Viral Video: ಮನೆಯ ಗೇಟ್ ಬಳಿ ಸಿಂಹಗಳು ಮತ್ತು ಸಾಕು ನಾಯಿಗಳ ಕಾದಾಟ; ಎದೆ ನಡುಗಿಸುವ ವಿಡಿಯೊ - Vistara News

Latest

Viral Video: ಮನೆಯ ಗೇಟ್ ಬಳಿ ಸಿಂಹಗಳು ಮತ್ತು ಸಾಕು ನಾಯಿಗಳ ಕಾದಾಟ; ಎದೆ ನಡುಗಿಸುವ ವಿಡಿಯೊ

Viral Video: ಎರಡು ಸಿಂಹಗಳು ಮತ್ತು ಸಾಕು ನಾಯಿಗಳ ನಡುವಿನ ಜಗಳದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆದರೆ ಅವುಗಳನ್ನು ನಡುವೆ ಗೇಟ್ ಇದ್ದ ಕಾರಣ ಸಿಂಹಗಳು ನಾಯಿಗಳನ್ನು ಸುಮ್ಮನೆ ಬಿಟ್ಟು ಆ ಸ್ಥಳದಿಂದ ಹೋಗಿವೆ ಎನ್ನಲಾಗಿದೆ. ಈ ಪ್ರದೇಶ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 76 ಕಿ.ಮೀ ದೂರದಲ್ಲಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ಸಿಂಹ ತುಂಬಾ ಕ್ರೂರ ಪ್ರಾಣಿಗಳು. ಎದುರಿಗೆ ಬಂದರೆ ಎಂತಹ ಗಟ್ಟಿ ಹೃದಯದವರಾದರೂ ಒಂದು ಕ್ಷಣ ನಡುಗುತ್ತಾರೆ. ಅಂತಹದರಲ್ಲಿ ಸಾಕು ನಾಯಿಯೊಂದು ಸಿಂಹಗಳ ಜೊತೆ ಹೋರಾಟಕ್ಕೆ ಮುಂದಾಗಿದೆ. ಎರಡು ಸಿಂಹಗಳು ಮತ್ತು ಸಾಕು ನಾಯಿಗಳ ನಡುವಿನ ಜಗಳ ನಡೆದಿದೆ. ಸುಮಾರು ಒಂದು ನಿಮಿಷದವರೆಗೆ ನಡೆದ ಜಗಳದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗುತ್ತಿದೆ. ಆದರೆ ಅವುಗಳನ್ನು ನಡುವೆ ಗೇಟ್ ಇದ್ದ ಕಾರಣ ಸಿಂಹಗಳು ನಾಯಿಗಳನ್ನು ಸುಮ್ಮನೆ ಬಿಟ್ಟು ಆ ಸ್ಥಳದಿಂದ ಹೋಗಿವೆ.

ಈ ದೃಶ್ಯ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ಆಘಾತಕಾರಿ ಘಟನೆ ಗುಜರಾತ್‍ನ ಅಮ್ರೇಲಿ ಜಿಲ್ಲೆಯ ಸಾವರ್ಕುಂಡ್ಲಾದಲ್ಲಿ ನಡೆದಿದೆ ಎಂಬುದಾಗಿ ತಿಳಿದುಬಂದಿದೆ. ಈ ಪ್ರದೇಶ ಗಿರ್ ರಾಷ್ಟ್ರೀಯ ಉದ್ಯಾನವನದಿಂದ ಸುಮಾರು 76 ಕಿ.ಮೀ ದೂರದಲ್ಲಿದೆ. ವಿಡಿಯೊದಲ್ಲಿ, ಸಿಂಹವು ಹೊರಗಿನಿಂದ ಗೇಟ್ ಕಡೆಗೆ ಬರುತ್ತಿದೆ. ಆಗ ನಾಯಿಗಳು ಇದ್ದಕ್ಕಿದ್ದಂತೆ ಗೇಟ್‍ನೊಳಗಿನಿಂದ ಸಿಂಹದ ಮೇಲೆ ದಾಳಿ ಮಾಡುವಂತೆ ಬೊಗಳುತ್ತಾ ಗೇಟ್ ಕಡೆಗೆ ಬರುತ್ತಿದೆ. ನಂತರ ಮತ್ತೊಂದು ಸಿಂಹ ಬಂದು ಮತ್ತೆ ನಾಯಿ ಜೊತೆ ಕೆಲವು ಸೆಕೆಂಡುಗಳ ಕಾಲ ಜಗಳವಾಡುತ್ತದೆ. ಅವುಗಳ ಜಗಳದಿಂದ ಗೇಟ್ ಮುರಿದು ಬೀಳುತ್ತದೆಯೇ ಎಂದು ಅನಿಸುತ್ತದೆ.

ಕೊನೆಗೆ ಗೇಟ್ ತೆರೆದುಕೊಂಡಿದ್ದರಿಂದ ನಾಯಿ ಹಿಂದೆ ಸರಿದಿದೆ. ಆದರೆ, ಸಿಂಹಗಳು ಹತ್ತಿರದ ಪೊದೆಯಲ್ಲಿ ಕಣ್ಮರೆಯಾಗಿವೆ. ನಂತರ ನಾಯಿ ಹೊರಗೆ ಬರುತ್ತದೆ. ಹಾಗೇ ಅದರ ಜೊತೆ ಟಾರ್ಚ್ ಲೈಟ್ ಹಿಡಿದಿರುವ ವ್ಯಕ್ತಿಯೊಬ್ಬರು ಹೊರಗೆ ಬಂದು ಅಲ್ಲಿ ಹುಡುಕಾಡತೊಡಗಿದ್ದಾರೆ. ನಂತರ ಒಳಗೆ ಹೋಗಿ ಗೇಟ್ ಅನ್ನು ಲಾಕ್ ಮಾಡಿದ್ದಾರೆ.

ಇದನ್ನೂ ಓದಿ:ಒಂದು ಹಾವು, ಮೂರು ಮುಂಗುಸಿ; ಏರ್‌ಪೋರ್ಟ್‌ ರನ್‌ವೇಯಲ್ಲೇ ಫೈಟ್‌! ಸೋತಿದ್ಯಾರು? ವಿಡಿಯೊ ನೋಡಿ

ನಾಯಿಗಳು ಸಿಂಹಗಳು ಮತ್ತು ಚಿರತೆಗಳಂತಹ ಇತರ ಕಾಡು ಪ್ರಾಣಿಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಗಿರ್ ರಾಷ್ಟ್ರೀಯ ಉದ್ಯಾನ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಇಂತಹ ಕೆಲವು ಘಟನೆಗಳು ಈ ಹಿಂದೆಯೂ ವರದಿಯಾಗಿವೆ. ಹಾಗಾಗಿ ಗುಜರಾತ್‍ನಲ್ಲಿ ಸಿಂಹಗಳ ಹಾವಳಿ ಸರ್ವೇಸಾಮಾನ್ಯ. 2020ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 674 ಏಷ್ಯಾಟಿಕ್ ಸಿಂಹಗಳಿವೆ. ಏಷ್ಯಾಟಿಕ್ ಸಿಂಹವು ಪೂರ್ವದಲ್ಲಿ ಪಶ್ಚಿಮ ಬಂಗಾಳ ಮತ್ತು ಭಾರತದ ಮಧ್ಯ ಭಾಗದಲ್ಲಿ ಮಧ್ಯಪ್ರದೇಶದವರೆಗೆ ಹರಡಿದೆ ಎಂದು ತಿಳಿದುಬಂದಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪರಿಸರ

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

ಪ್ರತಿಯೊಂದು ಜೀವಿಗೂ (wildlife) ತಾಯಿಯೇ ದೇವರಾಗಿರುತ್ತದೆ. ತಾಯಿಯ ಆಶ್ರಯ ಇಲ್ಲದೆ ಬೆಳೆಯುವ ಜೀವಿಗಳು ಅಪರೂಪವೆಂದೇ ಹೇಳಬಹುದು. ಆದರೆ ಇದೊಂದು ಜೀವಿ ಮಾತ್ರ ಹುಟ್ಟಿದ ಕ್ಷಣವೇ ತಾಯಿಯನ್ನು ಕೊಂದು ತಿನ್ನುತ್ತದೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Wildlife
Koo

ಭೂಮಿ ಮೇಲೆ ಅಸಂಖ್ಯಾತ ಜೀವಿಗಳಿವೆ. ಕಣ್ಣಿಗೆ ಕಾಣದ ಜೀವಿಗಳಿಂದ (wildlife) ಹಿಡಿದು ಬೃಹತ್ ಗಾತ್ರದವರೆಗಿನ ಜೀವರಾಶಿಗಳು ತಮ್ಮದೇ ಆದ ಜೀವನಶೈಲಿ (Lifestyle), ಆಹಾರ ಶೈಲಿಯನ್ನು (food style) ಹೊಂದಿದೆ. ಭೂಮಿ (earth) ಮೇಲೆ ಇರುವ ಎಲ್ಲ ಜೀವರಾಶಿಗಳ ಪರಿಚಯ ಮಾನವನಿಗೆ ಇನ್ನೂ ಆಗಿಲ್ಲ. ಕೆಲವು ಜೀವಿಗಳ ಪರಿಚಯವಿದ್ದರೆ ಇನ್ನು ಕೆಲವು ನಮಗೆ ತಿಳಿದೇ ಇಲ್ಲ. ನಾವು ಗುರುತಿಸಬಲ್ಲ ಅನೇಕ ಜೀವಿಗಳ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಇಲ್ಲ.

ಪ್ರತಿಯೊಂದು ಜೀವಿಗೂ ತಾಯಿಯೇ ದೇವರಾಗಿರುತ್ತದೆ. ತಾಯಿಯ ಆಶ್ರಯ ಇಲ್ಲದೆ ಬೆಳೆಯುವ ಜೀವಿಗಳು ಅಪರೂಪವೆಂದೇ ಹೇಳಬಹುದು. ಆದರೆ ಇದೊಂದು ಜೀವಿ ಮಾತ್ರ ಹುಟ್ಟಿದ ಕ್ಷಣವೇ ತಾಯಿಯನ್ನು ಕೊಂದು ತಿನ್ನುತ್ತದೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು.

Wildlife
Wildlife


ಹುಟ್ಟಿದ ಕ್ಷಣದಿಂದ ತಾಯಿಗೇ ಅಪಾಯವನ್ನುಂಟು ಮಾಡುವ ಜೀವಿಯೆಂದರೆ ಚೇಳು (scorpions). ಅತ್ಯಂತ ಪ್ರಬಲ ವಿಷವನ್ನು ಹೊಂದಿರುವ ಚೇಳಿನ ಸಣ್ಣ ಪ್ರಮಾಣ ವಿಷವೂ ಮನುಷ್ಯನಿಗೆ ಅಪಾಯ ತರಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ ಚೇಳು ಕಡಿತವು ಮರಣದ ಅಪಾಯವನ್ನು ಹೆಚ್ಚಿಸುತ್ತದೆ.

ಚೇಳುಗಳು ಸಾಮಾನ್ಯವಾಗಿ ಸಣ್ಣ ಜೀವಿಗಳನ್ನು ಬೇಟೆಯಾಡುತ್ತವೆ. ಕುಟುಕು ಮೂಲಕ ತಮ್ಮ ವಿಷವನ್ನು ಉಣಿಸುತ್ತದೆ. ಈ ವಿಷವು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಚೇಳು ತನ್ನ ಬೇಟೆಯನ್ನು ಜೀವಂತವಾಗಿ ಸೇವಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಹೆಣ್ಣು ಚೇಳುಗಳು ಒಂದೇ ಬಾರಿಗೆ ಸರಿಸುಮಾರು 100 ಮರಿಗಳಿಗೆ ಜನ್ಮ ನೀಡುತ್ತವೆ. ಅವುಗಳು ಸೇರಿ ಅಂತಿಮವಾಗಿ ತಾಯಿಯನ್ನೇ ತಿನ್ನುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ತಾಯಿ ಚೇಳು ತನ್ನ ಮರಿಗಳನ್ನು ಪೋಷಿಸುತ್ತದೆ ಮತ್ತು ರಕ್ಷಿಸುತ್ತದೆ.


ಹೆಣ್ಣು ಚೇಳು ಮರಿಗಳನ್ನು ಬೆನ್ನಿನ ಮೇಲೆ ಇರಿಸಿ ಸಾಕುತ್ತದೆ. ಕ್ರಮೇಣ ಅವುಗಳು ತಾಯಿಯನ್ನೇ ಸಂಪೂರ್ಣವಾಗಿ ತಿನ್ನುತ್ತವೆ. ಮರಿಗಳು ಜನನದ ಅನಂತರ ತಕ್ಷಣವೇ ತಾಯಿಯ ಬೆನ್ನಿಗೆ ಅಂಟಿಕೊಳ್ಳುತ್ತವೆ. ತಾಯಿ ಕ್ಷೀಣಿಸಿ ನಾಶವಾಗುವವರೆಗೆ ಅದರ ಮಾಂಸವನ್ನು ತಿನ್ನುತ್ತವೆ. ತಾಯಿಯ ಎಲ್ಲಾ ಮಾಂಸವನ್ನು ಕಬಳಿಸಿದ ಅನಂತರವೇ ಚೇಳುಗಳು ಬೆನ್ನಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ಬದುಕಲು ಪ್ರಾರಂಭಿಸುತ್ತವೆ!

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!


ಚೇಳುಗಳು ಸಾಮಾನ್ಯವಾಗಿ ಕೀಟಗಳು ಮತ್ತು ಇತರ ಅಕಶೇರುಕಗಳನ್ನು ಬೇಟೆಯಾಗಿ ಗುರಿಯಾಗಿಸಿಕೊಳ್ಳುತ್ತವೆ. ಆದರೆ ಕೆಲವು ಪ್ರಭೇದಗಳು ಕಶೇರುಕಗಳನ್ನು ಬೇಟೆಯಾಡುತ್ತವೆ. ಅವುಗಳ ವಿಷಕಾರಿ ಕುಟುಕು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಣಯದ ಸಮಯದಲ್ಲಿ ಗಂಡು ಮತ್ತು ಹೆಣ್ಣು ಚೇಳುಗಳು ನೃತ್ಯದಲ್ಲಿ ತೊಡಗುತ್ತವೆ. ಎಲ್ಲಾ ಪ್ರಭೇದದ ಚೇಳುಗಳು ಮರಿಗಳಿಗೆ ಜನ್ಮ ನೀಡುತ್ತವೆ.

Continue Reading

Latest

‌Richard Lugner: ಇತ್ತೀಚೆಗಷ್ಟೆ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯಾಧೀಶ ಇನ್ನಿಲ್ಲ!

Richard Lugner: ಖ್ಯಾತ ಆಸ್ಟ್ರೀಯಾದ ಬಿಲಿಯನೇರ್ ಉದ್ಯಮಿ ರಿಚರ್ಡ್ ಲುಗ್ನರ್ ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಲುಗ್ನರ್ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ನರಳುತ್ತಿದ್ದರು ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.ಇನ್ನು ಕಿಮ್ ಕಾರ್ಡಶಿಯಾನ್ ತನ್ನ ಡೇಟಿಂಗ್ ಗರ್ಲ್ ಆಗುವುದಕ್ಕಾಗಿ ಆಕೆಗೆ ಬರೋಬ್ಬರಿ 5 ಲಕ್ಷ ಡಾಲರ್ ಹಣ ನೀಡಿದ್ದರು ಎಂದು ಸುದ್ದಿಯಲ್ಲಿದ್ದರು.

VISTARANEWS.COM


on

Viral Video
Koo


ಕಿಮ್ ಕಾರ್ಡಶಿಯಾನ್, ಸೋಫಿಯಾ ಲೊರೆನ್, ಜೇನ್ ಫೋಂಡಾ, ಪಮೇಲಾ ಆಂಡರ್ಸನ್ ಅವರಂತಹ ಹಾಲಿವುಡ್‍ನ ಫೇಮಸ್ ಸೆಲೆಬ್ರಿಟಿಗಳನ್ನು ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ನಡೆಯುವ ಐತಿಹಾಸಿಕ ಒಪೆರಾ ಬಾಲ್‍ನಲ್ಲಿ ಪರಿಚಯಿಸಿದ ಖ್ಯಾತ ಆಸ್ಟ್ರೀಯಾದ ಬಿಲಿಯನೇರ್ ಉದ್ಯಮಿ ರಿಚರ್ಡ್ ಲುಗ್ನರ್ (Richard Lugner) ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಲುಗ್ನರ್ ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳೊಂದಿಗೆ ನರಳುತ್ತಿದ್ದರು ಮತ್ತು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಕೇವಲ ಎರಡು ತಿಂಗಳ ಹಿಂದೆ ಆರನೇ ಬಾರಿಗೆ ವಿವಾಹವಾದ ಆಸ್ಟ್ರಿಯಾದ ಉದ್ಯಮಿ ವಿಯೆನ್ನಾದಲ್ಲಿನ ತಮ್ಮ ವಿಲ್ಲಾದಲ್ಲಿ ನಿಧನರಾದರು.

ಲುಗ್ನರ್ ನಿಧನಕ್ಕೆ ಸಂತಾಪ ಸೂಚಿಸಿದ ಆಸ್ಟ್ರಿಯಾದ ಚಾನ್ಸಲರ್ ಕಾರ್ಲ್ ನೆಹಮ್ಮರ್ ಎಕ್ಸ್ ನಲ್ಲಿ, “ರಿಚರ್ಡ್ ಲುಗ್ನರ್ ಯಶಸ್ವಿ ಉದ್ಯಮಿ ಮತ್ತು ಆಕರ್ಷಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಅವರು ಆಸ್ಟ್ರೀಯಾ ಮೂಲದ ನಿರ್ಮಾಣ ಲೋಕದ ಪ್ರಸಿದ್ಧ ವ್ಯಕ್ತಿಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದಿದ್ದಾರೆ.

ರಿಚರ್ಡ್ ಲುಗ್ನರ್ ಯಾರು?
ಲುಗ್ನರ್ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ಯಶಸ್ವಿ ಆಸ್ಟ್ರಿಯಾದ ಉದ್ಯಮಿಯಾಗಿದ್ದರು. ಅವರು ತಮ್ಮ ಆಕರ್ಷಕ ಜೀವನಶೈಲಿ ಮತ್ತು ಹಾಲಿವುಡ್‍ನ ಫೇಮಸ್ ಸೆಲೆಬ್ರಿಟಿಗಳನ್ನು ಹೋಸ್ಟ್ ಮಾಡಿದ ಕಾರಣಕ್ಕೆ ಇವರು ಸಾಕಷ್ಟು ಹೆಸರುವಾಸಿಯಾಗಿದ್ದರು. 2014 ರಲ್ಲಿ ಕಿಮ್ ಕಾರ್ಡಶಿಯಾನ್ ಸೇರಿದಂತೆ ಹಲವು ಮಹಿಳಾ ಸೆಲೆಬ್ರಿಟಿಗಳಿಗೆ ವಾರ್ಷಿಕ ವಿಯೆನ್ನಾ ಒಪೆರಾ ಬಾಲ್ ಕಾರ್ಯಕ್ರಮಗಳಿಗೆ ಡೇಟಿಂಗ್ ಮಾಡಲು ಅವಕಾಶ ನೀಡಿದ್ದರು.

Viral Video
Viral Video

ಅಲ್ಲದೇ ಈ ಕಾರ್ಯಕ್ರಮದಲ್ಲಿ ಕಾರ್ಡಶಿಯಾನ್ ತನ್ನ ಡೇಟಿಂಗ್ ಗರ್ಲ್ ಆಗುವುದಕ್ಕಾಗಿ ಆಕೆಗೆ ಬರೋಬ್ಬರಿ 5 ಲಕ್ಷ ಡಾಲರ್ ನೀಡಿದ್ದರು ಎಂದು ಸುದ್ದಿಯಲ್ಲಿದ್ದರು. ಅಲ್ಲದೇ ಇವರು ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದರು ಮತ್ತು ಆಸ್ಟ್ರಿಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಎರಡು ಬಾರಿ ಅಂದರೆ ಒಮ್ಮೆ 1998 ರಲ್ಲಿ ಮತ್ತು ಮತ್ತೆ 2016 ರಲ್ಲಿ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಭರತನಾಟ್ಯ ರಂಗಪ್ರವೇಶ ಮಾಡಿ ಇತಿಹಾಸ ನಿರ್ಮಿಸಿದ 13 ವರ್ಷದ ಚೀನೀ ಬಾಲಕಿ

ರಿಚರ್ಡ್ ಲುಗ್ನರ್ ಅಕ್ಟೋಬರ್ 11, 1932 ರಂದು ವಿಯೆನ್ನಾದಲ್ಲಿ ಜನಿಸಿದರು. ಅವರು ವಿಯೆನ್ನಾದಲ್ಲಿ ತಮ್ಮ “ಲುಗ್ನರ್ ಸಿಟಿ” ಶಾಪಿಂಗ್ ಕೇಂದ್ರವನ್ನು ನಿರ್ಮಿಸಿದರು. ಅವರು ಈ ಹಿಂದೆ ಕ್ರಿಸ್ಟೀನ್ ಗ್ಮೈನರ್ (1961-1978), ಕಾರ್ನೆಲಿಯಾ ಲಾಫರ್ಸ್ವೀಲರ್ (1979-1983), ಸುಸಾನೆ ಡೈಟ್ರಿಚ್ (1984-1989), ಕ್ರಿಸ್ಟಿನಾ ಲುಗ್ನರ್ (1990-2007) ಮತ್ತು ಪ್ಲೇಬಾಯ್ ರೂಪದರ್ಶಿ ಮತ್ತು ನಟಿ ಕ್ಯಾಥಿ ಶ್ಮಿಟ್ಜ್ (2014-2016) ಅವರನ್ನು ವಿವಾಹವಾದರು. ಅಲ್ಲದೇ ಜೂನ್ 1 2024ರಂದು ರಿಚರ್ಡ್ ಲುಗ್ನರ್ 42 ವರ್ಷದ ಸಿಮೊನೆ ರೈಲ್ಯಾಂಡರ್ ಎಂಬಾಕೆಯನ್ನು 6ನೇ ಬಾರಿ ಮದುವೆಯಾಗಿದ್ದರು. ಆ ಮದುವೆಯ ವೇಳೆ ಇದು ನನ್ನ ಕೊನೆಯ ಮದುವೆ ಎಂದು ಅವರು ಹೇಳಿದ್ದು, ಈಗ ಅವರು ಇಹಲೋಕ ತ್ಯಜಿಸುವ ಮೂಲಕ ಅದು ನಿಜವಾಗಿದೆ. ಈ ಸುದ್ದಿ ಓದಿದ ನೆಟ್ಟಿಗರು, ಕೊನೆಯ ಹೆಂಡತಿಯ ಅದೃಷ್ಟವೋ ಅದೃಷ್ಟ ಅಂತಿದ್ದಾರೆ!

Continue Reading

Latest

Viral News: ಈತ 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದಿದ್ದಾನೆ! 30 ವೈದ್ಯರ ತಂಡದ ಕಾರ್ಯಾಚರಣೆ!

Viral News: ಖಾಲಿದ್ ಬಿನ್ ಮೊಹ್ಸೆನ್ ಶಾರಿ ಸೌದಿ ಅರೇಬಿಯಾದ ಮಾಜಿ ದೊರೆ ಅಬ್ದುಲ್ಲಾ ಅವರ ಸಹಾಯದಿಂದ 542 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ ಅವರು ಐತಿಹಾಸಿಕ ದಾಖಲೆ ಮಾಡಿದ್ದಾರೆ. ಒಂದು ಕಾಲದಲ್ಲಿ 610 ಕೆಜಿ ತೂಕವಿದ್ದ ಶಾರಿ ಈಗ ಕೇವಲ 63 ಕೆಜಿ ತೂಕ ಹೊಂದಿದ್ದಾರೆ. ಶಾರಿ ತನ್ನ ಅತಿಯಾದ ತೂಕದಿಂದಾಗಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಹಾಸಿಗೆಯಲ್ಲೇ ಮಲಗಿದ್ದರು. ಮತ್ತು ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿತು, ಏಕೆಂದರೆ ಅವರು ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ತನ್ನ ಕುಟುಂಬ ಮತ್ತು ಪೋಷಕರ ಮೇಲೆ ಅಲಂಬಿತರಾಗಿದ್ದರು. ಕೊನೆಗೆ ಸೌದಿ ಅರೇಬಿಯಾದ ಮಾಜಿ ದೊರೆಯ ಸಹಾಯದಿಂದ ಅವರು ತಮ್ಮ ಅತಿಯಾದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗಿದೆ.

VISTARANEWS.COM


on

Viral News
Koo


ವಿಶ್ವದ ಅತಿ ತೂಕ ಹೊಂದಿರುವ ವ್ಯಕ್ತಿ ಎಂದು ಕರೆಸಿಕೊಂಡ ಖಾಲಿದ್ ಬಿನ್ ಮೊಹ್ಸೆನ್ ಶಾರಿ ಸೌದಿ ಅರೇಬಿಯಾದ ಮಾಜಿ ದೊರೆ ಅಬ್ದುಲ್ಲಾ ಅವರ ಸಹಾಯದಿಂದ 542 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ ಅವರು ಐತಿಹಾಸಿಕ ದಾಖಲೆ ಮಾಡಿದ್ದಾರೆ. ಒಂದು ಕಾಲದಲ್ಲಿ 610 ಕೆಜಿ ತೂಕವಿದ್ದ ಶಾರಿ ಈಗ ಕೇವಲ 63 ಕೆಜಿ ತೂಕ ಹೊಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿದೆ.

ಶಾರಿ ತನ್ನ ಅತಿಯಾದ ತೂಕದಿಂದಾಗಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಹಾಸಿಗೆಯಲ್ಲೇ ಮಲಗಿದ್ದರು. ಮತ್ತು ಅವರ ಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಿತು, ಏಕೆಂದರೆ ಅವರು ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಲು ತನ್ನ ಕುಟುಂಬ ಮತ್ತು ಪೋಷಕರ ಮೇಲೆ ಅಲಂಬಿತರಾಗಿದ್ದರು. ಕೊನೆಗೆ ಸೌದಿ ಅರೇಬಿಯಾದ ಮಾಜಿ ದೊರೆಯ ಸಹಾಯದಿಂದ ಅವರು ತಮ್ಮ ಅತಿಯಾದ ತೂಕವನ್ನು ಇಳಿಸಿಕೊಳ್ಳಲು ಸಾಧ್ಯವಾಗಿದೆ. ದೊರೆಯ ಸಹಾಯದಿಂದ ಅವರು ವೈದ್ಯಕೀಯ ಚಿಕಿತ್ಸೆಗಳನ್ನು ಉಚಿತವಾಗಿ ಪಡೆದರು ಎನ್ನಲಾಗಿದೆ.

ಹಾಗಾದ್ರೆ ಶಾರಿ ತೂಕ ಕಳೆದುಕೊಳ್ಳುವಂತೆ ಸೌದಿ ದೊರೆ ಮಾಡಿದ್ದೇನು? ಎಂಬುದಕ್ಕೆ ಇಲ್ಲಿದೆ ವಿವರ:
2013 ರಲ್ಲಿ ಶಾರಿಯ ಸ್ಥಿತಿಯ ಬಗ್ಗೆ ರಾಜ ಅಬ್ದುಲ್ಲಾ ಅವರ ಗಮನವನ್ನು ಸೆಳೆಯಿತು. ಅದಕ್ಕಾಗಿ ರಾಜ ಶಾರಿಯನ್ನು ವೈದ್ಯಕೀಯ ಸಹಾಯದಿಂದ ಸರಿಪಡಿಸಲು ಯೋಜನೆ ಮಾಡಿದರು. ಶಾರಿಗಾಗಿ ರೂಪಿಸಲಾದ ಯೋಜನೆಯಲ್ಲಿ, ಕಾರ್ಯ ನಿರ್ವಹಿಸಲು 30 ವೈದ್ಯರ ತಂಡವನ್ನು ರಚಿಸಲಾಯಿತು. ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೆಡ್ ಮತ್ತು ಫೋರ್ಕ್ ಲಿಫ್ಟ್ ಸಹಾಯದಿಂದ, ಶಾರಿಯನ್ನು ಜಜಾನ್‍ನಲ್ಲಿರುವ ಅವರ ಮನೆಯಿಂದ ರಿಯಾದ್‍ನ ಕಿಂಗ್ ಫಹಾದ್ ಮೆಡಿಕಲ್ ಸಿಟಿಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು. ಅವರ ಚಿಕಿತ್ಸಾ ಯೋಜನೆಯ ಭಾಗವಾಗಿ, ಅವರು ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಸೂಕ್ತವಾದ ಆಹಾರ ಮತ್ತು ಕಠಿಣ ವ್ಯಾಯಾಮ ನಿಯಮವನ್ನು ಅನುಸರಿಸಿದರು.

ಮೊದಲ ಆರು ತಿಂಗಳಲ್ಲಿ, ಹಲವಾರು ಫಿಸಿಯೋಥೆರಪಿ ಮತ್ತು ಇನ್ಟೆಸಿವ್ ಕೇರ್ ಸಹಾಯದಿಂದ ಅವರ ದೇಹದ ತೂಕದ ಅರ್ಧದಷ್ಟು ಕಳೆದುಕೊಳ್ಳಲು ಸಹಾಯ ಮಾಡಿತು. 2023 ರ ಹೊತ್ತಿಗೆ, ಅವರ ತೂಕವನ್ನು 63.5 ಕೆಜಿಗಳಿಗೆ ಇಳಿಸಲಾಯಿತು. ಆದರೆ ಅಂತಹ ದೊಡ್ಡ ತೂಕ ನಷ್ಟದಿಂದಾಗಿ ಉಳಿದಿದ್ದ ಹೆಚ್ಚುವರಿ ಚರ್ಮವನ್ನು ತೆಗೆದುಹಾಕಲು ಅವರು ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಬೇಕಾಯಿತು.

ಇದನ್ನೂ ಓದಿ:ಪಿಸ್ತೂಲ್ ಹಿಡಿದು ಚಿನ್ನ ದೋಚಲು ಬಂದವರನ್ನು ಕೋಲು ಹಿಡಿದು ಓಡಿಸಿದ ಅಂಗಡಿ ಮಾಲೀಕ!

ಅಂತಹ ಗಮನಾರ್ಹ ತೂಕ ನಷ್ಟಕ್ಕೆ ಒಳಗಾಗುವ ಜನರು ಸಾಮಾನ್ಯವಾಗಿ ಹೆಚ್ಚುವರಿ ಚರ್ಮ ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಇದರಿಂದ ಅವರ ಚರ್ಮವು ಅವರ ಹೊಸ ದೇಹದ ಆಕಾರಕ್ಕೆ ಹೊಂದಿಕೊಳ್ಳುತ್ತದೆ ಎನ್ನಲಾಗಿದೆ. ಈಗ, ಈ ವ್ಯಕ್ತಿಯನ್ನು “ದಿ ಸ್ಮೈಲಿಂಗ್ ಮ್ಯಾನ್” ಎಂದು ಕರೆಯಲಾಗುತ್ತದೆ, ಇದು ಅವನ ಗಮನಾರ್ಹ ರೂಪಾಂತರವನ್ನು ನೋಡಿದ ವೈದ್ಯಕೀಯ ಸಿಬ್ಬಂದಿ ಅವರಿಗೆ ನೀಡಲಾದ ಅಡ್ಡಹೆಸರು ಎನ್ನಲಾಗಿದೆ.

Continue Reading

Latest

Sexual Abuse: ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

Sexual Abuse: ವೈರಲ್ ಆಗುತ್ತಿರುವ ಈ ವಿಡಿಯೊದಲ್ಲಿ , ಆರೋಪಿಯು ನೆಲದ ಮೇಲೆ ಮಲಗಿದ್ದು, ಹುಡುಗಿಯರಲ್ಲಿ ಒಬ್ಬರು ಅವನನ್ನು ಬೆಲ್ಟ್ ನಿಂದ ಹೊಡೆಯುತ್ತಿದ್ದರೆ, ಇನ್ನೊಬ್ಬ ಹುಡುಗಿ ಅಲ್ಲಿ ನಿಂತಿದ್ದ ಜನರ ಮುಂದೆ ಆತನ ನೀಚತನವನ್ನು ಬಯಲಿಗೆಳೆಯುತ್ತಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿರುವ ಈ ವಿಡಿಯೊ ಮಹಿಳೆಯರ ಸುರಕ್ಷತೆಯ ಕಾಳಜಿಯ ಬಗ್ಗೆ ತಿಳಿಸುತ್ತದೆ.

VISTARANEWS.COM


on

Sexual Abuse
Koo


ಅಹ್ಮದಾಬಾದ್: ಇತ್ತೀಚಿನ ದಿನಗಳಲ್ಲಿ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳದ ಘಟನೆ ಹೆಚ್ಚಾಗಿ ಕೇಳಿಬರುತ್ತಿದೆ. ಕೆಲವರು ಇದರಿಂದ ಹೆದರಿ ತಪ್ಪಿಸಿಕೊಂಡರೆ ಕೆಲವು ಬಾಲಕಿಯರು ಅವರನ್ನು ಎದುರಿಸಿ ನಿಲ್ಲುತ್ತಾರೆ ಮತ್ತೆ ಲೈಂಗಿಕ ಕಿರುಕುಳ ನೀಡಿದವನಿಗೆ ತಕ್ಕ ಶಾಸ್ತಿ ಮಾಡುತ್ತಾರೆ. ಇದೀಗ ಅಂತಹದೊಂದು ಘಟನೆ ಅಹ್ಮದಾಬಾದ್‍ನಲ್ಲಿ ನಡೆದಿದೆ. ಇಬ್ಬರು ಸಹೋದರಿಯರು ತಮ್ಮಲ್ಲಿ ಒಬ್ಬರಿಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ನಡುರಸ್ತೆಯಲ್ಲಿ ಬೀಳಿಸಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದು ಹಳೆಯ ವಿಡಿಯೊವಾದರೂ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ (Sexual Abuse)ಆಗುತ್ತಿದೆ.

ವೈರಲ್ ಆಗುತ್ತಿರುವ ಈ ವಿಡಿಯೊದಲ್ಲಿ , ಆರೋಪಿಯು ನೆಲದ ಮೇಲೆ ಮಲಗಿದ್ದು, ಹುಡುಗಿಯರಲ್ಲಿ ಒಬ್ಬರು ಅವನನ್ನು ಬೆಲ್ಟ್ ನಿಂದ ಹೊಡೆಯುತ್ತಿದ್ದರೆ, ಇನ್ನೊಬ್ಬ ಹುಡುಗಿ ಅಲ್ಲಿ ನಿಂತಿದ್ದ ಜನರ ಮುಂದೆ ಆತನ ನೀಚತನವನ್ನು ಬಯಲಿಗೆಳೆಯುತ್ತಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿರುವ ಈ ವಿಡಿಯೊ ಮಹಿಳೆಯರ ಸುರಕ್ಷತೆಯ ಕಾಳಜಿಯ ಬಗ್ಗೆ ತಿಳಿಸುತ್ತದೆ.

ಮೂಲಗಳ ಪ್ರಕಾರ, ಒಡಿಶಾದ ಬೆಹ್ರಾಂಪುರದ 17 ವರ್ಷದ ಬಾಲಕಿಗೆ ವ್ಯಕ್ತಿಯೊಬ್ಬ ಕಿರುಕುಳ ನೀಡಿದಾಗ ಈ ಗಲಾಟೆ ನಡೆದಿದೆ. ಈ ಘಟನೆಯನ್ನು ನೋಡಿದ ಆಕೆಯ 19 ವರ್ಷದ ಅಕ್ಕ ಮಧ್ಯಪ್ರವೇಶಿಸಿದಳು. ನಂತರ ಇಬ್ಬರು ಸಹೋದರಿಯರು ಸಾರ್ವಜನಿಕವಾಗಿ ವ್ಯಕ್ತಿಯನ್ನು ಎದುರಿಸಲು ಮತ್ತು ಹೊಡೆಯಲು ಮುಂದಾದರು. ನ್ಯಾಯಕ್ಕಾಗಿ ಇಂತಹ ಸಾರ್ವಜನಿಕ ಸ್ಥಳದಲ್ಲಿ ಅಕ್ಕತಂಗಿ ಧೈರ್ಯವನ್ನು ಪ್ರದರ್ಶಿಸಿದ್ದಾರೆ. ಹಾಗಾಗಿ ಅಂತಹ ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳ ಅಗತ್ಯದ ಬಗ್ಗೆ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಈ ವಿಡಿಯೊ ಆನ್‍ಲೈನ್‍ನಲ್ಲಿ ಹಲವರ ಗಮನವನ್ನು ಸೆಳೆದಿದೆ, ಅನೇಕ ಬಳಕೆದಾರರು ಸಹೋದರಿಯರ ಕ್ರಮಗಳನ್ನು ಬೆಂಬಲಿಸಿದ್ದಾರೆ ಮತ್ತು ಅಂತಹ ಅಪರಾಧ ನಡವಳಿಕೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ಹೋಟೆಲ್ ರೂಂನಲ್ಲಿ ಒಬ್ಬಳಲ್ಲ, ಇಬ್ಬರು ಹುಡುಗಿಯರ ಜೊತೆ ಪತಿಯ ಸರಸ; ರೆಡ್‍ಹ್ಯಾಂಡ್ ಆಗಿ ಹಿಡಿದ ಪತ್ನಿಯ ಸಾಹಸ!

ತನ್ನ ಕಿರಿಯ ಸಹೋದರಿಯನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯನ್ನು ತನ್ನ ಹೆಣ್ಣುಮಕ್ಕಳು ಹೊಡೆದಿದ್ದಾರೆ ಎಂದು ಬಾಲಕಿಯರ ತಾಯಿಗೆ ಫೋನ್ ಕರೆ ಮೂಲಕ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯರು ತಪ್ಪು ಮಾಡಿದವನಿಗೆ ತಕ್ಷಣದ ಶಿಕ್ಷ ವಿಧಿಸಿದ್ದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Continue Reading
Advertisement
Bengaluru Roads
ಕರ್ನಾಟಕ10 mins ago

Bengaluru Roads: ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರಿಂದಲೇ ಮನವಿ!

Wildlife
ಪರಿಸರ11 mins ago

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

Karnataka Rain
ಮಳೆ18 mins ago

Karnataka Rain: ಗಂಗಾವತಿಯಲ್ಲಿ ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು; ಭತ್ತದ ಗದ್ದೆಗಳಿಗೆ ಹಾನಿ

Gold Rate
ಪ್ರಮುಖ ಸುದ್ದಿ20 mins ago

Gold Rate : ಬೆಲೆ ಏರಿಕೆ ಪರಿಣಾಮ; ಏಪ್ರಿಲ್-ಜುಲೈನಲ್ಲಿ ಚಿನ್ನದ ಆಮದು ಶೇ.4.23ರಷ್ಟು ಇಳಿಕೆ

Viral Video
Latest25 mins ago

‌Richard Lugner: ಇತ್ತೀಚೆಗಷ್ಟೆ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯಾಧೀಶ ಇನ್ನಿಲ್ಲ!

Viral News
Latest32 mins ago

Viral News: ಈತ 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದಿದ್ದಾನೆ! 30 ವೈದ್ಯರ ತಂಡದ ಕಾರ್ಯಾಚರಣೆ!

Sexual Abuse
Latest40 mins ago

Sexual Abuse: ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

Paris Paralympics
ಪ್ರಮುಖ ಸುದ್ದಿ57 mins ago

Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

karnataka Weather Forecast
ಮಳೆ1 hour ago

Karnataka Weather : ಇಂದು ಧ್ವಜಾರೋಹಣ ಆಯ್ತು, ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೂ ಮಳೆ ಅಡ್ಡಿ; ಬೆಂಗಳೂರು ಸೇರಿ ಕರಾವಳಿ, ಮಲೆನಾಡಿಗೆ ಅಲರ್ಟ್‌

Electric Shock
ಕರ್ನಾಟಕ2 hours ago

Electric Shock: ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಮನೆಗೆ ಹೋಗುವಾಗ ವಿದ್ಯುತ್ ತಗುಲಿ ವಿದ್ಯಾರ್ಥಿ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌