Prabhas New Film: ಹೊಸ ಯುದ್ಧ ಶುರು; ಪ್ರಭಾಸ್ ಅಭಿನಯದ ಮುಂದಿನ ಚಿತ್ರ ಸುಳಿವು! - Vistara News

ಸಿನಿಮಾ

Prabhas New Film: ಹೊಸ ಯುದ್ಧ ಶುರು; ಪ್ರಭಾಸ್ ಅಭಿನಯದ ಮುಂದಿನ ಚಿತ್ರ ಸುಳಿವು!

ಕಲ್ಕಿ 2898ಎಡಿ ಚಿತ್ರದ ಯಶಸ್ಸಿನ ಬಳಿಕ ಪ್ರಭಾಸ್ ಅಭಿನಯದ ಮುಂದಿನ ಚಿತ್ರದ (Prabhas New Film) ಘೋಷಣೆಯಾಗಿದೆ. ಶೀಘ್ರದಲ್ಲೇ ಇದರ ಚಿತ್ರೀಕರಣ ಪ್ರಾರಂಭವಾಗಲಿರುವುದಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಹನು ರಾಘವಪುಡಿ, ಮಿಥುನ್ ಚಕ್ರವರ್ತಿ ಮತ್ತು ಮಾನ್ವಿ ಕೂಡ ನಟಿಸಲಿದ್ದಾರೆ ಎನ್ನುವ ಸುಳಿವು ನೀಡಲಾಗಿದೆ.

VISTARANEWS.COM


on

Prabhas New Film
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಲ್ಕಿ 2898ಎಡಿ (Kalki 2898 AD) ಬೃಹತ್ ಯಶಸ್ಸಿನ ಬಳಿಕ ಇದೀಗ ಪ್ರಭಾಸ್ (actor prabhas) ಅಭಿನಯದ ಮುಂದಿನ ಚಿತ್ರದ (Prabhas New Film) ಘೋಷಣೆಯಾಗಿದೆ. ಇನ್ನೂ ಹೆಸರಿಡದ ಈ ಐತಿಹಾಸಿಕ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಹನು ರಾಘವಪುಡಿ, ಮಿಥುನ್ ಚಕ್ರವರ್ತಿ ಮತ್ತು ಮಾನ್ವಿ ಕೂಡ ನಟಿಸಲಿದ್ದಾರೆ. ಈ ಕುರಿತು ಮೈತ್ರಿ ಮೂವಿ ಮೇಕರ್ಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ.

ʼಪ್ರಭುತ್ವಕ್ಕಾಗಿ ಯುದ್ಧ ನಡೆದಾಗ ಒಬ್ಬ ಯೋಧ ಯಾವುದಕ್ಕಾಗಿ ತಾವು ಹೋರಾಡಬೇಕು ಎಂಬ ಬಗ್ಗೆ ಹೊಸ ಭಾಷ್ಯ ಬರೆದʼ ಎಂಬರ್ಥದ ಶೀರ್ಷಿಕೆಯೊಂದಿಗೆ ಈ ಪೋಸ್ಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. 1940ರ ದಶಕದ ಕಥೆಯನ್ನು ಆಧರಿಸಿರುವ ಐತಿಹಾಸಿಕ ಕಾಲ್ಪನಿಕ ಚಿತ್ರ ಇದು ಎನ್ನಲಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುತ್ತದೆ ಎನ್ನುವ ಸುಳಿವನ್ನು ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ.


ಬಿಡುಗಡೆಯಾದ ಸುಮಾರು ಎರಡು ತಿಂಗಳ ಬಳಿಕ ಕಲ್ಕಿ 2898ಎಡಿ ಈಗ ಅದರ ಒಟಿಟಿಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಶೀಘ್ರದಲ್ಲೇ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಇದು ಪ್ರದರ್ಶನ ಕಾಣಲಿದೆ ಎಂದು ಬಹಿರಂಗ ಪಡಿಸಲಾಗಿದೆ. ಒಟಿಟಿಯಲ್ಲಿ ನಾಗ್ ಅಶ್ವಿನ್ ಅವರ ನಿರ್ದೇಶನದ ತೆಲುಗು ಆವೃತ್ತಿಯನ್ನು ಮೊದಲು ಸ್ಟ್ರೀಮ್ ಮಾಡಿದರೆ ಬಳಿಕ ಹಿಂದಿ ಆವೃತ್ತಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ.

2898 ಎಡಿಯಲ್ಲಿ ಅವಕಾಶ ಕೊಟ್ಟ ಚಿತ್ರ ನಿರ್ದೇಶಕ ನಾಗ್ ಅಶ್ವಿನ್ ಅವರನ್ನು ಶ್ಲಾಘಿಸಿರುವ ಪ್ರಭಾಸ್, ನಾಗ್‌ನಂತಹ ದೂರದೃಷ್ಟಿಯ ನಿರ್ದೇಶಕ ಮತ್ತು ಅಸಾಧಾರಣ ಪಾತ್ರವರ್ಗದೊಂದಿಗೆ ಕಲ್ಕಿಯಲ್ಲಿ ಕೆಲಸ ಮಾಡುವುದು ನಿಜವಾಗಿಯೂ ಹರ್ಷದಾಯಕವಾಗಿದೆ. ಚಲನಚಿತ್ರವು ಪುರಾಣ ಮತ್ತು ಭವಿಷ್ಯದ ಅಂಶಗಳ ಮಿಶ್ರಣದೊಂದಿಗೆ ಕಥೆ ಹೇಳುವುದು ಮಾತ್ರವಲ್ಲದೆ ಮಾನವ ಸ್ವಭಾವದ ಸಂಕೀರ್ಣತೆಗಳನ್ನು ಆಳವಾಗಿ ಪರಿಶೀಲಿಸುತ್ತದೆ. ಶಕ್ತಿ ಮತ್ತು ನಂಬಿಕೆಯಿಂದ ಪ್ರೇರಿತವಾಗಿರುವ ಭೈರವನ ಪಾತ್ರವು ರೋಮಾಂಚಕವಾಗಿದೆ. ಕಲ್ಕಿ 2898ಎಡಿ ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಂದ ಪಡೆದ ಎಲ್ಲಾ ಪ್ರೀತಿಯ ಅನಂತರ ಪ್ರೈಮ್ ವಿಡಿಯೋದಲ್ಲಿ ಅದರ ಜಾಗತಿಕ ಪ್ರೀಮಿಯರ್‌ಗಾಗಿ ಇನ್ನು ಕಾಯಲು ಸಾಧ್ಯವಿಲ್ಲ. ನಾವು ಅದನ್ನು ಮಾಡುವುದನ್ನು ಆನಂದಿಸಿದಂತೆ ವೀಕ್ಷಕರು ಅದನ್ನು ನೋಡಿ ಆನಂದಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.


ಜೂನ್ 27ರಂದು ಬಿಡುಗಡೆಯಾದ ಕಲ್ಕಿ 2898ಎಡಿಯಲ್ಲಿ ಪ್ರಭಾಸ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಪ್ರೇಕ್ಷಕರಿಂದ ಅಗಾಧವಾದ ಪ್ರತಿಕ್ರಿಯೆಯನ್ನು ಗಳಿಸಿತು. ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತ್ತು.

ಇದನ್ನೂ ಓದಿ: Rakshit Shetty: ಕಾಪಿ ರೈಟ್ ಉಲ್ಲಂಘನೆ; ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ಆದೇಶ

ಈ ಬಗ್ಗೆ ಹಿಂದೆ ಬಿಗ್ ಬಿ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಹಂಚಿಕೊಂಡು ಚಿತ್ರದ ಯಶಸ್ಸಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದರು. ಅಲ್ಲದೇ ಕಲ್ಕಿಯ ಸಾರವು ಒಳಗೆ ಮತ್ತು ಹೊರಗೆ ಪ್ರತಿಧ್ವನಿಸುತ್ತಿದೆ. ರೆ. ಕಲ್ಕಿ ಚಿತ್ರದ ಸೀಕ್ವೆಲ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಿಕೊಂಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Kannada New Movie: ಮಂಸೋರೆ ನಿರ್ದೇಶನದ ʼದೂರ ತೀರ ಯಾನʼ ಟೈಟಲ್ ಟೀಸರ್ ರಿಲೀಸ್‌

Kannada New Movie: ದೇವರಾಜ್ ಆರ್. ನಿರ್ಮಾಣದ ಹಾಗೂ “ಹರಿವು”, ” ನಾತಿಚರಾಮಿ”, “ಆಕ್ಟ್ 1978”, “19.20.21” ನಂತಹ ಜನಮೆಚ್ಚುಗೆ ಪಡೆದ ಚಿತ್ರಗಳ ನಿರ್ದೇಶಕ ಮಂಸೋರೆ ನಿರ್ದೇಶಿಸುತ್ತಿರುವ “ದೂರ ತೀರ ಯಾನ” ಚಿತ್ರದ ಟೈಟಲ್ ಟೀಸರ್ ಅನಾವರಣಗೊಂಡಿತು. ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಈ ಚಿತ್ರದ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Kannada New Movie
Koo

ಬೆಂಗಳೂರು: ಡಿ. ಕ್ರಿಯೇಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದೇವರಾಜ್ ಆರ್. ನಿರ್ಮಾಣದ ಹಾಗೂ “ಹರಿವು”, ” ನಾತಿಚರಾಮಿ”, “ಆಕ್ಟ್ 1978”, “19.20.21” ನಂತಹ ಜನಮೆಚ್ಚುಗೆ ಪಡೆದ ಚಿತ್ರಗಳ ನಿರ್ದೇಶಕ ಮಂಸೋರೆ ನಿರ್ದೇಶಿಸುತ್ತಿರುವ ಮುಂದಿನ ಚಿತ್ರ “ದೂರ ತೀರ ಯಾನ”. ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಈ ಚಿತ್ರದ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ (Kannada New Movie) ಟೈಟಲ್ ಟೀಸರ್ ಅನಾವರಣಗೊಂಡಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನನ್ನ ಹಿಂದಿನ ಚಿತ್ರಗಳನ್ನು ನೀವು ನೋಡಿದ್ದೀರಾ. ಅದನ್ನು ಮೀರಿಸುವ ಪ್ರಯತ್ನ “ದೂರ ತೀರ ಯಾನ” ಎಂದು ಮಾತನಾಡಿದ ನಿರ್ದೇಶಕ ಮಂಸೋರೆ, ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಅವರ ನಿರೀಕ್ಷೆಗಳು ಸಾಕಷ್ಟಿದೆ. ಹೀಗೆ ನಾವು ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು‌,‌ ಅವರಿಗೆ ಬೇಕಾದ ರೀತಿಯ ಸಿನಿಮಾ ಮಾಡಬೇಕು. ಆ ನಿಟ್ಟಿನಲ್ಲಿ‌ ಈಗ ನಾನು ಮಾಡಲು ಹೊರಟಿರುವ ಸಿನಿಮಾ “ದೂರ ತೀರ ಯಾನ”.

ಇದೊಂದು ದಾರಿಯಲ್ಲಿ ಸಾಗುತ್ತಾ ನಡೆಯುವ ಪ್ರೇಮಕಥೆ. ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ದಾರಿಯಲ್ಲಿ ಸಾಗುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ-ಹುಡುಗಿ ಹೊಸ ರೀತಿಯ ಪ್ರೀತಿಯನ್ನು ಕಂಡುಕೊಳ್ಳುವ ಕಥೆಯೂ ಹೌದು. ಈಗಾಗಲೇ ಹಿಂದಿ ಸೇರಿದಂತೆ ಅನೇಕ ಭಾಷೆಗಳ ವೆಬ್ ಸಿರೀಸ್‌ಗಳಲ್ಲಿ ಹಾಗೂ ನನ್ನ ನಿರ್ದೇಶನದ ” ಆಕ್ಟ್ 1978″ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನನ್ನ ಕಾಲೇಜು ಗೆಳೆಯ ವಿಜಯ್ ಕೃಷ್ಣ ನಾಯಕನಾಗಿ, “ರುದ್ರ ಗರುಡ ಪುರಾಣ” ಚಿತ್ರದ ಖ್ಯಾತಿಯ ಪ್ರಿಯಾಂಕ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೇರೆ ಪಾತ್ರಗಳು ಇರುತ್ತದೆ. ಮುಂದೆ ಅದರ ಬಗ್ಗೆ ತಿಳಿಸುತ್ತೇನೆ. “ದೂರ ತೀರ ಯಾನ” ದಲ್ಲಿ ಬಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜಿಸುತ್ತಿರುವ ಆರು ಹಾಡುಗಳಿರುತ್ತದೆ‌. ಶೇಖರ್ ಚಂದ್ರ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನವಿರುವ ಈ ಚಿತ್ರಕ್ಕೆ ಚೇತನ ತೀರ್ಥಹಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ. ಸೆಪ್ಟೆಂಬ‌ರ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಟೈಟಲ್ ಟೀಸರ್‌ಗೆ ಡಾಲಿ ಧನಂಜಯ ಧ್ವನಿ ನೀಡಿದ್ದಾರೆ ಎಂದು ತಿಳಿಸಿದರು.

ತುಂಬಾ ದಿನಗಳಿಂದ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ಗೆಳೆಯ ಮಂಸೋರೆ ಒಂದೊಳ್ಳೆ ಕಥೆ ಮಾಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕ ವಿಜಯಕೃಷ್ಣ.

“ರುದ್ರ ಗರುಡ ಪುರಾಣ” ದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈ ಚಿತ್ರದಲ್ಲಿ ಆ ಪಾತ್ರ ಸಿಕ್ಕಿದೆ ಎಂದರು ನಾಯಕಿ ಪ್ರಿಯಾಂಕ ಕುಮಾರ್.

ಇದನ್ನೂ ಓದಿ: Bengaluru Power Cut: ಗಮನಿಸಿ… ಬೆಂಗಳೂರಿನ ಈ ಪ್ರದೇಶಗಳಲ್ಲಿ ಆ.18ರಂದು ಕರೆಂಟ್‌ ಇರಲ್ಲ

ನಿರ್ಮಾಪಕ ದೇವರಾಜ್, ಸಂಗೀತ ನಿರ್ದೇಶಕರಾದ ಬಕೇಶ್-ಕಾರ್ತಿಕ್, ಛಾಯಾಗ್ರಾಹಕ ಶೇಖರ್ ಚಂದ್ರ ಮುಂತಾದ ಚಿತ್ರತಂಡದ ಸದಸ್ಯರು ಹಾಗೂ ಸತ್ಯ ಹೆಗಡೆ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Continue Reading

ಕಾಲಿವುಡ್

Thangalaan Movie: ಸೀಕ್ವೆಲ್ ಆಗಿ ಬರಲಿದೆ ‘ತಂಗಲಾನ್ʼ; ಹೊಸ ದಾಖಲೆ ಬರೆದ ಚಿಯಾನ್ ವಿಕ್ರಮ್‍!

Thangalaan Movie: ಸ್ಟುಡಿಯೋ ಗ್ರೀನ್ ಫಿಲ್ಮ್ಸ್ ಮತ್ತು ನೀಲಂ ಪ್ರೊಡಕ್ಷನ್ಸ್ ಅಡಿಯಲ್ಲಿ ಕೆ.ಇ.ಜ್ಞಾನವೇಲ್ ರಾಜಾ ನಿರ್ಮಿಸಿದ ಈ ಸಿನಿಮಾ ಸೀಕ್ವೆಲ್ ಕೂಡ ಶೀರ್ಘದಲ್ಲಿ ಬರುತ್ತಿದೆ. ಈ ಬಗ್ಗೆ ಚಿಯಾನ್ ವಿಕ್ರಮ್‍ ಅವರೇ ಸ್ವತಃ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

VISTARANEWS.COM


on

Koo

ಬೆಂಗಳೂರು: ಜ್ಞಾನವೇಲ್ ರಾಜ್ ನಿರ್ಮಾಣದ,‌ ಪಾ ರಂಜಿತ್ ನಿರ್ದೇಶನದ ಹಾಗೂ ಚಿಯಾನ್ ವಿಕ್ರಮ್‍ ಅಭಿನಯದ ‘ತಂಗಲಾನ್ʼ ಚಿತ್ರವು (Thangalaan Movie) ಆಗಸ್ಟ್ 15 ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಸ್ಟುಡಿಯೋ ಗ್ರೀನ್ ಫಿಲ್ಮ್ಸ್ ಮತ್ತು ನೀಲಂ ಪ್ರೊಡಕ್ಷನ್ಸ್ ಅಡಿಯಲ್ಲಿ ಕೆ.ಇ.ಜ್ಞಾನವೇಲ್ ರಾಜಾ ನಿರ್ಮಿಸಿದ ಈ ಸಿನಿಮಾ ಸೀಕ್ವೆಲ್ ಕೂಡ ಶೀರ್ಘದಲ್ಲಿ ಬರುತ್ತಿದೆ. ಈ ಬಗ್ಗೆ ಚಿಯಾನ್ ವಿಕ್ರಮ್‍ ಅವರೇ ಸ್ವತಃ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

“ಪಾ ರಂಜಿತ್ ಅವರಿಗೆ ನನ್ನ ಮೇಲೆ ಅಪಾರ ನಂಬಿಕೆ ಇತ್ತು, ಇದರಿಂದಾಗಿ ಈ ಚಿತ್ರ ಸಾಧ್ಯವಾಯಿತು. ತಂಗಲಾನ್ ಮುಂದಿನ ಭಾಗಕ್ಕೆ ಅರ್ಹವಾಗಿದೆ. ನೀವೆಲ್ಲರೂ ತುಂಬಾ ಇಷ್ಟಪಟ್ಟಿದ್ದೀರಿ. ತಂಗಲಾನ್‌ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಪೊನ್ನಿಯಿನ್ ಸೆಲ್ವನ್ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದಕ್ಕೆ ಖುಷಿ ಇದೆʼʼಎಂದರು.

2011 ರಲ್ಲಿ ನಟ ವಿಕ್ರಮ್ ಅಭಿನಯದ ‘ದೈವತಿರುಮಗಳು’ ಚಿತ್ರದ ನಂತರ ಗುಣಮಟ್ಟದ ಬ್ರೇಕ್ ನೀಡುವ ಚಿತ್ರಗಳು ಬಂದಿಲ್ಲ. ಏಕೆಂದರೆ ಈ ಚಿತ್ರದ ನಂತರ ಬಿಡುಗಡೆಯಾದ ಐ, ಇರುಮುಗನ್, ಕೋಬ್ರಾ, ಸಾಮಿ ಸ್ಕ್ವೇರ್ ಮುಂತಾದ ಬಿಗ್ ಬಜೆಟ್ ಚಿತ್ರಗಳು ಮಿಶ್ರ ವಿಮರ್ಶೆಗಳನ್ನು ಕಂಡವು. ಆದರೆ, ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ತೆರೆಕಂಡ ‘ಪೊನ್ನಿಯಿನ್ ಸೆಲ್ವನ್’ ಚಿತ್ರ ವಿಕ್ರಮ್ ಗೆ ಮತ್ತೆ ಹಿಟ್ ಆಯಿತು.ಇದೀಗ ‘ತಂಗಾಲನ್’ ಅದ್ಭುತವಾದ ಸಿನಿಮಾ, ಕೆಲವು ಅದ್ಭುತ ದೃಶ್ಯಗಳನ್ನು ಪಾ ರಂಜಿತ್ ಕಟ್ಟಿಕೊಟ್ಟಿದ್ದಾರೆ’ 

ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!

ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಸೆಟ್ಟೇರಿತು ಶಿವರಾಜ್ ಕುಮಾರ್ 131ನೇ ಸಿನಿಮಾ!

ಕನ್ನಡದಲ್ಲಿ ‘ಕೃಷ್ಣಂ ಪ್ರಣಯ ಸಖಿ’, ‘ಗೌರಿ’, ತೆಲುಗಿನಲ್ಲಿ ‘ಮಿಸ್ಟರ್ ಬಚ್ಚನ್’ ಮತ್ತು ‘ಡಬಲ್ ಇಸ್ಮಾರ್ಟ್’ ಇನ್ನು ತಮಿಳಿನಲ್ಲಿ ಚಿಯಾನ್ ವಿಕ್ರಂ ನಟನೆಯ ‘ತಂಗಲಾನ್’ ಸಿನಿಮಾ ತೆರೆಗೆ ಬಂದಿದೆ. 

ಈ ಚಿತ್ರದ ಪಾತ್ರಕ್ಕಾಗಿ ವಿಕ್ರಮ್‍ ಆರು ತಿಂಗಳ ತಯಾರಿ ನಡೆಸಿದ್ದಾರಂತೆ ಹಾಗೂ ತುಂಬಾ ತೂಕವನ್ನು ಕಳೆದುಕೊಂಡಿದ್ದಾರಂತೆ. ದೈಹಿಕವಾಗಿ ಬದಲಾಗುವುದಕ್ಕಿಂತ ಮಾನಸಿಕವಾಗಿ ಬದಲಾಗುವುದು ಬಹಳ ಕಷ್ಟವಾಗಿತ್ತು. ಪ್ರತಿ ದಿನ ನಾಲ್ಕೈದು ಗಂಟೆಗಳ ಕಾಲ ಮೇಕಪ್‍ ಹಾಕಿಕೊಳ್ಳಬೇಕಿತ್ತು ಎಂದು ಚಿತ್ರೀಕರಣ ಸಮಯದ ಅನುಭವವನ್ನು ವಿಕ್ರಮ್ ಈ ಹಿಂದೆ ಹಂಚಿಕೊಂಡಿದ್ದರು.

Continue Reading

ಸ್ಯಾಂಡಲ್ ವುಡ್

Rakshit Shetty: ಕಾಪಿ ರೈಟ್ ಉಲ್ಲಂಘನೆ; ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ಆದೇಶ

Rakshit Shetty: ರಕ್ಷಿತ್ ಶೆಟ್ಟಿ ವಿರುದ್ಧ ನ್ಯಾಯ ಎಲ್ಲಿದೆ ಸಾಂಗ್ ಕಾಪಿ ರೈಟ್ಸ್ ಉಲ್ಲಂಘನೆಯ ಆರೋಪ ಇದ್ದು, ಬ್ಯಾಚುಲರ್ಸ್ ಪಾರ್ಟಿ ಸಿನಿಮಾ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿರುವ ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ’, ‘ಒಮ್ಮೆ ನಿನ್ನನ್ನು..’ ಹಾಡುಗಳನ್ನು ಅನುಮತಿ ಪಡೆಯದೆ ,ಕಾನೂನು ಬಾಹಿರವಾಗಿ ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಕೇಸ್ ದಾಖಲಾಗಿತ್ತು.

VISTARANEWS.COM


on

Rakshit Shetty Copyright Infringement 20 lakhs for Delhi High Court orders deposit
Koo

ಬೆಂಗಳೂರು: ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ (Rakshit Shetty) 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಪರಂವಃ ಸ್ಟೂಡಿಯೋಸ್ ನಿರ್ಮಿಸಿರುವ ಬ್ಯಾಚುಲರ್ಸ್ ಪಾರ್ಟಿ ಸಿನಿಮಾಗಾಗಿ ಅನಧಿಕೃತವಾಗಿ ಹಾಡು ಬಳಕೆ ಆರೋಪ ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಕೇಳಿಬಂದಿತ್ತು.  ನ್ಯಾಯ ಎಲ್ಲಿದೆ ಚಿತ್ರದ ʼನ್ಯಾಯ ಎಲ್ಲಿದೆʼ ಹಾಡು ಹಾಗೂ ಗಾಳಿ ಮಾತು ಚಿತ್ರದ ʼಒಮ್ಮೆ ನಿನ್ನನ್ನುʼ ಹಾಡಿನ ಕಾಪಿ ರೈಟ್ಸ್ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ದೂರು ನೀಡಿದ್ದರು.  ಆದರೆ ರಕ್ಷಿತ್ ಶೆಟ್ಟಿ ದೆಹಲಿ ಕೋರ್ಟ್ ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೋಗೆ ಕಾಪಿ ರೈಟ್‍ ಉಲ್ಲಂಘನೆಗಾಗಿ 20 ಲಕ್ಷ ಠೇವಣಿ ಇಡಲು ಮತ್ತು ಇನ್ಸ್ಟಾದಲ್ಲಿ ಶೇರ್ ಮಾಡಿರೋ ಹಾಡು ತಗೆಯುವಂತೆ ಆದೇಶ ಹೊರಡಿಸಿದೆ.

ರಕ್ಷಿತ್ ಶೆಟ್ಟಿ ವಿರುದ್ಧ ನ್ಯಾಯ ಎಲ್ಲಿದೆ ಸಾಂಗ್ ಕಾಪಿ ರೈಟ್ಸ್ ಉಲ್ಲಂಘನೆಯ ಆರೋಪ ಇದ್ದು, ಬ್ಯಾಚುಲರ್ಸ್ ಪಾರ್ಟಿ ಸಿನಿಮಾ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿರುವ ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ’, ‘ಒಮ್ಮೆ ನಿನ್ನನ್ನು..’ ಹಾಡುಗಳನ್ನು ಅನುಮತಿ ಪಡೆಯದೆ ,ಕಾನೂನು ಬಾಹಿರವಾಗಿ ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಕೇಸ್ ದಾಖಲಾಗಿತ್ತು.

ಈ ಸಂಬಂಧ MRT ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ದೂರು ನೀಡಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿತ್ತು. ಕಾಪಿ ರೈಟ್ಸ್ ಆ್ಯಕ್ಸ್ ಸೆ. 63 ರಡಿ ಅನುಮತಿ ಇಲ್ಲದೇ ಹಾಡು ಬಳಕೆ ಮಾಡಿದ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು. ನಟ ರಕ್ಷಿತ್ ಠಾಣೆಗೆ ವಿಚಾರಣೆಗೆ ಕೂಡ ಹಾಜರಾಗಿದ್ದರು.

ಇದನ್ನೂ ಓದಿ: Rakshit Shetty: ಕಾಪಿ ರೈಟ್ಸ್ ಉಲ್ಲಂಘನೆ; ಜಾಮೀನು ಕೋರಿ ರಕ್ಷಿತ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜು.24ಕ್ಕೆ ಮುಂದೂಡಿಕೆ

ಕಾಪಿ ರೈಟ್ಸ್ ಉಲ್ಲಂಘನೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ನಟ ರಕ್ಷಿತ್ ಶೆಟ್ಟಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜುಲೈ 24ಕ್ಕೆ ಸೆಷನ್ಸ್ ಕೋರ್ಟ್‌ ಮುಂದೂಡಿದೆ. ಪ್ರಕರಣದಲ್ಲಿ ಬಂಧನ ಭೀತಿ ಎದುರಾದ ಹಿನ್ನೆಲೆಯಲ್ಲಿ ನನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಜನವರಿ 26 ರಂದು ರಿಲೀಸ್‌ ಆಗಿತ್ತು. ಕಾಮಿಡಿ ಜಾನರ್‌ನ ಈ ಸಿನಿಮಾದಲ್ಲಿ ನಟ ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾ‌ರ್, ನಟಿ ಸಿರಿ ರವಿಕುಮಾರ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಕಿರಿಕ್ ಪಾರ್ಟಿ’ ಚಿತ್ರದ ಬರಹಗಾರ ಅಭಿಜಿತ್ ಮಹೇಶ್ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಕಿರಿಕ್‌ ಪಾರ್ಟಿಯ ಬರಹಗಾರರಲ್ಲಿ ಅಭಿಜಿತ್ ಮಹೇಶ್ ಕೂಡ ಒಬ್ಬರು. ಈ ಚಿತ್ರದ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಬೆಳ್ಳಿ ಪರದೆಗೆ ಕಾಲಿಟ್ಟಿದ್ದರು. ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಅಮಿತ್ ಗುಪ್ತ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದು, ಅರವಿಂದ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ ನಿರ್ದೇಶನ ಈ ಚಿತ್ರಕ್ಕಿತ್ತು.

ಏನಿದು ಪ್ರಕರಣ?

ಈ ಹಿಂದೆ ‘ಸಿಂಪಲ್ ಸ್ಟಾರ್‘ ರಕ್ಷಿತ್ ಶೆಟ್ಟಿ ಅಭಿನಯದ ರಿಷಬ್ ಶೆಟ್ಟಿ (Rakshit Shetty)ನಿರ್ದೇಶನದ ‘ಕಿರಿಕ್ ಪಾರ್ಟಿ’ 2016ರಲ್ಲಿ ತೆರೆಗೆ ಬಂದಿತ್ತು. ‘ಕಿರಿಕ್ ಪಾರ್ಟಿ’ ಸಿನಿಮಾ ‘ಕಾಪಿರೈಟ್’ ವಿಚಾರವಾಗಿ ವಿವಾದಕ್ಕೂ ಗ್ರಾಸವಾಗಿತ್ತು. ಇದೀಗ ನಟ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಚಿತ್ರದ ಸರದಿ.

ʻನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಹಾಗೂ ‘ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ” ಹಾಡುಗಳನ್ನು ಕದ್ದಿದ್ದಾರೆ ಎನ್ನುವ ಆರೋಪ ನಟ ರಕ್ಷಿತ್‌ ಶೆಟ್ಟಿ ವಿರುದ್ಧ ಕೇಳಿ ಬಂದಿದೆ. ಈ ಹಿಂದೆ ನವೀನ್ ಕುಮಾರ್ ಎಂಬುವವರ ಜತೆ ಹಾಡುಗಳ ಬಗ್ಗೆ ಮಾತುಕತೆ ನಡೆದಿತ್ತು. ನವೀನ್ ಕುಮಾರ್ ಹಾಡುಗಳ ಕಾಪಿರೈಟ್ ಪಡೆದು ಮಾರಾಟ ಮಾಡುವ ಬ್ಯುಸಿನೆಸ್ ಮೆನ್ ಆಗಿದ್ದರು. ಇವರ ಜೊತೆ ಹಾಡಿಗೆ ಸಂಬಂಧಿಸಿದ ಮಾತುಕತೆ ನಡೆದಿತ್ತು. ಆದರೆ ನಾನಾ ಕಾರಣಕ್ಕೆ ಈ ಡೀಲ್ ಮುರಿದು ಬಿದ್ದಿತ್ತು. ಆದರೂ ಆ ಹಾಡನ್ನು ಮಾಲೀಕರ ಅನುಮತಿ ಇಲ್ಲದೆ ಬಳಕೆ ಆಗಿತ್ತು. ಚಿತ್ರದಲ್ಲಿ ಎರಡೂ ಹಾಡುಗಳನ್ನು ಅನುಮತಿ ಇಲ್ಲದೆ ಬಳಕೆ ಮಾಡಿದ್ದಾರೆಂದು ನವೀನ್‌ರಿಂದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತುಟ ರಕ್ಷಿತ್ ಶೆಟ್ಟಿ (Rakshit Shetty) ಅವರು ನಿರೀಕ್ಷಿತ ಜಾಮೀನಿಗಾಗಿ ಕೋರ್ಟ್‌ ಮೊರೆ ಹೋಗಿದ್ದಾರೆ.

Continue Reading

ಕರ್ನಾಟಕ

Kannada New Movie: ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ಈ ಪಾದ ಪುಣ್ಯ ಪಾದ’ ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್ ಕ್ಲಾಪ್

Kannada New Movie: ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ “ಈ ಪಾದ ಪುಣ್ಯಪಾದ” ಚಿತ್ರದ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ಶಿವನಂದಿ ದೇವಸ್ಥಾನದಲ್ಲಿ ನೆರವೇರಿತು. ಸಿದ್ದು ಪೂರ್ಣಚಂದ್ರ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಅವರು ಕ್ಲಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

VISTARANEWS.COM


on

Kannada New Movie
Koo

ಬೆಂಗಳೂರು: “ದಾರಿ ಯಾವುದಯ್ಯಾ ವೈಕುಂಠಕೆ” ಚಿತ್ರ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಮತ್ತೊಂದು ಚಿತ್ರ “ಈ ಪಾದ ಪುಣ್ಯಪಾದ”. ಈ ಚಿತ್ರದ ಮುಹೂರ್ತ ಕಾರ್ಯಕ್ರಮ ಬೆಂಗಳೂರಿನ ಶಿವನಂದಿ ದೇವಸ್ಥಾನದಲ್ಲಿ ನೆರವೇರಿತು. ಸಿನಿಮಾಗೆ (Kannada New Movie) ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಅವರು ಕ್ಲಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಪೂರ್ಣಚಂದ್ರ ಫಿಲಂಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಸಿದ್ದು ಪೂರ್ಣಚಂದ್ರ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದೇ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗುತ್ತದೆ. ರಾಮನಗರ, ಚನ್ನಪಟ್ಟಣ, ಮದ್ದೂರು ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಿಸಲಾಗುತ್ತದೆ ಎಂದು ಸಿದ್ದು ಪೂರ್ಣಚಂದ್ರ ತಿಳಿಸಿದರು.

ಮುಖ್ಯ ಪಾತ್ರದಲ್ಲಿ ಆಟೋ ನಾಗರಾಜ್ ಅಭಿನಯಿಸುತ್ತಿದ್ದಾರೆ. ಉಳಿದಂತೆ “ಸಂಭವಾಮಿ ಯುಗೇ ಯುಗೇ” ಚಿತ್ರ ಖ್ಯಾತಿಯ ಜಯ್ ಶೆಟ್ಟಿ, ಬಲ ರಾಜ್ವಾಡಿ, ಚೈತ್ರ, ನಂದಿನಿ ರಾಜ್ ಜೀವನ್ ರಿಚಿ, ಪ್ರಮಿಳ ಸುಬ್ರಮಣ್ಯಂ, ಶಂಕರ್ ಭಟ್ ಹರೀಶ್ ಕುಂದೂರ್, ಯೋಗಿತ, ಬೇಬಿ ರಿಧಿ, ಯೋಗೇಶ್ ಇನ್ನೂ ಮುಂತಾದವರು ಅಭಿನಯಿಸುತ್ತಿದ್ದಾರೆ.

ಸಹ ನಿರ್ಮಾಪಕರಾಗಿ ಶ್ರೀಯುತ ಸನ್ನಿ, ಎ.ಕೆ ಪುಟ್ಟರಾಜು ಮತ್ತು ಪ್ರಮಿಳಾ ಸುಭ್ರಮಣ್ಯಂ ಅವರೂ ಕೂಡ ಸಹ ನಿರ್ಮಾಪಕರಾಗಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ರಾಜು ಹೆಮ್ಮಿಗೆಪುರ, ಸಂಕಲನ ದೀಪಕ್ ಸಿ.ಎಸ್., ಕಲೆ ಬಸವರಾಜ್ ಆಚಾರ್, ವಸ್ತ್ರ ವಿನ್ಯಾಸ ನಾಗರತ್ನ ಕೆ.ಎಚ್., ಸಂಗೀತ ಅನಂತ್ ಆರ್ಯನ್, ಮೇಕಪ್ ಸಿದ್ದು ರಾಯಚೂರ್, ಸ್ವರೂಪ್ ವಿ ಎಫ್ ಎಕ್ಸ್. ಕಲರಿಂಗ್ ನಿಖಿಲ್ ಕಾರ್ಯಪ್ಪ.

ಇದನ್ನೂ ಓದಿ: Pralhad Joshi: ಭಾರತ-ಅರ್ಜೆಂಟೀನಾ; ಆಹಾರ ಹಂಚಿಕೆ ಹೆಚ್ಚಳ ಕುರಿತು ಸಚಿವ ಪ್ರಲ್ಹಾದ್‌ ಜೋಶಿ ಚರ್ಚೆ

ವಿಭಿನ್ನ ಕಥಾ ಹಂದರ ಹೊಂದಿದ ಈ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭೂತಿಯನ್ನು ಕಟ್ಟಿಕೊಡುತ್ತದೆ. ಇಲ್ಲಿ ಎಲ್ಲಾ ಪಾತ್ರಗಳ ಕಾಲುಗಳು ಕಥೆ ಹೇಳುತ್ತವೆ. ಅದರಲ್ಲಿ ಮುಖ್ಯವಾಗಿ ಆನೆಕಾಲು ರೋಗಿಯ ಜೀವನ ಶೈಲಿಯನ್ನು ಬೇರೆ ಬೇರೆ ಆಯಾಮಗಳಲ್ಲಿ ಚಿತ್ರಿಸಲಾಗುತ್ತದೆ. ಇದರ ಜತೆಗೆ ಮಕ್ಕಳ ಪಾದ, ವೃದ್ದರ ಪಾದ, ದಾಸರ ಪಾದ, ಸ್ವಾಮೀಜಿಗಳ ಪಾದದ ಕಥೆ ಹೇಳಲಾಗುತ್ತದೆ. ಎಲ್ಲೂ ನೋಡಿರದ, ಕೇಳಿರದ ಈ ಕಥೆಯನ್ನು ಅಚ್ಚುಕಟ್ಟಾಗಿ ತೆರೆಮೇಲೆ ತರಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿರುವೆ ಎಂದು ನಿರ್ದೇಶಕ ಸಿದ್ದು ಪೂರ್ಣಚಂದ್ರ ವಿವರಿಸಿದರು.

Continue Reading
Advertisement
ಪ್ರಮುಖ ಸುದ್ದಿ2 hours ago

Physical assault : ಹೆಣ್ಣು ಮಕ್ಕಳಿಗೆ ಅಶ್ಲೀಲ ಚಿತ್ರ ತೋರಿಸುತ್ತಿದ್ದ ಶಿಕ್ಷಕ; ಸಿಟ್ಟಿಗೆದ್ದು ಶಾಲೆಯನ್ನೇ ಸುಟ್ಟು ಹಾಕಿದ ಗ್ರಾಮಸ್ಥರು

Sourav Ganguly
ಪ್ರಮುಖ ಸುದ್ದಿ2 hours ago

Sourav Ganguly : ಕೊಲೆಗಡುಕರಿಗೆ ಈ ರೀತಿ ಮಾಡಿ; ಕೋಲ್ಕೊತಾ ವೈದ್ಯೆಯ ಅತ್ಯಾಚಾರ, ಕೊಲೆ ಬಗ್ಗೆ ಸೌರವ್​ ಗಂಗೂಲಿ ಅಭಿಪ್ರಾಯ ಹೀಗಿತ್ತು

Power Banks
ಪ್ರಮುಖ ಸುದ್ದಿ3 hours ago

Power Banks : ಇನ್ನು ಮುಂದೆ ರೈಲಿನಲ್ಲಿ ಪ್ರಯಾಣಿಸುವಾಗ ಪವರ್​ ಬ್ಯಾಂಕ್​ಗಳನ್ನು ಬಾಡಿಗೆಗೆ ಪಡೆಯಬಹುದು!

Maheshchandra Guru
ಪ್ರಮುಖ ಸುದ್ದಿ3 hours ago

Maheshchandra Guru : ನಿವೃತ್ತ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಮಹೇಶ್​ಚಂದ್ರ ಗುರು ನಿಧನ

cm siddaramaiah
ಪ್ರಮುಖ ಸುದ್ದಿ4 hours ago

CM siddaramaiah : ಕಾಂಗ್ರೆಸ್ ಪಕ್ಷ, ಸರ್ಕಾರ ಸಿದ್ದರಾಮಯ್ಯ ಬೆಂಬಲಕ್ಕಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

Kundapura Kannada Habba
ಕರ್ನಾಟಕ4 hours ago

Kundapura Kannada Habba: ನನ್ನ ಸಿನಿಮಾ ಕಥೆಗಳಿಗೆ ಊರು, ಯಕ್ಷಗಾನವೇ ಪ್ರೇರಣೆ; ರಿಷಬ್ ಶೆಟ್ಟಿ

NPS News
ಕರ್ನಾಟಕ4 hours ago

NPS News: ಹೊಸ ಪಿಂಚಣಿ ರದ್ದುಗೊಳಿಸಲು ಸಮಿತಿ ಪುನರ್‌ ರಚನೆ; ಎನ್‌ಪಿಎಸ್‌ ನೌಕರರ ಸಂಘ ವಿರೋಧ

ಪ್ರಮುಖ ಸುದ್ದಿ5 hours ago

7th pay commission : 7ನೇ ವೇತನ ಆಯೋಗ ಜಾರಿ ಬಳಿಕ ನೌಕರರ ಸಂಬಳ ಏರಿಕೆ ಎಷ್ಟು? ಅಧಿಕೃತ ಪಟ್ಟಿ ಬಿಡುಗಡೆ

Prabhas New Film
ಸಿನಿಮಾ5 hours ago

Prabhas New Film: ಹೊಸ ಯುದ್ಧ ಶುರು; ಪ್ರಭಾಸ್ ಅಭಿನಯದ ಮುಂದಿನ ಚಿತ್ರ ಸುಳಿವು!

NPS
ಬೆಂಗಳೂರು6 hours ago

Government Employee: ಹಳೇ ಪಿಂಚಣಿ ವ್ಯವಸ್ಥೆ (OPS) ಜಾರಿ ಸಾಧ್ಯತೆ ಪರಿಶೀಲನೆಗೆ ಸರ್ಕಾರದಿಂದ ಸಮಿತಿ ಪುನರ್‌ ರಚನೆ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌