Road Accident: ಟಿಪ್ಪರ್‌ ರೂಪದಲ್ಲಿ ಬಂದ ಯಮ, ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ನಜ್ಜುಗುಜ್ಜು - Vistara News

ಬೆಂಗಳೂರು

Road Accident: ಟಿಪ್ಪರ್‌ ರೂಪದಲ್ಲಿ ಬಂದ ಯಮ, ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳು ನಜ್ಜುಗುಜ್ಜು

Road Accident: ಮೈಸೂರು ರಸ್ತೆ ಗುಡ್ಡದಹಳ್ಳಿ ಬಳಿ ಘೋರ ಅಪಘಾತ ಸಂಭವಿಸಿದೆ. ಮಕ್ಕಳು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಮೇಲೆ ಕುಳಿತು ಆಟವಾಡುತ್ತಿದ್ದರು. ಯಮನಂತೆ ಬಂದ ಟಿಪ್ಪರ್‌ ಇವರನ್ನು ನೆಲಕ್ಕೆ ಕೆಡವಿದೆ. ಮಕ್ಕಳ ಮೇಲೆ ಹರಿದ ಪರಿಣಾಮ ಮಕ್ಕಳು ನಜ್ಜುಗುಜ್ಜಾಗಿದ್ದಾರೆ. ನಿಯಂತ್ರಣಕ್ಕೆ ಸಿಗದ ಟಿಪ್ಪರ್‌ ಐದಾರು ವಾಹನಗಳ ಮೇಲೆ ಹರಿದಿದೆ.

VISTARANEWS.COM


on

tipper road accident
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ (Varamahalakshmi Festival) ಮರುದಿನವೇ ಬೆಂಗಳೂರಿನ ಮೈಸೂರು ರಸ್ತೆ (Mysore Road) ಸಮೀಪ ದಾರುಣ ದುರಂತ ಘಟಿಸಿದೆ. ಟಿಪ್ಪರ್‌ ಚಾಲಕನೊಬ್ಬ (Tipper Accident) ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ, ಇಬ್ಬರು ಪುಟ್ಟ ಮಕ್ಕಳನ್ನು ಕೊಂದು (Road Accident) ಹಾಕಿದ್ದಾನೆ. ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳು ಯಮನ ಬಾಯಿಗೆ ಆಹಾರವಾಗಿದ್ದಾರೆ.

ಮೈಸೂರು ರಸ್ತೆ ಗುಡ್ಡದಹಳ್ಳಿ ಬಳಿ ಘೋರ ಅಪಘಾತ ಸಂಭವಿಸಿದೆ. ಮಕ್ಕಳು ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಮೇಲೆ ಕುಳಿತು ಆಟವಾಡುತ್ತಿದ್ದರು. ಯಮನಂತೆ ಬಂದ ಟಿಪ್ಪರ್‌ ಇವರನ್ನು ನೆಲಕ್ಕೆ ಕೆಡವಿದೆ. ಮಕ್ಕಳ ಮೇಲೆ ಹರಿದ ಪರಿಣಾಮ ಮಕ್ಕಳು ನಜ್ಜುಗುಜ್ಜಾಗಿದ್ದಾರೆ. ನಿಯಂತ್ರಣಕ್ಕೆ ಸಿಗದ ಟಿಪ್ಪರ್‌ ಐದಾರು ವಾಹನಗಳ ಮೇಲೆ ಹರಿದಿದೆ.

ಹಾಲೋಬಾಕ್ಸ್ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ನಜ್ಜಗುಜ್ಜಾಗಿರುವ ಮಕ್ಕಳ ಶವಗಳನ್ನು ಆಂಬ್ಯುಲೆನ್ಸ್‌ಗೆ ಹಾಕಿ ಒಯ್ಯಲಾಗಿದೆ. ಅಪಘಾತದ ದಾರುಣತೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಿನ್ನೆಯಷ್ಟೇ ವರಮಹಾಲಕ್ಷ್ಮಿ ಹಬ್ಬದಲ್ಲಿ ಹೊಸ ಬಟ್ಟೆ ತೊಟ್ಟು ಕುಣಿದಾಡಿದ್ದ ಮಕ್ಕಳು ಇಂದು ಶವವಾಗಿದ್ದು, ಇವರ ಕುಟುಂಬಗಳು ಶೋಕದ ಮಡುವಿನಲ್ಲಿವೆ.

ಕಾರಿನ ಗ್ಲಾಸ್ ಮುಚ್ಚಿ ಮಲಗಿದ್ದ ವ್ಯಕ್ತಿ ಉಸಿರುಗಟ್ಟಿ ಸಾವು

ಉಡುಪಿ: ಆಸ್ಪತ್ರೆ ಬಳಿ ಕಾರಿನ ಎಲ್ಲ ಗ್ಲಾಸ್‌ಗಳನ್ನು ಮುಚ್ಚಿಕೊಂಡು ಮಲಗಿದ್ದ ಚಾಲಕರೊಬ್ಬರು ಉಸಿರು ಗಟ್ಟಿ ಸಾವಿಗೀಡಾಗಿದ್ದಾರೆ. ಚಿಕ್ಕಮಗಳೂರು ಮೂಲದ ಆನಂದ (37) ಮೃತಪಟ್ಟವರು.

ಇವರು ರೋಗಿಯೊಬ್ಬರನ್ನು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ರೋಗಿಯನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಗಿತ್ತು. ಮಣಿಪಾಲದಲ್ಲಿ ಉಳಿದುಕೊಳ್ಳಲು ಯಾವುದೇ ರೂಮ್ ಸಿಗದ ಕಾರಣ ಮಣಿಪಾಲ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಕಾರು ಪಾರ್ಕ್ ಮಾಡಿ ಒಳಗೆ ಮಲಗಿದ್ದರು.

ಕಾರಿನ ಎಲ್ಲ ಗ್ಲಾಸುಗಳನ್ನು ಏರಿಸಿಕೊಂಡು ಬಂದ್‌ ಮಾಡಿ ಮಲಗಿದ ಪರಿಣಾಮ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಗಮನಿಸಿ, ಇಂದು ಯಾವುದೇ ಆಸ್ಪತ್ರೆಯಲ್ಲಿ ಒಪಿಡಿ ಇಲ್ಲ

ಬೆಂಗಳೂರು: ಕೋಲ್ಕತಾದಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ವೈದ್ಯರು ನೀಡಿರುವ ದೇಶವ್ಯಾಪಿ ಪ್ರತಿಭಟನೆಗೆ ರಾಜ್ಯದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಬೆಂಬಲ ಸೂಚಿಸಿದ್ದಾರೆ. ಇಂದು ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳು (OPD) ಬಂದ್‌ ಆಗಿರಲಿವೆ.

ರಾಜಧಾನಿಯ ಫ್ರೀಡಂ ಪಾರ್ಕಿನಲ್ಲಿ ಇಂದು ಬೆಳಿಗ್ಗೆ 10 ಗಂಟೆಯಿಂದ ವೈದ್ಯರ ಪ್ರತಿಭಟನೆ ಆರಂಭವಾಗಲಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಓಪಿಡಿ ಬಂದ್ ಮಾಡಿ ವೈದ್ಯ ಸಮೂಹ ಪ್ರತಿಭಟನೆಗೆ ಕರೆ ಕೊಟ್ಟಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಓಪಿಡಿ ಬಂದ್ ಇರಲಿದೆ.

ಪ್ರತಿಭಟನೆಗೆ ಸರ್ಕಾರಿ ವೈದ್ಯರು ಕೂಡ ಸಾಥ್ ಕೊಟ್ಟಿದ್ದಾರೆ. ಸರ್ಕಾರಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಫ್ರೀಡಂ ಪಾರ್ಕಿನಲ್ಲಿ ಇಂದು ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಹಲವು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಪ್ರತಿಭಟನೆಗೆ ಸಂಸದ ಹಾಗೂ ಖ್ಯಾತ ವೈದ್ಯ ಸಿಎನ್ ಮಂಜುನಾಥ್ ಜೊತೆ ನೀಡಲಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Government Employees: 7ನೇ ವೇತನ ಆಯೋಗ; ಸರ್ಕಾರಿ ನೌಕರರ ಸಂಘದಿಂದ ಇಂದು ಸಿಎಂ, ಡಿಸಿಎಂಗೆ ಸನ್ಮಾನ; Live ಇಲ್ಲಿದೆ

Government Employees: ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಎಲ್ಲ ಇಲಾಖೆಗಳ ವೃಂದ ಸಂಘಗಳ ವತಿಯಿಂದ ಇಂದು (ಆ. 17) ಬೆಳಿಗ್ಗೆ 11 ಗಂಟೆಗೆ ಬೆಂಗಳೂರು ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ “ನಮ್ಮಭಿಮಾನದ ಅಭಿನಂದನಾ ಸಮಾರಂಭ” ಆಯೋಜಿಸಲಾಗಿದೆ.

VISTARANEWS.COM


on

Government Employees
Koo

ಬೆಂಗಳೂರು: ರಾಜ್ಯ 7ನೇ ವೇತನ ಆಯೋಗದ ವರದಿ ಜಾರಿ ಮಾಡಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಎಲ್ಲ ಇಲಾಖೆಗಳ ವೃಂದ ಸಂಘಗಳ ವತಿಯಿಂದ (Government Employees)‌ ಆ. 17ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ “ನಮ್ಮಭಿಮಾನದ ಅಭಿನಂದನಾ ಸಮಾರಂಭ” ಆಯೋಜಿಸಲಾಗಿದೆ.

ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧುಬಂಗಾರಪ್ಪ, ವಿಶೇಷ ಆಹ್ವಾನಿತರಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಆರ್ಥಿಕ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಆರ್ಥಿಕ ಇಲಾಖೆಯ (ಬಿ&ಆರ್) ಸರ್ಕಾರದ ಕಾರ್ಯದರ್ಶಿ ಡಾ. ಪಿ.ಸಿ. ಜಾಫರ್, ಆರ್ಥಿಕ ಇಲಾಖೆ (ವೆಚ್ಚ) ಯ ಸರ್ಕಾರದ ಕಾರ್ಯದರ್ಶಿ ಡಾ. ಎಂ.ಟಿ. ರೇಜು ಪಾಲ್ಗೊಳ್ಳುವರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಇದನ್ನೂ ಓದಿ: PM Narendra Modi: ಬೆಂಗಳೂರಿಗೆ ಸಿಹಿ ಸುದ್ದಿ; ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಅಸ್ತು; ರಾಜ್ಯಕ್ಕೆ ಪ್ರಧಾನಿ ಮೋದಿ ವರಮಹಾಲಕ್ಷ್ಮಿ ಹಬ್ಬದ ಕೊಡುಗೆ

Continue Reading

ಕರ್ನಾಟಕ

Doctors Strike: ಗಮನಿಸಿ, ಇಂದು ಯಾವುದೇ ಆಸ್ಪತ್ರೆಯಲ್ಲಿ ಒಪಿಡಿ ಇಲ್ಲ

Doctors Strike: ರಾಜಧಾನಿಯ ಫ್ರೀಡಂ ಪಾರ್ಕಿನಲ್ಲಿ (freedom Park) ಇಂದು ಬೆಳಿಗ್ಗೆ 10 ಗಂಟೆಯಿಂದ ವೈದ್ಯರ ಪ್ರತಿಭಟನೆ (Doctors Strike) ಆರಂಭವಾಗಲಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಒಪಿಡಿ ಬಂದ್ ಮಾಡಿ ವೈದ್ಯ ಸಮೂಹ ಪ್ರತಿಭಟನೆಗೆ ಕರೆ ಕೊಟ್ಟಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಓಪಿಡಿ ಬಂದ್ ಇರಲಿದೆ.

VISTARANEWS.COM


on

doctors strike opd close
Koo

ಬೆಂಗಳೂರು: ಕೋಲ್ಕತಾದಲ್ಲಿ ವೈದ್ಯೆ ವಿದ್ಯಾರ್ಥಿನಿ (Kolkata Doctor murder, Kolkata horror) ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ವೈದ್ಯರು ನೀಡಿರುವ ದೇಶವ್ಯಾಪಿ ಪ್ರತಿಭಟನೆಗೆ (Doctors Strike) ರಾಜ್ಯದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಬೆಂಬಲ ಸೂಚಿಸಿದ್ದಾರೆ. ಇಂದು ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ ಎಲ್ಲ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳು (OPD) ಬಂದ್‌ ಆಗಿರಲಿವೆ.

ರಾಜಧಾನಿಯ ಫ್ರೀಡಂ ಪಾರ್ಕಿನಲ್ಲಿ (freedom Park) ಇಂದು ಬೆಳಿಗ್ಗೆ 10 ಗಂಟೆಯಿಂದ ವೈದ್ಯರ ಪ್ರತಿಭಟನೆ (Doctors Strike) ಆರಂಭವಾಗಲಿದೆ. ಇಂದು ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಒಪಿಡಿ ಬಂದ್ ಮಾಡಿ ವೈದ್ಯ ಸಮೂಹ ಪ್ರತಿಭಟನೆಗೆ ಕರೆ ಕೊಟ್ಟಿದೆ. ತುರ್ತು ಸೇವೆ ಹೊರತುಪಡಿಸಿ ಉಳಿದಂತೆ ಓಪಿಡಿ ಬಂದ್ ಇರಲಿದೆ.

ಪ್ರತಿಭಟನೆಗೆ ಸರ್ಕಾರಿ ವೈದ್ಯರು ಕೂಡ ಸಾಥ್ ಕೊಟ್ಟಿದ್ದಾರೆ. ಸರ್ಕಾರಿ ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಫ್ರೀಡಂ ಪಾರ್ಕಿನಲ್ಲಿ ಇಂದು ಖಾಸಗಿ ಆಸ್ಪತ್ರೆಯ ವೈದ್ಯರು ಸೇರಿದಂತೆ ಹಲವು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಪ್ರತಿಭಟನೆಗೆ ಸಂಸದ ಹಾಗೂ ಖ್ಯಾತ ವೈದ್ಯ ಸಿಎನ್ ಮಂಜುನಾಥ್ ಜೊತೆ ನೀಡಲಿದ್ದಾರೆ.

ಯಾವೆಲ್ಲ ಸಂಘಟನೆ ಬೆಂಬಲ?

1) ರಾಜ್ಯಾದ್ಯಂತ ಐಎಂಎ ವ್ಯಾಪ್ತಿಯಲ್ಲಿ 30 ಸಾವಿರ ವೈದ್ಯರು ಬೆಂಬಲ
2) (ಫನಾ) ಖಾಸಗಿ ಆಸ್ಫತ್ರೆಗಳ ಒಕ್ಕೂಟ
3) ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಶನ್
4) ಮಕ್ಕಳ ವೈದ್ಯರ ಅಸೋಸಿಯೇಶನ್
5) ಅರ್ಥೋಪಿಟಿಕ್ ಅಸೋಸಿಯೇಶನ್
6) ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಶನ್ ಬೆಂಬಲ
7) ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ

ನಿನ್ನೆ ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ನೂರಾರು ವೈದ್ಯರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಮುಷ್ಕರ ನಡೆಸಿದ್ದರು. ಅದು ಇಂದೂ ಮುಂದುವರಿಯಲಿದೆ. ವೈದ್ಯರಿಗೆ ನ್ಯಾಯ ಕೊಡಿಸಿ ಎಂದು ಪ್ರತಿಭಟನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ʼಜಸ್ಟಿಸ್ ಫಾರ್ ಆರ್ ಜೆ ಕರ್ʼ ಎಂಬ ಬೋರ್ಡ್‌ಗಳನ್ನು ಹಿಡಿದುಕೊಂಡು ಪ್ರತಿಭಟಿಸುತ್ತಿದ್ದಾರೆ.

ನಮಗೆ ಸೆಕ್ಯೂರಿಟಿ ಹಾಗೂ ಸ್ಟೈಫಂಡ್ ಹೆಚ್ಚಿಗೆ ಮಾಡಬೇಕು. ಅಡ್ಮಿಶನ್ ಫೀಸ್ ಕಡಿಮೆ ಮಾಡಬೇಕು. ಪ್ರಸ್ತುತ 1.13 ಲಕ್ಷ ರೂಪಾಯಿ ವಾರ್ಷಿಕ ಫೀಸ್ ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 2.27 ಲಕ್ಷ ರೂ. ಫೀಸ್ ಕಟ್ಟಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇರುವವರಿಗೆ ಪ್ರತಿ ತಿಂಗಳು 60 ಸಾವಿರ ಸ್ಟೈಫಂಡ್ ಇದೆ. ಆದರೆ ಸಾಮಾನ್ಯ ಆಸ್ಪತ್ರೆಯಲ್ಲಿ 40 ಸಾವಿರ ರೂಪಾಯಿ ಸ್ಟೈಫಂಡ್ ಇದೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ಸ್ಟೈಫಂಡ್ ಇದ್ದು, ನಮಗೆ ಬೇರೆ ರಾಜ್ಯದಲ್ಲಿ ಇರುವ ಸ್ಟೈಫಂಡ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ವೈದ್ಯರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕೆಸಿ ಜನರಲ್, ವಿಕ್ಟೋರಿಯಾ, ಜಯದೇವ, ಮಿಂಟೋ, ಬೌರಿಂಗ್ ಆಸ್ಪತ್ರೆಗಳ ವೈದ್ಯರು ಸೇರಿ ಪ್ರತಿಭಟನೆ ಮಾಡುತ್ತಿದ್ದಾರೆ. ಹಲವು ಸರ್ಕಾರಿ ಆಸ್ಪತ್ರೆ ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

Continue Reading

ಪ್ರಮುಖ ಸುದ್ದಿ

PM Narendra Modi: ಬೆಂಗಳೂರಿಗೆ ಸಿಹಿ ಸುದ್ದಿ; ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಅಸ್ತು; ರಾಜ್ಯಕ್ಕೆ ಪ್ರಧಾನಿ ಮೋದಿ ವರಮಹಾಲಕ್ಷ್ಮಿ ಹಬ್ಬದ ಕೊಡುಗೆ

PM Narendra Modi: ಉದ್ದೇಶಿತ ಕಾರಿಡಾರ್‌-1ರಡಿ ಜೆ.ಪಿ.ನಗರ 4ನೇ ಹಂತದಿಂದ ಹೊರವರ್ತುಲ ರಸ್ತೆ ಮೂಲಕ ಹೆಬ್ಬಾಳದ ಕೆಂಪಾಪುರದವರೆಗೆ 32.15 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಕಾರಿಡಾರ್‌-2ರಡಿ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 12.50 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗುತ್ತಿದೆ.

VISTARANEWS.COM


on

namma metro pm narendra modi
Koo

ಬೆಂಗಳೂರು: ʼನಮ್ಮ ಮೆಟ್ರೋ’ದ (Namma Metro) ಬಹುನಿರೀಕ್ಷಿತ ಮೂರನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟ (Central Cabinet) ಶುಕ್ರವಾರ ಅನುಮೋದನೆ ನೀಡಿದೆ. ಈ ಮೂರನೇ ಹಂತದಲ್ಲಿ ಹೊಸದಾಗಿ ಎರಡು ಕಾರಿಡಾರ್‌ಗಳಲ್ಲಿ 44.65 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಇದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೀಡಿರುವ ವರಮಹಾಲಕ್ಷ್ಮಿ (Varamahalkshmi Festival) ಹಬ್ಬದ ಕೊಡುಗೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಸಂತಸ ವ್ಯಕ್ತಪಡಿಸಿದ್ದಾರೆ.

“ಬಹು ನಿರೀಕ್ಷಿತ ₹15,611 ಕೋಟಿ ವೆಚ್ಚದ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-3ರ ಎರಡು ಪಥಗಳ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ನಾನು ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ಕೇಂದ್ರ ಸರಕಾರವು ಬೆಂಗಳೂರು ನಗರದ ಜನತೆಗೆ ನೀಡಿರುವ ವರ ಮಹಾಲಕ್ಷ್ಮೀ ಹಬ್ಬದ ಉಡುಗೊರೆ ಎಂದೇ ನಾನು ಭಾವಿಸಿದ್ದೇನೆ. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಉತ್ತೇಜನ ನೀಡುತ್ತಿರುವ ಮಾನ್ಯ ಪ್ರಧಾನಿಗಳಿಗೆ ನನ್ನ ಧನ್ಯವಾದಗಳು” ಎಂದು ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸಂಸದರಾದ ಬಸವರಾಜ ಬೊಮ್ಮಾಯಿ, ಪಿಸಿ ಮೋಹನ್, ತೇಜಸ್ವಿ ಸೂರ್ಯ ಕೂಡ ಇದನ್ನು ಸ್ವಾಗತಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎಲ್ಲಿಂದ ಎಲ್ಲಿವರೆಗೆ ಮೆಟ್ರೋ ಮಾರ್ಗ?

ಉದ್ದೇಶಿತ ಕಾರಿಡಾರ್‌-1ರಡಿ ಜೆ.ಪಿ.ನಗರ 4ನೇ ಹಂತದಿಂದ ಹೊರವರ್ತುಲ ರಸ್ತೆ ಮೂಲಕ ಹೆಬ್ಬಾಳದ ಕೆಂಪಾಪುರದವರೆಗೆ 32.15 ಕಿ.ಮೀ ಉದ್ದದ ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಒಟ್ಟು 21 ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಜೆ.ಪಿ.ನಗರ 4ನೇ ಹಂತ-ಕೆಂಪಾಪುರ ಮೆಟ್ರೋ ಮಾರ್ಗವು ಕೆ.ಆರ್‌.ಪುರ-ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದೊಂದಿಗೆ ಸಂಪರ್ಕ ಬೆಸೆಯಲಿದೆ. ಅಲ್ಲದೆ, ಹಸಿರು ಬಣ್ಣದ ಮಾರ್ಗಕ್ಕೂ ಸಂಪರ್ಕ ಬೆಸೆಯಲಿದೆ. ಸಾರಕ್ಕಿ ಜಂಕ್ಷನ್‌ನಲ್ಲೂ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗುವ ಸಾಧ್ಯತೆಗಳಿವೆ.

ಕಾರಿಡಾರ್‌-2ರಡಿ ಹೊಸಹಳ್ಳಿಯಿಂದ ಮಾಗಡಿ ರಸ್ತೆಯ ಕಡಬಗೆರೆವರೆಗೆ 12.50 ಕಿ.ಮೀ. ಉದ್ದದ ಮಾರ್ಗ ನಿರ್ಮಿಸಲಾಗುತ್ತಿದೆ. ಈ ಮಾರ್ಗದಲ್ಲಿ ಒಟ್ಟು 9 ನಿಲ್ದಾಣಗಳು ಇರಲಿವೆ. ಈ ಮೆಟ್ರೋ ಯೋಜನೆಯು ಉಪನಗರ ರೈಲು, ಬಸ್‌ ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ 9 ಕಡೆ ಸಂಪರ್ಕ ಕಲ್ಪಿಸುತ್ತದೆ. ಸುಮನಹಳ್ಳಿ ಜಂಕ್ಷನ್‌ನಲ್ಲಿ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲಿದೆ.

ಮೆಟ್ರೋ 3ನೇ ಹಂತದ ಯೋಜನೆಗೆ 15,611 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು, 2029ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಮೆಟ್ರೋ 3ನೇ ಹಂತದಡಿ 44.65 ಕಿ.ಮೀ. ಮಾರ್ಗ ನಿರ್ಮಾಣದೊಂದಿಗೆ ಬೆಂಗಳೂರಿನ ಮೆಟ್ರೋ ಜಾಲವು 220.20 ಕಿ.ಮೀ.ಗೆ ವಿಸ್ತರಿಸಲ್ಪಡಲಿದೆ. ಈ ಬಹುನಿರೀಕ್ಷಿತ ಮೆಟ್ರೋ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ಕೊಟ್ಟಿದೆ.

ಕಾರಿಡಾರ್‌-1ರಲ್ಲಿನ ನಿಲ್ದಾಣಗಳು

ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ 5ನೇ ಹಂತ, ಜೆ.ಪಿ.ನಗರ, ಕದಿರೇನಹಳ್ಳಿ, ಕಾಮಾಕ್ಯ ಬಸ್‌ ನಿಲ್ದಾಣ, ಹೊಸಕೆರೆಹಳ್ಳಿ ಕ್ರಾಸ್‌, ಪಿಇಎಸ್‌ ಕಾಲೇಜು, ಮೈಸೂರು ರಸ್ತೆಯ ನಾಗರಬಾವಿ ವೃತ್ತ, ವಿನಾಯಕ ಲೇಔಟ್‌, ಅಂಬೇಡ್ಕರ್‌ ಇನ್ಸ್‌ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಕಾಲೇಜು, ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌, ಸುಮನಹಳ್ಳಿ ಜಂಕ್ಷನ್‌, ಚೌಡೇಶ್ವರಿನಗರ, ಫ್ರೀಡಂ ಫೈಟರ್‌ ಕ್ರಾಸ್‌, ಕಂಠೀರವ ಸ್ಟುಡಿಯೋ, ಪೀಣ್ಯ, ಬಾಹುಬಲಿನಗರ, ಬಿಇಎಲ್‌ ವೃತ್ತ, ಪಟೇಲಪ್ಪ ಲೇಔಟ್‌, ಹೆಬ್ಬಾಳ, ಕೆಂಪಾಪುರ.

ಕಾರಿಡಾರ್‌-2ರಲ್ಲಿನ ನಿಲ್ದಾಣಗಳು

ಹೊಸಹಳ್ಳಿ, ಕೆಎಚ್‌ಬಿ ಕಾಲೋನಿ, ವಿನಾಯಕ ನಗರ, ಸುಮನಹಳ್ಳಿ ಜಂಕ್ಷನ್‌, ಸುಂಕದಕಟ್ಟೆ, ಹೇರೋಹಳ್ಳಿ, ಬ್ಯಾಡರಹಳ್ಳಿ, ಫಾರೆಸ್ಟ್‌ ಗೇಟ್‌, ಕಡಬಗೆರೆ.

ಇದನ್ನೂ ಓದಿ: Namma Metro: ಹಸಿರು ಮಾರ್ಗದಲ್ಲಿ ಇಂದಿನಿಂದ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ

Continue Reading

ಕ್ರೈಂ

Viral Video: ಕಬ್ಬನ್‌ ಪಾರ್ಕ್‌ನಲ್ಲಿ ಕಾಮುಕ! ಚಪಲ ಚೆನ್ನಿಗರಾಯ ವೃದ್ಧನಿಂದ ಸ್ತ್ರೀಯರ ಎದುರು ಹಸ್ತಮೈಥುನ

Viral Video: ವೈರಲ್‌ ಆಗಿರುವ ಈ ವಿಡಿಯೋದಲ್ಲಿ ವೃದ್ಧ ಮರದಡಿ ಕುಳಿತಿದ್ದು, ಯಾರೂ ತನ್ನನ್ನು ನೋಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತಾನೆ. ನಂತರ ಆತನನ್ನು ಮಹಿಳೆಯೊಬ್ಬರು ಖಡಕ್ಕಾಗಿ ಪ್ರಶ್ನಿಸಿದ್ದು, ವೃದ್ಧ ಇದರಿಂದ ಗಾಬರಿಯಾಗಿ ಎದ್ದು ಅಲ್ಲಿಂದ ಓಡಿಹೋಗುತ್ತಿದ್ದಾನೆ.

VISTARANEWS.COM


on

viral video cubbon park
Koo

ಬೆಂಗಳೂರು: ರಾಜಧಾನಿಯ ಹೃದಯ ಭಾಗದಲ್ಲಿರುವ ಕಬ್ಬನ್‌ ಪಾರ್ಕ್‌ (Cubbon Park) ಕೂಡ ಕಾಮುಕರಿಂದ, ಪೋಲಿಗಳಿಂದ ಹೊರತಾಗಿಲ್ಲ ಎಂಬುದು ರುಜುವಾತಾಗಿದೆ. ಬೆಂಗಳೂರಿನ ವಿಡಿಯೋ ಒಂದು ವೈರಲ್ (Viral video) ಆಗಿದೆ. ಅದರಲ್ಲಿ, ಕಬ್ಬನ್ ಪಾರ್ಕ್‌ನಲ್ಲಿ ಮಹಿಳೆಯರ ಬಳಿ ಸುಳಿದಾಡಿ ಹಸ್ತಮೈಥುನ (Misbehave) ಮಾಡಿಕೊಳ್ಳುತ್ತಿದ್ದ ವೃದ್ಧನೊಬ್ಬ ರೆಡ್‌ ಹ್ಯಾಂಡಾಗಿ (Bangalore Crime News) ಸಿಕ್ಕಿಬಿದ್ದಿದ್ದಾನೆ.

ವೈರಲ್‌ ಆಗಿರುವ ಈ ವಿಡಿಯೋದಲ್ಲಿ ವೃದ್ಧ ಮರದಡಿ ಕುಳಿತಿದ್ದು, ಯಾರೂ ತನ್ನನ್ನು ನೋಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತಾನೆ. ನಂತರ ಆತನನ್ನು ಮಹಿಳೆಯೊಬ್ಬರು ಖಡಕ್ಕಾಗಿ ಪ್ರಶ್ನಿಸಿದ್ದು, ವೃದ್ಧ ಇದರಿಂದ ಗಾಬರಿಯಾಗಿ ಎದ್ದು ಅಲ್ಲಿಂದ ಓಡಿಹೋಗುತ್ತಿದ್ದಾನೆ. ಆರಂಭದಲ್ಲಿ ಆತನ ಮುಖವನ್ನು ವಿಡಿಯೋದಲ್ಲಿ ತೋರಿಸಲಾಗಿದೆ.

ಈತ ಕಬ್ಬನ್ ಪಾರ್ಕ್‌ನಲ್ಲಿ ಮಹಿಳೆಯರು ಕುಳಿತುಕೊಳ್ಳುವ ಜಾಗಕ್ಕೆ ಬಂದು ಹಸ್ತಮೈಥುನ ಮಾಡಿಕೊಳ್ಳುತ್ತಾನೆ ಎಂದು ಅನೇಕ ಮಹಿಳೆಯರು ಆರೋಪ ಮಾಡಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ಹಾಕಲಾಗಿದೆ. ಏನು ಮಾಡ್ತಿದ್ದೀ ಎಂದು ಮಹಿಳೆ ಆತನನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆತ ಏನು ಎನ್ನುತ್ತಾನೆ. ಸೆಕ್ಯುರಿಟಿ ಕರೆಯಬೇಕಾ ಎಂದು ಮಹಿಳೆ ಕೇಳ್ತಿರೋದನ್ನು ನೀವು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ವೈರಲ್ ಆಗುತ್ತಿದ್ದಂತೆ ಅದಕ್ಕೆ ಬೆಂಗಳೂರು ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸರಿಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಯಾವಾಗ ನಡೆದಿದ್ದು ಎಂಬುದು ಸ್ಪಷ್ಟವಾಗಿಲ್ಲ.

ಸಿಟಿಯಲ್ಲಿ ಕದ್ದು ಕಾಡಿನಲ್ಲಿರುತ್ತಿದ್ದ ನಟೋರಿಯಸ್ ಕಳ್ಳ; 50ಕ್ಕೂ ಹೆಚ್ಚು ಕೇಸ್‌ಗಳ ಆರೋಪಿ ಅರೆಸ್ಟ್!

ಬೆಂಗಳೂರು: ನಗರದಲ್ಲಿ ಕಳ್ಳತನ ಮಾಡಿ, ಕಾಡನ್ನು ವಾಸಸ್ಥಾನ ಮಾಡಿಕೊಂಡಿದ್ದ ನಟೋರಿಯಸ್ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕದ್ದ ಆಭರಣಗಳೊಂದಿಗೆ ಕಾಡಿಗೆ ಎಸ್ಕೇಪ್ ಆಗುತ್ತಿದ್ದ ಆಸಾಮಿ, ಪೊಲೀಸರು ಬೆನ್ನತ್ತಿದಾಗ ಚಾಲೆಂಜ್ ಮಾಡಿ ಪರಾರಿಯಾಗುತ್ತಿದ್ದ. ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ (Notorious Thief) ಭಾಗಿಯಾಗಿದ್ದ ಆರೋಪಿಯನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

ಗಿರಿನಗರ ಪೊಲೀಸರಿಂದ ನೆಲಮಂಗಲದ ಸೋಲೂರು ಮೂಲದ ಆರೋಪಿ ನರಸಿಂಹ ರೆಡ್ಡಿ ಬಂಧನವಾಗಿದೆ. ಸುಮಾರು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆಸಾಮಿ, ಇತ್ತೀಚಿಗೆ ಗಿರಿನಗರ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿದ್ದ. ಕದ್ದ ಆಭರಣ ಸಮೇತ ಕಾಡಿಗೆ ಎಸ್ಕೇಪ್ ಆಗಿದ್ದ.

ನೆಲಮಂಗಲ ಬಳಿಯ ಗುಡೇಮಾರನಹಳ್ಳಿ ಹಾಗೂ ಕೃಷ್ಣಗಿರಿಯ ಫಾರೆಸ್ಟ್‌ನಲ್ಲಿರುತ್ತಿದ್ದ ಈತ, ಕಾಡಿನ ಬಂಡೆಗಳ ಮೇಲೆ ಮಲಗುತ್ತಿದ್ದ. ಪೊಲೀಸರು ಬೆನ್ನತ್ತಿದರೆ ಚಾಲೆಂಜ್ ಮಾಡಿ ಪರಾರಿಯಾಗುತ್ತಿದ್ದ. ಪೊಲೀಸರು ನನ್ನ ಹಿಂದೆ ಬರಬೇಕು, ಬೆನ್ನತ್ತಬೇಕು ಅಂತ ಚಾಲೆಂಜ್ ಮಾಡಿ ಹೋಗುತ್ತಿದ್ದ. ಹೀಗೆ ಗುಡೇಮಾರನಹಳ್ಳಿ ಕಾಡಿನಲ್ಲಿದ್ದ ವೇಳೆ ಆರೋಪಿಯನ್ನು ಬಂಧಿಸಲಾಗಿದೆ. ಆತನಿಂದ 70 ಲಕ್ಷ ಮೌಲ್ಯದ ಒಂದು ಕೆ.ಜಿ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ | False Case: ಪಿಎಸ್ಐ ಮನೆಯಲ್ಲಿ 12 ಲಕ್ಷ ಕಳವು ಕೇಸ್; ತನಿಖೆ ವೇಳೆ ಬಯಲಾಯ್ತು ನಕಲಿ ದೂರಿನ‌ ಅಸಲಿ ಕತೆ!

Continue Reading
Advertisement
Bridge Collapse
ವೈರಲ್ ನ್ಯೂಸ್15 mins ago

Bridge Collapse: 9 ವರ್ಷಗಳಿಂದ ನಿರ್ಮಾಣವಾಗುತ್ತಿರುವ ಸೇತುವೆ 3ನೇ ಬಾರಿ ಕುಸಿದು ಬಿತ್ತು; ವಿಡಿಯೊ ನೋಡಿ

Manu Bhaker
ಕ್ರೀಡೆ32 mins ago

Manu Bhaker: 3 ತಿಂಗಳ ರಜೆಯಲ್ಲಿ ಭರತನಾಟ್ಯ, ಕುದುರೆ ಸವಾರಿ, ಸ್ಕೇಟಿಂಗ್ ಕಲಿಯಲಿದ್ದಾರೆ ಮನು ಭಾಕರ್

Physical Abuse
ದೇಶ1 hour ago

Physical Abuse: ದೇಶದಲ್ಲಿ ಪ್ರತಿ ಗಂಟೆಗೊಮ್ಮೆ 4 ಮಹಿಳೆಯರ ಮೇಲೆ ಅತ್ಯಾಚಾರ; ಬೆಚ್ಚಿಬೀಳಿಸುವ ಅಂಕಿ-ಅಂಶ ಬಹಿರಂಗ

Actor Nagabhushan birthday vidhyapathi promo Out
ಸ್ಯಾಂಡಲ್ ವುಡ್2 hours ago

Actor Nagabhushan: ನಾಗಭೂಷಣ್ ಬರ್ತ್‌ಡೇಗೆ ಡಾಲಿ ತಂಡದಿಂದ ಸ್ಪೆಷಲ್ ಗಿಫ್ಟ್‌; ನೋಡಿ ‘ವಿದ್ಯಾಪತಿ’ಯ ಕಿತಾಪತಿ!

Vinesh Phogat
ಕ್ರೀಡೆ2 hours ago

Vinesh Phogat: ತವರಿಗೆ ಮರಳಿದ ವಿನೇಶ್​​​ ಫೋಗಟ್​ಗೆ ಭರ್ಜರಿ ಸ್ವಾಗತ; ಅಭಿಮಾನಿಗಳನ್ನು ಕಂಡು ಕಣ್ಣೀರು

Government Employees
ಕರ್ನಾಟಕ2 hours ago

Government Employees: 7ನೇ ವೇತನ ಆಯೋಗ; ಸರ್ಕಾರಿ ನೌಕರರ ಸಂಘದಿಂದ ಇಂದು ಸಿಎಂ, ಡಿಸಿಎಂಗೆ ಸನ್ಮಾನ; Live ಇಲ್ಲಿದೆ

Viral Video
Latest2 hours ago

Viral Video: ಅಣೆಕಟ್ಟಿನ ಅಂಚಿನಲ್ಲಿ ನಿಂತು ಸ್ಟಂಟ್ ಮಾಡಿದ; ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡ!

Crorepati Sweeper
Latest2 hours ago

Crorepati Sweeper: ಕಸ ಗುಡಿಸುವ ಕಾರ್ಮಿಕನ ಬಳಿ ಇತ್ತು ಐಷಾರಾಮಿ ಕಾರುಗಳು, ಕೋಟಿ ಮೌಲ್ಯದ ಆಸ್ತಿ! ಆತ ಸಂಪಾದಿಸಿದ್ದು ಹೇಗೆ?

70th National Film Awards ational Award winner Madhyantara Short Movie
ಸ್ಯಾಂಡಲ್ ವುಡ್2 hours ago

70th National Film Awards: ಕನ್ನಡಕ್ಕೆ ಸಿಕ್ಕಿದ್ದು ಒಟ್ಟು 7 ಪ್ರಶಸ್ತಿಗಳು; ಜ್ಯೂರಿಗಳನ್ನೇ ಇಂಪ್ರೆಸ್‌ ಮಾಡಿದ ʻಮಧ್ಯಂತರʼ ಕಿರು ಚಿತ್ರ ಬಗ್ಗೆ ನಿಮಗೆಷ್ಟು ಗೊತ್ತು?

Viral Video
Latest2 hours ago

Viral Video: ಅಟಲ್ ಸೇತು ಮೇಲಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ? ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌