Viral Video: ರೀಲ್ಸ್ ಅವಾಂತರ; 6ನೇ ಮಹಡಿಯಿಂದ ಬಿದ್ದ ಬಾಲಕಿ; ಅಪ್ಪನನ್ನು ಕರೆ ಎಂದು ಅಮ್ಮನ ಬಳಿ ಅಂಗಲಾಚಿದ್ದು ಯಾಕೆ? - Vistara News

Latest

Viral Video: ರೀಲ್ಸ್ ಅವಾಂತರ; 6ನೇ ಮಹಡಿಯಿಂದ ಬಿದ್ದ ಬಾಲಕಿ; ಅಪ್ಪನನ್ನು ಕರೆ ಎಂದು ಅಮ್ಮನ ಬಳಿ ಅಂಗಲಾಚಿದ್ದು ಯಾಕೆ?

Viral Video ಗಾಜಿಯಾಬಾದ್‌ನಲ್ಲಿ ಇನ್ಸ್ಟಾಗ್ರಾಮ್ ರೀಲ್ ಮಾಡುವಾಗ ಬಾಲಕಿಯೊಬ್ಬಳು ಕಟ್ಟಡದ ಆರನೇ ಮಹಡಿಯಿಂದ ಬಿದ್ದಿದ್ದಾಳೆ. ಅವಳು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ರೀಲ್ಸ್ ಮಾಡುವಾಗ ಅವಳ ಮೊಬೈಲ್ ಅವಳ ಕೈಯಿಂದ ಜಾರಿದೆ. ಫೋನ್ ಹಿಡಿಯಲು ಪ್ರಯತ್ನಿಸುವಾಗ ಅವಳು ಬಾಲ್ಕನಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಬಾಲಕಿ ನೋವಿನಿಂದ ಅಳುತ್ತಿರುವ ಮತ್ತು ಅವಳ ತಾಯಿ ಅವಳನ್ನು ಬೈಯುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಲಖನೌ: ರೀಲ್‍ಗಳನ್ನು ಮಾಡುವ ಕ್ರೇಜ್ ಅನೇಕ ಯುವ ಜನರನ್ನು ಆವರಿಸಿದೆ. ಇವರು ಲೈಕ್‍ಗಳನ್ನು ಪಡೆಯಲು ಮತ್ತು ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧರಿದ್ದಾರೆ. ಅದಕ್ಕಾಗಿ ತಮ್ಮ ಜೀವವನ್ನು ಪಣಕ್ಕಿಡುತ್ತಿದ್ದಾರೆ. ಇದೀಗ ಈ ರೀಲ್ಸ್ ಅವಾಂತರಕ್ಕೆ ಸಂಬಂಧಿಸಿದಂತಹ ಮತ್ತೊಂದು ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ ರೀಲ್ಸ್ ಮಾಡುವಾಗ ಬಾಲಕಿಯೊಬ್ಬಳು ಕಟ್ಟಡದ ಆರನೇ ಮಹಡಿಯಿಂದ ಬಿದ್ದಿದ್ದಾಳೆ. ಅವಳು ತನ್ನ ಮನೆಯ ಬಾಲ್ಕನಿಯಲ್ಲಿ ನಿಂತು ರೀಲ್ಸ್ ಮಾಡುವಾಗ ಮೊಬೈಲ್ ಕೈಯಿಂದ ಜಾರಿದೆ. ಫೋನ್ ಹಿಡಿಯಲು ಪ್ರಯತ್ನಿಸುವಾಗ ಅವಳು ಬಾಲ್ಕನಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಬಾಲಕಿ ನೋವಿನಿಂದ ಅಳುತ್ತಿರುವ ಮತ್ತು ಅವಳ ತಾಯಿ ಅವಳನ್ನು ಬೈಯುತ್ತಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಆಘಾತಕ್ಕೊಳಗಾದ ಬಾಲಕಿಯನ್ನು ಗಾಜಿಯಾಬಾದ್‍ನ ಇಂದಿರಾಪುರಂ ಪ್ರದೇಶದಲ್ಲಿರುವ ಕ್ಲೌಡ್ -9 ಸೊಸೈಟಿಯಲ್ಲಿ ವಾಸಿಸುತ್ತಿದ್ದ ಮೋನಿಷಾ (16) ಎಂದು ಗುರುತಿಸಲಾಗಿದೆ. ಆರನೇ ಮಹಡಿಯಿಂದ ಬಿದ್ದ ನಂತರ ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಬಾಲಕಿ ನೆಲದ ಮೇಲೆ ಬಿದ್ದಿದ್ದಾಳೆ. ಜನರು ಅವಳ ಸುತ್ತ ಸುತ್ತುವರಿದು, ಅವಳನ್ನು ಆಸ್ಪತ್ರೆಗೆ ಕರೆದೊಯ್ಯುಲು ಗಾಬರಿಯಿಂದ ಓಡಾಡುತ್ತಿದ್ದಾರೆ. ಆ ವೇಳೆ ಅವರು ಅವಳನ್ನು ಎತ್ತುತ್ತಿದ್ದಂತೆ, ಅವಳು ನೋವಿನಿಂದ ಕೂಗಿದಳು, “ಅಮ್ಮಾ, ಪಾಪಾ ಕೋ ಬುಲಾ ದೋ”(ಅಮ್ಮಾ, ದಯವಿಟ್ಟು ಅಪ್ಪನನ್ನು ಕರೆಯಿರಿ) ಎಂದು ತನ್ನ ತಂದೆಯನ್ನು ಕರೆಯುವಂತೆ ತನ್ನ ತಾಯಿಯನ್ನು ಪದೇ ಪದೆ ಕೇಳಿಕೊಳ್ಳುತ್ತಿದ್ದಾಳೆ.

ವಿಡಿಯೊದಲ್ಲಿ, ಹುಡುಗಿಯ ತಾಯಿ ಮಗಳ ರೀಲ್ಸ್ ಮಾಡುವ ಹುಚ್ಚಿಗೆ ಹಿಗ್ಗಾಮುಗ್ಗಾ ಬೈದಿದ್ದಾಳೆ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಈಗ ಆಕೆ ಅಪಾಯದಿಂದ ಪಾರಾಗಿದ್ದಾಳೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ಒಂದು ಹಾವು, ಮೂರು ಮುಂಗುಸಿ; ಏರ್‌ಪೋರ್ಟ್‌ ರನ್‌ವೇಯಲ್ಲೇ ಫೈಟ್‌! ಸೋತಿದ್ಯಾರು? ವಿಡಿಯೊ ನೋಡಿ

ಬಾಲಕಿಯ ಸ್ಥಿತಿಯನ್ನು ನೋಡಿ ಅಲ್ಲಿದ್ದವರು ಆಘಾತಕ್ಕೊಳಗಾಗಿದ್ದಾರೆ. ಕೆಲವರು ಅವಳ ಗಂಭೀರ ಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿ, ಮೇಲಿಂದ ಬಿದ್ದಿದ್ದರಿಂದ ಅವಳ ಕಾಲು ಮುರಿದಂತೆ ಕಾಣುತ್ತದೆ ಎಂದಿದ್ದಾರೆ. ಈ ರೀತಿಯ ರೀಲ್ಸ್ ಅವಾಂತರದ ಹಲವಾರು ಘಟನೆಗಳು ಸಂಭವಿಸಿವೆ. ಜನರು ರೀಲ್ಸ್ ಮಾಡುವ ವೇಳೆ ಹಲವು ಬಾರಿ ಅಪಾಯಕ್ಕೆ ಸಿಲುಕಿದ್ದಾರೆ ಮತ್ತು ಕೆಲವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾಗಳಿಗಾಗಿ ರೀಲ್ಸ್ ವಿಡಿಯೊಗಳನ್ನು ಮಾಡುವಾಗ ಯುವಕರು ಜಾಗರೂಕರಾಗಿರಬೇಕು ಮತ್ತು ಕೇವಲ ಲೈಕ್‍ಗಳು ಮತ್ತು ಫಾಲೋವರ್ಸ್‍ಗಳಿಗಾಗಿ ತಮ್ಮ ಜೀವವನ್ನು ಅಪಾಯಕ್ಕೆ ತಳ್ಳಬಾರದು ಎಂದು ಅಧಿಕಾರಿಗಳು ಎಚ್ಚರಿಸಲುತ್ತಲೇ ಇದ್ದರೂ ಇಂತಹ ಪ್ರವೃತ್ತಿ ನಿಂತಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Independence Day 2024: ಒಂದೇ ದಿನ ಸ್ವಾತಂತ್ರ್ಯ ಪಡೆದಿದ್ದರೂ ಪಾಕಿಸ್ತಾನದಲ್ಲೇಕೆ ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆ?

1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ದೇಶವನ್ನು ಎರಡು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಿದರು. ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಏಕಕಾಲದಲ್ಲಿ ವಿಭಜನೆಯಾಗಿದ್ದರೂ ಎರಡು ವಿಭಿನ್ನ ದಿನಗಳಲ್ಲಿ ಯಾಕೆ ಸ್ವಾತಂತ್ರ್ಯವನ್ನು ಆಚರಿಸುತ್ತಾರೆ (Independence day 2024) ಎನ್ನುವುದು ಕುತೂಹಲಕರವಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Independence day 2024
Koo

ಭಾರತ ಮತ್ತು ಪಾಕಿಸ್ತಾನ (India and Pakistan) ಒಟ್ಟಿಗೆ ಈ ಬಾರಿ 78ನೇ ಸ್ವಾತಂತ್ರ್ಯ ದಿನವನ್ನು (Independence day 2024) ಆಚರಿಸುವ ಸಂಭ್ರಮದಲ್ಲಿದೆ. ಆದರೆ ಭಾರತವು ಆಗಸ್ಟ್ 15ರಂದು ಸಂಭ್ರಮಾಚರಣೆ ನಡೆಸಿದರೆ ನೆರೆಯ ರಾಷ್ಟ್ರ ಪಾಕಿಸ್ತಾನವು ಒಂದು ದಿನ ಮುಂಚಿತವಾಗಿ ಅಂದರೆ ಆಗಸ್ಟ್ 14ರಂದು ಈ ಆಚರಣೆಯನ್ನು ನಡೆಸುತ್ತದೆ. 1947ರ ಆಗಸ್ಟ್‌ನಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ದೇಶವನ್ನು ಎರಡು ಸ್ವತಂತ್ರ ರಾಷ್ಟ್ರಗಳಾಗಿ ವಿಭಜಿಸಿದರು. ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಏಕಕಾಲದಲ್ಲಿ ವಿಭಜನೆಯಾಗಿದ್ದರೂ ಎರಡು ವಿಭಿನ್ನ ದಿನಗಳಲ್ಲಿ ಯಾಕೆ ಸ್ವಾತಂತ್ರ್ಯವನ್ನು ಆಚರಿಸುತ್ತಾರೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಇತಿಹಾಸದಲ್ಲಿ ಏನಿದೆ?

1947ರ ಜುಲೈ 18ರಂದು ಘೋಷಿಸಲಾದ 1947ರ ಭಾರತೀಯ ಸ್ವಾತಂತ್ರ್ಯ ಕಾಯಿದೆಯು ಭಾರತ ಮತ್ತು ಪಾಕಿಸ್ತಾನಕ್ಕೆ ಜನ್ಮ ನೀಡಿತು. ಕಾಯಿದೆಯ ಪ್ರಕಾರ, 1947ರ ಆಗಸ್ಟ್ 15ರಂದು ಭಾರತದಲ್ಲಿ ಎರಡು ಸ್ವತಂತ್ರ ರಾಷ್ಟ್ರಗಳನ್ನು ಸ್ಥಾಪಿಸಲಾಗುವುದು. ಇದನ್ನು ಕ್ರಮವಾಗಿ ಭಾರತ ಮತ್ತು ಪಾಕಿಸ್ತಾನ ಎಂದು ಕರೆಯಲಾಗುತ್ತದೆ ಎಂಬ ಉಲ್ಲೇಖ ಇತ್ತು.


ಆಗಸ್ಟ್ 15 ಪಾಕಿಸ್ತಾನದ ಸ್ವಾತಂತ್ರ್ಯ ದಿನವಾಗಿತ್ತು ಎಂಬುದು ಪಾಕಿಸ್ತಾನದ ಸ್ಥಾಪಕ ಪಿತಾಮಹ ಮೊಹಮ್ಮದ್ ಅಲಿ ಜಿನ್ನಾ ಅವರ ಐತಿಹಾಸಿಕ ರೇಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಇದರಲ್ಲಿ ಅವರು, ಆಗಸ್ಟ್ 15 ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾದ ಪಾಕಿಸ್ತಾನದ ಜನ್ಮದಿನವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ತನ್ನ ತಾಯ್ನಾಡನ್ನು ಹೊಂದಲು ದೊಡ್ಡ ತ್ಯಾಗ ಮಾಡಿದ ಮುಸ್ಲಿಂ ರಾಷ್ಟ್ರದ ಜನತೆಯ ಕನಸನ್ನು ಇದು ನನಸು ಮಾಡಿರುವುದನ್ನು ಸೂಚಿಸುತ್ತದೆ ಎಂದು ಜಿನ್ನಾ ಹೇಳಿದ್ದರು.

2016ರಲ್ಲಿ ಪಾಕಿಸ್ತಾನದ ಹಿರಿಯ ಪತ್ರಕರ್ತೆ ಶಾಹಿದಾ ಖಾಜಿ ಅವರು ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ, ನಾವು ಯಾವುದೇ ರೀತಿಯ ತರ್ಕವನ್ನು ಬಳಸಿದರೂ ಆಗಸ್ಟ್ 15 ಪಾಕಿಸ್ತಾನ ತನ್ನ ಸ್ವಾತಂತ್ರ್ಯವನ್ನು ಆಚರಿಸಬೇಕಾದ ದಿನವಾಗಿದೆ ಎಂದು ಹೇಳಿದ್ದರು. ಜಿನ್ನಾ ಮತ್ತು ಪಾಕಿಸ್ತಾನ ಕ್ಯಾಬಿನೆಟ್ 1947ರ ಆಗಸ್ಟ್ 15ರಂದು ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ್ದರು.

Independence day 2024
Independence day 2024

ಅಂಚೆ ಚೀಟಿಗಳಲ್ಲೂ ಮುದ್ರಣ

ಜುಲೈ 1948ರಲ್ಲಿ ಬಿಡುಗಡೆಯಾದ ಪಾಕಿಸ್ತಾನದ ಮೊದಲ ಸ್ಮರಣಾರ್ಥ ಅಂಚೆ ಚೀಟಿಗಳಲ್ಲಿ 1947ರ ಆಗಸ್ಟ್ 15 ಅನ್ನು ದೇಶದ ಸ್ವಾತಂತ್ರ್ಯ ದಿನವೆಂದು ಉಲ್ಲೇಖಿಸಲಾಗಿದೆ. ಮುಸ್ಲಿಮರಿಗೆ 1947ರ ಆಗಸ್ಟ್ 15ರಂದು ಪವಿತ್ರವಾದ ರಂಜಾನ್ ತಿಂಗಳ ಕೊನೆಯ ಶುಕ್ರವಾರವಾದ್ದರಿಂದ ಇದು ಮಂಗಳಕರ ದಿನವಾಗಿತ್ತು.

ಪಾಕಿಸ್ತಾನದ ಮಾಜಿ ಪ್ರಧಾನಿ ಚೌಧರಿ ಮುಹಮ್ಮದ್ ಅಲಿ ಅವರು ತಮ್ಮ 1967ರ ಪುಸ್ತಕ ʼದಿ ಎಮರ್ಜೆನ್ಸ್ ಆಫ್ ಪಾಕಿಸ್ತಾನʼದಲ್ಲಿ ಹೀಗೆ ಬರೆದಿದ್ದಾರೆ: ಹದಿನೈದನೇ ಆಗಸ್ಟ್ 1947 ರಂಜಾನ್-ಉಲ್-ಮುಬಾರಕ್‌ನ ಕೊನೆಯ ಶುಕ್ರವಾರ ಇದು ಇಸ್ಲಾಂ ಧರ್ಮದ ಪವಿತ್ರ ದಿನಗಳಲ್ಲಿ ಒಂದಾಗಿದೆ. ಆ ಮಂಗಳಕರ ದಿನದಂದು, ಕ್ವೈಡ್-ಇ-ಆಜಮ್ [ಜಿನ್ನಾ] ಪಾಕಿಸ್ತಾನದ ಗವರ್ನರ್-ಜನರಲ್ ಆದರು ಮತ್ತು ಸಂಪುಟವು ಪ್ರಮಾಣ ವಚನ ಸ್ವೀಕರಿಸಿತು. ನಕ್ಷತ್ರ ಮತ್ತು ಅರ್ಧಚಂದ್ರ ಧ್ವಜವನ್ನು ಹಾರಿಸಲಾಯಿತು. ಪಾಕಿಸ್ತಾನವು ವಿಶ್ವ ಭೂಪಟದಲ್ಲಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿತು.

1947ರ ಆಗಸ್ಟ್ 14ರಂದು ಏನಾಯಿತು?

1947ರ ಆಗಸ್ಟ್ 14ರಂದು ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಪಾಕಿಸ್ತಾನದ ಸಂವಿಧಾನ ಸಭೆಯಲ್ಲಿ ಭಾಷಣ ಮಾಡಿದರು. ಅವರು ಆಗಸ್ಟ್ 15ರ ಮಧ್ಯರಾತ್ರಿ ಭಾರತ ಮತ್ತು ಪಾಕಿಸ್ತಾನಕ್ಕೆ ಅಧಿಕಾರವನ್ನು ಹಸ್ತಾಂತರಿಸಬೇಕಿತ್ತು. ಆದರೆ, ಮೌಂಟ್ ಬ್ಯಾಟನ್ ಏಕಕಾಲದಲ್ಲಿ ನವದೆಹಲಿ ಮತ್ತು ಕರಾಚಿ ಎರಡರಲ್ಲೂ ಇರಲು ಸಾಧ್ಯವಿರಲಿಲ್ಲ. ಹಾಗಾಗಿ
ಮೌಂಟ್ ಬ್ಯಾಟನ್ ಅವರು ಆಗಸ್ಟ್ 14ರಂದು ಕರಾಚಿಯಲ್ಲಿ ಮೊದಲು ಪಾಕಿಸ್ತಾನಕ್ಕೆ ಅಧಿಕಾರವನ್ನು ವರ್ಗಾಯಿಸಿದರು ಮತ್ತು ಅನಂತರ ನವದೆಹಲಿಗೆ ಪ್ರಯಾಣಿಸಿದರು.


ಖ್ಯಾತ ಪಾಕಿಸ್ತಾನಿ ಇತಿಹಾಸಕಾರ ಖುರ್ಷೀದ್ ಕಮಲ್ ಅಜೀಜ್ ಅವರು ತಮ್ಮ ʼಮರ್ಡರ್ ಆಫ್ ಹಿಸ್ಟರಿʼ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: ಭಾರತದಲ್ಲಿ ಬ್ರಿಟಿಷ್ ರಾಜನ ಏಕೈಕ ಪ್ರತಿನಿಧಿಯಾಗಿದ್ದ ವೈಸ್‌ರಾಯ್ ಅಧಿಕಾರವನ್ನು ವೈಯಕ್ತಿಕವಾಗಿ ಹೊಸ ದೇಶಗಳಿಗೆ ವರ್ಗಾಯಿಸಬೇಕಾಗಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಕರಾಚಿ ಮತ್ತು ನವದೆಹಲಿಯಲ್ಲಿ ಒಂದೇ ಕ್ಷಣದಲ್ಲಿ ಖುದ್ದಾಗಿ ಹಾಜರಾಗಲು ಸಾಧ್ಯವಾಗಲಿಲ್ಲ. ಆಗಸ್ಟ್ 15ರ ಬೆಳಗ್ಗೆ ಭಾರತಕ್ಕೆ ಅಧಿಕಾರವನ್ನು ವರ್ಗಾಯಿಸಿ ಅನಂತರ ಕರಾಚಿಗೆ ಹೋಗುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಆ ಹೊತ್ತಿಗೆ ಅವರು ಹೊಸ ಭಾರತೀಯ ಡೊಮಿನಿಯನ್‌ನ ಗವರ್ನರ್ ಜನರಲ್ ಆಗುತ್ತಿದ್ದರು. ಹೀಗಾಗಿ ಅವರು ಭಾರತದ ವೈಸ್‌ರಾಯ್ ಆಗಿ ಆಗಸ್ಟ್ 14ರಂದು ಪಾಕಿಸ್ತಾನಕ್ಕೆ ಹೋಗಿ ಅಧಿಕಾರವನ್ನು ವರ್ಗಾಯಿಸಿದರು. ಇದರ ಅರ್ಥ ಪಾಕಿಸ್ತಾನವು ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯವನ್ನು ಗಳಿಸಿತು ಎಂಬುದಲ್ಲ.

ದಿನಾಂಕ ಏಕೆ ಬದಲಾಯಿತು?

ಭಾರತದಂತೆಯೇ ಪಾಕಿಸ್ತಾನವೂ ತನ್ನ ಸ್ವಾತಂತ್ರ್ಯವನ್ನು ಪ್ರತಿ ವರ್ಷ ಆಗಸ್ಟ್ 15ರಂದು ಆಚರಿಸಬೇಕಿತ್ತು. ಆದರೆ 1948ರಲ್ಲಿ ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14ಕ್ಕೆ ಮುಂದೂಡಿತು. ಮಾಧ್ಯಮಗಳ ವರದಿ ಪ್ರಕಾರ ಕೆಲವು ಪಾಕಿಸ್ತಾನ ನಾಯಕರು ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಬಯಸಿದ್ದರು. 1948ರ ಜೂನ್ ಅಂತ್ಯದ ವೇಳೆಗೆ ಆಗಿನ ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ನೇತೃತ್ವದಲ್ಲಿ ಮಂತ್ರಿಗಳ ಗುಂಪು ಇದಕ್ಕಾಗಿ ಸಭೆಯನ್ನು ಕರೆದಿತ್ತು. ಈ ಸಭೆಯಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯನ್ನು ಒಂದು ದಿನದ ಟ್ಟಿಗೆ ಹಿಂದೂಡಲು ನಿರ್ಧರಿಸಲಾಯಿತು. ಹೀಗಾಗಿ ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಗಸ್ಟ್ 14ಕ್ಕೆ ನಡೆಸುವ ಪ್ರಸ್ತಾಪವನ್ನು ಜಿನ್ನಾ ಅನುಮೋದಿಸಿದರು ಎನ್ನಲಾಗುತ್ತದೆ.


ಎಲ್ಲರ ಒಪ್ಪಿಗೆ ಸಿಕ್ಕಿಲ್ಲ

ʼಜಿನ್ನಾ: ಮಿಥ್ ಅಂಡ್ ರಿಯಾಲಿಟಿʼಯ ಲೇಖಕ ಯಾಸರ್ ಲತೀಫ್ ಹಮ್ದಾನಿ ಅವರು 2013ರಲ್ಲಿ ಮಾಧ್ಯಮವೊಂದಕ್ಕೆ ಮಾತನಾಡಿ, ದಿನಾಂಕ ಬದಲಾವಣೆಯನ್ನು ಸಮರ್ಥಿಸಿಕೊಂಡಿದ್ದರು. ಪಾಕಿಸ್ತಾನವು ತನ್ನ ಗುರುತನ್ನು ತಾನೇ ಕೆತ್ತ ಬಹುದಾದ ಹೊಸ ರಾಷ್ಟ್ರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: Independence Day 2024: ಬ್ರಿಟಿಷ್‌ ಕಾಲದ ಚಿನ್ನದ ನಾಣ್ಯದಿಂದ ಹಿಡಿದು ಸ್ವತಂತ್ರ ಭಾರತದ ರೂಪಾಯಿವರೆಗಿನ ಇತಿಹಾಸ ಕುತೂಹಲಕರ!

ಪಾಕಿಸ್ತಾನದ ನಾಯಕರು ಸ್ವಾತಂತ್ರ್ಯ ದಿನಾಚರಣೆಯನ್ನು ಆ. 14ರಂದು ಆಚರಿಸಲು ಏಕೆ ನಿರ್ಧರಿಸಿದ್ದಾರೆ ಎಂಬುದು ಸಂಪೂರ್ಣವಾಗಿ ವಿಶಿಷ್ಟ ಕತೆಯಾಗಿದೆ. ಅವರು ಬಹುಶಃ ಭಾರತಕ್ಕಿಂತ ವಿಭಿನ್ನ ದಿನದಲ್ಲಿ ಇದನ್ನು ಆಚರಿಸಬೇಕೆಂದು ಬಯಸಿದ್ದರು ಎಂದು ಪತ್ರಕರ್ತ ಖಾಜಿ ಹೇಳಿದ್ದರು. ಹೀಗಾಗಿ 1948ರಿಂದ ಪಾಕಿಸ್ತಾನವು ಆಗಸ್ಟ್ 14ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ.

Continue Reading

Latest

Sexual Abuse: ಫೇಲ್ ಮಾಡುವುದಾಗಿ ಹೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕನಿಗೆ 11 ಸಾವಿರ ರೂ. ದಂಡ!

Sexual Abuse: ಬಾಲಕಿಯ ಮೇಲೆ ಪದೇಪದೇ ಅತ್ಯಾಚಾರ ಎಸಗಿದ ಶಿಕ್ಷಕನಿಗೆ ಗುಜರಾತ್‌ನ ಆನಂದ್‌ನ ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯವು 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅದರ ಜೊತೆಗೆ ನ್ಯಾಯಾಲಯವು 11,000 ರೂ. ದಂಡವನ್ನು ವಿಧಿಸಿದೆ. ಸಂತ್ರಸ್ತೆಗೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಆದೇಶಿಸಿದೆ. 10ನೇ ತರಗತಿಯ ಕಂಪ್ಯೂಟರ್ ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಇಂಟರ್ನಲ್ ಮಾರ್ಕ್ಸ್ ನೀಡುವುದಾಗಿ ಭರವಸೆ ನೀಡಿ ಶಿಕ್ಷಕ ಅತ್ಯಾಚಾರ ಎಸಗಿದ್ದ.

VISTARANEWS.COM


on

Sexual Abuse
Koo

ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಕೆಯೊಡ್ಡಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಪದೇಪದೇ ಅತ್ಯಾಚಾರ (Sexual Abuse) ಎಸಗಿದ ಶಿಕ್ಷಕನಿಗೆ ಗುಜರಾತ್‍ನ ಆನಂದ್‍ನ ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯವು 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಹಾಗೇ ಅದರ ಜೊತೆಗೆ ನ್ಯಾಯಾಲಯವು 11,000 ರೂ.ಗಳ ದಂಡವನ್ನು ವಿಧಿಸಿದೆ ಮತ್ತು ಸಂತ್ರಸ್ತೆಗೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡುವಂತೆ ಆದೇಶಿಸಿದೆ.

ಗುಜರಾತ್‍ನ ಆನಂದ್‍ನ ಬಕ್ರೋಲ್ ನಿವಾಸಿ ದರ್ಶನ್ ಸುತಾರ್ 2022ರಲ್ಲಿ ವಿದ್ಯಾನಗರದ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲಿ, ಆತ 10ನೇ ತರಗತಿಯ ಕಂಪ್ಯೂಟರ್ ಬೋರ್ಡ್ ಪರೀಕ್ಷೆಯಲ್ಲಿ ಹೆಚ್ಚಿನ ಇಂಟರ್ನಲ್ ಮಾರ್ಕ್ಸ್ ನೀಡುವುದಾಗಿ ಭರವಸೆ ನೀಡಿ 14 ವರ್ಷದ ವಿದ್ಯಾರ್ಥಿನಿಯನ್ನು ಶೋಷಣೆಗೆ ಒಳಪಡಿಸಿದ್ದಾನೆ. ತನ್ನ ಬೇಡಿಕೆಗಳನ್ನು ಪಾಲಿಸದಿದ್ದರೆ ಆಕೆಯ ಪರೀಕ್ಷಾ ಪತ್ರಿಕೆಯನ್ನು ವೈಯಕ್ತಿಕವಾಗಿ ಪರಿಶೀಲಿಸಿ ಆಕೆ ಫೇಲ್ ಆಗುವಂತೆ ಮಾಡುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ. ಮಾರ್ಚ್ 20, 2022 ಮತ್ತು ಮೇ 28, 2022ರ ನಡುವೆ ವಿದ್ಯಾರ್ಥಿನಿಯ ಮೇಲೆ ವಿವಿಧ ಸ್ಥಳಗಳಲ್ಲಿ ಐದು ಬಾರಿ ಅತ್ಯಾಚಾರ ಎಸಗಿದ್ದ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಅವಳನ್ನು ಮತ್ತು ಅವಳ ಕುಟುಂಬವನ್ನು ಕೊಲ್ಲುವುದಾಗಿ ಪದೇಪದೇ ಎಚ್ಚರಿಕೆ ನೀಡಿದ್ದ.

ಸಂತ್ರಸ್ತೆಯ ತಾಯಿಗೆ ಮಗಳ ನಡವಳಿಕೆಯಲ್ಲಿ ಅನುಮಾನ ಬಂದು ವಿಚಾರಿಸಿದಾಗ ಸಂತ್ರಸ್ತೆ ನಡೆದ ಘಟನೆಯನ್ನು ಬಾಯ್ಬಿಟ್ಟಿದ್ದಾಳೆ. ತಕ್ಷಣ ಆಕೆಯ ತಾಯಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಈ ದೂರಿನ ಆಧಾರದ ಮೇಲೆ ಪೊಲೀಸರು ಸುತಾರ್‌ನನ್ನು ಪೋಕ್ಸೊ ಕಾಯ್ದೆ ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬಂಧಿಸಿ ಕೋರ್ಟ್‌ಗೆ ಒಪ್ಪಿಸಿದ್ದರು.

ಇದನ್ನೂ ಓದಿ: ಪತ್ನಿಯ ಮರ್ಮಾಂಗದೊಳಗೆ ಲಟ್ಟಣಿಗೆ ತುರುಕಿ ಭೀಕರವಾಗಿ ಕೊಂದ ಪತಿ

ವಿಚಾರಣೆಯ ಸಮಯದಲ್ಲಿ, ಸರ್ಕಾರಿ ವಕೀಲರಾದ ಎ.ಎಸ್.ಜಡೇಜಾ ಅವರು ಬಲವಾದ ವಾದಗಳನ್ನು ಮಂಡಿಸಿದರೂ ಕೂಡ ವಿಶೇಷ ಪೋಕ್ಸೊ ನ್ಯಾಯಾಧೀಶ ಮತ್ತು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ತೇಜಸ್ ದೇಸಾಯಿ ಅವರು ಸುತಾರ್‌ಗೆ ಶಿಕ್ಷೆ ವಿಧಿಸಿದ್ದಾರೆ. ನ್ಯಾಯಾಧೀಶರು ಅವನಿಗೆ 25 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 11,000 ರೂ.ಗಳ ದಂಡವನ್ನು ವಿಧಿಸಿದ್ದಾರೆ. ದಂಡವನ್ನು ಪಾವತಿಸದಿದ್ದರೆ ಮತ್ತೊಂದು ವರ್ಷ ಶಿಕ್ಷೆಗೆ ಒಳಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ನಿಯಮಗಳು, 2020 ರ ನಿಯಮ 9 (2) ರ ಅಡಿಯಲ್ಲಿ, ಸಂತ್ರಸ್ತೆಗೆ 4 ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

Continue Reading

Latest

Sexual Abuse: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ 9ನೇ ತರಗತಿ ವಿದ್ಯಾರ್ಥಿ!

Sexual Abuse: ದಿನೇದಿನೇ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಇದೀಗ ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ 3 ವರ್ಷದ ಮಗುವಿನ ಮೇಲೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಅತ್ಯಾಚಾರ ಎಸಗಿದ್ದಾನೆ. ಆರೋಪಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಮಗುವಿನ ತಂದೆಯ ದೂರಿನ ಮೇರೆಗೆ ಆತನ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

VISTARANEWS.COM


on

Sexual Abuse
Koo


ಮುಂಬೈ: ಅತ್ಯಾಚಾರ ಪ್ರಕರಣಗಳು ದಿನೇದಿನೇ ಹೆಚ್ಚಾಗಿದ್ದು, ಕಾಮುಕರು ಮಹಿಳೆಯರು, ಮಕ್ಕಳು ಹಾಗೂ ಪ್ರಾಣಿಗಳನ್ನೂ ತಮ್ಮ ಕಾಮದಾಟಕ್ಕೆ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಮುಂಬೈನ ಸಾಕಿನಾಕಾ ಪ್ರದೇಶದಲ್ಲಿ 3 ವರ್ಷದ ಮಗುವಿನ ಮೇಲೆ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿ ಅತ್ಯಾಚಾರ (Sexual Abuse) ಎಸಗಿದ್ದಾನೆ. ಆರೋಪಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಮಗುವಿನ ತಂದೆಯ ದೂರಿನ ಮೇರೆಗೆ ಆತನ ವಿರುದ್ಧ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಹಾಗೆಯೇ ಕೆಲವು ದಿನಗಳ ಹಿಂದೆ, ಕೃಷಿ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ (ಎಡಿಒ) ಉತ್ತರ ಪ್ರದೇಶದ ಬುಲಂದ್ಶಹರ್‌ನ ತನ್ನ ಮನೆಯಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ತನ್ನ ಕಾಮಬಯಕೆ ತೀರದಿದ್ದಕ್ಕೆ ಮತ್ತೆ ಮೇಕೆಯೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿರುವುದು ಕಂಡುಬಂದಿತ್ತು. ಈ ಘಟನೆಯನ್ನು ನೆರೆಹೊರೆಯವರು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿದ್ದಾರೆ. ಘಟನೆಯ ನಂತರ, ಬಾಲಕಿಯ ಕುಟುಂಬವು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಂತರ ಪೊಲೀಸರು ಎಡಿಒ ಅವನನ್ನು ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಅವಳ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಪಂಜಾಬ್‍ನಲ್ಲಿ ಯುವತಿಯೊಬ್ಬಳ ಸಹೋದರ ಆತನ ಗೆಳತಿಯ ಜೊತೆ ಓಡಿಹೋಗಿದ್ದಕ್ಕೆ ಸಹೋದರನ ಗೆಳತಿಯ ಕುಟುಂಬವು ಸೇಡಿಗಾಗಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸಹೋದರನ ಗೆಳತಿಯ ತಂದೆ ಮತ್ತು ಇತರ ಮೂವರು ಕುಟುಂಬ ಸದಸ್ಯರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಅಪರಾಧವನ್ನು ತಮ್ಮ ಮೊಬೈಲ್ ಫೋನ್‍ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಹಸ್ತಮೈಥುನ ಮಾಡಿಕೊಳ್ಳಲು 6 ವರ್ಷದ ಬಾಲಕಿ ಮೇಲೆ ದೌರ್ಜನ್ಯ; ಆಕೆ ತಪ್ಪಿಸಿಕೊಂಡಾಗ ಮೇಕೆ ಮೇಲೆ ಅತ್ಯಾಚಾರ!

ಈ ಘಟನೆಯು ಮೇ 1 ರಂದು ಸಂಭವಿಸಿದೆ ಎಂದು ವರದಿಯಾಗಿದೆ, ಆದರೆ, ಸಂತ್ರಸ್ತೆ ಆಘಾತಕ್ಕೊಳಗಾಗಿದ್ದ ಕಾರಣ ಬಹಳ ಸಮಯದ ನಂತರ ಚೇತರಿಸಿಕೊಂಡು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾಳೆ ಎನ್ನಲಾಗಿದೆ. ಕೋಲ್ಕತಾ ವೈದ್ಯೆಯ ಕ್ರೂರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ದೇಶದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಆದರೆ ಪ್ರಕರಣದಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಮತ್ತು ಸಿಬಿಐ ಮಾತ್ರ ಈ ಬಗ್ಗೆ ಸರಿಯಾಗಿ ತನಿಖೆ ನಡೆಸಬಹುದು ಎಂಬುದನ್ನು ಮನಗೊಂಡ ಕೋಲ್ಕತ್ತಾ ಹೈಕೋರ್ಟ್ ಇದರ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿದೆ ಎನ್ನಲಾಗಿದೆ.

Continue Reading

Latest

Viral Video: ಹಳೆಯ ವಿದ್ಯಾರ್ಥಿಗಳನ್ನು ಸಾಲಾಗಿ ಕರೆಸಿ ಬೆತ್ತದಿಂದ ಹೊಡೆದ ಪ್ರಾಂಶುಪಾಲರು! ಅಪರೂಪದ ವಿಡಿಯೊ

Viral Video: ಶಾಲಾ ವಿದ್ಯಾರ್ಥಿಗಳ ಪುನರ್ಮಿಲನವನ್ನು ತೋರಿಸುವ ಸಣ್ಣ ವಿಡಿಯೊವೊಂದು ಭಾರೀ ಶೇರ್‌ ಆಗುತ್ತಿದೆ. ಅಲ್ಲಿ ಪ್ರಾಂಶುಪಾಲರೆಂದು ಹೇಳಲಾದ ವ್ಯಕ್ತಿಯೊಬ್ಬರು ತಮ್ಮ ಮಾಜಿ ವಿದ್ಯಾರ್ಥಿಗಳನ್ನು ಬೆತ್ತದಿಂದ ಹೊಡೆಯುತ್ತಿದ್ದಾರೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಧ್ಯವಯಸ್ಸಿಗೆ ಬಂದಿರುವ ಆಗಿನ ವಿದ್ಯಾರ್ಥಿಗಳು ಏಟು ತಿಂದಿದ್ದಾರೆ. ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗಳು, ವೈದ್ಯರು, ವಕೀಲರು, ಶಿಕ್ಷಕರು ಮತ್ತು ಬ್ಯುಸಿನೆಸ್‌ಮ್ಯಾನ್‌ ಆಗಿದ್ದಾರೆ. ಆದರೆ ಈಗ ತಮ್ಮ ಪುನರ್ಮಿಲನದ ಸಮಯದಲ್ಲಿ, ಅವರೆಲ್ಲರೂ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ತಮ್ಮ ಶಾಲಾ ಪ್ರಾಂಶುಪಾಲರ ಜೊತೆ ಕಳೆದ ಆ ವಿಶೇಷ ಕ್ಷಣವನ್ನು ಆನಂದಿಸಿದ್ದಾರೆ.

VISTARANEWS.COM


on

Viral Video
Koo


ನಮ್ಮ ಬಾಲ್ಯದ ಜೀವನ ಬಹಳ ಸುಂದರ. ನಾವು ಶಾಲೆಯ ಹೋಗುವಾಗ ಕಳೆದ ದಿನಗಳ ನೆನಪುಗಳು ಮರುಕಳಿಸಿದರೆ ಎಲ್ಲರ ಮುಖದಲ್ಲಿ ನಗುವು ಮೂಡುತ್ತದೆ. ಅದು ಮರೆಯಲಾಗದಂತಹ ಸವಿಸವಿ ನೆನಪು. ಆ ಜೀವನಕ್ಕೆ ಮತ್ತೆ ಹೋಗಲು ಸಾಧ್ಯವಾಗದಿದ್ದರೂ ಅಂದಿನ ದಿನಗಳ ಬಗ್ಗೆ ಇಂದು ಅನುಕರಣೆ ಮಾಡಬಹುದು. ಅದರಿಂದಲೂ ಕೆಲವರಿಗೆ ಖುಷಿ ಸಿಗುತ್ತದೆ. ಹಾಗಾಗಿ ಹಳೆಯ ನೆನಪುಗಳನ್ನು ಮೆಲುಕು ಹಾಕಲು, ಶಾಲೆಯ ಮಾಜಿ ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರಿಂದ ಹೊಡೆಸಿಕೊಳ್ಳುವ ಮೂಲಕ ತಮ್ಮ ಪುನರ್ಮಿಲನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದರು. ಹಾಗಾಗಿ ಎಕ್ಸ್ ಬಳಕೆದಾರರಾದ ಕೃಷ್ಣ ಎಂಬುವವರು ಶಾಲೆಯ ಪುನರ್ಮಿಲನವನ್ನು ತೋರಿಸುವ ಸಣ್ಣ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಪ್ರಾಂಶುಪಾಲರೆಂದು ಹೇಳಲಾದ ವ್ಯಕ್ತಿಯೊಬ್ಬರು ತಮ್ಮ ಮಾಜಿ ವಿದ್ಯಾರ್ಥಿಗಳನ್ನು “ಬೆತ್ತದಿಂದ ಹೊಡೆಯುತ್ತಿದ್ದಾರೆ. ಈ ವಿಡಿಯೊ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಈ ವಿಡಿಯೊದಲ್ಲಿ ಇದ್ದವರು ಮಧ್ಯವಯಸ್ಸಿಗೆ ಬಂದಿರುವ ಆಗಿನ ವಿದ್ಯಾರ್ಥಿಗಳು. ಅವರಲ್ಲಿ ಕೆಲವರು ಪೊಲೀಸ್ ಅಧಿಕಾರಿಗಳು, ವೈದ್ಯರು, ವಕೀಲರು, ಶಿಕ್ಷಕರು ಮತ್ತು ಬ್ಯುಸಿನೆಸ್‍ಮ್ಯಾನ್ ಆಗಿದ್ದಾರೆ. ಆದರೆ ಈಗ ತಮ್ಮ ಪುನರ್ಮಿಲನದ ಸಮಯದಲ್ಲಿ, ಅವರೆಲ್ಲರೂ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾ ತಮ್ಮ ಶಾಲಾ ಪ್ರಾಂಶುಪಾಲರ ಜೊತೆ ಕಳೆದ ಆ ವಿಶೇಷ ಕ್ಷಣವನ್ನು ಆನಂದಿಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರವನ್ನು ನೆನಪಿಸುವಂತಹ ಬಿಳಿ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು ಮತ್ತು ಒಬ್ಬೊಬ್ಬರಾಗಿ ಪ್ರಾಂಶುಪಾಲರ ಮುಂದೆ ಬಂದು ಪ್ರಾಂಶುಪಾಲರಿಂದ ಬೆತ್ತದಲ್ಲಿ ಹೊಡೆಸಿಕೊಳ್ಳುತ್ತಿದ್ದಾರೆ, ಆ ಮೂಲಕ ಅವರ ಶಾಲೆಯ ಹಳೆಯ ನೆನಪುಗಳನ್ನು ಮೆಲುಕುಹಾಕಿದ್ದಾರೆ. ಹಾಗೇ ಈ ರೀತಿ ಹೊಡೆಯುವುದು ಆ ವಿದ್ಯಾರ್ಥಿಗಳು ವ್ಯಕ್ತಪಡಿಸಿದ ವಿಶೇಷ ಬಯಕೆಯಾಗಿದ್ದು, ತಮ್ಮ ಯಶಸ್ಸಿಗೆ ತಮ್ಮ ಪ್ರಾಂಶುಪಾಲರ ಬೆತ್ತದ ಆಶೀರ್ವಾದವೇ ಕಾರಣ ಎಂದು ಆ ಮೂಲಕ ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಶಿಕ್ಷಕಿ, ಸಹಪಾಠಿಗಳ ಕಿರುಕುಳ ತಾಳಲಾರದೆ ನೇಣಿಗೆ ಶರಣಾದ ಬಾಲಕ

“ಶಾಲೆಯ ಹಳೆಯ ವಿದ್ಯಾರ್ಥಿಗಳ ವಿಚಿತ್ರ ಪುನರ್ಮಿಲನ ಇಲ್ಲಿದೆ! ಇದರಲ್ಲಿ ಪೊಲೀಸ್ ಅಧಿಕಾರಿಗಳು, ವೈದ್ಯರು, ವಕೀಲರು, ಪ್ರಾಂಶುಪಾಲರು, ಶಿಕ್ಷಕರು, ಉದ್ಯಮಿಗಳು ಮತ್ತು ಶಾಲೆಗಳ ಮಾಲೀಕರು ಇದ್ದಾರೆ. ಅವರೆಲ್ಲರಿಗೂ ಒಂದು ಆಸೆ ಇತ್ತು. ಅವರ ವಿಶೇಷವಾದ ಶಾಲಾ ಜೀವನವನ್ನು ನೆನಪಿಸಿಕೊಳ್ಳಲು ಅವರ ಪ್ರಾಂಶುಪಾಲರು ತಮ್ಮ ಬೆತ್ತದಿಂದ ಅವರನ್ನು ಹೊಡೆಯಬೇಕು. ಏಕೆಂದರೆ ಪ್ರಾಂಶುಪಾಲರ ಕೈಯಲ್ಲಿ ತಿಂದ ಆ ‘ಬೆತ್ತದ ಆಶೀರ್ವಾದ’ದ ಪರಿಣಾಮವಾಗಿ ಅವರು ತಮ್ಮ ಜೀವನದಲ್ಲಿ ಹೆಚ್ಚಿನ ಎತ್ತರವನ್ನು ತಲುಪಿದ್ದಾರೆ ಎಂದು ಅವರು ನಂಬುತ್ತಾರೆ” ಎಂದು ಈ ಪೋಸ್ಟ್ ಗೆ ಶೀರ್ಷಿಕೆ ಬರೆಯಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದನ್ನು ನೋಡಿದ ನಂತರ ಹಲವಾರು ಸೋಶಿಯಲ್ ಮೀಡಿಯಾದ ಬಳಕೆದಾರರು ತಮ್ಮ ಗತಕಾಲವನ್ನು ನೆನೆದು ಭಾವುಕರಾಗಿದ್ದಾರೆ ಎನ್ನಲಾಗಿದೆ.

Continue Reading
Advertisement
Independence day 2024
ವಿದೇಶ5 mins ago

Independence Day 2024: ಒಂದೇ ದಿನ ಸ್ವಾತಂತ್ರ್ಯ ಪಡೆದಿದ್ದರೂ ಪಾಕಿಸ್ತಾನದಲ್ಲೇಕೆ ಭಾರತಕ್ಕಿಂತ ಮೊದಲು ಸ್ವಾತಂತ್ರ್ಯ ದಿನಾಚರಣೆ?

Sexual Abuse
Latest39 mins ago

Sexual Abuse: ಫೇಲ್ ಮಾಡುವುದಾಗಿ ಹೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕನಿಗೆ 11 ಸಾವಿರ ರೂ. ದಂಡ!

Actor Darshan
ಬೆಂಗಳೂರು51 mins ago

Actor Darshan: ನಟ ದರ್ಶನ್‌ಗೆ ಆ.28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Job Alert
ಉದ್ಯೋಗ52 mins ago

Job Alert: ತೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ಆ. 16 ಕೊನೆಯ ದಿನ

yogi adityanath
ದೇಶ55 mins ago

Yogi Adityanath: ಪಾಕ್‌ ಭಾರತದ ಜೊತೆ ವಿಲೀನವಾಗುತ್ತೆ…ಇಲ್ಲದಿದ್ದರೆ ಅಸ್ತಿತ್ವದಲ್ಲೇ ಇರಲ್ಲ- ಯೋಗಿ ಆದಿತ್ಯಾನಾಥ್‌

Sexual Abuse
Latest57 mins ago

Sexual Abuse: 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿದ 9ನೇ ತರಗತಿ ವಿದ್ಯಾರ್ಥಿ!

Viral Video
Latest1 hour ago

Viral Video: ಹಳೆಯ ವಿದ್ಯಾರ್ಥಿಗಳನ್ನು ಸಾಲಾಗಿ ಕರೆಸಿ ಬೆತ್ತದಿಂದ ಹೊಡೆದ ಪ್ರಾಂಶುಪಾಲರು! ಅಪರೂಪದ ವಿಡಿಯೊ

ICC ODI Rankings
ಕ್ರೀಡೆ1 hour ago

ICC ODI Rankings: ದ್ವಿತೀಯ ಸ್ಥಾನಕ್ಕೆ ನೆಗೆದ ರೋಹಿತ್​ ಶರ್ಮ; ಕುಸಿತ ಕಂಡ ಗಿಲ್​

Album Song
ಬೆಂಗಳೂರು1 hour ago

Album Song: ಅನಿವಾಸಿ ಕನ್ನಡಿಗರ ‘ಹನಿ ಹನಿ’ ಆಲ್ಬಂ ಸಾಂಗ್ ರಿಲೀಸ್‌ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

Narendra Modi
ದೇಶ1 hour ago

Narendra Modi: ಭಾರತ ವಿಭಜನೆಯ ಕರಾಳ ದಿನ; ಬಾಧಿತರ ಧೈರ್ಯ, ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ: ಮೋದಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ6 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ6 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ6 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ1 week ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌