೆಯಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು?

2014 ರ ಡಿಸೆಂಬರ್ 31 ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ.

ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಅದರ ನಿಯಮಗಳನ್ನು ತಿಳಿಸಿರಲಿಲ್ಲ. ಕಾಯ್ದೆಯ 2019ರ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014 ರವರೆಗೆ ಭಾರತಕ್ಕೆ ಪ್ರವೇಶಿಸಿದ ಮತ್ತು ತಮ್ಮ ಮೂಲ ದೇಶದಲ್ಲಿ “ಧಾರ್ಮಿಕ ಕಿರುಕುಳ ಅಥವಾ ಭಯ ಅಥವಾ ಧಾರ್ಮಿಕ ಕಿರುಕುಳ” ಅನುಭವಿಸಿದ ವಲಸಿಗರಿಗೆ ಭಾರತೀಯ ಪೌರತ್ವ ಲಭಿಸುತ್ತದೆ.

ಸಿಎಎಗೆ 2019 ರ ತಿದ್ದುಪಡಿ ಮೂಲಕ ಮೇಲೆ ಹೇಳಿರುವ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಕಾಯುವಿಕೆಯ ಹನ್ನೆರಡು ವರ್ಷಗಳನ್ನು ಕೇವಲ ಆರು ವರ್ಷಗಳಿಗೆ ಇಳಿಸಲಾಗಿದೆ. ಸಿಎಎ ಕುರಿತ ಗುಪ್ತಚರ ಬ್ಯೂರೋ ವರದಿಯ ಪ್ರಕಾರ, ಕಾಯ್ದೆಯ ನಿಯಮಗಳು ಪ್ರಕಟಗೊಂಡ ತಕ್ಷಣವೇ 30,000 ಕ್ಕೂ ಹೆಚ್ಚು ಫಲಾನುಭವಿಗಳು (ವಲಸಿಗರು) ಇದರ ಲಾಭವನ್ನು ಪಡೆಯುತ್ತಾರೆ. ಈಗಾಗಲೇ ಹಲವು ನಿರಾಶ್ರಿತರಿಗೆ ಕೇಂದ್ರ ಸರ್ಕಾರವು ಪೌರತ್ವ ನೀಡಿದೆ.

ಇದನ್ನೂ ಓದಿ: CAA: ಸಿಎಎ ಕಾಯ್ದೆಯಡಿ 14 ವಲಸಿಗರಿಗೆ ಭಾರತದ ಪೌರತ್ವ; ಏನಿದು ಕಾಯ್ದೆ? ಭಾರತದ ಮುಸ್ಲಿಮರಿಗೆ ತೊಂದರೆ ಇದೆಯೇ?

Continue Reading
Advertisement
Dina Bhavishya
ಭವಿಷ್ಯ6 mins ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಫುಲ್‌ ಟೆನ್ಷನ್‌; ದಿನದ ಮಟ್ಟಿಗೆ ಖರ್ಚು ಹೆಚ್ಚು

PMAY
ದೇಶ5 hours ago

PMAY: ನಗರ ಪ್ರದೇಶಗಳ ಬಡವರಿಗೆ ಕೇಂದ್ರ ಸರ್ಕಾರ ಗುಡ್‌ ನ್ಯೂಸ್;‌ 1 ಕೋಟಿ ಮನೆ ನಿರ್ಮಾಣಕ್ಕೆ ಕೇಂದ್ರ ಅಸ್ತು

Arshad Nadeem
ಪ್ರಮುಖ ಸುದ್ದಿ5 hours ago

Arshad Nadeem : ಒಲಿಂಪಿಕ್ಸ್ ದಾಖಲೆಯೊಂದಿಗೆ ಬಂಗಾರ ಗೆದ್ದ ಅರ್ಷದ್ ನದೀಮ್​ಗೆ ಪಾಕ್​ ಪ್ರಧಾನಿ ಕೊಟ್ಟ ಬಹುಮಾನ ಕೇವಲ 3 ಲಕ್ಷ ರೂಪಾಯಿ!

Plane Crash
ಪ್ರಮುಖ ಸುದ್ದಿ5 hours ago

Plane Crash: ವಿಮಾನ ಪತನ; 62 ಪ್ರಯಾಣಿಕರು ಸೇರಿ ಎಲ್ಲ 70 ಮಂದಿಯ ದುರ್ಮರಣ, Videoಗಳು ಇವೆ

Aman Sehrawat
ಪ್ರಮುಖ ಸುದ್ದಿ6 hours ago

Aman sehrawat : ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್​​; ಭಾರತದ ಒಲಿಂಪಿಕ್ಸ್ ಪದಕಗಳ ಸಂಖ್ಯೆ 6ಕ್ಕೆ ಏರಿಕೆ

Creamy Layer
ದೇಶ6 hours ago

Creamy Layer: ಎಸ್‌ಸಿ, ಎಸ್‌ಟಿಗೆ ಕೆನೆಪದರ ಮೀಸಲಾತಿ ಇಲ್ಲ; ಸುಪ್ರೀಂ ಆದೇಶದ ಬೆನ್ನಲ್ಲೇ ಕೇಂದ್ರ ಸ್ಪಷ್ಟನೆ

Bengaluru News
ಕರ್ನಾಟಕ6 hours ago

Bengaluru News: ಕಾರ್ಪೊರೇಟ್ ಕಂಪನಿಗಳು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಿಎಸ್‌ಆರ್ ಹಣ ವಿನಿಯೋಗಿಸಲಿ: ದಿನೇಶ್ ಗುಂಡೂರಾವ್

Tarsem Singh
ದೇಶ7 hours ago

Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Vinesh Phogat
ಕ್ರೀಡೆ7 hours ago

Vinesh Phogat : ವಿನೇಶ್​​ಗೆ ಬೆಳ್ಳಿ ಪದಕ ಕೊಡಲು ಸಾಧ್ಯವಿಲ್ಲ; ಒಲಿಂಪಿಕ್ಸ್​​ ಸಂಸ್ಥೆ ಮುಖ್ಯಸ್ಥ ಥಾಮಸ್ ಬಾಕ್​ ಸ್ಪಷ್ಟನೆ

ಕರ್ನಾಟಕ7 hours ago

NEET UG 2024: ಯುಜಿ ನೀಟ್: ಆ.12, 13ಕ್ಕೆ ದಾಖಲಾತಿ ಪರಿಶೀಲನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 day ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ7 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌