Robin Uthappa: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಬಿನ್ ಉತ್ತಪ್ಪಗೆ ಬಿಗ್ ರಿಲೀಫ್; ಜಾಮೀನು ರಹಿತ ವಾರೆಂಟ್​ಗೆ ಹೈಕೋರ್ಟ್ ತಡೆ - Vistara News

ಕ್ರೀಡೆ

Robin Uthappa: ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಬಿನ್ ಉತ್ತಪ್ಪಗೆ ಬಿಗ್ ರಿಲೀಫ್; ಜಾಮೀನು ರಹಿತ ವಾರೆಂಟ್​ಗೆ ಹೈಕೋರ್ಟ್ ತಡೆ

Robin Uthappa: ಉತ್ತಪ್ಪ ಅವರು 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2006 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್‌ ಉತ್ತಪ್ಪ, 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್‌ ಗಳನ್ನು ಗಳಿಸಿದ್ದಾರೆ.

VISTARANEWS.COM


on

Robin Uthappa
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಚೆಕ್ ಬೌನ್ಸ್ ಪ್ರಕರಣದಲ್ಲಿ(Robin Uthappa cheque bounce case) ಟೀಮ್​ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ರಾಬಿನ್​ ಉತ್ತಪ್ಪ(Robin Uthappa) ಅವರಿಗೆ ಮ್ಯಾಜಿಸ್ಟ್ರೇಟ್ ನೀಡಿದ್ದ ಜಾಮೀನು ರಹಿತ ವಾರೆಂಟ್​ಗೆ ಮುಂಬೈ ಹೈಕೋರ್ಟ್ ತಡೆ ನೀಡಿದೆ. ಹೀಗಾಗಿ ಅವರು ನಿರಾಳರಾಗಿದ್ದಾರೆ. ಉತ್ತಪ್ಪ ವಿರುದ್ಧದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.

ನ್ಯಾಯಮೂರ್ತಿ ನೀಲಾ ಘೋಖಲೆ ನೇತೃತ್ವದ ಪೀಠ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದು, ಉತ್ತಪ್ಪ ಪರ ವಕೀಲರು ಸೆಪ್ಟೆಂಬರ್ 6ರೊಳಗೆ ವಿಚಾರಣೆಗೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧದ ಜಾಮೀನು ರಹಿತ ಬಂಧನ ವಾರೆಂಟ್​​ಗೆ ತಡೆ ನೀಡಲಾಗಿದೆ.

ರಾಬಿನ್ ಉತ್ತಪ್ಪ ಮಧ್ಯವರ್ತಿ ಕಂಪನಿ ಮೂಲಕ ಸೆನಾಟರ್ ಪ್ರವೇಟ್ ಲಿಮಿಟೆಡ್ ಕಂಪನಿ ಜತೆ ಉಡುಪುಗಳ ರಾಯಭಾರಿಯಾಗಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಕಂಪನಿ ಜತೆ ಉತ್ತಪ್ಪ ಸಂಬಂಧ ಕಡಿದುಕೊಂಡಿದ್ದರು. ಆದರೆ, ಆ ಬಳಿಕ ನಡೆದ ಪತ್ರ ವ್ಯವಹಾರಗಳು ಉತ್ತಪ್ಪ ಗಮನಕ್ಕೆ ಬಂದಿರಲಿಲ್ಲ. ಸಮನ್ಸ್ ಮತ್ತು ವಾರಂಟ್‌ಗಳು ಸೆಂಟಾರಸ್‌ನ ನೋಂದಾಯಿತ ಕಚೇರಿಗೆ ಹೋಗುತ್ತಿದ್ದವು. ಹೀಗಾಗಿ ಉತ್ತಪ್ಪ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು. ಉತ್ತಪ್ಪ ಅವರು ಏಪ್ರಿಲ್ 28, 2024 ರಂದು ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಕರೆ ಮಾಡಿದಾಗ ಮಾತ್ರ ಬಾಕಿ ಇರುವ ಘೋಷಣೆ ಮತ್ತು ತಮ್ಮ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿರುವುದು ತಿಳಿದುಕೊಂಡಿದ್ದಾರೆ.

ಇದನ್ನೂ ಓದಿ Viral Video: ಉತ್ತಪ್ಪಮ್‌ ಮೇಲೆ ಮೂಡಿದ ಕಲಾಕೃತಿ; ತಿನ್ನಲು ಮನಸ್ಸೇ ಬರದು ಎಂದ ನೆಟ್ಟಿಗರು

ನಂತರ ಉತ್ತಪ್ಪ ಜಾಮೀನು ರಹಿತ ವಾರೆಂಟ್ ರದ್ದುಗೊಳಿಸುವಂತೆ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ ಅವರ ವಿನಂತಿಯನ್ನು ತಿರಸ್ಕರಿಸಲಾಗಿತ್ತು. ಸದ್ಯ ಉತ್ತಪ್ಪ ಜಾಮೀನು ರಹಿತ ಬಂಧನ ವಾರೆಂಟ್​​ನಿಂದ ಮುಕ್ತರಾಗಿದ್ದಾರೆ.

ಉತ್ತಪ್ಪ ಅವರು 2022ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. 2006 ರಲ್ಲಿ ಇಂಗ್ಲೆಂಡ್‌ ವಿರುದ್ಧದ ಏಕದಿನ ಪಂದ್ಯದ ಮೂಲಕ ಭಾರತ ತಂಡಕ್ಕೆ ಪಾದರ್ಪಣೆ ಮಾಡಿದ ರಾಬಿನ್‌ ಉತ್ತಪ್ಪ, 46 ಏಕದಿನ ಪಂದ್ಯಗಳನ್ನು ಆಡಿದ್ದು, 934 ರನ್‌ ಗಳನ್ನು ಗಳಿಸಿದ್ದಾರೆ. 86 ಅವರ ಸರ್ವಾಧಿಕ ರನ್.‌ 2007 ರ ಟಿ-20 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಿದ್ದ ಉತ್ತಪ್ಪ ಪಾಕಿಸ್ತಾನ ವಿರುದ್ಧದ ಸಮಬಲಗೊಂಡ ಪಂದ್ಯದಲ್ಲಿ ಬಾಲ್‌ ಶೂಟೌಟ್​ನಲ್ಲಿ ಗೆಲ್ಲಲು ಪ್ರಧಾನ ಪಾತ್ರ ವಹಿಸಿದ್ದರು. 13 ಅಂತಾರಾಷ್ಟ್ರೀಯ ಟಿ-20 ಪಂದ್ಯವನ್ನಾಡಿರುವ ಅವರು, 118.01 ಸ್ಟ್ರೈಕ್‌ ರೇಟ್‌ ನೊಂದಿಗೆ 249 ರನ್‌ ಗಳಿಸಿದ್ದಾರೆ.

2015 ರಲ್ಲಿ ಕೊನೆಯ ಬಾರಿ ಜಿಂಬಾಬ್ಬೆ ವಿರುದ್ಧದ ಏಕದಿನ ಹಾಗೂ ಟಿ-20 ಯನ್ನು ಆಡಿದ್ದರು. ಐಪಿಎಲ್‌ ನಲ್ಲಿ ಮಂಬಯಿ, ಆರ್‌ ಸಿಬಿ, ಕೆಕೆಆರ್‌, ರಾಜಸ್ಥಾನ್‌ ರಾಯಲ್ಸ್‌, ಸಿಎಸ್‌ ಕೆ ಪರವಾಗಿ ಆಡಿದ್ದರು. ಐಪಿಎಲ್‌ ನಲ್ಲಿ 205 ಪಂದ್ಯವನ್ನಾಡಿ ಒಟ್ಟು 4952 ರನ್‌ ಗಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Manu Bhaker: 3 ತಿಂಗಳ ರಜೆಯಲ್ಲಿ ಭರತನಾಟ್ಯ, ಕುದುರೆ ಸವಾರಿ, ಸ್ಕೇಟಿಂಗ್ ಕಲಿಯಲಿದ್ದಾರೆ ಮನು ಭಾಕರ್

Manu Bhaker: ಮುಂದಿನ ಮೂರು ತಿಂಗಳ ಕಾಲ 22 ವರ್ಷದ ಮನು ಭಾಕರ್​ ತಮ್ಮ ನೆಚ್ಚಿನ ಭರತನಾಟ್ಯ(Manu Bhaker Bharatnatyam), ಕುದುರೆ ಸವಾರಿ, ವಯೋಲಿನ್​ ನುಡಿಸುವುದು, ಮಾರ್ಷಿಯಲ್​ ಆರ್ಟ್ಸ್​ ಮತ್ತು ಸ್ಕೇಟಿಂಗ್​ನಂಥ ಹವ್ಯಾಸಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

VISTARANEWS.COM


on

Manu Bhaker
Koo

ನವದೆಹಲಿ: ಒಂದೇ ಒಲಿಂಪಿಕ್ಸ್ ಅಭಿಯಾನದಲ್ಲಿ ಎರಡು ಶೂಟಿಂಗ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಎಂಬ ಇತಿಹಾಸವನ್ನು ಬರೆದಿರುವ ಮನು ಭಾಕರ್​(Manu Bhaker) ಅವರು ಕೆಲ ದಿನಗಳ ಹಿಂದೆ ಮುಂದಿನ 3 ತಿಂಗಳು ಶೂಟಿಂಗ್​ನಿಂದ ಸಂಪೂರ್ಣ ದೂರ ಉಳಿಯಲಿದ್ದೇನೆ ಎಂದು ಹೇಳಿದ್ದರು. ಆದರೆ, ಅವರ ಈ ವಿಶ್ರಾಂತಿಗೆ ಕಾರಣ ಏನೆಂಬುದು ತಿಳಿಸಿರಲಿಲ್ಲ. ಇದೀಗ ತಮ್ಮ ಈ ರಜೆಯ ಹಿಂದಿರುವ ಕಾರಣವನ್ನು ಸ್ವತಃ ಅವರೇ ರಿವೀಲ್​ ಮಾಡಿದ್ದಾರೆ. 3 ತಿಂಗಳ ವಿಶ್ರಾಂತಿಯಿಂದ ಅಕ್ಟೋಬರ್​ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಶೂಟಿಂಗ್​ ವಿಶ್ವಕಪ್ ಫೈನಲ್​ಗೆ ಅಲಭ್ಯರಾಗಲಿದ್ದಾರೆ.

ಹೌದು, ಮುಂದಿನ ಮೂರು ತಿಂಗಳ ಕಾಲ 22 ವರ್ಷದ ಮನು ಭಾಕರ್​ ತಮ್ಮ ನೆಚ್ಚಿನ ಭರತನಾಟ್ಯ(Manu Bhaker Bharatnatyam), ಕುದುರೆ ಸವಾರಿ, ವಯೋಲಿನ್​ ನುಡಿಸುವುದು, ಮಾರ್ಷಿಯಲ್​ ಆರ್ಟ್ಸ್​ ಮತ್ತು ಸ್ಕೇಟಿಂಗ್​ನಂಥ ಹವ್ಯಾಸಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ವಿವಾರವನ್ನು ಮನು ಸಂದರ್ಶನವೊಂದಲ್ಲಿ ತಿಳಿಸಿದ್ದಾರೆ.

‘ನಾನು ಭರತನಾಟ್ಯವನ್ನು ಕಲಿಯುತ್ತಿರುವೆ. ಅದು ನನಗಿಷ್ಟ. ಫ್ರಾನ್ಸ್​ನಲ್ಲಿ ಶೂಟಿಂಗ್​ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾಗ, ಭರತನಾಟ್ಯ ಕ್ಲಾಸ್​ನಲ್ಲಿ ಪಾಲ್ಗೊಳ್ಳಲು ಸಮಯ ಸಿಕ್ಕಿರಲಿಲ್ಲ. ನೃತ್ಯ ಎಂದರೆ ನನಗಿಷ್ಟ. ಇದುವರೆಗೂ ತಮಿಳುನಾಡಿನ ಶಿಕ್ಷಕರೊಬ್ಬರ ಸಹಾಶಯದಿಂದ ಆನ್​ಲೈನ್​ನಲ್ಲಿಯೇ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದೆ. ಇದೀಗ ನೇರವಾಗಿ ಹಾಜರಾಗಿ ನೃತ್ಯ ಕಲಿಯುವೆ. ಜತೆಗೆ ವಯೋಲಿನ್​ ಕಲಿಕೆ ಮುಂದುವರಿಸುವೆ. ಶೂಟಿಂಗ್​ಗೆ ಮುನ್ನ ಕರಾಟೆ ಕಲಿತಿದ್ದೆ. ಮತ್ತೆ ಅದರಲ್ಲಿ ತೊಡಗಿಸಿಕೊಳ್ಳುವೆ’ ಎಂದರು.

ಇದನ್ನೂ ಓದಿ Manu Bhaker-Neeraj Chopra: ನೀರಜ್​ ಚೋಪ್ರಾ ಜತೆ ಮದುವೆ ವದಂತಿ; ಸ್ಪಷ್ಟನೆ ನೀಡಿದ ಮನು ಭಾಕರ್​ ತಂದೆ

ಕುದುರೆ ಸವಾರಿಯೂ ನನಗಿಷ್ಟ


ಕುದುರೆ ಸವಾರಿ ಕೂಡ ಇಷ್ಟ. ಕೆಲವು ವರ್ಷಗಳಿಂದ ಕುದುರೆ ಸವಾರಿ ಕಲಿಯತ್ತಿರುವೆ. ಜತೆಗೆ ಸ್ಕೇಟಿಂಗ್ ಕೂಟ ಕಲಿಯುತ್ತಿರುವೆ. ಸ್ಕೂಬಾ ಡೈವಿಂಗ್​ ಬಗ್ಗೆಯೂ ಆಸಕ್ತಿ ಇದೆ. ಆದರೆ ಇದುವರೆಗೂ ಸ್ಕೂಬಾ ಡೈವಿಂಗ್ ಮಾಡಿಲ್ಲ. ಇದನ್ನೂ ಕೂಡ ಶೀಘ್ರದಲ್ಲೇ ಮಾಡುವೆ ಎಂದು ಎಂದು ಮನು ಭಾಕರ್​ ಸುದ್ದಿಸಂಸ್ಥೆ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಮನು ಭಾಕರ್​ ಅವರು ಸ್ವಿಮ್ಮಿಂಗ್‌ ಪೂಲ್‌ ಬಳಿ ಕುಳಿತು ವಯೋಲಿನ್ ಮೂಲಕ ರಾಷ್ಟ್ರಗೀತೆ ಜನ ಗಣ ಮನವನ್ನು ಬಹಳ ಇಂಪಾಗಿ ನುಡಿಸಿದ್ದ ವಿಡಿಯೊ ವೈರಲ್​ ಆಗಿತ್ತು.

ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್​ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್​ ಶೂಟಿಂಗ್​ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.

ಭಾಕರ್(Manu Bhaker)​ ಅವರ ಜಾಹೀರಾತು ಮೌಲ್ಯದಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್​ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್​ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್​ ಕೇರ್​, ನ್ಯೂಟ್ರೀಷಿಯನ್​ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ 40 ಕಂಪನಿಗಳು(40 brands chasing Manu Bhaker) ಮನು ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿತ್ತು. ಭಾರತ ತಂಡದ ಸ್ಟಾರ್​ ಕ್ರಿಕೆಟಿಗರು ಜಾಹೀರಾತು ಒಪ್ಪಂದಗಳಿಗೆ ವಾರ್ಷಿಕ 3 ರಿಂದ 6 ಕೋಟಿ ರೂ. ಪಡೆಯುತ್ತಾರೆ. ಬ್ಯಾಡ್ಮಿಂಟನ್​ ಆಟಗಾರ್ತಿ ಪಿ,ವಿ ಸಿಂಧು 2022ರಲ್ಲಿ 2.21 ಕೋಟಿ ರೂ. ಮೊತ್ತದ ಒಪ್ಪಂದ ಪಡೆದಿದ್ದೇ ಭಾರತದಲ್ಲಿ ಕ್ರಿಕೆಟಿಗರ ಹೊರತಾಗಿ ಇತರ ಕ್ರೀಡಾಪಟುಗಳು ಪಡೆದ ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಲಿಂಪಿಕ್ಸ್​ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್​ ಆಕ್ಟಿವ್​ವೇರ್​ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.

Continue Reading

ಕ್ರೀಡೆ

Vinesh Phogat: ತವರಿಗೆ ಮರಳಿದ ವಿನೇಶ್​​​ ಫೋಗಟ್​ಗೆ ಭರ್ಜರಿ ಸ್ವಾಗತ; ಅಭಿಮಾನಿಗಳನ್ನು ಕಂಡು ಕಣ್ಣೀರು

Vinesh Phogat: ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿ ತವರಿಗೆ ಮರಳಿರುವ ಭಾರತದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ್ದರು. ಈ ವೇಳೆ ವಿನೇಶ್ ಫೋಗಟ್ ಸಾಧನೆ ಕುರಿತು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

VISTARANEWS.COM


on

Vinesh Phogat
Koo

ನವದೆಹಲಿ: ನಿಗದಿತ ತೂಕಗಿಂತ ಹೆಚ್ಚಿನ ಭಾರ ಇದ್ದ ಕಾರಣ ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ಚಿನ್ನದ ಪದಕದ ಸ್ಪರ್ಧೆಯಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್‌ ಪೋಗಟ್‌(Vinesh Phogat) ಶನಿವಾರ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪದಕ ಗೆಲ್ಲಲಾಗದ ನೋವಿನಲ್ಲಿದ್ದ ವಿನೇಶ್ ಅಭಿಮಾನಿಗಳನ್ನು ಕಂಡ ತಕ್ಷಣ ಜೋರಾಗಿ ಅಳುತ್ತಾ ಕೈ ಮುಗಿದು ಧನ್ಯವಾದ ತಿಳಿಸಿದರು. ಕುಟುಂಬದ ಸದಸ್ಯರು, ಮಾಜಿ ಒಲಿಂಪಿನ್,​ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್​, ಬಜರಂಗ್​ ಪೂನಿಯಾ ಸೇರಿ ಹಲವು ಕುಸ್ತಿಪಟುಗಳು ಈ ವೇಳೆ ​ಜತೆಗಿದ್ದರು.

ವಿಮಾನ ನಿಲ್ದಾಣದಿಂದ ಹೊರ ಬಂದ ತಕ್ಷಣ ವಿನೇಶ್​ ಸಾಕ್ಷಿ ಮಲಿಕ್​ ಅವರ ಎದೆಗಪ್ಪಿಕೊಂಡು ಕಣ್ಣೀರು ಸುರಿಸಿದ ದೃಶ್ಯ ಕಂಡು ಒಂದು ಕ್ಷಣ ನೆರದಿದ್ದ ಕ್ರೀಡಾಭಿಮಾನಿಗಳು ಕೂಡ ಅತ್ಯಂತ ಭಾವುಕರಾಗಿ ನಿಂತು ಬಿಟ್ಟರು.ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿ 50 ಕೆ.ಜಿ ವಿಭಾಗದಲ್ಲಿ ಉತ್ಕೃಷ್ಟ ಪ್ರದರ್ಶನ ತೋರುವ ಮೂಲಕ ಫೈನಲ್‌ ತಲುಪಿದ್ದ ವಿನೇಶ್ ಅವರು ಇನ್ನೇನು ಫೈನಲ್​ ಆಡಲು ಕೆಲವೇ ಗಂಟೆಗಳು ಬಾಕಿ ಇರುವಾಗ ಅವರನ್ನು ಅನರ್ಹ ಎಂದು ಘೋಷಿಸಲಾಯಿತು. ದೇಹತೂಕದಲ್ಲಿ ನಿಗದಿತ ಸ್ಪರ್ಧೆಯ ತೂಕಕ್ಕಿಂತ 100 ಗ್ರಾಂ ಹೆಚ್ಚಾದ ಕಾರಣಕ್ಕೆ ಅವರು ಅನರ್ಹಗೊಂಡಿದ್ದರು.

ಸೆಮಿಫೈನಲ್​ ವೇಳೆ ವಿನೇಶ್​ 49.9 ಕೆಜಿ ತೂಕವಿದ್ದರು. 3 ಬೌಟ್‌ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್‌ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್‌ ನಡೆಸಿ, ಸ್ಕಿಪ್ಪಿಂಗ್‌ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.

ಇದನ್ನೂ ಓದಿ Vinesh Phogat Emotional Post: ಅಪ್ಪನ ಸಾವು, ತಾಯಿಗೆ ಕ್ಯಾನ್ಸರ್ ಇರುವ ವಿಚಾರ ತಿಳಿದು ಆಕಾಶವೇ ಕಳಚಿ ಬಿದ್ದಂತಾಗಿತ್ತು; ಭಾವುಕರಾದ ವಿನೇಶ್ ಫೋಗಟ್​​

ಹರಿಯಾಣ ಸರ್ಕಾರ ವಿನೇಶ್​ಗೆ ವಿಶೇಷ ಗೌರವ ಸೂಚಿಸುವುದಾಗಿ ಘೋಷಣೆ ಮಾಡಿತ್ತು. ದಿಲ್ಲಿಯಿಂದ ಬಂದೊಡಣೆ ಅವರನ್ನು ಪದಕ ವಿಜೇತರಂತೆ ಸ್ವಾಗತಿಸಲು ಇಲ್ಲಿನ ಸರ್ಕಾರ ಸಲಕ ಸಿದ್ಧತೆ ನಡೆಸಿದೆ. ವಿಜೇತರಂತೆ ಸ್ವಾಗತಿಸಲು ಮತ್ತು ಗೌರವಿಸಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಈಗಾಗಲೇ ಘೋಷಿಸಿದ್ದಾರೆ.

ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಿ ತವರಿಗೆ ಮರಳಿರುವ ಭಾರತದ ಕ್ರೀಡಾಪಟುಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ಸಂವಾದ ನಡೆಸಿದ್ದರು. ಈ ವೇಳೆ ವಿನೇಶ್ ಫೋಗಟ್ ಸಾಧನೆ ಕುರಿತು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. “ವಿನೇಶ್​ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದು ನಮ್ಮ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಅನರ್ಹಗೊಂಡ ಬೇಸರದಲ್ಲೇ ವಿನೇಶ್​ ಕುಸ್ತಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ವಿನೇಶ್ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿ (ಸಿಎಎಸ್) ತಿರಸ್ಕರಿಸಿತ್ತು. ಹೋಗಾಗಿ ಕೊನೆಯ ಆಸೆ ಕೂಡ ಕಮರಿಹೋಗಿದೆ. ಕಳೆದ ವರ್ಷ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಕುಸ್ತಿಪಟುಗಳು ನಡೆಸಿದ್ದ ಮುಷ್ಕರದಲ್ಲಿ ವಿನೇಶ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.

Continue Reading

ಕ್ರೀಡೆ

Vinesh Phogat Emotional Post: ಅಪ್ಪನ ಸಾವು, ತಾಯಿಗೆ ಕ್ಯಾನ್ಸರ್ ಇರುವ ವಿಚಾರ ತಿಳಿದು ಆಕಾಶವೇ ಕಳಚಿ ಬಿದ್ದಂತಾಗಿತ್ತು; ಭಾವುಕರಾದ ವಿನೇಶ್ ಫೋಗಟ್​​

Vinesh Phogat: ನನ್ನೊಳಗಿನ ಹೋರಾಟ ಮತ್ತು ಕುಸ್ತಿ ಯಾವಾಗಲೂ ಇದ್ದೇ ಇರುತ್ತದೆ. ಒಂದಂತೂ ಖಚಿತ. ನಾನು ನಂಬಿರುವ ಸಂಗತಿಗಳಿಗಾಗಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಕುಸ್ತಿಪಟು ವಿನೇಶ್​ ಫೋಗಟ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

VISTARANEWS.COM


on

Vinesh Phogat Emotional Post
Koo

ನವದೆಹಲಿ: ಕೇವಲ 100 ಗ್ರಾಂ ತೂಕ ಹೆಚ್ಚು ಇದ್ದ ಕಾರಣ ಒಲಿಂಪಿಕ್ಸ್​ ಫೈನಲ್​ ಸ್ಪರ್ಧೆಯಿಂದ ಅನರ್ಹಗೊಂಡು ಪದಕ ವಂಚಿತರಾದ ಕುಸ್ತಿಪಟು ವಿನೇಶ್​ ಫೋಗಟ್​(Vinesh Phogat) ಪ್ಯಾರಿಸ್​ನಿಂದ ತವರಿಗೆ ಮರಳಿದ್ದಾರೆ. ಇದೇ ವೇಳೆ ಭಾವನಾತ್ಮಕ ಪ್ರತವೊಂದನ್ನು(Vinesh Phogat Emotional Post) ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ನಮ್ಮ ಪ್ರಯತ್ನಗಳು ನಿಲ್ಲಲಿಲ್ಲ ಮತ್ತು ನಾವು ಶರಣಾಗಲೂ ಇಲ್ಲ. ಆದರೆ ಸಮಯ ಸ್ತಬ್ಧವಾಯಿತು ಹಾಗೂ ಕಾಲ ಸರಿಯಿರಲಿಲ್ಲ. ಅದು ನನ್ನ ಹಣೆಬರಹ’ ಎಂದು ಬರೆದುಕೊಂಡಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಕುಸ್ತಿ 50 ಕೆ.ಜಿ ವಿಭಾಗದಲ್ಲಿ ಉತ್ಕೃಷ್ಟ ಪ್ರದರ್ಶನ ತೋರುವ ಮೂಲಕ ಫೈನಲ್‌ ತಲುಪಿದ್ದ ವಿನೇಶ್ ಅವರು ಇನ್ನೇನು ಫೈನಲ್​ ಆಡಲು ಕೆಲವೇ ಗಂಟೆಗಳು ಬಾಕಿ ಇರುವಾಗ ಅವರನ್ನು ಅನರ್ಹ ಎಂದು ಘೋಷಿಸಲಾಯಿತು. ದೇಹತೂಕದಲ್ಲಿ ನಿಗದಿತ ಸ್ಪರ್ಧೆಯ ತೂಕಕ್ಕಿಂತ 100 ಗ್ರಾಂ ಹೆಚ್ಚಾದ ಕಾರಣಕ್ಕೆ ಅವರು ಅನರ್ಹಗೊಂಡಿದ್ದರು.

ಇದೇ ಆಘಾತದಲ್ಲಿ ವಿನೇಶ್​ ತಮ್ಮ ಕ್ರೀಡಾಜೀವನಕ್ಕೆ ವಿದಾಯ ಹೇಳಿದ್ದರು. ಸೆಮಿಫೈನಲ್‌ ಜಯಿಸುವವರೆಗೂ ತೂಕ ನಿಯಮಬದ್ಧವಾಗಿದ್ದ ಕಾರಣಕ್ಕೆ ಬೆಳ್ಳಿ ಪದಕವನ್ನು ನೀಡಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಮಂಡಳಿಗೆ (ಸಿಎಎಸ್‌) ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅವರ ಮನವಿ ಕೂಡ ತಿರಸ್ಕಾಗೊಂಡಿದೆ. ಹೀಗಾಗಿ ಪದಕ ಗೆಲ್ಲುವ ಕೊನೆಯ ಪ್ರಯತ್ನ ಕೂಡ ಕಮರಿ ಹೋಹಿದೆ. ಇದೇ ನೋವಿನಲ್ಲಿ ಅವರು ಭಾವನಾತ್ಮ ಪತ್ರವೊಂದನ್ನು ಬರೆದಿದ್ದಾರೆ.

“ನಾನು ತಂದೆಯ ಫೇವರೇಟ್​ ಮಗಳು. ಏಕೆಂದರೆ ನಾನೇ ಚಿಕ್ಕವಳಾಗಿದ್ದೆ . ಅಪ್ಪ ರಸ್ತೆಯಲ್ಲಿ ಬಸ್‌ ಓಡಿಸುತ್ತಿರಬೇಕಾದರೆ ನನ್ನ ಮಗಳು ಆಕಾಶದಲ್ಲಿ ವಿಮಾನದಲ್ಲಿ ಓಡಾಡಬೇಕು ಎಂದು ಕನಸು ಕಂಡಿದ್ದರು. ಆದರೆ ನಾನು ಮಾತ್ರ ಅಪ್ಪನ ಕನಸು ನಿಜವಾಗಿಸುತ್ತೇನೆ ಎಂದು ಕನಸು ಕಂಡಿರಲಿಲ್ಲ. ಆದರೆ, ಒಂದು ದಿನ ಅಪ್ಪ ನಮ್ಮನ್ನ ಬಿಟ್ಟು ಹೋದರು. ಈ ನೋವು ಸಹಿಸಿಕೊಳ್ಳುವ ಮುನ್ನವೇ ನನ್ನ ಅಮ್ಮನಿಗೂ ಕ್ಯಾನ್ಸರ್ 3ನೇ ಸ್ಟೇಜ್‌ಗೆ ಬಂದಿರುವುದು ತಿಳಿದಾಗ ನನಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು” ಎಂದು ಭಾವುಕ ನುಡಿಗಳನ್ನು ಬರೆದಿದ್ದಾರೆ

‘ಯಾವ ಗುರಿಗಾಗಿ ಶ್ರಮಿಸಿದ್ದೇವೋ ಅದು ಪೂರ್ಣವಾಗಲಿಲ್ಲ ಎಂಬ ಭಾವ ನನ್ನ ದೇಶವಾಸಿಗಳಿಗೆ ಮತ್ತು ನನ್ನ ಕುಟುಂಬದವರಿಗೆ ಇದೆ. ಆ ಕೊರಗು ಯಾವಾಗಲೂ ಇರುತ್ತದೆ. ಮುಂದೆ ಎಲ್ಲವೂ ಒಂದೇ ರೀತಿ ಇರುವುದಿಲ್ಲ. ವಿಭಿನ್ನ ಸನ್ನಿವೇಶಗಳಲ್ಲಿ ನಾನು 2032ರವರೆಗೆ ಆಡಬಹುದು. ಏಕೆಂದರೆ ನನ್ನೊಳಗಿನ ಹೋರಾಟ ಮತ್ತು ಕುಸ್ತಿ ಯಾವಾಗಲೂ ಇದ್ದೇ ಇರುತ್ತದೆ. ಒಂದಂತೂ ಖಚಿತ. ನಾನು ನಂಬಿರುವ ಸಂಗತಿಗಳಿಗಾಗಿ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ Vinesh Phogat : ವಿನೇಶ್​ ಫೈನಲ್ ತಲುಪಿದ್ದೇ ಹೆಮ್ಮೆಯ ವಿಷಯ; ಫೋಗಟ್ ಸಾಧನೆಯನ್ನು ಕೊಂಡಾಡಿದ ಮೋದಿ

ಮಾರ್ಗದರ್ಶನ ನೀಡಿದ ಬೆಲ್ಜಿಯನ್ ಕೋಚ್‌ ಅಕೋಸ್‌ ಕುರಿತು ವಿನೇಶ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ನನ್ನ ಕೋಚ್​ ಬಗ್ಗೆ ನಾನೇನು ಬರೆದರೂ ಅದು ಕಡಿಮೆಯೇ. ಮಹಿಳೆಯರ ಕುಸ್ತಿ ಲೋಕದಲ್ಲಿ ನಾನು ಕಂಡ ಉತ್ತಮ ಕೋಚ್‌ ಅವರು. ಸಹನೆ ಮತ್ತು ವಿಶ್ವಾಸದಿಂದ ಯಾವುದೇ ಪರಿಸ್ಥಿತಿ ನಿಭಾಯಿಸುತ್ತಿದ್ದರು. ನಾನು ಗೆದ್ದಾಗ ಅವರು ಸಂತಸದಲ್ಲಿ ಕಣ್ಣೀರು ಹಾಕಿದ್ದನ್ನು ನೋಡಿದ್ದೇನೆ. ನನ್ನ ಯಶಸ್ಸಿಗೆ ಅಕೋಸ್‌ ಎಂದೂ ಶ್ರೇಯಸ್ಸು ತೆಗೆದುಕೊಂಡವರಲ್ಲ. ಆದರೆ ಅವರಿಗೆ ಸಲ್ಲಬೇಕಾದ ಮಾನ್ಯತೆ ನೀಡಲು ಬಯಸಿದ್ದೆ ಎಂದು ಉಲ್ಲೇಖಿಸಿದ್ದಾರೆ. ತಂಡದ ವೈದ್ಯ ಡಾ. ದಿನ್‌ಷಾ ಪಾರ್ದಿವಾಲಾ ಅವರ ಕುರಿತೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತ ತಂಡದ ನೆರವಿಗೆ 13 ವೈದ್ಯಕೀಯ ಸಿಬ್ಬಂದಿಯ ಮುಖ್ಯಸ್ಥರಾಗಿ ಪಾರ್ದಿವಾಲಾ ಕಾರ್ಯನಿರ್ವಹಿಸಿದ್ದರು. ಕಷ್ಟದ ಕಾಲದಲ್ಲಿ ಜತೆಯಾಗಿ ನಿಂತ ಎಲ್ಲರಿಗೂ ಆಭಾರಿಯಾಗಿರುವೆ ಎಂದು ಉಲ್ಲೇಖಿಸಿದ್ದಾರೆ.

Continue Reading

ಕ್ರೀಡೆ

Pro Kabaddi 2024: ಹರಾಜಿನ ಬಳಿಕ ಎಲ್ಲ 12 ತಂಡಗಳ ಆಟಗಾರರ ಪಟ್ಟಿ ಹೀಗಿದೆ

Pro Kabaddi 2024: ಪ್ರದೀಪ್​ ನರ್ವಾಲ್​ ಕೂಡ ಈ ಬಾರಿ ಬುಲ್ಸ್​ ತಂಡ ಸೇರಿದ್ದು ತಂಡದ ಬಲ ಹೆಚ್ಚಿದೆ. ಅವರನ್ನು 70 ಲಕ್ಷ ರೂ.ಗೆ ಖರೀದಿ ಮಾಡಲಾಗಿದೆ.

VISTARANEWS.COM


on

Pro Kabaddi 2024
Koo

ಮುಂಬಯಿ: ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್‌ 11ನೇ(PKL 11) ಆವೃತ್ತಿಗಾಗಿ(Pro Kabaddi 2024) ನಡೆದ ಆಟಗಾರರ ಹರಾಜು ಪ್ರಕ್ರಿಯೆ ಕೊನೆಗೊಂಡಿದೆ. 500 ಮಂದಿ ಆಟಗಾರರಲ್ಲಿ 118 ಆಟಗಾರರು ಬೇರೆ ಬೇರೆ ತಂಡಗಳನ್ನು ಸೇರಿಕೊಂಡಿದ್ದಾರೆ. ಹರಾಜಿನ ಬಳಿಕ ಎಲ್ಲ ತಂಡಗಳ ಆಟಗಾರರ ಪಟ್ಟಿ ಹೀಗಿದೆ.

ಬೆಂಗಳೂರು ಬುಲ್ಸ್​


ಅಜಿಂಕ್ಯ ಪವಾರ್‌, ಪ್ರದೀಪ್‌ ನರ್ವಾಲ್‌, ಲಕ್ಕಿ ಕುಮಾರ್‌, ಮಂಜೀತ್‌, ಚಂದ್ರನಾಯ್ಕ ಎಂ., ಹಾಸುನ್‌ ತೊಂಕ್ರುಯಿಯ, ಪ್ರಮೋದ್‌ ಸಾಯಿಸಿಂಗ್‌, ನಿತಿನ್‌ ರಾವಲ್‌, ಜೈ ಭಗವಾನ್‌, ಜತಿನ್‌, ಪೊನ್ಪರ್ತಿಬನ್‌ ಸುಬ್ರಮಣಿಯನ್‌, ಸುಶೀಲ್‌, ರೋಹಿತ್‌ ಕುಮಾರ್‌, ಸೌರಭ್‌ ನಂದಲ್‌, ಆದಿತ್ಯ ಪವಾರ್‌, ಅಕ್ಷಿತ್‌, ಅರುಲ್‌ನಂತಬಾಬು, ಪ್ರತೀಕ್‌.

ತೆಲುಗು ಟೈಟಾನ್ಸ್


ಪವನ್ ಸೆಹ್ರಾವತ್, ಚೇತನ್ ಸಾಹು, ರೋಹಿತ್, ಪ್ರಫುಲ್ ಜವಾರೆ, ಓಂಕಾರ್ ಪಾಟೀಲ್, ನಿತಿನ್, ಮಂಜೀತ್, ಆಶಿಶ್ ನರ್ವಾಲ್, ಅಂಕಿತ್, ಅಜಿತ್ ಪವಾರ್, ಸಾಗರ್, ಕ್ರಿಶನ್ ಧುಲ್, ಮಿಲಾದ್ ಜಬ್ಬಾರಿ, ಮೊಹಮ್ಮದ್ ಮಲಕ್, ಸುಂದರ್, ಸಂಜೀವಿ ಎಸ್, ಶಂಕರ್ ಗಡಾಯಿ, ವಿಜಯ್ ಮಲಿಕ್, ಅಮಿತ್ ಕುಮಾರ್.

ಬೆಂಗಾಲ್ ವಾರಿಯರ್ಸ್ ‌


ಮಣಿಂದರ್ ಸಿಂಗ್, ವಿಶ್ವಾಸ್ ಎಸ್, ನಿತಿನ್ ಕುಮಾರ್, ಮಹಾರುದ್ರ ಗರ್ಜೆ, ಸುಶೀಲ್ ಕಾಂಬ್ರೇಕರ್, ಚಾಯ್-ಮಿಂಗ್ ಚಾಂಗ್, ಆಕಾಶ್ ಬಿ ಚವ್ಹಾನ್, ಅರ್ಜುನ್ ರಾಠಿ, ಪ್ರಣಯ್ ವಿನಯ್ ರಾಣೆ, ಶ್ರೇಯಸ್ ಉಂಬರದಾಂಡ್, ಆದಿತ್ಯ ಎಸ್.ಶಿಂಧೆ, ಮಂಜೀತ್, ದೀಪ್ ಕುಮಾರ್, ದೀಪಕ್ ಅರ್ಜುನ್ ಶಿಂಧೆ, ಯಶ್ ಮಲಿಕ್, ಫಜಲ್​ ಅತ್ರಾಚಲಿ, ನಿತೇಶ್ ಕುಮಾರ್, ಮಯೂರ್ ಜಗನ್ನಾಥ್ ಕದಂ, ಪ್ರವೀಣ್ ಠಾಕೂರ್, ಹೇಮ್ ರಾಜ್, ಸಂಭಾಜಿ ವಾಬಾಲೆ, ವೈಭವ್ ಭೌಸಾಹೇಬ್ ಗರ್ಜೆ, ಸಾಗರ್ ಕುಮಾರ್.

ದಬಾಂಗ್ ಡೆಲ್ಲಿ

ನವೀನ್ ಕುಮಾರ್, ಅಶು ಮಲಿಕ್, ಮನು, ಮೋಹಿತ್, ಸಿದ್ಧಾರ್ಥ್ ಸಿರೀಶ್ ದೇಸಾಯಿ, ಮೊಹಮ್ಮದ್ ಮಿಜನೂರ್ ರೆಹಮಾನ್, ಹಿಮಾಂಶು, ಪರ್ವೀನ್, ರಾಹುಲ್, ವಿನಯ್, ಹಿಮ್ಮತ್ ಅಂತಿಲ್, ಆಶಿಶ್, ಯೋಗೇಶ್, ವಿಕ್ರಾಂತ್, ಸಂದೀಪ್, ಮೊಹಮ್ಮದ್ ಬಾಬಾ ಅಲಿ, ಗೌರವ್ ಛಿಲ್ಲರ್, ರಾಹುಲ್, ರಿಂಕು ನರ್ವಾಲ್,ಆಶಿಶ್, ನಿತಿನ್ ಪನ್ವಾರ್, ಬ್ರಿಜೇಂದ್ರ ಸಿಂಗ್ ಚೌಧರಿ.

ಜೈಪುರ ಪಿಂಕ್ ಪ್ಯಾಂಥರ್ಸ್

ಅರ್ಜುನ್ ದೇಶ್ವಾಲ್, ರಿತಿಕ್ ಶರ್ಮಾ, ಅಭಿಜೀತ್ ಮಲಿಕ್, ಸೋಂಬಿರ್, ಶ್ರೀಕಾಂತ್ ಜಾಧವ್, ವಿಕಾಶ್ ಖಂಡೋಲಾ, ನೀರಜ್ ನರ್ವಾಲ್, ಕೆ.ಧರಣಿಧರನ್, ನವನೀತ್, ಅಂಕುಶ್, ಅಭಿಷೇಕ್ ಕೆಎಸ್, ರೆಜಾ ಮಿರ್ಬಘೇರಿ, ನಿತಿನ್ ಕುಮಾರ್, ರೋನಕ್ ಸಿಂಗ್, ಸುರ್ಜೀತ್ ಸಿಂಗ್, ಅರ್ಪಿತ್ ಸರೋಹಾ, ಮಯಾಂಕ್ ಮಲಿಕ್, ರವಿ ಕುಮಾರ್, ಲಕ್ಕಿ ಶರ್ಮಾ, ಅಮೀರ್ ಹುಸೇನ್ ಮೊಹಮ್ಮದ್ ಮಲೇಕಿಜ್, ಅಮೀರ್ ವಾನಿ.

ಯು ಮುಂಬಾ


ಶಿವಂ, ಅಜಿತ್ ಚೌಹಾಣ್, ಮಂಜೀತ್, ಎಂ. ಧನಶೇಖರ್, ಸ್ಟುವರ್ಟ್ ಸಿಂಗ್, ವಿಶಾಲ್ ಚೌಧರಿ, ಸತೀಶ್ ಕಣ್ಣನ್, ಗೋಕುಲಕಣ್ಣನ್ ಎಂ, ರಿಂಕು, ಲೋಕೇಶ್ ಘೋಸ್ಲಿಯಾ, ಬಿಟ್ಟು, ಸೋಂಬಿರ್, ಮುಕಿಲನ್ ಷಣ್ಮುಗಂ, ಸನ್ನಿ, ದೀಪಕ್ ಕುಂದು, ಸುನಿಲ್ ಕುಮಾರ್, ಅಮೀನ್ ಘೋರ್ಬಾನಿ, ಪರ್ವೇಶ್ ಭೈನ್ಸ್ವಾಲ್, ಆಶಿಶ್ ಕುಮಾರ್, ಅಮೀರ್ ಮಹಮ್ಮದ್ ಜಫರ್ದಾನೇಶ್, ಶುಭಂ ಕುಮಾರ್.

ಇದನ್ನೂ ಓದಿ Pro Kabaddi 2024: ಈ ಬಾರಿ ಬೆಂಗಳೂರು ಬುಲ್ಸ್​ ತಂಡ ಹೇಗಿದೆ?

ಪಾಟ್ನಾ ಪೈರೇಟ್ಸ್


ಕುನಾಲ್ ಮೆಹ್ತಾ, ಸುಧಾಕರ್ ಎಂ, ಸಂದೀಪ್ ಕುಮಾರ್, ಸಾಹಿಲ್ ಪಾಟೀಲ್, ದೀಪಕ್, ಅಯಾನ್, ಜಂಗ್-ಕುನ್ ಲೀ, ಮೀಟು, ಪ್ರವೀಂದರ್, ದೇವಾಂಕ್, ಮನೀಶ್, ಅಬಿನಂದ್ ಸುಭಾಷ್, ನವದೀಪ್, ಶುಭಂ ಶಿಂಧೆ, ಹಮೀದ್ ನಾಡರ್, ತ್ಯಾಗರಾಜನ್ ಯುವರಾಜ್, ದೀಪಕ್ ರಾಜೇಂದ್ರ ಸಿಂಗ್, ಪ್ರಶಾಂತ್ ಕುಮಾರ್ ರಾಠಿ, ಸಾಗರ್, ಅಮನ್, ಬಾಬು ಮುರುಗಸನ್, ಅಂಕಿತ್, ಗುರುದೀಪ್.

ಯುಪಿ ಯೋಧಾಸ್‌

ಸುರೇಂದರ್ ಗಿಲ್, ಗಗನ್​ ಗೌಡ, ಶಿವಂ ಚೌಧರಿ, ಕೇಶವ್ ಕುಮಾರ್, ಹೈದರಾಲಿ ಎಕ್ರಮಿ, ಭವಾನಿ ರಜಪೂತ್, ಅಕ್ಷಯ್ ಆರ್. ಸೂರ್ಯವಂಶಿ, ಸುಮಿತ್, ಅಶು ಸಿಂಗ್, ಗಂಗಾರಾಮ್, ಜಯೇಶ್ ಮಹಾಜನ್, ಹಿತೇಶ್, ಸಚಿನ್, ಸಾಹುಲ್ ಕುಮಾರ್, ಮೊಹಮ್ಮದ್ರೇಜಾ ಕಬೌದ್ರಹಂಗಿ, ಮಹೇಂದರ್ ಸಿಂಗ್, ಭರತ್, ವಿವೇಕ್.

ಪುಣೇರಿ ಪಲ್ಟಾನ್​


ಪಂಕಜ್ ಮೋಹಿತೆ, ಮೋಹಿತ್ ಗೋಯತ್, ನಿತಿನ್ ಆರ್, ಆಕಾಶ್ ಶಿಂಧೆ, ಆದಿತ್ಯ ಶಿಂಧೆ, ಆರ್ಯವರ್ಧನ್ ನವಲೆ, ಅಜಿತ್ ವಿ ಕುಮಾರ್, ಸಂಕೇತ್ ಸಾವಂತ್, ಅಭಿನೇಶ್ ನಾಡರಾಜನ್, ಗೌರವ್ ಖಾತ್ರಿ, ವೈಭವ್ ಕಾಂಬ್ಳೆ, ದಾದಾಸೋ ಪೂಜಾರಿ, ತುಷಾರ್ ದತ್ತಾರಾಯ ಅಧವಾಡೆ, ಮೋಹಿತ್, ಅಲಿ ಹಾಡಿ, ಅಮನ್, ಮೊ. ಅಮಾನ್, ವಿಶಾಲ್, ಸೌರವ್, ಅಸ್ಲಾಂ ಮುಸ್ತಫಾ ಇನಾಮದಾರ, ಅಮೀರ್ ಹಸನ್ ನೂರೂಜಿ.

ತಮಿಳ್ ತಲೈವಾಸ್ ‌


ವಿಶಾಲ್ ಚಹಾಲ್, ರಾಮಕುಮಾರ್ ಮಾಯಾಂಡಿ, ನಿತಿನ್ ಸಿಂಗ್, ನರೇಂದ್ರ, ಧೀರಜ್ ಬೈಲ್ಮಾರೆ, ಸಚಿನ್, ಸೌರಭ್ ಫಗರೆ, ಎಂ ಅಭಿಷೇಕ್, ಹಿಮಾಂಶು, ಸಾಗರ್, ಆಶಿಶ್, ಮೋಹಿತ್, ಸಾಹಿಲ್ ಗುಲಿಯಾ, ಅನುಜ್ ಗಾವಡೆ, ರೋನಕ್, ನಿತೇಶ್ ಕುಮಾರ್, ಅಮಿರ್ಹೋಸೇನ್ ಬಸ್ತಾಮಿ, ಮೊಯಿನ್.


ಗುಜರಾತ್ ಜೈಂಟ್ಸ್


ರಾಕೇಶ್, ಪರ್ತೀಕ್ ದಹಿಯಾ, ನಿತಿನ್, ಗುಮಾನ್ ಸಿಂಗ್, ಮೋನು, ಹಿಮಾಂಶು, ಹಿಮಾಂಶು ಸಿಂಗ್, ಆದೇಶ್ ಸಿವಾಚ್, ಸೋಂಬೀರ್, ವಹಿದ್ ರೆಝೈಮೆಹರ್, ನೀರಜ್ ಕುಮಾರ್, ಹರ್ಷ್ ಮಹೇಶ್ ಲಾಡ್, ಮೋಹಿತ್, ಮನುಜ್, ನಿತೇಶ್, ಜಿತೇಂದರ್ ಯಾದವ್, ಬಾಲಾಜಿ ಡಿ, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ರಾಜ್ ಡಿ ಸಾಲುಂಖೆ, ರೋಹನ್ ಸಿಂಗ್.

ಹರಿಯಾಣ ಸ್ಟೀಲರ್ಸ್


ವಿನಯ್, ಶಿವಂ ಪತಾರೆ, ವಿಶಾಲ್ ತಾಟೆ, ಜಯಸೂರ್ಯ ಎನ್‌ಎಸ್, ಘನಶ್ಯಾಮ್ ಮಗರ್, ಜ್ಞಾನ ಅಭಿಷೇಕ್ ಎಸ್, ವಿಕಾಸ್ ಜಾಧವ್, ಮಣಿಕಂಟನ್ ಎನ್, ಹರ್ದೀಪ್, ಜೈದೀಪ್ ದಹಿಯಾ, ರಾಹುಲ್ ಸೇತ್ಪಾಲ್, ಮೋಹಿತ್ ನಂದಲ್, ಸಂಜಯ್, ಆಶಿಶ್ ಗಿಲ್, ಮಣಿಕಂದನ್ ಎಸ್, ಸಾಹಿಲ್, ಮೊಹಮ್ಮದ್ರೇಜಾ ಶಾದ್ಲೋಯಿ ಚಿಯಾನೆ, ನವೀನ್, ಸಂಸ್ಕರ್ ಮಿಶ್ರಾ‌.

Continue Reading
Advertisement
Bridge Collapse
ವೈರಲ್ ನ್ಯೂಸ್18 mins ago

Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ

Manu Bhaker
ಕ್ರೀಡೆ35 mins ago

Manu Bhaker: 3 ತಿಂಗಳ ರಜೆಯಲ್ಲಿ ಭರತನಾಟ್ಯ, ಕುದುರೆ ಸವಾರಿ, ಸ್ಕೇಟಿಂಗ್ ಕಲಿಯಲಿದ್ದಾರೆ ಮನು ಭಾಕರ್

Physical Abuse
ದೇಶ1 hour ago

Physical Abuse: ದೇಶದಲ್ಲಿ ಪ್ರತಿ ಗಂಟೆಗೊಮ್ಮೆ 4 ಮಹಿಳೆಯರ ಮೇಲೆ ಅತ್ಯಾಚಾರ; ಬೆಚ್ಚಿಬೀಳಿಸುವ ಅಂಕಿ-ಅಂಶ ಬಹಿರಂಗ

Actor Nagabhushan birthday vidhyapathi promo Out
ಸ್ಯಾಂಡಲ್ ವುಡ್2 hours ago

Actor Nagabhushan: ನಾಗಭೂಷಣ್ ಬರ್ತ್‌ಡೇಗೆ ಡಾಲಿ ತಂಡದಿಂದ ಸ್ಪೆಷಲ್ ಗಿಫ್ಟ್‌; ನೋಡಿ ‘ವಿದ್ಯಾಪತಿ’ಯ ಕಿತಾಪತಿ!

Vinesh Phogat
ಕ್ರೀಡೆ2 hours ago

Vinesh Phogat: ತವರಿಗೆ ಮರಳಿದ ವಿನೇಶ್​​​ ಫೋಗಟ್​ಗೆ ಭರ್ಜರಿ ಸ್ವಾಗತ; ಅಭಿಮಾನಿಗಳನ್ನು ಕಂಡು ಕಣ್ಣೀರು

Government Employees
ಕರ್ನಾಟಕ2 hours ago

Government Employees: 7ನೇ ವೇತನ ಆಯೋಗ; ಸರ್ಕಾರಿ ನೌಕರರ ಸಂಘದಿಂದ ಇಂದು ಸಿಎಂ, ಡಿಸಿಎಂಗೆ ಸನ್ಮಾನ; Live ಇಲ್ಲಿದೆ

Viral Video
Latest2 hours ago

Viral Video: ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಿದ; ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡ!

Crorepati Sweeper
Latest2 hours ago

Crorepati Sweeper: ಕಸ ಗುಡಿಸುವ ಕಾರ್ಮಿಕನ ಬಳಿ ಇತ್ತು ಐಷಾರಾಮಿ ಕಾರುಗಳು, ಕೋಟಿ ಮೌಲ್ಯದ ಆಸ್ತಿ! ಆತ ಸಂಪಾದಿಸಿದ್ದು ಹೇಗೆ?

70th National Film Awards ational Award winner Madhyantara Short Movie
ಸ್ಯಾಂಡಲ್ ವುಡ್2 hours ago

70th National Film Awards: ಕನ್ನಡಕ್ಕೆ ಸಿಕ್ಕಿದ್ದು ಒಟ್ಟು 7 ಪ್ರಶಸ್ತಿಗಳು; ಜ್ಯೂರಿಗಳನ್ನೇ ಇಂಪ್ರೆಸ್‌ ಮಾಡಿದ ʻಮಧ್ಯಂತರʼ ಕಿರು ಚಿತ್ರ ಬಗ್ಗೆ ನಿಮಗೆಷ್ಟು ಗೊತ್ತು?

Viral Video
Latest2 hours ago

Viral Video: ಅಟಲ್ ಸೇತು ಮೇಲಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ? ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌