Urvashi Rautela: ರಿಷಭ್​ ಪಂತ್​ ಮೇಲೆ ಊರ್ವಶಿಗೆ ಮತ್ತೆ ಪ್ಯಾರ್‌ಗೆ ಆಗ್ಬಿಟ್ಟೈತೆ​; ಇನ್​ಸ್ಟಾಗ್ರಾಮ್​ ಸ್ಟೋರಿಯಿಂದ ಬಯಲು - Vistara News

ಕ್ರಿಕೆಟ್

Urvashi Rautela: ರಿಷಭ್​ ಪಂತ್​ ಮೇಲೆ ಊರ್ವಶಿಗೆ ಮತ್ತೆ ಪ್ಯಾರ್‌ಗೆ ಆಗ್ಬಿಟ್ಟೈತೆ​; ಇನ್​ಸ್ಟಾಗ್ರಾಮ್​ ಸ್ಟೋರಿಯಿಂದ ಬಯಲು

Urvashi Rautela: ಊರ್ವಶಿ ರೌಟೆಲಾ ಅವರು ಟಿ20 ವಿಶ್ವಕಪ್​ನಲ್ಲಿ ರಿಷಭ್​ ಪಂತ್​ ಅವರು ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ರಿವರ್ಸ್​ ಸ್ವೀಪ್​ ಮೂಲಕ ಸಿಕ್ಸರ್​ ಬಾರಿಸಿದ ವಿಡಿಯೋವನ್ನು ಎಡಿಟ್​ ಮಾಡಿ ತನ್ನ ಫೋಟೊವನ್ನು ಹಾಕಿ ತಾನು ಸಿಕ್ಸರ್​ ಬಾರಿಸಿದಂತೆ ವಿಡಿಯೊ ಹಂಚಿಕೊಂಡಿದ್ದಾರೆ. ಇದನ್ನು ಕಂಡ ನಟ್ಟಿಗರು ಮತ್ತೆ ಈ ಜೋಡಿ ಒಂದಾಗಲಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

VISTARANEWS.COM


on

Urvashi Rautela
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಬಾಲಿವುಡ್‌ ನಟಿ ಊರ್ವಶಿ ರೌಟೆಲಾ (Urvashi Rautela)ಗೆ ಮತ್ತೆ ಟೀಮ್​ ಇಂಡಿಯಾ ಆಟಗಾರ ರಿಷಭ್​ ಪಂತ್(Rishabh Pant)​ ಮೇಲೆ ಪ್ರೀತಿ​ ಆದಂತಿದೆ. ಹೌದು, ಊರ್ವಶಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ ಸ್ಟೋರಿಯನ್ನು ನೋಡುವಾಗ ಪಂತ್​ ಮೇಲೆ “ಪ್ಯಾರ್‌ಗೆ ಆಗ್ಬಿಟ್ಟೈತೆ” ಎಂಬಂತೆ ಕಾಣುತ್ತಿದೆ.

ರಿಷಭ್​ ಪಂತ್ ಮತ್ತು ಊರ್ವಶಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಕೆಲ ವರ್ಷಗಳ ಹಿಂದೆ ಬಾರೀ ಸದ್ದು ಮಾಡಿತ್ತು. ಪಂತ್​ ಹೋದಲೆಲ್ಲ ಇವರು ಕೂಡ ಹೋಗುತ್ತಿದ್ದರು. ಆದರೆ, ಇದ್ದಕ್ಕಿದಂತೆ ಒಂದು ಬಾರಿ ಊರ್ವಶಿ ಅವರು ತಮ್ಮ ಸಿನೆಮಾದ ಕುರಿತ ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುವಾಗ, ಆರ್‌ಪಿ ಎಂಬುವರು ನನಗೆ ಹೋಟೆಲ್‌ ಲಾಬಿಯಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು. ನಾನು ಫೋನ್‌ ನೋಡುವಾಗ ಹಲವು ಮಿಸ್ಡ್‌ ಕಾಲ್‌ಗಳು ಇರುತ್ತಿದ್ದವು ಎಂದು ಹೇಳಿದ್ದರು.

ತಕ್ಷಣವೇ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದ ರಿಷಭ್‌, ಹೆಸರು ಗಳಿಸಲು ಬಾಯಿಗೆ ಬಂದದ್ದನ್ನೆಲ್ಲ ಮಾತನಾಡಬಾರದು ಎಂದು ಪೋಸ್ಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಊರ್ವಶಿ “ಬ್ಯಾಟ್‌ ಮತ್ತು ಬಾಲ್‌ನಲ್ಲಿ ಮಾತ್ರ ಆಡು ಮಗುವೆ. ನಿನ್ನಿಂದ ಕೆಟ್ಟು ಹೋಗುವುದಕ್ಕೆ ನಾನು ಮುನ್ನಿ ಅಲ್ಲ,” ಎಂದಿದ್ದರು. ಈ ಒಂದು ಘಟನೆ ಬಳಿಕ ಇವರಿಬ್ಬರ ಪ್ರೀತಿ ಬ್ರೇಕ್​ ಆಪ್​ ಆಗಿತ್ತು. ಇದೀಗ ಮತ್ತೆ ಒಂದಾಗುವಂತೆ ಕಾಣುತ್ತಿದೆ.

ಊರ್ವಶಿ ರೌಟೆಲಾ ಅವರು ಟಿ20 ವಿಶ್ವಕಪ್​ನಲ್ಲಿ ರಿಷಭ್​ ಪಂತ್​ ಅವರು ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ರಿವರ್ಸ್​ ಸ್ವೀಪ್​ ಮೂಲಕ ಸಿಕ್ಸರ್​ ಬಾರಿಸಿದ ವಿಡಿಯೋವನ್ನು ಎಡಿಟ್​ ಮಾಡಿ ತನ್ನ ಫೋಟೊವನ್ನು ಹಾಕಿ ತಾನು ಸಿಕ್ಸರ್​ ಬಾರಿಸಿದಂತೆ ವಿಡಿಯೊ ಹಂಚಿಕೊಂಡಿದ್ದಾರೆ. ಇದನ್ನು ಕಂಡ ನಟ್ಟಿಗರು ಮತ್ತೆ ಈ ಜೋಡಿ ಒಂದಾಗಲಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

2022ರಲ್ಲಿ ಪಂತ್​ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡ ವೇಳೆ ಶೀಘ್ರ ಗುಣಮುಖರಾಗಲಿ ಎಂದು ಊರ್ವಶಿ ಅವರು ಪ್ರಾರ್ಥಿಸಿದ್ದರು. ಈ ಕುರಿತು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಹಾಕಿದ್ದರು. ಬಳಿಕ ಮುಂಬೈಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಪಂತ್​ ದೇಶದ ಆಸ್ತಿ, ಗುಣಮುಖರಾಗಿ ಮತ್ತೆ ಕ್ರಿಕೆಟ್​ ಆಡುವಂತಾಗಲಿ ಎಂದು ಹೇಳಿದ್ದರು.

ಇದನ್ನೂ ಓದಿ Rishabh Pant: ಡೆಲ್ಲಿ ತೊರೆದು ಮುಂದಿನ ಐಪಿಎಲ್​ನಲ್ಲಿ ಈ ಫ್ರಾಂಚೈಸಿ ಪರ ಆಡಲಿದ್ದಾರೆ ರಿಷಭ್​ ಪಂತ್​

ಕಳೆದ ವರ್ಷ ನಡೆದಿದ್ದ ಏಷ್ಯಾಕಪ್​(Asia cup 2023) ವೇಳೆ ಊರ್ವಶಿ ರೌಟೇಲಾ ಪಾಕಿಸ್ತಾನ ಆಟಗಾರ ನಸೀಮ್ ಶಾ ಅವರು ಸಹ ಆಟಗಾರರೊಂದಿಗಿರುವ ಫೋಟೊವನ್ನು ತಮ್ಮ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ್ದರು. ದುಬೈನಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಕ್ಕೆ ಹಾಜರಾಗಿದ್ದರು. ಅಲ್ಲದೆ ನಸೀಮ್ ಶಾ ಅವರ ದೊಡ್ಡ ಅಭಿಮಾನಿ ಎಂದು ಪೋಸ್ಟ್​ ಕೂಡ ಹಾಕಿದ್ದರು. ಇದು ಮಾತ್ರವಲ್ಲದೆ ನಸೀಮ್‌ ಶಾ ಅವರ ಹುಟ್ಟುಹಬ್ಬಕ್ಕೂ ಶುಭಾಶಯ ಕೋರಿದ್ದರು. ಶುಭಾಶಯದ ಜತೆಗೆ ಡಿಎಸ್‌ಪಿ ಗೌರವ ಪಡೆದಿದ್ದಕ್ಕೂ ನಸೀಮ್ ಶಾ ಅವರಿಗೆ ಊರ್ವಶಿ ಅಭಿನಂದಿಸಿದ್ದರು. ಇದಕ್ಕೆ ನಸೀಮ್ ಶಾ, ‘ಧನ್ಯವಾದಗಳು’ ಎಂದು ಪ್ರತಿಕ್ರಿಕೆ ನೀಡಿದ್ದರು. ಈ ವೇಳೆ ನೆಟ್ಟಿಗರು ಇವರಿಬ್ಬರ ಮಧ್ಯೆ ಪ್ರೇಮಾಂಕುರ ಆಗಿದೆ ಎಂದಿದ್ದರು. ಇದೀಗ ಮತ್ತೆ  ಪಂತ್​ ಜತೆ ಪ್ರೀತಿಯ ಬಲೆಯಲ್ಲಿ ಬಿದ್ದಿರುವ ಅನುಮಾನ ಹುಟ್ಟಿಕೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

VISTARANEWS.COM


on

Vinesh Phogat
Koo

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​​ನ ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ಸ್ಪರ್ಧೆಯಿಂದ ವಿನೇಶ್ ಫೋಗಟ್ (Vinesh Phogat) ಅವರನ್ನು ಅನರ್ಹಗೊಳಿಸಿರುವ ಬಗ್ಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದು, ಅವರಿಗೆ ಬೆಳ್ಳಿ ಪದಕ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ ಫೈನಲ್​ನಿಂದ ಅನರ್ಹಗೊಂಡ ನಂತರ ಫೋಗಟ್ ಕುಸ್ತಿಯಿಂದ ನಿವೃತ್ತಿ ಘೋಷಿಸಿದರು. ಕಳೆದ ಮಂಗಳವಾರ ರಾತ್ರಿ ನಡೆದ ಸೆಮಿಫೈನಲ್​​ನಲ್ಲಿ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಸೋಲಿಸುವ ಮೂಲಕ ಫೋಗಟ್ ಚಿನ್ನದ ಪದಕದ ಹೋರಾಟಕ್ಕೆ ಪ್ರವೇಶಿಸಿದ್ದರು. ಅವರು ಚಿನ್ನದ ಪದಕಕ್ಕಾಗಿ ಯುನೈಟೆಡ್ ಸ್ಟೇಟ್ಸ್​​​ನ ಸಾರಾ ಆನ್ ಹಿಲ್ಡೆಬ್ರಾಂಟ್ ವಿರುದ್ಧ ಸ್ಪರ್ಧಿಸಲು ಸಜ್ಜಾಗಿದ್ದರು ಆದರೆ ತೂಕದ ಮಿತಿ ಉಲ್ಲಂಘಿಸಿದ್ದಕ್ಕಾಗಿ ಬುಧವಾರ ಅನರ್ಹಗೊಂಡರು. ಅನರ್ಹತೆಯ ನಂತರ, ಫೋಗಟ್ ತನಗೆ ಬೆಳ್ಳಿ ಪದಕವನ್ನು ನೀಡುವಂತೆ ಸಿಎಎಸ್​ಗೆ ವಿನಂತಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸೌರವ್​ ಗಂಗೂಲಿ, ತನಗೆ ಸರಿಯಾಗಿ ಕುಸ್ತಿಯ ನಿಯಮಗಳು ತಿಳಿದಿಲ್ಲ ಆದರೆ ಅವರು ಬೆಳ್ಳಿ ಪದಕಕ್ಕೆ ಅರ್ಹರು ಎಂದು ಹೇಳಿದ್ದಾರೆ.

ನಿಖರವಾದ ನಿಯಮ ಏನು ಎಂದು ನನಗೆ ತಿಳಿದಿಲ್ಲ, ಆದರೆ ವಿನೇಶ್​​ ಫೈನಲ್​ಗೆ ಹೋಗುವ ತನಕ ಸರಿಯಾಗಿ ಅರ್ಹತೆ ಪಡೆದಿದ್ದಾರೆ ಎಂದು ನನಗೆ ಖಾತ್ರಿಯಿದೆ. ಆದ್ದರಿಂದ ಫೈನಲ್ ಗೆ ಹೋದ ಮೇಲೆ ಬೆಳ್ಳಿ ಅಥವಾ ಚಿನ್ನದ ಪದಕಕ್ಕೆ ಅರ್ಹರು. ಹೀಗಾಗಿ ಅವರನ್ನು ತಪ್ಪಾಗಿ ಅನರ್ಹಗೊಳಿಸಲಾಗಿದೆ. ಹೀಗಾಗಿ ಅವರು ಕನಿಷ್ಠ ಬೆಳ್ಳಿಗೆ ಅರ್ಹರು,” ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

ಪ್ಯಾರಿಸ್ ಒಲಿಂಪಿಕ್ಸ್​​ನಿಂದ ಅನರ್ಹಗೊಂಡ ವಿನೇಶ್ ಫೋಗಟ್ ಅವರಿಗೆ ಬೆಳ್ಳಿ ಪದಕ ನೀಡಬೇಕೇ ಎಂಬ ಬಗ್ಗೆ ತೀರ್ಪು ನೀಡುವ ಗಡುವನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಆಗಸ್ಟ್ 13 ರವರೆಗೆ ವಿಸ್ತರಿಸಿದೆ.

“ವಿನೇಶ್ ಫೋಗಟ್ ವರ್ಸಸ್ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ವಿಷಯದಲ್ಲಿ ಏಕಮಾತ್ರ ಮಧ್ಯಸ್ಥಿಕೆದಾರ ಡಾ.ಅನ್ನಾಬೆಲ್ಲೆ ಬೆನೆಟ್ ಅವರಿಗೆ ಆಗಸ್ಟ್ 13, 2024 ರಂದು ಸಂಜೆ 6-00 ಗಂಟೆಯವರೆಗೆ ನಿರ್ಧಾರ ತೆಗೆದುಕೊಳ್ಳಲು ಸಿಎಎಸ್​ನ ತಾತ್ಕಾಲಿಕ ವಿಭಾಗವು ಸಮಯವನ್ನು ವಿಸ್ತರಿಸಿದೆ” ಎಂದು ಐಒಎ ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ಯಾರಿಸ್ ಒಲಿಂಪಿಕ್ಸ್ ಫೈನಲ್​​ನಿಂದ ಅನರ್ಹಗೊಂಡ ನಂತರ ವಿನೇಶ್ ಫೋಗಟ್ ಎಕ್ಸ್​ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ನನ್ನ ವಿರುದ್ಧ ಕುಸ್ತಿ ಗೆದ್ದಿತು, ನಾನು ಸೋತೆ. ನನ್ನನ್ನು ಕ್ಷಮಿಸಿ, ಕನಸು ಮತ್ತು ನನ್ನ ಧೈರ್ಯ ಮುರಿದಿದೆ. ನನಗೆ ಈಗ ಹೆಚ್ಚಿನ ಶಕ್ತಿ ಇಲ್ಲ. ಗುಡ್ ಬೈ ಕುಸ್ತಿ 2001-2024. ನಿಮ್ಮೆಲ್ಲರ ಕ್ಷಮೆಗಾಗಿ ನಾನು ಯಾವಾಗಲೂ ಋಣಿಯಾಗಿದ್ದೇನೆ ಎಂದು ಬರೆದುಕೊಂಡಿದ್ದರು.

Continue Reading

ಕ್ರೀಡೆ

Mohammed Siraj: ಕ್ರಿಕೆಟಿಗ ಸಿರಾಜ್‌, ಬಾಕ್ಸರ್​ ನಿಖತ್ ಜರೀನ್‌, ಶೂಟರ್​ ಇಶಾ ಸಿಂಗ್​ಗೆ ನಿವೇಶನ ಮಂಜೂರು ಮಾಡಿದ ತೆಲಂಗಾಣ ಸರ್ಕಾರ

Mohammed Siraj: ನಿಖತ್​ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 50 ಕೆಜಿ ಬಾಕ್ಸಿಂಗ್​(Paris Olympics boxing) ವಿಭಾಗದ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೋಲು ಕಂಡು ತಮ್ಮ ಅಭಿಯಾನವನ್ನು ಮುಗಿಸಿದ್ದರು.

VISTARANEWS.COM


on

Mohammed Siraj
Koo

ಹೈದರಾಬಾದ್​: ಟೀಮ್​ ಇಂಡಿಯಾದ ವೇಗದ ಬೌಲರ್​ ಮೊಹಮ್ಮದ್​ ಸಿರಾಜ್​ಗೆ ತೆಲಂಗಾಣ ಸರಕಾರವು ನಿವೇಶನ ಮಂಜೂರು ಮಾಡಿದೆ. ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 78 ರಲ್ಲಿ 600 ಚದರ ಭೂಮಿಯನ್ನು ಮಂಜೂರು ಮಾಡುವ ಆದೇಶವನ್ನು ತೆಲಂಗಾಣ ಸರ್ಕಾರ ಬಿಡುಗಡೆ ಮಾಡಿದೆ.

ಸಿರಾಜ್ ಅವರೊಂದಿಗೆ, ಶೂಟರ್ ಇಶಾ ಸಿಂಗ್ ಮತ್ತು ಎರಡು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್‌(Nikhat Zareen) ಅವರಿಗೂ ಹೈದರಾಬಾದ್​ನಲ್ಲಿ ತಲಾ 600 ಚದರಗಳಷ್ಟು ಮನೆ ನಿವೇಶನಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ. ಜುಲೈ 31 ರಂದು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ(Chief Minister A. Revanth Reddy) ಅವರು ಸಿರಾಜ್ ಅವರಿಗೆ ನಗರದಲ್ಲಿ ಮನೆ ನಿವೇಶನ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಸಿರಾಜ್ ಮತ್ತು ನಿಖತ್​ಗೆ ಕ್ರೀಡೆಗೆ ನೀಡಿದ ಕೊಡುಗೆಗಾಗಿ ಸರ್ಕಾರವು ಈಗಾಗಲೇ ಗ್ರೂಪ್-1 ಉದ್ಯೋಗಗಳನ್ನು ನೀಡಿದೆ.

ನಿಖತ್​ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 50 ಕೆಜಿ ಬಾಕ್ಸಿಂಗ್​(Paris Olympics boxing) ವಿಭಾಗದ ಪ್ರೀ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಸೋಲು ಕಂಡು ತಮ್ಮ ಅಭಿಯಾನವನ್ನು ಮುಗಿಸಿದ್ದರು. ಮೊಹಮ್ಮದ್ ಸಿರಾಜ್ ಟಿ20 ವಿಶ್ವಕಪ್​​ ಗೆದ್ದ ತಂಡದ ಸದಸ್ಯರಾಗಿದ್ದರು. ಒಟ್ಟು ಮೂರು ಪಂದ್ಯಗಳನ್ನು ಆಡಿದ್ದರು.

ಇದನ್ನೂ ಓದಿ Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

ಪಂದ್ಯ ಶ್ರೇಷ್ಠ ಪ್ರಶಸ್ತಿಯ ಚೆಕ್​ ದಾನ ಮಾಡಿದ್ದ ಸಿರಾಜ್​


ಶ್ರೀಲಂಕಾ ತಂಡದ ವಿರುದ್ಧ ಕಳೆದ ವರ್ಷ ನಡೆದ ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಅಸಾಧಾರಣ ಬೌಲಿಂಗ್ ಸಾಧನೆ ಮಾಡಿದ್ದ ಮೊಹಮ್ಮದ್ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹವಾಗಿದ್ದರು. ಅವರಿಗೆ 5000 ಡಾಲರ್ (4,15,451.75 ರೂ.) ಬಹುಮಾನ ನೀಡಲಾಗಿತ್ತು. ಆದರೆ ಅವರು ಸ್ಥಳದಲ್ಲೇ ಆ ಬಹುಮಾನವನ್ನು ಮೈದಾನದ ಸಿಬ್ಬಂದಿಗೆ (ಗ್ರೌಂಡ್​ ಸ್ಟಾಪ್​) ಅರ್ಪಿಸಿ ಮನಗೆದ್ದಿದ್ದರು.

ಮೊಹಮ್ಮದ್​ ಸಿರಾಜ್​ ಟೀಮ್​ ಇಂಡಿಯಾ ಪರ ಕೆಲ ವರ್ಷಗಳಿಂದ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಬೌಲಿಂಗ್​ ಶ್ರೇಯಾಂಕದಲ್ಲಿಯೂ ಅಗ್ರಸ್ಥಾನ ಪಡೆದಿದ್ದಾರೆ. ಸದ್ಯ ಅವರು ತಂಡದ ಪ್ರಮುಖ ಬೌಲರ್​ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿಯೂ ಗಮನಾರ್ಹ ಪ್ರದರ್ಶನ ತೋರಿದ್ದರು. ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಾಗ ಬೇಸರಲ್ಲಿ ಸಿರಾಜ್​ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದರು. ಬಳಿಕ ಅವರನ್ನು ತಂಡದ ನಾಯಕ ರೋಹಿತ್​ ಶರ್ಮ ಮತ್ತು ಸಹ ಆಟಗಾರ ಜಸ್​ಪ್ರೀತ್​ ಬುಮ್ರಾ ಸಮಾಧಾನಪಡಿಸಿದ್ದರು.

Continue Reading

ಕ್ರೀಡೆ

Shakib Al Hasan: ಸೂಪರ್‌ ಓವರ್‌ ಆಡಲು ನಿರಾಕರಿಸಿದ ಶಕಿಬ್; ಟೂನಿಯಿಂದಲೇ ಹೊರಬಿದ್ದ ತಂಡ

Shakib Al Hasan: ಹಿಂದೊಮ್ಮೆ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಶಕಿಬ್‌ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ಗುಂಪಿನ ಮಧ್ಯೆಯಿಂದ ಫೋಟೊ ತೆಗೆಯಲು ಮುಂದಾಗಿದ್ದ ಇದರಿಂದ ಸಿಟ್ಟಿಗೆದ್ದ ಶಕೀಬ್​ತಲೆಯಿಂದ ಕ್ಯಾಪ್​ ಎಳೆದು ಇದೇ ಕ್ಯಾಪ್‌ನಿಂದ ಒಂದೆರಡು ಬಾರಿ ಥಳಿಸಿದ್ದರು. 

VISTARANEWS.COM


on

Shakib Al Hasan
Koo

ಢಾಕಾ: ಬಾಂಗ್ಲಾದೇಶದ ಕ್ರಿಕೆಟ್​ ತಂಡದ ಹಿರಿಯ ಆಲ್​ರೌಂಡರ್​ ಶಕಿಬ್ ಅಲ್ ಹಸನ್‌(Shakib Al Hasan) ತಾಳ್ಮೆ ಕಳೆದುಕೊಂಡು, ಅಂಪೈರ್​ಗಳ ಜತೆ ಮತ್ತು ಅಭಿಮಾನಿಗಳ ನಡುವೆ ಈಗಾಗಲೇ ಹಲವು ಬಾರಿ ಕಿರಿಕ್​ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಗ್ಲೋಬಲ್ ಟಿ20 ಲೀಗ್ ಟೂರ್ನಿಯಲ್ಲಿ ಸೂಪರ್ ಓವರ್(Shakib Al Hasan super over) ಆಡಲು ನಿರಾಕರಿಸಿ ಸುದ್ದಿಯಾಗಿದ್ದಾರೆ. ಇವರ ಈ ಕೆಟ್ಟ ನಿರ್ಧಾರದಿಂದ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ.

ಎಲಿಮಿನೇಟರ್ ಪಂದ್ಯವಾದ ಬಾಂಗ್ಲಾ ಟೈಗರ್ಸ್ ಮತ್ತು ಟೊರೊಂಟೊ ನ್ಯಾಷನಲ್ಸ್ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಫಲಿತಾಂಶ ನಿರ್ಧರಿಸಲು ಆಯೋಜಕರು ಸೂಪರ್ ಓವರ್ ಆಡಲು ನಿರ್ಧರಿಸಿದ್ದರು. ಆದರೆ ಬಾಂಗ್ಲಾ ಟೈಗರ್ಸ್ ತಂಡದ ನಾಯಕ ಶಕಿಬ್‌ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಕನಿಷ್ಟ 5 ಓವರ್‌ ಆಡಿಸಬೇಕು ಎಂದು ಹಠ ಹಿಡಿದರು. ಇದಕ್ಕೆ ಒಪ್ಪದ ಆಯೋಜಕರು ಪಂದ್ಯವನ್ನೇ ರದ್ದುಗೊಳಿಸಿದರು. ಈ ಪರಿಣಾಮ ಬಾಂಗ್ಲಾ ಟಗರ್ಸ್‌ ತಂಡ ಟೂನಿಯಿಂದಲೇ ಹೊರಬಿದ್ದಿರು. ಟೊರೊಂಟೊ ನ್ಯಾಷನಲ್ಸ್ ತಂಡ ಕ್ವಾಲಿಫೈಯರ್-2 ಗೆ ಅರ್ಹತೆ ಪಡೆದುಕೊಂಡಿತು. ಶಕೀಬ್ ಅಲ್ ಹಸನ್ ಅವರ ಈ ಕೆಟ್ಟ ನಿರ್ಧಾರ ಅನಗತ್ಯವಾಗಿ ತಂಡದ ಹಿನ್ನಡೆಗೆ ಕಾರಣವಾಯಿತು.

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಕಣ್ಣಿನ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದ ಶಕೀಬ್​ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಹುದಿನಗಳ ವಿಶ್ರಾಂತಿ ಪಡೆದಿದ್ದರು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಆಡುವ ಸಲುವಾಗಿ ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಆಡಲಿಳಿದು ವಿಶ್ವಕಪ್‌ ಆಡಿದ್ದರು.

ಇದನ್ನೂ ಓದಿ Shakib Al Hasan : ನಿವೃತ್ತಿಯಾಗು ಶಕಿಬ್…, ಬಾಂಗ್ಲಾ ಮಾಜಿ ನಾಯಕನ ಮೇಲೆ ಮತ್ತೆ ಗುಡುಗಿದ ಸೆಹ್ವಾಗ್​

ಹಲವು ಬಾರಿ ಅವರು ಮೈದಾನದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಅಂಪೈರ್‌ ಅವರೊಂದಿಗೆ ಶಕಿಬ್‌ ಹಲವು ಬಾರಿ ವಾಗ್ವಾದಕ್ಕೆ ಇಳಿದ ಹಲವು ನಿದರ್ಶನಗಳಿವೆ. ಕಳೆದ ಬಾರಿಯ ಬಾಂಗ್ಲಾ ಪ್ರೀಮಿಯರ್​ ಲೀಗ್​ನಲ್ಲಿ ಅಂಪೈರ್​ ಅವರು ಔಟ್​ ನೀಡಿಲ್ಲ ಎಂಬ ಕಾರಣಕ್ಕೆ ಶಬಿಕ್​ ವಿಕೆಟ್​ಗೆ ಕಾಲಿನಿಂದ ಒದ್ದು, ಅಭಿಮಾನಿಗೆ ಕ್ಯಾಪ್​ನಿಂದ ಹಲ್ಲೆ ಮಾಡಿದ ವಿಡಿಯೊಗಳು ವೈರಲ್‌ ಆಗಿತ್ತು.

ಹಿಂದೊಮ್ಮೆ ಜಾಹೀರಾತು ಪ್ರಚಾರದ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ ಶಕಿಬ್‌ ಸಾಗುವ ಮಾರ್ಗದಲ್ಲಿ ಅನೇಕ ಕ್ರೀಡಾಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದರು. ಈ ವೇಳೆ ಅಭಿಮಾನಿಯೊಬ್ಬ ಗುಂಪಿನ ಮಧ್ಯೆಯಿಂದ ಫೋಟೊ ತೆಗೆಯಲು ಮುಂದಾಗಿದ್ದ ಇದರಿಂದ ಸಿಟ್ಟಿಗೆದ್ದ ಶಕೀಬ್​ತಲೆಯಿಂದ ಕ್ಯಾಪ್​ ಎಳೆದು ಇದೇ ಕ್ಯಾಪ್‌ನಿಂದ ಒಂದೆರಡು ಬಾರಿ ಥಳಿಸಿದ್ದರು. 

Continue Reading

ಕ್ರೀಡೆ

Maharaja Trophy schedule: ಮಹಾರಾಜ ಟ್ರೋಫಿಯ ವೇಳಾಪಟ್ಟಿ ಪ್ರಕಟ; ಆಗಸ್ಟ್​ 15ರಿಂದ ಟೂರ್ನಿ ಆರಂಭ

Maharaja Trophy schedule: ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ರನ್ನರ್ಸ್ ಅಪ್ ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಟೂರ್ನಿಯಲ್ಲಿ ಆಡಲಿವೆ.

VISTARANEWS.COM


on

Maharaja Trophy schedule
Koo

ಬೆಂಗಳೂರು: ಇದೇ ಆಗಸ್ಟ್‌ 15ರಿಂದ ಆರಂಭವಾಗಲಿರುವ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ(Maharaja Trophy) ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ(Maharaja Trophy schedule) ಪ್ರಕಟಗೊಂಡಿದೆ. ಎಲ್ಲ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಉದ್ಘಾಟನ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಗುಲ್ಬರ್ಗ ಮಿಸ್ಟಿಕ್ಸ್ ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್, ರನ್ನರ್ಸ್ ಅಪ್ ಮೈಸೂರು ವಾರಿಯರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಬೆಂಗಳೂರು ಬ್ಲಾಸ್ಟರ್ಸ್, ಮಂಗಳೂರು ಡ್ರ್ಯಾಗನ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳು ಟೂರ್ನಿಯಲ್ಲಿ ಆಡಲಿವೆ.

ಟೀಮ್​ ಇಂಡಿಯಾ ಮಾಜಿ ಕೋಚ್​ ರಾಹುಲ್​ ದ್ರಾವಿಡ್​ ಪುತ್ರ ಸಮಿತ್​ ದ್ರಾವಿಡ್(Samit Dravid)​ ಕೂಡ ಈ ಬಾರಿ ಟೂರ್ನಿಯಲ್ಲಿ ಆಡುತ್ತಿರುವುದು ವಿಶೇಷ. ಸುಮಿತ್​ ಮೈಸೂರು ವಾರಿಯರ್ಸ್ ತಂಡದ ಪರ ಆಡಲಿದ್ದಾರೆ. ಟೂರ್ನಿಯ ವೇಳಾಪಟ್ಟಿ ಹೀಗಿದೆ. ಆಗಸ್ಟ್​ 15 ರಿಂದ ಪಂದ್ಯಾವಳಿ ಆರಂಭವಾಗಿ ಸೆಪ್ಟೆಂಬರ್​ 1ರ ತನಕ ನಡೆಯಲಿದೆ.

ಇದನ್ನೂ ಓದಿ Maharaja Trophy Squads: ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ

ವೇಳಾಪಟ್ಟಿ


ಗುರುವಾರ, ಆಗಸ್ಟ್ 15, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಮಧ್ಯಾಹ್ನ 3:00

ಶುಕ್ರವಾರ, ಆಗಸ್ಟ್ 16, 2024 : ಶಿವಮೊಗ್ಗ ಲಯನ್ಸ್ vs ಮೈಸೂರು ವಾರಿಯರ್ಸ್, ಸಂಜೆ 7:00

ಶುಕ್ರವಾರ, ಆಗಸ್ಟ್ 16, 2024 : ಮಂಗಳೂರು ಡ್ರ್ಯಾಗನ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಶುಕ್ರವಾರ, ಆಗಸ್ಟ್ 16, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಸಂಜೆ 7:00

ಶನಿವಾರ, ಆಗಸ್ಟ್ 17, 2024 : ಶಿವಮೊಗ್ಗ ಲಯನ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00

ಶನಿವಾರ, ಆಗಸ್ಟ್ 17, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಭಾನುವಾರ, ಆಗಸ್ಟ್ 18, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಭಾನುವಾರ, ಆಗಸ್ಟ್ 18, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, ಸಂಜೆ 7:00

ಸೋಮವಾರ, ಆಗಸ್ಟ್ 19, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಸೋಮವಾರ, ಆಗಸ್ಟ್ 19, 2024 : ಮೈಸೂರು ವಾರಿಯರ್ಸ್ vs ಮಂಗಳೂರು ಡ್ರಾಗನ್ಸ್, ಸಂಜೆ 7:00

ಮಂಗಳವಾರ, ಆಗಸ್ಟ್ 20, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಮಂಗಳವಾರ, ಆಗಸ್ಟ್ 20, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಮಂಗಳೂರು ಡ್ರಾಗನ್ಸ್, ಸಂಜೆ 7:00

ಬುಧವಾರ, ಆಗಸ್ಟ್ 21, 2024 : ಗುಲ್ಬರ್ಗಾ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00

ಬುಧವಾರ, ಆಗಸ್ಟ್ 21, 2024 : ಮೈಸೂರು ವಾರಿಯರ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಗುರುವಾರ, ಆಗಸ್ಟ್ 22, 2024 : ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್, ಮಧ್ಯಾಹ್ನ 3:00

ಗುರುವಾರ, ಆಗಸ್ಟ್ 22, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ಸಂಜೆ 7:00

ಶುಕ್ರವಾರ, ಆಗಸ್ಟ್ 23, 2024 : ಬೆಂಗಳೂರು ಬ್ಲಾಸ್ಟರ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಶುಕ್ರವಾರ, ಆಗಸ್ಟ್ 23, 2024 : ಮಂಗಳೂರು ಡ್ರಾಗನ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಸಂಜೆ 7:00

ಶನಿವಾರ, ಆಗಸ್ಟ್ 24, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಶನಿವಾರ, ಆಗಸ್ಟ್ 24, 2024 : ಶಿವಮೊಗ್ಗ ಲಯನ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಭಾನುವಾರ, ಆಗಸ್ಟ್ 25, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಭಾನುವಾರ, ಆಗಸ್ಟ್ 25, 2024 : ಮಂಗಳೂರು ಡ್ರಾಗನ್ಸ್ vs ಶಿವಮೊಗ್ಗ ಲಯನ್ಸ್, ಸಂಜೆ 7:00

ಸೋಮವಾರ, ಆಗಸ್ಟ್ 26, 2024 : ಮಂಗಳೂರು ಡ್ರಾಗನ್ಸ್ vs ಹುಬ್ಬಳ್ಳಿ ಟೈಗರ್ಸ್, ಮಧ್ಯಾಹ್ನ 3:00

ಸೋಮವಾರ, ಆಗಸ್ಟ್ 26, 2024 : ಬೆಂಗಳೂರು ಬ್ಲಾಸ್ಟರ್ಸ್ vs ಗುಲ್ಬರ್ಗ ಮಿಸ್ಟಿಕ್ಸ್, ಸಂಜೆ 7:00

ಮಂಗಳವಾರ, ಆಗಸ್ಟ್ 27, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಶಿವಮೊಗ್ಗ ಲಯನ್ಸ್, 3:00

ಮಂಗಳವಾರ, ಆಗಸ್ಟ್ 27, 2024 : ಹುಬ್ಬಳ್ಳಿ ಟೈಗರ್ಸ್ vs ಮೈಸೂರು ವಾರಿಯರ್ಸ್, ಸಂಜೆ 7:00

ಬುಧವಾರ, ಆಗಸ್ಟ್ 28, 2024 : ಮಂಗಳೂರು ಡ್ರಾಗನ್ಸ್​ vs ಮೈಸೂರು ವಾರಿಯರ್ಸ್, ಮಧ್ಯಾಹ್ನ 3:00

ಬುಧವಾರ, ಆಗಸ್ಟ್ 28, 2024 : ಬೆಂಗಳೂರು ಬ್ಲಾಸ್ಟರ್ಸ್ vs ಶಿವಮೊಗ್ಗ ಲಯನ್ಸ್, ಸಂಜೆ 7:00

ಗುರುವಾರ, ಆಗಸ್ಟ್ 29, 2024 : ಬೆಂಗಳೂರು ಬ್ಲಾಸ್ಟರ್ಸ್ vs ಮಂಗಳೂರು ಡ್ರಾಗನ್ಸ್, ಮಧ್ಯಾಹ್ನ 3:00

ಗುರುವಾರ, ಆಗಸ್ಟ್ 29, 2024 : ಗುಲ್ಬರ್ಗ ಮಿಸ್ಟಿಕ್ಸ್ vs ಹುಬ್ಬಳ್ಳಿ ಟೈಗರ್ಸ್, ಸಂಜೆ 7:00

ಶುಕ್ರವಾರ, ಆಗಸ್ಟ್ 30, 2024 : ಸೆಮಿಫೈನಲ್ 1 (1 vs 4), ಸಂಜೆ 7:00

ಶನಿವಾರ, ಆಗಸ್ಟ್ 31, 2024 : ಸೆಮಿಫೈನಲ್ 2 (2 vs 3), ಸಂಜೆ 7:00

ಭಾನುವಾರ, ಸೆಪ್ಟೆಂಬರ್ 1, 2024 : ಫೈನಲ್, ಸಂಜೆ 7:00

Continue Reading
Advertisement
Hindenburg Report
ದೇಶ16 mins ago

Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

Hindenburg report
ಪ್ರಮುಖ ಸುದ್ದಿ54 mins ago

Hindenburg Report : ಹುರುಳಿಲ್ಲದ ಆರೋಪ; ಹಿಂಡೆನ್​ಬರ್ಗ್​ ವರದಿ ಬಗ್ಗೆ ಸೆಬಿ ಸ್ಪಷ್ಟನೆ

Paris Olympics 2024
ಕ್ರೀಡೆ1 hour ago

Paris Olympics 2024 : ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್​ ಟವರ್​ ಏರಿ ಕುಳಿತ ಆಗಂತುಕ!

Self Harming
ಕರ್ನಾಟಕ2 hours ago

Self Harming: ಡೆತ್‌ ನೋಟ್‌ ಬರೆದಿಟ್ಟು ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

PR Sreejesh
ಕ್ರೀಡೆ2 hours ago

PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

Vinesh Phogat
ಕ್ರೀಡೆ3 hours ago

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

Tungabhadra Dam
ಕರ್ನಾಟಕ3 hours ago

Tungabhadra Dam: ತುಂಗಭದ್ರಾ ಡ್ಯಾಂ ಗೇಟು ದುರಸ್ತಿಗೆ ಉನ್ನತ ಮಟ್ಟದ ತಂತ್ರಜ್ಞರ ತಂಡ: ಡಿ.ಕೆ. ಶಿವಕುಮಾರ್

Paris Olympics 2024
ಕ್ರೀಡೆ3 hours ago

Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

Yakshagana Dance
ಬೆಂಗಳೂರು4 hours ago

Yakshagana Dance : ಯಕ್ಷಗಾನ ಕಲೆ ಪುರುಷರಿಗಷ್ಟೇ ಸೀಮಿತವಲ್ಲ: ಡಾ. ಧರಣೀದೇವಿ ಮಾಲಗತ್ತಿ

Road Accident
ಕರ್ನಾಟಕ4 hours ago

Road Accident: ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಟೆಂಪೋಗೆ ಕ್ಯಾಂಟರ್‌ ಡಿಕ್ಕಿ; ಮೂವರ ದುರ್ಮರಣ, ಐವರ ಸ್ಥಿತಿ ಗಂಭೀರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌