Viral Video: ಅಬ್ಬಾ...ಈತ ಮನುಷ್ಯನೋ ರಾಕ್ಷಸನೋ..? ಪತ್ನಿಯ ಕಾಲುಗಳನ್ನು ಬೈಕ್‌ಗೆ ಕಟ್ಟಿ ರೋಡಲ್ಲಿ ಎಳೆದಾಡಿದ ಪಾಪಿ ಪತಿ-ವಿಡಿಯೋ ಇದೆ - Vistara News

ವೈರಲ್ ನ್ಯೂಸ್

Viral Video: ಅಬ್ಬಾ…ಈತ ಮನುಷ್ಯನೋ ರಾಕ್ಷಸನೋ..? ಪತ್ನಿಯ ಕಾಲುಗಳನ್ನು ಬೈಕ್‌ಗೆ ಕಟ್ಟಿ ರೋಡಲ್ಲಿ ಎಳೆದಾಡಿದ ಪಾಪಿ ಪತಿ-ವಿಡಿಯೋ ಇದೆ

Viral Video: ದಂಪತಿ ನಹರ್‌ಸಿಂಗ್‌ಪುರದಲ್ಲಿ ಬಂದು ನೆಲೆಸಿದ್ದರು. ನೆರೆಹೊರೆಯವರು ಹೇಳುವ ಪ್ರಕಾರ ಇಬ್ಬರು ಸದಾ ಜಗಳವಾಡುತ್ತಿದ್ದರು. ತಿಂಗಳ ಹಿಂದೆ ಸುಮಿತ್ರಾ ಸಹೋದರಿ ಮನೆಗೆ ಹೋಗುವ ವಿಚಾರಕ್ಕೆ ಇಬ್ಬರು ನಡುವೆ ಜಗಳವಾಗಿತ್ತು ಎನ್ನಲಾಗಿದೆ. ಹೀಗಾಗಿ ಸಿಟ್ಟಿನ ಭರದಲ್ಲಿ ಮೇಘಾವಲ್‌ ಸುಮಿತ್ರಾಳ ಕಾಲನ್ನು ಬೈಕಿಗೆ ಕಟ್ಟಿ ಚಲಾಯಿಸಿದ್ದಾನೆ. ಘಟನೆಯಲ್ಲಿ ಸುಮಿತ್ರಾಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಜೈಪುರ: ಕಟ್ಟಿಕೊಂಡ ಹೆಂಡತಿಯ ಕಾಲುಗಳನ್ನು ಬೈಕ್‌ ಕಟ್ಟಿ ರಸ್ತೆಯಲ್ಲಿ ಪಾಪಿ ಪತಿಯೊಬ್ಬ ಎಳೆದಾಡಿದ ಅಮಾನುಷ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ಅಮಾನವೀಯ ಕೃತ್ಯವನ್ನು ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದು, ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ. ಇನ್ನು ನಾಗೌರ್‌ ಜಿಲ್ಲೆಯಲ್ಲಿ ಈ ಹೀನ ಕೃತ್ಯ ಒಂದು ತಿಂಗಳ ಹಿಂದೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಘಟನೆ ವಿವರ:

ಆರು ತಿಂಗಳ ಹಿಂದೆ ಆರೋಪಿ ನಹರ್‌ಸಿಂಗ್‌ಪುರ ನಿವಾಸಿ ಪ್ರೇರಮಂ ಮೇಘಾವಲ್‌ ಮತ್ತು ಸುಮಿತ್ರಾ ವಿವಾಹವಾಗಿದ್ದರು. ಬಿಹಾರ ಮೂಲದ ಸುಮಿತ್ರಾಳನ್ನು ಆಕೆಯ ಪೋಷಕರು ಅಪಾರ ವರದಕ್ಷಿಣೆ ನೀಡಿ ಮೇಘಾವಲ್‌ಗೆ ಮದುವೆ ಮಾಡಿಕೊಟ್ಟಿದ್ದರು. ಬಳಿಕ ದಂಪತಿ ನಹರ್‌ಸಿಂಗ್‌ಪುರದಲ್ಲಿ ಬಂದು ನೆಲೆಸಿದ್ದರು. ನೆರೆಹೊರೆಯವರು ಹೇಳುವ ಪ್ರಕಾರ ಇಬ್ಬರು ಸದಾ ಜಗಳವಾಡುತ್ತಿದ್ದರು. ತಿಂಗಳ ಹಿಂದೆ ಸುಮಿತ್ರಾ ಸಹೋದರಿ ಮನೆಗೆ ಹೋಗುವ ವಿಚಾರಕ್ಕೆ ಇಬ್ಬರು ನಡುವೆ ಜಗಳವಾಗಿತ್ತು ಎನ್ನಲಾಗಿದೆ. ಹೀಗಾಗಿ ಸಿಟ್ಟಿನ ಭರದಲ್ಲಿ ಮೇಘಾವಲ್‌ ಸುಮಿತ್ರಾಳ ಕಾಲನ್ನು ಬೈಕಿಗೆ ಕಟ್ಟಿ ಚಲಾಯಿಸಿದ್ದಾನೆ. ಘಟನೆಯಲ್ಲಿ ಸುಮಿತ್ರಾಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.

ಘಟನೆ ಬೆಳಕಿಗೆ ಬಂದಿದ್ದೇ ರೋಚಕ

ಇನ್ನು ಒಂದು ತಿಂಗಳ ಹಿಂದೆ ನಡೆದಿದ್ದ ಘಟನೆ ವಿಡಿಯೋ ಈಗ ವೈರಲ್‌ ಆಗುತ್ತಿದೆ. ಮೇಘವಾಲ್‌ನ ಸ್ನೇಹಿತನೇ ವಿಡಿಯೋ ಹರಿಬಿಟ್ಟಿದ್ದಾನೆ. ಈ ಘಟನೆ ನಂತರ ಮೇಘವಾಲ್‌ ತನ್ನ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದ. ಆಕೆ ಜೈಸಲ್ಮೇರ್‌ನಲ್ಲಿರುವ ತನ್ನ ಸಹೋದರಿ ಮನೆಯಲ್ಲಿ ವಾಸವಾಗಿದ್ದಾಳೆ.ಎರಡು ದಿನಗಳ ಹಿಂದೆ ಆರೋಪಿ ತನ್ನ ಸ್ನೇಹಿತನೊಂದಿಗೆ ಮದ್ಯ ಸೇವಿಸಿದ್ದ. ಇದೇ ವೇಳೆ ಸ್ನೇಹಿತರಿಬ್ಬರ ನಡುವೆ ಜಗಳ ನಡೆದಿದ್ದು, ಈ ಜಗಳದಲ್ಲಿ ಸ್ನೇಹಿತ ಆರೋಪಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ಕೆಲವೇ ಸಮಯದಲ್ಲಿ ಈ ವಿಡಿಯೋ ವೈರಲ್ ಆಗತೊಡಗಿತು. ವೀಡಿಯೋ ನೋಡಿದ ನಾಗೌರ್‌ನ ಪಂಚೌರಿ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಗುರುತಿಸಿ ಸೋಮವಾರ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಪತ್ನಿ ಇನ್ನೂ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗಾಗಿ ಪೊಲೀಸರು ತಮ್ಮ ಮಟ್ಟದಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದರೊಂದಿಗೆ ಆರೋಪಿಯ ಪತ್ನಿ ಮತ್ತು ಆತನ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ.

ಇದನ್ನೂ ಓದಿ: Viral Video: ಪ್ಯಾರಿಸ್‌ ಒಲಿಂಪಿಕ್‌ ಸಮಾರೋಪ ಸಮಾರಂಭದಲ್ಲಿ ನಟನಿಗೆ ಕಿಸ್ಸಿಂಗ್-‌ ವಿಡಿಯೋ ವೈರಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Arshad Nadeem : ಲಷ್ಕರ್ ಉಗ್ರನ ಜತೆ ಕಾಣಿಸಿಕೊಂಡ ಪಾಕಿಸ್ತಾನದ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಅರ್ಷದ್​ ನದೀಮ್​!

Arshad Nadeem : ಪುರುಷರ ಜಾವೆಲಿನ್ ಥ್ರೋ ಫೈನಲ್​ನಲ್ಲಿ ನದೀಮ್ 92.97 ಮೀಟರ್ ಎಸೆದು ಒಲಿಂಪಿಕ್ಸ್​​ ದಾಖಲೆ ನಿರ್ಮಿಸಿದ್ದರು. . 27ರ ಹರೆಯದ ನೀರಜ್ ಚೋಪ್ರಾ 89.35 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಗೆದ್ದಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ಪರಸ್ಪರ ಉತ್ತಮ ಸ್ನೇಹಿತರು ಎಂಬುದು ಒಲಿಂಪಿಕ್ಸ್​ ಬಳಿಕದ ದೊಡ್ಡ ಹೈಲೈಟ್​

VISTARANEWS.COM


on

Arshad Nadeem
Koo

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕವನ್ನು ಗೆದ್ದ ಪಾಕಿಸ್ತಾನದ ಜಾವೆಲಿನ್​ ಎಸೆತಗಾಗ ಅರ್ಷದ್ ನದೀಮ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ನಾಯಕ ಹ್ಯಾರಿಸ್ ಧರ್ ಜತೆ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಒಂದು ವರ್ಗದ ಜನರು ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನದೀಮ್ ಅವರು ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದು ತನ್ನ ದೇಶದ 32 ವರ್ಷಗಳ ಚಿನ್ನದ ಪದಕ ಬರಗಾಲವನ್ನು ಕೊನೆಗೊಳಿಸಿದ್ದರು. ಆದಾಗ್ಯೂ, ವಿಶ್ವ ಸಂಸ್ಥೆಯೇ ಭಯೋತ್ಪಾದಕ ಸಂಘಟನೆ ಎಂದು ಕರೆದಿರುವ ಲಷ್ಕರ್-ಎ-ತೈಬಾದ ನಾಯಕನ ಜತೆ ಕಾಣಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಪುರುಷರ ಜಾವೆಲಿನ್ ಥ್ರೋ ಫೈನಲ್​ನಲ್ಲಿ ನದೀಮ್ 92.97 ಮೀಟರ್ ಎಸೆದು ಒಲಿಂಪಿಕ್ಸ್​​ ದಾಖಲೆ ನಿರ್ಮಿಸಿದ್ದರು. . 27ರ ಹರೆಯದ ನೀರಜ್ ಚೋಪ್ರಾ 89.35 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಗೆದ್ದಿದ್ದಾರೆ. ಇಬ್ಬರೂ ಕ್ರೀಡಾಪಟುಗಳು ಪರಸ್ಪರ ಉತ್ತಮ ಸ್ನೇಹಿತರು ಎಂಬುದು ಒಲಿಂಪಿಕ್ಸ್​ ಬಳಿಕದ ದೊಡ್ಡ ಹೈಲೈಟ್​

ಪ್ಯಾರಿಸ್​​ನಿಂದ ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ನದೀಮ್ ಅವರಿಗೆ ಭವ್ಯ ಸ್ವಾಗತ ದೊರಕಿದೆ. ಅಲ್ಲಿನ ಸರ್ಕಾರವು ಅವರಿಗೆ ವಿಜಯ ಮೆರವಣಿಗೆಯನ್ನು ಸಹ ಆಯೋಜಿಸಿತ್ತು. ಇದಲ್ಲದೆ, ನದೀಮ್ ಅವರು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಯನ್ನೂ ಪಡೆದಿದ್ದಾರೆ. ದೊಡ್ಡ ಪ್ರಮಾಣದ ಬಹುಮಾನಗಳು ಅವರ ಕಡೆಗೆ ಬರುತ್ತಿದೆ. ಕಾರು, ಹಣ,ಪ್ರಶಸ್ತಿಗಳು ಅವರನ್ನು ಸುತ್ತುವರಿಯುತ್ತಿವೆ. ಆದರೆ ಅವರು ಲಷ್ಕರ್​ ನಾಯಕನೊಂದಿಗೆ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ಎಕ್ಸ್ನಲ್ಲಿನ ಒಎಸ್ಐಎನ್​ಟಿ (ಓಪನ್ ಸೋರ್ಸ್ ಇಂಟೆಲಿಜೆನ್ಸ್) ಖಾತೆಯು ನದೀಮ್ ಮತ್ತು ದಾರ್ ಸಂಭಾಷಣೆಯ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊದಲ್ಲಿ, ದಾರ್ ನದೀಮ್ ಅವರ ಒಲಿಂಪಿಕ್ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾನೆ. ಅಲ್ಲದೆ, ನದೀಮ್ ಸಾಧನೆಯು ಮುಸ್ಲಿಂಮರನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದ್ದಾನೆ. ದಾರ್ ಅವರ ಹೊಗಳಿಕೆ ಮತ್ತು ಇಬ್ಬರನ್ನು ಒಟ್ಟಿಗೆ ಕಾಣಿಸಿಕೊಂಡಿರುವುದು ನದೀಮ್ ಅವರ ಜಾಗತಿಕ ಮನ್ನಣೆಗೆ ಹಾನಿ ಮಾಡಲಿದೆ ಎನ್ನಲಾಗಿದೆ.

ಇದನ್ನೂ ಓದಿ: Sheikh Hasina : ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಕೊಲೆ ಕೇಸ್​ ದಾಖಲಿಸಿದ ಕೋರ್ಟ್​​

ಉಗ್ರಗಾಮಿ ಸಂಘಟನೆ

ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲ್ಪಟ್ಟಿರುವ ಲಷ್ಕರ್-ಎ-ತೈಬಾ ಹಲವಾರು ಹಿಂಸಾಚಾರ ಮತ್ತು ಭಯೋತ್ಪಾದಕ ಕೃತ್ಯಗಳೊಂದಿಗೆ ಸಂಪರ್ಕ ಹೊಂದಿದೆ. ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ನಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನ ಹೊಂದಿರುವ ಮುಹಮ್ಮದ್ ಹ್ಯಾರಿಸ್ ದಾರ್ ಎಲ್ಇಟಿಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಎಲ್ಇಟಿ ನಾಯಕ ಹಫೀಜ್ ಸಯೀದ್ ಸ್ಥಾಪಿಸಿದ ಎಂಎಂಎಲ್ ಅನ್ನು ಭಯೋತ್ಪಾದಕ ಗುಂಪಿನ ಮುಂಚೂಣಿ ಸಂಘಟನೆ ಎಂದು ಪರಿಗಣಿಸಲಾಗಿದೆ. 166 ಜನರ ಸಾವಿಗೆ ಕಾರಣವಾದ 26/11 ಮುಂಬೈ ದಾಳಿಯ ರೂವಾರಿ ಹಫೀಜ್​ ಸಯೀದ್.

2018 ರಲ್ಲಿ, ಅಮೆರಿಕ ಎಂಎಂಎಲ್ ಮತ್ತು ಅದರ ನಾಯಕತ್ವವನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿತ್ತು. ಅದರಲ್ಲಿ ಮುಹಮ್ಮದ್ ಹ್ಯಾರಿಸ್ ದಾರ್ ಕೂಡ ಇದ್ದಾನೆ. ಆತ ಎಲ್ಇಟಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಎಲ್ಇಟಿಯ ವಿದ್ಯಾರ್ಥಿ ವಿಭಾಗವಾದ ಅಲ್-ಮುಹಮ್ಮದಿಯಾ ಸ್ಟೂಡೆಂಟ್ಸ್ (ಎಎಂಎಸ್) ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆನ. ಪ್ರಥಮ ಚಿಕಿತ್ಸೆ, ಅಗ್ನಿಶಾಮಕ, ಶಸ್ತ್ರಾಸ್ತ್ರ ಕೌಶಲ್ಯಗಳು ಮತ್ತು ದಾಳಿ ತಂತ್ರಗಳನ್ನು ಒಳಗೊಂಡ ಎಲ್ಇಟಿ ಶಿಬಿರಗಳಲ್ಲಿ ದಾರ್ ತರಬೇತಿ ಪಡೆದಿದ್ದಾನೆ.

ಚಿನ್ನ ಗೆಲ್ಲುವ ವಿಶ್ವಾಸ ಇತ್ತು

ನಾನು ರಾಷ್ಟ್ರಕ್ಕೆ ಕೃತಜ್ಞನಾಗಿದ್ದೇನೆ. ಎಲ್ಲರೂ ನನಗಾಗಿ ಪ್ರಾರ್ಥಿಸಿದ್ದರು. ಮತ್ತು ನಾನು ಉತ್ತಮವಾಗಿ ಆಡುವ ಭರವಸೆ ಹೊಂದಿದ್ದೆ. ವರ್ಷಗಳಲ್ಲಿ, ನಾನು ಮೊಣಕಾಲು ಗಾಯಕ್ಕೆ ಒಳಗಾಗಿ ಚೇತರಿಸಿಕೊಂಡೆ ಮತ್ತು ನನ್ನ ಫಿಟ್ನೆಸ್​ಗಾಗಿ ಶ್ರಮಿಸಿದೆ. ನಾನು 92.97 ಮೀಟರ್ ಮೀರಿ ಎಸೆಯುವ ವಿಶ್ವಾಸದಲ್ಲಿದ್ದೆ, ಆದರೆ ಚಿನ್ನ ಗೆಲ್ಲಲು ಆ ಎಸೆತ ಸಾಕು. ನಾನು ಕಷ್ಟಪಟ್ಟು ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಮತ್ತು ಮುಂಬರುವ ದಿನಗಳು ಮತ್ತು ತಿಂಗಳುಗಳಲ್ಲಿ ನನ್ನ ಅತ್ಯುತ್ತಮವಾದದ್ದನ್ನು ನೀಡುತ್ತೇನೆ ಎಂದು ಗೆದ್ದ ಬಳಿಕ ಅರ್ಷದ್​ ಹೇಳಿದ್ದಾರೆ.

Continue Reading

Latest

Viral Video: ಒಂದು ಹಾವು, ಮೂರು ಮುಂಗುಸಿ; ಏರ್‌ಪೋರ್ಟ್‌ ರನ್‌ವೇಯಲ್ಲೇ ಫೈಟ್‌! ಸೋತಿದ್ಯಾರು? ವಿಡಿಯೊ ನೋಡಿ

Viral Video: ಇತ್ತೀಚೆಗೆ ಪಾಟ್ನಾ ವಿಮಾನ ನಿಲ್ದಾಣದ ರನ್ವೇಯಲ್ಲಿ ಮೂರು ಮುಂಗುಸಿಗಳು ಮತ್ತು ಹಾವಿನ ನಡುವೆ ದೊಡ್ಡ ಕಾಳಗ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೈರಲ್ ವಿಡಿಯೊದಲ್ಲಿ ಮೂರು ಮುಂಗುಸಿಗಳು ರನ್ ವೇ ಪಕ್ಕದಲ್ಲಿ ಹಾವನ ಜೊತೆ ಹೋರಾಡುತ್ತಿದೆ. ಮುಂಗುಸಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಹಾವು ತನ್ನ ಹಲ್ಲುಗಳನ್ನು ಮುಂದಕ್ಕೆ ಚಾಚುತ್ತಿದೆ. ಮುಂಗುಸಿಗಳು ಮತ್ತು ಹಾವು ಜಗಳವಾಡುವ ಈ ಅಪರೂಪದ ದೃಶ್ಯ ಕಂಡು ಸೋಶಿಯಲ್ ಮಿಡಿಯಾದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral Video
Koo


ಪಾಟ್ನಾ : ಹಾವು ಮತ್ತು ಮುಂಗುಸಿ ಆ ಜನ್ಮ ಶತ್ರುಗಳು ಎಂಬುದು ಎಲ್ಲರಿಗೂ ತಿಳಿದಿದೆ. ಹಾವನ್ನು ಎಲ್ಲಿ ನೋಡಿದರೂ ಮುಂಗುಸಿ ಬಿಡದೆ ಬೆನ್ನಟ್ಟಿ ಅದರ ಜೊತೆ ಸೆಣಸಾಡಿ ಅದನ್ನು ಕೊಂದು ಹಾಕಲು ಪ್ರಯತ್ನಿಸುತ್ತದೆ. ಎಷ್ಟೋ ಬಾರಿ ನಮ್ಮ ಮನೆಯ ಸುತ್ತಮುತ್ತಲೂ ಈ ರೀತಿ ಹಾವು ಮುಂಗುಸಿ ಕಾಳಗ ನಡೆದು ಅವುಗಳನ್ನು ಜನರು ಓಡಿಸುವುದನ್ನು ನಾವು ಕಂಡಿರುತ್ತೇವೆ. ಅದೇರೀತಿ ಇತ್ತೀಚೆಗೆ ಪಾಟ್ನಾ ವಿಮಾನ ನಿಲ್ದಾಣದ ರನ್ವೇಯಲ್ಲಿ ಮೂರು ಮುಂಗುಸಿಗಳು ಮತ್ತು ಹಾವಿನ ನಡುವೆ ದೊಡ್ಡ ಕಾಳಗವೇ ನಡೆದಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಈ ವೈರಲ್ ವಿಡಿಯೊದಲ್ಲಿ ಮೂರು ಮುಂಗುಸಿಗಳು ರನ್‌ವೇ ಪಕ್ಕದಲ್ಲಿ ಹಾವಿನ ಜೊತೆ ಹೋರಾಡುತ್ತಿವೆ. ಮುಂಗುಸಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಹಾವು ತನ್ನ ಹಲ್ಲುಗಳನ್ನು ಮುಂದಕ್ಕೆ ಚಾಚುತ್ತಿದೆ. ನಂತರ, ಇನ್ನೂ ಎರಡು ಮುಂಗುಸಿಗಳು ಸೇರಿಕೊಂಡು ಮೂರು ಕಡೆಯಿಂದ ಹಾವಿನ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತವೆ. ಮುಂಗುಸಿಯ ದಾಳಿಯನ್ನು ತಪ್ಪಿಸಲು ಹಾವು ಹೆಡೆ ಎತ್ತುತ್ತಿದೆ. ಆದರೆ ಮುಂಗುಸಿಗಳು ಹಾವನ್ನು ಮುಗಿಸಲೇ ಬೇಕು ಎಂದು ಪಣತೊಟ್ಟು ಅದರ ಮೇಲೆ ದಾಳಿ ಮುಂದುವರಿಸುತ್ತಿವೆ.

ಪಾಟ್ನಾದ ಜಯಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೊವನ್ನು ಸೆರೆಹಿಡಿದಿದ್ದಾರೆ. ಮುಂಗುಸಿ ಮತ್ತು ಹಾವುಗಳು ಜಗಳವಾಡುವ ಈ ಅಪರೂಪದ ಘಟನೆಗಳು ಕಂಡು ಸೋಶಿಯಲ್ ಮಿಡಿಯಾದ ನೆಟ್ಟಿಗರು ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದಂತ ಕಸಿ ಮಾಡಲು ಮೂಳೆಗಳಿಗಾಗಿ ಸಾವಿರಾರು ಶವಗಳನ್ನು ಕದ್ದ ಚೀನಾ ಕಂಪನಿ!

“ಇದು ಪೈಪೋಟಿಯಂತೆ ಕಾಣುತ್ತಿರಬಹುದು ಆದರೆ ಆ ಮುಂಗುಸಿಗಳು ಈ ಹಾವನ್ನು ತಿನ್ನಲು ಬಯಸುತ್ತವೆ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. “ಭಾರತ ದೇಶದಲ್ಲಿ ನಮ್ಮ ಮುಂಗುಸಿ ಕೂಡ ಒಲಿಂಪಿಕ್ ಪದಕಗಳನ್ನು ಗೆಲ್ಲಬಲ್ಲದು!” ಎಂದು ವ್ಯಂಕ್ಯವಾಗಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು “ನಾಗಿನ್ 6 ಚಿತ್ರದ ಟೀಸರ್ ಬಂದಿದೆ” ಎಂದು ಹೇಳಿದ್ದಾರೆ. ಇಬ್ಬರ ನಡುವೆ ಸಾಕಷ್ಟು ಪೈಪೋಟಿ ಇದೆ. ಆದರೆ ಇದರಲ್ಲಿ ನೋಡೋಕೆ ಏನಿದೆ? ಕೊನೆಯಲ್ಲಿ ಗೆಲ್ಲುವುದು ಮುಂಗುಸಿ. ಯಾಕೆಂದರೆ ಅದು ಎಂದಿಗೂ ಸೋಲುವುದಿಲ್ಲ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

Continue Reading

ದಕ್ಷಿಣ ಕನ್ನಡ

Love Failure : ಹುಬ್ಬಳ್ಳಿ ಬಳಿಕ ಮಂಗಳೂರಿನಲ್ಲಿ ಪ್ರೇಮ ವೈಫಲ್ಯಕ್ಕೆ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದ ಪಾಗಲ್‌ ಪ್ರೇಮಿ

Love Failure : ಯುವತಿ ಮಸೇಜ್‌ ಮಾಡಲಿಲ್ಲ ಎಂದು ಸಿಟ್ಟಾದ ಪಾಗಲ್‌ ಪ್ರೇಮಿಯೊಬ್ಬ ಕ್ಲಾಸ್‌ ರೂಮಿಗೆ ತೆರಳಿ ಕತ್ತರಿಯಿಂದ ಇರಿದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.

VISTARANEWS.COM


on

By

love failure
ಸಾಂದರ್ಭಿಕ ಚಿತ್ರ
Koo

ಮಂಗಳೂರು: ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣ (Love Failure) ಮರೆಯಾಗುವ ಮುನ್ನವೇ ಮಂಗಳೂರಿನಲ್ಲಿ ಮತ್ತೊಬ್ಬ ಯುವಕ ಪ್ರೇಮ ವೈಫಲ್ಯಕ್ಕೆ ವಿದ್ಯಾರ್ಥಿನಿಗೆ ಕತ್ತರಿಯಿಂದ ಇರಿದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಘಟನೆ ನಡೆದಿದೆ.

ನಿನ್ನೆ ಸೋಮವಾರ ಮುಂಜಾನೆ ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಘಟನೆ ನಡೆದಿದೆ. ತುಮಕೂರು ಮೂಲದ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ಯುವತಿ ಆಳ್ವಾಸ್‌ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು.

ಈ ಮಂಜುನಾಥ್ ಹಾಗು ಹಲ್ಲೆಗೊಳಗಾದ ಯುವತಿ ಪಿಯುಸಿ ತನಕ ಜತೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಮಂಜುನಾಥ್‌ ಕಾಲೇಜು ತೊರೆದು ಮನೆಗೆ ತೆರಳಿದ್ದ. ಯುವತಿ ಮೆಸೇಜ್‌ಗೆ ಉತ್ತರಿಸುತ್ತಿಲ್ಲ ಎಂದು ಕೋಪಗೊಂಡ ಮಂಜುನಾಥ್‌ ತುಮಕೂರಿನಿಂದ ಮೂಡಬಿದರೆಗೆ ಬಂದಿದ್ದ.

ಆದರೆ ಯುವತಿ ಮಂಜುನಾಥ್‌ನನ್ನು ಭೇಟಿ ಮಾಡಲು ನಿರಾಕರಿಸಿದ್ದಳು. ಇದರಿಂದ ಮತ್ತಷ್ಟು ಕೆರಳಿದ ಮಂಜುನಾಥ್‌ ಕಾಲೇಜಿಗೆ ನುಗ್ಗಿ ತರಗತಿಯಲ್ಲಿದ್ದ ಯುವತಿಗೆ ಕತ್ತರಿಯಿಂದ ಇರಿದಿದ್ದಾನೆ. ಘಟನೆಯಲ್ಲಿ ಯುವತಿಯ ಮುಖಕ್ಕೆ ಗಾಯವಾಗಿದೆ.

ಕೂಡಲೇ ಇತರೆ ವಿದ್ಯಾರ್ಥಿಗಳು ಮಂಜುನಾಥ್‌ನನ್ನು ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಂಜುನಾಥ್‌ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Self harming : ಶಿವಮೊಗ್ಗದಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಮದುವೆಗೆ ಪೋಷಕರ ವಿರೋಧ; ಮರಕ್ಕೆ ನೇಣು ಬಿಗಿದುಕೊಂಡು ಪ್ರೇಮಿಗಳು ಆತ್ಮಹತ್ಯೆ

ಬಾಗಲಕೋಟೆ: ಮದುವೆಗೆ ಪೋಷಕರು ವಿರೋಧಿಸಿದಕ್ಕೆ ಪ್ರೇಮಿಗಳಿಬ್ಬರು (Love Case) ನೇಣಿಗೆ ಶರಣಾಗಿದ್ದಾರೆ. ಬಾಗಲಕೋಟೆಯ ರಬಕವಿ-ಬನಹಟ್ಟಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಘಟನೆ ನಡೆದಿದೆ.

ಸಚಿನ್ ದಳವಾಯಿ, ಪ್ರಿಯಾ ಮಡಿವಾಳರ ಮೃತ ಪ್ರೇಮಿಗಳು. ಇವರಿಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಮನೆಯಲ್ಲಿ ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಇದರಿಂದ ಮನನೊಂದು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ.

ಮಹಾಲಿಂಗಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ .ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

Latest

Viral Video: ಫುಟ್ಬಾಲ್ ಪಂದ್ಯದಲ್ಲಿ ಸೋತಿದ್ದಕ್ಕೆ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ದೈಹಿಕ ಶಿಕ್ಷಕ; ವಿಡಿಯೊ ನೋಡಿ ಜನಾಕ್ರೋಶ

Viral Video: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ದೈಹಿಕ ಶಿಕ್ಷಕರೊಬ್ಬರು ಫುಟ್ಬಾಲ್ ಆಟ ಆಡುವಾಗ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಅಸಮಾಧಾನಗೊಂಡು ತಮ್ಮ ವಿದ್ಯಾರ್ಥಿಗಳನ್ನು ಥಳಿಸುತ್ತಿರುವ ಆಘಾತಕಾರಿ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಕೃತ್ಯ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೊ ವೈರಲ್ ಆದ ನಂತರ, ಈ ಬಗ್ಗೆ ಸಂಗಗಿರಿ ಜಿಲ್ಲಾ ಶಿಕ್ಷಣ ಅಧಿಕಾರಿ ತನಿಖೆ ನಡೆಸಿದ್ದಾರೆ. ನಂತರ ಡಿಇಒ ತಮ್ಮ ತನಿಖೆಯ ವಿವರಗಳನ್ನು ಇಲಾಖೆ ಮತ್ತು ಜಿಲ್ಲಾಧಿಕಾರಿ ಇಬ್ಬರಿಗೂ ಸಲ್ಲಿಸಿದ್ದಾರೆ. ಆ ಬಳಿಕ ಅಣ್ಣಾಮಲೈ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

VISTARANEWS.COM


on

Viral Video
Koo


ಆಟದಲ್ಲಿ ಸೋಲು ಗೆಲುವುಗಳು ಇದ್ದೇ ಇರುತ್ತವೆ. ಸೋತಾಗ ಅಂಜಬಾರದು, ಗೆದ್ದಾಗ ಹಿಗ್ಗಬಾರದು ಎಂಬ ನೀತಿ ಮಾತಿದೆ. ವಿದ್ಯಾರ್ಥಿಗಳು ಆಟದಲ್ಲಿ ಗೆದ್ದಾಗ ಅವರನ್ನು ಪ್ರಶಂಸಿಸುವ ಶಿಕ್ಷಕರು ಅವರು ಸೋತಾಗ ಅವರಿಗೆ ಧೈರ್ಯ ಹೇಳಬೇಕು. ಅದನ್ನು ಬಿಟ್ಟು ಮಕ್ಕಳಿಗೆ ನೀತಿ ಪಾಠ ಹೇಳಿಕೊಡುವ ಶಿಕ್ಷಕರೇ ಅವರು ಸೋತಾಗ ಅವರನ್ನು ಹೀಯಾಳಿಸಿದರೆ, ಶಿಕ್ಷಿಸಿದರೆ ಅವರು ಶಿಕ್ಷಕರ ಸ್ಥಾನಕ್ಕೆ ಅರ್ಹರಲ್ಲ ಎಂದೇ ಹೇಳಬಹುದು. ಇದೀಗ ಅಂತಹದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಪಿಟಿ ಮಾಸ್ಟರೊಬ್ಬರು ವಿದ್ಯಾರ್ಥಿಗಳು ಫುಟ್ಬಾಲ್ ಆಟ ಆಡುವಾಗ ಕಳಪೆ ಪ್ರದರ್ಶನ ನೀಡಿದ್ದಾರೆ ಎಂದು ಅಸಮಾಧಾನಗೊಂಡು ಅವರನ್ನು ಥಳಿಸುತ್ತಿರುವ ಆಘಾತಕಾರಿ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಸಖತ್ ವೈರಲ್ (Viral Video)ಆಗಿದೆ.

ಸೇಲಂ ಜಿಲ್ಲೆಯ ಮೆಟ್ಟೂರು ಬಳಿಯ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ಎನ್ಎಚ್ಎಸ್ಎಸ್‍ನ ಫುಟ್ಬಾಲ್ ತಂಡವು ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಆದರೆ ನಿರೀಕ್ಷೆಗಳಂತೆ ಅವರು ಗೆಲುವು ಸಾಧಿಸಲಿಲ್ಲ. ಆಗ ಅಣ್ಣಾಮಲೈ ಎಂದು ಗುರುತಿಸಲ್ಪಟ್ಟ ಪಿಟಿ ಮಾಸ್ಟರ್ ವಿದ್ಯಾರ್ಥಿಗಳು ಆಟದಲ್ಲಿ ಸೋತರೆಂದು ಅವರನ್ನು ಕ್ರೂರವಾಗಿ ಥಳಿಸಿದ್ದಾರೆ. ಆಟಗಾರರ ಕೆನ್ನೆಗೆ ಹೊಡೆಯುವುದು, ಒದೆಯುವುದು ಮತ್ತು ಕೂದಲನ್ನು ಎಳೆಯುವುದನ್ನು ಮಾಡಿ ಅಮಾನುಷವಾಗಿ ವರ್ತಿಸಿದ್ದಾರೆ. ಅಣ್ಣಾಮಲೈ ಹುಡುಗರನ್ನು ಹೊಡೆಯುವ ಮೂಲಕ ಅನಾಗರಿಕ ವರ್ತನೆ ತೋರಿದ್ದಾರೆ ಎಂದು ಆಟಗಾರರೊಬ್ಬರ ಪೋಷಕರು ವಿಡಿಯೊ ಸಮೇತ ವರದಿ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ, ಅಣ್ಣಾಮಲೈ ಅವರು ತಂಡದ ಗೋಲ್ ಕೀಪರ್ ಆಗಿರುವ ವಿದ್ಯಾರ್ಥಿಯೊಬ್ಬನಿಗೆ, “ನೀನು ಗಂಡಸಾ ಅಥವಾ ಹೆಂಗಸಾ? ನೀನು ಎದುರಾಳಿಗೆ ಸ್ಕೋರ್ ಗಳಿಸಲು ಹೇಗೆ ಅವಕಾಶ ಕೊಟ್ಟೆ?, ಚೆಂಡು ನಿನ್ನನ್ನು ದಾಟಿ ಮುಂದೆ ಹೋಗಲು ಹೇಗೆ ಬಿಟ್ಟೆ?” ಎಂದು ಥಳಿಸಿದ್ದಾರೆ. ಹಾಗೇ ಮತ್ತೊಬ್ಬ ವಿದ್ಯಾರ್ಥಿಯನ್ನು ಪ್ರಶ್ನಿಸಿದ ಅವರು, “ನಿನಗೆ ಅವರ ಮೇಲೆ ಫ್ರೆಷರ್‌ ಹಾಕಿ ಆಡಲು ಸಾಧ್ಯವಿಲ್ಲವೇ? ಅಲ್ಲಿ ಯಾಕೆ ಕಮ್ಯೂನಿಕೇಷನ್ ಮಾಡಲಿಲ್ಲ?” ಎಂದು ಥಳಿಸಿದ್ದಾರೆ. ದೈಹಿಕ ಶಿಕ್ಷಕರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿಕ್ಷಕಿ, ಸಹಪಾಠಿಗಳ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಬಾಲಕ

ವಿಡಿಯೊ ವೈರಲ್ ಆದ ನಂತರ, ಈ ಬಗ್ಗೆ ಸಂಗಗಿರಿ ಜಿಲ್ಲಾ ಶಿಕ್ಷಣ ಅಧಿಕಾರಿ ತನಿಖೆ ನಡೆಸಿದ್ದಾರೆ. ನಂತರ ಡಿಇಒ ತಮ್ಮ ತನಿಖೆಯ ವಿವರಗಳನ್ನು ಇಲಾಖೆ ಮತ್ತು ಜಿಲ್ಲಾಧಿಕಾರಿ ಇಬ್ಬರಿಗೂ ಸಲ್ಲಿಸಿದ್ದಾರೆ. ಆ ಬಳಿಕ ಅಣ್ಣಾಮಲೈ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.

Continue Reading
Advertisement
Lakshmi Hebbalkar
ಕರ್ನಾಟಕ6 mins ago

Lakshmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ಗೆ ಅಹವಾಲು ಸಲ್ಲಿಸಲು ಸಾಲುಸಾಲು ಜನ

Independence day 2024
ದೇಶ11 mins ago

Independence day 2024: ಆಗಸ್ಟ್ 15ರಂದು ಪ್ರಧಾನಿ ಮೋದಿ ಭಾಷಣವನ್ನು ಎಷ್ಟು ಹೊತ್ತಿಗೆ, ಎಲ್ಲಿ ವೀಕ್ಷಿಸಬಹುದು?

Ian Bell
ಕ್ರಿಕೆಟ್16 mins ago

Ian Bell : ಲಂಕಾ ತಂಡದ ನೂತನ ಬ್ಯಾಟಿಂಗ್​ ಕೋಚ್​ ಆಗಿ ಇಯಾನ್ ಬೆಲ್​ ನೇಮಕ

Prime fashion week
ಫ್ಯಾಷನ್23 mins ago

Prime Fashion week: ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಸಂಜಯ್‌ ಚೊಲಾರಿಯಾ ಡಿಸೈನರ್‌ ವೇರ್ಸ್ ಅನಾವರಣ

Physical abuse
ಧಾರವಾಡ30 mins ago

Physical Abuse : ಅಪ್ರಾಪ್ತೆಯನ್ನು ಲಾಡ್ಜ್‌ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೊ ಹರಿಬಿಟ್ಟ ಯುವಕ!

Kaun Banega Crorepati Season 16
ಬಾಲಿವುಡ್46 mins ago

Kaun Banega Crorepati Season 16: 25 ಲಕ್ಷ ರೂ. ಪ್ರಶ್ನೆಗೆ ಉತ್ತರಿಸಲು ವಿಫಲರಾದ ಬೆಂಗಳೂರಿನ ಎಂಜಿನಿಯರ್! ಏನಿತ್ತು ಆ ಪ್ರಶ್ನೆ?

Tata Nexon EV
ಆಟೋಮೊಬೈಲ್56 mins ago

Tata Nexon EV: ಕೇವಲ 200 ರೂ. ಖರ್ಚಿನಲ್ಲಿ ಈ ಕಾರು 323 ಕಿ.ಮೀ ದೂರ ಸಾಗುತ್ತದೆ!

Arshad Nadeem
ಪ್ರಮುಖ ಸುದ್ದಿ59 mins ago

Arshad Nadeem : ಲಷ್ಕರ್ ಉಗ್ರನ ಜತೆ ಕಾಣಿಸಿಕೊಂಡ ಪಾಕಿಸ್ತಾನದ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ಅರ್ಷದ್​ ನದೀಮ್​!

World Organ Donation Day
ಆರೋಗ್ಯ1 hour ago

World Organ Donation Day: ಇಂದು ವಿಶ್ವ ಅಂಗಾಂಗದಾನ ದಿನ; ಯಾರದ್ದೋ ಬದುಕಿಗೆ ಭರವಸೆಯಾಗೋಣ! ನೋಂದಣಿ ಹೇಗೆ?

Murder Case
ಬೆಳಗಾವಿ1 hour ago

Murder Case : ಕಂಡವರ ಹೆಂಡ್ತಿ ಮೇಲೆ ವ್ಯಾಮೋಹ; ಸುಪಾರಿ ಕೊಟ್ಟು ಚಟ್ಟ ಕಟ್ಟಿದ ಕಿರಾತಕ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ5 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ5 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 week ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌