Techie Missing: ಕಾಣೆಯಾದ ಟೆಕ್ಕಿ ಪತ್ತೆ, ಪ್ರಕರಣಕ್ಕೆ ಟ್ವಿಸ್ಟ್‌; ಜೈಲಿಗಾದ್ರೂ ಹಾಕಿ, ಆದ್ರೆ ಹೆಂಡತಿ ಹತ್ರ ಹೋಗಲ್ಲ ಎಂದು ರೋದನ! - Vistara News

ಕ್ರೈಂ

Techie Missing: ಕಾಣೆಯಾದ ಟೆಕ್ಕಿ ಪತ್ತೆ, ಪ್ರಕರಣಕ್ಕೆ ಟ್ವಿಸ್ಟ್‌; ಜೈಲಿಗಾದ್ರೂ ಹಾಕಿ, ಆದ್ರೆ ಹೆಂಡತಿ ಹತ್ರ ಹೋಗಲ್ಲ ಎಂದು ರೋದನ!

Techie Missing: ಟೆಕ್ಕಿ ವಿಪಿನ್‌ ತನಗಿಂತ ಎಂಟು ವರ್ಷ ದೊಡ್ಡವಳನ್ನು ಮದುವೆಯಾಗಿದ್ದ. ಪತ್ನಿಗೆ 42 ವರ್ಷ, ವಿಪಿನ್‌ಗೆ 34 ವರ್ಷ. ವಿಪಿನ್‌ನೊಂದಿಗೆ ಎರಡನೇ ಮದುವೆಯಾಗಿದ್ದ ಪತ್ನಿ, ವಿಪಿನ್‌ಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಳೆನ್ನಲಾಗಿದೆ. ವಿಪಿನ್‌ನನ್ನು ತುಂಬಾ ಕಂಟ್ರೋಲ್ ಮಾಡುತ್ತಿದ್ದ ಈಕೆ, ಮನೆಯಲ್ಲೆಲ್ಲ ಸಿಸಿಟಿವಿ ಹಾಕಿಸಿ ಗಂಡನ ಮೇಲೆ ನಿಗಾ ಇಟ್ಟಿದ್ದಳು.

VISTARANEWS.COM


on

techie missing
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬೆಂಗಳೂರಲ್ಲಿ ಕಂಪ್ಯೂಟರ್‌ ಇಂಜಿನಿಯರ್‌ (Computer Engineer) ಒಬ್ಬಾತ ಕಾಣೆಯಾದ (Techie Missing) ಪ್ರಕರಣಕ್ಕೆ‌ ಟ್ವಿಸ್ಟ್ ದೊರೆತಿದೆ. ಕಾಣೆಯಾದ ವಿಪಿನ್‌ ಎಂಬ ಟೆಕ್ಕಿಯನ್ನು ನೋಯ್ಡಾದಲ್ಲಿ (Noida) ಪೊಲೀಸರು (Bangalore police) ಪತ್ತೆ ಹಚ್ಚಿದ್ದಾರೆ. ಆದರೆ ಆತ ಮಾತ್ರ ʼನನ್ನನ್ನು ಜೈಲಿಗಾದರೂ ಹಾಕಿ ಸಾರ್‌, ಆದರೆ ಹೆಂಡತಿ ಹತ್ರ ಮತ್ತೆ ಕಳಿಸಬೇಡಿʼ ಎಂದು ಅಲವತ್ತುಕೊಂಡಿದ್ದಾನೆ.

ಒಂದು ವಾರದಿಂದ ಕಾಣೆಯಾಗಿದ್ದ ಟೆಕ್ಕಿ ವಿಪಿನ್ ಬೆನ್ನು ಬಿದ್ದ ಬೆಂಗಳೂರು ಪೊಲೀಸರು, ಆತನನ್ನು ನೋಯ್ಡಾದಲ್ಲಿ ಪತ್ತೆ ಹಚ್ಚಿದ್ದಾರೆ. ನೊಯ್ಡಾದಿಂದ ಬೆಂಗಳೂರಿಗೆ ಕೊಡಿಗೆಹಳ್ಳಿ ಪೊಲೀಸರು ಕರೆತಂದಿದ್ದಾರೆ. ವಿಚಾರಣೆ ವೇಳೆ, ತಾನೇ ಸ್ವಇಚ್ಛೆಯಿಂದ ಮನೆ ಬಿಟ್ಟು ಹೋಗಿರುವುದಾಗಿ ಹೇಳಿಕೆ ನೀಡಿದ್ದಾನೆ.

ಪತಿ ಹಾಗೂ ಪತ್ನಿ ನಡುವೆ ವಯಸ್ಸಿನ ಅಂತರವಿತ್ತು. ಟೆಕ್ಕಿ ವಿಪಿನ್‌ ತನಗಿಂತ ಎಂಟು ವರ್ಷ ದೊಡ್ಡವಳನ್ನು ಮದುವೆಯಾಗಿದ್ದ. ಪತ್ನಿಗೆ 42 ವರ್ಷ, ವಿಪಿನ್‌ಗೆ 34 ವರ್ಷ. ವಿಪಿನ್‌ನೊಂದಿಗೆ ಎರಡನೇ ಮದುವೆಯಾಗಿದ್ದ ಪತ್ನಿ, ವಿಪಿನ್‌ಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಳೆನ್ನಲಾಗಿದೆ. ವಿಪಿನ್‌ನನ್ನು ತುಂಬಾ ಕಂಟ್ರೋಲ್ ಮಾಡುತ್ತಿದ್ದ ಈಕೆ, ಮನೆಯಲ್ಲೆಲ್ಲ ಸಿಸಿಟಿವಿ ಹಾಕಿಸಿ ಗಂಡನ ಮೇಲೆ ನಿಗಾ ಇಟ್ಟಿದ್ದಳು.

ಇದರಿಂದಾಗಿ ಸಾಕಷ್ಟು ನೊಂದಿದ್ದ ವಿಪಿನ್, ಆಕೆಯ ಸಹವಾಸವೇ ಬೇಡ ಎಂದು ಮನೆ ಬಿಟ್ಟು ಹೋಗಿದ್ದ. ಪತಿ ಕಾಣೆಯಾದ ಬಗ್ಗೆ ಎಕ್ಸ್‌ ಪೋಸ್ಟ್‌ನಲ್ಲಿ ಗೋಳು ತೋಡಿಕೊಂಡಿದ್ದ ಮಹಿಳೆ, ಪ್ರಧಾನ ಮಂತ್ರಿಗೂ ಎಕ್ಸ್‌ನಲ್ಲಿ ಈ ಪೋಸ್ಟನ್ನು ಟ್ಯಾಗ್ ಮಾಡಿದ್ದಳು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಇದೀಗ, ನಾನು ಮನೆಗೆ ಹೋಗುವುದಿಲ್ಲ ಎಂದು ಟೆಕ್ಕಿ ಪಟ್ಟು ಹಿಡಿದಿದ್ದಾನೆ.

ನನ್ನನ್ನ ಜೈಲಿಗೆ ಬೇಕಿದ್ದರೂ ಹಾಕಿ; ಆದರೆ ನಾನು ಮತ್ತೆ ಮನೆಗೆ ಹೋಗಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. ಈ ಗಂಡ- ಹೆಂಡತಿ ಬಿಕ್ಕಟ್ಟನ್ನು ಹೇಗೆ ಪರಿಹರಿಸುವುದು ಎಂದು ಅರ್ಥವಾಗದೆ ಕೊಡಿಗೇಹಳ್ಳಿ ಪೊಲೀಸರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

ಗೋವಾಗೆ ಕಳ್ಳಸಾಗಣೆ ಮಾಡುತ್ತಿದ್ದ ಹೆಣ್ಣು ಶಿಶು ರಕ್ಷಣೆ ವೇಳೆ ಅಧಿಕಾರಿಗಳ ಮೇಲೆ‌ ಹಲ್ಲೆ

ಗದಗ: ಗೋವಾ ರಾಜ್ಯಕ್ಕೆ ಕಳ್ಳಸಾಗಣೆ ಮಾಡಿ ಮಾರಾಟ ಮಾಡಲು ಮುಂದಾದ ಹೆಣ್ಣು ಶಿಶುವನ್ನು ರಕ್ಷಿಸಲು ಹೋದ ಅಧಿಕಾರಿಗಳ ಮೇಲೆ‌ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದಲ್ಲಿ ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಕ್ರಮ ಸಂಬಂಧದಿಂದ ಶಿಶು ಜನಿಸಿದ್ದರಿಂದ ಇವರನ್ನು ಗ್ರಾಮದಿಂದ ಹೊರಗೆ ಹಾಕಲಾಗಿತ್ತು. ಹೆಣ್ಣು ಶಿಶುವಿನೊಂದಿಗೆ ಗ್ರಾಮದ ನಿರ್ಜನ‌ ಪ್ರದೇಶದಲ್ಲಿ ಶಿಶುವಿನ ತಾಯಿ ಹಾಗೂ ಕುಟುಂಬ ವಾಸವಿದ್ದರು. ವಿಷಯ ತಿಳಿದ ಶಿಶು ಅಭಿವೃದ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ರುದ್ರಮ್ಮ, ಸಮಾಜ ಕಾರ್ಯಕರ್ತೆ ಲಲಿತಾ ಕುಂಬಾರ ಹಾಗೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರವೀಣಕುಮಾರ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಶಿಶು ರಕ್ಷಣೆ ಮಾಡಿ ಕಾರ್‌ನಲ್ಲಿ ಕರೆದುಕೊಂಡು ಬರುವಾಗ ಹಲ್ಲೆ ನಡೆಸಲಾಗಿದೆ.

40ಕ್ಕೂ ‌ಹೆಚ್ಚು ಜನರ ಗುಂಪು ಅಧಿಕಾರಿಗಳಿದ್ದ ಕಾರು ಅಡ್ಡಗಟ್ಟಿ ಗಲಾಟೆ ದಾಂಧಲೆ ನಡೆಸಿದೆ. ಮಗುವನ್ನು ಹೇಗೆ ಒಯ್ಯುತ್ತೀರಿ‌ ಎಂದು ಅಧಿಕಾರಿಗಳಿಂದ ಶಿಶುವನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿ ಪ್ರವೀಣಕುಮಾರ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಸಿದು ನೂಕಿದ್ದಾರೆ. ಈ ವೇಳೆ ಪ್ರವೀಣ ಕೊರಳಲ್ಲಿದ್ದ 11 ಗ್ರಾಂ ಬಂಗಾರದ ಚೈನ್ ಹರಿದು ಬಿಸಾಡಿದ್ದಾರೆ.

ಅಧಿಕಾರಿಗಳ ಜೊತೆಗೆ ಬಂದಿದ್ದ ಇತರೆ ಕಾರ್ಯಕರ್ತರ ಕಾರ್‌ನ ಚಕ್ರದ ಗಾಳಿ ತೆಗೆದು ಅಟ್ಟಹಾಸ ಮಾಡಿದ್ದಾರೆ. ಅಧಿಕಾರಿಗಳ ಭದ್ರತೆಗೆ ಆಗಮಿಸಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಹಲ್ಲೆಕೋರರ ಅಟ್ಟಹಾಸಕ್ಕೆ ಅಸಹಾಯಕರಾಗಿದ್ದಾರೆ. ಸ್ಥಳದಿಂದ ಬಚಾವ್ ಆಗಿ ತಪ್ಪಿಸಿಕೊಂಡು‌ ಬಂದ ಅಧಿಕಾರಿಗಳು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಿದ್ದಾರೆ.

ಇದನ್ನೂ ಓದಿ: Shocking Incident : ಮಹಿಳೆಯನ್ನು ನಗ್ನಗೊಳಿಸಿ ಶಸ್ತ್ರ ಚಿಕಿತ್ಸೆ ನಡೆಸಿದ ವಾರ್ಡ್​ ಬಾಯ್​! ವಿಡಿಯೊ ವೈರಲ್​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Child Trafficking: ಗೋವಾಗೆ ಕಳ್ಳಸಾಗಣೆ ಮಾಡುತ್ತಿದ್ದ ಹೆಣ್ಣು ಶಿಶು ರಕ್ಷಣೆ ವೇಳೆ ಅಧಿಕಾರಿಗಳ ಮೇಲೆ‌ ಹಲ್ಲೆ

Child Trafficking: 40ಕ್ಕೂ ‌ಹೆಚ್ಚು ಜನರ ಗುಂಪು ಅಧಿಕಾರಿಗಳಿದ್ದ ಕಾರು ಅಡ್ಡಗಟ್ಟಿ ಗಲಾಟೆ ದಾಂಧಲೆ ನಡೆಸಿದೆ. ಮಗುವನ್ನು ಹೇಗೆ ಒಯ್ಯುತ್ತೀರಿ‌ ಎಂದು ಅಧಿಕಾರಿಗಳಿಂದ ಶಿಶುವನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

VISTARANEWS.COM


on

child trafficking gadag
Koo

ಗದಗ: ಗೋವಾ (Goa) ರಾಜ್ಯಕ್ಕೆ ಕಳ್ಳಸಾಗಣೆ ಮಾಡಿ ಮಾರಾಟ (Child Trafficking) ಮಾಡಲು ಮುಂದಾದ ಹೆಣ್ಣು ಶಿಶುವನ್ನು ರಕ್ಷಿಸಲು ಹೋದ ಅಧಿಕಾರಿಗಳ ಮೇಲೆ‌ ಹಲ್ಲೆ (Assault Case) ನಡೆಸಿದ ಘಟನೆ ವರದಿಯಾಗಿದೆ. ಗದಗ (Gadag news) ಜಿಲ್ಲೆ ಮುಂಡರಗಿ ತಾಲೂಕಿನ ಶಿಂಗಟರಾಯನಕೇರಿ ತಾಂಡಾದಲ್ಲಿ ಮೂರು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೆಣ್ಣು ಶಿಶುವಿನೊಂದಿಗೆ ಗ್ರಾಮದ ನಿರ್ಜನ‌ ಪ್ರದೇಶದಲ್ಲಿ ಶಿಶುವಿನ ತಾಯಿ ಹಾಗೂ ಕುಟುಂಬ ವಾಸವಿದ್ದರು. ವಿಷಯ ತಿಳಿದ ಶಿಶು ಅಭಿವೃದ್ಧಿ ಇಲಾಖೆ ಮಹಿಳಾ ಮೇಲ್ವಿಚಾರಕಿ ರುದ್ರಮ್ಮ, ಸಮಾಜ ಕಾರ್ಯಕರ್ತೆ ಲಲಿತಾ ಕುಂಬಾರ ಹಾಗೂ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪ್ರವೀಣಕುಮಾರ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಶಿಶು ರಕ್ಷಣೆ ಮಾಡಿ ಕಾರ್‌ನಲ್ಲಿ ಕರೆದುಕೊಂಡು ಬರುವಾಗ ಹಲ್ಲೆ ನಡೆಸಲಾಗಿದೆ.

40ಕ್ಕೂ ‌ಹೆಚ್ಚು ಜನರ ಗುಂಪು ಅಧಿಕಾರಿಗಳಿದ್ದ ಕಾರು ಅಡ್ಡಗಟ್ಟಿ ಗಲಾಟೆ ದಾಂಧಲೆ ನಡೆಸಿದೆ. ಮಗುವನ್ನು ಹೇಗೆ ಒಯ್ಯುತ್ತೀರಿ‌ ಎಂದು ಅಧಿಕಾರಿಗಳಿಂದ ಶಿಶುವನ್ನು ಕಸಿದುಕೊಂಡು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿ ಪ್ರವೀಣಕುಮಾರ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಕಸಿದು ನೂಕಿದ್ದಾರೆ. ಈ ವೇಳೆ ಪ್ರವೀಣ ಕೊರಳಲ್ಲಿದ್ದ 11 ಗ್ರಾಂ ಬಂಗಾರದ ಚೈನ್ ಹರಿದು ಬಿಸಾಡಿದ್ದಾರೆ.

ಅಧಿಕಾರಿಗಳ ಜೊತೆಗೆ ಬಂದಿದ್ದ ಇತರೆ ಕಾರ್ಯಕರ್ತರ ಕಾರ್‌ನ ಚಕ್ರದ ಗಾಳಿ ತೆಗೆದು ಅಟ್ಟಹಾಸ ಮಾಡಿದ್ದಾರೆ. ಅಧಿಕಾರಿಗಳ ಭದ್ರತೆಗೆ ಆಗಮಿಸಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ಕೂಡ ಹಲ್ಲೆಕೋರರ ಅಟ್ಟಹಾಸಕ್ಕೆ ಅಸಹಾಯಕರಾಗಿದ್ದಾರೆ. ಸ್ಥಳದಿಂದ ಬಚಾವ್ ಆಗಿ ತಪ್ಪಿಸಿಕೊಂಡು‌ ಬಂದ ಅಧಿಕಾರಿಗಳು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಿದ್ದಾರೆ.

11 ವರ್ಷದ ಶಾಲಾ ಬಾಲಕಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

ಮುಂಬೈ: 11 ವರ್ಷದ ಬಾಲಕಿಯ ಮೇಲೆ ಶಾಲಾ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ (Physical Assault) ಮುಂಬೈನ ಕಾಂದಿವಲಿಯಲ್ಲಿ ನಡೆದಿದೆ. 7 ನೇ ತರಗತಿಯ ವಿದ್ಯಾರ್ಥಿ ಬುಧವಾರ ಈ ಬಗ್ಗೆ ಶಾಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಶಿಕ್ಷಕ ತನ್ನ ತರಗತಿಯ ನಂತರ ತನ್ನನ್ನು ಕರೆದು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಅವಳು ತನ್ನ ಪ್ರಾಂಶುಪಾಲರಿಗೆ ತಿಳಿಸಿದ್ದಾಳೆ. ಜುಲೈನಲ್ಲಿ ಈ ಘಟನೆ ನಡೆದಿದ್ದು ಇದೀಗ ಪ್ರಕರಣದ ದಾಖಲಾಗಿದೆ.

ಪ್ರಾಂಶುಪಾಲರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದು ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಶಿಕ್ಷಕನ ವಿರುದ್ಧ ಕಠಿಣ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯ ಹೇಳಿಕೆಯನ್ನು ದಾಖಲಿಸಲು ಶಿಕ್ಷಕರನ್ನು ಕರೆಸಲಾಗಿದೆ. ಪೊಲೀಸರು ಪುರಾವೆಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ತನಿಖೆ ಮಾಡುತ್ತಿದ್ದಾರೆ. ಕೋಲ್ಕೊತಾದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಿಂದ ಘಟನೆ ಬಳಿಕ ಬಾಲಕಿಯರು ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಭಾರಿ ಕಳವಳ ವ್ಯಕ್ತಗೊಂಡಿದ್ದು ಮಧ್ಯೆ ಈ ಘಟನೆ ವರದಿಯಾಗಿದೆ.

ಇದನ್ನೂ ಓದಿ: Shocking Incident : ಮಹಿಳೆಯನ್ನು ನಗ್ನಗೊಳಿಸಿ ಶಸ್ತ್ರ ಚಿಕಿತ್ಸೆ ನಡೆಸಿದ ವಾರ್ಡ್​ ಬಾಯ್​! ವಿಡಿಯೊ ವೈರಲ್​

Continue Reading

ಪ್ರಮುಖ ಸುದ್ದಿ

Physical Assault : 11 ವರ್ಷದ ಶಾಲಾ ಬಾಲಕಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ

Physical Assault : ಪ್ರಾಂಶುಪಾಲರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದು ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಶಿಕ್ಷಕನ ವಿರುದ್ಧ ಕಠಿಣ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

VISTARANEWS.COM


on

Physical Assault
Koo

ಮುಂಬೈ: 11 ವರ್ಷದ ಬಾಲಕಿಯ ಮೇಲೆ ಶಾಲಾ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ (Physical Assault) ಮುಂಬೈನ ಕಾಂದಿವಲಿಯಲ್ಲಿ ನಡೆದಿದೆ. 7 ನೇ ತರಗತಿಯ ವಿದ್ಯಾರ್ಥಿ ಬುಧವಾರ ಈ ಬಗ್ಗೆ ಶಾಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಶಿಕ್ಷಕ ತನ್ನ ತರಗತಿಯ ನಂತರ ತನ್ನನ್ನು ಕರೆದು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಅವಳು ತನ್ನ ಪ್ರಾಂಶುಪಾಲರಿಗೆ ತಿಳಿಸಿದ್ದಾಳೆ. ಜುಲೈನಲ್ಲಿ ಈ ಘಟನೆ ನಡೆದಿದ್ದು ಇದೀಗ ಪ್ರಕರಣದ ದಾಖಲಾಗಿದೆ.

ಪ್ರಾಂಶುಪಾಲರು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದು ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಶಿಕ್ಷಕನ ವಿರುದ್ಧ ಕಠಿಣ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

ಬಾಲಕಿಯ ಹೇಳಿಕೆಯನ್ನು ದಾಖಲಿಸಲು ಶಿಕ್ಷಕರನ್ನು ಕರೆಸಲಾಗಿದೆ. ಪೊಲೀಸರು ಪುರಾವೆಗಳಿಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ತನಿಖೆ ಮಾಡುತ್ತಿದ್ದಾರೆ. ಕೋಲ್ಕೊತಾದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯಿಂದ ಘಟನೆ ಬಳಿಕ ಬಾಲಕಿಯರು ಮತ್ತು ಮಹಿಳೆಯರ ಸುರಕ್ಷತೆಯ ಬಗ್ಗೆ ಭಾರಿ ಕಳವಳ ವ್ಯಕ್ತಗೊಂಡಿದ್ದು ಮಧ್ಯೆ ಈ ಘಟನೆ ವರದಿಯಾಗಿದೆ.

ಇದನ್ನೂ ಓದಿ: Shocking Incident : ಮಹಿಳೆಯನ್ನು ನಗ್ನಗೊಳಿಸಿ ಶಸ್ತ್ರ ಚಿಕಿತ್ಸೆ ನಡೆಸಿದ ವಾರ್ಡ್​ ಬಾಯ್​! ವಿಡಿಯೊ ವೈರಲ್​

ದೇಶಾದ್ಯಂತದ ಮಹಿಳೆಯರು ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಬೀದಿಗಳಲ್ಲಿ ತಮಗೆ ಸುರಕ್ಷಿತ ಪರಿಸರವನ್ನು ಬಯಸುತ್ತಿದ್ದಾರೆ ಎಂಬುದೇ ಚರ್ಚೆಯ ವಿಚಾರವಾಗಿದೆ. 2022 ರಲ್ಲಿ 63,414 ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಟಿಸಿದ ಇತ್ತೀಚಿನ ಅಪರಾಧ ಅಂಕಿ ಅಂಶಗಳು ತಿಳಿಸಿವೆ.

Continue Reading

ಕೋಲಾರ

Murder Case: ಶಿಕ್ಷಕಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ, ಹಂತಕರಿಂದ ಪುತ್ರಿ ಪಾರು

Murder Case: ಮುಳಬಾಗಿಲು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ದಿವ್ಯಶ್ರೀ ಅವರು ಮಗಳೊಂದಿಗೆ ವಾಸವಾಗಿದ್ದು, ಇವರ ಪತಿ ಪದ್ಮನಾಭ ಶೆಟ್ಟಿ ಅಗರಬತ್ತಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ. ಇವರ ಮತ್ತೊಬ್ಬ ಮಗ ಪ್ರೇಮ್‌ ವಿದ್ಯಾಭ್ಯಾಸದ ನಿಮಿತ್ತ ಬೇರೆ ಊರಿನಲ್ಲಿ ನೆಲೆಸಿದ್ದಾರೆ. ಪತಿ ಹೊರಗೆ ಹೋಗಿದ್ದು, ಮನೆಯಲ್ಲಿ ದಿವ್ಯಶ್ರೀ ಹಾಗೂ ಪುತ್ರಿ ನಿಶಾ ಮಾತ್ರ ಇದ್ದಾಗ ಪಾತಕ ನಡೆದಿದೆ.

VISTARANEWS.COM


on

teacher murder case
Koo

ಕೋಲಾರ: ಮನೆಯೊಳಗೆ ನುಗ್ಗಿದ ಮೂವರು ಹಂತಕರು (Killers) ಚಾಕುವಿನಿಂದ ಶಿಕ್ಷಕಿಯೊಬ್ಬರ (Teacher) ಕುತ್ತಿಗೆ ಕೊಯ್ದು (slitting throat) ಕೊಲೆ (Murder Case) ಮಾಡಿರುವ ಘಟನೆ ಮುಳಬಾಗಿಲು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋಲಾರ (Kolar news) ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿವ್ಯಶ್ರೀ (46) ಕೊಲೆಯಾದ ಶಿಕ್ಷಕಿ. ಮನೆಯ ಮೇಲ್ಮಾಳಿಗೆಯಲ್ಲಿದ್ದ ಪುತ್ರಿ ಕೊಲೆಗಡುಕರ ದೃಷ್ಟಿಗೆ ಬೀಳದೆ ಪಾರಾಗಿದ್ದಾಳೆ.

ಮುಳಬಾಗಿಲು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ದಿವ್ಯಶ್ರೀ ಅವರು ಮಗಳೊಂದಿಗೆ ವಾಸವಾಗಿದ್ದು, ಇವರ ಪತಿ ಪದ್ಮನಾಭ ಶೆಟ್ಟಿ ಅಗರಬತ್ತಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ. ಇವರ ಮತ್ತೊಬ್ಬ ಮಗ ಪ್ರೇಮ್‌ ವಿದ್ಯಾಭ್ಯಾಸದ ನಿಮಿತ್ತ ಬೇರೆ ಊರಿನಲ್ಲಿ ನೆಲೆಸಿದ್ದಾರೆ. ಪತಿ ಹೊರಗೆ ಹೋಗಿದ್ದು, ಮನೆಯಲ್ಲಿ ದಿವ್ಯಶ್ರೀ ಹಾಗೂ ಪುತ್ರಿ ನಿಶಾ ಮಾತ್ರ ಇದ್ದಾಗ ಪಾತಕ ನಡೆದಿದೆ.

ನಿಶಾ ನಿನ್ನೆ ಸಂಜೆ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಓದುತ್ತಿದ್ದಳು. ನೆಲ ಮಾಳಿಗೆಯಲ್ಲಿ ದಿವ್ಯಶ್ರೀ ಅವರು ರಾತ್ರಿ 7.30ರ ಸುಮಾರಿನಲ್ಲಿ ಟಿವಿ ವೀಕ್ಷಿಸುತ್ತ ಕುಳಿತಿದ್ದರು. ಆ ವೇಳೆ ಮೂವರು ಹಂತಕರು ಏಕಾಏಕಿ ಮನೆಯೊಳಗೆ ನುಗ್ಗಿ ಚಾಕುವಿನಿಂದ ದಿವ್ಯಶ್ರೀ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮನೆಯೊಳಗೆ ಏನೋ ಗಲಾಟೆಯಾಗುತ್ತಿದೆ ಎಂದು ನಿಶಾ ಕೆಳಗೆ ಇಳಿದು ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಇದ್ದದ್ದು ಕಂಡು ಚೀರಾಡಿದ್ದಾರೆ. ನೆರೆಹೊರೆಯವರು ಏನಾಯಿತೆಂದು ಇವರ ಮನೆಗೆ ಬಂದು ನೋಡಿ ತಕ್ಷಣ ರಕ್ತದ ಮಡುವಿನಲ್ಲಿ ಬಿದಿದ್ದ ದಿವ್ಯಶ್ರೀ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಜನಭರಿತ ಈ ಬಡಾವಣೆಯಲ್ಲಿ ಶಿಕ್ಷಕಿಯ ಕೊಲೆ ನಡೆದಿರುವುದು ಕಂಡು ಆತಂಕಗೊಂಡ ಸುತ್ತಮುತ್ತಲ ನಿವಾಸಿಗಳು ಭಯಭೀತರಾಗಿದ್ದಾರೆ.

ಎಸ್‌‍ಪಿ ನಿಖಿಲ್‌, ತಹಸೀಲ್ದಾರ್‌ ವೆಂಕಟಚಲಪತಿ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ರವಿಶಂಕರ್‌, ಜಗದೀಶ್‌, ಡಿವೈಎಸ್‌‍ಪಿ ನಂದಕುಮಾರ್‌, ನಗರ ಠಾಣೆ ಇನ್‌ಸ್ಪೆಕ್ಟರ್‌ ಶಿವಕುಮಾರ್‌, ಗ್ರಾಮಾಂತರ ಠಾಣೆ ಸಿ.ಪಿ.ಐ ಸತೀಶ್‌, ಪಿಎಸ್‌‍ಐಗಳಾದ ವಿಠಲ್‌ ವೈ ತಳವಾರ್‌, ಮಮತಾ, ನಂಗ್ಲಿ ಠಾಣೆಯ ಪಿಎಸ್‌‍ಐ ಅರ್ಜುನ್‌ ಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.

ಈ ಕೊಲೆ ಪೂರ್ವ ಯೋಜಿತವೇ ಅಥವಾ ಮನೆ ಕಳವಿಗೆ ಬಂದ ಕಳ್ಳರು ಈ ಕೃತ್ಯವೆಸಗಿದ್ದಾರೆಯೇ ಅಥವಾ ಬೇರೆ ಯಾವ ದುರುದ್ದೇಶದಿಂದ ಶಿಕ್ಷಕಿಯನ್ನು ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ತನಿಖೆಯೆಂದಷ್ಟೇ ಹೊರ ಬರಬೇಕಿದೆ. ಸ್ಥಳಕ್ಕೆ ಕೋಲಾರದಿಂದ ಬೆರಳಚ್ಚು ತಜ್ಞರು, ಎಫ್‌ಎಸ್‌‍ಎಲ್‌ ತಂಡ ಆಗಮಿಸಿ ಮಾದರಿಯನ್ನು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಟ್ರೈನಿ ವೈದ್ಯೆಯ ಹತ್ಯೆ-ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ; ಭಾರೀ ಲಾಠಿಚಾರ್ಜ್‌

Continue Reading

ಪ್ರಮುಖ ಸುದ್ದಿ

Physical Abuse : ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ನರ್ಸ್​ ಮೇಲೆ ಅತ್ಯಾಚಾರ ನಡೆಸಿ ಕೊಲೆ

Physical Abuse: ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರಿ ಕಾಣೆಯಾದ ದೂರು ದಾಖಲಿಸಿದರು. ಎಂಟು ದಿನಗಳ ನಂತರ, ಆಗಸ್ಟ್ 8 ರಂದು, ಉತ್ತರ ಪ್ರದೇಶ ಪೊಲೀಸರು ಡಿಬ್ಡಿಬಾ ಗ್ರಾಮದಲ್ಲಿರುವ ಅವರ ಮನೆಯಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಆಕೆಯ ಶವವನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಅದ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿತ್ತು.

VISTARANEWS.COM


on

Physical Abuse
Koo

ಬೆಂಗಳೂರು: ಉತ್ತರಾಖಂಡದ ಖಾಸಗಿ ಆಸ್ಪತ್ರೆಯಿಂದ ಉತ್ತರ ಪ್ರದೇಶದ ಗಡಿಯಲ್ಲಿರುವ ತನ್ನ ಮನೆಗೆ ಹಿಂದಿರುಗುತ್ತಿದ್ದ ನರ್ಸ್ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ ವೃತ್ತಿ ತರಬೇತಿ ಪಡೆಯುತ್ತಿದ್ದ ವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿಕೊಂಡ ಕೊಲೆ ಮಾಡಿದ ಪ್ರಕರಣದ ಬಗ್ಗೆ ಗಂಭೀರ ಚರ್ಚೆ ಹಾಗೂ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಅದೇ ಮಾದರಿಯ ಘಟನೆಯೊಂದು ಉತ್ತರಾಖಂಡಲ್ಲಿ ವರದಿಯಾಗಿದೆ. ಜುಲೈ 30 ರ ಸಂಜೆ ಆಸ್ಪತ್ರೆಯಿಂದ ಹೊರಟ ಅವರು ರುದ್ರಪುರದ ಇಂದ್ರ ಚೌಕ್​ನಿಂದ ಇ-ರಿಕ್ಷಾದಲ್ಲಿ ಪ್ರಯಾಣಿಸಿದ್ದರು. ಆದರೆ ಉತ್ತರ ಪ್ರದೇಶದ ಬಿಲಾಸ್ಪುರದ ಕಾಶಿಪುರ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ತಲುಪಲಿಲ್ಲ. ವಿವಾಹಿತ ಮಹಿಳೆಗೆ 11 ವರ್ಷದ ಮಗಳಿದ್ದು ಆಕೆಯೊಂದು ವಾಸವಾಗಿದ್ದರು. ಆಕೆಯನ್ನು ಕೊಲೆ ಮಾಡಿರುವ ದಿನಗೂಲಿ ಕಾರ್ಮಿಕನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರಿ ಕಾಣೆಯಾದ ದೂರು ದಾಖಲಿಸಿದರು. ಎಂಟು ದಿನಗಳ ನಂತರ, ಆಗಸ್ಟ್ 8 ರಂದು, ಉತ್ತರ ಪ್ರದೇಶ ಪೊಲೀಸರು ಡಿಬ್ಡಿಬಾ ಗ್ರಾಮದಲ್ಲಿರುವ ಅವರ ಮನೆಯಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಆಕೆಯ ಶವವನ್ನು ಪತ್ತೆ ಹಚ್ಚಿದ್ದರು. ಈ ವೇಳೆ ಅದ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿತ್ತು.

ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಬಳಿಕ ಆರೋಪಿಗಳನ್ನು ಹುಡುಕಲು ಪೊಲೀಸ್ ತಂಡವನ್ನು ರಚಿಸಿದ್ದರು. ಪೊಲೀಸರು ಸಂತ್ರಸ್ತೆಯ ಮೊಬೈಲ್ ಫೋನ್ ಅನ್ನು ಪತ್ತೆಹಚ್ಚಿ ಅದರ ಮೂಲಕ ವಿವರಗಳನ್ನು ಸಂಗ್ರಹಿಸಿದ್ದಾರೆ. ಈ ವೇಳೆ ಆರೋಪಿ ಧರ್ಮೇಂದ್ರ ಬಳಿಗೆ ಸಿಕ್ಕಿ ಬಿದ್ದಿದ್ದಾನೆ. ಉತ್ತರ ಪ್ರದೇಶದ ಬರೇಲಿಯ ದಿನಗೂಲಿ ಕಾರ್ಮಿಕನಾದ ಆರೋಪಿಯನ್ನು ರಾಜಸ್ಥಾನದಲ್ಲಿ ಬುಧವಾರ ಬಂಧಿಸಲಾಗಿದೆ.

ಇದನ್ನೂ ಓದಿ: Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

ಕುಡಿದ ಮತ್ತಿನಲ್ಲಿದ್ದ ಧರ್ಮೇಂದ್ರ, ನರ್ಸ್​ ಹಿಂಬಾಲಿಸಿ ಹಿಂಬಾಲಿಸಿ ಅಪಾರ್ಟ್​ಮೆಂಟ್​ ಕಟ್ಟಡಕ್ಕೆ ಪ್ರವೇಶಿಸುತ್ತಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಬಳಿಕ ಆಕೆಯನ್ನು ಹತ್ತಿರದ ಪೊದೆಗಳಿಗೆ ಎಳೆದೊಯ್ದನು. ಸ್ಕಾರ್ಫ್ ಬಳಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಉಧಮ್ ಸಿಂಗ್ ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಟಿ.ಸಿ ಹೇಳಿದ್ದಾರೆ.

ಆರೋಪಿಯು ಆಕೆ ಮೃತಪಟ್ಟ ಮೇಲೆ ಫೋನ್ ಮತ್ತು ಪರ್ಸ್ ನಿಂದ 3,000 ರೂ.ಗಳನ್ನು ಸಹ ಕದ್ದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೋಲ್ಕತಾದ ಆರ್ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯದ ಸಮಯದಲ್ಲಿ ಮಹಿಳಾ ತರಬೇತಿ ವೈದ್ಯರ ಅತ್ಯಾಚಾರ ಮತ್ತು ಕೊಲೆಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ಮಧ್ಯೆ ಈ ಬೆಳವಣಿಗೆ ನಡೆದಿದೆ. ಕಳೆದ ವಾರ ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಹಾಲ್​​ನಲ್ಲಿ 31 ವರ್ಷದ ಮಹಿಳೆಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು.

ಈ ಕ್ರೂರ ಘಟನೆಯು ವೈದ್ಯರ ಕೆಲಸದ ಸ್ಥಳಗಳಲ್ಲಿ ಉತ್ತಮ ಸುರಕ್ಷತೆಯ ಕಾಳಜಿಯ ಬಗ್ಗೆ ಚರ್ಚೆಗಳು ಎದ್ದಿವೆ. ವೈದ್ಯಕೀಯ ಸಿಬ್ಬಂದಿಯ ಮೇಲಿನ ದಾಳಿಯನ್ನು ತಡೆಯಲು ಕೇಂದ್ರ ಆರೋಗ್ಯ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ದೇಶಾದ್ಯಂತ ನಿವಾಸಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.

Continue Reading
Advertisement
ICC Champions Trophy
ಕ್ರಿಕೆಟ್5 mins ago

ICC Champions Trophy: ಭಾರತ ತಂಡ ಪಾಕ್​ಗೆ ತೆರಳುವ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಜಯ್​ ಶಾ

Employee ID card
ಕರ್ನಾಟಕ13 mins ago

Employee ID card: ರಾಜ್ಯ ಸರ್ಕಾರಿ ನೌಕರರಿಗೆ ಕೆಂಪು-ಹಳದಿ ಬಣ್ಣದ ಗುರುತಿನ ಚೀಟಿಯ ಟ್ಯಾಗ್‌ ಕಡ್ಡಾಯ

Rishab Shetty first reaction after kantara national award
ಸ್ಯಾಂಡಲ್ ವುಡ್19 mins ago

Rishab Shetty: ಈ ಪ್ರಶಸ್ತಿ ದೈವಕ್ಕೆ ಸಲ್ಲಬೇಕು ಎಂದ ರಿಷಬ್ ಶೆಟ್ಟಿ; ನಟನ ಫಸ್ಟ್‌ ರಿಯಾಕ್ಷನ್‌ ಹೀಗಿತ್ತು!

Kannada New Movie
ಬೆಂಗಳೂರು21 mins ago

Kannada New Movie: ತೆರೆಯ‌ ಮೇಲೆ‌ ಚಿತ್ರವಾಗಿ ಬರಲಿದೆ ಡಿ.ವಿ.ಜಿ ಅವರ ʼಮಂಕುತಿಮ್ಮನ ಕಗ್ಗʼ; ಮೊದಲ ಹಾಡು ರಿಲೀಸ್‌

70th National Film Award
ಪ್ರಮುಖ ಸುದ್ದಿ29 mins ago

70th National Film Awards : ಕನ್ನಡಿಗರಿಗೆ ಹೆಮ್ಮೆ ತಂದ ರಿಷಭ್​ ಶೆಟ್ಟಿ, ಕೆಜಿಎಫ್​​; ಮಲಯಾಳಂನ ‘ಆಟಂ’ ಅತ್ಯುತ್ತಮ ಸಿನೆಮಾ; ಸಂಪೂರ್ಣ ಲಿಸ್ಟ್‌ ಇಲ್ಲಿದೆ

Rishab Shetty cinema Journey before Kantara
ಸ್ಯಾಂಡಲ್ ವುಡ್33 mins ago

Rishab Shetty: ಅಣ್ಣಾವ್ರ ಅಪ್ಪಟ ಅಭಿಮಾನಿ ರಿಷಬ್‌ ಶೆಟ್ಟಿ ಸಿನಿ ಜರ್ನಿ ಹೀಗಿತ್ತು! ನಾಡಿಗೆ ಕೀರ್ತಿ ತಂದ ಕುಂದಾಪುರದ ಹುಡುಗ!

Virat Kohli
ಕ್ರಿಕೆಟ್48 mins ago

Virat Kohli: ಲಂಡನ್​ನ ಸಿಗ್ನಲ್​ನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ನಿಂತ ಕೊಹ್ಲಿ; ವಿಡಿಯೊ ವೈರಲ್

Teachers Transfer
ಕರ್ನಾಟಕ58 mins ago

Teachers Transfer: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗುಡ್‌ ನ್ಯೂಸ್‌; ನಾಳೆಯಿಂದ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ

Bengaluru Power Cut
ಕರ್ನಾಟಕ1 hour ago

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.17ರಂದು ಪವರ್‌ ಕಟ್‌!

70th National Film Awards Rishabh Shetty Best Actor, KGF 2 Best Kannada Movie
ಸ್ಯಾಂಡಲ್ ವುಡ್1 hour ago

70th National Film Awards: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌ 2 ಅತ್ಯುತ್ತಮ ಕನ್ನಡ ಚಿತ್ರ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌