Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ - Vistara News

ದೇಶ

Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

Hindenburg Report : ಹಿಂಡೆನ್​ಬರ್ಗ್​​ ರಿಸರ್ಚ್ ಶನಿವಾರ ರಾತ್ರಿ ಹೊಸ ವರದಿ ಬಿಡುಗಡೆ ಮಾಡಿದ್ದು, ಅದಾನಿ ಗ್ರೂಪ್ ವಿರುದ್ಧ ಕ್ರಮ ಕೈಗೊಳ್ಳಲು ಸೆಬಿ ಸಿದ್ಧರಿಲ್ಲ ಎಂದು ಶಂಕಿಸಿದೆ. “ಸಣ್ಣ ಚಿಲ್ಲರೆ ಹೂಡಿಕೆದಾರರ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ಸೆಕ್ಯುರಿಟೀಸ್ ನಿಯಂತ್ರಕ ಸೆಬಿಯು ಅದರ ಅಧ್ಯಕ್ಷರ ವಿರುದ್ಧದ ಆರೋಪಗಳನ್ನು ನಿರ್ಲಕ್ಷಿಸುತ್ತಿದೆ ” ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

VISTARANEWS.COM


on

Hindenburg Report
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸೆಬಿ ಅಧ್ಯಕ್ಷೆ ಮಾಧಾಬಿ ಬುಚ್ ವಿರುದ್ಧ ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್​ಬರ್ಗ್​​ ರಿಸರ್ಚ್ ಮಾಡಿರುವ ಹೊಸ ವರದಿ (Hindenburg Report) ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ. ಸೆಕ್ಯುರಿಟೀಸ್ ನಿಯಂತ್ರಕದ ಸಮಗ್ರತೆಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆರೋಪಗಳ ವಿರುದ್ಧ ಜಂಟಿ ಸಂಸದೀಯ ಸಮಿತಿ (JPC) ತನಿಖೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಏಕೆ ಹೆದರುತ್ತಾರೆ ಎಂಬುದನ್ನು ಈ ವರದಿ ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಹಿಂಡೆನ್​ಬರ್ಗ್​​ ರಿಸರ್ಚ್ ಶನಿವಾರ ರಾತ್ರಿ ಹೊಸ ವರದಿ ಬಿಡುಗಡೆ ಮಾಡಿದ್ದು, ಅದಾನಿ ಗ್ರೂಪ್ ವಿರುದ್ಧ ಕ್ರಮ ಕೈಗೊಳ್ಳಲು ಸೆಬಿ ಸಿದ್ಧರಿಲ್ಲ ಎಂದು ಶಂಕಿಸಿದೆ. “ಸಣ್ಣ ಚಿಲ್ಲರೆ ಹೂಡಿಕೆದಾರರ ಸಂಪತ್ತನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ಸೆಕ್ಯುರಿಟೀಸ್ ನಿಯಂತ್ರಕ ಸೆಬಿಯು ಅದರ ಅಧ್ಯಕ್ಷರ ವಿರುದ್ಧದ ಆರೋಪಗಳನ್ನು ನಿರ್ಲಕ್ಷಿಸುತ್ತಿದೆ ” ಎಂದು ರಾಹುಲ್ ಗಾಂಧಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಸೆಬಿ ಅಧ್ಯಕ್ಷರು ಇನ್ನೂ ಏಕೆ ರಾಜೀನಾಮೆ ನೀಡಿಲ್ಲ ಎಂದು ದೇಶಾದ್ಯಂತದ ಹೂಡಿಕೆದಾರರು ತಿಳಿಯಲು ಬಯಸುತ್ತಾರೆ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ. “ದೇಶಾದ್ಯಂತದ ಪ್ರಾಮಾಣಿಕ ಹೂಡಿಕೆದಾರರು ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸೆಬಿ ಅಧ್ಯಕ್ಷೆ ಮಾಧಾಬಿ ಪುರಿ ಬುಚ್ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ? ಹೂಡಿಕೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಂಡರೆ ಯಾರು ಜವಾಬ್ದಾರರು. ಪ್ರಧಾನಿ ಮೋದಿ, ಸೆಬಿ ಅಧ್ಯಕ್ಷರು ಅಥವಾ ಗೌತಮ್ ಅದಾನಿಯೇ? ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಮತ್ತೊಮ್ಮೆ ಸ್ವಯಂಪ್ರೇರಿತವಾಗಿ ಪರಿಶೀಲಿಸುತ್ತದೆಯೇ ಎಂದು ರಾಹುಲ್​ ಹೇಳಿದ್ದಾರೆ.

“ಜೆಪಿಸಿ ತನಿಖೆಗೆ ಪ್ರಧಾನಿ ಮೋದಿ ಏಕೆ ಹೆದರುತ್ತಾರೆ ಎಂಬುದು ಸ್ಪಷ್ಟವಾಗಿದೆ. ಅದು ಸತ್ಯ ಬಹಿರಂಗಪಡಿಸಬಹುದು ಎಂಬುದು ಸ್ಪಷ್ಟವಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: Hindenburg Report : ಹುರುಳಿಲ್ಲದ ಆರೋಪ; ಹಿಂಡೆನ್​ಬರ್ಗ್​ ವರದಿ ಬಗ್ಗೆ ಸೆಬಿ ಸ್ಪಷ್ಟನೆ

ಬುಚ್ ಮತ್ತು ಅವರ ಪತಿ ಬರ್ಮುಡಾ ಮತ್ತು ಮಾರಿಷಸ್ ಮೂಲದ ವಿದೇಶಗಳ ನಿಧಿಗಳಲ್ಲಿ ರಹಸ್ಯವಾಗಿ ಹೂಡಿಕೆ ಮಾಡಿದ್ದಾರೆ ಎಂದು ಹಿಂಡೆನ್ಬರ್ಗ್ ರಿಸರ್ಚ್ ಆರೋಪಿಸಿದೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿ ಅವರು ರೌಂಡ್ ಟ್ರಿಪ್ಪಿಂಗ್ ಫಂಡ್​ಗಳ ಮೂಲಕ ಷೇರು ಬೆಲೆಗಳನ್ನು ಹೆಚ್ಚಿಸಲು ಬಳಸುತ್ತಿದ್ದರು ಎಂದು ವರದಿಯಲ್ಲಿದೆ.

ವರದಿಯನ್ನು ‘ಪಿತೂರಿ’ ಎಂದ ಬಿಜೆಪಿ

ಭಾರತದಲ್ಲಿ ಆರ್ಥಿಕ ಅಸ್ಥಿರತೆ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪಿತೂರಿ ನಡೆಸುತ್ತಿವೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ. ಸೆಬಿ ಅಧ್ಯಕ್ಷರ ವಿರುದ್ಧದ ಹಿಂಡೆನ್​ಬರ್ಗ್​​ ಅವರ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಇದು ಹಣಕಾಸು ಕಾವಲುಗಾರನ ವಿಶ್ವಾಸಾರ್ಹತೆ ದುರ್ಬಲಗೊಳಿಸುವ ಪ್ರಯತ್ನ ಎಂದಿದೆ.

“ಕಳೆದ ವರ್ಷ ಅದಾನಿ ಗ್ರೂಪ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಹಿಂಡೆನ್​ಬರ್ಗ್​​. ಭಾರತೀಯ ತನಿಖಾ ಸಂಸ್ಥೆಗಳಿಂದ ವಿಚಾರಣೆ ಎದುರಿಸುತ್ತಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ತಿಳಿಸಿದ್ದಾರೆ.

“ವಿರೋಧ ಪಕ್ಷಗಳು ಅದರ ಆರೋಪವನ್ನು ಪ್ರತಿಧ್ವನಿಸುತ್ತಿವೆ. ಪಿತೂರಿ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅವರು ಅವ್ಯವಸ್ಥೆ ಮತ್ತು ಅಸ್ಥಿರತೆ ಸೃಷ್ಟಿಸಲು ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Farooq Abdullah : ಗಡಿಯಲ್ಲಿನ ಭಯೋತ್ಪಾದನಾ ಕೃತ್ಯಗಳಲ್ಲಿ ಉಗ್ರರು, ಸೇನೆ ಶಾಮೀಲು; ವಿವಾದದ ಕಿಡಿ ಹೊತ್ತಿಸಿದ ಫಾರೂಕ್ ಅಬ್ದುಲ್ಲಾ

Farooq Abdullah:

VISTARANEWS.COM


on

Farooq Abdullah
Koo

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಗಡಿ ಹಾಗೂ ಜಮ್ಮಿ ಕಾಶ್ಮೀರ ನೆಲದಲ್ಲಿ ಭಯೋತ್ಪಾದನಾ ಕೃತ್ಯಗಳು ಹೆಚ್ಚಲು ಉಗ್ರರೊಂದಿಗೆ ಸೇನೆ ಶಾಮೀಲಾಗಿರುವುದೇ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ (NC) ಮುಖ್ಯಸ್ಥ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಭಾನುವಾರ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಗಡಿಯಲ್ಲಿ ನುಸುಳುವ ಭಯೋತ್ಪಾದಕರೊಂದಿಗೆ ಸೇನೆಯು ಕೈ ಜೋಡಿಸಿದೆ ಎಂದು ಅವರು ನೇರವಾಗಿ ಆರೋಪಿಸಿದ್ದಾರೆ.

ಸೇನಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಒಳ ಒಪ್ಪಂದ ಇದೆ. ಹೀಗಾಗಿಯೇ ಗಡಿಯಲ್ಲಿ ಭಾರಿ ಸಂಖ್ಯೆಯ ಸಿಬ್ಬಂದಿಯ ನಿಯೋಜನೆಯ ಹೊರತಾಗಿಯೂ ಅವರು ಉಗ್ರರು ಭಾರತವನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ನಮ್ಮ ಗಡಿಗಳಲ್ಲಿ ಬೃಹತ್ ಸೈನ್ಯ ನಿಯೋಜನೆ ಇದೆ. ಇದು ವಿಶ್ವದಲ್ಲೇ ಅತಿದೊಡ್ಡದು. ಆದರೂ ಭಯೋತ್ಪಾದಕರು ಭಾರತೀಯ ಭೂಪ್ರದೇಶಕ್ಕೆ ನುಸುಳುತ್ತಲೇ ಇದ್ದಾರೆ. ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಗಡಿಯಲ್ಲಿ ಸೇನೆಯನ್ನು ದೊಡ್ಡ ಪ್ರಮಾಣದಲ್ಲಿ ನಿಯೋಜಿಸಿದರೂ ಇದು ಹೇಗೆ ಸಾಧ್ಯ? ಅವರ ನಡುವೆ ಒಳಸಂಚು ಇದೆ ಎಂದು ಅಬ್ದುಲ್ಲಾ ಹೇಳಿದರು.

ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್​​ ಜಿಲ್ಲೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಈ ಗಂಭೀರ ಆರೋಪ ಮಾಡಿದ್ದಾರೆ. ಭಾರೀ ಪ್ರಮಾಣದ ಮಾದಕವಸ್ತುಗಳು ಮತ್ತು ಭಯೋತ್ಪಾದಕರು ದೇಶವನ್ನು ಹೇಗೆ ಪ್ರವೇಶಿಸುತ್ತಿದ್ದಾರೆ ಎಂಬುದರ ಬಗ್ಗೆ ಉತ್ತರ ಮಾತ್ರ ಬಯಸುತ್ತೇನೆ ಎಂದು ಅಬ್ದುಲ್ಲಾ ಕೇಳಿದ್ದಾರೆ.

ಇದನ್ನೂ ಓದಿ: Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

ಗಡಿ ರಕ್ಷಣೆ ಕೇಂದ್ರ ಸರ್ಕಾರದ ವಿಷಯವಾಗಿದೆ. ನಮ್ಮ ಗೃಹ ಸಚಿವರು ಮತ್ತು ರಕ್ಷಣಾ ಸಚಿವರು ಈ ಬಗ್ಗೆ ಮಾತನಾಡಬೇಕು” ಎಂದು ಅವರು ಹೇಳಿದ್ದಾರೆ.

“ಸುಮಾರು 200ರಿಂದ300 ಉಗ್ರರು ಹೇಗೆ ಭಾರತಕ್ಕೆ ಬಂದಿದ್ದಾರೆ. ಅವರು ಎಲ್ಲಿಂದ ಬಂದರು? ಇದಕ್ಕೆ ಯಾರು ಜವಾಬ್ದಾರರು. ಕೇಂದ್ರ ಸರ್ಕಾರವು ಇಡೀ ದೇಶಕ್ಕೆ ಉತ್ತರಿಸಬೇಕು” ಎಂದು ಅವರು ಪ್ರಶ್ನಿಸಿದ್ದಾರೆ.

ಗುಲಾಂ ನಬಿ ಆಜಾದ್ ನೇತೃತ್ವದ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ ಆರೋಪಗಳು “ದುರದೃಷ್ಟಕರ” ಎಂದು ಹೇಳಿದೆ.

ಸೇನೆಯ ಶೌರ್ಯ ಪ್ರಶ್ನಾತೀತ

ಫಾರೂಕ್ ಅಬ್ದುಲ್ಲಾ ಹಿರಿಯ ರಾಜಕಾರಣಿ ಮತ್ತು ಅವರು ಭಾರತೀಯ ಸೇನೆಯ ಶೌರ್ಯವನ್ನು ಪ್ರಶ್ನಿಸಿರುವುದು ತುಂಬಾ ದುರದೃಷ್ಟಕರ. ಇದು ದೇಶಕ್ಕಾಗಿ ಅಂತಿಮ ತ್ಯಾಗ ಮಾಡುವ ಭಾರತೀಯ ಸೇನೆಯ ಧೈರ್ಯಶಾಲಿ ಸೈನಿಕರ ತ್ಯಾಗವನ್ನು ಪ್ರಶ್ನಿಸುವಂತಿದೆ” ಎಂದು ಹೇಳಿದ್ದಾರೆ.

ಅನಂತ್​ನಾಗ್​​ ಜಿಲ್ಲೆಯ ಅಹ್ಲಾನ್ ಗಗರ್ಮಾಂಡು ಅರಣ್ಯ ಪ್ರದೇಶದಲ್ಲಿ ಶನಿವಾರ 10,000 ಅಡಿ ಎತ್ತರದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ ಒಂದು ದಿನದ ನಂತರ ಫಾರೂಕ್ ಅಬ್ದುಲ್ಲಾ ಈ ಹೇಳಿಕೆ ನೀಡಿದ್ದಾರೆ.

ಕೊಕರ್ನಾಗ್ ಬೆಲ್ಟ್​​​ನ ದೂರದ ಅಹ್ಲಾನ್ ಗಗರ್ಮಾಂಡು ಅರಣ್ಯದಲ್ಲಿ ಭಯೋತ್ಪಾದಕರ ಉಪಸ್ಥಿತಿಯನ್ನು ಸೂಚಿಸುವ ಗುಪ್ತಚರ ವರದಿಗಳ ಆಧಾರದ ಮೇಲೆ ಭದ್ರತಾ ಪಡೆಗಳು ಪ್ರಾರಂಭಿಸಿದ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯ ಸಮಯದಲ್ಲಿ ಶನಿವಾರ ಸಂಜೆ ಗುಂಡಿನ ಚಕಮಕಿ ಪ್ರಾರಂಭವಾಯಿತು.

Continue Reading

ಪ್ರಮುಖ ಸುದ್ದಿ

Hindenburg Report : ಹುರುಳಿಲ್ಲದ ಆರೋಪ; ಹಿಂಡೆನ್​ಬರ್ಗ್​ ವರದಿ ಬಗ್ಗೆ ಸೆಬಿ ಸ್ಪಷ್ಟನೆ

Hindenburg report : ಆರ್​ಇಐಟಿ ನಿಯಮಗಳು, 2014 ಅನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಸೆಬಿ, ಹೇಳಿದೆ. “ಅಸ್ತಿತ್ವದಲ್ಲಿರುವ ನಿಯಂತ್ರಣಕ್ಕೆ ಹೊಸ ನಿಯಂತ್ರಣ ಅಥವಾ ತಿದ್ದುಪಡಿ ಪರಿಚಯಿಸುವ ಎಲ್ಲಾ ಪ್ರಕರಣಗಳಂತೆ ಇಲ್ಲೂ ಸಮಾಲೋಚನೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸೆಬಿ ಹೇಳಿಕೆಯಲ್ಲಿ ತಿಳಿಸಿದೆ.

VISTARANEWS.COM


on

Hindenburg report
Koo

ಬೆಂಗಳೂರು: ಸೆಕ್ಯುರಿಟೀಸ್ ಆ್ಯಂಡ್​ ಎಕ್ಸ್​ಚೇಂಜ್​ ಬೋರ್ಡ್ ಆಫ್ ಇಂಡಿಯಾ (SEBI) ಅಧ್ಯಕ್ಷೆ ಅಧ್ಯಕ್ಷೆ ಮಾಧಾಬಿ ಬುಚ್ ಅವರ ಪತಿ ಧವಳ್ ಬುಚ್ ಕೆಲಸ ಮಾಡುತ್ತಿದ್ದ ಬಹುರಾಷ್ಟ್ರೀಯ ಕಂಪನಿಗೆ ನೆರವಾಗುವ ಉದ್ದೇಶದಿಂದ ರಿಯಲ್ ಎಸ್ಟೇಟ್ ಇನ್ವೆಸ್ಟ್​​ಮೆಂಟ್​ ಟ್ರಸ್ಟ್ (ಆರ್​ಇಐಟಿ) ನಿಯಮಗಳಲ್ಲಿ ಮಾರ್ಪಾಟು ಮಾಡಲಾಗಿದೆ ಎಂದು ಅಮೆರಿಕದ ಮೂಲಕ ಹಿಂಡೆನ್​ಬರ್ಗ್ ರಿಸರ್ಚ್ (Hindenburg Report) ಮಾಡಿರುವ ಆರೋಪಗಳನ್ನು ತಿರಸ್ಕರಿಸಿದೆ. ಸೆಬಿ ಭಾನುವಾರ ಈ ಕುರಿತು ವಿಸ್ತೃತ ಹೇಳಿಕೆ ನೀಡಿದೆ.

ಭಾರತದಲ್ಲಿ ಸೆಬಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದಕ್ಕೆ ಸಮಗ್ರ ಸಮಾಲೋಚನೆಯ ಬಳಿಕವೇ ಆರ್​ಇಐಟಿ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಹೀಗಾಗಿ ಹಿಂಡೆನ್​ಬರ್ಗ್​​ ಆರೋಪಗಳು “ಸೂಕ್ತವಲ್ಲ” ಎಂದು ಹೇಳಿದೆ.

ಮಾಧಾಬಿ ಬುಚ್ ಸೆಬಿಯಲ್ಲಿ ಪೂರ್ಣಾವಧಿ ಸದಸ್ಯರಾಗಿದ್ದ ಅವಧಿಯಲ್ಲಿ, ರಿಯಲ್ ಎಸ್ಟೇಟ್ ಅಥವಾ ಬಂಡವಾಳ ಮಾರುಕಟ್ಟೆಗಳಲ್ಲಿ ಅವರು ಅನುಭವ ಹೊಂದಿರದ ಅವರ ಪತಿ ಧವಳ್ ಬುಚ್ ಅವರನ್ನು ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಯಾದ ಬ್ಲ್ಯಾಕ್​ಸ್ಟೋನ್​ಗೆ ಹಿರಿಯ ಸಲಹೆಗಾರರಾಗಿ ನೇಮಿಸಲಾಗಿದೆ ಎಂದು ಅಮೆರಿಕದ ಕಿರು ಮಾರಾಟ ಸಂಸ್ಥೆ ಹಿಂಡೆನ್​ಬರ್ಗ್​​ ರಿಸರ್ಚ್ ಶನಿವಾರ ಆರೋಪಿಸಿತ್ತು. ಆದರೆ ಸೆಬಿ ತನ್ನ ಹೇಳಿಕೆಯಲ್ಲಿ ವರದಿಯ ಹೇಳಿಕೆಯನ್ನು ವಿರೋಧಿಸಿದ್ದು, ಧವಳ್​ ಬ್ಲ್ಯಾಕ್​ಸ್ಟೋನ್​ ರಿಯಲ್ ಎಸ್ಟೇಟ್​ನೊಂದಿಗೆ ಸಂಬಂಧ ಹೊಂದಿಲ್ಲ” ಎಂದು ಹೇಳಿದೆ.

ಆರ್​ಇಐಟಿ ನಿಯಮಗಳು, 2014 ಅನ್ನು ಕಾಲಕಾಲಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಸೆಬಿ, ಹೇಳಿದೆ. “ಅಸ್ತಿತ್ವದಲ್ಲಿರುವ ನಿಯಂತ್ರಣಕ್ಕೆ ಹೊಸ ನಿಯಂತ್ರಣ ಅಥವಾ ತಿದ್ದುಪಡಿ ಪರಿಚಯಿಸುವ ಎಲ್ಲಾ ಪ್ರಕರಣಗಳಂತೆ ಇಲ್ಲೂ ಸಮಾಲೋಚನೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಸೆಬಿ ಹೇಳಿಕೆಯಲ್ಲಿ ತಿಳಿಸಿದೆ.

ಸಮಾಲೋಚನೆಯ ನಂತರವೇ, ಹೊಸ ನಿಯಂತ್ರಣ ಪರಿಚಯಿಸುವ ಅಥವಾ ಅಸ್ತಿತ್ವದಲ್ಲಿರುವ ನಿಯಂತ್ರಣದಲ್ಲಿ ಬದಲಾವಣೆ ಪರಿಚಯಿಸುವ ಪ್ರಸ್ತಾಪ ಸೆಬಿ ಮಂಡಳಿಯ ಪರಿಗಣನೆ ಮತ್ತು ಚರ್ಚೆಗಾಗಿ ಇಡಲಾಗುತ್ತದೆ ಎಂದು ಸೆಬಿ ಹೇಳಿದೆ.

ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಮಂಡಳಿಯ ಸಭೆಗಳ ಕಾರ್ಯಸೂಚಿಗಳು ಮತ್ತು ಚರ್ಚೆಗಳ ಫಲಿತಾಂಶಗಳನ್ನು ಸೆಬಿ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ. ಆರ್​ಇಐಟಿಗಳಿಗೆ ಸಂಬಂಧಿಸಿದಂತೆ ಹೊರಡಿಸಲಾದ ನಿಯಮಗಳ ಬದಲಾವಣೆಗಳು ಅಥವಾ ಸುತ್ತೋಲೆಗಳು ಒಂದು ದೊಡ್ಡ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗೆ ಅನುಕೂಲಕರವಾಗಿವೆ ಎಂಬ ಹೇಳಿಕೆಗಳು ಸೂಕ್ತವಲ್ಲ” ಎಂದು ಅದು ಹೇಳಿದೆ.

ಇದನ್ನೂ ಓದಿ: Paris Olympics 2024 : ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್​ ಟವರ್​ ಏರಿ ಕುಳಿತ ಆಗಂತುಕ!

“ಆದ್ದರಿಂದ, ಆರ್​ಇಐಟಿಗಳು ಮತ್ತು [ಸಣ್ಣ ಮತ್ತು ಮಧ್ಯಮ] ಎಸ್ಎಂ ಆರ್​ಇಐಟಿಗಳನ್ನು ಸೆಬಿಯು ಇತರ ಆಸ್ತಿ ವರ್ಗಗಳಲ್ಲಿ ಉತ್ತೇಜಿಸುವುದು ಒಂದು ದೊಡ್ಡ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗೆ ಲಾಭ ಪಡೆಯಲು ಮಾತ್ರ ಎಂಬ ಹೇಳಿಕೆಯು ಸೂಕ್ತವಲ್ಲ” ಎಂದು ಹೇಳಿಕೆಯಲ್ಲಿ ಪ್ರತಿಪಾದಿಸಲಾಗಿದೆ.

ಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಆಂತರಿಕ ಕಾರ್ಯವಿಧಾನಗಳನ್ನು ಹೊಂದಿದೆ ಎಂದು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಒತ್ತಿಹೇಳಿದೆ.

Continue Reading

ಪ್ರಮುಖ ಸುದ್ದಿ

Bomb threat : ಏರ್​ಪೋರ್ಟ್​​ ಬ್ಯಾಗ್ ಚೆಕಿಂಗ್​ ವೇಳೆ ತಮಾಷೆಗೆ ‘ಬಾಂಬ್​ ಇದೆ’ ಅಂದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು!

Bomb threat:

VISTARANEWS.COM


on

Bomb threat
Koo

ಬೆಂಗಳೂರು : ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದ ವ್ಯಕ್ತಿಯೊಬ್ಬರು ಬ್ಯಾಗೇಜ್ ಚೆಕಿಂಗ್ ವೇಳೆ ತಮಾಷೆಗಾಗಿ ತಮ್ಮ ಬ್ಯಾಗ್​ನಲ್ಲಿ ಬಾಂಬ್​ ಇದೆ (Bomb threat) ಎಂದು ಹೇಳಿ ಜೈಲು ಸೇರುವಂತಾಗಿದೆ. ಕೇರಳದ ಕೊಚ್ಚಿನ್​ ಏರ್​ಪೋರ್ಟ್​​ನಲ್ಲಿ ಈ ಪ್ರಸಂಗ ನಡೆದಿದೆ. ಸೆಕ್ಯುರಿಟಿ ಚೆಕ್​ಇನ್ ಅಧಿಕಾರಿಗಳು ತಮ್ಮ ಬ್ಯಾಗ್ ತಪಾಸಣೆ ಮಾಡುತ್ತಿದ್ದ ವೇಳೆ, ತನ್ನ ಬ್ಯಾಗ್​ನಲ್ಲಿ ಏನೂ ಬಾಂಬ್ ಇಲ್ವಲ್ಲಾ, ಎಂದು ಹೇಳುವ ಮೂಲಕ ತಾನೇ ಅನಾಹುತ ಸೃಷ್ಟಿಸಿಕೊಂಡಿದ್ದಾನೆ.

ಆಗಸ್ಟ್ 11 ರಂದು ಕೊಚ್ಚಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ. 42 ವರ್ಷದ ಮನೋಜ್ ಕುಮಾರ್ ಕೊಚ್ಚಿಯಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಅವರ ಹೇಳಿಕೆ ಕಳವಳಕ್ಕೆ ಕಾರಣವಾಯಿತು. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಅವರ ಕ್ಯಾಬಿನ್ ಮತ್ತು ಸಾಮಾನುಗಳನ್ನು ಸಂಪೂರ್ಣವಾಗಿ ಶೋಧಿಸಿತು. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗದಿದ್ದರೂ, ಕುಮಾರ್ ಅವರನ್ನು ವಿಮಾನದಿಂದ ಇಳಿಸಿ ಕರೆದೊಯ್ದು ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಮಾನ ಹೊರಟರೂ ಅವರಿಗೆ ಪ್ರಯಾಣ ಮಾಡಲು ಅವಕಾಶ ಕೊಡಲಿಲ್ಲ.!

ಹೆಚ್ಚು ಭದ್ರತೆಗೆ ಒಳಪಡುವ ಪ್ರದೇಶದಲ್ಲಿ ಬಾಂಬ್ ನಂತಹ ಅಪಾಯಕಾರಿ ವಿಷಯದ ಬಗ್ಗೆ ಮಾತನಾಡಬಾರದು ಎಂಬುದಕ್ಕೆ ಇದೊಂದು ಉದಾಹರಣೆ. ಇಂಥ ಮಾತುಗಳನ್ನು ಹೇಳುವುದು ಕಾನೂನುಬಾಹಿರ ಮತ್ತು ಗಂಭೀರ ಅಪರಾಧ. ಭಾರತದಲ್ಲಿ ವಿಮಾನ ಭದ್ರತಾ ಮಾನದಂಡಗಳನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ಹೊಂದಿರುವ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಇಂಥವುಗಳನ್ನು ಗಂಭೀರವಾಗಿ ಪರಿಗಣಿಸುತ್ತದೆ. ತಮಾಷೆಯೂ ಗಮನಾರ್ಹ ವಿಳಂಬಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಅಂಥವರನ್ನು ತಕ್ಷಣವೇ ಬಂಧಿಸುತ್ತಾರೆ.

ಪ್ರಯಾಣ ಮಾಡುವಾಗ ಜತೆಗಿರುವ ಮಗು ಆ ರೀತಿ ಹೇಳಿದರೂ, ಅದು ಇಡೀ ವಿಮಾನ ಹಾರಾಟವನ್ನು ವಿಳಂಬವನ್ನು ಉಂಟುಮಾಡಬಹುದು. ಪ್ರಮುಖವಾಗಿ ವಿಮಾನ ನಿಲ್ದಾಣಗಳಲ್ಲಿ “ಬಾಂಬ್” ಅಥವಾ “ಹೈಜಾಕ್” ನಂತಹ ಪದಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತದೆ.

ಸಿಎಸ್ಎಂಟಿಗೆ ಬಾಂಬ್ ಬೆದರಿಕೆ

ಆಗಸ್ಟ್ 9 ರಂದು ಮುಂಬೈ ಪೊಲೀಸರಿಗೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (ಸಿಎಸ್ಎಂಟಿ) ನಲ್ಲಿ ಬಾಂಬ್​ಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಕರೆ ಬಂದಿತ್ತು. ಈ ಪ್ರದೇಶವನ್ನು ತ್ವರಿತವಾಗಿ ಶೋಧಿಸಿದ ನಂತರ ಅಧಿಕಾರಿಗಳು ಯಾವುದೇ ಸ್ಫೋಟಕಗಳನ್ನು ಪತ್ತೆ ಮಾಡಿಲರಿಲ್ಲ. ಪೊಲೀಸರು ಕರೆ ಮಾಡಿದವರನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: veg vs non veg : ಮಕ್ಕಳ ಬಾಕ್ಸ್​​ನಲ್ಲಿ ಮಾಂಸಾಹಾರ ಕಳುಹಿಸಬಾರದು; ವಿವಾದ ಸೃಷ್ಟಿಸಿದ ಶಾಲೆಯ ನೋಟಿಸ್​​

“ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್​ನಲ್ಲಿ (ಸಿಎಸ್ಎಂಟಿ) ಆರ್ಡಿಎಕ್ಸ್ ಇರಿಸಿರುವ ಬಗ್ಗೆ ಜಿಆರ್​​ಪಿ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಸಿಎಸ್ಎಂಟಿಯಲ್ಲಿ ಆರ್​ಡಿಎಕ್ಸ್​ ಇರಿಸಲಾಗಿದೆ ಎಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿದ್ದಾರೆ ಎಂದು ಮುಂಬೈ ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಕರೆ ಸ್ವೀಕರಿಸಿದ ನಂತರ ರೈಲ್ವೆ ಪೊಲೀಸರು ಸ್ಥಳೀಯ ಪೊಲೀಸರು ಮತ್ತು ಬಾಂಬ್ ಸ್ಕಾಡ್​ಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

Continue Reading

ಪ್ರಮುಖ ಸುದ್ದಿ

veg vs non veg : ಮಕ್ಕಳ ಬಾಕ್ಸ್​​ನಲ್ಲಿ ಮಾಂಸಾಹಾರ ಕಳುಹಿಸಬಾರದು; ವಿವಾದ ಸೃಷ್ಟಿಸಿದ ಶಾಲೆಯ ನೋಟಿಸ್​​

veg vs non veg : ಘಟನೆ ನಡೆದಿರುವುದು ನೋಯ್ಡಾದ ಖಾಸಗಿ ಶಾಲೆಯೊಂದರಲ್ಲಿ, ಮಕ್ಕಳ ಟಿಫಿನ್​ ಬಾಕ್ಸ್​ಗಳಲ್ಲಿ ಮಾಂಸಾಹಾರಿ ಆಹಾರವನ್ನು ಪ್ಯಾಕ್ ಮಾಡಬೇಡಿ ಎಂದು ವಾಟ್ಸಾಪ್ ಮೂಲಕ ಪೋಷಕರಿಗೆ ಸುತ್ತೋಲೆ ಕಳುಹಿಸಲಾಗಿದೆ. ನೋಯ್ಡಾದ ಸೆಕ್ಟರ್ 132 ರಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ (ಡಿಪಿಎಸ್) ಪ್ರಾಂಶುಪಾಲರು ಈ ಸುತ್ತೋಲೆ ಹೊರಡಿಸಿದ್ದಾರೆ. ಇದು ಬಿಸಿ ಚರ್ಚೆ ಕಾರಣವಾಗಿದ್ದು, ವಿವಾದ ಭುಗಿಲೆದ್ದ ನಂತರ ಇದು ಕೇವಲ “ವಿನಂತಿ” ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

VISTARANEWS.COM


on

veg vs non veg
Koo

ಬೆಂಗಳೂರು : ಮಾಂಸಾಹಾರ ಶ್ರೇಷ್ಠವೇ, ಸಸ್ಯಾಹಾರ ಉತ್ತಮವೇ (veg vs non veg) ಎಂಬ ಚರ್ಚೆ ಭಾರತೀಯರಲ್ಲಿ ಮಾಮೂಲು. ಇದಕ್ಕೆ ಕಾರಣ ಇಲ್ಲಿನ ವೈವಿಧ್ಯಮಯ ಆಹಾರ ಶೈಲಿ. ಅಪ್ಪಟ ಸಸ್ಯಾಹಾರಿಗಳು ಇದ್ದಷ್ಟೇ. ನಾನ್​ವೆಜ್​ ಇಲ್ಲದೇ ಊಟ ಸೇರುವುದೇ ಇಲ್ಲ ಎಂದು ಹೇಳುವ ಮಂದಿಯೂ ಇದ್ದಾರೆ. ಇಲ್ಲಿ ಯಾವುದೇ ಉತ್ತಮ ಎಂಬ ಚರ್ಚೆಗೆ ತುದಿ, ಮೊದಲಿಲ್ಲ. ಹೀಗಾಗಿ ಈ ಕುರಿತ ಸಣ್ಣ ಹೇಳಿಕೆಯೂ ವಿವಾದಕ್ಕೆ ಕಾರಣವಾಗುತ್ತವೆ. ಎಲ್ಲವೂ ವಾದಕ್ಕೆ ಸೀಮಿತವಾಗುವುದೇ ಹೊರತು ಅದಕ್ಕೊಂದು ತಾರ್ಕಿಕ ಅಂತ್ಯ ತರಲು ಸಾಧ್ಯವೇ ಇಲ್ಲ. ಅಂತೆಯೇ ಖಾಸಗಿ ಶಾಲೆಯೊಂದರ ಮುಖ್ಯಸ್ಥರು ಮಕ್ಕಳ ಬುತ್ತಿಯಲ್ಲಿ ಮಾಂಸಾಹಾರದ ಅಡುಗೆಯನ್ನು ಕಳುಹಿಸಬಾರದು ಎಂದು ಪೋಷಕರಿಗೆ ಕಳುಹಿಸಿದ ಸಂದೇಶವೊಂದು ವಿವಾದಕ್ಕೆ ಕಾರಣವಾಗಿದೆ.

ಘಟನೆ ನಡೆದಿರುವುದು ನೋಯ್ಡಾದ ಖಾಸಗಿ ಶಾಲೆಯೊಂದರಲ್ಲಿ, ಮಕ್ಕಳ ಟಿಫಿನ್​ ಬಾಕ್ಸ್​ಗಳಲ್ಲಿ ಮಾಂಸಾಹಾರಿ ಆಹಾರವನ್ನು ಪ್ಯಾಕ್ ಮಾಡಬೇಡಿ ಎಂದು ವಾಟ್ಸಾಪ್ ಮೂಲಕ ಪೋಷಕರಿಗೆ ಸುತ್ತೋಲೆ ಕಳುಹಿಸಲಾಗಿದೆ. ನೋಯ್ಡಾದ ಸೆಕ್ಟರ್ 132 ರಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ (ಡಿಪಿಎಸ್) ಪ್ರಾಂಶುಪಾಲರು ಈ ಸುತ್ತೋಲೆ ಹೊರಡಿಸಿದ್ದಾರೆ. ಇದು ಬಿಸಿ ಚರ್ಚೆ ಕಾರಣವಾಗಿದ್ದು, ವಿವಾದ ಭುಗಿಲೆದ್ದ ನಂತರ ಇದು ಕೇವಲ “ವಿನಂತಿ” ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಸುತ್ತೋಲೆಯು ಬಗ್ಗೆ ಶಾಲೆಯ ಆಡಳಿತ ಮಂಡಳಿ ಎರಡು ಕಾರಣಗಳನ್ನು ಉಲ್ಲೇಖಿಸಿದೆ. ಆರೋಗ್ಯ ಮತ್ತು ಸುರಕ್ಷತೆ ಪ್ರಾಥಮಿಕ ಕಾಳಜಿ ಎಂದು ಹೇಳಿದೆ. ಮಧ್ಯಾಹ್ನದ ಊಟಕ್ಕಾಗಿ ಬೆಳಗ್ಗೆ ತಯಾರಿಸಿದ ಮಾಂಸಾಹಾರವನ್ನು ಕೊಟ್ಟರೆ ಅದು ಹಾಳಾಗಬಹುದು. ಅದು ಆರೋಗ್ಯಕ್ಕೆ ಅಪಾಯವಾಗಬಹುದು ಎಂದು ಹೇಳಿದೆ. ಅದೇ ರಿತಿ ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಗೌರವ”ದ ಮಹತ್ವ ಎಂದು ಹೇಳಿದೆ. ಪ್ರತಿಯೊಬ್ಬರೂ ಆರಾಮದಾಯಕ ವಾತಾವರಣವನ್ನು ಒದಗಿಸುವತ್ತ ಗಮನ ಹರಿಸಲಾಗಿದೆ. ಇದರಿಂದಾಗಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಆಹಾರ ಆದ್ಯತೆಗಳನ್ನು ಲೆಕ್ಕಿಸದೆ ಒಟ್ಟಿಗೆ ಕುಳಿತು ತಮ್ಮ ಊಟ ತಿನ್ನಲು ಸಾಧ್ಯ ಎಂದು ಹೇಳಲಾಗಿದೆ.

ಇದನ್ನೂ ಓದಿ: Claudia Mancinelli : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕಂಡ ಈ ಸುಂದರಿ ಜಿಮ್ನಾಸ್ಟಿಕ್​ ಕೋಚ್​​ ಈಗ ಇಂಟರ್ನೆಟ್​ ಸೆನ್ಷೇಷನ್​

ಈ ಸುತ್ತೋಲೆಯು ಪೋಷಕರಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ವರದಿಗಳ ಪ್ರಕಾರ, ಕೆಲವರು ಸಾಂಸ್ಕೃತಿಕ ಮತ್ತು ಆರೋಗ್ಯ ಪರಿಗಣನೆಗಳನ್ನು ಉಲ್ಲೇಖಿಸಿ ಇದರ ಪರವಾಗಿದ್ದಾರೆ, ಇತರರು ಇದು ತಮ್ಮ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿದೆ ಎಂದು ವಾದಿಸಿದ್ದಾರೆ.

Continue Reading
Advertisement
Paris Olympics 2024
ಕ್ರೀಡೆ1 hour ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ ಮುಕ್ತಾಯ; ಅಮೆರಿಕಕ್ಕೆ ಅಗ್ರಸ್ಥಾನ; ಚೀನಾಕ್ಕೆ ಎರಡನೇ ಸ್ಥಾನ

Farooq Abdullah
ಪ್ರಮುಖ ಸುದ್ದಿ2 hours ago

Farooq Abdullah : ಗಡಿಯಲ್ಲಿನ ಭಯೋತ್ಪಾದನಾ ಕೃತ್ಯಗಳಲ್ಲಿ ಉಗ್ರರು, ಸೇನೆ ಶಾಮೀಲು; ವಿವಾದದ ಕಿಡಿ ಹೊತ್ತಿಸಿದ ಫಾರೂಕ್ ಅಬ್ದುಲ್ಲಾ

Hindenburg Report
ದೇಶ2 hours ago

Hindenburg Report : ಮೋದಿ ಹೆದರುತ್ತಿದ್ದಾರೆ; ಹಿಂಡೆನ್​ಬರ್ಗ್​ ವರದಿ ಉಲ್ಲೇಖಿಸಿ ಸೆಬಿ, ಪ್ರಧಾನಿಯನ್ನು ಟೀಕಿಸಿದ ರಾಹುಲ್ ಗಾಂಧಿ

Hindenburg report
ಪ್ರಮುಖ ಸುದ್ದಿ3 hours ago

Hindenburg Report : ಹುರುಳಿಲ್ಲದ ಆರೋಪ; ಹಿಂಡೆನ್​ಬರ್ಗ್​ ವರದಿ ಬಗ್ಗೆ ಸೆಬಿ ಸ್ಪಷ್ಟನೆ

Paris Olympics 2024
ಕ್ರೀಡೆ3 hours ago

Paris Olympics 2024 : ಸಮಾರೋಪ ಸಮಾರಂಭಕ್ಕೆ ಕೆಲವೇ ಗಂಟೆಗಳ ಮೊದಲು ಐಫೆಲ್​ ಟವರ್​ ಏರಿ ಕುಳಿತ ಆಗಂತುಕ!

Self Harming
ಕರ್ನಾಟಕ4 hours ago

Self Harming: ಡೆತ್‌ ನೋಟ್‌ ಬರೆದಿಟ್ಟು ಜಮ್ಮು-ಕಾಶ್ಮೀರ ಮೂಲದ ವಿದ್ಯಾರ್ಥಿ ಆತ್ಮಹತ್ಯೆ

PR Sreejesh
ಕ್ರೀಡೆ4 hours ago

PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

Vinesh Phogat
ಕ್ರೀಡೆ4 hours ago

Vinesh Phogat : ವಿನೇಶ್​ಗೆ ಬೆಳ್ಳಿಯ ಪದಕ ನೀಡಬೇಕು; ಸೌರವ್​ ಗಂಗೂಲಿ ಆಗ್ರಹ

Tungabhadra Dam
ಕರ್ನಾಟಕ5 hours ago

Tungabhadra Dam: ತುಂಗಭದ್ರಾ ಡ್ಯಾಂ ಗೇಟು ದುರಸ್ತಿಗೆ ಉನ್ನತ ಮಟ್ಟದ ತಂತ್ರಜ್ಞರ ತಂಡ: ಡಿ.ಕೆ. ಶಿವಕುಮಾರ್

Paris Olympics 2024
ಕ್ರೀಡೆ5 hours ago

Paris Olympics 2024 : ನಮ್ಮ ರಾಜಕಾರಣಿಗಳು ಕ್ರೀಡಾಕ್ಷೇತ್ರದಲ್ಲೂ ರಾಜಕೀಯ ಮಾಡ್ತಾರೆ; ಉಕ್ರೇನ್​ ಸಂಸದ ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದಾರೆ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ3 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು5 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ5 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌