Lohegaon airport: ಏರ್‌ಪೋರ್ಟ್‌ನಲ್ಲಿ ಮಹಿಳೆಯ ರಂಪಾಟ- CISF ಕಾನ್‌ಸ್ಟೆಬಲ್‌ ಕೈಗೆ ಕಚ್ಚಿ ಕಪಾಳಮೋಕ್ಷ, ಪ್ರಯಾಣಿಕರ ಮೇಲೂ ಹಲ್ಲೆ - Vistara News

ದೇಶ

Lohegaon airport: ಏರ್‌ಪೋರ್ಟ್‌ನಲ್ಲಿ ಮಹಿಳೆಯ ರಂಪಾಟ- CISF ಕಾನ್‌ಸ್ಟೆಬಲ್‌ ಕೈಗೆ ಕಚ್ಚಿ ಕಪಾಳಮೋಕ್ಷ, ಪ್ರಯಾಣಿಕರ ಮೇಲೂ ಹಲ್ಲೆ

Lohegaon airport: ಖಾಸಗಿ ವಿಮಾನದಲ್ಲಿ ನವದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಪುಣೆಯ ಲೋಹೆಗಾಂವ್ ಏರ್‌ಪೋರ್ಟ್‌ನಲ್ಲಿ ಇಬ್ಬರು ಸಹ ಪ್ರಯಾಣಿಕರು ಮತ್ತು ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ನಂತರ ಆಕೆಯನ್ನು ವಿಮಾನದಿಂದ ಹೊರಗೆ ಕಳುಹಿಸಲಾಯಿತು. ಬೋರ್ಡಿಂಗ್ ಪ್ರಕ್ರಿಯೆ ವೇಳೆ ಈ ಘಟನೆ ನಡೆದಿದೆ.

VISTARANEWS.COM


on

Lohegaon airport
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಸ್‌ನಲ್ಲಿ ನಡೆಯೋ ಪ್ರಯಾಣಿಕರ ಗಲಾಟೆ, ಜಗಳಕ್ಕಿಂತ ಹೆಚ್ಚಾಗಿ ವಿಮಾನದಲ್ಲಿ ನಡೆಯೋ ಕಿರಿಕ್‌ಗಳ ಬಗ್ಗೆ ವರದಿಯಾಗುತ್ತಲೇ ಇರುತ್ತದೆ. ವಿಮಾನದೊಳಗೆ ಪ್ರಯಾಣಿಕರ ನಡುವೆ ಗಲಾಟೆ, ಹೊಡೆದಾಟ ನಡೆದಿರುವ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಮತ್ತೊಂದು ಘಟನೆ ಬೆಳಕಿಗೆ ಬಂದಿದೆ(Lohegaon airport). ಮಹಿಳೆಯೊಬ್ಬಳು ಸಹಪ್ರಯಾಣಿಕರು ಮತ್ತು ಸಿಐಎಸ್‌ಎಫ್ ಕಾನ್‌ಸ್ಟೆಬಲ್(CISF Constable) ಮೇಲೆ ಹಲ್ಲೆ ನಡೆಸಿದ್ದಾಳೆ(Viral News).

ಖಾಸಗಿ ವಿಮಾನದಲ್ಲಿ ನವದೆಹಲಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಪುಣೆಯ ಲೋಹೆಗಾಂವ್ ಏರ್‌ಪೋರ್ಟ್‌ನಲ್ಲಿ ಇಬ್ಬರು ಸಹ ಪ್ರಯಾಣಿಕರು ಮತ್ತು ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ ನಂತರ ಆಕೆಯನ್ನು ವಿಮಾನದಿಂದ ಹೊರಗೆ ಕಳುಹಿಸಲಾಯಿತು. ಬೋರ್ಡಿಂಗ್ ಪ್ರಕ್ರಿಯೆ ವೇಳೆ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಮಹಿಳೆ ಆರಂಭದಲ್ಲಿ ತಮ್ಮ ನಿಯೋಜಿತ ಸ್ಥಳಗಳಲ್ಲಿ ಕುಳಿತಿದ್ದ ಸಹೋದರ ಮತ್ತು ಸಹೋದರಿಯ ಮೇಲೆ ಹಲ್ಲೆ ನಡೆಸಿದ್ದಾಳೆ.

ಇದರ ನಂತರ, ಸಿಬ್ಬಂದಿ ಸಿಐಎಸ್ಎಫ್ ನೆರವಿಗೆ ಕರೆದರು, ಪರಿಸ್ಥಿತಿಯನ್ನು ನಿಭಾಯಿಸಲು ಕಾನ್‌ಸ್ಟೆಬಲ್‌ಗಳಾದ ಪ್ರಿಯಾಂಕಾ ರೆಡ್ಡಿ ಮತ್ತು ಸೋನಿಕಾ ಪಾಲ್ ಅಲ್ಲಿಗೆ ಬಂದರು. ಈ ವೇಳೆ ಮಹಿಳೆ ಕಾನ್‌ಸ್ಟೆಬಲ್ ರೆಡ್ಡಿಗೆ ಕಪಾಳಮೋಕ್ಷ ಮಾಡಿದ್ದಾಳೆ ಅಲ್ಲದೇ ಆಕೆಯ ಕೈಗೆ ಕಚ್ಚಿದ್ದಾಳೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೆಲವು ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಕೊನೆಗೆ ಆಕೆ ಮತ್ತು ಆಕೆಯ ಪತಿಯನ್ನು ವಿಮಾನದಿಂದ ಕೆಳಗಿಳಿಸಲಾಯಿತು. ನಂತರ ಅವರನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇನ್ನು ಮಹಿಳೆ ಮತ್ತು ಆಕೆಯ ಪತಿ ಪುಣೆಯ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು, ಇವರು ಪುಣೆಯಿಂದ ದೆಹಲಿಗೆ ಅಂತ್ಯಕ್ರಿಯೆಗೆಂದು ತೆರಳುತ್ತಿದ್ದರು ಎನ್ನಲಾಗಿದೆ.

ಒಂದು ವರ್ಷದ ಹಿಂದೆ ಏರ್‌ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕನೊಬ್ಬನ ಮೇಲೆ ಮಲ-ಮೂತ್ರ ವಿಸರ್ಜಿಸಿದ ಘಟನೆ ವರದಿಯಾಗಿತ್ತು. ಮುಂಬಯಿ-ದೆಹಲಿ ಮಾರ್ಗದ ಎಐಸಿ 866 ಎಂಬ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ರಾಮ್ ಸಿಂಗ್ ಇಂಥ ಹೊಲಸು ಮಾಡಿದ್ದಾನೆ. ಪೊಲೀಸರು ಎಫ್ ಐಆರ್ ದಾಖಲು ಮಾಡಿದ್ದಾರೆ. ಈತ ಮದ್ಯಪಾನ ಮಾಡಿದ್ದರ ಬಗ್ಗೆ ಉಲ್ಲೇಖವಾಗಿಲ್ಲ. ಮುಂಬಯಿಯಿಂದ ದೆಹಲಿಗೆ ಹೋಗುತ್ತಿದ್ದ ವಿಮಾನದ 9 ನೇ ಸಾಲಿನಲ್ಲಿ, 17F ಸೀಟ್ ನಲ್ಲಿ ಕುಳಿತಿದ್ದ ರಾಮ್ ಸಿಂಗ್, ವಿಮಾನ ಹೊರಟ ಕೆಲವೇ ಹೊತ್ತಲ್ಲಿ ಅನುಚಿತ ವರ್ತನೆ ತೋರಿಸಿದ್ದಾನೆ. ಸೀಟ್ ನಿಂದ ಕೆಳಗೆ ಇಳಿದು ಮಲ-ಮೂತ್ರ ವಿಸರ್ಜಿಸಿ, ಅಲ್ಲೇ ಉಗುಳಿದ್ದಾನೆ. ಅಷ್ಟರಲ್ಲಿ ವಿಮಾನ ಸಿಬ್ಬಂದಿ ಅಲ್ಲಿಗೆ ಬಂದು ರಾಮ್ ಸಿಂಗ್ ನನ್ನು ಅಲ್ಲಿಂದ ಕರೆದುಕೊಂಡು ಹೋಗಿ ಐಸೋಲೇಟ್ ಮಾಡಿದ್ದಾರೆ.

ಇದನ್ನೂ ಓದಿ: ಏರ್​ ಇಂಡಿಯಾ ವಿಮಾನದಲ್ಲಿ ಹೊಲಸು ಮಾಡಿದ ಪ್ರಯಾಣಿಕ; ಮಲ-ಮೂತ್ರ ವಿಸರ್ಜಿಸಿ, ಗಲಾಟೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Viral Video: ತ್ರಿವರ್ಣ ಧ್ವಜ ಹರಿದು, ಗೋ ಬ್ಯಾಕ್‌ ಇಂಡಿಯಾ ಘೋಷಣೆ- ಖಲಿಸ್ತಾನಿಗಳ ಅಟ್ಟಹಾಸ; ವಿಡಿಯೋ ವೈರಲ್‌

Viral Video:ಟೊರೊಂಟೋ ಸಿಟಿ ಹಾಲ್‌(Toronto City Hall)ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮದ ನಡುವೆ ಘೋಷಣೆ ಕೂಗುತ್ತಾ ಎಂಟ್ರಿಯಾದ ಖಲಿಸ್ತಾನಿಗಳು ಚಾಕುವಿನಿಂದ ಭಾರತದ ಧ್ವಜವನ್ನು ಹರಿದುಹಾಕಿದ್ದಾರೆ. ಅಲ್ಲದೇ ಗೋ ಬ್ಯಾಕ್‌ ಇಂಡಿಯಾ ಎಂದು ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

VISTARANEWS.COM


on

Viral Video
Koo

ಟೊರೊಂಟೋ: ಸ್ವಾತಂತ್ರ್ಯ ದಿನಾಚರಣೆ(Independence Day 2024) ಅಂಗವಾಗಿ ಆಯೋಜಿಸಲಾಗಿದ್ದ ಇಂಡಿಯಾ ಡೇ ಪರೇಡ್‌(India Day Parade) ಕಾರ್ಯಕ್ರಮದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು(Khalistan) ಭಾರತದ ತ್ರಿವರ್ಣ ಧ್ವಜವನ್ನು ಹರಿದಿರುವ ಘಟನೆ ಟೊರೊಂಟೋದಲ್ಲಿ ನಡೆದಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌(Viral Video) ಆಗುತ್ತಿದೆ.

ಟೊರೊಂಟೋ ಸಿಟಿ ಹಾಲ್‌(Toronto City Hall)ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮದ ನಡುವೆ ಘೋಷಣೆ ಕೂಗುತ್ತಾ ಎಂಟ್ರಿಯಾದ ಖಲಿಸ್ತಾನಿಗಳು ಚಾಕುವಿನಿಂದ ಭಾರತದ ಧ್ವಜವನ್ನು ಹರಿದುಹಾಕಿದ್ದಾರೆ. ಅಲ್ಲದೇ ಗೋ ಬ್ಯಾಕ್‌ ಇಂಡಿಯಾ ಎಂದು ಘೋಷಣೆ ಕೂಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಕೆನಡಾದಲ್ಲಿ ಸ್ವಾತಂತ್ರ್ಯದ ಅತಿದೊಡ್ಡ ಆಚರಣೆಯಾದ ಇಂಡಿಯಾ ಡೇ ಪರೇಡ್ ಟೊರೊಂಟೊದಲ್ಲಿ ನಡೆಯಿತು. ಖಲಿಸ್ತಾನ್ ಪರ ಗುಂಪುಗಳ ಯೋಜಿತ ಪ್ರತಿ-ರ್ಯಾಲಿಯಿಂದಾಗಿ ಈ ಕಾರ್ಯಕ್ರಮಕ್ಕೆ ಸಕಲ ಭದ್ರತೆ ಒದಗಿಸಲಾಗಿತ್ತು. ಇಂಡಿಯಾ ಡೇ ಪರೇಡ್ ಅನ್ನು ಆಗಸ್ಟ್ 15 ರ ನಂತರದ ಮೊದಲ ಭಾನುವಾರದಂದು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಪನೋರಮಾ ಇಂಡಿಯಾ ಆಯೋಜಿಸಿದ್ದು, ಇದು ಇಂಡೋ-ಕೆನಡಿಯನ್ ಸಾಂಸ್ಕೃತಿಕ ಸಮಾಗಮವಾಗಿದೆ.

ಪನೋರಮಾ ಇಂಡಿಯಾದ ಪರೇಡ್‌ನ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಕಾರಣ ಈ ವರ್ಷ ಈ ಕಾರ್ಯಕ್ರಮ ಬಹಳ ಮಹತ್ವ ಪಡೆದುಕೊಂಡಿತ್ತು. ಟೊರೊಂಟೊ ಡೌನ್‌ಟೌನ್‌ನಲ್ಲಿರುವ ನಾಥನ್ ಫಿಲಿಪ್ಸ್ ಸ್ಕ್ವೇರ್‌ನಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವೈವಿಧ್ಯಮಯ ಭಾರತೀಯ ತಿನಿಸುಗಳು ಕಾರ್ಯಕ್ರಮವನ್ನು ಹೆಚ್ಚಿಸಿದವು. ‘ಖಾಲಿಸ್ತಾನ್ ಸಿಖ್ಖರು’ ಮತ್ತು ‘ಕೆನಡಾದ ಹಿಂದೂಗಳ ನಡುವೆ ಮುಖಾಮುಖಿ’ಗಾಗಿ ಕರೆ ನೀಡುವ ಉದ್ದೇಶದಿಂದಲೇ ಸಮೀಪದಲ್ಲಿ ಖಲಿಸ್ತಾನಿಗಳು ಕಾರ್ಯಕ್ರಮ ಆಯೋಜಿಸಿತ್ತು.

ಕೆಲವು ದಿನಗಳ ಹಿಂದೆಯಷ್ಟೇ ಭಯೋತ್ಪಾದಕ ಚಟುವಟಿಕೆಗಳಿಗೆ ಮಾರಾಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿ ಖಲಿಸ್ತಾನಿ ಭಯೋತ್ಪಾದಕ ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾನ ಪ್ರಮುಖ ಸಹಾಯಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಬಂಧಿಸಿದೆ. ಮಾರಕಾಸ್ತ್ರಗಳ ಪೂರೈಕೆಗೆ ಸಂಬಂಧಿಸಿದ ಪ್ರಮುಖ ಭಯೋತ್ಪಾದನಾ ಜಾಲವನ್ನು ಭೇದಿಸಿದ ಎನ್‌ಐಎ, ಮಧ್ಯಪ್ರದೇಶದ ಬದ್ವಾನಿ ಜಿಲ್ಲೆಯ ಬಲ್ಜೀತ್ ಸಿಂಗ್ ಅಲಿಯಾಸ್ ರಾಣಾ ಭಾಯ್ ಅಲಿಯಾಸ್ ಬಲ್ಲಿ ಎಂಬಾತನನ್ನು ಗುರುವಾರ ಪಂಜಾಬ್‌ನಲ್ಲಿ ಬಂಧಿಸಿದೆ.

ಇದನ್ನೂ ಓದಿ: Tarsem Singh: ಎನ್‌ಐಎ ಪ್ರಮುಖ ಕಾರ್ಯಾಚರಣೆ; ಅಬುಧಾಬಿಯಲ್ಲಿ ಖಲಿಸ್ತಾನಿ ಉಗ್ರ ತರ್ಸೇಮ್‌ ಸಿಂಗ್ ಬಂಧನ!

Continue Reading

ದೇಶ

Kolkata Doctor Murder case: ಮಮತಾ ಬ್ಯಾನರ್ಜಿ ಹತ್ಯೆಗೆ ಪ್ರಚೋದಿಸಿ ಪೋಸ್ಟ್‌- ವಿದ್ಯಾರ್ಥಿನಿ ಅರೆಸ್ಟ್‌

Kolkata Doctor Murder case: ಬಂಧಿತ ವಿದ್ಯಾರ್ಥಿನಿಯನ್ನು ಕೀರ್ತಿ ಶರ್ಮಾ ಎಂದು ಗುರುತಿಸಲಾಗಿದೆ. ಈಕೆ ತನ್ನ kirtisocial ಎಂಬ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಹತ್ಯೆಗೆ ಕರೆ ನೀಡಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯನ್ನು ನೆನಪಿಸುವ ರೀತಿಯಲ್ಲಿ ಮಮತಾ ಬ್ಯಾನರ್ಜಿಯನ್ನು ಹತ್ಯೆ ಮಾಡಿ ಎಂದು ಪೋಸ್ಟ್‌ ಮಾಡಿದ್ದಾಳೆ ಎನ್ನಲಾಗಿದೆ.

VISTARANEWS.COM


on

Kolkata Doctor Murder case
Koo

ಕೋಲ್ಕತಾ: ಕೋಲ್ಕತಾದ ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಬರ್ಬರ ಸಾಮೂಹಿಕ ಅತ್ಯಾಚಾರ ಹಾಗು ಕೊಲೆಯ (Kolkata Doctor Murder case) ಖಂಡಿಸಿ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ(West Bengal chief minister) ಮಮತಾ ಬ್ಯಾನರ್ಜಿ(Mamata Banerjee) ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಮತ್ತು ಬೆದರಿಕೆ ಹಾಕಿರುವ ಪೋಸ್ಟ್‌ವೊಂದನ್ನು ಮಾಡಿದ್ದ ವಿದ್ಯಾರ್ಥಿಯನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬಂಧಿತ ವಿದ್ಯಾರ್ಥಿನಿಯನ್ನು ಕೀರ್ತಿ ಶರ್ಮಾ ಎಂದು ಗುರುತಿಸಲಾಗಿದೆ. ಈಕೆ ತನ್ನ kirtisocial ಎಂಬ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಹತ್ಯೆಗೆ ಕರೆ ನೀಡಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯನ್ನು ನೆನಪಿಸುವ ರೀತಿಯಲ್ಲಿ ಮಮತಾ ಬ್ಯಾನರ್ಜಿಯನ್ನು ಹತ್ಯೆ ಮಾಡಿ ಎಂದು ಪೋಸ್ಟ್‌ ಮಾಡಿದ್ದಾಳೆ ಎನ್ನಲಾಗಿದೆ.

ಕೀರ್ತಿ ಶರ್ಮಾ ವಿರುದ್ಧ ತಾಲ್ತಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕೆಯನ್ನು ಅರೆಸ್ಟ್‌ ಮಾಡಲಾಗಿದೆ. ಕೀರ್ತಿ ಒಟ್ಟು ಮೂರು ಪೋಸ್ಟ್‌ಗಳನ್ನು ಮಾಡಿದ್ದು, ಒಂದು ಪೋಸ್ಟ್‌ನಲ್ಲಿ ಮೃತ ವೈದ್ಯೆಯ ಗುರುತು ಬಹಿರಂಗ ಪಡಿಸಿದ್ದಾರೆ. ಮತ್ತೆರಡು ಪೋಸ್ಟ್‌ನಲ್ಲಿ ಮಮತಾ ಬ್ಯಾನರ್ಜಿಯವರಿಗೆ ಬೆದರಿಕೆವೊಡ್ಡಿದ್ದಾರೆ ಎಂದು ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆ ಸಾವಿಗೆ ನ್ಯಾಯ ಸಿಗಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿರುವ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌(Supreme Court) ಮಧ್ಯಪ್ರದೇಶ ಮಾಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಿಚಾರಣೆ ನಡೆಯಲಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಇರುವ ನ್ಯಾಯಪೀಠ ಮಂಗಳವಾರ ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಏನಿದು ಘಟನೆ?

ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಆಗಸ್ಟ್‌ 9ರಂದು ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಆಗಸ್ಟ್‌ 8ರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಮರುದಿನ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕ್ರೂರವಾಗಿ ಹತ್ಯೆಗೈದಿರುವುದು ಬೆಳಕಿಗೆ ಬಂದಿತ್ತು. ಕುತ್ತಿಗೆ ಮುರಿದ ಸ್ಥಿತಿಯಲ್ಲಿ ಕಂಡು ಬಂದಿತ್ತು. ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ

ಇದನ್ನೂ ಓದಿ: Kolkata Doctor murder case: ಟ್ರೈನಿ ವೈದ್ಯೆ ಕೊಲೆ ಪ್ರಕರಣ; ಸ್ವಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌

Continue Reading

ದೇಶ

Uttarakhand Horror: ದೇಶವನ್ನೇ ಬೆಚ್ಚಿಬೀಳಿಸೋ ಮತ್ತೊಂದು ಘಟನೆ! ಬಸ್‌ನಲ್ಲೇ ಯುವತಿ ಮೇಲೆ ಡ್ರೈವರ್‌ ಸೇರಿ ಐವರಿಂದ ಗ್ಯಾಂಗ್‌ರೇಪ್‌

Uttarakhand Horror: ಪೊಲೀಸ್‌ ವಿಚಾರಣೆ ವೇಳೆ ಆರಂಭದಲ್ಲಿ ಯುವತಿ ತಾನು ಪಂಜಾಬ್‌ ಮೂಲದವಳು ಮತ್ತು ಅನಾಥಳು ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಆಕೆ ಉತ್ತರಪ್ರದೇಶ ಮೂಲದವಳು ಎಂಬುದು ತಿಳಿದುಬಂದಿದೆ. ಆಕೆ ಹೇಳುವಂತೆ ಆಕೆ ಆ.12ರಂದು ದಿಲ್ಲಿಯಿಂದ ಡೆಹ್ರಾಡೂನ್‌ಗೆ ISBT ಬಸ್‌ನಲ್ಲಿ ಪ್ರಯಾಣ ಶುರು ಮಾಡಿದ್ದಳು. ಡೆಹ್ರಾಡೂನ್‌ ಟರ್ಮಿನಲ್‌ನಲ್ಲಿ ಬಸ್‌ನ ಡ್ರೈವರ್‌, ಕಂಡಕ್ಟರ್‌, ಕ್ಯಾಶಿಯರ್‌ ಹಾಗೂ ಇತರ ಇಬ್ಬರು ಚಾಲಕರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

VISTARANEWS.COM


on

Uttarakhand Horror
Koo

ಡೆಹ್ರಾಡೂನ್‌: ಕೋಲ್ಕತ್ತಾ ಟ್ರೈನಿ ವೈದ್ಯೆ ಅತ್ಯಾಚಾರ ಕೊಲೆ ಪ್ರಕರಣ(Kolkata Doctor murder case) ಖಂಡಿಸಿ ರಾಷ್ಟ್ರವ್ಯಾಪಿ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ ಮತ್ತೊಂದು ಅಂತಹದ್ದೇ ಒಂದು ಹೀನ ಕೃತ್ಯವೊಂದು ಉತ್ತರಾಖಂಡದಲ್ಲಿ(Uttarakhand Horror) ನಡೆದಿದೆ. ಬಸ್‌ನಲ್ಲಿ ಯುವತಿ ಮೇಲೆ ಐವರು ನೀಚರು ಸಾಮೂಹಿಕ ಅತ್ಯಾಚಾರ(Gangrape) ಎಸಗಿ ಕ್ರೌರ್ಯ ಮೆರೆದಿದ್ದಾರೆ.

ಡೆಹ್ರಾಡೂನ್‌ನ ಅಂತಾರಾಜ್ಯ ಬಸ್‌ ಟ್ರಮಿನಲ್‌ನಲ್ಲಿ ಈ ಕೃತ್ಯ ನಡೆದಿದ್ದು, ನಡುರಾತ್ರಿ ಯುವತಿಯೊಬ್ಬಳು ಬಸ್‌ಸ್ಟ್ಯಾಂಡ್‌ನಲ್ಲಿ ಕುಳಿತಿರುವ ಬಗ್ಗೆ ಡೆಹ್ರಾಡೂನ್‌ ಮಕ್ಕಳ ಕಲ್ಯಾಣ ಸಮಿತಿಗೆ ಕರೆಯೊಂದು ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿ ಯುವತಿಯನ್ನು ಸರ್ಕಾರಿ ಹೋಂಗೆ ಕಳುಹಿಸಿ ವಿಚಾರಣೆ ನಡೆಸಿದಾಗ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಹೇಳಿಕೊಂಡಿದ್ದಾಳೆ.

ಪೊಲೀಸ್‌ ವಿಚಾರಣೆ ವೇಳೆ ಆರಂಭದಲ್ಲಿ ಯುವತಿ ತಾನು ಪಂಜಾಬ್‌ ಮೂಲದವಳು ಮತ್ತು ಅನಾಥಳು ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಆಕೆ ಉತ್ತರಪ್ರದೇಶ ಮೂಲದವಳು ಎಂಬುದು ತಿಳಿದುಬಂದಿದೆ. ಆಕೆ ಹೇಳುವಂತೆ ಆಕೆ ಆ.12ರಂದು ದಿಲ್ಲಿಯಿಂದ ಡೆಹ್ರಾಡೂನ್‌ಗೆ ISBT ಬಸ್‌ನಲ್ಲಿ ಪ್ರಯಾಣ ಶುರು ಮಾಡಿದ್ದಳು. ಡೆಹ್ರಾಡೂನ್‌ ಟರ್ಮಿನಲ್‌ನಲ್ಲಿ ಬಸ್‌ನ ಡ್ರೈವರ್‌, ಕಂಡಕ್ಟರ್‌, ಕ್ಯಾಶಿಯರ್‌ ಹಾಗೂ ಇತರ ಇಬ್ಬರು ಚಾಲಕರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ಆರೋಪಿಗಳ ಹಡೆಮುರಿ ಕಟ್ಟಿದ ಪೊಲೀಸರು

ಯುವತಿ ದೂರಿನಾಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಧರ್ಮೇಂದ್ರ ಕುಮಾರ್‌(32), ರಾಜ್‌ಪಾಲ್‌(57), ದೇವೇಂದ್ರ (52), ರಾಜೇಶ್‌ ಕುಮಾರ್‌ ಸೋನಕ್‌(38), ಹಾಗೂ ರವಿಕುಮಾರ್(34)ನನ್ನು ಅರೆಸ್ಟ್‌ ಮಾಡಿದ್ದಾರೆ. ವಿಚಾರಣೆ ವೇಳೆ ತಮ್ಮ ಕೃತ್ಯವನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಯುವತಿ ಪಂಜಾಬ್‌ಗೆ ಹೇಗೆ ಹೋಗಬೇಕೆಂದು ಬಸ್‌ ಚಾಲಕ ದೇವೇಂದ್ರನ ಬಳಿಕ ಕೇಳಿದ್ದಳು. ಈ ವೇಳೆ ಡೆಹ್ರಾಡೂನ್‌ಗೆ ಬಂದು ಅಲ್ಲಿಂದ ಬಸ್‌ನಲ್ಲಿ ಹೋಗಬಹುದೆಂದು ಯುವತಿಗೆ ಹೇಳಿದ್ದಾನೆ.

ಡೆಹ್ರಾಡೂನ್‌ ತಲುಪುವ ಮೊದಲೇ ಎಲ್ಲಾ ಬಸ್‌ ಪ್ರಯಾಣಿಕರು ಇಳಿದ ಕಾರಣ ಬಸ್‌ ಖಾಲಿಯಾಗಿತ್ತು. ಯುವತಿ ಒಬ್ಬಳೇ ಇದ್ದಳು. ಟರ್ಮಿನಲ್‌ ತಲುಪುತ್ತಿದ್ದಂತೆ ದೇವೇಂದ್ರ ಮತ್ತು ಧರ್ಮೇಂದ್ರ ಬಸ್‌ ಪಾರ್ಕ್‌ ಮಾಡಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಾದ ಬಳಿಕ ರವಿ ಮತ್ತು ರಾಜ್‌ ಪಾಲ್‌ ಕೂಡ ಆಕೆಯನ್ನು ರೇಪ್‌ ಮಾಡಿದ್ದರು.ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಕ್ಯಾಶಿಯರ್‌ ಕೂಡ ಇವರಿಗೆ ಸಾಥ್‌ ಕೊಟ್ಟು ಅಟ್ಟಹಾಸ ಮೆರೆದಿದ್ದಾನೆ.

ಇದನ್ನೂ ಓದಿ: Physical Abuse: ಕಿಡ್ನ್ಯಾಪ್ ಮಾಡಿ ಮಹಿಳೆ ಮೇಲೆ ಅತ್ಯಾಚಾರ, ಮಗನ ಮೇಲೂ ಹಲ್ಲೆ; 9 ಆರೋಪಿಗಳ ಅರೆಸ್ಟ್‌

Continue Reading

ದೇಶ

Bharat Bandh: ಆ.21ರಂದು ಭಾರತ ಬಂದ್‌; ಯಾವೆಲ್ಲಾ ಸೇವೆ ಇರುತ್ತೆ? ಏನಿರೋದಿಲ್ಲ? ಇಲ್ಲಿದೆ ಡಿಟೇಲ್ಸ್‌

Bharat Bandh: ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST)ಗಳಿಗೆ ನೀಡಿರುವ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಅವಕಾಶ ನೀಡುವ ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಇದೆ ಎಂದು ಹೇಳಿದೆ. ಇದನ್ನು ವಿರೋಧಿಸಿ ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ಈ ಭಾರತ್ ಬಂದ್‌ಗೆ ಕರೆ ನೀಡಿದೆ. ಆ ಮೂಲಕ ಕೋರ್ಟ್ ಆದೇಶ ಹಿಂಪಡೆದು, ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಲಿದ್ದಾರೆ.

VISTARANEWS.COM


on

bharat bandh
Koo

ನವದೆಹಲಿ: ದೇಶಾದ್ಯಂತ ಬುಧವಾರ(ಆಗಸ್ಟ್ 21)ರಂದು ಭಾರತ್‌ ಬಂದ್‌(Bharat Bandh)ಗೆ ಕರೆ ನೀಡಲಾಗಿದೆ. ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST)ಗಳಿಗೆ ನೀಡಿರುವ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಅವಕಾಶ ನೀಡುವ (Supreme Court SC ST Quota, SC ST Sub- Classifications) ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ (Supreme Court) ನೀಡಿತ್ತು. ಇದನ್ನು ವಿರೋಧಿಸಿ ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ಈ ಭಾರತ್ ಬಂದ್‌ಗೆ ಕರೆ ನೀಡಿದೆ. ಆ ಮೂಲಕ ಕೋರ್ಟ್ ಆದೇಶ ಹಿಂಪಡೆದು, ತಮ್ಮ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಲಿದ್ದಾರೆ.

ಬಂದ್‌ಗೆ ಕಾರಣ ಏನು?

ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡ(ST)ಗಳಿಗೆ ನೀಡಿರುವ ಮೀಸಲಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಅವಕಾಶ ನೀಡುವ ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಇದೆ ಎಂದು ಹೇಳಿದೆ. ಆದರೆ ಅವಶ್ಯಕತೆ ಇದ್ದರವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ಮೀಸಲಾತಿ ನೀಡಬೇಕೆಂದು ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ವಾದವಾಗಿದೆ.

ಯಾವೆಲ್ಲಾ ಸೇವೆ ಲಭ್ಯ?

ಇನ್ನು ಬಂದ್‌ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳಂತಹ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದಾಗ್ಯೂ, ಸಾರ್ವಜನಿಕ ಸಾರಿಗೆಯನ್ನು, ಖಾಸಗಿ ಕಚೇರಿಗಳು, ಅಂಗಡಿ ಮುಗ್ಗಟ್ಟು ಬಂದ್‌ ಆಗಲಿವೆ. ಇನ್ನು ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ.

ಬಂದ್‌ಗೆ ಕರೆ ನೀಡಿದ ಬೆನ್ನಲ್ಲೇ ಎಲ್ಲಾ ರಾಜ್ಯದ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ಖಡಕ್ ಸೂಚನೆ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಕೆಲ ಸ್ಥಳಗಳನ್ನು ಗುರುತಿಸಿ ಭದ್ರತೆ ಹೆಚ್ಚಿಸಲು ಸೂಚಿಸಲಾಗಿದೆ. ಪ್ರಮುಖವಾಗಿ ಉತ್ತರ ಪ್ರದೇಶ ಸೇರಿದಂತೆ ಕೆಲ ಉತ್ತರ ರಾಜ್ಯಗಳಲ್ಲಿ ಈ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ತೀವ್ರ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ.

ಕೋರ್ಟ್‌ ಹೇಳಿದ್ದೇನು?

ಪರಿಶಿಷ್ಟ ಜಾತಿಗಳ ಉಪ-ವರ್ಗೀಕರಣವು SC ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು ಅನುಮತಿ ಇದೆ ಎಂದು ಹೇಳಿದೆ. ಆದರೆ ಉಪ-ವರ್ಗೀಕರಣವನ್ನು ನೀಡುವಾಗ, ರಾಜ್ಯವು ಉಪ-ವರ್ಗಕ್ಕೆ 100% ಮೀಸಲಾತಿಯನ್ನು ಮೀಸಲಿಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜ್ಯವು ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಉಪ-ವರ್ಗೀಕರಣದ ಪ್ರಾತಿನಿದ್ಯ ನೀಡಬಹುದಾಗಿದೆ. ಹೆಚ್ಚು ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡುವುದು ರಾಜ್ಯದ ಕರ್ತವ್ಯ ಎಂದಿದೆ. SC/ST ವರ್ಗದ ಕೆಲವೇ ಜನರು ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಈ ವಿಚಾರವನ್ನು ಅಲ್ಲಗಳೆಯುವಂತಿಲ್ಲ. SC/ST ಗಳಲ್ಲಿ ಶತಮಾನಗಳಿಂದ ಹೆಚ್ಚು ದಬ್ಬಾಳಿಕೆಯನ್ನು ಎದುರಿಸುತ್ತಿರುವ ಇನ್ನೂ ಹಿಂದುಳಿದ ವರ್ಗಗಳಿವೆ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: SC Reservation : ಒಳ ಮೀಸಲಾತಿ ಬೇಡಿಕೆಯನ್ನು ಕೇಂದ್ರದ ಅಂಗಳಕ್ಕೆ ದಾಟಿಸಿದ ಸರ್ಕಾರ

Continue Reading
Advertisement
BSNL 4G Plan
ಗ್ಯಾಜೆಟ್ಸ್11 mins ago

BSNL 4G Plan: ಜಿಯೋಗೆ ಪೈಪೋಟಿ ನೀಡಲು ಸಜ್ಜಾಗಿದೆ ಬಿಎಸ್‌ಎನ್‌ಎಲ್ 4ಜಿ; ಹೊಸ ರಿಚಾರ್ಜ್ ಪ್ಲ್ಯಾನ್‌ ಪ್ರಕಟ

Viral Video
Latest26 mins ago

Viral Video: ಎಲ್ಲ ಬಿಟ್ಟು ಟ್ರಾನ್ಸ್‌ಫಾರ್ಮರ್‌ ಏರಿ ಸತ್ತ ಕರಡಿ; ಮೃತ ದೇಹದ ಮೇಲೆ ಕೂತ ಲೈನ್‌ಮನ್!

Karnataka Weather Forecast
ಮಳೆ44 mins ago

Karnataka Weather : ಸಣ್‌ ಮಳೆಗೆ ಕೆರೆಯಂತಾದ ಬೆಂಗಳೂರಿನ ರಸ್ತೆಗಳು; ನಾಳೆಗೂ ಅಲರ್ಟ್‌

Kannada New Movie
ಬೆಂಗಳೂರು54 mins ago

Kannada New Movie: ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್‌ನ ʼಫಾರೆಸ್ಟ್ʼ ಚಿತ್ರದ ಟ್ರೈಲರ್ ಸದ್ಯದಲ್ಲೇ ರಿಲೀಸ್‌

ಕ್ರೀಡೆ1 hour ago

Ishan Kishan : ಮ್ಯಾನ್​ ಆಫ್​ ದಿ ಮ್ಯಾಚ್​ ಪ್ರಶಸ್ತಿ ಪಡೆದು ಮೂಲಕ ಬಿಸಿಸಿಐಗೆ ಪ್ರತ್ಯುತ್ತರ ಕೊಟ್ಟ ಇಶಾನ್ ಕಿಶನ್​

Shiva Rajkumar new look with Yash on the movie set Why did the rocking star visit?
ಸ್ಯಾಂಡಲ್ ವುಡ್1 hour ago

Shiva Rajkumar: ಸಿನಿಮಾ ಸೆಟ್​ನಲ್ಲಿ ಯಶ್ ಜತೆ ಹೊಸ ಲುಕ್​ನಲ್ಲಿ ಶಿವಣ್ಣ; ರಾಕಿಂಗ್‌ ಸ್ಟಾರ್‌ ಭೇಟಿ ಮಾಡಿದ್ದೇಕೆ?

Muda Scam
ಕರ್ನಾಟಕ1 hour ago

Muda Scam: ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್‌; ರಿಟ್‌ ಅರ್ಜಿ ವಿಚಾರಣೆ ಆ.29ಕ್ಕೆ ಮುಂದೂಡಿದ ಹೈಕೋರ್ಟ್‌

Namma Metro
ಬೆಂಗಳೂರು1 hour ago

Namma Metro : ನಾಳೆಯಿಂದ ಸೆಪ್ಟೆಂಬರ್‌ 11ರವರೆಗೂ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಓಡಾಟ ಬಂದ್‌!

Viral Video
ವಿದೇಶ2 hours ago

Viral Video: ತ್ರಿವರ್ಣ ಧ್ವಜ ಹರಿದು, ಗೋ ಬ್ಯಾಕ್‌ ಇಂಡಿಯಾ ಘೋಷಣೆ- ಖಲಿಸ್ತಾನಿಗಳ ಅಟ್ಟಹಾಸ; ವಿಡಿಯೋ ವೈರಲ್‌

Viral Video
Latest2 hours ago

Viral Video: ಗಂಡ-ಹೆಂಡತಿ ಜಗಳ ಬಿಡಿಸಲು ಬಂದ ಕಾನ್‌ಸ್ಟೇಬಲ್‌ ತಾನೇ ಚಕ್ಕಂದ ಶುರು ಮಾಡಿದ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌